ಬಾಲ್ಯ ವಿವಾಹ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಚಿತ್ರ:Child Marriage.JPG
ಸ್ಮಾಲ್ ಚೈಳ್ಡ್ ಬ್ರೈಡ್ಸ್

ಕೆಲವು ಸಮಾಜಗಳಲ್ಲಿ ರೂಢಿಯಲ್ಲಿರುವ ಬಾಲ್ಯ ವಿವಾಹ ಸಾಧಾರಣವಾಗಿ ಎರಡು ಪ್ರತ್ಯೇಕ ಸಾಮಾಜಿಕ ತತ್ವಗಳನ್ನು ಉಲ್ಲೇಖಿಸುತ್ತದೆ. ಮೊದಲ ಮತ್ತು ವ್ಯಾಪಕವಾಗಿ ಹರಡಿರುವ ರೂಢಿ ಅಂದರೆ ಅದು ಒಬ್ಬ ವಯಸ್ಕ ಪುರುಷ ಚಿಕ್ಕ ಹುಡುಗಿಯನ್ನು (ಸಾಮಾನ್ಯವಾಗಿ ಹದಿನೈದು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಹುಡುಗಿ ಎನ್ನಲಾಗಿದೆ) ಮದುವೆಯಾಗುವುದು. ರೂಢಿಯಲ್ಲಿ, ಯಾವಾಗಲೂ ಚಿಕ್ಕ ಹುಡುಗಿ ಒಂದು ಗಂಡಸನ್ನು ಮದುವೆಯಾಗುವುದಾಗಿದೆ.

ಎರಡನೆಯ ರೂಢಿಯೆಂದರೆ ವ್ಯವಸ್ಥಿತ ಮದುವೆ, ಇದರಲ್ಲಿ ಎರಡೂ ಮಕ್ಕಳ ತಂದೆ-ತಾಯಿಗಳು ಮುಂದೆಂದೋ ಭವಿಷ್ಯದಲ್ಲಿ ನಡೆವ ಮದುವೆಯನ್ನು ಯೋಜಿಸುವುದು. ಈ ರೂಢಿಯಲ್ಲಿ, ಮದುವೆಗೆ ನಿಶ್ಚಿತಾರ್ಥವಾದ ಹುಡುಗ ಹುಡುಗಿಯನ್ನು ಮದುವೆ ಸಮಾರಂಭದವರೆಗೂ ಒಬ್ಬರಿಗೊಬ್ಬರು ಭೇಟಿ ಆಗುವ ಹಾಗಿಲ್ಲ, ಮದುವೆ ವಯಸ್ಸಿಗೆ ಅವರಿಬ್ಬರೂ ಮುಟ್ಟಿದ ಮೇಲೆ ಆಗ ಮದುವೆ ಸಮಾರಂಭ ನಡೆಯುತ್ತದೆ.

ಮಹಿಳಾ ಹಕ್ಕುಗಳು ಅಥವಾ ಮಕ್ಕಳ ಹಕ್ಕುಗಳ ಹೋರಾಟದಂತೆ ಮಾನವ ಹಕ್ಕುಗಳ ಹೋರಾಟವು ಹೆಚ್ಚಿದಂತೆಲ್ಲಾ ಬಾಲ್ಯ ವಿವಾಹಗಳ ಸಂಪ್ರದಾಯವು ಸಾಕಷ್ಟು ಕಡಿಮೆ ಆಗಿದೆ ಕಾರಣ ಬಾಲ್ಯ ವಿವಾಹವು ಸರಿಯಾದುದಲ್ಲವೆಂದು ಮತ್ತು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಬಾಲ್ಯ ವಿವಾಹಗಳಿಗೆ ಅನೇಕ ಉದ್ದೇಶಗಳಿರಬಹುದು. ಕೆಲವು ಸಂಸ್ಕೃತಿಗಳಲ್ಲಿನ ಶ್ರೀಮಂತ ಪ್ರಭುತ್ವ-ಗುಣ ವರ್ಗದ ಜನ, ಅನ್ಯ ವರ್ಗಕ್ಕೆ ಸೇರಿದ ಬಾಲಕ ಬಾಲಕರಲ್ಲಿ ಬಾಲ್ಯ ವಿವಾಹಗಳನ್ನು ತಮ್ಮ ತಮ್ಮ ರಾಜಕೀಯ ಭವಿಷ್ಯಗಳಿಗಾಗಿ ಎರಡು ವರ್ಗದ ಸಂಬಂದ್ಧವನ್ನು ಭದ್ರ ಮಾಡಿಕೊಳ್ಳಲು ಏಪರ್ಡಿಸಿರುವುದೂ ಇದೆ. ಉದಾಹರಣೆಗೆ, ಅಷ್ಟೇನೂ ಬಲಾಢ್ಯವಲ್ಲದ ವರ್ಗದ ಉನ್ನತ ಕುಟುಂಬದ ಮಗ ಅಥವಾ ಮಗಳನ್ನು ಬಲಾಢ್ಯ ವರ್ಗದ ಕುಟುಂಬದವರಲ್ಲಿ ಮದುವೆ ಏರ್ಪಡಿಸಿ ತಮ್ಮ ಕುಲ ಅಂತರ್ಗತವಾಗುವುದನ್ನು ತಪ್ಪಿಸಲು ಬಾಲ್ಯ ವಿವಾಹಗಳನ್ನು ಏರ್ಪಡಿಸಿರುವುದಿದೆ. ಕೆಳ ವರ್ಗದವರೇನಾದರು ಅದೃಷ್ಟವಂತರಾಗಿದ್ದಲ್ಲಿ, ವಾರಸುದಾರಿಕೆಯನ್ನು ದೃಢಪಡಿಸಿಕೊಂಡು ಅವರ ಮಕ್ಕಳನ್ನು ಶ್ರೀಮಂತ ವರ್ಗದವರಿಗೆ ಕೊಟ್ಟು ಮದುವೆ ಮಾಡಿಸುತ್ತಿದ್ದರು. ಈ ಮುಖಾಂತರ ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಕಂಡುಕೊಳ್ಳುತ್ತಿದ್ದರು.

ಮಗುವಿನ ನಿಶ್ಚಿತಾರ್ಥದ ವಿಚಾರದಲ್ಲಿ ಮಗುವಿನ ತಂದೆ-ತಾಯಿಗಳು ಇನ್ನೊಂದು ಮಗುವಿನ ತಂದೆ ತಾಯಿಗಳ ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗತಿ ಮತ್ತು ವಿದ್ಯಾಭ್ಯಾಸದ ಮಟ್ಟ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ತಮ್ಮ ಮಗುವಿನ ಭವಿಷ್ಯವನ್ನು ಚಿಕ್ಕ ವಯಸ್ಸಿನಲ್ಲೇ ಏಕಪಕ್ಷೀಯವಾಗಿ ನಿರ್ಧರಿಸಿ ಬಿಡುತ್ತಿದ್ದರು. ಬಾಲ್ಯ ವಿವಾಹಗಳನ್ನು ಆಯೋಜಿಸುವವರು ಭೌತಿಕ ಆಕರ್ಷಣೆಯು ಮದುವೆ ಮತ್ತು ಕುಟುಂಬದ ವಿಚಾರದಲ್ಲಿ ಅಷ್ಟೇನು ಮುಖ್ಯವಲ್ಲ ಎಂದು ಆಲೋಚಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ನಿಶ್ಚಿತಾರ್ಥಕ್ಕೂ ಮದುವೆಗೂ ಎಷ್ಟು ಸಮಯದ ಅಂತರವಿರಬೇಕೆಂಬುದು ವಿಶೇಷವಾಗಿ ಗಣನೆಗೆ ತೆಗೆದುಕೊಳ್ಳುವ ವಿಚಾರ.

ಅಂತರ ವರ್ಗದ ವಿವಾಹದಿಂದ ಕುಟುಂಬಗಳು ರಾಜಕೀಯ ಮತ್ತು/ಅಥವಾ ಆರ್ಥಿಕ ಸಬಲತೆಯನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ನಿಶ್ಚಿತಾರ್ಥವನ್ನು ಕುಂಟುಂಬ ಮತ್ತು ಮಕ್ಕಳ ಮೇಲಿನ ಒಪ್ಪಂದ ಎಂದು ಪರಿಗಣಿಸಲಾಗುತ್ತದೆ. ಈ ನಿಶ್ಚಿತಾರ್ಥವು ಏನಾದರು ಮುರಿದು ಬಿದ್ದ ಪಕ್ಷದಲ್ಲಿ ಕುಟುಂಬಗಳ ಮೇಲೆ ಮತ್ತು ಮಧು ಮಕ್ಕಳ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.

ಧರ್ಮಾನುಸಾರ ಬಾಲ್ಯ ವಿವಾಹ[ಬದಲಾಯಿಸಿ]

ಜೂಡಾಯಿಸಂನಲ್ಲಿ[ಬದಲಾಯಿಸಿ]

ಜೂಡಾಯಿಸಂ ಧರ್ಮದಲ್ಲಿ ಬಾಲ್ಯವಿವಾಹ ಸಾಧ್ಯ, ಕಾರಣ ಮಹಿಳೆಯರಲ್ಲಿನ ಅತಿ ಕಡಿಮೆ ಮದುವೆಯಾಗಬಲ್ಲ ವಯಸ್ಸು. ಕೆಟಾನ್ನಾಹ್ (ಅಕ್ಷರಶ:, 3 ವರ್ಷದಿಂದ 12 ವರ್ಷ ಮತ್ತು ಒಂದು ದಿನ[೧]ದವರೆಗೂ ವಯಸ್ಸಿನ ಯಾವುದಾದರು [ಒಂದು] ಚಿಕ್ಕ ) ಮಗು; ಕೆಟಾನ್ನಾಹ್ ಸಂಪೂರ್ಣವಾಗಿ ಅವಳ ತಂದೆಯ ಸುಪರ್ದಿಗೆ ಮತ್ತು ಆಧೀನಕ್ಕೆ ಒಳಪಟ್ಟವಳು ಮತ್ತು ಅವಳ ತಂದೆ ಅವಳು ಒಪ್ಪಲಿ ಬಿಡಲಿ ಅವಳಿಗೊಂದು ಮದುವೆ ಏರ್ಪಡಿಸಬಹುದು.[೧]. ತಲ್ಮುಡ್ ಪ್ರಕಾರ, ಮದುವೆ ಏನಾದರೂ ವಿಚ್ಛೇದನದಿಂದಲ್ಲೋ ಅಥವಾ ಗಂಡನ ಸಾವಿನಿಂದಲ್ಲೋ ಮುರಿದು ಬಿದ್ದರೆ ಮುಂದೆ ಮದುವೆಯಾಗುವುದು ಅಥವಾ ನಿರಾಕರಿಸುವುದು ಐಚ್ಛಿಕವಾದದ್ದು; ಕೆಟಾನ್ನಾಹ್ ಗೆ ಅದನ್ನು ಅಳಿಸಿಹಾಕಲು ಹಕ್ಕಿರುತ್ತಿತ್ತು.[೨]. ತಂದೆ ಮರಣವನಪ್ಪಿದ್ದರೆ ಅಥವಾ ಎಲ್ಲೋ ಕಳೆದು ಹೋಗಿದ್ದರೆ ಕೆಟಾನ್ನಾಹ್ ಳ ಅಣ್ಣ-ತಮ್ಮಂದಿರು ಅವಳಿಗೊಂದು ಮದುವೆ ಏರ್ಪಡಿಸಬೇಕಾಗುತ್ತದೆ, ತಾಯಿಯಿದ್ದರೂ ಅಷ್ಟೇ[೧], ಆದಾಗ್ಯೂ ಇಂಥ ಪರಿಸ್ಥಿತಿಗಳಲ್ಲಿ ಕೆಟಾನ್ನಾಹ್ ಗೆ ಅದು ಮೊದಲನೇ ಮದುವೆ ಆಗಿದ್ದರೂ ಅದನ್ನು ರದ್ದುಪಡಿಸಲು ಎಂದೂ ಹಕ್ಕಿರುತ್ತಿತ್ತು.[೨].

ಕೆಟಾನ್ನಾಹ್ ಳು ತನ್ನ ಮದುವೆಯನ್ನು ರದ್ದು ಪಡಿಸುವ ಹಕ್ಕನ್ನು ಹೀಬ್ರೂವಿನಲ್ಲಿ ಮೀಉನ್ ಎನ್ನುತ್ತಾರೆ (ಅಕ್ಷರಶ: ಒಪ್ಪದಿರುವುದು /ನಿರಾಕರಣೆ /ಪ್ರತಿಭಟನೆ ಎಂದು ಅರ್ಥ)[೨], ನಿಜ ರದ್ದತಿಗೆ ಮಾರ್ಗವಾಗುತ್ತದೆ ಆದರೆ ವಿಚ್ಛೇದನಕ್ಕಲ್ಲ; ವಿಚ್ಛೇದನದ ದಾಖಲೆ (ತೆಗೆದುಕೊಳ್ಳುವುದು ) ಅಷ್ಟೇನೂ ಅಗತ್ಯವಿಲ್ಲ[೩], ಮತ್ತು ಕೆಟಾನ್ನಾಹ್ ಈ ರೀತಿ ಮಾಡಿದ್ದಲ್ಲಿ ಮದುವೆಗೆ ಸಂಬಂಧಿಸಿದ ಹಾಗೆ ಅದನ್ನು ಕಾನೂನು ಪರಿಧಿಯಲ್ಲಿ ವಿಚ್ಛೇದಿತಳು ಎನ್ನುವ ಹಾಗಿಲ್ಲ.[೪] ವಿಚ್ಛೇದನವನ್ನು ಪರಿಗಣಿಸುವಂತೆ ಪರಿಗಣಿಸದೆ ಮೀಉನ್ ಅನ್ನು ರಾಬಿನಿಕ ಬರಹಗಾರರು[೨] ಕೆಟ್ಟ ಅಭಿರುಚಿಯಿಂದ ಕಂಡರು[೨] ತಾಲ್ಮುಡ್‌[೫] ನಲ್ಲೂ ಇದೇ ರೀತಿ ಕಾಣಲಾಗುತ್ತದೆ; ಯೆಹೂದಿ ಮತದ ಆರಂಭದ ಸಂಪ್ರದಾಯದಲ್ಲಿ ಹೌಸ್ ಆಫ್ ಶಮಾಯ್ ಎಂಬ ಒಂದು ಗುಂಪು ಮದುವೆ ರದ್ದು ಪಡಿಸುವ ಹಕ್ಕು ಇರುವುದು ನಿಶ್ಚಿತಾರ್ಥದ ಸಮಯದಲ್ಲಿ ಮಾತ್ರ (ಎರೂಸಿನ್ ) ಆದರೆ ಒಮ್ಮೆ ಮದುವೆ (ನಿಸ್ಸೂಇನ್ ) ಶುರುವಾದ ಮೇಲೆ ರದ್ಧತಿಗೆ ಅವಕಾಶವಿಲ್ಲ ಎಂದು ವಾದಿಸಿತ್ತು[೬].

ಇಸ್ಲಾಂ ಧರ್ಮದಲ್ಲಿ[ಬದಲಾಯಿಸಿ]

ಮೊಹಮ್ಮದ್, ಆಯಿಷಾ ಎನ್ನುವ ಕೇವಲ ಆರು ಅಥವಾ ಏಳು ವರ್ಷದ ಹೆಣ್ಣನ್ನು ಮದುವೆಯಾದನು.[೭][೮] ಇಸ್ಲಾಮಿಕ್ ವಿದ್ವಾಂಸರು ಇಸ್ಲಾಂ ಧರ್ಮದಲ್ಲಿ ಮದುವೆಗೆ ಯಾವುದೇ ವಯಸ್ಸಿನ ಮಿತಿಯನ್ನು ಸೂಚಿಸಿಲ್ಲ ಎಂದು ಹೇಳಿಕೆಯನಿತ್ತರು. ಅತ್ಯಂತ ಚಿಕ್ಕ ಮಕ್ಕಳನ್ನು ಮದುವೆ ಆಗುವುದಾಗಲಿ ಮದುವೆ ಆಗುತ್ತೇನೆಂದು ಮಾತು ಕೊಡುವುದಾಗಲಿ ಮಾಡಬಹುದೆನ್ನಲಾಗಿದೆ, ಆದಾಗ್ಯೂ, ಅವರು ಹೆಣ್ಣನ್ನು "ಅವಳು ವೈವಾಹಿಕ ಜೇವನದಲ್ಲಿ ಲೈಂಗಿಕ ಕ್ರಿಯೆಗೆ" ಸೂಕ್ತ ಎನ್ನುವವರೆಗೂ ಮದುವೆಗೆ ಒಳಪಡಿಸಬಾರದು ಎಂದಿದ್ದಾರೆ.[೯]

ಪ್ರಾಂತಾನುಸಾರ ಬಾಲ್ಯ ವಿವಾಹ[ಬದಲಾಯಿಸಿ]

ಆಫ್ರಿಕಾ[ಬದಲಾಯಿಸಿ]

ಆದಾಗ್ಯೂ, ಅನೇಕ ದೇಶಗಳಲ್ಲಿ ಮದುವೆಯಾಗಬಲ್ಲ ವಯಸ್ಸು 16 ರಿಂದ 18ಕ್ಕೆ ಕನಿಷ್ಠ ವಯೋಮಿತಿ ಯನ್ನು ನಿಯಮ ಎಂದು ಮಾಡಲಾಗಿದೆ. ಕಾನೂನು ವ್ಯಾಪ್ತಿಗೆ ಒಳಪಟ್ಟಂತೆ, ಸಾಂಪ್ರದಾಯಿಕ ಮದುವೆಗಳು ವ್ಯಾಪಕವಾಗಿ ನಡೆಯುತ್ತಿದೆ. ದಕ್ಷಿಣ ಏಷಿಯಾದಲ್ಲಿ ಹೇಗೆ ಬಡತನ, ಧರ್ಮ, ಸಂಪ್ರದಾಯ ಮತ್ತು ಘರ್ಷಣೆ ಬಾಲ್ಯವಿವಾಹಗಳಿಗೆ ಕಾರಣವಾಗುತ್ತೋ ಹಾಗೆಯೇ ಸಬ್-ಸಹರನ್ ಆಫ್ರೀಕಾದಲ್ಲೂ ಕಾರಣವೆನ್ನಲಾಗಿದೆ.[೧೦]

ಬುಡಕಟ್ಟು ಜನಾಂಗದ ಮದುವೆ ವ್ಯವಸ್ಥೆಯಲ್ಲಿ, ಪುರುಷ ವಧು ದಕ್ಷಿಣೆ ಯನ್ನು ಹೆಣ್ಣಿನ ಮನೆಯವರಿಗೆ ಕೊಟ್ಟು ಮದುವೆಯಾಗುವುದಿದೆ. (ಈ ಪದ್ಧತಿಯನ್ನು ವರದಕ್ಷಿಣೆ ಮತ್ತು ವಧು ದಕ್ಷಿಣೆಗೆ ಹೋಲಿಸಬಹುದಾಗಿದೆ.) ಆಫೀಕಾದ ಅನೇಕ ಪ್ರದೇಶಗಳಲ್ಲಿ ಇದನ್ನು ನಗದಿನ ಮೂಲಕ, ದನಗಳನ್ನು ಕೊಡುವ ಮೂಲಕ ಅಥವಾ ಇನ್ನಿತರ ಮೌಲ್ಯದ ವಸ್ತುಗಳನ್ನು ಕೊಡುವ ಮೂಲಕ ನಡೆಯುತ್ತದೆ. ಹೆಣ್ಣಿನ ವಯಸ್ಸು ಹೆಚ್ಚಿದಂತೆಲ್ಲಾ ಕೊಡಬೇಕಾದ ಮೌಲ್ಯವು ಕಡಿಮೆಗೊಳ್ಳುತ್ತದೆ. ಬಾಲ್ಯವಿವಾಹಗೊಂಡ ಹೆಣ್ಣು ತಾನು ಪ್ರೌಢಾವಸ್ಥೆಗೇರುವ ಮುನ್ನವೆ ಅಂದರೆ ನೆರೆಯುವ ಮೊದಲೇ ತನ್ನ ತಂದೆ ತಾಯಿಗಳನ್ನು ಬಿಟ್ಟು ಗಂಡನ ಮನೆ ಸೇರಬಹುದು. ಅನೇಕ ವಿವಾಹಗಳು ಬಡತನಕ್ಕೆ ಸಂಬಂಧಿತವು, ತಂದೆ-ತಾಯಿಗಳು ತಮ್ಮ ಮನೆಯನ್ನು ನಡೆಸುವುದಕ್ಕೆ ಬೇಕಾಗುವ ಕೌಟುಂಬಿಕ ಖರ್ಚು ಅಂದರೆ ಆಹಾರಕ್ಕೆ, ಬಟ್ಟೆಗೆ ಹಣ ಬೇಕಾದಾಗ ಈ ರೀತಿಯ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳುವುದುಂಟು. ಇಂಥ ಸಂದರ್ಭಗಳಲ್ಲಿ ಗಂಡು ಮಕ್ಕಳು ಪೂರ್ಣ ವಿದ್ಯಾಭ್ಯಾಸವನ್ನು ಪಡೆದು ಒಳ್ಳೆಯ ನೌಕರಿಯನ್ನು ಸಂಪಾದಿಸುವುದಕ್ಕೆ ಕಾರಣವಾಗುತ್ತದೆ ಮತ್ತು ಇವರು ಮದುವೆಯನ್ನು ಆನಂತರವಷ್ಟೇ ಮಾಡಿಕೊಳ್ಳುತ್ತಾರೆ. 18ವರ್ಷಕ್ಕೂ ಮೊದಲೇ ಮದುವೆಯಾಗುವ ಹೆಣ್ಣು:ಗಂಡು ಅನುಪಾತವು ಮಾಲಿಯಲ್ಲಿ 72:1 ಇದ್ದರೆ ಕೀನ್ಯಾದಲ್ಲಿ 21:1 ಇರುತ್ತದೆ.[೧೦]

ವಿವಿಧ UN ಆಯೋಗಗಳು ಸೂಚಿಸಿರುವ ಪ್ರಕಾರ ಅನೇಕ ಸಬ್-ಸಹರನ್ ದೇಶಗಳಲ್ಲಿ 15ಕ್ಕೂ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮದುವೆ ಅಧಿಕ ಸಂಖ್ಯೆಯಲ್ಲಿ ನಡೆಯುತ್ತದೆ. ಅನೇಕ ಸರಕಾರಗಳು ಬಾಲ್ಯವಿವಾಹಗಳಾಗುವುದಕ್ಕೆ ಇರುವ ನಿರ್ದಿಷ್ಟ ಕಾರಣಗಳತ್ತ ಗಮನ ಹರಿಸಿರುತ್ತದೆ, ಅವುಗಳಲ್ಲಿ ಆಬ್ಸ್‌ಟೆಟ್ರ‍ಿಕ್ ಫಿಸ್ಟುಲಾ, ಪ್ರಿಮೆಚ್ಯೂರಿಟಿ, ಮೃತಶಿಶುವಿನ ಜನನ, ಲೈಂಗಿಕವಾಗಿ ಹರಡುವ ಕಾಯಿಲೆಗಳು (ಇವುಗಳಲ್ಲಿ ಸರ್ವೈಕಲ್ ಕ್ಯಾನ್ಸರ್) ಮತ್ತು ಮಲೇರಿಯಾ.[೧೦]

ಇಥಿಯೋಪೀಯಾ ಮತ್ತು ನೈಜೀರಿಯಾ ದೇಶಗಳಲ್ಲಿ 15ಕ್ಕೂ ಕಡಿಮೆ ವಯಸ್ಸಿನ ಸಾಕಷ್ಟು ಸಂಖ್ಯೆಯ ಹೆಣ್ಣು ಮಕ್ಕಳಿಗೆ ಮದುವೆ ಆಗುತ್ತದೆ ಮತ್ತು ಕೆಲವು ಹೆಣ್ಣು ಮಕ್ಕಳಿಗೆ 7 ವರ್ಷಕ್ಕೂ ಕಡಿಮೆಗೇನೇ ಮದುವೆ ಆಗುವುದೂ ಇದೆ.[೧೧] ಮಾಲಿಯ ಕೆಲವು ಭಾಗಗಳಲ್ಲಿ 39% ಹೆಣ್ಣು ಮಕ್ಕಳಿಗೆ 15 ವರ್ಷಕ್ಕೂ ಕಡಿಮೆಯೇ ಮದುವೆ ಆಗಿಬಿಡುತ್ತದೆ. ನೈಜರ್ ಮತ್ತು ಚಾಡ್ನಲ್ಲಿ 70% ರಷ್ಟು ಹೆಣ್ಣು ಮಕ್ಕಳಿಗೆ 18 ವಯಸ್ಸಿಗೂ ಕಡಿಮೆ ಇರುವಾಗಲೇ ಮದುವೆ ಆಗಿ ಬಿಡುತ್ತದೆ.[೧೦]

ದಕ್ಷಿಣ ಆಫ್ರಿಕಾದಲ್ಲಿ ಸಂಪ್ರದಾಯ ಮದುವೆಗಳನ್ನು ಗೌರವಿಸುವ ಸಲುವಾಗಿ ಒಬ್ಬ ಮನುಷ್ಯ 12 ವರ್ಷದಷ್ಟು ಕಡಿಮೆ ವಯಸ್ಸಿನ ಹೆಣ್ಣನ್ನು ಮತ್ತು ಕಡಿಮೆಯೆಂದರೆ 14 ವರ್ಷದ ಗಂಡು ಹುಡುಗನಿಗೆ ಮದುವೆ ಏರ್ಪಡಿಸಬಹುದು ಎಂದು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.[೧೦]

ಚಿಕ್ಕ ವಯಸ್ಸಿನಲ್ಲೇ ಮದುವೆ ಆದರೆ ಅದು "ಹುಡುಗರಿಗಾಗಲಿ ಹುಡುಗಿಯರಿಗಾಗಲಿ ವಿದ್ಯಾಭ್ಯಾಸವನ್ನು ಮುಂದುವರೆಸುವುದಕ್ಕೆ ತಡೆ" ಎಂದು ಹೇಳಲಾಗಿದೆ. ಇದರಲ್ಲಿ ಅಬ್ಸುಮಾ (ಸೋದರ ಸಂಬಂಧದ ನಡುವೆ ಹುಟ್ಟಿದಾರಭ್ಯವೇ ಏರ್ಪಡಿಸಿದ ಮದುವೆ ಗಳು ), ಹೆಣ್ಣನ್ನು ಅಪಹರಿಸುವುದು ಮತ್ತು ಜೋಡಿಗಳು ಪಲಾಯನ ಮಾಡುವುದೂ ಸೇರಿದೆ[೧೨].

ದಕ್ಷಿಣ ಏಷ್ಯಾ[ಬದಲಾಯಿಸಿ]

ಚೈಳ್ಡ್ ಮ್ಯಾರೇಜ್ ರಿಸ್ಟ್ರೇಂಟ್ ಆಕ್ಟ್, 1929 ಅನ್ನು ವಿಭಜನೆ ಪೂರ್ವ ಭಾರತವನ್ನು ಬ್ರಿಟಿಷರು ಆಳುತ್ತಿದ್ದಾಗ ಜಾರಿಗೆ ತರಲಾಗಿತ್ತು ಇದರ ಪ್ರಕಾರ ಗಂಡಿಗೆ ಮದುವೆ ವಯಸ್ಸು ಇಪ್ಪತೊಂದು ಮತ್ತು ಹೆಣ್ಣಿಗೆ ಹದಿನೆಂಟು ಆಗಿರಲೇಬೇಕಾಗಿತ್ತು. ಮದುವೆ ಮಾಡುವ ಎರಡೂ ಕಡೆಯವರು ಈ ಕಾಯಿದೆ ಅಡಿ ಬರುವ ಎಲ್ಲಾ ಮಾನದಂಡಗಳನ್ನು ಪೂರಯಿಸಬೇಕಾಗುತ್ತದೆ.[೧೩]

ವಿಶ್ವದ ಯಾವುದೇ ಪ್ರದೇಶಕ್ಕಿಂತ ದಕ್ಷಿಣ ಏಷಿಯಾದಲ್ಲಿ ಅತ್ಯಧಿಕ ಬಾಲ್ಯವಿವಾಹಗಳು ನಡೆಯುತ್ತವೆ ಎಂಬ ವದ್ಧಂತಿ ಇದೆ.

ಭಾರತ[ಬದಲಾಯಿಸಿ]

ಬಾಲ್ಯವಿವಾಹದ ಪದ್ದತಿಯನ್ನು ನಿಯಂತ್ರಿಸಲು ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಬಿಹಾರ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಮದುವೆಯ ಗಂಡು ಹೆಣ್ಣಿನ ವಯಸ್ಸುಗಳನ್ನು ದೃಢ ಪಡಿಸಲು ಮತ್ತು ನ್ಯಾಯಬದ್ಧಗೊಳಿಸಲು ವಿವಾಹವನ್ನು ನೊಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಿರುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ, ಸಾಮೂಹಿಕ ಮದುವೆಗಳಲ್ಲಿ ಬಾಲ್ಯವಿವಾಹಗಳು ನುಸುಳಿದ್ದರೆ ಅದನ್ನು ಅಧಿಕಾರಿಗಳು ನಿರ್ಲಕ್ಷಿಸಿರುತ್ತಾರೆ.[೧೪]

“ನ್ಯಾಷನಲ್ ಪ್ಲಾನ್ ಆಫ್ ಆಕ್ಷನ್ ಫಾರ್ ಚಿಳ್ಡ್ರನ್ 2005,” (ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಿಸಿರುವಂತೆ) 2010ರಷ್ಟು ಹೊತ್ತಿಗೆ ಬಾಲ್ಯವಿವಾಹಗಳನ್ನು ಏರ್ಪಡಿಸುವುದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಗುರಿಯನ್ನು ಹೊಂದಲಾಗಿದೆ. ಭಾರತದ ಭಾರಿ ಜನಸಂಖ್ಯೆಯಿಂದಾಗಿ ಪ್ರತಿಯೊಂದು ಮಗುವನ್ನು ಗಮನಿಸುವುದು ಅಸಾಧ್ಯವಾದರೂ ಈ ಯೋಜನೆ ಬಹುತೇಖವಾಗಿ ಯಶಸ್ಸನ್ನು ಕಂಡಿದೆ.[೧೫]

UNICEF’ನ “ಸ್ಟೇಟ್ ಆಫ್ ದಿ ವರ್ಳ್‌ಡ್ಸ್ ಚಿಳ್ಡ್ರನ್-2009” ವರದಿಯ ಪ್ರಕಾರ, 47%ರಷ್ಟು ಭಾರತೀಯ ಮಹಿಳೆಯರು 20–24 ವಯಸ್ಸಿನ ಹೆಣ್ಣುಗಳು ಕಾನೂನಿನ ವಿರೋಧವಾಗಿ 18 ವಯಸ್ಸಿನೊಳಗೇ ಮದುವೆ ಆಗಿದ್ದಾರೆ, 56% ರಷ್ಟು ಮಹಿಳೆಯರು ಗ್ರಾಮೀಣ ಪ್ರದೇಶದವರು.[೧೬] ವಿಶ್ವದಲ್ಲಿ ನಡೆವ ಬಾಲ್ಯವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುವಂತಹುದು ಎಂದು ವರದಿ ಮಾಡಿದೆ.[೧೭]

ಪಾಕಿಸ್ತಾನ[ಬದಲಾಯಿಸಿ]

ಮೇಲ್ಕಾಣಿಸಿದ ಕಾಯಿದೆ ಇದಾಗ್ಯೂ, ಬಾಲ್ಯವಿವಾಹದ ಪದ್ಧತಿ ಇನ್ನೂ ಕೆಲವು ಪ್ರದೇಶಗಳಲ್ಲಿ ವಾಣಿ ಮತ್ತು ವಾಟಾ ಸಟ್ಟಾ ಮತ್ತು ಸ್ವರ ಮುಂತಾದ ಆಚಾರಗಳಲ್ಲಿ ರೂಢಿಯಲ್ಲಿದೆ[೧೮]. ಮದುವೆಯ ಕನಿಷ್ಠ ವಯೋಮಿತಿ ಗಂಡಿಗೆ 18 ವರ್ಷವಿದ್ದರೆ ಹೆಣ್ಣಿಗೆ 16 ವರ್ಷವಿರುತ್ತದೆ.[೧೯]

ಬಾಂಗ್ಲಾದೇಶ[ಬದಲಾಯಿಸಿ]

ಬಾಂಗ್ಲಾದೇಶದಲ್ಲಿ 2005ರಿಂದ ಅಂಕಿಅಂಶಗಳ ಪ್ರಕಾರ, 45% ರಷ್ಟು ಮಹಿಳೆಯರು ಆಗ 25 ರಿಂದ 29ರ ವಯೋಮಾನದವರಾಗಿದ್ದವರು 15ನೇ ವಯಸ್ಸಿಗೇ ಮದುವೆಯಾಗಿದ್ದಾರೆ.[೧೧] “ಸ್ಟೇಟ್ ಆಫ್ ದಿ ವರ್ಲ್‌ಡ್ಸ್ ಚಿಳ್ಡ್ರನ್-2009” ವರದಿಯ ಪ್ರಕಾರ, ಒಟ್ಟು ಮಹಿಳೆಯರಲ್ಲಿ 63% ರಷ್ಟು ಹೆಣ್ಣುಗಳು, 20–24 ವಯೋಮಾನದವರು ತಮ್ಮ ವಯಸ್ಸು 18 ಆಗುವ ಮೊದಲೇ ಮದುವೆಯಾದವರು. [೧೬]

ಮಹಿಳಾ ಮತ್ತು ಮಕ್ಕಳ ಕಾರ್ಯಗಳ ಸಚಿವಾಲಯವು ಮಹಿಳೆಯರ ವಿದ್ಯಾಭ್ಯಾಸ ಮತ್ತು ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಲು ಶ್ರಮಿಸುತ್ತಿದೆ. ಇದು ಮತ್ತು ಬಾಲ್ಯವಿವಾಹದ ಬಗ್ಗೆ ನಿರ್ದಿಷ್ಟ ಬೋಧನೆ ಹಾಗೂ ಧಾರ್ಮಿಕ ನಾಯಕರ ಸಹಕಾರ ಎಲ್ಲವೂ ಸೇರಿ ಬಾಲ್ಯವಿವಾಹಗಳ ಸಂಖ್ಯೆ ಇಳಿಯುತ್ತದೆ ಎಂದು ನಂಬಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಯೆಮೆನ್‌[ಬದಲಾಯಿಸಿ]

"ಯೆಮೆನ್ ಪೂರ್ತ ಬಾಲ ಮಧು ಮಕ್ಕಳೇ. ಯೆಮೆನ್ ಹುಡುಗಿಯರಲ್ಲಿ ಅಂದಾಜು ಅರ್ಧದಷ್ಟು ಹುಡುಗಿಯರು 18ನೇ ವಯಸ್ಸಿನೊಳಗೇ ಮದುವೆಯಾಗಿರುತ್ತಾರೆ ಅದರಲ್ಲೂ ಕೆಲವರಂತೂ ಎಂಟು ವಯಸ್ಸಿಗಿಂತ ಕಡಿಮೆಯೇ ಮದುವೆ ಆಗಿದ್ದಾರೆ."[೨೦] ಇತ್ತೀಚಿನವರೆಗೂ ಯೆಮೆನಿ ಕಾನೂನು,ಮದುವೆಗೆ ಕನಿಷ್ಠ ವಯೋಮಾನವನ್ನು 15ಕ್ಕೆ ನಿಗದಿಪಡಿಸಿತ್ತು. ಆದರೆ ಬುಡಕಟ್ಟು ಆಚರಣೆಗಳು ಮತ್ತು ಇಸ್ಲಾಂ ವ್ಯಾಖ್ಯಾನಗಳು ಆಗಾಗ್ಗೆ ನಿಯಮವನ್ನು ಸೋಲಿಸುತ್ತದೆ. ವಾಸ್ತವದಲ್ಲಿ, "ಯೆಮೆನಿ ಕಾನೂನು ಯಾವುದೇ ವಯಸ್ಸಿನಲ್ಲಿ ಮದುವೆಯಾಗಲು ಹೆಣ್ಣಿಗೆ ಅವಕಾಶವನ್ನು ಕೊಡುತ್ತದೆ ಆದರೆ ಲೈಂಗಿಕ ಅವಕಾಶವನ್ನು ಹೆಣ್ಣು ಸೂಕ್ತ ವಯಸ್ಸನ್ನು ತಾಳುವವರೆಗೂ ನಿಷೇಧಿಸುತ್ತದೆ."[೨೦][೨೦] ಅಪರೂಪಕ್ಕೆ ಚಾಲ್ತಿಯಲ್ಲಿದ್ದ, ಮದುವೆಗೆ ಕನಿಷ್ಠ ವಯೋಮಾನ ಹದಿನೈದು ಎಂಬ ಕಾನೂನನ್ನು 1999ರಲ್ಲಿ ರದ್ದು ಪಡಿಸಲಾಯಿತು; ದೃಢವಾದ ಪ್ರೌಢಾವಸ್ಥೆ, ಹೆಣ್ಣಿನ ಒಂಬತ್ತನೇ ವಯಸ್ಸಿಗೆ ಮದುವೆ ಬಗ್ಗೆ ಸಂಪ್ರದಾಯವಾದಿಗಳ ವ್ಯಾಖ್ಯಾನ ಹೀಗೆ ಇವೆಲ್ಲಾ ಮದುವೆಯನ್ನು ಪೂರ್ಣಗೊಳಿಸುವುದಕ್ಕೆ ಬೇಕಾದವು.[೨೧]

ಏಪ್ರಿಲ್ 2008ರಲ್ಲಿ ನುಜೂದ್ ಅಲಿ ಎಂಬ 10 ವರ್ಷದ ಹೆಣ್ಣು ಮಗಳು ವಿಚ್ಛೇಧನವನ್ನು ಪಡೆಯುವಲ್ಲಿ ಯಶಸ್ವಿಯಾದ ಸುದ್ದಿ ಪ್ರಪಂಚಾದ್ಯಂತ ಪ್ರಾಮುಖ್ಯತೆ ಪಡೆಯಿತು ಮತ್ತು ಈ ಉದಾಹರಣೆಯು ಮದುವೆಯ ವಯಸ್ಸು 18 ಆಗಬೇಕೆಂಬ ಕಾನೂನಿಗೆ ಬೆಂಬಲ ಸಿಕ್ಕಂತಾಯಿತು.[೨೨] 2008ರ ತರುವಾಯ, ದಿ ಸುಪ್ರೀಮ್ ಕೌನ್ಸಿಲ್ ಫಾರ್ ಮದರ್‌ಹುಡ್ ಆಂಡ್ ಚೈಳ್ಡ್‌ಹುಡ್‌ನವರು ಮದುವೆಯ ಕನಿಷ್ಠ ವಯಸ್ಸು 18 ಇರಲೇ ಬೇಕೆಂದು ಪ್ರಸ್ತಾವಣೆಯನ್ನು ಇಟ್ಟರು. ಏಪ್ರಿಲ್ 2009ರಲ್ಲಿ ಮದುವೆಯ ವಯಸ್ಸು 17 ಇರಬೇಕೆಂದು ಕಾಯಿದೆಯನ್ನು ಜಾರಿ ಮಾಡಲಾಯಿತು. ಪಾರ್ಲಿಮೆಂಟರಿಯ ವಿರೋಧ ಪಕ್ಷದವರ ಕುತಂತ್ರದಿಂದಾಗಿ ಆ ಕಾಯಿದೆಯನ್ನು ಮರುದಿನವೇ ಹಿಂದೆಗೆಯಲಾಯಿತು. ಶಾಸನವನ್ನು ಜಾರಿ ಮಾಡಲು ಸಂಧಾನಗಳು ಮುಂದುವರೆದಿವೆ.[೨೩] ಈ ನಡುವೆ, ಯೆಮೆನಿಗಳು ನುಜೂದಳ ಶ್ರಮದಿಂದ ಪ್ರೇರಿತವಾಗಿ ಬದಲಾವಣೆ ಬಯಸಿದರು ಅದರಲ್ಲಿ ಸ್ವತ: ನುಜೂದಳೇ ಒಂದು ಹೋರಾಟದಲ್ಲಿ ಭಾಗವಹಿಸಿದಳು.Cite error: Invalid <ref> tag; invalid names, e.g. too many ಈ ರೀತಿಯ ಜಾಗೃತಿ ಅಭಿಯಾನವೊಂದು ಅಮ್ರಾನ್ ನ ಆಳ್ವಿಕೆಯಲ್ಲಿ ಕೆಲವು ಬಾಲ್ಯವಿವಾಹಗಳನ್ನು ಯೆಮೆನ್‌ನಲ್ಲಿ ತಡೆದಿದ್ದೇವೆ ಎಂದು ಹೇಳಿಕೊಂಡಿದೆ.[೨೪]

ಮಧ್ಯ ಪೌರಾತ್ಯ[ಬದಲಾಯಿಸಿ]

ಸೌದಿ ಅರೇಬಿಯಾ[ಬದಲಾಯಿಸಿ]

ಕಿಂಗ್ಡ್ಂ ಆಫ್ ಸೌದಿ ಅರೇಬಿಯಾದಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿರುವ ಬಾಲ್ಯವಿವಾಹಗಳನ್ನು ಮಾನವ ಹಕ್ಕುಗಳ ಹೋರಾಟದ ಗುಂಪುಗಳು ದಾಖಲಿಸಿವೆ.[೧] [೨]. ಸೌದಿ ಪುರೋಹಿತ ವರ್ಗದವರು ಹೆಣ್ಣು ಮಗುವಿಗೆ 9 ವರ್ಷಕ್ಕೇ ಮದುವೆ ಮಾಡಿದರೂ ತಪ್ಪಿಲ್ಲ ಎಂದು ಬಾಲ್ಯವಿವಾಹಗಳನ್ನು ಸಮರ್ಥಿಸಿ ಅದಕ್ಕೆ ನ್ಯಾಯಾಂಗಗಳ ಇಪ್ಪಿಗೆಯನ್ನೂ ಪಡೆದಿದ್ದಾರೆ.[೩].ಸೌದಿ ಅರೇಬಿಯಾದಲ್ಲಿ ಮದುವೆ ವಯಸ್ಸನ್ನು ನಿಗದಿಪಡಿಸಿಲ್ಲವಾದ ಕಾರಣ ಎಂಟು ವರ್ಷದ ಹೆಣ್ಣು ಮಗುವಿಗೂ ಅಲ್ಲಿ ಮದುವೆ ಜರುಗುತ್ತದೆ.[೪].

ಉತ್ತರ ಅಮೇರಿಕಾ[ಬದಲಾಯಿಸಿ]

ಕೆನಡಾ[ಬದಲಾಯಿಸಿ]

ಕೆನಡಾದಲ್ಲಿ ಹೆಣ್ಣಿಗಾಗಲಿ ಅಥವಾ ಗಂಡಿಗಾಗಲಿ ಮದುವೆಯಾಗಲು 18 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿರಬೇಕು ಇಲ್ಲವಾದಲ್ಲಿ ತಂದೆ-ತಾಯಿಯ ಒಪ್ಪಿಗೆ ಇರಬೇಕು. ನ್ಯಾಯಾಲಯದ ಒಪ್ಪಿಗೆಯಿದ್ದಲ್ಲಿ ಜನ್ಮದಾತರ ಒಪ್ಪಿಗೆಯು ಇರಲೇಬೇಕೆಂದೇನೂ ಇಲ್ಲ. ಹೆಣ್ಣಿಗೆ 16 ವರ್ಷಕ್ಕೂ ಕಡಿಮೆ ವಯಸ್ಸಿದ್ದಲ್ಲಿ ಆಗ ಮದುವೆ ಆಗಬಹುದು ಆದರೆ ನ್ಯಾಯಾಲಯದ ಒಪ್ಪಿಗೆ ಇರಬೇಕಾಗುತ್ತದೆ.[೨೫]. ಕೆನಡಾದಲ್ಲಿ ಮದುವೆ ಆದವರ ಸರಾಸರಿ ವಯಸ್ಸು 33 ಆಗಿರುತ್ತದೆ.[೨೬]

ಅಮೇರಿಕಾ ಸಂಯುಕ್ತ ಸಂಸ್ಥಾನ[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್ ಆದ್ಯಂತ ಬಾಲ್ಯವಿವಾಹಗಳ ಬಗೆಗಿನ ಕಾನೂನು ಒಂದೇ ರೀತಿಯಲ್ಲಿ ಇರುವುದಿಲ್ಲ ಮಕ್ಕಳು 16 ವರ್ಷದವರಾಗಿದ್ದರೂ ಮದುವೆ ಆಗಬಹುದು ಆದರೆ ಅದಕ್ಕೆ ಜನ್ಮದಾತರ ಒಪ್ಪಿಗೆ ಇರಬೇಕು. 16 ವರ್ಷಕ್ಕೂ ಕಡಿಮೆ ವಯಸ್ಸಿದ್ದಲ್ಲಿ ಆಗ ಜನ್ಮದಾತರ ಒಪ್ಪಿಗೆಯ ಜೊತೆಗೆ ನ್ಯಾಯಾಲಯದ ಅನುಮತಿಯೂ ಬೇಕಾಗುತ್ತದೆ.[೨೭]

2008ರವರೆಗೂ, ಫಂಡಾಮೆಂಟಲಿಸ್ಟ್ ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲ್ಯಾಟರ್ ಡೇ ಸೇಂಟ್ಸ್ ನವರು ಬಾಲ್ಯವಿವಾಹವನ್ನು ಆಧ್ಯಾತ್ಮಿಕ ಆಚರಣೆ ಎಂದು 'ಸ್ಪಿರಿಚ್ಯೂಲ್ (ರಿಲಿಜೀಯಸ್ ಒನ್ಲಿ) ಮ್ಯಾರೇಜಸ್,' ಎಂಬ ಹೆಸರಿನಲ್ಲಿ ಹೆಣ್ಣು ಪ್ರೌಢಾವಸ್ಥೆಗೆ ಬಂದೊಡನೆ ಮಾಡುತ್ತಿದ್ದರು ಅದು ಏಕ ಕಾಲದಲ್ಲಿ ಒಬ್ಬಳಿಗಿಂತ ಹೆಚ್ಚು ಪತ್ನಿಯರನ್ನು ಪಡೆಯುವ ಪದ್ಧತಿಯ ಭಾಗವಾಗಿ ಇದನ್ನು ಕೈಗೊಳ್ಳಲಾಗುತ್ತಿತ್ತು ನಂತರ ಜನರ ಟೀಕೆಗೆ ಬಾಗಿ ಈ ಪದ್ಧತಿಯ ವಿರುದ್ಧ ಕಾನೂನನ್ನು ಮಾಡಿ ಮದುವೆಯ ವಯಸ್ಸನ್ನು ಏರಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] 2008ರಲ್ಲಿ, ಚರ್ಚ್‌ನವರು ತಮ್ಮ ನಿಯಮವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬದಲಾಯಿಸಿ, ಇನ್ನು ಮುಂದೆ ಸ್ಥಳೀಯ ಕಾನೂನು ನಿರ್ಧಸಿರುವ ಮದುವೆಯ ವಯೋಮಾನಕ್ಕಿಂತ ಕಡಿಮೆ ವಯಸಿದ್ದರೆ ಮದುವೆ ಆಗಕೂಡದೆಂದು ಹೇಳಿದೆ.[ಸೂಕ್ತ ಉಲ್ಲೇಖನ ಬೇಕು]

2007ರಲ್ಲಿ, ಚರ್ಚ್‌ನ ಮುಖ್ಯಸ್ಥ ವಾರ್ರೆನ್ ಜೆಫ್ಸ್ ಅನ್ನು 14-ವರ್ಷದ ಬಾಲಕಿಗೂ 19 ವರ್ಷದ ಬಾಲಕನಿಗೂ ಮದುವೆ ವ್ಯವಸ್ಥೆಗೊಳಿಸಿದ್ದಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ನಡೆದ ಶಾಸನವಿಹಿತ ಅತ್ಯಾಚಾರಕ್ಕೆ ಶಾಮೀಲುದಾರ ಎಂದು ಆರೋಪಿಸಿ ಬಂಧಿಸಲಾಯಿತು.[೨೮] ಮಾರ್ಚ್ 2008ರಲ್ಲಿ, ಟೆಕ್ಸಾಸ್ ಆಡಳಿತವು ಯಾರ್ನಿಂಗ್ ಫಾರ್ ಜೀಯಾನ್ ರಾಂಚ್ ನಲ್ಲಿ ಮಕ್ಕಳನ್ನು ವಯಸ್ಕ ಪುರುಷರಿಗೆ ಮದುವೆ ಮಾಡಿಕೊಟ್ಟು ಅವರನ್ನು ಹಿಂಸಿಸಲಾಗುತ್ತದೆ.[೨೯] ಟೆಕ್ಸಾಸ್‌ನ ಆಡಳಿತವು ರಾಂಚ್‌ನಿಂದ 468 ಮಕ್ಕಳನ್ನು ರಕ್ಷಿಸಿ ತಾತ್ಕಾಲಿಕವಾಗಿ ಸರಕಾರದ ಸುಪರ್ದಿಯಲ್ಲಿ ಇಟ್ಟುಕೊಳ್ಳಲಾಯಿತು.[೨೯] FLDS ಈ ಆರೋಪಗಳನ್ನು ನಿರಾಕರಿಸಲಾಯಿತು. ಈ ಆರೋಪಗಳು ನ್ಯಾಯಾಲಯದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದೆ ಬಿದ್ದು ಹೋಯಿತು ಮತ್ತು ರಾಂಚ್‌ನಲ್ಲಿ ಸರಕಾರ ಪ್ರವೇಶಿಸಿದ್ದು ಕಾನೂನು ಬಾಹಿರವೆಂದು ತೀರ್ಮಾನಿಸಿತು.[ಸೂಕ್ತ ಉಲ್ಲೇಖನ ಬೇಕು]

ಪ್ರಚಲಿತ ಪದ್ಧತಿ[ಬದಲಾಯಿಸಿ]

ಅಕ್ಟೋಬರ್ 30, 2008ರಲ್ಲಿ ಪಾಕಿಸ್ತಾನದ ಪೊಲೀಸರು ಬಾಲ್ಯವಿವಾಹ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಇಟ್ಟು ಇಬ್ಬರು ಸಂಘಟಕರನ್ನು ಬಂಧಿಸಿದರು ಮತ್ತು ಅವರ ಜಹಗೀರನ್ನು ಕೊನೆಗಾಣಿಸಿದರು. ಜೊತೆಗೆ ಕರಾಚಿ ಬಳಿಯ ನಜೀಮಾಬಾದ್ ಬಳಿಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವನ್ನು ಏಳು ವರ್ಷದ ಗಂಡು ಹುಡುಗನಿಗೆ ಮದುವೆಯನ್ನು ಕಾನೂನು ಬಾಹಿರವಾಗಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.[೧೯]

ಐತಿಹಾಸಿಕ ಸಾಹಿತ್ಯಗಳಲ್ಲಿ ದಾಖಲಾಗಿರುವ ಗತಕಾಲದ ಪದ್ಧತಿ[ಬದಲಾಯಿಸಿ]

 • ಪರಾಗುವಾದ ರೀಯೋ ಸಾವೋ ಲಾರಂಜೋದಲ್ಲಿ ನೆಲೆಸಿರುವ ಅಮೇರಿಕಾ-ಭಾರತೀಯ ಗ್ವಾಟೋಗಳಲ್ಲಿ ತಮಗಿಂತ ಐದರಿಂದ ಎಂಟು ವರ್ಷಗಳು ಹೆಚ್ಚಿನವರನ್ನು ಮದುವೆ ಆಗುತ್ತಿದ್ದರು.
 • ಪರ್ಷಿಯಾದ ಚಿರಾಸ್‌‌ನಲ್ಲಿ ಹೆಣ್ಣು ಮಕ್ಕಳಿಗೆ ಪ್ರೌಢಾವಸ್ಥೆಗೂ ಮುನ್ನವೇ ಮದುವೆ ಆಗಿಬಿಡುತ್ತದೆ.
 • ಸಿರಿಯಾದಲ್ಲಿ ... ಹೆಣ್ಣು ಮಕ್ಕಳು ಹತ್ತು ವರ್ಷ ವಯಸ್ಸಾಗುವುದಕ್ಕೆ ಮೊದಲೇ ಮದುವೆ ಆಗುತ್ತಾರೆ.
 • ಪಶ್ಚಿಮ ಆಫ್ರೀಕಾದ ಆರ್ಕಿರಾ ಬಳಿಯ ಗಬೋನ್‌ನಲ್ಲಿ ಪ್ರೌಢಾವಸ್ಥೆ ಕಾಣಿಸುವವರೆಗೂ ಮದುವೆಯನ್ನು ವಿಳಂಬ ಮಾಡುವುದಿಲ್ಲ.
 • ಸೂದನ್‌ನ ನೂಬಿಯಾದ ಪುರುಷರು ತರುಣಿಯರನ್ನು ಅವರು ಮುಟ್ಟಾಗುವ ಮೊದಲೇ ಅವರೊಡನೆ ಲೈಂಗಿಕ ಸುಖ ಅನುಭವಿಸುತ್ತಾರೆ.
 • ಸುಮಾತ್ರದ ಅಟ್ಜೇಹ್‌ನವರು, ಪ್ರೌಢಾವಸ್ಥೆ ತಲುಪದ ಹೆಣ್ಣು ಮಕ್ಕಳನ್ನು ಮದುವೆಯಾಗುತ್ತಾರೆ ಜೊತೆಗೂ ಮಲಗುತ್ತಾರೆ.
 • ಫಿಜಿಯಲ್ಲಿರುವ ವಿಟಿಯ ದ್ವೀಪದವರೂ ಕೂಡ ಹೆಣ್ಣುಗಳು ಮೈನೆರೆಯುವ ಮೊದಲೇ ಅವರನ್ನು ಮದುವೆ ಆಗಿ ಬಿಡುತ್ತಾರೆ.[೩೦]

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨  This article incorporates text from a publication now in the public domain"Majority". [[Jewish Encyclopedia]]. 1901–1906.  URL–wikilink conflict (help)
 2. ೨.೦ ೨.೧ ೨.೨ ೨.೩ ೨.೪  This article incorporates text from a publication now in the public domain"Mi'un". [[Jewish Encyclopedia]]. 1901–1906.  URL–wikilink conflict (help)
 3. ಯೇಬಾಮಟ್ 107a
 4. ಯೇಬಾಮಟ್ 108a
 5. ಯೇಬಾಮಟ್ 109a
 6. ಯೇಬಾಮಟ್ 107a
 7. D. A. ಸ್ಪೆಲ್ಬರ್ಗ್, ಪಾಲಿಟಿಕ್ಸ್, ಜೆಂಡರ್, ಆಂಡ್ ದಿ ಇಸ್ಲಾಂಮಿಕ್ ಪಾಸ್ಟ್: ದಿ ಲೆಜಸಿ ಆಫ್ ಆಯಿಷಾ ಬಿಂಟ್ ಅಬಿ ಬಕ್ರ್ , ಕೊಲಂಬಿಯಾ ಯುನಿವರ್ಸಿಟಿ ಪ್ರೆಸ್, 1994, p. 40
 8. ಕರೆನ್ ಆರ್ಮ್‌ಸ್ಟ್ರ‍ಾಂಗ್, ಮೊಹಮದ್: ಎ ಬಯಾಗ್ರಫಿ ಆಫ್ ದಿ ಪ್ರಾಫೆಟ್ , ಹಾರ್ಪರ್ ಸ್ಯಾನ್ ಫ್ರಾನ್ಸಿ‌ಸ್ಕೋ, 1992, p. 157.
 9. ಲೆವಿ, p.106
 10. ೧೦.೦ ೧೦.೧ ೧೦.೨ ೧೦.೩ ೧೦.೪ Nour, Nawal M. (2006), "Health Consequences of Child Marriage in Africa", Emerging Infectious Diseases 12 (11): 1644–1649, ISSN 1080-6059 
 11. ೧೧.೦ ೧೧.೧ ಚೈಳ್ಡ್ ಮ್ಯಾರೇಜ್ ಫ್ಯಾಕ್ಟ್‌ಶೀಟ್: ಸ್ಟೇಟ್ ಆಫ್ ವರ್ಲ್ಡ್ ಪಾಪ್ಯೂಲೇಷನ್ 2005 - UNFPA
 12. ಲರ್ನಿಂಗ್ ಫ್ರಂ ಚಿಳ್ಡ್ರನ್, ಫ್ಯಾಮಿಲೀಸ್, ಆಂಡ್ ಕಮ್ಯೂನಿಟೀಸ್ ಟು ಇನ್‌ಕ್ರೀಸ್ ಗರ್ಲ್ಸ್’ ಪಾರ್ಟಿಸಿಪೇಷನ್ ಇನ್ ಪ್ರೈಮರಿ ಸ್ಕೂಲ್ ಮಕ್ಕಳನ್ನು ರಕ್ಷಿಸಿ USA ವರದಿ
 13. ಚೈಳ್ಡ್ ಮ್ಯಾರೇಜ್ ರಿಸ್ಟ್ರೇಂಟ್ ಆಕ್ಟ್,1929
 14. "ಚೈಳ್ಡ್ ಮ್ಯಾರೇಜಸ್ ಟಾರ್ಗೆಟೆಡ್ ಇನ್ ಇಂಡಿಯಾ", BBC ವಾರ್ತೆಗಳು 24 ಅಕ್ಟೋಬರ್, 2001
 15. ಸ್ಟೇಟಸ್ ಆಫ್ ಚಿಳ್ಡ್ರನ್ ಇನ್ ಇಂಡಿಯಾ
 16. ೧೬.೦ ೧೬.೧ http://www.unicef.org/sowc09/docs/SOWC09_Table_9.pdf
 17. http://www.hindu.com/2009/01/18/stories/2009011855981100.htm
 18. BBC NEWS | ವರ್ಲ್ಡ್ | ಸೌತ್ ಏಷಿಯಾ | ಫೋರ್ಸ್ಡ್ ಚೈಳ್ಡ್ ಮ್ಯಾರೇಜ್ ಟೆಸ್ಟ್ಸ್ ಪಾಕಿಸ್ತಾನ್ ಲಾ
 19. ೧೯.೦ ೧೯.೧ http://www.news.com.au/heraldsun/story/0,21985,24589595-5005961,00.html
 20. ೨೦.೦ ೨೦.೧ ೨೦.೨ Power, Carla (12 August 2009), Nujood Ali & Shada Nasser win “Women of the Year Fund 2008 Glamour Award”, Yemen Times, retrieved 16 February 2010 
 21. Human Rights Watch (2001), "Yemen: Human Rights Developments", World Report 2001, Human Rights Watch, retrieved 8 April 2010 
 22. Daragahi, Borzou (June 11 2008), Yemeni bride, 10, says I won't, Los Angeles Times, retrieved 16 February 2010  Check date values in: |date= (help)
 23. Mahmoud Assamiee and Nadia Al-Sakkaf (25 March 2010), Relative breakthrough in Yemen’s early marriage dilemma, Yemen Times, retrieved 8 April 2010 
 24. Mo’ath Monassar (22 March 2010), Awareness campaign stops early marriages in Amran, Yemen Times, retrieved 9 April 2010 
 25. http://marriage.about.com/library/bllteenca.htm
 26. ಸ್ಟಾಟಿಸ್ಟಿಕ್ಸ್ ಕೆನಡಾ
 27. "ಮ್ಯಾರೇಜ್ ಲಾವ್ಸ್ ಇನ್ ದಿ US ಬೈ ಏಜ್"
 28. ಡಾಬ್ನರ್, ಜೆನ್ನಿಫರ್. ಪಾಲಿಗ್ಯಾಮಿಸ್ಟ್ ಲೀಡರ್ ಕನ್ವಿಕ್ಟಡ್ ಇನ್ ಉಟಾಹ್. ಅಸೋಸಿಯೇಟೆಡ್ ಪ್ರೆಸ್. ABC ವಾರ್ತೆಗಳು. 2007-09-25.
 29. ೨೯.೦ ೨೯.೧ ಬ್ಲೂಮೆಂಥಾಲ್, ರಾಲ್ಫ್. ಕೋರ್ಟ್ ಸೇಯ್ಸ್ ಟೆಕ್ಸಾಸ್ ಇಲ್ಲೀಗಲಿ ಸೀಜ್ಡ್ ಸೆಕ್ಟ್ಸ್ ಚಿಲ್ಡ್ರನ್. ದಿ ನ್ಯೂ ಯಾರ್ಕ್ ಟೈಮ್ಸ್.2008-05-23. 2008-05-24ರಲ್ಲಿ ಮರು ಸಂಪಾದಿಸಲಾಗಿದೆ.
 30. ಎಲೀ ಮೆಚಿಂಕಾಫ್ : ದಿ ನೇಚರ್ ಆಫ್ ಮ್ಯಾನ್ : ಸ್ಟಡೀಸ್ ಇನ್ ಆಪ್ಟಿಮಿಸ್ಟಿಕ್ ಫಿಲಾಸಫಿ . ಪುಟ್ನಾಮ್, ನ್ಯೂ ಯಾರ್ಕ್, 1903. p. 90

ಬಾಹ್ಯ ಕೊಂಡಿಗಳು[ಬದಲಾಯಿಸಿ]