ವಿಷಯಕ್ಕೆ ಹೋಗು

ನಿಶ್ಚಿತಾರ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಶ್ಚಿತಾರ್ಥವು ವಿವಾಹವಾಗುತ್ತೇನೆಂದು ನೀಡುವ ವಾಗ್ದಾನ. ನಿಶ್ಚಿತಾರ್ಥದ ಅವಧಿ ಮದುವೆ ಪ್ರಸ್ತಾಪ ಮತ್ತು ಮದುವೆ ನಡುವಿನ ಕಾಲಾವಧಿಯೂ ಆಗಿರುತ್ತದೆ. ಪ್ರೇಮಯಾಚನೆಯ ಅವಧಿಯು ಬಹಳವಾಗಿ ಬದಲಾಗುತ್ತದೆ, ಮತ್ತು ಹೆಚ್ಚಾಗಿ ಸಾಂಸ್ಕೃತಿಕ ರೂಢಿಗಳು ಅಥವಾ ಒಳಗೊಂಡ ಪಕ್ಷಗಳ ಒಪ್ಪಂದವನ್ನು ಅವಲಂಬಿಸಿದೆ.

ವಿಧ್ಯುಕ್ತ ವ್ಯವಸ್ಥಿಯ ಮದುವೆಗಳಲ್ಲಿ ದೀರ್ಘಾವಧಿಯ ನಿಶ್ಚಿತಾರ್ಥಗಳು ಒಂದು ಕಾಲದಲ್ಲಿ ಸಾಮಾನ್ಯವಾಗಿದ್ದವು, ಮತ್ತು ನಿಶ್ಚಿತಾರ್ಥವಾದ ದಂಪತಿ ವಯಸ್ಕರಾಗುವವರೆಗೆ ಅನೇಕ ವರ್ಷ ಮುಂಚೆ ಮದುವೆಗಳನ್ನು ನಿಶ್ಚಯ ಮಾಡಲು ಹೆತ್ತವರು ಮಕ್ಕಳನ್ನು ವಾಗ್ದಾನ ಮಾಡುವುದು ಅಸಾಮಾನ್ಯವಾಗಿರಲಿಲ್ಲ. ಕೆಲವು ದೇಶಗಳಲ್ಲಿ ಇದು ಈಗಲೂ ಸಾಮಾನ್ಯವಾಗಿದೆ.

ಹುಡುಗ ಹುಡುಗಿಯ ಸಾಮ್ಯ ಮಾಡುವಲ್ಲಿ ಈ ಕೆಳಗಿನ ಹಂತಗಳು ಇದ್ದವು: ವರಸಾಮ್ಯದ ಮಾತುಕತೆ. ಇದನ್ನು ಸಾಮಾನ್ಯವಾಗಿ ಹುಡುಗ ಹುಡುಗಿಯ ಕುಟುಂಬದವರು ಮಾಡುತ್ತಿದ್ದರು. ವಧು ಮತ್ತು ವರರು ಬದಲಾಗುವ ಮಟ್ಟಗಳ ಆದಾನ ನೀಡುತ್ತಿದ್ದರು, ಯಾವುದೇ ಆದಾನವಿಲ್ಲದ ಸ್ಥಿತಿಯಿಂದ ಹಿಡಿದು, ನಿರಾಕರಣಾಧಿಕಾರ, ಮದುವೆ ಜತೆಗಾರ/ಜತೆಗಾರ್ತಿಯ ಆಯ್ಕೆಯಲ್ಲಿ ಪೂರ್ಣ ಅಭಿಪ್ರಾಯ ನೀಡುವವರೆಗೆ. ಐತಿಹಾಸಿಕವಾಗಿ ಇದ್ದಂತೆ ಇದು ಈಗ ವ್ಯಾಪಕವಾಗಿ ಆಚರಣೆಯಲ್ಲಿಲ್ಲ, ಆದರೂ ಭಾರತ, ಇಸ್ರೇಲ್, ಆಫ಼್ರಿಕಾದಂತಹ ಸಾಂಸ್ಕೃತಿಕವಾಗಿ ಸಂಪ್ರದಾಯಬದ್ಧ ಸಮುದಾಯಗಳಲ್ಲಿ ಇದು ಈಗಲೂ ಸಾಮಾನ್ಯವಾಗಿದೆ. ಆದರೆ ಬಹುತೇಕ ಸಮುದಾಯಗಳಲ್ಲಿ ವಧುವಿಗೆ ಕನಿಷ್ಠಪಕ್ಷ ನಿರಾಕರಣಾಧಿಕಾರದ ಅನುಮತಿ ಇದೆ ಎಂದು ಒಪ್ಪಿಕೊಳ್ಳಲಾಗಿದೆ; ಕನ್ಯಾಶುಲ್ಕ ಅಥವಾ ವರದಕ್ಷಿಣೆಯ ಮಾತುಕತೆ. ಯೂರೋಪ್‍ನಿಂದ ವಿಕಸನಗೊಂಡ ಬಹುತೇಕ ಸಂಸ್ಕೃತಿಗಳಲ್ಲಿ, ವರದಕ್ಷಿಣೆಗಳು ಮದುವೆ ಒಪ್ಪಂದದ ಜೊತೆಗೂಡಿರುವ ನಿಶ್ಚಿತಾರ್ಥದ ಉಂಗುರಕ್ಕೆ ಸೀಮಿತವಾದರೆ, ಇತರ ಅರಬ್ಬೀ ದ್ವೀಪಕಲ್ಪದಲ್ಲಿ ನೆಲೆಸಿರುವ ಸಂಸ್ಕೃತಿಗಳಲ್ಲಿ, ಇವು ಈಗಲೂ ಮದುವೆ ಒಪ್ಪಂದದ ಮಾತುಕತೆಯ ಭಾಗವಾಗಿವೆ; ಹೆತ್ತವರು ಮತ್ತು ಪುರೋಹಿತರಿಂದ ಆಶೀರ್ವಾದ ಪಡೆಯುವುದು; ಶಪಥ ವಿನಿಮಯ ಮತ್ತು ಒಪ್ಪಂದಗಳಿಗೆ ಸಹಿ ಹಾಕುವುದು; ಆಚರಿಸುವುದು.

ನಿಶ್ಚಿತಾರ್ಥದ ನಿಖರ ಅವಧಿಯು ಸಂಸ್ಕೃತಿ ಮತ್ತು ಭಾಗೀದಾರರ ಅಗತ್ಯಗಳು ಹಾಗೂ ಆಸೆಗಳ ಪ್ರಕಾರ ಬದಲಾಗುತ್ತದೆ. ವಯಸ್ಕರಿಗೆ, ಇದು ಹಲವಾರು ಗಂಟೆಗಳಿಂದ ಹಿಡಿದು (ನಿಶ್ಚಿತಾರ್ಥವನ್ನು ವಿವಾಹದ ದಿನದೊಳಗೆಯೇ ಏಕೀಕರಿಸಲಾದಾಗ) ಹಲವಾರು ವರ್ಷಗಳವರೆಗೆ, ಎಷ್ಟಾದರೂ ಇರಬಹುದು. ಬಾಲ್ಯ ವಿವಾಹದ ಸಂಬಂಧದಲ್ಲಿ, ನಿಶ್ಚಿತಾರ್ಥವು ಶೈಶವಾವಸ್ಥೆಯಿಂದ ಮದುವೆಯ ವಯಸ್ಸಿನವರೆಗೆ ಇರಬಹುದು.

ನಿಶ್ಚಿತಾರ್ಥದ ಕರ್ತವ್ಯಗಳು ಮತ್ತು ಸವಲತ್ತುಗಳು ಬದಲಾಗುತ್ತವೆ. ಬಹುತೇಕ ಸಂಸ್ಕೃತಿಗಳಲ್ಲಿ, ನಿಶ್ಚಿತಾರ್ಥವಾದ ದಂಪತಿಗಳು ಒಬ್ಬರ ಬಗ್ಗೆ ಒಬ್ಬರು ತಿಳಿದುಕೊಳ್ಳಲು ಒಟ್ಟಾಗಿ ಸಾಕಷ್ಟು ಸಮಯ ಕಳೆಯಬೇಕೆಂದು ನಿರೀಕ್ಷಿಸಲಾಗುತ್ತದೆ. ಕೆಲವು ಐತಿಹಾಸಿಕ ಸಂಸ್ಕೃತಿಗಳಲ್ಲಿ, ನಿಶ್ಚಿತಾರ್ಥವು ಮೂಲಭೂತವಾಗಿ ಪ್ರಯೋಗಾರ್ಥ ಮದುವೆಯಾಗಿತ್ತು, ಮತ್ತು ಮದುವೆ ಕೇವಲ ಸಂತಾನೋತ್ಪತ್ತಿಯ ಸಂದರ್ಭಗಳಲ್ಲಿ ಅಗತ್ಯವಿತ್ತು.