ವಿಷಯಕ್ಕೆ ಹೋಗು

ಬಟುಕೇಶ್ವರ ದತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಟುಕೇಶ್ವರ ದತ್ತ
বটুকেশ্বর দত্ত
೧೯೫೨ ರಲ್ಲಿ ದತ್ತ
ಜನನ(೧೯೧೦-೧೧-೧೮)೧೮ ನವೆಂಬರ್ ೧೯೧೦
ಖಂಡಘೋಷ[೧]
ಮರಣ20 July 1965(1965-07-20) (aged 54)
ದೆಹಲಿ
ರಾಷ್ಟ್ರೀಯತೆBritish Indian (1910–1947)
Indian (1947–1965)
ವೃತ್ತಿಕ್ರಾಂತಿಕಾರಿ
Organizationಭಾರತೀಯ ಸಮಾಜವಾದಿ ಸಂಘಟಣೆ
Known forಭಾರತದ ಸ್ವಾತಂತ್ರ್ಯ ಹೋರಾಟ
Criminal penaltyಜೀವಾವಧಿ ಶಿಕ್ಷೆ


ಬಟುಕೇಶ್ವರ ದತ್ತ pronunciation </img> pronunciation ( ಬಂಗಾಳಿ : ಬಟುಕೆಶ್ಬರ್ ದತ್ತ; ‌೧೮ ನವೆಂಬರ್ ೧೯೧೦ - ೨೦ ಜುಲೈ ೧೯೬೫) ೧೯೦೦ ರ ದಶಕದ ಆರಂಭದಲ್ಲಿ ಭಾರತೀಯ ಸಮಾಜವಾದಿ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. [೨] ಅವರು ೮ ಏಪ್ರಿಲ್ ೧೯೨೯ ರಂದು ಬ್ರಿಟೀಷರ ದಬ್ಬಾಳಿಕೆಯನ್ನು ವಿರೋಧಿಸಿ ಹೊಸ ದೆಹಲಿಯ ಕೇಂದ್ರ ಶಾಸನ ಸಭೆಯಲ್ಲಿ ಭಗತ್ ಸಿಂಗ್ ಅವರ ಜೊತೆಗೆ ಬ್ರಿಟೀಷ್‌ ಸಾಮ್ರಾಜ್ಯಕ್ಕೆ ಎಚ್ಚರಿಸುವಂತೆ ಎರಡು ಬಾಂಬ್‌ಗಳನ್ನು ಸ್ಫೋಟಿಸಿದ್ದಕ್ಕಾಗಿ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ಬ್ರಿಟೀಷರು ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿ ಜೀವಾವಧಿ ಶಿಕ್ಷೆಗೆ ಒಳಪಡಿಸಿದ ನಂತರ, ದತ್ತ್‌, ಸುಖದೇವ್ ಮತ್ತು‌ ಭಗತ್ ಸಿಂಗ್ ಅವರು‌ ಬ್ರಿಟೀಷರು ಭಾರತೀಯ ಖೈದಿಗಳ ಮೇಲಿನ ನಿಂದನೀಯ ವರ್ತನೆಯನ್ನು ವಿರೋಧಿಸಿ ಐತಿಹಾಸಿಕ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು ಮತ್ತು ಅದರ ಪರಿಣಾಮವಾಗಿ ಅವರಿಗೆ ಕೆಲವು ಹಕ್ಕುಗಳನ್ನು ಪಡೆದರು. [೩] ಅವರು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್‌ನ ಸದಸ್ಯರೂ ಆಗಿದ್ದರು.

ಜೀವನಚರಿತ್ರೆ[ಬದಲಾಯಿಸಿ]

ಭಟುಕೇಶ್ವರ ದತ್ತ್ - BK ದತ್ತಾ, ಬಟ್ಟು ಮತ್ತು ಮೋಹನ್ ಎಂದೂ ಕರೆಯುತ್ತಾರೆ - ಗೋಷ್ಠ ಬಿಹಾರಿ ದತ್ತನ ಮಗ. ಅವರು ‌೧೮ ನವೆಂಬರ್ ೧೯೧೦ ರಂದು ಪುರಬಾ ಬರ್ಧಮಾನ್ ಜಿಲ್ಲೆಯ ಖಂದಘೋಷ್ ಗ್ರಾಮದಲ್ಲಿನ ಒಂದು ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಅವರು ಕಾನ್ಪೋರ್‌ನ ಪಂಡಿತ್ ಪೃಥಿ ನಾಥ್ ಹೈಸ್ಕೂಲ್‌ನಲ್ಲಿ ಪದವಿ ಶಿಕ್ಷಣ ಪಡೆದರು. ಅವರು ಚಂದ್ರಶೇಖರ್ ಆಜಾದ್ ಮತ್ತು ಭಗತ್ ಸಿಂಗ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ನಿಕಟ ಸಹವರ್ತಿಯಾಗಿದ್ದರು, ಅವರಲ್ಲಿ ನಂತರದವರನ್ನು ಅವರು ೧೯೨೪ ರಲ್ಲಿ ಕಾನ್ಪೋರ್ನಲ್ಲಿ ಭೇಟಿಯಾದರು. ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್‌ಎಸ್‌ಆರ್‌ಎ)ನಲ್ಲಿ ಕೆಲಸ ಮಾಡುವಾಗ ಬಾಂಬ್ ತಯಾರಿಸುವುದನ್ನು ಅವರು ಕಲಿತರು.

೧೯೨೯ರಲ್ಲಿ ಶಾಸನ ಸಭೆಯ ಮೇಲೆ ಬಾಂಬ್ ಎಸೆದ ಘಟನೆ[ಬದಲಾಯಿಸಿ]

ಭಗತ್ ಸಿಂಗ್ ಅವರಂತಹ ಕ್ರಾಂತಿಕಾರಿಗಳ ಏಳಿಗೆಯನ್ನು ನಿಗ್ರಹಿಸಲು, ಬ್ರಿಟಿಷ್ ಸರ್ಕಾರವು ೧೯೧೫ರ ಭಾರತದ ರಕ್ಷಣಾ ಕಾಯಿದೆ ಯನ್ನು ಜಾರಿಗೆ ತರಲು ನಿರ್ಧರಿಸಿತು, ಅದು ಪೊಲೀಸರಿಗೆ ಹೆಚ್ಚಿನ ಸ್ವತಂತ್ರ ಅಧಿಕಾರವನ್ನು ನೀಡಿತು. [೪] ಫ್ರಾನ್ಸ್‌ ನಲ್ಲಿ ಫ್ರೆಂಚ್ ಅರಾಜಕತಾವಾದಿಯಿಂದ ಫ್ರೆಂಚ್ ಚೇಂಬರ್ ಆಫ್ ಡೆಪ್ಯೂಟೀಸ್ ಮೇಲೆ ಬಾಂಬ್ ದಾಳಿ ಮಾಡಿದ ಘಟನೆಯಿಂದ ಪ್ರಭಾವಿತರಾದ ಭಗತ್ ಸಿಂಗ್, ಕೇಂದ್ರ ಸಂಸತ್‌ ಭವನದೊಳಗೆ ಬಾಂಬ್ ಸ್ಫೋಟಿಸುವ ಯೋಜನೆಯನ್ನು ಎಚ್‌ಎಸ್‌ಆರ್‌ಎ ನಲ್ಲಿ ಪ್ರಸ್ತಾಪಿಸಿದರು, ಅದಕ್ಕೆ ಅದು ಒಪ್ಪಿಗೆ ಸೂಚಿಸಿತು. ಆರಂಭದಲ್ಲಿ, ಭಗತ್ ಸಿಂಗ್ ರಷ್ಯಾ ಗೆ ಪ್ರಯಾಣಿಸುವಾಗ ‌ಭಟುಕೇಶ್ವರ ದತ್ ಮತ್ತು ಸುಖದೇವ್ ಥಾಪರ್ ಬಾಂಬ್ ಇಡುತ್ತಾರೆ ಎಂದು ನಿರ್ಧರಿಸಲಾಯಿತು. ಆದಾಗ್ಯೂ, ನಂತರ ಯೋಜನೆಯನ್ನು ಬದಲಾಯಿಸಿ ಭಗತ್ ಸಿಂಗ್ ಜೊತೆಗೆ‌ ಸೇರಿ ಬಾಂಬ್‌ ಎಸೆಯುವ ಜವಾಬ್ದಾರಿಯನ್ನು ಭಟುಕೇಶ್ವರ ದತ್ ಅವರಿಗೆ ವಹಿಸಲಾಯಿತು. [೫] ೮ ಏಪ್ರಿಲ್ ೧೯೨೯ ರಂದು, ಭಗತ್ ಸಿಂಗ್ ಮತ್ತು‌ ಭಟುಕೇಶ್ವರ ದತ್ ವೀಕ್ಷಣಾ ಗ್ಯಾಲರಿಯಿಂದ ಧಾವಿಸಿ ವಿಧಾನಸಭೆಯೊಳಗೆ ಎರಡು ಬಾಂಬ್‌ಗಳನ್ನು ಎಸೆದರು. ಬಾಂಬ್‌ನಿಂದ ಹೊಗೆಯು ಸಭಾಂಗಣವನ್ನು ತುಂಬಿತು ಮತ್ತು ಅವರು "ಇಂಕ್ವಿಲಾಬ್ ಜಿಂದಾಬಾದ್" ಎಂದು ಘೋಷಣೆಗಳನ್ನು ಕೂಗಿದರು. (ಹಿಂದಿ-ಉರ್ದು: "ಕ್ರಾಂತಿ ಚಿರಾಯುವಾಗಲಿ!") ಮತ್ತು ಕರಪತ್ರಗಳನ್ನು ಎಲ್ಲರಿಗೂ ತಲುಪುವಂತೆ ಮಾಡಿದರು. [೬] [೭] [೮] ಕೇಂದ್ರ ಶಾಸನ ಸಭೆಯಲ್ಲಿ ಮಂಡಿಸಲಾಗುತ್ತಿರುವ ವ್ಯಾಪಾರ ವಿವಾದಗಳು, ಸಾರ್ವಜನಿಕ ಸುರಕ್ಷತಾ ಮಸೂದೆ ಮತ್ತು ಲಾಲಾ ಲಜಪತ್ ರಾಯ್ ಅವರ ಮರಣವನ್ನು ವಿರೋಧಿಸಲು ಈ ಕೃತ್ಯವನ್ನು ಮಾಡಲಾಗಿದೆ ಎಂದು ಕರಪತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. [೯] ಸ್ಫೋಟದಲ್ಲಿ ಕೆಲವರಿಗೆ ಗಾಯಗಳಾದವು ಆದರೆ ಯಾವುದೇ ಸಾವು ಸಂಭವಿಸಲಿಲ್ಲ. ಈ ಕೃತ್ಯವು ಬ್ರಿಟೀಷರಿಗೆ ಈ ಮೇಲಿನ ಸಂದೇಶವನ್ನು ತಲುಪಿಸುವ ಉದ್ದೇಶವಾಗಿತ್ತು ಎಂದು ಭಗತ್ ಸಿಂಗ್ ಮತ್ತು‌ ಭಟುಕೇಶ್ವರ ದತ್ ಹೇಳಿದ್ದಾರೆ. [೧೦] ನಂತರದಲ್ಲಿ ಭಗತ್ ಸಿಂಗ್ ಮತ್ತು‌ ಭಟುಕೇಶ್ವರ ದತ್ ಅವರನ್ನು ಅವರ ಯೋಜನೆಯಂತೆಯೇ [೧೧] [೧೨] ಬಂಧಿಸಲಾಯಿತು. [೧೦]

ಟ್ರಿಬ್ಯೂನ್ ಈ ಘಟನೆಯನ್ನು ಹೀಗೆ ವರದಿ ಮಾಡಿದೆ:

ವಿಚಾರಣೆ[ಬದಲಾಯಿಸಿ]

ಭಗತ್ ಸಿಂಗ್ ಮತ್ತು ಸುಖದೇವ್ ಥಾಪರ್ ಜೊತೆಗೆ, ಕೇಂದ್ರ ಶಾಸನ ಸಭೆಯ ಮೇಲೆ ಬಾಂಬ್ ಎಸೆದ ಪ್ರಕರಣದಲ್ಲಿ ಭಟುಕೇಶ್ವರ ದತ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು ಮತ್ತು ೧೯೨೯ ರಲ್ಲಿ ದೆಹಲಿಯ ಸೆಷನ್ಸ್ ನ್ಯಾಯಾಧೀಶರು ಭಾರತೀಯ ದಂಡ ಸಂಹಿತೆಯ ೩೦೭ನೇ ವಿಧಿ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ವಿಧಿ ೪ ರ ಅಡಿಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದರು. ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರುವ ಸೆಲ್ಯುಲಾರ್ ಜೈಲಿಗೆ ಗಡೀಪಾರು ಮಾಡಲಾಯಿತು.

ಕೊನೆಯ ದಿನಗಳು[ಬದಲಾಯಿಸಿ]

ಜೈಲಿನಿಂದ ಬಿಡುಗಡೆಯಾದ ನಂತರ, ಭಟುಕೇಶ್ವರ ದತ್ ಕ್ಷಯರೋಗಕ್ಕೆ ತುತ್ತಾದರು. ಅದೇನೇ ಇದ್ದರೂ, ಅವರು ಮಹಾತ್ಮಾ ಗಾಂಧಿಯವರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು ಮತ್ತು ಮತ್ತೆ ನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು. ಆಗ ಅವರನ್ನು ಮೋತಿಹಾರಿ ಜೈಲಿನಲ್ಲಿ ಇರಿಸಲಾಗಿತ್ತು (ಬಿಹಾರದ ಚಂಪಾರಣ್ ಜಿಲ್ಲೆ). ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಅವರು ನವೆಂಬರ್ ೧೯೪೭ ರಲ್ಲಿ ಅಂಜಲಿ ಎನ್ನುವವರನ್ನು ವಿವಾಹವಾದರು. ಸ್ವತಂತ್ರ ಭಾರತವು ಅವರಿಗೆ ಯಾವುದೇ ಮನ್ನಣೆಯನ್ನು ನೀಡಲಿಲ್ಲ, ಮತ್ತು ಅವರು ತಮ್ಮ ಉಳಿದ ಜೀವನವನ್ನು ರಾಜಕೀಯ ಪ್ರಚಾರಗಳಿಂದ ದೂರವಾಗಿ ಬಡತನದಲ್ಲೇ ಕಳೆದರು. ಸ್ವಾತಂತ್ರ್ಯ ಹೋರಾಟಗಾರನ ನಂತರದ ಜೀವನವು ನೋವಿನಿಂದ ಹಾಗೂ ದುರಂತದಿಂದ ಕೂಡಿತ್ತು. ಕ್ಷಯರೋಗದಿಂದ ಜೈಲಿನಿಂದ ಬಿಡುಗಡೆಗೊಂಡ ಅವರು ಸ್ವತಂತ್ರ ಭಾರತದಲ್ಲಿ ಗೌರವಯುತವಾಗಿರಲಿಲ್ಲ, ಅವರು ಬಡತನದಿಂದ ಬಳಲುತ್ತಿದ್ದರು. ಜೀವನೋಪಾಯಕ್ಕಾಗಿ ಸಾರಿಗೆ ಉದ್ಯಮವನ್ನು ಪ್ರಾರಂಭಿಸಲು ಒತ್ತಾಯಿಸಲಾಯಿತು. ಜೈದೇವ್ ಕಪೂರ್ ಅವರನ್ನು ಹೊರತುಪಡಿಸಿ ಭಟುಕೇಶ್ವರ ದತ್ ಅವರ ಎಲ್ಲಾ ಒಡನಾಡಿಗಳು ಬದುಕಿದ್ದರು. ದೀರ್ಘ ಕಾಲದ ಅನಾರೋಗ್ಯದಿಂದ ದೆಹಲಿಯ AIIMS ಆಸ್ಪತ್ರೆಯಲ್ಲಿ ಜುಲೈ ೧೯/೨೦-೧೯೬೫ ರ ಮಧ್ಯರಾತ್ರಿ ನಿಧನರಾದರು. ಪಂಜಾಬ್‌ನ ಫಿರೋಜ್‌ಪುರ ಬಳಿಯ ಹುಸೇನಿವಾಲಾದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು, ಈ ಹಿಂದೆ ಅದೇ ಸ್ಥಳದಲ್ಲಿ ಅವರ ಒಡನಾಡಿಗಳಾದ ಭಗತ್ ಸಿಂಗ್, ಶಿವರಾಮ್ ರಾಜಗುರು ಮತ್ತು ಸುಖದೇವ್ ಥಾಪರ್ ಅವರ ದೇಹಗಳನ್ನು ದಹಿಸಲಾಗಿತ್ತು. ಅವರು ತಮ್ಮ ಏಕೈಕ ಪುತ್ರಿ ಭಾರತಿ ದತ್ತಾ ಬಾಗ್ಚಿ, [೧೩] ಪಾಟ್ನಾದಲ್ಲಿ ಉಳಿದುಕೊಂಡರು, ಅಲ್ಲಿ ಅವರ ಮನೆ ಜಕ್ಕನ್‌ಪುರದಲ್ಲಿದೆ. ಭಾರತಿಯವರು ಶಾಹೀದ್ (1965) ಚಿತ್ರದ ಬರಹಗಾರರಲ್ಲಿ ಒಬ್ಬರಾಗಿದ್ದರು. ಶಾಹೀದ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅದರ ನಾಯಕ ನಟ ಮನೋಜ್ ಕುಮಾರ್ ಒಮ್ಮೆ ಭಗತ್ ಸಿಂಗ್ ಅವರ ತಾಯಿಯನ್ನು ಭೇಟಿಯಾಗಲು ಹೋದರು, ಆ ಸಮಯದಲ್ಲಿ ಅವರು ಚಂಡೀಗಢದ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅಲ್ಲಿ ಭಟುಕೇಶ್ವರ ದತ್ ಅವರನ್ನು ಭೇಟಿಯಾಗಿದ್ದಾಗಿ ಮನೋಜ್ ಕುಮಾರ್ ಹೇಳಿದ್ದಾರೆ. [೧೪]

೧೯೬೫ರಲ್ಲಿ ಮರಣಶಯ್ಯೆಯಲ್ಲಿದ್ದ ಭಟುಕೇಶ್ವರ ದತ್ (ಅವರ ಪತ್ನಿ ಅಂಜಲಿ ಮತ್ತು ಮಗಳು ಭಾರತಿ ಪಕ್ಕದಲ್ಲಿ ನಿಂತಿದ್ದಾರೆ)

ಗುರುತಿಸುವಿಕೆ[ಬದಲಾಯಿಸಿ]

ನವದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದ ಎದುರು ಮತ್ತು ಜೋರ್ ಬಾಗ್‌ನ ಪಕ್ಕದಲ್ಲಿರುವ ಒಂದು ಕಾಲೋನಿಗೆ ಬಿ.ಕೆ ದತ್ ಕಾಲೋನಿ ಎಂಬ ಹೆಸರನ್ನು ಇಡಲಾಗಿದೆ. ಇದು NDMC ಪ್ರದೇಶದಲ್ಲಿ AIIMS ಗೆ ಸಮೀಪವಿರುವ ಖಾಸಗಿ ವಸತಿ ಕಾಲೋನಿಯಾಗಿದೆ.

ಅನಿಲ್ ವರ್ಮಾ ಅವರು ಬಟುಕೇಶ್ವರ್ ದತ್: ಭಗತ್ ಸಿಂಗ್ ಕೆ ಸಹಯೋಗಿ ಎಂಬ ಪುಸ್ತಕವನ್ನು ಬರೆದಿದ್ದಾರೆ, ಇದನ್ನು ದತ್ ಅವರ ಜನ್ಮ ಶತಮಾನೋತ್ಸವದಂದು ಬಿಡುಗಡೆ ಮಾಡಲಾಯಿತು. ಭಾರತ ಸರ್ಕಾರದ ಪ್ರಕಾಶನ ಸೇವೆ, ನ್ಯಾಷನಲ್ ಬುಕ್ ಟ್ರಸ್ಟ್ ಈ ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕವು ಭಟುಕೇಶ್ವರದತ್ ಅವರ ಕುರಿತು ಇದುವರೆಗಿನ ಬೇರೆ ಭಾಷೆಗಳಲ್ಲಿ ಪ್ರಕಟವಾದ ಮೊದಲ ಪುಸ್ತಕವಾಗಿದೆ.

ಬಟುಕೇಶೇಶ್ವರ ದತ್ತರಿಗೆ ಮಾಲೆ ಹಾಕುತ್ತಿರುವ ಜನರು

ದತ್ತ್‌ ಅವರ ಸಾಂಸ್ಕೃತಿಕ ಜನಪ್ರಿಯತೆ[ಬದಲಾಯಿಸಿ]

೧೯೮೯ರ ಕಿ. ರಾಜನಾರಾಯಣನ್ ಅವರ ಗೋಪಲ್ಲಪುರತು ಮಕ್ಕಳು ಎಂಬ ಕಾದಂಬರಿಯಲ್ಲಿ, ದತ್ ಅವರು ೧೯೨೯ ರಲ್ಲಿ ಉಪವಾಸ ಸತ್ಯಾಗ್ರಹದ ೫೬ ನೇ ದಿನದಂದು ಸತ್ತರು ಎಂದು ಕಾಲಾತೀತವಾಗಿ ಆಗಿ ಉಲ್ಲೇಖಿಸಲಾಗಿದೆ.

ದಿ ಲೆಜೆಂಡ್ ಆಫ್ ಭಗತ್ ಸಿಂಗ್ (2002) ಚಿತ್ರದಲ್ಲಿ ಭಾಸ್ವರ್ ಚಟರ್ಜಿ ದತ್ತಾ ಪಾತ್ರವನ್ನು ನಿರ್ವಹಿಸಿದ್ದಾರೆ.

ಇದನ್ನು ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. "Batukeshwar Dutta". Archived from the original on 7 March 2019. Retrieved 5 May 2015.
 2. Śrīkr̥shṇa Sarala (1999). Indian Revolutionaries: A Comprehensive Study, 1757-1961. Ocean Books. pp. 110–. ISBN 978-81-87100-18-8. Retrieved 2012-07-11.
 3. Bhagat Singh Documents Hunger-strikers' Demands
 4. "Defence of India Act". Encyclopædia Britannica. Encyclopædia Britannica, Inc. Retrieved 2011-10-28.
 5. Ralhan, Om Prakash (1998). Encyclopaedia of political parties, Volumes 33-50. New Delhi: Anmol Publications. ISBN 81-7488-865-9.
 6. "INDIA: Jam Tin Gesture". Time. 22 April 1929. Archived from the original on 22 August 2013. Retrieved 2011-10-11.
 7. "Bhagat Singh Remembered". Daily Times (Pakistan). Archived from the original on 6 June 2011. Retrieved 2011-10-28.
 8. "Leaflet was thrown in the Central Assembly Hall, New Delhi at the time of the throwing voice bombs". Letter, Writings and Statements of Shaheed Bhagat Singh and his Copatriots. Shahid Bhagat Singh Research Committee, Ludhiana. Archived from the original on 30 September 2015. Retrieved 2011-10-29.
 9. Singh, Bhagat; Hooja, Bhupendra (2007). The Jail Notebook and Other Writings. LeftWord Books. ISBN 978-81-87496-72-4. Archived from the original on 1 October 2015.
 10. ೧೦.೦ ೧೦.೧ "Full Text of Statement of S. Bhagat Singh and B.K. Dutta in the Assembly Bomb Case". Letter, Writings and Statements of Shaheed Bhagat Singh and his Copatriots. Shahid Bhagat Singh Research Committee, Ludhiana. Retrieved 2011-10-29.
 11. "The Trial of Bhagat Singh". India Law Journal. Archived from the original on 2015-10-01. Retrieved 2011-10-11.
 12. Lal, Chaman (11 April 2009). "April 8, 1929: A Day to Remember". Mainstream. Archived from the original on 1 October 2015. Retrieved 2011-12-14.
 13. "Remembering the great Indian revolutionary". The Hindu (in Indian English). 2008-10-12. ISSN 0971-751X. Retrieved 2018-08-31.
 14. "When Manoj Kumar met Bhagat Singh's mother: 'She scanned me and said, I do look like her son'". The Indian Express (in ಇಂಗ್ಲಿಷ್). 2021-03-23. Retrieved 2021-03-30.