ವಿಷಯಕ್ಕೆ ಹೋಗು

ಫಿರೋಜ್ಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


Firozpur
ਫ਼ਿਰੋਜ਼ਪੁਰ
The National Martyrs Memorial, built at Hussainiwala in memory of Bhagat Singh, Sukhdev and Rajguru
The National Martyrs Memorial, built at Hussainiwala in memory of Bhagat Singh, Sukhdev and Rajguru
Nickname: 
FZR
CountryIndia
StatePunjab
DistrictFirozpur
Founded byFiroz Shah Tughluq
Named forFiroz Shah Tughluq
Government
 • TypeDemocratic
 • Member of ParliamentSher Singh Ghubaya (SAD)
 • Member of the Legislative AssemblyParminder Singh Pinky (INC)
Elevation
೧೮೨ m (೫೯೭ ft)
Population
 (2011)‡[›]
 • Total೧,೧೦,೦೯೧
 • Density೩೮೦/km (೧,೦೦೦/sq mi)
Demonym(s)Firozpuri, Firozpuria
Languages
 • OfficialPunjabi
 • DialectMalwai
 • Otherಹಿಂದಿ and English
Time zoneUTC+5:30 (IST)
PIN
152001
UNLOCODE
IN FIR
Area code91-1632
Vehicle registrationPB 05
Sex ratio885/1000[] /
Literacy69.80%
ಲೋಕಸಭೆ constituencyFirozpur
Vidhan Sabha constituencyFirozpur City
Planning agencyPUDA
Major HighwaysNH95 SH15 SH 20
ClimateCw (Köppen)
Avg. summer temperature29.7 °C (85.5 °F)
Avg. winter temperature16.9 °C (62.4 °F)
Precipitation731.6 millimetres (28.80 in)
Websitewww.ferozepur.nic.in

ಸಟ್ಲೆಜ್ ನದಿ ತಟದಲ್ಲಿರುವ ಫಿರೋಜ್ಪುರ ಪಂಜಾಬ್ ನ ಅತ್ಯಂತ ಜನಪ್ರಿಯ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ತುಘಲಕ್ ಸಾಮ್ರಾಜ್ಯದ ಸುಲ್ತಾನ ಫಿರೊಜ್ ಷಾ ತುಘಲಕ್ ಈ ನಗರವನ್ನು ನಿರ್ಮಿಸಿದ. ಈ ನಗರಕ್ಕೆ ಭಟ್ಟಿ ವಂಶದ ಫಿರೊಜ್ ಖಾನ್‍ನ ಹೆಸರನ್ನಿಡಲಾಗಿದೆ ಎಂದು ನಂಬಲಾಗುತ್ತದೆ. ಫಿರೊಜ್ಪುರದಲ್ಲಿ ಕೇವಲ ಐತಿಹಾಸಿಕ ಸ್ಮಾರಕಗಳಲ್ಲದೆ ಧಾರ್ಮಿಕ ಕೇಂದ್ರಗಳು ಮತ್ತು ನೈಸರ್ಗಿಕ ಆಕರ್ಷನೀಯ ತಾಣಗಳಿವೆ.[]

ಫಿರೋಜ್ಪುರ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

[ಬದಲಾಯಿಸಿ]

ನಗರದೆಲ್ಲೆಡೆ ಹರಡಿರುವ ಅಗಣಿತ ಆಕರ್ಷಣೀಯ ಪ್ರವಾಸಿ ತಾಣಗಳಿಂದ ಫಿರೋಜ್ಪುರ ಪ್ರವಾಸೋದ್ಯಮ ತುಂಬಾ ಜನಪ್ರಿಯವಾಗಿದೆ. ಜೈನ ಮಂದಿರ, ಪೊಥಿಮಾಲ ಮತ್ತು ಗುರುದ್ವಾರ ಗುರುಸರ್ ಕೆಲವು ಪ್ರಮುಖ ಪ್ರವಾಸಿ ತಾಣಗಳು. ಭಾರತ-ಪಾಕಿಸ್ತಾನ ಗಡಿಯಲ್ಲಿರುವ ನಗರವು ಆಂಗ್ಲೊ-ಸಿಖ್ ಕದನ ಮತ್ತು ಬ್ರಿಟಿಷ್ ರಾಜ್ ವೇಳೆ ಮಹತ್ವದ ಪಾತ್ರ ನಿರ್ವಹಿಸಿದೆ. ಇಲ್ಲಿರುವ ಹಲವಾರು ಮ್ಯೂಸಿಯಂ ಮತ್ತು ಸ್ಮಾರಕಗಳು, ಈ ಪ್ರದೇಶದ ಇತಿಹಾಸದ ವೈಭವದ ಒಳನೋಟವನ್ನು ಒದಗಿಸುತ್ತದೆ.[]

ಆಂಗ್ಲೊ-ಸಿಖ್ ಯುದ್ಧ ಸ್ಮಾರಕ, ಸಾರಗರ್ಹಿ ಸ್ಮಾರಕ, ರಾಷ್ಟ್ರೀಯ ಹುತಾತ್ಮರ ಸ್ಮಾರಕ ಮತ್ತು ಬರ್ಕಿ ಸ್ಮಾರಕ ವೀಕ್ಷಿಸಲೇಬೇಕಾದ ಕೆಲವು ಪ್ರವಾಸಿ ತಾಣಗಳು. ಇದನ್ನು ಹೊರತುಪಡಿಸಿ ನಗರದ ಸಮೀಪದಲ್ಲೇ ಇರುವ ಪ್ರವಾಸಿ ತಾಣಗಳಾದ ಹರಿಕೆ ಪಕ್ಷಿಧಾಮ(55 ಕಿ.ಮೀ. ದೂರದಲ್ಲಿದೆ), ಗುರುಹರಸಾಹಿಯಲ್ಲಿರುವ ಪೊಥಿಮಾಲ(40 ಕಿ.ಮೀ. ದೂರದಲ್ಲಿದೆ) ಮತ್ತು ಫಿರೊಜ್ಪುರದಿಂದ 90 ಕಿ.ಮೀ. ದೂರದಲ್ಲಿರುವ ಫಜಿಲ್ಕದಲ್ಲಿರುವ ಹನುಮಾನ್ ಮಂದಿರಕ್ಕೆ ಪ್ರವಾಸಿಗಳು ಭೇಟಿ ನೀಡಬಹುದು.

ಫಿರೊಜ್ಪುರಕ್ಕೆ ತಲುಪುವುದು ಹೇಗೆ

[ಬದಲಾಯಿಸಿ]

ಫಿರೊಜ್ಪುರಕ್ಕೆ ತುಂಬಾ ಹತ್ತಿರದ ವಿಮಾನ ನಿಲ್ದಾಣ ಅಮೃತಸರ. ಇದು 119 ಕಿ.ಮೀ. ದೂರದಲ್ಲಿದೆ. ಪ್ರವಾಸಿಗಳು ಅಲ್ಲಿಂದ ಬಾಡಿಗೆ ಕಾರು ಅಥವಾ ಬಸ್ ಮೂಲಕ ಫಿರೊಜ್ಪುರಕ್ಕೆ ಕೇವಲ ಎರಡು ಗಂಟೆಯಲ್ಲಿ ತಲುಪಬಹುದು. ರೈಲು ಮತ್ತು ರಸ್ತೆ ಮಾರ್ಗವಾಗಿ ಭಾರತದ ವಿವಿಧ ನಗರಗಳಿಂದ ಸುಲಭವಾಗಿ ಪ್ರಯಾಣಿಸಬಹುದಾದ ಕಾರಣ ಫಿರೋಜ್ಪುರ ಪ್ರವಾಸೋದ್ಯಮಕ್ಕೆ ಬಲ ಬಂದಿದೆ.

ಫಿರೋಜ್ಪುರ ಭೇಟಿಗೆ ಸೂಕ್ತ ಸಮಯ

[ಬದಲಾಯಿಸಿ]

ಅಕ್ಟೋಬರ್ ಮತ್ತು ಡಿಸೆಂಬರ್ ಮಧ್ಯೆ ಫಿರೊಜ್ಪುರಕ್ಕೆ ಭೇಟಿ ನೀಡಲು ಸೂಕ್ತ ಸಮಯ.

ಉಲ್ಲೇಖಗಳು

[ಬದಲಾಯಿಸಿ]
  1. http://www.census2011.co.in/census/city/13-firozpur.html
  2. Sen, Sailendra (2013). A Textbook of Medieval Indian History. Primus Books. p. 98. ISBN 978-9-38060-734-4.
  3. "tribuneindia... Regional Vignettes". Tribuneindia.com. Retrieved May 2013. {{cite web}}: Check date values in: |accessdate= (help)