ಫ್ರ್ಯಾನ್ಝ್ ಕಾಫ್ಕ
Franz Kafka | |
---|---|
ಜನನ | Prague, Austria–Hungary | ೩ ಜುಲೈ ೧೮೮೩
ಮರಣ | 3 June 1924 Kierling near Vienna, Austria | (aged 40)
ವೃತ್ತಿ | Insurance officer, factory manager, novelist, short story writer |
ಭಾಷೆ | German, Czech |
ರಾಷ್ಟ್ರೀಯತೆ | Bohemian (Austria–Hungary) |
ಪ್ರಕಾರ/ಶೈಲಿ | Fiction, short story |
ಸಾಹಿತ್ಯ ಚಳುವಳಿ | Modernism, existentialism |
ಪ್ರಮುಖ ಕೆಲಸ(ಗಳು) | The Trial, The Castle, The Metamorphosis |
ಪ್ರಭಾವಗಳು | |
ಸಹಿ |
ಫ್ರ್ಯಾನ್ಝ್ ಕಾಫ್ಕ (German pronunciation: [ˈfʁants ˈkafka]; 3 ಜುಲೈ 1883 – 3 ಜೂನ್ 1924) 20ನೆಯ ಶತಮಾನ ಕಂಡ ಬಹಳ ಪ್ರಭಾವಿ ಕಲ್ಪಿತಕಥೆಗಳ ಬರಹಗಾರರಲ್ಲಿ ಒಬ್ಬರಾಗಿದ್ದರು; ಕಾದಂಬರಿಕಾರ ಮತ್ತು ಸಣ್ಣ ಕಥೆಗಳ ಬರಹಗಾರರಾಗಿದ್ದ ಇವರ ಕೃತಿಗಳು, 20ನೆಯ ಶತಮಾನದ ಸಾಹಿತ್ಯಕ್ಷೇತ್ರದ ಪ್ರಮುಖ ಸಾಧನೆಗಳಲ್ಲಿ ಒಂದು ಎಂಬುದನ್ನು ಇವರ ನಿಧನದ ನಂತರವೇ ಗಮನಿಸಲಾಯಿತು.
ಅವರು ಅಂದಿನ ಆಸ್ಟ್ರೋ-ಹಂಗೇರಿಯನ್ ರಾಜ್ಯಕ್ಕೆ ಸೇರಿದ್ದ, ಈಗಿನ ಝೆಕ್ ರಿಪಬ್ಲಿಕ್ ಗೆ ಸೇರಿದ, ಬೊಹೇಮಿಯಾದ ಪ್ರೇಗ್ ನಲ್ಲಿ ಜರ್ಮನ್ ಭಾಷೆ ಮಾತನಾಡುವ ಮಧ್ಯಮ ವರ್ಗದ ಯಹೂದಿ ದಂಪತಿಗಳಿಗೆ ಜನಿಸಿದರು. ಓಲ್ಡ್ ಟೌನ್ ಸ್ಕ್ವೇರ್ ನಲ್ಲಿರುವ ಪ್ರೇಗ್ ನ ಚರ್ಚ್ ಆಫ್ ಸೇಂಟ್ ನಿಕೋಲಸ್ ಪಕ್ಕದಲ್ಲಿರುವ ಕಾಫ್ಕ ಜನಿಸಿದ ಮನೆಯು ಈಗ ಈ ಬರಹಗಾರರ ಕೃತಿ ಮತ್ತು ಜೀವನದ ವಿಷಯಗಳ ಕುರಿತು ಪ್ರದರ್ಶನವನ್ನೂ ಸರ್ವಕಾಲದಲ್ಲೂ ಹೊಂದಿರುತ್ತದೆ.[೧]
ಕಾಫ್ಕರ ಕೃತಿಗಳು — ಕಾದಂಬರಿಗಳಾದ ದ ಟ್ರಯಲ್ (1925), ದ ಕ್ಯಾಸಲ್ ,ದ ಮೆಟಮಾರ್ಫಾಸಿಸ್ (1915) ಮತ್ತು ಇನ್ ದ ಪೀನಲ್ ಕಾಲೋನಿ (1914)ಗಳನ್ನು ಒಳಗೊಂಡಂತಹ ಸಣ್ಣಕಥೆಗಳು — ಈಗ ಆಧುನಿಕ ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಅತ್ಯಂತ ಸ್ವಂತಿಕೆಯುಳ್ಳ ಕೃತಿಗಳ ಪೈಕಿ ಇರುವಂತಹವೆಂದು ಸಮಗ್ರವಾಗಿ ಪರಿಗಣಿಸಲಾಗಿದೆ. ಅವರ ಹಲವಾರು ಕೃತಿಗಳು, ನಿಧನಕಾಲದಲ್ಲಿ ಅಪೂರ್ಣವಾಗಿದ್ದು, ಮರಣಾನಂತರ ಪ್ರಕಟಣೆಗೊಂಡವು.[೨]
ಈ ಲೇಖಕರ ಹೆಸರಿನಿಂದ "ಕಾಫ್ಕಾಯಿಸ್ಕ್" ಎಂಬ ಪದವು ಜನ್ಮತಾಳಿ ಇಂಗ್ಲಿಷ್ ಭಾಷೆಯಲ್ಲಿ ಅದನ್ನು ಬಳಸಲಾಗುತ್ತಿದೆ.
ಜೀವನ ಚರಿತ್ರೆ
[ಬದಲಾಯಿಸಿ]ಬೊಹೇಮಿಯಾದ ರಾಜಧಾನಿಯಾದ ಪ್ರೇಗ್ ನಲ್ಲಿ ಮಧ್ಯಮವರ್ಗದ ಯಹೂದಿ ಕುಟುಂಬದಲ್ಲಿ ಕಾಫ್ಕರ ಜನನವಾಯಿತು.
ಅವರ ತಂದೆ, ಹರ್ಮನ್ ಕಾಫ್ಕ (1852-1931)ರು "ದೈತ್ಯಾಕಾರದ, ಸ್ವಾರ್ಥ,ಸೊಕ್ಕಿನ ಉದ್ಯಮಿ"[೩] ಎಂದು ವರ್ಣಿಸಲಾಗಿದ್ದು, ಕಾಫ್ಕರೇ "ಶಕ್ತಿ, ಆರೋಗ್ಯ, ಆಹಾರಸೇವನೆ, ಗಡುಸು ಕಂಠ, ಮಾತುಕತೆ, ಸ್ವಯಂ-ತೃಪ್ತಿ, ಜಗವನ್ನು ಆಳುವ ಗುಣ, ತಾಳಿಕೆಯ ಸಾಮರ್ಥ್ಯ, ಸಮಯಪ್ರಜ್ಞೆ, ಮತ್ತು ಜನರ ಗುಣಗಳ ಬಗ್ಗೆ ಅರಿವುಗಳ ವಿಷಯದಲ್ಲಿ ಅವರು ನಿಜವಾದ ಕಾಫ್ಕ ಆಗಿದ್ದರು" ಎಂದು ಬಣ್ಣಿಸಿದ್ದಾರೆ. ಹರ್ಮನ್ ಜೇಕಬ್ ಕಾಫ್ಕ ಎಂಬ ಷಾಚೆಟ್ (ಸಂಪ್ರದಾಯಬದ್ಧ ಆಚರಣೆಗಳಲ್ಲಿ ಕಟುಕರಾಗಿದ್ದವರು) ರ ನಾಲ್ಕನೆಯ ಮಗನಾಗಿದ್ದು, ದಕ್ಷಿಣ ಬೊಹೇಮಿಯಾದ ಪಿಸೆಕ್ ನ ಸಮೀಪದ ಝೆಕ್ ಭಾಷೆ ಮಾತನಾಡುವ ಯಹೂದಿಗಳಿರುವ ಒಂದು ಹಳ್ಳಿಯಾದ ಒಸೆಕ್ ನಿಂದ ಪ್ರೇಗ್ ಗೆ ವಲಸೆ ಬಂದವರಾಗಿದ್ದರು. ಪ್ರವಾಸದ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡಿದನಂತರ, ಅವರು ಜ್ಯಾಕ್ಡಾ(ಝೆಕ್ ನಲ್ಲಿ ಕಾವ್ಕಾ ) ಲಾಂಛನವನ್ನು ತನ್ನ ವ್ಯವಹಾರಸಂಸ್ಥೆಯ ಕುರುಹಾಗಿ ಹೊಂದಿದ ಪುರುಷರ ಮತ್ತು ಮಹಿಳೆಯರ ಅಭಿರುಚಿಯನ್ನು ಪೂರೈಸುವ ವಸ್ತುಗಳು ಮತ್ತು ಸಾಧನಗಳ ಅಂಗಡಿಯನ್ನು ಸ್ವತಂತ್ರವಾಗಿ ತೆರೆದು, 15 ನೌಕರರಿಗೆ ಉದ್ಯೋಗವಿತ್ತಿದ್ದರು. ಕಾಫ್ಕರ ತಾಯಿ, ಜೂಲಿ (1856–1934)ಪೋಡೆಬ್ರಾಡಿಯ ಶ್ರೀಮಂತ ಮದ್ಯೋತ್ಪಾದಕರಾದ ಜೇಕಬ್ ಲೋಯಿಯವರ ಪುತ್ರಿಯಾಗಿದ್ದು, ತನ್ನ ಪತಿಗಿಂತಲೂ ಹೆಚ್ಚು ವಿದ್ಯಾವಂತೆಯಾಗಿದ್ದರು.[೪]
ಫ್ರ್ಯಾನ್ಝ್ ಆರು ಮಕ್ಕಳ ಪೈಕಿ ಜ್ಯೇಷ್ಠಪುತ್ರರಾಗಿದ್ದರು.[೫] ಅವರಿಗೆ ಇಬ್ಬರು ತಮ್ಮಂದಿರು: ಜಾರ್ಜ್ ಮತ್ತು ಹೀನ್ರಿಚ್; ಎರಡು ಹಸುಳೆಗಳೂ ಕ್ರಮವಾಗಿ ಹದಿನೈದು ತಿಂಗಳು ಹಾಗೂ ಆರು ತಿಂಗಳ ವಯಸ್ಸಿನಲ್ಲೇ, ಫ್ರ್ಯಾನ್ಝ್ ತನ್ನ ಏಳನೆಯ ವಯಸ್ಸಿನಲ್ಲಿದ್ದಾಗಲೇ, ಕೊನೆಯುಸಿರೆಳೆದವು.ಅವರಿಗೆ ಮೂರು ತಂಗಿಯರೂ ಇದ್ದರು - ಗ್ಯಾಬ್ರಿಯೆಲೆ ("ಎಲ್ಲಿ") (1889–1944), ವ್ಯಾಲೆರಿ ("ವಲ್ಲಿ") (1890–1944), ಮತ್ತು ಓಟ್ಟಿಲೆ ("ಓಟ್ಲಾ") (1892–1943). ವ್ಯಾಪಾರದ ದಿನಗಳಲ್ಲಿ ತಂದೆತಾಯಿಗಳಿಬ್ಬರೂ ಮನೆಯಿಂದ ಗೈರುಹಾಜರಿರುತ್ತಿದ್ದರು. ಅವರ ತಾಯಿಯು ತನ್ನ ಪತಿಯ ವ್ಯಾಪಾರದಲ್ಲಿ ಸಹಕಾರ ನೀಡುತ್ತಿದ್ದರು ಹಾಗೂ ದಿನಕ್ಕೆ 12 ಗಂಟೆಗಳ ಕಾಲ ದುಡಿಯುತ್ತಿದ್ದರು. ಮಕ್ಕಳನ್ನು ಹೆಚ್ಚಾಗಿ ಬೆಳೆಸಿದುದು ದಾದಿಗಳು ಹಾಗೂ ಸೇವಕರೇ. ಲೆಟರ್ ಟು ಹಿಸ್ ಫಾದರ್ ನಲ್ಲಿ ತನ್ನ ತಂದೆಯ ಅಧಿಕಾರಯುತ ಹಾಗೂ ಕಂಡದ್ದೆಲ್ಲಾ ತನ್ನದಾಗಬೇಕೆಂದು ತಗಾದೆ ಹೂಡುವ ಗುಣಗಳು ತನ್ನ ಮೇಲೆ ಅಗಾಧವಾದ ಪ್ರಭಾವ ಬೀರಿದವೆಂದು ದೂರುತ್ತಾ, ತನ್ನ ಅಪ್ಪನ ಅವಗುಣಗಳನ್ನು ವಿವರವಾಗಿ ಬರೆಯುವುದರ ಮೂಲಕ, ವರ ತಂದೆಯೊಡನೆ ಅವರ ಸಂಬಂಧವು ಬಹಳ ತೊಡಕಿನದಾಗಿತ್ತೆಂಬುದು ಸ್ಪಷ್ಟವಾಗುತ್ತದೆ.
ಎರಡನೆಯ ಮಹಾಯುದ್ಧದಲ್ಲಿ, ಫ್ರ್ಯಾನ್ಝ್ ರ ತಂಗಿಯರನ್ನು, ಅವರ ಕುಟುಂಬದೊಡನೆ ಲಾಡ್ಝ್ ಘೆಟ್ಟೋಗೆ ಕಳುಹಿಸಲಾಗಿ, ಅಲ್ಲಿನ ಕಾಂಸೆಂಟ್ರೇಷನ್ ಕ್ಯಾಂಪ್ (ಚಿತ್ರಹಿಂಸಾ ಶಿಬಿರ)ಗಳಲ್ಲಿ ಅವರೆಲ್ಲರೂ ಕೊಲ್ಲಲ್ಪಟ್ಟರು. ಓಟ್ಲಾರನ್ನು ಥೆರೆಸಿಯೆನ್ಸ್ಟಾಡ್ಟ್ ನ ಹಿಂಸಾಶಿಬಿರಕ್ಕೆ ಕಳುಹಿಸಲಾಯಿತು ಮತ್ತು 1943ರ ಅಕ್ಟೋಬರ್ ಏಳರಂದು ಆಷ್ವಿಟ್ಝ್ ನ ಸಾವಿನ ಶಿಬಿರಕ್ಕೆ ಕರೆದೊಯ್ಯಲಾಯಿತು; ಅಲ್ಲಿ ಓಟ್ಲಾ ಸೇರಿದಂತೆ 1267 ಮಕ್ಕಳು ಮತ್ತು 51 ಪೋಷಕರನ್ನು ಬರುತ್ತಿದ್ದಂತೆಯೇ ವಿಷಾನಿಲವನ್ನು ನೀಡಿ ಕೊಲ್ಲಲಾಯಿತು.[೬]
ಶಿಕ್ಷಣ
[ಬದಲಾಯಿಸಿ]ಕಾಫ್ಕರ ಮಾತೃಭಾಷೆ ಜರ್ಮನ್ ಆಗಿದ್ದರೂ, ಅವರು ಝೆಕ್ ಭಾಷೆಯಲ್ಲೂ ನಿರರ್ಗಳತೆ ಹೊಂದಿದ್ದರು.[೭] ನಂತರ ಕಾಫ್ಕ ಫ್ರೆಂಚ್ ಭಾಷೆ ಮತ್ತು ಸಂಸ್ಕೃತಿಯನ್ನೂ ಒಂದಷ್ಟು ಕಲಿತರು; ಫ್ಲಾಬರ್ಟ್ ಅವರ ನೆಚ್ಚಿನ ಬರಹಗಾರರಲ್ಲಿ ಒಬ್ಬರಾಗಿದ್ದರು. 1889ರಿಂದ 1893ರವರೆಗೆ ಅವರು ಈಗ ಮಾಸ್ನಾ ಬೀದಿ ಎಂದು ಕರೆಯಲ್ಪಡುವ, ಮ್ಯಾಸ್ನಿ ಟ್ರ್ಹ್/ಫ್ಲೀಷ್ ಮಾರ್ಕ್ಟ್ (ಮಾಂಸದ ಮಾರುಕಟ್ಟೆ)ಯ ಬಳಿಯ ಡ್ಯೂಟ್ಷೆ ಕ್ನಾಬೆನ್ಸ್ಕೂಲೆ , ಬಾಲಕೆ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. ಅವರ ಯಹೂದಿ ಶಿಕ್ಷಣವು ತಮ್ಮ 13ನೆಯ ವಯಸ್ಸಿನಲ್ಲಿ ಆಚರಿಸಿದ ಬಾರ್ ಮಿಟ್ಝ್ವಾ ಹಾಗೂ, ತಾವು ದ್ವೇಷಿಸುತ್ತಿದ್ದ, ತನ್ನ ತಂದೆಯೊಡನೆ ವರ್ಷಕ್ಕೆ ನಾಲ್ಕು ಬಾರಿ ಹೋಗಲೇಬೇಕಾದಂತಹ ಸಿನಗಾಗ್ (ಯಹೂದ್ಯರ ದೇಗುಲ)ಭೇಟಿಗೆ ಸೀಮಿತವಾಗಿತ್ತು.[೮] ಪ್ರಾಥಮಿಕ ಶಾಲೆಯ ನಂತರ, ಆಲ್ಟ್ ಸ್ಟ್ಯಾಡ್ಟರ್ ಡ್ಯೂಟ್ಷೆಸ್ ಜಿಮ್ನಾಷಿಯಂ ಎಂಬ ಶಾಸ್ತ್ರೀಯತೆಯತ್ತ ವಾಲುವಂತಹ, ಕಠಿಣವಾದ ರಾಜ್ಯ ಜಿಮ್ನಾಷಿಯಂ ನಲ್ಲಿನ,ಮಾಧ್ಯಮಿಕ ಶಿಕ್ಷಣ ಶಾಲೆಗೆ ಸೇರಿಸಲಾಯಿತು; ಈ ಶಾಲೆಯಲ್ಲಿ ಎಂಟು ಗ್ರೇಡ್ ಹಂತಗಳಿದ್ದು, ಬೋಧನೆಯು ಜರ್ಮನ್ ಭಾಷೆಯಲ್ಲಿ ಸಹ ನಡೆಯುತ್ತಿತ್ತು. ಈ ಶಾಲೆಯು ಕಿಂಸ್ಕಿ ಅರಮನೆಯೊಳಗಿನ ಓಲ್ಡ್ ಟೈಂ ಸ್ಕ್ವೇರ್ ನಲ್ಲಿದ್ದಿತು. ಅವರು ತಮ್ಮ ಮೆಚ್ಯೂರಿಟಾ ಪರೀಕ್ಷೆಯಲ್ಲಿ 1901ರಲ್ಲಿ ಉತ್ತೀರ್ಣರಾದರು.[೯]
ಪ್ರೇಗ್ ನ ಚಾರ್ಲ್ಸ್-ಫರ್ಡಿನಾಂಡ್ ಯೂನಿವರ್ಸಿಟಿಯನ್ನು ಸೇರಿದ ಕಾಫ್ಕ ಮೊದಲಿಗೆ ರಸಾಯನಶಾಸ್ತ್ರದ ಅಧ್ಯಯನದಲ್ಲಿ ತೊಡಗಿದರೂ, ಎರಡು ವಾರಗಳ ನಂತರ ಕಾನೂನು ವಿಭಾಗಕ್ಕೆ ವರ್ಗಾಯಿಸಿಕೊಂಡರು. ಇದರಿಂದ ಹಲವಾರು ವೃತ್ತಿಗಳ ಆಯ್ಕೆ ಮಾಡಲು ಅನುಕೂಲವಾಯಿತು ಹಾಗೂ ಅವರ ತಂದೆಯೂ ಇದರಿಂದ ಪ್ರಸನ್ನರಾದರು; ಈ ವ್ಯಾಸಂಗವು ದೀರ್ಘಕಾಲದ್ದಾದ್ದರಿಂದ ಕಾಫ್ಕ ಇದೇ ಸಮಯದಲ್ಲಿ ಜರ್ಮನ್ ಅಧ್ಯಯನ ಹಾಗೂ ಕಲೆಯ ಇತಿಹಾಸಗಳ ವಿಷಯದಲ್ಲೂ ತರಗತಿಗಳನ್ನು ಸೇರಲು ಅವಕಾಶವಾಯಿತು. ಯೂನಿವರ್ಸಿಟಿಯಲ್ಲಿ ಅವರು ಲೆಸೆ-ಉಂಡ್-ರೆಡೆಹಲ್ಲೆ ಡೆರ್ ಡ್ಯೂಟ್ಷೆನ್ ಸ್ಟೂಡೆಂಟೆನ್ ಎಂಬ ಸಾಹಿತ್ಯ ಸಂಬಂಧಿತ ಕಾರ್ಯಕರ್ಮಗಳನ್ನು, ಓದುವಿಕೆಗಳನ್ನು ಮತ್ತು ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ವಿದ್ಯಾರ್ಥಿ ಸಂಘವನ್ನು ಸೇರಿದರು. ಮೊದಲ ವರ್ಷದ ಅಧ್ಯಯನದ ಕಡೆಯ ವೇಳೆಗೆ ಅವರ ಜೀವನಪರ್ಯಂತ ಆಪ್ತಗೆಳೆಯರಾದ ಮ್ಯಾಕ್ಸ್ ಬ್ರಾಡ್ ಅನ್ನು ಹಾಗೂ ಪತ್ರಕರ್ತ ಫೆಲಿಕ್ಸ್ ವೆಲ್ಟ್ಷ್ ಎಂಬ ಕಾನೂನಿ ವಿದ್ಯಾರ್ಥಿಯನ್ನೂ ಭೇಟಿಯಾದರು. ಕಾಫ್ಕ ಡಾಕ್ಟರ್ ಆಫ್ ಲಾ ಡಿಗ್ರಿಯನ್ನು 1906ರ ಜೂನ್ 18ರಂದು ಪಡೆದರು ಹಾಗೂ ಒಂದು ವರ್ಷದ ಕಾಲ ನಾಗರಿಕ ಮತ್ತು ಅಪರಾಧ ನ್ಯಾಯಾಲಯಗಳಲ್ಲಿ ಕಾನೂನು ಗುಮಾಸ್ತರಾಗಿ ಕಡ್ಡಾಯವಾಗಿ ಎಸಗಬೇಕಾದ ಸೇವೆಯನ್ನು ಪೂರೈಸಿದರು.[೨]
ಉದ್ಯೋಗ
[ಬದಲಾಯಿಸಿ]ನವೆಂಬರ್ 1, 1907ರಂದು ಅಸ್ಸಿಕ್ಯುರಾಝಿಯೋನಿ ಜನರಲಿ ಎಂಬ ಬೃಹತ್ ಇಟಲಿಯ ವಿಮಾ ಕಂಪನಿಯು ಇವರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿತು; ಅಲ್ಲಿ ಅವರು ಸುಮಾರು ಒಂದು ವರ್ಷ ಕಾಲ ಸೇವೆ ಸಲ್ಲಿಸಿದರು. ಆ ದಿನಗಳಲ್ಲಿ ಅವರು ಬರೆದ ಕಾಗದ ಪತ್ರಗಳಲ್ಲಿ ಅವರು ತಮ್ಮ ಉದ್ಯೋಗದ ವೇಳೆ - ರಾತ್ರಿ ಎಂಟು ಗಂಟೆ(20:00)ಯಿಂದ ಬೆಳಗ್ಗೆ ಆರರವರೆಗೆ(06:00) - ಯ ಬಗ್ಗೆ ಅಸಂತುಷ್ಟರಾಗಿದ್ದರೆಂದು ಸೂಚಿಸುತ್ತವೆ; ತನ್ನ ಬರವಣಿಗೆಗೆ ಆ ವೇಳೆಯು ಬಹಳ ಅಡಚಣೆಯುಂಟುಮಾಡುತ್ತದೆ ಎಂಬುದು ಅವರ ಮನೋಗತವಾಗಿತ್ತು. ಜುಲೈ 15,1908ರಂದು ಅವರು ತಮ್ಮ ಕೆಲಸಕ್ಕೆ ರಾಜಿನಾಮೆ ಇತ್ತರು ಮತ್ತು ಎರಡು ವಾರಗಳ ನಂತರ ಹೆಚ್ಚು ಹೊಂದಾಣಿಕೆಯಾಗುವಂತಹ ಕೆಲಸವನ್ನು ಬೊಹೇಮಿಯಾ ಸಂಸ್ಥಾನದ ಸಂಸ್ಥೆಯಾದ ವರ್ಕರ್ಸ್ ಆಕ್ಸಿಡೆಂಟ್ ಇಂಷ್ಯೂರೆನ್ಸ್ ನಲ್ಲಿ ಪಡೆದರು. ಈ ಉದ್ಯೋಗದಲ್ಲಿ ಕೈಗಾರಿಕಾ ನೌಕರರಿಗೆ ವೈಯುಕ್ತಿಕವಾದ ಗಾಯಗಳನ್ನು ಪರೀಕ್ಷಿಸಿ ಅದಕ್ಕೆ ನೀಡಬೇಕಾದ ಪರಿಹಾರವನ್ನು ನಮೂದಿದಬೇಕಿತ್ತು. ಕಾಫ್ಕರು ನೌಕರರ ಅಪಘಾತ ವಿಮಾ ಸಂಸ್ಥೆಯ ಉದ್ಯೋಗಿಯಾಗಿದ್ದಾಗ ನಾಗರಿಕರು ಬಳಸುವ ಮೊದಲ ಗಟ್ಟಿಯಾದ ಟೊಪ್ಪಿಗೆಯನ್ನು ಕಂಡುಹಿಡಿದರೆಂದು ವ್ಯವಸ್ಥಾಪಕ ಪ್ರೊಫೆಸರ್ ಆದ ಪೀಟರ್ ಡ್ರಕ್ಕರ್ ಹೇಳುವರಾದರೂ, ಅದನ್ನು ಪುಷ್ಟೀಕರಿಸುವಂತಹ ಯಾವುದೇ ದಾಖಲೆಗಳು ಲಭ್ಯವಿಲ್ಲ.[೧೦] ಅವರ ತಂದೆಯು ಮಗನ ವಿಮಾ ಅಧಿಕಾರಿತ್ವವನ್ನು "ಬ್ರಾಟ್ ಬೆರಫ್", ಎಂದರೆ "ಆಹಾರ ನೌಕರಿ", ಅರ್ಥಾತ್ ಖರ್ಚನ್ನು ಸರಿದೂಗಿಸಲೆಂದೇ ಮಾಡಬಲ್ಲ ನೌಕರಿ ಎಂದು ಕರೆಯುತ್ತಿದ್ದರು. ಕಾಫ್ಕ ಆಗಾಗ್ಗೆ ಈ ಕೆಲಸದ ಬಗ್ಗೆ ತಮಗೆ ಒಲವಿಲ್ಲವೆಂದು ಹೇಳುತ್ತಿದ್ದರಾದರೂ, ಅವರು ಪರಿಶ್ರಮಿ ಹಾಗೂ ಸಮರ್ಥ ಉದ್ಯೋಗಿಯಾಗಿದ್ದರು. ಸಂಸ್ಥೆಯ ವಾರ್ಷಿಕ ವರದಿಯನ್ನು ಸಂಗ್ರಹಿಸಿ, ರಚಿಸುವ ಕಾರ್ಯವನ್ನೂ ಅವರಿಗೆ ಒಪ್ಪಿಸಲಾಯಿತು ಹಾಗೂ ಅದರ ಫಲಿತವು ಅವರಿಗೆ ಹೆಮ್ಮೆಯೆನಿಸಿತೆಂದು ವರದಿಯಾಗಿದ್ದು, ಆ ವರದಿಯ ಪ್ರತಿಗಳನ್ನು ತಮ್ಮ ಸ್ನೇಹಿತರು ಹಾಗೂ ಕುಟುಂಬಕ್ಕೂ ಕಳುಹಿಸಿದರಂತೆ. ಜೊತೆಜೊತೆಗೇ ಕಾಫ್ಕ ತಮ್ಮ ಸಾಹಿತ್ಯ ಕೃತಿ ರಚನೆಗೂ ಬದ್ಧರಾಗಿದ್ದರು. ಅವರ ಆಪ್ತ ಸ್ನೇಹಿತರಾದ ಮ್ಯಾಕ್ಸ್ ಬ್ರಾಡ್ ಮತ್ತು ಫೆಲಿಕ್ಸ್ ವೆಲ್ಟ್ಷ್ ರನ್ನೂ ಸೇರಿಸಿ, ಈ ಮೂವರ ತಂಡವನ್ನು "ಡೆರ್ ಎಂಗೆ ಪ್ರೇಗರ್ ಕ್ರೀಸ್", ನಿಕಟವಾದ ಪ್ರೇಗ್ ವರ್ತುಲ, ಎಂದು ಕರೆದರು; ಇದು ಪ್ರೇಗ್ ನ ಒಂದು ದೊಡ್ಡ ವರ್ತುಲದ ಒಂದು ಭಾಗವಾಗಿದ್ದು, ಆ ವರ್ತುಲವು (ಸಮಾನಮನಸ್ಕರ ತಂಡವು) "ಪ್ರೇಗ್ ನ ಫಲವತ್ತಾದ ಸಂಸ್ಕೃತಿಯ ನೆಲಕ್ಕೆ 1880ರ ದಶಕದಿಂದ ಮೊದಲನೆಯ ಮಹಾಯುದ್ಧದ ನಂತರದವರೆಗೂ ಕೊಡುಗೆಗಳನ್ನು ನೀಡಿದ ಜರ್ಮನ್-ಯಹೂದಿ ಬರಹಗಾರರ, ಕಟ್ಟುನಿಟ್ಟುರಹಿತ ಗುಂಪು" ಆಗಿತ್ತು.[೧೧]
1911ರಲ್ಲಿ ಇವರ ತಂಗಿ ಎಲ್ಲಿಯ ಪತಿಯಾದ ಕಾರ್ಲ್ ಹರ್ಮನ್ ಪ್ರೇಗರ್ ಆಸ್ಬೆಸ್ಟ್ ವರ್ಕ್ ಹರ್ಮನ್ ಎಂಡ್ ಕೋ ಎಂಬ ಆಸ್ಬೆಸ್ಟಾಸ್ ಕಾರ್ಖಾನೆಯ ಕಾರ್ಯಾಚರಣೆಗೆ ಕೈಜೋಡಿಸಲು ಕಾಫ್ಕರನ್ನು ಕೋರಿದರು. ಕಾಫ್ಕ ಮೊದಲಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿ, ತಮ್ಮ ಬಿಡುವಿನ ವೇಳೆಯ ಬಹುಭಾಗವನ್ನು ಈ ಕೆಲಸಕ್ಕೆ ತೊಡಗಿಸಿದರು. ಆ ಸಮಯದಲ್ಲಿ, ಮ್ಯಾಕ್ಸ್ ಬ್ರಾಡ್ ರಂತಹ, ಇವರ ಎಲ್ಲಾ ವಿಷಯಗಳನ್ನೂ ಅನುಮೋದಿಸುವಂತಹ, ಆಪ್ತರು ವಿರೋಧಿಸಿದಾಗಲೂ ಸಹ, ಕಾಫ್ಕ ಯಿಡ್ಡಿಷ್ ರಂಗಭೂಮಿಯ ಪ್ರದರ್ಶನ ಮತ್ತು ಮನರಂಜನೆಯತ್ತ ಆಸಕ್ತಿ ತೋರಿದರು. ಆ ಪ್ರದರ್ಶನಗಳು ತಮ್ಮ ಜುದಾಯಿಸಂನೊಡನೆ ಬೆಳೆದ ಸಂಬಂಧಗಳ ಬೀಜಾಂಕುರಕ್ಕೆ ಕಾರಣವಾದವು.[೧೨]
ನಂತರದ ವರ್ಷಗಳು
[ಬದಲಾಯಿಸಿ]1912ರಲ್ಲಿ, ಮ್ಯಾಕ್ಸ್ ಬ್ರಾಡ್ ರ ಮನೆಯಲ್ಲಿ, ಬರ್ಲಿನ್ ವಾಸಿಯಾದ ಮತ್ತು ಡಿಕ್ಟಾಫೋನ್ ಕಂಪನಿಯ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಫೆಲಿಸ್ ಬಾಯೆರ್ ರನ್ನು ಭೇಟಿಯಾದರು. ಮುಂದಿನ ಐದು ವರ್ಷಗಳಲ್ಲಿ ಅವರು ಹಲವಾರು ಬಾರಿ ಪರಸ್ಪರ ಪತ್ರ ಬರೆದರು, ಭೇಟಿಯಾದರು ಹಾಗೂ ಎರಡು ಬಾರಿ ವಿವಾಹವಾಗಲು ನಿಶ್ಚಿತಾರ್ಥವನ್ನೂ ಮಾಡಿಕೊಂಡರು. ಅವರ ಸಂಬಂಧವು ಕಡೆಗೆ 1917ರಲ್ಲಿ ಅಂತ್ಯವಾಯಿತು.
1917ರಲ್ಲಿ ಕಾಫ್ಕ ಕ್ಷಯರೋಗದಿಂದ ನರಳಲಾರಂಭಿಸಿದರು; ಈ ಪರಿಸ್ಥಿತಿಯಲ್ಲಿ ಆಗಾಗ್ಗೆ ಚೇತರಿಕೆಯುಂಟಾಗಬೇಕಿತ್ತು ಹಾಗೂ ಆ ಸಂದರ್ಭಗಳಲ್ಲಿ ಅವರನ್ನು ಅವರ ಕುಟುಂಬದ ಸದಸ್ಯರು, ವಿಶೇಷತಃ ತಂಗಿ ಓಟ್ಲಾ, ಬೆಂಬಲಿಸಿದರು. ತನ್ನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಎಲ್ಲಿ ಜನರು ತಿರಸ್ಕಾರಾರ್ಹವೆಂದು ಪರಿಗಣಿಸಿಬಿಡುವರೋ ಎಂಬ ಶಂಕೆ ಅವರಿಗಿದ್ದರೂ, ತಮ್ಮ ಬಾಲಕನಂತಹ ರೂಪ, ಸ್ವಚ್ಛತೆ ಮತ್ತು ಸೌಮ್ಯವಾದ ಸುಂದರ ರೂಪ, ಸರಳ ಹಾಗೂ ತಣ್ಣನೆಯ ಭಾವ, ಗೋಚರಿಸುವ ಬುದ್ಧಿಮತ್ತೆ ಮತ್ತು ನಿರಾರ್ದ್ರ ಹಾಸ್ಯಪ್ರಜ್ಞೆಯಿಂದ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದರು.[೧೩]
ಕಾಪ್ಕ ಝೆಕ್ ಪತ್ರಕರ್ತೆಯಾದ ಮಿಲೇನಾ ಜೆಸೆನ್ಸ್ಕಾರೊಡನೆ ಗಾಢವಾದ ಸಂಬಂಧವನ್ನು ಬೆಳೆಸಿಕೊಂಡರು. ಜುಲೈ 1923ರಲ್ಲಿ ಬಾಲ್ಟಿಕ್ ಸಮುದ್ರದ ಗ್ರಾಲ್-ಮ್ಯುರಿಟ್ಝ್ ನಲ್ಲಿ ಕಳೆದ ಸಮಗ್ರ ರಜೆಯ ದಿನಗಳಲ್ಲಿ, ಅವರು ಡೋರಾ ಡಯಾಮಂಟ್ ರೊಡನೆ ಭೇಟಿಯಾದರು ಮತ್ತು ಕೆಲವು ಕಾಲ, ತಮ್ಮ ಕುಟುಂಬದವರ ಪ್ರಭಾವದಿಂದು ಹೊರಗುಳಿದು ಬರವಣಿಗೆಯತ್ತ ಗಮನ ಹರಿಸುವ ಸಲುವಾಗಿ, ಬರ್ಲಿನ್ ನಲ್ಲಿ ಉಳಿದುಕೊಂಡರು. ಬರ್ಲಿನ್ ನಲ್ಲಿ, ತನ್ನ ಘೆಟ್ಟೋದ ನಿನ್ನೆಗಳನ್ನು ಮರೆಯುವಷ್ಟು ಸ್ವತಂತ್ರ ಮನೋಭಾವ ಹೊಂದಿದ್ದ, ಸಂಪ್ರದಾಯಸ್ಥ ಯಹೂದಿ ಕುಟುಂಬಕ್ಕೆ ಸೇರಿದ ಹಾಗೂ ಕಿಂಡರ್ ಗಾರ್ಟನ್ ನಲ್ಲಿ ಶಿಕ್ಷಕಿಯಾಗಿದ್ದ 25ರ ಹರೆಯದ ಡಯಾಮಂಟ್ ರೊಡನೆ ನೆಲೆಸಿದರು. ಡಯಾಮಂಟ್ ಅವರ ಪ್ರೇಯಸಿಯಾಗಿ, ಕಾಫ್ಕರು ಟಾಲ್ಮಡ್ ಬಗ್ಗೆ ಆಸಕ್ತಿಹೊಂದುವತ್ತ ಪ್ರಭಾವ ಬೀರಿದರು.[೧೪]
ನೈಸರ್ಗಿಕ ಚಿಕಿತ್ಸೆಗಳನ್ನು ನೀಡುದರೂ ಸಹ ಕಾಫ್ಕರ ಕ್ಷಯವು ಉಲ್ಬಣಿಸುತ್ತಲೇ ಸಾಗಿತು; ಅವರು ಪ್ರೇಗ್ ಗೆ ಮರಳಿದರು, ನಂತರ ಚಿಕಿತ್ಸೆಗಾಗಿ ವಿಯೆನ್ನಾದ ಬಳಿಯ ಕಿಯರ್ಲಿಂಗ್ ನಲ್ಲಿದ್ದ ಡಾಕ್ಟರ್ ಹಾಫ್ ಮನ್ ರ ಕ್ಷಯರೋಗಚಿಕಿತ್ಸಾಕೇಂದ್ರಕ್ಕೆ ಹೋದರು. ಅಲ್ಲಿ, ಪ್ರಾಯಶಃ ಹಸಿವಿನಿಂದಲೇ, 1924ರ ಜೂನ್ 3ರಂದು, ಅವರು ತಮ್ಮ ಕೊನೆಯುಸಿರೆಳೆದರು. ಕಾಫ್ಕರ ಗಂಟಲಿನ ಸ್ಥಿತಿಯು ಬಹಳ ಹದಗೆಟ್ಟಿದ್ದು, ನುಂಗುವುದು ಬಹಳ ತ್ರಾಸದಾಯಕ ಹಾಗೂ ನೋವು ಉಂಟುಮಾಡುತ್ತಿದ್ದುದರಿಂದಲೂ, ಆಗಿನ ಕಾಲದಲ್ಲಿ ಬಾಹ್ಯದಿಂದ ಪೌಷ್ಟಿಕಾಂಶ ನೀಡುವುದು ಇನ್ನೂ ಅಭಿವೃದ್ಧಿಯಾಗಿಲ್ಲದಿದ್ದುದರಿಂದಲೂ, ಅವರಿಗೆ ಆಹಾರ ನೀಡುವ ಯಾವುದೇ ಮಾರ್ಗಗಳು ಇರಲಿಲ್ಲ. ಅವರ ದೇಹವನ್ನು ಕಡೆಗೆ ಪ್ರೇಗ್ ಗೆ ತರಲಾಯಿತು ಹಾಗೂ 1924ರ ಜೂನ್ 11ರಂದು ಪ್ರೇಗ್-ಝಿಝ್ಕೋವ್ ನ ಹೊಸ ಯಹೂದಿಗಳ ಸ್ಮಶಾನದಲ್ಲಿ(ವಿಭಾಗ 21, ಸಾಲು 14, ನಿವೇಶನ ಸಂಖ್ಯೆ 33) ಅವರನ್ನು ಹೂಳಲಾಯಿತು.
ರಾಜಕೀಯ ನಿಲುವು
[ಬದಲಾಯಿಸಿ]ಕಾಫ್ಕ ಅನಿರ್ಬಂಧಿತ ಸಮಾಜವಾದಿ (ಅಥವಾ ಕ್ರಾಂತಿಕಾರಿ)ಯಾಗಿದ್ದರು,ಮ್ಲಾಡಿಚ್ ಕ್ಲಬ್ ಎಂಬ ಝೆಕ್ ಕ್ರಾಂತಿಕಾರಿ, ಸೇನಾಪ್ರವೃತ್ತಿವಿರೋಧಿ, ಪಾದ್ರಿ-ವಿರೋಧಿ ಸಂಘದ ಸಭೆಗಳಲ್ಲಿ ಭಾಗವಹಿಸುತ್ತಿದ್ದರು.[೧೫] ಕಾಫ್ಕರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಹಪಾಠಿಯಾದ ಹ್ಯೂಗೋ ಬರ್ಗ್ ಮನ್ ತಮ್ಮ ಕಡೆಯ ಶೈಕ್ಷಣಿಕ ವರ್ಷ(1900-1901)ದಲ್ಲಿ ಕಾಫ್ಕರಿಂದ ದೂರವಾದ ಕಾರಣವೆಂದರೆ "(ಕಾಫ್ಕರ) ಸಮಾಜವಾದ ಮತ್ತು ನನ್ನ ಝಿಯಾನಿಸಂ ಎರಡೂ ಬಹಳ ಗಟ್ಟಿಯಾಗಿದ್ದವು." "ಫ್ರ್ಯಾನ್ಝ್ ಸಮಾಜವಾದಿಯಾದರು, ನಾನು 1898ರಲ್ಲಿ ಝಿಯಾನಿಸ್ಟ್ ಆದೆ. ಝಿಯಾನಿಸಂ ಮತ್ತು ಸಮಾಜವಾದದ ಹೊಂದಾಣಿಕೆ ಆಗಿನ್ನೂ ಇರಲಿಲ್ಲ." ಕಾಫ್ಕ ಎಲ್ಲರಿಗೆ ಕಾಣುವಂತೆ ಸಮಾಜವಾದದ ಬೆಂಬಲವನ್ನು ಸಾರುವ ಕೆಂಪು ಗುಲಾಬಿಯ ಬಣ್ಣದ ಲಾಂಛನವನ್ನು ಧರಿಸಿ ಶಾಲೆಗೆ ಬರುತ್ತಿದ್ದರು ಎಂದು ಬರ್ಗ್ ಮನ್ ಹೇಳುತ್ತಾರೆ.[೧೬] ತಮ್ಮ ಡೈರಿಯಲ್ಲಿ ಒಮ್ಮೆ ಕಾಫ್ಕ ಪ್ರಭಾಗಿ ಕ್ರಾಂತಿಕಾರಿ ತತ್ತ್ವಜ್ಞಾನಿ ಪೀಟರ್ ಕ್ರೋಪೋಟ್ಕಿನ್ ರ ಉಲ್ಲೇಖ ಮಾಡಿದ್ದಾರೆ: "ಡೋಂಟ್ ಫರ್ಗೆಟ್ ಕ್ರೋಪೋಟ್ಕಿನ್!"[೧೭]
ಜುದಾಯಿಸಂ ಮತ್ತು ಝಿಯಾನಿಸಂ
[ಬದಲಾಯಿಸಿ]ಕಾಫ್ಕ ಸಾಂಪ್ರದಾಯಿಕ ಯಹೂದಿ ಧರ್ಮದ ಜೀವನವನ್ನೇನೂ ಅನುಸರಿಸುತ್ತಿರಲಿಲ್ಲ, ಆದರೆ ಯಹೂದಿಗಳ ಸಂಸ್ಕೃತಿ ಮತ್ತು ಆಧ್ಯಾತ್ಮದ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ಯಿಡ್ಡಿಷ್ ಸಾಹಿತ್ಯದ ಆಳವಾದ ಅರಿವು ಅವರಿಗಿತ್ತು ಮತ್ತು ಯಿಡ್ಡಿಷ್ ರಂಗದತ್ತ ಅವರಿಗೆ ಒಲವು ಇದ್ದಿತು.[೧೮]
ಡ್ಯಾನ್ ಮಿರಾನ್ ತಮ್ಮ ಪ್ರಬಂಧವಾದ ಸ್ಯಾಡ್ನೆಸ್ ಇನ್ ಪ್ಯಾಲೆಸ್ಟೈನ್? ನಲ್ಲಿ ಕಾಫ್ಕರ ಹಾಗೂ ಝಿಯಾನಿಸಂನ ಸಂಬಂಧವನ್ನು ಸಂಶೋಧಿಸಿದ್ದಾರೆ. "ಝಿಯಾನಿಸಂ ಮತ್ತು ಕಾಫ್ಕರಿಗೆ ಸಂಬಂಧವಿದ್ದು, ಅದು ಅವರ ಜೀವನ ಮತ್ತು ಸಾಹಿತ್ಯ ಕೃತಿಗಳ ಮೇಲೆ ಪ್ರಭಾವ ಬೀರಿತು ಎನ್ನುವವರು ಹಾಗೂ ಆ ಸಂಬಂಧವನ್ನು ನಿರಾಕರಿಸುವವರು ಅಥವಾ ಅದರ ಪ್ರಾಮುಖ್ಯತೆಯನ್ನು ಅಲ್ಲಗಳೆಯುವವರು, ಇಬ್ಬರೂ ತಪ್ಪೇ. ನಿಜವು ಈ ಎರಡೂ ಸರಳವಾದ ಧೃವಗಳ ನಡುವೆ ಎಲ್ಲೋ ನಿಲುಕದ ಸ್ಥಳದಲ್ಲಿ ಅಡಗಿದೆ" ಎಂಬುದು ಅವರ ಅಭಿಮತ.[೧೮]
ಜೇಮ್ಸ್ ಹಾಸ್ ರವರ ಪ್ರಕಾರ, ಕಾಫ್ಕರಿಗೆ ತಮ್ಮ ಯಹೂದಿತನದ ಬಗ್ಗೆ ಸಾಕಷ್ಟು ಅರಿವಿದ್ದರೂ, ತಮ್ಮ ಯಹೂದಿತನವನ್ನು ತಮ್ಮ ಕೃತಿಗಳಲ್ಲಿ ಅಳವಡಿಸಲಿಲ್ಲ. "ಅಲ್ಲಿ ಯಹೂದಿತನ ನಿಜಕ್ಕೂ ಶೂನ್ಯ" ಅಲ್ಲದೆ ಯಾವುದೇ ಯಹೂದಿ ಪಾತ್ರಗಳು ಅಥವಾ ಯಹೂದಿ ಚಿತ್ರಣಗಳು ಅವರ ಕೃತಿಗಳಲ್ಲಿಲ್ಲ, ಎನ್ನುತ್ತಾರೆ ಹಾಸ್.[೧೯] ಆದರೆ, ದ ವೆಸ್ಟರ್ನ್ ಕ್ಯಾನನ್ ನ ಲೇಖಕರಾದ ಹಾಗೂ ಸಾಹಿತ್ಯ ವಿಮರ್ಶಕರಾದ ಹೆರಾಲ್ಡ್ ಬ್ಲೂಮ್ ರ ಅಭಿಪ್ರಾಯ ಹೀಗಿದೆ:"ಅವರ ಅಲ್ಲಗಳೆಯುವಿಕೆಗಳು ಹಾಗೂ ಸುಂದರವಾದ ನೆಪಗಳ ಹೊರತಾಗಿಯೂ,(ಕಾಫ್ಕರ ಬರಹಗಳು) ನಿಜಕ್ಕೂ ಯಹೂದ್ಯ ಬರವಣಿಗೆಗಳೇ."[೧೨] ಲೋಥರ್ ಕಾಹ್ನ್ ಸಹ ತಮ್ಮ ಸ್ಪಷ್ಟವಾದ ನಿಲುವನ್ನು ಹೀಗೆ ಮಂಡಿಸಿದ್ದಾರೆ: "ಕಾಫ್ಕರ ಈಯೂವ್ರೆ ಯಲ್ಲಿನ ಯಹೂದಿತನದ ಅಸ್ತಿತ್ವವು ನಿಂಸದೇಹವಾದುದು."[೨೦] ಕಾಫ್ಕರ ಕೃತಿಗಳ ಮೊದಲ ಅನುವಾದಕರಲ್ಲಿ ಒಬ್ಬರಾದ ಪಾವೆಲ್ ಈಸ್ನರ್ ಸರ್ವಕಾಲಿಕ ಕೃತಿಯಾದ ದ ಟ್ರಯಲ್ ಅನ್ನು ಅರ್ಥೈಸುತ್ತಾ, "ಕಾಫ್ಕರ ದ ಟ್ರಯಲ್ ನಲ್ಲಿ ಪ್ರೇಗ್ ನಲ್ಲಿ ಯಹೂದಿಗಳ ಅಸ್ತಿತ್ವವೇ ಮೂರು ಆಯಾಮಗಳಲ್ಲಿ ಮೂರ್ತಿವೆತ್ತಂತೆ ಇದೆ: ಆ ಕಥೆಯಲ್ಲಿನ ಅಗ್ರೇಸರನಾದ ಜೋಸೆಫ್ ಕೆ.ಯು (ಲಾಕ್ಷಣಿಕವಾಗಿ) ಒಬ್ಬ ಜರ್ಮನ (ರಾಬೆನ್ ಸ್ಟೀನರ್), ಒಬ್ಬ ಝೆಕ್ (ಕುಲ್ಲಿಚ್) ಮತ್ತು ಒಬ್ಬ ಯಹೂದಿ (ಕಾಮಿನೆರ್)ಇಂದ ಬಂಧಿತನಾಗುತ್ತಾನೆ. ಅವನು "ತಪ್ಪಿಲ್ಲದ ತಪ್ಪು" ಪ್ರತಿಪಾದಿಸುವುದು ಆಧುನಿಕ ಜಗದ ಯಹೂದಿಯ ರಂಗನ್ನು ತೋರುತ್ತದೆ, ಅವನು ಯಹೂದಿಯೆಂಬ ಪುರಾವೆ ಎಲ್ಲೂ ಇಲ್ಲದಿದ್ದರೂ ಸಹ." [೨೧]
ಲಿವಿಯಾ ರಾಥ್ಕಿರ್ಚೆನ್ ಕಾಫ್ಕರನ್ನು "ಅವರ ಕಾಲದ ದ್ಯೋತಕ" ಎಂದು ಕರೆಯುತ್ತಾರೆ. ಅವರ ಕಾಲಫಟ್ಟದಲ್ಲಿ ಹಲವಾರು ಇತರ ಯಹೂದಿ ಬರಹಗಾರರರು (ಝೆಕ್, ಜರ್ಮನ್, ಮತ್ತು ರಾಷ್ಟ್ರೀಯ ಯಹೂದಿಗಳು)ಇದ್ದು, ಅವರುಗಳು ಜರ್ಮನ್, ಝೆಕ್, ಆಸ್ಟ್ರಿಯನ್ ಮತ್ತು ಯಹೂದಿಗಳ ಸಂಸ್ಕೃತಿಯ ಬಗ್ಗೆ ಸೂಕ್ಷ್ಮಮತಿಗಳಾಗಿದ್ದರು. ರಾಥ್ಕಿರ್ಚೆನ್ ಇಂತೆಂದರು:"ಈ ಪರಿಸ್ಥಿತಿಯು ಅವರ ಬರಹಗಳಿಗೆ ವಿಶಾಲವಾದ ಸಮದರ್ಶಿತ್ವದ ದೃಷ್ಟಿಯನ್ನು ನೀಡಿತು ಮತ್ತು ಅತೀಂದ್ರಿಯ ಆಧ್ಯಾತ್ಮಿಕ ಅನುಸಂಧಾನಕ್ಕೆ ಹತ್ತಿರದ ಗುಣಮಟ್ಟದ ಉತ್ಕರ್ಷವನ್ನು ನೀಡಿತು. ಫ್ರ್ಯಾನ್ಝ್ ಕಾಫ್ಕ ಅದಕ್ಕೊಂದು ಸುಪ್ರಸಿದ್ಧ ಉದಾಹರಣೆ."[೨೧]
ಸಾಹಿತ್ಯ ಜೀವನ
[ಬದಲಾಯಿಸಿ]ಕಾಫ್ಕ ಸಾಯುವ ನಂತರದವರೆಗೂ ಅವರ ಬರಹಗಳು ಗಮನ ಸೆಳೆದದ್ದು ವಿರಳ. ಅವರ ಜೀವಿತಾವಧಿಯಲ್ಲಿ, ಅವರು ಪ್ರಕಟಿಸಿದ್ದು ಕೇವಲ ಕೆಲವೇ ಸಣ್ಣ ಕಥೆಗಳನ್ನು; ದ ಮೆಟಮಾರ್ಫಾಸಿಸ್ ಅನ್ನು (ಸಣ್ಣ) ಕಾದಂಬರಿ ಎಂದು ಪರಿಗಣಿಸದಿದ್ದಲ್ಲಿ, ಅವರು ತಮ್ಮ ಯಾವುದೇ ಕಾದಂಬರಿಗಳನ್ನು ತಮ್ಮ ಜೀವಿತದಲ್ಲಿ ಬರೆದು ಮುಗಿಸಲಿಲ್ಲ. ಅವರ ಸಾವಿಗೆ ಮುನ್ನ, ಕಾಫ್ಕ ತಮ್ಮ ಸ್ನೇಹಿತ ಹಾಗೂ ಸಾಹಿತ್ಯ ನಿರ್ವಾಹಕ ಮ್ಯಾಕ್ಸ್ ಬ್ರಾಡ್ ಗೆ ಹೀಗೆ ಬರೆದರು: "ಆತ್ಮೀಯ ಮ್ಯಾಕ್ಸ್, ನನ್ನ ಕೊನೆಯ ಕೋರಿಕೆ: ನಾನು ಬಿಟ್ಟುಹೋಗುವಂತಹ ಎಲ್ಲವನ್ನೂ... ಡೈರಿಗಳು, ಹಸ್ತಾಕ್ಷರಗಳು, ಕಾಗದಗಳು (ನನ್ನ ಸ್ವಂತದ್ದು ಹಾಗೂ ಇತರರದು), ಚಿತ್ರಗಳು ಹಾಗೂ ಇತ್ಯಾದಿಗಳ ರೂಪದಲ್ಲಿ... ಅವುಗಳನ್ನು ಓದದೆಯೇ ಸುಡತಕ್ಕದ್ದು."[೨೨] ಬ್ರಾಡ್ ಕಾಫ್ಕರ ಬಯಕೆಯನ್ನು ಅವಗಣಿಸಿದರು, ಕಾಫ್ಕರು ತಾನು ಹೇಗೂ ಆ ಕೋರಿಕೆಗಳನ್ನು ಮನ್ನಿಸುವುದಿಲ್ಲವೆಂದು ತಿಳಿದೇ ಹಾಗೆ ತನಗೇ ಹೇಳಿದುದೆಂದು ಅವರು ಅಭಿಪ್ರಾಯಪಟ್ಟರು - ಬ್ರಾಡ್ ಹಾಗೆಂದು ಕಾಫ್ಕರಿಗೆ ಹೇಳಿಯೂ ಆಗಿತ್ತು. (ಅವರ ಪ್ರಿಯತಮೆ ಡೋರಾ ಡಯಾಮಂಟ್ ಸಹ ಅವರ ಕೋರಿಕೆಗಳನ್ನು ಅವಗಣನೆ ಮಾಡಿ, ಗುಪ್ತವಾಗಿ 20 ನೋಟ್ ಬುಕ್ ಗಳು ಮತ್ತು 35 ಕಾಗದಗಳನ್ನು ಎತ್ತಿಟ್ಟುಕೊಂಡಿದ್ದರು; 1933ರಲ್ಲಿ ಅವುಗಳನ್ನು ಗೆಸ್ಟಾಪೋದವರು ವಶಪಡಿಸಿಕೊಂಡರು. ಕಾಫ್ಕರ ಈ ಪತ್ತೆಯಾಗದ ಕಾಗದಗಳಿಗಾಗಿ ಈಗಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹುಡುಕಾಟ ಸಾಗಿದೆ. ವಾಸ್ತವವಾಗಿ ಬ್ರಾಡ್ ತಮ್ಮ ವಶದಲ್ಲಿರುವ ಕಾಫ್ಕರ ಬಹುತೇಕ ಕೃತಿಗಳ ಪ್ರಕಾಶನದ ಮೇಲ್ವಿಚಾರಣೆ ವಹಿಸಿದರು ಹಾಗೂ ಈ ಕೃತಿಗಳು ಬೇಗನೆ ಗಮನ ಸೆಳೆಯಲಾರಂಭಿಸಿ ಉತ್ತಮ ವಿಮರ್ಶೆಗಳನ್ನೂ ಗಿಟ್ಟಿಸಲಾರಂಭಿಸಿದವು.
ಝೆಕ್ ನಲ್ಲಿ ಮಿಲೇನಾ ಜೆಸೆನ್ಸ್ಕಾಗೆ ಬರೆದ ಹಲವು ಕಾಗದಗಳ ಹೊರತು, ಕಾಫ್ಕರ ಎಲ್ಲಾ ಪ್ರಕಟಿತ ಕೃತಿಗಳೂ ಜರ್ಮನ್ ಭಾಷೆಯಲ್ಲಿ ಬರೆದಂತಹವಾಗಿದ್ದವು.
ಬರವಣಿಗೆಯ ಶೈಲಿ
[ಬದಲಾಯಿಸಿ]ಕಾಫ್ಕ ಸಾಕಷ್ಟು ಬಾರಿ ಜರ್ಮನ್ ಭಾಷೆಗೆ ವಿಚಿತ್ರವೆನಿಸುವಂತಹ ಗುಣಲಕ್ಷಣಗಳನ್ನು ವ್ಯಾಪಕವಾಗಿ ಬಳಸುತ್ತಿದ್ದರು. ಬಹಳ ದೀರ್ಘವಾದ ವಾಕ್ಯಗಳನ್ನು, ಕೆಲವೊಮ್ಮೆ ಒಂದು ಇಡೀ ಪುಟದಷ್ಟು ದೊಡ್ಸ ವಾಕ್ಯಗಳನ್ನು ಬರೆಯುತ್ತಿದ್ದರು. ನಂತರ ಪೂರ್ಣವಿರಾಮ ಇಡುವ ಮುನ್ನ ಕಾಫ್ಕರ ವಾಕ್ಯಗಳು ಒಂದು ಅನಿರೀಕ್ಷಿತ ಪ್ರಭಾವವನ್ನು ಬೀರುತ್ತವೆ - ಅದೇ ತೀರ್ಮಾನವಾದ ಅರ್ಥ ಮತ್ತು ಕೇಂದ್ರಬಿಂದುವಾಗಿರುತ್ತದೆ. ಕೆಲವು ವಾಕ್ಯಗಳನ್ನು ಜರ್ಮನ್ ಭಾಷೆಯಲ್ಲಿ ರಚಿಸುತ್ತಿದ್ದುದರಿಂದಲೂ ಹಾಗೂ ಆ ಭಾಷೆಯಲ್ಲಿ ಕ್ರಿಯಾಪದವು ವಾಕ್ಯದ ಕೊನೆಯಲ್ಲಿ ಇಡಲಾಗುವುದರಿಂದಲೂ ಈ ರೀತಿಯ ಬರಹದ ಉದ್ಭವವಾಗುತ್ತಿತ್ತು. ಇಂತಹ ರಚನೆಗಳನ್ನು ಆಂಗ್ಲಕ್ಕೆ ನಕಲಿಸಲು ಸಾಧ್ಯವಿಲ್ಲ,ಆದ್ದರಿಂದ ಓದುಗನಿಗೆ ಮೂಲ ವಾಕ್ಯದ ಪರಿಣಾಮವೇ(ಅಥವಾ ಅದರ ಸಮನಾದುದು) ಉಂಟಾಗುವಂತೆ ಮಾಡುವುದು ಅನುವಾದಕನ ಸಾಮರ್ಥ್ಯವನ್ನು ಅವಲಂಬಿಸುತ್ತದೆ.[೨೩]
ಅನುವಾದಕರು ಎದುರಿಸುವ ಮತ್ತೊಂದು ಬಗೆಹರಿಸಲಾಗದ ತೊಂದರೆಯೆಂದರೆ ಲೇಖಕರು ಉಪಯೋಗಿಸುವ ನಿಗೂಢಾರ್ಥದ ಅಥವಾ ವಿವಿಧಾರ್ಥವುಳ್ಳ ಪದಗಳು. ದ ಮೆಟಮಾರ್ಪಾಸಿಸ್ ನ ಮೊದಲ ವಾಕ್ಯದಲ್ಲೇ ಅಂತಹ ಒಂದು ದೃಷ್ಟಾಂತವಿದೆ. ಇಂಗ್ಲಿಷ್ ಅನುವಾದಕರು ಉಂಗೆಝೀಫೆರ್ ಎಂಬ ಪದಕ್ಕೆ "ಕೀಟ" ಎಂಬ ಅರ್ಥವನ್ನು ನೀಡಲು ಬಯಸಿದ್ದಾರೆ; ಆದರೆ, ಮಧ್ಯಕಾಲೀನ ಜರ್ಮನ್ ನಲ್ಲಿ, ಉಂಗೆಝೀಫೆರ್ ನ ಅಕ್ಷರಶಃ "ಬಲಿಕೊಡಲು ಅನರ್ಹವಾದ ಸ್ವಚ್ಛವಿಲ್ಲದ ಪ್ರಾಣಿ"[೨೪] ಎಂಬ ಅರ್ಥವಿದೆ ಹಾಗೂ ಕೆಲವೊಮ್ಮೆ ರೂಢಿಯಲ್ಲಿನ ಅರ್ಥವು "ಹುಳು" – ಎಂಬ ಒಂದು ಸಾಮಾನ್ಯ ಪದವಾಗಿದ್ದು, ವಿಜ್ಞಾನದ ಛಾಯೆ ಹೊತ್ತ "ಕೀಟ"ವೆಂದಲ್ಲ. ಕಾಫ್ಕರಿಗೆ ಗ್ರೆಗರ್,ಎಂದರೆ ಆ ಕಥೆಯ ನಾಯಕ,ನನ್ನು ಯಾವುದೇ ವಸ್ತುವಿನ ಕುರುಹಿನಿಂದ ಕರೆಯುವ ಅಭಿಪ್ರಾಯವಿರಲಿಲ್ಲ, ಆದರೆ ಗ್ರೆಗರ್ ಮಾರ್ಪಾಟಿನಿಂದ ಅನುಭವಿಸಿದ ಜಿಗುಪ್ಸೆಯನ್ನು ಓದುಗನಿಗೆ ತಲುಪಿಸಬೇಕಿತ್ತಷ್ಟೆ. ಮತ್ತೊಂದು ಉದಾಹರಣೆಯೆಂದರೆ ಕಾಫ್ಕರ ಜರ್ಮನ್ ನಾಮಪದವಾದ, ದ ಜಡ್ಜ್ ಮೆಂಟ್ ನ ಕೊನೆಯ ವಾಕ್ಯದಲ್ಲಿ ಬಳಸಿರುವ ವೆರ್ಕೆಹ್ರ್ ಎಂಬ ಪದ. ವಾಸ್ತವವಾಗಿ, ವೆರ್ಕೆಹ್ರ್ ಎಂದರೆ ಇಂಗ್ಲಿಷ್ ನಲ್ಲಿ ಇಂಟರ್ಕೋರ್ಸ್ ಎಂದು ಅರ್ಥವಿದ್ದು, ಇಂಗ್ಲಿಷ್ ನಲ್ಲಿ ಆ ಪದಕ್ಕೆ ಲೈಂಗಿಕ ಹಾಗೂ ಅ-ಲೈಂಗಿಕ ಅರ್ಥೈಸುವಂತೆಯೇ ಇಲ್ಲೂ ಅರ್ಥೈಸಬಹುದಾಗಿದೆ; ಅಲ್ಲದೆ ಆ ಪದಕ್ಕೆ ಸಾರಿಗೆ ಮತ್ತು ವಾಹನದಟ್ಟಣೆ ಎಂಬ ಅರ್ಥಗಳೂ ಇವೆ. ಆ ವಾಕ್ಯವನ್ನು ಹೀಗೆ ಅನುವಾದಿಸಬಹುದು: "ಆ ಕ್ಷಣದಲ್ಲಿ ಕೊನೆಯೇ ಇಲ್ಲದಂತಹ ವಾಹನದಟ್ಟಣೆಯ ಹೊಳೆಯು ಸೇತುವೆಯ ಮೇಲೆ ಹಾದುಹೋಯಿತು."[೨೫] 'ವೆರ್ಕೆಹ್ರ್' ಪದದ ದ್ವಂದ್ವಾರ್ಥಕ್ಕೆ ಹೆಚ್ಚಿನ ತೂಕ ಬರಲು ಕಾರಣವೇನೆಂದರೆ ಕಾಫ್ಕರು, ಮ್ಯಾಕ್ಸ್ ಬ್ರಾಡ್ ರಿಗೆ, ಆ ಕೊನೆಯ ವಾಕ್ಯವನ್ನು ಬರೆದಾಗ ಅವರು "ಒಂದು ತೀವ್ರವಾದ ಸ್ಖಲನ"ದ ಬಗ್ಗೆ ಯೋಚಿಸುತ್ತಿದ್ದರೆಂದು ಹೇಳಿದುದು.[೨೬]
ವಿಮರ್ಶಾತ್ಮಕ ವ್ಯಾಖ್ಯಾನಗಳು
[ಬದಲಾಯಿಸಿ]ವಿಮರ್ಶಕರು ಕಾಫ್ಕರ ಕೃತಿಗಳನ್ನು ವಿವಿಧ ಸಾಹಿತ್ಯಿಕ ನೆಲೆಗಟ್ಟುಗಳ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿದ್ದಾರೆ; ಇವುಗಳಲ್ಲಿ ಮಾಡ್ರನಿಸಂ(ಆಧುನಿಕತೆ), ಮ್ಯಾಜಿಕ್ ಸರ್ರಿಯಲಿಸಂ (ಐಂದ್ರಜಾಲಿಕ ಕಾಲ್ಪನಿಕತೆ), ಇತ್ಯಾದಿ ನೆಲೆಗಟ್ಟುಗಳು ಪ್ರಸ್ತುತವಾಗಿವೆ.[೨೭] ಅಸಮಂಜಸತೆ ಮತ್ತು ಅಸಹಾಯಕತೆಗಳು ಅವರ ಕೃತಿಗಳಲ್ಲಿ ಗೋಚರಿಸುವಂತಿದ್ದು, ಅವುಗಳನ್ನು ಅಸ್ತಿತ್ವವಾದದ ಚಿಹ್ನೆಗಳೆಂದು ಪರಿಗಣಿಸಲಾಗುತ್ತದೆ. ಇನ್ ದ ಪೀನಲ್ ಕಾಲೋನಿ , ದ ಟ್ರಯಲ್ ಮತ್ತು ದ ಕ್ಯಾಸಲ್ [೨೭] ನಂತಹ ಕೃತಿಗಳಲ್ಲಿ ಅಧಿಕಾರಿವರ್ಗದ ಲೇವಡಿ ಇರುವುದರಿಂದ ಇವರ ಮೇಲೆ ಸಂಭವಿಸಿರಬಹುದಾದ ಮಾರ್ಕ್ಸಿಸ್ಟ್ ಪ್ರಭಾವವನ್ನು ಪತ್ತೆ ಹಚ್ಚಲು ಕೆಲವರು ಯತ್ನಿಸಿದ್ದಾರೆ; ಇನ್ನು ಕೆಲವರು ಕಾಫ್ಕರ ಅಧಿಕಾರಶಾಹಿ-ವಿರೋಧಿ ದೃಷ್ಟಿಕೋನವು ಕ್ರಾಂತಿಕಾರಿ ಮನೋಗುಣದ ಪ್ರಭಾವ ಎಂದರು. ಮತ್ತೂ ಕೆಲವರು ಅವರ ಕೃತಿಗಳನ್ನು ಜುದಾಯಿಸಂ ನ ಗಾಜಿನಿಂದ ಕಂಡರು(ಬೊರ್ಜೆಸ್ ಈ ವಿಷಯದಲ್ಲಿ ಕೆಲವು ಗ್ರಾಹ್ಯ ಟೀಕೆಗಳನ್ನು ಮಾಡಿದರು), ಫ್ರಾಯ್ಡಿಯಾನಿಸಂ[೨೭] ಮೂಲಕ (ಅವರ ಕೌಟುಂಬಿಕ ತೊಂದರೆಗಳ ಕಾರಣದಿಂದ) ಅಥವಾ ಆಧ್ಯಾತ್ಮಕವಾಗಿ ದೇವರನ್ನು ಹುಡುಕುವುದರ ರೂಪಕತೆಗಳಾಗಿ ವ್ಯಾಖ್ಯಾನಿಸಿದರು(ಥಾಮಸ್ ಮ್ಯಾನ್ನ್ ಈ ಸಿದ್ಧಾಂತದ ಪೂರ್ವವಾದಿಯಾಗಿದ್ದರು).[೨೮]
ಕಾಫ್ಕರ ಕೃತಿಗಳಲ್ಲಿ ವಿಮುಖತೆ ಮತ್ತು ಕಿರುಕುಳಗಳ ಪ್ರಸ್ತಾಪಗಳನ್ನು ಮತ್ತೆ ಮತ್ತೆ ಒತ್ತಿಹೇಳಲಾಗುತ್ತದೆ ಹಾಗೂ ಈ ಗುಣದ ಪ್ರಭಾವವು, ವಿಶೇಷತಃ ಮಾರ್ಥೆ ರಾಬರ್ಟ್ ರ ಕೃತಿಗಳ ಮೇಲುಂಟಾದುದು, ಗಿಲ್ಲೆಸ್ ಡೆಲ್ಯೂಝ್ ಮತ್ತು ಫೆಲಿಕ್ಸ್ ಗಾಟ್ಟಾರಿಯವರ ಪ್ರತಿ-ವಿಮರ್ಶೆಗೆ ಭಾಗಶಃ ಪ್ರೇರಕವಾಯಿತು; "ಕಾಫ್ಕ: ಟುವರ್ಡ್ ಎ ಮೈನರ್ ಲಿಟರೇಚರ್ " ನಲ್ಲಿ ಅವರು ಕಾಫ್ಕರ ಕೃತಿಗಳಲ್ಲಿ ಒಂಟಿ ವ್ಯಕ್ತಿಯೊನ್ನ ಆತಂಕದಿಂದ ಬರೆಯುತ್ತಾ ಸಾಗುವ ಏಕತಾನತೆಗಿಂತಲೂ ಹೆಚ್ಚಿನದಿತ್ತು ಎಂಬ ವಾದವನ್ನು ಮಂಡಿಸುತ್ತಾರೆ ಮತ್ತು ಅವರ ಕೃತಿಗಳು ಗೋಚರಿಸುವುದಕ್ಕಿಂತಲೂ ಹೆಚ್ಚು ಉದ್ದೇಶಪೂರ್ವಕ, ಬುಡಮೇಲಾಗಿಸುವಂತಹವು, ಹಾಗೂ ಹೆಚ್ಚಿನ "ಸಂತೋಷದಾಯಕ" ರೀತಿಯವಾಗಿದ್ದವು ಎನ್ನುತ್ತಾರೆ.
ಹೀಗೇ ಮುಂದುವರೆದು, ಕಾಫ್ಕರ ಕೃತಿಯನ್ನು ಯಾವುದೇ ಛಾಯೆಯಡಿಯಲ್ಲಿ ಓದದೆ, ಹಾಗೆಯೇ ಓದಿದಾಗ - ಅವರ ಕೃತಿಗಳಲ್ಲಿನ ಪಾತ್ರಗಳು ಕಷ್ಟಗಳನ್ನು ಹತ್ತಕ್ಕುವ ವ್ಯರ್ಥ ಯತ್ನಗಳನ್ನು ಕಾಫ್ಕರ ಬದುಕಿನ ಘಟನೆಗಳ ಆಧ್ಯಯನದ ಮೂಸೆಯಲ್ಲಿ ಕಾಣದಿದ್ದಾಗ - ಕಾಫ್ಕರ ಹಾಸ್ಯಪ್ರಜ್ಞೆಯ ಪರಿಚಯವಾಗುತ್ತದೆ. ಈ ನಿಟ್ಟಿನಲ್ಲಿ ಕಂಡಾಗ, ಕಾಫ್ಕರ ಬರಹಗಳು ಅವರ ಜೀವನದ ಕೋಟಲೆಗಳ ಲಿಖಿತ ಬಿಂಬಗಳಲ್ಲ, ಜನರು ಕಷ್ಟಗಳನ್ನು ಹೇಗೆ ಬರಮಾಡಿಕೊಳ್ಳುತ್ತಾರೆ ಎಂಬುದರ ಪ್ರತಿಬಿಂಬ ಎಂಬುದು ಸ್ಪಷ್ಟವಾಗುತ್ತದೆ.[೨೯]
ಅವರ ಜೀವನಚರಿತ್ರೆ ಬರೆಯುವವರು, ಕಾಫ್ಕರು ತಾವು ಬರೆಯುತ್ತಿದ್ದ ಅಧ್ಯಾಯಗಳನ್ನು ತಮ್ಮ ಆಪ್ತ ಸ್ನೇಹಿತರಿಗೆ ಓದಿ ಹೇಳುತ್ತಿದ್ದರೆಂದೂ, ಆ ಓದುವಿಕೆಗಳಲ್ಲಿ ಗದ್ಯದ ಹಾಸ್ಯದ ಮುಖಕ್ಕೇ ಸಾಮಾನ್ಯವಾಗಿ ಒತ್ತುನೀಡಲಾಗುತ್ತಿತ್ತೆಂದೂ ಹೇಳುತ್ತಾರೆ. ಮಿಲಾನ್ ಕುಂದೇರರು ಕಾಫ್ಕರ ಅವಶ್ಯಕವಾದ ಕಾಲ್ಪನಿಕ ಹಾಸ್ಯಪ್ರಜ್ಞೆಯ ಬಗ್ಗೆ ಮಾತನಾಡುತ್ತಾ ಕಾಫ್ಕ ಮುಂದಿನ ಹಲವಾರು ಕಲಾವಿದರಿಗೆ ಪ್ರಮುಖ ಪೂರ್ವಜರಾದರೆನ್ನುತ್ತಾರೆ. ಆ ಕಲಾವಿದರಲ್ಲಿ ಪ್ರಮುಖರೆಂದರೆ ಫೆಡೆರಿಕೋ ಫೆಲಿನಿ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್, ಕಾರ್ಲೋಸ್ ಫ್ಯೂಯೆಂಟೆಸ್ ಮತ್ತು ಸಲ್ಮಾನ್ ರಷ್ದಿ. ಗಾರ್ಸಿಯಾ ಮಾರ್ಕ್ವೆಝ್ ರೇ ಹೇಳುವಂತೆ, ಕಾಫ್ಕರ ದ ಮೆಟಪಾರ್ಪಾಸಿಸ್ ಓದಿದ ನಂತರವೇ ಅವರಿಗೆ "ವಿಭಿನ್ನ ರೀತಿಯಲ್ಲಿ ಬರೆಯುವುದು ಸಾಧ್ಯವಿದೆ" ಅರಿವಾದದ್ದು.
ಕಾಫ್ಕರ ಕಾಲ್ಪನಿಕ ಕಥೆಗಳಲ್ಲಿ ಕಾನೂನು
[ಬದಲಾಯಿಸಿ]ಕಾಫ್ಕರ ಕಾನೂನಿನ ಅರಿವಿನ ಹಿನ್ನೆಲೆ ಹಾಗೂ ಅವರ ಕಥೆಗಳಲ್ಲಿ ಕಾನೂನಿನ ಪಾತ್ರದ ಬಗ್ಗೆ ಅರಿಯಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ. ಕಾಫ್ಕರ ಜೀವನ ಮತ್ತು ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿದುದಕ್ಕೆ ಹೋಲಿಸಿದರೆ ಈ ಪ್ರಯತ್ನಗಳು ಬಹಳ ಕಡಿಮೆಯೇ ಆಗಿವೆ ಹಾಗೂ ಕಾನೂನು ಪಾಂಡಿತ್ಯಕ್ಕೆ ನಹಳ ಸಣ್ಣ ಪ್ರಮಾಣದ ಕೊಡುಗೆಯಾಗಿವೆ. ಕಾಫ್ಕರ ಕೃತಿಗಳ ಅಧ್ಯಯನದ ಮುಖ್ಯವಾಹಿನಿಯು ಸಾಮಾನ್ಯವಾಗಿ ಅವರ ಕಥೆಗಳು ಅಸಂಜಸತೆಗೆ ತಳುಕುಹಾಕಿದಂತಹವು, ಆಡಳಿತಶಾಹಿಯ ವಿಮರ್ಶೆ, ಅಥವಾ ಪ್ರಾಯಶ್ಚಿತ್ತ/ವಿಮೋಚನೆಗಾಗಿ ಶೋಧನೆ ಎನ್ನುತ್ತದೆ; ಅವರ ಕಥೆಗಳಲ್ಲಿನ "ಅರ್ಥದ ದಿಗಂತ"ದ ಮುಖ್ಯ ಅಂಶಗಳಾದ ಕಾನೂನು ಮತ್ತು ನ್ಯಾಯವನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ಸೋಲುತ್ತದೆ. ದ ಟ್ರಯಲ್ ನಲ್ಲಿನ ಕಾನೂನು ವಾದವಿವಾದಗಳ ವಿವರಣೆಗಳು - ಆಧ್ಯಾತ್ಮಿಕ,ಅಸಮಂಜಸ, ದಿಗ್ಭ್ರಮೆಕಾರಕ ಮತ್ತು "ಕಾಫ್ಕಾಯಿಸ್ಕ್" ಎಂದೆನ್ನಿಸಬಹುದಾದರೂ - ವಾಸ್ತವವಾಗಿ ಆ ಕಾಲಘಟ್ಟದ ಜರ್ಮನ್ ಮತ್ತು ಆಸ್ಟ್ರಿಯನ್ ಅಪರಾಧ ಪರಿಶೋಧನೆಯ ನಿಖರವಾದ ಹಾಗೂ ವಿಷಯಯುಕ್ತವಾದ ವಿವರಣೆಗಳಾಗಿದ್ದವು. ಕಾಫ್ಕರ ಕಥೆಗಳಲ್ಲಿನ ಕಾನೂನಿನ ಪ್ರಾಮುಖ್ಯತೆಯು ಕಾನೂನು ಪಂಡಿತರಿಂದಲೂ ಉಪೇಕ್ಷೆಗೆ ಒಳಗಾಗಿದೆ; ರಿಚರ್ಡ್ ಪಾಸ್ನರ್ ರೇ ಸೂಚಿಸಿದಂತೆ, ಕಾನೂನು ಅಭ್ಯಾಸ ಮಾಡಲು ಅಥವಾ ಅರ್ಥ ಮಾಡಿಕೊಳ್ಳಲು ಕಾಲ್ಪನಿಕ ಕಥೆಗಳ ರೂಪದಲ್ಲಿ ಬರೆದ ಯಾವುದೇ ಕಾನೂನಿನ ಉಲ್ಲೇಖಗಳನ್ನು ಬಹುತೇಕ ವಕೀಲರು ಕಾನೂನಿ ಚೌಕಟ್ಟಿಗೆ ಸಂಬಂಧಿಸಿದುದೆಂದು ಪರಿಗಣಿಸುವುದಿಲ್ಲ. ಕಾಫ್ಕರ ಲೇಖನಗಳಲ್ಲಿನ ವಿಮೋಚನೆ/ಪ್ರಾಯಶ್ಚಿತ್ತ ಹಾಗೂ ಅಸಮಂಜಸತೆಯ ಅಧ್ಯಯನದ ಬಗ್ಗೆ ಮುಖ್ಯವಾಹಿನಿಯ ಚಿಂತನೆಗಳು ಏನೇ ಇರಲಿ, ಹಾಗೂ ನ್ಯಾಯಾಧೀಶ ಪಾಸ್ನರ್ ರಂತಹ ಜ್ಯೂರಿಗಳು ಇವುಗಳು ಕಾನೂನು ಹಾಗೂ ನ್ಯಾಯ ವೃತ್ತಿ ಅಭ್ಯಾಸಕ್ಕೆ ಸಂಬಂಧಿಸಿದುದರ ಬಗ್ಗೆ ಏನೇ ನಿಲುವು ತಾಳಲಿ, ಕಾಫ್ಕ ಒಬ್ಬ ವಿಮಾ ವಕೀಲರಾಗಿದ್ದರೆಂಬುದು ವಾಸ್ತವಿಕ ಸಂಗತಿ; ಅವರು ಕಾನೂನು ವ್ಯಾಜ್ಯಗಳಲ್ಲಿ ತೊಡಗಿದ್ದರಷ್ಟೇ ಅಲ್ಲದೆ "ಆ ಕಾಲದ ಕಾನೂನು ಚರ್ಚೆಗಳ ಸ್ಪಷ್ಟ ಅರಿವು ಉಳ್ಳವರಾಗಿದ್ದರು"(ಝಿಯೋಲ್ಕೋವ್ಸ್ಕಿ, 2003, ಪುಟ 224).[೩೦]
ಕಾಫ್ಕರ ಕಚೇರಿಯ ಬರವಣಿಗೆಗಳನ್ನು[೩೧] ಅದರ ನಿರ್ಗಮನ ಬಿಂದುವಾಗಿ ಬಳಸುವ ಇತ್ತೀಚಿನ ಒಂದು ಅಧ್ಯಯನವನ್ನು ಕೈಗೊಂಡ ರೆಝಾ ಬನಕರ್Iತಮ್ಮ ವಾದವನ್ನು ಹೀಗೆ ಮಂಡಿಸುತ್ತಾರೆ:"ಕಾಫ್ಕರ ಕಾಲ್ಪನಿಕ ಕಥೆಗಳಲ್ಲಿ ಬರುವ ಕಾನೂನಿನ ಬಿಂಬಗಳು ಪರೀಕ್ಷಿಸಲು ಅರ್ಹವಾಗಿವೆ. ಇದಕ್ಕೆ ಕಾರಣ ಅವುಗಳ ದಿಗ್ಭ್ರಮೆಗೊಳಿಸುವ, ಅರ್ಥವಾಗದ, ವಿಚಿತ್ರವಾದ, ಕುಭಾಷೆಯುಳ್ಳ ಹಾಗೂ ದೂರೀಕರಿಸುವ ಗುಣಗಳುಳ್ಳ ಅಂಶಗಳಷ್ಟೇ ಅಲ್ಲದೆ, ಗಂಭೀರವಾದ ಅಧ್ಯಾತ್ಮಕ ಚಿಂತನೆ ಅಥವಾ ಅವು ಸೂಚಿಸುವ ಅಸ್ತಿತ್ವವಾದದ ಅರ್ಥಗಳು ಸಹ ಆಗಿವೆ.ಅಲ್ಲದೆ, ಉಭಯತಾಪಿ ಆಧುನಿಕ ಮಾನವ ಪರಿಸ್ಥಿತಿಯ ಒಂದು ಅಂಶವೇ ಆಗಿ ಕಾರ್ಯವೆಸಗುವಂತಹ ಒಂದು ನಿರ್ದಿಷ್ಟವಾದ ಕಾನೂನಿನ ಹಾಗೂ ನ್ಯಾಯದ ಚಿಂತನೆಗಾಗಿಯೂ ಸಹ ಈ ಅಧ್ಯಯನ ಅವಶ್ಯ[೩೨]. ಕಾಫ್ಕರ ಕಾನೂನಿನ ವಿಚಾರಗಳ ಈ ದೃಷ್ಟಿಕೋನವನ್ನು ಪರೀಕ್ಷಿಸಲು, ಹೀಮಟ್ ಗೆ ಅವರ ಇಡೀ ಬರಹಗಳ ಹಿನ್ನೆಲೆಯಲ್ಲಿ ಇದನ್ನು ತುಲನೆ ಮಾಡಬೇಕೆನ್ನಲಾಗಿದೆ; ಇದರಿಂದ ಹಲವಾರು ಸಕಾರಾತ್ಮಕ ಕಾನೂನು ಶಿಕ್ಷಣ ಶಾಲೆಗಳು ಬೋಧಿಸುವ ಕಾನೂನಿನ ಸಾಧನೋಪಾಯಗಳನ್ನು ಅರಿಯುವುದಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಇದು ನಮ್ಮನ್ನು ತಲುಪಿಸುತ್ತದೆ; ಇದರಿಂದ ನಮಗೆ ಕಾನೂನನ್ನು ಒಂದು ಅನುಭವವಾಗಿ ಅರಿಯಲು ಅನುಕೂಲವಾಗುತ್ತದೆ"(ನೋಡಿ ಬನಕರ್ 2010).
ಪ್ರಕಟಣೆಗಳು
[ಬದಲಾಯಿಸಿ]ಕಾಫ್ಕರ ಬಹುತೇಕ ಕೃತಿಗಳು ಅಪೂರ್ಣವಾಗಿದ್ದವು ಅಥವಾ ಮರಣಾನಂತರ ಪ್ರಕಟಣೆಗಾಗಿ ಮ್ಯಾಕ್ಸ್ ಬ್ರಾಡ್ ರಿಂದ ಅಣಿಗೊಳಿಸಲ್ಪಟ್ಟವಾಗಿದ್ದವು. ಕಾದಂಬರಿಗಳಾದ ದ ಕ್ಯಾಸಲ್ (ಮಧ್ಯ-ವಾಕ್ಯದಲ್ಲಿ ನಿಲ್ಲಿಸಲ್ಪಟ್ಟಿತ್ತು ಹಾಗೂ ಅದರ ವಸ್ತುವಿಷಯದ ಬಗ್ಗೆ ಅಸ್ಪಷ್ಟತೆಯಿದ್ದಿತು), ದ ಟ್ರಯಲ್ (ಅಧ್ಯಾಯಗಳ ಸಂಖ್ಯೆಗಳು ನಮೂದಿತವಾಗಿರಲಿಲ್ಲ ಮತ್ತು ಕೆಲವು ಅಧ್ಯಾಯಗಳು ಅಪೂರ್ಣವಾಗಿದ್ದವು) ಮತ್ತು ಅಮೆರಿಕಾ (ಕಾಫ್ಕರು ಇದಕ್ಕೆ ಮೊದಲು ಇಟ್ಟ ಹೆಸರು ದ ಮ್ಯಾನ್ ಹೂ ದಿಸಪಿಯರ್ಡ್ ) ಎಂದು, ಎಲ್ಲವನ್ನೂ ಬ್ರಾಡ್ ಪ್ರಕಟಣೆಗಾಗಿ ಅಣಿಗೊಳಿಸಿದರು. ಹಸ್ತಾಕ್ಷರದ ಬಗ್ಗೆ ಕೆಲವು ಸ್ವಾತಂತ್ರ್ಯಗಳನ್ನು ಬ್ರಾಡ್ ತೆಗೆದುಕೊಂಡಂತರೆನಿಸುತ್ತದೆ (ಅಧ್ಯಾಯಗಳ ವರ್ಗಾವಣೆ, ಜರ್ಮನ್ ಭಾಷೆಯ ಬದಲಾವಣೆ ಮತ್ತು ವಾಕ್ಯದಲ್ಲಿನ ಚಿಹ್ನೆಗಳಾದ ಅರ್ಧ ವಿರಾಮ, ಪೂರ್ಣವಿರಾಮ, ಇತ್ಯಾದಿಗಳನ್ನು ಸರಿಗೊಳಿಸುವುದು) ಹಾಗೂ ತತ್ಕಾರಣವಾಗಿ ಮೂಲ ಜರ್ಮನ್ ಪಠ್ಯವು ಪ್ರಕಟಣೆಗೆ ಮುನ್ನ ತಿದ್ದಲ್ಪಟ್ಟಿತು. ಬ್ರಾಡ್ ರ ಆವೃತ್ತಿಗಳನ್ನು ಸಾಮಾನ್ಯವಾಗಿ ಡೆಫೆನೆಟಿವ್ ಆವೃತ್ತಿಗಳು ಎಂದು ಕರೆಯಲಾಗುತ್ತದೆ.
ದ ಕ್ಯಾಸಲ್ [೩೩] ನ ಪ್ರಕಾಶಕರ ನುಡಿಯಂತೆ[೩೪], ಮಾಲ್ಕಮ್ ಪಾಸ್ಲೇ ಕಾಫ್ಕರ ಬಹುತೇಕ ಮೂಲ ಹಸ್ತಾಕ್ಷರ ಕೃತಿಗಳನ್ನು 1961ರಲ್ಲಿ ಆಕ್ಸ್ ಫರ್ಡ್ ಬೋಡ್ಲೀಯನ್ ಗ್ರಂಥಾಲಯಕ್ಕೆ ಒಯ್ಯಲು ಸಾಧ್ಯವಾಯಿತು. ದ ಟ್ರಯಲ್ ನ ಪಠ್ಯವನ್ನು ಹರಾಜಿನ ಮೂಲಕ ತೆಗೆದುಕೊಳ್ಳಲಾಯಿತು ಹಾಗೂ ಜರ್ಮನಿಯ ಮಾರ್ಬಾಚ್ ಜರ್ಮನ್ ಲಿಟರರಿ ಆರ್ಕೈವ್ಸ್[೩೫] ನಲ್ಲಿ ಸಂಗ್ರಹಿಸಿಡಲಾಗಿದೆ.[೩೬]
ಕ್ರಮೇಣ, ಪಾಲ್ಸೇಯ ನೇತೃತ್ವ ತಂಡವೊಂದು (ಇದರಲ್ಲಿ ಗೆರ್ಹಾರ್ಡ್ ನ್ಯೂಮನ್, ಜಾಸ್ಟ್ ಸ್ಕಿಲ್ಲೆಮೀಯ್ಟ್, ಮತ್ತು ಜುರ್ಗೆನ್ ಬಾರ್ನ್ ಇದ್ದರು) ಕಾಫ್ಕರ ಜರ್ಮನ್ ಕಾದಂಬರಿಗಳ ಪುನಾರಚನೆಯ ಕಾರ್ಯವನ್ನು ಕೈಗೊಂಡಿತು ಮತ್ತು ಎಸ್. ಫಿಶರ್ ವೆರ್ಲಾಗ್ ಅದನ್ನು ಮರುಪ್ರಕಟಣೆ ಮಾಡಿದರು.[೩೭] ಪಾಸ್ಕೇ 1982ರಲ್ಲಿ ಪ್ರಕಟಣೆಗೊಂಡ ದಾಸ್ ಸ್ಕ್ಲಾಬ್ (ದ ಕ್ಯಾಸಲ್) , ಮತ್ತು 1990ರಲ್ಲಿ ಪ್ರಕಟಣೆಗೊಂಡ ಡೆರ್ ಪ್ರೋಝೆಸ್ (ದ ಟ್ರಯಲ್) ಗಳ ಸಂಪಾದಕರಾಗಿದ್ದರು. ಜಾಸ್ಟ್ ಸ್ಕಿಲ್ಲೆಮೀಯ್ಟ್ 1983ರಲ್ಲಿ ಪ್ರಕಟಿತವಾದ ಡೆರ್ ವರ್ಸಕೋಲ್ಲಿನಿ (ಅಮೆರಿಕಾ )ದ ಸಂಪಾದಕರಾಗಿದ್ದರು. ಇವೆಲ್ಲವನ್ನೂ "ಕ್ರಿಟಿಕಲ್ ಆವೃತ್ತಿಗಳು" ಅಥವಾ "ಫಿಷರ್ ಆವೃತ್ತಿಗಳು" ಎಂದು ಕರೆಯಲಾಗುತ್ತದೆ. ಇದರ ಜರ್ಮನ್ ವಿಮರ್ಶಾತ್ಮಕ ಪಠ್ಯ ಮತ್ತು ಕಾಫ್ಕರ ಇತರ ಕೃತಿಗಳು ದ ಕಾಫ್ಕ ಪ್ರಾಜೆಕ್ಟ್ ಎಂಬ ಆನ್ ಲೈನ್ ಜಾಲದಲ್ಲಿ ದೊರಕುತ್ತವೆ.[೩೮] ಈ ತಾಣವು ತನ್ನ ಭಂಡಾರವನ್ನು ಅವಿರತವಾಗಿ ಬೆಳೆಸಿಕೊಳ್ಳುತ್ತಿದೆ.
ಸ್ಯಾನ್ ಡೀಗೋ ರಾಜ್ಯ ವಿಶ್ವವಿದ್ಯಾಲಯದಲ್ಲಿ ಕೇಂದ್ರಿತವಾದ ಮತ್ತೊಂದು ಕಾಫ್ಕ ಯೋಜನೆಯು 1998ರಲ್ಲಿ ಆರಂಭವಾಗಿ, ಕಾಫ್ಕರ ಕಡೆಯ ಬರಹಗಳ ಅಧಿಕೃತ ಅಂತರರಾಷ್ಟ್ರೀಯ ಶೋಧವನ್ನು ಕೈಗೊಂಡಿದೆ. ಕಾಫ್ಕರ ಕಡೆಯ ಸಂಗಾತಿಯಾದ ಡೋರಾ ಡಯಾಮಂಟ್(ನಂತರ, ಡೈಮಾಂಟ್-ಲಾಸ್ಕ್) ರ ಬಳಿಯಿದ್ದ 20 ನೋಟ್ ಬುಕ್ ಗಳು ಮತ್ತು 35 ಪತ್ರಗಳ ಈ ಕಳೆದುಹೋದ ಅಮೂಲ್ಯ ಸಾಹಿತ್ಯ ಭಂಡಾರವನ್ನು ಗೆಸ್ಟಾಪೋದವರು ಆಕೆಯಿಂದ 1933ರಲ್ಲಿ ಬರ್ಲಿನ್ ನಲ್ಲಿ ವಶಪಡಿಸಿಕೊಂಡಿದ್ದರು. ಕಾಫ್ಕ ಯೋಜನೆಯ ನಾಲ್ಕು-ತಿಂಗಳ, ಬರ್ಲಿನ್ ನ ಹಳೆಯ ಸರ್ಕಾರಿ ಕಡತಗಳ ಹುಡುಕಾಟವು 1998ರಲ್ಲಿ ವಶಪಡಿಸಿಕೊಳ್ಳಲು ನೀಡಿದ ಆಜ್ಞಾಪತ್ರ ಮತ್ತು ಇತರ ಪ್ರಮುಖ ದಸ್ತಾವೇಜುಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯಕವಾಯಿತು. 2003ರಲ್ಲಿ, ಕಾಫ್ಕ 1923ರಲ್ಲಿ ಬರೆದ ಮೂರು ಅಸಲಿ ಓಲೆಗಳನ್ನು ಪತ್ತೆ ಹಚ್ಚುವಲ್ಲಿ ಕಾಫ್ಕ ಯೋಜನೆ ಯಶಸ್ವಿಯಾಯಿತು. 1950ರ ದಶಕದ ಮಧ್ಯಭಾಗದಲ್ಲಿ ಮ್ಯಾಕ್ಸ್ ಬ್ರಾಡ್ ಮತ್ತು ಕ್ಲಾಸ್ ವ್ಯಾಗನ್ ಬ್ಯಾಚ್ ನಡೆಸಿದ ಶೋಧನೆಯನ್ನೇ ಅನುಸರಿಸಿ, SDSUವಿನ ಕಾಫ್ಕ ಯೋಜನೆಯು ಒಂದು ಸಲಹಾ ಸಮಿತಿಯನ್ನು ಹೊಂದಿದ್ದು, ಇದರಲ್ಲಿ ಅಂತರರಾಷ್ಟ್ರೀಯ ಮಟ್ಟದ ಪಂಡಿತರು ಮತ್ತು ಸಂಶೋದಕರು ಇದ್ದಾರೆ; ಅಲ್ಲದೆ ಈ ಸಾಹಿತ್ಯಿಕ ರಹಸ್ಯವನ್ನು ಬಗೆಹರಿಸಲು ಸಹಾಯ ಮಾಡಬಯಸುವ ಸ್ವಯಂಸೇವಕರಿಗೂ ಆಹ್ವಾನವಿದೆ.[೩೯]
2008ರಲ್ಲಿ, ಶೈಕ್ಷಣಿಕ ಮತ್ತು ಕಾಫ್ಕ ತಜ್ಞರಾದ ಜೇಮ್ಸ್ ಹಾಸ್ ಕಾಫ್ಕ ಕ್ವಾಸಿ-ಸಂತನಂತಹ "ಹೊರಗಿನವನು" ಎಂದು ಬಿಂಬಿಸಿರುವ ಅಭಿಪ್ರಾಯವನ್ನು ಕಾಪಾಡಲು ಪಂಡಿತರು ಕಾಫ್ಕ ಸಮ್ಮತಿಸುತ್ತಿದ್ದಂತಹ ಅಶ್ಲೀಲತೆಗಳ ವಿವರಗಳನ್ನು(ಕಾಫ್ಕರ ಮೊದಲ ಪ್ರಕಾಶಕರೇ ಇದನ್ನೂ ಪ್ರಕಟಿಸಿದ್ದು) ಐಚ್ಛಿಕವಾಗಿ ಮುಚ್ಚಿಡುತ್ತಿದ್ದಾರೆ ಎಂದು ಅರೋಪಿಸಿದರು.[೧೯]
ಭಾಷಾಂತರಗಳು
[ಬದಲಾಯಿಸಿ]ಜರ್ಮನ್ ಸಂಪಾದಿತ ಕೃತಿಗಳನ್ನು ಆಧಾರವಾಗಿರಿಸಿಕೊಂಡು ಅನುವಾದ ಕೈಗೊಳ್ಳಲು ಎರಡು ಪ್ರಧಾನ ಮೂಲಗಳಿವೆ. ಮೊದಮೊದಲ ಇಂಗ್ಲಿಷ್ ಅನುವಾದಗಳನ್ನು ಎಡ್ವಿನ್ ಮತ್ತು ವಿಲ್ಲಾ ಮುಯಿರ್ ಮಾಡಿದರು ಮತ್ತು ಇವುಗಳನ್ನು ಆಲ್ಫ್ರೆಡ್ ಎ. ನಾಪ್ಫ್ ಪ್ರಕಟಿಸಿದರು. ಈ ಆವೃತ್ತಿಗಳು ವ್ಯಾಪಕವಾಗಿ ಪ್ರಕಾಶನಗೊಂಡವು ಮತ್ತು 1940ರ ಅಂತ್ಯದಲ್ಲಿ ಕಾಫ್ಕರ ಜನಪ್ರಿಯತೆಯು ಪ್ರವಾಹದಂತೆ ಮುನ್ನುಗ್ಗಿತು. ನಂತರದ ಆವೃತ್ತಿಗಳಲ್ಲಿ (ವಿಶೇಷತಃ 1954ರ ಆವೃತ್ತಿಗಳು) ಐಥ್ನೆ ವಿಲ್ಕಿನ್ಸ್ ಮತ್ತು ಅರ್ನ್ಸ್ಟ್ ಕೈಸರ್ ಅವರು ಬರೆದಿದ್ದು, ತೆಗೆದುಹಾಕಲಾಗಿದ್ದ ಪಠ್ಯಗಳೂ ಸೇರಿಸಲ್ಪಟ್ಟವು. ಇವುಗಳನ್ನು "ಡಿಫೆನೆಟಿವ್ ಎಡಿಷನ್ಸ್" ಎಂದು ಕರೆಯಲಾಯಿತು. ಅವರು ದ ಟ್ರಯಲ್, ಡೆಫೆನೆಟಿವ್ ಮತ್ತು ದ ಕ್ಯಾಸಲ್, ಡೆಫೆನೆಟಿವ್ ಗಳನ್ನು ತರ್ಜುಮೆ ಇತರ ಅನುವಾದಗಳೊಡನೆ ಅನುವಾದ ಮಾಡಿದರು. ಡೆಫೆನೆಟಿವ್ ಆವೃತ್ತಿಗಳು ಹಲವಾರು ಪಕ್ಷಪಾತಗಳನ್ನು ಹೊಂದಿವೆ ಎಂದು ಹೇಳಲಾಗಿದ್ದು, ಅರ್ಥೈಸುವಿಕೆಯಲ್ಲೂ ಹಳತು ಎಂದು ಒಪ್ಪಿಕೊಳ್ಳಲಾಗಿದೆ.
ಪಾಸ್ಲೇ ಮತ್ತು ಸ್ಕಿಲ್ಲೆಮಯೀಯ್ಟ್ ರವರು ಜರ್ಮನ್ ಪಠ್ಯದ ಮರುಸಂಕಲಿಕೆಯನ್ನು ಪೂರ್ಣಗೊಳಿಸಿದ ನಂತರ, ನೂತನ ಅನುವಾದಗಳು ಸಂಪೂರ್ಣಗೊಂಡು ಪ್ರಕಟಣೆಗೋಂಡವು – ಮಾರ್ಕ್ ಹರ್ಮನ್ ರಿಂದದ ಕ್ಯಾಸಲ್, ಕ್ರಿಟಿಕಲ್ (ಸ್ಖೋಕ್ಕೆನ್ ಬುಕ್ಸ್, 1998), ಬ್ರಿಯೋನ್ ಮಿಚೆಲ್ ರಿಂದದ ಟ್ರಯಲ್, ಕ್ರಿಟಿಕಲ್ (ಸ್ಖೋಕ್ಕೆನ್ ಬುಕ್ಸ್, 1998) ಮತ್ತು ಮೈಕೆಲ್ ಹಾಫ್ ಮನ್ ರಿಂದ ಅಮೆರಿಕಾ: ದ ಮ್ಯಾನ್ ಹೂ ಡಿಸಪಿಯರ್ಡ್ (ನ್ಯೂ ಡೈರೆಕ್ಷನ್ಸ್ ಪಬ್ಲಿಷಿಂಗ್, 2004). ಈ ಆವೃತ್ತಿಗಳನ್ನು ಮರುಸಂಗ್ರಹಿಸಿದ ಪಠ್ಯಗಳ ಆಧಾರಿತವಾದುದು ಎಂದು ಆಗಾಗ್ಗೆ ಗುರುತಿಸಲಾಗುತ್ತದೆ.
ಪ್ರಕಟಿತ ಕೃತಿಗಳು
[ಬದಲಾಯಿಸಿ]- ಸಣ್ಣ ಕಥೆಗಳು
- ಡಿಸ್ಕ್ರಿಪ್ಷನ್ ಆಫ್ ಎ ಸ್ಟ್ರಗಲ್ (ಬೆಷ್ರೀಬಂಗ್ ಯ್ಯೀನೆಸ್ ಕಾಂಪ್ಫೆಸ್ , 1904–1905)
- ವೆಡ್ಡಿಂಗ್ ಪ್ರಿಪರೇಷನ್ಸ್ ಇನ್ ದ ಕಂಟ್ರಿ (ಹಾಕ್ಝೀಟ್ಸ್ವೋರ್ಬೆರೀಟಂಜೆನ್ ಆಫ್ ಡೆಂ ಲ್ಯಾಂಡೆ , 1907–1908)
- ಕಾಂಟೆಂಪ್ಲೇಷನ್ (ಬಿಟ್ರಾಕ್ಟಟಂಗ್, 1904–1912)
- ದ ಜಡ್ಜ್ ಮೆಂಟ್ (ದಾಸ್ ಉರ್ಟೀಲ್ , 22–23 ಸೆಪ್ಟೆಂಬರ್ 1912)
- ದ ಸ್ಟೋಕರ್
- ಇನ್ ದ ಪೀನಲ್ ಕಾಲೋನಿ (ಇನ್ ಡೆರ್ ಸ್ಟ್ರಾಫ್ಕೋಲೋನಿ , ಅಕ್ಟೋಬರ್ 1914)
- ದ ವಿಲೇಜ್ ಸ್ಕೂಲ್ ಮಾಸ್ಟರ್ (ಡೆರ್ ಡಾರ್ಫ್ಸ್ಕಲ್ಲೆನ್ಹೆರರ್(/1) ಅಥವಾ ಡೆರ್ ರೀಸೆನ್ಮಾಲ್ವುರ್ಫ್ , 1914–1915)
- ಬ್ಲಂಫೆಲ್ಡ್, ಎನ್ ಎಲ್ಡರ್ಲಿ ಬ್ಯಾಚೆಲರ್ (ಬ್ಲಂಫೆಲ್ಡ್, ಯೀಯ್ನ್ ಆಲ್ಟೆರೆರ್ ಜಂಗೆಸೆಲ್ಲೆ , 1915)
- ದ ವಾರ್ಡನ್ ಆಫ್ ದ ಟೋಂಬ್ (ಡೆರ್ ಗ್ರಫ್ಟ್ ವಾಕ್ಟರ್ , 1916–1917), ಕಾಫ್ಕ ಬರೆದ ಏಕೈಕ ನಾಟಕ
- ದ ಹಂಟರ್ ಗ್ರಾಚ್ಚಸ್ (ಡೆರ್ ಜಾಗರ್ ಚ್ರಾಚ್ಚಸ್ , 1917)
- ದ ಗ್ರೇಟ್ ವಾಲ್ ಆಫ್ ಚೈನಾ (ಬೀಯ್ಮ್ ಬಾ ಡೆರ್ ಚೈನಿಸಿಸ್ಚೆನ್ ಮಾಯೆರ್ , 1917)
- ಎ ರಿಪೋರ್ಟ್ ಟು ಎನ್ ಅಕಾಡೆಮಿ (ಈಯ್ನ್ ಬೆರಿಕ್ಟ್ ಫರ್ ಈಯ್ನ್ ಅಕ್ಯಾಡೆಮೀ , 1917)
- ಜಾಕಾಲ್ಸ್ ಎಂಡ್ ಅರಬ್ಸ್ (ಸ್ಕಾಕಾಲೆ ಉಂಡ್ ಅರಾಬೆರ್ , 1917)
- ಎ ಕಂಟ್ರಿ ಡಾಕ್ಟರ್ (ಈಯ್ನ್ ಲ್ಯಾಂಡಾರ್ಝ್ಟ್ , 1919)
- ಎ ಮೆಸೇಜ್ ಫ್ರಂ ದ ಎಂಪರರ್ (ಯೀಯ್ನೆ ಕೇಯ್ಸರ್ಲಿಚೆ ಬಾಟ್ಸ್ ಚಾಫ್ಟ್ , 1919)
- ಎನ್ ಓಲ್ಡ್ ಮ್ಯಾನುಸ್ಕ್ರಿಪ್ಟ್ (ಈಯ್ನ್ ಆಲ್ಟೆಸ್ ಬ್ಲ್ಯಾಟ್ಟ್ , 1919)
- ದ ರೆಫ್ಯೂಸಲ್l (ಡಯ್ ಅಬ್ವೀಸಂಗ್ , 1920)
- ಎ ಹಂಗರ್ ಆರ್ಟಿಸ್ಟ್ (ಯೀಯ್ನ್ ಹಂಗರ್ ಕಂಸ್ಟ್ಲರ್ , 1924)
- ಇನ್ವೆಸ್ಟಿಗೇಷನ್ಸ್ ಆಫ್ ಎ ಡಾಗ್ (ಫಾರ್ಶುಂಗೆನ್ ಯೀಯ್ನೆಸ್ ಹುಂಡೆಸ್ , 1922)
- ಎ ಲಿಟಲ್ ವುಮನ್ (ಯೀಯ್ನ್ ಕ್ಲೀಯೆನ್ ಫ್ರಾ , 1923)
- ಫಸ್ಟ್ ಸಾರೋ (ಎರ್ಸ್ಟೆಸ್ ಲೀಯ್ಡ್ , 1921–1922)
- ದ ಬರೋ (ಡೆರ್ ಬಾ , 1923–1924)
- ಜೋಸೆಫೈನ್ ದ ಸಿಂಗರ್ ಆರ್ ದ ಮೌಸ್ ಫೋಲ್ಕ್ (ಜೋಸೆಫೈನ್, ಡೈ ಸ್ಯಾಂಗರಿನ್, ಓಡರ್ ದಾಸ್ ವೋಲ್ಕ್ ಡೆರ್ ಮಾಸ್ , 1924)
ಇವರ ಕಥೆಗಳ ಹಲವಾರು ಸಂಗ್ರಹಗಳು ಪ್ರಕಟವಾಗಿವೆ ಹಾಗೂ ಅವುಗಳು ಈ ಕೆಲಕಂಡವನ್ನು ಒಳಗೊಂಡಿವೆ:
- The Penal Colony: Stories and Short Pieces . ನ್ಯೂ ಯಾರ್ಕ್: ಸ್ಖಾಕೆನ್ ಬುಕ್ಸ್, 1948.
- ದ ಕಂಪ್ಲೀಟ್ ಸ್ಟೋರೀಸ್ , (ಸಂ. ನಾಹುಂ ಎನ್, ಗ್ಲಾಟ್ಝರ್). ನ್ಯೂ ಯಾರ್ಕ್: ಸ್ಖಾಕೆನ್ ಬುಕ್ಸ್, 1971.
- ದ ಬೇಸಿಕ್ ಕಾಫ್ಕ . ನ್ಯೂ ಯಾರ್ಕ್: ಪಾಕೆಟ್ ಬುಕ್ಸ್, 1997.
- ದ ಸನ್ಸ್ . ನ್ಯೂ ಯಾರ್ಕ್: ಸ್ಖಾಕೆನ್ ಬುಕ್ಸ್, 1989.
- ದ ಮೆಟಮಾರ್ಫಾಸಿಸ್, ಇನ್ ದ ಪೀನಲ್ ಕಾಲೋನಿ, ಮತ್ತು ಇತರ ಕಥೆಗಳು . ನ್ಯೂ ಯಾರ್ಕ್: ಸ್ಖಾಕೆನ್ ಬುಕ್ಸ್, 1995.
- ಕಾಂಟೆಂಪ್ಲೇಷನ್ . ಟ್ವಿಸ್ಟೆಡ್ ಸ್ಪೂನ್ ಪ್ರೆಸ್, 1998.
- ಮೆಟಮಾರ್ಫಾಸಿಸ್ ಎಂಡ್ ಅದರ್ ಸ್ಟೋರೀಸ್ . ಪೆಂಗ್ವಿನ್ ಕ್ಲಾಸಿಕ್ಸ್, 2007
- ಸಣ್ಣ ಕಾದಂಬರಿಗಳು
- ದ ಮೆಟಮಾರ್ಫಾಸಿಸ್ (ಡೈ ವೆರ್ವಾಂಡ್ಲಂಗ್ , ನವೆಂಬರ್ – ಡಿಸೆಂಬರ್ 1915)
- ಕಾದಂಬರಿಗಳು
- ದ ಟ್ರಯಲ್ (ಡೆರ್ ಪ್ರೋಝೆಭ್ , 1925) (ಬಿಫೋರ್ ದ ಲಾಎಂಬ ಸಣ್ಣಕಥೆಯನ್ನೂ ಒಳಗೊಂಡಿದೆ)
- ದ ಕ್ಯಾಸಲ್ (ದಾಸ್ ಸ್ಕ್ಲಾಭ್ , 1926)
- ಅಮೆರಿಕಾ (ಅಮೆರಿಕಾ ಅಥವಾ ಡೆರ್ ವೆರಸ್ಕೋಲ್ಲಿನಿ , 1927)
- ಡೈರಿಗಳು ಮತ್ತು ನೋಟ್ ಬುಕ್ ಗಳು
- ಪತ್ರಗಳು
- ತಂದೆಗೆ ಬರೆದ ಪತ್ರಗಳು
- ಫೆಲಿಸ್ ಗೆ ಬರೆದ ಪತ್ರಗಳು
- ಓಟ್ಲಾಗೆ ಬರೆದ ಪತ್ರಗಳು
- ಮಿಲೆನಾಗೆ ಬರೆದ ಪತ್ರಗಳು
- ಕುಟುಂಬ, ಸ್ನೇಹಿತರು ಮತ್ತು ಸಂಪಾದಕರುಗಳಿಗೆ ಬರೆದ ಪತ್ರಗಳು
ಸ್ಮರಣೆ
[ಬದಲಾಯಿಸಿ]ತಮ್ಮ ಕೃತಿಗಳಿಗೇ ಬದ್ಧವಾದ ವಸ್ತುಸಂಗ್ರಹಾಲಯವನ್ನು ಝೆಕ್ ರಿಪಬ್ಲಿಕ್ ನ ಪ್ರೇಗ್ ನಲ್ಲಿ ಫ್ರ್ಯಾನ್ಝ್ ಕಾಫ್ಕ ಹೊಂದಿದ್ದಾರೆ.
"ಕಾಫ್ಕಾಯಿಸ್ಕ್" ಎಂಬ ಪದವನ್ನು ಕಾಫ್ಕರ ಕೃತಿಗಳಲ್ಲಿ ಬರುವ, ಅದರಲ್ಲೂ ವಿಶೇಷವಾಗಿ ದ ಟ್ರಯಲ್ ಮತ್ತು ದ ಮೆಟಮಾರ್ಫಾಸಿಸ್ ಗಳಲ್ಲಿ ಬರುವ, ಕಲ್ಪನೆಗಳು, ಪರಿಸ್ಥಿತಿಗಳು ಮತ್ತು ಆಲೋಚನೆಗಳನ್ನು ಹೋಲುವಂತಹವುಗಳನ್ನು ಸೂಚಿಸಲು/ವಿವರಿಸಲು ಬಳಸಲಾಗುತ್ತದೆ.
ಮೆಕ್ಸಿಕೋದಲ್ಲಿ, "ಸಿ ಫ್ರಾನ್ಝ್ ಕಾಫ್ಕ ಫ್ಯುಯೆರ ಮೆಕ್ಸಿಕಾನೋ, ಸಿಯೆರಾ ಕೋಸ್ಟುಂಬ್ರಿಸ್ಟಾ" (ಫ್ರಾನ್ಝ್ ಕಾಫ್ಕ ಮೆಕ್ಸಿಕೋದವರಾಗಿದ್ದಿದ್ದರೆ ಅವರು ಕೋಸ್ಟುಂಬ್ರಿಸ್ಟಾ ಲೇಖಕರಾಗಿರುತ್ತಿದ್ದರು) ಎಂಬ ನುಡಿಗಟ್ಟನ್ನು ಸಾಮಾನ್ಯವಾಗಿ ವೃತ್ತಪತ್ರಿಗಕೆಗಳು, ಬ್ಲಾಗ್ ಗಳು,ಮತ್ತು ಆನ್ ಲೈನ್ ಚರ್ಚಾಸ್ಥಳಗಳಲ್ಲಿ ದೇಶದ ಪರಿಸ್ಥಿತಿಯು ಎಷ್ಟು ಬಾಲಿಶವೂ, ನಿರಾಶಾದಾಯಕವೂ ಆಗಿದೆ ಎಂಬುದನ್ನು ಹೇಳಲು ಬಳಸಲಾಗುತ್ತದೆ.[೪೦]
"ಝೆಕ್ ದೃಷ್ಟಿಕೋನದಲ್ಲಿ ಕಾಫ್ಕ ಜರ್ಮನ್ ಆಗಿದ್ದರು ಮತ್ತು ಜರ್ಮನ್ನರ ದೃಷ್ಟಿಕೋನದಲ್ಲಿ, ಅವರು, ಬೇರೆಲ್ಲಕ್ಕಿಂತಲೂ ಮಿಗಿಲಾಗಿ, ಯಹೂದಿಯಾಗಿದ್ದರು" ಮತ್ತು ಇದು ಸಾಮಾನ್ಯವಾಗಿ "ಬಹುತೇಕ ಪಾಶ್ಚಿಮಾತ್ಯ ಯಹೂದಿಗಳ ಹಣೆಬರಹ"ವಾಗಿತ್ತು.[೧೧]
ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಉಲ್ಲೇಖಗಳು
[ಬದಲಾಯಿಸಿ]ಸಾಹಿತ್ಯ
[ಬದಲಾಯಿಸಿ]- ನೊಬೆಲ್ ಪ್ರಶಸ್ತಿ ವಿಜೇತ ಐಸಾಕ್ ಬಾಷೆವಿಸ್ ಸಿಂಗರ್ "ಎ ಫ್ರೆಂಡ್ ಆಫ್ ಕಾಫ್ಕ" ಎಂಬ ಒಂದು ಸಣ್ಣ ಕಥೆ ಬರೆದರು; ಅದು ಜೇಕ್ಸ್ ಕಾಹ್ನ್ ಎಂಬ ಒಬ್ಬ ಯಿಡ್ಡಿಷ್ ನಟ ಫ್ರ್ಯಾನ್ಝ್ ಕಾಫ್ಕ ತನಗೆ ತಿಳಿದಿದ್ದರೆಂದು ಹೇಳಿದುದರ ಬಗ್ಗೆ ಬರೆದ ಕಥೆಯಾಗಿತ್ತು. ಈ ಕಥೆಯಲ್ಲಿ, ಜೇಕ್ಸ್ ಕಾಹ್ನ್ ಹೇಳುವಂತೆ, ಕಾಫ್ಕ ಗೋಲೆಮ್ ಎಂಬ ಯಹೂದಿಗಳ ಜನಪದದ ಕಥೆಗಳಲ್ಲಿ ಬರುವ ಪ್ರಾಣಿಯಲ್ಲಿ ನಂಬಿಕೆ ಇಟ್ಟಿದ್ದರು.[೪೧]
- ಕಾಫ್ಕ ಅಮೆರಿಕಾನಾ ಲೇಖಕರು ಜೊನಾಥನ್ ಲೆದೆಂ ಮತ್ತು ಕಾರ್ಟರ್ ಸ್ಕಾಲ್ಝ್; ಇದು ಕಾಫ್ಕರ ಜೀವನ ಮತ್ತು ಕೃತಿಗಳನ್ನು ಆಧರಿಸಿದ ಕಥೆಗಳ ಸಂಕಲನ.
- ಕಾಫ್ಕ ಆನ್ ದ ಶೋರ್ ಲೇಖಕ ಹಾರೂಕಿ ಮುರಾಕಾಮಿ
- ಕಾಫ್ಕ ವಾಸ್ ದ ರೇಜ್, ಎ ಗ್ರೀನ್ವಿಚ್ ವಿಲೇಜ್ ಮೆಮಾಯ್ರ್ ಲೇಖಕ ಅನಾಟೊಲೆ ಬ್ರೊಯಾರ್ಡ್
- ಕಾಫ್ಕಾಸ್ ಕರ್ಸ್ ಲೇಖಕ ಅಖ್ಮತ್ ಡ್ಯಾಂಗರ್
- ದ ಕಾಫ್ಕ ಎಫೆಕ್ಟ್ ಬರೆದವರು ಅಮೆರಿಕದ ಬಿಝಾರೋ ಲೇಖಕ ಡಿ. ಹಾರ್ಲಾನ್ ವಿಲ್ಸನ್;ಇರ್ರಿಯಾಲಿಸಂ ವರ್ಗದ ಸಾಹಿತ್ಯದ ಬಗ್ಗೆ ಇರುವ ತಮ್ಮ ನಿಲುವನ್ನು ಫ್ರ್ಯಾನ್ಝ್ ಕಾಫ್ಕರ ಸಾಹಿತ್ಯಕ್ಕೆ ಹಾಗೂ ವಿಲಿಯಮ್ ಎಸ್. ಬರೋಸ್ ರ ಸಾಹಿತ್ಯಕ್ಕೆ ಹೋಲಿಸುವುದರ ಮೂಲಕ ಮಂಡಿಸಿದರು.
- ಕ್ರಿಮಿನಲ್ (ಚಿತ್ರಕಥಾ ಪುಸ್ತಕಗಳು) ಲೇಖಕರು ಎಡ್ ಬ್ರೂಬಾಕರ್ ಮತ್ತು ಸೀನ್ ಫಿಲಿಪ್ಸ್/2}; ವೃತ್ತಪತ್ರಿಕೆಗಳಲ್ಲಿ ಮರುಕಳಿಸುವ ಕಾಮಿಕ್ ಅಂಕಣಗಳಲ್ಲಿ ಕಾಣಬರುವ ವಿಶಿಷ್ಟ ಪಾತ್ರಗಳನ್ನೊಳಗೊಂಡ ದ ಅಡ್ವೆಂಚರ್ಸ್ ಆಫ್ 'ಫ್ರ್ಯಾನ್ಝ್ ಕಾಫ್ಕ PI'.
ಈ ಅಂಕಣದ 4ನೆಯ ವಿಭಾಗದ ಕಥಾಂಕಣವು ಇದರ ಸೃಷ್ಟಕರ್ತನನ್ನೂ ಒಳಗೊಂಡಿದೆ. ಮ್ಯಾಟ್ ಫ್ರ್ಯಾಕ್ಷನ್ ಬರೆದಿರುವ ಕಥಾಸರಣಿಯ ಬಗ್ಗೆಯೂ ಸುದ್ದಿಗಳು ಹರಡಿವೆ.
ಸಣ್ಣ ಕಥೆಗಳು
[ಬದಲಾಯಿಸಿ]- ಝೋಟ್ರೋಪ್ :ಚಾರ್ಲೀ ಡ್ಯೂಕ್ಸ್ ರವರ ಒಂದು ಪ್ರಾಯೋಗಿಕ ನವ್ಯ ಕಿರುಚಿತ್ರ Zoetrope (1999) @ ಐ ಎಮ್ ಡಿ ಬಿ. "ಇನ್ ದ ಪೀನಲ್ ಕಾಲೋನಿ"ಯ ಅಳವಡಿಕೆ.
- The Hunger Artist (2002) @ ಐ ಎಮ್ ಡಿ ಬಿ :ಟಾಮ್ ಗಿಬ್ಬನ್ಸ್ ರವರ ಅನಿಮೇಟೆಡ್ ಸಾಕ್ಷ್ಯಚಿತ್ರ.
- Menschenkörper (2004) @ ಐ ಎಮ್ ಡಿ ಬಿ[೪೨] "ಎ ಕಂಟ್ರಿ ಡಾಕ್ಟರ್" ನ ಅವತರಣಿಕೆ. ಟೋಬಿಯಾಸ್ ಫ್ರಹ್ಮೋರ್ಗನ್ ರವರು ತೆಗೆದ ಕಿರುಚಿತ್ರ.
- A Country Doctor (2007) @ ಐ ಎಮ್ ಡಿ ಬಿ"ಎ ಕಂಟ್ರಿ ಡಾಕ್ಟರ್"ನ ಅಳವಡಿಕೆ. ಕೋಜೀ ಯಾಮಾಮೂರಾ ತೆಗೆದ ಕಿರುಚಿತ್ರ.
- ಜೇಕಬ್ ಎಂ. ಅಪ್ಪೆಲ್ ನ ಕಥೆ, "ಹುಳದ ವೃತ್ತಾಂತ," ಸಂಸಾನ ಪಕ್ಕದ ಮನೆಯವರ ದೃಷ್ಟಿಕೋನದಿಂದ ಮಾರ್ಪಾಡಾದ ಕಥೆಯ ಮರುನಿರೂಪಣೆ.[೪೩]
- ವೈಜ್ಞಾನಿಕ ಕಾಲ್ಪನಿಕ ಕಥೆಗಳ ಲೇಖಕ ರೂಡಿ ರಕ್ಕರ್ "ದ 57ತ್ ಫ್ರ್ಯಾನ್ಝ್ ಕಾಫ್ಕ" ಎಂಬ ಶೀರ್ಷಿಕೆ ಹೊತ್ತ ಸಣ್ಣ ಕಥೆಯನ್ನು ಪ್ರಕಟಿಸಿದ್ದಾರೆ; ಇದು ಅವರ ಸಣ್ಣ ಕಥೆಗಳ ಸಂಕಲನದ ಹೊತ್ತಿಗೆಯ ಶೀರ್ಷಿಕೆಯೂ ಹೌದು.
ಚಲನಚಿತ್ರಗಳು ಮತ್ತು ಟೆಲಿವಿಷನ್
[ಬದಲಾಯಿಸಿ]- ಕಾಫ್ಕ (1990) ಜೆರೆಮಿ ಐರನ್ಸ್ಸ್ಥಳ/ವ್ಯಕ್ತಿ/ಆವಿಷ್ಕಾರಗಳಿಗೆ ತನ್ನ ಹೆಸರನ್ನು ನೀಡುವಷ್ಟರ ಮಟ್ಟದ ಖ್ಯಾತಿಹೊಂದಿದೆ ಲೇಖಕರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಥೆ ಲೆಮ್ ಡಾಬ್ಸ್ ಹಾಗೂ ನಿರ್ದೇಶನ ಸ್ಟೀವನ್ ಸಾಡೆರ್ಬರ್ಗ್.ಈ ಚಿತ್ರವು ಅವರ ಜೀವನ ಮತ್ತು ಕಾದಂಬರಿಗಳ ಮಿಶ್ರಕಥಾವಸ್ತುವನ್ನು ಹೊಂದಿದ್ದು ಕಾಫ್ಕರ ಜೀವನ ಮತ್ತು ಕೃತಿಗಳ ಅರೆ-ಜೀವನಚರಿತ್ರೆಯನ್ನು ಮುಂದಿಡುತ್ತದೆ. ತನ್ನ ಸಹೋದ್ಯೋಗಿಗಳೊಬ್ಬರು ಕಾಣೆಯಾದುದರ ಬಗ್ಗೆ ಕಾಫ್ಕ ನಡೆಸುವ ತನಿಖೆ ಸುತ್ತ ಕಥೆ ಹೆಣೆಯಲ್ಪಟ್ಟಿದೆ. ಕಥಾಹಂದರವು ಕಾಫ್ಕರನ್ನು ಕೃತಿಕಾರರ ಕೃತಿಗಳ ಮೂಲಕ ಹಾದುಹೋಗುವಂತೆ ಮಾಡುತ್ತದೆ, ವಿಶೇಷವಾಗಿ ದ ಕ್ಯಾಸಲ್ ಮತ್ತು ದ ಟ್ರಯಲ್ ಗಳ ಮೂಲಕ.
- Franz Kafka (1992) @ ಐ ಎಮ್ ಡಿ ಬಿ : ಪಿಯೀಟರ್ ಡ್ಯುಮಾಲಾ ರಿಂದ ಒಂದು ಅನಿಮೇಷನ್ ಚಿತ್ರ.
- ದ ಟ್ರಯಲ್ (1962) ಆರ್ಸನ್ ವೆಲ್ಸ್ ರು ಚಿತ್ರಕಥೆ ಬರೆದು ನಿರ್ದೇಶಿಸಿದ ಈ ಕಥೆಯ ಆಧಾರಿತ ಚಿತ್ರದಲ್ಲಿ ಆಂಥೋನಿ ಪರ್ಕಿನ್ಸ್, ಜಿಯನ್ನೆ ಮೋರಿಯಾ, ಮತ್ತು ರೋಮಿ ಸ್ಕ್ನೀಡರ್ ಅಭಿನಯಿಸಿದ್ದರು. 1962ರ BBC ಸಂದರ್ಶನವೊಂದರಲ್ಲಿ ಹವ್ ವೆಲ್ಡನ್ ರೊಡನೆ ಮಾತನಾಡುತ್ತಾ, ಆರ್ಸನ್ ವೆಲ್ಸ್,"ನೀವು ಏನಾದರೂ ಹೇಳಿಕೊಳ್ಳಿ, ಆದರೆ ದ ಟ್ರಯಲ್l ನಾನು ತಯಾರಿಸಿದ ಎಲ್ಲಾ ಚಿತ್ರಗಳಿಗಿಂತಲೂ ಉತ್ಕೃಷ್ಟವಾದುದು" ಎಂದರು.
- ಕ್ಲಾಸೆನ್ವೆರ್ಹಾಲ್ಟ್ನಿಸ್ಸೆ ಕ್ಲ್ಯಾಸ್ ರಿಲೇಷನ್ಸ್ (1984) ಪ್ರಯೋಗಾತ್ಮಕ ಚಿತ್ರ ನಿರ್ದೇಶಕದ್ವಯಯರಾದ ಜೀನ್-ಮೇರಿ ಸ್ಟ್ರಾಬ್ ಮತ್ತು ಡೇನಿಯೆಲೆ ಹ್ಯುಯಿಲ್ಲಿಟ್ ನಿರ್ದೇಶಿಸಿದ, ಕಾಫ್ಕರ ಕಾದಂಬರಿ ಅಮೆರಿಕಾ ಆಧಾರಿತ ಚಿತ್ರ.
- ದ ಟ್ರಯಲ್ (1993)ಕೈಲ್ ಮೆಕ್ಲಾಕ್ಲಾನ್ ಜೋಸೆಫ್ ಕೆ. ಪಾತ್ರದಲ್ಲಿ ನಟಿಸಿರುವ, ಆಂಥೋನಿ ಹಾಪ್ಕಿನ್ಸ್ ಪಾದ್ರಿಯ ಚಿಕ್ಕ, ಚೊಕ್ಕ ಪಾತ್ರದಲ್ಲಿ ಅಭಿನಯಿಸಿರುವ, ಕಾದಂಬರಿಯ ಯಥಾವತ್ತು ಅಳವಡಿಕೆಯಾದ, ನಾಟಕ ರಚನಕಾರ ಹೆರಾಲ್ಡ್ ಪಿಂಟರ್ ರ ಚಿತ್ರಕಥೆ ಹೊಂದಿರುವ ಚಿತ್ರ.
- ದ ಕ್ಯಾಸಲ್ ನ ಚಲನಚಿತ್ರ ಅವತರಣಿಕೆDas Schloß (1997) @ ಐ ಎಮ್ ಡಿ ಬಿ ಮೈಕಲ್ ಹನೆಕೆಯವರಿಂದ. ಮತ್ತಷ್ಟುದಾಸ್ ಸ್ಕ್ಲಾಭ್ (ಚಲನಚಿತ್ರ)ದಲ್ಲಿ
- MTV'ಯ ಡಾರಿಯಾ ದಲ್ಲಿನ ಪಾತ್ರಧಾರಿಯಾದ ಡಾರಿಯಾ ತನ್ನ ಶಯ್ಯಾಗೃಹದಲ್ಲಿ ಕಾಫ್ಕರ ಭಿತ್ತಿಚಿತ್ರವನ್ನು ಹೊಂದಿರುತ್ತಾಳೆ. ಸೆವೆಂಟೀನ್ ಮ್ಯಾಗಝೈನ್ ಡಾರಿಯಾಳ ಶಯ್ಯಾಗೃಹದ ಬಗ್ಗೆ ಒಂದು ಲೇಖನವನ್ನು ಬರೆದು, ಈ ಭಿತ್ತಿಚಿತ್ರವನ್ನೂ ಉಲ್ಲೇಖಿಸಿದೆ. ಸೆವೆಂಟೀನ್ ಡಾರಿಯಾಳನ್ನು ಅಸ್ತಿತ್ವವಾದಿ ಲೇಖಕ ಪ್ರ್ಯಾನ್ಝ್ ಕಾಫ್ಕ ಅವಳ ಹೀರೋ ಆಗಿರುವನೆಂದು ಕೇಳಿತು. ಅವಳು "ಆ ವ್ಯಕ್ತಿಯು ಒಬ್ಬ ಮನುಷ್ಯನು ಜಿರಳೆಯಾಗಿ ಬದಲಾಗುವ ಒಂದು ಕಾದಂಬರಿಯನ್ನು ಬರೆದಿದ್ದಾರೆ, ಹಾಗಿದ್ದೂ ಅವರು ಹೀರೋವೇನು ಎಂದು ಕೇಳಬೇಕೇನು?" ಎಂದು ಉತ್ತರವಿತ್ತಳು.
- ಅಡಲ್ಟ್ ಸ್ವಿಮ್ ನ ಹೋಂ ಮೂವೀಸ್ (TV ಸರಣಿ) ಯ ಒಂದು ಕಂತಿನಲ್ಲಿ, ರಾಕ್ ತಂಡ ಸ್ಕ್ಯಾಬ್ ನ ಡ್ಯುಯೇನ್ ಫ್ರ್ಯಾನ್ಝ್ ಕಾಫ್ಕರ ಜೀವನದ ಬಗ್ಗೆ ಒಂದು ರಾಕ್ ಒಪೇರಾ ಬರೆದರು ಮತ್ತು ಶೀರ್ಷಿಕಾ ಪಾತ್ರದಲ್ಲಿ ತಾವೇ ನಟಿಸಿದರು.
- ಸುಡಾ51ದ ಕ್ಯಾಸಲ್ ಆಧಾರಿತವಾದ "ಕುರಾಯಾಮಿ" ಹೆಸರಿನ ಒಂದು ಆಟವನ್ನು ರೂಪಿಸಲು ಆಲೋಚಿಸುತ್ತಿದೆ.
- ಕಾಫ್ಕ ಗೋಸ್ ಟು ದ ಫಾರೆಸ್ಟ್ (2009) ಒಂದು ಪ್ರಾಯೋಗಿಕ ಕಿರುಚಿತ್ರ; ನಿರ್ದೇಶನ ಡೇನಿಯಲ್ ಮೇಟೋಸ್(/1); ಈ ಚಲನಚಿತ್ರವು ಕಾಫ್ಕರ ಕಡೆಯ ದಿನಗಳ ಆಂತರಿಕ ತುಮುಲಗಳ ಕಾಲ್ಪನಿಕ ಪ್ರಾತಿನಿಧ್ಯವಾಗಿದೆ.
ಮೆಟಮಾರ್ಫಾಸಿಸ್
[ಬದಲಾಯಿಸಿ]- Die Verwandlung @ ಐ ಎಮ್ ಡಿ ಬಿ
- Förvandlingen @ ಐ ಎಮ್ ಡಿ ಬಿ
- The Metamorphosis of Mr. Samsa @ ಐ ಎಮ್ ಡಿ ಬಿ, ಒಂದು ಅನಿಮೇಟೆಡ್ ಪುಟ್ಟದು, ತೆಗೆದವರು ಕ್ಯಾರೋಲಿನ್ ಲೀಫ್
- Metamorphosis @ ಐ ಎಮ್ ಡಿ ಬಿ
- ಫ್ರ್ಯಾನ್ಝ್ ಕಾಫ್ಕರ 'ಇಟ್ಸ್ ಎ ವಂಡರ್ ಫುಲ್ ಲೈಫ್' (1993) ಒಂದು ಆಸ್ಕರ್-ಪ್ರಶಸ್ತಿ ವಿಜೇತ ಕಿರುಚಿತ್ರವಾಗಿದ್ದು, ಇದರ ಕಥೆ ಹಾಗೂ ನಿರ್ದೇಶನ ಪೀಟರ್ ಕಪಾಲ್ಡಿಯವರದಾಗಿತ್ತು ಮತ್ತು ಪಾತ್ರವರ್ಗದಲ್ಲಿ ರಿಚರ್ಡ್ ಇ. ಗ್ರ್ಯಾಂಟ್ ಕಾಫ್ಕರ ಪಾತ್ರ ವಹಿಸಿದ್ದರು. ಈ ಚಿತ್ರವು ದ ಮೆಟಮಾರ್ಫಾಸಿಸ್ ನೊಂದಿಗೆಫ್ರ್ಯಾಂಕ್ ಕ್ಯಾಪ್ರಾರವರ ಇಟ್ಸ್ ಎ ವಂಡರ್ ಫುಲ್ ಲೈಫ್ ಅನ್ನೂ ಹದವಾಗಿ ಮೇಳೈಸಿದೆ.
- ದ ಮೆಟಮಾರ್ಫಾಸಿಸ್ ಆಫ್ ಫ್ರ್ಯಾನ್ಝ್ ಕಾಫ್ಕ (1993) Archived 2009-09-15 ವೇಬ್ಯಾಕ್ ಮೆಷಿನ್ ನಲ್ಲಿ. ಲೇಖಕ ಕಾರ್ಲೋಸ್ ಅಟಾನೆಸ್.
- Prevrashcheniye @ ಐ ಎಮ್ ಡಿ ಬಿ
- Metamorfosis @ ಐ ಎಮ್ ಡಿ ಬಿ
ರಂಗಭೂಮಿ
[ಬದಲಾಯಿಸಿ]- ಅಲನ್ ಬೆನೆಟ್, ಕಾಫ್ಕ'ಸ್ ಡಿಕ್ , 1986, ಈ ನಾಟಕದಲ್ಲಿ ಕಾಫ್ಕ, ಅವರ ತಂದೆ ಹರ್ಮನ್, ಮತ್ತು ಮ್ಯಾಕ್ಸ್ ಬ್ರಾಡ್ ಒಬ್ಬ ಆಂಗ್ಲ ವಿಮಾ ಗುಮಾಸ್ತ(ಮತ್ತು ಕಾಫ್ಕರ ಅಭಿಮಾನಿ) ಹಾಗೂ ಅವನ ಪತ್ನಿ ಇರುವ ಮನೆಗೆ ಬರುತ್ತಾರೆ.
- ಮಿಲಾನ್ ರಿಕ್ಟರ್, ಕಾಫ್ಕ'ಸ್ ಹೆಲ್-ಪ್ಯಾರಡೈಸ್ , 2006, 5 ಪಾತ್ರಧಾರಿಗಳಿರುವ ಈ ನಾಟಕವು, ಕಾಫ್ಕರ ಸಾರೋಕ್ತಿಗಳು, ಕನಸುಗಳನ್ನು ಬಳಸಿ ಕಾಫ್ಕರ ತಂದೆಯೊಡನೆಯ ಯಾಗೂ ಹೆಣ್ಣುಗಳೊಂದಿಗಿನ ಸಂಬಂಧವನ್ನು ಮರು-ಉಲ್ಲೇಖಿಸುತ್ತದೆ. ಸ್ಲೋವಾಕ್ ನಿಂದ ಅನುವಾದ ಮಾಡಿದವರು ಎವಾಲ್ಡ್ ಓಸರ್ಸ್.
- ಮಿಲಾನ್ ರಿಕ್ಟರ್, ಕಾಫ್ಕಸ್ ಸೆಕೆಂಡ್ ಲೈಫ್ , 2007, ಹದಿನೇಳು ಪಾತ್ರಧಾರಿಗಳನ್ನು ಹೊಂದಿರುವ ಈ ನಾಟಕವು ಕಾಫ್ಕ ಮರಣ ಹೊಂದಿದ ಕಿಯರ್ಲಿಂಗ್ ನಲ್ಲಿ ಆರಂಭವಾಗಿ 1961ರ ಪ್ರೇಗ್ ನಲ್ಲಿ ಕೊನೆಗೊಳ್ಳುತ್ತದೆ. ಸ್ಲೋವಾಕ್ ನಿಂದ ಅನುವಾದ ಎವಾಲ್ಡ್ ಆಸರ್ಸ್ ರಿಂದ.
- ಟಾಡ್ಯೂಸ್ಝ್ ರೋಝೆವಿಕ್ಸ್, ಪುಲಪ್ಕ (ದ ಟ್ರ್ಯಾಪ್ ), 1982, ಕಾಫ್ಕರ ಡೈರಿಗಳು ಮತ್ತು ಪತ್ರಗಳ ಮೇಲೆ ಕೊಂಚಮಟ್ಟಿಗೆ ಆಧಾರಿತವಾದ ನಾಟಕ.
ಸಂಗೀತ
[ಬದಲಾಯಿಸಿ]- ಹಂಗೇರಿಯ ಸಂಕಲನಕಾರ ಗಿಯೋಗಿ ಕುರ್ಟಾಗ್ ಕಾಫ್ಕರ ಡೈರಿ ಮತ್ತು ಪತ್ರಗಳ ತುಣುಕುಗಳನ್ನು ಬಳಸಿ ಸೋಪ್ರಾನೋ ಮತ್ತು ವಾಯ್ಲನ್ ಗೆ ಒಂದು ಗೀತೆಯನ್ನು ರಚಿಸಿದರು: ಕಾಫ್ಕ-ಫ್ರ್ಯಾಗ್ಮೆಂಟರ , Op. 24, 1985.
- ರಷ್ಯಾದ ಹಿಪ್ ಹಾಪ್ ತಂಡ 2H ಕಂಪನಿ refers to ದ ಮೆಟಮಾರ್ಪಾಸಿಸ್ ಅನ್ನು ಪ್ರಾಯಶಃ ತನ್ನ ಅತ್ಯಂತ ಪ್ರಸಿದ್ಧವಾದ ಹಾಡಾದ "ಅಡಾಪ್ಟೇಷನ್" ನಲ್ಲಿ ಉಲ್ಲೇಖಿಸುತ್ತದೆ. ಆ ಹಾಡಿನ ಪ್ರಮುಖ ನಾಯಕನು ನಾವೆಲ್ಲಾವನ್ನು(ಕಿರುಕಾದಂಬರಿಯನ್ನು) ಮಲಗುವ ಮುನ್ನ ಓದಿದನು, ನಂತರ ಎಲ್ಲಾ ಮನುಷ್ಯರ ದೇಹಗಳೂ ಮಾರ್ಪಾಡಾದಂತಹ ಕನಸು ಕಂಡನು.
- ಆಸ್ಟ್ರೇಲಿಯಾದ ತಂಡ ಲಾಸ್ಟ್ ವ್ಯಾಲೆಂಟಿನೋಸ್ ತಾವು ರಚಿಸಿದ "ಕಾಫ್ಕ" ಹಾಡನ್ನು , "ದ ವ್ಯಾಲೆಂಟಿನೋಸ್" ಎಂಬ ಶೀರ್ಷಿಕೆಯಡಿಯಲ್ಲಿ 2005 EP ರಿಲೀಸ್ ನಲ್ಲಿ ಬಿಡುಗಡೆಮಾಡಿದರು. "ಕಾಫ್ಕ" ಗೀತೆಯು(ಟ್ರ್ಯಾಕ್) ಕಾಫ್ಕರ ಮರಣದ ಬಗ್ಗೆ ದೊರೆತ ಮಾಹಿತಿಯನ್ನು ನೈರಾಶ್ಯದ ಕುರುಹಾಗಿ ಮತ್ತು ಒಂದು ಸಂಬಂಧದ ಪತನವಾದಾಗ ಉಂಟಾಗುವ ಆಶಾಹೀನ ಅಸಹಾಯಕತೆಯನ್ನು ಬಿಂಬಿಸುತ್ತದೆ.
- (0}ಜೇಸನ್ ವೆಬ್ಲಿಯವರ ಹಾಡಾದ "ಇಲೆವೆನ್ ಸೇಂಟ್ಸ್" ನಲ್ಲಿ ಕಾಫ್ಕರು ಹಾಡಿನ ಸಾಲುಗಳಲ್ಲಿ ಉಲ್ಲೇಖಿತರಾಗುತ್ತಾರೆ, "...ವಿ ಆರ್ ಜಸ್ಟ್ ಸಿಟಿಂಗ್ ಬೈ ದ ಟ್ರೈನ್ ಟ್ರ್ಯಾಕ್ಸ್ ರೀಡಿಂಗ್ ಕಾಫ್ಕ ಟು ದ ಸ್ಕೈ,".
- ಜೋಸೆಫ್ ಟಾಲ್ ರ ಕಡೆಯ ಅಪೆರಾ ಆದ ಜೋಸೆಫ್(1993), ಭಾಗಶಃ ಫ್ರ್ಯಾನ್ಝ್ ಕಾಫ್ಕರಿಂದ ಪ್ರಭಾವಿತವಾಗಿದೆ ಜೋಸೆಫ್ ಟಾಲ್ – ಇನ್ ಮೆಮೋರಿಯಂ Archived 2011-07-23 ವೇಬ್ಯಾಕ್ ಮೆಷಿನ್ ನಲ್ಲಿ.
- ಅಮೆರಿಕದ ಲೋ-ಫೈ ತಂಡ {1ಗ್ಲ್ಯಾಸ್ ಗ್ರೇವ್ಸ್{/1} ಕಾಫ್ಕರ ಬರಹಗಳನ್ನು ಓದಿರುವುದರ ಬಗ್ಗೆ "ದ ಟ್ವಿನ್"ಎಂಬ ಹಾಡಿನಲ್ಲಿ ಉಲ್ಲೇಖಿಸುತ್ತದೆ; ಇದು 2010ರಲ್ಲಿ ಬಿಡುಗಡೆಯಾದ ಆರ್ಕಿಟೆಕ್ಚರ್ ಎಂಬ ರೆಕಾರ್ಡ್ ನಲ್ಲಿ ಲಭ್ಯವಿದೆ.
ಇವನ್ನೂ ನೋಡಿ
[ಬದಲಾಯಿಸಿ]- ಆಸ್ಟರಾಯ್ಡ್ 3412 ಕಾಫ್ಕ, ಲೇಖಕರ ಹೆಸರನ್ನೇ ಅದಕ್ಕೆ ಇರಿಸಲಾಗಿದೆ.
- ಫ್ರ್ಯಾನ್ಝ್ ಕಾಫ್ಕ ಬಹುಮಾನ
ಆಕರಗಳು
[ಬದಲಾಯಿಸಿ]- ↑ ಫ್ರ್ಯಾನ್ಝ್ ಕಾಫ್ಕ Archived 2010-04-05 ವೇಬ್ಯಾಕ್ ಮೆಷಿನ್ ನಲ್ಲಿ. ಫ್ರ್ಯಾನ್ಝ್ ಕಾಫ್ಕ
- ↑ ೨.೦ ೨.೧ (Spanish)ಕಾಂಟಿಜಾಚ್, ಫ್ರ್ಯಾನ್ಸೆಸ್ಕ್ ಮಿರಾಲ್ಲೆಸ್ (2000) "ಫ್ರ್ಯಾನ್ಝ್ ಕಾಫ್ಕ". ಓಷಿಯಾನೋ ಗ್ರೂಪೋ ಎಡಿಟೋರಿಯಲ್, S.A. ಬಾರ್ಸಿಲೋನಾ. ISBN 0-521-22515-9.
- ↑ ಕಾರ್ನ್ ಗೋಲ್ಡ್ 1973
- ↑ ಗಿಲ್ಮನ್, ಸ್ಯಾಂಡರ್ ಎಲ್. (2005) ಫ್ರ್ಯಾನ್ಝ್ ಕಾಫ್ಕ . ರೀಕ್ಟನ್ ಬುಕ್ಸ್ ಲಿಮಿಟೆಡ್. ಲಂಡನ್, ಯುಕೆ. ಪುಟಗಳು 20–21. ISBN 1-59474-023-2
- ↑ ಹಮಾಲಿಯನ್ ([1975], 3).
- ↑ ಡಾನ್ಯುಟಾ ಝೆಕ್: ಕಲೆಂಡಾರ್ಝ್ ವೈಡಾರ್ಝೆನ್ w KL ಆಷ್ವಿಟ್ಝ್, ಓಸ್ವೀಕಿಮ್ 1992, ಪುಟ 534. ಕ್ಯಾಂಪ್ ನ ಲೆಕ್ಕಪತ್ರಾಲಯದಲ್ಲಿ ಪೋಷಕರ ಹೆಸರುಗಳ ಪಟ್ಟಿಯು ಜೋಪಾನವಾಗಿ ಇರಿಸಲ್ಪಟ್ಟಿತ್ತು.
- ↑ ಡೆರೆಕ್ ಸೇಯರ್, "ದ ಲ್ಯಾಂಗ್ವೇಜ್ ಆಫ್ ನ್ಯಾಷನಾಲಿಟಿ ಎಂಡ್ ದ ನ್ಯಾಷನಾಲಿಟಿ ಆಫ್ ಲ್ಯಾಂಗ್ವೇಜ್: ಪ್ರೇಗ್ 1780–1920 – ಝೆಕ್ ರಿಪಬ್ಲಿಕ್ ಹಿಸ್ಟರಿ", ಪಾಸ್ಟ್ ಎಂಡ್ ಪ್ರೆಸೆಂಟ್, 1996; 153: 164–210.
- ↑ ಲೆಟರ್ ಟು ಹಿಸ್ ಫಾದರ್, ಪುಟ 150
- ↑ ಲ್ಯಾಂಬೆಂಟ್ ಟ್ರೇಸಸ್: ಫ್ರ್ಯಾನ್ಝ್ ಕಾಫ್ಕ S ಕಾರ್ನ್ ಗೋಲ್ಡ್ - 2004
- ↑ ಡ್ರಕ್ಕರ್, ಪೀಟರ್. ಮುಂದಿನ ಸಮಾಜವನ್ನು ನಿಭಾಯಿಸುವಿಕೆ. ನೋಡಿ: ಫ್ರ್ಯಾನ್ಝ್ ಕಾಫ್ಕ, ಆಮ್ಟ್ಲಿಚೆ ಸ್ಕ್ರಿಫ್ಟೆನ್ . (ಸಂಪಾದಕರು) ಕೆ. ಹರ್ಮ್ಸ್ ಡಾರ್ಫ್ & ಬಿ. ವ್ಯಾಗ್ನರ್ (2004) (ಇಂಗ್ಲಿಷ್ ಅನುವಾದ.: ದ ಆಫೀಸ್ ರೈಟಿಂಗ್ಸ್ . (ಸಂಪಾದಕರು) ಎಸ್. ಕಾರ್ನ್ ಗೋಲ್ಡ್, ಜೆ. ಗ್ರೀನ್ಸ್ ಬರ್ಗ್ & ಬಿ. ವ್ಯಾಗ್ನರ್. ಅನುವಾದ. ಇ. ಪ್ಯಾಟನ್ ರೊಂದಿ್ಗೆ ಆರ್. ಹೀನ್(2008)); cf. ಹೆಚ್..ಜಿ. ಕಾಚ್ & ಕೆ. ವಾಗೆನ್ ಬ್ಯಾಚ್ (ಸಂಪಾದಕರು.), ಕಾಫ್ಕಾಸ್ ಫ್ಯಾಬ್ರಿಕೆನ್ (2002).
- ↑ ೧೧.೦ ೧೧.೧ ದ ಮೆಟಮಾರ್ಫಾಸಿಸ್ ಎಂಡ್ ಅದರ್ ಸ್ಟೋರೀಸ್ , ಟಿಪ್ಪಣಿಗಳು. ಹರ್ಬರ್ತ್ ಝೆರ್ಮಾಕ್. ಲಿಂಕನ್, ನೆಬ್ರಾಸ್ಕ: ಕ್ಲಿಫ್ಸ್ ನೋಟ್ಸ್ 1973, 1996.
- ↑ ೧೨.೦ ೧೨.೧ "Kafka and Judaism". Victorian.fortunecity.com. Archived from the original on 21 ಫೆಬ್ರವರಿ 1999. Retrieved 28 May 2009.
- ↑ disappearing.html ಅಮೆರಿಕಾ ದ ಬಗ್ಗೆ ರಿಯಾನ್ ಮೆಕ್ ಕಿಟ್ರಿಕ್ ರವರು ನಿರ್ದೇಶಕ ಡಾಮಿನಿಕ್ ಸೆರ್ರಾಂಡ್ ಮತ್ತು ಗಿಡಿಯನ್ ಲೆಸ್ಟರ್ ರೊಡನೆ ಮಾತನಾಡುವರು www.amrep.org
- ↑ Lothar Hempel www.atlegerhardsen.com
- ↑ http://libcom.org/ಗ್ರಂಥಾಲಯ/ಫ್ರ್ಯಾನ್ಝ್-ಕಾಫ್ಕ-ಲಿಬರ್ಟೇರಿಯನ್-ಸಮಾಜವಾದ[ಶಾಶ್ವತವಾಗಿ ಮಡಿದ ಕೊಂಡಿ]
- ↑ https://books.google.com/books?id=d1wxHUOcPdcC&pg=PA17&lpg=PA17&dq=%22Hugo+Bergmann%22+Kafka+socialism&source=bl&ots=ruBA-NWq6r&sig=G-0DLO1TFwiSahfPQllY_cGong4&hl=en&ei=CCcETPqECoH98Aaj2OCeDQ&sa=X&oi=book_result&ct=result&resnum=2&ved=0CBcQ6AEwAQ#v=onepage&q=%22Hugo%20Bergmann%22%20Kafka%20socialism&f=false
- ↑ https://books.google.com/books?id=wVz2auyt81sC&pg=PA148&dq=Kafka+Kropotkin&cd=4#v=onepage&q=Kropotkin&f=false
- ↑ ೧೮.೦ ೧೮.೧ "Sadness in Palestine". Haaretz.com. Archived from the original on 20 ಡಿಸೆಂಬರ್ 2008. Retrieved 28 May 2009.
- ↑ ೧೯.೦ ೧೯.೧ ಮರೆಯಿಂದ ಹೊರತರಲ್ಪಟ್ಟ ಫ್ರ್ಯಾನ್ಝ್ ಕಾಫ್ಕರ ಅಶ್ಲೀಲ - ಟೈಮ್ಸ್ ಆನ್ ಲೈನ್ entertainment.timesonline.co.uk ಯಲ್ಲಿ
- ↑ ಲೋಥರ್ ಕಾಹ್ನ್, in ಬಿಟ್ವೀನ್ ಟೂ ವರ್ಲ್ಡ್ಸ್: ಎ ಕಲ್ಚರಲ್ ಹಿಸ್ಟರಿ ಆಫ್ ಜರ್ಮನ್-ಜ್ಯೂಯಿಷ್ ರೈಟರ್ಸ್, ನಲ್ಲಿ, ಪುಟ 191
- ↑ ೨೧.೦ ೨೧.೧ ಲಿವಿಯಾ ರಾಥ್ಕಿರ್ಚೆನ್, ದ ಜ್ಯೂಸ್ ಆಫ್ ಬೊಹೇಮಿಯಾ ಎಂಡ್ ಮೊರಾವಿಯಾ: ಫೇಸಿಂಗ್ ದ ಹೋಲೋಕಾಸ್ಟ್ , ಯೂನಿವರ್ಸಿಟಿ ಆಫ್ ನೆಬ್ರಾಸ್ಕಾ ಪ್ರೆಸ್, 2005 ಪುಟ 23
- ↑ ದ ಕ್ಯಾಸಲ್ ನ ಪ್ರಕಾಶಕರ ನುಡಿಯಲ್ಲಿ ಉಲ್ಲೇಖಿಸಲಾಗಿದೆ, ಸ್ಖೋಕ್ಕೆನ್ ಬುಕ್ಸ್.
- ↑ ಕಾಫ್ಕ (1996, xi).
- ↑ ಉಂಗೆಝೀಫರ್ : ಡಿಕ್ಷ್ನರಿ/ವೋರ್ಟರ್ಬಕ್ (ಬಿಯೋಲಿಂಗಸ್, TU ಕೆಮಿಂಟ್ಝ್)
- ↑ ಕಾಫ್ಕ (1996, 75).
- ↑ ಬ್ರಾಡ್. ಮ್ಯಾಕ್ಸ್: "ಫ್ರ್ಯಾನ್ಝ್ ಕಾಫ್ಕ: ಎ ಬಯಾಗ್ರಫಿ". (ಅನುವಾದ ಹಂಫ್ರೇಸ್ ರಾಬರ್ಟ್ಸ್) ನ್ಯೂ ಯಾರ್ಕ್: ಸ್ಖೋಕ್ಕೆನ್ ಬುಕ್ಸ್,1960. ಪುಟ 129.
- ↑ ೨೭.೦ ೨೭.೧ ೨೭.೨ ಫ್ರ್ಯಾನ್ಝ್ ಕಾಫ್ಕ 1883 – 1924 Archived 2008-04-26 ವೇಬ್ಯಾಕ್ ಮೆಷಿನ್ ನಲ್ಲಿ. www.coskunfineart.com
- ↑ ಥಾಮಸ್ ಮಾನ್ನ್, ದ ಐರಾನಿಕ್ ಜರ್ಮನ್ . ಇ ಹೆಲರ್, ಟಿ. ಮಾನ್ನ್ - 1981
- ↑ ಫ್ರ್ಯಾನ್ಝ್ ಕಾಫ್ಕ (1883-1924)ನಿಹ್.ಗವ್.ಡಿ ಫೆಲಿಸಾಟಿ, ಜಿ ಸ್ಪೆರಾಟಿ - ಆಕ್ಟಾ ಓಟೋರ್ಹಿನೋಲಾರಿಂಗೋಲಾಜಿಕ್ ಅ ಇಟಾಲಿಕಾ, 2005 - ncbi.nlm.nih.gov
- ↑ ಕಾಫ್ಕರ ಬಿಂಬಿತ ಕಾನೂನುಗಳ ಬಗ್ಗೆ ಕೇಂದ್ರಿತವಾದ ಅಧ್ಯಯನಗಳ ಮೇಲ್ನೋಟವನ್ನು ಪಡೆಯಲು ನೋಡಿರಿ ಬನಕರ್, ರೆಝಾ. “ಇನ್ ಸರ್ಚ್ ಆಫ್ ಹೀಮಟ್: ಎ ನೋಟ್ ಆನ್ ಫ್ರ್ಯಾನ್ಝ್ ಕಾಫ್ಕಾಸ್ ಕಾನ್ಸೆಪ್ಟ್ ಆಫ್ ಲಾ”. ಕಾನೂನು ಮತ್ತು ಸಾಹಿತ್ಯದಲ್ಲಿ 2010ರಲ್ಲಿ ಮುಂದಬರುವಂತಹವು. ಒಂದು ಈ-ಕಾಪಿಯು ಇಲ್ಲಿ ದೊರೆಯುತ್ತದೆ http://papers.ssrn.com/sol3/papers.cfm?abstract_id=1574870
- ↑ ಕಾರ್ನ್ ಗೋಲ್ಡ್, ಸ್ಟ್ಯಾನ್ಲೀ, ಮುಂತಾದವರು (ಸಂಪಾದಕರು) ಫ್ರ್ಯಾನ್ಝ್ ಕಾಫ್ಕ: ದ ಆಫೀಸ್ ರೈಟಿಂಗಸ್. ಪ್ರಿನ್ಸ್ ಟನ್, ಪ್ರಿನ್ಸ್ ಟನ್ ವಿಶ್ವವಿದ್ಯಾಲಯ ಮುದ್ರಣಾಲಯ, 2009.
- ↑ "ಇನ್ ಸರ್ಚ್ ಆಫ್ ಹೀಮಟ್: ಎ ನೋಟ್ ಆನ್ ಫ್ರ್ಯಾನ್ಝ್ ಕಾಫ್ಕಾಸ್ ಕಾನ್ಸೆಪ್ಟ್ ಆಫ್ ಲಾ" ನೋಡಿ http://papers.ssrn.com/sol3/papers.cfm?abstract_id=1574870
- ↑ ಸ್ಖೋಕ್ಕೆನ್ ಬುಕ್ಸ್, 1998
- ↑ {1)ಎ ಕಾಫ್ಕ ಫಾರ್ ದ 21ಸ್ಟ್ ಸೆಂಚುರಿ ಬೈ ಆರ್ಥರ್ ಸ್ಯಾಮುಯಲ್ಸನ್, ಪಬ್ಲಿಷರ್, ಸ್ಖೋಕ್ಕೆನ್ ಬುಕ್ಸ್ {/1} www.jhom.com
- ↑ (German) ಹೆರ್ಝ್ಲಿಚ್ ವಿಲ್ಕೋಮ್ಮೆನ್ Archived 2010-07-26 ವೇಬ್ಯಾಕ್ ಮೆಷಿನ್ ನಲ್ಲಿ. www.dla-marbach.de
- ↑ (ಪ್ರಕಾಶಕರ ಟಿಪ್ಪಣಿ, ದ ಟ್ರಯಲ್ , ಸ್ಖೋಕೆನ್ ಬುಕ್ಸ್, 1998
- ↑ ಸ್ಟೆಪಿಂಗ್ ಇಂಟು ಕಾಫ್ಕ'ಸ್ ಹೆಡ್ , ಜೆರೆಮಿ ಆಡ್ಲರ್, ಟೈಮ್ಸ್ ಸಾಹಿತ್ಯಿಕ ಪುರವಣಿ, 13 ಅಕ್ಟೋಬರ್ 1995 <http://www.textkritik.de/rezensionen/kafka/einl_04.htm>
- ↑ ದ ಕಾಫ್ಕ ಪ್ರಾಜೆಕ್ಟ್ – ಹಸ್ತಪ್ರತಿಯ ಮೇರೆಗೆ ಕಾಫ್ಕರ ಎಲ್ಲಾ ಪಠ್ಯಗಳೂ ಜರ್ಮನ್ ಭಾಷೆಯಲ್ಲಿ Archived 2023-06-12 ವೇಬ್ಯಾಕ್ ಮೆಷಿನ್ ನಲ್ಲಿ. www.kafka.org
- ↑ ಮೂಲಗಳು: ಕಾಫ್ಕ, ಲೇಖಕ ನಿಕೋಲಸ್ ಮರ್ರೆ, ಪುಟಗಳು 367, 374; ಕಾಫ್ಕ'ಸ್ ಲಾಸ್ಟ್ ಲವ್, ಲೇಖಕಿ ಕಾಥಿ ಡಯಾಮಂಟ್; "ಸಮ್ಮರಿ ಆಫ್ ದ ರಿಸಲ್ಟ್ಸ್ ಆಫ್ ದ ಕಾಫ್ಕ ಪ್ರಾಜೆಕ್ಟ್ ಬರ್ಲಿನ್ ರಿಸರ್ಚ್ 1 ಜೂನ್ – ಸೆಪ್ಟೆಂಬರ್ 1998" ಡಿಸೆಂಬರ್ 1998ರಲ್ಲಿ ಕಾಫ್ಕ ಕಾಟೆರ್ನ್ ಎಂಬ ನೆದರ್ಲ್ಯಾಂಡ್ಸ್ ನ ಕಾಫ್ಕ ಗುಂಪಿನ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟ. ಹೆಚ್ಚಿನ ಮಾಹಿತಿಗಾಗಿ http://www.kafkaproject.com
- ↑ Aquella, Daniel (22 November 2006). "México kafkiano y costumbrista". Daquella manera:Paseo personal por inquietudes culturales, sociales y lo que tengamos a bien obrar. Archived from the original on 16 ಡಿಸೆಂಬರ್ 2007. Retrieved 16 February 2007.
{{cite web}}
: Cite has empty unknown parameter:|coauthors=
(help) - ↑ Bashevis Singer, Isaac (1970). A Friend of Kafka, and Other Stories. Farrar, Straus and Giroux. p. 311. ISBN 0-37415-880-0.
{{cite book}}
: Cite has empty unknown parameter:|coauthors=
(help) - ↑ (German) ಮೆನ್ಷೆನ್ ಕೋರ್ಪರ್ ಮೂವೀ ವೆಬ್ ಸೈಟ್ www.menschenkoerper.de
- ↑ ಇಮೇಜ್, ಸಂಪುಟ 62
ಗ್ರಂಥಸೂಚಿ
[ಬದಲಾಯಿಸಿ]- ಅಡೋರ್ನೋ, ಥಿಯೋಡರ್. ಪ್ರಿಸಮ್ಸ್ ಕೇಂಬ್ರಿಡ್ಜ್: MIT ಪ್ರೆಸ್, 1967.
- ಬಾನಕರ್, ರೆಝಾ. "ಇನ್ ಸರ್ಚ್ ಆಫ್ ಹೀಮಟ್: ಎ ನೋಟ್ ಆನ್ ಫ್ರ್ಯಾನ್ಝ್ ಕಾಫ್ಕಾಸ್ ಕಾನ್ಸೆಪ್ಟ್ ಆಫ್ ಲಾ". ಫೋರ್ತ್ಕಮಿಂಗ್ ಇನ್ ಲಾ ಅಂಡ್ ಲಿಟರೇಚರ್ ಸಂಪುಟ 22, 2010. [೧]
- ಕಾರ್ನ್ ಗೋಲ್ಡ್, ಸ್ಟ್ಯಾನ್ಲೀ. ಇಂಟ್ರೊಡಕ್ಷನ್ ಟು ದ ಮೆಟಮಾರ್ಫಾಸಿಸ್ . ಬಂತಮ್ ಕ್ಲ್ಯಾಸಿಕ್ಸ್, 1972. ISBN 0-7922-7391-5.
- ಹಮಾಲಿಯನ್, ಲಿಯೋ, ಸಂಪಾದಕ ಫ್ರ್ಯಾನ್ಝ್ ಕಾಫ್ಕ: ಎ ಕಲೆಕ್ಷನ್ ಆಫ್ ಕ್ರಿಟಿಸಿಸಂ . ನ್ಯೂಯಾರ್ಕ್: ಮೆಕ್‌ಗ್ರಾ-ಹಿಲ್:1. ISBN 0-471-80580-7.
- ಹೆಲೆರ್, ಪಾಲ್. ಫ್ರ್ಯಾನ್ಝ್ ಕಾಫ್ಕ: ವಿಸೆನ್ಷಾಫ್ಟ್ ಉಂಡ್ ವಿಸೆನ್ಷಾಫ್ಟ್ಸ್ ಕ್ರಿಟಿಕ್ . ಟ್ಯೂಬಿಂಜೆನ್: ಸ್ಟಾಫ್ಫೆನ್ ಬರ್ಗ್, 1989. ISBN 3-85052-197-4.
- ಕಾಫ್ಕ, ಫ್ರ್ಯಾನ್ಝ್. ದ ಮೆಟಮಾರ್ಪಾಸಿಸ್ ಎಂಡ್ ಅದರ್ ಸ್ಟೋರೀಸ್ . ಅನುವಾದ ಡೊನ್ನಾ ಫ್ರೀಡ್. ನ್ಯೂ ಯಾರ್ಕ್: ಬಾರ್ನ್ಸ್& ನೋಬಲ್, 1996. ISBN 1-85158-833-7.
- ಕಾಫ್ಕ, ಫ್ರ್ಯಾನ್ಝ್. ಕಾಫ್ಕ'ಸ್ ಸೆಲೆಕ್ಟೆಸ್ ಸ್ಟೋರೀಸ್ . ನಾರ್ಟನ್ ಕ್ರಿಟಿಕಲ್ ಆವೃತ್ತಿ. ಅನುವಾದ ಸ್ಟ್ಯಾನ್ಲೀ ಕಾರ್ನ್ ಗೋಲ್ಡ್. ನ್ಯೂ ಯಾರ್ಕ್: ನಾರ್ಟನ್, 2005. ISBN 0-7910-6772-6
- ಬ್ರಾಡ್, ಮ್ಯಾಕ್ಸ್. ಫ್ರ್ಯಾನ್ಝ್ ಕಾಫ್ಕ: ಎ ಬಯಾಗ್ರಫಿ. ನ್ಯೂ ಯಾರ್ಕ್: ಡಾ ಕ್ಯಾಪೋ ಪ್ರೆಸ್, 1995. ISBN 0-385-49062-3
- ಬ್ರಾಡ್, ಮ್ಯಾಕ್ಸ್. ದ ಬಯಾಗ್ರಫಿ ಆಫ್ ಫ್ರ್ಯಾನ್ಝ್ ಕಾಫ್ಕ , ಜರ್ಮನ್ ನಿಂದ ಅನುವಾದ ಮಾಡಿದವರು ಜಿ. ಹಂಫ್ರೇಸ್ ರಾಬರ್ಟ್ಸ್. ಲಂಡನ್: ಸೆಕ್ಕರ್ & ವಾರ್ಬರ್ಗ್, 1947. OCLC 2771397
- ಕಲಾಸ್ಸೋ, ರಾಬರ್ಟೋ. ಕೆ. ಕ್ನಾಪ್ಫ್, 2005. ISBN 1-59474-023-2
- ಸಿಟಾಟಿ, ಪಿಯೆಟ್ರೋ, ಕಾಫ್ಕ , 1987. ISBN 0-471-80580-7.
- ಕೂಟ್ಸ್, ಸ್ಟೀವ್. ಫ್ರ್ಯಾನ್ಝ್ ಕಾಫ್ಕ (ಆರಂಭಿಕ ಕೈಪಿಡಿ) . ಹೆಡ್ವೇ, 2002, ISBN 0-340-84648-8
- ಡೆಲ್ಯೂಝೆ, ಗಿಲ್ಲೆಸ್ & ಫೆಲಿಕ್ಸ್ ಗಾಟ್ಟಾರಿ. ಕಾಫ್ಕ: ಟುವರ್ಡ್ ಎ ಮೈನರ್ ಲಿಟರೇಚರ್ (ಸಾಹಿತ್ಯದ ಸಿದ್ಧಂತ ಮತ್ತು ಚರಿತ್ರೆ, ಸಂಪುಟ 30). ಮಿನ್ನಿಯಾಪೋಲಿಸ್, ಮಿನ್ನೆಸೊಟಾ ವಿಶ್ವವಿದ್ಯಾಲಯ, 1986. ISBN 0-674-44301-2
- ಡಾಂಟಾ, ಕ್ರಿಸ್. "ಸಾರಾ'ಸ್ ಲಾಫ್ಟರ್: ಕಾಫ್ಕ'ಸ್ ಅಬ್ರಹಾಮ್" ಇ್ನ ಮಾಡ್ರನಿಸಂ/ಮಾಡ್ರನಿಟಿ ದಲ್ಲಿ 15:2 ([೨] ಏಪ್ರಿಲ್ 2008), 343–59.
- ಗ್ಲಾಟ್ಝರ್, ನಾಹುಮ್ ಎನ್., ದ ಲವ್ಸ್ ಆಫ್ ಫ್ರಾನ್ಝ್ ಕಾಫ್ಕ . ನ್ಯೂ ಯಾರ್ಕ: ಸ್ಖಾಕ್ಕೆನ್ ಬುಕ್ಸ್, 1986. ISBN 0-674-44301-2
- ಗ್ರೀನ್ ಬರ್ಗ್, ಮಾರ್ಟಿನ್, ದ ಟೆರರ್ ಆಫ್ ಆರ್ಟ್: ಕಾಫ್ಕ ಎಂಡ್ ಮಾಡರ್ನ್ ಲಿಟರೇಚರ್ . ನ್ಯೂ ಯಾರ್ಕ್, ಬೇಸಿಕ್ ಬುಕ್ಸ್, 1968. ISBN 0-06-095339-X
- ಗಾರ್ಡಿಮರ್, ನಡೈನ್ (1984). ಸಂಥಿಂಗ್ ಔಟ್ ದೇರ್ ನಲ್ಲಿ "ಲೆಟರ್ ಫ್ರಂ ಹಿಸ್ ಫಾದರ್", ಲಂಡನ್, ಪೆಂಗ್ವಿನ್ ಬುಕ್ಸ್. ISBN 0-595-20284-5.
- ಹೇಮನ್, ರೊನಾಲ್ಡ್. ಕೆ, ಎ ಬಯಾಗ್ರಫಿ ಆಫ್ ಕಾಫ್ಕ . ಲಂಡನ್: ಫೀನಿಕ್ಸ್ ಪ್ರೆಸ್, 2001.ISBN 974-8496-78-3.
- ಜ್ಯಾನೌಚ್, ಗುಸ್ಟಾವ್. ಕಾನ್ವರ್ಸೇಷನ್ಸ್ ವಿತ್ ಕಾಫ್ಕ . ನ್ಯೂ ಯಾರ್ಕ್: ನ್ಯೂ ಡೈರೆಕ್ಷನ್ಸ್ ಬುಕ್ಸ್, ಎರಡನೆಯ ಆವೃತ್ತಿ 1971. (ಅನುವಾದಕರು ಗೊರೋನ್ವಿ ರೀಸ್.)ISBN 0-06-095339-X
- ಮರ್ರೇ, ನಿಕೋಲಸ್. ಕಾಫ್ಕ. ನ್ಯೂ ಹ್ಯಾವನ್: ಯೇಲ್, 2004.
- ಪವೆಲ್, ಅರ್ನ್ಸ್ಟ್. ದ ನೈಟ್ ಮೇರ್ ಆಫ್ ರೀಸನ್: ಎ ಲೈಫ್ ಆಫ್ ಫ್ರ್ಯಾನ್ಝ್ ಕಾಫ್ಕ. ನ್ಯೂ ಯಾರ್ಕ್: ವಿಂಟೇಜ್ ಬುಕ್ಸ್, 1985. ISBN 0-7922-7391-5.
- ಥಿಹರ್, ಅಲೆನ್ (ಸಂಪಾದಕ). ಫ್ರ್ಯಾನ್ಝ್ ಕಾಫ್ಕ: ಎ ಸ್ಟಡಿ ಆಫ್ ದ ಷಾರ್ಟ್ ಫಿಕ್ಷನ್ ( ಟ್ವೇಯ್ನ್ ರ ಸಣ್ಣ ಕಲ್ಪಿತ ಕಥೆಗಳ ಅಧ್ಯಯನ, ಸಂಖ್ಯೆ. 12). ISBN 0-471-80580-7.
- ಫಿಲಿಪ್ ಝಾರ್ಡ್: ಲಾ ಫಿಕ್ಷನ್ ಡಿ ಎಲ್'ಓಕ್ಸಿಡಂಟ್ : ಥಾಮಸ್ ಮ್ಯಾನ್ನ್, ಫ್ರ್ಯಾನ್ಝ್ ಕಾಫ್ಕ, ಆಲ್ಬರ್ಟ್ ಕೊಹೆನ್ , ಪ್ಯಾರಿಸ್, P.U.F., 1999.
- ಫಿಲಿಪ್ ಝಾರ್ಡ್ (ಸಂಪಾದಕ) : ಸಿಲ್ಲೇಜ್ ಡಿ ಕಾಫ್ಕ , ಪ್ಯಾರಿಸ್, ಲೆ ಮ್ಯಾನುಸ್ಕ್ರಿಪ್ಟ್, 2007, ISBN 2-7481-8610-9.
- ಝಿಯೋಲ್ಕೋವ್ಸ್ಕಿ, ಥಿಯೋಡೋರ್, ದ ಮಿರರ್ ಆಫ್ ಜಸ್ಟಿಸ್: ಲಿಟರರಿ ರಿಫ್ಲೆಕ್ಷನ್ಸ್ ಆಫ್ ಲೀಗಲ್ ಕ್ರೈಸಿಸ್. ಪ್ರಿನ್ಸ್ ಟನ್, ಪ್ರಿನ್ಸ್ ಟನ್ ವಿಶ್ವವಿದ್ಯಾಲಯ ಮುದ್ರಣಾಲಯ, 2003 (ಮೊದಲ ಆವೃತ್ತಿ 1997)
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about ಫ್ರ್ಯಾನ್ಝ್ ಕಾಫ್ಕ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- ಟೆಂಪ್ಲೇಟು:PND
- Works by Franz Kafka at Project Gutenberg
- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಕಾಫ್ಕ
- ಕಾಫ್ಕ-ಮೆಟಮಾರ್ಫಾಸಿಸ್ Archived 2012-11-20 ವೇಬ್ಯಾಕ್ ಮೆಷಿನ್ ನಲ್ಲಿ. ಕಾಫ್ಕ ಮತ್ತು ಅವರ ಕೃತಿಗಳಿಗೆ ಬದ್ಧವಾದ ಸಾರ್ವಜನಿಕ ವಿಕಿ
- ದ ಕಾಫ್ಕ ಪ್ರಾಜೆಕ್ಟ್ ಕಾಫ್ಕರ ಜರ್ಮನ್ ಭಾಷೆಯ ಎಲ್ಲಾ ಕೃತಿಗಳನ್ನೂ ಆನ್ ಲೈನ್ ಪ್ರಕಟಿಸುವ ಯೋಜನೆ
- ಎಂಡ್ ಆಫ್ ಕಾಫ್ಕಾಯಿಸ್ಕ್ ನೈಟ್ಮೇರ್: ಬರಹಗಾರರ ಪತ್ರಗಳು ಕಡೆಗೂ ಬೆಳಕನ್ನು ಕಂಡವು
- ಕಾಫ್ಕ ಸೊಸೈಟಿ ಆಫ್ ಅಮೆರಿಕ
- ಡ್ಯೂಟ್ಷೆ ಕಾಫ್ಕ-ಜೆಸೆಲ್ಷಾಫ್ಟ್
- ಸ್ಪೊಲೆಕ್ನಾಸ್ಟ್ ಫ್ರಾನ್ಝೆ ಕಾಫ್ಕಿ ಅ ನಕ್ಲಡಟೆಲ್ಸ್ ಟ್ವಿ ಫ್ರಾನ್ಝೆ ಕಾಫ್ಕಿ Archived 2017-06-30 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರೇಗ್ ನ ಫ್ರ್ಯಾನ್ಝ್ ಕಾಫ್ಕ ಸಂಘ ಮತ್ತು ಪ್ರಕಟಣಾ ಗೃಹ
- ಆಕ್ಸ್ ಫರ್ಡ್ ಕಾಫ್ಕ ರಿಸರ್ಚ್ ಸೆಂಟರ್ – ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕಾಫ್ಕ ಸಂಶೋಧನೆಯ ಬಗ್ಗೆ ಮಾಹಿತಿ
- ಜರ್ನೀಸ್ ಆಫ್ ಫ್ರ್ಯಾನ್ಝ್ ಕಾಫ್ಕ ಕಾಫ್ಕ ಇದ್ದ ಮತ್ತು ಕೆಲಸ ಮಾಡಿದ ಸ್ಥಳಗಳ ಚಿತ್ರಗಳು
- ಫೈಂಡಿಂಗ್ ಕಾಫ್ಕ ಇನ್ ಪ್ರೇಗ್ Archived 2012-08-21 ವೇಬ್ಯಾಕ್ ಮೆಷಿನ್ ನಲ್ಲಿ. ಇಂದಿನ ಪ್ರೇಗ್ ನಲ್ಲಿ ಕಾಫ್ಕರನ್ನು ಕಾಣುವ ಯತ್ನ
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with Spanish-language external links
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Articles with German-language external links
- CS1 errors: empty unknown parameters
- Pages using ISBN magic links
- Pages with unresolved properties
- Articles with hatnote templates targeting a nonexistent page
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNC identifiers
- Articles with BNE identifiers
- Articles with BNF identifiers
- Articles with BNFdata identifiers
- Articles with BNMM identifiers
- Articles with CANTICN identifiers
- Articles with GND identifiers
- Articles with ICCU identifiers
- Articles with J9U identifiers
- Articles with KANTO identifiers
- Articles with KBR identifiers
- Articles with LCCN identifiers
- Articles with Libris identifiers
- Articles with LNB identifiers
- Articles with NDL identifiers
- Articles with NKC identifiers
- Articles with NLA identifiers
- Articles with NLG identifiers
- Articles with NLK identifiers
- Articles with NLR identifiers
- Articles with NSK identifiers
- Articles with NTA identifiers
- Articles with PLWABN identifiers
- Articles with PortugalA identifiers
- Articles with VcBA identifiers
- Articles with CINII identifiers
- Articles with MusicBrainz identifiers
- Articles with RKDartists identifiers
- Articles with ULAN identifiers
- Articles with DTBIO identifiers
- Articles with Trove identifiers
- Articles with faulty RISM identifiers
- All articles with faulty authority control information
- Articles with SNAC-ID identifiers
- Articles with SUDOC identifiers
- Pages using authority control with parameters
- 1883ರಲ್ಲಿ ಜನಿಸಿದವರು
- 1924ರಲ್ಲಿ ಗತಿಸಿದವರು
- ಪ್ರೇಗ್ ನ ಜನಗಳು
- ಆಷ್ಕೆನಾಝಿ ಯಹೂದಿಗಳು
- ಆಸ್ಟ್ರಿಯಾದ ಕಾದಂಬರಿಕಾರರು
- ಚಾರ್ಲ್ಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ
- ಝೆಕಾಸ್ಲೋವಾಕಿಯಾ-ಆಸ್ಟ್ರಿಯಾದ ಯಹೂದಿಗಳು
- ಝೆಕಾಸ್ಲೋವಾಕಿಯಾದ ಕಾದಂಬರಿಕಾರರು
- ಕ್ಷಯದಿಂದ ಸಂಭವಿಸಿದ ಮರಣಗಳು
- ಫ್ಯಾಬುಲಿಸ್ಟ್ ಗಳು
- ಫ್ರ್ಯಾನ್ಝ್ ಕಾಫ್ಕ
- ಝೆಕ್ ಕ್ರಾಂತಿಕಾರರು
- ಝೆಕ್ ಸಮಾಜವಾದಿಗಳು
- ಝೆಕ್ ಡೈರಿ ಬರೆಯುವ ಜನಗಳು
- ಜರ್ಮನ್ ಭಾಷೆಯ ಲೇಖಕರು
- ಆಸ್ಟ್ರಿಯಾದಲ್ಲಿ ಸಂಭವಿಸಿದ ಸೋಂಕು ತಗುಲಿದ ರೋಗದಿಂದ ಸಂಭವಿಸಿದ ಮರಣಗಳು
- ಯಹೂದಿ ಕ್ರಾಂತಿಕಾರಿಗಳು
- ಯಹೂದಿ ಕಾದಂಬರಿಕಾರರು
- ಮಾಂತ್ರಿಕ ನೈಜತೆಯ ಬರಹಗಾರರು
- ಅಸ್ತಿತ್ವವಾದಿ ಯಹೂದಿಗಳು
- ಝೆಕ್-ಆಸ್ಟ್ರೋ-ಹಂಗೇರಿಯ ಜನಗಳು
- 20ನೆಯ ಶತಮಾನದ ಕಾದಂಬರಿಕಾರರು
- ಸಾಹಿತಿಗಳು