ಪುಂಡಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಭಾರತದ ತವರಿನ ಪುಂಡಿ,ರಷ್ಯಾ,ದಕ್ಷಿಣ ಆಫ್ರಿಕ,ಮಧ್ಯ ಮತ್ತು ಉತ್ತರ ಅಮೇರಿಕ,ಜಾವ,ಫಿಲಿಪೀನ್ಸ್,ಕೊರಿಯಾ,ಚೀನಾ ಮತ್ತು ಫಾರ್ಮೋಸಾಗಳಲ್ಲಿ ಸಾಗುವಳಿಯಲ್ಲಿದೆ[೧] .ಭಾರತದಲ್ಲಿ ಕರ್ನಾಟಕ,ಆಂಧ್ರ,ಮಹಾರಾಷ್ಟ್ರ,ಮಧ್ಯಪ್ರದೇಶ ಮತ್ತು ಬಿಹಾರಗಳಿಂದ ಹಿಡಿದು ಹಿಮಾಲಯದ ೩೦೦೦ ಅಡಿ ಎತ್ತರದವರೆಗೂ ವ್ಯಾಪಿಸಿದೆ.ಕರ್ನಾಟಕದ ಬೆಳಗಾವಿ,ಬಿಜಾಪುರ,ಧಾರವಾಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಾಗುವಳಿಯಲ್ಲಿದೆ.ಗೋಗು,ಪಿಂಡಿಸೊಪ್ಪು,ಪುಂಡಿ,ಪುಂತ್ರಿಕೆ ಇತರ ಹೆಸರುಗಳು.೧೦೦ ಗ್ರಾಂ.ಸೊಪ್ಪಿನ ಭಾಗದಲ್ಲಿ ಈ ಪೋಷಕಾಂಶಗಳಿವೆ:

ಪೋಷಕಾಂಶ[ಬದಲಾಯಿಸಿ]

ಪೋಷಕಾಂಶಗಳು ಪ್ರಮಾಣ
ಸಸಾರಜನಕ ೧.೭ ಗ್ರಾಂ.
ಕೊಬ್ಬು ೧.೧ ಗ್ರಾಂ.
ಖನಿಜಗಳು ೦.೩ ಗ್ರಾಂ.
ಶಕ್ತಿ ೫೬.
ಸುಣ್ಣ ೧೭೨ ಮಿ.ಗ್ರಾಂ.
ಕಬ್ಬಿಣ ೫.೦ ಮಿ.ಗ್ರಾಂ.
ಕ್ಯಾರೋಟಿನ್ ೪೮೩೦ ಐ.ಯು.
ರೈಬೋಫ್ಲೇವಿನ್ ೦.೨೧ ಮಿ.ಗ್ರಾಂ.
ಥೈಯಾಮಿನ್ ೦.೦೭ ಮಿ.ಗ್ರಾಂ.
'ಸಿ' ಜೀವಸತ್ವ ೨೦ ಮಿ.ಗ್ರಾಂ.

ಔಷಧೀಯ ಗುಣಗಳು[ಬದಲಾಯಿಸಿ]

ಈ ಸೊಪ್ಪು ಅಗ್ನಿ ಮಾಂದ್ಯವನ್ನು ನಿವಾರಣೆ ಮಾಡುತ್ತದೆ,ಆಹಾರದ ರುಚಿ ಹೆಚ್ಚಿಸುತ್ತದೆ ಮತ್ತು ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ.ಒಂದು ಚಮಚ ಹೂವಿನ ರಸಕ್ಕೆ ಸ್ವಲ್ಪ ಸಕ್ಕರೆ ಮತ್ತು ಕರಿಮೆಣಸಿನ ಪುಡಿ ಸೇರಿಸಿ ದಿನಕ್ಕೆ ೨ ಬಾರಿ ಕೊಡುವುದರಿಂದ ಪಿತ್ತದಿಂದ ಉಂಟಾದ ವಮನ(ವಾಕರಿಕೆ)ನಿವಾರಣೆಯಾಗುತ್ತದೆ.ಸೊಪ್ಪು ಮೃದು ವಿರೇಚಕವಾದ ಕಾರಣ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.ಎಲೆಗಳಿಂದ ಕಷಾಯ ತಯಾರಿಸಿ ತೆಗೆದುಕೊಂಡರೆ ಕೆಮ್ಮು ಗುಣವಾಗುತ್ತದೆ.ಬೀಜಗಳನ್ನು ಅರೆದು ನೋವಿರುವ ಜಾಗಕ್ಕೆ ಬೆಚ್ಚಗೆ ಲೇಪ ಮಾಡುವುದರಿಂದ ವೇದನೆ ಕಡಿಮೆ ಮಾಡುತ್ತದೆ.ಔಷಧಿಗಲ್ಲದೆ ಪುಂಡಿಯನ್ನು ನಾರು,ಹಗ್ಗ,ಗೋಣಿ ಚೇಲ,ನೆಲದ ತುಟ್ಟು,ಕುರ್ಚಿರಗ್ಗುಗಳಿಗೆ ಆಧಾರ ವಸ್ತುವಾಗಿಯೂ,ಕಾಗದ ತಯಾರಿಕೆಯಲ್ಲಿಯೂ ಬಳಸುವರು.[೨]

ತಿಂಡಿ ತಿನಿಸುಗಳು[ಬದಲಾಯಿಸಿ]

  1. ಪುಂಡಿಪಲ್ಯೆ
  2. ಪುಂಡಿ ಚಟ್ನಿ

ಉಲ್ಲೇಖ[ಬದಲಾಯಿಸಿ]

  1. ಸೊಪ್ಪು ತರಕಾರಿಗಳು,ಡಾ||ಎಲ್.ವಸಂತ,ನವಕರ್ನಾಟಕ ಪ್ರಕಾಶನ,೮ನೇ ಮುದ್ರಣ ೨೦೦೬,ಪುಟ ಸಂಖ್ಯೆ ೪೭
  2. http://kanaja.in/archives/45838
"https://kn.wikipedia.org/w/index.php?title=ಪುಂಡಿ&oldid=865986" ಇಂದ ಪಡೆಯಲ್ಪಟ್ಟಿದೆ