ವಿಷಯಕ್ಕೆ ಹೋಗು

ಆಸ್ಪತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದವಾಖಾನೆ ಇಂದ ಪುನರ್ನಿರ್ದೇಶಿತ)
ಪೂರ್ವ ಇಂಗ್ಲೆಂಡಿನ UKದಲ್ಲಿರುವ ದಿ ನಾರ್ ಫೊಲ್ಕ್ ಅಂಡ್ ನಾರ್ವಿಕ್ ಯುನ್ವರ್ಸಿಟಿ ಹಾಸ್ಪಿಟಲ್ ನ್ನು ಸಾರ್ವಜನಿಕ ಹಣಕಾಸಿನ ನೆರವಿನಿಂದ ಆರೋಗ್ಯ ರಕ್ಷಣಾ ವ್ಯವಸ್ಥೆ ಮಾಡಲಾಯಿತು.ಇದನ್ನು ನ್ಯಾಶನಲ್ ಹೆಲ್ತ್ ಸರ್ವಿಸ್
ಆಲ್ ಇಂಡಿಯಾ ಇನ್ಸ್ಟಿಟ್ಯು ಆಫ್ ಮೆಡಿಕಲ್ ಸೈನ್ಸ್ ಇನ್ ಡೆಲ್ಹಿ, ಇಂಡಿಯಾ

ಒಂದು ಆಸ್ಪತ್ರೆ ಎಂದರೆ ಇದೊಂದು ರೋಗಿಗಳಿಗೆ ಆರೋಗ್ಯ ರಕ್ಷಣೆ, ಗುಣಮಾಡುವ ಚಿಕಿತ್ಸೆ ಒದಗಿಸುವ ತಾಣವಾಗಿದೆ.ಇದಕ್ಕಾಗಿ ವಿಶೇಷ ವೈದ್ಯಕೀಯ ಸಿಬ್ಬಂದಿಯು ಮೇಲಿಂದ ಮೇಲೆ ರೋಗಿಗಳ ಸ್ಥಿತಿಗತಿಯನ್ನು ನಿಗಾವಹಿಸುತ್ತದೆ.ಬಹುಕಾಲದ ಕಾಯಿಲೆಗಳಿಗೆ ಅಲ್ಲಿಯೇ ಔಷಧೋಪಚಾರವನ್ನು ಒದಗಿಸುತ್ತದೆ. ಇಂದು ಆಸ್ಪತ್ರೆಗಳು ಬಹುತೇಕವಾಗಿ ಖಾಸಗಿಯವರಿಂದ ಹಣಕಾಸಿನ ನೆರವಿನಡಿಯಲ್ಲಿ ನಡೆಯುತ್ತಿವೆ,ಲಾಭಕ್ಕಾಗಿ ಇಲ್ಲವೆ ಲಾಭರಹಿತ ಆರೋಗ್ಯ ಸಂಘಟನೆಗಳ ಮೂಲಕ ಆರೋಗ್ಯ ವಿಮೆ ಕಂಪನಿಗಳು ಅಥವಾ ದತ್ತಿಸಂಸ್ಥೆಗಳು ಅಲ್ಲದೇ ನೇರವಾದ ದತ್ತಿ ನಿಧಿ ಕೊಡುಗೆಗಳಿಂದ ನಡೆಸಲ್ಪಡುತ್ತವೆ. ಇತಿಹಾಸದುದ್ದಕ್ಕೂ ಆಸ್ಪತ್ರೆಗಳನ್ನು ಧಾರ್ಮಿಕಸಂಸ್ಥೆಗಳು ಹಣಕಾಸು ನೀಡುವುದು ಅದರ ಸ್ಥಾಪನೆ ಮಾಡುವುದು ಮತ್ತುಅದನ್ನು ರಕ್ಷಿಸಿ ಸಾರ್ವಜನಿಕರಿಗೆ ಸೌಕರ್ಯಕ್ಕಾಗಿ ಅವರಲ್ಲದೇ ವ್ಯಕ್ತಿಗಳ ಸಹಾಯದ ಮೂಲಕ ನಡೆಸುತ್ತಾರೆ. ಆಧುನಿಕ ದಿನದ ಆಸ್ಪತ್ರೆಗಳು ಇಂದು ದೊಡ್ದ ಪ್ರಮಾಣದಲ್ಲಿ ವೃತ್ತಿಪರರು,ಶಸ್ತ್ರಚಿಕಿತ್ಸಕರು ಮತ್ತು ದಾದಿಗಳು ಇತ್ಯಾದಿ ಇರುತ್ತಾರೆ ಇಂದಿನ ದಿನಗಳಲ್ಲಿ ಧಾರ್ಮಿಕ ಸಂಘ ಸಂಸ್ಥೆಗಳು ದತ್ತಿ ನಿಧಿಗಳು ಮತ್ತು ಸ್ವಯಂ ಸೇವಕರ ಗುಂಪು ಆಸ್ಪತ್ರೆಯಂತಹ ಸಂಸ್ಥೆಗಳನ್ನು ಸ್ಥಾಪಿಸುತ್ತಾರೆ.

ಪದಮೂಲ

[ಬದಲಾಯಿಸಿ]

ಹಿಂದಿನ ಮದ್ಯ ಯುಗಗಳಲ್ಲಿ ಆಸ್ಪತ್ರೆಗಳು ಇನ್ನಿತರ ಸೇವೆಗಳನ್ನು ಒದಗಿಸುತ್ತಿದ್ದವು.ಬಡವರಿಗಾಗಿ ಭಿಕ್ಷಾಗೃಹಗಳು ಯಾತ್ರಿಕರಿಗಾಗಿ ವಸತಿಗಳು ಅಥವಾ ಆಸ್ಪತ್ರೆ ಶಾಲೆಗಳನ್ನು ತೆರೆಯುತ್ತಿದ್ದರು. ಈ ಶಬ್ದವು ಲ್ಯಾಟಿನ್ಹಾಸ್ಪೆಸ್ (ಆತಿಥೇಯ),ಹಾಸ್ಪೈಸಿಸ್ ಮುಂದೆ ಇದೇ ಹಾಸ್ಪಿಟಲ್ ಎಂಬ ಇಂಗ್ಲೀಷ್ ಶಬ್ದ ಬಳಕೆಗೆ ಬಂತು. ಹೊಟೆಲ್ ,ಹಾಸ್ಟೆಲ್ ,ಮತ್ತು ಹಾಸ್ಪಿಟ್ಯಾಲಿಟಿ (ಆತಿಥ್ಯ)ಇತ್ಯಾದಿಗಳು ಬಳಕೆಯಲ್ಲಿವೆ. ಆಧುನಿಕ ಯುಗದಲ್ಲಿ ಹೊಟೆಲ್ ಶಬ್ದವನ್ನು ಫ್ರೆಂಚ್ ಶಬ್ದ ಹಾಸ್ಟೆಲ , ಇದರಲ್ಲಿ ಶಾಂತತೆಯನ್ನು ಅದು ಧ್ವನಿಸುತ್ತದೆ.ಬರಬರುತ್ತಾ ಅದನ್ನು ಶಬ್ದದಿಂದ ತೆಗೆದು ಹಾಕಿ ಒಂದು ಗುರುತನ್ನು ಉಳಿಸಿಕೊಳ್ಳಲಾಯಿತು.ಇದು ಆಧುನಿಕ ಫ್ರೆಂಚ್ ಶಬ್ದ ಹೊಟೆಲ್ ನಲ್ಲಿ ಸ್ಥಿರವಾಯಿತು. ಈ ಶಬ್ದವು ಜರ್ಮನಿಯ ಶಬ್ದ 'ಸ್ಪೈಟಲ್ 'ಎಂಬುದಕ್ಕೊ ಸಂಬಂಧ ಹೊಂದಿದೆ. ಈ ಶಬ್ದದ ವ್ಯಾಕರಣವು ಸಂಭಾಷಣೆಯನ್ನು ಅನುಸರಿಸಿ ಸ್ವಲ್ಪಮಟ್ಟಿಗೆ ವ್ಯತ್ಯಾಸಗೊಳ್ಳುತ್ತದೆ. U.S.,ನ ಆಸ್ಪತ್ರೆ ಶಬ್ದದಲ್ಲಿ ಒಂದು ಉಪಪದ ಅಥವಾ ಗುಣವಾಚಕವಿದ್ದರೆ,ಆದರೆ ಬ್ರಿಟೇನ್ ಮತ್ತು ಉಳಿದೆಡೆಗಳಲ್ಲಿ ಆ ಶಬ್ದವನ್ನು ಯಾವುದೇ ಗುಣವಾಚಕವಿಲ್ಲದೇ ಬಳಸುತ್ತಾರೆ.ಇದನ್ನುರೋಗಿ ಎಂದು ಬಳಸುವಾಗ ಉಪಸರ್ಗದ ಶಬ್ದವನ್ನಾಗಿಯೂ ಉಪಯೋಗಿಸುತ್ತಾರೆ.("in/to the hospital" vs. "in/to hospital");ಆದರೆ ಕೆನಡಾದಲ್ಲಿ ಎರಡೂ ತೆರನಾಗಿ ಬಾಕೆಯಾಗುತ್ತದೆ.

ಪ್ರಕಾರಗಳು

[ಬದಲಾಯಿಸಿ]

ಕೆಲವು ರೋಗಿಗಳು ಕೇವಲ ರೋಗ ತಪಾಸಣೆಗಾಗಿ ಆಸ್ಪತ್ರೆಗೆ ಹೋಗುತ್ತಾರೆ.ಚಿಕಿತ್ಸೆ,ಅಥವಾ ಕಾಯಿಲೆ ಉಪಚಾರ ಮತ್ತು ಅದಾದ ನಂತರ ಅವರು ಒಂದು ರಾತ್ರಿಯ ನವಧಿಗೂ ಅಲ್ಲಿಮ್ ಉಳಿಯದೇ ವಾಪಸಾಗುತ್ತಾರೆ.('ಇವರು ಹೊರರೋಗಿಗಳು)ಇನ್ನುಳಿದವರು ಚ್ಕಿತ್ಸೆಗಾಗಿ ಒಂದು ರಾತ್ರಿ ಇಲ್ಲವೆ ವಾರ-ತಿಂಗಳುಗಟ್ಟಲೆ ಅಲ್ಲಿರುವವರನ್ನು ('ಒಳರೋಗಿಗಳು')ಎನ್ನುತ್ತಾರೆ. ಆಸ್ಪತ್ರೆಗಳು ಬೇರೆ ಬೇರೆ ರೀತಿಯ ಸೌಕರ್ಯಗಳನ್ನು ಪರಿಗಣಿಸಿ ಗುರುತಿಸಲ್ಪಡುತ್ತವೆ.ಅವುಗಳ ರೋಗಿಗಳ ಪ್ರವೇಶ ಮಾಡುವ ಸಾಮರ್ಥ್ಯ,ಅಲ್ಲಿನ ವೈದ್ಯಕೀಯ ಸೌಕರ್ಯಗಳುಮತ್ತು ರೋಗಿಗಳ ಕಾಳಜಿ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತದೆ.ಕೆಲವನ್ನು ಅಥವಾ ಕನಿಷ್ಟ ಸೌಕರ್ಯ ಹೊಂದಿದವುಗಳನ್ನು ಕ್ಲಿನಿಕ್ ಗಳೆಂದು ಗುರುತಿಸಬಹುದು.

ಸಾಮಾನ್ಯ

[ಬದಲಾಯಿಸಿ]

ಬಹಳಷ್ತು ಗುರುತಿಸಲ್ಪಡುವ ಆಸ್ಪತ್ರೆ ಎಂದರೆ ಜನರಲ್ ಆಸ್ಪತ್ರೆ,ಇದು ಹಲವಾರು ರೀತಿಯ ಕಾಯಿಲೆ ಮತ್ತು ಗಾಯಗಳಿಗೆ ಚಿಕಿತ್ಸೆ ಒದಗಿಸುತ್ತದೆ.ಅದೇ ತೆರನಾಗಿ ತುರ್ತು ಆರೋಗ್ಯ ಸೇವಾ ಸೌಲಭ್ಯ ಒದಗಿಸಲು ತುರ್ತು ವಿಭಾಗವನ್ನು ಹಠಾತ್ ಆರೋಗ್ಯ ಸಂಬಂಧಿತ ಅಪಾಯಗಳಿಗೆ ಸೇವೆ ಒದಗಿಸುತ್ತದೆ. ಜನರಲ್ ಆಸ್ಪತ್ರೆ ಅಥವಾ ಸಾಮಾನ್ಯವಾಗಿ ದೊಡ್ಡಾಸ್ಪತ್ರೆಯಲ್ಲಿ ದೊಡ್ಡ ರೋಗಗಳಿಗೆ ಎಲ್ಲಾ ತೆರನಾದ ಸೌಲಭ್ಯವನ್ನು ಒದಗಿಸಲಾಗುತ್ತದೆ,ಅದು ಆ ಪ್ರದೇಶದಲ್ಲಿ ಎಲ್ಲಾ ವೈದ್ಯಕೀಯ ಸೌಕರ್ಯಗಳೊಂದಿಗೆ ಹಾಸಿಗೆಯುಳ್ಳ ಆಸ್ಪತ್ರೆ ಎನಿಸಿರುತ್ತದೆ.ತೀವ್ರ ನಿಗಾ ಘಟಕ,ಸುದೀರ್ಘ ಕಾಲದ ಶುಶ್ರೂಷೆ;ಮತ್ತು ಶಸ್ತ್ರಚಿಕಿತ್ಸೆಗಾಗಿ ವಿಶೇಷ ಅನುಕೂಲಗಳು,ಪ್ಲಾಸ್ಟಿಕ್ ಸರ್ಜರಿ,ಹೆರಿಗೆ,ರೋಗನಿದಾನ ತಪಾಸಣಾ ಪ್ರಯೋಗಾಲಯಗಳು ಇತ್ಯಾದಿಗಳು ಇರುತ್ತವೆ. ದೊಡ್ಡ ನಗರಗಳಲ್ಲಿ ವಿಭಿನ್ನ ರೀತಿಯ ಆಸ್ಪತ್ರೆಗಳು ಆಯಾ ಪರಿಸರಕ್ಕೆ ತಕ್ಕಂತೆ ಗಾತ್ರ ಸೌಲಭ್ಯ ಹೊಂದಿರುತ್ತವೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೆಲವು ಆಸ್ಪತ್ರೆಗಳು ತಮ್ಮದೇ ಆದ ಅಂಬ್ಯುಲನ್ಸ್ ಸೇವೆಗಳನ್ನು ಹೊಂದಿವೆ.

ವಿಶೇಷತೆ

[ಬದಲಾಯಿಸಿ]
ಚಿತ್ರ:McMasterUMedical.JPG
ಕೆನಡಾದಲ್ಲಿನ ಟೀಚಿಂಗ್ ಹಾಸ್ಪಿಟಲ್

ವಿಶೇಷ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗಳಲ್ಲಿ ಅಪಘಾತ ಚಿಕಿತ್ಸಾ ಕೇಂದ್ರಗಳು,ಮರುವಸತಿ ಆಸ್ಪತ್ರೆಗಳು,ಮಕ್ಕಳ ಆಸ್ಪತ್ರೆಗಳು,ಹಿರಿಯರಿಗಾಗಿ,ವೃದ್ಧರಿಗಾಗಿರುವ ಆಸ್ಪತ್ರೆಗಳು,ಇನ್ನುಳಿದ ವಿಶಿಷ್ಟ ಕಾಯಿಲೆಗಳಿಗಾಗಿ ಮೀಸಲಾದ ಆಸ್ಪತ್ರೆಗಳು,ಉದಾಹರಣೆಗೆ ಮಾನಸಿಕ ಸಮಸ್ಯೆಗಳಿಗಾಗಿ ಚಿಕಿತ್ಸಾ ಕೇಂದ್ರ,ಅಲ್ಲದೇ ವಿಭಿನ್ನ ರೋಗಗಳಿಗೆ ಮಾನಸಿಕ ರೋಗ ತಪಾಸಣಾ ಆಸ್ಪತ್ರೆಗಳು ಮೀಸಲಾಗಿರುತ್ತವೆ. ಒಂದು ಆಸ್ಪತ್ರೆ ಒಂದೇ ಕಟ್ತಡವನ್ನು ಹೊಂದಿರಬಹುದು ಇಲ್ಲವೇ ಕ್ಯಾಂಪಸ್ ನಲ್ಲಿರುವ ವಿವಿಧ ಕಟ್ಟಡಗಳಲ್ಲಿಆಸ್ಪತ್ರೆಯ ವಿಭಾಗಗಳು ಪ್ರತ್ಯೇಕವಾಗಿರಬಹುದು. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಒಂದೇ ಕಟ್ಟಡದಲ್ಲಿ ಆರಂಭಗೊಂಡವುಗಳು ಇಂದು ವಿಶಾಲವಾಗಿ ಬೆಳೆದು ಆಸ್ಪತ್ರೆಯ ಕ್ಯಾಂಪಸ್ ಗಳೆನಿಸಿಕೊಂಡಿವೆ. ಕೆಲವು ಆಸ್ಪತ್ರೆಗಳು ತಮ್ಮ ವೈದ್ಯಕೀಯ ಸಂಶೋಧನಾ ವಿಷಯಗಳಿಗಾಗಿ ವಿಶ್ವವಿದ್ಯಾಲಯಗಳ ಅಂಗೀಕೃತ ಅಂಗಶಾಖೆಯ ವ್ಯಾಪ್ತಿಗೆ ಸೇರ್ಪಡೆಯಾಗಿ ತಮ್ಮ ಸೇವೆ ಸಲ್ಲ್ಸುತ್ತಿವೆ.ವೈದ್ಯಕೀಯ ಸಿಬ್ಬಂದಿ,ದಾದಿಯರು,ಪರಿಣತರು,ಇತ್ಯಾದಿಯವರಿಗೆ ಶಿಕ್ಷಣ ನೀಡುವ ಟೀಚಿಂಗ್ ಹಾಸ್ಪಿಟಲ್ ಎಂದೇ ಹೆಅಸ್ರು ಮಾಡಿವೆ. ವಿಶ್ವಾದ್ಯಾಂತ ಹಲವಾರು ಆಸ್ಪತ್ರೆಗಳು ಸರ್ಕಾರಗಳು ಮತ್ತು ದತ್ತಿಸಂಸ್ಥೆಗಳ ಮೂಲಕ ಲಾಭದ ಉದ್ದೇಶವಿಲ್ಲದೇ ನಡೆಸುತ್ತವೆ. ಯುನೈಟೆಡ್ ಸ್ಟೇಟ್ಸ್ ನಲ್ಲಿನ ಬಹುತೇಕ ಆಸ್ಪತ್ರೆಗಳನ್ನು ಲಾಭರಹಿತ ಯೋಜನೆಯಾಗಿ [ಸೂಕ್ತ ಉಲ್ಲೇಖನ ಬೇಕು]ನಡೆಸುತ್ತಾರೆ.

ಶಿಕ್ಷಣ

[ಬದಲಾಯಿಸಿ]

ಕಲಿಕೆಯ ಅಥವಾ ಟೀಚಿಂಗ್ ಹಾಸ್ಪಿಟಲ್ ಯಾವಾಗಲೂ ರೋಗಿಗಳು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಈ ಆಸ್ಪತ್ರೆಯನ್ನು ಕಲಿಕೆಯ ತಾಣವನ್ನಾಗಿ ಮಾದಿಕೊಂಡಿರುತ್ತಾರೆ

ಚಿಕಿತ್ಸಾಲಯಗಳು

[ಬದಲಾಯಿಸಿ]

ಸಣ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯಗಳಿರುವ ತಾಣವನ್ನು ಚಿಕಿತ್ಸಾಲಯಗಳೆನ್ನುತ್ತಾರೆ.ಇಂತಹವುಗಳು ಸರ್ಕಾರದ ಪ್ರತಿನಿಧಿತ್ವ ಅಥವಾ ಖಾಸಗಿಪಾಲುದಾರಿಕೆಯಲ್ಲಿ ನಡೆಯುತ್ತವೆ.ಹಲವಾರು ವೈದ್ಯರುಗಳು ಖಾಸಗಿಯಾಗಿ ಹೊರಭಾಗದಿಂದ ವೃತ್ತಿನ್ನಡೆಸುತ್ತಿದ್ದಾರೆ.(ಖಾಸಗಿ ವೃತ್ತಿಪರತೆಯನ್ನು ಹಲವಾರು ದೇಶಗಳಲ್ಲಿ ಪರವಾನಿಗೆ ನೀಡಿದ್ದಾರೆ.) ಸಾಮಾನ್ಯವಾಗಿ ಚಿಕಿತ್ಸಾಲಯಗಳುಹೊರರೋಗಿಗಳಿಗೆ ಮಾತ್ರ ಸೇವೆ ಒದಗಿಸುತ್ತವೆ,

ವಿಭಾಗಗಳು

[ಬದಲಾಯಿಸಿ]
ಅಪಘಾತ ಮತ್ತು ಅನಾಹುತಗಳನ್ನು ಉಪಚರಿಸಲು ಹಾಸಿಗೆಯಿರುವ ಕೊಠಡಿಗಳು,ಅತ್ಯಾಧುನಿಕ ಸಲಕರಣೆಗಳು ತಂತ್ರಜ್ಞಾನಗಳು.

ಆಸ್ಪತ್ರೆಗಳು ಬಹುತೇಕವಾಗಿ ತಾವು ಒದಗಿಸುವ ವೈದ್ಯಕೀಯ ಸೇವೆಗಳ ಮೇಲೆ ವಿವಿಧ ವಿಭಾಗಗಳನ್ನು ಒಳಗೊಂಡಿರುತ್ತವೆ. ಅವುಗಳು ತೀವ್ರವಾದ ನಿಗಾಘಟಕಗಳನ್ನು ಮತ್ತು ತುರ್ತು ವಿಭಾಗಗಳನ್ನು ಒಳಗೊಂಡಿರುತ್ತದೆ.ಉದಾಹರಣೆಗೆ ತುರ್ತು ಚಿಕಿತ್ಸಾ ವಿಭಾಗ ಅಥವಾ ವಿಶೇಷ ಅಪಘಾತದ ಕೇಂದ್ರ,ಸುಟ್ಟಪ್ರಕರಣಗಳ ಘಟಕ,ಶಸ್ತ್ರಚಿಕಿತ್ಸೆ,ಅಥವಾ ಜರೂರ ಕಾಳಜಿ. ಇದರಲ್ಲಿ ವಿವಿಧ ವಿಭಾಗದ ವಿಶೇಷತಜ್ಞರ ಗುಂಪು ಇರುತ್ತದೆ.ಉದಾಹರಣೆಗೆಹೃದ್ಯೋಗ ವಿಭಾಗ,[[ಕೊರನೊರಿ(ಹೃದಯದ)

ಘಟಕ]],ತೀವ್ರ ನಿಗಾ ಘಟಕ,ನರರೋಗದ ವಿಭಾಗ, ಕ್ಯಾನ್ಸರ್ ಕೇಂದ್ರ,ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಇತ್ಯಾದಿ.

.ಕೆಲವು ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗಗಳಿವರುತ್ತದೆ.ಇನ್ನು ಕೆಲವಡೆ ಹಳೆಯ ರೋಗಗಳಿಗೆ ವಿವಿಧ ವಿಭಾಗಗಳಿರುತ್ತವೆ.ಉದಾಹರಣೆಗೆ ನಡವಳಿಕೆಯ ಆರೋಗ್ಯ ಸೇವೆಗಳು,ದಂತರೋಗವಿಭಾಗ,ಚರ್ಮರೋಗದ ವಿಭಾಗ,ಮಾನಸಿಕ ಕಾಯಿಲೆಗಳ ವಿಭಾಗ,ಪುನರ್ವಸತಿ ಸೇವಾ ಕೇಂದ್ರಗಳು ಮತ್ತು ದೈಹಿಕ ಕಾಯಿಲೆಗಳ ಚಿಕಿತ್ಸಾ ವಿಭಾಗ. ವೈದ್ಯಕೀಯ ಸೇವೆಗಳಿಗೆ ಪೂರಕವಾಗಿರುವ ಸೇವೆಗಳು;ಔಷಧಾಲಯ ಅಥವಾ ಔಷಧಿ ದೊರೆಯುವ ಸ್ಥಳ,ರೋಗ ಪತ್ತೆ ವಿಭಾಗ ಮತ್ತು ವಿಕಿರಣ ವಿಭಾಗ ಮತ್ತು ವೈದ್ಯಕೀಯೇತರ ಅಂದರೆವೈದ್ಯಕೀಯ ದಾಖಲೆಗಳ ವಿಭಾಗಗಳು ಮತ್ತು/ಅಥವಾರೋಗಿಗಳ ಬಿದುಗಡೆ ಕುರಿತ ವಿವರಗಳ ವಿಭಾಗ.

ಇತಿಹಾಸ

[ಬದಲಾಯಿಸಿ]

ಆರಂಭಿಕ ಉದಾಹರಣೆಗಳು

[ಬದಲಾಯಿಸಿ]
ಅಸ್ಕೆಪಿಯನ್ ಕೊಸ್ ಅತ್ಯಂತ ಕಾಳಜಿಯಿಂದ ರಕ್ಷಿಸಿದ್ದು.
ಸುಮಾರು 1682 ರಲ್ಲಿ ವೈದ್ಯರೊಬ್ಬರು ಜರ್ಮನಿಯಲ್ಲಿ ರೋಗಿಯೊಬ್ಬನನ್ನು ಭೇಟಿಯಾದದ್ದು.

ಪ್ರಾಚೀನ ಕಾಲದಲ್ಲಿ ಧಾರ್ಮಿಕ ಮತ್ತು ವೈದ್ಯಕೀಯ ಕ್ಷೇತ್ರಗಳು ಒಂದೊಕ್ಕೊಂದು ಜೊತೆಯಾಗಿದ್ದವು. ಆರಂಭಿಕ ಧಾರ್ಮಿಕ ಕೇಂದ್ರಗಳಾದ ಈಜಿಪ್ಟಿನ ದೇವಾಲಯಗಳು ಆಗ ರೋಗ ವಾಸಿ ಮಾಡುವ ತಾಣಗಳಾಗಿದ್ದವು. ಪ್ರಾಚೀನ ಗ್ರೀಸ್ ದೇವಾಲಯಗಳು ಗುಣಮುಖಗೊಳಿಸುವ ದೇವರು ಎನ್ನಲಾದ ಎಸ್ಕ್ಲೆಪ್ಯಸ್ ಅಲ್ಲಿ ಅದನ್ನು ಎಸ್ಕ್ಲೆಪಿಯಾ ಹಾಡು ಎಂದು Greek: Ασκληπιεία ಹೇಳಲಾಗುತಿತ್ತು. }ಎಸ್ಕ್ಲೆಪಿಯಿಯೊನ್ Ασκληπιείον ),ಗಳು ವೈದ್ಯಕೀಯ ಸಲಹೆ,ತಪಾಸಣೆ ಮತ್ತು ವಾಸಿ ಮಾಡುವ [] ಸ್ಥಳಗಳೆನಿಸಿದ್ದವು. ಇಂತಹ ದೇವಾಲಯಗಳ ಆವರಣಗಳಲ್ಲಿ ಪ್ರವೇಶಿಸಿದ ರೋಗಿಗಳು ಯಾವದೋ ಒಂದು ಕನಸಿನ ಸಾಮ್ರಾಜ್ಯಕ್ಕೆ ಕಾಲಿಟ್ಟು"Greek: ενκοίμησις ಎಂಕಿಯಿಮೆಸಿಸ್ "ಎಂಬ ವಿಚಿತ್ರ ಅನುಭವಕ್ಕೆ ತುತ್ತಾಗುತ್ತಿದ್ದರು.ಆದರೆ ಇದು ಅರಿವಳಿಕೆಯಂತಹದ್ದಲ್ಲ.ಇದರಲ್ಲಿ ಅವರು ದೇವಾಲಯದಲ್ಲಿನ ದೇವರಿಂದ ತಮ್ಮ ಕನಸಿನಲ್ಲಿ ಸಲಹೆ ಅಥವಾ ಶಸ್ತ್ರಕ್ರಿಯೆಯಂತಹ ಘಟನೆಗಳಿಗೆ [] ತೆರೆದುಕೊಳ್ಳುತ್ತಿದ್ದರು. ಎಸ್ಕ್ಲೆಪಿಯಾವು ಒಂದು ಕಾಳಜಿಪೂರ್ವಕ ನಿಯಂತ್ರಿತ ಸ್ಥಿತಿಯಾಗಿದ್ದು ಅದು ರೋಗಿಗಳ ರೋಗದ ವಾಸಿಗೆ ಅನುಕೂಲಕರವೆನಿಸುತ್ತದೆ.ಈ ಸಂಸ್ಥೆಗಳು ವಾಸಿಮಾಡುವ ಕೇಂದ್ರಗಳನ್ನು ಯಾವಾಗಲೂ [] ತೆರೆದಿಡುತ್ತಿದ್ದರು. ಎಸ್ಕ್ಲೆಪಿಯಾನ್ ನ ಎಪಿಡಾರಸಸ್ ಒಟ್ಟು ಮೂರು ದಾಖಲೆಗಳನ್ನು ಇಂದಿಗೂ ಅಂದರೆ350 BCನಲ್ಲಿ ರೋಗಿಗಳ ಎಲ್ಲಾ ಪ್ರಕಾರದ ದಾಖಲೆಗಳು ದೊರೆಯುತ್ತವೆ.ಆಗ ಸುಮಾರು 70 ರೋಗಿಗಳು ಅಲ್ಲಿಗೆ ಬಂದ ಬಗ್ಗೆ ಅವರ ಕಾಯಿಲೆ ಬಗೆಗಿನ ದೂರು,ಅವರಿಗಾದ ಗುಣಮುಖ ಇತ್ಯಾದಿ ಬಗ್ಗೆ ದಾಖಲಿಸಲಾಗಿದೆ.[] ಇದರಲ್ಲಿ ಕೆಲವು ಶಸ್ತ್ರಚಿಕಿತ್ಸೆಗಳೂ ವಾಸಿಯಾದ ಕುರಿತ ಉಲ್ಲೇಖವಿದೆ.ಉದಾಹರಣೆಗೆ ಹೊಟ್ಟೆ ಕುಯ್ದ,ಹೊರಭಾಗದ ಶಸ್ತ್ರಚಿಕಿತ್ಸೆಯಿಂದ ಅನವಶ್ಯಕ ವಸ್ತುಗಳನ್ನು ತೆಗೆದು ಹಾಕಿದ್ದು ಅತನಿಗೆ ಈ ಸಂದರ್ಭದಲ್ಲಿ ಆಫೀಮ್ ನಂತಹ ವಸ್ತುಗಳನ್ನು ನೀಡಿದ್ದ ಬಗ್ಗೆ [] ವಿವರಗಳಿವೆ. ರೊಮನ್ ರು ಎಸ್ಕ್ಲೆಪಿಯಸ್ ದೇವತೆಯನ್ನು ಪೂಜಿಸುತ್ತಿದ್ದರು.[] ಎಸ್ಕ್ಲೆಪಿಯಸ್ ಎಂಬ ರಒಮನ್ ಹೆಸರಿನೊಂದಿಗೆ (291 BC)ನಲ್ಲಿ ದ್ವೀಪವಾಗಿದ್ದ ಟೈಬರ್ ನಲ್ಲಿ ದೇವಾಲಯವೊಂದಿತ್ತು,ಅಲ್ಲಿಯೇ ಹಲವಾರು ಕ್ರಿಯಾವಿಧಿಗಳನ್ನು [] ನಡೆಸಲಾಗುತಿತ್ತು. ಮಹಾವಂಸ ಎಂಬ ಉಲ್ಲೇಖದ ಪ್ರಕಾರ ಪ್ರಾಚೀನ ಸಿಂಹಳಿಯ ರಾಜಮನೆತನದವರು ಆರನೆಯ ಶತಮಾನದಲ್ಲಿ ರಾಜನಾಗಿದ್ದ ಪಾಂಡುಕಭಯಾ(ನಾಲ್ಕನೆಯ ಶತಮಾನದB.C.)ಆತ ತನ್ನ ಮನೆ ಹಾಗು ಆಸ್ಪತ್ರೆ (ಸಿವಿಕಾಸೊಟ್ಟಿಹಿ-ಸಾಲಾ)ಗಳನ್ನು ರೋಗಿಗಳಿಗಾಗಿ ನಿರ್ಮಿಸಿ ವಾಸಿ ಮಾಡಲು ನೆರವಾಗಿದ್ದಾನೆ. ಇದು ಅತ್ಯಂತ ಆರ್ಕಂಭಿಕ ದಾಖಲೆ ಎಂದು ಹೇಳಬಹುದು ಯಾಕೆಂದರೆ [] ವಿಶ್ವದಲ್ಲೇ ರೋಗಿಗಳ ಆರೈಕೆ ಆವಾಗಲೇ ಶುರುವಾಗಿ ಹಲವಾರು ವೈದ್ಯಕೀಯ ಸೇವೆಗಳಿಗಾಗಿ ಹುಟ್ಟಿಕೊಂಡ ಸಂಸ್ಥೆಗಳು ಹೆಸರು [] ಮಾಡಿದವು. ಮಿಹಿಂತೇಲ್ ಆಸ್ಪತ್ರೆಯು ವಿಶ್ವದಲ್ಲೇ ಅತಿ ಪ್ರಾಚೀನ [] ಆಸ್ಪತ್ರೆಯಾಗಿದೆ. ಶ್ರೀಲಂಕಾದ ಪ್ರಾಚೀನ ಪಳೆಯುಳಿಕೆ ಮತ್ತು ಪಾಳು ಬಿದ್ದ ಸ್ಥಳಗಳನ್ನು ವೀಕ್ಷಿಸಿದಾಗ ಮಿಹಿಂತಾಲ್ ಮತ್ತು ಅನುರಾಧಪುರಗಳಲ್ಲಿ ಅವುಗಳ ಅಸ್ತಿತ್ವದ ಕುರುಹು ಇನ್ನೂ [] ಕಾಣುತ್ತದೆ. ಆರಂಭಿಕ ಭಾರತದಲ್ಲೂ ಸಹ ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡುವ ಸಂಸ್ಥೆಗಳು ಸಿಗುತ್ತವೆ. ಅರಸನಾಗಿದ್ದ ಅಶೋಕ ಕನಿಷ್ಟಪಕ್ಷ ಹದಿನೆಂತು ಆಸ್ಪತ್ರೆಗಳನ್ನು ಕಾಟ್ಟಿಸಿದ್ದನೆಂದು ಹೇಳಲಾಗಿದೆ. ಸುಮಾರು230 B.C.,ನಲ್ಲಿ ವೈದ್ಯರ ಮತ್ತು ಶುಶ್ರೂಶಕರ ವೆಚ್ಚವನ್ನು ರಾಜನ ಖಜಾನೆಯಿಂದಲೇ [೧೦] ಭರಿಸಲಾಗುತಿತ್ತು. ಸ್ಟೇನ್ಲಿ ಫಿಂಗರ್ (2001)ರಲ್ಲಿ ತನ್ನ ಪುಸ್ತಕ ಒರಿಜಿನ್ಸ್ ಆಫ್ ನ್ಯುರೊಸೈನ್ಸ್ :ಮೆದುಳಿನ ಕಾರ್ಯಚಟುವಟಿಕೆಗಳ ಬಗ್ಗೆ ಇತಿಹಾಸ ಮತ್ತುಅದರ ವಿವರಗಳನ್ನು ದಾಖಲಿಸಿದ್ದಾನೆ.ಅಶೋಕ ಎಡಿಕ್ಟ್ ನ್ನು "ಎವರಿವೇರ್ ಕಿಂಗ್ ಪ್ರಿಯದರ್ಶಿ (ಅಶೋಕ)ಎಂಬ ಹೆಸರಿನಿಂದ ಬರೆಯಲಾಗಿದ್ದು,ಆ ಕಾಲದಲ್ಲಿ ಅಶೋಕನು ಮನುಷ್ಯರಿಗಾಗಿ ಮತ್ತು ಪ್ರಾಣಿ-ಪಶುಗಳಿಗಾಗಿ ಎರದು ಪ್ರಕಾರದ್ ಆಸ್ಪತ್ರೆಗಳನ್ನು ತೆರೆದಿದ್ದನು. ಎಲ್ಲಿ ಔಶಧಿ ಸಸ್ಯಗಳಿಲ್ಲವೋ ಆ ಜಾಗೆಯಲ್ಲಿ ಬೇರೆ ಸ್ಥಳದಿಂದ ಗಿಡಮೂಲಿಕೆಗಳನ್ನು ತರಿಸಿ ಬೆಳೆಸಲು [೧೧] ಆದೇಶಿಸುತ್ತಿದ್ದ. [[}ಯುನ್ವರ್ಸಿಟಿ ಕಾಲೇಜ್ ಲಂಡನ್]] ನ ಡೊಮ್ನಿಕ್ ವೆಜೆಸ್ಟಿಕ್ , ಈ ಪುಸ್ತಕದಲ್ಲಿನ ವಿಷಯಗಳನ್ನು ಒಪ್ಪಿಕೊಳ್ಳುವುದಿಲ್ಲ.ಅಶೋಕ ಕೇವಲ ವಿಶ್ರಾಂತಿ ಗೃಹಗಳನ್ನು ಮಾತ್ರ ನಿರ್ಮಿಸಿದ್ದಾನೆ.ಆತ ಗಿದಮೂಲಿಕೆಗಳ ಬಗ್ಗೆ ಮಾತಾಡಿದ್ದನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಆತ [೧೨] ಹೇಳಿದ್ದಾರೆ. ಆದರೆ ಪರ್ಸಿಯನ್ ಸಾಮ್ರಾಜ್ಯದಲ್ಲಿ ಮೊದಲ ಬಾರಿಗೆ ಕಲಿಕಾ ಆಸ್ಪತ್ರೆ ಅಥವಾ ಟೀಚಿಂಗ್ ಹಾಸ್ಪಿಟಲ್ಸ್ ಎಂಬುದು ಅಸ್ತಿತ್ವಕ್ಕೆ ಬಂದಿದ್ದು,ಅಲ್ಲಿ ರೋಗಿಗಳು ಮತ್ತು ವೈದ್ಯರು ವಿದ್ಯಾರ್ಥಿಗಳಿಗೆ ವೈದ್ಯಕೀಯ ವೃತ್ತಿಯನ್ನು ಕಲಿಸುತ್ತಿದ್ದರು.ಅದು ಅಕಾಡೆಮಿ ಅಫ್ ಗುಂಡಿಶಪುರ್ ಎಂಬಲ್ಲಿ ಪರ್ಸಿಯನ್ ರ ಕಲ್ಪಾನೆಯಾಗಿತ್ತು. ಒಬ್ಬ ಪರಿಣತರ ಪ್ರಕಾರ "ಇಡೀ ಆಸ್ಪತ್ರೆಯ ಪರಿಕಲ್ಪನೆಯು ಮೊಟ್ಟ ಮೊದಲ ಬಾರಿಗೆ ಬಹಳಷ್ಟು ಕೊಡುಗೆ ನೀಡಿದ್ದೆಂದರೆ ಪರ್ಸಿಯಾವೇ ಕಾರಣ" [೧೩] ಎಂದಿದ್ದಾರೆ.

ರೊಮನ್ ಸಾಮ್ರಾಜ್ಯ

[ಬದಲಾಯಿಸಿ]

ರೊಮನ್ ರು ಆಶ್ರಯ ತಾಣ ಗಳನ್ನು ನಿರ್ಮಿಸಿ ಅಲ್ಲಿ ರೋಗಗ್ರಸ್ತ ಗುಲಾಮರು,ಪರಿಚಾರಕರು ಮತ್ತು ಸೈನಿಕರಿಗಾಗಿ ಸುಮಾರು100 B.C.,ಹೊತ್ತಿಗೆ ಹಲವಾರು ಶುಶ್ರೂತಾ ಕೇಂದ್ರಗಳನ್ನಿಟ್ಟಿದ್ದರು.ನಂತರದ ಪ್ರಾಚ್ಯ ಇಲಾಖೆಯು ಇದನ್ನು ಪತ್ತೆ ಹಚ್ಚಿತು. ಇವುಗಳ ಅಸ್ತಿತ್ವದ ಬಗ್ಗೆ ಇನ್ನುನ್ ಕೆಲವರು ಸಂಶಯ ವ್ಯಕ್ತಪಡಿಸುತ್ತಾರೆ'ಈ ಸಂಸ್ಥೆಗಳು ಎಲ್ಲೆಡೆಗೂ ಇದ್ದವಾ ಎಂಬುದು ಗೊತ್ತಾಗುವದಿಲ್ಲ,ಯಾಕೆಂದರೆ ಯಾವುದೇ ತೆರನಾದ ವೈದ್ಯಕೀಯ ಸೌಲಭ್ಯದ ಪುರಾವೆಗಳು ಸಿಗುವಏಲ್ಲ.ಆದರೆ ಪ್ರಾಚ್ಯ ವಸ್ತುಗಳನ್ನು ಕೇವಲ ಹಳೆಯ ಕಟ್ಟಡಗಳ ಆಧಾರದ ಮೇಲೆ ಪರಿಗಣಿಸಲು ಬರುವದಿಲ್ಲ.ಇಲ್ಲಿ ರೋಗಿಗಳ ಆರೈಕೆ ಬಗೆಗೆ ಏನೂ ಸುಳಿವಿಲ್ಲ ಎಂಬ ವಾದವೂ [೧೪] ಇದೆ. ರೊಮನ್ ಸಾಮ್ರಾಜ್ಯದಲ್ಲಿ ಕ್ರಿಸ್ಚಿಯಾನಿಟಿಯನ್ನು ಪಡೆದ ನಂತರ ಸಾರ್ವಜನಿಕರಿಗೆ ಹೆಚ್ಚಿನ ಆರೈಕೆ ಮತ್ತು ಕಾಳಜಿಗಳು ದೊರೆಯಲಾರಂಭಿಸಿದವು. .ದಿ ಫರ್ಸ್ಟ್ ಕೌನ್ಸಿಲ್ ಆಫ್ ನೈಸಿಯಾವು 325 A.D.ರಲ್ಲಿ ಬಡವರಿಗೆ,ರೋಗಿಗಳಿಗೆ,ವಿಧವೆಯರಿಗೆ ಮತ್ತು ಅಪರಿಚಿತರಿಗೆ ಸಹಾಯ ಮಾದುವಂತೆ ಚರ್ಚೆಗೆ ಒತ್ತಾಯ ಮಾದಿತು. ಅದು ಪ್ರತಿ ಕ್ಯಾಥ್ಸಡ್ರಿಲ್ ಪಟ್ಟಣಕ್ಕೊಂದರಂತೆ ಆಸ್ಪತ್ರೆಯನ್ನು ನಿರ್ಮಿಸುವಂತೆ ಆದೇಶಿಸಿತು. ಆರಂಭದಲ್ಲಿ ಕಾನ್ಸಟಂಟಿನೊಪಲ್ ನ ವೈದ್ಯ ಸೇಂಟ್ ಸ್ಯಾಂಪ್ಸಮ್ ಮತ್ತು ಸಿಜೇರಿಯಾದ ಬ್ಯಾಸಿಲ್ ಬಿಶಪ್ ಮುಂತಾದವರು ಆಸ್ಪತ್ರೆಗಳ ನಿರ್ಮಾಣದಲ್ಲಿ ಪ್ರವರ್ತಕರಾದರು. ನಂತರ ಇವುಗಳನ್ನೇ ಆಳರಸರು ವಹಿಸ್ಕೊಂಡು ಬಡವರ ಪ್ರವಾಸಿಗಳ ರೋಗಗ್ರಸ್ತರಿಗಾಗಿ ಅಗತ್ಯ ವಸತಿ ಹಾಗು ಇತರೆ ವ್ಯವಸ್ಥೆಯನ್ನು ಮಾಡಲಾಯಿತು. ಅಲ್ಲಿ ಕುಷ್ಟ ರೋಗಿಗಳಿಗೆ ಪ್ರತ್ಯೇಕ [೧೫] ವಿಭಾಗವಿತ್ತು.

ಮಧ್ಯಯುಗದ ಇಸ್ಲಾಮಿಕ್ ಪ್ರಪಂಚ ಮಧ್ಯಯುಗದ

[ಬದಲಾಯಿಸಿ]

ಮಧ್ಯಯುಗದ ಇಸ್ಲಾಮಿಕ್ ಪ್ರಪಂಚದಲ್ಲಿ ಬಿಮಾರಿಸ್ತಾನ್ ಎಂಬ ಜಾಗೆಯು ರೋಗಿಗಳಿಗೆ ಮತ್ತು ದುರ್ಬಲರಿಗೆ ರಕ್ಷಣೆ ಒದಗಿಸುವ ತಾಣವಾಗಿತ್ತು.ಅಲ್ಲಿ ಅವರಿಗೆ ಉತ್ತಮ ಪರಿಣತರಚಿಕಿತ್ಸೆಯಲ್ಲದೇ ಸ್ವಾಗತದೊಂದಿಗೆ ಕಾಳಜಿಯೂ ದೊರೆಯುತಿತ್ತು. ಇದೇ ರೀತಿಯಾಗಿ ಮಧ್ಯಯುಗದ ಇಸ್ಲಾಮಿಕ್ ವೈದ್ಯರು ಪ್ರಾಚೀನ ಕಾಲದ ದೇವಾಲಯಗಳಲ್ಲಿಹೋಗಿ ರೋಗ ವಾಸಿ ಮಾಡಿಕೊಳ್ಳುವ ಪದ್ದತಿಗೆ ತೆರೆ ಎಳೆದರು.ಹೀಗಾಗಿ ಆಗಿನ ಆಸ್ಪತ್ರೆಗಳ ವಿಭಿನ್ನತೆ ಈಗ ಪೂರ್ಣಪ್ರಮಾಣದ ಆರೈಕೆ ತಾಣಗಳಾದವು.ಆಗಿನ ವಾಸಿ ಮಾಡುವ ದೇವಾಲಯ,ನಿದ್ದೆ ದೇವಾಲಯ,ಹಾಸ್ಪೈಸ್,ಆಶ್ರಯ ತಾಣ,ಲೇಜರೆಟ್ ಅಥವಾ ಲೇಪರ್ ಹೌಸ್ ಇತ್ಯಾದಿಗಳು ಪ್ರಚಲಿತವಾಗಿದ್ದವು.ರೋಗಗ್ರಸ್ತರು,ಹುಚ್ಚ(ಮಾನಸಿಕ ಅಸ್ವಸ್ಥ) ಇವರನ್ನು ಸಾಮಾಜಿಕವಾಗಿ ದೂರ ಮಾಡುವುದು ಸಂಪ್ರದಾಯವಾಗಿತ್ತು. ಕೆಲವರ ಪ್ರಕಾರ ಬಿಮಾರಿಸ್ತಾನ್ ಗಳೇ ಆಸ್ಪತ್ರೆಯ ಮೊದಲ ಪರಿಕಲ್ಪನೆಯ "ಮೊದಲ ಆಸ್ಪತ್ರೆಗಳಾಗಿವೆ."ಇದೇ ಮೊದಲ [೧೬] ಶಬ್ದವೆನ್ನಬಹುದು. ಮೊಟ್ಟಮೊದಲ ಉಚಿತ ಸಾರ್ವಜನಿಕ ಆಸ್ಪತ್ರೆ 8ನೆಯ ಶತಮಾನದಲ್ಲಿ ಹರುನ್ ಅಲ್ -ರಸಿದ್ಅಬ್ಬಾಸಿದ್ ಕಾಲಿಫೇಟ್ ಬಾಗ್ದಾದಲ್ಲಿ [೧೭] ತೆರೆದರು. ಸುಮಾರು872ರಲ್ಲಿ ಈಜಿಪ್ತನಲ್ಲಿ ಮೊದಲ ಆಸ್ಪತ್ರೆ ಆರಂಭವಾಯಿತು.ನಂತರ ಸಾರ್ವಜನಿಕ ಆಸ್ಪತ್ರೆಗಳು ಸಾಮ್ರಾಜ್ಯದ ಎಲ್ಲೆಡೆ ಹಾಗು ಇಸ್ಲಾಮಿಕ್ ಸ್ಪೇನ್ ಮತ್ತು ಮಘರಿಬ್ ನಿಂದ ಪರ್ಸಿಯಾದವರೆಗೆ ಈ ಆಸ್ಪತ್ರೆಗಳ ಆರಂಭ ಸುರುವಾಯಿತು. ಸಮಯ ಕಳೆದಂತೆ ಪರಿಣತ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರನ್ನು ನೇಮಕಮಾಡಿಕೊಂಡು ಅವರ ಮೂಲಕ ವಿದ್ಯಾರ್ಥಿಗಳಿಗೆ ದಿಪ್ಲೊಮಾಗಳು,ಇಜಾಹ್ ಮುಂತಾದವಗಳನ್ನು ನೀಡಿ ಅವರಿಗೆ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯಕೀಯ ಶಾಲೆಯನ್ನು [೧೭][೧೮] ಒದಗಿಸಲಾಯಿತು. ಮೊದಲ ಮಾನಸಿಕ ಆಸ್ಪತ್ರೆಯು 705ರಲ್ಲಿ ಬಾಗ್ದಾದನಲ್ಲಿ ಕಟ್ಟಿಸಲಾಯಿತು. ಹಲವಾರು ಇಸ್ಲಾಮಿಕ ಆಸ್ಪತ್ರೆಗಳು ಮಾನಸಿಕ ಆರೋಗ್ಯ ಉಪಚಾರಕ್ಕಾಗಿ [೧೯] ಮೀಸಲಾಗಿದ್ದವು. ಎಂಟು ಮತ್ತು ಹನ್ನೆರಡೆನೆಯ ಶತಮಾನದಲ್ಲಿCE ಮುಸ್ಲಿಮ್ ಆಸ್ಪತ್ರೆಗಳು ಉಪಚಾರಕ್ಕಾಗಿ ಉತ್ತಮ ಗುಣಮಟ್ಟ ಹೊಂದಿದ್ದವು. ಒಂಬತ್ತು ಮತ್ತು ಹತ್ತನೆಯ ಶತಮಾನದಲ್ಲಿ ಬಾಗ್ದಾದ್ ನಲ್ಲಿನ ಆಸ್ಪತ್ರೆಗಳನ್ನು ಉನ್ನತ ಮಟ್ಟದ ವೈದ್ಯರು ಮತ್ತು ದಾದಿಯರ ಸಿಬ್ಬಂದಿಯೊಂದಿಗೆ ಕೆಲಸ ಮಾದಲು ಆರಂಭಿಸಿದವು.ಸುಮಾರು ಇಪ್ಪೈದು ವೈದ್ಯರ ತಂಡವೊಂದಿಗೆ ಸಜ್ಜಾಗಿತ್ತು. ತುನೇಸಿಯಾದಲ್ಲಿ ಅಲ್ -ಕ್ವೆರವಾನ್ ಆಸ್ಪತ್ರೆ ಮತ್ತುಒಂದು ಮಸೀದೆಯನ್ನು ಕಟ್ಟಿಸಲಾಯಿತು.ಅಘ್ಲಾಬಿದ್ ಈತನ ಆಳ್ವಿಕೆ ಕಾಲದಲ್ಲಿಸುಮಾರು830CE ನಲ್ಲಿ ಸುಸಜ್ಜಿತವಾಗಿ ಆರಂಭವಾದವು.ನಂತರ ಎಲ್ಲ ಸೌಕರ್ಯಗಳೊಂದಿಗೆ ನೀರಿಕ್ಷಣಾ ಕೊಠಡಿ ಮತ್ತು ಒಂದು ಮಸೀದೆ ಕಟ್ಟಿಸಿ ವಿಶೇಷ ಸ್ನಾನದ ಮನೆಗಳನ್ನು ನಿರ್ಮಿಸಲಾಯಿತು. ಈ ಅಸ್ಪತ್ರೆಗಳಲ್ಲಿ ಸುಡಾನ್ ನಿಂದ ಕರೆಸಿ ಮಹಿಳಾದಾದಿಯರು ಮತ್ತು ಮಹಿಳಾ ವೈದ್ಯರನ್ನು ನೇಮಕ [೨೦] ಮಾಡಿಕೊಳ್ಳಲಾಯಿತು.[೨೧] ಇಸ್ಲಾಮಿಕ್ ಪ್ರಪಂಚದಲಿನ ಆಸ್ಪತ್ರೆಗಳಲ್ಲಿ ವೈದ್ಯರಿಗಾಗಿ ಸ್ಪರ್ಧಾತ್ಮಕ ತಪಾಸಣಾ ವ್ಯವಸ್ಥೆ,ಔಷಧಿಯ ಶುದ್ಧತೆಯ ನಿಯಮಗಳು,ದಾದಿಯರು,ತರಬೇತಿದಾರರು,ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು [೨೧] ಬಳಕೆಯಲ್ಲಿದ್ದವು. ಈ ಆಸ್ಪತ್ರೆಗಳಲ್ಲಿ ವಿಶೇಷ ರೋಗಗಳಿಗಾಗಿ ವಿಶಿಷ್ಟ ವಾರ್ಡ್ ಗಳನ್ನು ಆರಂಭಿಸಲಾಯಿತು.ಹೀಗಾಗಿ ಸಾಂಕ್ರಾಮಿಕರೋಗಿಗಳು ಇತರ ಕಾಯಿಲೆಯವರಿಂದ ದೂರ ಇರುವ ವ್ಯವಸ್ಥೆ [೨೨] ಇತ್ತು.

ಮಧ್ಯಯುಗೀನ ಯುರೊಪ್

[ಬದಲಾಯಿಸಿ]
ಹೊಸ್ಪಿಕೊ ಕ್ಯಾಬನಾಸ್ ಗುಡಲಾಜರ್ಸ್ ಮೆಕ್ಸಿಕೊ ದಲ್ಲಿ ವಸಾಹಿತಶಾಹಿ ಆಸ್ಪತ್ರೆಗಳು ಇಲ್ಲಿ ಸ್ಥಾಪನೆಯಾದವು.
ದಿ ಚರ್ಚ್ ಅಟ್ ಲೆಸ್ ಇನ್ವ್ಯಾಳಿಡಿಟ್ಸ್ ಇನ್ ಫ್ರಾನ್ಸ್ ಶೊಯಿಂಗ್ ದಿ ಆಫನ್ ಕ್ಲೊಸ್ ಕನೆಕ್ಷನ್ ಬೆಟ್ವೀನ್ ಹಿಸ್ಟಾರಿಕಲ್ ಹಾಸ್ಪಿಟಲ್ಸ್ ಅಂಡ್ ಚರ್ಚಸ್
ಯುನ್ವರ್ಸಿಟಿ ಆಫ್ ಫ್ಲೊರಿಡಾದಲ್ಲಿನ ಕ್ಯಾನ್ಸರ್ ಹಾಸ್ಪಿಟಲ್

ಯುರೊಪ ನಲ್ಲಿನ ಮಧ್ಯಯುಗೀನ ಆಸ್ಪತ್ರೆಗಳು ಇದೇ ನೀತಿಯನ್ನು ಅನುಸರಿಸಿದವು,ಇದು ಬೈಜೈಂಟೈನ್ ವರಗೆ ನಡೆದುಕೊಂದು ಬಂತು. ಅವುಗಳು ಸಾಮಾನ್ಯವಾಗಿ ಧಾರ್ಮಿಕ ಸಮೂದಾಯಗಳು ಅಲ್ಲಿನ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಆರೈಕೆಯನ್ನು ಒದಗಿಸುತ್ತಿದ್ದರು. (ಒಂದು ಹಳೆಯ ಫ್ರೆಂಚ್ ಶಬ್ದದಂತೆ ಆಸ್ಪತ್ರೆ ಎಂದರೆಹೊಟೆಲ್ ಡೀಯು ,"ದೇವರ ವಸತಿ ನಿಲಯ.") ಇದರಲ್ಲಿ ಕೆಲವು ರಾಜರಿಗೆ ಸೇರಿದರೆ ,ಕೆಲವು ಸ್ವತಂತ್ರವಾಗಿ ಮತ್ತು ಅವರವರ ಆಸ್ತಿಗನುಗುಣವಾಗಿ ದತ್ತಿನಿಧಿಗಳ ಮೂಲಕ ನಡೆಯುತ್ತಿದ್ದವು. ಕೆಲವು ಆಸ್ಪತ್ರೆಗಳು ಬಹುದ್ದೇಶಗಳಿಗಾಗಿ ನಿರ್ಮಾಣಗೊಂಡಿದ್ದವು,ಅಂದರೆ ಕುಷ್ಟ ರೋಗಿಗಳಿಗೆ ಪ್ರತ್ಯೇಕ ವ್ಯವಸ್ಥೆ,ಅಥವಾ ಬಡವರಿಗೆ ಆಶ್ರಯ ತಾಣ,ಯಾತ್ರಿಗಳಿಗೆ ಆಶ್ರಯ ಅಂದರೆ ಕೇವಲ ರೋಗಿಗಳಿಗೆ ಮಾತ್ರ ಮೀಸಲಾಗಿರಲಿಲ್ಲ. ಮೊದಲ ಸ್ಪ್ಯಾನಿಶ್ ಆಸ್ಪತ್ರೆಯು ಕ್ಯಾಥೊಲಿಕ್ ವಿಸಿಗೊತ್ ಬಿಶಪ್ ಮಸೊನಾ ಅವರಿಂದ ಮೆರಿದಾದಲ್ಲಿ 580ರಲ್ಲಿ ಆರಂಭಗೊಂಡಿತು.ಜೆನೊಡಾಕಿಮ್ ಎಂಬ ದೊಡ್ಡ ಹೊಟೆಲ್ ಯುಲಾಲಿಯಾ ಆಫ್ ಮೆರಿಡಾ ಪವಿತ್ರ ಸ್ಥಳಕ್ಕೆ ಹೋಗುವ ಯಾತ್ರಿಗಳಿಗೆ ಕಟ್ಟಲಾಯಿತಲ್ಲದೇ ಅಲ್ಲಿನ ನಾಗರಿಕರಿಗೆ ಮತ್ತು ರೈತರಿಗೆ ಆಸ್ಪತ್ರೆ ಕಟ್ಟಿಸಲಾಯಿತು. ಆಸ್ಪತ್ರೆಗಳನ್ನು ನಡೆಸುವ ದತ್ತಿ ಸಂಸ್ಥ್ತೆಗಳು ರೋಗಿಗಳಿಗೆ ಮತ್ತು ಅಥಿಗಳಿಗೆ ಸೌಲಭ್ಯ ಒದಗಿಸಲು ತಮ್ಮ ಸಂಸ್ಥೆಗಳ ಮೂಲಕ ಬೆಳೆಯುವ ಭೂಮಿ ಆಸ್ತಿ ಪಾಸ್ತಿಯನ್ನು ಹೊಂದಿರುತ್ತವೆ.

ವಸಾಹತು ಶಾಹಿ ಅಮೆರಿಕಾ

[ಬದಲಾಯಿಸಿ]

ಬ್ಯಾರಿ [ಕಾಲ್ಲೆ ಹೊಸ್ಟೊಸ್ ]ಇದುಸ್ಯಾಂಟೊ ಡೊಮಿಂಗೊ,ದಿಸ್ಟ್ರಿಟೊ ನಾಸಿಯಲ್ ಡೊಮಿನಿಸಿಯನ್ ರಿಪಬ್ಲಿಕ್ ನಲ್ಲಿ ಆರಂಭವಾಯಿತು. ಸ್ಪ್ಯಾನಿಶ್ ರಾಜ್ಯಪಾಲ ಫ್ರೆಯ್ ನಿಕೊಲಾಸ್ ಡೆ ಒವಾಂಡೊ ಮತ್ತು ಆ ವಸಾಹತಿನ ಆಡಳಿತಗಾರರಾಗಿದ್ದ ಅವರು 1502-1509ರಲ್ಲಿ ಅದನ್ನು ನಿರ್ಮಿಸುವಂತೆ ಡಿಸೆಂಬರ್ 29,1503ರಲ್ಲಿ ಆದೇಶ ನೀಡಿದ್ದರು. ಈ ಆಸ್ಪತ್ರೆಯು ಒಂದು ಚರ್ಚ ರೂಪದಲ್ಲಿ ತನ್ನ ಸೇವೆಗಳನ್ನು ಒದಗಿಸುತಿತ್ತು. ಮೊದಲ ಹಂತದ ನಿರ್ಮಾಣವು 1519ರಲ್ಲಿ ಆರಂಭವಾಗಿತ್ತಲ್ಲದೇ 1552ರಲ್ಲಿ [೨೩] ಮರುನಿರ್ಮಾಣವಾಯಿತು. ಆದರೆ ಸ್ಯಾಂಟೊ ಡೊಮಿಂಗೊನಲ್ಲಿರುವ ಕ್ಯಾಥಡ್ರೆಲ್ ಹದಿನೆಂಟನೆಯ ಶತಮಾನದ ಮದ್ಯಬಾಗದಲ್ಲಿ ಈ ಆಸ್ಪತ್ರೆಯು ಅನಾಥವಾಯಿತು. ಕಾಂಕಿಸ್ಟಾಡೊರ್ ಮತ್ತು ಹೆರ್ನಾನ್ ಕೊರ್ಟ್ಸ್ ಎಂಬವರು ಸ್ಥಾಪಿಸಿದ ಎರಡು ಆರಂಭಿಕ ಆಸ್ಪತ್ರೆಗಳು ಉತ್ತರ ಅಮೆರಿಕಾದಲ್ಲಿದ್ದವು:ಅವುಗಳೆಂದರೆ ಇಮ್ಯಾಕುಲೇಟ್ ಕಾನ್ಸೆಪ್ಶನ್ ಹಾಸ್ಪಿಟಲ್ ಮತ್ತು ದಿ ಸೇಂಟ್ ಲೇಜರಸ್ ಹಾಸ್ಪಿಟಲ್ . ಅತ್ಯಂತ ಹಳೆಯದೆಂದರೆ ಇಮ್ಯಾಕುಲೇಟ್ ಕಾನ್ಸೆಪ್ಥನ್ ,ಅದೀಗ ಮೆಕ್ಸಿಕೊ ಸಿಟಿಯಲ್ಲಿ ಹಾಸ್ಪಿಟಲ್ ಡೆ ಜೆಸಸ್ ನಾಜರೆನೊ ಸೇವಾ ಸಂಸ್ಥೆಯು 1524ರಲ್ಲಿ ಬಡವರ ಕಾಳಜಿಗಾಗಿ ಕೆಲಸ [೨೩] ಮಾಡಿತು. ಉತ್ತರ ಮೆಕ್ಸಿಕೊದಲ್ಲಿ ಮೊದಲ ಆಸ್ಪತ್ರೆಯುಹೊಟೆಲ್ -ಡೀಯು ಕ್ವೆಬೆಕ್ ಎಂದು ಹಸರಾಗಿದ್ದು. ಇದು ನ್ಯು ಫ್ರಾನ್ಸ್ ನಲ್ಲಿ 1639ರಲ್ಲಿ ಮೂರು ಆಗಷ್ಟೈನಿಯನ್ಸ್ ರಿಂದ ಫ್ರಾನ್ಸ್ ನಲ್ಲಿ 1ಹೊಟೆಲ್ -ಡೀಯು ಡೆ ಡೆಪ್ಪೆ ಇಂದು ಪ್ರಸಿದ್ದಿ ಪಡೆದಿದೆ. ಕಾರ್ಡಿನಲ್ ಡೆ ರೈಚೆಲೊ ಅವರ ಸಹೋದರ ಸಂಬಂಧಿಯಿಂದ ಈ ಯೋಜನೆ ಜಾರಿಗೆ ಬಂದಿತು.ಆಗಿನ ರಾಜನಾಗಿದ್ದ ಲೂಯಿಸ್ XIIIಅವರ ರಾಜಧನದ ಸಹಾಯದಿಂದ ಕೊಲಿಯನ್ ವೈದ್ಯ ರಾಬರ್ಟ್ ಗಿಫರ್ಡ್ ಡೆ ಮೊನ್ಸೆಲ್ ಅವರ ಸಿಂಬ್ಬಂದಿ ಈ ಆಸ್ಪತ್ರೆಯ ಆಗುಹೋಗುಗಳನ್ನು ನೋಡಿಕೊಳ್ಳುತ್ತದೆ.

ಆಧುನಿಕ ಯುಗ

[ಬದಲಾಯಿಸಿ]

ಯುರೊಪ್ ನಲ್ಲಿ ಮಧ್ಯಯುಗದ ಹದಿನಾರನೆಯ ಮತ್ತು ಹದಿನೇಳನೆಯ ಶತಮಾನದ ಸುಮಾರಿಗೆ ಹಲವಾರು ಕ್ರಿಶ್ಚಿಯನ್ ಆಸ್ಪತ್ರೆಗಳು ಎಲ್ಲೆಡೆಗೂ ಪ್ರಸಿದ್ದಿ ಪಡೆದವು.ನಂತರ ಹದಿನೆಂಟನೆಯ ಶತಮಾನದಲ್ಲಿ ಅತ್ಯಾಧುನಿಕ ಔಷಧೋಪಚಾರಗಳು ಪ್ರಚಲಿತಗೊಂಡವು.ಆಧುನಿಕ ಆಸ್ಪತ್ರೆಗಳು ಆಧುನಿಕ ಸಿಬ್ಬಂದಿ ದಾದಿಯರು ತರಬೇತಿಯೊಂದಿಗೆ ಸಜ್ಜಾದರು. ದಿ ಚಾರಿಟೆ (1710ರಲ್ಲಿ ಬರ್ಲಿನ್ ನಲ್ಲಿ ಸ್ಥಾಪನೆಯಾಯಿತು.) ಇದು ಆರಂಭದಲ್ಲಿ ನಿರ್ಮಿಸಿದ ಮೊದಲ ಆಸ್ಪತ್ರೆ. ಲಂಡನ್ ನಲ್ಲಿನ ಶ್ರೀಮಂತ ವ್ಯಾಪಾರಿ ಥಾಮಸ್ ಗೇ ಅವರ ಉಯಿಲಿನ ಪ್ರಕಾರ ಸಾರ್ವಜನಿಕರಿಗೆ ಅನುಕೂಲ ಒದಗಿಸಲು ಗಯಿಸ್ ಹಾಸ್ಪಿಟಲ್ ನ್ನು ಸ್ಥಾಪಿಸಲಾಯಿತು. ಇದೇ ಸಂದರ್ಭದಲ್ಲಿ ಲಂಡನ್ ಮತ್ತು ಇನ್ನುಳಿದ ಬ್ರಿಟನ್ ದೇಶದ ನಗರಗಳಲ್ಲಿ ಆಸ್ಪತ್ರೆಗಳು ತಲೆ ಎತ್ತಿ ಖಾಸಗಿ ವ್ಯಕ್ತಿಗಳ ಧನಸಹಾಯದಿಂದ ಆಸ್ಪತ್ರೆಗಳನ್ನು ನಡೆಸಲಾಗುತಿತ್ತು. ಬ್ರಿಟಿಶ್ ಅಮೆರಿಕಾ ವಸಾಹತುಗಳಲ್ಲಿ 1751ರಲ್ಲಿ ಫಿಲಿಡೆಲ್ಫಿಯಾದಲ್ಲಿ ಪೆನ್ನಿನ್ಸುಲ್ವೇನಿಯಾ ಜನರಲ್ ಆಸ್ಪತ್ರೆಯನ್ನು £2,000 ಸಾರ್ವಜನಿಕ ನೆರವು ಮತ್ತು ಅಸೆಂಬ್ಲಿಯಿಂದ ಅನುದಾನ ಪಡೆದು ಇದನ್ನು [೨೪] ಸ್ಥಾಪಿಸಲಾಯಿತು. ಯಾವಾಗ ವಿಯೆನ್ನಾ ಜನರಲ್ ಹಾಸ್ಪಿಟಲ್ ಎಂಬುದು 1784ರಲ್ಲಿ ಪ್ರಾರಂಭಗೊಂಡಿತು.(ಮುಂದೆ ಬರಬರತಾ ಅದೇ ಆಸ್ಪತ್ರೆಯು ವಿಶ್ವದಲ್ಲೇ ಪ್ರಸಿದ್ದವಾಗಿದೆ)ಅಲ್ಲಿನ ಹಲವಾರು ವೈದ್ಯರು ಅತ್ಯಾಧುನಿಕ ಸೌಕರ್ಯಗಳನ್ನು ಪಡೆದುಕೊಂಡಿದ್ದರು.ಅಲ್ಲದೇ ಮಹತ್ವದ ಸಂಶೋಧನಾ ಕೇಂದ್ರವು ಸ್ಥಾಪನೆಯಾಗಿತ್ತು. ಹತ್ತೊಂಭತ್ತೆನೆಯ ಶತಮಾನದಲ್ಲಿ ಎರಡನೆಯ ವಿಯೆನ್ನಾ ಮೆಡಿಕಲ್ ಸ್ಕೂಲ್ ಹಲವಾರು ಪರಿಣತ ವೈದ್ಯರು ಇದರ ಬೆಳವಣಿಗೆಗೆ ಸಹಾಯ ಮಾಡಿದ್ದಾರೆ.ಉದಾಹರಣೆಗೆ ಕಾರ್ಲ್ ಫೆರರ್ ವೊನ್ ರೊಕಿನ್ ಸ್ಟಾನ್ಸಿ,ಜೊಸೆಫ್ ಸ್ಕೊಡಾ,ಫೆರ್ಡಿನಾಂಡ್ ರೈಟರ್ ವೊನ್ ಹೆಬ್ರಾ,ಮತ್ತು ಇಗ್ನಾಸ್ ಫಿಲಿಪ್ ಸೆಮ್ಮೆಲ್ವೆಸ್ ಮೊದಲಾದ ಆರೋಗ್ಯ ತಜ್ಞರು ಈ ಕಾರ್ಯಕ್ಕೆ ನೆರವಾದರು. ಮೂಲಭೂತ ವೈದ್ಯಕೀಯ ವಿಜ್ಞಾನ ವಿಸ್ತರಿಸಲ್ಪಟ್ಟಿತು ಮತ್ತು ವಿಶೇಷತೆ ಬೆಳವಣಿಗೆ ಕಂಡಿತು. ಅದಲ್ಲದೇ ವಿಯೆನ್ನಾದಲ್ಲಿ ಮೊದಲ ಬಾರಿಗೆ ಚರ್ಮರೋಗ ಚಿಕಿತ್ಸಾ ವಿಭಾಗ,ಕಣ್ಣು,ಅದಲ್ಲದೇ ಕಿವಿ,ಮೂಗು ಮತ್ತು ಗಂಟಲು ರೋಗಗಳಿಗಾಗಿ ವಿಶೇಷ ಚಿಕಿತ್ಸಾಲಯಗಳ ಹುಟ್ಟಿಗೆ [ಸೂಕ್ತ ಉಲ್ಲೇಖನ ಬೇಕು]ಕಾರಣವಾಯಿತು. ಹತ್ತೊಬ್ಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಯುರೊಪ್ ಮತ್ತು ಅಮೆರಿಕಾಗಳಲ್ಲಿ ಬಹುತೇಕ ಕಡೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸ್ವಾಮ್ಯದ ಆಸ್ಪತ್ರೆಗಳು ತಲೆ ಎತ್ತಿದವು. ಯುರೊಪ್ ಖಂಡದಾದ್ಯಂತ ಸಾರ್ವಜನಿಕ ಆಸ್ಪತ್ರೆಗಳು ನಿರಂತರವಾಗಿ ಸಾರ್ವಜನಿಕ ನಿಧಿಯಿಂದ ನಿರ್ಮಿಸಲ್ಪಟ್ಟು ಜನರಿಗೆ ನೆರವಾದವು. .ಯುನೈಟೆಡ್ ಕಿಂಗಡಮ್ ನಲ್ಲಿದ್ದ ನ್ಯಾಶನಲ್ ಹೆಲ್ತ್ ಸರ್ವಿಸಿಸ್ ಸಾರ್ವಜನಿಕರಿಗೆ ಪ್ರಧಾನವಾಗಿ ನೆರವಾಗುವ ಕಾರ್ಯದಲ್ಲಿ1948ರಿಂದ ಸ್ಥಾಪನೆಗೊಂಡು ತನ್ನನ್ನು ತಾನು ತೊಡಗಿಸಿಕೊಂಡಿತು. ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಸಾಂಪ್ರದಾಯಕ ಆಸ್ಪತ್ರೆಯು ಲಾಭದ ಉದ್ದೇಶರಹಿತ ಆಸ್ಪತ್ರೆಯಾಗಿದ್ದು ಇದು ಧಾರ್ಮಿಕ ಸಂಸ್ಥೆಗಳಿಂದ ಧನ ಸಹಾಯ ಪಡೆದುಕೊಂಡಿದೆ. ಆರಂಭದಲ್ಲಿ "ಆಲ್ಮ್ ಹೌಸ್ "ಎಂದು ಯುನೈಟೆಡ್ ಸ್ಟೇಟ್ಸನಲ್ಲಿ ವಿಲಿಯಮ್ ಪೆನ್ ಅವರಿಂದ ಫಿಲಿಡೆಲ್ಫಿಯಾದಲ್ಲಿ 1713ರಲ್ಲಿ ಸ್ಥಾಪನೆಯಾಗಿತ್ತು. ಇಂತಹ ಆಸ್ಪತೆಗಳನ್ನು ತೆರಿಗೆ ನಿರ್ಭಂದಿಂದ ಹೊರಗಿಡಲಾಗಿತ್ತು.ಇವು ದಾನದ ದೃಷ್ಟಿಯಿಂದ ಆರೋಗ್ಯ ಸೇವೆ ನಿಡುತ್ತಿರುವುದನ್ನು ಪರಿಗಣಿಸಿ ಕನಿಷ್ಟ ದರ ನಿಗದಿ ಮಾಡಲಾಗುತಿತ್ತು. ಇಂತಹ ಚಾರಿಟೇಬಲ್ಸಾರ್ವಜನಿಕ ಆಸ್ಪತ್ರೆಗಳು ಪ್ರಮುಖನಗರದಲ್ಲಿದ್ದು ತಮ್ಮದೇ ಆದ ಸಂಶೋಧನಾ ಕೇಂದ್ರ ಮತ್ತು ಶಾಲೆಗಳನ್ನು ಹೊಂದಿದ್ದವು. .ಅಮೆರಿಕಾದಲ್ಲಿ ಅತಿದೊಡ್ಡ ಆಸ್ಪತ್ರೆಯ ವ್ಯವಸ್ಥೆಯೆಂದರೆ ನ್ಯುಯಾರ್ಕ್ ಸಿಟಿ ಹೆಲ್ತ್ ಅಂಡ್ ಹಾಸ್ಪಿಟಲ್ಸ್ ಕಾರ್ಪೊರೇಶನ್ ,ಇದರಲ್ಲಿಬೆಲ್ಲೆಯು ಹಾಸ್ಪಿಟಲ್ U.S.ನಲ್ಲಿನ ಅತ್ಯಂತ ಹಳೆಯ ಆಸ್ಪತ್ರೆ ಇದು ನ್ಯುಯಾರ್ಕ್ ಯುನ್ಸರ್ಸಿಟಿ ಮೆಡಿಕಲ್ ಸ್ಕೂಲ್ ಗೆ ಅಂಗಸಂಸ್ಥೆಯಾಗಿದೆ. ಇಪ್ಪತ್ತನೆಯ ಶತಮಾನದ ಅಂತ್ಯದಲ್ಲಿ USA ನಾದ್ಯಂತ ಲಾಭದ ಉದ್ದೇಶದ ಆಸ್ಪತ್ರೆಗಳು ಹಲವೆಡೆ ತಲೆ ಎತ್ತಿ ನಿಂತವು.

ಈ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ತಪಾಸಣಾ ಉಪಕರಣಗಳು,ನುರಿತ್ ವೈದ್ಯಕೀಯ ಸಿಬ್ಬಂದಿ,ಇತ್ಯಾದಿಗಳು ತೀವ್ರತರ ರೋಗಗಳಿಂದ ಬಳಲುತ್ತಿದ್ದ ರೋಗಿಗಳಿಗೆ ಸಾಕಷ್ಟು ಅನುಕೂಲತೆ ಕ್ಲ್ಪಿಸಿದರೂ ಅದರಲ್ಲಿನ ರೋಗ ತಪಾಸಣಾ ವೈಫಲ್ಯ,ಉಪಕರಣಗಳ ತಪ್ಪು ಉಪಯೋಗ,ಹಳೆಯ ಪದ್ದತಿ ಇತ್ಯಾದಿಗಳ ಬಗೆಗೆ ನಿರಂತರ ಟೀಕೆಗಳು ಕೇಳಿ ಬರುತ್ತವೆ.ಹಲವಾರು ರೋಗಗಳ ಬಗ್ಗೆ ಸರಿಯಾದ ಮಾಹಿತಿ ದೊರಕದ ಉದಾಹರಣೆಗಳು ಈ ದೂರುಗಳಿಗೆ ಕಾರಣವಾಗಿದೆ. ಇದರಲ್ಲಿ ಒಂದು ಟೀಕೆ ಪದೇ ಪದೇ ಕೇಳಿ ಬರುತ್ತಿರುವುದೆಂದರೆ "ಔದ್ಯೋಗಿಕರಣ" ಆರೋಗ್ಯ ಸೇವೆಗಳನ್ನು ಕೈಗಾರಿಕಾ ಮಟ್ಟದಲ್ಲಿ ಬಿಂಬಿಸುವುದು ಸರಿಯಾದುದಲ್ಲ ಎಂಬ ವಾದವೂ ಕೇಳಿ ಬರುತ್ತಿದೆ.ಸಂಬಂಧಪಟ್ಟ ವೈದ್ಯರು ಮತ್ತು ಶುಶ್ರೂಕರು ರೋಗಿಗಳೊಡನೆ ಸೌಹಾರ್ದತೆಯನ್ನು ಕಾಯ್ದುಕೊಳ್ಳದೇ ಕೇವಲ ವ್ಯಾಪಾರಕ್ಕಾಗಿ ಕೆಲಸಕ್ಕಾಗಿ ಬಳಸಲಾಗುತ್ತದೆ. ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿ ರೋಗಿಗಳ ಬಗ್ಗೆ ಆಸಕ್ತಿ ತೋರುವದಿಲ್ಲ. ಆ ಶಿಲಾನ್ಯಾಸ ಮತ್ತು ಆಧುನಿಕ ಆಸ್ಪತ್ರೆಗಳು ಸಾಕಷ್ಟು ನಿಷ್ಕಾಳಜಿ ತೋರುತ್ತಿರುವುದು ಇಂದು ರೋಗಿಗಳಿಗೆ ತುಂಬಾ ಅನಾನುಕೂಲವಾಗಿದೆ,ಯಾವುದೇ ಸತ್ಯಾಸತ್ಯತೆಗಳ ಬಗ್ಗೆ ನಿಖರ ಮಾಹಿತಿಯಿರುವದಿಲ್ಲ ಎಂಬ ಗಂಭೀರ [೨೫] ಆರೋಪವಿದೆ. ಇನ್ನೊಂದು ಆರೋಪವೆಂದರೆ ಮೇಲಿಂದ ಮೇಲೆ ರೋಗ ನಿರೋಧಕ ಶಕ್ತಿ ಯ ನಿಶಕ್ತಿಯಿಂದ ಬಳಲುತ್ತಿರುವವರಿಗೆ ಈ ಆಸ್ಪತ್ರೆಗಳು ನೆರವಾಗಲು ವಿಫಲವಾಗಿವೆ.ಇಂತಹ ರೋಗಿಗಳು ಈ ಆಸ್ಪತ್ರೆಗಳನ್ನು ಅಪಾಯಕಾರಿ ತಾಣಗಳಾಗಿವೆ.ಕೆಲವರು ಶಸ್ತ್ರಚಿಕಿತ್ಸೆ ಅಥವಾ ಅತಿಕಾಯಿಲೆಯ ಚಿಕಿತ್ಸೆಗಳಿಗೆ ಜನರು ಹೆದರುವಂತಹ ಪರಿಸ್ಥಿತಿ ಇದೆ. ಇಂತಹ ಟೀಕೆಗಳು ಪ್ರಾಥಮಿಕ ಲಿಸ್ಟೇರಿಯನ್ ಯುಗದಲ್ಲಿ ಬೆಳೆದು ಬಂದವೆಂದೂ ಹೇಳಲಾಗಿದೆ. ಅತ್ಯಾಧುನಿಕ ಎಂದು ಹೇಳಿಕೊಳ್ಳುವ ಆಸ್ಪತ್ರೆಗಳಲ್ಲಿ ಇಂದೂ ಕೂಡಾ ಅಲಕ್ಷದಿಂದ ವಿಪರೀತ ಮತ್ತು ಸಾವಿನ ಪ್ರಮಾಣಗಳೂ ಹೆಚ್ಚಾಗುತ್ತ ನಡೆದಿವೆ ಎನ್ನಲಾಗಿದೆ.

ನಿಧಿ ಸಹಾಯ

[ಬದಲಾಯಿಸಿ]

ಆಧುನಿಕ ಯುಗದಲ್ಲಿ ಆಸ್ಪತ್ರೆಗಳು ಆಯಾ ದೇಶಗಳ ಸರ್ಕಾರಗಳ ನೆರವಿನಿಂದ ನಡೆಸಲ್ಪಡುತ್ತವೆ.ಇನ್ನೂ ಕೆಲವು ಖಾಸಗಿ ವಲಯದ ಬಂಡವಾಳದಾರರು ತಮ್ಮ ಹಣ ಹೂಡಿಕೆಯಿಂದ ಇಂತಹ ಸುಸಜ್ಜಿತ ಆಸ್ಪತ್ರೆಗಳಿಗೆ ಬಂಡವಾಳ ಹೂಡುತ್ತಾರೆ.(ಇಂದೂ ಕೂಡಾ ಹಲವಾರು ಆಸ್ಪತ್ರೆಗಳು ಧಾರ್ಮಿಕ ಸಂಸ್ಥೆಗಳು,ದತ್ತಿನಿಧಿ ಅಂಗಸಂಸ್ಥೆಗಳಿಂದ ನದೆಯುತ್ತಿವೆ.) ಯುನೈಟೆಡ್ ಕಿಂಗ್ ದಮ್ ನಲ್ಲಿ ಇಜಂದೂ ಕೂಡಾ ಆರೋಗ್ಯದ ಕಾಳಜಿಗಾಗಿ ಸರ್ಕಾರ ಉಚಿತ ಸೇವೆಗಳನ್ನು ವಿವಿಧ ವಿಭಾಗಗಳಲ್ಲಿ ಒದಗಿಸಲು ಸಮರ್ಥವಾಗಿದೆ."ಉಚಿತ ಆರುಅಗ್ಯ ಸೇವಾ ಕೇಂದ್ರ" ಅದರ ಘೋಷ ವಾಕ್ಯವಾಗಿದೆ. ಹೀಗಾಗಿ ಆರುಗ್ಯ ಸೇವೆಗಳು ಎಲ್ಲಾ ಕಾನೂನು ರೀತಿಯ ಮನ್ನಣೆ ಪಡೆದ ಎಲ್ಲಾ ನಾಗರಿಕರಿಗೂ ಲಭ್ಯವಿದೆ.(ಆದರೂ ಕೂಡಾ ಆಸ್ಪತ್ರೆಗಳಲ್ಲಿ ಆದ್ಯತೆಯ ಮೇಲೆ ಆರೋಗ್ಯ ಸೇವೆಗಳನ್ನು ಒದಗಿಸಲು "ಕಾಯ್ದಿಡುವ ಪಟ್ಟಿ"ಗೆ ಸೇರಿಸಲಾಗುತ್ತದೆ. ಕೆಲವು ಬಾರಿ ಖಾಸಗಿಯವರು ಚಿಕಿತ್ಸೆ ನೀಡುವಲ್ಲಿ ಸರ್ಕಾರದ ಜೊತೆಗೆ ಸ್ಪರ್ಧೆ ಮಾಡುವ ಪರಿಸ್ಥಿತಿಯೂ ಇರುತ್ತದೆ.ಇಲ್ಲಿ ತುರ್ತು ಚಿಕಿತ್ಸೆ ಅಥವಾ ಜರೂರಿಲ್ಲದ ಚಿಕಿತ್ಸೆಗಳ ಬಗ್ಗೆ [೨೬] ವಿವರಿಸಲಾಗುತ್ತದೆ. ಅದೂ ಅಲ್ಲದೇ ಇಂದು ವಿಶ್ವಾದ್ಯಂತ USAಒಳ್ಗೊಂಡಂತೆ ಇಪ್ಪತ್ತನೆಯ ಶತಮಾನದಲ್ಲಿ ಲಾಭದ ಉದ್ದೇಶದ ಆಸ್ಪತ್ರೆಗಳು ಭವ್ಯ ಶ್ರೀಮಂತಿಕೆಯನ್ನು ತೋರಿಸುತ್ತವೆ ಆರೋಗ್ಯ ಸೇವೆಗಳನ್ನು ನೀಡಲು ಅವು ತಮ್ಮ ಹಣದ ಜೊತೆಗೆ ಸರ್ಕಾರದ ನಿಧಿಯನ್ನು ಬಳಸಿ ತಮ್ಮ ಚಾರಿಟಿ ಕೆಲಸವನ್ನು ಮುಂದುವರೆಸುತ್ತವೆ.ಆದ್ದರಿಂದ 'ಚಾರಿಟಿ' ಆಸ್ಪತ್ರೆಗಳು ಇವತ್ತಿನ ಅವಶ್ಯಕತೆ [೨೭] ಎನಿಸಿವೆ. ಇಂತಹ ಲಾಭದ ಉದ್ದೇಶ ಹೊಂದಿದ ಆಸ್ಪತ್ರೆಗಳಲ್ಲಿ ವಿಮಾರಹಿತ ರೋಗಿಗಳನ್ನು ಚಿಕಿತ್ಸೆಗಾಗಿ ತಮ್ಮಲ್ಲಿ ತೆಗೆದುಕೊಂಡು ತುರ್ತು ಪರಿಸ್ಥಿತಿಗಳಿಗೆ ಎಡೆ ಮಾಡಿಕೊಡುತ್ತಾರೆ.(ಇದರಲಿ ಹುರಿಕೇನ್ ಕತ್ರಿನಾ ನಂತರ USAದಲ್ಲಿ )ನೇರವಾದ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಯಿತು.ಇಂತಹ ಕೆಲವು ರೋಗಿಗಳನ್ನು ಪ್ರವೇಶ ನೀಡುವುದೇ ಸರ್ಕಾರಕ್ಕೆ ಒಂದು [೨೭] ಸವಾಲಾಯಿತು. ವಿಶ್ವಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಯು ಆಧುನಿಕ ಕಾಲದಲ್ಲಿ ಒಂದು ವಿವಾದಾತ್ಮಕ ವಿಷಯವಾಗಿ ಬೆಳೆಯಿತು. ಅತ್ಯುತ್ತಮ ಗುಣಮಟ್ಟದ ಪರಿಕಲ್ಪನೆಯು ಇಂದು ಎಲ್ಲರಲ್ಲಿಯೂ ಬಂದಿದ್ದು ಅದು ಆಸ್ಪತ್ರೆಯಗಳ ಅಕ್ರಿಡಿಟೇಶನ್ (ಮಾನ್ಯತೆ) ಸದ್ಯದ ಅಗತ್ಯತೆಯಾಗಿದೆ. ವಿಶ್ವದ ಹಲವು ಭಾಗಗಳಲ್ಲಿ ಇಂತಹ ಮಾನ್ಯತಾ ಪತ್ರಗಳು ಇತರ ದೇಶಗಳ ಮಾದರಿಯಂತೆ ಕೆಲಸ ಮಾಡುತ್ತವೆ.ಇವುಗಳಲ್ಲಿ ಅಂತಾರಾಷ್ಟ್ರೀಯ ಆರೋಗ್ಯ ಕಾಳಜಿ ಅಕ್ರಿಡಿಟೇಶನ್,ಅಂದರೆ ಕೆನಡಾದಿಂದ ಕೆನಡಾ ಅಕ್ರಿಡಿಟೇಶನ್ USAದಿಂದ ಜಾಯಿಂಟ್ ಕಮಿಶನ್ ಗ್ರೇಟ್ ಬ್ರಿಟನ್ ನಿಂದ ಟ್ರೆಂಟ್ ಅಕ್ರಿಡಿಟೇಶನ್ ಸ್ಕೀಮ್ ಅಲ್ಲದೇ ಫ್ರಾನ್ಸ್ ನಿಂದ ಹೌಟೆ ಅಥಾರಿಟಿಸ್ ಡೆ ಸಾಂಟೆ(HAS)ಇತ್ಯಾದಿ.

ಕಟ್ಟಡಗಳು

[ಬದಲಾಯಿಸಿ]
ದಿ ನ್ಯಾಶನಲ್ ಹೆಲ್ತ್ ಸರ್ವಿಸ್ ನಾರ್ಫೊಲ್ಕ್ ಅಂಡ್ ನಾರ್ವಿಚ್ ಯುನ್ವರ್ಸಿಟಿ ಹಾಸ್ಪಿಟಲ್ ಇನ್ ದಿ UK, ಶೊಯಿಂಗ್ ದಿ ಯುಟಾಇಲೇಅಟಿರಿಯನ್ ಆರ್ಕಿಟ್ಕ್ಚರ್ ಆಫ್ ಮೆನಿ ಮಾಡೆರ್ನ್ ಹಾಸ್ಪಿಟಲ್

ವಾಸ್ತು ಶೈಲಿ

[ಬದಲಾಯಿಸಿ]

ಆಧುನಿಕ ಆಸ್ಪತ್ರೆಗಳ ಕಟ್ಟಡಗಳು ಇಂದು ಸಿಬ್ಬಂದಿ ಹಾಗು ಅಲ್ಲಿಗೆ ಬರುವವರಿಗೆ ಅತ್ಯಂತ ಹೆಚ್ಚಿನ ಸೌಕರ್ಯಗಳನ್ನು ನೀಡುವುದಲ್ಲದೇ ಅವರ ಕೆಲಸಗಳನ್ನು ಸುಗಮ ಮತ್ತು ಸರಳಗೊಳಿಸುವ ಪದ್ದತಿಯನ್ನು ಅಲವಡಿಸಿಕೊಂಡಿವೆ. ಆಸ್ಪತ್ರೆ ವೈದ್ಯರು ಮತ್ತು ರೋಗಿಗಳ ಸಂಬಂಧ ತೀವ್ರವಾಗಿ ಒಂದಾಗಿಸಲು ಮತ್ತು ಅವರವರುಗಳ ವೇಳೆ ಉಳಿತಾಯದ ವಿಧಾನಗಳನ್ನುಅ ಅಳವಡಿಸಿಕೊಳ್ಳಲಾಗುತ್ತಿದೆ.ದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲೂ ಸಹ ಇಂದು ಸಾಕಷ್ಟು ಯೋಜನೆಗಳಿವೆ. ಈ ಕಟ್ಟಡಗಳು ವಿವಿಧ ವಿಭಾಗಗಳನ್ನು ಒಳಗೊಂಡು ರೋಗಿಗಳಿಗೆ ಸುಲಭದ ರೀತಿಯಲ್ಲಿ ಸೌಲಭ್ಯ ಒದಗಿಸುತ್ತವೆ.ರಡಿಯೊಲಾಜಿ ಮತ್ತು ಶಸ್ತ್ರ ಚಿಕಿತ್ಸಾ ಕೊಠಡಿಗಳು,ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಪ್ರತ್ಯೇಕ ವಿಭಾಗಗಳ ವಿಶಿಷ್ಟ ಅನುಕೂಲಗಳು.ಹೀಗೆ ಆಧುನಿಕ ವಿನ್ಯಾಸವು ಇದನ್ನು ಸಾಧ್ಯ ಮಾಡಿ ತೋರಿಸಿದೆ. ಆದರೆ ಅತ್ಯಾಧುನಿಕ ಎನ್ನುವ ಆಸ್ಪತ್ರೆಗಳಲ್ಲಿ ಅವ್ಯ್ವಸ್ಥೆ ತಾಂಡವವಾಡುತ್ತಿದೆ.ಹಲ್ವು ಸರಿಯಾದ ವೈದ್ಯಕೀಯ ಉಪಕರಣಗಳಿಲ್ಲದೇ ಅರೆ ವಿಧಾನದ ಮಾದರಿಗಳಾಗಿವೆ.ದಶಕಗಳಿಂದಲೂ ಅವುಗಳ ಉಸ್ತುವಾರಿ ಅಷ್ಟಾಗಿ ಸೂಕ್ತವಾಗಿಲ್ಲ ಎಂಬ ಕೂಗೂ ಇದೆ.ಅವುಗಳ ಅಗತ್ಯತೆ ಮತ್ತು ಹಣಕಾಸು ಮತ್ತು ಶಿಸ್ತು ವಿಧಾನಗಳು ಕಳಪೆ ಮಟ್ಟದ್ದಾಗಿವೆ. ದರಿಂದಾಗಿ ಡಚ್ ಇತಿಹಾಸ ಕಟ್ಟಡ ಶಿಲ್ಪಿ ಕೊರ್ ವಾಗೆನ್ನರ್ ಹಲವಾರು ಆಸ್ಪತ್ರೆಗಳನ್ನು ಹೀಗೆ ಕರೆದಿದ್ದರೆ:

"ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿದರೇ ಹೊರತು ಸಂಸ್ಥೆಗಳ ಆಡಳಿತಕ್ಕೆ ಮಾತ್ರ ಆಡಳಿತಾಧಿಕಾರಿಗಳು ಯಾವುದೇ ಆಸಕ್ತಿ ವಹಿಸುವದಿಲ್ಲ. ಈ ಸಾಮಾಜಿಕ ಸ್ದುದ್ದೇಶಕ್ಕೆ ಇವರು ಯೋಗ್ಯತೆಯುಳ್ಳವರಲ್ಲ. ಇಂತವರು ರೋಗಿಗಳ ಅರೈಕೆಗಿಂತ ಅವರ ಕಿರುಕಳ ನೀಡಲು ಮುಂದಾಗುತ್ತಾರೆ.ಸಾಮಾನ್ಯವಾಗಿ ನಿಷ್ಕ್ರಿಯರಾಗಿರುವ ಇವರು ರೋಗಿಗಳಲ್ಲಿ ಒತ್ತಡ ಮತ್ತು ಆಯಾಸ [೨೮] ತುಂಬುತ್ತಾರೆ."
ದಿ ಕೆಫೆಟೇರಿಯಾ ಆಫ್ ಎ ಹಾಸ್ಪಿಟಲ್ ಇನ್ ಪಂತ ಗೊರ್ಡಾ, ಫ್ಲೊರಿಡಾ

ಈಗಿನ ಕೆಲವು ಆಧುನಿಕ ಆಸ್ಪತ್ರೆಗಳು ತಮ್ಮ ಕಟ್ಟಡ ವಿನ್ಯಾಸಗಳಲ್ಲಿ ಹೊಸ ನಮೂನೆ ತಂದು ರೋಗಿಗಳ ಮನಸಿಗೆ ಮುದ ನೀಡುವ ಕೆಲಸದಲ್ಲಿ ನಿರತವಾಗಿವೆ.ಉತ್ತಮ ಬಣ್ಣ ಗಾಳಿ ಬೆಳಕು,ಆಹ್ಲಾದಕರ ವಾತಾವರಣ ನಿರ್ಮಿಸಲು ಶ್ರಮಿಸುತ್ತಿವೆ. ಇತ್ತೀಚಿನ ಆಸ್ಪತ್ರೆಗಳು ಹಳೆಯ ಕಾಲದ ಗುಣಮುಖಗೊಳಿಸುವ ವಿಶೇಷ ಶಕ್ತಿಯನ್ನು ಹೊಂದಿದ ಕಟ್ಟಡಗಳನ್ನು ನಿರ್ಮಿಸಿವೆ.ಹದಿನಂಟನೆಯ ಶತಮಾನದ ಆರಂಭದಿಂದಲೂ ಆಸ್ಪತ್ರೆ ನಿರ್ಮಾಣಗಳಿಗೆ ಅತ್ಯಾಧುನಿಕ ಯೋಜನೆಗಳನ್ನು ರೂಪಿಸಲಾಗಿದೆ.ಅವುಗಳ ವಾಸಿಮಾಡುವ ನೈಸರ್ಗಿಕ ಶಕ್ತಿ"ವಾತಾವರಣ ಸುತ್ತಮುತ್ತಲಿನ ಪರಿಸರ ನೈಸರ್ಗಿಕ ಸೌಲಭ್ಯಗಳು ಇಂದಿನ [೨೮] ಅವಶ್ಯಕತೆಗಳಾಗಿವೆ. ಅತ್ಯಂತ ಬದಲಾವಣೆಯೆಂದರೆ ಆಸ್ಪತ್ರೆಯ ಪ್ರತಿಯೊಂದು ವಾರ್ಡ್ ನ್ನು ಪ್ರತ್ಯೇಕಗೊಳಿಸಿ ಅವುಗಳನ್ನು ರೋಗಿಗಳಿಗೆ ವಿಭಾಗಗಳನ್ನು ತೆರೆಯಲಾಗಿದೆ.(ಇಲ್ಲಿ ರೋಗಿಗಳಿಗೆ ಪ್ರತ್ಯೇಕ ವಿಭಾಗ ಹಾಗು ಚಿಕಿತ್ಸಾ ಸೌಲಭ್ಯಗಳು ಅದರಲ್ಲಿ ನೀಡಲಾಗುತ್ತದೆ,ಇಲ್ಲಿಯೇ ಬೇರೆ ಬೇರೆ ಚಿಕಿತ್ಸಾ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗುತ್ತದೆ.) ವಾರ್ಡ್ ಮೂಲದ ಈ ವ್ಯವಸ್ಥೆಯು ಸಿಬ್ಬಂದಿ ಮತ್ತು ರೋಗಿಗಳಿಗೆ ಅನುಕೂಲಕರವಾಗಿ ಪರಿಣಮಿಸಿದೆ.ಆದರೆ ಕೆಲವು ಬಾರಿ ರೋಗಿಗಳಿಗೆ ಆಯಾಸ ಮತ್ತು ಪ್ರಯಾಸದಾಯಕವೂ ಆಗಿದ್ದು ಸಹಜ.ಇಲಿ ಅವರ ಖಾಸಗಿತನಕ್ಕೆ ಅಪಾಯವೂ ಇದೆ. ಎಲ್ಲಾ ರೋಗಿಗಳಿಗೆ ಉತ್ತಮ ಕೊಠಡಿಗಳನ್ನು ಒದಗಿಸುವುದಾಗುವುದಿಲ್ಲ.ಯಾಕೆಂದರೆ ಅದರ ವೆಚ್ಚ ಭರಿಸಲು ಕೆಲವು ವರ್ಗದ ರೋಗಿಗಳಿಗೆ ಸಾಧ್ಯವಾಗದು.ಪ್ರತ್ಯೇಕ ಕೊಠಡಿಗಳಿಗೆ ಹೆಚ್ಚಿನ ಬಾಡಿಗೆ ತೆರಬೇಕಾಗುತ್ತದೆ.ಇಂತಹ ಆಸ್ಪತ್ರೆಗಳು ಆಗ ಅತ್ಯಂತ ದುಬಾರಿಯಾಗಿ [೨೯] ಪರಿಣಮಿಸುತ್ತವೆ. ನೈನ್ ವೆಲ್ ಹಾಸ್ಪಿಟಲ್ಸ್ ,ದುಂಡೀ,ಸ್ಕಾಟ್ ಲ್ಯಾಂಡ್ ಇವುಗಳು ಇಂದು ವಿಶ್ವದಲ್ಲೇ ಅತ್ಯಂತ ದೊಡ್ಡ ಆಸ್ಪತ್ರೆಗಳೆನಿಸಿವೆ.ಅದಲ್ಲದೇ ಅತಿದೊಡ್ಡ ಟೀಚಿಂಗ್ ಹಾಸ್ಪಿಟಲ್ ಎಂದೂ ಪ್ರಖ್ಯಾತಿ ಗಳಿಸಿದೆ. ನೈನ್ ವೆಲ್ಸ್ ಕೂಡಾ ಬ್ರಿಟೇನ್ ನಲ್ಲಿ ಅತಿ ದೊಡ್ಡ ಮತ್ತು ಮೊದಲ ಆಸ್ಪತ್ರೆ ಎನಿಸಿದೆ.ಕಟ್ಟಡ ಶಿಲ್ಪಿ ಫ್ರಾಂಕ್ ಗೆಹರಿ ಜೆಮ್ಸ್ ಎಸ್ ಸ್ಟಿಫನ್ ಅವರ ಜೊತೆಗೂಡಿ ಇದನ್ನುಅ ನಿರ್ಮಿಸಿದ್ದಾನೆ. ಇದರ ವಿನ್ಯಾಸವನ್ನು ಮ್ಯಾಗಿ ಸೆಂಟರ್ಸ್ ಮಾಡಿದೆ.ಅವರ ಮೂರನೆಯ ಸೆಂಟರ್ ಗೆ ಕ್ಯಾನ್ಸರ್ ಸಪೊರ್ಟ್ ಸಂಘಟಕರು ಇದಕ್ಕೆ ನೆರವಾಗಿದ್ದಾರೆ. ಇದು ಅಧಿಕೃತವಾಗಿ ಸೆಪ್ಟೆಂಬರ್ 25,2003ರಲ್ಲಿ ಬಾಬ್ ಗಿಲ್ಡೊಫ್ ಅವರಿಂದ ಉದ್ಘಾಟನೆಯಾಗಿ ಆರಂಭಗೊಂಡಿತು. ಇದಕ್ಕಾಗಿ ಮರು ವಿನ್ಯಾಸ ಮತ್ತು ಪುನರುಜ್ಜೀವನಗೊಳಿಸಲು ಸುಮಾರು ಹತ್ತು ಮಿಲಿಯನ್ ಪೌಂಡ್ ಗಳನ್ನು ಖರ್ಚು ಮಾಡಲಾಗಿದೆ.ಜೂನ್ 2006ರಲ್ಲಿ ಇದನ್ನುಟೇಸೈಡ್ ಚಿಲ್ಡ್ರನ್ಸ್ ಹಾಸ್ಪಿಟಲ್ ಎಂದು ಹೆಸರಿಸಲಾಯಿತು.

ಆಕರಗಳು

[ಬದಲಾಯಿಸಿ]
  1. Risse, G.B. Mending bodies, saving souls: a history of hospitals. Oxford University Press, 1990. p. 56 Books.Google.com
  2. ಎಸ್ಕಿಟೊಪೊಲಸ್, ಎಚ್., ಕೊನ್ಸೊಲ್ಕಿ, ಇ., ರಾಮೊಟಸ್ಕಿ, I., ಅನಾಟಸಕಿ, ಇ. ಸರ್ಜಿಕಲ್ ಕುಯರ್ಸ್ ಬೈ ಸ್ಲ್ಲೀಪ್ ಇಂಡಕ್ಶನ್ ಆಸ್ ದಿ ಎಸ್ಕ್ಲೆಪಿಯನ್ ಆಫ್ ಎಪಿಡೆರಸ್. The history of anesthesia: proceedings of the Fifth International Symposium, by José Carlos Diz, Avelino Franco, Douglas R. Bacon, J. Rupreht, Julián Alvarez. Elsevier Science B.V., International Congress Series 1242(2002), p.11-17. ಪುಸ್ತಕಗಳುGoogle.com
  3. ರಿಸೆ , G.B. ಮೆಂಡಿಂಗ್ ಬಾಡೀಸ್ , ಸೇವಿಂಗ್ ಸೌಲ್ಸ್: ಎ ಹಿಸ್ಟರಿ ಆಫ್ ಹಾಸ್ಪಿಟಲ್ಸ್. ಆಕ್ಸಫರ್ಡ್ ಯುನ್ವರ್ಸಿಟಿ ಪ್ರೆಸ್, 1990. p. 56 ಬುಕ್ಸ್.Google.com
  4. ೪.೦ ೪.೧ Askitopoulou, H., Konsolaki, E., Ramoutsaki, I., Anastassaki, E. Surgical cures by sleep induction as the Asclepieion of Epidaurus. The history of anesthesia: proceedings of the Fifth International Symposium, by José Carlos Diz, Avelino Franco, Douglas R. Bacon, J. Rupreht, Julián Alvarez. ಎಲ್ಸೆವೆರ್ ಸೈನ್ಸ್ ಬಿ .ವಿ., ಇಂಟರ್ ನ್ಯಾಶನಲ್ ಕಾಂಗ್ರೆಸ್ ಸೆರೀಸ್ 1242(2002), p.11-17. ಪುಸ್ತಕಗಳುGoogle.com
  5. ೫.೦ ೫.೧ ರೊಡ್ರಿಕ್ ಇ . ಮ್ಯಾಕ್ ಗ್ರಿವ್, ಎನ್ ಸೈಕ್ಲೊಪೇಡಿಯಾ ಆಫ್ ಮೆಡಿಕಲ್ ಹಿಸ್ಟರಿ (ಮ್ಯಾಕ್ ಮಿಲನ್ 1985), pp.134-5.
  6. ಪ್ರೊ. ಅರ್ಜುನ್ ಅಲುವಿನಾ, "ರೊಹಲ್ ಕ್ರೆಮಾ ಲೊವೆಟಾ ಧಯದಾ ಕಾಲೆ ಸ್ರಿ ಲಂಕಿಕೊ " ವಿಧುಸರಾ ಸೈನ್ಸ್ ಮ್ಯಾಗ್ಸಿನ್ , Nov. 1993.
  7. ರೆಸೊರ್ಸೆಸ್ ಮೊಬೈಲೈಸೇಶನ್ ಇನ್ ಸ್ರಿಲಂಕಾ ' ಹೆಲ್ತ್ ಸೆಕ್ಟರ್ - ರನ್ನನ್ -ಎಲಿಯಾ, ರವಿ P. & ಡೆ ಮೆಲ್, ನಿಶಾನ್, ಹರ್ವರ್ದ್ ಸ್ಕೂಲ್ ಅಫ್ ಪಬ್ಲಿಕ್ ಹೆಲ್ತ್ & ಹೆಲ್ತ್ ಪೊಲಿಸಿ ಪ್ರೊಗ್ರಾಮ್, ಇನ್ಸಟಿಟ್ಯುಟ್ ಆಫ್ ಪೊಲ್ಸಿ ಸ್ಟಡೀಸ್, ಫೆಬ್ರವರಿ 1997, Page 19. ವಾಪಸಾದುದು 2008-02-22.
  8. ಹೆಂಜ್ ಇ ಮುಲ್ಲರ್-ಡೆಜ್, ಹಿಸ್ಟೊರಿಯಾ ಹಾಸ್ಪೊಟಿಲಿಯಮ್ (1975).
  9. ಆಯುರ್ವೇದಾ ಹಾಸ್ಪಿಟಲ್ಸ್ ಇನ್ ಎನ್ಸಿಯಾಂಟ್ ಶ್ರೀ ಲಂಕಾ Archived 2008-06-07 ವೇಬ್ಯಾಕ್ ಮೆಷಿನ್ ನಲ್ಲಿ. - ಸಿರಿವೀರಾ, W. I., ಸಮರಿ ಆಫ್ ಗೆಸ್ಟ್ ಲೆಕ್ಚರ್, ಸಿಕ್ಸ್ಥ್ ಇಂಟೆರ್ ನ್ಯಾಶನಲ್ ಮೆಡಿಕಲ್ ಕಾಂಗ್ರೆಸ್ಸ್ , ಪೆರಿದಿನಿಯಾ ಮೆಡಿಕಲ್ ಸ್ಕೂಲ್ ಅಲುಮಿನಿ ಅಸೊಶಿಯೇಶನ್ ಅಂಡ್ ದಿ ಫ್ಯಾಕಲ್ಟಿ ಆಫ್ ಮೆಡಿಸಿನ್
  10. ಎನ್ ಸೈಕ್ಲೊಪಿಡಿಯಾ ಆಫ್ ಮೆಡಿಕಲ್ ಹಿಸ್ಟರಿ - ಮ್ಯಾಕ್ ಗ್ರೆತ್, ರೊಡ್ರಿಕ್ಇ. (ಮ್ಯಾಕ್ ಮಿಲನ್ 1985), p.135.
  11. ಫಿಂಗರ್ , page 12; ದಿಸ್ ವಿವ್ ಈ ಸ್ಫಾಲೊಡ್ ಬೈ ದಿ ಎನ್ ಸೈಕ್ಲೊಪಿಡಿಯಾ ಬ್ರಿಟಾನಿಕ್ (2008).
  12. ದಿ ನರ್ಸೆಸ್ ಶುಡ್ ಬಿ ಏಬಲ್ ಟು ಸಿಂಗ್ ಅಂಡ್ ಪ್ಲೆ ಇನ್ಸ್ಟ್ರುಮೆಂಟ್ಸ್ Archived 2008-02-27 ವೇಬ್ಯಾಕ್ ಮೆಷಿನ್ ನಲ್ಲಿ. - ವಜೆಸ್ಟಿಕ್ , ಡೊಮೊನಿಕ್; ಯುನ್ವರ್ಸ್ಸಿಟಿ ಕಾಲೇಜ್ ಲಂಡನ್. ವಾಪಸು ಪಡೆದದ್ದು 2008-02-22.
  13. ಸಿ. ಎಲ್ಗುದ್, ಎ ಮೆಡಿಕಲ್ ಹಿಸ್ಟರಿ ಆಫ್ ಪರ್ಸಿಯಾ , (ಕ್ಯಾಂಬ್ರಿಜ್ ಯುನ್. Press), p. 173.
  14. ದಿ ರೊಮನ್ ಮಿಲಿಟರಿ ವ್ಯಾಲೆಟುದಿನೇರಿಯಾ: ಫ್ಯಾಕ್ಟ್ ಆರ್ ಫಿಕ್ಸನ್ - ಬೇಕರ್ , ಪ್ಯಾಟ್ರಿಸಿಯಾ ಎನ್ನೆ, ಯುನ್ವರ್ಸಿಟಿ ಆಫ್ ನ್ಯು ಕ್ಯಾಸ್ಟಲ್ ಅಪೌನ್ ಟೈನಿ,ಭಾನುವಾರ20 ಡಿಸೆಂಬರ್ 1998
  15. ರೊಡ್ರಿಕ್ ಇ. ಮ್ಯಾಕ್ ಗ್ರಿವ್, ಎನ್ ಸಂಕ್ಲೊಪಿಡಿಯಾ ಆಫ್ ಮೆಡಿಕಲ್ ಹಿಸ್ಟರಿ (Macmillan 1985), p.135.
  16. Micheau, Francoise, "The Scientific Institutions in the Medieval Near East", pp. 991–2 {{citation}}: Missing or empty |title= (help), in (Morelon & Rashed 1996, pp. 985–1007)
  17. ೧೭.೦ ೧೭.೧ Sir Glubb, John Bagot (1969), A Short History of the Arab Peoples, retrieved 2008-01-25
  18. ಪೀಟರ್ ಬ್ಯಾರೆಟ್ (2004), ಸೈನ್ಸ್ ಅಂಡ್ ಥೆಯೊಲಾಜಿ ಸಿನ್ಸ್ ಕೊಪರ್ನಿಕಸ್: ದಿ ಸರ್ಚ್ ಫಾರ್ ಅಂಡರ್ ಸ್ಟಾಂಡಿಂಗ್ , p. 18, ಕಾಂಟಿನಮ್ ಇಂಟರ್ ನ್ಯಾಶನಲ್ ಪಬ್ಲಿಶಿಂಗ್ ಗ್ರುಪ್, ISBN 0-567-08969-X.
  19. ಇಬ್ರಾಹಿಮ್ Bಬಿ. ಸೈಯದ್ PhD, "ಇಸ್ಲಾಮಿಕ್ ಮೆಡಿಸಿನ್ : 1000 ಇಯರ್ಸ್ ಅಹೆದ್ ಆಫ್ ಇಟ್ಸ್ ಟೈಮ್ಸ್", ಜರ್ನಲ್ ಆಫ್ ದಿ ಇಸ್ಲಾಮಿಕ್ ಮೆಅಡಿಕಲ್ ಅಸೊಶಿಯೇಶನ್ , 2002 (2), p. 2-9 [7-8].
  20. ಜಿ. ಬಡೆಮಿಕ್ (2006), ಫರ್ಸ್ತ್ ಇಲ್ಲುಸ್ಟ್ರೇಶನ್ಸ್ ಆಫ್ ಫಿಮೇಲ್ "ನ್ಯುರೊಸರ್ಜನ್ಸ್" ಇನ್ ದಿ ಫಿಫ್ಟೀಥ್ ಸೆಂಚುರಿ ಬೈ ಸರ್ಫುದ್ದೀನ್ ಸಬುಂಕೊಲ್, ನ್ಯುರೊಸರ್ಜಿಯಾ 17 : 162-165.
  21. ೨೧.೦ ೨೧.೧ ಮೈಕೆಲ್ ಉಡ್ಸ್, ಇಸ್ಲಾಮ್, ಒನ್ಸ್ ಅಟ್ ಫೊರ್ ಫ್ರಂಟ್ ಆಫ್ ಸೈನ್ಸ್, ಫೆಲ್ ಬೈ ವೇ ಸೈಡ್ Archived 2011-05-22 ವೇಬ್ಯಾಕ್ ಮೆಷಿನ್ ನಲ್ಲಿ., ಪೊಸ್ಟ್-ಗ್ಯಾಜೆಟಿ ನ್ಯಾಶನಲ್ ಬ್ಯುರೊ , ಭಾನುವಾರ, ಏಪ್ರಿಲ್ 11, 2004.
  22. ಮೆದಿಸಿನ್ ಅಂಡ್ ಹೆಲ್ತ್ , "ರೈಸ್ ಅಂಡ್ ಸ್ಪ್ರೆಡ್ ಆಫ್ ಇಸ್ಲಾಮ್ 622-1500: ಸೈನ್ಸ್ , ಟೆಕ್ನಾಲಾಜಿ, ಹೆಲ್ತ್", ವರ್ಲ್ಡ್ ಎರಸ್ , ಥಾಮಸನ್ ಗೇಲ್.
  23. ೨೩.೦ ೨೩.೧ ಅಲ್ಫ್ರೆಡ್ ಡೆ ಮೈಕೆಲ್ , ಎನ್ ಟೊರ್ನೊ ಎ ಲಾ ಎವುಲುಶನ್ ದೆ ಲಾಸ್ ಹಾಸ್ಪಿಟಲ್ಸ್ , ಗ್ಯಾಸಿಟಾ ಮೆಡಿಕಾ ಡೆ ಮೆಕ್ಸಿಕೊ , vol. 141, no. 1 (2005), p. 59.
  24. ರಾಡ್ರಿಕ್ ಇ. ಮ್ಯಾಕ್ ಗ್ರಿವ್ , ಎನ್ ಸೈಕ್ಲೊಪಿಡಿಯಾ ಆಫ್ ಮೆಡಿಕಲ್ ಹಿಸ್ಟ್ರಿ (Macmillan 1985), p.139.
  25. ರೆಫ್ರನ್ಸಿಸ್ ಪ್ರೊವೈಡೆಡ್ ಇನ್ ದಿಸ್ ಸೇಮ್ ಆರ್ಟಿಕಲ್.
  26. ಸರ್ಜರಿ ವರೀಸ್ ಕ್ರಿಯೇಟ್ ಇನ್ಸುರನ್ಸ್ ಬೂಮ್ದಿ ನ್ಯು ಜಿಯಿಲೆಂಡ್ ಹೆರಾಲ್ದ್ , ಸೋಮವಾರ 21 ಜನವರಿ 2008
  27. ೨೭.೦ ೨೭.೧ ಹಾಸ್ಪಿಟಲ್ ಇನ್ ನ್ಯುವ್ ಒರ್ಲಾನ್ಸ್ ಸೀ ಸರ್ಜ್ ಇನ್ ಅನ್ ಇನ್ಸುರ್ಡ ಪೇಶೆಂಟ್ಸ್ ಬಟ್ ನಾಟ್ ಪಬ್ಲಿಕ್ ಫಂಡ್ಸ್USA ಟುಡೆ , ಬುದವಾರ 26 ಏಪ್ರಿಲ್ 2006
  28. ೨೮.೦ ೨೮.೧ ಹೀಲಿಂಗ್ ಬೈ ಡೆಸಂನ್ Archived 2007-10-17 ವೇಬ್ಯಾಕ್ ಮೆಷಿನ್ ನಲ್ಲಿ. ಒಡಾ ಮ್ಯಾಗ್ಸಿನ್ , ಜುಲೈ/ಆಗಷ್ಟ್2006 ಸಂಪುಟ. ಮರಳಿ ಪಡೆದಿದ್ದು2008-02-10.
  29. ಹೆಲ್ತ್ರ್ ಅಡ್ಮಿಸಿಸ್ಟ್ರಟಟರ್ಸ್ ಹೊಸ ಆಸ್ಪತ್ರೆಗಳ ವಿನ್ಯಾಸ ಹುಡುಕಲು ಹೊರದುತ್ತಾರೆ.ನ್ಯಾಶನಲ್ ರಿವಿವ್ ಆಫ್ ಮೆಡಿಸಿನ್ , ಸೇಮವಾರ 15 ನವೆಂಬರ್ 2004, ಸಂಪುಟ1 NO. 21

ಬಾಹ್ಯ ಕೊಂಡಿಗಳು

[ಬದಲಾಯಿಸಿ]

" ಡಿಸ್ಪೆನ್ಸರೀಸ್ " ಎಂಬ ಶಬ್ದವು ನಂತರ ಭಾಷಾಂತರಗೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಯಿತು,ವೈದ್ಯಕೀಯ ಮರಿಜುನಾ ಕೈಗಾರಿಕಾ" ವಲಯಕ್ಕೆ ಒಂದು ವರದಾನವಾಯಿತು. "ಡಿಸ್ಪೆನ್ಸರೀಸ್ ನೈಜ ಅರ್ಥ"ದಲ್ಲಿ ಅದರ ವಿವಿಧ ಉಪಯೋಗಗಳಿಗೆ ಬಳಸಲಾಗುತ್ತಿದೆ.ಸುಮಾರು 215 ರ ವಿಧಾನದ ಬಗ್ಗೆ ಕ್ಯಾಲಿಫೊರ್ನಿಯಾದ ಕಾನೂನು ಉಪಕ್ರಮಗಳನ್ನು ಈ ನಿಟ್ಟಿನಲ್ಲಿ ಅನುಸರಿಸಲಾಗಿದೆ. ವಿವಿಧ ಔಷಧೋಪಚಾರದ ವ್ಯವಸ್ಥೆಯೇ ಚಿಕಿತ್ಸಾಲಯಗಳು ಎನ್ನಬಹುದು." ಇದರ ಉದಾಹರಣೆಗಳನ್ನು ನೀವು ಡಿಸ್ಪೆನ್ಸರೀಸ್ ಎಲ್ಲಿ ಸ್ಥಾಪಿಸಲ್ಪಟ್ಟಿವೆ ಎನ್ನುವುದರ ಸ್ಥಳೀಯ ಪ್ರದೇಶದ ವ್ಯವಸ್ಥೆಯನ್ನು ಹೊಂದಿವೆ.