ನಿಕೋಲಸ್ ಕೋಪರ್ನಿಕಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಕೋಲಸ್ ಕೋಪರ್ನಿಕಸ್
ಭಾವಚಿತ್ರ, 1580, ಟೊರುನ್ ಓಲ್ಡ್ ಟೌನ್ ಸಿಟಿ ಹಾಲ್
ಜನನ(೧೪೭೩-೦೨-೧೯)೧೯ ಫೆಬ್ರವರಿ ೧೪೭೩
ಟೊರುನ್ (ಥಾರ್ನ್), ರಾಯಲ್ ಪ್ರಸ್ಸಿಯಾ, ಪೋಲೆಂಡ್ ಸಾಮ್ರಾಜ್ಯ
ಮರಣ24 May 1543(1543-05-24) (aged 70)
ಫ್ರಾಂಬ್ರಿಕ್ (ಫ್ರೌಯೆನ್ಬರ್ಗ್), ವರ್ಮಿಯಾದ ರಾಜಕುಮಾರ-ಬಿಷೋಪರಿಕ್, ರಾಯಲ್ ಪ್ರಸ್ಸಿಯಾ, ಪೋಲೆಂಡ್ ಸಾಮ್ರಾಜ್ಯ
ಕಾರ್ಯಕ್ಷೇತ್ರಗಣಿತಶಾಸ್ತ್ರ, ಖಗೋಳ ವಿಜ್ಞಾನ, ಕ್ಯಾನನ್ ಕಾನೂನು, ಔಷಧಿ, ಅರ್ಥಶಾಸ್ತ್ರ
ಅಭ್ಯಸಿಸಿದ ವಿದ್ಯಾಪೀಠಕ್ರಾಕೋವ್ ವಿಶ್ವವಿದ್ಯಾಲಯ, ಬೊಲೊಗ್ನಾ ವಿಶ್ವವಿದ್ಯಾಲಯ, ಪಡುವಾ ವಿಶ್ವವಿದ್ಯಾಲಯ, ಫೆರಾರಾ ವಿಶ್ವವಿದ್ಯಾಲಯ
ಪ್ರಸಿದ್ಧಿಗೆ ಕಾರಣಹೆಲಿಯೊಸೆಂಟ್ರಿಸಂ, ಕೋಪರ್ನಿಕಸ್ 'ಲಾ
ಹಸ್ತಾಕ್ಷರ

ನಿಕೋಲಸ್ ಕೋಪರ್ನಿಕಸ್'(೧೯ ಫೆಬ್ರುವರಿ ೧೪೭೩-೨೪ ಮೇ ೧೫೪೩) ಒಬ್ಬ ಖ್ಯಾತ ಖಗೋಳಶಾಸ್ತ್ರಜ್ಞ. ಪೋಲೆಂಡಿನ ಇವರನ್ನು ಆಧುನಿಕ ಖಗೋಳಶಾಸ್ತ್ರದ ಪಿತಾಮಹ ಎನ್ನುವರು. ಇವರು ಪ್ರಥಮವಾಗಿ ಭೂಮಿಯು ಒಂದು ಚಲಿಸುತ್ತಿರುವ ಗ್ರಹ ಎಂದು ಪ್ರತಿಪಾದಿಸಿದರು.

ಬಾಲ್ಯ[ಬದಲಾಯಿಸಿ]

ಕೋಪರ್ನಿಕಸ್ ೧೪೭೩ರಲ್ಲಿ ಪೋಲೆಂಡಿನ ಥಾರ್ನ್ ಎಂಬ ಪಟ್ಟಣದಲ್ಲಿ ವರ್ತಕನೊಬ್ಬನ ಮಗನಾಗಿ ಜನಿಸಿದನು. ಈತನ ಪೂರ್ವಜರು ಪೋಲೆಂಡಿನಲ್ಲಿ ನೆಲೆಸಿದ್ದ ಜರ್ಮನರು. ಎಳವೆಯಲ್ಲೇ ಕೊಪರ್ನಿಕಸ್ ತನ್ನ ತಂದೆಯನ್ನು ಕಳೆದುಕೊಂಡು ಬಿಷಪ್ ಆಗಿದ್ದ ಚಿಕ್ಕಪ್ಪನ ಆಸರೆಯಲ್ಲಿ ಬೆಳೆದ.

ಕೋಪರ್ನಿಕಸ್, ಕ್ರಾಕೋ ವಿಶ‍್ವವಿದ್ಯಾನಿಲಯದಲ್ಲಿ ಗಣಿತವನ್ನು ವ್ಯಾಸಂಗ ಮಾಡಿ, ಅನಂತರ ಇಟಲಿಯ ಬೊಲೋನಾದಲ್ಲಿ ಕ್ರೈಸ್ತ ಚರ್ಚಿನ ಕಾನೂನನ್ನೂ ಖಗೋಳಶಾಸ್ತ್ರವನ್ನೂ ಪಾದುವಾದಲ್ಲಿ ವೈದ್ಯಶಾಸ್ತ್ರವನ್ನೂ ವ್ಯಾಸಂಗಮಾಡಿದ. ೧೫೦೦ರಲ್ಲಿ ರೋಮಿಗೆ ಬಂದು ಅಲ್ಲಿ ಗಣಿತವನ್ನೂ ಖಗೋಳ ಶಾಸ್ತ್ರವನ್ನೂ ಕೆಲವು ಕಾಲ ಕಲಿಸಿ ಪ್ರಷ್ಯಾದ ಫ್ರೌವೆನ್‍ಬರ್ಗ್‍ಗೆ ವಾಪಸಾಗಿ ಅಲ್ಲಿಯ ಕೆಥೀಡ್ರಲಿನಲ್ಲಿ ಪಾದ್ರಿಯಾಗಿ ನೆಲೆಸಿದ.

ಖಗೋಳವಿಜ್ಞಾನಿಯಾಗಿ[ಬದಲಾಯಿಸಿ]

ಆಗ ಪ್ರಚಾರದಲ್ಲಿದ್ದ ಭೂಕೇಂದ್ರವಾದವನ್ನು ಈತ ನಿರಾಕರಿಸಿ ಸೂರ್ಯನೇ ಕೇಂದ್ರ ಬಿಂದು, ಅದರ ಸುತ್ತು ಉಳಿದೆಲ್ಲಾ ಗ್ರಹಗಳು ಸುತ್ತುತ್ತವೆ. ಅವುಗಳ ಪೈಕಿ ಭೂಮಿ ಒಂದೆಂದೂ ಸಾರಿದ. ಎಂದು ಜಗತ್ತಿಗೆ ತೋರಿಸಿಕೊಟ್ಟರು. ಆದ್ದರಿಂದ ಕೊಪರ್ನಿಕಸ್ ಸೂರ್ಯಕೇಂದ್ರವಾದವನ್ನು ಪ್ರತಿಪಾದಿಸಿದ ಖಗೋಳಜ್ಞನೆಂದು ಖ್ಯಾತಿ ಪಡೆದಿದ್ದಾನೆ. ಕೋಪರ್ ನಿಕಸ್ . ಭೂಮಿ ತನ್ನ ಅಕ್ಷದ ಸುತ್ತ ತಿರುಗುತ್ತಿರುವುದು . ಆ ಕಾರಣದಿಂದಲೇ ಹಗಲು-ರಾತ್ರಿಗಳಾಗುತ್ತವೆ ಎಂಬುದನ್ನು ಕಂಡು ಹಿಡಿದ.

ನಕ್ಷತ್ರಗಳು ನಮ್ಮಿಂದ ಅಗಾಧ ದೂರಗಳಲ್ಲಿವೆಯೆಂದೂ ಈತ ಘೋಷಿಸಿದ.

ವಿಷುವದ್ಬಿಂದುಗಳ ಅಪ್ರದಕ್ಷಿಣೆ ಮತ್ತು ಇದು ಹೇಗೆ ಋತುಗಳಿಗೆ ಕಾರಣವಾಗುತ್ತದೆಂಬುದನ್ನೂ ಈತ ತನ್ನ ಡಿ ಅರ್ಬಿಯಂ ಸೋಲೆಸ್ಟಿಯಂ ರಿವೊಲ್ಯೂಷನಿಬಸ್ ಗ್ರಂಥದಲ್ಲಿ ವಿವರಿಸಿದ್ದಾನೆ. ಇಷ್ಟಾದರೂ ಗ್ರಹಕಕ್ಷೆಗಳೆಲ್ಲ ಸಂಪೂರ್ಣವೃತ್ತಗಳೆಂದು ನಂಬಿ ಈತ ವೃತ್ತ ಮತ್ತು ಅಧಿವೃತ್ತಗಳ ವಾದವನ್ನೂ ಸಮರ್ಥಿಸಿದ್ದಾನೆ. ಈತನ ಗ್ರಂಥ 1530ರ ಹೊತ್ತಿಗೆ ಸಿದ್ಧವಾಗಿದ್ದರೂ 1540ಕ್ಕೆ ಮುಂಚೆ ಅದರ ಪ್ರಕಟಣೆಗೆ ಇವನು ಒಪ್ಪಲಿಲ್ಲ. ಕಡೆಯಲ್ಲಿ ಅದು ಪ್ರಕಟವಾದದ್ದು 1543ರಲ್ಲಿ ನಿಕೊಲಾಸ್ ಮರಣಶಯ್ಯೆಯಲ್ಲಿದ್ದಾಗ (ಮರಣ:ಮೇ.24, 1543). ಕ್ಯಾಥೊಲಿಕ್ ಚರ್ಚ್ ಕೂಡಲೇ ಗ್ರಂಥಕ್ಕೆ ಬಹಿಷ್ಕಾರ ಮುದ್ರೆ ಹಾಕಿತು.

(ನೋಡಿ- ಕೊಪರ್ನಿಕಸ್ ಸಿದ್ಧಾಂತ)