ವಿಷಯಕ್ಕೆ ಹೋಗು

ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಚಿವಾಲಯ, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ; ಕಠ್ಮಂಡು, ನೇಪಾಳ

'ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ' (ಸೌತ್ ಏಷಿಯನ್ ಅಸೋಸಿಯೇಶನ್ ಫಾರ್ ರೀಜನಲ್ ಕೋ-ಆಪರೇಶನ್- ಸಾರ್ಕ್ : The South Asian Association for Regional Cooperation - SAARC), ಇದು ಎಂಟು ದಕ್ಷಿಣ ಏಷ್ಯಾ ರಾಷ್ಟ್ರಗಳು ಸೇರಿ ರಚಿಸಿಕೊಂಡಿರುವ ಒಂದು ಅಂತರರಾಷ್ಟ್ರೀಯ ಪ್ರಾದೇಶಿಕ ಸಂಘಟನೆಯಾಗಿದ್ದು, ೧೯೮೫ರಲ್ಲಿ ಸ್ಥಾಪನೆಯಾಗಿದೆ. ಸಾಮೂಹಿಕ ಸ್ವಾವಲಂಬನೆಗೆ ಒತ್ತು ನೀಡುವುದರ ಜೊತೆಗೆ ಆರ್ಥಿಕ, ಸಾಮಾಜಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಾಧಿಸುವಲ್ಲಿ ಪರಸ್ಪರರಿಗೆ ನೆರವಾಗುವುದು ಈ ಸಂಘಟನೆಯ ಮೂಲ ಉದ್ದೇಶ. ಭಾರತ, ಮಾಲ್ಡೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಹಾಗೂ ನೇಪಾಳಗಳು ಸ್ಥಾಪಕ-ಸದಸ್ಯ ರಾಷ್ಟ್ರಗಳು. ಅಫ್ಘಾನಿಸ್ತಾನವು ನವದೆಹಲಿಯಲ್ಲಿ ನಡೆದ ಸಂಘಟನೆಯ ೧೪ನೇ ಶೃಂಗಸಭೆಯಲ್ಲಿ ದಿನಾಂಕ ಏಪ್ರಿಲ್ ೩, ೨೦೦೭ರಂದು ೮ನೇ ಸದಸ್ಯ ರಾಷ್ಟ್ರವಾಗಿ ಸಂಘಟನೆಗೆ ಸೇಪ೯ಡೆಗೊಂಡಿತು. ಸಂಘಟನೆಯ ಕೇಂದ್ರ ಕಛೇರಿಯು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿದೆ.

ಸಾರ್ಕ್ ಶೃಂಗಸಭೆಗಳ ಪಟ್ಟಿ

[ಬದಲಾಯಿಸಿ]
ಸಂಖ್ಯೆ ದಿನಾಂಕ ದೇಶ ಆಯೋಜನೆಗೊಂಡ ಸ್ಥಳ ಆಯೋಜಿಸಿದ್ದ ನಾಯಕರು
1 7–8 ಡಿಸೆಂಬರ್ 1985
ಬಾಂಗ್ಲಾದೇಶ
ಢಾಕಾ ಅತಾವುರ್ ರೆಹಮಾನ್ ಖಾನ್
2 16–17 ನವೆಂಬರ್ 1986
ಭಾರತ
ಬೆಂಗಳೂರು ರಾಜೀವ್ ಗಾಂಧಿ
3 2–4 ನವೆಂಬರ್ 1987
ನೇಪಾಳ
ಕಠ್ಮಂಡು ರಾಜಾ ಬೀರೇಂದ್ರ
4 29–31 ಡಿಸೆಂಬರ್ 1988
ಪಾಕಿಸ್ತಾನ
ಇಸ್ಲಾಮಾಬಾದ್ ಬೆನಜಿರ್ ಭುಟ್ಟೋ
5 21–23 ನವೆಂಬರ್ 1990
ಮಾಲ್ಡೀವ್ಸ್
ಮಾಲೆ ಮೌಮೂನ್ ಅಬ್ದುಲ್ ಗಯೂಮ್
6 21 ಡಿಸೆಂಬರ್ 1991
ಶ್ರೀಲಂಕಾ
ಕೊಲಂಬೊ ರಣಸಿಂಘೆ ಪ್ರೇಮದಾಸ
7 10–11 ಏಪ್ರಿಲ್ 1993
ಬಾಂಗ್ಲಾದೇಶ
ಢಾಕಾ ಖಾಲಿದಾ ಜಿಯಾ
8 2–4 ಮೇ 1995
ಭಾರತ
ನವದೆಹಲಿ ಪಿ.ವಿ.ನರಸಿಂಹರಾವ್
9 12–14 ಮೇ 1997
ಮಾಲ್ಡೀವ್ಸ್
ಮಾಲೆ ಮೌಮೂನ್ ಅಬ್ದುಲ್ ಗಯೂಮ್
10 29–31 ಜುಲೈ 1998
ಶ್ರೀಲಂಕಾ
ಕೊಲಂಬೊ ಚಂದ್ರಿಕಾ ಕುಮಾರತುಂಗ
11 4–6 ಜನವರಿ 2002
ನೇಪಾಳ
ಕಠ್ಮಂಡು ಶೇರ್ ಬಹಾದ್ದೂರ್ ದೇವುಬಾ
12 2–6 ಜನವರಿ 2004
ಪಾಕಿಸ್ತಾನ
ಇಸ್ಲಾಮಾಬಾದ್ ಜಫಾರುಲ್ಲಾ ಖಾನ್ ಜಮಾಲಿ
13 12–13 ನವೆಂಬರ್ 2005
ಬಾಂಗ್ಲಾದೇಶ
ಢಾಕಾ ಖಾಲಿದಾ ಜಿಯಾ
14 3–4 ಏಪ್ರಿಲ್ 2007
ಭಾರತ
ನವದೆಹಲಿ ಮನಮೋಹನ್ ಸಿಂಗ್
15 1–3 ಆಗಸ್ಟ್ 2008
ಶ್ರೀಲಂಕಾ
ಕೊಲಂಬೊ ಮಹಿಂದಾ ರಾಜಪಕ್ಸೆ
16 28–29 ಏಪ್ರಿಲ್ 2010
ಭೂತಾನ್
ಥಿಂಪು ಜಿಗ್ಮೆ ಥಿನ್ಲೆ
17 10–11 ನವೆಂಬರ್ 2011
ಮಾಲ್ಡೀವ್ಸ್
ಅದ್ದು ಮೊಹಮ್ಮದ್ ನಶೀದ್
18 26–27 ನವೆಂಬರ್ 2014
ನೇಪಾಳ
ಕಠ್ಮಂಡು ಸುಶೀಲ್ ಕೊಯಿರಾಲಾ
19 9–10 ನವೆಂಬರ್ 2016
ಪಾಕಿಸ್ತಾನ
ಇಸ್ಲಾಮಾಬಾದ್ ರದ್ದುಗೊಂಡಿದೆ
20 2019
ಶ್ರೀಲಂಕಾ
ಕೊಲಂಬೊ ಮೈತ್ರಿಪಾಲ ಸಿರಿಸೇನಾ

ಉಲ್ಲೇಖ

[ಬದಲಾಯಿಸಿ]