ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ

ವಿಕಿಪೀಡಿಯ ಇಂದ
Jump to navigation Jump to search
ಸಚಿವಾಲಯ, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ; ಕಠ್ಮಂಡು, ನೇಪಾಳ
SAARC.PNG

'ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ' (ಸೌತ್ ಏಷಿಯನ್ ಅಸೋಸಿಯೇಶನ್ ಫಾರ್ ರೀಜನಲ್ ಕೋ-ಆಪರೇಶನ್- ಸಾಕ್೯ : The South Asian Association for Regional Cooperation - SAARC), ಇದು ಎಂಟು ದಕ್ಷಿಣ ಏಷ್ಯಾ ರಾಷ್ಟ್ರಗಳು ಸೇರಿ ರಚಿಸಿಕೊಂಡಿರುವ ಒಂದು ಅಂತರರಾಷ್ಟ್ರೀಯ ಪ್ರಾದೇಶಿಕ ಸಂಘಟನೆಯಾಗಿದ್ದು,೧೯೮೫ರಲ್ಲಿ ಸ್ಥಾಪನೆಯಾಗಿದೆ. ಸಾಮೂಹಿಕ ಸ್ವಾವಲಂಬನೆಗೆ ಒತ್ತು ನೀಡುವುದರ ಜೊತೆಗೆ ಆಥಿ೯ಕ,ಸಾಮಾಜಿಕ,ತಾಂತ್ರಿಕ,ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಾಧಿಸುವಲ್ಲಿ ಪರಸ್ಪರರಿಗೆ ನೆರವಾಗುವುದು ಈ ಸಂಘಟನೆಯ ಮೂಲ ಉದ್ದೇಶ. ಭಾರತ, ಮಾಲ್ಡೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಹಾಗೂ ನೇಪಾಳಗಳು ಸ್ಥಾಪಕ-ಸದಸ್ಯ ರಾಷ್ಟ್ರಗಳು. ಅಫ್ಘಾನಿಸ್ತಾನವು ನವದೆಹಲಿಯಲ್ಲಿ ನಡೆದ ಸಂಘಟನೆಯ ೧೪ನೇ ಶೃಂಗಸಭೆಯಲ್ಲಿ ದಿನಾಂಕ ಏಪ್ರಿಲ್ ೩, ೨೦೦೭ರಂದು ೮ನೇ ಸದಸ್ಯ ರಾಷ್ಟ್ರವಾಗಿ ಸಂಘಟನೆಗೆ ಸೇಪ೯ಡೆಗೊಂಡಿತು. ಸಂಘಟನೆಯ ಕೇಂದ್ರ ಕಛೇರಿಯು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿದೆ.

ಉಲ್ಲೇಖ[ಬದಲಾಯಿಸಿ]