ಬೇಲೂರು ರಘುನಂದನ್
ಡಾ.ಬೇಲೂರು ರಘುನಂದನ್ ಅವರು ಒಬ್ಬ ಕವಿ ಮತ್ತು ನಾಟಕಕಾರರು. ಅವರು ಕಾವ್ಯ, ಮಕ್ಕಳ ಸಾಹಿತ್ಯ, ನಾಟಕ, ಕಥೆಗಳು, ಅಂಕಣ ಬರಹ, ಪ್ರವಾಸ ಸಾಹಿತ್ಯ ಮತ್ತು ಸಂಶೋಧನಾ ಬರಹಗಳನ್ನು ಬರೆಯುತ್ತಾರೆ. ಇವರ ನಾಟಕಗಳು ತಮಿಳು,ಕೊಂಕಣಿ, ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. [೧][೨][೩][೪]
ಬಾಲ್ಯ
[ಬದಲಾಯಿಸಿ]ಬೇಲೂರು ರಘುನಂದನ್ ಅವರು ಸುಬ್ಬಲಕ್ಷ್ಮಿ ಮತ್ತು ರಮೇಶ್ ದಂಪತಿಯ ಹಿರಿಯ ಮಗನಾಗಿ, ಹಾಸನ ಜಿಲ್ಲೆಯ ಬೇಲೂರಿನಲ್ಲಿ ಜನಿಸಿದರು. ಇವರಿಗೆ ಒಬ್ಬ ಸೋದರಿ ಹಾಗೂ ಸೋದರ ಇದ್ದಾರೆ.
ಬೇಲೂರು ರಘುನಂದನ್, ಅವರ ಸೋದರಿಯ ಹೆಸರಿನೊಂದಿಗೆ 'ಶ್ವೇತಪ್ರಿಯ ಗುರುವೆ' ಎಂಬ ಅಂಕಿತದೊಂದಿಗೆ ನಾಲ್ಕು ನೂರಕ್ಕೂ ಹೆಚ್ಚು ಕಟ್ಟುಪದಗಳನ್ನು (ವಚನ) ರಚಿಸಿದ್ದಾರೆ. ಇವರ ಬಾಲ್ಯದ ಅನುಭವಗಳು ಚಿಟ್ಟೆ ನಾಟಕದಲ್ಲಿ ಪ್ರಕಟಗೊಂಡಿವೆ.
ಶಿಕ್ಷಣ
[ಬದಲಾಯಿಸಿ]ಇವರು ಬೇಲೂರಿನ ವೈ.ಡಿ.ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸಿದರು.
ಇವರು ರಾಷ್ಟ್ರಕವಿ ಕೆ.ವಿ ಪುಟ್ಟಪ್ಪ ಚಿನ್ನದ ಪದಕ, ಡಾ. ಚದುರಂಗ ಸುಬ್ರಮಣ್ಯ ರಾಜೇ ಅರಸ್ ಚಿನ್ನದ ಪದಕ ಮತ್ತು ಶ್ರೀಮತಿ ಎಚ್.ಎಲ್ ನಾಗರತ್ನಮ್ಮ, ಶ್ರೀ ಲಕ್ಷ್ಮಣ ಶೆಟ್ಟಿ ಚಿನ್ನದ ಪದಕಗಳೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ಧಿ ನಾಟಕಗಳು: ಒಂದು ಅಧ್ಯಯನ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ ಹಾಗೂ ಕನ್ನಡ ರಂಗಭೂಮಿ ಮತ್ತು ಸಿನೆಮಾ : ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ವೃತ್ತಿ ಜೀವನ
[ಬದಲಾಯಿಸಿ]ಇವರು ಬೇಲೂರಿನ ಶಾಂತಲ ಪದವಿ ಕಾಲೇಜು, ಹೊಯ್ಸಳ ಕಾಲೇಜು ಮತ್ತು ಸರ್ವೋದಯ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿ ನಂತರ 2009 ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಗೆ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದರು. ಒಂದು ವರ್ಷ ಉದಯ ಟಿ.ವಿಯಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿ ಹಾಗೂ ಬೆಂಗಳೂರಿನ ಕೆನರಾ ಬ್ಯಾಂಕ್ ಲೇಔಟ್ ನಲ್ಲಿರುವ ಅರಬಿಂದೊ ಶಾಲೆಯಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರನ್ನು 2017 ರಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ.
ಕಾಜಾಣ
[ಬದಲಾಯಿಸಿ]೨೦೦೯ ರಲ್ಲಿ ಸಾಹಿತ್ಯ, ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳಿಗೆ ಕೆಲಸ ಮಾಡಲು ಕಾಜಾಣ ಬಳಗವನ್ನು ಪ್ರಾರಂಭಿಸಿದರು. ಇದು ಕಾವ್ಯ ಕಮ್ಮಟ, ಪುಸ್ತಕ ಪ್ರಕಟಣೆ, ರಂಗ ಕಮ್ಮಟ, ಚಿಣ್ಣರ ಕಾಜಾಣ, ಸಸ್ಯ ಕಾಜಾಣ, ಸಿನಿ ಕಾಜಾಣ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಮಾಡುತ್ತದೆ.


ಕಾಜಾಣ ಪ್ರಕಾಶನವು ಇದುವರೆಗೂ ಕವಿತೆ, ಆತ್ಮಕತೆ, ವಿಮರ್ಶೆ, ಸಂಶೋಧನೆ, ಸಂಪಾದನೆ ಮುಂತಾದ ಪ್ರಕಾರಗಳಲ್ಲಿ ಪುಸ್ತಕಗಳನ್ನು ಹೊರ ತಂದಿದೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಬೇಲೂರು ರಘುನಂದನ್ ಅವರು ಲಕ್ಷ್ಮಿಯವರನ್ನು ವಿವಾಹವಾದರು. ಇವರಿಗೆ ಗೋಕುಲ ಸಹೃದಯ ಮತ್ತು ಉದಯರವಿ ಎಂಬ ಇಬ್ಬರು ಮಕ್ಕಳಿದ್ದಾರೆ.
ಸಾಹಿತ್ಯ
[ಬದಲಾಯಿಸಿ]ಕಾವ್ಯ
[ಬದಲಾಯಿಸಿ]- ಶ್ವೇತಪ್ರಿಯ (2011) - ಶ್ವೇತಪ್ರಿಯ ಪ್ರಕಾಶನ ISBN-978-81-923791-0-4
- ಕನ್ನಡಿ ಮುಂದೆ ನಿಂತಾಗ (2011) - ಶ್ವೇತಪ್ರಿಯ ಪ್ರಕಾಶನ ISBN-978-81-923791-1-1
- ಕವಿಶೈಲದ ಕವಿತೆಗಳು (2012) - ಶ್ವೇತಪ್ರಿಯ ಪ್ರಕಾಶನ ISBN- 978-81-923791-2-8
- ಹಸುರು (2012) - ಶ್ವೇತಪ್ರಿಯ ಪ್ರಕಾಶನ ISBN- 978-81-923791-3-5
- ಸೊನ್ನೆಯಾಗುವ ಕಾಯ (2018) - ನವಸ್ಫೂರ್ತಿ ಪ್ರಕಾಶನ ISBN-978-81-939820-2-0
- ಮಗ್ಗದ ಮನೆ (2025) - ರಾಸೀ ಪ್ರಕಾಶನ ISBN 978-81-954298-0-6
- ರಾಗರಂಗ (ಈವರೆಗಿನ ರಂಗಗೀತೆಗಳು)
ಮಕ್ಕಳ ಸಾಹಿತ್ಯ
[ಬದಲಾಯಿಸಿ]- ಚಿನ್ನಾರಿಯ ಚಿತ್ರ (2012)
- ನಿಸರ್ಗ ಮತ್ತು ಗುಬ್ಬಚ್ಚಿ (2014) - ಅಹರ್ಣಿಶಿ ಪ್ರಕಾಶನ ISBN- 978-93-84501075-05 [೫]
- ಹಾರುವ ಆನೆ (2018) - ಶ್ವೇತಪ್ರಿಯ ಪ್ರಕಾಶನ
- ಚಿಟ್ಟೆ (ಮಕ್ಕಳ ನಾಟಕ) (2022) - ಶಾರದಾ ಪ್ರತಿಷ್ಠಾನ
ಕಥಾ ಸಾಹಿತ್ಯ
[ಬದಲಾಯಿಸಿ]- ಅಪ್ಪ ಕಾಣೆಯಾಗಿದ್ದಾನೆ (2022) - ಅಮೂಲ್ಯ ಪುಸ್ತಕ
ಕಟ್ಟುಪದ
[ಬದಲಾಯಿಸಿ]- ನೂರೊಂದು ವಚನಗಳು (2012) - ಶ್ವೇತಪ್ರಿಯ ಪ್ರಕಾಶನ ISBN- 978-81-923791-42
- ಅರಿವು ತೊರೆ (2013) - ಸಪ್ನ ಬುಕ್ ಹೌಸ್
- ಬೆತ್ತಲು (2014) - ಅಂಕ ಪ್ರಕಾಶನ
- ಅಮ್ಮ (2014) - ಅಂಕ ಪ್ರಕಾಶನ
- ಪದ ಪದ ಕಟ್ಟುಪದ (2021) - ಶಾರದಾ ಪ್ರತಿಷ್ಠಾನ
ಪ್ರವಾಸ ಸಾಹಿತ್ಯ
[ಬದಲಾಯಿಸಿ]- ಜೀವನ್ಮುಖಿ ತೀಸ್ತಾ (2016) - ಕರ್ನಾಟಕ ಸಾಹಿತ್ಯ ಅಕಾಡೆಮಿ ISBN-978-81-931964-7-2
ನಾಟಕ ರಚನೆ
[ಬದಲಾಯಿಸಿ]- ರಕ್ತವರ್ಣೆ (2016) - ಅವಿರತ ಪುಸ್ತಕ ISBN-978-93-837690-7-0[೬]
- ಸಾಲುಮರಗಳ ತಾಯಿ ತಿಮ್ಮಕ್ಕ (ಸಾಲುಮರದ ತಿಮ್ಮಕ್ಕ ಅವರ ಜೀವನಾಧಾರಿತ) (2016) - ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್
- ತಿಪ್ಪೇರುದ್ರ (2016) - ಸಪ್ನ ಬುಕ್ ಹೌಸ್
- ಭೂಮಿ
- ರೂಪ ರೂಪಗಳನು ದಾಟಿ (2019) - ಆಕೃತಿ ಪುಸ್ತಕ [೭]
- ಬೊಂಬಾಯ್ ಮಿಠಾಯಿ (ಮಕ್ಕಳ ನಾಟಕ)
- ಬೆಳಕಿನ ಅಂಗಡಿ (2019) - ಆಕೃತಿ ಪುಸ್ತಕ
- ಮೋಹನ ತರಂಗಿಣಿ - ಸಪ್ನ ಬುಕ್ ಹೌಸ್ (ಕನಕದಾಸರ ಮೋಹನ ತರಂಗಿಣಿ ಮಹಾಕಾವ್ಯ ಆಧಾರಿತ)
- ಶರ್ಮಿಷ್ಠೆ(ಏಕವ್ಯಕ್ತಿ ನಾಟಕ) (2025)- ಕಾಂಕೇವ್ ಮೀಡಿಯಾ ಮತ್ತು ಪ್ರಕಾಶನ
- ರೂಬಿಕ್ಸ್ ಕ್ಯೂಬ್ - ಕಾಜಾಣ ಪ್ರಕಾಶನ
- ದಹನಾಗ್ನಿ
- ತೊರೆದು ಜೀವಿಸಬಹುದೇ (2024) - ಸಪ್ನ ಬುಕ್ ಹೌಸ್
- ಆಯಾಮ
- ಉಧೋ ಉಧೋ ಎಲ್ಲವ್ವ (ಜನಪದ ಏಕ ವ್ಯಕ್ತಿ ನಾಟಕ) (2023) - ಸಪ್ನ ಬುಕ್ ಹೌಸ್
- ಚಿಟ್ಟೆ (ಏಕವ್ಯಕ್ತಿ ನಾಟಕ) (2022) - ಶಾರದಾ ಪ್ರತಿಷ್ಠಾನ
- ಗರ್ಭ
- ಕ್ಲೀನ್ ಆಂಡ್ ಕ್ಲಿಯರ್ ಪಾಯಖಾನೆ - ಕಾಜಾಣ ಪ್ರಕಾಶನ
- ಸಾಕುಮಗಳು
- ವಿಧುರಾಶ್ವಥದ ವೀರಗಾಥೆ (2024) - ಸಪ್ನ ಬುಕ್ ಹೌಸ್
- ಗಾರ್ಗಿ (2024) - ಸಪ್ನ ಬುಕ್ ಹೌಸ್
- ವಿದಗ್ಧೆ
- ನಗರ ಪೂಜೆ
- ನಮ್ ಸ್ಕೂಲು
- ಅಧಿನಾಯಕಿ (2023) - ಸಪ್ನ ಬುಕ್ ಹೌಸ್
- ಅಲೆಮಾರಿ ಭಾರತ
- ಆ ಈ ಫ್ಯಾಮಿಲಿ
- ಥೆರೇಸಮ್ಮ (ಮದರ್ ಥೆರೇಸಾ ಅವರ ಜೀವನಾಧಾರಿತ)
- ಪ್ರೇಮಮಯಿ ಹಿಡಿಂಬೆ
- ಪಂಚವರ್ಣೆ
- ಮೂಲ (ನೋವಿನಲ್ಲೂ ನಕ್ಕು ಬಿಡಿ)
- ಪ್ರಾಣಿ ಪ್ರಪಂಚ
- ಭೂಮಿ ಹುಳ (ಮಕ್ಕಳ ನಾಟಕ)
- ತೆರೆ ಮರೆಯಾದ ಕಥೆ
- ಅಕ್ಕ
- ಪ್ರೇಮಲೋಕ
- ಶಾಶ್ವತ ಪರಿಹಾರ
- ಆಟ
- ಇಷ್ಟು ಕಾಲ (ಎಚ್.ಎಸ್. ವೆಂಕಟೇಶಮೂರ್ತಿ ಅವರ ಕವಿತೆಗಳ ಆಧಾರಿತ)
- ಯು ಆರ್ ಆಲ್ಸೋ ಆನ್ ಅನಿಮಲ್ ಲೈಕ್ ಮಿ
ರಂಗಪಠ್ಯ
- ಮುದ್ದು ಮಗಳೇ (ಲತಾ ಶ್ರೀನಿವಾಸ್ ಅವರ ಮುದ್ದು ಮಗಳೇ ಕೃತಿ ಆಧಾರಿತ)
- ಲೆಟರ್ಸ್ ಟು ಡೆಥ್ (ಜಾನ್ ಕೀಟ್ಸ್ ಅವರ ಜೀವನ ಮತ್ತು ರಾಗಂ ಅವರ ಕೀಟ್ಸ್ ಕೃತಿ ಆಧಾರಿತ)
- ಅಕ್ಕಯ್ (ಅಕ್ಕಯ್ ಪದ್ಮಶಾಲಿ ಅವರ ಜೀವನ ಮತ್ತು ಡೊಮಿನಿಕ್ ಅವರ ಅಕ್ಕಯ್ ಕೃತಿ ಆಧಾರಿತ) (2022) - ಶಾರದಾ ಪ್ರತಿಷ್ಠಾನ
- ಮಾತಾ (ಪದ್ಮಶ್ರೀ ಮಾತಾ. ಬಿ ಮಂಜಮ್ಮ ಜೋಗತಿ ಅವರ ಜೀವನ ಮತ್ತು ಅರುಣ್ ಜೋಳದಕೂಡ್ಲಿಗಿ ಅವರ ನಡುವೆ ಸುಳಿವ ಹೆಣ್ಣು ಹಾಗೂ ಡಾ. ಚಂದ್ರಪ್ಪ ಸೊಬಟಿ ಅವರ ಮಂಜಮ್ಮ ಜೋಗತಿ ಕೃತಿ ಆಧಾರಿತ)
- ನಾಗಸಂಪಿಗೆ (ಲಿಂಗೇಗೌಡ ಅವರ ಜೀವನ ಆಧರಿಸಿ ಎನ್. ಲಿಂಗಯ್ಯ ಅವರ 'ನಾಗಸಂಪಿಗೆ' ಕೃತಿ ಆಧಾರಿತ ಏಕವ್ಯಕ್ತಿ ನಾಟಕ)
- ಅಮೀರ್ ಬಾಯಿ ಕರ್ನಾಟಕಿ (ರಹಮತ್ ತರೀಕೆರೆ ಅವರ ಅಮೀರ್ ಬಾಯಿ ಕರ್ನಾಟಕಿ ಕೃತಿ ಆಧಾರಿತ ನಾಟಕ)
ನಿರ್ದೇಶನ ಮಾಡಿದ ನಾಟಕಗಳು
- ಬೇಲೂರಿನ ನೇತಾಜಿ ಶಾಲೆಯ ಮಕ್ಕಳಿಗೆ ‘ಹಕ್ಕಿಯ ಹಾಡು’, ಸಂಗೀತ ನೃತ್ಯ ನಾಟಕವನ್ನು ರಚಿಸಿ ನಿರ್ದೇಶನ - 1996
- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯ ನಗರ, ಬೆಂಗಳೂರಿನ ‘ರಂಗ ಚಿರಂತನ’ ರಂಗತಂಡಕ್ಕೆ ಪಿ.ಲಂಕೇಶರ ‘ಕ್ರಾಂತಿ ಬಂತು ಕ್ರಾಂತಿ’ ನಾಟಕ ನಿರ್ದೇಶನ - 2012
- ರಂಗಚಿರಂತನ ರಂಗ ತಂಡಕ್ಕೆ ಎಸ್.ಜಿ.ಸಿದ್ಧರಾಮಯ್ಯ ಅವರ ‘ದಾಳ’ ನಾಟಕದ ನಿರ್ದೇಶನ - 2019
- ರಂಗಚಿರಂತನ ರಂಗ ತಂಡಕ್ಕೆ ‘ಸಾಕುಮಗಳು’ ನಾಟಕ ರಚಿಸಿ, ನಿರ್ದೇಶನ - 2021
- ಕಾಜಾಣ, ರಂಗ ಪಯಣ ತಂಡಕ್ಕೆ ಅಕ್ಕಯ್ ಪದ್ಮಶಾಲಿ ಅವರ ಜೀವನಾಧಾರಿತ ‘ಅಕ್ಕಯ್’ ನಾಟಕ ರಂಗಪಠ್ಯ, ನಿರ್ದೇಶನ - 2022
- ರಂಗ ಚಂದಿರ ತಂಡಕ್ಕೆ ಜಾನ್ ಕೀಟ್ಸ್ ಕವಿಯ ಪತ್ರಾಧಾರಿತ ‘ಲೆಟರ್ಸ್ ಟು ಡೆಥ್’ ನಾಟಕ ರಚಿಸಿ ನಿರ್ದೇಶನ – 2022
- ರಂಗಚಿರಂತನ ಮತ್ತು ಕಲಾ ಸಾಮ್ರಾಟ್ ತಂಡಗಳಿಗೆ ‘ನಗರಪೂಜೆ’ ನಾಟಕ ರಚಿಸಿ, ನಿರ್ದೇಶನ -2022
- ವಿದ್ಯಾಸಾಗರ ಅಲುಮ್ನಿ ತಂಡಕ್ಕೆ ‘ನಮ್ ಸ್ಕೂಲು’ ನಾಟಕ ರಚಿಸಿ, ನಿರ್ದೇಶನ – 2022
- ಕಾಜಾಣ ತಂಡಕ್ಕೆ ಮಂಜಮ್ಮ ಜೋಗತಿ ಅವರ ಜೀವನಾಧಾರಿತ ‘ಮಾತಾ’ ನಾಟಕ ರಂಗಪಠ್ಯ ಮತ್ತು ನಿರ್ದೇಶನ -2023
- ಅದಮ್ಯರಂಗ ತಂಡಕ್ಕೆ ‘ಅಧಿನಾಯಕಿ’ ಏಕವ್ಯಕ್ತಿ ನಾಟಕ ರಚನೆ ಮತ್ತು ನಿರ್ದೇಶನ -2023
- ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ ಬೆಂಗಳೂರು ಇಲ್ಲಿನ ಅಭಿನಯ ತಂಡದ ವಿದ್ಯಾರ್ಥಿನಿಯರಿಗೆ ‘ಗರ್ಭ’ ನಾಟಕ ರಚನೆ, ಸಂಗೀತ ಮತ್ತು ನಿರ್ದೇಶನ -2023
- ರಂಗಚಿರಂತನ ರಂಗ ತಂಡಕ್ಕೆ ‘ಅಲೆಮಾರಿ ಭಾರತ’ ನಾಟಕ ರಚನೆ, ಸಂಗೀತ ಮತ್ತು ನಿರ್ದೇಶನ-2024
- ಕಲಾಚೈತನ್ಯ, ಎಂ. ಇ. ಎಸ್ ಕಾಲೇಜು, ಬೆಂಗಳೂರು ತಂಡಕ್ಕೆ ‘ನಗರ ಪೂಜೆ’ ನಾಟಕ ನಿರ್ದೇಶನ – 2024
- ರಂಗ ಬದುಕು ಟ್ರಸ್ಟ್ ತಂಡದ ಹಿರಿಯ ರಂಗ ಕಲಾವಿದೆ ಹೆಲನ್ ಮೈಸೂರು ಅಭಿನಯದ ಮದರ್ ಥೆರೇಸಾ ಜೀವನಾಧಾರಿತ ‘ಥೆರೇಸಮ್ಮ’ ಏಕವ್ಯಕ್ತಿ ನಾಟಕ ರಚನೆ, ಸಂಗೀತ ಮತ್ತು ನಿರ್ದೇಶನ – 2024
- ಕಾಜಾಣ ತಂಡಕ್ಕೆ ಸಾಲುಮರದ ತಿಮ್ಮಕ್ಕ ಅವರ ಜೀವನಾಧಾರಿತ ‘ಸಾಲುಮರಗಳ ತಾಯಿ ತಿಮ್ಮಕ್ಕ’ ನಾಟಕದ ರಚನೆ, ಸಂಗೀತ ಮತ್ತು ನಿರ್ದೇಶನ – 2024
- ಕಾಜಾಣ ತಂಡಕ್ಕೆ ಶೋಭಾ ಪ್ರಭು ರಚನೆಯ ಲೀಲಾವತಿ ಅವರ ಅಭಿನಯದ ‘ಆದಿಶಕ್ತಿ’ ಏಕವ್ಯಕ್ತಿ ನಾಟಕ ನಿರ್ದೇಶನ – 2024
- ರಂಗ ವಿಜಯ ತಂಡಕ್ಕೆ ಗೀತ ಅವರ ‘ಪ್ರೇಮಮಯಿ ಹಿಡಿಂಬೆ’ ನಾಟಕದ ರಚನೆ, ಸಂಗೀತ ಮತ್ತು ನಿರ್ದೇಶನ – 2024
- ಕಾಜಾಣ ತಂಡಕ್ಕೆ ಮೀರಾ. ಎಚ್. ಎನ್ ಅಭಿನಯದ ಏಕವ್ಯಕ್ತಿ ಅಭಿನಯವಿರುವ ‘’ಪಂಚವರ್ಣೆ” ನಾಟಕದ ರಚನೆ, ಸಂಗೀತ ಮತ್ತು ನಿರ್ದೇಶನ - 2024
- ಕಾಜಾಣ ತಂಡಕ್ಕೆ ಚಲಂ ಹಾಡ್ಲಹಳ್ಳಿ ಅವರ ರಚನೆಯ ಹಾಡ್ಲಹಳ್ಳಿ ನಾಗರಾಜ ಅವರ ಜೀವನ - ಕೃತಿ ಆಧಾರಿತ ಅರುಣ್ ಕುಮಾರ್ ಅವರ ಅಭಿನಯದ “ಬೆಂಕಿರೂಟು” ಏಕವ್ಯಕ್ತಿ ನಾಟಕ ನಿರ್ದೇಶನ – 2024
- ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ ಬೆಂಗಳೂರು ಇಲ್ಲಿನ ಅಭಿನಯ ತಂಡದ ವಿದ್ಯಾರ್ಥಿಗಳಿಗೆ ‘ಪ್ರಾಣಿ ಪ್ರಪಂಚ’ ನಾಟಕ ರಚನೆ ಮತ್ತು ನಿರ್ದೇಶನ -2024
- ರಂಗಚಿರಂತನ ತಂಡಕ್ಕೆ ‘ಅಕ್ಕ’ ನಾಟಕ ರಚಿಸಿ ನಿರ್ದೇಶನ -2025
- ಮೌಂಟ್ ಕಾರ್ಮೆಲ್ ಕಾಲೇಜಿನ ಅಭಿನಯ ತಂಡಕ್ಕೆ ಹಿರಿಯ ಕವಿಗಳಾದ ಎಚ್. ಎಸ್. ವೆಂಕಟೇಶಮೂರ್ತಿ ಅವರ ಕಾವ್ಯವನ್ನು ಆಧರಿಸಿದ ‘ಎಚ್. ಎಸ್. ವಿ ಕಾವ್ಯರಂಗ’ ನಾಟಕ ರಂಗರೂಪ ಮತ್ತು ನಿರ್ದೇಶನ - 2025
- ಸ್ಟೇಜ್ ಬೆಂಗಳೂರು ತಂಡಕ್ಕೆ ‘ಶಾಶ್ವತ ಪರಿಹಾರ’ ಹಾಸ್ಯ ನಾಟಕ ರಚನೆ ಮತ್ತು ನಿರ್ದೇಶನ –2025
- ಸ್ಟೇಜ್ ಬೆಂಗಳೂರು ತಂಡಕ್ಕೆ ‘ತಿಪ್ಪೇರುದ್ರ’ ಹಾಗೂ ‘ಆಟ’ ನಾಟಕ ರಚನೆ, ಸಂಗೀತ ಮತ್ತು ನಿರ್ದೇಶನ –2025
- ರಂಗಬದುಕು ತಂಡಕ್ಕೆ ‘ಅಮೀರ್ ಬಾಯಿ ಕರ್ನಾಟಕಿ’ ನಾಟಕ ರಂಗಪಠ್ಯ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನ – 2025
- ಕಾಜಾಣ ತಂಡಕ್ಕೆ ಪದ್ಮಶ್ರೀ ಗೋವಿಂದರಾಜ್ ಅವರ ರಚನೆಯ ವೃಷಾಲಿ ಏಕವ್ಯಕ್ತಿ ನಾಟಕ ರಂಗಪಠ್ಯ, ಸಂಗೀತ ಮತ್ತು ನಿರ್ದೇಶನ - 2025
- ಕಾಜಾಣ ತಂಡಕ್ಕೆ ಲಿಂಗೇಗೌಡ ಅವರ ಜೀವನ ಆಧರಿಸಿ ಎನ್. ಲಿಂಗಯ್ಯ ಅವರ 'ನಾಗಸಂಪಿಗೆ' ಕೃತಿ ಆಧಾರಿತ ಏಕವ್ಯಕ್ತಿ ನಾಟಕ ರಂಗಪಠ್ಯ, ಸಂಗೀತ ಮತ್ತು ನಿರ್ದೇಶನ - 2026
- ರಂಗಚಿರಂತನ ತಂಡಕ್ಕೆ "ಯು ಆರ್ ಆಲ್ಸೋ ಆನ್ ಅನಿಮಲ್ ಲೈಕ್ ಮಿ" ನಾಟಕ ರಚನೆ ಮತ್ತು ನಿರ್ದೇಶನ -2026
ರಂಗ ಸಂಗೀತ (ಸಂಗೀತ ನಿರ್ದೇಶನ)
- ಗರ್ಭ -2023
- ಅಲೆಮಾರಿ ಭಾರತ -2024
- ಥೆರೇಸಮ್ಮ -2024
- ಸಾಲುಮರಗಳ ತಾಯಿ ತಿಮ್ಮಕ್ಕ -2024
- ಪಂಚವರ್ಣೆ – 2024
- ಪ್ರೇಮಮಯಿ ಹಿಡಿಂಬೆ – 2024
- ಅಮೀರ್ ಬಾಯಿ ಕರ್ನಾಟಕಿ-2025
ಸುಮಾರು 700 ಹೆಚ್ಚು ರಂಗ ಗೀತೆಗಳನ್ನು ವಿವಿಧ ತಂಡಗಳಿಗೆ, ಬೇರೆ ಬೇರೆ ನಾಟಕಗಳಿಗೆ ಬರೆಯಲಾಗಿದೆ.
ಅಂಕಣ ಬರಹ
ಸಂಪಾದನೆ
[ಬದಲಾಯಿಸಿ]- ಕಿರಂ ಹೊಸಕವಿತೆ ಸಂಪುಟ ೧ (2012)
- ಕಿರಂ ಹೊಸಕವಿತೆ ಸಂಪುಟ ೨ (2018)[೧೩]
- ಕಾವ್ಯಯಾನ (ಎಚ್. ಎ. ಎಲ್ ಕನ್ನಡ ಸಂಘಕ್ಕೆ ಸಂಪಾದಿಸಿದ ಕಾವ್ಯ ಕೃತಿ)
- ಹಸಿರ ಬನಿ (ಸಾಲುಮರದ ತಿಮ್ಮಕ್ಕನವರ ವ್ಯಕ್ತಿ ಚಿತ್ರ) (2025) - ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್
ವಿಮರ್ಶೆ
[ಬದಲಾಯಿಸಿ]- ಕ್ರಿಯೆ ಪ್ರತಿಕ್ರಿಯೆ -೨೦೨೫ (ಕದಂಬ ಪ್ರಕಾಶನ)
ಪ್ರಶಸ್ತಿ - ಪುರಸ್ಕಾರಗಳು
[ಬದಲಾಯಿಸಿ]ಕನ್ನಡ ನಾಟಕ ಮತ್ತು ರಂಗಭೂಮಿ ಸಾಧನೆಗೆ ದೊರಕಿದ ಪ್ರಶಸ್ತಿಗಳು
- ಭಾರತ ಸರ್ಕಾರದ, ಕೇಂದ್ರ ಸಂಗೀತ ಅಕಾದಮಿ ಕೊಡಮಾಡುವ ಉಸ್ತಾದ್ ಬಿಸ್ಮಿಲ್ಲಾಖಾನ್ ಯುವಪುರಸ್ಕಾರ (2022)
- ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (2022)
- ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬೊಂಬಾಯ್ ಮಿಠಾಯಿ ನಾಟಕಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ(2016)
ಸಾಹಿತ್ಯ ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು
- ಆರ್ಯಭಟ ಪ್ರಶಸ್ತಿ (2018 )
- ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಯೂರವರ್ಮ ಪ್ರಶಸ್ತಿ (2022)
- ಅಖಿಲ ಭಾರತೀಯ ಭಾಷಾ ಸಾಹಿತ್ಯ ಸಮ್ಮೇಳನ, ಭೂಪಾಲ್, ಮಧ್ಯಪ್ರದೇಶ ಕೊಡಮಾಡುವ “ಸಾಹಿತ್ಯ ಶ್ರೀ” ಪ್ರಶಸ್ತಿ (2026)
ಉಲ್ಲೇಖಗಳು
[ಬದಲಾಯಿಸಿ]- ↑ https://www.kendasampige.com/%e0%b2%85%e0%b2%95%e0%b3%8d%e0%b2%b7%e0%b2%af%e0%b2%be%e0%b2%82%e0%b2%ac%e0%b2%b0-%e0%b2%ac%e0%b3%87%e0%b2%b2%e0%b3%82%e0%b2%b0%e0%b3%81-%e0%b2%b0%e0%b2%98%e0%b3%81%e0%b2%a8%e0%b2%82%e0%b2%a6/
- ↑ https://www.kendasampige.com/%e0%b2%a1%e0%b2%be-%e0%b2%ac%e0%b3%87%e0%b2%b2%e0%b3%82%e0%b2%b0%e0%b3%81-%e0%b2%b0%e0%b2%98%e0%b3%81%e0%b2%a8%e0%b2%82%e0%b2%a6%e0%b2%a8%e0%b3%8d-%e0%b2%85%e0%b2%a8%e0%b3%81%e0%b2%b5%e0%b2%be/
- ↑ https://www.kendasampige.com/%e0%b2%a1%e0%b2%be-%e0%b2%ac%e0%b3%87%e0%b2%b2%e0%b3%82%e0%b2%b0%e0%b3%81-%e0%b2%b0%e0%b2%98%e0%b3%81%e0%b2%a8%e0%b2%82%e0%b2%a6%e0%b2%a8%e0%b3%8d-%e0%b2%ac%e0%b2%b0%e0%b3%86%e0%b2%a6-%e0%b2%88/
- ↑ https://www.kendasampige.com/%e0%b2%85%e0%b2%ae%e0%b3%8d%e0%b2%ae-%e0%b2%aa%e0%b2%ae%e0%b3%8d%e0%b2%ae%e0%b2%bf-%e0%b2%a4%e0%b2%be%e0%b2%a4-%e0%b2%ac%e0%b3%82%e0%b2%9a%e0%b2%bf%e0%b2%ac%e0%b3%86%e0%b2%95%e0%b3%8d%e0%b2%95/
- ↑ https://www.bookbrahma.com/book/nisarga-mattu-gubbacchi
- ↑ https://www.bookbrahma.com/book/rakta-varne
- ↑ https://www.bookbrahma.com/book/roopa-roopagalanu-daati-belakina-angadi
- ↑ https://www.bookbrahma.com/news/bendre-natakagala-ranga-praveshakke-idu-sakala
- ↑ https://www.bookbrahma.com/features/roga-mattu-adhikara-bendreyavara-jaatre-nataka-samakaalina-asangata-abhivyakti
- ↑ https://www.bookbrahma.com/news/samajika-viveka-mattu-tirukara-pidugu
- ↑ https://www.bookbrahma.com/news/bharateeya-koutumbika-vyavaste-mattu-hosa-samsara-nataka-samucchaya
- ↑ https://www.bookbrahma.com/news/kathana-kutuhalavirada-gol
- ↑ https://www.bookbrahma.com/book/kiram-hosa-kavite-samputa-2