ಟ್ಯಾಂಕರ್(ಹಡಗು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾಣಿಜ್ಯಿಕ ಕಚ್ಚಾ ತೈಲದ ಸೂಪರ್ ಟ್ಯಾಂಕರ್ (ಅಬ್ ಕ್ವೇಕ್) AbQaiq.

ಒಂದು ಟ್ಯಾಂಕರ್ (ಅಥವಾ ಟ್ಯಾಂಕ್ ಹಡಗು ಅಥವಾ ಟ್ಯಾಂಕ್ ಶಿಪ್ ).ಇಂತಹದೊಂದು ಹಡಗು ,ಸಾಮಾನ್ಯವಾಗಿ ದ್ರವಗಳನ್ನು ಬೃಹತ್ ಪ್ರಮಾಣದಲ್ಲಿ ಸಾಗಾಟ ಮಾಡಲು ವಿನ್ಯಾಸಗೊಳಿಸಲಾಗಿರುತ್ತದೆ. ಟ್ಯಾಂಕ್ ಶಿಪ್ ಗಳಲ್ಲಿ ಪ್ರಮುಖ ಹಡಗುಗಳ ವಿಧಗಳೆಂದರೆ ತೈಲ ಟ್ಯಾಂಕರ್,ರಾಸಾಯನಿಕಗಳ ಟ್ಯಾಂಕರ್ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ವಾಹಕ ಇತ್ಯಾದಿ.

ಹಿನ್ನೆಲೆ[ಬದಲಾಯಿಸಿ]

ಟ್ಯಾಂಕರ್ ಗಳನ್ನು ಅವುಗಳ ಭಾರ ಹೊರುವ ಸಾಮರ್ಥ್ಯದ ಮೇಲೆ ವಿಭಿನ್ನ ರೀತಿಯಲ್ಲಿ ವಿಂಗಡಿಸಲಾಗುತ್ತದೆ.ಹಲವಾರು ಟನ್ ಗಳಷ್ಟು ಭಾರ ಹೊರುವ ಹಡಗುಗಳು ಸಣ್ಣ ಬಂದರು ಪ್ರದೇಶಗಳಲ್ಲಿ ಅಥವಾ ರೇವುಗಳಿಗೆ ನೂರಾರು,ಸಾವಿರಾರು ಟನ್ ಗಳನ್ನು ಹೊತ್ತೊಯ್ದು, ತಮ್ಮ ಸಾಮರ್ಥ್ಯದ ವಿಶಾಲ-ಮಟ್ಟದ ಸಾಗಾಣಿಕೆಗೆ ಸಾಕ್ಷಿಯಾಗಿವೆ. ಸಾಗರ-ಅಥವಾ ಸಮುದ್ರಗಳ ಮೇಲೆ ಚಲಿಸುವ ಟ್ಯಾಂಕರ್ ಗಳಲ್ಲದೇ ಆಂತರಿಕ-ಜಲಮಾರ್ಗವಾಗಿ ಸಾಗಣೆ-ಸಾಗಾಟದಲ್ಲಿ ನದಿಗಳು ಮತ್ತು ದೊಡ್ಡ ಕಾಲುವೆಗಳ ಮೂಲಕ ಹಡಗುಗಳು ಚಲಿಸುತ್ತವೆ.ಅವುಗಳು ಸರಾಸರಿ ಸಾವಿರಾರು ಟನ್ ಗಳಷ್ಟು ಸರಕುಗಳ ಸಾಗಾಟದ ಸಾಮರ್ಥ್ಯ ಹೊಂದಿವೆ. ವ್ಯಾಪಕ ಪ್ರಮಾಣದ ಉತ್ಪನ್ನಗಳನ್ನು ಟ್ಯಾಂಕರ್ ಗಳ ಮೂಲಕ ಸಾಗಿಸಲಾಗುತ್ತದೆ,ಅವುಗಳೆಂದರೆ:

ಈ ಟ್ಯಾಂಕರ್ ಗಳ ಪರಿಕಲ್ಪನೆಯೇ ಒಂದು ನವೀನ ಮಾದರಿಯದ್ದಾಗಿದೆ.ಇತ್ತೀಚಿನ ೧೯ನೆಯ ಶತಮಾನದಿಂದೀಚೆಗೆ ಇದಕ್ಕೆ ಹೊಸತನ ದೊರಕಿದೆ. ಇದಕ್ಕಿಂತಲೂ ಮುಂಚೆ ತಂತ್ರಜ್ಞಾನವು ಬೃಹತ್ ಪ್ರಮಾಣದಲ್ಲಿ ದ್ರವಗಳ ಸಾಗಾಣಿಕೆಗೆ ಅಷ್ಟಾಗಿ ಬೆಂಬಲ ನೀಡಿದ್ದಿಲ್ಲ. ಬೃಹತ್ ಪ್ರಮಾಣದಲ್ಲಿ ದ್ರವಗಳ ಸಾಗಣೆಗಾಗಿ ಸಾರಿಗೆ ವಲಯಕ್ಕೆ ಹೇಳಿಕೊಳ್ಳುವಂತಹ ಮಾರುಕಟ್ಟೆ ಕೂಡ ಇರಲಿಲ್ಲ.ಹೀಗಾಗಿ ಬಹಳಷ್ಟು ಹಡಗುಗಳು ವಿವಿಧ ಉತ್ಪನ್ನಗಳನ್ನು ವಿಭಿನ್ನ ರೀತಿಯಲ್ಲಿ ಸಾಗಣೆ ಮಾಡುತ್ತಿದ್ದವು.ಅಗತ್ಯವಿರುವ ಕಡೆ ದಾಸ್ತಾನು ಮಾಡಿ ಹೊರಭಾಗಗಳಲ್ಲಿ ನಿಗದಿತ ಮಾರ್ಗಗಳಲ್ಲಿ ಸಾಗಿಸಿ ಅವುಗಳ ಮಾರಾಟ ಮಾಡಲಾಗುತ್ತಿತ್ತು. ದ್ರವಗಳನ್ನು ಸಾಮಾನ್ಯವಾಗಿ ಪೀಪಾಯಿಗಳಲ್ಲಿ-ಸಾಗಿಸುತ್ತಿದ್ದುದರಿಂದ "ಟನ್ನೇಜ್ " ಎಂಬ ಪದ ಬಳಕೆಯಲ್ಲಿದೆ.ಪೀಪಾಯಿಗಳಲ್ಲಿ ಭರ್ತಿ ಮಾಡಿದ ದ್ರವದ ಪ್ರಮಾಣವನ್ನು ಅನುಸರಿಸಿ ಅದರ ಪರಿಮಾಣವನ್ನು ಟನ್ ಗಳಷ್ಟು ಮದ್ಯ (ಪೀಪಾಯಿಗಳಲ್ಲಿ) ಸಾಗಾಟ ಮಾಡಲಾಗಿದೆ ಎಂದು ಉಲ್ಲೇಖಿಸಲಾಗುತ್ತಿತ್ತು. ಶುದ್ಧ ನೀರು ಮತ್ತು ಇನ್ನಿತರ ಪಾನೀಯಗಳು ಕೂಡ ಹಡಗಿನ ಸಿಬ್ಬಂದಿಗೆ ನೌಕಾಯಾನದಲ್ಲಿ ಅತ್ಯವಶ್ಯವಿದ್ದುದರಿಂದ ಅವುಗಳನ್ನೂ ಪೀಪಾಯಿಗಳಲ್ಲಿ ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟು ಸಾಗಿಸಲಾಗುತ್ತಿತ್ತು. ದೊಡ್ಡ ಪ್ರಮಾಣದ ದ್ರವಗಳ ಸಾಗಾಟವು ಆರಂಭದಲ್ಲಿ ಹಡಗುಗಳಿಗೆ ಹಲವು ಸಮಸ್ಯೆಗಳನ್ನು ತರುತ್ತಿತ್ತು:

  • ಸಂಗ್ರಹಿಸಿಟ್ಟ ಪಾತ್ರೆಗಳು: ಮರದಿಂದ(ದಿಮ್ಮಿ) ನಿರ್ಮಿತ ಹಡಗುಗಳಲ್ಲಿ ಹಿಡಿದಿಟ್ಟ ನೀರು,ತೈಲ ಅಥವಾ ಇನ್ನಿತರಗಳಿಗೆ ಬಿಗಿಯಾಗಿ ಬಿರಡೆ ಹಾಕಿದರೂ ಅವುಗಳ ಕೆಟ್ಟುಹೋಗುವಿಕೆ ಅಥವಾ ಸೋರಿಕೆಗಳನ್ನು ಸರಕು ಸಾಗಣೆಯಲ್ಲಿ ಸಮರ್ಪಕವಾಗಿ ತಡೆಯಲಾಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಕಬ್ಬಿಣಮತ್ತು ಉಕ್ಕುಗಳ ಅಭಿವೃದ್ಧಿಯಿಂದಾಗಿ ಹಡಗುಗಳಿಗೆ ಇವುಗಳ ಹೊದಿಕೆಯ ಆವರಣ ದೊರಕಿ, ಸಮಸ್ಯೆಗೆ ಪರಿಹಾರ ದೊರಕಿತು.
  • ಭರ್ತಿ ಮಾಡುವಿಕೆ ಮತ್ತು ವಿತರಣೆ:ದೊಡ್ಡ ಪ್ರಮಾಣದ ದ್ರವಗಳನ್ನು ಪಂಪ್ ಮಾಡಲಾಗುತ್ತದೆ-ಉತ್ತಮ ಕಾರ್ಯದಕ್ಷತೆಯುಳ್ಳ ಪಂಪ್ ಅಥವಾ ಕೊಳವೆಗಳ ಅಭಿವೃದ್ಧಿ ಹಾಗೂ ಟ್ಯಾಂಕರ್ ಗಳ ಅಭಿವೃದ್ಧಿಗೆ ಪೈಪ್ ಗಳ ವಿಧಾನಗಳಲ್ಲಿ ಅತ್ಯುತ್ತಮವಾದುದರ ಅಳವಡಿಕೆ ಪ್ರಮುಖವಾಗಿವೆ. ಆರಂಭದಲ್ಲಿ ಪಂಪ್ ಮಾಡುವ ಉದ್ದೇಶಕ್ಕಾಗಿ ಹಬೆ ಯಂತ್ರಗಳ ಪದ್ದತಿಗಳನ್ನು ಪ್ರಧಾನ-ಚಲನೆಗಾಗಿ ಬಳಸಿಕೊಳ್ಳಲಾಗುತ್ತಿತ್ತು. ಸದ್ಯ ಸರಕುಗಳ ಸಾಗಣೆಯ ಸೌಲಭ್ಯಗಳು ಇಂದು ಸಮುದ್ರ ಕಿನಾರೆಗಳ ವರೆಗೂ ವಿಸ್ತರಿಸಬೇಕಾಗಿದೆ.ಮಾರುಕಟ್ಟೆಯು ಅದೇ ಪ್ರಮಾಣದಲ್ಲಿ ಉತ್ಪನ್ನಗಳನ್ನು ಅದೇ ಜಾಗೆಯಲ್ಲಿ ನಿರ್ಮಾಣಗೊಳಿಸುತ್ತದೆ. ಸಾಮಾನ್ಯ ಕ್ರೇನ್ ಗಳನ್ನು ಬಳಸಿ ಪೀಪಾಯಿಗಳನ್ನು ಇಳಿಸಬಹುದಾಗಿದೆ.ಒಮ್ಮೊಮ್ಮೆ ಪೀಪಾಯಿಗಳೇ ಅದರಲ್ಲಿರುವ ದ್ರವಗಳಿಗಿಂತ ಭಾರವಾಗಿರುತ್ತವೆ-ಇದರಿಂದ ಆ ಸಣ್ಣ ಪರಿಮಾಣದ ಪದಾರ್ಥಕ್ಕಾಗಿರುವ ಬೇಡಿಕೆಯನ್ನು ಮಾರುಕಟ್ಟೆಯಲ್ಲಿ ಸ್ಥಿರವಾಗಿಡಬಹುದಾಗಿದೆ.
  • ಫ್ರೀ ಸರ್ಫೇಸ್ ಎಫೆಕ್ಟ್ : ದೊಡ್ಡ ಪ್ರಮಾಣದ ತೈಲವು ಬಹಳಷ್ಟು ಜಾಗೆಯನ್ನು ಹಡಗುಗಳಲ್ಲಿ ಆಕ್ರಮಿಸಿಕೊಂಡಿರುತ್ತದೆ.ಇದರಿಂದ ಹಡಗಿನ ಸಮತೋಲನವೂ ಸಾಧ್ಯವಾಗುತ್ತದೆ. ನೋಡಿನಾವಲ್ ಆರ್ಕಿಟೆಕ್ಚರ್. ಪೀಪಾಯಿಗಳಲ್ಲಿರುವ ದ್ರವಗಳು ಅಂತಹ ಸಮಸ್ಯೆಗೆ ಕಾರಣವಾಗಲಾರವು.ಆದರೆ ಟ್ಯಾಂಕರ್ ನಲ್ಲಿರುವ ಅಡ್ಡತೊಲೆಯು ಹಡಗಿಗೆ ಸ್ಥಿರತೆಯ ಸಮಸ್ಯೆ ತಂದೊಡ್ಡಬಹುದು. ಟ್ಯಾಂಕ್ ಗಳ ವಿಸ್ತೃತ ಉಪವಿಭಾಗವು ಈ ಸಮಸ್ಯೆಗೆ ಪರಿಹಾರ ತಂದಿತು.

ಕೊನೆಯಲ್ಲಿ ಟ್ಯಾಂಕರ್ ಗಳು ತೈಲ ಕೈಗಾರಿಕೆಗಳಿಗೆ ಉತ್ತಮ ಆರಂಭ ನೀಡಿವೆ.ಯಾಕೆಂದರೆ ತೈಲ ಕಂಪನಿಗಳು ತಮ್ಮ ಉತ್ಪನ್ನ ಹಾಗೂ ಸಂಸ್ಕರಣ ಮಾಡಿದ ತೈಲವನ್ನು ಸುಲಭ ಮತ್ತು ಅಗ್ಗದರದಲ್ಲಿ ಸಾಗಾಟಕ್ಕೆ ದಾರಿ ಕಂಡುಕೊಂಡು ಗ್ರಾಹಕರಿಗೆ ತಲುಪಿಸಿದವು. ಹೀಗೆ ತೈಲ ಟ್ಯಾಂಕರ್ ಹುಟ್ಟಿಕೊಂಡಿತು. ಇಂದು ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ದ್ರವಗಳನ್ನು ಅಗ್ಗದ ದರದಲ್ಲಿ ಸಾಗಣೆ ಮಾಡಲಾಗುತ್ತದೆ.ಒಂದೊಂದು ಟ್ಯಾಂಕರ್ ಅಥವಾ ಹಡಗು ನಿರ್ಧಿಷ್ಟವಾದ ತೈಲ ಸಾಗಣೆಗೆ ನಿಗದಿಗೊಂಡಿದೆ. ದೊಡ್ಡ ಪ್ರಮಾಣದ ದಾಸ್ತಾನು ಟ್ಯಾಂಕರ್ ಗಳಲ್ಲಿ ಸಮುದ್ರ ದಂಡೆಗಳಲ್ಲಿ ಸಂಗ್ರಹಿಸಲಾಗುತ್ತದೆ.ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಸಣ್ಣ ಸಣ್ಣ ಪೀಪಾಯಿಗಳಲ್ಲಿ ಮಾರಾಟಕ್ಕೆ ಸಜ್ಜುಗೊಳಿಸಿ ಸಂಬಂಧಪಟ್ಟ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಇದೆ.

ಅದಲ್ಲದೇ ಡಬ್ಲಿನ್ ನಲ್ಲಿರುವ ಗಿನ್ನೀಸ್ ಮದ್ಯ ತಯಾರಿಕಾ ಕಂಪನಿಯು ತನ್ನ ಪ್ರಸಿದ್ದ ಉತ್ಪನ್ನಗಳನ್ನು UK.ಗೆ ರಫ್ತು ಮಾಡಿ ಸಾಗಿಸಲು ಟ್ಯಾಂಕರ್ ಗಳ ಸಮೂಹವನ್ನೇ ಹೊಂದಿದೆ.

ವಿಭಿನ್ನ ಉತ್ಪನ್ನಗಳು ವಿಭಿನ್ನ ರೀತಿಯ ಸಂಗ್ರಹ ಮತ್ತು ಸಾಗಾಟ ವಿಧಾನಗಳನ್ನು ಹೊಂದಿವೆ. ಹೀಗೆ ವಿಶಿಷ್ಟ ಬಗೆಯ ಟ್ಯಾಂಕರ್ ಗಳನ್ನು ಅಗತ್ಯಕ್ಕನುಗುಣವಾಗಿ ನಿರ್ಮಿಸಲಾಗಿದೆ.ಉದಾಹರಣೆಗೆ "ರಾಸಾಯನಿಕ ಟ್ಯಾಂಕರ್ ಗಳು" ಮತ್ತು "ತೈಲ ಟ್ಯಾಂಕರ್ ಗಳು" ಅಂದರೆ "LNG ವಾಹಕಗಳು",ಇವುಗಳನ್ನು ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆಗಾಗಿಯೇ ವಿಶೇಷವಾಗಿ ಇಂತಹ ಅಪರೂಪದ ಟ್ಯಾಂಕರ್ ಬಳಸಲಾಗುತ್ತದೆ.

ಇವುಗಳಲ್ಲಿ ಮಧ್ಯಪೂರ್ವದಿಂದ ಹಾರ್ನ್ ಆಫ್ರಿಕಾದ ಸುತ್ತಮುತ್ತಲೂ ತೈಲ ಪೂರೈಕೆಗೆ ಸೂಪರ್ ಟ್ಯಾಂಕರ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಸೂಪರ್ ಟ್ಯಾಂಕರ್ ಎನ್ನಲಾದ ಸೀವೈಜ್ ಜೇಂಟ್, ೨೦೧೦ ರಲ್ಲಿ ಛಿದ್ರಗೊಂಡಿತು. ಅದು ೪೫೮ ಮೀಟರ್ ಗಳು (೧೫೦೪ ಅಡಿ) ಉದ್ದ ಮತ್ತು ೬೯ ಮೀ (೨೨೬ ಅಡಿ) ಅಗಲವಿತ್ತು.

ದೊಡ್ಡ ಪ್ರಮಾಣದ ತೈಲಗಳ ಸಾಗಣೆಗೆ ಮೂರು ಆದ್ಯತಾ ವಿಧಾನಗಳಿವೆ,ಇವುಗಳನ್ನು ಸೂಪರ್ ಟ್ಯಾಂಕರ್ ಗಳ ಮೂಲಕ ಅಂದರೆ ಕೊಳವೆ ಮಾರ್ಗ ಸಾರಿಗೆ ಮತ್ತು ರೈಲ್ವೆ ಮಾರ್ಗಗಳಲ್ಲಿ ಸಾಗಿಸಲಾಗುತ್ತದೆ. ಇವುಗಳಿಗೆ ದೊಡ್ಡ ಪ್ರಮಾಣದ ಸುರಕ್ಷತೆ ವ್ಯವಸ್ಥೆ ಇದ್ದರೂ ಟ್ಯಾಂಕರ್ ಗಳಲ್ಲಿನ ತೈಲ ಚೆಲ್ಲುವಿಕೆಗಳು ಹಲವು ಬಾರಿ ವಿನಾಶಕ್ಕೆ ಕಾರಣವಾಗುತ್ತವೆ. ನೋಡಿ ಎಕ್ಸಾನ್ ವಲ್ಡೆಜ್ , ಬ್ರಾರ್ , ಪ್ರಿಸ್ಟೇಜ್ ಆಯಿಲ್ ಸ್ಪಿಲ್ , ಟೊರಿ ಕ್ಯಾನ್ಯೊನ್ , ಮತ್ತು ಎರಿಕಾ ಇವುಗಳೆಲ್ಲವೂ ಕರಾವಳಿಯಲ್ಲಾದ ತೈಲ ಸೋರಿಕೆಗಳ ಅನಾಹುತಗಳ ಉದಾಹರಣೆಯಾಗಿವೆ.

ಟ್ಯಾಂಕರ್ ಸಾಮರ್ಥ್ಯ[ಬದಲಾಯಿಸಿ]

ದ್ರವ ಇಂಧನಗಳ ಸಾಗಣೆಗೆ ಬಳಸುವ ಟ್ಯಾಂಕರ್ ಗಳನ್ನು ಅವುಗಳ ಸಾಮರ್ಥ್ಯದ ಮೇಲೆ ವಿಂಗಡಿಸಲಾಗುತ್ತಿದೆ.

ಆಗ ೧೯೫೪ ರಲ್ಲಿ ಶೆಲ್ ಆಯಿಲ್, ಹೊಸದಾಗಿ ಒಂದು ಸರಾಸರಿ ಸರಕು ಸಾಗಣೆ ಬಾಡಿಗೆ ದರದ ನಿರ್ಧಾರದ (AFRA) ಪದ್ದತಿಯನ್ನು ಅಭಿವೃದ್ಧಿಪಡಿಸಿತು.ಅದು ವಿವಿಧ ಗಾತ್ರಗಳ ಟ್ಯಾಂಕರ್ ಗಳ ವಿಂಗಡನೆಗೆ ಅನುಕೂಲವಾಯಿತು. ಇದನ್ನು ಸ್ವತಂತ್ರ ಅಳತೆಗೋಲಾಗಿಡಲು ಶೆಲ್ ಕಂಪನಿಯು ಲಂಡನ್ ಟ್ಯಾಂಕರ್ ಬ್ರೊಕರ್ಸ್ ಪ್ಯಾನಲ್ (LTBP) ನ ಸಲಹೆ ಕೇಳಿದರು. ಮೊದಲ ಬಾರಿಗೆ ಸಮೂಹವನ್ನು ಸರ್ವೆ ಸಾಮಾನ್ಯ ಉದ್ದೇಶ ದ ಟ್ಯಾಂಕರ್ ಗಳು ೨೫,೦೦೦  tons deadweight (DWT) ಇದರಡಿ ಬರುವ ಒಂದು ಗುಂಪು;ಮಧ್ಯಮ ಶ್ರೇಣಿ ೨೫,೦೦೦ ಮತ್ತು 45,000 DWTಇದರಡಿ ಬರುವ ವರ್ಗ ಮತ್ತು ದೊಡ್ಡ ಶ್ರೇಣಿ ಯವುಗಳು ಬೃಹತ್-ಪ್ರಮಾಣದ ಹಡಗುಗಳು ಇವು 45,000 DWTಗಿಂತ ವಿಶಾಲವಾಗಿದ್ದವು. ಹಡಗುಗಳು ೧೯೭೦ ರ ಸುಮಾರಿಗೆ ವೈಶಾಲ್ಯ ಪಡೆದವು.ಇವುಗಳ ಪಟ್ಟಿ ವಿಸ್ತೃತವಾಯಿತು.ಟನ್ ಗಳು ವಿಶಾಲ ಟನ್ ಗಳಾಗಿ ಪರಿವರ್ತನವಾದವು.[೧]

  • ೧೦,೦೦೦–24,999 DWT: ಸರ್ವೆ ಸಾಮಾನ್ಯ ಉದ್ದೇಶದ ಟ್ಯಾಂಕರ್
  • ೨೫,೦೦೦–44,999 DWT: ಮಧ್ಯಮ ಶ್ರೇಣಿಯ ಟ್ಯಾಂಕರ್
  • ೪೫,೦೦೦–79,999 DWT: ವಿಶಾಲ ಶ್ರೇಣಿ೧ (LR೧)
  • ೮೦,೦೦೦–159,999 DWT: ವಿಶಾಲ ಶ್ರೇಣಿ ೨ (LR೨)
  • ೧೬೦,೦೦೦–319,999 DWT: ಬಹು ವಿಶಾಲ ಕಚ್ಚಾ ತೈಲ ವಾಹಕ(VLCC)
  • ೩೨೦,೦೦೦–549,999 DWT: ಅತಿ ದೊಡ್ಡದಾದ ವಿಶಾಲ ಕಚ್ಚಾತೈಲ ವಾಹಕ(ULCC)
ಪೆಟ್ರೊಲಿಯಮ್ ಟ್ಯಾಂಕರ್ ಗಳು
ವರ್ಗ ಉದ್ದ ದೊಡ್ಡತೊಲೆ ವಿಶೇಷ ಪಡೆ ಮಾದರಿ ಕನಿಷ್ಟ DWT ಮಾದರಿ ಗರಿಷ್ಠ DWT
ಸಿವೆಮ್ಯಾಕ್ಸ್ 28 ಮೀ 28 ಮೀ 7.92 m 10,000 DWT 60,000 DWT
ಪನಾಮ್ಯಾಕ್ಸ್ ೨೨೮.೬ m ೩೨.೩ ಮೀ ೧೨.೬ ಮೀ 60,000 DWT 80,000 DWT
ಅಫ್ರಾಮ್ಯಾಕ್ಸ್ ೨೫೩.೦ಮೀ ೪೪.೨ಮೀ ೧೧.೬ಮೀ 80,000 DWT 120,000 DWT
ಸುಯೆಜ್ ಮ್ಯಾಕ್ಸ್ ೨೮ ಮೀ 120,000 DWT 200,000 DWT
VLCC (ಮಾಲಕಾಮ್ಯಾಕ್ಸ್) ೨೮ ಮೀ ೨೮ ಮೀ ೨೮ ಮೀ 200,000 DWT 315,000 DWT
ULCC 320,000 DWT 550,000 DWT

ಸುಮಾರಾಗಿ ೩೮೦ ಹಡಗುಗಳು 279,000 DWT ಗಾತ್ರದಿಂದ 320,000 DWT ವರೆಗೆ ಕಾಣಸಿಗುತ್ತವೆ.ಇವುಗಳು ಜನಪ್ರಿಯತೆಯಿಂದಾಗಿ ದೊಡ್ಡ VLCC ಗಳಿಗಿಂತ ದೊಡ್ಡ ಗಾತ್ರ ಪಡೆದಿವೆ. ಈ ಪ್ರಮಾಣಕ್ಕಿಂತ ಕೇವಲ ಏಳು ಹಡಗುಗಳು ಮಾತ್ರ ದೊಡ್ಡದಾಗಿವೆ.ಅಲ್ಲದೇ ೯೦ ಹಡಗುಗಳು ಮಾತ್ರ 220,000 DWT ಮತ್ತು 279,000 DWT.[೨] ಇವುಗಳ ಮಧ್ಯೆ ತಮ್ಮ ಗಾತ್ರ ಹೊಂದಿವೆ.

ವಿಶ್ವದ ಹಡಗುಪಡೆಗಳು[ಬದಲಾಯಿಸಿ]

ನೌಕಾಪಡೆ ಬಾವುಟದ ರಾಜ್ಯಗಳು

ಯುನೈಟೆಡ್ ಸ್ಟೇಟ್ಸ್ ಮೇರಿಟೈಮ್ ಅಡ್ ಮಿನಿಸ್ಟ್ರೇಶನ್ಸ್ ನ ೨೦೦೫ ರ ಅಂಕಿ ಅಂಶಗಳ ಪ್ರಕಾರ ಸುಮಾರು ೪,೦೨೪ ಟ್ಯಾಂಕರ್ ಗಳು 10,000 DWTಅಥವಾ ವಿಶ್ವಾದ್ಯಂತ [೩] ಅತ್ಯಂತ ದೊಡ್ಡವು.ಇದರಲ್ಲಿ ೨,೫೮೨ ಹಡಗುಗಳು ಎರಡು-ಪದರಿನ ಹೊದಿಕೆ ಪಡೆದವಾಗಿವೆ. ಪನಾಮಾಎಂಬ ಪ್ರಮುಖ ಧ್ವಜಪಟ ರಾಜ್ಯ ಹಡಗುಪಡೆ ಟ್ಯಾಂಕರ್ ಗಳ ಸಮೂಹದಲ್ಲಿ ಸುಮಾರು ೫೯೨ ನೊಂದಾಯಿತ ಹಡಗುಗಳಿವೆ. ಇನ್ನುಳಿದ ಐದು ಧ್ವಜಪಟದ ರಾಜ್ಯಗಳಲ್ಲಿ ಸುಮಾರು ಇನ್ನೂರು ನೊಂದಾಯಿತ ಟ್ಯಾಂಕರ್ ಗಳಿವೆ:ಲಿಬೆರಿಯಾ (೫೨೦), ದಿ ಮಾರ್ಶಲ್ ಐಲ್ಯಾಂಡ್ಸ್ (೩೨೩), ಗ್ರೀಸ್ (೨೩೩), ಸಿಂಗಾಪೂರ್ (೨೭೪) ಮತ್ತು ದಿ ಬಹಮಾಸ್ (೨೧೫). ಧ್ವಜಪಟದ ರಾಜ್ಯಗಳಲ್ಲಿ ಆರು ಅತ್ಯಂತ ದೊಡ್ಡ ಹಡಗು ಪಡೆಗಳು ದೊಡ್ಡ ಗಾತ್ರದವಾಗಿವೆ,ಅಲ್ಲದೇ ಅತ್ಯಂತ ದೊಡ್ಡ ಭಾರದ ಟನ್ನೇಜ್ ನಲ್ಲಿ ಇವುಗಳ ಬಳಕೆಯಾಗುತ್ತದೆ.[೩]

ಅತ್ಯಂತ ದೊಡ್ಡ ಹಡಗುಪಡೆಗಳು

ಗ್ರೀಸ್,ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಈ ಮೂರೂ ಅತ್ಯಧಿಕ ಟ್ಯಾಂಕರ್ ಗಳ ಒಡೆತನ ಹೊಂದಿವೆ.ಅನುಕ್ರಮವಾಗಿ ೭೩೩,೩೯೪ ಮತ್ತು ೩೧೧ ಹಡಗುಗಳಿವೆ. ಈ ಮೂರು ರಾಷ್ಟ್ರಗಳು ಒಟ್ಟು ೧,೪೩೮ ಹಡಗುಗಳನ್ನು ಹೊಂದಿದ್ದು, ಇದು ವಿಶ್ವದ ೩೬%ಗಿಂತಲೂ ಹೆಚ್ಚು ಪ್ರಮಾಣದಲ್ಲಿ ತನ್ನ ಪಾಲು ಪಡೆದಿದೆ.[೩]

ಹಡುಗು ನಿರ್ಮಾಣ ಮಾಡುವವರು

ಟ್ಯಾಂಕರ್ ಗಳ ನಿರ್ಮಾಣದಲ್ಲಿ ಏಶಿಯನ್ ಕಂಪನಿಗಳು ಪ್ರಾಧಾನ್ಯತೆ ಪಡೆದಿವೆ. ವಿಶ್ವದ ಒಟ್ಟು ೪,೦೨೪ ಟ್ಯಾಂಕರ್ ಗಳಲ್ಲಿ ೨,೮೨೨ ಅಥವಾ ೭೦%ಕ್ಕಿಂತ ಹೆಚ್ಚು ಹಡಗುಗಳನ್ನು ದಕ್ಷಿಣ ಕೊರಿಯಾ,ಜಪಾನ್ ಅಥವಾ ಚೀನಾದಲ್ಲಿ ನಿರ್ಮಿಸಲಾಗಿದೆ.[೩]

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಹೈಡ್ರೊಜನ್ ಟ್ಯಾಂಕರ್
  • ಟ್ಯಾಂಕರ್ ಗಳ ಪಟ್ಟಿ

ಟಿಪ್ಪಣಿಗಳು[ಬದಲಾಯಿಸಿ]

  1. Evangelista, Joe, Ed. (2002). "Scaling the Tanker Market" (PDF). Surveyor. American Bureau of Shipping (4): 5–11. Archived from the original (PDF) on 2007-09-30. Retrieved 2008-02-27. {{cite journal}}: Unknown parameter |month= ignored (help)CS1 maint: multiple names: authors list (link)
  2. Auke Visser (22 February 2007). "Tanker list, status 01-01-2007". International Super Tankers. Archived from the original on 2008-09-20. Retrieved 2008-02-27.
  3. ೩.೦ ೩.೧ ೩.೨ ೩.೩ Office of Data and Economic Analysis (July 2006). "World Merchant Fleet 2001–2005" (PDF). United States Maritime Administration: 3, 5, 6. Archived from the original (.PDF) on 2007-02-21. Retrieved 2008-02-27. {{cite journal}}: Cite journal requires |journal= (help)

ಉಲ್ಲೇಖಗಳು‌‌[ಬದಲಾಯಿಸಿ]

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

ಟೆಂಪ್ಲೇಟು:Portal