ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hydrocarbons, C3–C4
45 kg LPG cylinders
Identifiers
ECHA InfoCard 100.064.257
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ದ್ರವೀಕೃತ ಪೆಟ್ರೋಲಿಯಮ್‌ ಅನಿಲ(LPG , GPL , LP ಗ್ಯಾಸ್‌ , ಅಥವಾ ಆಟೋಗ್ಯಾಸ್‌ ಎಂದೂ ಕರೆಯಲಾದ) [[ಸುಲಭವಾಗಿ ಉರಿಯಬಲ್ಲ ಹೈಡ್ರೋಕಾರ್ಬನ್‌ ಅನಿಲಗಳ ಮಿಶ್ರಣ. ಈ ಅನಿಲವನ್ನು ಬಿಸಿ ಮಾಡುವ ಉಪಕರಣಗಳು ಹಾಗೂ ವಾಹನಗಳಲ್ಲಿ ಇಂಧನ ರೂಪದಲ್ಲಿ ಬಳಸಲಾಗುತ್ತಿದೆ. ಇದಲ್ಲದೆ, ಓಜೋನ್‌ ಪದರಕ್ಕೆ ಹಾನಿಯನ್ನು ಕಡಿಮೆಗೊಳಿಸುವ ಉದ್ದೇಶದಿಂದ, ಕ್ಲೋರೋಫ್ಲೋರೋಕಾರ್ಬನ್‌ಗಳ ಬದಲಿಗೆ, ವಾಯುದ್ರವ ನೋದಕ (ಏರೋಸಾಲ್ ಪ್ರೊಪೆಲ್ಲಂಟ್‌‌) ಹಾಗೂ ಶೀತಕ|ಸುಲಭವಾಗಿ ಉರಿಯಬಲ್ಲ ಹೈಡ್ರೋಕಾರ್ಬನ್ಅನಿಲಗಳ ಮಿಶ್ರಣ. ಈ ಅನಿಲವನ್ನು ಬಿಸಿ ಮಾಡುವ ಉಪಕರಣಗಳು ಹಾಗೂ ವಾಹನಗಳಲ್ಲಿ ಇಂಧನ ರೂಪದಲ್ಲಿ ಬಳಸಲಾಗುತ್ತಿದೆ. ಇದಲ್ಲದೆ, ಓಜೋನ್‌ ಪದರಕ್ಕೆ ಹಾನಿಯನ್ನು ಕಡಿಮೆಗೊಳಿಸುವ ಉದ್ದೇಶದಿಂದ, ಕ್ಲೋರೋಫ್ಲೋರೋಕಾರ್ಬನ್‌ಗಳ ಬದಲಿಗೆ, ವಾಯುದ್ರವ ನೋದಕ (ಏರೋಸಾಲ್ ಪ್ರೊಪೆಲ್ಲಂಟ್‌‌) ಹಾಗೂ ಶೀತಕ]]ದ ರೂಪದಲ್ಲಿ LPGಯ ಬಳಕೆ ಹೆಚ್ಚಾಗುತ್ತಿದೆ.

ಖರೀದಿಸಲಾದ ಹಾಗೂ ಮಾರಲಾದ LPG ವೈವಿಧ್ಯಗಳಲ್ಲಿ ಮುಖ್ಯವಾಗಿ ಪ್ರೊಪೇನ್‌ ಒಳಗೊಂಡಿರುವ ಮಿಶ್ರಣಗಳು, ಮುಖ್ಯವಾಗಿ ಬ್ಯೂಟೇನ್‌ ಒಳಗೊಂಡಿರುವ ಮಿಶ್ರಣಗಳು, ಅಥವಾ, ಇನ್ನೂ ಸಾಮಾನ್ಯವಾಗಿ, ಪ್ರೊಪೇನ್‌ C3H8 (60%) ಹಾಗೂ ಬ್ಯೂಟೇನ್‌ C4H10 (40%) ಒಳಗೊಂಡಿರುವ ಮಿಶ್ರಣಗಳು ಸೇರಿವೆ. ಋತುವನ್ನು ಅವಲಂಬಿಸಿ, – ಚಳಿಗಾಲದಲ್ಲಿ ಹೆಚ್ಚು ಪ್ರೊಪೇನ್‌ ಹಾಗೂ ಬೇಸಿಗೆಯಲ್ಲಿ ಹೆಚ್ಚು ಬ್ಯೂಟೇನ್ ಇರುತ್ತದೆ.

ಈ ಮಿಶ್ರಣಗಳಲ್ಲಿ ಪ್ರೊಪಿಲೀನ್‌ ಮತ್ತು ಬ್ಯೂಟಲೀನ್‌ ಸಹ ಸಾಮಾನ್ಯವಾಗಿ ಕಡಿಮೆ ಸಾಂದ್ರತೆಯಲ್ಲಿ ಇರುತ್ತವೆ.
ಇಥೇನ್‌ಧಿಯಾಲ್‌ ಎಂಬ ಪ್ರಬಲ ವಾಸನೆ ಸೂಸುವ ಅನಿಲವನ್ನು ಸಹ ಇದಕ್ಕೆ ಸೇರಿಸಲಾಗಿದೆ. ಇದರಿಂದಾಗಿ ಅನಿಲ ಸೋರುವಿಕೆಯನ್ನು ಪತ್ತೆ ಮಾಡುವುದು ಬಹಳ ಸುಲಭವಾಗುತ್ತದೆ. EN 589 ಎಂಬುದು ಅಂತಾರಾಷ್ಟ್ರೀಯ ಪ್ರಮಾಣವಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಥಿಯೋಫೀನ್‌ ಅಥವಾ ಅಮೈಲ್‌ ಮರ್ಕ್ಯಾಪ್ಟನ್‌ ಸಹ ಅನುಮೋದಿತ ವಾಸನೆಯ ಅನಿಲಗಳಾಗಿವೆ.

LPG ಗ್ರಾಮಾಂತರ ಪ್ರದೇಶಗಳಲ್ಲಿ ಲಭ್ಯವಾಗಿರುವ, ಕಡಿಮೆ ಪ್ರಮಾಣದಲ್ಲಿ ಇಂಗಾಲ ಹೊರಸೂಸುವ ಹೈಡ್ರೋಕಾರ್ಬನ್‌ ಇಂಧನವಾಗಿದೆ. ಪ್ರತಿ kWhಗೆ, ಇದು ತೈಲಕ್ಕಿಂತ 19% ಕಡಿಮೆ CO2CO
2
ಇದ್ದಿಲಿಗಿಂತಲೂ 30% ಹಾಗೂ ಜಾಲದ ಮೂಲಕ ವಿತರಿತವಾಗುವ ಇದ್ದಿಲು ಆಧಾರಿತ ವಿದ್ಯುತ್ತಿಗಿಂತಲೂ 50%ಕ್ಕಿಂತಲೂ ಕಡಿಮೆ ಹೊರಸೂಸುತ್ತದೆ. [ಸೂಕ್ತ ಉಲ್ಲೇಖನ ಬೇಕು]

ಪ್ರೋಪೇನ್‌ ಹಾಗೂ ಬ್ಯೂಟೇನ್‌ನ ಮಿಶ್ರಣ LPG ಅನಿಲವು, ಪ್ರತಿ ಜೌಲ್‌ಗೆ ಬ್ಯೂಟೇನ್‌ಗಿಂತಲೂ ಕಡಿಮೆ ಇಂಗಾಲ ಹಾಗೂ ಪ್ರತಿ ಜೌಲ್‌ಗೆ ಪ್ರೋಪೇನ್‌ಗಿಂತಲೂ ಹೆಚ್ಚು ಇಂಗಾಲವನ್ನು ಹೊರಸೂಸುತ್ತದೆ.

ಉತ್ಪಾದನೆ ಹಾಗೂ ಶೇಖರಣೆ[ಬದಲಾಯಿಸಿ]

ಪೆಟ್ರೋಲಿಯಮ್‌ ಅಥವಾ 'ತೇವದ' ನೈಸರ್ಗಿಕ ಅನಿಲಸಂಸ್ಕರಿಸುವ ಮೂಲಕ LPGಯನ್ನು ಸಂಶ್ಲೇಷಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಪಳೆಯುಳಿಕೆ ಇಂಧನ ಮೂಲಗಳಿಂದ ಪಡೆಯಲಾಗುತ್ತದೆ. ಕಚ್ಚಾ ತೈಲವನ್ನು ಸಂಸ್ಕರಿಸುವ ಸಮಯದಲ್ಲಿ ಇದನ್ನು ಉತ್ಪಾದಿಸಲಾಗುತ್ತದೆ, ಅಥವಾ, ಭೂಮಿಯಿಂದ ಹೊರಬರುವ ತೈಲ ಅಥವಾ ಅನಿಲ ಹರಿವುಗಳಿಂದ ಹೊರತೆಗೆಯಬಹುದಾಗಿದೆ.

ಮೊದಲ ಬಾರಿಗೆ, 1910ರಲ್ಲಿ ಡಾ. ವಾಲ್ಟರ್‌ ಸ್ನೆಲಿಂಗ್‌ LPGಯನ್ನು ಉತ್ಪಾದಿಸಿದರು. ವಾಣಿಜ್ಯ ರೂಪದಲ್ಲಿ ಮೊದಲ ಬಾರಿಗೆ ಉತ್ಪನ್ನಗಳು ಆಗಮಿಸಿದ್ದು 1912ರಲ್ಲಿ. LPG ಅನಿಲವು ಬಳಸಲಾದ ಶಕ್ತಿಗಳಲ್ಲಿ ಸುಮಾರು 3%ರಷ್ಟು ಪ್ರಸಕ್ತ ಒದಗಿಸುತ್ತದೆ. ಯಾವುದೇ ಮಸಿಯಿಲ್ಲದೆ ಹಾಗೂ ಬಹಳ ಕಡಿಮೆ ಪ್ರಮಾಣದಲ್ಲಿ ಗಂಧಕ (ಸಲ್ಫರ್‌) ಹೊರಸೂಸುವಿಕೆಯೊಂದಿಗೆ ಸ್ವಚ್ಛವಾಗಿ ಉರಿಯುತ್ತದೆ. ಇದರಿಂದಾಗಿ ಯಾವುದೇ ನೆಲದ ಅಥವಾ ನೀರಿನ ಮಾಲಿನ್ಯದ ಅಪಾಯಗಳು ಎದುರಾಗುವುದಿಲ್ಲ. 42.5 MJ/kgರಷ್ಟು ಇಂಧನದ ಶಾಖ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಡೀಸೆಲ್‌ ಹಾಗೂ 43.5 MJ/kgರಷ್ಟು ಶಾಖ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಪ್ರೀಮಿಯಮ್‌‌ ಗ್ರೇಡ್‌ ಪೆಟ್ರೋಲ್‌ (ಗ್ಯಾಸೊಲೀನ್‌)ಗೆ ಹೋಲಿಸಿದರೆ, LPG ಅನಿಲವು 46.1 MJ/kgರಷ್ಟು ಇಂಧನದ ಶಾಖಸಾಮರ್ಥ್ಯ (ಕ್ಯಾಲೊರಿಫಿಕ್‌ ವ್ಯಾಲ್ಯೂ)ವನ್ನು ಹೊಂದಿದೆ.[೧] ಆದಾಗ್ಯೂ,ಇದು ಪ್ರತಿ ಘನ ಅಳತೆ ಏಕಮಾನಕ್ಕೆ 26 MJ/l ಶಕ್ತಿ ಸಾಂದ್ರತೆ ಹೊಂದಿದ್ದು,ಪೆಟ್ರೋಲ್‌ ಅಥವಾ ಡೀಸೆಲ್‌ಗಿಂತಲೂ ಕಡಿಮೆಯಿದೆ.

ಸಾಮಾನ್ಯ ಉಷ್ಣಾಂಶಗಳು ಹಾಗೂ ಒತ್ತಡಗಳಲ್ಲಿ LPG ಅನಿಲವು ಆವಿಯಾಗುತ್ತದೆ. ಇದರಿಂದಾಗಿ, LPGಯನ್ನು ಒತ್ತಡವಿರುವ ಉಕ್ಕಿನ ಸಿಲಿಂಡರುಗಳಲ್ಲಿ ಸರಬರಾಜು ಮಾಡಲಾಗುತ್ತದೆ. ಒಳಗಿರುವ ದ್ರವದ ಉಷ್ಣಧಾರಕ ಹಿಗ್ಗುವಿಕೆಗೆ ಅವಕಾಶ ನೀಡಲು, ಈ ಸಿಲಿಂಡರುಗಳನ್ನು ಸಂಪೂರ್ಣವಾಗಿ ತುಂಬಿಸಲಾಗಿರುವುದಿಲ್ಲ. ಸಾಮಾನ್ಯವಾಗಿ, ಅವುಗಳ ಸಾಮರ್ಥ್ಯದ 80%ರಿಂದ 85%ರಷ್ಟರವರೆಗೆ ತುಂಬಲಾಗುತ್ತದೆ. ರಚನೆ, ಒತ್ತಡ ಮತ್ತು ತಾಪಮಾನಗಳನ್ನು ಅವಲಂಬಿಸಿ, ಆವೀಕರಿಸಿದ ಅನಿಲ ಹಾಗೂ ದ್ರವೀಕೃತ ಅನಿಲಗಳ ನಡುವಿನ ಗಾತ್ರಗಳ ಅನುಪಾತವು ವ್ಯತ್ಯಾಸಗೊಳ್ಳುತ್ತದೆ. ಆದರೆ, ಅದು ಸಾಮಾನ್ಯವಾಗಿ ಸುಮಾರು 250:1ರ ಅನುಪಾತದಲ್ಲಿರುತ್ತದೆ. LPG ದ್ರವವಾಗುವ ಒತ್ತಡಕ್ಕೆ ಆವಿ ಒತ್ತಡ ಎನ್ನಲಾಗುತ್ತದೆ. ಇದು ರಚನೆ ಮತ್ತು ತಾಪಮಾನವನ್ನು ಅವಲಂಬಿಸಿ ವ್ಯತ್ಯಾಸಗೊಳ್ಳುತ್ತದೆ. ಉದಾಹರಣೆಗೆ, 20 °C (68 °F)ರಲ್ಲಿ ಶುದ್ಧ ಬ್ಯೂಟೇನ್‌ಗೆ ಅಂದಾಜು220 kilopascals (2.2 bar)ರಷ್ಟಿರುತ್ತದೆ, ಹಾಗೂ 55 °C (131 °F)ರಲ್ಲಿ ಶುದ್ಧ ಪ್ರೋಪೇನ್‌ಗೆ ಅಂದಾಜು 2.2 megapascals (22 bar)ರಷ್ಟಿರುತ್ತದೆ. LPG ಗಾಳಿಗಿಂತಲೂ ಹೆಚ್ಚು ತೂಕದ್ದಾಗಿರುತ್ತದೆ. ಹಾಗಾಗಿ, ನೆಲಗಳಲ್ಲಿ ಸೋರಿಕೆಯಾಗಿ, ನೆಲಮಾಳಿಗೆಗಳು ಮುಂತಾದ ಕೆಳಮಟ್ಟದ ಸ್ಥಳಗಳಲ್ಲಿ ಸಂಗ್ರಹವಾಗುವ ಪ್ರವೃತ್ತಿ ಹೊಂದಿರುತ್ತದೆ. ಸೋರುವಿಕೆಯನ್ನು ತಡೆಗಟ್ಟದಿದ್ದಲ್ಲಿ, ಬೆಂಕಿ ಹಚ್ಚಿಕೊಳ್ಳಬಹುದು ಅಥವಾ ಉಸಿರು ಕಟ್ಟುವ ಅಪಾಯ ಸಂಭವಿಸಬಹುದು.

ಬೃಹದಾಕಾರದ ಟ್ಯಾಂಕ್‌ಗಳಲ್ಲಿ LPGಯನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಬಹುದಾಗಿದೆ. ಅಗತ್ಯವಿದ್ದಲ್ಲಿ ನೆಲದಡಿಯಲ್ಲಿ ಹೂಳಬಹುದು. ಪರ್ಯಾಯವಾಗಿ, ಅನಿಲದ ಸಿಲಿಂಡರ್‌ಗಳನ್ನು ಬಳಸಬಹುದು.

ಬಳಕೆಗಳು[ಬದಲಾಯಿಸಿ]

ವಾಹನ ಇಂಧನ[ಬದಲಾಯಿಸಿ]

ಆಂತರಿಕ ದಹನ ಇಂಜಿನ್‌ಗಳನ್ನು ಚಾಲಿತಗೊಳಿಸಲು LPGಯನ್ನು ಬಳಸಿದಲ್ಲಿ, ಅದನ್ನು ಆಟೋಗ್ಯಾಸ್‌ ಅಥವಾ ಆಟೋ ಪ್ರೋಪೇನ್‌ ಎಂದು ಉಲ್ಲೇಖಿಸಲಾಗುತ್ತದೆ. ಕೆಲವು ದೇಶಗಳಲ್ಲಿ, ಸ್ಪಾರ್ಕ್‌ ಇಗ್ನಿಷನ್‌ ಇಂಜಿನ್‌ಗಳಿಗಾಗಿ ಪೆಟ್ರೋಲ್‌‌ಗೆ ಬದಲಿಯಾಗಿ LPGಯನ್ನು 1940ರ ದಶಕದಿಂದಲೂ ಬಳಸಲಾಗುತ್ತಿದೆ. ಇತ್ತೀಚೆಗೆ, ಎರಡು ಅಧ್ಯಯನಗಳು LPG-ಡೀಸಲ್‌ ಇಂಧನ ಮಿಶ್ರಣಗಳನ್ನು ಪರಿಶೀಲಿಸಿದ್ದವು. ಇದರಂತೆ, ಹೊಗೆ ಹೊರಸೂಸುವಿಕೆಗಳು ಹಾಗೂ ಇಂಧನದ ಬಳಕೆಯ ಪ್ರಮಾಣವು ಕಡಿಮೆಯಾಗಿ, HC ಹೊರಸೂಸುವಿಕೆಗಳು ಹೆಚ್ಚಾಗಿರುವುದು ಕಂಡುಬಂತು.[೨][೩]

ಈ ಅಧ್ಯಯನಗಳಲ್ಲಿ CO (ಇಂಗಾಲ ಮಾನಾಕ್ಸೈಡ್‌‌) ಹೊರಸೂಸುವಿಕೆಗಳ ಕುರಿತು ಭಿನ್ನಾಭಿಪ್ರಾಯಗಳಿದ್ದವು. ಒಂದು ಅಧ್ಯಯನದ ಪ್ರಕಾರ CO ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳವಿದ್ದರೆ,[೨] ಇನ್ನೊಂದರಲ್ಲಿ 'ಲೋ ಇಂಜಿನ್‌ ಲೋಡ್‌' ಸ್ಥಿತಿಯಲ್ಲಿ ಸ್ವಲ್ಪಮಟ್ಟಿಗೆ CO ಹೆಚ್ಚಾದರೂ 'ಹೈ ಇಂಜಿನ್‌ ಲೋಡ್‌' ಸ್ಥಿತಿಯಲ್ಲಿ ಗಮನಾರ್ಹವಾದ ಇಳಿತ ಕಂಡುಬಂದಿತ್ತು.[೩] ವಿಷರಹಿತ, ತುಕ್ಕುಹಿಡಿಸದಿರುವಿಕೆ, ಹಾಗೂ ಟೆಟ್ರಾ-ಈಥೈಲ್‌ ಲೆಡ್‌ ಅಥವಾ ಇತರೆ ಸಂಯೋಜನೀಯಗಳಿಂದ ಮುಕ್ತವಾಗಿರುವುದು, ಹಾಗೂ ಹೆಚ್ಚಿನ ಆಕ್ಟೇನ್‌ ರೇಟಿಂಗ್‌ ಹೊಂದಿರುವುದು ಇದರ ಅನುಕೂಲಗಳಾಗಿವೆ. (108 RON) ಇದು ಪೆಟ್ರೋಲ್‌ ಅಥವಾ ಡೀಸೆಲ್‌ಗಿಂತಲೂ ಇನ್ನೂ ಶುದ್ಧವಾಗಿ ದಹಿಸಿ,ವಿಶೇಷವಾಗಿ ಡೀಸೆಲ್ ದಹನದಿಂದ ಉಳಿದುಕೊಳ್ಳುವ ಕಣಗಳಿಂದ ಮುಕ್ತವಾಗಿರುತ್ತದೆ.

LPG ಪೆಟ್ರೋಲ್‌ ಅಥವಾ ಡೀಸೆಲ್‌ಗಿಂತಲೂ ಕಡಿಮೆ ಶಕ್ತಿ ಸಾಂದ್ರತೆ ಹೊಂದಿದೆ. ಹಾಗಾಗಿ ತತ್‌ಸಮಾನ ಇಂಧನ ಬಳಕೆಯ ಪ್ರಮಾಣವೂ ಸಹ ಹೆಚ್ಚಾಗಿರುತ್ತದೆ. ಹಲವು ಸರ್ಕಾರಗಳು LPG ಮೇಲೆ ವಿಧಿಸುವ ತೆರಿಗೆಯು ಪೆಟ್ರೋಲ್‌ ಅಥವಾ ಡೀಸೆಲ್‌ ಮೇಲಿನ ತೆರಿಗೆಗಿಂತಲೂ ಕಡಿಮೆ, ಇದರಿಂದಾಗಿ, ಪೆಟ್ರೋಲ್‌ ಅಥವಾ ಡೀಸೆಲ್‌ಗಿಂತಲೂ LPGಯನ್ನು ಹೆಚ್ಚಿನ ಪ್ರಮಾಣದ ಬಳಕೆಗೆ ಸರಿದೂಗಿಸಲು ನೆರವಾಗುತ್ತದೆ. ಪ್ರೋಪೇನ್‌ ವಿಶ್ವದಲ್ಲೇ ಮೂರನೆಯ ಅತಿ ಹೆಚ್ಚು ಬಳಕೆಯಾಗುವ ಮೋಟಾರ್ ಇಂಧನವಾಗಿದೆ. ಇಸವಿ 2008ರಲ್ಲಿ ನೀಡಲಾದ ಅಂದಾಜುಗಳ ಪ್ರಕಾರ, ವಿಶ್ವಾದ್ಯಂತ ಸುಮಾರು 13 ದಶಲಕ್ಷ ವಾಹನಗಳು ಪ್ರೊಪೇನ್‌ ಅನಿಲದಿಂದ ಚಾಲಿತವಾಗುತ್ತಲಿವೆ. ವಾರ್ಷಿಕ ಸುಮಾರು 20 ದಶಲಕ್ಷ ಟನ್‌ಗಳಿಗಿಂತಲೂ (ಏಳು ಶತಕೋಟಿ US ಗ್ಯಾಲನ್‌ಗಳಿಗಿಂತಲೂ ಹೆಚ್ಚು) ಹೆಚ್ಚು ವಾಹನ ಇಂಧನದ ರೂಪದಲ್ಲಿ ಬಳಸಲಾಗುತ್ತಿದೆ.

ಶೈತ್ಯೀಕರಣ[ಬದಲಾಯಿಸಿ]

ಸಾಮಾನ್ಯವಾಗಿ, ಅನಿಲ ಹೀರಿಕೆಯ ಶೀತಕಯಂತ್ರದ ಮೂಲಕ ಆಫ್-ದಿ-ಗ್ರಿಡ್‌ ಶೈತ್ಯೀಕರಣ ನೀಡಲು LPG ಬಹಳ ಉಪಯುಕ್ತವಾಗಿದೆ.

ಶುದ್ಧ, ಶುಷ್ಕ "ಐಸೋಪ್ರೋಪೇನ್‌" (ರಿಫ್ರಿಜರೆಂಟ್‌ ಶೈತ್ಯಕಾರಿ ಡೆಸಿಗ್ನೇಟರ್‌ R-290a ) ಹಾಗೂ ಐಸೋಬ್ಯೂಟೇನ್‌ (R-600a) ಮಿಶ್ರಣಗಳು ನಗಣ್ಯ ಪ್ರಮಾಣದ ಒಜೋನ್‌ ಬರಿದುಗೊಳಿಸುವಿಕೆ ಸಾಮರ್ಥ್ಯ ಹಾಗೂ ಬಹಳ ಕಡಿಮೆ ಜಾಗತಿಕ ತಾಪಮಾನ ಹೆಚ್ಚಳ ಸಾಮರ್ಥ್ಯ ಹೊಂದಿವೆ. ಇದರಿಂದಾಗಿ, ಸಾಂಪ್ರದಾಯಿಕ ಸ್ಥಿರ ಶೈತ್ಯೀಕರಣ ಹಾಗೂ ಹವಾ ನಿಯಂತ್ರಣ ವ್ಯವಸ್ಥೆಗಳಲ್ಲಿ, R-12, R-22, R-134a ಹಾಗೂ ಇತರೆ ಕ್ಲೋರೋಫ್ಲೋರೋಕಾರ್ಬನ್‌ ಅಥವಾ ಹೈಡ್ರೋಫ್ಲೋರೋಕಾರ್ಬನ್‌ ಶೈತ್ಯಕಾರಿಗಳಿಗೆ ಬದಲಿಯಾಗಿ ಕಾರ್ಯನಿರ್ವಹಿಸಬಹುದು.[೪]

ಮೋಟಾರ್‌ ವಾಹನಗಳ ಹವಾ ನಿಯಂತ್ರಣಾ ವ್ಯವಸ್ಥೆಗಳಲ್ಲಿ ಇಂತಹ ಬದಲಿಯನ್ನು ವ್ಯಾಪಕವಾಗಿ ನಿಷೇಧಿಸಲಾಗಿದೆ, ಅಥವಾ ನಿರುತ್ಸಾಹಗೊಳಿಸಲಾಗಿದೆ. ಇದಕ್ಕೆ ಕಾರಣ, ದಹ್ಯವಲ್ಲದ ಶೀತಕ ಹೊರುವ ವ್ಯವಸ್ಥೆಯಲ್ಲಿ ಸುಲಭವಾಗಿ ಉರಿಯುವ ಹೈಡ್ರೋಕಾರ್ಬನ್‌ಗಳನ್ನು ಬಳಸಿದಲ್ಲಿ, ಬೆಂಕಿ ಅಥವಾ ಸ್ಫೋಟದ ಗಮನಾರ್ಹ ಅಪಾಯ ಉಂಟುಮಾಡುತ್ತದೆ.[೫][೬][೭][೮][೯][೧೦][೧೧][೧೨]

ಹೈಡ್ರೋಕಾರ್ಬನ್‌ ಶೀತಕಗಳ ಮಾರಾಟಗಾರರು ಮತ್ತು ಸಮರ್ಥಕರು ಇಂತಹ ನಿಷೇಧಗಳ ವಿರುದ್ಧ ವಾದಿಸುವರು. ಹೈಡ್ರೋಕಾರ್ಬನ್‌ಗಳು ತುಂಬಿದ ವಾಹನ ಹವಾ ನಿಯಂತ್ರಣಾ ವ್ಯವಸ್ಥೆಗಳ ಸಂಖ್ಯೆಯನ್ನು ಪರಿಗಣಿಸಿದರೆ ಇಂತಹ ಅಪಘಾತಗಳ ಸಂಖ್ಯೆ ಬಹಳ ಕಡಿಮೆ ಎಂಬುದು ಇವರ ವಾದ.[೧೩][೧೪] ನ್ಯೂ ಸೌತ್‌ ವೇಲ್ಸ್‌ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ಒಂದು ಪ್ರಯೋಗ ನಡೆಸಿದ್ದರು. ಪ್ರಯಾಣಿಕರ ಕಂಪಾರ್ಟ್‌ಮೆಂಟ್‌ಗಳಲ್ಲಿ ಹಠಾತ್‌ ಹಾಗೂ ಸಂಪೂರ್ಣ ಶೀತಕ ನಷ್ಟ, ಕ್ರಮೇಣ ಉರಿ ಹೊತ್ತಿಕೊಳ್ಳುವಿಕೆಯಂತಹ ಅಪಾಯಕಾರಿ ಪ್ರಯೋಗವನ್ನು ಉದ್ದೇಶಪೂರ್ವಕವಲ್ಲದೆ ಪರೀಕ್ಷಿಸಿದರು. ಈ ಸನ್ನಿವೇಶದಲ್ಲಿ ಈ ಪ್ರಾಧ್ಯಾಪಕರು ಹಾಗೂ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಇತರರು ತಮ್ಮ ಮುಖ, ಕಿವಿ ಹಾಗೂ ಕೈಗಳಲ್ಲಿ ಸಣ್ಣ ಪ್ರಮಾಣದ ಗಾಯಗಳನ್ನು ಮಾಡಿಕೊಂಡರು. ಅನೇಕ ವೀಕ್ಷಕರಿಗೆ ಪ್ರಯಾಣಿಕರ ಮುಂಭಾಗದಲ್ಲಿರುವ ಕಿಟಕಿಯ ಗಾಜು ಒಡೆದಿದ್ದರಿಂದ,ತರಚಿದ ಗಾಯಗಳಾದವು. ಯಾರಿಗೂ ತೀವ್ರ ಗಾಯವಾಗಿರಲಿಲ್ಲ.[೧೫]

ಅಡುಗೆ[ಬದಲಾಯಿಸಿ]

ಸಿಂಗಪುರದಲ್ಲಿ ಗೃಹಬಳಕೆದಾರರಿಗಾಗಿ LPG ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿರುವ ಲಾರಿ.

ಇಸವಿ 2001ರಲ್ಲಿ ಭಾರತದಲ್ಲಿ ನಡೆಸಲಾದ ಜನಗಣತಿಯ ಪ್ರಕಾರ, ಭಾರತೀಯ ಗೃಹಗಳಲ್ಲಿ 17.5%ರಷ್ಟು, ಅಥವಾ 33.6 ದಶಲಕ್ಷದಷ್ಟು ಗೃಹಗಳಲ್ಲಿ LPGಯನ್ನು ಅಡುಗೆ ಇಂಧನದ ರೂಪದಲ್ಲಿ ಬಳಸಲಾಗುತ್ತಿತ್ತು.[೧೬] ಇಂತಹ ಗ್ರಹಸಮೂಹಗಳಲ್ಲಿ 76.64%ರಷ್ಟು ಗೃಹಗಳು ಭಾರತದ ನಗರ ಪ್ರದೇಶಗಳಲ್ಲಿದ್ದವು. ಹಾಗಾಗಿ, ಭಾರತೀಯ ಗೃಹಗಳಲ್ಲಿ ಒಟ್ಟಾರೆ 48%ರಷ್ಟು LPG ಬಳಸುತ್ತವೆ. ಇದಕ್ಕೆ ಹೋಲಿಸಿದರೆ, ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ ಕೇವಲ 5.7%ರಷ್ಟು ಗೃಹಗಳಲ್ಲಿ LPG ಬಳಸಲಾಗುತ್ತಿತ್ತು. ಸರ್ಕಾರವು LPGಗೆ ಸಹಾಯಧನ ಒದಗಿಸುತ್ತಿದೆ. ಭಾರತದಲ್ಲಿ LPG ದರಗಳ ಹೆಚ್ಚಳವು ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ, ಏಕೆಂದರೆ ಇದು ನಗರಗಳ ಮಧ್ಯಮ ವರ್ಗದ ಜನತೆಯ ಮತಗಳ ಹಂಚಿಕೆಯ ಮೇಲೆ ಪರಿಣಾಮ ಬೀರುವ ವಿಚಾರವಾಗಿದೆ.

ಹಿಂದೆ, ಹಾಂಕಾಂಗ್‌ನಲ್ಲಿ LPG ಜನಪ್ರಿಯ ಅಡುಗೆ ಅನಿಲವಾಗಿತ್ತು. ಆದರೆ, ಕಟ್ಟಡಗಳಿಗೆ ಪಟ್ಟಣದ ಅನಿಲ(ಕಲ್ಲಿದ್ದಲು ಅನಿಲ)ದ ಬಳಕೆ ವ್ಯಾಪಕವಾಗುತ್ತಿದ್ದಾಗ, ವಸತಿ ಗೃಹಗಳಲ್ಲಿ LPG ಬಳಕೆ 24%ಕ್ಕಿಂತಲೂ ಕಡಿಮೆಯಾಯಿತು.

LPG ಬ್ರೆಜಿಲ್‌ ದೇಶದ ನಗರ ಪ್ರದೇಶಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಇಂಧನವಾಗಿದೆ. ಅಕ್ಷರಶಃ ಎಲ್ಲಾ ಗೃಹಗಳಲ್ಲಿಯೂ ಬಳಸಲಾಗುತ್ತಿದೆ. ಬಡ ಕುಟುಂಬಗಳು ಸರ್ಕಾರದಿಂದ ಪಡೆಯುವ ಅನುದಾನ('ವೇಲ್‌ ಗ್ಯಾಸ್‌')ವನ್ನು ವಿಶೇಷವಾಗಿ LPG ಪಡೆಯಲೆಂದೇ ಬಳಸಲಾಗುತ್ತಿತ್ತು.

ನೈಸರ್ಗಿಕ ಅನಿಲದೊಂದಿಗೆ ಹೋಲಿಕೆ[ಬದಲಾಯಿಸಿ]

ನೈಸರ್ಗಿಕ ಅನಿಲ (ಮೀಥೇನ್‌) (38 MJ/m3, 10.6 kWh/m3ಕ್ಕೆ ಸಮನಾಗಿ)ಗೆ ಹೋಲಿಸಿದರೆ, LPG ಹೆಚ್ಚಿನ ಶಾಖ ಉತ್ಪಾದಿಸುವ ಸಾಮರ್ಥ್ಯ (94 MJ/m3, 26.1kWh/m³ಕ್ಕೆ ಸಮನಾಗಿ) ಹೊಂದಿದೆ. ಇದರ ಅರ್ಥ, ನೈಸರ್ಗಿಕ ಅನಿಲದ ಬದಲಾಗಿ ಸುಲಭವಾಗಿ LPG ಬಳಸಲು ಸಾಧ್ಯವಿಲ್ಲ.

ಒಂದೇ ರೀತಿಯ ಉರಿ ನಿಯಂತ್ರಣಗಳ ಬಳಕೆಗೆ ಹಾಗೂ ಒಂದೇ ರೀತಿಯ ಉರಿಯುವಿಕೆಯ ಸ್ವಭಾವಗಳಿಗೆ ಅವಕಾಶ ನೀಡಲು, LPGಯನ್ನು ಗಾಳಿಯೊಂದಿಗೆ ಮಿಶ್ರಣ ಮಾಡಿ, ಸಂಶ್ಲೇಷಿತ ನೈಸರ್ಗಿಕ ಅನಿಲವನ್ನು (SNG) ತಯಾರಿಸಬಹುದು. ಇದನ್ನು ಸುಲಭವಾಗಿ ಪರ್ಯಾಯವಾಗಿ ಬಳಸಬಹುದಾಗಿದೆ. LPG/ಗಾಳಿ ಮಿಶ್ರಣ ಅನುಪಾತಗಳು ಸರಾಸರಿ 60/40ಕ್ಕಿರುತ್ತದೆ. ಆದರೆ, LPGಯ ರಚನೆಯಲ್ಲಿರುವ ಅನಿಲಗಳನ್ನು ಆಧರಿಸಿ, ಇದರಲ್ಲಿ ವ್ಯತ್ಯಾಸಗಳುಂಟು. ಮಿಶ್ರಣದ ವೊಬ್‌ ಸೂಚ್ಯಂಕವ‌ನ್ನು ಗಣಿಸುವುದರ ಮೂಲಕ, ಮಿಶ್ರಣದ ಅನುಪಾತಗಳನ್ನು ನಿರ್ಣಯಿಸಲಾಗುತ್ತದೆ. ಒಂದೇ ಸಮನಾದ ವೊಬ್‌ ಸೂಚ್ಯಂಕ ಹೊಂದಿರುವ ಅನಿಲಗಳನ್ನು ಅದಲು-ಬದಲು ಮಾಡಬಹುದಾಗಿದೆ.

ಸಾರ್ವಜನಿಕ, ಕೈಗಾರಿಕಾ ಹಾಗೂ ಸೇನಾ ಘಟಕಗಳಲ್ಲಿ ತುರ್ತು ಬಳಕೆಯ ವ್ಯವಸ್ಥೆಯಲ್ಲಿ LPG-ಆಧಾರಿತ SNGಯನ್ನು ಬಳಸಲಾಗಿದೆ. ಹೆಚ್ಚಿನ ಬೇಡಿಕೆಯ ಸಂದರ್ಭಗಳಲ್ಲೆಲ್ಲ ತಮ್ಮ ವಿತರಣಾ ವ್ಯವಸ್ಥೆಗಳಿಗೆ ಪೂರೈಸಲಾದ ನೈಸರ್ಗಿಕ ಅನಿಲದ ಕೊರತೆ ನೀಗಿಸಲು, ಹಲವು 'ಗೃಹೋಪಯೋಗಿ ಸಂಸ್ಥೆಗಳು' LPG ಪೀಕ್‌ ಷೇವಿಂಗ್‌(ಗರಿಷ್ಠ ಬೇಡಿಕೆಯಿದ್ದಾಗ ನಡೆಸುವ)ಘಟಕಗಳನ್ನು ಬಳಸುತ್ತವೆ. LPG-SNG ಅಳವಡಿಕೆಗಳನ್ನು ಆರಂಭಿಕ ಅನಿಲ ವ್ಯವಸ್ಥೆ ಬಳಕೆಗೆ ತರುವಾಗ ಕೂಡ ಉಪಯೋಗಿಸಲಾಗುತ್ತದೆ.ಅನಿಲ ಪೂರೈಕೆಗಳ ಸಂಪರ್ಕ ಕಲ್ಪಿಸುವ ಮುಂಚೆ ವಿತರಣೆ ಸೌಲಭ್ಯ ಸಿದ್ಧವಿದ್ದಾಗ ಹೀಗೆ ಮಾಡಲಾಗುತ್ತದೆ. ಭಾರತ ಹಾಗೂ ಚೀನಾ ದೇಶಗಳೂ ಸೇರಿದಂತೆ ಇತರೆ ದೇಶಗಳ ಅಭಿವೃದ್ಧಿಶೀಲ ಮಾರುಕಟ್ಟೆಗಳಲ್ಲಿ, ಸದ್ಯದ ನೈಸರ್ಗಿಕ ಅನಿಲ ವ್ಯವಸ್ಥೆಗಳನ್ನು ವಿಸ್ತರಿಸುವ ಮುಂಚೆ ಗ್ರಾಹಕರ ನೆಲೆಗಳನ್ನು ನಿರ್ಮಿಸಲು LPG-SNG ವ್ಯವಸ್ಥೆಗಳನ್ನು ಬಳಸುತ್ತಿವೆ.

ಬೆಂಕಿಯ ಅಪಾಯ ಮತ್ತು ಉಪಶಮನ[ಬದಲಾಯಿಸಿ]

ಸಂಸ್ಕರಣಾಗಾರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗೋಲಾಕಾರದ ಅನಿಲ ಧಾರಕ.

ನಿರ್ದಿಷ್ಟ ಕಾಲ ಮತ್ತು ತೀವ್ರತೆಯ ಅಗ್ನಿಗೆ LPG ಧಾರಕ(ಕಂಟೇನರ್)ಗಳನ್ನು ಒಡ್ಡಿದಲ್ಲಿ,ಅವು ಕುದಿಯುವ ದ್ರವ ಹಿಗ್ಗುವ ಆವಿ ಸ್ಫೋಟಕ್ಕೆ (BLEVE)ಈಡಾಗುತ್ತದೆ. LPG ಸ್ಫೋಟಗಳು ವಿನಾಶಕಾರಿ ಪ್ರವೃತ್ತಿ ಕಾರಣ, ಈ ವಸ್ತುವನ್ನು ಅಪಾಯಕಾರಿ ಸರಕು ಎಂದು ವಿಂಗಡಿಸಲಾಗಿದೆ.[೧೭] ಬೃಹದಾಕಾರದ ಕಂಟೇನರ್(ಧಾರಕ)ಗಳನ್ನು ಹೊಂದಿರುವ ದೊಡ್ಡ ಸಂಸ್ಕರಣಾಗಾರಗಳು ಮತ್ತು ಪೆಟ್ರೋಕೆಮಿಕಲ್ ಘಟಕಗಳಲ್ಲಿ ಸಾಮಾನ್ಯವಾಗಿ ಇದು ಕಳವಳದ ವಿಚಾರವಾಗಿದೆ. ಇಂತಹ ಧಾರಕಗಳಿಗೆ ಅಗ್ನಿ ನಿರೋಧಕ ರೇಟಿಂಗ್‌ ನೀಡಲು ವ್ಯವಸ್ಥೆ ಕಲ್ಪಿಸುವುದು ಇದಕ್ಕೆ ಪರಿಹಾರ ಕ್ರಮವಾಗಿದೆ. ಧಾರಕಗಳು ಸಿಲಿಂಡರ್ ಆಕಾರ ಅಥವಾ ಚಪ್ಪಟೆಯಾಗಿದ್ದರೆ,ಅವುಗಳನ್ನು "ಸಿಗಾರ್‌ಗಳು‌" ಅಥವಾ "ಬುಲೆಟ್‌ಗಳು" ಎನ್ನಲಾಗುತ್ತದೆ; ಗೋಲಾಕಾರದ ಧಾರಕಗಳನ್ನು "ಸ್ಫಿಯರ್‌"ಗಳು ಎನ್ನಲಾಗುತ್ತದೆ. ದೊಡ್ಡ, ಗೋಲಾಕಾರದ LPG ಧಾರಕಗಳು ಸುಮಾರು 15 ಸೆ.ಮೀ.ಗಳವರೆಗೂ ದಪ್ಪನಾದ ಉಕ್ಕಿನ ಗೋಡೆ ಹೊಂದಿರುತ್ತವೆ. ಸಾಮಾನ್ಯವಾಗಿ, ಅವುಗಳ ಮೇಲೆ, ಮಧ್ಯಭಾಗದಲ್ಲಿ ಮಂಜೂರು ಮಾಡಲಾದ ಒತ್ತಡ ಶಮನಗೊಳಿಸುವ ಕವಾಟವನ್ನು ಅಳವಡಿಸಲಾಗುತ್ತದೆ. ಹೈಡ್ರೋಕಾರ್ಬನ್‌ಗಳ ಆಕಸ್ಮಿಕ ಸೋರಿಕೆಗಳು LPG ಧಾರಕವನ್ನು ಹೊತ್ತಿಸಿ ತಾಪಮಾನ ಹೆಚ್ಚಿಸಬಹುದು. ಇದರಿಂದ, ಮೂಲಭೂತ ಅನಿಲ ನಿಯಮಗಳಂತೆ, ಧಾರಕದ ಉಷ್ಣಾಂಶ ಮತ್ತು ಒತ್ತಡವೂ ಸಹ ಹೆಚ್ಚಾಗುತ್ತದೆ. ಮಿತಿಮೀರಿದ ಒತ್ತಡವನ್ನು ಹೊರಬಿಡುವುದರ ಮೂಲಕ, ಧಾರಕವು ಸಿಡಿಯುವುದನ್ನು ತಡೆಗಟ್ಟಲು ಅದರ ಮೇಲಿರುವ ಉಪಶಮನ ಕವಾಟವನ್ನು ವಿನ್ಯಾಸಗೊಳಿಸಲಾಗಿದೆ. ಸಾಕಷ್ಟು ಸಮಯ ಹಾಗೂ ತೀವ್ರತೆಯ ಅಗ್ನಿಯಿಂದ,ಕುದಿಯುತ್ತಿರುವ ಹಾಗೂ ಹಿಗ್ಗುತ್ತಿರುವ ಅನಿಲದಿಂದ ಉಂಟಾದ ಒತ್ತಡವು ಹೆಚ್ಚುವರಿ ಒತ್ತಡವನ್ನು ಹೊರಬಿಡುವ ಕವಾಟದ ಸಾಮರ್ಥ್ಯವನ್ನು ಮೀರಬಹುದು. ಇದು ಸಂಭವಿಸಿದರೆ,ಹೆಚ್ಚಿನ ಅಪಾಯಕ್ಕೀಡಾದ ಧಾರಕವು ದೊಡ್ಡ ಪ್ರಮಾಣದಲ್ಲಿ ಸಿಡಿದುಹೋಗಿ, ಅದರ ಚೂರುಗಳು ಹೆಚ್ಚಿನ ವೇಗದಲ್ಲಿ ಪ್ರಸರಿಸುತ್ತವೆ. ಬಿಡುಗಡೆಯಾದ ಅನಿಲಗಳಿಗೂ ಬೆಂಕಿ ಹೊತ್ತಿಕೊಂಡು, ಇತರ ಟ್ಯಾಂಕ್‌ಗಳು ಸೇರಿದಂತೆ ಸಮೀಪದ ವಸ್ತುಗಳಿಗೆ ಹಾನಿ ಉಂಟುಮಾಡುತ್ತದೆ. "ಸಿಗಾರ್‌" ರೂಪದ ಧಾರಕಗಳಲ್ಲಿ, ಮಧ್ಯದಲ್ಲಿ ಒಡೆದರೆ ಅದರ ಎರಡೂ ಬದಿಗಳಲ್ಲಿ ಎರಡು "ರಾಕೆಟ್‍"‌ಗಳಂತೆ ಹಾರಿಹೋಗುತ್ತವೆ.ಪ್ರತಿಯೊಂದು ಭಾಗದಲ್ಲಿ ವಿಪುಲ ಇಂಧನದೊಂದಿಗೆ ಅತ್ಯಂತ ವೇಗದಲ್ಲಿ ಅವನ್ನು ಇಂಧನ ಖರ್ಚಾಗುವ ತನಕ ನೂಕುತ್ತವೆ.

ಇದನ್ನು ಉಪಶಮನಗೊಳಿಸುವ ಕ್ರಮಗಳ ಪೈಕಿ, ಅಗ್ನಿಯ ಸಂಭಾವ್ಯ ಮೂಲಗಳಿಂದ LPG ಟ್ಯಾಂಕ್‌ಗಳನ್ನು ಪ್ರತ್ಯೇಕವಾಗಿ ಸ್ಥಾಪಿಸುವುದು ಸಹ ಒಂದು. ರೈಲಿನ ಮೂಲಕ ಸಾಗಿಸುವಾಗ, LPG ಟ್ಯಾಂಕ್‌ಗಳ ಮಧ್ಯೆ ಇತರ ಸರಕುಗಳನ್ನು ಇಡುವ ಮೂಲಕ ವ್ಯವಸ್ಥಿತವಾಗಿ ಜೋಡಿಸಬಹುದು. ಇದನ್ನು ಯಾವಾಗಲೂ ಮಾಡಲಾಗುವುದಿಲ್ಲ, ಆದರೂ ಇದು ಸಮಸ್ಯೆಗೆ ಕಡಿಮೆ-ವೆಚ್ಚದ ಪರಿಹಾರ ನೀಡಬಲ್ಲದು. ಸಾಮಾನ್ಯವಾಗಿ ಮೇಲೆ ಉಪಶಮನ ಕವಾಟಗಳು ಹಾಗೂ ಅದರ ಸುತ್ತಲೂ ಕಂಬಿತಡೆಗಳ ಮೂಲಕ LPG ರೈಲು ಬೋಗಿಗಳನ್ನು ಸುಲಭವಾಗಿ ಗುರುತಿಸಬಹುದು.

ಹೊಸ LPG ಧಾರಕಗಳಿಗೆ ಸಂಬಂಧಿಸಿದಂತೆ,ಅವುಗಳನ್ನು ಸುಮ್ಮನೇ ಹೂಳಬಹುದು,ಸುಲಭದ ನಿರ್ವಹಣೆಗಾಗಿ ಕವಾಟಗಳು ಮತ್ತು ಆರ್ಮೆಚರುಗಳನ್ನು ಮೇಲೆ ಕಾಣುವಂತೆ ಬಿಡಬಹುದು. ಆದರೂ ಸಹ, ಬಹಳ ಎಚ್ಚರಿಕೆ ವಹಿಸುವುದು ಉತ್ತಮ, ಏಕೆಂದರೆ ಪ್ರೈಮರ್‌ಗಳಿಗೆ ಯಾಂತ್ರಿಕ ಹಾನಿಯಾದಲ್ಲಿ, ಧಾರಕಗಳಿಗೆ ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ಎದುರಾಗಬಹುದು. ಹೂಳಲಾಗಿರುವ ಧಾರಕಗಳಲ್ಲಿ, ಹೊರಗೆ ಕಾಣುವ ಭಾಗಗಳಿಗೆ, ಕೇವಲ ಮಂಜೂರು ಮಾಡಲಾದ ಅಗ್ನಿನಿರೋಧಕ ವಸ್ತುಗಳಾದಇಂಟುಮೆಸೆಂಟ್ ಮತ್ತು/ಅಥವಾ ಶಾಖಗ್ರಾಹಿಹೊದಿಕೆಗಳು ಅಥವಾ ಅಗ್ನಿನಿರೋದಕ ಪ್ಲ್ಯಾಸ್ಟರ್‌ ಲೇಪಿಸಬಹುದಾಗಿದೆ. ಅನಿಲ ಧಾರಕಗಳ ಉಳಿದ ಭಾಗಗಳನ್ನು ಮಣ್ಣು ಸಮೃದ್ಧವಾಗಿ ರಕ್ಷಿಸುತ್ತದೆ. ಉಪಕರಣದ ಸಮರ್ಪಕ ನಿರ್ವಹಣೆ ನಡೆಸುವ ಉದ್ದೇಶಗಳಿಗಾಗಿ ಕೆಲವು ಸೂಚಿಫಲಕ ಹಾಗೂ ಇತರ ಬಿಡಿಭಾಗಗಳಿಗೆ ಸುಲಭದ ಪ್ರವೇಶಕ್ಕಾಗಿ ತೆರೆಯಬಹುದಾದಂತಹ ವಿಶೇಷ ಹೊದಿಕೆಗಳನ್ನು ಹೊಂದಿರುತ್ತವೆ.

ಬಹಳ ದಪ್ಪನಾದ ಉಕ್ಕಿನ ಗೋಡೆಗಳನ್ನು ಹೊಂದಿದ್ದರೂ ಸಹ, ಹಿಗ್ಗಿಸುವಿಕೆ, ಸಂಕುಚಿತಗೊಳಿಸುವಿಕೆ, ತುಂಬಿಸುವಿಕೆ ಹಾಗೂ ಖಾಲಿಯಾಗುವಿಕೆಯಂತಹ ಪ್ರಕ್ರಿಯೆಗಳ ಕಾರಣ LPG ಧಾರಕಗಳು ಗಮನಾರ್ಹವಾದ ಚಲನೆಗೆ ಗುರಿಯಾಗುತ್ತವೆ. ಇಂತಹ ನಿರ್ವಹಣೆಯ ಕಾರ್ಯವು ದೀರ್ಘಾವಧಿಯಲ್ಲಿ ಹೂಳುವ ಆಯ್ಕೆ ಆಕರ್ಷಣೆ ಪ್ರಮಾಣವನ್ನು ಸ್ವಲ್ಪ ಕಡಿಮೆ ಪಡೆಯಬಹುದು.ಏಕೆಂದರೆ, ಮಣ್ಣಿನ ಮೂಲಕ ಧಾರಕದ ಹೊರ ಜಲನಿರೋಧಕಕ್ಕೆ, ಯಾಂತ್ರಿಕ ಹಾನಿ ಗುರುತಿಸುವುದು ಕಷ್ಟವಾಗುತ್ತದೆ. ಎಪಾಕ್ಸಿ ಲೇಪಿತ ಹೊರಹೊದಿಕೆಯ ಮೇಲೆ ಸಣ್ಣ ಕಲ್ಲು ಹಿಂದಕ್ಕೂ ಮುಂದಕ್ಕೂ ಘರ್ಷಣೆಯಿಂದ ಜಲನಿರೋಧಕವನ್ನು ಹಾನಿಗೊಳಿಸಿ ತುಕ್ಕುಹಿಡಿಯಲು ಕಾರಣವಾಗಬಹುದು.

ಅಜೈವಿಕ ಪ್ಲ್ಯಾಸ್ಟರ್‌ ಬಳಸಿ ಇಡೀ ಗೋಲಾಕಾರದ ಧಾರಕವನ್ನು ಮುಚ್ಚಬಹುದು ಎಂದು ಲೆಕ್ಕಾಚಾರ ಹಾಕಿ ಸಮರ್ಥಿಸಿ ಬರೆಯಬಹುದು. ಆದರೂ, ವಿಸ್ತರಿತ ಕಾಲಾವಧಿಗಳಲ್ಲಿ ಇಂತಹ ಪ್ಲ್ಯಾಸ್ಟರ್‌ಗಳನ್ನು ನಿರ್ವಹಿಸಿಕೊಂಡು ಹೋಗುವುದು ಕಷ್ಟಕರವಾಗಬಹುದು.

ಈ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ದೋಷಗಳು ಈ ಹಿಂದೆ ಘಟಿಸಿವೆ. ಕ್ಷಾರೀಯ ಪ್ಲ್ಯಾಸ್ಟರ್‌ (ಆಲ್ಕಲೈನ್‌ ಪ್ಲ್ಯಾಸ್ಟರ್‌) ಬಳಸುವುದರ ಮೂಲಕ ಉಕ್ಕಿನ ಪದರವನ್ನು ತುಕ್ಕುಹಿಡಿಯುವುದರಿಂದ ಸಮರ್ಪಕವಾಗಿ ರಕ್ಷಿಸಬಹುದು ಎಂಬ ಭಾವನೆಯಿತ್ತು. ಇಂತಹ ಪ್ಲ್ಯಾಸ್ಟರ್‌ಗಳಲ್ಲಿ ಸಿಮೆಂಟ್ ಕಲ್ಲಿನ ಅಂಶವು ಕ್ಷಾರೀಯತೆಗೆ ಕಾರಣ. ಇಂತಹ ಕ್ಷಾರೀಯತೆಯು ಸಾಮಾನ್ಯವಾಗಿ ಕಾಯಂ ಆದ ಗುಣ ಹೊಂದಿರುವುದಿಲ್ಲ, ಇದರಿಂದಾಗಿ, ಅತ್ಯುತ್ತಮ ಗುಣಮಟ್ಟದ ಇಪಾಕ್ಸಿ ಪ್ರೈಮರ್‌‌ಗಳನ್ನು ಬಳಸಿ ಜಲನಿರೋಧಕಗೊಳಿಸುವುದು ಬಹಳ ಮುಖ್ಯ. ಜೊತೆಗೆ, ಕೆಲವು ಅಗ್ನಿನಿರೋಧಕ ಪ್ಲ್ಯಾಸ್ಟರ್‌ ಮಾರಾಟಗಾರರು ಪ್ಲ್ಯಾಸ್ಟರ್‌ನ್ನು ಬಾಹ್ಯ ಜಲನಿರೋಧಕಗೊಳಿಸುವ ಅಗತ್ಯವಿದೆ. ಏಕೆಂದರೆ, ತೆರೆದಿಟ್ಟ ಪ್ಲ್ಯಾಸ್ಟರ್‌ಗಳಲ್ಲಿ ಕಡಿಮೆಗೊಂಡ ಕ್ಷಾರೀಯತೆಯು, ಪ್ಲ್ಯಾಸ್ಟರ್‌ನ್ನು ಬಂಧಿಸುವ ಸಿಮೆಂಟ್ ಕಲ್ಲಿನ ಮೇಲೆ ಹಾನಿಕರ ಪರಿಣಾಮ ಬೀರಬಹುದು. ಇದಕ್ಕೆ ತದ್ವಿರುದ್ಧವಾಗಿ, ಇಂಟುಮೆಸೆಂಟ್ ಹಾಗೂ ಶಾಖಗ್ರಾಹಿ ಹೊದಿಕೆಗಳು ಸಾಮಾನ್ಯವಾಗಿ ಎಪಾಕ್ಸಿ ಆಧಾರಿತವಾಗಿರುತ್ತವೆ. ಇದರ ಅರ್ಥ, ಪದರ ತುಕ್ಕು ಹಿಡಿಯುವ ಯಾವುದೇ ಸಮಸ್ಯೆ ಉದ್ಭವಿಸಲಾರದು.

ಅಗ್ನಿನಿರೋಧಕವು ಎಲ್ಲ ಜಡ ಅಗ್ನಿ ರಕ್ಷಣಾ ಉತ್ಪನ್ನಗಳಂತೆ,ಕಟ್ಟುನಿಟ್ಟಾದ ಲಿಸ್ಟಿಂಗ್ ಮತ್ತು ಬಳಕೆ ಅನುಮೋದನೆ ಮತ್ತು ಅನುಸರಣೆಗೆ ಒಳಗಾಗುತ್ತವೆ. ಇದರೊಂದಿಗಿನ ಸಮಸ್ಯೆಯೇನೆಂದರೆ, ಈ ಸ್ವರೂಪದ ಬಾಹ್ಯ ರಚನೆಗಳು ಯಾವುದೇ ಕಟ್ಟಡ ನಿಯಮ ಸಂಹಿತೆಯಾಗಲೀ ಅಗ್ನಿ ನಿಯಮ ಸಂಹಿತೆಗಾಗಲೀ ಒಳಗಾಗುವುದಿಲ್ಲ. ಇದರ ಅರ್ಥವೇನೆಂದರೆ ಬಹುತೇಕ LPG ಧಾರಕಗಳು ಯಾವುದೇ ಅಗ್ನಿ ನಿರೋಧಕಗಳು ಇಲ್ಲದಿರುವುದು ಕಂಡುಬರುತ್ತದೆ.ಸೂಕ್ತ ಉಪಶಮನಾ (ಮುಂಜಾಗರೂಕತಾ)ವಿಧಾನಗಳನ್ನು ಬಳಸುವಂತೆ ಮಾಲೀಕರಿಗೆ ಬಲಪ್ರಯೋಗಿಸಲು ಯಾವುದೇ ಸ್ಥಳೀಯ ನಿಯಮಾವಳಿಗಳಾಗಲಿ, ವ್ಯಾಪ್ತಿ ಹೊಂದಿರುವ ಪ್ರಾಧಿಕಾರವಾಗಲೀ ಅಥವಾ ವಿಮಾ ನಿರೀಕ್ಷಣಾಧಿಕಾರಿಯಾಗಲೀ ಇರುವುದಿಲ್ಲ. ಇಂತಹ ವಿಚಾರಗಳನ್ನು ಕುರಿತು, ವಿಮಾ ಸಂಸ್ಥೆಗಳೂ ಸಹ ಸ್ಪರ್ಧಾತ್ಮಕವಾಗಿ ಪೇಚಿನ ಸ್ಥಿತಿಯನ್ನು ಅನುಭವಿಸುತ್ತವೆ. ಏಕೆಂದರೆ ಇಂತಹ ವಸ್ತುಗಳಿಗೆ ಸಂಬಂಧಿಸಿದಂತೆ ಅವು ಕೇವಲ ವಿಮಾ ದರಗಳ ಆಧಾರದ ಮೇಲಷ್ಟೇ ಪೈಪೋಟಿ ಮಾಡುತ್ತಿಲ್ಲ, ಜೊತೆಗೆ ಅವರ ನಿರೀಕ್ಷಣಾಧಿಕಾರಿಗಳ ಕಟ್ಟುನಿಟ್ಟಾದ ಬೇಡಿಕೆಗಳ ಆಧಾರದ ಮೇಲೆ ಸಹ ಪೈಪೋಟಿ ಮಾಡಬೇಕಾಗಿದೆ. LPG ಧಾರಕ ಆಗ್ನಿನಿರೋಧಕ ಪರೀಕ್ಷೆಗಳಲ್ಲಿಯೂ ಸಹ ವ್ಯತ್ಯಾಸಗಳಿವೆ. ಜರ್ಮನಿ ದೇಶದ ಬರ್ಲಿನ್‌ ನಗರದ "BAM"ಬ್ರಾನ್ಷ್‌ವೀಗ್‌ ಪರೀಕ್ಷಾ ಘಟಕದಲ್ಲಿ ವಾಸ್ತವಿಕ ಒಡ್ಡುವಿಕೆ ಕೈಗೊಳ್ಳಲಾಗುತ್ತದೆ. BAMನ ಪರೀಕ್ಷಾ ವಿಧಾನದಂತೆ, ಒಂದು ಸಣ್ಣ LPG ಧಾರಕವನ್ನು ಹೈಡ್ರೋಕಾರ್ಬನ್‌ ಟೆಸ್ಟ್‌ ಕರ್ವ್‌ಗೆ ಒಳಪಡಿಸಿ, ಫಲಿತಾಂಶಗಳನ್ನು ಪರಿಮಾಣಿಸುವುದು.

ಉತ್ತರ ಅಮೆರಿಕಾದಲ್ಲಿ ನಡೆಸುವ ಪರೀಕ್ಷಾ ವಿಧಾನಗಳು UL1709 Archived 2010-03-12 ವೇಬ್ಯಾಕ್ ಮೆಷಿನ್ ನಲ್ಲಿ. ಆಧಾರಿತವಾಗಿವೆ. UL1709 ಪರೀಕ್ಷಾ-ಪ್ರಯೋಗಗಳಿಗೆ ಸರಿಯಾದ ಸಮಯ/ಉಷ್ಣಾಂಶ ಸೂಚಕ ರೇಖೆಯನ್ನು ಬಳಸುತ್ತವೆ. ಅದು ಕೇವಲ ಉಕ್ಕಿನ ಕಾಲಂಗಳ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗಿವೆ (ಬೀಮ್‌ಗಳ ಪರೀಕ್ಷೆ ಕೂಡ ಇಲ್ಲ). BAM ವಾಸ್ತವಿಕವಾಗಿ ಅಗ್ನಿನಿರೋಧಕ ನೈಜ LPG ಧಾರಕವನ್ನು ತೆರೆದಿಡುತ್ತದೆ. ಬಳಸಲಾದ ಅಗ್ನಿನಿರೋಧಕ ರೀತಿ ಏನೇ ಇರಲಿ, ಲಿಸ್ಟಿಂಗ್‌ ಮತ್ತು ಅನುಮೋದನೆ ಬಳಕೆ ಮತ್ತು ಅನುಸರಣೆ‌ ನಿಯಮಾವಳಿಗತ್ತ ಕೂಲಂಕಷ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಜೊತೆಗೆ, ಆಯ್ಕೆ ಮಾಡಲಾದ ಉತ್ಪನ್ನವು ಉತ್ಪನ್ನ ಪ್ರಮಾಣೀಕರಣಕ್ಕೆ ಒಳಗಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದರಡಿ, ನಿರ್ವಹಣೆಗಳ ಅವಧಿಗಳಲ್ಲಿ ಉತ್ಪನ್ನವು ಪರಿಸರ ಒಡ್ಡುವಿಕೆಗಳಿಗೆ ಒಳಗಾಗುವುದು ಸಹ ಮೂಲ ಪರೀಕ್ಷೆಯಲ್ಲಿ ಸೇರಿದೆ. ವಿಶೇಷವಾಗಿ ಶಾಖಗ್ರಾಹಿ ಮತ್ತು ಇಂಟುಮೆಸೆಂಟ್ ಮುಂತಾದ ಸಾವಯವ ಉತ್ಪನ್ನಗಳಿಗೆ ಸಂಬಂಧಿಸಿದಂತೆ, ಉತ್ಪನ್ನಗಳ ಬಲವರ್ಧನೆಯ(ಬೌತಿಕ ರಚನೆಯಲ್ಲಿ ಉಂಟಾಗುವ ಬದಲಾವಣೆ) ಮಾನದಂಡಗಳನ್ನು ಕೂಲಂಕಷವಾಗಿ ವಿಮರ್ಶಿಸಬೇಕಿದೆ. ಇದರಂತೆ, ಉತ್ಪನ್ನವು ಇನ್ನೆಷ್ಟು ದಿನಗಳ ಕಾಲ ಉಪಯೋಗಕ್ಕೆ ಬರಬಹುದು ಎಂಬುದನ್ನು ಪರಿಮಾಣಿಸುವ ಅಗತ್ಯವಿದೆ. ಈ ವಿಚಾರದಲ್ಲಿ UL1709 "ಶೋಭಿಸು"ತ್ತದೆ. ವಾಸ್ತವಿಕ ಅಗ್ನಿ ಪರೀಕ್ಷೆಗೆ ಮುಂಚೆ ನಡೆಸಲಾದ ಪೂರ್ಣಪ್ರಮಾಣದ ಪರಿಸರ ಪರೀಕ್ಷೆಗಳನ್ನು ಸಹಿಸಿಕೊಳ್ಳುವ ಯಾವುದೇ ಉತ್ಪನ್ನವು ಅತ್ಯಂತ ದೃಢ ಉತ್ಪನ್ನವೇ ಆಗಿರುತ್ತದೆ. ಉತ್ಪನ್ನವನ್ನು ಅಗ್ನಿ ಪರೀಕ್ಷೆಗೆ ಒಡ್ಡುವ ಮುಂಚೆ ಉತ್ಪನ್ನ ಕಾರ್ಯನಿರ್ವಹಿಸದಿರಲು ಕಾರಣವಾದ ಪರಿಸ್ಥಿತಿಗಳನ್ನು ನಿರ್ಣಯಿಸುವುದು ಇದರ ಉದ್ದೇಶ. ಮೊಟ್ಟಮೊದಲಿಗೆ ಸೂಕ್ತ ಪರಿಸರ ಪರೀಕ್ಷೆಗಳನ್ನು ಮುಗಿಸಿ, ಆನಂತರ ಅಗ್ನಿಗೆ ಒಡ್ಡುವ ಪರೀಕ್ಷೆಗಳಿಗೆ ಒಳಗಾದ ಉತ್ಪನ್ನಗಳನ್ನು ಬಳಸುವುದು. ಎಲ್ಲ ಅನ್ವಯಿಸುವ ಒಡ್ಡುವಿಕೆಗಳಿಗೆ ಅದೇ ಮಾದರಿ ಪರೀಕ್ಷೆಗಳನ್ನು ಬಳಸಿಕೊಂಡು ಸೂಕ್ತ ಜಾಗರೂಕತೆ ಪ್ರದರ್ಶಿಸಬಹುದು, ಆದರೆ ಬೇರೆ ರೀತಿಯಲ್ಲಲ್ಲ. ಇದೇ ರೀತಿ, ಇಂಟುಮೆಸೆಂಟ್‌ಗಳಿಗೆ(ಊದಿಕೊಳ್ಳುವ) DIBt ಬಲವರ್ಧನೆಯ(ಬೌತಿಕ ರಚನೆಯಲ್ಲಿ ಬದಲಾವಣೆ) ಅರ್ಹತೆಗಳು ಬಹಳ ವಿಶ್ವಾಸಾರ್ಹವೆಂದು ಸಾಬೀತಾಗಿವೆ. ಬಲವರ್ಧನೆ ಹಾಗೂ ಪರಿಸರೀಯ ಒಡ್ಡುವಿಕೆಗಳ ವ್ಯಾಪ್ತಿ ಮತ್ತು ಗಡಿಯ ಬಗ್ಗೆ ಕೂಲಂಕಷ ಗಮನ ನೀಡುವ ಮೂಲಕ,ಆಕಸ್ಮಿಕ ಅಗ್ನಿ ಅನಾಹುತಗಳಿಂದ ಉಂಟಾಗುವ ಇಂಧನ ಒಡ್ಡುವಿಕೆಗಳಿಂದ LPG (ಟ್ಯಾಂಕರ್ )ಧಾರಕಗಳನ್ನು ರಕ್ಷಿಸಲು ಅಗ್ನಿಶಾಮಕ ಕ್ರಮಗಳಿಗೆ ಸಾಕಷ್ಟು ಸಮಯ ಸಿಗುತ್ತದೆ. ಹೀಗೆ BLEVE (ಸ್ಫೋಟ)ಸಾಧ್ಯತೆಯನ್ನು ಗರಿಷ್ಠಮಟ್ಟದವರೆಗೆ ಕಡಿಮೆ ಮಾಡಬಹುದು.

ಧಾರಕವು ಸ್ಫೋಟಿಸಿದಲ್ಲಿ, LPG ಮೊದಲಿಗೆ ಅತಿಶೈತ್ಯೀಕರಿಸಿದ ದ್ರವವಾಗುತ್ತದೆ. ಇದರ ವ್ಯಾಪ್ತಿಯಲ್ಲಿ ಏನಿದ್ದರೂ ಶೈತ್ಯಗೊಳಿಸುತ್ತದೆ. ನಂತರ ಇದು ವಾತಾವರಣದಲ್ಲಿ ಕುದಿಯುವ ಸ್ಥಿತಿಗೆ ತಲುಪಿ, ಆಮ್ಲಜನಕ ಪಲ್ಲಟನಗೊಳಿಸುವ ಅನಿಲವಾಗುತ್ತದೆ. ಸುತ್ತಮುತ್ತಲ ವ್ಯಾಪ್ತಿಯಲ್ಲಿರುವ ಯಾವುದೇ ಜೀವಿಗಳಿಗೆ ಉಸಿರುಕಟ್ಟಿಸುತ್ತದೆ. ಈ ಅನಿಲವು ತಾನು ಹೊರಬಂದ ದ್ರವಕ್ಕಿಂತಲೂ ನೂರಕ್ಕೂ ಹೆಚ್ಚು ಪಟ್ಟು ವಿಸ್ತೀರ್ಣಕ್ಕೆ ವ್ಯಾಪಿಸುವಂತೆ ಹರಡುತ್ತದೆ. LPGಯ (ಟ್ಯಾಂಕ್ )ಧಾರಕವೊಂದು ಹಲವು ಚದರ ಮೈಲುಗಳವರೆಗೂ ಆಮ್ಲಜನಕದ ಸ್ಥಾನಪಲ್ಲಟಗೊಳಿಸಬಹುದು. ಒಂದು ಹಂತದಲ್ಲಿ ಈ ಅನಿಲವು ವಾತಾವರಣದಲ್ಲಿ ಸೇರಿಕೊಳ್ಳಬಹುದು. ಆನಂತರ ಅದು ಬೆಂಕಿಹೊತ್ತಿಕೊಳ್ಳಬಹುದಾದ ಮಿಶ್ರಣವಾಗುವ ಹಂತ ತಲುಪುತ್ತದೆ. ಇದು ಸಂಭವಿಸಿದಾಗ, ಹಲವು ಚದರ ಮೈಲುಗಳವೆಗೆ ವ್ಯಾಪಿಸುವ ಬೆಂಕಿಯ ಚೆಂಡು ಸುತ್ತಮುತ್ತ ಇರುವುದೆಲ್ಲವನ್ನೂ ಆಹುತಿ ತೆಗೆದುಕೊಳ್ಳುತ್ತದೆ. ಈ ಕಾರಣದಿಂದಾಗಿಯೇ, LPG ಹಾಗೂ LNG ಸೌಲಭ್ಯಗಳ ಮೇಲೆ ಸದಾ ನಿಗಾ ವಹಿಸಲಾಗುತ್ತದೆ.

ಜೂನ್‌ 2009ರಲ್ಲಿ, ಇಟಲಿ ದೇಶದ ವಿಯಾರೆಗಿಯೊದಲ್ಲಿ, LPG ಒಯ್ಯುತ್ತಿದ್ದ ಸರಕು ರೈಲು ಹಳಿತಪ್ಪಿತು. ಆ ಘಟನೆಯಲ್ಲಿ 29 ಜನರು ಮೃತರಾಗಿ,30ಕ್ಕೂ ಹೆಚ್ಚು ಜನರು ಗಾಯಗೊಂಡರು.

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. Horst Bauer, ed. (1996). Automotive Handbook (4th ed.). Stuttgart: Robert Bosch GmbH. ISBN 0837603331.[page needed]
 2. ೨.೦ ೨.೧ Zhang, Chunhua; Bian, Yaozhang; Si, Lizeng; Liao, Junzhi; Odbileg, N (2005). "A study on an electronically controlled liquefied petroleum gas-diesel dual-fuel automobile". Proceedings of the Institution of Mechanical Engineers, Part D: Journal of Automobile Engineering. 219: 207. doi:10.1243/095440705X6470.
 3. ೩.೦ ೩.೧ Qi, D; Bian, Y; Ma, Z; Zhang, C; Liu, S (2007). "Combustion and exhaust emission characteristics of a compression ignition engine using liquefied petroleum gas–Diesel blended fuel". Energy Conversion and Management. 48: 500. doi:10.1016/j.enconman.2006.06.013.
 4. "European Commission on retrofit refrigerants for stationary applications" (PDF). Archived from the original (PDF) on 2008-07-19. Retrieved 2009-07-30.
 5. "U.S. EPA hydrocarbon-refrigerants FAQ". United States Environmental Protection Agency. Retrieved 2009-07-30.
 6. {1 ಕಂಪೇಡಿಯಂ ಆಫ್}ಹೈಡ್ರೋಕಾರ್ಬನ್‌-ರೆಫ್ರಿಜೆರೆಂಟ್ ಪಾಲಿಸಿ ಸ್ಟೇಟ್‌ಮೆಂಟ್ಸ್, ಅಕ್ಟೋಬರ್‌ 2006[ಮಡಿದ ಕೊಂಡಿ]
 7. "MACS bulletin: hydrocarbon refrigerant usage in vehicles" (PDF). Archived from the original (PDF) on 2011-01-05. Retrieved 2009-07-30.
 8. "Society of Automotive Engineers hydrocarbon refrigerant bulletin". Sae.org. 2005-04-27. Retrieved 2009-07-30.
 9. "Shade Tree Mechanic on hydrocarbon refrigerants". Shadetreemechanic.com. 2005-04-27. Archived from the original on 2010-11-27. Retrieved 2009-07-30.
 10. "Saskatchewan Labour bulletin on hydrocarbon refrigerants in vehicles". Labour.gov.sk.ca. 1996-01-01. Archived from the original on 2009-07-01. Retrieved 2009-07-30.
 11. VASA Archived 2008-07-19 ವೇಬ್ಯಾಕ್ ಮೆಷಿನ್ ನಲ್ಲಿ.ಆನ್ ರೆಫ್ರಿಜಿರೆಂಟ್ ಲಿಗ್ಯಾಲಿಟಿ & ಅಡ್ವೈಸೆಬಿಲಿಟಿ
 12. "Flammable Refrigerant Alert" (PDF). Archived from the original (PDF) on 2008-12-17. Retrieved 2009-07-30.
 13. "New South Wales (Australia) Parliamentary record, 16 October 1997". Parliament.nsw.gov.au. 1997-10-16. Archived from the original on 2009-07-01. Retrieved 2009-07-30.
 14. "New South Wales (Australia) Parliamentary record, 29 June 2000". Parliament.nsw.gov.au. Archived from the original on 2005-05-22. Retrieved 2009-07-30.
 15. VASA ನ್ಯೂಸ್ ರಿಪೋರ್ಟ್ ಆನ್ ಹೈಡ್ರೋಕಾರ್ಬನ್ ರೆಫ್ರಿಜಿರೆಂಟ್ ಡೆಮಾನ್‌ಸ್ಟ್ರೇಷನ್ಸ್[ಮಡಿದ ಕೊಂಡಿ]
 16. "Indian Census". Censusindia.gov.in. Retrieved 2009-07-30.
 17. ದಿ ಡೇಂಜರಸ್‌ ಸಬ್‌ಸ್ಟನ್ಸಸ್‌ ಅಂಡ್‌ ಎಕ್ಸ್‌ಪ್ಲೋಸಿವ್‌ ಅಟ್ಮಾಸ್ಫಿಯರ್ಸ್‌ ರೆಗ್ಯೂಲೇಷನ್ಸ್‌ Archived 2009-06-30 ವೇಬ್ಯಾಕ್ ಮೆಷಿನ್ ನಲ್ಲಿ.. 1 ಜೂನ್ 2007ರಂದು ಮರುಸಂಪಾದಿಸಲಾಗಿದೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

| ದರ | ಪೂರೈಕೆದಾರರು | ಅಳವಡಿಕೆ | ಪರ್ಯಾಯಗಳು