ಜಾನ್ ಲೋಗ್ಗಿ ಬೇರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನ್ ಲೋಗ್ಗಿ ಬೇರ್ಡ್

ಬೇರ್ಡ್ ೧೯೧೭ ರಲ್ಲಿ
Born(೧೮೮೮-೦೮-೧೩)೧೩ ಆಗಸ್ಟ್ ೧೮೮೮
Died14 June 1946(1946-06-14) (aged 57)
Bexhill, Sussex, England
Resting placeBaird family grave in Helensburgh Cemetery
NationalityScottish
CitizenshipBritish
EducationLarchfield Academy, Helensburgh
Alma materRoyal Technical College (now University of Strathclyde), Glasgow
Occupation(s)Inventor
businessman
Organization(s)Consulting Technical Adviser, Cable & Wireless Ltd (1941–)
director, John Logie Baird Ltd
director, Capital and Provincial Cinemas Ltd
Known forOne of the inventors of television, including the first colour television.
SpouseMargaret Albu (m. 1931)
ChildrenDiana Baird and Malcolm Baird
Parent(s)Rev John Baird, Minister, West Kirk, Helensburgh
Jessie Morrison Inglis
Notes
Member of the Physical Society (1927)
Member of the Television Society (1927)
Honorary Fellow of the Royal Society of Edinburgh (1937)

ಜಾನ್ ಲೋಗ್ಗಿ ಬೇರ್ಡ್ ಸ್ಕಾಟಿಷ್ ಎಂಜಿನಿಯರ್ ಆಗಿದ್ದು,ಯಾಂತ್ರಿಕ ದೂರದರ್ಶನ(ಟೆಲಿವಿಷನ್)ವನ್ನು ಕಂಡುಹಿಡಿದ ಸಂಶೋಧಕರಾಗಿದ್ದಾರೆ. ಇವರು ಆಗಸ್ಟ್ ೧೩, ೧೮೮೮ ರಂದು ಜನಿಸಿದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಜಾನ್ ಬೇರ್ಡ್ ಅವರು ೧೩ ಆಗಸ್ಟ್ ೧೮೮೮ ರಂದು ಡನ್ಬಾರ್ಟನ್ಶೈರ್ನ ಹೆಲೆನ್ಸ್ಬರ್ಗ್ನಲ್ಲಿ ಜನಿಸಿದರು. ಇವರು ಸ್ಕಾಟ್ಲ್ಯಾಂಡ್ನ ಸ್ಥಳೀಯ ಚರ್ಚಿನ ರೆವರೆನ್ಸ್ ಜಾನ್ ಬೇರ್ಡ್ ಹಾಗೂ ಜೆಸ್ಸಿ ಮಾರಿಸನ್ ಇಂಗ್ಲಿಸ್ ಅವರ ನಾಲ್ಕು ಮಕ್ಕಳಲ್ಲಿ ಕಿರಿಯರಾಗಿದ್ದರು. ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳಿದ್ದರು. ಜಾನ್ ಲೋಗ್ಗಿ ಬೇರ್ಡ್ ೧೯೩೧ರಲ್ಲಿ ಮಾರ್ಗರೇಟ್ ಅಲ್ಬು ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು:ಡಯಾನಾ ಬೇರ್ಡ್ ಮತ್ತು ಮಾಲ್ಕಮ್ ಬೇರ್ಡ್[೧]

ವಿದ್ಯಾಭ್ಯಾಸ[ಬದಲಾಯಿಸಿ]

ಬೇರ್ಡ್ ಹೆಲೆನ್ಸ್ಬರ್ಗ್ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಶಾಲೆಯಲ್ಲಿ ಛಾಯಾಗ್ರಹಣವು ಒಂದು ವಿಶೇಷ ವಿಷಯವಾಗಿತ್ತು. ಬೇರ್ಡ್ ಅವರು ಛಾಯಾಗ್ರಹಣದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿದ್ದರು. ಇದರ ಸಹಾಯದಿಂದ ತನ್ನ ೧೨ನೆಯ ವಯಸ್ಸಿನಲ್ಲಿಯೇ ತನ್ನ ಗೆಳೆಯರೊಂದಿಗೆ ಕಲಿತು,ಒಂದು ದೂರದರ್ಶನದ ಜಾಲವನ್ನು ನಿರ್ಮಿಸಿದರು. ಮುಂದೆ ರಾಯಲ್ ಟೆಕ್ನಿಕಲ್ ಕಾಲೇಜ್ ಹಾಗೂ ಗ್ಲ್ಯಾಸ್ಗೋದ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣವನ್ನು ಪಡೆದರು.[೨]

ವೃತ್ತಿ ಜೀವನ[ಬದಲಾಯಿಸಿ]

ತನ್ನ ೨೬ನೆಯ ವಯಸ್ಸಿನಲ್ಲಿ ಸಹಾಯಕ ಎಂಜಿನಿಯರ್ ಆದರು. ಇದೇ ಸಮಯದಲ್ಲಿ ಮೊದಲ ಮಹಾಯುದ್ಧ ಪ್ರಾರಂಭವಾಯಿತು. ಯುದ್ಧ ಮುಗಿಯುತ್ತಿದ್ದಂತೆ ಕಾಲು ಚೀಲಗಳ ತಯಾರಿಕೆಯ ಪುಟ್ಟ ಕಾರ್ಖಾನೆಯೊಂದನ್ನು ನಡೆಸಿದರು. ಕೆಲವು ತಿಂಗಳುಗಳಲ್ಲಿಯೇ ೧೫೦೦ಕ್ಕೂ ಹೆಚ್ಚು ಪೌಂಡುಗಳಷ್ಟು ಹಣವನ್ನು ಗಳಿಸಿದರು. ೧೯೨೨ರಲ್ಲಿ ಅಂದರೆ ತನ್ನ ೩೪ನೇ ವಯಸ್ಸಿನಲ್ಲಿ ಬೇರ್ಡ್ ಟೆಲಿವಿಷನ್ ಸಂಶೋಧನೆಯ ಪ್ರಯೋಗದಲ್ಲಿ ತೊಡಗಿದರು. ಹ್ಯಾಟುಗಳನ್ನು ಪ್ಯಾಕ್ ಮಾಡುವ ಕಾರ್ಡ್ ಬೋರ್ಡ್ ಪೆಟ್ಟಿಗೆ,ಕತ್ತರಿ,ಚುಚ್ಚುವ ಸೂಜಿಗಳು,ಬೈಸಿಕಲ್ ಲೈಟ್ ಮಸೂರಗಳನ್ನೆಲ್ಲ ಬಳಸಿ,ಅದನ್ನು ಗುಂಡಾದ ಬಿಲ್ಲೆಯ ಮಾದರಿಯಲ್ಲಿ ಕತ್ತರಿಸಿದರು. ಈ ಬಿಲ್ಲೆಯನ್ನು ತಿರುಗಿಸಿದಾಗ ಪ್ರಜ್ವಲಗೊಂಡ ವಸ್ತು, ಬೆಳಕಿನ ಚುಕ್ಕೆಗಳಲ್ಲಿ ಕಾಣಿಸಿಕೊಂಡಿತು. ಮುಂದಿನ ಪ್ರಯೋಗಗಳಿಗೆ ಹಣದ ಅಭಾವ ಕಾಡತೊಡಗಿತು. ಪತ್ರಿಕೆಗಳಲ್ಲಿ,ಹಲವು ಜಾಹೀರಾತುಗಳಲ್ಲಿ ಪ್ರಕಟಿಸಿದರು. ಈ ಜಾಹೀರಾತುಗಳ ಫಲವಾಗಿ ಸ್ವಲ್ಪ ಹಣವೂ ಒದಗಿತು. ಇದರ ಸಹಾಯದಿಂದ ಪ್ರಯೋಗಗಳನ್ನು ಮುಂದುವರಿಸಿದರು. ೧೯೨೫ರ ವೇಳೆಗೆ ತಾನು ತಯಾರಿಸಿದ ದೂರದರ್ಶನವನ್ನು ಜನತೆಯ ಮುಂದಿಟ್ಟರು. ಮೊದಲಿಗೆ ಆಪೊರೇಟ್ ಮಾಡಿದಾಗ ಮಸುಕಾಗಿರುವ ಚಿತ್ರಗಳು ಮೂಡಿದ್ದವು. ನಂತರ ೧೯೨೫ನೇ ಅಕ್ಟೋಬರ್ ೬ರಂದು ತನ್ನ ದೂರದರ್ಶನ ಯಂತ್ರದಲ್ಲಿ,ಬೆಳಕನ್ನು ವಿದ್ಯುತ್ ಸಂಕೇತಗಳ ರೂಪದಲ್ಲಿ ಪರಿವರ್ತಿಸುವ ಒಂದು ಸಾಧನವನ್ನು ಅಳವಡಿಸಿದಾಗ,ಸ್ವಿಚ್ ಒತ್ತಿದ ಕೂಡಲೇ ಸ್ಪಷ್ಟ ಚಿತ್ರವು ಬರುವುದನ್ನು ಕಂಡರು. ಹೀಗೆ ಇವರು ತಾನು ಸಂಶೋಧಿಸಿದ ದೂರದರ್ಶನವನ್ನು ಜಗತ್ತಿಗೆ ಪರಿಚಯಿಸಿದರು.[೩]

ಪ್ರಕಟಣೆ[ಬದಲಾಯಿಸಿ]

  • ಜಾನ್ ಲೋಗ್ಗಿ ಬೇರ್ಡ್,ಟೆಲಿವಿಷನ್ ಆಂಡ್ ಮಿ:ದಿ ಮೆಮೊರೀಸ್ ಆಫ್ ಜಾನ್ ಲೋಗ್ಗಿ ಬೇರ್ಡ್.
  • ಜಾನ್ ಲೋಗ್ಗಿ ಬೇರ್ಡ್,ಟೆಲಿವಿಷನ್ ಪೈಯೋನೀರ್.

ನಿಧನ[ಬದಲಾಯಿಸಿ]

ಜಾನ್ ಲೋಗ್ಗಿ ಬೇರ್ಡ್ ೧೪ ಜೂನ್, ೧೯೪೬ರಂದು ಇಂಗ್ಲೆಂಡ್ನ ಸಸೆಕ್ಸ್ ನಲ್ಲಿ ನಿಧನರಾದರು.[೪]

  1. https://www.thefamouspeople.com/profiles/john-logie-baird-6248.php
  2. http://www.newworldencyclopedia.org/entry/John_Logie_Baird
  3. https://www.biography.com/people/john-logie-baird-9195738
  4. http://www.rarenewspapers.com/view/639058