ವಿಷಯಕ್ಕೆ ಹೋಗು

ಕತ್ತರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕತ್ತರಿ

ಕತ್ತರಿಯು ಕೈ-ಚಾಲಿತ ಕತ್ತರಿಸುವ ಉಪಕರಣ. ಇದು ತಿರುಗುಗೂಟದ ಮೇಲೆ ಭದ್ರಪಡಿಸಲಾದ ಒಂದು ಜೋಡಿ ಲೋಹದ ಅಲಗುಗಳನ್ನು ಹೊಂದಿರುತ್ತದೆ. ಇದರಿಂದ ತಿರುಗುಗೂಟಕ್ಕೆ ಎದುರಿರುವ ಕೈಹಿಡಿಗಳನ್ನು ಮುಚ್ಚಿದಾಗ ಹರಿತವಾದ ಅಂಚುಗಳು ಒಂದರ ವಿರುದ್ಧ ಒಂದು ಜಾರುತ್ತವೆ. ಕತ್ತರಿಯನ್ನು ಕಾಗದ, ರಟ್ಟು, ಲೋಹದ ಹಾಳೆ, ಬಟ್ಟೆ, ಹಗ್ಗ, ಮತ್ತು ತಂತಿಯಂತಹ ವಿವಿಧ ತೆಳುವಾದ ವಸ್ತುಗಳನ್ನು ಕತ್ತರಿಸಲು ಬಳಸಲಾಗುತ್ತದೆ. ವಿಶೇಷ ಉದ್ದೇಶಗಳಿಗಾಗಿ ವೈವಿಧ್ಯಮಯ ಕತ್ತರಿಗಳು ಇವೆ. ಕೂದಲು ಕತ್ತರಿಸುವ ಕತ್ತರಿಗಳು ಸೂಕ್ತವಾದ ನಿರ್ದಿಷ್ಟ ಅಲಗು ಕೋನಗಳನ್ನು ಹೊಂದಿರುತ್ತವೆ. ಕೂದಲು ಕತ್ತರಿಸಲು ತಪ್ಪು ಕತ್ತರಿಗಳನ್ನು ಬಳಸಿದರೆ ಹೆಚ್ಚಿನ ಹಾನಿ ಅಥವಾ ಒಡಕು ತುದಿಗಳು, ಅಥವಾ ಎರಡೂ, ಉಂಟಾಗುತ್ತವೆ. ಅಡಿಗೆ ಕತ್ತರಿಯು ಮಾಂಸದಂತಹ ಆಹಾರಗಳನ್ನು ಕತ್ತರಿಸಲು ಮತ್ತು ಅನವಶ್ಯಕ ಭಾಗಗಳನ್ನು ತೆಗೆದುಹಾಕಲು ಉದ್ದೇಶಿತವಾಗಿರುತ್ತದೆ.

ಅತ್ಯಂತ ಮುಂಚಿನ ಕತ್ತರಿಗಳು ಮೆಸೊಪೊಟೇಮಿಯಾದಲ್ಲಿ ೩೦೦೦ ರಿಂದ ೪೦೦೦ ವರ್ಷಗಳ ಹಿಂದೆ ಕಾಣಿಸಿಕೊಂಡವು.

ಆದರೆ, ಆಧುನಿಕ ಕತ್ತರಿಯ ನೇರ ಪೂರ್ವಜವಾದ ಕಂಚು ಅಥವಾ ಕಬ್ಬಿಣದ ತಿರುಗುಗೂಟವುಳ್ಳ ಕತ್ತರಿಗಳನ್ನು ರೋಮನ್ನರು ಸುಮಾರು ಕ್ರಿ.ಶ. ೧೦೦ರಲ್ಲಿ ಆವಿಷ್ಕರಿಸಿದರು.[] 

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಕತ್ತರಿ&oldid=820289" ಇಂದ ಪಡೆಯಲ್ಪಟ್ಟಿದೆ