ಮಹಾಯುದ್ಧಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಉಲ್ಲೇಖ ದೋಷ: Closing </ref> missing for <ref> tag</ref>

ಮೊದಲನೆ ಮಹಾಯುದ್ಧ[ಬದಲಾಯಿಸಿ]

ಒನ್ದನೆ ಮಹಾ ಯುದ್ಧವು (೧೯೧೪-೧೯೧೮)ಪ್ರಮಾನಣ ಮತ್ತು ವಿಸ್ತಾರ ಅತ್ಯದಿಕವಾಗ್ಗಿದರಿನ್ದ ಹಿನ್ದೆನ್ದು ಕನ್ಡರಿಯದ ಭಾರಿ ವಿಶ್ವ ಯುದ್ಧವಾಗಿತ್ತು...

ಕಾರಣಗಳು[ಬದಲಾಯಿಸಿ]

ಅತ್ಯುಗ್ರ ರಾಷ್ಟ್ರೀಯತೆ[ಬದಲಾಯಿಸಿ]

ಯೂರೋಪ್ ನಲ್ಲಿ ತಮ್ಮ ದೇಶಕ್ಕಾಗಿ ಹೊರಾಡುವುದು ಒಂದು ಪವಿತ್ರವಾದ ಕೆಲಸವೆಂದು ಜನ ಭಾವಿಸಿದ್ದರು ಮತ್ತು ವಸಾಹತುಗಳನ್ನು ಹೊಂದುವುದು,ರಾಷ್ಟ್ರದ ಘನತೆಯ ಪ್ರತೀಕ ಎಂದು ತಿಳಿದಿದ್ದರು.

ಪ್ರತಿಸ್ಪರ್ಧೆಯ ಮೈತ್ರಿಕೂತಗಳ ಪದ್ಧತಿ[ಬದಲಾಯಿಸಿ]

೧೯ನೇ ಶತಮಾನದ ಅಂತ್ಯ ದಲ್ಲಿ ಯೂರೋಪಿನ ರಾಷ್ಟ್ರಗಳು ತಮ್ಮ ಆರ್ಥಿಕ ಮತ್ತು ರಾಜಕೀಯ ಆಸಕ್ತಿಯನ್ನು ಕಾಪಡಲು ರಕ್ಷಣಾತ್ಮಕ ಒಪ್ಪಂದಗಳನ್ನು ಜಾರಿಗೆ ತಂದರು.ಜರ್ಮನಿ,ಅಸ್ಟ್ರಿಯಾ,ಹನ್ಗೇರಿಯ ಮತ್ತು ಇಟಲಿ ಸೇರಿ 'ಕದನ ಬಾಂಧವ್ಯತ್ರಯ' ಸ್ಥಾಪಿಸಿದರು. ಇಂಗ್ಲಂಡ್, ಫ್ರಾನ್ಸ್,ರಷ್ಯ 'ಕದನ ಸೌಹಾರ್ದತ್ರಯ'ವನ್ನು ಸ್ಥಾಪಿಸಿತು.

ಶಸ್ತ್ರಾಸ್ತ್ರಗಳ ಪೈಪೊಟಿ[ಬದಲಾಯಿಸಿ]

ಈ ಎರಡು ಬಣಗಳ ಸಂಶಯ ಶಸ್ತ್ರಾಸ್ತ್ರಗಳ ಪೈಪೊಟಿಗೆ ಕಾರಣವಾಯಿತು.

ತಕಷ್ಣದ ಕಾರಣ[ಬದಲಾಯಿಸಿ]

ಅಸ್ಟ್ರಿಯಾದ ರಜಾಕುಮರ ಬಾಲ್ಕನ್ ಪ್ರದೇಶದ ಬೋಸ್ನಿಯಾದ ರಜಾಧನಿ ಸರಜಾವೂಗೆ ಭೆಟಿ ಕೊಟ್ಟಾಗ ಕೊಲೆಯಾದ.(೧೯೧೪).ಕೂಲೆ ಮಾಡಿದವನು ಸರ್ಬಿಯಾದ ಒಬ್ಬ ಪ್ರಜೆ.ಇದರಿಂದ ಸಿಟ್ಟೆದ್ದ ಅಸ್ಟ್ರಿಯಾ ಸರ್ಬಿಯಾವನ್ನು ಶಿಕ್ಷಿಸಲು ಯದ್ಧ ಸಾರಿತು ಹಾಗು ಜರ್ಮನಿಯ ನೆರವು ಯಾಚಿಸಿತು. ರಷ್ಯ ಸರ್ಬಿಯಾವನ್ನು ಬೆಬ್ಮಲಿಸಿತು. ಮಹಯುದ್ಧ ಹೀಗೆ ಆರಮ್ಭವಾಯಿತು. ಜರ್ಮನಿ,ಅಸ್ಟ್ರಿಯಾ,ಟರ್ಕಿ ಮತ್ತು ಬಲ್ಗೆರಿಯ ಒನ್ದು ಪಕ್ಷವಾದರೆ ಸರ್ಬಿಯಾ ಇಂಗ್ಲಂಡ್,ಬೆಲ್ಜಿಯಮ್,ಇಟಲಿ, ರಷ್ಯ ಮತ್ತು ಫ್ರಾನ್ಸ್ ಇನ್ನೊನ್ದು ಪಕ್ಷವಾದವು.ಕಾಲಕ್ರಮದಲ್ಲಿ ಅಮೆರಿಕ ಎರಡನೆಯ ಪಕ್ಷವನ್ನು ಸೇರಿತು.

ಯುದ್ಧದ ಗತಿ[ಬದಲಾಯಿಸಿ]

ಜರ್ಮನಿ ಫ್ರಾನ್ಸ್ ನ ಮೇಲೆ ದಾಳಿ ಮಾಡಿತು.ಇಂಗ್ಲಂಡ್,ಬೆಲ್ಜಿಯಮ್ ಹಾಗು ಫ್ರಾನ್ಸ್ ಪರವಾಗಿ ಜರ್ಮನಿಯ ವಿರುದ್ಧ ಯುದ್ಧ ಸಾರಿತು.ಜಪಾನ್ ಇಂಗ್ಲಂಡ್ನ ಪಕ್ಷ ಸೇರಿತು. ಈ ಸನ್ದಾನ ಪಕ್ಷಗಳ ವಿರುದ್ಧ ಕೇನ್ದರ ಪಕ್ಷ ರೂಪುಗೊನ್ಡಿತು. ರಷ್ಯ ತನ್ನ ಮೇಲೆ ಯುದ್ಧ ಸಾರಭುದೆನ್ದು ಭೀತಿಯಿನ್ದ ಟರ್ಕಿ,ಜರ್ಮನಿಯ ಪಕ್ಷ ಸೇರಿತು.ಸರ್ಬಿಯಾದ ಶತ್ರು ಬಲ್ಗೆರಿಯಾ ಜರ್ಮನಿಯ ಮಿತ್ರ ಅಸ್ಟ್ರಿಯಾ-ಹಂಗೇರಿಗಳ ಜೂತೆ ಕೂಡಿಕೊನ್ಡಿತು. ಜರ್ಮನಿಯ ಜಲಾಂತರ್ಗಾಮಿ ನೌಕೆ ಲೂಸಿಟೆನಿಯ ಹದಡಗನ್ನು ಮುಳುಗಿಸಿದಮೆಲೆ ಅಮೆರಿಕದ ದೊಡ್ಡ ಸೈನ್ಯ ಫ್ರಾನ್ಸನ್ನು ತಲುಪಿತು .ಕ್ರಿ.ಶ.೧೯೧೭ ರಲ್ಲಿ ರಷ್ಯನ್ ಕ್ರಾನ್ತಿಯಾಗಿ ರಷ್ಯ ತಟಸ್ತವಾಯಿತು.ಯುದ್ಧವು ೧೯೧೪ ರಿನ್ದ ೧೯೧೮ ರವರೆಗೆ ನೆಡೆಯಿತು.ಕನ್ದಕ ಯುದ್ಧ, ವೈಮಾನಿಕ ಸಮೀಕ್ಷೆ,ವಿಮಾನದಿನ್ದ ಬಾಂಬ್ ದಾಳಿ ಮತ್ತು ಸಮರ ಟ್ಯಾಂಕ್ಗಳ ಬಳಕೆ ಮುನ್ತಾದ ತನ್ತ್ರ ಗಳನ್ನು ಬಳಸಲಾಯಿತು. ಅರಬ್ಬರು ಟರ್ಕಿಯ ವಿರುದ್ಧ ಬನ್ಡೆದ್ದರು. ಪೋರ್ಚುಗಲ್ ರುಮೆನಿಯ ಹಾಗು ಗ್ರ್ರೀಸ್ ಇಂಗ್ಲಂಡ್ ನ ಪರವಾದವು .ಮಾರ್ನೆ ಎಮ್ಬಲ್ಲಿ ಜರ್ಮನಿ ಸೊತಮೆಲೆ ೧೯೧೮ರಲ್ಲಿ ಅಸ್ಟ್ರಿಯಾ ಬಲ್ಗೆರಿಯ ಟರ್ಕಿಗಳು ಶರಣಾಗಿ ಯುದ್ಧ ವನ್ನು ನಿಲ್ಲಿಸಿದರು. ಜರ್ಮನಿ ಯಲ್ಲಿ ಚಕ್ರವರ್ತಿ ಎರಡನೇ ಕೈಸರ್ ವಿಲಿಯಮ್ನ ವಿರುದ್ಧ ಬನ್ಡಾಯವಗಲು ಜರ್ಮನಿ ಶಾನ್ತಿ ಒಪ್ಪಂದಕ್ಕೆ ಸಹಿ ಹಾಕಿತು..

ಪರಿಣಾಮ[ಬದಲಾಯಿಸಿ]

ಸಾಮಾನ್ಯ ನಾಗರಿಕರು ಸೇರಿ ಲಕ್ಷಾನ್ತರ ಜನರು ಯುದ್ಧದಲ್ಲಿ ಸತ್ತರು. ಹೆಚ್ಚು ಜನ ಯುದ್ಧದಲ್ಲಿ ಗಾಯ ಗೊನ್ಡು ಅನ್ಗವಿಕಲರಾದರು. ನಗರಗಳು,ರಸ್ಥೆ-ಸೇತುವೆಗಳು,ರೈಲು ಮಾರ್ಗಗಳು,ಕರ್ಖಾನೆಗಳು ನಶಾವಾದವು.ಇವುಗಳ ಪುನರ್ನಿರ್ಮಾಣ ,ಜನರಿಗೆ ಉದ್ಯೋಗ,ಆಹಾರ,ಪುನರ್ವಸತಿ ಒದಗಿಸುವುದು ಆಸಾದ್ಯ ಕೆಲಸವಾಗ್ಗಿತ್ತು.ಮುನ್ದೆ ೧೯೨೯ರ ತೀವ್ರ ಅರ್ಥಿಕ ಬಿಕ್ಕಟ್ಟಿಗೂ ಹಾದಿ ಮಾಡಿತು. ಮುಂದೆ ಆದ ವರ್ಸೈಲ್ಸ್ ಒಪ್ಪಂದದಲ್ಲಿ ಜರ್ಮನಿಯ ಮೇಲೆ ಅಪಮಾನಕರವಾದ ಶರತ್ತುಗಳನ್ನು ಹೇರಿದರು. ಟರ್ಕಿಯ ಸಮ್ರಾಜ್ಯ ಕಣ್ಮರೆಯಾಯಿತು. ಅದರ ಭಾಗವಗಿದ್ದ ಅರ್ಮಿನಿಯ ಪ್ರತ್ಯೇಕ ಗಣರಾಜ್ಯವಾಯಿತು. ಜೆಕೊಸ್ಲವಾಕಿಯ.ಯುಗೊಸ್ಲಾವಿಯಾ,ಹಂಗೆರಿ,ಬಾಲ್ಕನ್ ಮತ್ತು ಲಿಥುವೇನಿಯಾ ವಲಯದಲ್ಲಿ ಪ್ರತ್ಯೇಕ ರಾಷ್ಟ್ರಗಳಾದವು ಯುದ್ಧದಿಂದ ಆದ ಅಪಾರ ಪ್ರಾಣಹಾನಿ,ರಕ್ತಪಾತ ಹಾಗೂ ಸಾಂಪತ್ತಿಕ ಹಾನಿಯಿಂದಗಿ ಯುದ್ಧವನ್ನು ತಡೆಯುವುದು ಹಾಗೂ ಶಂತಿಯನ್ನು ಕಾಪಡುವ ಆಕಾಂಕೆಷ್ ಉಂಟಾಯಿತು.ಇದನ್ನು ಪೂರೈಸಲು ರಾಷ್ಟ್ರ ಸಂಘ ಸ್ಥಾಪನೆಯಾಯಿತು.

ರಾಷ್ಟ್ರ ಸಂಘ[ಬದಲಾಯಿಸಿ]

ಅಂತರ ರಾಷ್ಟ್ರೀಯ ಸಹಕಾರ ಸಾದಿಸಿ,ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸುವ ಉದ್ದೇಶದಿಂದ ೪೪ ರಾಷ್ಟ್ರಗಳ ಸದಸ್ಯತ್ವವನೂಂದಿದ್ದ ರಾಷ್ಟ್ರ ಸಂಘವು ೧೯೧೯ರಲ್ಲಿ ಸ್ಥಾಪಿತವಾಯಿತು.ಇದರ ಕೇಂದ್ರ ಕಛೇರಿ ಜಿನೇವಾ ನಗರದಲ್ಲಿತ್ತು.ಇದಕ್ಕೆ ಎಲ್ಲ ರಾಷ್ಟ್ರಗಳು ಸದಸ್ಯರಾಗಿರುವ ಒಂದು ಸಾಮಾನ್ಯ ಸಭೆ ಹಾಗು ಒಂದು ಮಾರ್ಗದರ್ಶಕವಾದ ಕಿರಿದಾದ ಮಂಡಲಿ ಇರಬೆಕೇಂದಾಯಿತು. ಮಂಡಲಿಯಲ್ಲಿ ಕೆಲವು ಗಣ್ಯ ಕಾಯಂ ಸದಸ್ಯರೌ ಹಾಗು ಕಾಲಕಾಲಕ್ಕೆ ಚುನಾಯಿತರಾಗುವ ಇತರೆ ಕೆಲವು ಸದಸ್ಯರು ಸಾಮನ್ಯ ಸಭೆಯಿಂದ ಆಯ್ಕೆಯಾಗುತ್ತಿದ್ದರು. ಒಂದು ಶಾಶ್ವತ ಸಚಿವಾಲಯ, ಶಾಶ್ವತ ಅಂತರ್ರಾಷ್ಟ್ರೀಯ ನ್ಯಾಯಲಯ ಮತ್ತು ಕಾರ್ಮಿಕ ಸಂಘ ರಾಷ್ಟ್ರ ಸಂಘದ ಅಂಗಗಳಾಗಿದ್ದವು.

ಸಾದನೆ[ಬದಲಾಯಿಸಿ]

ರಾಷ್ಟ್ರಗಳ ನಡುವೆ ಯುದ್ಧಗಳಾಗುವ ಎಷ್ಟೊ ಪ್ರಸಂಗಗಳನ್ನು ರಾಷ್ಟ್ರ ಸಂಘ ತಡೆಯಿತು.ಇಟಲಿಯ ಕೋರ್ಫು ದ್ವೀಪವನ್ನು ಗ್ರೀಸ್ನಿನಿಂದ ವಶಪಡಿಸಿಕೊಂಡಾಗ ಆ ದ್ವೀಪವನ್ನು ಮರಳಿಸುವಂತೆ ಒತ್ತಡ ಹೇರಿ ಯಶಸ್ವಿಯಾಯಿತು. ವರ್ಸೈಲ್ಸ್ ಒಪ್ಪಂದದ ಕರಾರುಗಳ ಕಾರ್ಯಾಚರಣೆಯಲ್ಲಿ ಅದು ಯಶ ಕಂಡಿತು.ಅಪ್ಪರ್ ಸೈಲೀಸಿಯಾ ಬಗ್ಗೆ ಪೋಲೆಂಡ್ ಹಾಗು ಜರ್ಮನಿಗಳ ನಡುವೆ ಬೆಳೆದ ವಾದವನ್ನು ನಿವಾರಿಸಿತು. ರಾಷ್ಟ್ರ ಸಂಘದ ಮುಖ್ಯ ಸಾದನೆ ಎಂದರೆ ೧೯೧೯-೧೯೩೯ರವರೆಗೆ ಯುದ್ಧವನ್ನು ಯಶಸ್ವಿಯಾಗಿ ತಡೆಗಟ್ಟಿತು.

ವಿಫಲತೆ[ಬದಲಾಯಿಸಿ]

ರಾಷ್ಟ್ರ ಸಂಘದ ಆರಂಭದಿಂದಲೂ ಅಮೆರಿಕ ಸಂಘ ವನ್ನು ಸೇರಲಿಲ್ಲ.ಇದರಿಂದ ರಾಷ್ಟ್ರ ಸಂಘ ದುರ್ಬಲವಾಯಿತು. ವಿಶ್ವದ ಎಲ್ಲ ರಾಷ್ಟ್ರಗಳು ಲೀಗ್ ನ ಸದಸ್ಯರಾಗಲಿಲ್ಲ. ದಾಳಿಗಳನ್ನು ತಡೆಗಟ್ಟಲು ತನ್ನದೆ ಆದ ಸೈನ್ಯ ಇರಲಿಲ್ಲ. ಇದು ತ್ರುಪ್ತಿಕರವಾದ ನಿಶ್ಯಸ್ತ್ರೀಕರಣವನ್ನು ತರಲು ವಿಫಲಗೊಂಡಿತು. ಹಲವಾರು ದೇಶಗಳು ಲೀಗ್ನಿನಿಂದ ಹೊರಗುಳಿದುದರಿಂದ ತನ್ನ ನಿರ್ದಾರವನ್ನು ಎಲ್ಲಾ ರಾಷ್ಟ್ರಗಳ ಮೇಲೆ ಹೆರುವುದು ಆಸಾದ್ಯವಾಯಿತು.

ಎರಡನೇ ಮಹಾಯುದ್ಧ[ಬದಲಾಯಿಸಿ]

ಮೊದಲನೇ ಮಹಾಯುದ್ಧದ ನಂತರ ಯುರೋಪ್ ದೇಶಗಳು ವಿಪರೀತ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಹೊದಸದಾಗಿ ಸ್ತಾಪಿತವಾಗಿದ್ದ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಜರ್ಮನಿ,ಇಟಲಿ,ಸ್ಪೇನ್ ಈ ಆರ್ಥಿಕ ಸಮಸ್ಯೆಯನ್ನು ಪ್ರಭಾವಶಾಲಿಯಾಗಿ ಎದುರಿಸಲಿಲ್ಲ. ಆದುದರಿಂದ ಸರ್ವಾದಿಕಾರತ್ವ ಈ ಮೂರು ದೇಶಗಳಲ್ಲೂ ಬೆಳೆಯಿತು. ಸರ್ವಾದಿಕಾರಿಗಳು ರಾಷ್ಟ್ರಿಯ ಪುನರ್ ನಿರ್ಮಾಣದ ಭರವಸೆ ನೇಡಿದರು.ಯುರೋಪಿನಲ್ಲಿ ಮತ್ತೊಮ್ಮೆ ಅತ್ಯುಗ್ರ ರಾಷ್ಟ್ರಿಯವಾದ ಬೆಳೆಯಿತು.

ಜರ್ಮನಿ[ಬದಲಾಯಿಸಿ]

ವರ್ಸೈಲ್ಸ್ ಒಪ್ಪಂದದಿಂದ ಭಾರಿ ಯುದ್ಧ ಪರಿಹಾರ ನೀಡಬೇಕೆಂದು ಬಂದ ಜರ್ಮನಿಯಲ್ಲಿ,ದೇಶಕ್ಕಾದ ಅವಮಾನವನ್ನು ದೂರ ಮಾಡಬೇಕೆಂದು ಕಲ್ಪನೆ ಯನ್ನು ಮುಂದಿಟ್ಟು ಹಿಟ್ಲರ್ ನಾಝೀಪಕ್ಷ ಬಲವಾಗಿ ಯತನ್ನ ಸರ್ವಾದಿಕಾರ ಸ್ತಾಪಿಸಿತು. ಅವನು ಸೇನಾಶಕ್ತಿ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಿದನು. 'ಮೇನ್ಂಕೆಂಫ್' ಎಂಬ ಅವನ ಕ್ರುತಿ ಯಲ್ಲಿ ನಿರ್ದಾಕ್ಷಿಣ್ಯಾವಾದ ರಾಜಕೀಯ ಉದ್ದೇಶಗಳ ಚಿತ್ರಣವಿದೆ. ಕಂದು ಅಂಗಿ ಎಂಬ ಸೇನೆ ಕಟ್ಟಿ ತನ್ನ ವಿರೋಧಿಗಳಾದ ಇತರ ಪಕ್ಷದವರನ್ನು ಹಿಟ್ಲರ್ ಬಗ್ಗುಬಡಿದ. ನ್ಯಾಶನಲ್ ಸೊಶಲಿಸ್ಟ್ ಪಕ್ಷ ರೂಪಿಸಿದ. ೧೯೨೯ ಭಾರೀ ಆರ್ಥಿಕ ಹಿಂಜರಿತ ಈ ಪಕ್ಷಕ್ಕೆ ವರದಾನವಾಯಿತು. ಜರ್ಮನ್ ಜನಂಗದವರು ಆರ್ಯ ಜನಂಗಕ್ಕೆ ಸೇರಿದವರು ಎಂದು ಮತ್ತು ಯಹೂದಿಯವರು ಅನಾರ್ಯರೆಂದು ಹಾಗು ಅವರಿಗೆ ಜೀವಿಸುವ ಹಕ್ಕಿಲ್ಲವೆಂದು ಸಾರಿದ. ಕಮ್ಮ್ಯುನಿಸ್ಟ್ರರು,ವರ್ಸೈಲ್ಸ್ ಸ ಒಪ್ಪಂದ ಮತ್ತು ಯಹೂದಿಗಳು ಜರ್ಮನಿಯ ಅಧೋಗತಿಗೆ ಕಾರಣವೆಂದು ತೀವ್ರ ಪ್ರಾಚಾರ ಮಾಡಿದರು. ದೇಶದ ಅದ್ಯಕ್ಷ ಹಿಂಡೆನ್ ಬರ್ಗ್ ಹಿಟ್ಲರ ನನ್ನು ಚಾನ್ಸೆಲ್ಲರ್ ಆಗಿ ನೇಮಿಸಿದನು.(೧೯೩೩)ಮುಂದೆ ತಾನೇ ಸರ್ವಾದಿಕಾರಿಯಾಗಿ ಹಿಟ್ಲರ್'ಫ್ಯೂರರ್' ಎಂಬ ಬಿರುದು ದರಿಸಿದ. ಅವನು ಸರ್ವಾದಿಕಾರ ಪ್ರಭುತ್ವವನ್ನು ಸ್ಥಪಿಸಿದನು.

ಇಟಲಿ[ಬದಲಾಯಿಸಿ]

ಮೊದಲನೇ ವಿಶ್ವ ಯುದ್ಧದ ನಂತರ ಇಟಲಿಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ನಿವ್ರುತ್ತ ಸೈನಿಕರನ್ನು ನಿರುದ್ಯೋಗಿ ತರುಣರನ್ನು ಸಂಘಟಿಸಿ ಮುಸ್ಸೊಲಿನಿ ಕಪ್ಪಂಗಿಗಳೆಂಬ ಖಾಸಗಿ ಸೇನಾಪಡೆ ಕಟ್ಟಿದ. ಜನರು ಇವರಿಗೆ ಫ್ಯಾಸಿಸ್ಟ್ಸ್ಸ್ ಎಂದರು. ಫ್ಯಾಸಿಸ್ಟರು ಮಾಬನವ ಮೌಲ್ಯಗಳು ಮತ್ತು ಸ್ವಾತಂತ್ರಕ್ಕೆ ಬೇಲೆ ಕೊಡಲಿಲ್ಲ .ಜನರು ವಾಕ್ ಸ್ವಾತಂತ್ರವನ್ನು ಮತ್ತು ಪತ್ರಿಕಾ ಸ್ವಾತಂತ್ರವನ್ನು ಕಳೆದುಕೊಂಡರು. ಮುಸ್ಸೊಲಿನಿಯ ಯಾವುದೇ ಒಂದು ನೇತಿಯನ್ನು ವಿರೋಧಿಸಿದವರನ್ನು ರಾಷ್ಟ್ರದ್ವೆಶಿಗಳೆಂದು ಘೋಶಿಸಲಾಯಿತು. ೧೯೨೨ರಲ್ಲಿ ರಾಜ ಮೂರನೆ ವಿಕ್ಟ ರ್ ಇಮಾನ್ಯುವೆಲ್ ಮುಸ್ಸೊಲಿನಿಯನ್ನು ಪ್ರದಾನಿ ಯಾಗಲು ಆಮಂತ್ರಿಸಿದ. ಮುಸ್ಸೊಲಿನಿ ಸಂಸತ್ತನ್ನು ಮೂಲೆಪಾಲು ಮಾಡಿ ಫ್ಯಾಸಿಸ್ಟ್ ಪಕ್ಷದ ಸರ್ವಾದಿಕಾರಿ ಸರಕಾರ ಸ್ಥಾಪಿಸಿದ. ಶಾಲೆಗಳಲ್ಲಿ ಫ್ಯಾಸಿಸ್ಟ್ ವಿಚಾರ ಕಲಿಸಿದರು.