ಜಯದೇವ್ ಉನದ್ಕತ್

ವಿಕಿಪೀಡಿಯ ಇಂದ
Jump to navigation Jump to search


ಜಯದೇವ್ ದೀಪಕ್‌‍ಭಾಯಿ ಉನದ್ಕತ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಸೌರಾಷ್ಟ್ರ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಾರೆ.[೧][೨],[೩]

ಆರಂಭಿಕ ಜೀವನ[ಬದಲಾಯಿಸಿ]

ಜಯದೇವ್ ಉನದ್ಕತ್ ಅಕ್ಟೋಬರ್ ೧೮, ೧೯೯೧ ರಂದು ಗುಜರಾತ್‌ನ ಪೊರ್ಬ೦ದರ್ ನಗರದಲ್ಲಿ ಜನಿಸಿದರು. ಪೊರ್ಬ೦ದರ್‌‌‌ನಲ್ಲಿ ಡ್ಯುಲೀಪ್ ಸಿನ್ಹ್ ಸ್ಕೂಲ್ ಆಫ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಅವರನ್ನು ಗುರುತಿಸಲಾಯಿತು, ಅಲ್ಲಿ ಅವರ ತರಬೇತುದಾರ ರಾಮ್ ಓಡೆಡ್ರ ಅವರ ಬೌಲಿಂಗ್ ಸಾ‍ಮರ್ಥ್ಯವನ್ನು ಮೆಚ್ಚಿದರು.[೪][೫]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಏಪ್ರಿಲ್ ೦೪, ೨೦೧೦ರಂದು ಕೊಲ್ಕತ್ತದ ಈಡನ್ ಗಾರ್ಡನ್ಸ್‌‌‍ನಲ್ಲಿ ಕಿಂಗ್ಸ್ ೧೧ ಪಂಜಾಬ್ ವಿರುದ್ಧ ನಡೆದ ೩೪ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು. ೨೦೧೮ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಇವರನ್ನು ೮.೫ ಕೋಟಿ ರೂಪಾಯಿಗಳಿಗೆ ಖರೀದಿಸುವ ಮೂಲಕ ೨೦೧೮ನೇ ಆವೃತಿಯ ಅತೀ ದುಬಾರಿ ಭಾರತೀಯ ಬೌಲರ್‌ ಆಗಿ ಹೊರಹೊಮ್ಮಿದರು.[೬][೭][೮][೯][೧೦]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಡಿಸೆಂಬರ್ ೦೬, ೨೦೧೦ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಮೊದಲನೇ ಟೆಸ್ಟ್ ಪಂದ್ಯದ ಮೂಲಕ ಜಯದೇವ್ ಉನದ್ಕತ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಜುಲೈ ೨೪, ೨೦೧೩ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.ನಂತರ ಜೂನ್ ೧೬, ೨೦೧೬ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[೧೧][೧೨][೧೩]

ಪಂದ್ಯಗಳು[ಬದಲಾಯಿಸಿ]

 • ಟೆಸ್ಟ್ ಕ್ರಿಕೆಟ್ : ೦೧ ಪಂದ್ಯಗಳು.[೧೪]
 • ಏಕದಿನ ಕ್ರಿಕೆಟ್ : ೦೭ ಪಂದ್ಯಗಳು
 • ಟಿ-೨೦ ಕ್ರಿಕೆಟ್ : ೧೦ ಪಂದ್ಯಗಳು.
 • ಐಪಿಎಲ್ ಕ್ರಿಕೆಟ್ : ೬೨ ಪಂದ್ಯಗಳು

ವಿಕೇಟ್‍ಗಳು[ಬದಲಾಯಿಸಿ]

 • ಏಕದಿನ ಪಂದ್ಯಗಳಲ್ಲಿ : ೦೮
 • ಟಿ-೨೦ ಪಂದ್ಯಗಳಲ್ಲಿ : ೧೪
 • ಐಪಿಎಲ್ ಪಂದ್ಯಗಳಲ್ಲಿ : ೬೭

ಹೆಚ್ಚಿನ ಮಾಹಿತಿಗೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. https://timesofindia.indiatimes.com/topic/Jaydev-Unadkat
 2. https://www.rajasthanroyals.com/player/jaydev-unadkat/
 3. https://www.iplt20.com/teams/rajasthan-royals/squad/86/jaydev-unadkat
 4. http://www.espncricinfo.com/india/content/player/390484.html
 5. https://sports.ndtv.com/cricket/players/1298-jaydev-unadkat-playerprofile
 6. https://www.cricbuzz.com/cricket-series/ipl-2018/auction/players/6327
 7. https://www.hindustantimes.com/cricket/ipl-auction-jaydev-unadkat-surprised-to-get-11-5-cr-bid-from-rajasthan-royals/story-ByeghdHNw8daIp2RbrfAcM.html
 8. https://www.hindustantimes.com/cricket/indian-premier-league-auction-2018-live-updates/story-Be2VrtfQc1XDGKdoTphOLP.html
 9. https://www.cricbuzz.com/live-cricket-scorecard/10641/kolkata-knight-riders-vs-kings-xi-punjab-34th-match-indian-premier-league-2010
 10. https://www.thehindu.com/sport/cricket/ipl-auction-2018-unadkat-strikes-it-rich/article22545462.ece
 11. https://www.cricbuzz.com/live-cricket-scorecard/3358/south-africa-vs-india-1st-test-india-in-south-africa-2010-11
 12. https://www.cricbuzz.com/live-cricket-scorecard/12563/zimbabwe-vs-india-1st-odi-india-tour-of-zimbabwe-2013
 13. https://www.cricbuzz.com/live-cricket-scorecard/16610/zimbabwe-vs-india-1st-t20i-india-tour-of-zimbabwe-2016
 14. https://www.cricbuzz.com/profiles/6327/jaydev-unadkat