ವಿಷಯಕ್ಕೆ ಹೋಗು

ಚೇ ಗುವೇರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೇ ಗುವೇರಾ
ಗೆರಿಲ್ಲೆರೋ ಹೀರೋಯಿಕೋ, 1960

ಕ್ಯೂಬಾದ ಕೈಗಾರಿಕಾ ಸಚಿವ
ಅಧಿಕಾರ ಅವಧಿ
೧೧ ಫೆಬ್ರವರಿ ೧೯೬೧ – ೧ ಏಪ್ರಿಲ್ ೧೯೬೫
ಪ್ರಧಾನ ಮಂತ್ರಿ ಫಿಡೆಲ್ ಕ್ಯಾಸ್ಟ್ರೋ
ಪೂರ್ವಾಧಿಕಾರಿ ಕಚೇರಿ ಸ್ಥಾಪಿಸಲಾಗಿದೆ
ಉತ್ತರಾಧಿಕಾರಿ ಜೋಯಲ್ ಡೊಮೆನೆಕ್ ಬೆನಿಟೆಜ್

ಕ್ಯೂಬಾದ ರಾಷ್ಟ್ರೀಯ ಬ್ಯಾಂಕಿನ ಅಧ್ಯಕ್ಷ
ಅಧಿಕಾರ ಅವಧಿ
೨೬ ನವೆಂಬರ್ ೧೯೫೯ – ೨೩ ಫೆಬ್ರವರಿ ೧೯೬೧
ಪೂರ್ವಾಧಿಕಾರಿ ಫೆಲಿಪೆ ಪಾಜೋಸ್
ಉತ್ತರಾಧಿಕಾರಿ ರೌಲ್ ಸೆಪೆರೊ ಬೊನಿಲ್ಲಾ
ವೈಯಕ್ತಿಕ ಮಾಹಿತಿ
ಜನನ ಅರ್ನೆಸ್ಟೊ ಗುವೇರಾ
(೧೯೨೮-೦೬-೧೪)೧೪ ಜೂನ್ ೧೯೨೮[]
ರೊಸಾರಿಯೊ, ಸಾಂಟಾ ಫೆ, ಅರ್ಜೆಂಟೀನಾ
ಮರಣ ೯ ಅಕ್ಟೋಬರ್ ೧೯೬೭ (೩೯ ವಯಸ್ಸಿನಲ್ಲಿ)
ಲಾ ಹಿಗುಯೆರಾ, ಸಾಂಟಾ ಕ್ರೂಜ್, ಬೊಲಿವಿಯಾ
ಸಮಾಧಿ ಸ್ಥಳ ಚೇ ಗುವೇರಾ ಸಮಾಧಿ, ಸಾಂಟಾ ಕ್ಲಾರಾ, ಕ್ಯೂಬಾ
ಪೌರತ್ವ
  • ಅರ್ಜೆಂಟೀನಾ
  • ಕ್ಯೂಬಾ
ರಾಜಕೀಯ ಪಕ್ಷ
  • ಎಂ-26-7 (1955–1962)
  • ಪಾರ್ಟಿಡೋ ಯುನಿಡೋ ಡೆ ಲಾ ರೆವೊಲ್ಯೂಷನ್ ಸೋಷಿಯಲಿಸ್ಟಾ ಡಿ ಕ್ಯೂಬಾ (ಪಿಯುಆರ್ಸಿಎಸ್) (1962–1965)
ಸಂಗಾತಿ(ಗಳು)
ಹಿಲ್ಡಾ ಗಾಡಿಯಾ
(m. ೧೯೫೫; div. ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".)
ಅಲೀಡಾ ಮಾರ್ಚ್
(m. ೧೯೫೯)
ಮಕ್ಕಳು ೫, ಅಲೀಡಾ ಗುವೇರಾ ಸೇರಿದಂತೆ
ಅಭ್ಯಸಿಸಿದ ವಿದ್ಯಾಪೀಠ ಬ್ಯೂನಸ್ ಐರಿಸ್ ವಿಶ್ವವಿದ್ಯಾಲಯ
ವೃತ್ತಿ
  • ಲೇಖಕ
  • ರಾಜತಾಂತ್ರಿಕ
  • ಗೆರಿಲ್ಲಾ
  • ವೈದ್ಯ
ಸಹಿ
ಮಿಲಿಟರಿ ಸೇವೆ
ಅಡ್ಡಹೆಸರು(ಗಳು)
  • ಚೇ
  • ಫ್ಯೂಸರ್
Allegiance  ಕ್ಯೂಬಾ[]
ಸೇವೆ/ಶಾಖೆ
  • ಕ್ಯೂಬನ್ ಕ್ರಾಂತಿಕಾರಿ ಸಶಸ್ತ್ರ ಪಡೆಗಳು
  • ನ್ಯಾಷನಲ್ ಲಿಬರೇಶನ್ ಆರ್ಮಿ ಆಫ್ ಬೊಲಿವಿಯಾ
ವರ್ಷಗಳ ಸೇವೆ ೧೯೫೫-೧೯೬೭
Unit ೨೬ನೇ ಜುಲೈ ಚಳುವಳಿ
Commands ಕಮಾಂಡಿಂಗ್ ಅಧಿಕಾರಿ, ಎಫ್ ಎ ಆರ್
Battles/wars ಕ್ಯೂಬನ್ ಕ್ರಾಂತಿ
    • ಎಲ್ ಯುವೆರೊ ಮೇಲೆ ದಾಳಿ
    • ಆಪರೇಷನ್ ವೆರಾನೋ
      • ಲಾಸ್ ಮರ್ಸಿಡಿಸ್ ಕದನ
    • ಸಾಂಟಾ ಕ್ಲಾರಾ ಕದನ
  • ಬೇ ಆಫ್ ಪಿಗ್ಸ್ ಆಕ್ರಮಣ
  • ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು
  • ಸಿಂಬಾ ದಂಗೆ
  • ಬೊಲಿವಿಯನ್ ಅಭಿಯಾನ (ಕಾರ್ಯಗತಗೊಳಿಸಲಾಗಿದೆ)

ಅರ್ನೆಸ್ಟೊ ಗುವೇರಾ (ಜೂನ್ ೧೪, ೧೯೨೮ - ಅಕ್ಟೋಬರ್ ೯, ೧೯೬೭), ಜನಪ್ರಿಯವಾಗಿ ಚೇ ಗುವೇರಾ, ಎಲ್ ಚೇ ಅಥವಾ ಬರಿ ಚೇ ಎಂದು ಕರೆಯಲ್ಪಡುವ ಇವರು ಅರ್ಜೆಂಟೀನಾದ ಮಾರ್ಕ್ಸ್‌ವಾದಿ ಕ್ರಾಂತಿಕಾರಿ, ವೈದ್ಯ, ಲೇಖಕ, ಗೆರಿಲ್ಲಾ ನಾಯಕ, ರಾಜತಾಂತ್ರಿಕ ಮತ್ತು ಮಿಲಿಟರಿ ಸಿದ್ಧಾಂತಿ. ಕ್ಯೂಬನ್ ಕ್ರಾಂತಿಯ ಪ್ರಮುಖ ವ್ಯಕ್ತಿಯಾಗಿದ್ದು, ಅವರ ಶೈಲೀಕೃತ ನೋಟವು ದಂಗೆಯ ಸರ್ವತ್ರ ಪ್ರತಿ-ಸಾಂಸ್ಕೃತಿಕ ಸಂಕೇತವಾಗಿತ್ತು ಮತ್ತು ಜನಪ್ರಿಯ ಸಂಸ್ಕೃತಿಯಲ್ಲಿ ಜಾಗತಿಕ ಚಿಹ್ನೆಯಾಗಿತ್ತು.

ಚೆ ಗುವೆರ ೧೯೨೮ ಲ್ಲಿ ರೊಸಾರಿಯೋ,ಅರ್ಜೆಂಟೀನದಲ್ಲಿ ಹುಟ್ಟಿದರು. ಅವರು ಬ್ಯೂನಸ್ ವಿಶ್ವವಿದ್ಯಾಲಯದಲ್ಲಿ ವಿಧ್ಯಾಭ್ಯಾಸ ಪಡೆದರು. ವೈದ್ಯನಾಗಲು ಕನಸುಕಂಡಿದ್ದ ಆತ ತನ್ನ ರಜಾದಿನಗಳಲ್ಲಿ ಲ್ಯಾಟಿನ್ ಅಮೆರಿಕದ ಉದ್ದಕ್ಕೂ ಪ್ರವಾಸ ಕೈಗೊಂಡಿದ್ದ , ಈ ಸಮಯದಲ್ಲಿ ಆತನಲ್ಲಿ ಆದ ಅನುಭವಗಳು ಮತ್ತು ವೀಕ್ಷಣೆಗಳು ಆತನಲ್ಲಿ ಒಂದು ಪ್ರಬಲವಾದ ನಿರ್ಣಯಕ್ಕೆ ಕಾರಣವಾಯಿತು ಅದೇನಂದರೆ ಆ ಪ್ರದೇಶದಲ್ಲಿ ಬೇರುಬಿಟ್ಟ ಆರ್ಥಿಕ ಅಸಮಾನತೆ ,ಬಂಡವಾಳಶಾಹಿ, ಏಕಸ್ವಾಮ್ಯತೆ, ತತ್ತ್ವ,,ಸಾಮ್ರಾಜ್ಯಶಾಹಿ ಮತ್ತಿತರ ಆಂತರಿಕ ಬಿಕ್ಕಟ್ಟುಗಳು ತೊಲಗಬೇಕಾದರೆ ಇರುವ ಒಂದೇ ಒಂದು ಮಾರ್ಗವೆಂದರೆ ಅದೇ ಕ್ರಾಂತಿ. ಈ ನಂಬಿಕೆಯೇ ಅಧ್ಯಕ್ಷ ಜಾಕೋಬ್ ಅರ್ಬೆಂಜ್ಗ್ವಾಟೆಮಾಲಾ ಸಾಮಾಜಿಕ ಸುಧಾರಣೆಯ ಪಕ್ಷ ಸೇರಲು ಪ್ರೇರೇಪಿಸಿತು. ನಂತರ, ಮೆಕ್ಸಿಕೋ ಸಿಟಿಯಲ್ಲಿ ವಾಸಿಸುತ್ತಿರುವಾಗಲೇ ರೌಲ್ ಮತ್ತು ಫಿಡೆಲ್ ಕ್ಯಾಸ್ಟ್ರೋರ ಭೇಟಿಯಾಗಿ ಅವರ ಜುಲೈ ೨೮ರ ಚಳುವಳಿಯನ್ನು ಸೇರಿದನು ನಂತರ US ಬೆಂಬಲಿತ ಕ್ಯೂಬಾದ ಸರ್ವಾಧಿಕಾರಿ ಫಲ್ಜೆಂಸಿಯೋ ಬಟಿಸ್ಟಾ ನನ್ನು ಅಧಿಕಾರದಿಂದ ಕಿತ್ತುಹಾಕುವ ಉದ್ದೇಶದಿಂದ ಗ್ರನ್ಮ ಎಂಬ ಹಡಗಿನಲ್ಲಿ ಕ್ಯೂಬಾ ತಲುಪಿದನು. ಗುವೆರಾ ಅತೀ ಶೀಘ್ರದಲ್ಲೇ ಬಂಡುಕೋರರ ನಡುವೆ ಪ್ರಸಿದ್ಧಿಯನ್ನು ಪಡೆದಕಾರಣವಾಗಿ ಎರಡನೆಯ ಅಧಿಕಾರಿಯಾಗಿ ಬಡ್ತಿ ನೀಡಲಾಯಿತು ಮತ್ತು ಬಟಿಸ್ಟಾ ಆಡಳಿತ ಪದಚ್ಯುತಗೊಂಡನಂತರ ತನ್ನ ವಿಜಯದ ಎರಡು ವರ್ಷದ ಗೆರಿಲ್ಲಾ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸಿದ್ದನು ,೧೯೬೪ರಲ್ಲಿ ಗುವೇರಾ ತನ್ನ ಕ್ರಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ಯೂಬಾವನ್ನು ಬಿಟ್ಟು ವಿದೇಶ ಪ್ರವಾಸನ್ನು ಕೈಗೊಂಡಿದ್ದ. ಅಕ್ಟೋಬರ್ ೯, ೧೯೬೭ರಂದು CIA ನೆರವಿನಿಂದ ಬೊಲಿವಿಯದಲ್ಲಿ ಸೆರೆಹಿಡಿದು ಅಧಿಕಾರಿಗಳ ಕಟ್ಟಪ್ಪಣೆಯಿಂದ ಗುವೇರನನ್ನು ಗುಂಡುಹೊಡೆದು ಕೊಲ್ಲಲಾಯಿತು.

ಗುವೇರ ಪ್ರಬಲ ಬರಹಗಾರ ,ದಿನಚರಿಗಾರನೂ ಕೂಡ ಆಗಿದ್ದ ಆತನ ಗೆರಿಲ್ಲಾ ಸಮರ ಕೈಪಿಡಿ ಮತ್ತು ತನ್ನ ಲ್ಯಾಟಿನ್ ಅಮೆರಿಕಾದ ಪ್ರವಾಸದ ಘಟನಾವಳಿಗಳನ್ನು ಒಳಗೊಂಡ ದ ಮೋಟರ್ ಸೈಕಲ್ ಡೈರೀಸ್ ಉತ್ತಮವಾಗಿ ಮಾರಾಟಗೊಂಡ ಕೃತಿಗಳು. ೨೦೦೪ರಲ್ಲಿ ಸ್ಪೇನ್ ಭಾ‌ಷೆಯಲ್ಲಿ ಚಲನಚಿತ್ರವಾದ ದ ಮೋಟರ್ ಸೈಕಲ್ ಡೈರೀಸ್ ವಿಮರ್ಶಕರಿಂದ ಉತ್ತಮ ವಿಮರ್ಶೆಯನ್ನು ಪಡೆದು ಯಶಸ್ವಿಚಿತ್ರವೆನಿಸಿತು. ಗುವೇರ ತನ್ನ ಹುತಾತ್ಮದ ಪರಿಣಾಮವಾಗಿ ಒಂದು ಐತಿಹಾಸಿಕ ಪಾತ್ರವಾಗಿ ಬಹುಸಂಖ್ಯೆಯ ಜೀವನಚರಿತ್ರೆ, ಪ್ರಬಂಧ, ಸಾಕ್ಷ್ಯಚಿತ್ರ, ಹಾಡುಗಳು, ಮತ್ತು ಚಿತ್ರಗಳಾಗಿ ಇನ್ನೂ ಬದುಕಿದ್ದಾನೆ.

ಟೈಮ್ ನಿಯತಕಾಲಿಕವು ಈತನನ್ನು ೨೦ನೇ ಶತಮಾನದ ೧೦೦ ಅತ್ತ್ಯಂತ ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಒಬ್ಬ ಎಂದು ಪ್ರಕಟಿಸಿತ್ತು. Guerrillero Heroico ಎಂಬ ಈತನ ಚಿತ್ರವನ್ನು ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಛಾಯಾಚಿತ್ರ ಎಂದು ಕರೆಯಲಾಗುತ್ತದೆ.

ಆರಂಭಿಕ ಜೀವನ

[ಬದಲಾಯಿಸಿ]
ಹದಿಹರೆಯದ ಎರ್ನೆಸ್ಟೋ (ಎಡಕ್ಕೆ) ಕುಟುಂಬದ ಜೊತೆ ಸಿರ್ಕ,೧೯೪೧. ಪಕ್ಕದಲ್ಲಿ ಕುಳಿತಿರುವುದು, ಎಡದಿಂದ ಬಲಕ್ಕೆ: ಸೆಲಿಯಾ (ತಾಯಿ), ಸೆಲಿಯಾ (ತಂಗಿ), ರಾಬರ್ಟೊ, ಜುವಾನ್ ಮಾರ್ಟಿನ್, ಎರ್ನೆಸ್ಟೋ (ತಂದೆ) ಮತ್ತು ಅನ್ನ ಮರಿಯ.

ಎರ್ನೆಸ್ಟೋ ಗುವೇರ ಮೇ ೧೪,೧೯೨೮ ರಂದು ರೊಸಾರಿಯೋ, ಅರ್ಜೆಂಟೀನಾದಲ್ಲಿ ಸೆಲಿಯಾ ಡೆ ಲಾ ಸೆರ್ನ ವೈ ಲ್ಲೋಸಾ ಮತ್ತು ಎರ್ನೆಸ್ಟೋ ಗುವೇರ ಲಿಂಚ್ ದಂಪತಿಗೆ ಜನಿಸಿದರು. ಆತ ಸ್ಪ್ಯಾನಿಶ್, ಬಾಸ್ಕ್ ಮತ್ತು ಐರಿಷ್ ಮೂಲದ ಅರ್ಜಂಟೀನಾ ಕುಟುಂಬದ ಐದು ಮಕ್ಕಳಲ್ಲಿ ಹಿರಿಯನಾಗಿದ್ದ. ತನ್ನ ಪೋಷಕರ ಉಪನಾಮಗಳ ಬದಲಾಗಿ, ತನ್ನ ಕಾನೂನು ಹೆಸರು (ಎರ್ನೆಸ್ಟೋ ಗುವೇರ) ಕೆಲವೊಮ್ಮೆ ಇದನ್ನು ಒಳಗೊಂಡಿರುವ ಡೆ ಲಾ ಸೆರ್ನ, ಅಥವಾ ಲಿಂಚ್ ಜೊತೆಕಾಣಿಸಿಕೊಳ್ಳುತ್ತದೆ ಇದು ಚೆ ನ "ಕ್ರಿಯಾಶೀಲ" ಸ್ವರೂಪವನ್ನು ಇದು ಉಲ್ಲೇಖಿಸುತ್ತದೆ, ಈತನನ್ನು ಗಮನಿಸಿದ ಅವನ ತಂದೆ ನನ್ನ ಮಗನ ರಕ್ತನಾಳಗಳಲ್ಲಿ ಐರಿಷ್ ದಂಗೆಕೋರರ ರಕ್ತ ಹರಿಯುತ್ತಿದೆ ಎಂದು ಘೋಷಿಸಿದ್ದ.

ಗುವೇರನನ್ನು ಎರ್ನೆಸ್ಟಿಲೋ ಎಂದೇ ಕರೆಯಲಾಗುತ್ತಿತ್ತು, ತೀವ್ರವಾದಿ ಪ್ರವೃತ್ತಿಗಳ ಕುಟುಂಬದಿಂದ ಬೆಳೆದುಬಂದಿದ್ದ ಗುವೇರನಿಗೆ ಬಾಲ್ಯದಿಂದಲೇ ರಾಜಕೀಯ ದೃಷ್ಠಿಕೋನಗಳು ಅಘಾಧವಾಗಿ ಬೆಳೆಯತೊಡಗಿತ್ತು. ಅವನ ತಂದೆ ಸ್ಪಾನಿಷ್ ಗಣರಾಜ್ಯದ ನಾಗರಿಕ ಯುದ್ಧದ ಧೃಡಬೆಂಬಲಿಗರಾಗಿದ್ದರು ಸಾಮಾನ್ಯವಾಗಿ ಅನೇಕ ಪರಿಣಿತರಿಗೆ ಗುವೇರನ ಮನೆಯಲ್ಲೆ ಔತಣಕೋಟದ ಆತಿಥ್ಯವನ್ನು ಏರ್ಪಡಿಸಲಾಗುತ್ತಿತ್ತು.

ತನ್ನ ಜೀವನದುದ್ದಕ್ಕೂ ಅಸ್ತಮ ರೋಗದಿಂದ ಬಳಲುತ್ತಿದ್ದರೂ ಆತ ಒಬ್ಬ ಉತ್ತಮ ಕ್ರೀಡಾಪಟು,ಈಜುಗಾರ,ಫುಟ್ಬಾಲ್,ಗಾಲ್ಫ್ ಹಾಗು ಅತ್ಯುತ್ತಮ ಸೈಕಲ್ ಸವಾರನಾಗಿದ್ದ ಮತ್ತು ಅತ್ಯಾಸಕ್ತ ರಗ್ಬಿ ಯೂನಿಯನ್ ಆಟಗಾರನೂ ಆಗಿದ್ದ ಆತನ ಆಟದ ಶೈಲಿ ಅವನಿಗೆ Fuser(ಸಂಯೋಜಕ) ಎಂಬ ಅಡ್ಡಹೆಸರನ್ನು ತಂದಿತ್ತು.


ಬೌದ್ಧಿಕ ಮತ್ತು ಸಾಹಿತ್ಯದ ಅಭಿರುಚಿ

[ಬದಲಾಯಿಸಿ]

ಗುವೇರ ತಂದೆಯಿಂದ ಚೆಸ್ ಆಡುವುದನ್ನು ಕಲಿತನು ,ತನ್ನ ೧೨ನೇ ವಯಸ್ಸಿನಲ್ಲೇ ಸ್ಥಳೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದನು. ಪ್ರೌಢಾವಸ್ಥೆಯಲ್ಲಿ ಮತ್ತು ಜೀವನದುದ್ದಕ್ಕೂ ಕಾವ್ಯದ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದನು,ವಿಶೇಷವಾಗಿ ಪಬ್ಲೊ ನೆರುಡ,ಜಾನ್ ಕೀಟ್ಸ್,ಆಂಟೋನಿಯೊ ಮಕಾಡೋ,ಫೆಡೆರಿಕೋ ಗಾರ್ಸಿಯಾ ಲೋರ್ಕಾ,ಗಾಬ್ರಿಯೆಲ ಮಿಸ್ಟ್ರಲ್,ಸೀಜರ್ ವ್ಯಾಲೆಜೊ, ಮತ್ತು ವಾಲ್ಟ್ ವಿಟ್ಮನ್ ಅವರ ಕಾವ್ಯಗಳು ಅತ್ಯಂತ ಇಷ್ಟವಾದವುಗಳು,ರುಡ್ಯಾರ್ಡ್ ಕಿಪ್ಲಿಂಗ್ ಅವರ "If—" ಹಾಡು ಬಾಯಿಪಾಟವಾಗಿ ಹೋಗಿತ್ತು.

ಗುವೇರನ ಮನೆಯಲ್ಲಿ ೩೦೦೦ಕ್ಕಿಂತ ಹೆಚ್ಚು ಪುಸ್ತಕಗಳಿದ್ದವು ಇದೇ ಅವನನ್ನು ಉತ್ಸಾಹಿ ಮತ್ತು ವಿಶಾಲದೃಷ್ಟಿಯ ಓದುಗನನ್ನಾಗಿ ಮಾಡಿತ್ತು .ಕಾರ್ಲ್ ಮಾರ್ಕ್ಸ್, ವಿಲಿಯಂ ಫಾಲ್ಕ್ನರ್, ಆಂಡ್ರೆ ಗೈಡ್, ಎಮಿಲಿಯೊ ಸಲ್ಗಾರಿ ಮತ್ತು ಜೂಲ್ಸ್ ವರ್ನೆ ಜೊತೆಗೆ ಜವಾಹರಲಾಲ್ ನೆಹರು, ಫ್ರ್ಯಾನ್ಝ್ ಕಾಫ್ಕ, ಆಲ್ಬರ್ಟ್ ಕ್ಯಾಮಸ್, ವ್ಲಾಡಿಮಿರ್ ಲೆನಿನ್, ಮತ್ತು ಜೀನ್ ಪಾಲ್ ಸಾರ್ತ್ರೆ; ಹಾಗೆಯೇ ಅನಾಟೊಲೆ ಫ್ರಾನ್ಸ್, ಫ್ರೆಡ್ರಿಕ್ ಎಂಗೆಲ್ಸ್, HG ವೆಲ್ಸ್, ಮತ್ತು ರಾಬರ್ಟ್ ಫ್ರಾಸ್ಟ್ ಅವರ ಕೃತಿಗಳನ್ನು ಆನಂದಿಸಿ ಓದುತ್ತಿದ್ದ.

ಬೆಳೆದಂತೆಲ್ಲಾ ಲ್ಯಾಟಿನ್ ಅಮೆರಿಕನ್ ಬರಹಗಾರರಾದ ಹೊರಾಸಿಯೊ ಕ್ವಿರೋಗಾ, ಸಿರೊ ಅಲ್ಜಿರಿಯಾ, ಜೋರ್ಜ್ ಇಖಾಜಾ, ರುಬೆನ್ ಡರಿಯೊ ಮತ್ತು ಮಿಗುಯೆಲ್ ಆಸ್ಟೂರಿಯಸ್ ರವರ ಬರಹಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡ ಈ ಲೇಖಕರ ಪರಿಕಲ್ಪನೆಗಳನ್ನು ಮತ್ತು ಸಿದ್ಧಾಂತಗಳನ್ನು ತನ್ನ ಕೈ ಬರಹದ ಪುಸ್ತಕದಲ್ಲಿ ದಾಖಲಿಸತೊಡಗಿದ. ಇವುಗಳಲ್ಲಿ ಬುದ್ಧ ಮತ್ತು ಅರಿಸ್ಟಾಟಲ್ನ ವಿಶ್ಲೇಷಣಾತ್ಮಕ ರೇಖಾಚಿತ್ರಗಳು ಬರ್ಟ್ರಾಂಡ್ ರಸ್ಸೆಲ್ ನ ಪ್ರೀತಿ ಮತ್ತು ದೇಶಭಕ್ತಿ, ಜಾಕ್ ಲಂಡನ್ ನ ಸಮಾಜದ ಮೇಲೆ, ನೀತ್ಸೆಯ ಸಾವಿನ ಕಲ್ಪನೆ ಸಿದ್ಧಾಂತಗಳನ್ನು ತನ್ನದೇ ಆದ ರೀತಿಯಲ್ಲಿ ಪರೀಕ್ಷಿಸುವುದು ಒಳಗೊಂಡಿದ್ದವು. ಶಾಲೆಯಲ್ಲಿ ಈತನ ನೆಚ್ಚಿನ ವಿಷಯಗಳೆಂದರೆ ತತ್ವಶಾಸ್ತ್ರ,ಗಣಿತಶಾಸ್ತ್ರ,ರಾಜಕೀಯ ವಿಜ್ಞಾನ,ಸಮಾಜಶಾಸ್ತ್ರ,ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ.

ವರ್ಷಗಳ ನಂತರ, ಫೆಬ್ರವರಿ ೧೩, ೧೯೫೮ರಂದು ಬಹಿರಂಗಗೊಂಡ CIA ಜೀವನಚರಿತ್ರೆ ಮತ್ತು ವ್ಯಕ್ತಿತ್ವ ವರದಿ ಯಲ್ಲಿ ಅವನ ಶೈಕ್ಷಣಿಕ ಆಸಕ್ತಿಗಳನ್ನು ಮತ್ತು ಬುದ್ಧಿಶಕ್ತಿಯನ್ನು ಗಮನಿಸಿ ಆತನನ್ನು ಒಬ್ಬ ಬುದ್ದಿವಂತ ಲ್ಯಾಟಿನ್ ಅಮೇರಿಕದ ನಿವಾಸಿ ಎಂದು ಹೇಳಲಾಗಿದೆ.


ಮೋಟಾರ್ ಸೈಕಲ್ ಪ್ರಯಾಣ

[ಬದಲಾಯಿಸಿ]

೧೯೪೮ರಲ್ಲಿ ಗುವೇರ ಔಷಧ ಅಧ್ಯಯನಕ್ಕಾಗಿ ಬ್ಯೂನಸ್ ವಿಶ್ವವಿದ್ಯಾಲಯ ಪ್ರವೇಶಿಸಿದನು. ಜಗತ್ತನ್ನು ಅನ್ವೇಶಿಸುವ ತನ್ನ ಮಹದಾಸೆ ಮೂಲಭೂತವಾಗಿ ಲ್ಯಾಟಿನ್ ಅಮೆರಿಕಾದ ಸಮಕಾಲೀನ ಆರ್ಥಿಕ ಪರಿಸ್ಥಿತಿಗಳನ್ನು ಎರಡು ದೀರ್ಘ ಆತ್ಮಶೋಧಕ ಪ್ರಯಾಣದ ಜೊತೆಗೆ ಅನ್ವೇಶಿಸಿದನು.೧೯೫೦ರಲ್ಲಿ ಮೊದಲ ದಂಡಯಾತ್ರೆ, ಒಂದು ಸಣ್ಣ ಮೋಟರ್ ಒಳಗೊಂಡಿರುವ ಸೈಕಲ್ ಮೇಲೆ ಉತ್ತರ ಅರ್ಜೆಂಟೀನಾ ಗ್ರಾಮೀಣ ಪ್ರಾಂತ್ಯಗಳಲ್ಲಿ ಒಂಟಿಯಾಗಿ ಪ್ರವಾಸಕೈಗೊಂಡನು ಪ್ರಯಾಣದ ಉದ್ದವು ೪,೫೦೦ ಕಿಲೋಮೀಟರ್ ಆಗಿತ್ತು. ನಂತರದ ಪ್ರವಾಸ ೧೯೫೧ರಲ್ಲಿ ದಕ್ಷಿಣ ಅಮೆರಿಕಾದಾದ್ಯಂತ, ಇದು ೯ ತಿಂಗಳು ಮತ್ತು ೮,೦೦೦ ಕಿಲೋಮೀಟರ್ ಒಳಗೊಂಡ ಯಾತ್ರೆಯಾಗಿತ್ತು. ಎರಡನೆಯದಕ್ಕೆ ಒಂದು ವರ್ಷಗಳ ಕಾಲ ವಿಧ್ಯಾಭ್ಯಾಸಕ್ಕೆ ವಿರಾಮ ತೆಗೆದುಕೊಂಡನು ತನ್ನ ಗೆಳೆಯ ಆಲ್ಬರ್ಟೊ ಗ್ರನಡೋ ಜೊತೆಗೂಡಿ ಅಮೆಜಾನ್ ನದಿಯ ಮೇಲೆ, ಪೆರುವಿನಲ್ಲಿ SAN PABLO ಕುಷ್ಠರೋಗಿಗಳ ಕಾಲೋನಿಯಲ್ಲಿ ಸ್ವಯಂ ಸೇವಕರಾಗಿ ಕೆಲವು ವಾರಗಳವರೆಗೆ ಸೇವೆಸಲ್ಲಿಸುವುದು ಅಂತಿಮ ಗುರಿಯಾಗಿತ್ತು.

ಗುವೇರನ 1952 ರ ಪ್ರಯಾಣದ ಒಂದು ನಕ್ಷೆ ಆಲ್ಬರ್ಟೊ ಗ್ರನಡೋ ಜೊತೆ. ಕೆಂಪು ಗುರುತುಗಳು ವಾಯುಯಾನಕ್ಕೆ ಸಂಬಂಧಪಟ್ಟವು.
black and white photograph of two men on a raft, fitted with a large hut. The far bank of the river is visible in the far distance
ಗುವೇರ ಮತ್ತು ಗ್ರನಾಡೋ(left) ತಮ್ಮ "MAMBO-ಟ್ಯಾಂಗೋ" ಮರದ ರಾಫ್ಟ್ ತೆಪ್ಪ ದೊಂದಿಗೆ Amazon River ಜೂನ್ ೧೯೫೨. ಈ ರಾಫ್ಟ್ ತೆಪ್ಪ ಕುಷ್ಠರೋಗಿಗಳ ಉಡುಗೊರೆ.

ಚಿಲಿಯಲ್ಲಿ ಅನಕೊಂಡಾದ ಚುಕ್ವಿಕೆಮೇಟಾ ತಾಮ್ರದ ಗಣಿಯಲ್ಲಿ ಗಣಿಗಾರರ ಕೆಲಸದ ಸ್ಥಿತಿಗತಿಗಳು ಗುವೇರನನ್ನು ಕೆರಳಿಸಿತು, ಅಟಾಕಾಮಾ ಮರುಭೂಮಿಯ ರಾತ್ರಿಯಲ್ಲಿ ಒಂದು ಹೊದಿಕೆಯನ್ನು ಸಹ ಹೊಂದಿರದ ಕಮ್ಯುನಿಸ್ಟ್ ದಂಪತಿಗಳ ಜೊತೆ ರಾತ್ರಿಯನ್ನು ಕಳೆದ ಮತ್ತವರನ್ನು ಬಂಡವಾಳಶಾಹಿ ಶೋಷಣೆಯ ಬಲಿಪಶುಗಳು ಎಂದು ಅವರ ನಿಜಸ್ಥಿತಿಯನ್ನು ವಿವರಿಸಿದ. ಮಚ್ಚು ಪಿಚ್ಚು ಗೆ ಹೋಗುವ ದಾರಿಯಲ್ಲಿ ಆಂಡ್ಸ್ ಪರ್ವತದ ಮೇಲ್ಭಾಗದಲ್ಲಿ ದೂರದ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀಮಂತ ಭೂಮಾಲೀಕರು ತಮ್ಮ ಒಡೆತನದ ಭೂಮಿಯನ್ನು ಅಲ್ಲಿನ ಬಡರೈತರಿಂದ ಕೃಷಿಮಾಡಿಸುತ್ತಿರುವುದನ್ನು ಕಂಡನು. ನಂತರ ತನ್ನ ಪ್ರಯಾಣದಲ್ಲಿ ಕುಷ್ಠರೋಗದ ಕಾಲೋನಿಯಲ್ಲಿ ವಾಸಿಸುವ ಜನರ ನಡುವೆ ಇರುವ ನಿಕಟಸ್ನೇಹವನ್ನು ಕಂಡು ಪ್ರಭಾವಿತನಾದ, ಮಾನವ ಐಕಮತ್ಯ ಮತ್ತು ನಿಷ್ಠೆ ಅತ್ಯಧಿಕವಾಗಿ ಒಂಟಿಯಾಗಿರುವ ಮತ್ತು ಹತಾಶರಾದ ಜನರಲ್ಲಿ ಕಾಣಸಿಗುತ್ತದೆ ಎಂದು ಹೇಳಿಕೆ ನೀಡಿದ್ದ. ಗುವೇರ ತನ್ನ ಪ್ರವಾಸದಲ್ಲಿ ಬಳಸಿದ್ದ ಟಿಪ್ಪಣಿಗಳು ದ ಮೋಟರ್ ಸೈಕಲ್ ಡೈರೀಸ್ ಎಂಬ ಹೆಸರಿನೊಂದಿಗೆ ಪ್ರಕಟವಾಯಿತು ನಂತರ ನ್ಯೂಯಾರ್ಕ್ ಟೈಮ್ಸ್ ನ ಉತ್ತಮ ಮಾರಾಟವಾದ ಪುಸ್ತಕವೂಆಯಿತು. ೨೦೦೪ರಲ್ಲಿ ಸ್ಪಾನಿಷ್ ಭಾಷೆಯಲ್ಲಿ ಅದೇ ಹೆಸರಿನ ಪ್ರಶಸ್ತಿ ವಿಜೇತ ಚಿತ್ರವಾಗಿ ಹೊರಹೊಮ್ಮಿತು.

ತನ್ನ ಮನೆ ಬ್ಯೂನಸ್ ಏರ್ಸ್ಗೆ ಮರಳುವ ಮುನ್ನ ಗುವೇರ ಒಟ್ಟು ಅರ್ಜೆಂಟೀನಾ, ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನೆಜುವೆಲಾ, ಪನಾಮ ಮತ್ತು ಮಿಯಾಮಿಯೆಲ್ಲೆಡೆ ಸುತ್ತಾಡಿಬಂದಿದ್ದ, ಪ್ರವಾಸದ ಕೊನೆಯಲ್ಲಿ ಅವನ ಕಲ್ಪನೆಯಲ್ಲಿ ಲ್ಯಾಟಿನ್ ಅಮೇರಿಕವು ಮಿತಿಯಿಲ್ಲದ ಸಾಮಾನ್ಯ ಲ್ಯಾಟಿನ್ ಪರಂಪರೆಯನ್ನೊಳಗೊಂಡ ಪ್ರತ್ಯೇಕ ರಾಷ್ಟ್ರಗಳಸಂಗ್ರಹವಲ್ಲ ಬದಲಿಗೆ ವಿಮೋಚನೆಯಾಗಬೇಕಾಗಿರುವ ಭೂಖಂಡದ ವಿಶಾಲ ಘಟಕವೆಂಬಂತೆ ಕಾಣಿಸಿತು. ಅರ್ಜೆಂಟೀನಾಗೆ ಮರಳಿದ ನಂತರ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿ ಜೂನ್ ೧೯೫೩ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದರು ಮತ್ತು ಅಧಿಕೃತವಾಗಿ ಡಾ||ಎರ್ನೆಸ್ಟೋ ಗುವೇರನಾದರು.

ನಂತರ ತನ್ನ ಪ್ರಯಾಣದ ಅನುಭವದಲ್ಲಿ ಲ್ಯಾಟಿನ್ ಅಮೇರಿಕಾವನ್ನು ಟೀಕಿಸಿದರು ಲ್ಯಾಟಿನ್ ಅಮೇರಿಕಾದಲ್ಲಿ ಬಡತನ, ಹಸಿವು ಮತ್ತು ರೋಗದ ಚಿಕಿತ್ಸೆಗೆ ಹಣದ ಕೊರತೆ, ನಿರಂತರ ಹಸಿವು ಮತ್ತು ಜಡ ಸ್ಥಿತಿ ಎದ್ದು ಕಾಣುತ್ತದೆ ಈ ಜನರಿಗೆ ಸಹಾಯ ಮಾಡಬೇಕಾದರೆ ವೈದ್ಯಕೀಯ ಪದವಿ ಬಿಟ್ಟು ಪರಿಪೂರ್ಣ ಸಶಸ್ತ್ರ ಹೋರಾಟದ ಅಗತ್ಯವಿದೆ.


ಗ್ವಾಟೆಮಾಲಾ,ಅರ್ಬೆನ್ಜ್

[ಬದಲಾಯಿಸಿ]

ಜುಲೈ 7, 1953 ರಂದು, ಗುವೇರ ಸವಾರಿ ಮತ್ತೆ ಹೊರಟಿತು ಈ ಬಾರಿ ಬಲ್ಗೇರಿಯಾ, ಪೆರು, ಈಕ್ವೆಡಾರ್, ಪನಾಮ, ಕೋಸ್ಟಾ ರಿಕಾ, ನಿಕರಾಗುವಾ, ಹೊಂಡುರಸ್ ಮತ್ತು ಎಲ್ ಸಾಲ್ವಡಾರ್. ಡಿಸೆಂಬೆರ್ ೧೦ರಂದು ಗ್ವಾಟೆಮಾಲಾ ಬಿಟ್ಟು ಹೊರಡುವ ಮುನ್ನ ಸ್ಯಾನ್ ಜೋಸ್, ಕೋಸ್ಟ ರಿಕಾದಿಂದ ತನ್ನ ಚಿಕ್ಕಮ್ಮ ಬೀಟ್ರಿಜ್ಗೆ ಒಂದು ಸಂದೇಶವನ್ನು ಕಳುಹಿಸಿದ, ಆ ಪತ್ರದಲ್ಲಿ United Fruit Company ಆಡಳಿತದ ಬಗ್ಗೆ ಮತ್ತು ಬಂಡವಾಳಶಾಹಿಗಳ ಕ್ರೂರತನದ ಬಗ್ಗೆ ಮನವರಿಕೆಮಾಡಿದ್ದ .

ಗ್ವಾಟೆಮಾಲಾ ನಗರದಲ್ಲಿ, ಗುವೇರ ಪೆರುವಿಯನ್ ಅರ್ಥಶಾಸ್ತ್ರಜ್ಞ "ಹಿಲ್ಡಾ ಗಡಿಯ ಅಕೋಸ್ಟಾ ಳನ್ನು" ಆಶ್ರಯಿಸಿದ್ದ, ಆತ "APRA, American Popular Revolutionary Alliance" ಸಂಗದ ಉತ್ತಮ ರಾಜಕೀಯ ಸದಸ್ಯನಾಗಿದ್ದಳು.ಆಕೆಯಿಂದ Arbenz ಸರ್ಕಾರದ ಉನ್ನತ ಮಟ್ಟದ ಹಲವಾರು ಅಧಿಕಾರಿಗಳ ಪರಿಚಯವಾಯಿತು. ನಂತರ ಕ್ಯೂಬಾದ ಬಹಿಷ್ಕೃತರ ಸಮೂಹ ಸಂಪರ್ಕದಿಂದ ಫಿಡೆಲ್ ಕ್ಯಾಸ್ಟ್ರೋನ ಪರಿಚಯವಾಯಿತು, ಈ ಅವಧಿಯಲ್ಲಿ ಗುವೇರ "ಚೆ" ಎಂಬ ಅಡ್ಡಹೆಸರಿನಿಂದ ಪ್ರಸಿದ್ಧಿಗಳಿಸಿದನು.

ಈ ಅವಧಿಯಲ್ಲಿ ಸಶಸ್ತ್ರ ಹೋರಾಟ ಮತ್ತು ಶಿಕ್ಷೆಯ ಮೂಲಕವೇ ಮಾತ್ರ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಜನಸಾಮಾನ್ಯರ ರಕ್ಷಣೆ ಮತ್ತು ಬಲಪಡಿಸುವುದು ಸಾಧ್ಯ ಎಂದು ಗುವೇರನಿಗೆ ಮನವರಿಕೆ ಮಾಡಿಕೊಟ್ಟಿದ್ದು ಗ್ವಾಟೆಮಾಲ ನಗರ ಎಂದು "ಗಡೆಯ" ತಾನು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದ.

  1. ಉಲ್ಲೇಖ ದೋಷ: Invalid <ref> tag; no text was provided for refs named birthdate
  2. ಪಾರ್ಟಿಡೋ ಯುನಿಡೋ ಡೆ ಲಾ ರೆವೊಲುಸಿಯೋನ್ ಸೋಷಿಯಲಿಸ್ಟಾ ಡಿ ಕ್ಯೂಬಾ, ಪಿಯುಆರ್ಸಿಎಸ್ ಎಂದೂ ಕರೆಯುತ್ತಾರೆ