ಗೇಮ್ ಆಫ್ ಥ್ರೋನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೇಮ್ ಆಫ್ ಥ್ರೋನ್ಸ್
ಗೇಮ್ ಆಫ್ ಥ್ರೋನ್ಸ್
ಗೇಮ್ ಆಫ್ ಥ್ರೋನ್ಸ್  
ಶೈಲಿ
ಕಾಲ್ಪನಿಕ
ಸರಣಿ ನಾಟಕ (ಧಾರಾವಾಹಿ)
ರಚನಾಕಾರರುಡೇವಿಡ್ ಬಿನೋಫ್ 
 ಡಿ ಬಿ ವೇಯ್ಸ್ 
ಸಂಯೋಜಕ(ರು)ರಮಿನ್ ಜವಾದಿ
ದೇಶಅಮೆರಿಕ
ಭಾಷೆ(ಗಳು)ಆ೦ಗ್ಲ
ಒಟ್ಟು ಸರಣಿಗಳು
ಒಟ್ಟು ಸಂಚಿಕೆಗಳು67
ನಿರ್ಮಾಣ
ಕಾರ್ಯನಿರ್ವಾಹಕ ನಿರ್ಮಾಪಕ(ರು)
ಸ್ಥಳ(ಗಳು)ಉತ್ತರ ಐರ್ಲೆಂಡ್ * ಕ್ರೊಯೇಷಿಯಾ * ಐಸ್ಲ್ಯಾಂಡ್ * ಸ್ಪೇನ್ * ಮಾಲ್ಟಾ * ಮೊರೊಕೊ * ಸ್ಕಾಟ್ಲೆಂಡ್ * ಕೆನಡಾ * ಯುನೈಟೆಡ್ ಸ್ಟೇಟ್ಸ್
ಸಮಯ50–80 ನಿಮಿಷಗಳು
ವಿತರಕರುWarner Bros. Television Distribution
ಪ್ರಸಾರಣೆ
ಮೂಲ ವಾಹಿನಿಹೆಚ್ ಬಿ ಓ 
ಚಿತ್ರ ಶೈಲಿ1080i (16:9 HDTV)
ಮೂಲ ಪ್ರಸಾರಣಾ ಸಮಯ– ಪ್ರಸ್ತುತ
ಹೊರ ಕೊಂಡಿಗಳು
ತಾಣ
Production website

ಗೇಮ್ ಆಫ್ ಥ್ರೋನ್ಸ್ ಎನ್ನುವುದು ಡೇವಿಡ್ ಬೆನಿಯಾಫ್, ಡಿ ಬಿ ವೇಯ್ಸ್ ರಚಿಸಿದ ಅಮೇರಿಕದ ಕಾಲ್ಪನಿಕ ನಾಟಕ ಟಿವಿ ಸರಣಿ. ಜಾರ್ಜ್ ಆರ್ ಆರ್ ಮಾರ್ಟಿನ್  ಬರೆದ ಕಾದಂಬರಿ ಎ ಸಾಂಗ್ ಆಫ್ ಐಸ್ ಎಂಡ್ ಫೈರ್  ಈ ದೂರದರ್ಶನ ದಾರಾವಾಹಿಯ ಆಧಾರ. ಇದನ್ನು ಯುನೈಟೆಡ್ ಕಿಂಗ್ಡಮ್, ಕೆನಡಾ, ಕ್ರೊಯೇಷಿಯಾ, ಐಸ್ಲ್ಯಾಂಡ್, ಮಾಲ್ಟಾ, ಮೊರಾಕೊ, ಸ್ಪೇನ್ ಮತ್ತು ಯುನೈಟೆಡ್ ಸ್ಟೇಟ್ಸ್ ನ ಟೈಟಾನಿಕ್ ಸ್ಟುಡಿಯೋಸ್ನಲ್ಲಿ ಚಿತ್ರೀಕರಿಸಲಾಯಿತು. ಅಮೇರಿಕಾದಾದ್ಯಂತ ಸರಣಿ ಹೆಚ್ ಬಿ ಓ ಚಾನೆಲ್ನಲ್ಲಿ ಏಪ್ರಿಲ್ 17, 2011 ರಂದು ಪ್ರಸಾರ ಮಾಡಲು ಪ್ರಾರಂಭಿಸಿತು ಮತ್ತು ಆರನೇ ಋತುವನ್ನು ಜೂನ್ 26, 2016 ರಂದು ಕೊನೆಗೊಳಿಸಿತು. ಸರಣಿಯ 7 ನೇ ಋತು,  ಜುಲೈ 16, 2017 ರಂದು ಪ್ರಸಾರವಾಯಿತು,  2019 ರ ಎಪ್ರಿಲ್ ೧೪ರಿಂದ ಎಂಟನೇ ಋತು ಪ್ರಸಾರವಾಯಿತು.

 

ವೆಸ್ಟೆರೋಸ್, ಎಸ್ಸೋಸ್ ಕಾಲ್ಪನಿಕ ಭೂಖಂಡದಲ್ಲಿ ಸ್ಥಾಪಿಸಲ್ಪಟ್ಟ ಸಿಂಹಾಸನದ ಅಧಿಕಾರಕ್ಕೆ ಹಾತೊರೆಯುವ ರಾಜರು ಈ ನಾಟಕದ ಕಥೆ, ಹಲವು ವಿಭಿನ್ನ ಕಥಾ ರೇಖೆಗಳು ಮತ್ತು ಹಲವು ಪಾತ್ರಗಳನ್ನು ಹೊಂದಿದೆ. ಸಿಂಹಾಸನದಿಂದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕಾಗಿ ಹೋರಾಡುವ , ಸಾರ್ವಭೌಮತ್ವದೊಂದಿಗೆ ಏಳು ರಾಜರುಗಳ (ಐರನ್ ಥ್ರೋನ್) ಸಿಂಹಾಸನಕ್ಕಾಗಿ ವಾದಿಸುವುದು  ಮೊದಲ ಕಥಾಭಾಗವಾದರೆ, ನಂತರದ ಕಥಾಭಾಗದಲ್ಲಿ, ಸಿಂಹಾಸನದಿಂದ ಭ್ರಷ್ಟಗೊಂಡಿದ್ದ ಹಿಂದಿನ ರಾಜವಂಶದ ವಂಶಸ್ಥರು, ಗಡಿಪಾರುಗಳಲ್ಲಿ ಬದುಕಿ ಸಿಂಹಾಸನವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. 

ವಿಮರ್ಶಾತ್ಮಕವಾಗಿ ಬಹಳ ಮೆಚ್ಚುಗೆ ಪಡೆದ ಅಭಿನಯ, ನಟನೆ, ಸಂಕೀರ್ಣವಾದ ಪಾತ್ರಗಳು, ಕಥೆಯಿಂದ ಬಹಳ ಪ್ರಸಿದ್ದಿಯಾಗಿದ್ದರೂ, ಚಿತ್ರೀಕರಣದ ವೆಚ್ಚಗಳು , ಮತ್ತೊಂದೆಡೆ ಸರಣಿಯಲ್ಲಿ ನಗ್ನತೆ ಮತ್ತು ಹಿಂಸಾಚಾರ (ಲೈಂಗಿಕ ಹಿಂಸೆ ಸೇರಿದಂತೆ ) ಚಿತ್ರಿಸಲಾಗಿರುವುದರಿಂದ ಟೀಕಿಸಲಾಗಿದೆ. [೧]

ಹಿನ್ನೆಲೆ[ಬದಲಾಯಿಸಿ]

ಕಾಲ್ಪನಿಕ ಪ್ರಪಂಚ[ಬದಲಾಯಿಸಿ]

ಎ ಸಾಂಗ್ ಆಫ್ ಐಸ್ ಅಂಡ್ ಫೈರ್ ಸರಣಿಯಲ್ಲಿನ ಕಾಲ್ಪನಿಕ ವೆಸ್ಟೆರೋಸ್ ಖಂಡದ ಏಳು ಸಾಮ್ರಾಜ್ಯಗಳು ಈ ದೂರದರ್ಶನ ಸರಣಿಯ ಆಟದ ಕಥೆಯ ಆಧಾರವಾಗಿದೆ.ಈ ಸರಣಿಯು ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕುಟುಂಬಗಳ ನಡುವೆ ಸಿಂಹಾಸನಕ್ಕಾಗಿ ಹೋರಾಡುವುದನ್ನು ಚಿತ್ರಿಸುತ್ತದೆ. ಸರಣಿಯು ವೆಸ್ಟರೋಸ್ ಮತ್ತು ಎಸ್ಸೊಸ್ ಎಂಬ ಎರಡು ಖಂಡಗಳಲ್ಲಿ ಕೆಲವು ರಾಜರು ಮತ್ತು ರಾಣಿಯರ ಮೇಲೆ ಕೇಂದ್ರೀಕರಿಸುತ್ತದೆ . ಸಿಂಹಾಸನಕ್ಕೆ ಉತ್ತರಾಧಿಕಾರಿ ಆಗಬೇಕೆಂದು ಅಧಿಕಾರಕ್ಕಾಗಿ ಹೋರಾಡುತ್ತಾರೆ. ಅತ್ಯಂತ ಪ್ರಮುಖವಾದುದು ಲ್ಯಾನಿಸ್ಟರ್ , ಟಾರ್ಗೇರಿಯನ್ ಮತ್ತು ಸ್ಟಾರ್ಕ್ ಕುಟುಂಬಗಳು.

Peter Dinklage
ಪೀಟರ್ ಡಿಂಕ್ಲೆಜ್ ಅವರು ಟಿರಿಯನ್ ಲ್ಯಾಂನಿಸ್ಟರ್ ಎಂಬ ಮುಖ್ಯ ಪಾತ್ರ ವಹಿಸಿದ್ದಾರೆ 
D. B. Weiss and David Benioff
ರಚನಾಕಾರರು : ಡಿ ಬಿ ವೇಯ್ಸ್, ಡೇವಿಡ್ ಬಿನೋಫ್

ಪಾತ್ರ ವರ್ಗ[ಬದಲಾಯಿಸಿ]

ಜಾನ್ ಸ್ನೋ ಪಾತ್ರದಲ್ಲಿ ಕಿಟ್ ಹ್ಯಾರಿ೦ಗ್ಟನ್

ಸಾನ್ಸ ಸ್ಟಾರ್ಕ್ ಪಾತ್ರದಲ್ಲಿ ಸೋಫಿ ಟರ್ನರ್

ಟಿರಿಯನ್ ಲ್ಯಾನಿಸ್ಟರ್ ಪಾತ್ರದಲ್ಲಿ ಪೀಟರ್ ಡಿ೦ಕ್ಲೇಜ್

ಡನೇರಿಸ್ ಟಾರ್ಗೇರಿಯನ್ ಪಾತ್ರದಲ್ಲಿ ಎಮಿಲಿಯಾ ಕ್ಲಾರ್ಕ್

 ಸೆರ್ಸಿ ಲಾನಿಸ್ಟರ್- ಲೀನಾ ಹೀಡೀ

  

ಗೇಮ್ ಆಫ್ ಥ್ರೋನ್ಸ್ ಪಾತ್ರವರ್ಗ

George R. R. Martin
ಜಾರ್ಜ್ ಆರ್ ಆರ್ ಮಾರ್ಟಿನ್, ಎ ಸಾಂಗ್ ಆಫ್ ಐಸ್ ಅಂಡ್ ಫೈರ್ ಲೇಖಕ