ಗೂಗಲ್ ಆಡ್ ವರ್ಡ್ಸ್(adwords)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
AdWords
ಅಭಿವೃದ್ಧಿಪಡಿಸಿದವರುGoogle Inc.
ಮೊದಲು ಬಿಡುಗಡೆಅಕ್ಟೋಬರ್ 23, 2000 (2000-10-23)[೧]
ಕಾರ್ಯಾಚರಣಾ ವ್ಯವಸ್ಥೆCross-platform (web-based application)
ವಿಧOnline advertising
ಅಧೀಕೃತ ಜಾಲತಾಣwww.google.com/adwords

ಆಡ್ ವರ್ಡ್ಸ್ ಎಂಬುದು ಗೂಗಲ್ ನ ಪ್ರಮುಖ ಜಾಹೀರಾತು ಉತ್ಪನ್ನವಾಗಿದೆಯಲ್ಲದೇ, ಆದಾಯದ ಪ್ರಧಾನ ಮೂಲವಾಗಿದೆ. ಜಾಹೀರಾತಿನಿಂದ ಪಡೆಯುವ ಗೂಗಲ್ ನ ಒಟ್ಟು ಆದಾಯ 2010 ರಲ್ಲಿ USD$28 ಬಿಲಿಯನ್ ನಷ್ಟಿತ್ತು.[೨] ಆಡ್ ವರ್ಡ್ಸ್, ಪಠ್ಯ, ಶೀರ್ಷಿಕೆ(ಬ್ಯಾನರ್) ಮತ್ತು ಮಾಧ್ಯಮದ ಬೆಲೆಬಾಳುವ ಜಾಹೀರಾತುಗಳಿಗಾಗಿ ಪೇ-ಪರ್-ಕ್ಲಿಕ್ (PPC) ಜಾಹೀರಾತು ಹಾಗು ತಾಣ-ಉದ್ದೇಶಿತ ಜಾಹೀರಾತುಗಳ ಅವಕಾಶ ನೀಡುತ್ತವೆ. ಆಡ್ ವರ್ಡ್ಸ್ ನ ಕಾರ್ಯಕ್ರಮ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿತರಣೆಗಳನ್ನು ಒಳಗೊಂಡಿರುತ್ತದೆ. ಗೂಗಲ್ ನ ಜಾಹೀರಾತು ಪಠ್ಯ ವಿಷಯ ಅತ್ಯಂತ ಚಿಕ್ಕದಾಗಿದ್ದು, ಒಂದು ಶೀರ್ಷಿಕೆ ಮತ್ತು ಅಧಿಕವೆಂದರೆ ಎರಡು ಪಠ್ಯ ಸಾಲುಗಳನ್ನು ಒಳಗೊಂಡಿರುತ್ತದೆ. ಛಾಯಾಚಿತ್ರ ಜಾಹೀರಾತುಗಳು, ಅನೇಕ ವಿಭಿನ್ನ ಇಂಟ್ರಾಕ್ಟೀವ್ ಅಡ್ವರ್ಟೈಸ್ ಮೆಂಟ್ ಬ್ಯೂರೋ (IAB) ದ ಪ್ರಮಾಣೀಕೃತ ಗುಣಮಟ್ಟದ ಗಾತ್ರಗಳಲ್ಲಿ ಒಂದಾಗಿರುತ್ತದೆ.

ಗೂಗಲ್ ನ ಆಡ್ ವರ್ಡ್ಸ್ ಮಾರಾಟ ಮತ್ತು ಬೆಂಬಲ ವಿಭಾಗವು,ಮಿಚಿಗನ್ ನ ಆನ್ನ ಅರ್ಬೋರ್ ನಲ್ಲಿರುವ ಪ್ರಮುಖ ಪ್ರಾತಿನಿಧಿಕ ಕಚೇರಿಗಳೊಂದಿಗೆ, ಕ್ಯಾಲಿಫೋರ್ನಿಯಾದ ಮೌಂಟ್ಯೇನ್ ವ್ಯೂ ನಲ್ಲಿದೆ.[೩] ಇದು ಕ್ಯಾಲಿಫೋರ್ನಿಯಾದ ಮೌಂಟ್ಯೇನ್ ವ್ಯೂ ನಲ್ಲಿರುವ ಇದರ ಕಾರ್ಯಾಲಯಗಳು ಮತ್ತು ನ್ಯೂಯಾರ್ಕ್ ಸಿಟಿ ಕಚೇರಿಯ ಹಿಂದಿರುವ ಇದು ಕಂಪನಿಯ ಮೂರನೇ ಅತ್ಯಂತ ದೊಡ್ಡ US ಸೌಲಭ್ಯವಾಗಿದೆ.[೪] ಆಡ್ ವರ್ಡ್ಸ್ ನ ನಿರ್ವಹಣೆಯನ್ನು ಕ್ಯಾಲಿಫೋರ್ನಿಯಾದ ಮೌಂಟ್ಯೇನ್ ವ್ಯೂ ನಲ್ಲಿ ಮಾಡಲಾಗುತ್ತದೆ.

ಪೇ-ಪರ್-ಕ್ಲಿಕ್ ಜಾಹೀರಾತುಗಳು (PPC)[ಬದಲಾಯಿಸಿ]

ಜಾಹೀರಾತುದಾರರು ಅವರ ಜಾಹೀರಾತು ಆರಂಭಿಸುವ ಪದವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲದೇ ಪ್ರತಿ ಕ್ಲಿಕ್ ನ(ಗುಂಡಿ ಒತ್ತಿದಾಗೊಮ್ಮೆ) ರೂಪದಲ್ಲಿ ಗರಿಷ್ಠ ಶುಲ್ಕ ಪಾವತಿಸುತ್ತಾರೆ. ಬಳಕೆದಾರರು ಗೂಗಲ್ ನಲ್ಲಿ ಹುಡುಕಿದಾಗ, ಪ್ರಸಕ್ತ ಪದಗಳ ಜಾಹೀರಾತುಗಳನ್ನು (ಗೂಗಲ್ ನಿಂದ ನಿರ್ಮಿಸಲಾದ ಸೃಷ್ಟಿಗಳೆಂದೂ ಕೂಡ ಕರೆಯಲಾಗುತ್ತದೆ)"ಪ್ರಾಯೋಚಿತ ಕೊಂಡಿ"ಗಳ ರೂಪದಲ್ಲಿ ಸ್ಕ್ರೀನ್ ನ ಬಲಬದಿಯಲ್ಲಿ ನೀಡಲಾಗಿರುತ್ತದೆ. ಅಲ್ಲದೇ ಕೆಲವೊಮ್ಮೆ ಪ್ರಧಾನ ಶೋಧಕ ಫಲಿತಾಂಶಗಳ ಮೇಲ್ಭಾಗದಲ್ಲಿಯೂ ನೀಡಲಾಗಿರುತ್ತದೆ. ಜಾಹೀರಾತುಗಳಿಗೆ ಕ್ಲಿಕ್ ತ್ರೂ ರೇಟ್ ಗಳು (CTR)(ಗುಂಡಿ ಒತ್ತುವ ಮೂಲಕ ದರ) ಕೆಳಕಂಡಂತಿವೆ: ಮೊದಲ ಜಾಹೀರಾತಿಗೆ ಸುಮಾರು 8 ಪ್ರತಿಶತ, ಎರಡನೆಯದಕ್ಕೆ 5 ಪ್ರತಿಶತ ಹಾಗು ಮೂರನೆಯದಕ್ಕೆ 2.5 ಪ್ರತಿಶತ. ಶೋಧಕ ಫಲಿತಾಂಶವು 0 ಯಿಂದ 12 ಜಾಹೀರಾತುಗಳನ್ನು ನೀಡುತ್ತದೆ.[೫]

ಪ್ಯೇಡ್-ಫಾರ್ ಲಿಸ್ಟಿಂಗ್ಸ್ ನ ಕ್ರಮಾನುಗತಿಯು, ಇತರ ಜಾಹೀರಾತುದಾರರ' ಘೋಷಿತ ಬೆಲೆ(PPC) ಮತ್ತು ಶೋಧಿಸಿದಾಗ ತೋರಿಸುವ ಎಲ್ಲಾ ಜಾಹೀರಾತುಗಳ "ಗುಣಮಟ್ಟದ ಅಂಕ"ವನ್ನು ಆವಲಂಬಿಸಿರುತ್ತದೆ. ಗುಣಮಟ್ಟಕ್ಕಾಗಿರುವ ಅಂಕವನ್ನು ದರಗಳು, ಜಾಹೀರಾತುದಾರನ ಪ್ರಚಾರ ಪಠ್ಯ ಮತ್ತು ಮುಖ್ಯ ಪದಗಳ ವಿಶ್ವಸನೀಯತೆ,ಪ್ರಸಕ್ತತೆ, ಜಾಹೀರಾತುದಾರನ ಖಾತೆ ಮಾಹಿತಿ ಹಾಗು ಗೂಗಲ್ ನಿರ್ಧರಿಸಿರುವ ಇತರ ಅಂಶಗಳ ಮೂಲಕ ಗಣಿಸಲಾಗುತ್ತದೆ. ಜಾಹೀರಾತುದಾರನ ಮುಖ್ಯ ಪದಗಳಿಗೆ ಕನಿಷ್ಠ ಬೆಲೆ ನಿಗದಿಪಡಿಸಲು ಗುಣಮಟ್ಟದ ಅಂಕವನ್ನು ಗೂಗಲ್ ಕೂಡ ಬಳಸುತ್ತದೆ.[೬] ಕನಿಷ್ಠ ಬೆಲೆಯನ್ನು ಲ್ಯಾಂಡಿಂಗ್ ಪುಟದ ಗುಣಮಟ್ಟ, ಮತ್ತು ಅದು ಒಳಗೊಳ್ಳುವ ಪ್ರಸಕ್ತತೆ, ವಿಷಯದ ಸೃಜನಶೀಲತೆ, ಸಂಚಾರಯೋಗ್ಯತೆ, ಹಾಗು ವ್ಯಾಪಾರದಲ್ಲಿ ಅದು ಒಳಗೊಂಡಿರುವ ಪಾರದರ್ಶಕತೆಯನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ.[೭] ಗೂಗಲ್, ತಾಣಗಳಿಗಾಗಿ ಎಲ್ಲಾ ಮಾರ್ಗದರ್ಶಿ ಸೂತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದರೂ ಕೂಡ,[೮] ಬೆಲೆಯನ್ನು ನಿರ್ಧರಿಸುವ ನೀತಿ ಮತ್ತು ಪ್ರಸಕ್ತತೆಯ ಅರ್ಥ ಮತ್ತು ಅದರ ವ್ಯಾಖ್ಯಾನ ಗೂಗಲ್ ಗೆ ರಹಸ್ಯವಾಗಿರುವ ಭಾಗದಲ್ಲಿದೆ.ಅಲ್ಲದೇ ಅದನ್ನು ಬಳಸುವ ಮಾನದಂಡಗಳು ಸಕ್ರಿಯವಾಗಿ ಬದಲಾಗುತ್ತಿರುತ್ತವೆ.

ಸಾಮಾನ್ಯೀಕರಿಸಲಾದ ಎರಡನೆಯ-ಬೆಲೆ ಹರಾಜು, ಜಾಹೀರಾತುಗಳ ಕ್ರಮಾನುಗತಿಯನ್ನು ನಿರ್ಧರಿಸುವ ಹರಾಜು ಕಾರ್ಯಾವಿಧಾನವಾಗಿದೆ.[೯][೧೦] ಹರಾಜಿನಲ್ಲಿ ಪಾಲ್ಗೊಳ್ಳುವವರು ಅದರ ವ್ಯವಸ್ಥೆ ಕೇಳುವ ಖಾಸಗಿ,ನಿಖರ ಮಾಹಿತಿಯನ್ನು ಬಹಿರಂಗಪಡಿಸಿದರೆ, ಅವರು ಅತ್ಯುತ್ತಮವಾಗಿ ನಿರ್ವಹಿಸುವ ಅಗತ್ಯವಿರುವುದಿಲ್ಲ , ಎಂಬ ಅಂಶವನ್ನು ಇದು ಹೊಂದಿದೆ.(ಈ ಪ್ರಕರಣದಲ್ಲಿ, ಮುಖ್ಯ ಪದದ,ಆಯಕಟ್ಟಿನ ಮೌಲ್ಯ, "ನಂಬಿಕೆಗೆ ಯೋಗ್ಯ" ಹರಾಜಿನ ರೂಪದಲ್ಲಿರುತ್ತದೆ).

ಆಡ್ ವರ್ಡ್ಸ್ ನ ಗುಣಲಕ್ಷಣಗಳು[ಬದಲಾಯಿಸಿ]

IP ವಿಳಾಸವನ್ನು ಹೊರಗಿಡುವುದು
ಸ್ಥಳ ಮತ್ತು ಭಾಷೆಯನ್ನು ಉದ್ದೇಶಿಸುವ ವಿಧಾನಗಳ ಮೂಲಕ, ಜಾಹೀರಾತು ನಿಯೋಜನೆಯ ನಿಯಂತ್ರಣದ ಜೊತೆಯಲ್ಲಿ, ಜಾಹೀರಾತು ಗುರಿಯನ್ನು ಇಂಟರ್ ನೆಟ್ ಪ್ರೋಟೋಕಾಲ್(IP) (ಅಂತರ್ಜಾಲ ಶಿಷ್ಟಾಚಾರ) ವಿಳಾಸದೊಂದಿಗೆ ಶೋಧಿಸಬಹುದಾಗಿದೆ. ಈ ಗುಣಲಕ್ಷಣಗಳು ಜಾಹೀರಾತುದಾರರಿಗೆ, ಎಲ್ಲಿ ಅವರ ಜಾಹೀರಾತುಗಳು ಕಾಣಿಸಬಾರದೆಂಬುದನ್ನು IP ವಿಳಾಸಗಳ ಮೂಲಕ ನಿರ್ದಿಷ್ಟಗೊಳಿಸಲು ಅವಕಾಶ ನೀಡುತ್ತವೆ.
ಸುಮಾರು 20 IP ವಿಳಾಸಗಳ ವರೆಗೆ ಅಥವಾ ವಿಳಾಸಗಳ ಪರಿಮಿತಿಯ ವರೆಗೂ ಪ್ರತಿ ಕಾರ್ಯಾಚರಣೆಯ ರೂಪದಲ್ಲಿ ಹೊರಹಾಕಬಹುದು. ಕಾರ್ಯಾಚರಣೆಯಲ್ಲಿರುವ ಎಲ್ಲಾ ಜಾಹೀರಾತುಗಳನ್ನು, ನಿರ್ದಿಷ್ಟವಾದ IP ವಿಳಾಸಗಳೊಂದಿಗೆ ಬಳಕೆದಾರರಿಗೆ ಪ್ರದರ್ಶಿಸದಂತೆ ತಡೆಯಲಾಗಿರುತ್ತದೆ.
ಸ್ಥಳ ಆಧಾರಿತ ಬಹಿರಂಗಪಡಿಸುವಿಕೆಯ ಅವಕಾಶವನ್ನು, ಉದ್ದೇಶಿತ ಬಳಕೆದಾರ ಸಂಖ್ಯೆಯನ್ನು ಸಂಕುಚಿತಗೊಳಿಸುವ ವಿಧಾನದಂತೆ ನೀಡಲಾಗಿದೆ.[೧೧]
ಫ್ರೀಕ್ವೆನ್ಸಿ ಕ್ಯಾಪಿಂಗ್ (ಆವರ್ತನ ಆವರಣ)
ಫ್ರೀಕ್ವೆನ್ಸಿ ಕ್ಯಾಪಿಂಗ್, ಗೂಗಲ್ ಪರಿವಿಡಿ ಸಂಪರ್ಕದ ಮೇಲೆ ಒಬ್ಬನೇ ಬಳಕೆದಾರನ ಮುಂದೆ ಜಾಹೀರಾತು ಪದೇ ಪದೇ ಕಾಣಿಸಿಕೊಳ್ಳದಂತೆ ಸೀಮಿತಗೊಳಿಸುತ್ತದೆ. ಇದು ಶೋಧಕ ಸಂಪರ್ಕಕ್ಕೆ ಅನ್ವಯಿಸುವುದಿಲ್ಲ. ಫ್ರೀಕ್ವೆನ್ಸಿ ಕ್ಯಾಪಿಂಗ್ ಅನ್ನು ಕಾರ್ಯಾಚರಣೆಗೆ ತೊಡಗಿಸಿದಲ್ಲಿ, ಒಂದು ದಿನಕ್ಕೆ, ಒಂದು ವಾರಕ್ಕೆ ಅಥವಾ ಮಾಸಿಕದಂತೆ ಒಬ್ಬ ಪ್ರತ್ಯೇಕ ವ್ಯಕ್ತಿಗೆ ಅವಕಾಶ ನೀಡುವ, ಅಭಿವ್ಯಕ್ತಿಗಳ ಸಂಖ್ಯೆಯಷ್ಟು ಪರಿಮಿತಿಯನ್ನು ನಿರ್ದಿಷ್ಠಗೊಳಿಸಬೇಕು. ಕ್ಯಾಪ್ ಅನ್ನು ಪ್ರತಿ ಜಾಹೀರಾತಿಗೆ, ಜಾಹೀರಾತು ಗುಂಪಿಗೆ ಅಥವಾ ಕಾರ್ಯಾಚರಣೆಗೆ ಅನ್ವಯಿಸುವಂತೆ ವಿನ್ಯಾಸಗೊಳಿಸಬಹುದು.[೧೨]

ನಿಯೋಜನೆ(ಪ್ಲೇಸ್ ಮೆಂಟ್) ಉದ್ದೇಶಿತ ಜಾಹೀರಾತುಗಳು (ಹಿಂದೆ ತಾಣ-ಉದ್ದೇಶಿತ ಜಾಹೀರಾತುಗಳು)[ಬದಲಾಯಿಸಿ]

ಗೂಗಲ್ 2003ರಲ್ಲಿ, ತಾಣ-ಉದ್ದೇಶಿತ ಜಾಹೀರಾತನ್ನು ಪರಿಚಯಿಸಿತು. ಆಡ್ ವರ್ಡ್ಸ್ ನ ಕಂಟ್ರೋಲ್ ಪ್ಯಾನಲ್ ಅನ್ನು ಬಳಸಿಕೊಂಡು, ಜಾಹೀರಾತುದಾರರು ಮುಖ್ಯ ಪದಗಳನ್ನು, ಬಳಕೆಯ ಹೆಸರುಗಳನ್ನು, ವಿಷಯಗಳನ್ನು, ಅಧಿಕ ಜನರ ಪ್ರಾಶಸ್ತ್ಯಗಳನ್ನು ದಾಖಲಿಸಬಹುದು. ಅಲ್ಲದೇ ಅವರ ಮಾಹಿತಿ ಸಂಪರ್ಕದೊಳಗೆ ಅವರು ವೀಕ್ಷಿಸುವ ಪ್ರಸಕ್ತ ತಾಣಗಳ ಮೇಲಿರುವ ಜಾಹೀರಾತುಗಳನ್ನು, ಗೂಗಲ್ ಸ್ಥಳಗಳನ್ನು ಕೂಡ ದಾಖಲಿಸಬಹುದು. ಕಾರ್ಯಕ್ಷೇತ್ರದ ಹೆಸರುಗಳನ್ನು ಉದ್ದೇಶಿಸಿರಲಾಗಿದ್ದರೆ, ನಿಯೋಜನೆಗಾಗಿ ಸಂಬಂಧಿತ ತಾಣಗಳ ಪಟ್ಟಿಯನ್ನು ಕೂಡ ಗೂಗಲ್ ಒದಗಿಸುತ್ತದೆ. ಜಾಹೀರಾತುದಾರ ತಾಣವನ್ನು ಉದ್ದೇಶಿಸಲು, ಕಾಸ್ಟ್ ಪರ್ ಇಂಪ್ರೆಷನ್ (CPM) ಅಥವಾ ಕಾಸ್ಟ್ ಪರ್ ಕ್ಲಿಕ್ (CPC) ನ ಆಧಾರದ ಮೇಲೆ ಹರಾಜನ್ನು ಗುರಿಯಾಗಿಸಬಹುದು.[೧೩]

ನಿಯೋಜನೆ ಉದ್ದೇಶಿಸುವುದರೊಂದಿಗೆ ಒಂದು ಜಾಹೀರಾತು, ಜಾಹೀರಾತು ವಿಭಾಗವನ್ನು 2 ರಿಂದ 4 ಭಾಗಗಳಾಗಿ ಒಡೆಯುವ ಬದಲು, ಸಂಪೂರ್ಣ ವಿಭಾಗವನ್ನೇ ಅಳವಡಿಸಿಕೊಳ್ಳಬಲ್ಲದು. ಇದರಿಂದಾಗಿ ಜಾಹೀರಾತುದಾರರಿಗೆ ಅಧಿಕ ಗೋಚರತೆ ಲಭ್ಯವಾಗುತ್ತದೆ.

ನಿಯೋಜನೆ ಉದ್ದೇಶಿತ ಕಾರ್ಯಾಚರಣೆಗಳಿಗಾಗಿ ಪ್ರತಿ ಸಾವಿರ ಆವೃತ್ತಿಗಳಿಗೆ ಕನಿಷ್ಠ 25 ಸೆಂಟ್ ಗಳಂತೆ ಹರಾಜು ಕೂಗಲಾಗುತ್ತದೆ. ಅದೇನೇ ಆದರೂ ಇಲ್ಲಿ ಕನಿಷ್ಠ CPC ಘೋಷಿತ ಬೆಲೆ ಇರುತ್ತದೆ.

ಆಡ್ ವರ್ಡ್ಸ್ ವಿತರಣೆ[ಬದಲಾಯಿಸಿ]

ಆಡ್ ವರ್ಡ್ಸ್ ನ ಎಲ್ಲಾ ಜಾಹೀರಾತುಗಳು www.google.com ನಲ್ಲಿ ಪ್ರದರ್ಶಿಸಲು ಅರ್ಹವಾಗಿರುತ್ತವೆ. ಜಾಹೀರಾತುದಾರರು ತಮ್ಮ ಜಾಹೀರಾತುಗಳನ್ನು, ಗೂಗಲ್ ನ ಪಾಲುದಾರರ ಸಂಪರ್ಕಗಳಲ್ಲಿ ಪ್ರದರ್ಶಿಸುವ ಅವಕಾಶ ಹೊಂದಿರುತ್ತಾರೆ. "ಶೋಧಕ ಸಂಪರ್ಕ", AOL ಶೋಧಕ, Ask.com,ಮತ್ತು ನೆಟ್ ಸ್ಕೇಪ್ ಗಳನ್ನು ಒಳಗೊಂಡಿರುತ್ತದೆ. www.google.com ನಂತೆ ಈ ಶೋಧಕ ಎಂಜಿನ್ ಗಳು ಕೂಡ, ಬಳಕೆದಾರರು ಶೋಧಿಸಿದಾಗ ಅದಕ್ಕೆ ಪ್ರತಿಕ್ರಿಯಿಸುವಂತೆ ಆಡ್ ವರ್ಡ್ಸ್ ನ ಜಾಹೀರಾತುಗಳನ್ನು ತೋರಿಸುತ್ತವಲ್ಲದೇ, ಗುಣಮಟ್ಟದ ಅಂಕದ ಮೇಲೆ ಪರಿಣಾಮ ಬೀರುವುದಿಲ್ಲ.

"ಗೂಗಲ್ ಪ್ರದರ್ಶನ ಸಂಪರ್ಕ" (ಹಿಂದೆ ಇದನ್ನು "ಪರಿವಿಡಿ ಸಂಪರ್ಕ" ಎಂದು ಸೂಚಿಸಲಾಗುತ್ತಿತ್ತು), ಆಡ್ ವರ್ಡ್ಸ್ ನ ಜಾಹೀರಾತುಗಳನ್ನು ಶೋಧಕ ಎಂಜಿನ್ ಗಳಲ್ಲದ ತಾಣಗಳಲ್ಲಿಯೂ ಕೂಡ ಪ್ರದರ್ಶಿಸುತ್ತದೆ. ಈ ಅಂಶಿಕ ಮಾಹಿತಿ ಸಂಪರ್ಕ ತಾಣಗಳು, ಗೂಗಲ್ ಜಾಹೀರಾತು ಮಾದರಿಗಳ ಮತ್ತೊಂದು ಭಾಗದಲ್ಲಿರುವ, ಆಡ್ ಸೆನ್ಸ್ ಮತ್ತು ಡಬಲ್ ಕ್ಲಿಕ್ ಅನ್ನು ಬಳಸುವ ತಾಣಗಳಾಗಿವೆ. ತಮ್ಮ ವೆಬ್ ತಾಣಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಿ ಆದಾಯ ಬಯಸುವ ವೆಬ್ ತಾಣಗಳ ಮಾಲೀಕರು ಆಡ್ ಸೆನ್ಸ್ ಅನ್ನು ಬಳಸುತ್ತಾರೆ. ಪ್ರದರ್ಶನ ಸಂಪರ್ಕದ ಮೇಲೆ ದರಗಳ ಮೂಲಕ ಕ್ಲಿಕ್, ಸಾಮಾನ್ಯವಾಗಿ ಶೋಧಕ ಸಂಪರ್ಕದಲ್ಲಿರುವುದಕ್ಕಿಂತ ಕಡಿಮೆ ಇರುತ್ತದೆ. ಇದರಿಂದಾಗಿ ಜಾಹೀರಾತುದಾರನ ಗುಣಮಟ್ಟದ ಅಂಕಗಳನ್ನು ಗಣಿಸುವಾಗ ಇವುಗಳನ್ನು ಪರಿಗಣಿಸುವುದಿಲ್ಲ. ಒಂದು ವೆಬ್ ತಾಣ, ಸ್ವತಃ ಜಾಹೀರಾತುಗಳನ್ನು ಪ್ರದರ್ಶಿಸುತ್ತಿದ್ದು, ಆಡ್ ಸೆನ್ಸ್ ಮತ್ತು ಆಡ್ ವರ್ಡ್ಸ್ ಎರಡನ್ನೂ ಬಳಸಿದಲ್ಲಿ, ಆಗ ಅದು ಗೂಗಲ್ ಗೆ ಕಮಿಷನ್ ನ್ನು ಪಾವತಿಸಬೇಕಾಗುತ್ತದೆ ಎಂದು ವರದಿಮಾಡಲಾಗಿದೆ.[೧೪]

ಗೂಗಲ್ ಅಪ್ರಯತ್ನಪೂರ್ವಕವಾಗಿಯೇ ಪುಟಗಳ ವಿಷಯವನ್ನು ನಿರ್ಧರಿಸುತ್ತದೆ. ಅಲ್ಲದೇ ಜಾಹೀರಾತುದಾರರ ಪ್ರಮುಖ ಪದಗಳ ಪಟ್ಟಿಗಳನ್ನು ಆಧರಿಸಿ ಪ್ರಸಕ್ತ ಜಾಹೀರಾತುಗಳನ್ನು ಪ್ರದರ್ಶಿಸುತ್ತದೆ. ಆಡ್ ಸೆನ್ಸ್ ನ ಪ್ರಕಾಶಕರು,ಅವರ ಪುಟಗಳಲ್ಲಿ ಗೂಗಲ್ ನ ಜಾಹೀರಾತುಗಳನ್ನು ಎಲ್ಲಿ ನಿಯೋಜಿಸಬೇಕೆಂಬುದನ್ನು ನಿರ್ದೇಶಿಸುವಲ್ಲಿ, ಸಹಾಯ ಮಾಡಲು ಚಾನಲ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ಅವರ ಜಾಹೀರಾತು ಘಟಕಗಳ ಕಾರ್ಯ ಹೆಚ್ಚಿಸಲು ಮಾಡಲಾಗುತ್ತದೆ. ಪಠ್ಯ ಜಾಹೀರಾತುಗಳು, ಚಿತ್ರ ಜಾಹೀರಾತುಗಳು(ಬ್ಯಾನರ್ ಜಾಹೀರಾತುಗಳು), ಮೊಬೈಲ್ ಪಠ್ಯ ಜಾಹೀರಾತುಗಳು ಮತ್ತು ಭಿತ್ತಿ ಚಿತ್ರದ ಪುಟಗಳೊಳಗಿರುವ ವಿಡಿಯೋ ಜಾಹೀರಾತುಗಳನ್ನು ಒಳಗೊಂಡಂತೆ ಅನೇಕ ವಿಭಿನ್ನ ರೀತಿಯ ಜಾಹೀರಾತುಗಳು ಗೂಗಲ್ ನ ಸಂಪರ್ಕದುದ್ದಕ್ಕೂ ಪ್ರದರ್ಶನವಾಗಬಲ್ಲವು.

ಗೂಗಲ್ ಆಡ್ ವರ್ಡ್ಸ್ ನ ಪ್ರಮುಖ ಪ್ರತಿಸ್ಪರ್ಧಿಗಳೆಂದರೆ : ಯಾಹೂ! ಸರ್ಚ್ ಮಾರ್ಕೆಟ್ಟಿಂಗ್ ಮತ್ತು ಮೈಕ್ರೋಸಾಫ್ಟ್ ಆಡ್ ಸೆಂಟರ್.

ಆಡ್ ವರ್ಡ್ಸ್ ನ ಲೆಕ್ಕ ನಿರ್ವಹಣೆ[ಬದಲಾಯಿಸಿ]

ಆಡ್ ವರ್ಡ್ಸ್ ಲೆಕ್ಕದ ರಚನೆ,ನಿರ್ಮಾಣ ಮತ್ತು ನಿರ್ವಹಣೆ (ವೆಚ್ಚ)ಸಂಕೀರ್ಣತೆ ಕುರಿತು ಗ್ರಾಹಕರಿಗೆ ನೆರವಾಗಲು, ಸರ್ಚ್ ಎಂಜಿನ್ ಮಾರ್ಕೆಟಿಂಗ್ ಪ್ರತಿನಿಧಿಗಳು ಮತ್ತು ಸಲಹಾರ್ಥಿಗಳು, ವ್ಯಾಪಾರದ ಸೇವೆಯ ರೂಪದಲ್ಲಿ ಲೆಕ್ಕ ನಿರ್ವಹಣೆಯ ಅವಕಾಶ ನೀಡುತ್ತಾರೆ. ಇದರಿಂದಾಗಿ ಸಂಸ್ಥೆಗಳು ಜಾಹೀರಾತು ಅನುಭವ ಇಲ್ಲದೆಯೇ ಜಾಗತಿಕ ಆನ್ ಲೈನ್ ಪ್ರೇಕ್ಷಕರನ್ನು ತಲುಪುವಂತಾಯಿತು. ಗೂಗಲ್, ನಿರ್ದಿಷ್ಟ ಅರ್ಹತೆ ಪಡೆದು, ಪರೀಕ್ಷೆಗಳಲ್ಲಿ ತೇರ್ಗಡೆಯಾದ ನಿಯೋಗಗಳಿಗೆ ಮತ್ತು ಸಲಹಾರ್ಥಿಗಳನ್ನು ಪ್ರಮಾಣೀಕರಿಸಲು ಗೂಗಲ್ ಜಾಹೀರಾತು ವೃತ್ತಿಪರ ಕಾರ್ಯಕ್ರಮವನ್ನು ಆರಂಭಿಸಿತು.[೧೫] ಆಡ್ ವರ್ಡ್ಸ್ ಎಡಿಟರ್ ಎಂದು ಕರೆಯಲಾಗುವ ಲೆಕ್ಕ ನಿರ್ವಹಣಾ ಸಾಫ್ಟ್ ವೇರ್ ಅನ್ನು ಕೂಡ ಗೂಗಲ್ ಒದಗಿಸಿದೆ.

ಗೂಗಲ್ ವೃತ್ತಿಪರರಿಗೆ ಇರುವ, ಮೈ ಕ್ಲೈಂಟ್ ಸೆಂಟರ್,ನನ್ನ ಗ್ರಾಹಕ ಕೇಂದ್ರವು ಕೂಡ ಮತ್ತೊಂದು ಉಪಯೋಗಕರ ಗುಣಲಕ್ಷಣವಾಗಿದೆ. (ಪರೀಕ್ಷೆಯಲ್ಲಿ ಅಥವಾ ಆಯವ್ಯಯ ಮಾನದಂಡದಲ್ಲಿ ತೇರ್ಗಡೆಯಾಗದಿದ್ದರೂ). ಈ ಕೇಂದ್ರದ ಮೂಲಕ ಗೂಗಲ್ ನ ವೃತ್ತಿಪರರು ಅನೇಕ ಲೆಕ್ಕಗಳ ಗಣತಿ ಮಾಹಿತಿ ಪಡೆಯಬಹುದು. ಅಲ್ಲದೇ ಪರಸ್ಪರ ಲಾಗಿನ್ ಆಗದೆಯೇ ಈ ಲೆಕ್ಕಗಳ ಮಾಹಿತಿಯನ್ನೂ ನೋಡಬಹುದಾಗಿದೆ.

ಗೂಗಲ್ ಆಡ್ ವರ್ಡ್ಸ್ ನ ಮುಖ್ಯ ಪದಗಳ ಸಾಧನ(ಟೂಲ್), ನಿರ್ದಿಷ್ಟವಾದ ವೆಬ್ ತಾಣಗಳಿಗೆ ಅಥವಾ ಮುಖ್ಯ ಪದಕ್ಕೆ ಸಂಬಂಧಿಸಿದ ಮುಖ್ಯ ಪದಗಳ ಪಟ್ಟಿ ಒದಗಿಸುತ್ತದೆ.[೧೬]

ಕ್ಲಿಕ್-ಟು-ಕಾಲ್[ಬದಲಾಯಿಸಿ]

ಗೂಗಲ್ ಕ್ಲಿಕ್-ಟು-ಕಾಲ್ ಎಂಬುದು ಗೂಗಲ್ ಒದಗಿಸುವ ಸೇವೆಯಾಗಿದ್ದು, ಇದು ಗೂಗಲ್ ಶೋಧಕ ಫಲಿತಾಂಶ ಪುಟಗಳಿಂದ ಬಳಕೆದಾರರು ಜಾಹೀರಾತುದಾರರಿಗೆ ಕರೆ ಮಾಡುವ ಅವಕಾಶ ಕಲ್ಪಿಸಿಕೊಡುತ್ತದೆ. ಬಳಕೆದಾರರು ಅವರ ಫೋನ್ ನಂಬರ್ ಗಳನ್ನು ದಾಖಲಿಸುತ್ತಾರೆ, ಅನಂತರ ಗೂಗಲ್ ಅವರಿಗೆ ಕರೆ ಮಾಡಿ ಜಾಹೀರಾತುದಾರರೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಕರೆಗೆ ತಗುಲುವ ವೆಚ್ಚವನ್ನು ಗೂಗಲ್ ಪಾವತಿಸುತ್ತದೆ. ಈ ಸೇವೆಯನ್ನು 2007ರಲ್ಲಿ ಸ್ಥಗಿತಗೊಳಿಸಲಾಯಿತು.[೧೭] ಕೆಲವು ಕಾಲದ ವರೆಗೆ ಕ್ಲಿಕ್-ಟು-ಕಾಲ್ ಕಾರ್ಯಾಚರಣೆಯಂತಹದ್ದೇ, ಒಂದು ಸೇವೆ ಗೂಗಲ್ ಭೂಪಟಗಳ(ಗೂಗಲ್ ಮ್ಯಾಪ್ಸ್) ಫಲಿತಾಂಶಗಳಲ್ಲಿ ದೊರಕುತ್ತಿತ್ತು. ಗೂಗಲ್' ನ ಆಂಡ್ರಿಯ್ಡ್ ಯಂತ್ರಮಾನವ ಕಾರ್ಯಾಚರಣೆ ವ್ಯವಸ್ಥೆಯ (ಪ್ರಾಥಮಿಕ ಮಾಹಿತಿ)ಫ್ರೊಯೊ ಬಿಡುಗಡೆಯಲ್ಲಿ ಇದೇ ರೀತಿಯ ಕಾರ್ಯಾಚರಣೆ ಇದೆಯಲ್ಲದೇ, ಈ ಮೂಲಕ ಬಳಕೆದಾರ ಸುಲಭವಾಗಿ ಜಾಹೀರಾತುದಾರನಿಗೆ ಕರೆ ಮಾಡಬಹುದಾಗಿದೆ.

ಇತಿಹಾಸ[ಬದಲಾಯಿಸಿ]

ಮೂಲತಃ ಐಡಿಯಲ್ ಲ್ಯಾಬ್ ನಿಂದ ಬಿಲ್ ಕ್ರಾಸ್ಎಂಬುವವರು ಮೊದಲ ಬಾರಿಗೆ ಈ ವಿಚಾರ ಮಂಡಿಸಿದರು. ಇದನ್ನು ಇವರು ಯೆಲ್ಲೋ ಪೇಜಸ್ ಗಳಿಂದ ಎರವಲು ಪಡೆದಿದ್ದರು. ಗೂಗಲ್ ಈ ಯೋಜನಾ ಸರಣಿಯನ್ನು ಕೊಂಡುಕೊಳ್ಳಬಯಸಿತು, ಆದರೆ ವ್ಯಾಪಾರ ಕುದುರಲಿಲ್ಲ.[ಸೂಕ್ತ ಉಲ್ಲೇಖನ ಬೇಕು] ಈ ರೀತಿಯ ಜಾಹೀರಾತನ್ನು ಬಿಡಲು ಮನಸ್ಸಾಗದೇ, ಕಂಪನಿ ಅಂತಿಮವಾಗಿ ಅದರದೇ ಆದ ಪರಿಹಾರ ಕಂಡುಕೊಳ್ಳುವ ಮೂಲಕ ಆಡ್ ವರ್ಡ್ಸ್ ಅನ್ನು 2000 ರಲ್ಲಿ ಆರಂಭಿಸಿತು.[೧೮] ಆಡ್ ವರ್ಡ್ಸ್, ಬಿಲ್ ಕ್ರಾಸ್ ಸೃಷ್ಟಿಸಿದ ಮಾದರಿಗೆ ಹತ್ತಿರವಾಗಿರುವುದನ್ನೇ ಅನುಸರಿಸಿತು. ಇದರಿಂದಾಗಿ ಎರಡರ ನಡುವಿನ ಈ ಕದನಕ್ಕೆ ಕಾನೂನು ಕ್ರಮ ಜರುಗಿಸಲಾಯಿತು. ಅಂತಿಮವಾಗಿ ಈ ವಿವಾದವನ್ನು ನ್ಯಾಯಾಲಯದ ಹೊರಗೆ ತೀರ್ಮಾನಿಸಿ ಬಗೆಹರಿಸಿಕೊಳ್ಳಲಾಯಿತು.[ಸೂಕ್ತ ಉಲ್ಲೇಖನ ಬೇಕು]

ಮೊದಲಿಗೆ ಆಡ್ ವರ್ಡ್ಸ್ ಜಾಹೀರಾತುದಾರರು ಮಾಸಿಕ ಶುಲ್ಕದ ಹಣ ಪಾವತಿಸಬೇಕು. ಅನಂತರ ಗೂಗಲ್ ತನ್ನ ಕಾರ್ಯಾಚರಣೆ ಆರಂಭಿಸಿ, ನಿರ್ವಹಿಸುತ್ತದೆ. ಸಣ್ಣ ವ್ಯವಹಾರಗಳ ಸ್ಥಳಾವಕಾಶಕ್ಕೆ ಮತ್ತು ಆ ಕಾರ್ಯಾಚರಣೆಯನ್ನು ಸ್ವತಃ ನಿರ್ವಹಿಸಲು ಬಯಸುವವರಿಗೆ, ಗೂಗಲ್ ಶೀಘ್ರದಲ್ಲೆ ಆಡ್ ವರ್ಡ್ಸ್ ಸೆಲ್ಫ್ ಸರ್ವೀಸ್ ಪೋರ್ಟಲ್ ಅನ್ನು ಪರಿಚಯಿಸಿತು. ಇದನ್ನು 2005ರಲ್ಲಿ ಆರಂಭಿಸಿ ಗೂಗಲ್, ಜಾಹೀರಾತುದಾರರ ಕಾರ್ಯಾಚರಣೆಯನ್ನು ವ್ಯವಸ್ಥಾಪಿಸುವಲ್ಲಿ ಅವರಿಗೆ ಸಹಾಯ ಮಾಡಲು, ಜಂಪ್ ಸ್ಟಾರ್ಟ್[೧೯] ಎಂದು ಕರೆಯುವ ಕಾರ್ಯಾಚರಣೆ ನಿರ್ವಹಣಾ ಸೇವೆ ಒದಗಿಸಿತು. ಅದೇನೇ ಆದರೂ, ಈ ಸೇವೆ ದೀರ್ಘಕಾಲದ ವರೆಗೆ ಇರಲಿಲ್ಲ, ಇದರಿಂದಾಗಿ ಕಂಪನಿಗಳಿಗೆ ಸಹಾಯಕರುಗಳ ಅಗತ್ಯಬಿದ್ದು, ತೃತೀಯರಾಗಿ ಸೇವೆ ಒದಗಿಸುವವರನ್ನು ನೇಮಿಸಬೇಕಾಯಿತು.

ಗೂಗಲ್ ಅಡ್ವರ್ಟೈಸಿಂಗ್ ಪ್ರೋಫೇಷನಲ್ (GAP) (ಗೂಗಲ್ ಜಾಹೀರಾತು,ಗೂಗಲ್ ವೃತ್ತಿಪರ ಕಾರ್ಯಕ್ರಮ) ಎಂಬುದನ್ನು 2005ರಲ್ಲಿ, ಗೂಗಲ್ ಆರಂಭಿಸಿತು. ಈ ಯೋಜನೆಯು ಆಡ್ ವರ್ಡ್ಸ್ ನ ತರಬೇತಿ ಮುಗಿಸಿ, ಪರೀಕ್ಷೆ ತೇರ್ಗಡೆಯಾದವರನ್ನು ಪ್ರಮಾಣೀಕರಿಸಲು ಪ್ರಾರಂಭಿಸಲಾಯಿತು. ಆಡ್ ವರ್ಡ್ಸ್ ನ ಸಂಕೀರ್ಣತೆ ಮತ್ತು ಹೂಡಿದ ಹಣದಿಂದಾಗಿ, ಕೆಲವು ಜಾಹೀರಾತುದಾರರು ಅವರ ಕಾರ್ಯಾಚರಣೆ ನೋಡಿಕೊಳ್ಳಲು ಸಲಹಾರ್ಥಿಯನ್ನು ನೇಮಿಸಿಕೊಳ್ಳುತ್ತಾರೆ.

ಗೂಗಲ್ ಆನ್ ಲೈನ್ ಮಾರ್ಕೆಟ್ಟಿಂಗ್ ಚಾಲೆಂಜ್ (http://www.google.com/onlinechallenge/) ಅನ್ನು 2008ರಲ್ಲಿ ಗೂಗಲ್, ಆರಂಭಿಸಿತು, ಇದು ತೃತೀಯ ಶ್ರೇಣಿಯ ವಿದ್ಯಾರ್ಥಿಗಳಿಗಾಗಿರುವ ತರಗತಿಯೊಳಗಿನ ಶೈಕ್ಷಣಿಕ ಅಭ್ಯಾಸವಾಗಿದೆ. ಈ 2008 ರ ಚಾಲೆಂಜ್ ಕಾರ್ಯಕ್ರಮದಲ್ಲಿ 47 ರಾಷ್ಟ್ರಗಳಿಂದ ಸುಮಾರು 8,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೇ 2009 ರಲ್ಲಿ 58 ರಾಷ್ಟ್ರಗಳಿಂದ ಸುಮಾರು 10,000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಚಾಲೆಂಜ್ ಕಾರ್ಯಕ್ರವವನ್ನು ಸಾಮಾನ್ಯವಾಗಿ ವಾರ್ಷಿಕ ಜನವರಿಯಿಂದ ಜೂನ್ ನ ವರೆಗೆ ಮಾಡಲಾಗುತ್ತದೆ. Registration Archived 2014-08-20 ವೇಬ್ಯಾಕ್ ಮೆಷಿನ್ ನಲ್ಲಿ. ಇದು ವಿದ್ಯಾರ್ಥಿಗಿಂತ ಭೋಧಕರ ಮಟ್ಟದಲ್ಲಿರುತ್ತದೆ.

ಗೂಗಲ್ ಭೂಪಟಗಳಿಗೆ ಮತ್ತು ವಿಡಿಯೋ ಜಾಹೀರಾತುಗಳಿಗೆ, ಸ್ಥಳೀಯ ವ್ಯವಹಾರ ಜಾಹೀರಾತುಗಳನ್ನು ಪರಿಚಯಿಸುವ ಮೂಲಕ, ಗೂಗಲ್ ಇಂಟರ್ ಫೇಸ್ ಅನ್ನು 2009 ರಲ್ಲಿ ಪರಿಷ್ಕರಿಸಿತು.

ಕಾನೂನು ಸಂದರ್ಭ[ಬದಲಾಯಿಸಿ]

ಆಡ್ ವರ್ಡ್ಸ್, ಟ್ರೇಡ್ ಮಾರ್ಕ್ ಲಾ (ವ್ಯಾಪಾರ ಮುದ್ರೆ ಕಾನೂನು) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ವ್ಯಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿತ್ತು.( ಗೂಗಲ್, Inc. v. Am. ಬ್ಲೈಂಡ್ ಅಂಡ್ ವಾಲ್ ಪೇಪರ್ ಫ್ಯಾಕ್ಟರಿ ಮತ್ತು ರೆಸ್ ಕ್ಯೂ ಕಾರ್ಪ್. v. ಗೂಗಲ್ Inc. ಅನ್ನು ನೋಡಿ), ಮೋಸ ( ಗಾಡರ್ಡ್ v. ಗೂಗಲ್, Inc. ಅನ್ನು ನೋಡಿ), ಮತ್ತು ಕ್ಲಿಕ್ ಫ್ರಾಡ್. ಗೂಗಲ್ US$90 ಮಿಲಿಯನ್ ಗೆ ಕ್ಲಿಕ್ ಫ್ರಾಡ್ ವ್ಯಾಜ್ಯವನ್ನು 2006ರಲ್ಲಿ ತೀರ್ಮಾನಿಸಿಕೊಂಡಿತು.[೨೦]

ಆಡ್ ವರ್ಡ್ಸ್ ಸೇವೆಗೆ ಸಂಬಂಧಿಸಿದಂತೆ ಓವರ್ ಟ್ರು ಸರ್ವೀಸಸ್, Inc. ಗೂಗಲ್ ನ ಮೇಲೆ ಪೇಟೆಂಟ್ ಕಾನೂನು ಉಲ್ಲಂಘನೆ ಮೊಕದ್ದಮೆಯನ್ನು 2002 ರ ಏಪ್ರಿಲ್ ನಲ್ಲಿ ಹೂಡಿತ್ತು. ಯಾಹೂ!'ಓವರ್ ಟ್ರೂ ಸರ್ವೀಸಸ್ ಅನ್ನು ತೆಗೆದುಕೊಂಡ ನಂತರ ಈ ವ್ಯಾಜ್ಯವನ್ನು 2004 ರಲ್ಲಿ ತೀರ್ಮಾನ ಮಾಡಿಕೊಂಡಿತು. ಈ ತೀರ್ಮಾನದ ಪ್ರಕಾರ ಮಾಲೀಕತ್ವದಡಿ ಶಾಶ್ವತ ಪರವಾನಗಿ ಪಡೆಯಲು, ಗೂಗಲ್ ಯಾಹೂ! ಗೆ ಸಾಮಾನ್ಯ ಪಾಲುದಾರಿಕೆಯ ಸ್ಟಾಕ್ ಗಳ 2.7 ಮಿಲಿಯನ್ ಶೇರ್ ಗಳನ್ನು ಕೊಡಲು ಒಪ್ಪಿಕೊಂಡಿತು.[೨೧]

ತಂತ್ರಜ್ಞಾನ[ಬದಲಾಯಿಸಿ]

ಆಡ್ ವರ್ಡ್ಸ್ ವ್ಯವಸ್ಥೆಯನ್ನು ಆರಂಭದಲ್ಲಿ MySQL ಡೇಟಾ ಬೇಸ್ ಎಂಜಿನ್ ನ ಮೇಲೆ ಜಾರಿಗೆ ತರಲಾಯಿತು. ಈ ವ್ಯವಸ್ಥೆಯನ್ನು ಆರಂಭಿಸಿದ ನಂತರ ಆಡಳಿತ ವ್ಯವಸ್ಥೆಯು ಅದರ ಬದಲಿಗೆ ಒರೆಕಲ್ ಅನ್ನು ಬಳಸಲು ನಿರ್ಧರಿಸಿತು. ಆದರೆ ವ್ಯವಸ್ಥೆಯು ತುಂಬ ನಿಧಾನವಾದ ಕಾರಣ,ಅಂತಿಮವಾಗಿ ಇದನ್ನು MySQL [೨] ನಲ್ಲೇ ಮತ್ತೆ ಜಾರಿಗೆ ತರಲಾಯಿತು. ಸ್ಪ್ರೆಡ್ ಷೀಟ್ ನ ಸಂಪಾದನೆ, ಶೋಧಿಸಿದ ಪ್ರಶ್ನೆಯ ವರದಿ ಮತ್ತು ಉತ್ತಮ ಪರಿವರ್ತನಾ ಮೆಟ್ರಿಕ್ ಗಳಂತಹ ಹೆಚ್ಚು ಹೊಸ ಗುಣಲಕ್ಷಣಗಳೊಂದಿಗೆ ಉತ್ತಮ ಕಾರ್ಯ ನಿರ್ವಹಿಸಲು ಇಂಟರ್ ಫೇಸ್ ನ್ನೂ ಕೂಡ ಪರಿಷ್ಕರಿಸಲಾಯಿತು.

ಜಾಹೀರಾತು ಅಂಶಗಳ ವಿಷಯ ನಿರ್ಬಂಧನೆಗಳು[ಬದಲಾಯಿಸಿ]

URL ಹೊಂದಿರುವ ಉದ್ದೇಶದಿಂದ ಅದನ್ನು ಬೇರೆ ಕಡೆಗೆ ತಿರುಗಿಸಲು 2008 ರ ಏಪ್ರಿಲ್ ನ ಹೊತ್ತಿಗೆ, ಗೂಗಲ್ ಆಡ್ ವರ್ಡ್ಸ್, ದೀರ್ಘಕಾಲದ URL ಅನ್ನು ಪ್ರದರ್ಶಿಸಲು ಅವಕಾಶ ನೀಡಲಿಲ್ಲ. ಗೂಗಲ್ ಪಾವತಿಸಿದ ಜಾಹೀರಾತುಗಳು, ಶೋಧಕ ಸಂಪರ್ಕದಲ್ಲಿ ಯಾವುದನ್ನು ಪ್ರದರ್ಶಿಸಬೇಕೆಂಬ ವಿಭಿನ್ನ ಲ್ಯಾಂಡಿಂಗ್ ಪುಟ URL ಗಳನ್ನು ಹೊಂದಿರುತ್ತವೆ. ಗೂಗಲ್, ಬಳಕೆದಾರರು ಮತ್ತು ಜಾಹೀರಾತುದಾರರು ನೀಡುವ ಪ್ರತಿಕ್ರಿಯೆ ಆಧರಿಸಿ ಬಳಕೆ ಪದಗಳ ನಿಯಮ ಬದಲಾಯಿಸಲಾಗುವುದೆಂದು ತಿಳಿಸುತ್ತದೆ. ನಿರ್ಬಂಧನೆಯ ಬದಲಾವಣೆ ಉಂಟು ಮಾಡುವ ಕಾಳಜಿಯನ್ನು, ಬಳಕೆದಾರರು ಕ್ಲಿಕ್ ಮಾಡಿದ ಜಾಹೀರಾತುಗಳ ಸ್ವತ್ತು ಎಂದು ನಂಬಲಾಗಿದೆ. ಕೆಲವು ಸಂದರ್ಭಗಳಲ್ಲಿ ಬಳಕೆದಾರರು ದಾರಿ ತಪ್ಪಬಹುದು, ಹಾಗು ಮುಂದೆ ಆಡ್ ವರ್ಡ್ಸ್ ನ ಜಾಹೀರಾತುದಾರರಿಂದ ಉದ್ದೇಶಿಸಲ್ಪಡಬಹುದು.[೨೨]

ಗೂಗಲ್ ಆಡ್ ವರ್ಡ್ಸ್, ಹಾರ್ಡ್ ಆಲ್ಕಹಾಲ್(ಆಲ್ಕಹಾಲ್ ನ ಅಂಶ ಹೆಚ್ಚಿರುವ) ನ ಮಾರಾಟದ ಮೇಲೆ ವಿಧಿಸಿದ ನಿರ್ಬಂಧನೆಗಳನ್ನು 2010 ರ ಡಿಸೆಂಬರ್ ನ ಹೊತ್ತಿಗೆ ಕಡಿಮೆ ಮಾಡಿತು.[೨೩] ಇದು ಹಾರ್ಡ್ ಆಲ್ಕಹಾಲ್ ಮತ್ತು ಲಿಕರ್ ಗಳ ಮಾರಾಟ ಪ್ರೋತ್ಸಾಹಿಸುವ ಜಾಹೀರಾತುಗಳಿಗೆ ಅವಕಾಶ ನೀಡಿತು. ಇದು 2008 ರ ಡಿಸೆಂಬರ್ ನಲ್ಲಿ ಮಾಡಲಾದ ನಿಯಮ ಬದಲಾವಣೆಯ ವಿಸ್ತರಣೆಯಾಗಿದೆ. ಇದು ಹಾರ್ಡ್ ಆಲ್ಕಹಾಲ್ ಮತ್ತು ಲಿಕರ್ ಗಳ ಬ್ರಾಂಡ್ (ಗುರುತು)ಗಳನ್ನು ಪ್ರೋತ್ಸಾಹಿಸುವ ಜಾಹೀರಾತುಗಳಿಗೆ ಅವಕಾಶ ನೀಡಿತು.

ಅಂಗೀಕೃತ ಮುಖ್ಯ ಪದಗಳು[ಬದಲಾಯಿಸಿ]

ಟ್ರೇಡ್ ಮಾರ್ಕ್ ಇರುವ ಪ್ರಮುಖ ಪದಗಳ ಮೇಲೆ ಆಡ್ ವರ್ಡ್ಸ್ ನ ಜಾಹೀರಾತುದಾರರು ಹರಾಜು ಕೂಗುವುದಕ್ಕೆ ಅವಕಾಶ ನೀಡಿದ್ದಕ್ಕಾಗಿ, ಗೂಗಲ್ ಟೀಕೆಗೆ ಒಳಗಾಯಿತು. ಗೂಗಲ್ US ಮತ್ತು ಕೆನಡಾದಲ್ಲಿ ಅತ್ಯಂತ ಹೆಚ್ಚು ಬಳಸಲಾದ ಪದಗಳ ಮೇಲೆ ಹಾಗು, ಜಾಹೀರಾತುದಾರರು ಅವರ ಪ್ರತಿಸ್ಪರ್ಧಿಗಳ ಟ್ರೇಡ್ ಮಾರ್ಕ್ ಒಳಗೊಂಡಂತೆ ಹರಾಜು ಕೂಗಲು 2004 ರಲ್ಲಿ ಅವಕಾಶ ನೀಡಿತು.[೨೪] ಅಲ್ಲದೇ 2008 ರ ಮೇ ನಲ್ಲಿ ಈ ನೀತಿಯನ್ನು UK ಮತ್ತು ಐರ್ಲೆಂಡ್ ಗಳಿಗೆ ವಿಸ್ತರಿಸಿತು. ಟ್ರೇಡ್ ಮಾರ್ಕ್ ಅನ್ನು ಜಾಹೀರಾತು ಕಾನೂನು ಪ್ರೋತ್ಸಾಹ ತಂಡದೊಂದಿಗೆ ನೋಂದಣಿ ಮಾಡಿದಲ್ಲಿ, ಜಾಹೀರಾತುದಾರರು ಅವರ ವಿಷಯ ಪಠ್ಯದಲ್ಲಿ ಇತರ ಕಂಪನಿಗಳ ಟ್ರೇಡ್ ಮಾರ್ಕ್ ಅನ್ನು ಬಳಸದಂತೆ ನಿರ್ಬಂಧಿಸಲಾಯಿತು. ಅದೇನೇ ಆದರೂ ಗೂಗಲ್, ಔಷಧೀಯ ಪ್ರಮುಖ ಪದಗಳು, ಮಾಹಿತಿಯನ್ನು ಅಕ್ರಮವಾಗಿ ಪಡೆಯುವುದಕ್ಕೆ ಸಂಬಂಧ ಪಟ್ಟ, ಎಲ್ಲರಿಗೂ ಅವಕಾಶ ನೀಡದ ಮುಖ್ಯ ಪದಗಳಿಗೆ ಮಿತಿಗೊಳಿಸಲಾಗುತ್ತದೆ. ಈ ಪ್ರಮುಖ ಪದಗಳನ್ನು ಇಟ್ಟುಕೊಳ್ಳಲು ಅಗತ್ಯವಾದ ಅಧಿಕಾರ ಪ್ರಮಾಣ ಪತ್ರ ಹೊಂದಿದೆ. ಈ ನಿರ್ಬಂಧನೆ ಸ್ಥಳವನ್ನಾಧರಿಸಿದಂತೆ ವ್ಯತ್ಯಾಸ ಹೊಂದುತ್ತದೆ.[೨೫] ವಿದ್ಯಾರ್ಥಿಗಳ ಸುಲಭ ಬರಹ ಸೇವೆಗಳಿಗಾಗಿ ನೀಡುತ್ತಿದ್ದ ಆಡ್ ವರ್ಡ್ಸ್ ಜಾಹೀರಾತುಗಳನ್ನು ಗೂಗಲ್ 2007 ರ ಜೂನ್ ನಿಂದ ನಿಷೇಧಿಸಿತು. ಇದನ್ನು ವಿಶ್ವವಿದ್ಯಾನಿಲಯಗಳು ಸ್ವಾಗತಿಸಿದವು.[೨೬]

ಗೂಗಲ್ ಇತರ ನಿರ್ಬಂಧನೆಗಳನ್ನು ಕೂಡ ಹೊಂದಿತ್ತು, ಉದಾಹರಣೆಗೆ, ಫೇಸ್ ಬುಕ್ ಗೆ ಸಂಬಂಧಿಸಿದ ಪುಸ್ತಕದ ಪ್ರಚಾರವನ್ನು ಆಡ್ ವರ್ಡ್ಸ್ ನಲ್ಲಿ ಮಾಡದಂತೆ ನಿರ್ಬಂಧಿಸಲಾಯಿತು. ಏಕೆಂದರೆ ಇದು ಅದರ ಶೀರ್ಷಿಕೆಯಲ್ಲಿ "ಫೇಸ್ ಬುಕ್" ಎಂಬ ಪದವನ್ನು ಒಳಗೊಂಡಿತ್ತು -ಟ್ರೇಡ್ ಮಾರ್ಕ್ ನ ಹೆಸರನ್ನು ಅದರ ಶೀರ್ಷಿಕೆಯಲ್ಲಿ ಇಟ್ಟುಕೊಳ್ಳುವ ಪುಸ್ತಕಗಳಿಗೆ ಪ್ರಚಾರ ನೀಡದಂತೆ ನಿಷೇಧಿಸಲಾಗಿದೆ ಎಂಬ ಕಾರಣ ನೀಡಿತು.[೨೭]

ಇವನ್ನೂ ನೋಡಿ[ಬದಲಾಯಿಸಿ]

 • ಆಡ್‌ಸೆನ್ಸ್‌
 • ಗೂಗಲ್ ಟೂಲ್ ಗಳು ಮತ್ತು ಸೇವೆಗಳ ಪಟ್ಟಿ
 • ಕ್ಲಿಕ್‌ ವಂಚನೆ
 • ಶೋಧಕ ಎಂಜಿನ್ ನ ಮಾರುಕಟ್ಟೆ ತಂತ್ರ
 • ಕೇಂದ್ರ ಜಾಹೀರಾತು ಸರ್ವರ್‌‌
 • ಕಾರ್ಯಕ್ಷಮತೆ-ಆಧರಿಸಿದ ಜಾಹೀರಾತು
 • ಶೋಧನೆ ವಿಶ್ಲೇಷಕಗಳು

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. [೧]
 2. "Financial Tables". Google Investor Relations. Retrieved 2008-01-31.
 3. "ಇನ್ ಸೈಡ್ ಗೂಗಲ್'ಸ್ ಮಿಚಿಗನ್ ಆಫೀಸ್ - ಗೂಗಲ್ - ಇನ್ಫಾರ್ಮೇಷನ್ ವೀಕ್". Archived from the original on 2008-04-03. Retrieved 2011-01-28.
 4. "ಆನ್ ಇನ್ ಸೈಡ್ ಲುಕ್ ಅಟ್ ಗೂಗಲ್ಸ್ ಆಡ್ ವರ್ಡ್ಸ್ HQ > > ಇಂಟೆಲಿಜೆಂಟ್ ಎಂಟರ್ ಪ್ರೈಸಸ್: ಬೆಟರ್ ಇನ್ ಸೈಟ್ ಫಾರ್ ಬಿಸ್ ನೆಸ್ ಡಿಸಿಷನ್ಸ್". Archived from the original on 2009-08-26. Retrieved 2011-01-28.
 5. "ಆರ್ಕೈವ್ ನಕಲು". Archived from the original on 2013-06-26. Retrieved 2011-01-28.
 6. "How are ads ranked? - AdWords Help". adwords.google.com. Archived from the original on 2011-07-23. Retrieved 2010-02-18.
 7. "How do I create a high quality landing page? - AdWords Help". adwords.google.com. Archived from the original on 2011-02-25. Retrieved 2010-02-18.
 8. "Landing Page and Site Quality Guidelines - AdWords Help". adwords.google.com. Retrieved 2010-02-18.
 9. ಬೆಂಜಮೀನ್ ಎಡಲ್ ಮೆನ್, ಮೈಕೆಲ್ ಆಸ್ಟ್ರೋಸ್ಕಿ ಅಂಡ್ ಮೈಕೆಲ್ ಸ್ಚವಾರ್ಜ್: "ಇಂಟರ್ ನೆಟ್ ಅಡ್ವರ್ಟೈಸಿಂಗ್ ಅಂಡ್ ಜನರಲೈಸ್ಡ್ ಸೆಕೆಂಡ್-ಪ್ರೈಸ್ ಆಕ್ಷನ್: ಸೆಲ್ಲಿಂಗ್ ಬಿಲಿಯನ್ಸ್ ಆಫ್ ಡಾಲರ್ಸ್ ವರ್ತ್ ಆಫ್ ಕೀವರ್ಡ್ಸ್". ಅಮೇರಿಕನ್ ಎಕನಾಮಿಕ್ ರಿವ್ಯೂ97(1), 2007 pp 242-259.
 10. ಹಾಲ್ R. ವೇರಿಯನ್: "ಪೊಸಿಷನ್ ಆಕ್ಷನ್". ಕೈಗಾರಿಕ ಸಂಸ್ಥೆಯ ಅಂತರರಾಷ್ಟ್ರೀಯ ನಿಯತಕಾಲಿಕೆ, 2006, doi:10.1016/j.ijindorg.2006.10.002 .
 11. "What is IP Address Exclusion? - AdWords Help". adwords.google.com. {{cite web}}: |access-date= requires |url= (help); Missing or empty |url= (help); Unknown parameter |http://adwords.google.com/support/aw/bin/answer.py?hl= ignored (help)
 12. "What is Frequency Capping? - AdWords Help". adwords.google.com. {{cite web}}: |access-date= requires |url= (help); Missing or empty |url= (help); Unknown parameter |http://adwords.google.com/support/aw/bin/answer.py?hl= ignored (help)
 13. "How do CPC and CPM ads compete with each other? - AdWords Help". adwords.google.com. Archived from the original on 2009-12-23. Retrieved 2010-02-18.
 14. "BE CAREFUL when using both AdSense + AdWords by Google". 2009-02-19.
 15. "Google Advertising Professionals". adwords.google.com. Retrieved 2007-05-30.
 16. "Google Adwords Keyword Tool". savvyk.com. Archived from the original on 2011-02-01. Retrieved 2011-01-28.
 17. http://googlesystem.blogspot.com/2007/07/google-discontinues-click-to-call-and.htm
 18. ಗೂಗಲ್ ಮೈಲ್ ಸ್ಟೋನ್ಸ್
 19. "What is Jumpstart?". Archived from the original on 2006-04-29. Retrieved 2021-08-10.
 20. Associated Press (2006-03-08). "Google settles advertising suit for $90 million". MSNBC. Archived from the original on 2012-11-22. Retrieved 2011-01-28.
 21. ಗೂಗಲ್, ಯಾಹೂ ಬರಿ ದಿ ಲೀಗಲ್ ಹ್ಯಾಚಿಟ್, ಸ್ಟಿಫ್ಯಾನಿ ಒಲ್ಸೆನ್, CNET News.com, 2004 ಆಗಸ್ಟ್ 9
 22. What do I need to know about the updated Display URL policy? - Google Help Centre[ಶಾಶ್ವತವಾಗಿ ಮಡಿದ ಕೊಂಡಿ]
 23. ಚೇಂಜ್ ಟು ದಿ ಆಡ್ ವರ್ಡ್ಸ್ ಅಡ್ವರ್ಟೈಸಿಂಗ್ ಪಾಲಿಸಿ ಆನ್ ಅಲ್ಕಹಾಲ್
 24. Stefanie Olsen (2004-04-13). "Google plans trademark gambit". CNET. Archived from the original on 2012-07-16. Retrieved 2011-01-28.
 25. "Google AdWords Help Center". Google. Retrieved 2007-12-08.
 26. "Google bans essay writing adverts". BBC News. 2007-05-22. Retrieved 2008-05-23.
 27. Letzing, John (2008-07-12). "Facebook haunted by mild-mannered specter". Dow Jones Marketwatch. Retrieved 2008-10-29.