ವಿಷಯಕ್ಕೆ ಹೋಗು

ಕ್ರೋಮ್ ಕಾರ್ಯಾಚರಣಾ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗೂಗಲ್ ಕ್ರೋಮ್ ಇಂದ ಪುನರ್ನಿರ್ದೇಶಿತ)
ಗೂಗಲ್ ಕ್ರೋಮ್ ಲಾಂಛನ(2011)

ಗೂಗಲ್ ಕ್ರೋಮ್ ಗಣಕಯಂತ್ರದ ಕಾರ್ಯನಿರ್ವಹಣ ಸಾಧನ / ಆಪರೇಟಿಂಗ್ ಸಿಸ್ಟಂ /Operating System

ಗೂಗಲ್ ಶೀಘ್ರದಲ್ಲೇ ತನ್ನ ಉಚಿತ ಗಣಕಯಂತ್ರದ ಕಾರ್ಯನಿರ್ವಹಣ ಸಾಧನ (ಆಪರೇಟಿಂಗ್ ಸಿಸ್ಟಂ) ಗೂಗಲ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ.

ಅತ್ಯಂತ ಸರಳ ಮತ್ತು ಕಂಪ್ಯೂಟರಿನ ಹೆಚ್ಚು ಯಂತ್ರಾಂಶವನ್ನು ಗೂಗಲ್ ಸಮೂಹ ಗೂಗಲ್ ಕ್ರೋಮ್ ಆಪರೇಟಿಂಗ್ ಸಿಸ್ಟಂನಲ್ಲಿ ಅಳವಡಿಸಲಿದೆ.

ವಿನೂತನ ಗುಣಲಕ್ಷಣಗಳು

ಕ್ರೋಮ್ ಹಲವು ವಿನೂತನ ಗುಣಲಕ್ಷಣಗಳನ್ನೂ ಹೊಂದಿದ್ದು ಈಗಾಗಲೇ ಹಲವರಲ್ಲಿ ಕಾತರವನ್ನು ಉಂಟುಮಾಡಿದೆ

  • ಪರ್ಸನಲ್ ಕಂಪ್ಯೂಟರ್‌ಗಳಿಗೆಂದು ರಚಿಸಲಾದ ಗೂಗಲ್ ಕ್ರೋಮ್
  • ಎಕ್ಸ್86 ಮತ್ತು ಎಆರ್‌ಎಂ ಪ್ರೊಸೆಸರ್‌ಗಳನ್ನು ಹೊಂದಿರುವ ಕಂಪ್ಯೂಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ
  • ಗೂಗಲ್ ವೇಗಕ್ಕೆ ಹೆಚ್ಚಿನ ಒತ್ತು ಕೊಡಲಿದೆ , ಕಂಪ್ಯೂಟರ್ ಆನ್ ಆಗಲು ತೆಗೆದುಕೊಳ್ಳುವ ಸಮಯ ಕೇವಲ ಕೆಲವೇ (೯)ಸೆಕೆಂಡುಗಳು
  • ಗೂಗಲ್ ಕ್ರೋಮ್ ನಲ್ಲಿ ಕನ್ನಡದಲ್ಲಿ ಬರೆಯಬಹುದು
  • ಕ್ರೋಮ್ ಒಎಸ್ ಹೊಂದಿರುವ ನೆಟ್‌ಬುಕ್‌ಗಳಲ್ಲಿ ಬ್ರೌಸ್ ಮಾಡುವಾಗ ಬಳಕೆದಾರರ ಡಾಟಾ ಅಟೋಮ್ಯಾಟಿಕ್ ಆಗಿ ವೆಬ್‌ನಲ್ಲಿ ಸೇವ್ ಆಗಲಿದೆ
  • ಕಡಿಮೆ ಬೆಲೆಯ ನೆಟ್‌ಬುಕ್‌ಗಳೂ ಕೂಡಾ ಈ ಸಾಫ್ಟ್‌ವೇರನ್ನು ಮೆಮೊರಿ ಚಿಪ್‌ ಮೂಲಕ ಬಳಸಿಕೊಳ್ಳಬಹುದು

ಗೂಗಲ್ ತನ್ನ 'ಗೂಗಲ್ ಕ್ರೋಮ್' ಆಕರವನ್ನು ೨೦೧೦ ರಲ್ಲಿ ದೃಶ್ಯ ಅಂತರಜಾಲದಲ್ಲಿ(Internet) ಬಿಡುಗದೆ ಸಿದ್ದವಾಗಲಿದೆ.

ಗೂಗಲ್ ಕ್ರೋಮ್ ನ ಸ್ಪರ್ದಿಗಳು ಮೈಕ್ರೋಸಾಫ್ಟ, ಆಪಲ್ ಹಾಗೂ ಲಿನಕ್ಸ್‌. ಪ್ರಸಕ್ತ ವಿಶ್ವದ ಶೇಕಡಾ 70ರಷ್ಟು ಕಂಪ್ಯೂಟರ್‌ಗಳಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅಧಿಪತ್ಯ ಹೊಂದಿದೆ. ಉಳಿದ ಭಾಗವನ್ನು ಆಪಲ್ ಮತ್ತು ಲಿನಕ್ಸ್‌ಗಳು ಹೊಂದಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಗೂಗಲ್ ಕ್ರೋಮ್ ಆಪರೇಟಿಂಗ್ ಸಿಸ್ಟಂ. ಸಂಪರ್ಕ ಶೀರ್ಷಿಕೆ

ವಿವಿಧ ಆಪರೇಟಿಂಗ್ ಸಿಸ್ಟಂ ಆವೃತ್ತಿಗಳು ಹೀಗಿವೆ

ಗಣಕಯಂತ್ರದ ಕಾರ್ಯನಿರ್ವಹಣ ಸಾಧನ (ಆಪರೇಟಿಂಗ್ ಸಿಸ್ಟಂ) ಶೆಕಡಾವಾರು ಬಳಕೆ ೨೦೦೯ ಅಕ್ಟೋಬರ್

  • ವಿಂಡೋಸ್ XP ೫೯.೮
  • ವಿಂಡೋಸ್ Vista - ಶೇ.೨೨.೨೩
  • ಮ್ಯಾಕ OS X - ಶೇ.೭.೩೮
  • ವಿಂಡೋಸ್ ೭ - ಶೇ.೨.೧೪
  • ಲಿನಕ್ಸ್‌ - ಶೇ.೨.೭೬
  • ವಿಂಡೋಸ್ 2003 - ಶೇ.೦.೮೯
  • ವಿಂಡೋಸ್ 2000 - ಶೇ.೦.೬೦
  • ಐ ಫೋನ OSX - ಶೇ.೦.೪೪
  • ವಿಂಡೋಸ್ 98 - ಶೇ.೦.೧೦
  • ವ್ಯಾಪ - ೦.೦೭

ಗೂಗಲ್ ಕ್ರೋಮ್ ನಲ್ಲಿ ಕನ್ನಡದಲ್ಲಿ ಬರೆಯಬಹುದು

ಬರಹ IME ಮೇಲೆ right click ಮಾಡಿ Language ಮೇಲೆ cursor ಅನ್ನು ಒಯ್ದು "KGP Keyboard" (Kannada Ganaka Parishat Keyboard Layout) ಅನ್ನು ಕ್ಲಿಕ್ಕಿಸಿ, ಈಗ ಗೂಗಲ್ ಕ್ರೋಮ್ ನಲ್ಲಿ ಕನ್ನಡದಲ್ಲಿ ಯಾವುದೇ ತೊಂದರೆಯಿಲ್ಲದೇ ಬರೆಯಬಹುದುಸಂಪರ್ಕ ಶೀರ್ಷಿಕೆ Archived 2009-07-15 ವೇಬ್ಯಾಕ್ ಮೆಷಿನ್ ನಲ್ಲಿ.

ಗೂಗಲ್ ಕ್ರೋಮ್ ಅಧಿಕೃತ ಬ್ಲಾಗಸಂಪರ್ಕ ಶೀರ್ಷಿಕೆ

೨೦೧೦ರ ಜೂನ್ ವೇಳೆಗೆ ಗೂಗಲ್ ಕ್ರೋಮ್ ಎಂಬ ಅತ್ಯಂತ ಸರಳ ಮತ್ತು ಕಂಪ್ಯೂಟರಿನ ಹೆಚ್ಚು ಯಂತ್ರಾಂಶವನ್ನು ಬೇಡದ ಕಾರ್ಯನಿರ್ವಹಣಾ ತಂತ್ರಾಂಶ ಬಿಡುಗಡೆಯಾಗಲಿದೆ.

ಗೂಗಲ್ ಕ್ರೋಮ್ ನ ಸಹ ಪ್ರಾಯೋಜಕ ಸಂಸ್ಥೆಗಳು Google named partners

ಹೆಚ್.ಪಿ Hewlett-Packard, ಎಸರ್ Acer, ಅಡೊಬ Adobe, ಆಸುಸ್Asus ಲಿನೋವೋLenovo, ಕ್ವಾಲ್ ಕಾಂ Qualcomm, ಟೆಕ್ಸ್ ಸ್ ಇಂಸ್ಟ್ರುಮೆಂಟ Texas Instruments ಹಾಗೂ ಫ್ರೀಸ್ಕೆಲ್ Freescale

ಗೂಗಲ್ ಕ್ರೋಮ್ ಬ್ರೌಸರ್

[ಬದಲಾಯಿಸಿ]

'ಕ್ರೋಮ್' ಎಂಬ ಹೊಸ ಬ್ರೌಸರ್ ಅನ್ನು ಗೂಗಲ್ ಸೆಪ್ಟೆಂಬರ್ ೨ರಂದು ಬಿಡುಗಡೆಮಾಡಿದೆ.

  • ಫೈರ್‌ಫಾಕ್ಸ್ - ಮೋಝಿಲ್ಲಾ
  • ಇಂಟರ್ನೆಟ್ ಎಕ್ಸ್‌ಪ್ಲೋರರ್ - ಮೈಕ್ರೋಸಾಫ್ಟ್‌
  • ಓಪೆರಾ- ಓಪೆರಾ
  • ಸಫಾರಿ- ಮ್ಯಾಕ

ಕ್ರೋಮ್ ಬ್ರೌಸರ್ ವೈಶಿಷ್ಟ್ಯಗಳು

  • ಇದು ಉಚಿತ ಮತ್ತು ಸೆಕೆಂಡುಗಳಲ್ಲಿ ಸ್ಥಾಪನೆಗೊಳ್ಳುತ್ತದೆ
  • ಅತಿ ಕಡಿಮೆ ವಿನ್ಯಾಸ
  • ವೇಗವಾಗಿ ವಿಹರಿಸಬಹುದು
  • ಸಂಕೀರ್ಣ ತಂತ್ರಜ್ಞಾನ
  • ಮೌಸ್ ಬಳಸದೆಯೂ ಬ್ರೌಸ್ ಮಾಡಬಹುದು
  • ಸರಳ ಮತ್ತು ಸುರಕ್ಷಿತ ಬ್ರೌಸ್ ಮಾಡಬಹುದು
  • ಎಲ್ಲದಕ್ಕೂ ಒಂದೇ ಪೆಟ್ಟಿಗೆ-
  • ಟ್ಯಾಬನ್ನು ಎಳೆದು ಹೊಸ ವಿಂಡೋ ಮಾಡಲು ಆಸ್ಪದವಿದ್ದು, ಒಂದು ಟ್ಯಾಬ್ ಕ್ರಾಶ್ ಆದರೂ ಬ್ರೌಸರ್ ಕುಸಿಯುವುದಿಲ್ಲ
  • ನಿಮ್ಮ ಮೆಚ್ಚಿನ ಪುಟಗಳ ಕಿರುರೂಪದ ಪುಟಗಳೊಂದಿಗೆ ಬ್ರೌಸರ್ ತೆರೆಯುತ್ತದೆ
  • ಬುಕ್‌ಮಾರ್ಕ್‌ಗಳು , ಅಪ್ಲಿಕೇಶನ್ ಶಾರ್ಟ್‌ಕಟ್‌ಗಳು -ನೀವು ನೋಡುತ್ತಿರುವ ಪುಟದ ಶಾರ್ಟ್‌ಕಟ್ ಮಾಡಿ desktop/Start Menu/Quick launch bar ನಲ್ಲಿ ಇಡಬಹುದು.
  • ಖಾಸಗಿ ಬ್ರೌಸಿಂಗ್ - ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ಉಳಿಸಲು ಬಯಸದಿದ್ದಾಗ ಅಜ್ಞಾತ ವಿಂಡೋವನ್ನು ತೆರೆಯಿರಿ

ಬ್ರೌಸರ್ ನ ಶೆಕಡಾವಾರು ಬಳಕೆ ೨೦೦೯ ಅಕ್ಟೋಬರ್

  • ಫೈರ್‌ಫಾಕ್ಸ್ - ಶೇ.೪೭.೫%
  • ಐಇ (ಇಂಟರ್ನೆಟ್ ಎಕ್ಸ್‌ಪ್ಲೋರರ್) ಐಇ೮(೧೨.೮), ಐಇ೭(೧೪.೧), ಐಇ೬(೧೦.೬) - ಶೇ. ೩೭.೫
  • ಕ್ರೋಮ್‌ನ ಶೇ. ೮
  • ಸಫಾರಿ - ಶೇ. ೩.೮
  • ಓಪೆರಾ - ಶೇ. ೨.೩

ಡೌನ್‌ಲೋಡ್ ಅಂತರಜಾಲ ತಾಣಗಳು

ಅಂತರಜಾಲಿಗರು ಉಚಿತವಾಗಿ ಈ ಬ್ರೌಸರನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಸದ್ಯಕ್ಕೆ ಕ್ರೋಮ್ ಬ್ರೌಸರ್ ವಿಂಡೋಸ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಮ್ಯಾಕಿಂಟೋಶ್ ಮತ್ತು ಲೈನಕ್ಸ್ ಬಳಕೆದಾರರಿಗೂ ಶೀಘ್ರದಲ್ಲಿ ಲಭ್ಯವಾಗಲಿದೆ. ಕ್ರೋಮ್‌ನ ಡೌನ್‌ಲೋಡ್ ಕೂಡಲೆ ಆಗುವಷ್ಟು ಸಣ್ಣ ಫೈಲು - ತದನಂತರ ಮತ್ತೊಮ್ಮೆ ಇಂಟರ್ನೆಟ್ಟಿಗೆ ಕನೆಕ್ಟ್ ಆಗಿ ಮತ್ತಷ್ಟು ಡೌನ್ಲೋಡ್ ಮಾಡುತ್ತದೆ.

ಕ್ರೋಮ್‌ನ ಬ್ರೌಸರನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಲುಕನ್ನಡ ಗೂಗಲ್ ಕ್ರೋಮ್ ಕೊಂಡಿಯನ್ನು ಕ್ಲಿಕ್ಕಿಸಿ