ವಿಷಯಕ್ಕೆ ಹೋಗು

ಪಿಕಾಸಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Picasa
ಮೂಲ ಕರ್ತೃIdealab
ಅಭಿವೃದ್ಧಿಪಡಿಸಿದವರುGoogle
ಕಾರ್ಯಾಚರಣಾ ವ್ಯವಸ್ಥೆWindows, Mac OS X, Linux (through Wine)
ವಿಧDigital photo organizer
ಪರವಾನಗಿFreeware
ಅಧೀಕೃತ ಜಾಲತಾಣhttp://picasa.google.com

ಪಿಕಾಸಾ ಎಂಬುದು,ತದ್ರೂಪಗಳ, ಡಿಜಿಟಲ್ ಫೋಟೋಗಳನ್ನು(ಛಾಯಾಚಿತ್ರ) ಕ್ರಮಬದ್ಧವಾಗಿ ಸಂಯೋಜಿಸಲು ಮತ್ತು ಸಂಪಾದಿಸಲು ಇರುವ ಚಿತ್ರ ಸಂಯೋಜಕ ಮತ್ತು ವೀಕ್ಷಕರಿಗಾಗಿ ಇರುವ ಚಿತ್ರ ದರ್ಶಕವಾಗಿದೆ. ಅಲ್ಲದೇ ಪರಸ್ಪರರಲ್ಲಿ ಛಾಯಾಚಿತ್ರ-ವಿನಿಮಯವನ್ನು ಏಕೀಕರಿಸುವ ವೆಬ್ ಸೈಟ್ ಕೂಡ ಆಗಿದೆ. ಮೂಲತಃ ಇದನ್ನು ಐಡಿಯಾ ಲ್ಯಾಬ್ ನಿರ್ಮಿಸಿದ್ದು, 2004 ರಿಂದ ಗೂಗಲ್ ಇದರ ನಿರ್ವಹಣೆ ಮಾಡುತ್ತಿದೆ.[೧] "ಪಿಕಾಸಾ" ಎಂಬುದು ಪ್ರಸಿದ್ಧ ಸ್ಪ್ಯಾನಿಷ್ ವರ್ಣಛಾಯಾಚಿತ್ರಕಾರ,ಚಿತ್ರ ಕಲಾವಿದ ಪಾಬ್ಲೊ ಪಿಕಾಸೊ ರವರ ಹೆಸರಿನ ಸಮ್ಮಿಶ್ರಣಪದವಾಗಿದೆ; ಈ ಪದಗುಚ್ಛವು "ನನ್ನ ಮನೆ" ಗಾಗಿ ಮಿ ಕಾಸಾ ವನ್ನು ಮತ್ತು ವರ್ಣಚಿತ್ರಗಳಿಗಾಗಿ "ಪಿಕ್" (ವ್ಯಕ್ತಿಗತ ಕಲೆ)ಪದಗಳನ್ನು ಒಳಗೊಂಡಿದೆ.[೧][೨] ಗೂಗಲ್,ಪಿಕಾಸಾವನ್ನು 2004 ರ ಜುಲೈನಲ್ಲಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಅಲ್ಲದೇ ಉಚಿತ ಡೌನ್ ಲೋಡ್ ನ ರೂಪದಲ್ಲಿ ಅದನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿತು.[೧][೨] ವಿಂಡೋಸ್ XP, ವಿಂಡೋಸ್ ವಿಸ್ಟಾ, ವಿಂಡೋಸ್ 7 ಮತ್ತು ಮ್ಯಾಕ್ OS X (ಇಂಟೆಲ್ ಗೆ ಮಾತ್ರ) ಗಳಿಗೆ ಬೇಕಾದ ಸಹಜ,ಸ್ಥಳೀಯ ಅನ್ವಯಿಕೆಗಳು ಗೂಗಲ್ ಲ್ಯಾಬ್ ನ ಮೂಲಕ ದೊರೆಯುತ್ತವೆ. ಸಹಜವಾದ ಲಿನಕ್ಸ್ ಆವೃತ್ತಿಯನ್ನು ಬರೆಯುವ ಬದಲು, ಅಳವಡಿಸುವಿಕೆಯ ಪ್ಯಾಕೇಜ್ ಅನ್ನು ಸೃಷ್ಟಿಸಲು ಲಿನಕ್ಸ್ ಗಾಗಿ ಗೂಗಲ್, ವಿಂಡೋಸ್ ಆವೃತ್ತಿಯೊಂದಿಗೆ ವೈನ್ ಎಂಬ ತಂತ್ರಾಂಶ ನೀಡಿದೆ. ಆದರೆ ಈ ಆವೃತ್ತಿಯ ಕಾಲಾವಧಿ ಈಗ ಮುಗಿದು ಹೋಗಿದೆ.( ಆದರೂ ಅತ್ಯಂತ ಇತ್ತೀಚಿನ ವಿಂಡೋಸ್ ಆವೃತ್ತಿಯನ್ನು ವೈನ್ ನೊಂದಿಗೆ ಚಲಾಯಿಸಬಹುದು, ಲಿನಕ್ಸ್ ವಿಭಾಗವನ್ನು ನೋಡಿ). ವಿಂಡೋಸ್ 98ಕ್ಕಾಗಿ, ವಿಂಡೋಸ್ ಮೀ ಮತ್ತು ವಿಂಡೋಸ್ 2000 ಎಂಬ ಹಳೆಯ ಆವೃತ್ತಿಗಳು ಮಾತ್ರ ಲಭ್ಯವಿವೆ. ಮ್ಯಾಕ್ OS X 10.4 ಮತ್ತು ಅನಂತರದ ಆವೃತ್ತಿಗೆ ಲಭ್ಯವಿರುವ ಛಾಯಾಚಿತ್ರಗಳನ್ನು ಅಪ್ ಲೋಡ್ ಮಾಡಲು ಐಫೋಟೋಪ್ಲಗ್ ಇನ್ ತಂತ್ರಾಂಶ ಅಥವಾ ಸ್ವತಂತ್ರವಾದ ಪ್ರೋಗ್ರಾಂ ಕೂಡ ಲಭ್ಯವಿದೆ.

ಆವೃತ್ತಿ ಇತಿಹಾಸ[ಬದಲಾಯಿಸಿ]

ವಿಂಡೋಸ್‌[ಬದಲಾಯಿಸಿ]

ಇದರ 3.9 ಆವೃತ್ತಿಯು 2013 ರ ಸಪ್ಟೆಂಬರ್ ಹೊತ್ತಿಗೆ ಚಾಲ್ತಿಯಲ್ಲಿದ್ದ ಪಿಕಾಸಾದ ಇತ್ತೀಚಿನ ಆವೃತ್ತಿಯಾಗಿದೆ. ಇದು ವಿಂಡೋಸ್ XP, ವಿಂಡೋಸ್ ವಿಸ್ಟಾ ಮತ್ತು ವಿಂಡೋಸ್ 7 ಗೆ ಆಧಾರ ನೀಡುತ್ತದೆ.

ಲಿನಕ್ಸ್[ಬದಲಾಯಿಸಿ]

ಸುಮಾರು 2006 ರ ಜೂನ್ ಪೂರ್ವಾರ್ಧದದಿಂದ, ಲಿನಕ್ಸ್ ಕಾರ್ಯನಿರ್ವಹಣಾ ವ್ಯವಸ್ಥೆಯ ಬಹುಪಾಲು ವಿತರಣೆಗಳಿಗೆ, ಲಿನಕ್ಸ್ ಆವೃತ್ತಿಗಳು(2.2.2820-5) ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಾಗಿವೆ. ಇದು ಸಹಜವಾದ ಲಿನಕ್ಸ್ ಪ್ರೋಗ್ರಾಂ ಅಲ್ಲದಿದ್ದರೂ ಕೂಡ ವೈನ್ ತಂತ್ರಾಶ ಗ್ರಂಥಾಲಯ ಬಳಸುವ ವಿಂಡೋಸ್ ಆವೃತ್ತಿಯನ್ನು ಅಳವಡಿಸಿಕೊಂಡಿದೆ.[೩] ಹೆಚ್ಚಾಗಿ ಅಳವಡಿಸಿಕೊಳ್ಳದ ಕಾರಣ 3.5 ಗೆ ಲಿನಕ್ಸ್ ಆವೃತ್ತಿ ಇರುವುದಿಲ್ಲ ಎಂಬುದನ್ನು ಗೂಗಲ್ ಪ್ರಕಟಿಸಿತು.[೪] ಹೀಗೆ 2009 ರ ಜುಲೈ ನಿಂದ 2010 ರ ನವೆಂಬರ್ ನ ವರೆಗೂ ಲಿನಕ್ಸ್ http://picasa.ಗೂಗಲ್.com/linux/[ಶಾಶ್ವತವಾಗಿ ಮಡಿದ ಕೊಂಡಿ]. ಗಾಗಿ ಗೂಗಲ್, ಕೇವಲ ಪಿಕಾಸಾ 3.0 ಬೀಟಾವನ್ನು ಮಾತ್ರ ಪಡೆಯುವ ಅವಕಾಶವನ್ನು ಅಧಿಕೃತವಾಗಿ ನೀಡಿತು.

ಲಿನಕ್ಸ್ ನ ಅಳವಡಿಸುವಿಕೆ[ಬದಲಾಯಿಸಿ]

ವಿಂಡೋಸ್ ಗೆ ಪಿಕಾಸಾ 3.8 ಅನ್ನು ಯಶಸ್ವಿಯಾಗಿ ಅಳವಡಿಸಲಾಯಿತು. ಅಲ್ಲದೇ ಪಿಕಾಸಾ 3.0 ಮತ್ತು ವೈನ್ ನ ಬಳಕೆಯ ಮೂಲಕ ಲಿನಕ್ಸ್ ನಡಿ ಬಳಸಲಾಯಿತು.[೫] ಇದು ವೈನ್ ನ ಮೂಲಕ .exe ಇನ್ ಸ್ಟಾಲರ್ ಅನ್ನು ಚಲಾಯಿಸುವ ಹಾಗು ವಿಂಡೋಸ್ ಆವೃತ್ತಿಯನ್ನು ಡೌನ್ ಲೋಡ್ ಮಾಡಿಕೊಳ್ಳುವ ಬದಲು, ಅಧಿಕೃತ ಲಿನಕ್ಸ್ v3.0ಬೀಟಾ ಆವೃತ್ತಿಯ ಅಳವಡಿಕೆಯನ್ನೊಳಗೊಂಡಿದೆ. ಅನಂತರ ವಿಂಡೋಸ್ ಅಳವಡಿಕೆಯೊಂದಿಗೆ v3.0ಬೀಟಾ ಅಳವಡಿಕೆ ಪರಿಷ್ಕರಣೆಗೆ cp ಆದೇಶ ಬಳಸುತ್ತದೆ.

ವೆಬ್ ಆಲ್ಬಂ ಪರ್ಯಾಯಗಳು[ಬದಲಾಯಿಸಿ]

ಅದೇನೇ ಆದರೂ ಪಿಕಾಸಾ ವೆಬ್ ಆಲ್ಬಂಗಳಿಗೆ ಅಪ್ ಲೋಡ್ ಮಾಡಬಹುದಾದ ಇತರ ಪ್ರೋಗ್ರಾಂಗಳು ಕೂಡ ಇವೆ. ನೀವು ಕಿಪಿ-ಪ್ಲಗಿನ್ಸ್ ಪ್ಯಾಕೇಜ್ ಅನ್ನು ಅಳವಡಿಸುವಾಗ ಗ್ವೆನ್ ವ್ಯೂ ಮತ್ತು ಡಿಗಿಕ್ಯಾಮ್ ಅನ್ನು ಪಿಕಾಸಾ ವೆಬ್ ಆಲ್ಬಂಗಳಿಗೆ ಅಪ್ ಲೋಡ್ ಮಾಡಬಹುದು. ಅಲ್ಲದೇ ಶಾಟ್ ವೆಲ್ ಇದನ್ನು ಯಾವುದೇ ಪ್ಲಗ್ ಇನ್ ಗಳಿಲ್ಲದೇ ಅಪ್ ಲೋಡ್ ಮಾಡಬಹುದು.

ಮ್ಯಾಕ್ OS X[ಬದಲಾಯಿಸಿ]

ಗೂಗಲ್ ಮ್ಯಾಕ್(ಇಂಟೆಲ್ ಆಧಾರಿತ ಮ್ಯಾಕ್ ಮಾತ್ರ) ಗಾಗಿ ಪಿಕಾಸಾದ ಬೀಟಾ ಅವೃತ್ತಿಯನ್ನು 2009 ರ ಜನವರಿ 5 ರಂದು ಬಿಡುಗಡೆ ಮಾಡಿತು. ಪಿಕಾಸಾ ವೆಬ್ ಆಲ್ಬಂಗಳ ಆತಿಥೇಯ ಸೇವೆಗೆ ಅಪ್ ಲೋಡ್ ಮಾಡುವುದಕ್ಕಾಗಿ, ಐಫೋಟೋ ಗೆ ಪ್ಲಗ್ ಇನ್ ಅನ್ನು ಕೂಡ ದೊರಕಿಸಿಕೊಡಲಾಗಿದೆ. OS X 10.4 ಅಥವಾ ಅನಂತರದ ಆವೃತ್ತಿಗೂ ಕೂಡ ಸ್ವತಂತ್ರ ಪಿಕಾಸಾ ವೆಬ್ ಆಲ್ಬಂಗಳನ್ನು ಅಪ್ ಲೋಡ್ ಮಾಡುವ ಸಾಧನಗಳಿವೆ.[೬] ಮ್ಯಾಕ್ ಗಾಗಿ ನೀಡಲಾದ ಪಿಕಾಸಾ, ಗೂಗಲ್ ಲ್ಯಾಬ್ಸ್ ನ ಬಿಡುಗಡೆಯಾಗಿದೆ.[೭]

ವಿಶಿಷ್ಟ ಲಕ್ಷಣಗಳು[ಬದಲಾಯಿಸಿ]

ಸಂಯೋಜನೆ ಮತ್ತು ಸಂಪಾದನೆ[ಬದಲಾಯಿಸಿ]

ಛಾಯಾಚಿತ್ರಗಳ ಸಂಯೋಜಿಸಲು ಪಿಕಾಸಾ, ಲಕ್ಷಣಗಳ ಸೂಚಿಸುವ ಮತ್ತು ಪತ್ತೆಹಚ್ಚುವ ಕಡತ, ಟ್ಯಾಗ್ ಗಳನ್ನು, ಚಹರೆ ಗುರುತಿಸುವಿಕೆಯನ್ನು, ಹಾಗು ಮುಂದಿನ ವಿಂಗಡಣೆಗಾಗಿ ಸಂಗ್ರಹಣೆಗಳನ್ನು ಹೊಂದಿರುತ್ತವೆ. ಇದು ಬಣ್ಣವನ್ನು ಹೆಚ್ಚಿಸುವುದು, ಕೆಂಪು ಕಣ್ಣಿನ ನೋಟದ ಪರಿಣಾಮವನ್ನು ಕಡಿಮೆ ಮಾಡುವುದು, ಮತ್ತು ಛಾಯಾಚಿತ್ರ ಸಂಪಾದನೆಯನ್ನು ಒಳಗೊಂಡಂತೆ ಛಾಯಾಚಿತ್ರಗಳನ್ನು ಸಂಪಾದಿಸುವ ಮೂಲ ಕಾರ್ಯಗಳನ್ನು ಕೂಡ ಮಾಡುತ್ತದೆ. ಇತರ ಲಕ್ಷಣಗಳಾದ ಸ್ಲೈಡ್ ಶೋಗಳು, ಮುದ್ರಣ ಮತ್ತು ಚಿತ್ರದ ಕಾಲಗಣನೆಗಳನ್ನು ಒಳಗೊಂಡಿವೆ. ಕಡತಗಳ ಗಾತ್ರ ಕಡಿಮೆ ಮಾಡಿ, ಇ-ಮೇಲ್ ಮತ್ತು ಮುದ್ರಣ ಮಾಡುವುದು ಹಾಗು ಪುಟ ವಿನ್ಯಾಸ ಮಾಡುವ ಬಾಹ್ಯ ಬಳಕೆಗಳಿಗೂ ಕೂಡ ವರ್ಣಚಿತ್ರವನ್ನು ಸಿದ್ಧಪಡಿಸಬಹುದಾಗಿದೆ. ಆನ್ ಲೈನ್ ಛಾಯಾಚಿತ್ರ ಮುದ್ರಣಾ ಸೇವೆಗಳಲ್ಲಿಯೂ ಕೂಡ ಏಕೀಕರಣ ಮಾಡಬಹುದಾಗಿದೆ.

ಮುಖ್ಯ ಪದಗಳು[ಬದಲಾಯಿಸಿ]

ಪ್ರತಿ ಚಿತ್ರಕ್ಕಾಗಿ ಮುಖ್ಯ ಪದಗಳ ಟ್ರಾಕ್ ಇಟ್ಟುಕೊಳ್ಳಲು ಪಿಕಾಸಾ picasa.ini ಕಡತ ಬಳಸುತ್ತದೆ. ಇದರಜೊತೆ ಪಿಕಾಸಾ, JPEG ಕಡತಗಳಿಗೆ IPTC ಮುಖ್ಯ ಪದ ದತ್ತಾಂಶವನ್ನು ಲಗತ್ತಿಸುತ್ತದೆ. ಆದರೆ ಇತರ ಯಾವ ಕಡತದ ಸ್ವರೂಪಗಳಿಗೂ ಕೂಡ ಇದನ್ನು ಲಗತ್ತಿಸುವುದಿಲ್ಲ. ಪಿಕಾಸಾದಲ್ಲಿ JPEG ಕಡತಗಳಿಗೆ ಲಗತ್ತಿಸಲಾದ ಮುಖ್ಯ ಪದಗಳನ್ನು, ಅಡೋಬ್ ಫೋಟೋಶಾಪ್ ಆಲ್ಬಂ, ಅಡೋಬ್ ಬ್ರಿಡ್ಜ್ , ಡಿಗಿಕ್ಯಾಮ್ ಮತ್ತು ಐಫೋಟೋಗಳಂತಹ ಇತರ ಚಿತ್ರಗಳ, ಗ್ರಂಥಾಲಯ ತಂತ್ರಾಂಶಗಳ ಮೂಲಕ ಓದಬಹುದಾಗಿದೆ. ಪಿಕಾಸಾ ರೀಡ್ ಮಿ ಯ ಪ್ರಕಾರ,[೮] ಪಿಕಾಸಾ XMP ದತ್ತಾಂಶದ ಪದಾನ್ವಯ ವಿವರಣೆ ನೀಡಬಲ್ಲದು. ಅದೇನೇ ಆದರೂ ಕೂಡ ಅಸ್ತಿತ್ವದಲ್ಲಿರುವ XMP ಮುಖ್ಯ ಪದಗಳಿಗೆ ಅದು ಸ್ಥಳೀಯ ಕಡತಗಳನ್ನು ಶೋಧಿಸಲಾರದು.

ಶೋಧನೆ[ಬದಲಾಯಿಸಿ]

ಪಿಕಾಸಾವು, ಗ್ರಂಥಾಲಯವನ್ನು ನೋಡುವಾಗ ಯಾವಾಗಲೂ ಗೋಚರವಾಗುವ ಶೋಧಕ ಬಾರ್(ಟೂಲ್ ಬಾರ್) ಅನ್ನು ಹೊಂದಿದೆ. ಪ್ರದರ್ಶಿಸಲಾದ ಆ ಛಾಯಾಚಿತ್ರಗಳಲ್ಲಿ ನೇರವಾಗಿ ಶೋಧಿಸಬಹುದು, ಹಾಗು ನೀವು ಟೈಪ್ ಮಾಡಿದಂತೆ ಅದು ಶೋಧಿಸಲ್ಪಡುತ್ತದೆ. ಶೋಧಕ ಬಾರ್ ಕಡತದ ಹೆಸರುಗಳು, ಶೀರ್ಷಿಕೆ, ಟ್ಯಾಗ್ ಗಳು, ಕಡತಕೋಶ(ಫೋಲ್ಡರ್)ದ ಹೆಸರು, ಮತ್ತು ಇತರ ಎರಡನೆ ವರ್ಗದ ದತ್ತಾಂಶವನ್ನು ಶೋಧಿಸುತ್ತದೆ.[೯] ಗೂಗಲ್ ವೆಬ್ ಶೋಧಕವು ಹುಡುಕುವ ರೀತಿಯಲ್ಲಿಯೇ ಶೋಧನೆ ನಡೆಸಲು, ಪಿಕಾಸಾ ಬೂಲೀನ್ ನಿರ್ವಾಹಕಕ್ಕೂ ಕೂಡ ಆಧಾರ ನೀಡುತ್ತದೆ. ಶೋಧಕದ ಎಲ್ಲಾ ಪದಗಳು ಅಪ್ರಯತ್ನಪೂರ್ವಕವಾಗಿಯೇ (ನಿರ್ವಾಹಕ "AND" ನೊಂದಿಗೆ) ವಿಧಿಸಲ್ಪಡುತ್ತವೆ. ಅಲ್ಲದೇ ನಿರ್ದಿಷ್ಟಗೊಳಿಸಲಾದ ಮುಖ್ಯ ಪದಗಳೊಂದಿಗೆ ಟ್ಯಾಗ್ ಮಾಡಲಾದ ಚಿತ್ರಗಳನ್ನು ಹೈಫನ್ (ಕೂಡುಗೆರೆ)(ಬೂಲೀನ್ ನಿರ್ವಾಹಕ ದಲ್ಲಿರುವ "NOT" ನಂತೆ)ಅನ್ನು ಬಳಸಿ ಹೊರಹಾಕಬಹುದು. ಉದಾಹರಣೆಗೆ, ಕುಟುಂಬ ಮಕ್ಕಳು -ಸ್ನೇಹಿತರ ನ್ನು ಶೋಧಿಸಿದಾಗ, ಪಿಕಾಸಾ "ಕುಟುಂಬ" ಮತ್ತು "ಮಕ್ಕಳು" ಎಂಬ ಮುಖ್ಯ ಪದಗಳಲ್ಲಿ ಬರುವ ಎಲ್ಲಾ ಚಿತ್ರಗಳನ್ನು ಪ್ರದರ್ಶಿಸುತ್ತದೆ. ಈ ಶೋಧನೆ "ಸ್ನೇಹಿತರು" ಮುಖ್ಯ ಪದವನ್ನು ಒಳಗೊಂಡಿರುವುದಿಲ್ಲ. ಪಿಕಾಸಾ, ಶೋಧಕ ಬಾರ್ ನಲ್ಲಿ ಪ್ರಯೋಗಾತ್ಮಕ ಲಕ್ಷಣಗಳನ್ನು ಕೂಡ ಒಳಗೊಂಡಿದ್ದು, ಇಲ್ಲಿ ನೀಡಿರುವ"ಬಣ್ಣ: ದೊಂದಿಗೆ ಕೆಲವೊಂದು ಬಣ್ಣಗಳನ್ನು ಹೊಂದಿರವವುಗಳಿಗಾಗಿ ಚಿತ್ರಗಳನ್ನು ಶೋಧಿಸಲಾಗುತ್ತದೆ.[೧೦]

ವೀಕ್ಷಿಸುವಿಕೆ[ಬದಲಾಯಿಸಿ]

ಪಿಕಾಸಾ ಪ್ರತ್ಯೇಕ ವೀಕ್ಷಣಾ ವಿಂಡೋ ಹೊಂದಿಲ್ಲ. ಇಲ್ಲಿ ವೀಕ್ಷಣಾ ಸ್ಥಳದೊಂದಿಗೆ ಕೇವಲ "ಸಂಪಾದಕೀಯ ನೋಟ" ಮಾತ್ರವಿದೆ. "ಸಂಪಾದಕೀಯ ನೋಟ"ದಲ್ಲಿರುವಾಗ ctrl+alt ಕೀಲಿ ಗಳನ್ನು ಕೆಳಕ್ಕೆ ಅದುಮಿಟ್ಟುಕೊಳ್ಳುವ ಮೂಲಕ ಅಥವಾ "ಸಂಪಾದಕೀಯ ನೋಟ" ದಲ್ಲಿರುವಾಗ Alt Gr ಕೀಲಿಯನ್ನು ಒತ್ತಿಟ್ಟುಕೊಳ್ಳುವ ಮೂಲಕ ಸ್ಲೈಡ್ ಶೋ ಮೋಡ್ ನಲ್ಲೂ ಪೂರ್ಣ ಪಟಲದ ವೀಕ್ಷಣೆ ಮಾಡಬಹುದಾಗಿದೆ. ಈ ಲಕ್ಷಣವು ವಿಂಡೋಸ್ ಎಕ್ಸ್ ಪ್ಲೋರರ್ ನ ಸಂದರ್ಭ ಪರಿವಿಡಿಯಲ್ಲಿಯೂ ಕೂಡ ದೊರೆಯುತ್ತದೆ. ಅಲ್ಲದೇ ಪಿಕಾಸಾ ಸಂಪಾದನೆ ಆರಂಭಿಸಲು ಮಾರ್ಗವನ್ನು ಕೂಡ ಒದಗಿಸುತ್ತದೆ.

ಬ್ಯಾಕ್‌ಅಪ್‌ (ನಕಲು ಪ್ರತಿ)[ಬದಲಾಯಿಸಿ]

ಪಿಕಾಸಾ 2 ಮತ್ತು ಮುಂಚಿನ ಆವೃತ್ತಿಗಳಲ್ಲಿ, ಮೂಲ ಕಡತ ಬದಲಾಯಿಸುವ ಮೂಲಕ ಪಿಕಾಸಾ ಛಾಯಾಚಿತ್ರಗಳಲ್ಲಿ ಬದಲಾವಣೆ ಮಾಡುತ್ತಿತ್ತು. ಆದರೆ ಮೂಲ ಛಾಯಾಚಿತ್ರದ ನಕಲು ಪ್ರತಿಯ ಆವೃತ್ತಿಯು, "ಮೂಲಗಳು" ಎಂದು ಕರೆಯಲಾಗುವ ಗುಪ್ತ ಕಡತಕೋಶದಲ್ಲಿ ಉಳಿದುಕೊಂಡಿರುತ್ತದೆ.ಇದು ಮೂಲ ಛಾಯಾಚಿತ್ರವನ್ನು ಒಳಗೊಂಡ ಕಡತ ಕೋಶದಲ್ಲಿರುತ್ತದೆ.(ಮ್ಯಾಕ್ OSX ನಲ್ಲಿ .picasaoriginals). ಪಿಕಾಸಾ 3ರಲ್ಲಿ, ಪಿಕಾಸಾದಲ್ಲಿ ಛಾಯಾಚಿತ್ರಗಳಿಗೆ ಮಾಡಲಾದ ಬದಲಾವಣೆಗಳು, ಮೂಲ ಛಾಯಾಚಿತ್ರಗಳನ್ನು ಒಳಗೊಂಡ ಕಡತ ಕೋಶದಲ್ಲಿ ಇರುವ, ಗುಪ್ತ ಕಡತ ಕೋಶ picasa.ini ನಲ್ಲಿ ಉಳಿದುಕೊಂಡಿರುತ್ತವೆ. ಇದರಿಂದಾಗಿ ಮೂಲ ಚಿತ್ರವನ್ನು ಬದಲಾಯಿಸದೇ ಬಹುವಿಧದ ಸಂಪಾದನೆ ಮಾಡಬಹುದಾಗಿದೆ. ಪಿಕಾಸಾದಲ್ಲಿ ಛಾಯಾಚಿತ್ರ ವೀಕ್ಷಿಸುವುದು ಅಥವಾ ಪಿಕಾಸಾ ಫೋಟೋ ವ್ಯೂವರ್ ಅನ್ನು ಬಳಸುವುದು, ಫ್ಲೈ ನ ಮೇಲೆ ಬದಲಾವಣೆಗಳನ್ನು ತರುತ್ತದೆ. ಆದರೆ ಇತರ ಪ್ರೋಗ್ರಾಂಗಳ(ವಿಂಡೋಸ್ XP ಸ್ ಫೋಟೋ ಅಂಡ್ ಫ್ಯಾಕ್ ವ್ಯೂವರ್ ನಂತಹ) ಮೂಲಕ ನೋಡುವುದರಿಂದ ಅವು ಮೂಲ ಚಿತ್ರವನ್ನೇ ಪ್ರದರ್ಶಿಸುತ್ತವೆ. ಬದಲಾವಣೆಗಳನ್ನು "ಉಳಿಸು"(ಸೇವ್) ಎಂಬ ಕಾರ್ಯಾಚರಣೆ ಬಳಸುವ ಮೂಲಕ ಶಾಶ್ವತವಾಗಿಸಬಹುದು. ಇಲ್ಲಿ ಮೂಲ ಕಡತವು ನಕಲು ಪ್ರತಿಯಾಗುತ್ತದೆ, ಹಾಗು ಆವೃತ್ತಿ 2 ಕ್ಕೆ ಸದೃಶವಾಗಿರುವ ಮಾರ್ಪಡಿಸಿದ ಆವೃತ್ತಿಯು, ಮೂಲ ಕಡತದ ಸ್ಥಾನಕ್ಕೆ ಮರಳುತ್ತದೆ.

ಚಹರೆಯ ಗುರುತಿಸುವಿಕೆ[ಬದಲಾಯಿಸಿ]

ಗೂಗಲ್, ನೆವೆನ್ ವಿಷನ್ ಅನ್ನು 2006 ರ ಅಗಸ್ಟ್ 15 ರಂದು ಸ್ವಾಧೀನಕ್ಕೆ ತೆಗೆದುಕೊಂಡಿತೆಂಬ ಸಂಗತಿ ಪ್ರಕಟಿಸಿತು. ಜನರು ಅಥವಾ ಕಟ್ಟಡಸಮೂಹಗಳಂತಹ ಛಾಯಾಚಿತ್ರದೊಳಗಿರುವ ಲಕ್ಷಣಗಳನ್ನು ಹುಡುಕಲು ಇಂತಹ ತಂತ್ರಜ್ಞಾನ ಬಳಸಲಾಗುತ್ತದೆ. ಗೂಗಲ್ ಈ ತಂತ್ರಜ್ಞಾನವನ್ನು ಚಹರೆ ಗುರುತಿಸುವುದಕ್ಕಾಗಿ ಅನ್ವಯಿಸಿತು. ಅಲ್ಲದೇ 2008 ರ ಸೆಪ್ಟೆಂಬರ್ 2 ರಂದು ಪಿಕಾಸಾ ವೆಬ್ ಆಲ್ಬಂಗಳಲ್ಲಿ ಕಾರ್ಯಕಾರಿತ್ವ ಆರಂಭಿಸಿಲಾಯಿತು.[೧೧] ನೆವೆನ್ ವಿಷನ್ ಅನೇಕ ಹಕ್ಕು ಪತ್ರಗಳನ್ನು ಒಟ್ಟುಗೂಡಿಸುತ್ತದೆ.[೧೨] ನಿರ್ದಿಷ್ಟವಾಗಿ ಡಿಜಿಟಲ್ ಫೋಟೋ ಮತ್ತು ವಿಡಿಯೋಚಿತ್ರಗಳಿಂದ, ಈ ಗುರುತಿಸುವಿಕೆಯನ್ನು ಮಾಡುವ ಕಾರ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದೆ. ನೆವೆನ್ ವಿಷನ್ ನ ತಂತ್ರಜ್ಞಾನವು, ವಿಶ್ವದ ಅತ್ಯುತ್ತಮ ಗುರುತು ಪತ್ತೆಹಚ್ಚುವಿಕೆಯ ತಂತ್ರಜ್ಞಾನಗಳನ್ನು ಹೋಲಿಸುವ FERET 1997 ಮತ್ತು FRVT 2002 ರ ಪರೀಕ್ಷೆಗಳಲ್ಲಿ ಅಗ್ರ ಸ್ಥಾನ ಗಳಿಸಿದ ತಂತ್ರಜ್ಞಾನಗಳಲ್ಲಿ ಇದೂ ಕೂಡ ಒಂದಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಜಿಯೋಟ್ಯಾಂಗಿಗ್[ಬದಲಾಯಿಸಿ]

ನಂತರ 2007 ರ ಜೂನ್ ನಿಂದ ಪಿಕಾಸಾ Exif ಮೆಟಾಡೇಟಾಕ್ಕೆ ಭೌಗೋಳಿಕ ನಿರ್ದೇಶಾಂಕಗಳನ್ನು ದಾಖಲಿಸಬಹುದಾಗಿದ್ದು, ಈ ಮೂಲಕ ಛಾಯಾಚಿತ್ರಕ್ಕೆ ಜಿಯೋ ಟ್ಯಾಂಗಿಗ್ ಅನ್ನು ನೀಡಬಲ್ಲದ್ದಾಗಿದೆ. ಇದನ್ನು ಮಾಡಲು ಗೂಗಲ್ ಅರ್ತ್ ಅನ್ನು ಕೂಡ ಅಳವಡಿಸಬೇಕಿದೆ. ಪಿಕಾಸಾದ 3.5 ಆವೃತ್ತಿ ಬಂದ ನಂತರ ಗೂಗಲ್ ಅರ್ತ್ ಅನ್ನು ಅಳವಡಿಸುವ ಅಗತ್ಯವಿಲ್ಲದಾಯಿತು. ಜಿಯೋ ಟ್ಯಾಗಿಂಗ್ ಅನ್ನು, ಅತ್ಯಂತ ಪ್ರಾಯೋಗಿಕ ಗೂಗಲ್ ಭೂಪಟಗಳ ಘಟಕವನ್ನು ಬಳಸುವ ಮೂಲಕ ಪಿಕಾಸಾದೊಳಗೇ ನೇರವಾಗಿ ಮಾಡಬಹುದಾಗಿದೆ. ಇದು ಮ್ಯಾಕ್ OS X ಆವೃತ್ತಿಯಲ್ಲಿ ಈ ಕಾರ್ಯಕಾರಿತ್ವವನ್ನು ಒದಗಿಸುತ್ತದೆ.

ಪಿಕಾಸಾದ ಇತರ ಅನ್ವಯಿಕೆಗಳು[ಬದಲಾಯಿಸಿ]

ಪಿಕಾಸಾ ವೆಬ್ ಆಲ್ಬಂಗಳು[ಬದಲಾಯಿಸಿ]

ಪಿಕಾಸಾ ವೆಬ್ ಆಲ್ಬಂಗಳು (PWA) ಗೂಗಲ್ ನಿಂದ ನೀಡಲಾದ ಛಾಯಾಚಿತ್ರ ಹಂಚಿಕೆಯ ವೆಬ್ ಸೈಟ್ ಆಗಿದ್ದು, ಇದನ್ನು ಫ್ಲಿಕರ್ ಮತ್ತು ಸದೃಶ ಸೈಟ್ ಗಳೊಂದಿಗೆ ಹೆಚ್ಚಾಗಿ ಹೋಲಿಸಲಾಗುತ್ತದೆ. ಇದು ಬಳಕೆದಾರರಿಗೆ ಗೂಗಲ್ ನಲ್ಲಿ 1 GB ಯ ಛಾಯಾಚಿತ್ರಗಳನ್ನು ಉಚಿತವಾಗಿ ಸಂಗ್ರಹಿಸಿಡುವ ಅವಕಾಶ ನೀಡಿದೆ. ಬಳಕೆದಾರರು ಅನೇಕ ರೀತಿಗಳಲ್ಲಿ ಚಿತ್ರಗಳನ್ನು ಅಪ್ ಲೋಡ್ ಮಾಡಬಹುದಾಗಿದೆ; ಆಧಾರ ನೀಡುವ ಬ್ರೌಸರ್ ನ ಮೇಲೆ PWA ವೆಬ್ ಅಂತರ ಸಂಪರ್ಕದ ಮೂಲಕ,[೧೩] ಮೈಕ್ರೋ ಸಾಫ್ಟ್ ವಿಂಡೋಸ್ ನ ಮೇಲೆ ಪಿಕಾಸಾ 2.5.0 ಅಥವಾ ಅನಂತರದ ಆವೃತ್ತಿ,[೧೪] ಐಫೋಟೋ ಗೆ ಎಕ್ಸ್ ಪೋರ್ಟರ್ ಅನ್ನು ಬಳಸಲಾಗುತ್ತದೆ. ಈ ಮೂಲಕ, ಪಿಕಾಸಾ ವೆಬ್ ಆಲ್ಬಂಗಳ ಮೇಲೆ ಅಬರ್ ಮೈಂಡ್ ಪ್ಲಗ್ ಇನ್ ಅನ್ನು ಬಳಸಿ, ಮ್ಯಾಕ್ OS X,[೧೫] ನ ಮೇಲೆ ಅಪ್ ಲೋಡರ್ ಅನ್ನು ಉಪಯೋಗಿಸಿ, ಲಿನಕ್ಸ್ ನ ಮೇಲೆ ಎಫ್-ಸ್ಪಾಟ್ ನ ಸಹಾಯದಿಂದ ಬಳಸುವ ಅಥವಾ OS MorphOS ನಂತಹ ಅಮೈಗಾದಲ್ಲಿ WAManager ನ ಮುಖಾಂತರ ಚಿತ್ರಗಳನ್ನು ಅಪ್ ಲೋಡ್ ಮಾಡಬಹುದಾಗಿದೆ. ಹಣ ಪಾವತಿಸಬೇಕಾದ ಮತ್ತು ಉಚಿತ ಖಾತೆಗಳಲ್ಲಿ, ಛಾಯಾಚಿತ್ರದ ನಿಜವಾದ ಪ್ರಮಾಣವನ್ನು ನಿರ್ವಹಿಸಲಾಗುವುದು.( ಸಣ್ಣ ಪ್ರಮಾಣದ ಛಾಯಾಚಿತ್ರವನ್ನು ವೆಬ್ ಅಂತರಸಂಪರ್ಕ ಪ್ರದರ್ಶಿಸಿದರೂ ಕೂಡ). ತಂತ್ರಾಂಶದ ಪಿಕಾಸಾ 3 ಆವೃತ್ತಿಗಳಲ್ಲಿ, 'ಮೂಲಗಾತ್ರ'ದ ಅಪ್ ಲೋಡ್ ಆಯ್ಕೆಯನ್ನು ಬಳಸುವುದರಿಂದ, ಪಿಕ್ಸೆಲ್ ನ ಗಾತ್ರ ಮೊದಲಿನಷ್ಟೇ ಉಳಿದುಕೊಳ್ಳುತ್ತದೆ. ಆದರೆ PWA ಗೆ ಛಾಯಾಚಿತ್ರಗಳನ್ನು ಅಪ್ ಲೋಡ್ ಮಾಡುವಾಗ JPEG ಯ ಸಂಕುಚನವು ಹೆಚ್ಚಾಗುತ್ತದೆ. JPEG ಯು 'ನಷ್ಟ'ವಾಗುವ ಸ್ವರೂಪದಲ್ಲಿರುವುದರಿಂದ ಕೆಲವು ಚಿತ್ರಗಳ ಮಾಹಿತಿ(ಮತ್ತು ಗುಣಮಟ್ಟ) ನಷ್ಟವಾಗಬಹುದು. ಪಿಕಾಸಾ 3.6 ಮೂಲ JPEG ಗುಣಮಟ್ಟವನ್ನು ಹಾಗೆಯೇ ಉಳಿಸಲು ಒಂದು ಆಯ್ಕೆಯನ್ನೂ ಸೇರಿಸಿದೆ.[೧೬] PWA ಬಳಕೆದಾರರು, ವೈಯಕ್ತಿಕ ಛಾಯಾಚಿತ್ರದ ಆಲ್ಬಂಗಳಿಗಾಗಿ URL ಅನ್ನು ಪಡೆಯಲು "ಪಟ್ಟಿಮಾಡದ ಸಂಖ್ಯೆ"ಯನ್ನು ಬಳಸುತ್ತಾರೆ. ಇದು ಬಳಕೆದಾರ ಆತ/ ಆಕೆ ಅವರಿಷ್ಟದ ಯಾರಿಗಾದರೂ ವೈಯಕ್ತಿಕ ಆಲ್ಬಂ ನ URL ಅನ್ನು ಇ-ಮೇಲ್ ಮಾಡುವಂತೆ ಮಾಡುತ್ತದೆ; ಗ್ರಾಹಿಯು ಬಳಕೆದಾರನ ಖಾತೆ ತೆರೆಯದೆಯೇ ಆಲ್ಬಂ ವೀಕ್ಷಿಸಬಹುದು- ಇದನ್ನು "ಪ್ರಮಾಣೀಕರಿಸಲಾದ ಕೀಲಿ"ಯ ಮೂಲಕ ಮಾಡಬಹುದಾಗಿದೆ. ಆಲ್ಬಂ ಪ್ರದರ್ಶಿಸುವಂತೆ ಮಾಡಲು ಈ ಕೀಲಿಯನ್ನು URL ಗೆ ಲಗತ್ತಿಸಬೇಕು. ಪಿಕಾಸಾ ಸಹಾಯಕ ಕಡತವು, ವೈಯಕ್ತಿಕ ಆಲ್ಬಂಗಳು ಬಳಕೆದಾರನ ಹೊರತಾಗಿ ಬೇರಾರೂ ಶೋಧಿಸಿಲ್ಲ, ಎಂಬುದನ್ನು ತಿಳಿಸುತ್ತದೆ. ಇತ್ತೀಚೆಗೆ, "ವೀಕ್ಷಿಸಲು ಸೈನ್-ಇನ್ ಅಗತ್ಯವಿದೆ" ಎಂದು ಕರೆಯಲಾಗುವ ಹೊಸ ಆಯ್ಕೆಯನ್ನು ಆಲ್ಬಂನ ದೃಶ್ಯತೆಗೆ ಸೇರಿಸಲಾಗಿದೆ. ಇದು ಆಲ್ಬಂ ಅನ್ನು ಯಾರಿಗೆ ಸ್ಪಷ್ಟವಾಗಿ ಕಳುಹಿಸಲಾಗಿರುತ್ತದೋ ಅವರು ಮಾತ್ರ ವೀಕ್ಷಿಸುವಂತೆ ಮಾಡುತ್ತದೆ. ಆದರೂ, 2011 ರ ಜನವರಿಯ ಹೊತ್ತಿಗೆ ಈ ಆಯ್ಕೆಯು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಅಲ್ಲದೇ ಆಹ್ವಾನಿಸಲಾದ ಗ್ರಾಹಿಗಳಿಗೆ ಆಹ್ವಾನಿತ ಆಲ್ಬಂ ಅನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಉಚಿತ ಪಿಕಾಸಾ ವೆಬ್ ಆಲ್ಬಂಗಳ ಖಾತೆಗಳಲ್ಲಿ ಜಾಹೀರಾತುಗಳನ್ನೂ ತೋರಿಸಲಾಗುತ್ತದೆ. ಸೇವಾ ನಿಯಮಗಳು [೧೭] ಅಪ್ ಲೋಡ್ ಮಾಡಲಾದ ಛಾಯಾಚಿತ್ರಗಳನ್ನು ವೆಬ್ ಸೈಟ್ ನಲ್ಲಿ ಅಥವಾ RSS ಫೀಡ್ಸ್ ನ ಮೂಲಕ ಪ್ರದರ್ಶಿಸಲು ಗೂಗಲ್ ಗೆ ಅನುಮತಿ ನೀಡಿವೆ. ಅಲ್ಲದೇ ಉಚಿತವಾಗಿ ಗೂಗಲ್ ಸೇವೆಗಳಿಗೆ ಪ್ರೋತ್ಸಾಹ ನೀಡಲು ಕೂಡ ಅನುಮತಿ ನೀಡಿವೆ. ಇದರ ಜೊತೆಯಲ್ಲಿನ ಈ ನಿಯಮಗಳು, ಅಪ್ ಲೋಡ್ ಮಾಡಲಾದ ಚಿತ್ರಗಳನ್ನು ಬಳಸಲು ಗೂಗಲ್ ನೊಂದಿಗೆ ಕೈಜೋಡಿಸಿರುವ ಇತರ ಕಂಪನಿಗಳಿಗೆ ಅವಕಾಶ ನೀಡಲು ಗೂಗಲ್ ಗೆ ಅನುಮತಿ ನೀಡಿದವು. ಈ ಅವಕಾಶವು ಸಾರ್ವಕಾಲಿಕವಾಗಿದ್ದು, ಛಾಯಾಚಿತ್ರಗಳನ್ನು ಅದರ ಸ್ವಾಮ್ಯ ಪಡೆದವರು ವಾಪಸ್ಸು ಹಿಂದಕ್ಕೆ ತೆಗೆದುಕೊಂಡಿರಬಾರದು. ಪಿಕಾಸಾ ವೆಬ್ ಆಲ್ಬಂಗಳು 2006 ರ ಜೂನ್ 6 ರಂದು ಮೊದಲ ಬಾರಿಗೆ ಬಹಿರಂಗವಾದವು.[೧೮] ಇದನ್ನು ಪರಿಚಯಿಸಿದಾಗ ಇದು 250 MB ಫ್ರೀ ಸ್ಪೇಸ್ ನೊಂದಿಗೆ ಆಗಮಿಸಿತ್ತು. ತರುವಾಯ 2007 ರ ಮಾರ್ಚ್ 7 ರಂದು ಇದನ್ನು 1 GB ಗೆ ಪರಿಷ್ಕರಿಸಲಾಯಿತು. ಬಳಕೆದಾರರು 20 GB ಯಿಂದ 16 TBಯವರೆಗೆ ಅಧಿಕ ಸಂಗ್ರಹಣಾ ಸ್ಥಳಾವಕಾಶ (ಜಿಮೇಲ್ ಮತ್ತು ಪಿಕಾಸಾ ವೆಬ್ ಆಲ್ಬಂಗಳಂತಹ ಗೂಗಲ್ ಸೇವೆಗಳಲ್ಲಿ ವಿತರಿಸಲಾಗಿತ್ತು) ಕೂಡ ಕೊಂಡುಕೊಳ್ಳಬಹುದಾಗಿದೆ.[೧೯]

ಹೆಲೋ![ಬದಲಾಯಿಸಿ]

ಗೂಗಲ್ ನ ಪಿಕಾಸಾ ನೀಡಿದ ಹೆಲೋ ಉಚಿತ ಕಂಪ್ಯೂಟರ್ ಆಲ್ಬಂ ಆಗಿದ್ದು, ಇದು ಬಳಕೆದಾರರಿಗೆ ಚಿತ್ರಗಳನ್ನು ಅಂತರ್ಜಾಲದುದ್ದಕ್ಕೂ ಕಳುಹಿಸುವ ಮತ್ತು ಅವರ ಬ್ಲಾಗ್ ಗಳಲ್ಲಿ ಪ್ರಕಟಿಸಿಕೊಳ್ಳುವ ಅವಕಾಶ ನೀಡುತ್ತದೆ. ಇದು ಇನ್ ಸ್ಟಂಟ್ ಮೆಸೇಜಿಂಗ್ ಪ್ರೋಗ್ರಾಂ ಅನ್ನು ಹೋಲುತ್ತದೆ. ಏಕೆಂದರೆ ಇದು ಬಳಕೆದಾರರಿಗೆ ಪಠ್ಯ ವಿಷಯ ಕಳುಹಿಸಲು ಅವಕಾಶ ನೀಡುತ್ತದೆ. ಆದರೆ ಹೆಲೋ ಡಿಜಿಟಲ್ ಫೋಟೋಗ್ರಾಫ್ ಗಳ ಕಡೆ ಹೆಚ್ಚು ಗಮನಹರಿಸಿತು.[೨೦] ಬಳಕೆದಾರರು ಅವರ ಸ್ನೇಹಿತರು ನೈಜವಾಗಿಯೇ ನೋಡುತ್ತಿರುವಂತಹ ಚಿತ್ರಗಳನ್ನೇ ವೀಕ್ಷಿಸಬಹುದಾಗಿದೆ. ಛಾಯಾಚಿತ್ರಗಳನ್ನು ಫೈರ್ ವಾಲ್ ಗಳ ಮೂಲಕ ಕಳುಹಿಸಬಹುದಾಗಿದೆ, ವೆಬ್ ಸೈಟ್ ಗಳಿಗೆ ಇದರಿಂದಾದ ಪ್ರಯೋಜನಗಳಲ್ಲಿ ಇದೂ ಒಂದಾಗಿದೆ. ಹೆಲೋ ನ ಸೇವೆಯನ್ನು 2006 ರ ಕೊನೆಯಲ್ಲಿ ರದ್ದುಪಡಿಸಲಾಯಿತಲ್ಲದೇ, ಬಳಕೆದಾರರು ಚಿತ್ರಗಳನ್ನು ಅವರ ಬ್ಲಾಗ್ ಗಳಿಗೆ ಅಪ್ ಲೋಡ್ ಮಾಡಿಕೊಳ್ಳಲು ಪಿಕಾಸಾ 'ಬ್ಲಾಗ್ ದಿಸ್' ಕಾರ್ಯಕಾರಿತ್ವವನ್ನು ಪ್ರಯತ್ನಿಸುವಂತೆ ಸೂಚನೆ ನೀಡಿತು. ಅಧಿಕೃತ ವೆಬ್ ಸೈಟ್ ನ ಪ್ರಕಾರ,[೨೧] ಹೆಲೋ ಯೋಜನೆಯನ್ನು 2008 ರ ಮೇ 15 ರಂದು ಸ್ಥಗಿತಗೊಳಿಸಲಾಯಿತು.

ಇವನ್ನೂ ಗಮನಿಸಿ[ಬದಲಾಯಿಸಿ]

 • ಚಿತ್ರದ ವೀಕ್ಷಕರ ಹೋಲಿಕೆ
 • ಡೆಸ್ಕ್ ಟಾಪ್ ನಿರ್ವಾಹಕ
 • ಗೂಗಲ್‌ ಉತ್ಪನ್ನಗಳ ಪಟ್ಟಿ
 • ಛಾಯಾಚಿತ್ರಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ವೆಬ್ ಸೈಟ್ ಗಳ ಪಟ್ಟಿ

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ ೧.೨ "ಗೂಗಲ್ ಪಿಕಾಸಾ", ಅಬ್ ಸೆಸೇಬಲ್, 2009 (ನೋಡಿ: ಉಲ್ಲೇಖಗಳು).
 2. ೨.೦ ೨.೧ "ಗೂಗಲ್ ಈಸ್ ವಾಚಿಂಗ್..", ಡಿಜಿಟಲ್ ಜರ್ನಲ್ (ನೋಡಿ: ಉಲ್ಲೇಖಗಳು).
 3. ಅಬೌಟ್ ಪಿಕಾಸಾ ಫಾರ್ ಲಿನಕ್ಸ್
 4. "ಗೂಗಲ್ ರಿಲೀಸಸ್ ಪಿಕಾಸಾ 3.5". Archived from the original on 2010-02-01. Retrieved 2011-02-10.
 5. ಯೂಸಿಂಗ್ ಪಿಕಾಸಾ 3.8 ಇನ್ ಲಿನಕ್ಸ್
 6. ಇಂಟ್ರಾಡ್ಯೂಸಿಂಗ್ ಪಿಕಾಸಾ ಫಾರ್ ಮ್ಯಾಕ್(ಅಟ್ ಮ್ಯಾಕ್ ವಲ್ಡ್!), 1/05/2009 02:25:00 PM, ಅಫೀಷಿಯಲ್ ಗೂಗಲ್ ಬ್ಲಾಗ್
 7. [12] ^ [11]
 8. "Picasa Readme". Archived from the original on 2009-01-24. Retrieved 2011-02-10.
 9. "Search and Locate: Search by keyword, filter, or color". Retrieved 12 November 2009.
 10. "Feeling Blue? Search for Photos Matching Your Mood". Archived from the original on 2010-11-25. Retrieved 2011-02-10.
 11. "Introducing Picasa 3.0 (and big changes for Picasa Web Albums)".
 12. "Google, Neven Vision & Image Recognition".
 13. ಕ್ರಿಯೇಟಿಂಗ್ ನ್ಯೂ ಆಲ್ಬಂಸ್: ಅಪ್ ಲೋಡ್ ಯೂಸಿಂಗ್ ಪಿಕಾಸಾ ವೆಬ್ ಆಲ್ಬಂಸ್, ಪಿಕಾಸಾ ಸಹಾಯಕ
 14. ಪಿಕಾಸಾ ವೆಬ್ ಆಲ್ಬಂಸ್
 15. "ಪಿಕಾಸಾ ವೆಬ್ ಆಲ್ಬಂಸ್". Archived from the original on 2008-11-19. Retrieved 2011-02-10.
 16. ಪಿಕಾಸಾ 3.6: ನವ್ ವಿತ್ ಕೊಲ್ಯಾಬೊರೇಟಿವ್ ಆಲ್ಬಂಸ್
 17. ಪಿಕಾಸಾ: ಟರ್ಮ್ಸ್ ಆಫ್ ಸರ್ವೀಸ್
 18. ಗೂಗಲ್ ಪಿಕಾಸಾ ವೆಬ್ ಆಲ್ಬಂಸ್ ಕಮ್ಮಿಂಗ್?
 19. ಪಿಕಾಸಾ ಹೆಲ್ಪ್ ಸೆಂಟರ್ - ಪರ್ಚೇಸಿಂಗ್ ಅಡಿಷನಲ್ ಸ್ಟೋರೇಜ್
 20. "ಹೆಲೋ : ವೆಲ್ ಕಂ". Archived from the original on 2008-05-10. Retrieved 2011-02-10.
 21. "Hello". Archived from the original on May 10, 2008. Retrieved 23 November 2010.
"https://kn.wikipedia.org/w/index.php?title=ಪಿಕಾಸಾ&oldid=1196390" ಇಂದ ಪಡೆಯಲ್ಪಟ್ಟಿದೆ