ಗೂಗಲ್‌ ವೆಬ್‌ ಟೂಲ್‌ಕಿಟ್‌ (Google Web Toolkit)

ವಿಕಿಪೀಡಿಯ ಇಂದ
Jump to navigation Jump to search
Google Web Toolkit
100px
Original author(s)Google
Initial releaseMay 16, 2006
Stable release
2.2.0 / ಫೆಬ್ರವರಿ 11, 2011 (2011-02-11)
Repository Edit this at Wikidata
Written inJava
Operating systemGNU/Linux, Windows, Mac OS X
Available inJava
TypeAjax framework
LicenseApache License 2.0
Websitehttp://code.google.com/webtoolkit

ಗೂಗಲ್‌ ವೆಬ್‌ ಟೂಲ್ಕಿಟ್‌ (Google Web Toolkit) (ಜಿಡಬ್ಲ್ಯೂಟಿ /ˈɡwɪt/) ಎಂಬುದು, ಜಾವಾ ತಾಂತ್ರಿಕ ವೇದಿಕೆಯಲ್ಲಿ ಸಂಕೀರ್ಣ ಮತ್ತು ಜಟಿಲ ಜಾವಾಸ್ಕ್ರಿಪ್ಟ್‌ ಮುಂಬದಿ ಅಂಚು(front-end)ಯ ಅನ್ವಯಿಕೆಗಳನ್ನು ರಚಿಸಿ ನಿರ್ವಹಿಸಲು ಅಂತರಜಾಲ ತಂತ್ರಜ್ಞಾನ ವಿನ್ಯಾಸಕರಿಗೆ ನೆರವಾಗುವ ಸಾಧನಗಳ ಮುಕ್ತ ಸಂಪನ್ಮೂಲ(open source) ಗಳ ಸಮೂಹವಾಗಿದೆ. ಕೆಲವು ಸಹಜ ಸಾಮರ್ಥ್ಯದ ಕಡತಸಂಪುಟಗಳ ಸಂಗ್ರಹಗಳ (libraries) ಹೊರತುಪಡಿಸಿ, ಉಳಿದೆಲ್ಲವೂ ಸಹ ಜಾವಾ ಮೂಲದವಾಗಿದ್ದು, ಯಾವುದೇ ಸಹಯೋಗೀ ವೇದಿಕೆಯ ಮೇಲೆ, ಜಿಡಬ್ಲ್ಯೂಟಿ ಆಂಟ್‌ ನಿರ್ಮಾಣ ಕಡತಗಳೊಂದಿಗೆ, ಅಭಿವೃದ್ಧಿಪಡಿಸಬಹುದಾಗಿದೆ. ಅಪ್ಯಾಚ್‌ ಲೈಸೆನ್ಸ್ (Apache License)‌ ಈ ಕಂಪನಿಯು ಸಾಫ್ಟ್ ವೇರ್ ಅಭಿವೃದ್ಧಿ ಮತ್ತು ಕಡತಗಳ ದಾಖಲೆಗೆ ಅನುಮತಿ ನೀಡುವ 2.0ರ ಆವೃತ್ತಿಯನ್ವಯ ಅನೂಜ್ಞೆ ಪಡೆದಿದೆ. [೧]

ಅನುಕ್ರಮರಹಿತ ಪರೋಕ್ಷ ಪ್ರಕ್ರಿಯಾ ಸಂಕೇತಗಳು (asynchronous remote procedure calls), ಹಿಂದಿನ ಪಠ್ಯಗಳ ಇತಿಹಾಸ ನಿರ್ವಹಣೆ, ಪುಟ ಗುರುತಿಸುವಿಕೆ (bookmarking), ಅಂತರರಾಷ್ಟ್ರೀಕರಣ (internationalisation) ಮತ್ತು ವಿವಿಧ ಅಂತರಜಾಲ ವೀಕ್ಷಕಗಳೊಂದಿಗೆ ಚಲಿಸಲಾಗುವಿಕೆ(portability)ಯಂತಹ ಪದೇ ಪದೇ ಸಂಭವಿಸುವ ಅಜ್ಯಾಕ್ಸ್‌(Ajax) ತಾಂತ್ರಿಕ ಸವಾಲುಗಳಿಗೆ, ಜಿಡಬ್ಲ್ಯೂಟಿ ಪುನಃ ಬಳಸಬಹುದಾದ (reusable) ದಕ್ಷ ತಂತ್ರಾಂಶಗಳಿಗೆ ಜಿಡಬ್ಲ್ಯೂಟಿ ಒತ್ತು ನೀಡುತ್ತದೆ.

ಇತಿಹಾಸ[ಬದಲಾಯಿಸಿ]

ಜಿಡಬ್ಲ್ಯೂಟಿ ಆವೃತ್ತಿ 1.0 ಅರ್‌ಸಿ 1 (ವಿನ್ಯಾಸ 1.0.20) 2006ರ ಮೇ 16ರಂದು ಬಿಡುಗಡೆಗೊಳಿಸಲಾಯಿತು. [೨] ಇತ್ತೀಚಿಗೆ 2006ರಲ್ಲಿ ನಡೆದ ಜಾವಾಒನ್‌ ಸಮ್ಮೇಳನದಲ್ಲಿ ಗೂಗಲ್‌ ಜಿಡಬ್ಲ್ಯೂಟಿಯನ್ನು ಘೋಷಿಸಿತು. [೩]

ಆವೃತ್ತಿ ಬಿಡುಗಡೆಯ ಇತಿಹಾಸ

 • ಜಿಡಬ್ಲ್ಯೂಟಿ 1.0 - 17 ಮೇ 2006
 • ಜಿಡಬ್ಲ್ಯೂಟಿ 1.1 - 11 ಆಗಸ್ಟ್‌ 2006
 • ಜಿಡಬ್ಲ್ಯೂಟಿ 1.2 - 16 ನವೆಂಬರ್‌ 2006
 • ಜಿಡಬ್ಲ್ಯೂಟಿ 1.3 - 5 ಫೆಬ್ರವರಿ 2007
 • ಜಿಡಬ್ಲ್ಯೂಟಿ 1.4 - 28 ಆಗಸ್ಟ್‌ 2007
 • ಜಿಡಬ್ಲ್ಯೂಟಿ 1.5 - 27 ಆಗಸ್ಟ್‌ 2008
 • ಜಿಡಬ್ಲ್ಯೂಟಿ 1.6 - 7 ಏಪ್ರಿಲ್‌ 2009
 • ಜಿಡಬ್ಲ್ಯೂಟಿ 1.7 - 13 ಜುಲೈ 2009
 • ಜಿಡಬ್ಲ್ಯೂಟಿ 2.0 - 8 ಡಿಸೆಂಬರ್‌ 2009
 • ಜಿಡಬ್ಲ್ಯೂಟಿ 2.0.1 - 2 ಫೆಬ್ರವರಿ 2010
 • ಜಿಡಬ್ಲ್ಯೂಟಿ 2.0.2 - 12 ಫೆಬ್ರವರಿ 2010
 • ಜಿಡಬ್ಲ್ಯೂಟಿ 2.0.3 - 19 ಫೆಬ್ರವರಿ 2010
 • ಜಿಡಬ್ಲ್ಯೂಟಿ 2.0.4 - 2 ಜುಲೈ 2010
 • ಜಿಡಬ್ಲ್ಯೂಟಿ 2.1.0 - 19 ಅಕ್ಟೋಬರ್‌ 2010
 • ಜಿಡಬ್ಲ್ಯೂಟಿ 2.1.1 - 16 ಡಿಸೆಂಬರ್‌ 2010
 • ಜಿಡಬ್ಲ್ಯೂಟಿ 2.2.0 - 11 ಫೆಬ್ರವರಿ 2011 (ಇತ್ತೀಚಿನದು)

ಜಿಡಬ್ಲ್ಯೂಟಿ ಜೊತೆಗೆ ತಂತ್ರಾಂಶದ ಅಭಿವೃದ್ಧಿ[ಬದಲಾಯಿಸಿ]

ತಂತ್ರಾಂಶ ರಚನೆಗಾರರು ಜಿಡಬ್ಲ್ಯೂಟಿ ಬಳಸಿ, ತಮ್ಮದೇ ಆದ ಜಾವಾ ತಂತ್ರಾಂಶ ವಿನ್ಯಾಸ ಉಪಕರಣ,ಸಾಧನ ಉಪಯೋಗಿಸಿ, ಜಾವಾ ಸಂಕೇತ ಭಾಷೆಯಲ್ಲಿರುವ ಅಜ್ಯಾಕ್ಸ್‌ (AJAX) ಅನ್ವಯಿಕೆಗಳನ್ನು ತ್ವರಿತವಾಗಿ ಅಭಿವೃದ್ಧಿಗೊಳಿಸಿ,ದೋಷಗಳನ್ನು ಸರಿಪಡಿಸಬಹುದು (debug). ಅನ್ವಯಿಕೆಯನ್ನು ಅನುಷ್ಠಾನಗೊಳಿಸಿದಾಗ, ಜಿಡಬ್ಲ್ಯೂಟಿ ಪ್ರತಿ-ಸಂಯೋಜಕ (cross-compiler) ಜಾವಾ ಅನ್ವಯಿಕೆಯನ್ನು, ಐಚ್ಛಿಕವಾಗಿ ನಿಯಂತ್ರಿಸಿ, ಬಹುತೇಕ ಸೂಕ್ತಗೊಳಿಸಲಾದ ಸ್ವತಂತ್ರ ನಿರ್ವಹಣಾ ಸಾಮರ್ಥ್ಯ ಪಡೆದ (standalone) ಜಾವಾಸ್ಕ್ರಿಪ್ಟ್‌ ಕಡತಗಳಿಗೆ ಪರಿವರ್ತಿಸುತ್ತದೆ/ಅನುವಾದಿಸುತ್ತದೆ.

ಜಿಡಬ್ಲ್ಯೂಟಿ ಕೇವಲ ಬಳಕೆದಾರ ಅಂತರಸಂಪರ್ಕ ಸಂಕೇತಭಾಷೆಯ ಸುತ್ತ ನಡೆಯುವುದಿಲ್ಲ. ಬದಲಿಗೆ, ಯಾವುದೇ ಅತ್ಯುನ್ನತ-ಕ್ರಿಯಾಶೀಲತೆಯ ಅನುಷಂಗಿಕ-ಪಕ್ಷದ ಗ್ರಾಹಕರ ಬಗೆಗಿನ (client-side) ಜಾವಾಸ್ಕ್ರಿಪ್ಟ್‌ ಕ್ರಿಯಾ-ಪ್ರವೃತ್ತಿಯನ್ನು ಅಭಿವೃದ್ದಿಗೊಳಿಸುವ ಸಾಮಾನ್ಯ ಸಾಧನ-ಸಂಪುಟವಾಗಿದೆ. "ಜಿಡಬ್ಲ್ಯೂಟಿ" ಕೇವಲ ಕಡತ-ಸಂಪುಟಗಳಲ್ಲ, ಮೂಲಭೂತವಾಗಿ ಇನ್ನೊಂದು ಅಜ್ಯಾಕ್ಸ್‌ ಕಡತ ಸಂಪುಟವಾಗಿರದ ಅದೇ ಕಡತಸಂಪುಟವನ್ನು ಮಾತ್ರ ಸೇರಿಸಿಕೊಳ್ಳುತ್ತ ದಷ್ಟೇ ಎಂದು ಜಿಡಬ್ಲ್ಯೂಟಿ ಅನ್ವಯಿಕೆಯ ಅಭಿವೃದ್ಧಿಕಾರರು ತಮ್ಮ ಪ್ರಸ್ತುತಿಗಳಲ್ಲಿ ಒತ್ತಿಹೇಳುವರು. ಜಿಡಬ್ಲ್ಯೂಟಿ ಕೊನೆಯಿಂದ-ಕೊನೆ (end-to-end) ಅನ್ವಯಿಕೆ ಚೌಕಟ್ಟು ಒದಗಿಸುತ್ತದೆ, ಎಂದು ಭಾವಿಸುವ, ಜಿಡಬ್ಲ್ಯೂಟಿಗೆ ಹೊಸಬರಾಗಿರುವವರಿಗೆ ಇಂತಹ ತಂತ್ರಾಂಶ ತತ್ತ್ವವು ಅಚ್ಚರಿಗೊಳಿಸುತ್ತದೆ. ನಿಜಕ್ಕೂ, ಹಲವು ರಾಚನಿಕ ನಿರ್ಧಾರಗಳನ್ನು ಅನ್ವಯಿಕೆ ಅಭಿವೃದ್ಧಿ ರಚನೆಕಾರರೇ ತೆಗೆದುಕೊಳ್ಳಬೇಕಾದೀತು. ಜಿಡಬ್ಲ್ಯುಟಿ ಧ್ಯೇಯವು, ಜಿಡಬ್ಲ್ಯೂಟಿಯ ಪಾತ್ರ ಮತ್ತು ಅನ್ವಯಿಕೆ ಅಭಿವೃದ್ಧಿಗೊಳಿಸುವದರ ಪಾತ್ರವನ್ನೂ ತಾತ್ತ್ವಿಕವಾಗಿ ಬಿಡಿಸಿ ಹೇಳುತ್ತದೆ. ಇಂತಹದಕ್ಕೆ(ಇತಿಹಾಸ) ಹಿಂದಿನ ಪಠ್ಯ ವಿಷಯವು ಉದಾಹರಣೆಯಾಗಿದೆ: ಬಳಕೆದಾರರು ಅಂತರಜಾಲವೀಕ್ಷಕದಲ್ಲಿ ಹಿಂದೆ (Back) ಅಥವಾ ಮುಂದೆ (Forward) ಗುಂಡಿಗಳನ್ನು ಕ್ಲಿಕ್‌ ಮಾಡುವಾಗ ಜಿಡಬ್ಲ್ಯೂಟಿ ಹಿಂದೆ ಘಟಿಸಿದ-ಗುರುತುಗಳನ್ನು ನಿರ್ವಹಿಸಿದರೂ, ಅನ್ವಯಿಕೆಯೊಂದರ ಸ್ಥಿತಿಯೊಂದಕ್ಕೆ ಆ ಕುರುಹುಗಳನ್ನು ರೇಖಾ ಚಿತ್ರ ಅಳವಡಿಕೆ ಮಾಡುವುದು ಹೇಗೆ ಎಂಬುದನ್ನು ತಿಳಿಯಪಡಿಸುವುದಿಲ್ಲ.

ಜಿಡಬ್ಲ್ಯೂಟಿ ಅನ್ವಯಿಕೆಗಳನ್ನು ಎರಡು ರೀತಿಗಳಲ್ಲಿ ಅಳವಡಿಸಿ ಚಲಾಯಿಸಬಹುದು:

 • ಅಭಿವೃದ್ಧಿ ವಿಧಾನ (ಮುಂಚೆ ಅನುಷ್ಠಾನ ಪ್ರಕ್ರಿಯಾ ವಿಧಾನ ): ಜಾವಾ ವರ್ಚುಯಲ್‌ ಮೆಷಿನ್‌ (ಜೆವಿಎಂ) ಒಳಗೆ ಜಾವಾ ಬೈಟ್ಕೋಡ್‌ ರೂಪದಲ್ಲಿ ಚಲಾಯಿಸಲಾಗುವುದು. ಈ ಅಭಿವೃದ್ಧಿಯಿಂದಾಗಿ, ಸಂಕೇತ-ಸಾಲುಗಳ ತ್ವರಿತ ಅದಲುಬದಲು ಮತ್ತು ದೋಷ ಸರಿಪಡಿಸುವ ಕಾರ್ಯಗಳಿಗಾಗಿ ಈ ವಿಧಾನ ಬಳಸಲಾಗುತ್ತದೆ.
 • ವೆಬ್ ಮೋಡ್,ಅಂತರಜಾಲ ವಿಧಾನ : ಅನ್ವಯಿಕೆಯನ್ನು ಜಾವಾ ಮೂಲದಿಂದ ಸಂಯೋಜಿತ ಶುದ್ಧ ಜಾವಾಸ್ಕ್ರಿಪ್ಟ್‌ ಮತ್ತು ಎಚ್‌ಟಿಎಮ್‌ಎಲ್‌ ರೂಪದಲ್ಲಿ ಚಲಾಯಿಸಲಾಗುತ್ತದೆ.
ಅನ್ವಯಿಕೆಯನ್ನು ಅಂತರಜಾಲದಲ್ಲಿ ಅನುಷ್ಠಾನ ಮಾಡಲು ಮಾದರಿಯಾಗಿ ಈ ವಿಧಾನ ಬಳಸಲಾಗುತ್ತದೆ.

ಜಿಡಬ್ಲ್ಯೂಟಿ ಅಭಿವೃದ್ಧಿಯನ್ನು ಇತರೆ ಐಡಿಇಗಳೊಂದಿಗೆ ಸುಲಭಗೊಳಿಸಲು, ಹಲವು ಮುಕ್ತ-ಮೂಲ ಆನುಷಂಗಿಕ ಸಾಧನಗಳು (plugins) ಈ ಸರಣಿಯಲ್ಲಿ ಲಭ್ಯವಿವೆ. ಉದಾಹರಣೆಗೆ, NetBeansಗಾಗಿ GWT4NB, ಜಿಡಬ್ಲ್ಯೂಟಿಗಾಗಿ ಸೈಪಲ್‌ ಸ್ಟುಡಿಯೊ, ಇಕ್ಲಿಪ್ಸ್‌ ಮತ್ತು ಜೆಡೆವಲಪರ್‌ (JDeveloper) ಇತ್ಯಾದಿ. ಈ ಇಕ್ಲಿಪ್ಸ್‌ಗಾಗಿ ಗೂಗಲ್‌ ಪ್ಲಗಿನ್‌ ಐಡಿಇಯಲ್ಲಿ ಬಹಳಷ್ಟು ಜಿಡಬ್ಲ್ಯೂಟಿ-ಸಂಬಂಧಿತ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಅನ್ವಯಿಕೆ ಯೋಜನೆಗಳ ರಚನೆ, ಜಿಡಬ್ಲ್ಯೂಟಿ ಸಂಯೋಜಕವನ್ನು ಪ್ರಚೋದಿಸುವುದು, ಜಿಡಬ್ಲ್ಯೂಟಿ ಆರಂಭಿಕ ವಿನ್ಯಾಸಗಳು, ಪರಿಶೀಲನೆಗಳು, ಸೂತ್ರಗಳನ್ನು ಗುರುತಿಸುವುದು ಸೇರಿವೆ.

ಘಟಕಾಂಶಗಳು[ಬದಲಾಯಿಸಿ]

ಜಿಡಬ್ಲ್ಯೂಟಿಯ ಪ್ರಮುಖ ಅಂಶಗಳಲ್ಲಿ ಕೆಳಕಂಡವು ಸೇರಿವೆ:

ಜಿಡಬ್ಲ್ಯೂಟಿ ಜಾವಾ-ಟು-ಜಾವಾಸ್ಕ್ರಿಪ್ಟ್‌ ಸಂಯೋಜಕ
ಜಾವಾ ಸಂಕೇತಭಾಷೆಯನ್ನು ಜಾವಾಸ್ಕ್ರಿಪ್ಟ್‌ ಸಂಕೇತಭಾಷೆಗೆ ಅನುವಾದಿಸುತ್ತದೆ.
ಜಿಡಬ್ಲ್ಯೂಟಿ ಅಭಿವೃದ್ಧಿ ವಿಧಾನ
ಇದು ಜಿಡಬ್ಲ್ಯೂಟಿ ಅನ್ವಯಿಕೆಗಳನ್ನು ಅಭಿವೃದ್ಧಿ ವಿಧಾನದಲ್ಲಿ ನಡೆಸಲು ಅವಕಾಶ ನೀಡುತ್ತದೆ. (ಈ ಅನ್ವಯಿಕೆಯು ಜಾವಾಸ್ಕ್ರಿಪ್ಟ್‌ಗೆ ಸಂಯೋಜಿಸದೇ, ಜೆವಿಎಮ್‌ನಲ್ಲಿನ ಜಾವಾ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ). ಎರಡನೆಯ ಆವೃತ್ತಿಗೆ ಮುಂಚೆ, ಜಿಡಬ್ಲ್ಯೂಟಿ ಅಂತರಜಾಲ ಅನುಷ್ಠಾನ ವಿಧಾನವು, ನಿಮ್ಮ ಜಿಡಬ್ಲ್ಯೂಟಿ ಸಂಕೇತಭಾಷಾ ದೋಷಗಳನ್ನು ಸರಿಪಡಿಸಲು, ಅನುಷ್ಠಾನಗೊಳಿಸಲಾದ "ಅಂತರಜಾಲ ವೀಕ್ಷಕ"ವನ್ನು ಒದಗಿಸುತ್ತದೆ. ಈ 2.0 ಆವೃತ್ತಿಯಲ್ಲಿ, ದೋಷಪರಿಹಾರ ಕ್ರಿಯೆಗೆ ಒಳಗೊಳ್ಳುತ್ತಿರುವ ಅಂತರಜಾಲಪುಟವನ್ನು ಸಾಮಾನ್ಯ ನಿಯಮಿತ ಜಾಲವೀಕ್ಷಕದಲ್ಲಿ ನೋಡಬಹುದಾಗಿದೆ. ಹಲವು ಜಾಲವೀಕ್ಷಕಗಳಿಗೆ, ಗೂಗಲ್‌ ವೆಬ್‌ ಟೂಲ್ಕಿಟ್‌ ಡೆವಲಪರ್‌ ಪ್ಲಗಿನ್‌ ಎನ್ನಲಾದ ಸ್ವಸಾಮರ್ಥ್ಯದ ಸ್ಥಳೀಯ-ಸಂಕೇತದ ಪ್ಲಗಿನ್‌ ಬಳಕೆಯ ಮೂಲಕ ಅಭಿವೃದ್ಧಿ ವಿಧಾನವು ಬೆಂಬಲಿತವಾಗಿದೆ.
ಜಾವಾ ಲ್ಯಾಂಗ್ವೇಜ್‌ ಪ್ಯಾಕೆಜ್‌ ಕ್ಲಾಸಸ್‌ ಹಾಗೂ ಜಾವಾ ಯುಟಿಲ್‌ ಪ್ಯಾಕೆಜ್‌ ಕ್ಲಾಸ್‌ಗಳು ಸೇರಿದಂತೆ, (ಜಾವಾ ಪ್ರಮಾಣಿತ ಕಡತಸಂಪುಟಗಳಲ್ಲಿ ಸಾಮಾನ್ಯವಾಗಿ ಬಳಸಲಾದ ಅಳವಡಿಕೆಗೆ ಅಗತ್ಯ ಜಾವಾಸ್ಕ್ರಿಪ್ಟ್‌ ನ ಅನುಷ್ಠಾನಗಳಿವೆ).
ಜಿಡಬ್ಲ್ಯೂಟಿ ಅಂತರಜಾಲ ಬಳಕೆದಾರ ಅಂತರಸಂಪರ್ಕ ಕಡತಸಂಪುಟ ಸಂಗ್ರಹ (Web UI class library)
ಇದೊಂದು ಅಗತ್ಯ ಸಾಧನೆ-ಸಲಕರಣೆ,ವಿಜಿಟ್‌ಗಳನ್ನು ರಚಿಸಲು ಬಳಸಲಾದ ಮತ್ತು ಹೊಂದಿಕೊಳ್ಳಬಲ್ಲ ಅಂತರಸಂಪರ್ಕಗಳು ಮತ್ತು ಕಡತ ಸಂಪುಟವಾಗಿದೆ.

ವಿಶಿಷ್ಟ ಲಕ್ಷಣಗಳು[ಬದಲಾಯಿಸಿ]

 • ಡ್ರ್ಯಾಗ್‌-ಡ್ರಾಪ್‌ ಅಥವಾ ಅತ್ಯಾಧುನಿಕ ದೃಶ್ಯ ವಿನ್ಯಾಸ ವ್ಯವಸ್ಥೆಗಳಂತಹ, ಸಾಮಾನ್ಯವಾಗಿ ಬಹಳಷ್ಟು ಸಮಯ ತೆಗೆದುಕೊಳ್ಳುವ ಕ್ರಿಯಾಸಂಬದ್ಧ ಲಕ್ಷಣಗಳನ್ನು ಚಾಲನಾ ಶಕ್ತಿ ಹಾಗೂ ಪುನಃ ಉಪಯೋಗಿಸಬಹುದಾದ ಬಳಕೆದಾರ ಅಂತರಸಂಪರ್ಕ ಅಂಶಗಳ,ಘಟಕಗಳ ಪ್ರೊಗ್ರಾಮರ್‌ಗಳು ಮೊದಲೇ ವಿನ್ಯಾಸಗೊಂಡಿರುವ ಕಡತಸಂಪುಟಗಳನ್ನು ಬಳಸುವರು.[೪]
 • ಸರಳವಾದ ಆರ್‌ಪಿಸಿ ಕ್ರಿಯಾ-ವಿನ್ಯಾಸ-ಪದ್ದತಿ
 • ಅಂತರಜಾಲ ವೀಕ್ಷಕ ಇತಿಹಾಸ ವ್ಯವಸ್ಥಾಪನೆಗಾಗಿರುವ ವಿಧಾನ
 • ಪೂರ್ಣಪ್ರಮಾಣಿತ ಜಾವಾ ದೋಷ-ಸರಿಪಡಿಸುವಿಕೆ ಕ್ರಿಯೆಗಾಗಿ ಬೆಂಬಲ [೩]
 • ಜಿಡಬ್ಲ್ಯೂಟಿ ಇತರೆ ಜಾಲವೀಕ್ಷಕ-ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸಿ ಜಿಡಬ್ಲ್ಯೂಟಿ ತಂತ್ರಾಂಶ ಅಭಿವೃದ್ಧಿಗಾರರಿಗೆ ನೆರವು ನೀಡುತ್ತದೆ.[೩]
 • ಜೆಯುನಿಟ್‌ ಏಕೀಕರಣ
 • ಸುಲಭ ಅಂತರರಾಷ್ಟ್ರೀಕರಣ
 • ಜಾವಾಸ್ಕ್ರಿಪ್ಟ್‌ ನೇಟಿವ್‌ ಇಂಟರ್ಫೇಸ್‌ (ಜೆಎಸ್‌ಎನ್‌ಐ) ಸ್ವಸಾಮರ್ಥ್ಯ ಬಳಸಿ ತಂತ್ರಾಂಶ ಅಭಿವೃದ್ಧಿಗಾರರು ಜಾವಾ ಮೂಲದಲ್ಲಿ ತಾವೇ ರಚಿಸಿದ ಕೈಬರೆಹದಂತಹ ಜಾವಾಸ್ಕ್ರಿಪ್ಟ್‌ ಒದಗಿಸಬಹುದು.
 • ಜಿಡಬ್ಲ್ಯೂಟಿ ಅನ್ವಯಿಕೆಗಳಲ್ಲಿ ಗೂಗಲ್‌ ಎಪಿಐಗಳ ಬಳಕೆಯ ಅಳವಡಿಕೆಗಾಗಿ ಬೆಂಬಲ, (ಆರಂಭಿಕ, ಗೂಗಲ್‌ ಗಿಯರ್ಸ್‌ಗಾಗಿ ಬೆಂಬಲ)
 • ಮುಕ್ತ ಸಂಪನ್ಮೂಲ
 • ತಂತ್ರಾಂಶ ವಿನ್ಯಾಸಕರು ತಮ್ಮ ಅನ್ವಯಿಕೆಗಳನ್ನು ಶುದ್ಧ ವಸ್ತುನಿಷ್ಠ ರೀತಿಯಲ್ಲಿ ತಮ್ಮ ಅನ್ವಯಿಕೆಗಳನ್ನು ಅಭಿವೃದ್ಧಿಗೊಳಿಸುತ್ತಾರೆ.[೪] ಟೈಪ್‌ ಮಾಡುವ ಸಮಯದಲ್ಲಿ ಉಂಟಾಗುವ ಮುದ್ರಣ ದೋಷಗಳು ಮತ್ತಿತರೆ ಹೊಂದಾಣಿಕೆಗೆ ಸರಿಹೊಂದದವುಗಳು ಸೇರಿದಂತೆ ಸಾಮಾನ್ಯ ಜಾವಾಸ್ಕ್ರಿಪ್ಟ್‌ ದೋಷಗಳನ್ನು ಸಂಯೋಜನಾ ಸಮಯದಲ್ಲಿ ಪತ್ತೆ ಮಾಡಲಾಗುತ್ತದೆ.
 • ಜಿಡಬ್ಲ್ಯೂಟಿ ಸಂಯೋಜಕ ಸೃಷ್ಟಿಸುವ ಜಾವಾಸ್ಕ್ರಿಪ್ಟ್‌ನ್ನು ಗೋಜಲಿಲ್ಲದೇ ಅಥವಾ ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಅಥವಾ ಗೋಜಲುಗೊಳಿಸಿ, ಡೌನ್ಲೋಡ್‌ ಮಾಡಲು ಸುಲಭವಾಗುವಂತೆ ಮಾಡಬಹುದು. [೪]
 • ಗೂಗಲ್‌ ಮತ್ತು ಪ್ರಧಾನ ಅಲ್ಲದ,ಮೂರನೆಯ ಪಕ್ಷದವರ ಕಡತಸಂಪುಟಗಳು ಜಿಡಬ್ಲ್ಯೂಟಿಗಾಗಿ ಇಲ್ಲಿ ಲಭ್ಯವಿವೆ. ಜಿಡಬ್ಲ್ಯೂಟಿಯ ಇನ್ನಷ್ಟು ವಿಸ್ತೃತ ವಿಶೇಷಗಳು ಮತ್ತು ಸೌಕರ್ಯಗಳು.[೪]

ಲಭ್ಯವಿರುವ ಸಾಧನ,ಸಲಕರಣೆಗಳು (ವಿಜಿಟ್‌ಗಳು)[ಬದಲಾಯಿಸಿ]

ಕಳೆದ 2010ರ ಫೆಬ್ರವರಿಯಲ್ಲಿ ಬಿಡುಗಡೆಯಾದ 2.0.3 ಆವೃತ್ತಿಯಲ್ಲಿ ಜಿಡಬ್ಲ್ಯೂಟಿ ಕೆಳಕಂಡ ಅಗತ್ಯ ವಿಡ್ಗೆಟ್‌ಗಳನ್ನು ಪ್ರಸ್ತುತಗೊಳಿಸುತ್ತದೆ [೫]:

 • Button
 • PushButton
 • RadioButton
 • CheckBox
 • DatePicker
 • ToggleButton
 • TextBox
 • PasswordTextBox
 • TextArea
 • Hyperlink
 • ListBox
 • MenuBar
 • Tree
 • SuggestBox (auto-complete)
 • RichTextArea
 • Table
 • TabBar
 • DialogBox

ಲಭ್ಯ ಸಾಧನಪಂಕ್ತಿಗಳು[ಬದಲಾಯಿಸಿ]

ಜಿಡಬ್ಲ್ಯೂಟಿ ವಿಡ್ಗೆಟ್‌ಗಳಲ್ಲಿ ಹಲವು ಸಾಧನ-ಪಂಕ್ತಿಗಳ ಪ್ರತ್ಯೇಕ ವಿಧಗಳಿವೆ [೫]:

 • PopupPanel
 • StackPanel
 • StackLayoutPanel
 • HorizontalPanel
 • VerticalPanel
 • FlowPanel
 • VerticalSplitPanel
 • HorizontalSplitPanel
 • SplitLayoutPanel
 • DockLayoutPanel
 • TabPanel
 • TabLayoutPanel
 • DisclosurePanel

ಗೂಗಲ್‌ ವೆಬ್‌ ಟೂಲ್ಕಿಟ್‌ ಇಂಕ್ಯೂಬೇಟರ್‌ ಇನ್ನಷ್ಟು ಅಭಿವೃದ್ಧಿಯ ಹಂತದಲ್ಲಿರುವ ಹೆಚ್ಚುವರಿ ವಿಡ್ಗೆಟ್‌ಗಳನ್ನು ಹೊಂದಿದೆ. ಇವು ಜಿಡಬ್ಲ್ಯೂಟಿಯ ಮುಂದಿನ ಆವೃತ್ತಿಯಲ್ಲಿ ಬಿಡುಗಡೆಯಾಗಬಹುದು.

ಜಿಡಬ್ಲ್ಯೂಟಿಯಲ್ಲಿರದ ಹಲವು ಸಾಮಾನ್ಯ ವಿಡ್ಗೆಟ್‌ಗಳನ್ನು ಮೂರನೆಯ ಪಕ್ಷದ ಕಡತಸಂಪುಟಗಳಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಇಎಕ್ಸ್‌ಟಿ ಜಿಡಬ್ಲ್ಯೂಟಿ, ಜಿಡಬ್ಲ್ಯೂಟಿ ಕಾಂಪೊನೆಂಟ್‌ ಲೈಬ್ರರಿ, ಜಿಡಬ್ಲ್ಯೂಟಿ-ಇಎಕ್ಸ್‌ಟಿ, ಜಿಡಬ್ಲ್ಯೂಟಿ ವಿಡ್ಗೆಟ್‌ ಲೈಬ್ರೆರಿ, ಜಿಡಬ್ಲ್ಯೂಟೈಗರ್‌, ರಾಕೆಟ್‌ ಜಿಡಬ್ಲ್ಯೂಟಿ, ಡೊಜೊ, ಸ್ಮಾರ್ಟ್‌ಜಿಡಬ್ಲ್ಯೂಟಿ ಇತ್ಯಾದಿಗಳು ಸೇರಿವೆ.

ಜಿಡಬ್ಲ್ಯೂಟಿ 2.0[ಬದಲಾಯಿಸಿ]

ಕಳೆದ 2009ರ ಡಿಸೆಂಬರ್‌ 8ರಂದು, ಗೂಗಲ್‌ ತಮ್ಮ ಎರಡನೆಯ ಆವೃತ್ತಿ ಗೂಗಲ್‌ ವೆಬ್‌ ಟೂಲ್ಕಿಟ್‌ 2.0. ಈ ಆವೃತ್ತಿ ಸ್ಪೀಡ್‌ ಟ್ರೇಸರ್‌ ಸಾಧನ ಹೊಂದಿತ್ತು. [೬][೭]

ಜಿಡಬ್ಲ್ಯೂಟಿ 2.0 ಆವೃತ್ತಿಯಲ್ಲಿ ಕೆಳಕಂಡವೂ ಸೇರಿದಂತೆ ಹೊಸ ವಿಶೇಷ ಅಂಶಗಳಿವೆ:[೮]

 • ಅಲ್ಲದೇ 2.0 ಆವೃತ್ತಿಯ ಮುಂಚಿನ ಇನ್‌-ಬ್ರೌಸರ್‌ ಡೆವೆಲಪ್ಮೆಂಟ್‌ ಮೋಡ್‌ (ಮುಂಚೆ ಔಟ್‌ ಆಫ್‌ ಪ್ರಾಸೆಸ್‌ ಹೊಸ್ಟೆಡ್‌ ಮೋಡ್‌ (ಒಒಪಿಎಚ್‌ಎಂ) ನಲ್ಲಿ, ಅನ್ವಯಿಕೆ ಅಭಿವೃದ್ಧಿಯಾಗುತ್ತಿದ್ದಾಗ, ಅದರ ಬೈಟ್‌ಕೋಡ್‌ ಆವೃತ್ತಿ ಚಲಾಯಿಸಲು ಅವಕಾಶ ನೀಡಲು, ಹೊಸ್ಟೆಡ್‌ ಮೋಡ್‌ನಲ್ಲಿ ಪರಿವರ್ತಿತ ಬ್ರೌಸರ್‌ನ್ನು ಸೇರಿಸಲಾಗುತ್ತಿತ್ತು. ಹೀಗೆ 2.0 ಆವೃತ್ತಿಯಲ್ಲಿ, ಹೊಸ್ಟೆಡ್‌ ಮೋಡ್‌ ಅಭಿವೃದ್ಧಿ ಬೆಂಬಲಿತ(ಡೆವೆಲಪ್ಮೆಂಟ್‌ ಮೋಡ್‌ ಎಂದು ಮರುಹೆಸರಿಸಲಾಗಿದೆ). ಇದರಲ್ಲಿ, ಬ್ರೌಸರ್‌ ಪ್ಲಗಿನ್‌ ಬಳಸಿ, ದೋಷ-ಸರಿಪಡಿಸುವ ಕ್ರಮವನ್ನು ಬೆಂಬಲಿತ ಯಾವುದೇ ಬ್ರೌಸರ್‌ ವೀಕ್ಷಿಸಬಹುದಾಗಿದೆ. ಟಿಸಿಪಿ/ಐಪಿ ಬಳಸಿ ಈ ಪ್ಲಗಿನ್‌ ಡೆವಲಪ್ಮೆಂಟ್‌ ಮೋಡ್‌ ಷೆಲ್‌ನೊಂದಿಗೆ ಸಂವಹನ ನಡೆಸುತ್ತದೆ. ಇದರಿಂದಾಗಿ ಇತರೆ ತಾಂತ್ರಿಕೆಯ ವೇದಿಕೆಯಲ್ಲಿಯೂ ದೋಷ-ಸರಿಪಡಿಸುವ ಕ್ರಿಯೆ ನಡೆಸಬಹುದು. (ಉದಾಹರಣೆಗೆ, ಲಿನುಕ್ಸ್‌ ಕಾರ್ಯಾಚರಣಾ ವ್ಯವಸ್ಥೆಯುಳ್ಳ ಕಂಪ್ಯೂಟರ್‌ನಲ್ಲಿ ನಡೆಯುತ್ತಿರುವ ಡೆವಲಪ್ಮೆಂಟ್‌ ಮೋಡ್ ಷೆಲ್‌ನಿಂದ ವಿಂಡೋಸ್‌ನಲ್ಲಿರುವ ಇಂಟರ್ನೆಟ್‌ ಎಕ್ಸ್‌ಪ್ಲೊರರ್‌ನಲ್ಲಿ ಡೀಬಗಿಂಗ್‌ ಮಾಡಬಹುದು.
 • ಭಾಷಾಸಂಕೇತ-ಸಾಲುಗಳನ್ನು ಭಾಗಿಸುವುದು: "ವಿಭಜಿತ ಅಂಶಗಳು"ಮೂಲ ಸಂಕೇತಭಾಷೆಗಳಲ್ಲಿ ಅಭಿವೃದ್ಧಿಗಾರರು ಇಬ್ಭಾಗ ಹಂತಗಳನ್ನು ನೀಡುವುದರೊಂದಿಗೆ, ಜಿಡಬ್ಲ್ಯೂಟಿ ಸಂಯೋಜಕವು ಜಾವಾಸ್ಕ್ರಿಪ್ಟನ್ನು ಒಂದು ದೊಡ್ಡ ಡೌನ್ಲೋಡ್‌ ಬದಲಿಗೆ ಹಲವು ಸಣ್ಣ ತುಣಕುಗಳನ್ನಾಗಿ ಮಾಡುತ್ತದೆ. ಇದರಿಂದಾಗಿ, ಆರಂಭಿಕ ಡೌನ್ಲೋಡ್‌ ಸಮಯದ ಗಾತ್ರ ಕಡಿಮೆಯಾದ ಕಾರಣ, ಅನ್ವಯಿಕೆ ಚಲಾವಣಾ ಸಮಯ ಕಡಿಮೆಯಾಗಿರುವುದು.
 • ಡಿಕ್ಲೆರೇಟಿವ್‌ ಯುಸರ್‌ ಇಂಟರ್ಫೇಸ್‌: ಎಕ್ಸ್‌ಎಂಎಲ್‌ ವಿನ್ಯಾಸ ಬಳಸಿ, ಯುಐಬೈಂಡರ್‌ ಎನ್ನಲಾದ ಹೊಸ ಘಟಕಾಂಶವು, ಸಂಕೇತಗಳ ಬಳಿಗೆ ಸಂಕೇತ-ಘೋಷಣೆಗಳ ಮೂಲಕ ಬಳಕೆದಾರ ಅಂತರಸಂಪರ್ಕಗಳ ಸೃಷ್ಟಿಗೆ ಅವಕಾಶ ನೀಡುತ್ತದೆ. ಇದರಿಂದಾಗಿ ಯುಐ (ಯುಜರ್ ಇಂಟರ್ ಫೇಸ್ )ನಿರ್ಮಾಣ ಮತ್ತು ಅದರ ವರ್ತನೆಯ ಅನುಷ್ಠಾನಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಲು ಅವಕಾಶ ನೀಡುತ್ತದೆ.
 • ರಿಸೋರ್ಸ್‌ ಬಂಡ್ಲಿಂಗ್‌:(ಸಂಪನ್ಮೂಲಗಳ ಸಮಗ್ರಗೊಳಿಸುವುದು) ಕ್ಲಯಂಟ್‌ಬಂಡಲ್‌ ಅಂತರಸಂಪರ್ಕವು ಯಾವುದೇ ರೀತಿಯ ಸಂಪನ್ಮೂಲಗಳನ್ನು (ಚಿತ್ರಗಳು, ಸಿಎಸ್ಎಸ್‌, ಪಠ್ಯ, ದ್ವಿಮಾನ) ಒಟ್ಟಿಗೆ ಸೇರಿಸಿ ಒಂದು ಡೌನ್ಲೋಡ್‌ನಲ್ಲಿ ವರ್ಗಾಯಿಸುತ್ತದೆ. ಇದರಿಂದಾಗಿ ಪ್ರಧಾನ ಕಂಪ್ಯೂಟರ್‌ (ಸರ್ವರ್‌)ನ್ನು ಪದೇ ಪದೇ ಸಂಪರ್ಕಿಸುವ ಅಗತ್ಯ ತಪ್ಪುತ್ತದೆ. ಹಾಗಾಗಿ ಅನ್ವಯಿಕೆ ಸುಪ್ತವಾಗುವಿಕೆ ಅಥವಾ ಸ್ಥಗಿತಗೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.

ನೂತನ ಅಭಿವೃದ್ಧಿ ವಿಧಾನವು ತಾಂತ್ರಿಕ-ವೇದಿಕೆಯಲ್ಲಿನ ವಿಶಿಷ್ಟ ಸಂಕೇತಗಳನ್ನು ತೆಗೆದು ಹಾಕಿರುವ ಕಾರಣ, ಹೊಸ ಆವೃತ್ತಿಯನ್ನು ಅಪೂರ್ವ ಆರ್ಕೈವ್‌ ಆಗಿ ವಿತರಿಸಲಾಗುವುದು. ಇದಕ್ಕೆ ಮುಂಚಿನ ಆವೃತ್ತಿಗಳಲ್ಲಿ ಒಂದು ಬೆಂಬಲಿತ ವೇದಿಕೆಯ ಮೂಲಕ ಇಲ್ಲಿ ವಿತರಿತವಾಗುತ್ತಿತ್ತು.

ಇವನ್ನೂ ಗಮನಿಸಿ[ಬದಲಾಯಿಸಿ]

ಇತರೆ ಚೌಕಟ್ಟುಗಳು[ಬದಲಾಯಿಸಿ]

 • ಎಕ್ಸ್ಟ್ ಜಿಡಬ್ಲ್ಯೂಟಿ - ಗೂಗಲ್‌ ವೆಬ್‌ ಟೂಲ್ಕಿಟ್‌ಗಾಗಿ ರಿಚ್‌ ಇಂಟರ್ನೆಟ್‌ ಅಪ್ಲಿಕೇಷನ್‌ ಫ್ರೇಂವರ್ಕ್‌
 • ಸ್ಮಾರ್ಟ್‌ಜಿಡಬ್ಲ್ಯೂಟಿ, ಸಂಪೂರ್ಣ ವಿಡ್ಗೆಟ್‌ ಲೈಬ್ರರಿ ಹೊಂದಿರುವ ಜಿಡಬ್ಲ್ಯೂಟಿ ಚೌಕಟ್ಟು
 • ವಾಡಿನ್‌, ಜಿಡಬ್ಲ್ಯೂಟಿ ಚೌಕಟ್ಟನ್ನು ಆಧರಿಸಿರುವ ಅದೇ ತರಹದ ನಿಯಮಾವಳಿಗಳ ಮೂಲಗಳು
 • ಜಿಡಬ್ಲ್ಯೂಟಿಇವೆಂಟ್‌ಸರ್ವಿಸ್‌, ಉನ್ನತ-ಮಟ್ಟದ ಜಿಡಬ್ಲ್ಯೂಟಿ ಕಾಮೆಟ್‌/ಸರ್ವರ್‌ ಪುಷ್‌ ಫ್ರೇಮ್,ಮುಂದೆ ತಳ್ಳಬಲ್ಲ ಚೌಕಟ್ಟು
 • ಪೈಜಾಮಾಸ್‌ (ಸಾಫ್ಟ್ವೇರ್‌) ಪೈಜಾಮಾಸ್, ಪೈತನ್‌ ಅನ್ವಯಿಕೆಗೆ ಒಂದು ಜಿಡಬ್ಲ್ಯೂಟಿಯ ಪೋರ್ಟ್
 • ರೂಬಿಜೆಎಸ್‌, ರೂಬಿ ಅನ್ವಯಿಕೆಗಾಗಿ ಜಿಡಬ್ಲ್ಯೂಟಿಯ ಒಂದು ಪೊರ್ಟ್‌ ಸ್ಥಳಾವಕಾಶ
 • ಮೈಕ್ರೊಸಾಫ್ಟ್‌ ಲೈವ್‌ ಲ್ಯಾಬ್ಸ್‌ ವೊಲ್ಟಾ, ಇದೇ ರೀತಿಯ ಪ್ರಸ್ತುತಿ, ಮೈಕ್ರೊಸಾಫ್ಟ್‌ ವತಿಯಿಂದ
 • ಡಬ್ಲ್ಯೂಟಿ - ವೆಬ್‌ ಟೂಲ್ಕಿಟ್‌, ಇದು C++ ವೆಬ್‌ ಟೂಲ್ಕಿಟ್ http://www.webtoolkit.eu/wt
 • ಮಾರ್ಫಿಕ್‌, C#, ಪಾಸ್ಕಲ್‌ ಮತ್ತು ಬೇಸಿಕ್‌ ಕೋಡ್‌ನ್ನು ಜಾವಾಸ್ಕ್ರಿಪ್ಟ್‌ಗೆ ಸಂಯೋಜಿಸುವ ಒಂದು ಅಭಿವೃದ್ಧಿ ತಂತ್ರಾಂಶ
 • Script#, C# ಕೋಡ್ ನ್ನು ಜಾವಾಸ್ಕ್ರಿಪ್ಟ್‌ಗೆ ಸಂಯೋಜಿಸುವ ಅಭಿವೃದ್ಧಿ ತಂತ್ರಾಂಶ.
 • ಷಾರ್ಪ್‌ಕಿಟ್‌, C# ಕೋಡನ್ನು ಜಾವಾಸ್ಕ್ರಿಪ್ಟ್‌ಗೆ ಸಂಯೋಜಿಸುವ ಅಭಿವೃದ್ಧಿ ತಂತ್ರಾಂಶ

ಉಲ್ಲೇಖಗಳು[ಬದಲಾಯಿಸಿ]

 1. "Google Web Toolkit License Information". Google. February 23, 2007. Retrieved 2007-09-25.
 2. "Google Web Toolkit Release Archive". Google. Retrieved 2007-09-25.
 3. ೩.೦ ೩.೧ ೩.೨ Olson, Steven Douglas (2007). Ajax on Java. O'Reilly. p. 183. ISBN 978-0596101879.
 4. ೪.೦ ೪.೧ ೪.೨ ೪.೩ Perry, Bruce W (2007). Google Web Toolkit for Ajax. O'Reilly Short Cuts. O'Reilly. pp. 1–5. ISBN 978-0596510220.
 5. ೫.೦ ೫.೧ "Widget List". Google. Retrieved 2009-04-15.
 6. ಇದೀಗ ಸ್ಪೀಡ್ ಟ್ರೇಸರ್‌ ಒಂದಿಗಿನ ಗೂಗಲ್‌ ವೆಬ್‌ ಟೂಲ್ಕಿಟ್‌ 2.0 ಆವೃತ್ತಿಯ ಪರಿಚಯ
 7. ವೆಬ್‌ ಟೂಲ್ಕಿಟ್‌ನ ಹೊಸ ಆವೃತ್ತಿ ಅನಾವರಣಗೊಳಿಸಿದ ಗೂಗಲ್‌
 8. "GWT 2.0 milestone 1 announcement". Amit Manjhi. Retrieved 2009-10-05.

ಗ್ರಂಥಸೂಚಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

jxdznxb cujadclsnloxzncx jsdnmc,njxlkjslxm\;mxl\cnlzl.zxnncxncsidjsn mnbcx