ಗೂಗಲ್ ಹೆಲ್ತ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಚಿತ್ರ:Googlehealthlogo.png
ಗೂಗಲ್ ಹೆಲ್ತ್ ಲೋಗೋ

ಗೂಗಲ್ ಹೆಲ್ತ್ ಇದು ಗೂಗಲ್‌ನಿಂದ ನಡೆಸಲ್ಪಡುವ ಒಂದು ವೈಯುಕ್ತಿಕ ಆರೋಗ್ಯ ಮಾಹಿತಿ ಕೆಂದ್ರೀಕರಣ ಸೇವೆಯಾಗಿದೆ (ಇದು ಕೆಲವು ವೇಳೆ ವೈಯುಕ್ತಿಕ ಆರೊಗ್ಯ ದಾಖಲೆ ಸೇವೆಗಳು ಎಂಬುದಾಗಿಯೂ ಕರೆಯಲ್ಪಡುತ್ತದೆ). ಇದು ಗೂಗಲ್ ಬಳಕೆದಾರರಿಗೆ ತಮ್ಮ ಆರೋಗ್ಯ ದಾಖಲೆಗಳನ್ನು - ಸ್ವತಃ ಕೈಯಿಂದ ಅಥವಾ ಆರೋಗ್ಯ ಸೇವೆ ಪೂರೈಸುವ ಪಾಲುದಾರರ ಅಕೌಂಟ್‌ಗಳಿಗೆ ಲಾಗಿನ್ ಆಗುವ ಮೂಲಕ - ಸ್ವತಃ ಗೂಗಲ್ ಹೆಲ್ತ್ ವ್ಯವಸ್ಥೆಗೆ ದಾಖಲಿಸುವುದಕ್ಕೆ ಅವಕಾಶವನ್ನು ನೀಡುತ್ತದೆ, ಆ ಮೂಲಕ ಒಂದು ಕೆಂದ್ರೀಕೃತ ಗೂಗಲ್ ಹೆಲ್ತ್ ಪ್ರೊಫೈಲ್‌ ಒಳಗೆ ಪ್ರತ್ಯೇಕ ಆರೋಗ್ಯ ದಾಖಲೆಗಳನ್ನು ಸಂಭಾವ್ಯವಾಗಿ ಸಂಯೋಜಿಸುತ್ತದೆ.

ಸ್ವಯಂ ಇಚ್ಛೆಯಿಂದ ದಾಖಲಿಸಿದ ಮಾಹಿತಿಯು "ಆರೋಗ್ಯ ಸ್ಥಿತಿಗತಿಗಳು, ಔಷಧಗಳು, ಅಲರ್ಜಿಗಳು, ಮತ್ತು ಪರೀಕ್ಷೆಯ ಫಲಿತಾಂಶ"ಗಳನ್ನು ಒಳಗೊಳ್ಳುತ್ತದೆ.[೧] ಒಮ್ಮೆ ದಾಖಲಿಸಿದ ನಂತರ, ಗೂಗಲ್ ಹೆಲ್ತ್ ತನ್ನ ಬಳಕೆದಾರರಿಗೆ ಸಂಯೋಜಿತ ಆರೋಗ್ಯ ದಾಖಲೆ, ದೇಹಸ್ಥಿತಿಯ ಬಗ್ಗೆ ಮಾಹಿತಿ, ಮತ್ತು ಔಷಧಗಳು, ಸನ್ನಿವೇಶಗಳು ಮತ್ತು ಅಲರ್ಜಿಗಳ ನಡುವಣ ಸಂಭಾವ್ಯ ಪರಸ್ಪರ ಕ್ರಿಯೆಗಳ ಬಗ್ಗೆ ಎಚ್ಚರಿಸುವುದಕ್ಕೆ ಈ ಮಾಹಿತಿಗಳನ್ನು ಬಳಸಿಕೊಳ್ಳುತ್ತದೆ.[೨]

ಖಾಸಗಿ ಕಾಳಜಿಗಳು[ಬದಲಾಯಿಸಿ]

ಗೂಗಲ್ ಹೆಲ್ತ್ ಇದು ಒಂದು ಆಪ್ಟ್-ಇನ್ ಸೇವೆಯಾಗಿರುತ್ತದೆ, ಅಂದರೆ ಇದು ವ್ಯಕ್ತಿಗಳ ಸ್ವಂತ ಇಚ್ಛೆಯಿಂದ ಮಾತ್ರವೇ ಮಾಹಿತಿಗಳನ್ನು ವೀಕ್ಷಿಸಬಹುದಾದ ಒಂದು ವ್ಯವಸ್ಥೆಯಾಗಿದೆ. ಇದು ಒಬ್ಬ ವ್ಯಕ್ತಿಯ ಯಾವುದೇ ವೈದ್ಯಕೀಯ ದಾಖಲೆಗಳನ್ನು ಅವನ ಅಥವಾ ಅವಳ ಬಹಿರಂಗ ಅನುಮತಿ ಅಥವಾ ಕ್ರಿಯೆಯ ಹೊರತಾಗಿ ವೀಕ್ಷಿಸುವುದಿಲ್ಲ.[೧] ಆದಾಗ್ಯೂ, ಇದು ಬಳಕೆದಾರರಿಗೆ ಇತರ ವ್ಯಕ್ತಿಗಳಿಗೆ ಪ್ರೊಫೈಲ್‌ಗಳನ್ನು ತಯಾರಿಸುವುದಕ್ಕೆ ಪ್ರೋತ್ಸಾಹಿಸುತ್ತದೆ.[೨]

ಇದರ ಸೇವೆಯ ನಿಯಮಗಳ ಪ್ರಕಾರ, ಗೂಗಲ್ ಹೆಲ್ತ್ ಇದು ೧೯೯೬ ರ ಆರೋಗ್ಯ ವಿಮೆ ಪೋರ್ಟೆಬಿಲಿಟಿ ಮತ್ತು ಅಕೌಂಟೆಬಿಲಿಟಿ ಶಾಸನದಡಿಯಲ್ಲಿ ಒಂದು "ಆವರಿತ ಘಟಕ" (ಕವರ್ಡ್ ಎಂಟಿಟಿ)ಎಂಬುದಾಗಿ ಪರಿಗಣಿಸಲ್ಪಟ್ಟಿಲ್ಲ; ಆದ್ದರಿಂದ, ಎಚ್‌ಐಪಿಎ‌ಎ ನಿಯಮಗಳು ಇದಕ್ಕೆ ಅನ್ವಯಿಸುವುದಿಲ್ಲ.[೩]

ಗೂಗಲ್ ಹೆಲ್ತ್ ಲಂಚ್‌ನ ಬಗ್ಗೆ ಮಾಹಿತಿಯನ್ನು ಒದಗಿಸಿರುವ ಒಂದು ಲೇಖನದಲ್ಲಿ ನ್ಯೂಯಾರ್ಕ್ ಟೈಮ್ಸ್ ನಿಯತಕಾಲಿಕವು ಖಾಸಗಿ ಸಮಸ್ಯೆಗಳ ಬಗ್ಗೆ ಸಮಾಲೋಚನೆಯನ್ನು ನಡೆಸಿತು ಮತ್ತು "ಒಂದು ದೊಡ್ದ ತಾಂತ್ರಿಕ ಕಂಪನಿಯಿಂದ ತಮ್ಮ ವೈಯುಕ್ತಿಕ ಆರೋಗ್ಯದ ಮಾಹಿತಿಯು ಸುರಕ್ಷಿತವಾಗಿರುವುದಿಲ್ಲ ಎಂಬ ಕಾರಣದಿಂದ ರೋಗಿಗಳು ಸ್ಪಷ್ಟವಾಗಿ ಗೂಗಲ್ ಹೆಲ್ತ್ ದಾಖಲೆಗಳನ್ನು ದೂರವಿರಿಸುತ್ತಾರೆ" ಎಂಬುದಾಗಿ ಹೇಳಿತು.[೪] ಇತರರು ಹೇಳುವುದೇನೆಂದರೆ ಗೂಗಲ್ ಹೆಲ್ತ್ ಇದು ಕಡಿಮೆಗೊಳಿಸಲ್ಪಟ್ಟ ವ್ಯಕ್ತಿಗಳ ಕ್ರಿಯೆಗಳ ಶ್ರಮದ ಕಾರಣದಿಂದಾಗಿ ಪ್ರಸ್ತುತದ "ಪೇಪರ್" ದಾಖಲೆ ವ್ಯವಸ್ಥೆಗಿಂತ ಹೆಚ್ಚು ಖಾಸಗಿಯಾಗಿರುತ್ತದೆ.[೫]

ಗೂಗಲ್‌ನ ಪೋಸ್ಟ್-ಲಂಚ್ ಪ್ರತಿಕ್ರಿಯೆಗಳು ಹೇಳುವುದೇನೆಂದರೆ ಇದು ಒಂದು ಆವರಿತ ಘಟಕವಲ್ಲ, ಇದು ಭಿನ್ನವಾದ ಘಟಕವಾಗಿದೆ ಎಂಬುದು. ಕೆಲವರು ಅಂದರೆ ಝಡ್‌ಡಿ‌ನೆಟ್‌ನ ನಾಥನ್ ಮ್ಯಾಕ್‌ಫೀಟರ್‌ರಂತವರು ಇದರೆಡೆಗೆ ತುಂಬ ನಕಾರಾತ್ಮಕ ಅಭಿಪ್ರಾಯವನ್ನು ಹೊಂದಿದ್ದಾರೆ.[೬] ಫ್ರೀ/ಓಪನ್ ಸೋರ್ಸ್ ಸಾಫ್ಟ್‌ವೇರ್ ಆರೋಗ್ಯ ಕ್ರಿಯಾವಾದಿ ಫ್ರೆಡ್ ಟ್ರಾಟರ್‌ರಂತಹ ಇತರರು ಗೂಗಲ್‍ ಹೆಲ್ತ್‌ನಂತಹ ಒಂದು ವೈಯುಕ್ತಿಕ ಆರೋಗ್ಯ ದಾಖಲೆಯು ಎಚ್‌ಐ‌ಪಿಎ‌ಎ ಅಡಿಯಲ್ಲಿ ಬಂದಿದ್ದರೆ ಅದರ ಕಾರ್ಯವು ಅಸಾಧ್ಯವಾಗುತ್ತಿತ್ತು ಎಂಬುದಾಗಿ ಹೇಳಿದರು.[೭]

ಬೆಲೆ ಮತ್ತು ಆದಾಯ[ಬದಲಾಯಿಸಿ]

ಇತರ ಗೂಗಲ್ ಉತ್ಪನ್ನಗಳಂತೆ ಗೂಗಲ್ ಹೆಲ್ತ್ ತನ್ನ ಬಳಕೆದಾರರ ಬಳಕೆಗೆ ವೆಚ್ಚರಹಿತವಾಗಿದೆ. ಆದಾಗ್ಯೂ, ಇತರ ಗೂಗಲ್ ಸೇವೆಗಳಂತಲ್ಲದೇ, ಹೆಲ್ತ್ ಪ್ರಸ್ತುತದಲ್ಲಿ ಯಾವುದೇ ಜಾಹೀರಾತುಗಳನ್ನು ಒಳಗೊಂಡಿಲ್ಲ.[೮] ಗೂಗಲ್ ತನ್ನ ಈ ಸೇವೆಯಿಂದ ಹಣವನ್ನು ಗಳಿಸುವ ಯೋಜನೆಯನ್ನು ಬಹಿರಂಗಗೊಳಿಸಿಲ್ಲ, ಆದರೆ ಒಂದು ವಾಲ್ ಸ್ಟ್ರೀಟ್ ಜರ್ನಲ್ ಲೇಖನವು ಗೂಗಲ್ "ತನ್ನ ಭವಿಷ್ಯಕ್ಕಾಗಿ ಯಾವುದೇ ನಿಯಮಗಳನ್ನು (ಜಾಹೀರಾತುಗಳನ್ನು) ನೀಡಿಲ್ಲ" ಎಂಬುದಾಗಿ ಹೇಳುತ್ತದೆ.[೯]

ಇತಿಹಾಸ[ಬದಲಾಯಿಸಿ]

ಗೂಗಲ್ ಹೆಲ್ತ್ ಇದು ೨೦೦೬ ರ ದಶಕದ ಮಧ್ಯದ ಅವಧಿಯಿಂದ ಬೆಳವಣಿಗೆಯನ್ನು ಹೊಂದುತ್ತಿದೆ. ೨೦೦೮ ರಲ್ಲಿ, ದ ಕ್ಲೇವ್‌ಲ್ಯಾಂಡ್ ಕ್ಲಿನಿಕ್‌ನ ೧,೬೦೦ ರೋಗಿಗಳ ಜೊತೆಗೆ ಈ ಸೇವೆಯು ಎರಡು-ತಿಂಗಳ ಪೈಲಟ್ ಪರೀಕ್ಷೆಗೆ ಒಳಪಟ್ಟಿತು.[೪]

ಮೇ ೨೦, ೨೦೦೮ ರವರೆಗೆ, ಗೂಗಲ್ ಹೆಲ್ತ್ ಇದು ಬೀಟಾ ಟೆಸ್ಟ್ ಹಂತದಲ್ಲಿ ಒಂದು ಸೇವೆಯಾಗಿ ಸಾರ್ವಜನಿಕರಿಗೆ ಬಿಡುಗಡೆ ಮಾಡಲ್ಪಟ್ಟಿತ್ತು.

ಸಪ್ಟೆಂಬರ್ ೧೫, ೨೦೧೦ ರಂದು ಗೂಗಲ್ ಒಮ್ದು ಹೊಸ ನೋಟ ಮತ್ತು ಭಾವನೆಯ ಜೊತೆಗೆ ಸುಧಾರಣೆ ಹೊಂದಲ್ಪಟ್ಟಿದೆ ಎಂಬುದಾಗಿ ಘೋಷಿಸಿತು.[೧೦]

ವಿನ್ಯಾಸ[ಬದಲಾಯಿಸಿ]

 • ಗೂಗಲ್ ಹೆಲ್ತ್‌ನ ಎಪಿಐ ಇದು ಸಂರಕ್ಷಣಾ ದಾಖಲೆಯ ನಿರಂತರತೆಯ (ಸಿಸಿಆರ್) ಒಂದು ಸಬ್‌ಸೆಟ್‌ನ ಮೇಲೆ ಅವಲಂಬಿತವಾಗಿದೆ.[೧೧]
 • ವಿನ್ಯಾಸದ ಒಂದು ಅವಲೋಕನ [೧೨]

ಪಾಲುದಾರರು[ಬದಲಾಯಿಸಿ]

ಗೂಗಲ್ ಹೆಲ್ತ್ ಪ್ರಸ್ತುತದಲ್ಲಿ ವೈದ್ಯಕೀಯ ಮತ್ತು/ಅಥವಾ ಔಷಧಗಳ ಸೂಚಿಯನ್ನು ಈ ಕೆಳಗೆ ನಮೂದಿಸಿರುವ ಪಾಲುದಾರರಿಂದ ಪಡೆದುಕೊಳ್ಳಬಹುದಾಗಿದೆ: ಆಲ್‌ಸ್ಕ್ಪ್ರಿಟ್ಸ್, ಅನ್ವಿತಾ ಹೆಲ್ತ್, ದ ಬೆತ್ ಇಸ್ರೇಲ್ ಡಿಕೊನೆಸ್ ಮೆಡಿಕಲ್ ಸೆಂಟರ್, ಬ್ಲ್ಯು ಕ್ರಾಸ್ ಬ್ಲ್ಯು ಷೀಲ್ಡ್ ಆಫ್ ಮ್ಯಾಸಾಶ್ಯುಸೆಟ್ಸ್, ದ ಕ್ಲೇವ್‌ಲ್ಯಾಂಡ್ ಕ್ಲಿನಿಕ್, ಸಿವಿಎಸ್ ಕೇರ್‌ಮಾರ್ಕ್, ಡ್ರಗ್ಸ್.ಕಾಮ್, ಹೆಲ್ತ್‌ಗ್ರೇಡ್ಸ್, ಲೊಂಗ್ಸ್ ಡ್ರಗ್ಸ್, ಮೆಡ್ಕೋ ಹೆಲ್ತ್ ಸೊಲ್ಯುಷನ್ಸ್, ಕ್ವೆಸ್ಟ್ ಡಯಾಗ್ನೊಸ್ಟಿಕ್ಸ್, ಆರ್‌ಎಕ್ಸ್‌ಅಮೇರಿಕಾ, ಮತ್ತು ವಾಲ್‌ಗ್ರೀನ್ಸ್.[೧೩]

ಇತರ ಸೇವೆದಾರರ ಬಳಿ ಇರುವ ಬಳಕೆದಾರರ ಆರೋಗ್ಯ ದಾಖಲೆಗಳು ಕೈಯಿಂದ ಮಾಹಿತಿಗಳನ್ನು ದಾಖಲಿಸುತ್ತವೆ ಅಥವಾ ಈ ಸೇವೆಯನ್ನು ನಿರ್ವಹಿಸುವುದಕ್ಕೆ ಒಂದು ಗೂಗಲ್ ಹೆಲ್ತ್ ಪಾಲುದಾರರನ್ನು ಹೊಂದುವುದಕ್ಕೆ ಹಣವನ್ನು ತೆರಬೇಕಾಗುತ್ತದೆ. "ಮೆಡಿಕನೆಕ್ಟ್ ಗ್ಲೋಬಲ್" [೧೪] ಇದು ಅಂತಹ ಪಾಲುದಾರರಲ್ಲಿ ಒದಾಗಿದೆ; ಒಂದು ನಿಗದಿತ ಶುಲ್ಕಕ್ಕೆ, ಅವುಗಳು ಜಗತ್ತಿನೆಲ್ಲೆಡೆಯಿಂದ ಒಬ್ಬ ಬಳಕೆದಾರನ ವೈದ್ಯಕೀಯ ದಾಖಲೆಗಳನ್ನು ಸಂಗ್ರಹಿಸುತ್ತವೆ ಮತ್ತು ಅವುಗಳನ್ನು ಅವನ ಅಥವ ಅವಳ ಪ್ರೊಫೈಲ್‌ಗೆ ಸಂಯೋಜಿಸುತ್ತವೆ.

ಜನವರಿ ೨೦೧೦ ರ ನಂತರದಿಂದ, ವಿಥಿಂಗ್ಸ್ ವಿಫಿ ಬಾಡಿ ಸ್ಕೇಲ್ ಇದು ಗೂಗಲ್ ಬಳೆಕೆದಾರರಿಗೆ ತಮಮ್ ಆನ್‌ಲೈನ್ ಪ್ರೊಫೈಲ್‌ಗಳಿಗೆ ಇತರರಿಗೆ ಕಾಣದಂತೆ ತಮ್ಮ ತೂಕ ಮತ್ತು ಇತರ ಮಾಹಿತಿಯನ್ನು ನಮೂದಿಸುವ ಅವಕಾಶವನ್ನು ಒದಗಿಸಿದೆ.[೧೫]

ಇತ್ತೀಚಿನಲ್ಲಿ, ಹೆಚ್ಚುವರಿ ಸುರಕ್ಷತೆಯ ಬೇಡಿಕೆಗೆ ಪ್ರತಿಯಾಗಿ, ಗೂಗಲ್ ಹೆಲ್ತ್ ಟೆಲಿಹೆಲ್ತ್ ಸೇವೆದಾರರ ಜೊತೆಗೆ ಸಂಬಂಧವನ್ನು ಸ್ಥಾಪಿಸುವುದಕ್ಕೆ ಪ್ರಾರಂಭಿಸಿದೆ, ಅದು ಟೆಲಿಹೆಲ್ತ್ ಸಮಾಲೋಚನೆಗಳ ಸಂದರ್ಭದದ ಮಾಹಿತಿಗಳನ್ನು ತಮಮ್ ಆನ್‍ಲೈನ್ ಆರೋಗ್ಯ ದಾಖಲೆಗಳ ಜೊತೆಗೆ ಸಂಯೋಜಿಸುವ ಅವಕಾಶವನ್ನು ಬಳಕೆದಾರರಿಗೆ ನೀಡುತ್ತದೆ. ಪ್ರಸ್ತುತದವರೆಗೆ, ಈ ಕೆಳಗಿನ ಕಂಪನಿಗಳ ಜೊತೆಗೆ ಪಾಲುದಾರಿಕೆಗಳನ್ನು ಮಾಡಿಕೊಂಡಿದೆ: ಎಮ್‌ಡಿಲೈವ್‌ಕೇರ್ ಮತ್ತು ಹೆಲೋ ಹೆಲ್ತ್.[೧೬]

ಪ್ರತಿಸ್ಪರ್ಧಿಗಳು[ಬದಲಾಯಿಸಿ]

ಗೂಗಲ್ ಹೆಲ್ತ್ ಇದು ವೈಯುಕ್ತಿಕ ಆರೋಗ್ಯ ದಾಖಲೆ (ಪಿಎಚ್‌ಆರ್) ಸೇವೆಯಾಗಿದೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದರ ಪ್ರಾಥಮಿಕ ಪ್ರತಿಸ್ಪರ್ಧಿಗಳೆಂದರೆ ಮೈಕ್ರೋಸಾಫ್ಟ್‌ನ ಹೆಲ್ತ್‌ವ್ಯಾಲ್ಯೂ, ಡೊಸಿಯಾ, ಮತ್ತು ದ ಓಪನ್-ಸೋರ್ಸ್ ಇಂಡಿವೋ ಯೋಜನೆ ಮುಂತಾದವುಗಳು. ಯುನೈಟೆಡ್ ಸ್ಟೇಟ್ಸ್‌ನ ಹೊರಗಡೆಯೂ ಕೂಡ ಸ್ಪರ್ಧೆಯನ್ನು ನಡೆಸುವ ಕಂಪನಿಗಳನ್ನು ಒಳಗೊಂಡಂತೆ ಅಲ್ಲಿ ಹಲವಾರು ಇತರ ಓಪನ್-ಸೋರ್ಸ್ ಮತ್ತು ಖಾಸಗಿ ಪಿಎಚ್‌ಆರ್ ವ್ಯವಸ್ಥೆಗಳಿವೆ.[೧೭]

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. ೨.೦ ೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. ೪.೦ ೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. https://www.google.com/health/directory?url=gh.mediconnect.net
 15. http://www.theregister.co.uk/2010/01/29/wiscale/
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. ವೈಯುಕ್ತಿಕವಾಗಿ ನಿಯಂತ್ರಿಸಲ್ಪಟ್ಟ ಆರೋಗ್ಯ ದಾಖಲೆಯ ಇತಿಹಾಸ: "ಇಂಡಿವೋ ಯೋಜನೆಯು ಗಾರ್ಡಿಯನ್ ಏಂಜೆಲ್ ಯೋಜನೆಯನ್ನು ಆಧಾರವಾಗಿರಿಸಿಕೊಂಡಿದೆ, ಇದು ಹಾರ್ವರ್ಡ್ ಮತ್ತು ಎಮ್‌ಐಟಿಗಳ ನಡುವಣ ಒಂದು ಸಹಯೋಗವಾಗಿದೆ..."; ಲೇಖನವು ವೈಯುಕ್ತಿಕವಾಗಿ ನಿಯಂತ್ರಿಸಲ್ಪಟ್ಟ ಆರೋಗ್ಯ ದಾಖಲೆಯ ಒಂದು ಸರಳ ಟೈಮ್‌ಲೈನ್ ಅಥವಾ ನಿರ್ದಿಷ್ಟತೆಯನ್ನು ತೋರಿಸುತ್ತದೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]