ಗೂಗಲ್‌ ಕ್ರೋಮ್‌ ಬ್ರೌಸರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಈ article ಲೇಖನವು the web browser. ಇದರ the operating system, see Google Chrome OS.
Google Chrome
Google Chrome for Android Icon 2016.svg
Google Chrome Screenshot
Google Chrome 6.0 stable displaying Wikipedia on Windows 7
ಅಭಿವೃದ್ಧಿ ಮಾಡಿದವರು Google Inc.
ಪ್ರಾಥಮಿಕ ಬಿಡುಗಡೆ ಸಪ್ಟೆಂಬರ್ 2, 2008 (2008-09-02)
ಬರೆದಿರುವುದು C++, Assembly, Javascript
ಕಾರ್ಯಾಚರಣಾ ವ್ಯವಸ್ಥೆ Windows (XP SP2 and later)
Mac OS X (10.5 and later, Intel only)
Linux
ಎಂಜಿನ್ WebKit (Based on KHTML)
ಲಭ್ಯ 50 languages
ಅಭಿವೃದ್ಧಿಯ ಸ್ಥಿತಿ Active
ವರ್ಗ Web browser
ಪರವಾನಗೆ

Google Chrome Terms of Service (Google Chrome executable), BSD (source code and Chromium executable except chromium 5 beta ),

BSD License with proprietary parts (source code and chromium 5 beta executable (as it integrates Adobe Flash Player 10.1[೧] ))[೨]
ಜಾಲತಾಣ www.google.com/chrome code.google.com/chromium/ dev.chromium.org/

ಗೂಗಲ್‌ ಅಭಿವೃದ್ಧಿಪಡಿಸಿದ ವೆಬ್‌ ಬ್ರೌಸರ್ ಗೂಗಲ್‌ ಕ್ರೋಮ್‌ ಹೆಚ್ಚಾಗಿ ವೆಬ್‌ಕಿಟ್‌ ಲೇಔಟ್‌ ಎಂಜಿನ್‌ ಹಾಗೂ ಅಪ್ಲೀಕೇಷನ್‌ ಫ್ರೇಮ್‌ವರ್ಕ್‌ ಅನ್ನು ಬಳಸುತ್ತದೆ. ಇದು ಮೊದಲ ಬಾರಿಗೆ ಮೈಕ್ರೋಸಾಫ್ಟ್‌ ವಿಂಡೋಸ್‌ನ ಬೀಟಾ ಆವೃತ್ತಿಯ ರೂಪದಲ್ಲಿ 2008 ಸೆಪ್ಟೆಂಬರ್ 2ರಂದು ಬಿಡುಗಡೆಯಾಯಿತಾದರೂ, ಸಾರ್ವಜನಿಕರ ಬಳಕೆಗೆ ಲಭ್ಯವಾಗಿದ್ದು ಮಾತ್ರ 2008 ಡಿಸೆಂಬರ್ 11ರಂದು. ’ಕ್ರೋಮ್‌’ ಎಂಬ ಹೆಸರನ್ನು ವೆಬ್‌ ಬ್ರೌಸರ್‌ನ ಗ್ರಾಫಿಕಲ್ ಬಳಕೆದಾರ ಅಂತರಸಂಪರ್ಕ ಫ್ರೇಮ್‌, ಅಥವಾ “ಕ್ರೋಮ್‌”, ನಿಂದ ಪಡೆದುಕೊಳ್ಳಲಾಯಿತು. ಅತ್ಯಂತ ಹೆಚ್ಚು ಬಳಸಲಾಗುವ ಮೂರನೇ ಬ್ರೌಸರ್ ಎಂಬ ಹೆಗ್ಗಳಿಕೆAs of ಆಗಸ್ಟ್ 2010, ಕ್ರೋಮ್‌ನದ್ದು. ನೆಟ್‌ ಅನ್ವಯಿಸುವಿಕೆಸ್‌‌ನ ಪ್ರಕಾರ, ಪ್ರಪಂಚದಾದ್ಯಂತ ಶೇ.7.54ರಷ್ಟು ಬಳಕೆಯನ್ನು ಹೊಂದಿರುವ ಕ್ರೋಮ್‌ ಹಾಗೆ ನೋಡಿದರೆ ಜಗತ್ತಿನಾದ್ಯಂತ ಬಳಸಾಗುವ ವೆಬ್‌ ಬ್ರೌಸರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.[೩] 2008 ಸೆಪ್ಟೆಂಬರ್‌ನಲ್ಲಿ ಗೂಗಲ್‌ ಕ್ರೋಮಿಯಮ್‌ ಎಂಬ ನಾಮಧೇಯದ ಮುಕ್ತ ಮೂಲ ಕಾರ್ಯಯೋಜನೆಯಾದ ಹಾಗೂ V8 ಜಾವಾಸ್ಕ್ರಿಪ್ಟ್‌ ಎಂಜಿನ್‌ನನ್ನು ಒಳಗೊಂಡಿದ್ದ ’ಕ್ರೋಮ್”ನ ದೊಡ್ಡ ಪ್ರಮಾಣದ ಮೂಲ ಕೋಡ್‌‌ನನ್ನು (ಸೋರ್ಸ್‌ ಕೋಡ್‌) ಬಿಡುಗಡೆಗೊಳಿಸಿತು.[೪][೫] ಗೂಗಲ್‌ನ ಈ ನಡೆಯಿಂದಾಗಿ ಮೂರನೇ ಪಾರ್ಟಿ ಡೆವಲಪರ್‌ಗಳಿಗೆ ಅಂತರ್ಗತ ಸೋರ್ಸ್‌ಕೋಡ್‌ಗಳ ಅಧ್ಯಯನದ ಕಾರ್ಯ ಸುಗಮವಾಗುವುದರ ಜೊತೆಗೆ ಮ್ಯಾಕ್‌ OS X ಮತ್ತು ಲಿನಕ್ಸ್‌ ನಡುವೆ ಸಂಪರ್ಕ ಕಲ್ಪಿಸುವಲ್ಲಿಯೂ ಸಾಕಷ್ಟು ನೆರವಾಯಿತು. V8ನ್ನು ಬಳಸಿಕೊಂಡು ಇನ್ನುಳಿದ ಬ್ರೌಸರ್‌ಗಳೂ ಕೂಡ ತಮ್ಮ ವೆಬ್‌ ಅನ್ವಯಿಸುವಿಕೆ‌ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬಹುದು ಎಂದು ಗೂಗಲ್‌ನ ವಕ್ತಾರರೊಬ್ಬರು ಭರವಸೆ ವ್ಯಕ್ತಪಡಿಸಿದ್ದಾರೆ.[೬] ಗೂಗಲ್‌ ಪ್ರಣೀತ ಕ್ರೋಮಿಯಮ್‌ ತನಗೆ ನೀಡಲಾದ ಹಾಗೂ ತನ್ನೊಳಗೆ ಮುಕ್ತ ಸೋರ್ಸ್‌ ಕೋಡ್‌ ಹಾಗೂ ಕ್ಲೋಸ್ಡ್‌-ಸೋರ್ಸ್‌ ಸಾಫ್ಟ್‌ವೇರ್‌‌ ಪ್ರೋಗ್ರಾಂಗಳೆರಡನ್ನೂ ಒಳಗೊಳ್ಳಲು ಅವಕಾಶ ನೀಡುವ ಬಿಎಸ್‌ಡಿ ಪರವಾನಗಿ ಅಡಿಯಲ್ಲಿಯೇ ಬಿಡುಗಡೆಯಾಯಿತು.[೭][೮] ಈ ಮೂಲ ಕೋಡ್‌ನ ಇತರೆ ಭಾಗಗಳು ಅನೇಕ ರೀತಿಯ ಮುಕ್ತ-ಮೂಲ ಪರವಾನಗಿಗೊಳಪಟ್ಟಿವೆ.[೯] ಕ್ರೋಮಿಯಮ್‌ ಕ್ರೋಮ್‌ನ ಹೆಸರಿನಲ್ಲಿ ತನ್ನೆಲ್ಲಾ ವೈಶಿಷ್ಟ್ಯಗಳನ್ನೂ ಒದಗಿಸುತ್ತದೆ. ಆದರೆ, ಸ್ವಯಂಚಾಲಿತ ನವೀಕರಣಗಳ ಕೊರತೆ ಅದಕ್ಕಿದೆ. ಅದು ಹೊಂದಿರುವ ಗೂಗಲ್‌ ಬ್ರ್ಯಾಂಡಿಂಗ್‌ನ ಹಲವು ಬಣ್ಣಗಳ ಗೂಗಲ್‌ ಲೋಗೋ ಬದಲಿಗೆ ನೀಲಿ ಬಣ್ಣದ ಲೋಗೋವನ್ನು ಅದು ಹೊಂದಿದೆ.[೧೦]

ಇತಿಹಾಸ[ಬದಲಾಯಿಸಿ]

ಆರು ವರ್ಷಗಳ ಕಾಲ ಸ್ವತಂತ್ರ ವೆಬ್‌ ಬ್ರೌಸರ್‌ನ ನಿರ್ಮಾಣದ ಕುರಿತು ಗೂಗಲ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎರಿಕ್ ಷ್ಮಿತ್‌ಗೆ ಅಂಥ ಒಲವಿರಲಿಲ್ಲ. ಅವರೇ ಹೇಳಿದ ಪ್ರಕಾರ, “ಆ ಸಮಯದಲ್ಲಿ ಗೂಗಲ್‌ ಚಿಕ್ಕ ಸಂಸ್ಥೆಯಾಗಿತ್ತು”, ಹಾಗೂ ಮಾರುಕಟ್ಟೆಯಲ್ಲಿ ಅಂಬೆಗಾಲಿಕ್ಕುತ್ತಿದ್ದ ಸಂಸ್ಥೆಯೊಂದು “ಬ್ರೌಸಿಂಗ್ ಕದನಕ್ಕೆ ಅಣಿಯಾಗುವುದು” ಅವರಿಗೆ ಬೇಕಿರಲಿಲ್ಲ. ಆದರೆ, ಸಹಸಂಸ್ಥಾಪಕರಾದ ಸೆರ್ಗಿ ಬ್ರಿನ್ ಹಾಗೂ ಲಾರಿ ಪೇಜ್‌ ಫೈರ್‌ಫಾಕ್ಸ್‌ನ ಹಲವಾರು ಮಂದಿ ಡೆವೆಲಪರ್‌ಗಳನ್ನು ನಿಯೋಜಿಸಿಕೊಂಡಿದ್ದರು ಮಾತ್ರವಲ್ಲ, ಕ್ರೋಮ್‌ನ ಪ್ರಾತ್ಯಕ್ಷಿಕೆಯನ್ನೂ ಅಭಿವೃದ್ಧಿಪಡಿಸಿದ್ದರು. “ಅದು ಎಷ್ಟು ಪರಿಣಾಮಕಾರಿಯಾಗಿತ್ತು ಎಂದರೆ ಕೊನೆಗೂ ನಾನು ನನ್ನ ನಿರ್ಧಾರಗಳನ್ನು ಬದಲಿಸಬೇಕಾಯಿತು” ಎಂದಿದ್ದರು ಎರಿಕ್ ಷ್ಮಿತ್‌‌‌.[೧೧]

ಅಧಿಕೃತ ಹೇಳಿಕೆ[ಬದಲಾಯಿಸಿ]

ಈ ಕುರಿತ ನೈಜ ಅಧಿಕೃತ ಹೇಳಿಕೆ 2008 ಸೆಪ್ಟೆಂಬರ್ 3ರಂದು ಹೊರಬೀಳಬೇಕಿತ್ತು ಹಾಗೂ ಸ್ಕಾಟ್ ಮ್ಯಾಕ್‌ಕ್ಲೌಡ್‌ ಅವರು ರಚಿಸಿದ ವ್ಯಂಗ್ಯಚಿತ್ರವನ್ನು ಪತ್ರಕರ್ತರು ಹಾಗೂ ಬ್ಲಾಗರ್ ಗಳಿಗೆ ಕಳುಹಿಸಿಕೊಡುವ ಮೂಲಕ ಈ ಹೊಸ ಬ್ರೌಸರ್‌ನ ನಿರ್ಮಾಣದ ಉದ್ದೇಶ ಹಾಗೂ ವೈಶಿಷ್ಟ್ಯಗಳನ್ನು ವಿವರಿಸುವ ಯೋಜನೆ ನಿಗದಿಯಾಗಿತ್ತು.[೧೨] ಯೂರೋಪ್‌ಗಾಗಿ ಅಭಿವೃದ್ಧಿಪಡಿಸಲಾದ ಪ್ರತಿಗಳನ್ನು ಸಾಕಷ್ಟು ಮೊದಲೇ ಕಳುಹಿಸಿಕೊಡಲಾಯಿತು ಹಾಗೂ 2008 ಸೆಪ್ಟೆಂಬರ್ 1ರಂದು ಇವುಗಳನ್ನು ಸ್ವೀಕರಿಸಿದ ಗೂಗಲ್‌ ಬ್ಲಾಗೊಸ್ಕೋಪ್[೧೩]‌ ಮಾಡಿದ ಜರ್ಮನಿ ಮೂಲದ ಬ್ಲಾಗರ್ ಫಿಲಿಪ್‌ ಲೆನ್ಸೆನ್‌ ಸ್ಕ್ಯಾನ್‌ ಮಾಡಲಾದ 38 ಪುಟಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಿದರು.[೧೪] ಇದೇ ಸಂದರ್ಭದಲ್ಲಿ, ಗೂಗಲ್‌ ಕೂಡ ಈ ಕಾಮಿಕ್‌ ಪ್ರತಿಗಳನ್ನು ತನ್ನ ’ಗೂಗಲ್ ಬುಕ್ಸ್‌[೧೫]’ನಲ್ಲಿ ಪ್ರಕಟಿಸಿದ್ದಲ್ಲದೇ, ತಮ್ಮ ಅಧಿಕೃತ ಬ್ಲಾಗ್‌ನಲ್ಲಿಯೂ ಅದರ ಕುರಿತು ಪ್ರಸ್ತಾಪಿಸಿತು. ಜೊತೆಗೆ, ಇಷ್ಟು ಮುಂಚಿತವಾಗಿ ಪ್ರಕಟಪಡಿಸಿದ ಕುರಿತು ಸ್ಪಷ್ಟೀಕರಣವನ್ನೂ ನೀಡಿತು.[೧೬]

ಸಾರ್ವಜನಿಕವಾಗಿ ಬಿಡುಗಡೆ[ಬದಲಾಯಿಸಿ]

ಕ್ರೋಮ್ ಮತ್ತು ಕ್ರೋಮಿಯಂ ನಡುವಿನ ವ್ಯತ್ಯಾಸವನ್ನು ವಿವರಿಸುವ ಲಿನಕ್ಸ್‌ಗೆ ಕ್ರೋಮಿಯಂ ವಿನ್ಯಾಸ

ಈ ಬ್ರೌಸರ್ 2008 ಸೆಪ್ಟೆಂಬರ್ 2ರಂದು ಮೈಕ್ರೋಸಾಫ್ಟ್‌ ವಿಂಡೋಸ್‌ಗೆಂದೇ (XP ಹಾಗೂ ನಂತರದ್ದು ಮಾತ್ರ) 43 ಭಾಷೆಗಳಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಬಿಡುಗಡೆಯಾಯಿತು. ಬಿಡುಗಡೆಯಾಗುವ ಸಂದರ್ಭದಲ್ಲಿ ಅದು ಹೊಂದಿದ್ದು ಬೀಟಾ ಆವೃತ್ತಿ.[೧೭] ಮೈಕ್ರೋಸಾಫ್ಟ್‌ ವಿಂಡೋಸ್‌ಗೆ ಮಾತ್ರ ಸೀಮಿತವಾಗಿದ್ದರೂ ಕ್ರೋಮ್‌ ತಾನು ಮಾರುಕಟ್ಟೆಗೆ ಕಾಲಿಟ್ಟ ಕೆಲವೇ ಸಮಯದಲ್ಲಿ ಶೇ.1ರಷ್ಟು ಷೇರುಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.[೧೬][೧೮][೧೯][೨೦] ಪ್ರಾರಂಭದ ಬೆಳವಣಿಗೆಯ ನಂತರ 2008ರ ಅಕ್ಟೋಬರ್‌ನಲ್ಲಿ ಕ್ರೋಮ್ ಬಳಕೆದಾರ ಷೇರು ಶೇ.೦.69ಕ್ಕೆ ಇಳಿಯುವ ಮೂಲಕ ಗಮನಾರ್ಹ ಕುಸಿತ ಅನುಭವಿಸಿತು. ನಂತರ 2008ರ ಡಿಸೆಂಬರ್‌ನಲ್ಲಿ ಮತ್ತೊಮ್ಮೆ ಮೇಲ್ಮುಖ ಬೆಳವಣಿಗೆಯನ್ನು ದಾಖಲಿಸಿ ಶೇ.1ರ ಗಡಿ ದಾಟಿತು.[೨೧] ವರ್ಷದ ಮೊದಲಾರ್ಧದಲ್ಲಿ ಗೂಗಲ್‌ ಮ್ಯಾಕ್‌ OS X ಮತ್ತು ಲಿನಕ್ಸ್‌ಗಳಿಗಾಗಿಯೂ ಕ್ರೋಮ್‌ ಆವೃತ್ತಿಯನ್ನು ಬಿಡುಗಡೆ ಮಾಡುವ ಹಂಚಿಕೆಯಲ್ಲಿದೆ ಎಂದು CNET 2009 ಜನವರಿಯಲ್ಲಿ ವರದಿ ಮಾಡಿತು.[೨೨] ಮೊದಲ ಅಧಿಕೃತ ಕ್ರೋಮ್‌ ಮ್ಯಾಕ್‌ OS X ಹಾಗೂ ಲಿನಕ್ಸ್‌ ಡೆವಲಪರ್ ಪೂರ್ವವೀಕ್ಷಣೆ[೨೩] ಗಳನ್ನು ಬ್ಲಾಗ್ ಪೋಸ್ಟ್‌ ಮುಖಾಂತರ 2009 ಜೂನ್‌ 4ರಂದು ಘೋಷಿಸಲಾಯಿತು. ಅವರ ಮುಖ್ಯ ಉದ್ಧೇಶವೆಂದರೆ, ಆ ಬ್ಲಾಗ್‌ ಪೋಸ್ಟ್‌[೨೪] ನಲ್ಲಿಯೇ ಹೇಳಿದಂತೆ, ಹೇಳಿಕೊಳ್ಳುವಂಥ ವೈಶಿಷ್ಟ್ಯಗಳನ್ನು ಹೊಂದಿರದ ಕ್ರೋಮ್‌ನ ಸಾಮಾನ್ಯ ಬಳಕೆಗಿಂತ ಅದನ್ನು ಕುರಿತು ಶೀಘ್ರದಲ್ಲಿ ಸಲಹೆಗಳನ್ನು, ಅಭಿಪ್ರಾಯಗಳನ್ನು ಸಂಗ್ರಹಿಸುವುದಾಗಿತ್ತು. 2009ರ ಡಿಸೆಂಬರ್‌ನಲ್ಲಿ ಮ್ಯಾಕ್‌ OS X ಮತ್ತು ಲಿನಕ್ಸ್‌ ಗಾಗಿ ಕ್ರೋಮ್‌ನ ಬೀಟಾ ಆವೃತ್ತಿಯನ್ನು ಗೂಗಲ್‌ ಬಿಡುಗಡೆ ಮಾಡಿತು.[೨೫][೨೬] ಮೊಟ್ಟ ಮೊದಲ ಬಾರಿಗೆ ಮೂರೂ ವೇದಿಕೆಗಳನ್ನು ಬೆಂಬಲಿಸುವ ನಿಟ್ಟಿನಲ್ಲಾದ ಸ್ಟೇಬಲ್‌ ಬಿಡುಗಡೆ ಎಂದರೆ 2010 ಮೇ 25ರಂದು ಬಿಡುಗಡೆಯಾದ ’ಗೂಗಲ್‌ ಕ್ರೋಮ್‌ 5.0’ ಎನ್ನಬಹುದು.[೨೭] 2010ರಲ್ಲಿ ಮೈಕ್ರೋಸಾಫ್ಟ್‌ ವಿಂಡೋಸ್‌ನ ಯೂರೋಪಿಯನ್ ಆರ್ಥಿಕ ವಲಯದ ಬಳಕೆದಾರರ ಪಾಲಿಗೆ ನೀಡಲಾದ ಹನ್ನೆರಡು ಬ್ರೌಸರ್‌ಗಳಲ್ಲಿ ಕ್ರೋಮ್‌ ಕೂಡ ಒಂದು.[೨೮]

ಅಭಿವೃದ್ಧಿ[ಬದಲಾಯಿಸಿ]

ಗೂಗಲ್‌ನ 25 ವಿಭಿನ್ನ ಕೋಡ್‌ ಲೈಬ್ರರಿಗಳಿಂದ ಕ್ರೋಮ್‌ನ್ನು ಸಂಯೋಜಿಸಲಾಗಿತ್ತು. ಮೋಝಿಲ್ಲಾದ ನೆಟ್‌ಸ್ಕೇಪ್‌ ಪೋರ್ಟಬಲ್ ರನ್‌ಟೈಮ್‌, ನೆಟ್‌ವರ್ಕ್‌ ಸೆಕ್ಯುರಿಟಿ ಸರ್ವೀಸಸ್‌, NPAPI ಮತ್ತು SQLite ರೀತಿಯ ಮೂರನೇ ಪಾರ್ಟಿಗಳನ್ನು ಸೇರಿದಂತೆ ಹಲವಾರು ಮುಕ್ತ-ಸೋರ್ಸ್‌ ಪ್ರಾಜೆಕ್ಟ್‌ಗಳನ್ನು ಕ್ರೋಮ್‌ನ ಸಂಯೋಜನೆಯಲ್ಲಿ ಬಳಸಲಾಗಿತ್ತು.[೨೯] ವಿಘಟನೆಗೆ (ಅಡೋಬ್‌/ಮೊಝಿಲ್ಲಾಗಳ ಟ್ಯಾಮರೀನ್‌ ರೀತಿ) ಜಾವಾಸ್ಕ್ರಿಪ್ಟ್‌ ವರ್ಚ್ಯಯಲ್‌ ಯಂತ್ರ ಅತ್ಯಂತ ಸೂಕ್ತ ಪ್ರಾಜೆಕ್ಟ್‌ ಎಂದು ನಂಬಲಾಗಿತ್ತು ಮತ್ತು ‌ಇದನ್ನು ಡೆನ್ಮಾರ್ಕ್‌ನ ಆಹುಷ್‌ನಲ್ಲಿರುವ ಲಾರ್ಸ್‌ ಬಾಕ್ ನೇತೃತ್ವದ ತಂಡ ನಿರ್ವಹಿಸುತ್ತಿತ್ತು. ಗೂಗಲ್‌ನ ಮೂಲಗಳ ಪ್ರಕಾರ, ಪ್ರಸಕ್ತ ಅನ್ವಯಿಸುವಿಕೆಗಳನ್ನು ಹೆಚ್ಚಾಗಿ “ಕಾರ್ಯಕ್ಷಮತೆ ಹಾಗೂ ಅಂತರ್ ಚಟುವಟಿಕೆಗಳಿಗೆ ಅಷ್ಟೊಂದು ಮಹತ್ವವಿಲ್ಲದ ಚಿಕ್ಕ ಪ್ರೋಗ್ರಾಂಗಳಿಗೆ ಸರಿಹೊಂದುವಂತೆ ವಿನ್ಯಾಸ ಮಾಡಲಾಗಿತ್ತು”, ಆದರೆ, ಜಿಮೇಲ್‌ ರೀತಿಯ ವೆಬ್‌ ಅನ್ವಯಿಸುವಿಕೆ‌ಗಳು ಮಾತ್ರ “DOM ಮ್ಯಾನುಪುಲೇಷನ್‌ಗಳು ಹಾಗೂ ಜಾವಾಸ್ಕ್ರಿಪ್ಟ್‌ಗಳಿಗೆ ಸಂಬಂಧಿಸಿದಂತೆ ವೆಬ್‌ ಬ್ರೌಸರ್‌ಗಳನ್ನು ಅತ್ಯಂತ ಗರಿಷ್ಠ ಮಟ್ಟದಲ್ಲಿ ಬಳಸುತ್ತಿವೆ”. ಹಾಗಾಗಿ, ಶೀಘ್ರಗತಿಯಲ್ಲಿ ಕಾರ್ಯನಿರ್ವಹಿಸುವ ಜಾವಾಸ್ಕ್ರಿಪ್ಟ್‌ ಎಂಜಿನ್‌ನಿಂದ ಸಾಕಷ್ಟು ಲಾಭವನ್ನೂ ಗಿಟ್ಟಿಸಿಕೊಳ್ಳುತ್ತಿವೆ. ಕ್ರೋಮ್‌, ಅಂಡ್ರಾಯಿಡ್‌ ತಂಡದ ಸಲಹೆಯ ಮೇರೆಗೆ ವೆಬ್‌ಪುಟಗಳನ್ನು ಪ್ರದರ್ಶಿಸಲು ಮಾಡೆಲ್‌ಗಳನ್ನು ಚಿತ್ರಗಳನ್ನಾಗಿ ಮಾರ್ಪಡಿಸುವ ವೆಬ್‌ಕಿಟ್‌ ಎಂಜಿನ್‌ನನ್ನು ಬಳಸಿಕೊಳ್ಳುತ್ತದೆ.[೧೫] ಬಹುತೇಕ ಬ್ರೌಸರ್‌ಗಳಂತೆ ಕ್ರೋಮ್‌ ಕೂಡ ಬಿಡುಗಡೆಗಿಂತ ಮೊದಲು ಆಂತರಿಕವಾಗಿ ವಿಸ್ತೃತ ಮಟ್ಟದಲ್ಲಿ ಪರೀಕ್ಷಿಸಲ್ಪಟ್ಟಿತ್ತು. ಈ ಪರೀಕ್ಷೆ ಯುನಿಟ್‌ ಟೆಸ್ಟಿಂಗ್‌, “ಸ್ಕ್ರಿಪ್ಟೆಡ್‌ ಬಳಕೆದಾರ ಕ್ರಿಯೆಗಳ ಸ್ವಯಂಚಾಲಿತ ಬಳಕೆದಾರ ಅಂತರಸಂಪರ್ಕ” ಅನ್ನೂ ಒಳಗೊಂಡಿತ್ತು. ಜೊತೆಗೆ, ಫಝ್‌ ಪರೀಕ್ಷೆ ಹಾಗೂ ವೆಬ್‌ಕಿಟ್‌ ಲೇಔಟ್‌ ಪರೀಕ್ಷೆಗಳು (ಕ್ರೋಮ್‌ ಈ ಪರೀಕ್ಷೆಗಳಲ್ಲಿ ಶೇ.99 ರಷ್ಟು ಯಶಸ್ವಿಯಾಗಿದೆ) ಕೂಡ ಕ್ರೋಮ್‌ನ ಕಾರ್ಯದಕ್ಷತೆಯನ್ನು ಓರೆಗೆ ಹಚ್ಚಿದ್ದವು. ಗೂಗಲ್‌ ಇಂಡೆಕ್ಸ್‌ನ ಒಳಗಿರುವ ಸಾಮಾನ್ಯಾತಿಸಾಮಾನ್ಯವಾದ ಸಾವಿರಾರು ವೆಬ್‌ಸೈಟ್‌ಗಳ ಎದುರು 20-30 ನಿಮಿಷಗಳೊಳಗೆ ಹೊಸ ಬ್ರೌಸರ್ ಬಿಲ್ಡ್‌ಗಳ ಸಾಮರ್ಥ್ಯವನ್ನು ಓರೆಗೆ ಹಚ್ಚಲಾಗುತ್ತದೆ.[೧೫] ಮುಖ್ಯವಾಗಿ ವೆಬ್‌ ಅನ್ವಯಿಸುವಿಕೆ‌ಗಳಿಗೆ ಸಂಬಂಧಿಸಿರುವ(ಆಫ್‌ಲೈನ್‌ ಬೆಂಬಲವನ್ನೂ ಒಳಗೊಂಡ) ವೆಬ್‌ ಡೆವಲಪರ್‌ಗಳಿಗೆ ವೈಶಿಷ್ಟ್ಯಗಳನ್ನು ಒದಗಿಸುವ ಗೇರ್ಸ್‌ ಅನ್ನೂ ಕ್ರೋಮ್‌ ಒಳಗೊಂಡಿದೆ.[೧೫] ಹಾಗೆಯೇ, HTML5ಗೆ ಒದಗಿ ಬರುವ ರೀತಿಯಲ್ಲಿ ಗೇರ್ಸ್‌ ಅನ್ನು ಗೂಗಲ್‌ ಬಳಸಿಕೊಳ್ಳುತ್ತಿದೆ.[೩೦]

ಆವೃತ್ತಿ ಬಿಡುಗಡೆಯ ಇತಿಹಾಸ[ಬದಲಾಯಿಸಿ]

ಬಣ್ಣ ಅರ್ಥ
ಕೆಂಪು ಹಳೆಯ ಅವೃತ್ತಿ ಬಿಡುಗಡೆ
ಹಸಿರು ಮೊದಲ ಸ್ಟೇಬಲ್ ಬಿಡುಗಡೆ.
ತಿಳಿ ನೀಲಿ ಪ್ರಸ್ತುತ ಬೀಟಾ ಬಿಡುಗಡೆ
ಕೆನ್ನೇರಳೆ ಪ್ರಸ್ತುತ ದೆವ್ ಬಿಡುಗಡೆ
ಬಂಗಾರದ ಬಣ್ಣ ಪ್ರಸ್ತುತ ಕನೆರಿ ಬಿಡುಗಡೆ
ಪ್ರಮುಖ ಆವೃತ್ತಿ ಬಿಡುಗಡೆ ದಿನಾಂಕ ವೆಬ್‌ಕಿಟ್‌ ಆವೃತ್ತಿ[೩೧] ವಿ8 ಎಂಜಿನ್ ಆವೃತ್ತಿ[೩೨] ಕಾರ್ಯಾಚರಣಾ ವ್ಯವಸ್ಥೆ ಬೆಂಬಲ ಗಮನಾರ್ಹ ಬದಲಾವಣೆ
0.2.149 2008-09-08 522 0.3 ವಿಂಡೋಸ್‌ ಮೊದಲ ಬಿಡುಗಡೆ
$22.3 ಶತಕೋಟಿ 2008-10-29 ಉತ್ತಮಗೊಳಿಸಿದ ಪ್ಲಗ್ಗಿನ್ಸ್ ಕೆಲಸ ನಿರ್ವಹಣೆ ಮತ್ತು ವಿಶ್ವಾಸಾರ್ಹತೆ ಇನ್‌ಪುಟ್ ಫೀಲ್ಡ್ಸ್‌ಗೆ ಸ್ಪೆಲ್ ಚೆಕ್ಕಿಂಗ್ ಉತ್ತಮಗೊಳಿಸಿದ ವೆಬ್ ಪ್ರಾಕ್ಸಿ ಕಾರ್ಯನಿರ್ವಹಣೆ ಮತ್ತು ವಿಶ್ವಾಸಾರ್ಹತೆ. ಟ್ಯಾಬ್ ಮತ್ತು ವಿಂಡೋ ಮ್ಯಾನೇಜ್‌ಮೆಂಟ್ ನವೀಕರಣ ್ಸ್.
0.4.154 2008-11-24 525 ಬುಕ್‌ಮಾರ್ಕ್ ಮ್ಯಾನೇಜರ್‌ನೊಂದಿಗೆ ಇಂಪೋರ್ಟ್ ಮತ್ತು ಎಕ್ಸ್‌ಪೋರ್ಟ್ ಬೆಂಬಲ. ಅಪ್ಲಿಕೇಶನ್ ಆಪ್ಶನ್‌ಗೆ ಖಾಸಗಿ ಆಯ್ಕೆಯನ್ನು ಸೇರಿಸಲಾಗಿದೆ. ನ್ಯೂ ಬ್ಲಾಕ್ಡ್ ಪಾಪ್‌ಆಪ್ ನೋಟಿಫೀಕೇಶನ್. ಸುರಕ್ಷತಾ ಪಿಕ್ಸ್‌ಗಳು.
$1.56 ಲಕ್ಷಕೋಟಿ 2008-12-11 528 ಮೊದಲ ಸ್ಟೇಬಲ್ ಬಿಡುಗಡೆ.
~2.6 ದಶಲಕ್ಷ 2009-05-24 530 0.4 35% ಫಾಸ್ಟರ್ ಜಾವಾಸ್ಕ್ರಿಪ್ಟ್‌ ಆನ್ ದ ಸನ್‌ಸ್ಪೈಡರ್ ಬೆಂಚ್‌ಮಾರ್ಕ್. ಮೌಸ್ ವೀಲ್ ಸಪೋರ್ಟ್. ಫುಲ್-ಸ್ಕ್ರೀನ್ ಮೋಡ್. ಫುಲ್-ಪೇಜ್ ಜೂಮ್. ಫ್ರಾಮ್ ಆಟೋ‌ಫಿಲ್. ಸಾರ್ಟ್ ಬುಕ್‌ಮಾರ್ಕ್ಸ್ ಬೈ ಲಿಟ್ಲ್. ಬ್ರೌಸರ್ ಮತ್ತು ಡೆಸ್ಟಾಪ್ ಎಡ್ಜಸ್‌ಗೆ ಟ್ಯಾಬ್ ಡಾಕಿಂಗ್ ಬೇಸಿಕ್ ಗ್ರೀಸ್‌ಮಂಕಿ ಸಪೋರ್ಟ್.[೩೩]
3.0.195 2009-10-12 532 1.2 ಇಂಪ್ರೂವ್ಡ್ ಕಸ್ಟಮೈಸೇಜಶ್‌ಗೆ ನ್ಯೂ "ನ್ಯೂ ಟ್ಯಾಬ್" ಪೇಜ್. 25% ಫಾಸ್ಟರ್ ಜಾವಾಸ್ಕ್ರಿಪ್ಟ್‌. ಎಚ್‌ಟಿಎಂಎಲ್5ವಿಡಿಯೋ ಮತ್ತು ಆಡಿಯೋ ಟ್ಯಾಗ್ ನೆರವು. ಲೈಟ್‌ವೇಟ್ ಥೆಮಿಂಗ್.
4.0.249 2010-01-25 532.5 1.3 ವಿಸ್ತರಣೆ, ಬುಕ್‍ಮಾರ್ಕ್ ಸಿನ್ಕ್ರೋನೈಸೆಸನ್ , ಹೆಚ್ಚಿಸಿದ ಅಭಿವರ್ಧಕ ಉಪಕರಣಗಳು, ಉತ್ತಮಗೊಳಿಸಿದ ಎಚ್‌ಟಿಎಂಎಲ್5 ಬೆಂಬಲ, ಕಾರ್ಯನಿರ್ವಹಣೆ ಅಭಿವೃದ್ಧಿ, ಫುಲ್ ಎಸಿಐಡಿ3 ಪಾಸ್, ಎಚ್‌ಟಿಟಿಪಿ‌ ಬೈಟ್ ರೇಂಜ್ ಬೆಂಬಲ, ಸುಧಾರಿತ ಸುರಕ್ಷತೆ, ಮತ್ತು ಪ್ರಯೋಗಾತ್ಮಕ ಹೊಸ ಆ‍ಯ್‌೦ಟಿ-ರಿಫ್ಲೆಕ್ಟೆಡ್-XSS ಫೇಚರ್ ಕಾಲ್ಡ್ "XSS ಸಂಪರ್ಕ ಪರಿಶೋಧಕ".[೩೪]
4.1.249 2010-03-17 ಟಾನ್ಸ್‌ಲೇಟ್ ಇನ್ಫೋಬಾರ್, ಹೊಸ ಖಾಸಗಿ ಮುಖ್ಯಲಕ್ಷಣಗಳು, XSS ಸಂಪರ್ಕ ಪರಿಶೋಧಕ‌.[೩೫]
5.0.375 2010-05-25 533 2.1 ವಿಂಡೋಸ್‌
ಮ್ಯಾಕ್‌
ಲಿನಕ್ಸ್
ಉತ್ತಮಗೊಳಿಸಿದ ಜಾವಾಸ್ಕ್ರಿಪ್ಟ್‌ ಕಾರ್ಯನಿರ್ವಹಣೆ, ಬ್ರೌಸರ್ ಕಾರ್ಯನಿರ್ವಹಣೆ ಸಿಂಕ್ರೊನೈಜಿಂಗ್, ಎಚ್‌ಟಿಎಂಎಲ್5ನ ಹೆಚ್ಚಿನ ಬೆಂಬಲ(ಜೊಯೋಲೊಕೇಶನ್ APIಗಳು, ಆ‍ಯ್‌ಪ್ ಕ್ಯಾಶ್, ವೆಬ್ ಸಾಕೆಟ್ಸ್, ಮತ್ತು ಕಡತ ಎಳೆಯುವುದು -ಮತ್ತು-ಬಿಡುವುದು), ಪುನಃನವೀಕರಿಸಿದ ಬುಕ್‌ಮಾರ್ಕ ಮ್ಯಾನೇಜರ್, ಎಡೋಬ್ ಫ್ಲ್ಯಾಶ್ ಪ್ಲೇಯರ್ ಸೇರಿಸಲಾಗಿದೆ.[೩೬][೩೭]
6.0.472 2010-09-02 534.3 2.2 ಟೂಲ್‌ಬಾರ್‌ಗೆ, ಆಮ್ನಿಬಾಕ್ಸ್ ಮತ್ತು ಹೊಸ ಟ್ಯಾಬ್‌ ಪುಟಕ್ಕೆ UI ಬದಲಾಯಿಸಲಾಗಿದೆ (ಉದಾಹರಣೆಗೆ, ಮೆನು ಬಟನ್ಸ್ ವಿಲೀನಗೊಳಿಸಲಾಗಿದೆ). ವಿಸ್ತರಿಸಿದ ಸಿಂಕ್ರೋನೈಸೇಶನ್.[೩೮] ಪೋಲಿಶ್ ಮೇನ್ ಫೇಮ್ UI ಆನ್ ಮ್ಯಾಕ್‌. ವಿಪಿ8/ವೆಬ್‌ಎಂ ವಿಡಿಯೋಗೆ ಬೆಂಬಲ. ಬಿಲ್ಟ್-ಇನ್-ಪಿಡಿಎಫ್ ಬೆಂಬಲ.[೩೯]
7.0.517 2010-09-14 534.7 2.3 ಕೆಲವೊಂದು ಜಾಲ ಪರದೆ ಚೌಕಟ್ಟು ಮತ್ತು ಅಂಶಗಳಿಗಾಗಿ ಜಿಪಿಯು ಸಂಯುಕ್ತವನ್ನು ತ್ವರಿತಗೊಳಿಸಲಾಗಿದೆ.[೪೦] ವೆಬ್ ಅಪ್ಲಿಕೇಶನ್ ಬೆಂಬಲಕ್ಕೆ ಹೊಸ ಟ್ಯಾಬ್ ಪೇಜ್. ಗೂಗಲ್ ಕ್ರೋಮ್ (ವಿಂಡೋಸ್) ಮತ್ತು "ಟ್ಯಾಬ್‌posé" (ಮ್ಯಾಕ್‌) ಪ್ರಯೋಗಗಳು. HTML5 ಕ್ಯಾನ್ವಾಸ್ ಎಲೆಮೆಂಟ್‌ಗಾಗಿ ವೆಬ್‌ಜಿಎಲ್ ವ್ಯಾಪ್ತಿ.

ಮ್ಯಾಕ್‌ ಗೆ ಸೇವೆಗಳು ಮತ್ತು ಆ‍ಯ್‌ಪಲ್‌ಸ್ಕ್ರಿಪ್ಟ್ ಬೆಂಬಲ.[೪೧][೪೧] ಎಸ್ಎಸ್‌ಎಲ್ ಸಾಕೆಟ್ಸ್‌ ಗಾಗಿ ಸಕ್ರಿಯಗೊಳಿಸಲ್ಪಟ್ಟ ಲೇಟ್ ಬೈಂಡಿಂಗ್: ಹೆಚ್ಚಿನ ಆದ್ಯತೆಯುಳ್ಳ ಎಸ್‌ಎಸ್‌ಎಲ್ ಕೋರಿಕೆಗಳನ್ನು ಈಗ ಯಾವಾಗಲೂ ಸರ್ವರ್‌ಗೆ ಮೊದಲು ಕಳಿಸಲಾಗುತ್ತದೆ.

7.0.530 2010-09-21 534.9 ~2.6 ದಶಲಕ್ಷ ವಿಂಡೋಸ್‌ ಉತ್ತಮಗೊಳಿಸಿದ GPU ಸಂಯುಕ್ತವನ್ನು ತ್ವರಿತಗೊಳಿಸಲಾಗಿದೆ ಮತ್ತು UI ಟ್ವೀಕ್‌ಗಳು.

ವೈಶಿಷ್ಟ್ಯಗಳು[ಬದಲಾಯಿಸಿ]

ಸುರಕ್ಷತೆ, ವೇಗ ಹಾಗೂ ದೃಢತೆಯನ್ನು ಇನ್ನಷ್ಟು ಸುಧಾರಿಸುವುದು ಗೂಗಲ್‌ ಕ್ರೋಮ್‌ನ ಬಹುಮುಖ್ಯ ಉದ್ದೇಶ. ತನ್ನ ಎದುರಾಳಿಗಳಿಗೆ ಹೋಲಿಸಿದರೆ ಆಧುನಿಕ ವೆಬ್‌ ಬ್ರೌಸರ್‌ಗಳಲ್ಲಿ ಒಂದಾಗಿರುವ ಕ್ರೋಮ್‌ನ ಮಿನಿಮಲಿಸ್ಟಿಕ್‌ ಬಳಕೆದಾರ ಅಂತರಸಂಪರ್ಕ‌ನ[೧೫] ಬಳಕೆದಾರರಲ್ಲಿ ಅಗಾಧ ಪ್ರಮಾಣದ ವ್ಯತ್ಯಾಸಗಳಿವೆ.[೪೨] ಉದಾಹರಣೆಗೆ, RSS[೪೩] ಸಲಹೆಗಳನ್ನು ಮಾರ್ಪಡಿಸುವ ಸಾಮರ್ಥ್ಯ ಕ್ರೋಮ್‌ಗೆ ಖಂಡಿತವಾಗಿಯೂ ಇಲ್ಲ. ಕ್ರೋಮ್‌ನ ಸಾಮರ್ಥ್ಯವಿರುವುದು ಅದರ ಅನ್ವಯಿಸುವಿಕೆ‌ ಕಾರ್ಯಕ್ಷಮತೆಯಲ್ಲಿ ಹಾಗೂ ಜಾವಾಸ್ಕ್ರಿಪ್ಟ್‌ ನ ಪ್ರಕ್ರಿಯೆ ವೇಗದಲ್ಲಿ. ಬಹುಸಂಖ್ಯಾ ವೆಬ್‌ಸೈಟ್‌ಗಳು ಅವೆರಡನ್ನೂ ಸ್ವತಂತ್ರವಾಗಿ ಪರಿಶೀಲಿಸುತ್ತವೆ. ಇದರಿಂದಾಗಿಯೇ ಕ್ರೋಮ್‌ ನಮ್ಮ ಸಂದರ್ಭದ ಪ್ರಮುಖ ಬ್ರೌಸರ್‌ಗಳಲ್ಲಿ ಅತ್ಯಂತ ಕ್ಷಿಪ್ರಗತಿಯದು ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.[೪೪][೪೫] ಕ್ರೋಮ್‌ನ ಕೆಲವು ಅನನ್ಯ ವೈಶಿಷ್ಟ್ಯಗಳನ್ನು ಇನ್ನಿತರ ಬ್ರೌಸರ್ ಡೆವಲಪರ್‌ಗಳು ಈ ಮೊದಲೇ ಘೋಷಿಸಿದ್ದರು. ಆದರೆ, ಕೇವಲ ಘೋಷಣೆಯ ಮಟ್ಟದಲ್ಲಿಯೇ ಇದ್ದ ಅವೆಲ್ಲವನ್ನೂ ಮೊಟ್ಟ ಮೊದಲ ಬಾರಿಗೆ ಪ್ರಸಕ್ತ ತಂತ್ರಜ್ಞಾನಕ್ಕೆ ಅನ್ವಯಿಸಿದ್ದು ಹಾಗೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದು ಮಾತ್ರ ಗೂಗಲ್‌.[೪೬] ಉದಾಹರಣೆಗೆ, ಇದರ ಬಹುತೇಕ ಗ್ರಾಫಿಕಲ್ ಬಳಕೆದಾರ ಅಂತರಸಂಪರ್ಕ(GUI) ಅನ್ವೇಷಣೆ, ವಿಳಾಸ ಪಟ್ಟಿ ಹಾಗೂ ಹುಡುಕಾಟದ ಪಟ್ಟಿ (ಆಮ್ನಿಬಾಕ್ಸ್‌ ) ಗಳನ್ನು ಮೊದಲ ಬಾರಿಗೆ ಘೋಷಿಸಿದ್ದು ಮೊಝಿಲ್ಲಾ. ತನ್ನ ಫೈರ್‌ಫಾಕ್ಸ್‌ನ ವೈಶಿಷ್ಟ್ಯವನ್ನಾಗಿ ಇವುಗಳನ್ನು ಬಳಸುವುದಾಗಿ ಮೊಝಿಲ್ಲಾ 2008ರ ಮೇ ತಿಂಗಳಲ್ಲಿಯೇ ಘೋಷಿಸಿತ್ತು.[೪೭]

ಆಸಿಡ್‌ ಪರೀಕ್ಷೆಗಳು[ಬದಲಾಯಿಸಿ]

ಗೂಗಲ್ ಕ್ರೋಮ್ 4.0 ಮೇಲೆ ಆ‍ಯ್‌ಸಿಡ್3 ಪರೀಕ್ಷೆಯ ಫಲಿತಾಂಶ

ಗೂಗಲ್‌ ಕ್ರೋಮ್‌ ಮೊದಲ ಬಾರಿಗೆ ಬಿಡುಗಡೆಯಾದಾಗ ಆಸಿಡ್‌1 ಹಾಗೂ ಆಸಿಡ್‌2 ಪರೀಕ್ಷೆಗಳೆರಡನ್ನೂ ಯಶಸ್ವಿಯಾಗಿ ಪೂರೈಸಿತ್ತು. ಆವೃತ್ತಿ 4.0 ಮೂಲಕ ತನ್ನ ಖಾತೆ ತೆರೆದ ಕ್ರೋಮ್‌ ಆಸಿಡ್‌3ರ ಎಲ್ಲಾ ಬಗೆಯ ಅಗ್ನಿಪರೀಕ್ಷೆಗಳನ್ನೂ ಯಶಸ್ವಿಯಾಗಿ ಎದುರಿಸಿತ್ತು.[೪೮]

ಭದ್ರತೆ[ಬದಲಾಯಿಸಿ]

ಕ್ರೋಮ್‌ ಕಾಲಾನುಕ್ರಮದಲ್ಲಿ ಎರಡು ಬ್ಲ್ಯಾಕ್‌ಲೀಸ್ಟ್‌ಗಳ (ಒಂದು ಫಿಶಿಂಗ್‌ ಹಾಗೂ ಒಂದು ಮ್ಯಾಲ್‌ವೇರ್ ಗಳಿಗಾಗಿ) ನವೀಕರಣಗಳನ್ನು ಡೌನ್‌ಲೋಡ್‌ ಮಾಡುತ್ತದೆ ಮತ್ತು ಬಳಕೆದಾರರು ತಮಗರಿವಿಲ್ಲದೇ ಅಪಾಯಕಾರಿ ಸೈಟ್‌ಗಳಿಗೆ ಎಡತಾಕಿದಾಗ ಅವರನ್ನು ಎಚ್ಚರಿಸುವ ಹೊಣೆಗಾರಿಕೆಯನ್ನೂ ಕ್ರೋಮ್‌ ನಿರ್ವಹಿಸುತ್ತದೆ. ಉಚಿತ ಸಾರ್ವಜನಿಕ API ಎಂದೇ ಕರೆಯಲ್ಪಡುವ “ಗೂಗಲ್‌ ಸುರಕ್ಷಿತ ಬ್ರೌಸಿಂಗ್‌ API”ನ ಬಳಕೆದಾರರಿಗೂ ಈ ಸೇವೆಯು ಲಭ್ಯವಿದೆ. ಅಪಾಯಕಾರಿ ಸಾಫ್ಟ್‌ವೇರ್‌ಗಳ ಉಪಸ್ಥಿತಿಯ ಕುರಿತು ಏನೂ ಅರಿವಿರದ, ಪಟ್ಟಿ ಮಾಡಲಾದ ಸೈಟ್‌ಗಳ ಮಾಲಿಕರಿಗೆ ಗೂಗಲ್‌ ಸೂಚನೆ ನೀಡುತ್ತದೆ.[೧೫] ಪ್ರತಿಯೊಂದು ಟ್ಯಾಬ್‌ ಅನ್ನೂ ಅದರ ಪ್ರಕ್ರಿಯೆಗೆ ಸೂಕ್ತವಾಗುವ ರೀತಿಯಲ್ಲಿ ನಿಯೋಜಿಸುತ್ತದೆ. ಆ ಪ್ರಕ್ರಿಯೆಯ ಮೂಲಕ “ಮ್ಯಾಲ್‌ವೇರ್ ತಾನಾಗಿಯೇ ಸ್ಥಾಪಿತಗೊಳ್ಳುವುದನ್ನು” ಹಾಗೂ ಇನ್ನೊಂದು ಟ್ಯಾಬ್‌ಗೆ ಬಂದೊದಗಿದ ಪರಿಸ್ಥಿತಿ ಮಗದೊಂದು ಟ್ಯಾಬ್‌ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸಲಾಗುತ್ತದೆ.[೪೯] ಹಾಗಾಗ್ಯೂ, ಪ್ರಕ್ರಿಯೆ-ನಿಯೋಜನೆ ಮಾದರಿ ತೀರಾ ಸಂಕೀರ್ಣವಾದದ್ದು. ಅತ್ಯಂತ ಕಡಿಮೆ ಅವಕಾಶದ ಸಿದ್ಧಾಂತದ ಪ್ರಕಾರ, ಪ್ರತಿಯೊಂದು ಪ್ರಕ್ರಿಯೆಯೂ ತನ್ನ ಹಕ್ಕುಗಳನ್ನು ವಿಸರ್ಜನೆಗೊಳಿಸಿ ಗಣನೆಯನ್ನು ಪ್ರಾರಂಭಿಸುತ್ತದೆ, ಆದರೆ ಇಷ್ಟೆಲ್ಲಾ ಮಾಡಿಯೂ ಅದಕ್ಕೆ ಫೈಲ್‌ಗಳನ್ನು ರೈಟ್‌ ಮಾಡಲಾಗಲೀ, ಅತಿಸೂಕ್ಷ್ಮ ಪ್ರದೇಶದಿಂದ (ಉದಾ: ದಾಖಲೆಗಳು, ಡೆಸ್ಕ್‌ಟಾಪ್‌) ರೀಡ್‌ ಮಾಡಲಾಗಲೀ ಸಾಧ್ಯವಿಲ್ಲ. ಇದು ಹೋಲಿಕೆಯಲ್ಲಿ, ವಿಂಡೋಸ್‌ ವಿಸ್ತಾ ಹಾಗೂ ವಿಂಡೋಸ್ 7ಗಳ ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ನಲ್ಲಿ ಬಳಕೆಯಾಗುವ “ಸುರಕ್ಷಿತ ಮೋಡ್‌”ಗೆ ಸಾಕಷ್ಟು ಸಾಮ್ಯವಿದೆ. ಸ್ಯಾಂಡ್‌ಬಾಕ್ಸ್ ಟೀಮ್‌ , “ಅಸ್ತಿತ್ವದಲ್ಲಿರುವ ಪ್ರಕ್ರಿಯೆ ಪರಿಧಿಯನ್ನು ತನ್ನ ಸುಪರ್ಧಿಗೆ ತೆಗೆದುಕೊಂಡು ಸೆರೆಮನೆಯಂತೆ ಮಾರ್ಪಾಟು ಮಾಡಿದೆ”[೫೦] ಎನ್ನಲಾಗುತ್ತಿದೆ. ಉದಾಹರಣೆಗೆ, ಯಾರದೋ ಟ್ಯಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ದ್ವೇಷಪೂರಿತ ಸಾಫ್ಟ್‌ವೇರ್‌ಗೆ ಇನ್ನೊಂದು ಟ್ಯಾಬ್‌ನಲ್ಲಿ ನಮೂದಿಸಲಾಗಿರುವ ಕ್ರೆಡಿಟ್‌ ಕಾರ್ಡ್‌ ಸಂಖ್ಯೆಗಳನ್ನು ಪತ್ತೆ ಹಚ್ಚುವ, ಮೌಸ್‌ ಇನ್‌ಪುಟ್‌‌ಗಳ ಜೊತೆ ಸಂವಾದಿಸುವ, ಅಥವಾ, ವಿಂಡೋಸ್‌ಗಳಿಗೆ “ಸ್ಟಾರ್ಟ್‌-ಅಪ್‌ ಮೇಲೆ ಚಾಲನೆಗೊಳ್ಳುವಂತೆ” ತಿಳಿ ಹೇಳುವ ಸಾಮರ್ಥ್ಯವಿರುವುದಿಲ್ಲ ಹಾಗೆಯೇ, ಟ್ಯಾಬ್‌ನನ್ನು ಮುಚ್ಚಿದೊಡನೆಯೇ ಅದೂ ತಾನಾಗಿಯೇ ಅಂತ್ಯಗೊಳ್ಳುತ್ತದೆ.[೧೫] ಸರಳ ಕಂಪ್ಯೂಟರ್ ಸುರಕ್ಷತಾ ಮಾದರಿಯನ್ನು ತನ್ಮೂಲಕ ಎರಡು ಬಗೆಯ ಬಹುಮಟ್ಟದ ಸುರಕ್ಷೆಯನ್ನು (ಬಳಕೆದಾರ ಹಾಗೂ ಸ್ಯಾಂಡ್‌ಬಾಕ್ಸ್ ‌) ಬಲಗೊಳಿಸುತ್ತದೆ ಹಾಗೂ ಬಳಕೆದಾರ ರ ಮನವಿಯನ್ನು ಆಧಾರಿಸಿ ಸ್ಯಾಂಡ್‌ಬಾಕ್ಸ್ ‌ ಸಂವಾದವನ್ನು ಬೆಂಬಲಿಸುತ್ತದೆ.[೫೧] ಪ್ರಮಾಣಬದ್ಧವಲ್ಲದ ಅಡೋಬ್‌ ಫ್ಲ್ಯಾಷ್‌ ಪ್ಲೇಯರ್ ರೀತಿಯ ಪ್ಲಗ್‌ಇನ್‌ಗಳು ಟ್ಯಾಬ್‌ ರೀತಿಯಲ್ಲಿ ಸ್ಯಾಂಡ್‌ಬಾಕ್ಸ್‌ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಇವು ತಮ್ಮಿಂದ ತಾವೇ ಆಗಾಗ್ಗೆ ಬ್ರೌಸರ್‌ನ ಸುರಕ್ಷತೆಯ ಮಟ್ಟಕ್ಕೆ ಚಲಿಸಬೇಕಾಗುತ್ತದೆ. ಆಕ್ರಮಣದ ಸಂಭವನೀಯತೆಯನ್ನು ತಗ್ಗಿಸಲು, ಪ್ಲಗ್‌ಇನ್‌ಗಳು ತಮ್ಮದೇ ಆದ ಪ್ರತ್ಯೇಕ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿರುತ್ತವೆ ಮತ್ತು ಆ ಪ್ರಕ್ರಿಯೆ ಮಾರ್ಪಾಟುಗಾರ (ರೆಂಡೆರರ್) ಜೊತೆ ನೇರ ಸಂಪರ್ಕ ಹೊಂದಿರುತ್ತದೆ ಮತ್ತು ನಿರ್ಧಿಷ್ಟ ಟ್ಯಾಬ್‌ ತಲಾವಾರು ಪ್ರಕ್ರಿಯೆಯಲ್ಲಿ “ಅತ್ಯಂತ ಕಡಿಮೆ ಅವಕಾಶ”ವನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತದೆ. ಕಡಿಮೆ ಅವಕಾಶದ ಸಿದ್ಧಾಂತಗಳನ್ನು ಅನುಸರಿಸುತ್ತಲೇ ಸಾಫ್ಟ್‌ವೇರ್‌‌ ಬಾಹ್ಯ ವಿನ್ಯಾಸಗಳೊಳಗೇ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಪ್ಲಗ್‌ಇನ್‌ಗಳು ಪರಿವರ್ತನೆಗೊಂಡಿರುವುದು ಅವಶ್ಯಕ.[೧೫] ನೆಟ್‌ಸ್ಕೇಪ್‌ ಪ್ಲಗ್‌ಇನ್‌ ಅಪ್ಲಿಕೇಶನ್‌ ಪ್ರೋಗ್ರಾಮಿಂಗ್ ಅಂತರಸಂಪರ್ಕ‌ (NPAPI)[೫೨] ಅನ್ನು ಕ್ರೋಮ್‌ ಬೆಂಬಲಿಸುತ್ತದೆಯಾದರೂ, ಆ‍ಯ್‌ಕ್ಟಿವ್‌ಎಕ್ಸ್‌ ನಿಯಂತ್ರಣಗಳಿಗೆ ಪೂರಕವಾಗಿ ಒದಗಿ ಬರುವುದಿಲ್ಲ. ಕ್ರೋಮ್‌ನ ಇತ್ತೀಚಿನ ಆವೃತ್ತಿಯಲ್ಲಿ ಬ್ರೌಸರ್‌ನ ಒಂದು ಭಾಗವಾಗಿ ಅಡೋಬ್‌ ಫ್ಲ್ಯಾಷ್‌ ಕೂಡಾ ದೊರೆಯಲಿದ್ದು ಅದನ್ನು ಪ್ರತ್ಯೇಕವಾಗಿ ಡೌನ್‌ಲೋಡ್‌ ಮಾಡಿ ಸ್ಥಾಪಿಸುವ ಅನಿವಾರ್ಯತೆ ಇಲ್ಲ ಎಂದು ಗೂಗಲ್‌ 2010 ಮಾರ್ಚ್‌ 30ರಂದು ಘೋಷಿಸಿತು. ಹೀಗೆ ಕ್ರೋಮ್‌ನಲ್ಲಿ ಅಂತರ್ಗತವಾಗಿರುವ ಪ್ಲ್ಯಾಷ್‌ ಕ್ರೋಮ್‌ ಜೊತೆಯೇ ಕಾಲಕ್ಕೆ ತಕ್ಕಂತೆ ಆಧುನಿಕೃತಗೊಂಡಿರುತ್ತದೆ.[೫೩] ಜಾವಾ 6 ನವೀಕರಣ 12 ಜೊತೆ ಹಾಗೂ ಹೆಚ್ಚಿನ ಜಾವಾ ಅಪ್ಲೆಟ್‌ ಬೆಂಬಲ ಕೂಡ ಕ್ರೋಮ್‌ನಲ್ಲಿ ಲಭ್ಯವಿದೆ.[೫೪] 2010 ಮೇ 18ರಲ್ಲಿ ಬಿಡುಗಡೆಯಾದ ಜಾವಾ ನವೀಕರಣವು ಮ್ಯಾಕ್‌ OS Xನ ಅಡಿಯಲ್ಲಿ ಜಾವಾಕ್ಕೆ ಬೆಂಬಲವನ್ನು ಒದಗಿಸಿಕೊಟ್ಟಿದೆ.[೫೫] ಬ್ರೌಸರ್ ಯಾವುದೇ ಬಗೆಯ ಇತಿಹಾಸ ಮಾಹಿತಿಯನ್ನು ಅಥವಾ ಭೇಟಿ ನೀಡಿದ ವೆಬ್‌ಸೈಟ್‌ಗಳ ಕುಕೀಗಳನ್ನು ಸಂಗ್ರಹಿಸುವುದನ್ನು ಖಾಸಗಿ ಬ್ರೌಸಿಂಗ್ ವೈಶಿಷ್ಟ್ಯವಾದ ಇನ್‌ಕಾಗ್ನಿಟೋ ಮಾದರಿ ಕಟ್ಟುನಿಟ್ಟಾಗಿ ವಿರೋಧಿಸುತ್ತದೆ.[೫೬] ಇಂಥ ಸಂದರ್ಭದಲ್ಲಿ ಹೊಸ ಟ್ಯಾಬ್‌ ಪುಟದಲ್ಲಿ ಕ್ರೋಮ್, “ಇಂಟರ್ನೆಟ್‌ ಮೇಲಿನ ನಿಮ್ಮ ಕ್ರಿಯೆಯನ್ನು ಗೋಚರಿಸದಂತೆ ಈ ವೈಶಿಷ್ಟ್ಯ ಮಾಡುವುದಿಲ್ಲ” ಎಂಬ ಎಚ್ಚರಿಕೆಯನ್ನು ನೀಡುತ್ತದೆ. ಹಾಗೆಯೇ, ಇದರ ಕುರಿತು ಎಚ್ಚರಿಕೆಯಿಂದ ಇರುವಂತೆ ಬಳಕೆದಾರರಿಗೆ ಬ್ರೌಸರ್ ಕಿವಿಮಾತು ಹೇಳುತ್ತದೆ:


ಇನ್‌ಕಾಗ್ನಿಟೋ ವಿಧಾನಕ್ಕೂ ಹಾಗೂ ಆಪಲ್‌ನ ಸಫಾರಿ, ಮೊಝಿಲ್ಲಾ ಫೈರ್‌ಫಾಕ್ಸ್‌ 3.5, ಒಪೇರಾ 10.5 ಹಾಗೂ ಇಂಟರ್ನೆಟ್‌ ಎಕ್ಸ್‌ಪ್ಲೋರರ್ 8 ಗಳು ಅಭಿವೃದ್ಧಿಪಡಿಸಿದ ಖಾಸಗಿ ಬ್ರೌಸಿಂಗ್ ವೈಶಿಷ್ಟ್ಯಗಳಿಗೂ ಸಾಕಷ್ಟು ಹೋಲಿಕೆ ಇದೆ.

ವೇಗ[ಬದಲಾಯಿಸಿ]

ಕ್ರೋಮ್‌ ಬಳಸುವ ಜಾವಾಸ್ಕ್ರಿಪ್ಟ್‌ ವರ್ಚ್ಯುಯಲ್ ಯಂತ್ರ, V8 ಜಾವಾಸ್ಕ್ರಿಪ್ಟ್‌ ಎಂಜಿನ್‌, ಡೈನಾಮಿಕ್‌ ಕೋಡ್‌ ಜನರೇಶನ್‌ , ಹಿಡನ್‌ ಕ್ಲಾಸ್‌ ಟ್ರಾನ್ಸಿಷನ್ ‌, ಹಾಗೂ ಪ್ರಿಸೈಸ್ ಗಾರ್ಬೇಜ್‌ ಕಲೆಕ್ಷನ್ ‌ ರೀತಿಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ.[೧೫] ಫೈರ್‌ಫಾಕ್ಸ್‌ 3.0 ಮತ್ತು ವೆಬ್‌ಕಿಟ್‌ ನೈಟ್ಲೀಸ್‌ಗಳಿಗಿಂತಲೂ ಕ್ರೋಮ್‌ನ V8 ಎರಡರಷ್ಟು ವೇಗ ಹೊಂದಿರುವುದು 2008ರಲ್ಲಿ ಗೂಗಲ್‌ ನಡೆಸಿದ ಪರೀಕ್ಷೆಗಳಲ್ಲಿ ಸಾಬೀತಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಸನ್‌ಸ್ಪೈಡರ್ ಜಾವಾಸ್ಕ್ರಿಪ್ಟ್‌ ಬೆಂಚ್‌ಮಾರ್ಕ್‌ ಪರಿಕರಗಳು ಹಾಗೂ ಗೂಗಲ್‌ನ ತೀವ್ರತರದ ಬೆಂಚ್‌ಮಾರ್ಕ್‌ಗಳನ್ನು ಬಳಸಿಕೊಂಡು ಹಲವಾರು ವೆಬ್‌ಸೈಟ್‌ಗಳು ಕಿರಣದ ಜಾಡುಪತ್ತೆ ಹಚ್ಚುವುದು ಹಾಗೂ ಸಮಸ್ಯೆ ನಿವಾರಣೆಯಂಥ ಮಹತ್ವದ ಪರೀಕ್ಷೆಗಳನ್ನು ಕೈಗೊಂಡಿದ್ದವು.[೫೭] ಈ ಎಲ್ಲಾ ಪರೀಕ್ಷೆಗಳ ಬಳಿಕ ಕ್ರೋಮ್‌ ಇನ್ನುಳಿದ ವೆಬ್‌ ಬ್ರೌಸರ್‌ಗಳಿಗಿಂತಲೂ ಎರಡು- ಮೂರು ಪಟ್ಟು ಹೆಚ್ಚು ವೇಗ ಹೊಂದಿದೆ ಎಂಬುದನ್ನು ಒಮ್ಮತದಲ್ಲಿ ಒಪ್ಪಿಕೊಂಡಿದ್ದವು. ಈ ಪರೀಕ್ಷೆಗಳಲ್ಲಿ ಕ್ರೋಮ್‌ನ ಸಾಮರ್ಥ್ಯವನ್ನು ಸಫಾರಿ(ವಿಂಡೋಸ್‌ಗೆ), ಫೈರ್‌ಫಾಕ್ಸ್ 3.0, ಇಂಟರ್ನೆಟ್ ಎಕ್ಸ್‌ಪ್ಲೋರರ್ 7, ಒಪೇರಾ ಹಾಗೂ ಇಂಟರ್ನೆಟ್ ಎಕ್ಸ್‌ಪ್ಲೋರರ್ 8 ಮುಂತಾದ ಅದರ ಎದುರಾಳಿ ವೆಬ್‌ ಬ್ರೌಸರ್‌ಗಳ ಎದುರು ಒರೆಗೆ ಹಚ್ಚಲಾಗಿತ್ತು.[೫೮][೫೯][೬೦][೬೧][೬೨][೬೩] 2008 ಸೆಪ್ಟೆಂಬರ್ 3ರಂದು ಹೇಳಿಕೆ ಬಿಡುಗಡೆ ಮಾಡಿದ ಮೋಝಿಲ್ಲಾ ತನ್ನ ಟ್ರೇಸ್‌ಮಂಕಿ ಜಾವಾಸ್ಕ್ರಿಪ್ಟ್‌ ಎಂಜಿನ್‌ (ಆಗ ಬೀಟಾದಲ್ಲಿತ್ತು) ಹಲವು ರೀತಿಯಲ್ಲಿ ಕ್ರೋಮ್‌ನ V8 ಎಂಜಿನ್‌ಗಿಂತ ವೇಗವಾಗಿದೆ ಎಂದು ಹೇಳಿಕೊಂಡಿತ್ತು.[೬೪][೬೫][೬೬] ಗೂಗಲ್‌ನದೇ ಸಂಕೀರ್ಣಗಳಲ್ಲಿ ವಿಭಿನ್ನ ಬ್ರೌಸರ್‌ಗಳ ಕಾರ್ಯಕ್ಷಮತೆಯ ಕುರಿತು ಮಾತನಾಡಿದ ಮೊಝಿಲ್ಲಾ ಜಾವಾಸ್ಕ್ರಿಪ್ಟ್‌ ಎಂಜಿನ್‌ನ ಪ್ರತಿಪಾದಕ ಜಾನ್‌ ರೆಸಿ ಕ್ರೋಮ್‌ ಇನ್ನುಳಿದ ಬ್ರೌಸರ್‌ಗಳನ್ನು “ನಿಶ್ಯಕ್ತೀಕರಣ”ಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಹಾಗೆಯೇ ಇನ್ನೊಂದು ಹೆಜ್ಜೆ ಮುಂದುವರಿದು, ಗೂಗಲ್‌ನ ಸಂಕೀರ್ಣ(ಸ್ಯುಟ್) ನೈಜ ಪ್ರೋಗ್ರಾಂಗಳ ಪ್ರತಿನಿಧಿ ಎಂದು ಪರಿಗಣಿಸಬಹುದೇ ಎಂದು ಪ್ರಶ್ನಿಸಿದ್ದರು. ಮೊಝಿಲ್ಲಾ ತಂಡ ರಿಕರ್ಷನ್‌ ಟ್ರೇಸಿಂಗ್ ಅನ್ನು ಸಮರ್ಪಕವಾಗಿ ಅನ್ವಯಿಸದ ಕಾರಣ, ಗೂಗಲ್‌ಗೆ ಹೋಲಿಸಿದರೆ, ರಿಕರ್ಷನ್ ಇಂಟೆನ್ಸಿವ್ ಬೆಂಚ್‌ಮಾರ್ಕ್ಸ್‌ನಲ್ಲಿ ಫೈರ್‌ಫಾಕ್ಸ್‌ 3.0 ತೀರಾ ಕಳಪೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದರು.[೬೭] ಕ್ರೋಮ್‌ ಬಿಡುಗಡೆಯಾಗಿ ಎರಡು ವಾರಕ್ಕೆ, ವೆಬ್‌ಕಿಟ್‌ ತಂಡ ಹೊಸ ಜಾವಾಸ್ಕ್ರಿಪ್ಟ್‌ ಯಂತ್ರವಾದ ಸ್ಕ್ವಿರಿಲ್‌ಫಿಷ್ ಎಕ್ಸ್‌ಟ್ರೀಮ್[೬೮] ಅನ್ನು ಬಿಡುಗಡೆಗೊಳಿಸಿತು. ಕ್ರೋಮ್‌ನ V8 ಗೆ ಹೋಲಿಸಿದರೆ ವೇಗದಲ್ಲಿ ಇದು ಶೇ.36ರಷ್ಟು ಹೆಚ್ಚು ಸುಧಾರಣೆಯಾಗಿದೆ ಎಂಬುದು ಅವರು ತಮ್ಮ ಹೊಸ ಉತ್ಪನ್ನಕ್ಕೆ ನೀಡಿದ ವಿಶ್ಲೇಷಣೆ.[೬೯][೭೦][೭೧] ಕ್ರೋಮ್‌, ಫೈರ್‌ಫಾಕ್ಸ್[೭೨] ಹಾಗೂ ಸಫಾರಿ[೭೩], ಮಾಡುವಂತೆ ತನ್ನ ವೆಬ್‌ಸೈಟ್‌ ಲುಕ್‌ಅಪ್ಸ್‌ಗಳ ವೇಗವನ್ನು ವರ್ಧಿಸಲು ಸದೃಢ DNS ಅನ್ನು ಬಳಸಿಕೊಳ್ಳುತ್ತದೆ. ಈ ವೈಶಿಷ್ಟ್ಯ ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ನಲ್ಲಿ ಎಕ್ಸ್‌ಟೆನ್ಷನ್‌ ರೀತಿಯಲ್ಲಿಯೂ ಹಾಗೂ ಒಪೇರಾದಲ್ಲಿ ಯೂಸರ್‌ಸ್ಕ್ರಿಪ್ಟ್‌ ಆಗಿಯೂ ಲಭ್ಯವಿದೆ.

ಸ್ಥಿರತೆ[ಬದಲಾಯಿಸಿ]

ಗೇರ್ಸ್ ತಂಡ ಇಂಟರ್ನೆಟ್‌ ಎಕ್ಸ್‌ಪ್ಲೋರರ್ 8[೭೪] ನಲ್ಲಿ ಲೂಸ್‌ಲಿ ಕಪಲ್ಡ್ ಇಂಟರ್ನೆಟ್ ಎಕ್ಸ್‌ಪ್ಲೋರರ್‌ (LCIE) ಇರುವಂತೆಯೇ ಕ್ರೋಮ್‌ನಲ್ಲಿಯೂ[೭೫] ಒಂದು ಬಹುಪ್ರಕ್ರಿಯೆಯ ವಿನ್ಯಾಸವನ್ನು ಚಲಾವಣೆಗೆ ತಂದಿತ್ತು. ಡಿಫಾಲ್ಟ್‌ ಆಗಿಯೇ ಪ್ರತಿಯೊಂದು ಸೈಟ್‌ನ ಇನ್‌ಸ್ಟೆನ್ಸ್ ಆಗೂ ಪ್ಲಗ್‌ಇನ್‌ಗಳಿಗೂ ಪ್ರತ್ಯೇಕ ಪ್ರಕ್ರಿಯೆಯನ್ನು ಅನ್ವಯಿಸಲಾಗುತ್ತಿದ್ದು ಅದನ್ನು ’ಪ್ರಕ್ರಿಯೆ ಪೃಥಕ್ಕರಣ’ ಎಂದು ಪರಿಗಣಿಸಲಾಗುತ್ತದೆ.[೭೬] ಇದರಿಂದಾಗಿ ಒಂದು ಇನ್ನೊಂದಕ್ಕೆ ಅಡ್ಡಗಾಲು ಹಾಕುವುದನ್ನು ತಪ್ಪಿಸುವುದಲ್ಲದೇ ಸುರಕ್ಷತೆ ಹಾಗೂ ದೃಢತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ, ಒಂದು ಅನ್ವಯಿಸುವಿಕೆ‌ ಒಳಗೆ ನುಸುಳಲು ಯಶಸ್ವಿಯಾಗುವ ಆಕ್ರಮಣಕಾರ ಅದನ್ನೇ ಬಳಸಿಕೊಂಡು ಇನ್ನೊಂದು ಅನ್ವಯಿಸುವಿಕೆ‌ ಒಳಗೆ ನುಸುಳುವುದು ಅಸಾಧ್ಯ.[೭೭] ಹಾಗೆಯೇ, ಪ್ರಸಿದ್ಧ ಸ್ಯಾಡ್ ಮ್ಯಾಕ್‌ ಗೆ ಹೋಲಿಕೆ ಇರುವ ಸ್ಯಾಡ್ ಟ್ಯಾಬ್‌ ಸ್ಕ್ರೀನ್‌ ಆಫ್‌ ಡೆತ್‌ನ ಇನ್‌ಸ್ಟೆನ್ಸ್‌ ಫಲಿತಾಂಶಗಳಲ್ಲಿ ಕಂಡುಬರುವ ವೈಫಲ್ಯದಿಂದ ಸಂಪೂರ್ಣ ಅನ್ವಯಿಸುವಿಕೆ‌ ಘಾಸಿಗೊಳ್ಳದೇ ಕೇವಲ ಒಂದು ಟ್ಯಾಬ್‌ ಮಾತ್ರ ಘಾಸಿಗೊಳ್ಳುತ್ತದೆ. ಈ ತಂತ್ರಗಾರಿಕೆಯಿಂದ ಪ್ರಕ್ರಿಯೆಯೊಂದಕ್ಕೆ ಬೆಲೆ ನಿಗದಿಯಾಗುತ್ತದೆಯಾದರೂ ಚೆದುರಿದಂತಿರುವ ಮೆಮೊರಿ ಪ್ರತಿಯೊಂದು ಇನ್‌ಸ್ಟೆನ್ಸ್‌ಗೂ ಸೀಮಿತವಾಗಿರುವ ಕಾರಣ ಮೆಮೊರಿ ಬ್ಲಾಟ್‌ನಲ್ಲಿ ವ್ಯತ್ಯಯವುಂಟಾಗುತ್ತದೆ. ಜೊತೆಗೆ ಹೊಸದಾದ ಮೆಮೊರಿ ನಿಯೋಜನೆಯ ಅವಶ್ಯಕತೆಯೂ ಬರುವುದಿಲ್ಲ.[೭೮]. ಸಫಾರಿ[೭೯] ಹಾಗೂ ಫೈರ್‌ಫಾಕ್ಸ್‌[೮೦] ಗಳು ಮುಂಬರುವ ತಮ್ಮ ಆವೃತ್ತಿಗಳಲ್ಲಿ ಇದೇ ವಿನ್ಯಾಸವನ್ನು ಅಳವಡಿಸಿಕೊಳ್ಳಲಿವೆ. ಅಂದರೆ, ಭವಿಷ್ಯದಲ್ಲಿನ್ನು ಪ್ರತಿಯೊಂದು ಬ್ರೌಸರ್ ಕೂಡ ಬಹು-ಪ್ರಕ್ರಿಯೆ ವಿನ್ಯಾಸವನ್ನು ಅಳವಡಿಸಿಕೊಳ್ಳಲಿವೆ ಎಂದರ್ಥ. ಟಾಸ್ಕ್ ಮ್ಯಾನೇಜರ್ ಎಂಬ ಪ್ರಕ್ರಿಯೆ ನಿರ್ವಹಣೆ ವ್ಯವಸ್ಥೆಯನ್ನು ಕ್ರೋಮ್‌ ಒಳಗೊಂಡಿದೆ. ಇದರಿಂದ ಬಳಕೆದಾರರು ಯಾವ ಸೈಟ್‌ ಹಾಗೂ ಪ್ಲಗ್‌ಇನ್‌ ಹೆಚ್ಚಿನ ಮೆಮೊರಿಯನ್ನು ಬಳಸುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು, ಅತಿ ಹೆಚ್ಚು ಪ್ರಮಾಣದಲ್ಲಿ ಬೈಟ್‌ಗಳನ್ನು ಡೌನ್‌ಲೋಡ್‌ ಮಾಡಬಹುದು ಹಾಗೂ CPU ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬಹುದು. ಹಾಗೆಯೇ ಇವೆಲ್ಲವುಗಳ ಜೊತೆ ಅವುಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನೂ ಅದು ಒದಗಿಸುತ್ತದೆ.

ಬಳಕೆದಾರರ ಅಂತರಸಂಪರ್ಕ[ಬದಲಾಯಿಸಿ]

ಚಿತ್ರ:Google Chrome - Wikipedia, the free encyclopedia.png
ಗೂಗಲ್ ಕ್ರೋಮ್ ಬಳಕೆದಾರರು ಮ್ಯಾಕ್‌ ಒಎಸ್ ಎಕ್ಸ್ ಜೊತೆಗೆ ಸಂಪರ್ಕ ಕಲ್ಪಿಸಿದ್ದಾರೆ

ಹಿಂದಿರುಗು, ಫಾರ್ವರ್ಡ್‌, ರಿಫ್ರೆಶ್‌, ಬುಕ್‌ಮಾರ್ಕ್‌, ಹೋಗು, ಹಾಗೂ ರದ್ದು ಬಟನ್‌ಗಳನ್ನು ಬಳಕೆ ಅಂತರಸಂಪರ್ಕ ಡಿಫಾಲ್ಟ್‌ ಆಗಿಯೇ ಒಳಗೊಂಡಿರುತ್ತದೆ. ಬಳಕೆದಾರನ್ನು ಹೊಸ ಟ್ಯಾಬ್‌ ಪುಟ ಅಥವಾ ಕಸ್ಟಮ್ ಮುಖಪುಟಕ್ಕೆ ಕರೆದೊಯ್ಯಲು ಮುಖಪುಟ ಬಟನ್‌ ಅನ್ನು ಆಯ್ಕೆಗಳ ಆಧಾರದ ಮೇಲೆ ಕಾನ್ಫಿಗರ್ ಮಾಡಬಹುದು. ಕ್ರೋಮ್‌ನ ಬಳಕೆದಾರ ಅಂತರಸಂಪರ್ಕ‌ನ ಪ್ರಾಥಮಿಕ ಅಂಗಗಳಲ್ಲಿ ಟ್ಯಾಬ್‌ಗಳು ಕೂಡ ಒಂದು. ಆದ್ದರಿಂದಲೇ, ನಿಯಂತ್ರಣಗಳ ಅಡಿಯಲ್ಲಿ ಇರುವುದಕ್ಕಿಂತ ವಿಂಡೋದ ಮೇಲ್ಭಾಗಕ್ಕೆ ಚಲಿಸುವುದೇ ಹೆಚ್ಚು. ಈ ಚಿಕ್ಕ ಬದಲಾವಣೆ, ವಿಂಡೋಗಳು ಹಾಗೂ ಕಂಟೈನ್ ಟ್ಯಾಬ್‌ನನ್ನು ಅವಲಂಬಿಸಿರುವ ಟ್ಯಾಬ್‌ನ ಬ್ರೌಸರ್‌ಗೆ ವ್ಯತಿರಿಕ್ತವಾಗಿ ಪರಿಣಮಿಸುತ್ತದೆ. ಡ್ರ್ಯಾಗಿಂಗ್ ಮೂಲಕ ವಿಂಡೋ ಕಂಟೈನರ್‍‌‍ಗಳ ನಡುವೆ ಟ್ಯಾಬ್‌ಗಳು (ಅವುಗಳ ಸ್ಥಿತಿಯನ್ನೂ ಸೇರಿದಂತೆ) ಮನಬಂದಂತೆ ವರ್ಗಾವಣೆಯಾಗಬಹುದು. ಪ್ರತಿಯೊಂದು ಟ್ಯಾಬ್‌ಗಳೂ ಆಮ್ನಿಬಾಕ್ಸ್ ‌ ಸೇರಿದಂತೆ ತನ್ನದೇ ಆದ ನಿಯಂತ್ರಣಗಳ ಗುಂಪನ್ನು ಹೊಂದಿರುತ್ತದೆ.[೧೫] ಪ್ರತಿಯೊಂದು ಟ್ಯಾಬ್‌ಗಳ ಮೇಲ್ಭಾಗದಲ್ಲೂ ಆಮ್ನಿಬಾಕ್ಸ್‌ URL ಬಾಕ್ಸ್‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅದು ವಿಳಾಸ ಪಟ್ಟಿ ಹಾಗೂ ಹುಡುಕಾಟ ಬಾಕ್ಸ್‌ಗಳೆರಡರ ಕಾರ್ಯವನ್ನೂ ಒಳಗೊಂಡಿರುತ್ತದೆ. ಬಳಕೆದಾರರೊಬ್ಬರು ಮೊದಲೇ ಹುಡುಕಲಾದ ಸೈಟ್‌ ಒಂದರ URL ಅನ್ನು ಪ್ರವೇಶಿಸಿದ ಪಕ್ಷದಲ್ಲಿ ಆಮ್ನಿಬಾಕ್ಸ್‌‌ನಿಂದ ಮತ್ತೊಮ್ಮೆ ನೇರವಾಗಿ ಸೈಟ್‌ ಅನ್ನು ಹುಡುಕಲು ಟ್ಯಾಬ್‌ನನ್ನು ಒತ್ತಲು ಕ್ರೋಮ್‌ ಅವಕಾಶ ಮಾಡಿಕೊಡುತ್ತದೆ. ಬಳಕೆದಾರರು ಆಮ್ನಿಬಾಕ್ಸ್‌ನಲ್ಲಿ ಮತ್ತೊಮ್ಮೆ ನಮೂದಿಸಲು ಪ್ರಾರಂಭಿಸಿದಾಗ ಕ್ರೋಮ್‌ ಈ ಮೊದಲೇ ಭೇಟಿ ನೀಡಿದ ಸೈಟ್‌ಗಳು (URL ಅಥವಾ ಇನ್‌-ಪುಟ ಪಠ್ಯಗಳನ್ನು ಆಧರಿಸಿ), ಜನಪ್ರಿಯ ವೆಬ್‌ಸೈಟ್‌ಗಳು (ಈ ಮೊದಲೇ ಭೇಟಿ ನೀಡಿರಲೇಬೇಕಿಲ್ಲ- ಗೂಗಲ್‌ ಸಜೆಸ್ಟ್‌ನಂತೆ), ಹಾಗೂ ಜನಪ್ರಿಯ ಹುಡುಕಾಟಗಳ ಸಲಹೆ ನೀಡಲು ಪ್ರಾರಂಭಿಸುತ್ತದೆ. ಒಂದು ವೇಳೆ ಗೂಗಲ್‌ ಸಜೆಸ್ಟ್‌ನನ್ನು ಆಫ್‌ ಮಾಡಿದರೂ ಈ ಮೊದಲೇ ಭೇಟಿ ನೀಡಿದ್ದ ಸೈಟ್‌ಗಳ ಆಧಾರಿತ ಸೂಚನೆಗಳು ಯಾವ ಕಾರಣಕ್ಕೂ ಆಫ್‌ ಆಗುವುದಿಲ್ಲ. ಇದರ ಜೊತೆಗೆ ಕ್ರೋಮ್‌ ಆಗಾಗ್ಗೆ ಭೇಟಿ ನೀಡುವ ಸೈಟ್‌ಗಳ URLಗಳನ್ನು ಸ್ವಯಂ-ಸಂಪೂರ್ಣಗೊಳಿಸುತ್ತದೆ.[೧೫] ಒಂದು ವೇಳೆ ಬಳಕೆದಾರರು ಆಮ್ನಿಬಾಕ್ಸ್‌ನಲ್ಲಿ ಹಲವಾರು ಕೀವರ್ಡ್‌ಗಳನ್ನು ನಮೂದಿಸಿ ಎಂಟರ್ ಕೀಲಿಯನ್ನು ಒತ್ತಿದರೆ ಡಿಫಾಲ್ಟ್‌ ಹುಡುಕಾಟದ ಎಂಜಿನ್‌ನನ್ನು ಬಳಸಿಕೊಂಡು ಕ್ರೋಮ್‌ ಹುಡುಕಾಟವನ್ನು ಪ್ರಾರಂಭಿಸುತ್ತದೆ. ಗೂಗಲ್‌ ಕ್ರೋಮ್‌ ಯಾವಾಗ ಗರಿಷ್ಠಗೊಳ್ಳುವುದಿಲ್ಲವೋ ಆಗ ಟ್ಯಾಬ್‌ ಪಟ್ಟಿ ನೇರವಾಗಿ ಶೀರ್ಷಿಕೆ ಪಟ್ಟಿಯಡಿಯಲ್ಲಿ ಕಾಣಿಸಿಕೊಳ್ಳತೊಡಗುತ್ತದೆ. ಗರಿಷ್ಠಗೊಂಡಾಗ ಶೀರ್ಷಿಕೆ ಪಟ್ಟಿಯ ಮೇಲ್ಭಾಗದ ಜೊತೆಗೆ ಟ್ಯಾಬ್‌ಗಳು ಉದ್ಧೀಪನಗೊಳ್ಳುತ್ತವೆ. ಇನ್ನಿತರ ಬ್ರೌಸರ್‌ಗಳಂತೆ ಸಂಪೂರ್ಣ ಸ್ಕ್ರೀನ್‌ ಮಾದರಿಯನ್ನು ಇದು ಹೊಂದಿದ್ದು ಕಾರ್ಯನಿರತ ಸಿಸ್ಟಮ್‌ನ ಅಂತರಸಂಪರ್ಕ‌ ಹಾಗೂ ಬ್ರೌಸರ್ ಕ್ರೋಮ್‌ನ್ನು ಮರೆಮಾಚುತ್ತದೆ. ಕ್ರೋಮ್‌ನ ಹಲವು ವಿಭಿನ್ನ ವೈಶಿಷ್ಟ್ಯಗಳಲ್ಲಿ ಹೊಸ ಟ್ಯಾಬ್‌ ಪುಟ ಕೂಡ ಒಂದು. ಇದು ಬ್ರೌಸರ್ ಮುಖಪುಟವನ್ನು ಬದಲಾಯಿಸುವುದಲ್ಲದೇ ಹೊಸ ಟ್ಯಾಬ್‌ ನಿರ್ಮಾಣಗೊಂಡಾಗ ಅದು ಪ್ರಕಟಗೊಳ್ಳುವಂತೆ ನೋಡಿಕೊಳ್ಳುತ್ತದೆ. ಬಹುತೇಕ ಬಾರಿ ಭೇಟಿ ನೀಡಿದ ಒಂಬತ್ತು ವೆಬ್‌ಸೈಟ್‌ಗಳ ಥಂಬ್‌ನೈಲ್‌ ಅನ್ನೂ ಇದು ಪ್ರದರ್ಶಿಸುತ್ತದೆ. ಇದರ ಜೊತೆಗೆ, ಗೂಗಲ್‌ ಪರಿಕರಪಟ್ಟಿ 6 ಜೊತೆಗೆ ಕಂಡುಬರುವ ಇಂಟರ್ನೆಟ್‌ ಎಕ್ಸ್‌ಪ್ಲೋರರ್ ಮತ್ತು ಫೈರ್‌ಫಾಕ್ಸ್ ಅಥವಾ ಒಪೇರಾದ ಸ್ಪೀಡ್‌ಡಯಲ್‌ ರೀತಿಯಲ್ಲಿ ಆ ಕ್ಷಣದ ಹುಡುಕಾಟಗಳು, ಇತ್ತೀಚಿನ ಬುಕ್‌ಮಾರ್ಕ್‌ಗಳು ಹಾಗೂ ಇತ್ತೀಚೆಗೆ ಮುಚ್ಚಲಾದ ಟ್ಯಾಬ್‌ಗಳು ಕೂಡ ಪ್ರಕಟಗೊಳ್ಳುತ್ತವೆ.[೧೫] ಗೂಗಲ್‌ ಕ್ರೋಮ್‌ 2.0ನಲ್ಲಿ ಥಂಬ್‌ನೈಲ್‌ ಅನ್ನು ಪ್ರದರ್ಶಿಸಲು ಇಚ್ಛಿಸದ ಬಳಕೆದಾರರು ಅದನ್ನು ಮರೆಮಾಡಲು ಅವಕಾಶವಾಗುವ ರೀತಿಯಲ್ಲಿ ಹೊಸ ಟ್ಯಾಬ್‌ ಪುಟವನ್ನು ನವೀಕರಣ ್‌ ಮಾಡಲಾಗಿತ್ತು.[೮೧] ಅತಿ ಹೆಚ್ಚು ಭೇಟಿಯನ್ನು ಹೊಂದಿರುವ ಸುಮಾರು 8 ವೆಬ್‌ಸೈಟ್‌ಗಳ ಥಂಬ್‌ನೈಲ್‌ನನ್ನು ಪ್ರದರ್ಶಿಸುವ ರೀತಿಯಲ್ಲಿ ಪ್ರಾರಂಭದ 3.0 ಆವೃತ್ತಿಯನ್ನು ಪುನಶ್ಚೇತನಗೊಳಿಸಲಾಗಿತ್ತು. ಆ ಥಂಬ್‌ನೈಲ್‌ಗಳನ್ನು ಮರುಜೋಡಣೆಗೊಳಪಡಿಸಬಹುದಾಗಿತ್ತು, ಪಿನ್‌ ಮಾಡಬಹುದಿತ್ತು ಹಾಗೂ ತೆಗೆದು ಹಾಕಬಹುದಿತ್ತು. ಪರ್ಯಾಯವಾಗಿ, ಥಂಬ್‌ನೈಲ್‌ಗಳ ಬದಲು ಪಠ್ಯ ಲಿಂಕ್‌ಗಳ ಪಟ್ಟಿಯನ್ನು ಪ್ರದರ್ಶಿಸಬಹುದಿತ್ತು. ಇದು ಇತ್ತೀಚೆಗಷ್ಟೇ ಮುಚ್ಚಲಾದ ಟ್ಯಾಬ್‌ಗಳು ಹಾಗೂ ಬ್ರೌಸರ್‌ನನ್ನು ಬಳಸುವ ಕುರಿತು ಸುಳಿವು ಹಾಗೂ ತಂತ್ರಗಳನ್ನು ಒದಗಿಸುವ “ಸುಳಿವುಗಳು” ವಿಭಾಗವನ್ನು ಹೊಂದಿದ್ದ “ಇತ್ತೀಚೆಗಷ್ಟೇ ಮುಚ್ಚಲಾದ” ಪಟ್ಟಿಯ ವೈಶಿಷ್ಟ್ಯವನ್ನೂ ಹೊಂದಿತ್ತು.[೮೨] ಮೆನುವಿನಿಂದಲೇ ಪ್ರವೇಶಿಸಬಹುದಾದ ಬುಕ್‌ಮಾರ್ಕ್‌ ನಿರ್ವಾಹಕವನ್ನೂ ಕ್ರೋಮ್‌ ಒಳಗೊಂಡಿದೆ. ಕಮ್ಯಾಂಡ್‌-ಲೈನ್‌ ಆಯ್ಕೆಯನ್ನು ಒಳಗೊಂಡಂತೆ; ಬುಕ್‌ಮಾರ್ಕ್‌-ಮೆನು ಆಮ್ನಿಬಾಕ್ಸ್‌ನ ಬಲಭಾಗದಲ್ಲಿ ಬುಕ್‌ಮಾರ್ಕ್‌ ಬಟನ್‌ನ್‌ನನ್ನು ಸೇರ್ಪಡೆಗೊಳಿಸುತ್ತದೆ. ಬುಕ್‌ಮಾರ್ಕ್ ಪಟ್ಟಿಯ ಜಾಗದಲ್ಲಿ ಅದನ್ನು ಬಳಸಿಕೊಳ್ಳಬಹುದಾಗಿದೆ.[೮೩] ಆದಾಗ್ಯೂ, ಈ ಬಗೆಯ ಕಾರ್ಯನಿರ್ವಹಣೆ ಪ್ರಸ್ತುತ ಲಿನಕ್ಸ್‌ ಮತ್ತು ಮ್ಯಾಕ್‌ ವೇದಿಕೆಗಳಲ್ಲಿ ಲಭ್ಯವಿಲ್ಲ.[೮೪] ಪಾಪ್‌ಅಪ್‌ ವಿಂಡೋಗಳು “ತಮ್ಮ ಮೂಲದ ಟ್ಯಾಬ್‌ಗಳಿಗೆ ಅಭಿಮುಖವಾಗಿರುತ್ತವೆ” ಹಾಗೂ ಬಳಕೆದಾರ ಉದ್ದೇಶಪೂರ್ವಕವಾಗಿ ಹಾಗೂ ನಿರ್ಧಿಷ್ಟವಾಗಿ ಹಿಡಿದು ಎಳೆಯುವವರೆಗೆ ಅವು ಟ್ಯಾಬ್‌ನ ಹೊರಭಾಗದಲ್ಲಿ ಯಾವ ಕಾರಣಕ್ಕೂ ಗೋಚರಿಸುವುದಿಲ್ಲ.[೧೫] ಗೂಗಲ್‌ ಕ್ರೋಮ್‌ನ ಆಯ್ಕೆ ವಿಂಡೋ ಮೂರು ಟ್ಯಾಬ್‌ಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ: ಬೇಸಿಕ್‌ , ಪರ್ಸನಲ್ ಸ್ಟಫ್ ‌ ಹಾಗೂ ಅಂಡರ್ ದ ಹುಡ್ ‌. ಬೇಸಿಕ್ ‌ ಟ್ಯಾಬ್‌, ಮುಖಪುಟ, ಹುಡುಕಾಟ ಎಂಜಿನ್‌ ಹಾಗೂ ಡಿಫಾಲ್ಟ್‌ ಬ್ರೌಸರ್‌ಗಳನ್ನು ಒಳಗೊಂಡಿರುತ್ತದೆ. ಬಳಕೆದಾರರು ಉಳಿಸಿದ ಪಾಸ್‌ವರ್ಡ್‌ಗಳು, ಆಟೋಫಿಲ್‌, ಬ್ರೌಸಿಂಗ್ ಡೇಟಾ ಹಾಗೂ ಥೀಮ್‌ಗಳನ್ನು ಕಾನ್ಫಿಗರ್ ಮಾಡಲು ಪರ್ಸನಲ್ ಸ್ಟಫ್‌ ಟ್ಯಾಬ್‌ ಅವಕಾಶ ಕಲ್ಪಿಸಿಕೊಡುತ್ತದೆ. ನೆಟ್‌ವರ್ಕ ಬದಲಾವಣೆ, ಗೌಪ್ಯತೆ, ಡೌನ್‌ಲೋಡ್ ಹಾಗೂ ಸುರಕ್ಷತೆ ಸೆಟ್ಟಿಂಗ್‌ಗಳಿಗೆ ಅಂಡರ್ ದ ಹುಡ್ ‌ ಅವಕಾಶ ಮಾಡಿಕೊಡತ್ತದೆ. ಕ್ರೋಮ್‌ ಸ್ಥಿತಿ ಪಟ್ಟಿಯನ್ನು ಹೊಂದಿಲ್ಲ ಆದರೆ, ಲೋಡಿಂಗ್ ಚಟುವಟಿಕೆಯನ್ನು ಅದು ಪ್ರದರ್ಶಿಸುತ್ತದೆ ಹಾಗೂ ಪ್ರಸ್ತುತ ಪುಟದ ಕೆಳಗಿನ ಎಡಭಾಗದಲ್ಲಿ ಪಾಪ್‌ ಅಪ್‌ ಆಗುವ ಸ್ಥಿತಿ ಬಬಲ್‌ಗಳ ಮೂಲಕ ಮಾಹಿತಿಯನ್ನು ರವಾನಿಸುತ್ತದೆ.

ವೆಬ್‌ ಡೆವಲಪರ್‌ಗಳಿಗೆ ಸಂಬಂಧಿಸಿದಂತೆ, ಫೈರ್‌ಬಗ್‌ನಲ್ಲಿರುವಂತೆಯೇ ಎಲಿಮೆಂಟ್ ಇನ್ಸ್‌ಪೆಕ್ಟರ್ ಎಂಬ ವೈಶಿಷ್ಟ್ಯವನ್ನೂ ಕ್ರೋಮ್‌ ಒಳಗೊಂಡಿದೆ.[೭೨] ಗೂಗಲ್‌ನ ಎಪ್ರಿಲ್‌ ಫೂಲ್ಸ್‌ ಡೇ ಜೋಕ್ಸ್‌ಗಳಿಗೆ ಸಂಬಂಧಿಸಿದಂತೆ ಕ್ರೋಮ್‌ನ ವಿಶೇಷ ಬಿಲ್ಡ್‌ವೊಂದನ್ನು ಅನಾಗ್ಲಿಫ್ 3D ಪುಟಗಳನ್ನು ಒದಗಿಸುವ ಹೆಚ್ಚುವರಿ ವೈಶಿಷ್ಟ್ಯದೊಂದಿಗೆ 2009 ಏಪ್ರಿಲ್‌ 1ರಂದು ಬಿಡುಗಡೆಗೊಳಿಸಲಾಯಿತು.[೮೫]

ಡೆಸ್ಕ್‌ಟಾಪ್‌ ಶಾರ್ಟ್‌ಕಟ್‌ಗಳು ಹಾಗೂ ಅನ್ವಯಿಸುವಿಕೆ‌ಗಳು[ಬದಲಾಯಿಸಿ]

ಬ್ರೌಸರ್‌ನಲ್ಲಿ ವೆಬ್‌ ಅನ್ವಯಿಸುವಿಕೆ‌ಗಳನ್ನು ತೆರೆಯುವ ಸ್ಥಳೀಯ ಡೆಸ್ಕ್‌ಟಾಪ್‌ ಶಾರ್ಟ್‌ಕಟ್‌ಗಳನ್ನು ಬಳಸಿಕೊಳ್ಳಲು ಕ್ರೋಮ್‌ ತನ್ನ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಬ್ರೌಸರ್ ಈ ಬಗೆಯಲ್ಲಿ ತೆರೆದುಕೊಂಡಾಗ ಶೀರ್ಷಿಕೆ ಪಟ್ಟಿಯನ್ನು ಹೊರತುಪಡಿಸಿ ಯಾವುದೇ ಸಹಜ ಅಂತರಸಂಪರ್ಕವನ್ನು ಅದು ಹೊಂದಿರುವುದಿಲ್ಲ. ಇದರಿಂದ, “ಅಡ್ಡಗಾಲು ಹಾಕುವ ಬಳಕೆದಾರನ ಯಾವುದೇ ಪ್ರಯತ್ನ”ವನ್ನೂ ಅದು ವಿಫಲಗೊಳಿಸುತ್ತದೆ. ಇದರಿಂದ ವೆಬ್‌ ಅನ್ವಯಿಸುವಿಕೆ‌ಗಳು ಸ್ಥಳೀಯ ಸಾಫ್ಟ್‌ವೇರ್‌‌ ಜೊತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. (ಈ ವ್ಯವಸ್ಥೆ ಮೊಝಿಲ್ಲಾ ಪ್ರಿಸ್ಮ್‌ ಹಾಗೂ ಫ್ಲ್ಯುಯಿಡ್‌ನಲ್ಲಿಯೂ ಲಭ್ಯವಿದೆ).[೧೫] ಗೂಗಲ್‌ ಪ್ರಕಾರ, ಈ ವೈಶಿಷ್ಟ್ಯವನ್ನು, 2010ರಲ್ಲಿ ತೆರೆಯಲಾದ ವೆಬ್‌ ಆಧಾರಿತ ವೆಬ್‌ ಅನ್ವಯಿಸುವಿಕೆ‌ ಡೈರೆಕ್ಟರಿ ’ಕ್ರೋಮ್‌ ವೆಬ್‌ ಪೇಟೆ’ಯೊಂದಿಗೇ ಇನ್ನಷ್ಟು ಸಶಕ್ತಗೊಳಿಸಲಾಗುತ್ತದೆ.[೮೬][೮೭]

ಏರೋ ಪೀಕ್‌ ಸಾಮರ್ಥ್ಯ[ಬದಲಾಯಿಸಿ]

ವಿಂಡೋಸ್ 7 ಆವೃತ್ತಿಯ ಪ್ರತಿಯೊಂದು ಟ್ಯಾಬ್‌ಗೂ ಏರೋ ಪೀಕ್ ‌ ಸಾಮರ್ಥ್ಯವನ್ನು ಗೂಗಲ್‌ ಅಳವಡಿಸಿದೆ. ಇದೇನು ಡಿಫಾಲ್ಟ್‌ ಆಗಿ ಅಳವಡಿಸುವಂಥದ್ದಲ್ಲ, ಬದಲಿಗೆ ಬಳಕೆದಾರ ಸ್ವ-ಇಚ್ಛೆಯಿಂದ ಅಳವಡಿಸಬೇಕಾದದ್ದು. ಇದರ ಫಲವೇ, ಟ್ಯಾಬ್‌ನ ಥಂಬ್‌ನೈಲ್‌ ಚಿತ್ರ ಪ್ರದರ್ಶನ.[೮೮] IE8 , ಫೈರ್‌ಫಾಕ್ಸ್ ಹಾಗೂ ಇನ್ನಿತರ ಬ್ರೌಸರ್‌ಗಳಲ್ಲಿ ಈಗಾಗಲೇ ಇರುವಂತೆ ಒಂದೇ ಬಗೆಯ ಕಾರ್ಯನಿರ್ವಹಣೆಯನ್ನು ಇದು ಸಾಧ್ಯವಾಗಿಸುತ್ತದೆ. ಏರೋ ಪೀಕ್‌ ಟ್ಯಾಬ್‌ಗಳ ಅದಕ್ಷ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಬೀಟಾ ಬಳಕೆದಾರರು ನೀಡಿದ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಆಧರಿಸಿ ಗೂಗಲ್‌ ಈವರೆಗೆ ಇದನ್ನು ಡಿಫಾಲ್ಟ್‌ ಆಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿಲ್ಲ.[೮೯]

ವಿಸ್ತರಣೆಗಳು[ಬದಲಾಯಿಸಿ]

9 ಸಪ್ಟೆಂಬರ್ 2009ರಂದು, ಕ್ರೋಮ್‌ನ ದೇವ್ ಚಾನೆಲ್‌ನ ಮೇಲೆ ಗೂಗಲ್ ಡೀಫಾಲ್ಟ್ ಆಗಿ ವಿಸ್ತರಣೆಗಳನ್ನು ಸಕ್ರಿಯಗೊಳಿಸಿತು, ಮತ್ತು ಪರೀಕ್ಷೆ ಮಾಡಲು ಸುಮಾರು ಮಾದರಿ ವಿಸ್ತರಣೆಗಳನ್ನು ಒದಗಿಸಿತು.[೯೦] ಡಿಸೆಂಬರಿನಲ್ಲಿ, 300ಕ್ಕೂ ಹೆಚ್ಚು ವಿಸ್ತರಣೆಗಳೊಂದಿಗೆ ಗೂಗಲ್ ಕ್ರೋಮ್ ಎಕ್ಸ್‌ಟೆನ್ಶನ್ ಗ್ಯಾಲರಿ ಬೀಟಾ ಪ್ರಾರಂಭವಾಯಿತು.[೨೬][೯೧] ಗೂಗಲ್ ಕ್ರೋಮ್ 4.0ದ ಜೊತೆ ಎಕ್ಸ್‌ಟೆನ್ಶನ್ ಗ್ಯಾಲರಿ ಅಧಿಕೃತವಾಗಿ ಜನವರಿ 25, 2010ರಂದು ಪ್ರಾರಂಭವಾಯಿತು, ಇದು 1500ಕ್ಕೂ ಹೆಚ್ಚು ಎಕ್ಸ್‌ಟೆನ್ಶನ್‌ಗಳನ್ನು ಹೊಂದಿತ್ತು.[೯೨] ಅಗಸ್ಟ್ 19, 2010ರ ವೇಳೆಗೆ ಎಕ್ಸ್‌ಟೆನ್ಶನ್ ಗ್ಯಾಲರಿ 6000ಕ್ಕೂ ಹೆಚ್ಚು ಎಕ್ಸ್‌ಟೆನ್ಶನ್‌ಗಳನ್ನು ಹೊಂದಿತು[೯೩], ಇದು ದಿ ಇಂಡಿಪೆಂಡೆಂಟ್[೯೪]‌ನಿಂದ ಅಧಿಕೃತ ಎಕ್ಸ್‌ಟೆನ್ಶನ್‌ಗಳು, ಸಿಇಒಪಿ[೯೫], ಟ್ರಾನ್ಸ್‌ಪೋರ್ಟ್ ಫಾರ್ ಲಂಡನ್[೯೬], ಕ್ರಿಸಿನ್ಫೊ[೯೭] ಮತ್ತು ಎಫ್‌ಆಯ್‌ಎಫ್‌ಎ[೯೮] ಗಳನ್ನು ಒಳಗೊಂಡಿದೆ.

ವಿಷಯವಸ್ತುಗಳು[ಬದಲಾಯಿಸಿ]

ಗೂಗಲ್ ಕ್ರೋಮ್ 3.0ವನ್ನು ಪ್ರಾರಂಭಿಸಿ, ಬಳಕೆದಾರರು ಬ್ರೌಸರ್‌ನ ಹಾಜರಿಯನ್ನು ಬದಲಾಯಿಸಲು ವಸ್ತುವಿಷಯಗಳನ್ನು ಇನ್‌ಸ್ಟಾಲ್ ಮಾಡಬಹುದು.[೯೯] ಒನ್‌ಲೈನ್‌ ಗ್ಯಾಲರಿಯಲ್ಲಿ ಬಹಳ ಉಚಿತ ಥರ್ಡ್-ಪಾರ್ಟಿ ವಸ್ತುವಿಷಯಗಳನ್ನು ಒದಗಿಸಲಾಗಿದೆ,[೧೦೦] ಕ್ರೋಮ್ಸ್‌ನ ಆಯ್ಕೆಯಲ್ಲಿ "ಗೆಟ್ ಥೀಮ್ಸ್" ಬಟನ್‌ನ ಮೂಲಕ ಇದನ್ನು ತೆರೆಯಬಹುದು.[೧೦೧]

=[ಬದಲಾಯಿಸಿ]

ಸ್ವಯಂಚಾಲಿತ ಅಂತರ್ಜಾಲ ಪುಟ ಭಾಷಾಂತರ ===

ಗೂಗಲ್ ಕ್ರೋಮ್ 4.1ನ್ನು ಪ್ರಾರಂಭಿಸುವುದರ ಜೊತೆ ಅನ್ವಯಿಕ ಗೂಗಲ್ ಭಾಷಾಂತರವನ್ನು ಒಂದು ನಿರ್ಮಿತ ಭಾಷಾಂತರದ ಪಟ್ಟಿಯನ್ನು ಸೇರಿಸಿದೆ. ಈಗ 52 ಭಾಷೆಗಳಿಗೆ ಭಾಷಾಂತರ ಲಭ್ಯವಿದೆ.[೧೦೨]

ಚಾನಲ್‌ಗಳು ಮತ್ತು ನವೀಕರಣಗಳ ಬಿಡುಗಡೆ[ಬದಲಾಯಿಸಿ]

ಜನವರಿ 8, 2009ರಂದು ಗೂಗಲ್ ಮೂರು ವಿವಿಧ ಚಾನೆಲ್‌ಗಳ ಜೊತೆ ಒಂದು ಹೊಸ ಬಿಡುಗಡೆ ಪದ್ಧತಿಯನ್ನು ಪರಿಚಯಿಸಿತು: ಸ್ಟೇಬಲ್, ಬೀಟಾ, ಮತ್ತು ಡೆವಲಪರ್ ಪ್ರಿವ್ಯೂ ("ದೇವ್" ಚಾನಲ್ ಎನ್ನುವರು). ಈ ಬದಲಾವಣೆಯ ಮೊದಲು ಅಲ್ಲಿ ಕೇವಲ ಎರಡೇ ಚಾನಲ್ ಇತ್ತು: ಬೀಟಾ ಮತ್ತು ಡೆವಲಪರ್ ಪ್ರಿವ್ಯೂ. ಮುಂಚಿನ ಎಲ್ಲ ಡೆವಲಪರ್ ಚಾನಲ್ ಬಳಕೆದಾರರು ಬೀಟಾ ಚಾನಲ್‌ಗೆ ಹೋದರು. ಗೂಗಲ್ ಕ್ರೋಮ್‌ನ ಬೀಟಾ ಅವಧಿಯಲ್ಲಿ ಡೆವಲಪರ್ ಚಾನಲ್ ಬಳಕೆದಾರರು ಪಡೆದದ್ದಕ್ಕಿಂತ ಡೆವಲಪರ್ ಚಾನಲ್‌ನ ನಿರ್ಮಾಣಗಳು ಹೆಚ್ಚು ಸ್ಥಿರವಾಗಿಲ್ಲ ಮತ್ತು ನಾಜೂಕಾಗಿಲ್ಲ ಎಂದು ಗೂಗಲ್ ಕಾರಣ ಕೊಟ್ಟಿದೆ. ಅವರು ಒಂದು ಸಲ ಬೀಟಾ ಚಾನಲ್‌ನಲ್ಲಿ ಸಂಪೂರ್ಣವಾಗಿ ಪರೀಕ್ಷೆ ಮಾಡಿದ ಮೇಲೆ ಸ್ಥಿರ ಚಾನಲ್‌ನ್ನು ಗುಣಲಕ್ಷಣಗಳೊಂದಿಗೆ ಆಧುನೀಕರಿಸಲಾಗುವುದು, ಮತ್ತು ಬೀಟಾ ಚಾನಲ್‌ನ್ನು ಸರಿಸುಮಾರಾಗಿ ಮಾಸಿಕವಾಗಿ ಸ್ಥಿರವಾಗಿ ಮತ್ತು ಸಂಪೂರ್ಣ ಗುಣಲಕ್ಷಣಗಳೊಂದಿಗೆ ಡೆವಲಪರ್ ಚಾನಲ್‌ನಿಂದ ನವೀಕರಿಸಲಾಗುವುದು.

ಡೆವಲಪರ್ ಚಾನಲ್‌ನಲ್ಲಿ ವಿಚಾರಗಳನ್ನು ಪರೀಕ್ಷಿಸಲಾಗುತ್ತದೆ (ಕೆಲವೊಮ್ಮೆ ವಿಫಲವಾಗುತ್ತದೆ) ಮತ್ತು ಆ ಸಮಯದಲ್ಲಿ ಹೆಚ್ಚು ಅಸ್ಥಿರವಾಗಿರಬಹುದು.[೧೦೩][೧೦೪] ಇದು ವೇಗವನ್ನು ಹೆಚ್ಚಿಸುವುದು ಮತ್ತು ಹೊಸ ಸ್ಥಿರ ಆವೃತ್ತಿಗಳನ್ನು ಬಿಡುಗಡೆ ಮಾಡುವುದಾಗಿ ಜುಲೈ 22, 2010ರಂದು ಗೂಗಲ್ ಘೋಷಿಸಿತು; ಅವರು ಬಿಡುಗಡೆ ಅವಧಿಗಳನ್ನು ತ್ರೈಮಾಸಿಕವನ್ನು 6 ವಾರಗಳಿಗೆ ಕಡಿಮೆ ಮಾಡಿತು.[೧೦೫] ತ್ವರಿತ ಬಿಡುಗಡೆಯ ಅವಧಿ "ಕೆನರಿ" ಬಿಡುಗಡೆ ಎನ್ನುವ ನಾಲ್ಕನೇ ಚಾನಲ್‌ನ್ನು ತಂದಿತು; ಈ ಹೆಸರಿನ ಅರ್ಥ ಕಲ್ಲಿದ್ದಲು ಗಣಿಗಳಲ್ಲಿ ಕೆನರಿಗಳನ್ನು ಉಪಯೋಗಿಸುವುದು, ಆದ್ದರಿಂದ ಒಂದು ವೇಳೆ ಬದಲಾವಣೆ ಕ್ರೋಮ್ ಕೆನರಿಯನ್ನು "ನಾಶ" ಮಾಡಿದರೆ ಅವರು ಡೆವಲಪರ್ ನಿರ್ಮಾಣದಿಂದ ಇದಕ್ಕೆ ತಡೆಯೊಡ್ಡುತ್ತಾರೆ. ಕೆನರಿ ಇದು "ಹೆಚ್ಚು ಕ್ರೋಮ್‌ನ ಬ್ಲೀಡಿಂಗ್-ಎಡ್ಜ್ ಅಧಿಕೃತ ಆವೃತ್ತಿ ಮತ್ತು ಕ್ರೋಮ್ ಡೇವ್ ಮತ್ತು ಕ್ರೋಮಿಯಮ್ ಸ್ನ್ಯಾಪ್‌ಶಾಟ್ ಬಿಲ್ಡ್‌ಗಳ ಮಿಶ್ರಣವಾಗಿದೆ". ಬಿಡುಗಡೆಯಾದ ಕೆನರಿ ಯಾವುದೇ ಇತರ ಚಾನಲ್ ಜೊತೆ ಜೊತೆಗೆ ಕಾರ್ಯನಿರ್ವಹಿಸುತ್ತವೆ; ಇದು ಇತರ ಗೂಗಲ್ ಕ್ರೋಮ್ ಅಳವಡಿಕೆಗಳ ಜೊತೆ ಸಂಪರ್ಕ ಹೊಂದಿರುವುದಿಲ್ಲ ಮತ್ತು ಆದ್ದರಿಂದ ಬೇರೆ ಸಿಂಕ್ರೋನೈಸೇಶನ್ ವ್ಯಕ್ತಿಚಿತ್ರಗಳು, ವಸ್ತುವಿಷಯಗಳು, ಮತ್ತು ಬ್ರೌಸರ್ ಆದ್ಯತೆಗಳ ಕಾರ್ಯ ನಿರ್ವಹಿಸುತ್ತದೆ.[೧೦೬] ಇದನ್ನು ಪೂರ್ವನಿಯೋಜಿತ ಬ್ರೌಸರ್ ಆಗಿ ಹೊಂದಿಸಲು ಸಾಧ್ಯವಿಲ್ಲ.

ಕ್ರೋಮ್ ಸ್ವಯಂಚಾಲಿತವಾಗಿ ತನ್ನಷ್ಟಕ್ಕೆ ಇವತ್ತಿಗೆ ಪ್ರಸ್ತುತವಾಗುವಂತೆ ಇರಿಸುತ್ತದೆ. ವಿವರಣೆಗಳು ಪ್ಲ್ಯಾಟ್‌ಫಾರ್ಮ್ ಮೂಲಕ ವ್ಯತ್ಸಾಸವಾಗುತ್ತವೆ.

ವಿಂಡೋಸ್‌ನಲ್ಲಿ, ಇದು ಗೂಗಲ್ ನವೀಕರಣ ರ್‌ನ್ನು ಉಪಯೋಗಿಸುತ್ತದೆ, ಗ್ರೂಪ್‌ ಪಾಲಿಸಿಯ ಮೂಲಕ ಸ್ವಯಂನವೀಕರಣವನ್ನು ನಿಯಂತ್ರಿಸಬಹುದು,[೧೦೭] ಅಥವಾ ಬಳಕೆದಾರರು ಒಂದು ಸ್ಟ್ಯಾಂಡ್‌ಅಲೋನ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಇದು ಸ್ವಯಂನವೀಕರಣ ಆಗುವುದಿಲ್ಲ.[೧೦೮][೧೦೯] ಮ್ಯಾಕ್‌ನಲ್ಲಿ, ಇದು ಗೂಗಲ್ ನವೀಕರಣ ಸೇವೆಯನ್ನು ಉಪಯೋಗಿಸುತ್ತದೆ, ಮತ್ತು ಸ್ವಯಂನವೀಕರಣವ‌ನ್ನು ಮ್ಯಾಕ್ ಓಎಸ್ "ಡಿಫಾಲ್ಟ್ಸ್" ಪದ್ಧತಿಯ ಮೂಲಕ ನಿಯಂತ್ರಿಸಲಾಗುತ್ತದೆ.[೧೧೦] ಲಿನಕ್ಸ್‌ನಲ್ಲಿ, ಇದು ಸಿಸ್ಟಮ್‌ನ ಸಹಜ ಪ್ಯಾಕೇಜ್ ಆಡಳಿತ ವ್ಯವಸ್ಥೆ ನವೀಕರಣಗಳನ್ನು ಒದಗಿಸಲು ಬಿಡುತ್ತದೆ. ಸ್ವಯಂಚಾಲಿತವಾಗಿ ನವೀಕರಣ ಮಾಡಲು ಹೊಸ ಆವೃತ್ತಿಯ ಸಂಬಂಧದಲ್ಲಿ ಬಳಕೆದಾರರ ಪ್ರಚಲಿತ ಆವೃತ್ತಿಯ ಬೈನರಿ ವ್ಯತ್ಯಾಸವನ್ನು ಒದಗಿಸಲು ಗೂಗಲ್ ಇದರ ಕೂರ್ಜೆಟ್ ಅಲ್ಗೊರಿಥಮ್‌ನ್ನು ಉಪಯೋಗಿಸುತ್ತದೆ. ಈ ಚಿಕ್ಕ ನವೀಕರಣಗಳು ಮತ್ತು ಗೂಗಲ್ ತ್ವರಿತವಾಗಿ ಬಳಕೆದಾರರಿಗೆ ಕ್ರೋಮ್‌ನ ಹೊಸ ಆವೃತ್ತಿಗಳನ್ನು ತರಲು ಅವಕಾಶ ಒದಗಿಸುತ್ತವೆ, ಇದರಿಂದ ಹೊಸದಾಗಿ ಸಂಶೋಧಿಸಿದ ಭದ್ರತಾ ದೋಷಗಳ ಭೇದ್ಯತೆಯನ್ನು ಕಡಿಮೆ ಮಾಡುತ್ತದೆ.[೧೧೧]

ಬಳಕೆ ಗುರುತಿಸುವಿಕೆ[ಬದಲಾಯಿಸಿ]

ಕ್ರೋಮ್ ಇದರ ಬಳಕೆಯ ಬಗ್ಗೆ ವಿವರಣೆಗಳನ್ನು ಐಚ್ಛಿಕ ಮತ್ತು ಐಚ್ಛಿಕವಲ್ಲದ ಬಳಕೆದಾರ ತಿಳಿಯುವ ಯಾಂತ್ರಿಕ ವ್ಯವಸ್ಥೆಗಳ ಮೂಲಕ ಗೂಗಲ್‌ಗೆ ತಿಳಿಸುತ್ತದೆ.[೧೧೨]

ತಿಳಿಯುವ ವಿಧಾನಗಳು
ವಿಧಾನ[೧೧೩] ಕಳುಹಿಸಿದ ಮಾಹಿತಿ ಯಾವಾಗ ಐಚ್ಛಿಕ?
ಅಳವಡಿಕೆ ಅಳವಡಿಕೆಯಲ್ಲಿ ಸೇರಿಕೊಂಡಿರುವ ಯಾದೃಚ್ಛಿಕವಾಗಿ ಹುಟ್ಟಿಕೊಂಡ ಟೋಕನ್. ಗೂಗಲ್ ಕ್ರೋಮ್‌ನ ಯಶಸ್ಸಿನ ಪ್ರಮಾಣವನ್ನು ಅಳೆಯಲು ಉಪಯೋಗಿಸಲಾಗಿದೆ.[೧೧೪] ಅಳವಡಿಕೆಯಲ್ಲಿ No
ಆರ್‌ಎಲ್‌ಜಡ್ ಗುರುತಿಸುವಿಕೆ [೧೧೫] ಗೂಗಲ್‌ನ ಪ್ರಕಾರ ಎನ್‌ಕೋಡ್ ಮಾಡಿದ ಸ್ಟ್ರಿಂಗ್ ಕ್ರೋಮ್ ಹೇಗೆ ಡೌನ್‌ಲೋಡ್ ಆಗುತ್ತದೆ ಮತ್ತು ಅದರ ಅಳವಡಿಸುವ ವಾರದ ಗುರುತಿಸಲಾಗದ ಮಾಹಿತಿಯನ್ನು ಒಳಗೊಂಡಿರುತ್ತದೆ, ಇದನ್ನು ಪ್ರಚಾರಾಂದೋಲನಗಳನ್ನು ಅಳೆಯಲು ಬಳಸುತ್ತಾರೆ.[೧೧೪] ಈ ಸ್ಟ್ರಿಂಗ್‌ನ್ನು ಡಿಕೋಡ್ ಮಾಡಲು ಗೂಗಲ್ ಸೋರ್ಸ್ ಕೋಡನ್ನು ಒದಗಿಸುತ್ತದೆ.[೧೧೬]
 • ಗೂಗಲ್ ಸರ್ಚ್ ಕ್ವೇರಿಯಲ್ಲಿ
 • ಅಡ್ರೆಸ್ ಬಾರ್‌ನ ಮೊದಲ ಪ್ರಾರಂಭ ಮತ್ತು ಮೊದಲ ಬಳಕೆಯಲ್ಲಿ[೧೧೪]
Partial[note ೧][೧೧೪]
ಬಳಕೆದಾರ ಐಡಿ [೧೧೭] ಬಳಕೆ ಮೆಟ್ರಿಕ್ಸ್ ಮತ್ತು ಕ್ರ್ಯಾಶ್‌ಗಳನ್ನು ಹೊಂದಿದ ವಿಶೇಷವಾದ ಕಂಡುಹಿಡಿಯುವ ಸಾಧನ. ಟೆಂಪ್ಲೇಟು:Unk Yes[೧೧೮]
ಸಲಹೆ [೧೧೭] ವಿಷಯವನ್ನು ಅಡ್ರೆಸ್ ಬಾರ್ ಮೇಲೆ ಬರೆಯಲಾಗಿದೆ ಟೈಪ್ ಮಾಡುವಾಗ Yes
ಪುಟ ಸಿಗಲಿಲ್ಲ ವಿಷಯವನ್ನು ಅಡ್ರೆಸ್ ಬಾರ್ ಮೇಲೆ ಬರೆಯಲಾಗಿದೆ

"ಸರ್ವರ್ ಸಿಗಲಿಲ್ಲ" ಎಂದು ಪ್ರತಿಕ್ರಿಯೆ ಪಡೆಯುವಾಗ

Yes
ಬಗ್ ಕಂಡುಹಿಡಿಯುವುದು ಘರ್ಷಣೆಗಳು ಮತ್ತು ವಿಫಲತೆಗಳ ಬಗ್ಗೆ ವಿವರಣೆಗಳು ಟೆಂಪ್ಲೇಟು:Unk Yes[೧೧೮]

ಅಳವಡಿಕೆ ಅಂತರಸಂಪರ್ಕದ ಮೂಲಕ ಮತ್ತು ಬ್ರೌಸರ್‌ನ ಆಯ್ಕೆಗಳ ಡೈಲಾಗ್ ಮೂಲಕ[ಸೂಕ್ತ ಉಲ್ಲೇಖನ ಬೇಕು] ಕಂಡುಹಿಡಿಯುವ ಕೆಲವು ಯಾಂತ್ರಿಕ ವ್ಯವಸ್ಥೆಗಳು ಐಚ್ಛಿಕವಾಗಿ ಸಾಧ್ಯವಾಗುವಂತೆ ಮತ್ತು ಅಸಾದ್ಯವಾಗುವಂತೆ ಮಾಡಬಹುದು.[೧೧೭] ಎಸ್‌ಆರ್‌ಡಬ್ಲು ಐರನ್ ಮತ್ತು ಕ್ರೋಮ್‌ಪ್ಲಸ್‌ನಂತಹ ಅನಧಿಕೃತ ಬಿಲ್ಡ್‌ಗಳು ಈ ಗುಣಲಕ್ಷಣಗಳನ್ನು ಬ್ರೌಸರ್‌ನಿಂದ ಒಟ್ಟಿಗೆ ತೆಗೆದುಹಾಕಲು ಅನ್ವೇಷಿಸಿತು.[೧೧೩] ಆರ್‌ಎಲ್‌ಜಡ್ ಗುಣಲಕ್ಷಣ ಪ್ರತಿಯೊಂದು ಕ್ರೋಮಿಯಮ್ ಬ್ರೌಸರ್‌ನಲ್ಲಿ ಒಳಗೊಂಡಿಲ್ಲ. ಅಳವಡಿಕೆಯ ಅಂಕಿಅಂಶಗಳನ್ನು ಸಂಗ್ರಹಿಸಲು ಮಾರ್ಚ್, 2010ರಲ್ಲಿ ಗೂಗಲ್ ಒಂದು ಹೊಸ ವಿಧಾನವನ್ನು ರಚಿಸಿತು: ಕ್ರೋಮ್‌ನ ಜೊತೆ ಒಳಗೊಂಡಿರುವ ವಿಶಿಷ್ಟವಾದ ಐಡಿ ಟೋಕನ್‌ನ್ನು ಈಗ ಮೊದಲ ಸಂಪರ್ಕದಲ್ಲಿ ಮಾತ್ರ ಉಪಯೋಗಿಸಿ ಗೂಗಲ್ ನವೀಕರಣ ಇದರ ಸರ್ವರ್‌ಗೆ ಕಳುಹಿಸುತ್ತದೆ. ಈ ಉಳಿದಿರುವ ಏಕೈಕ ಐಚ್ಛಿಕವಲ್ಲದ ಬಳಕೆದಾರನನ್ನು ತಿಳಿಯುವ ಯಾಂತ್ರಿಕ ವ್ಯವಸ್ಥೆಯನ್ನು ಸರ್ವರ್ ಪಿಂಗ್‌ನ ನಂತರ ತೆಗೆದುಹಾಕಲಾಯಿತು.{0/}

ಎಬೌಟ್ ಮತ್ತು ಕ್ರೋಮ್ ಯುಆರ್‌ಎಲ್‌ಗಳು[ಬದಲಾಯಿಸಿ]

ಕ್ರೋಮ್ ಹೊಂದಿರುವ ವಿಶೇಷವಾದ ಯುಆರ್‌ಎಲ್‌ಗಳು ಅನ್ವಯಿಸುವಿಕೆ‌ಗಳನ್ನು ಡಿಸ್ಕ್‌ನಲ್ಲಿರುವ ಫೈಲುಗಳು ಅಥವಾ ವೆಬ್‌ಸೈಟ್‌ಗಳ ಬದಲಾಗಿ ನಿರ್ದಿಷ್ಟವಾದ ಪುಟಗಳಲ್ಲಿ ತುಂಬಿಸುತ್ತವೆ.[೧೧೯]

 • about:about - ಎಬೌಟ್ ಪುಟಗಳ ಪಟ್ಟಿ.
 • about:blank - ಖಾಲಿ ಪುಟ.
 • about:credits - ಕ್ರೆಡಿಟ್ಸ್, ಲೈಸೆನ್ಸ್‌ಗಳು, ಮತ್ತು ಕ್ರೋಮ್ ಮಾಡಲು ಉಪಯೋಗಿಸಿದ ಎಲ್ಲ ಸಾಫ್ಟ್‌ವೇರ್‌‌‌ಗಳಿಗೆ ಸಂಪರ್ಕಗಳು.
 • about:histograms - ವಿವರವಾದ ತಾಂತ್ರಿಕ ಮ್ಯಾಟ್ರಿಕ್ಸ್.
 • about:memory - ಉಪಯೋಗಿಸಿದ ಮೆಮೊರಿ.
 • about:net - ಇಂಟರ್ನಲ್ಸ್
 • about:labs
 • about:plugins
 • about:terms - ಸೇವೆಯ ನಿಯಮಗಳು
 • about:version - ಕ್ರೋಮ್‌ನ ಆವೃತ್ತಿ, ವೆಬ್‌ಕಿಟ್, ವಿ8, ಮತ್ತು ಪ್ರಾರಂಭಿಸಲು ಬಳಸಲಾಗುವ ಕಮ್ಯಾಂಡ್ ಲೈನ್ ಆಯ್ಕೆಗಳು.
 • chrome://bookmarks - ಬುಕ್‌ಮಾರ್ಕ್ ಮೆನೆಜರ್
 • chrome://downloads - ಡೌನ್‌ಲೋಡ್ ಮೆನೆಜರ್
 • chrome://extensions - ವಿಸ್ತರಣೆಗಳ ಮೆನೆಜರ್
 • chrome://history - ಪುಟದ ಇತಿಹಾಸ
 • view-source:url - ನಿರ್ದಿಷ್ಟಪಡಿಸಿದ ಯುಆರ್‌ಎಲ್‌ನ ಸೋರ್ಸ್ ಕೋಡ್‌ನ್ನು ಬಿತ್ತರಿಸುತ್ತದೆ

ಜನರ ಸ್ವೀಕೃತಿ[ಬದಲಾಯಿಸಿ]

Usage share of (non-IE) web browsers according to Net Applications data:[೧೨೦]
  Chrome
  Safari
  Opera
  Other

ದೈನಂದಿನ ತಂತಿಸಂದೇಶಗಳು ಮಥಿವ್ ಮೂರ್ ಮೊದಲಿನ ಸಮೀಕ್ಷಕರ ನಿರ್ಣಯಗಳನ್ನು ಹೀಗೆ ಸಂಕ್ಷೇಪಿಸಿವೆ: "ಗೂಗಲ್ ಕ್ರೋಮ್ ಆಕರ್ಷಕವಾಗಿದೆ, ವೇಗವಾಗಿರುವ ಇದು ಪ್ರಭಾವಶಾಲಿಯಾದ ಕೆಲವು ಹೊಸ ಗುಣಲಕ್ಷಣಗಳನ್ನೂ ಹೊಂದಿದೆ, ಆದರೆ ಇಲ್ಲಿಯವರೆಗೆ ಇದರ ಪ್ರತಿಸ್ಪರ್ಧಿಯಾದ ಮೈಕ್ರೊಸಾಫ್ಟ್‌ಗೆ ಅಪಾಯವಾಗಿಲ್ಲ." [೧೨೧] ಆರಂಭದಲ್ಲಿ, ಮೈಕ್ರೊಸಾಫ್ಟ್ "ಕ್ರೋಮ್‌ನಿಂದ ಯಾವುದೇ ದೊಡ್ಡ ಸ್ಪರ್ಧೆ ಉಂಟಾಗುವ ಸಾಧ್ಯತೆಯನ್ನು" ತಳ್ಳಿಹಾಕಿತು ಮತ್ತು "ಹೆಚ್ಚು ಜನರು ಇಂಟರ್‌ನೆಟ್ ಎಕ್ಸ್‌ಪ್ಲೊರರ್ 8ರ ಮೇಲೆ ಅವಲಂಬಿತರಾಗುತ್ತಾರೆ ಎಂದು ಊಹಿಸಿತ್ತು." "ಕ್ರೋಮ್ ಪ್ರಪಂಚದಲ್ಲಿನ ದೊಡ್ಡ ಅಪ್ಲಿಕೇಶನ್‌ನಂತೆ ಅಂತರ್ಜಾಲವನ್ನು ಬಲಿಷ್ಠಗೊಳಿಸುವುದು" ಎಂದು ಒಪೇರಾ ಸಾಫ್ಟ್‌ವೇರ್‌‌ ಹೇಳಿದೆ.{1/} ಆದರೆ ಫೆಬ್ರುವರಿ 25, 2010ರ ಬಿಸಿನೆಸ್‌ವೀಕ್ ಹೀಗೆ ವರದಿ ಮಾಡಿದೆ, "ವರ್ಷಗಳಲ್ಲಿ ಮೊದಲ ಬಾರಿಗೆ, ಅಂತರ್ಜಾಲದಲ್ಲಿನ ವಿಷಯಗಳನ್ನು ಪಡೆಯಲು ಎಲ್ಲ ಪ್ರೊಗ್ರಾಮ್‌ಗಳ ಶಕ್ತಿ ಮತ್ತು ಸಂಪನ್ಮೂಲಗಳು ಬ್ರೌಸ್ ಮಾಡುವವರ ಮೇಲೆ ಮಳೆಗರೆದಿವೆ. ಬಳಕೆದಾರರಿಗೆ ವರದಾನವಾದ ಈ ಧೋರಣೆಯ ಶ್ರೇಯ ಎರಡು ಗುಂಪುಗಳಿಗೆ ಹೋಗುತ್ತದೆ. ಮೊದಲನೆಯದಾಗಿ ಗೂಗಲ್, ಇದರ ಬೃಹತ್ ಯೋಜನೆ ಕ್ರೋಮ್ ಬ್ರೌಸರ್ ಮೈಕ್ರೊಸಾಫ್ಟ್‌ನ್ನು ಅದರ ಸ್ಪರ್ಧಾತ್ಮಕ ಜಡತ್ವದಿಂದ ಹೊರಬರುವಂತೆ ಅಲುಗಾಡಿಸಿತು ಮತ್ತು ಈ ಸಾಫ್ಟ್‌ವೇರ್‌‌ ದೈತ್ಯ ಸಂಸ್ಥೆ ಇಂಟರ್‌ನೆಟ್ ಎಕ್ಸ್‌ಪ್ಲೋರ್ ತನ್ನ ಸ್ವಂತ ಬ್ರೌಸರ್‌ಗೆ ಹೆಚ್ಚು ಲಕ್ಷ್ಯ ಕೊಡುವಂತೆ ಮಾಡಿತು. ಮೈಕ್ರೋಸಾಫ್ಟ್ ಹಿಂದಿನ ಬ್ರೌಸರ್ ಸ್ಪರ್ಧೆಯಲ್ಲಿ ಯಶಸ್ಸು ಗಳಿಸಿದ ನಂತರ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ್ನು ಅಭಿವೃದ್ಧಿಗೊಳಿಸುವುದನ್ನು ನಿಲ್ಲಿಸಿತು, ನೆಟ್‌ಸ್ಕೇಪ್ ಇದರ ಅಂತ್ಯ ಕಂಡಿತು. ಈಗ ಅದು ಗಿಯರ್‌ಗೆ ಮರಳಿದೆ."[೧೨೨] ಮೊಜಿಲ್ಲ ಹೀಗೆ ಹೇಳಿದೆ, ಅಂತರ್ಜಾಲ ಬ್ರೌಸರ್ ಮಾರುಕಟ್ಟೆಗೆ ಕ್ರೋಮ್‌ನ ಪರಿಚಯ "ನಿಜವಾದ ಆಶ್ಚರ್ಯವಲ್ಲ", ಅದು "ಕ್ರೋಮ್ ಫೈರ್‌ಫೊಕ್ಸ್ ಜೊತೆ ಸ್ಪರ್ಧಿಸುವ ಗುರಿ ಹೊಂದಿರಲಿಲ್ಲ", ಮತ್ತು ಇನ್ನೂಹೆಚ್ಚಾಗಿ ಇದು ಮೊಜಿಲ್ಲ ಜೊತೆ ಗೂಗಲ್‌ನ ಆದಾಯ ಸಂಬಂಧಕ್ಕೆ ಪ್ರಭಾವ ಬೀರುವುದಿಲ್ಲ.[೧೨೩][೧೨೪]

Chrome's design bridges the gap between desktop and so-called "cloud computing." At the touch of a button, Chrome lets you make a desktop, Start menu, or Quick Launch shortcut to any Web page or Web application, blurring the line between what's online and what's inside your PC. For example, I created a desktop shortcut for Google Maps. When you create a shortcut for a Web application, Chrome strips away all of the toolbars and tabs from the window, leaving you with something that feels much more like a desktop application than like a Web application or page.

ಸೆಪ್ಟೆಂಬರ್ 9, 2008ರಂದು ಕ್ರೋಮ್ ಇನ್ನೂ ಬೀಟಾದಲ್ಲಿದ್ದಾಗ, ಜರ್ಮನ್ ಫೆಡರಲ್ ಆಫೀಸ್ ಫಾರ್ ಇನ್ಫಾರ್ಮೆಶನ್ ಸೆಕ್ಯೂರಿಟಿ (ಬಿಎಸ್‌ಆಯ್) ಕ್ರೋಮ್‌ನ ಮೊದಲ ಪರೀಕ್ಷೆಯ ಬಗ್ಗೆ ಅದರ ಹೇಳಿಕೆಯನ್ನು ಹೊರಡಿಸಿತು, ಗೂಗಲ್‌ನ ಜರ್ಮನ್ ಅಂತರ್ಜಾಲ ಪುಟದಲ್ಲಿನ ಮಹತ್ವದ ಡೌನ್‌ಲೋಡ್ ಸಂಪರ್ಕಗಳ ಬಗ್ಗೆ ಕಳವಳ ವ್ಯಕ್ತಪಡಿಸಿತು, ಏಕೆಂದರೆ "ಬೀಟಾ ಆವೃತ್ತಿಗಳು ಸಾಮಾನ್ಯವಾಗಿ ಬಳಸುವ ಅಪ್ಲಿಕೇಶನ್‌ಗಳಂತೆ ಕೆಲಸ ಮಾಡುವುದಿಲ್ಲ" ಮತ್ತು ಮೊದಲು ಬಿಡುಗಡೆ ಮಾಡಿದ ಸಾಫ್ಟ್‌ವೇರ್‌‌‌ನ ಬಳಕೆಯ ಬಗ್ಗೆ ಬ್ರೌಸರ್ ತಯಾರಕರು ಸರಿಯಾದ ಸೂಚನೆಗಳನ್ನು ಒದಗಿಸಬೇಕು. ಆದಾಗ್ಯೂ ಅವರು ಅಂತರ್ಜಾಲದಲ್ಲಿ ಭದ್ರತೆಯನ್ನು ಸುಧಾರಿಸುವುದರಲ್ಲಿ ಬ್ರೌಸರ್‌ನ ತಾಂತ್ರಿಕ ಕೊಡುಗೆಯನ್ನು ಪ್ರಶಂಸಿಸಿದರು. ಕ್ರೋಮ್‌ನ ಐಚ್ಛಿಕ ಬಳಕೆ ಸಂಗ್ರಹ ಮತ್ತು ಗುರುತಿಸುವಿಕೆಗಳ ಬಗೆಗಿನ ಕಳವಳವನ್ನು ಬಹಳ ಪ್ರಕಟಣೆಗಳಲ್ಲಿ ಗುರುತಿಸಲಾಗಿದೆ.[೧೨೬][೧೨೭] ಸಪ್ಟೆಂಬರ್ 2, 2008ರಂದು ಪ್ರಾರಂಭದ ಬೀಟಾ ಬಿಡುಗಡೆಯ ನಿಯಮಗಳ ಒಂದು ವಾಕ್ಯವೃಂದದ ಬಗ್ಗೆ ಸಿಎನ್‌ಇಟಿ ಸುದ್ದಿಗಳು[೧೨೮] ಗಮನ ಸೆಳೆದವು, ಇದು ಗೂಗಲ್‌ಗೆ ಕ್ರೋಮ್ ಬ್ರೌಸರ್ ಮೂಲಕ ವರ್ಗಾವಣೆಗೊಂಡ ಎಲ್ಲ ವಿಷಯಗಳಿಗೆ ಒಂದು ಪರವಾನಿಗೆಯನ್ನು ಜಾರಿಗೊಳಿಸುವಂತೆ ತೋರಿತ್ತು. ಪ್ರಶ್ನೆಯಾಗಿದ್ದ ವಾಕ್ಯವೃಂದವನ್ನು ಸಾಮಾನ್ಯ ಗೂಗಲ್ ನಿಯಮಗಳಿಂದ ಆಯ್ದುಕೊಳ್ಳಲಾಗಿತ್ತು.[೧೨೯] ಉಪಯೋಗಿಸಿದ ಭಾಷೆಯನ್ನೂ ಇತರ ವಸ್ತುಗಳಿಂದ ಪಡೆಯಲಾಗಿತ್ತು, ಮತ್ತು ಸೇವೆಯ ನಿಯಮಗಳಿಂದ ಪ್ರಶ್ನೆಯಾಗಿದ್ದ ವಾಕ್ಯವೃಂದವನ್ನು ತೆಗೆದುಹಾಕಲಾಗಿದೆ ಎಂದು ಹೇಳಿಕೆ ನೀಡುವುದರ ಮೂಲಕ ಅದೇ ದಿನ ಈ ಟೀಕೆಗೆ ಗೂಗಲ್ ಉತ್ತರಿಸಿತ್ತು.[೧೩೦] ಈ ಬದಲಾವಣೆ "ಗೂಗಲ್ ಕ್ರೋಮ್‌ನ್ನು ಡೌನ್‌ಲೋಡ್ ಮಾಡಿಕೊಂಡ ಎಲ್ಲ ಬಳಕೆದಾರರಿಗೆ ಸ್ಮರಣಾತ್ಮಕವಾಗಿ ಅನ್ವಯಿಸುವುದು" ಎಂದು ಗೂಗಲ್ ಹೇಳಿತು.[೧೩೧] ಅವು ತಿರುಗಿ ಗೂಗಲ್‌ಗೆ ಯಾವಾಗ ಮತ್ತು ಯಾವ ಮಾಹಿತಿಯನ್ನು ಪ್ರೊಗ್ರಾಮ್ ತಿಳಿಸುತ್ತದೆ ಎಂಬುದು ಅನಂತರದ ಕಾಳಜಿ ಮತ್ತು ಗೊಂದಲವಾಗಿತ್ತು. ಬ್ರೌಸರ್‌ನ್ನು ಅಳವಡಿಸಿಕೊಂಡಾಗ "ಬಳಕೆಯ ಮ್ಯಾಟ್ರಿಕ್ಸ್‌ಗಳನ್ನು ಕ್ರ್ಯಾಶ್ ವರದಿಗಳನ್ನು ಸ್ವಯಂಚಾಲಿತವಾಗಿ ಗೂಗಲ್‌ಗೆ ಕಳುಹಿಸುವ ಮೂಲಕ ಗೂಗಲ್ ಕ್ರೋಮ್‌ನ್ನು ಉತ್ತಮಗೊಳಿಸುವ ಸಹಾಯ" ಆಯ್ಕೆಯನ್ನು ಪರೀಕ್ಷಿಸುವ ಮೂಲಕ ಬಳಕೆದಾರರು ಅಳವಡಿಸಿಕೊಂಡಾಗ ಬಳಕೆಯ ಮ್ಯಾಟ್ರಿಕ್ಸ್‌ಗಳನ್ನು ಮಾತ್ರ ಕಳುಹಿಸಲಾಯಿತು ಎಂದು ಕಂಪನಿ ಹೇಳಿತು.[೧೩೨]

ಗೂಗಲ್ ಕ್ರೋಮ್ ಒಳಗೊಂಡಿರುವ ಐಚ್ಛಿಕ ಸಲಹಾ ಸೇವೆಯನ್ನು ವಿಮರ್ಶಿಸಲಾಯಿತು ಏಕೆಂದರೆ ಇದು ಒಮ್ನಿಬಾಕ್ಸ್‌ನಲ್ಲಿ ಬಳಕೆದಾರ ಮಾಹಿತಿಯನ್ನು ಟೈಪ್ ಮಾಡಿ ಮುಗಿಸುವುದರ ಮೊದಲೇ ಗೂಗಲ್‌ಗೆ ಒದಗಿಸುತ್ತದೆ. ಇದು ಯುಆರ್‌ಎಲ್ ಸಲಹೆಗಳನ್ನು ಒದಗಿಸಲು ಗೂಗಲ್‌ಗೆ ಅವಕಾಶ ಒದಗಿಸುತ್ತದೆ, ಆದರೆ ಐಪಿ ವಿಳಾಸಕ್ಕೆ ಸಂಬಂಧಿಸಿರುವ ಅಂತರ್ಜಾಲವನ್ನು ಬಳಸುವ ಮಾಹಿತಿಯನ್ನು ನೀಡುತ್ತದೆ. ಹುಡ್-ಪ್ರೈವಸಿ ಬಾಕ್ಸ್‌ನಲ್ಲಿರುವ ಆಯ್ಕೆ ಯಲ್ಲಿ ಈ ವಿಧಾನವು ಕಾರ್ಯನಿರ್ವಹಿಸದಂತೆ ಮಾಡಬಹುದು.[೧೩೩]

ಇವನ್ನೂ ಗಮನಿಸಿ[ಬದಲಾಯಿಸಿ]

 • ಕ್ರೋಮಿಯಂ (ಅಂತರ್ಜಾಲ ಬ್ರೌಸರ್)
 • ವೆಬ್ ಬ್ರೌಸರ್‌ಗಳ ನಡುವೆ ಹೋಲಿಕೆ
 • ಗೂಗಲ್ ಕ್ರೋಮ್ ಫ್ರೇಮ್
 • ಗೂಗಲ್ ಕ್ರೊಂ ಒಎಸ್
 • ಎಸ್ಆರ‍್ವೇರ್ ಐರನ್

ಉಲ್ಲೇಖಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 2. A new Chrome stable release: Welcome, Mac and Linux!
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. " ಕ್ರೋಮಿಯಂನ ಮುಕ್ತ ಮೂಲ ಕೋಡ್‌ನಿಂದ ಗೂಗಲ್ ಕ್ರೋಮ್‌ನ್ನು ವಿನ್ಯಾಸಗೊಳಿಸಲಾಗಿದೆ." Chromium.org ನಿಂದ ಮರುಸಂಪಾದಿಸಲಾಗಿದೆ.
 6. " ಇಂದು ಪತ್ರಿಕಾಗೋಷ್ಠಿಯ ಸಮಯಲ್ಲಿ, ಗೂಗಲ್ ಇತರೆ ಬ್ರೌಸರ್‌ಗಳ ಬಗ್ಗೆ ಆಶಯ ವ್ಯಕ್ತಪಡಿಸಿತು..." , ಗೂಗಲ್ ಅನ್‌ವೇಲ್ಸ್ ಕ್ರೋಮ್ ಸೋರ್ಸ್ ಕೋಡ್ ಆ‍ಯ್‌೦ಡ್ ಲಿನಕ್ಸ್‌ ಪೋರ್ಟ್, ಆರ್ಸ್ ಟಕ್ನಿಕಾದಿಂದ ಮರು ಸಂಪಾದಿಸಲಾಗಿದೆ.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. "ಗೂಗಲ್ ಕ್ರೋಮ್ ಮೂಲವು ಬಿಎಸ್‌ಡಿ ಪರವಾನಗಿಯಡಿಯಲ್ಲಿ ಲಭ್ಯವಿರುವಂತೆ ಮಾಡಿದೆ ಆದ್ದರಿಂದ..." , ಗೂಗಲ್ ಅನ್‌ವೇಲ್ಸ್ ಕ್ರೋಮ್ ಸೋರ್ಸ್ ಕೋಡ್ ಆ‍ಯ್‌೦ಡ್ ಲಿನಕ್ಸ್‌ ಪೋರ್ಟ್, ಆರ್ಸ್ ಟಕ್ನಿಕಾದಿಂದ ಮರು ಸಂಪಾದಿಸಲಾಗಿದೆ.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. ೧೫.೦೦ ೧೫.೦೧ ೧೫.೦೨ ೧೫.೦೩ ೧೫.೦೪ ೧೫.೦೫ ೧೫.೦೬ ೧೫.೦೭ ೧೫.೦೮ ೧೫.೦೯ ೧೫.೧೦ ೧೫.೧೧ ೧೫.೧೨ ೧೫.೧೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. ೧೬.೦ ೧೬.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. "Early Access Release Channels". 
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. ೨೬.೦ ೨೬.೧ "Google Chrome for the holidays: Mac, Linux and extensions in beta". 
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Chromium.org
 32. "ChangeLog - v8". 
 33. ಗೂಗಲ್ ಕ್ರೋಮ್ ರಿಲೀಜಸ್: ಸ್ಟೇಬಲ್ ನವೀಕರಣ : ಗೂಗಲ್ ಕ್ರೋಮ್ 2.0.172.28
 34. ಗೂಗಲ್ ಕ್ರೋಮ್ ರಿಲೀಜಸ್: ಸ್ಟೇಬಲ್ ನವೀಕರಣ
 35. ಗೂಗಲ್ ಕ್ರೋಮ್ ರಿಲೀಜಸ್: ಸ್ಟೇಬಲ್ ನವೀಕರಣ 2010-03-17
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. ೪೧.೦ ೪೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. [೧], ಕ್ರೋಮಿಯಂ ಇಶ್ಯೂ ಟ್ರ್ಯಾಕರ್.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. 12 ಯುನಿಕ್ ಫೀಚರ್ಸ್ ಆಫ್ ಗೂಗಲ್ ಕ್ರೋಮ್, ಟೆಕ್‌ಸ್ಟ್ರೋಕ್
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. ಗೂಗಲ್ ಕ್ರೋಮ್ ಎಫ್‌ಎಕ್ಯೂ ಫಾರ್ ವೆಬ್ ಡೆವಲಪರ್ಸ್
 53. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 56. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 57. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 58. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 59. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 60. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 61. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 63. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 65. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 66. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 67. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 68. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 69. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 70. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 71. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 72. ೭೨.೦ ೭೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 73. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 74. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 75. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 76. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 77. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 78. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 79. Webkit.org
 80. "Firefox Lorentz beta available for download and testing". Mozilla. 2010-04-08. 
 81. ಎ ಸ್ಪೀಡಿಯರ್ ಗೂಗಲ್ ಕ್ರೋಮ್ ಫಾರ್ ಆಲ್ ಯೂಜರ್ಸ್-ಗೂಗಲ್ ಕ್ರೋಮ್ ಬ್ಲಾಗ್
 82. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 83. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 84. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 85. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 86. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 87. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 88. ಇಶ್ಯೂ 8036: ಶೋ ಥಂಬ್‌ನೇಲ್ಸ್ ಫಾರ್ ಓಪನ್ ಟ್ಯಾಬ್ಸ್ ಆನ್ ವಿಂಡೋಸ್ 7 ಸೂಪರ್‌ಬಾರ್ (ಏರೊ ಪೀಕ್)
 89. ಇಶ್ಯೂ 37957: ಇನ್ವೆಸ್ಟಿಗೇಟ್ ಸೊಲ್ಯೂಶನ್ಸ್ ಫಾರ್ ಏರೊ ಪೀಕ್ ಫ್ಲಡ್ಡಿಂಗ್ ಯೂಜರ್ಸ್ ವಿತ್ ಟ್ಯಾಬ್ ಥಂಬ್‌ನೇಲ್ಸ್
 90. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 91. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 92. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 93. ಗೂಗಲ್ ಡಾಕ್ಯೂಮೆಂಟ್ಸ್ ಬ್ಲಾಗ್
 94. Official Independent Chrome Extension
 95. CEOP Official Chrome Extension
 96. Official TfL Chrome Extension
 97. ESPN Cricinfo
 98. Official World Cup FIFA Chrome Extension
 99. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 100. Google Chrome Themes Gallery
 101. ಬೇಸಿಕ್ ಸೆಟ್ಟಿಂಗ್ಸ್: ಚೇಂಜ್ ಬ್ರೌಸರ್ಸ್ ಥೀಮ್ ಗೂಗಲ್ ಕ್ರೋಮ್ ಸಹಾಯ
 102. ಸಪೋರ್ಟ್ ಗೂಗಲ್ ಕ್ರೋಮ್ - Automatic web page translationle Chro
 103. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 104. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 105. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 106. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 107. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 108. ಸ್ಟ್ಯಾಂಡ್‌ಅಲೋನ್ ಡೌನ್‌ಲೋಡ್ ಪೇಜ್
 109. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 110. ಗೂಗಲ್ ಹೆಲ್ಪ್ "ಮ್ಯಾನೇಜಿಂಗ್ ನವೀಕರಣ ಇನ್ ಗೂಗಲ್ ಸಾಫ್ಟ್‌ವೇರ್‌‌ ಅಪ್‌‍ಡೇಟ್
 111. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 112. ಕಮ್ಯೂನಿಕೇಶನ್ ಬಿಟ್ವಿನ್ ಕ್ರೋಮಿಯಂ/ಗೂಗಲ್ ಕ್ರೋಮ್ ಆ‍ಯ್‌೦ಡ್ ಸರ್ವೀಸ್ ಪ್ರೊವೈಡರ್
 113. ೧೧೩.೦ ೧೧೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 114. ೧೧೪.೦ ೧೧೪.೧ ೧೧೪.೨ ೧೧೪.೩ ಗೂಗಲ್ ಕ್ರೋಮ್ ಪ್ರೈವಸಿ ವೈಟ್‌ಪೇಪರ್
 115. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 116. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 117. ೧೧೭.೦ ೧೧೭.೧ ೧೧೭.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 118. ೧೧೮.೦ ೧೧೮.೧ ಸೆಟ್ಟಿಂಗ್‌ನಿಂದ ನಿಯಂತ್ರಣ "ಬಳಕೆಯಾದ ಅಂಕಿಅಂಶ ಮತ್ತು ಎರರ್ ವರದಿ ಕಳುಹಿಸಿ". ಡಿಫಾಲ್ಟ್ ಆಫ್.
 119. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 120. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 121. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 122. Jaroslovsky, Rich (2010-02-25). "Browser Wars: The Sequel". BusinessWeek. 
 123. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 124. Collins, Barry (2008-09-02). "Mozilla: Google's not trying to kill us". PC Pro. 
 125. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 126. Ackerman, Elise. "Google browser's tracking feature alarms developers, privacy advocates". Mercury News. 
 127. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 128. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 129. Google Terms of Service
 130. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 131. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 132. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 133. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 1. Browser must be downloaded directly from the Google Chrome website to opt-out of the RLZ Identifier.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Mac OS X web browsers