ವಿಷಯಕ್ಕೆ ಹೋಗು

ಗಂಧಕದ ಟ್ರೈಆಕ್ಸೈಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನುರಣನೀಯ ರಚನೆಗಳು

ಗಂಧಕದ ಟ್ರೈಆಕ್ಸೈಡ್ ಒಂದು ರಾಸಾಯನಿಕ ಸಂಯುಕ್ತವಾಗಿದ್ದು ಇದರ ಅಣುಸೂತ್ರ (molecular formula) SO3. ಇದರ ರಚನಾ ಸೂತ್ರ (structural formula) ಇನ್ನೂ ನಿಸ್ಸಂಶಯವಾಗಿ ತೀರ್ಮಾನವಾಗಿಲ್ಲ. ಪಕ್ಕದಲ್ಲಿ ಸೂಚಿಸಿರುವ ಮೂರು ಅನುರಣನೀಯ ರಚನೆಗಳ (ರೆಸೊನೆನ್ಸ್ ಸ್ಟ್ರಕ್ಚರ್ಸ್) ಮಿಶ್ರತಳಿಯಾಗಿರಬೇಕೆಂದು ಭಾವಿಸಲಾಗಿದೆ. ಅಣುವಿನಲ್ಲಿರುವ ಎಲ್ಲ ಪರಮಾಣುಗಳೂ ಒಂದೇ ಸಮತಲದಲ್ಲಿವೆ.

ತಯಾರಿಕೆ

[ಬದಲಾಯಿಸಿ]

ಗಂಧಕದ ಟ್ರೈಆಕ್ಸೈಡನ್ನು ತಯಾರಿಸಲು ಸಾರಯುತ ಸಲ್ಫ್ಯೂರಿಕ್ ಆಮ್ಲವನ್ನು ರಂಜಕದ ಪೆಂಟಾಕ್ಸೈಡಿನೊಡನೆ ಕುದಿಸಬಹುದು.[] ಇಲ್ಲವೇ ನಿರ್ಜಲ ಫೆರಿಕ್ ಸಲ್ಫೇಟನ್ನು ಕಾಯಿಸಿದರೂ ಸಾಕು.

H2SO4 + P2O5 → 2HPO3 + SO3­↑
Fe2(SO4)3 → Fe2O3 + 3SO3

ಗಂಧಕದ ಡೈಆಕ್ಸೈಡ್ ಮತ್ತು ಆಕ್ಸಿಜನ್ನುಗಳ ಶುಷ್ಕ ಮಿಶ್ರಣವನ್ನು 4000 ಸೆಂ.ನಲ್ಲಿರುವ ಪ್ಲಾಟಿನೀಕರಿಸಿದ ಕಲ್ನಾರಿನ (platinized asbestos) ಮೇಲೆ ಹಾಯಿಸಿದರೆ ಗಂಧಕದ ಟ್ರೈಆಕ್ಸೈಡಿನ ಬಿಳಿಯ ಧೂಮ ಉಂಟಾಗುವುದು.

2SO2 + O2 → 2SO3

ಇದನ್ನು ಶೈತ್ಯ ಮಿಶ್ರಣದಲ್ಲಿಟ್ಟಿರುವ U-ನಾಳದ ಮೂಲಕ ಹಾಯಿಸಿದರೆ ಅಲ್ಲಿಯೇ ಘನೀಭವಿಸುತ್ತದೆ. ಕೈಗಾರಿಕಾ ಮೊತ್ತದಲ್ಲಿ ಸಲ್ಫ್ಯೂರಿಕ್ ಆಮ್ಲವನ್ನು ಉತ್ಪಾದಿಸುವ ಸಂಪರ್ಕ ವಿಧಾನವೂ ಇದೇ ತತ್ತ್ವವನ್ನು ಅವಲಂಬಿಸಿದೆ.[]

ಗುಣಗಳು

[ಬದಲಾಯಿಸಿ]

ಗಂಧಕದ ಟ್ರೈಆಕ್ಸೈಡಿನ ಮೂರು ರೂಪಗಳುಂಟು. ಅದರ ಧೂಮವನ್ನು ತಣಿಸಿದರೆ ದ್ರವವಾಗುತ್ತದೆ. ಇದನ್ನು ಕೆಲಕಾಲ ಬಿಟ್ಟರೆ ಪಾರದರ್ಶಕವಾದ ಬರ್ಫದಂಥ ಗೆಡ್ಡೆ ಹರಳುಗಳಾಗುತ್ತದೆ. ಇವು 16.850 ಸೆಂ.ನಲ್ಲಿ ಕರಗಿ 44.520 ಸೆಂ. ನಲ್ಲಿ ಕುದಿಯುತ್ತವೆ. ಈ ಹರಳಿನ ಸಾಂದ್ರತೆ 1.9925 ಅಣುಸೂತ್ರ SO3. ಇದೇ ಆಲ್ಫ ಗಂಧಕದ ಟ್ರೈ ಆಕ್ಸೈಡ್. ಇದನ್ನು ಬಹುಕಾಲ ಕೂಡಿಟ್ಟರೆ, ಇದು ಕಲ್ನಾರನ್ನು ಹೋಲುವ ರೇಷ್ಮೆಯಂಥ ಬೀಟ ಗಂಧಕದ ಟ್ರೈ ಆಕ್ಸೈಡಿನ ಹರಳುಗಳನ್ನು ಕೊಡುವುದು. ಇದೇ ಸ್ಥಿರ ರೂಪ. ಇದರ ದ್ರವನಬಿಂದು 32.50 ಸೆಂ. ಅಣುಸೂತ್ರ S2O6. ಇದನ್ನು ಪೂರ್ತಿಯಾಗಿ ಒಣಗಿಸಿದರೆ ಗ್ಯಾಮ ರೂಪ ತಳೆಯುವುದು. ಇದು ಜಲ್ಲಿಯಂಥ ಘನ. ಸಾಮಾನ್ಯ ಒತ್ತಡದಲ್ಲಿ ಕರ್ಪೂರೀಕರಣಸಿದರೂ 2.5 ವಾಯುಮಂಡಲಗಳ ಒತ್ತಡದಲ್ಲಿ 620 ಸೆಂ.ನಲ್ಲಿ ಕರಗುತ್ತದೆ. ಗಂಧಕದ ಟ್ರೈಆಕ್ಸೈಡಿಗೆ ನೀರಿನ ಒಲವು ಹೆಚ್ಚು. ತೇವವಾದ ಗಾಳಿಯಲ್ಲಿ ಹೊಗೆಯಾಡಲು ಇದೇ ಕಾರಣ. ನೀರಿನಲ್ಲಿ ಹಿಸ್ ಎಂದು ಶಬ್ದ ಮಾಡುತ್ತ ವಿಲೀನವಾಗಿ ಸಲ್ಫ್ಯೂರಿಕ್ ಆಮ್ಲವಾಗುತ್ತದೆ. ಹೆಚ್ಚಿನ ಉಷ್ಣ ಹೊರಬೀಳುವುದು.

SO3 + H2O → H2SO4 fH = −200 kJ/mol)[]

ಸುಮಾರು 1,0000 ಸೆಂ. ಉಷ್ಣತೆಯಲ್ಲಿ ಪೂರ್ತಿಯಾಗಿ ವಿಭಜಿಸುವುದು. ಗಂಧಕದ ಡೈಆಕ್ಸೈಡ್ ಮತ್ತು ಆಕ್ಸಿಜನ್ನುಗಳು ಉತ್ಪನ್ನಗಳು. ಲೋಹದ ಆಕ್ಸೈಡುಗಳೊಡನೆ ಇದು ಸಂಯೋಜಿಸಿದಾಗ ಸಲ್ಫೇಟುಗಳಾಗುತ್ತವೆ. ಬೇರಿಯಂ ಮಾನಾಕ್ಸೈಡಿನೊಂದಿಗೆ ವರ್ತಿಸಿದಾಗ ಬಿಳಿಗಾವಿನಷ್ಟು ಉಷ್ಣ ಉಂಟಾಗಿ ಉತ್ಪನ್ನ ಹೊಳೆಯುತ್ತದೆ.

BaO + SO3 → BaSO4 + ಉಷ್ಣ­ ↑

ಸಾರಯುತ ಸಲ್ಫ್ಯೂರಿಕ್ ಆಮ್ಲದಲ್ಲಿ ಗಂಧಕದ ಟ್ರೈಆಕ್ಸೈಡಿನ ದ್ರಾವಣವೇ ಓಲಿಯಂ ಅಥವಾ ಹೊಗೆಯಾಡುವ ಸಲ್ಫೂರಿಕ್ ಆಮ್ಲ.[]

H2SO4 + SO3 → H2S2O7

ಅಯೊಡೀನ್ ಮತ್ತು ಟೆಲೂರಿಯಂ ಧಾತುಗಳೊಡನೆ ಗಂಧಕದ ಟ್ರೈಆಕ್ಸೈಡ್ ಸಂಕಲನವಾಗಬಲ್ಲದು. ಫಲಿತ ಸಂಯುಕ್ತಗಳ ಸೂತ್ರ ಹೀಗಿದೆ.

I2(SO3)6 ಮತ್ತು TeSO3

ಉಪಯೋಗಗಳು

[ಬದಲಾಯಿಸಿ]

ಸಲ್ಫ್ಯೂರಿಕ್ ಮತ್ತು ಸಲ್ಫಾನಿಕ್ ಆಮ್ಲಗಳ ತಯಾರಿಕೆಯಲ್ಲಿ ಗಂಧಕದ ಟ್ರೈಆಕ್ಸೈಡಿನ ಮುಖ್ಯ ಉಪಯೋಗ ಉಂಟು.

ಉಲ್ಲೇಖಗಳು

[ಬದಲಾಯಿಸಿ]
  1. "How to make sulfur trioxide - YouTube". www.youtube.com. Retrieved 1 September 2020.
  2. US 687834A, Carl Johann Eugen de Haën, "Method of Making Sulfuric Anhydrid", issued 1901-12-03 
  3. "The Manufacture of Sulfuric Acid and Superphosphate" (PDF). Chemical Processes in New Zealand. Archived from the original (PDF) on 2018-01-27. Retrieved 2016-04-22.
  4. Hinds, John Iredelle Dillard (January 1902). Inorganic Chemistry: With the Elements of Physical and Theoretical Chemistry (in ಇಂಗ್ಲಿಷ್). J. Wiley & sons.

ಹೊರಗಿನ ಕೊಂಡಿಗಳು

[ಬದಲಾಯಿಸಿ]