ವಿಷಯಕ್ಕೆ ಹೋಗು

ಕೇನ್‌ಕಾಥ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಕೇನ್‌ಕಾಥ' ಅಥವಾ ಕೇನ್ವಾರಿಯ
ತಳಿಯ ಹೆಸರುಕೇನ್‌ಕಾಥ' ಅಥವಾ ಕೇನ್ವಾರಿಯ
ಮೂಲಮಧ್ಯಪ್ರದೇಶ ಮತ್ತು ಉತ್ತರಪ್ರದೇಶ
ವಿಭಾಗಕೆಲಸಗಾರ ಧೃಡ ಶರೀರ, ಚಿಕ್ಕಗಾತ್ರ
ಬಣ್ಣಸಾಂದ್ರ ಬೂದು
ಕೊಂಬುವೃತ್ತಾಕಾರವಾಗಿ ಬಾಗಿದ ಕೋಡು
ಕಾಲುಗಳುಮಧ್ಯಮ ಗಾತ್ರ
ಕಿವಿಚೂಪು ಕಿವಿ

ಇದಕ್ಕೆ ಕೇನ್ವಾರಿಯ ಎಂಬ ಹೆಸರೂ ಇದೆ. ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಉತ್ತಮ ಕೆಲಸಗಾರ ತಳಿ ಎಂದು ಖ್ಯಾತವಾಗಿದೆ. ಒಣ ಪ್ರದೇಶದಲ್ಲಿ ದೊರಕುವ ಅತಿ ಕಡಿಮೆ ಹುಲ್ಲು ಆಹಾರಕ್ಕೆ ಹೊಂದಿಕೊಂಡು ರೈತನ ಬೆನ್ನೆಲುಬಾದ ತಳಿ ಇದು. ಕೇನ್‌ಕಾಥ ಅಥವಾ ಕೇನ್ವಾರಿಯ ಅನ್ನುವುದು ಕೇನ್ ನದಿಯ ದಂಡೆಗುಂಟ ಕಾಣಸಿಗುವ ಒಂದು ಅತ್ಯುತ್ತಮ ಕೆಲಸಗಾರ ಗೋತಳಿ. . ಕೇನ್ ನದಿ ಮಧ್ಯಪ್ರದೇಶದ ಬುಂದೆಲ್‌ಖಂಡ್, ಲಲಿತ್‌ಪುರ್, ಹಮಿರ್‌ಪುರ್ ಹಾಗು ಬಂದಾ ಜಿಲ್ಲೆಗಳಲ್ಲಿ ಹರಿಯುತ್ತದೆ. ಇದರ ದಂಡೆಗುಂಟ ಇರುವ ಹುಲ್ಲುಗಾವಲು ಪ್ರದೇಶಗಳಲ್ಲಿ ಕೇನ್‌ಕಾಥ ತಳಿ ಅಭಿವೃದ್ದಿಗೊಂಡಿದೆ. ಕೇನ್‌ಕಾಥಕ್ಕೂ ಮತ್ತು ಮಾಳ್ವಿ ತಳಿಗೂ ಬಹಳಷ್ಟು ಸಾಮ್ಯವಿದೆ. ಕೇನ್ ನದಿಯ ಆಸುಪಾಸಿನ ಪ್ರದೇಶ ಕೆಂಬೂದು ಬಣ್ಣದ ಮಣ್ಣನ್ನು ಹೊಂದಿದ ಫಲಹೀನ ಭೂಮಿ. ಇಲ್ಲಿನ ಸಾಗುವಳಿ ನೇಗಿಲಯೋಗಿಗೊಂದು ಸವಾಲು. ಕಪ್ಪು ಬಣ್ಣದ ಫಲವತ್ತಾದ ಭೂಮಿ ಕೇನ್ ಕೆಲಪ್ರದೇಶಗಳಲ್ಲಿ ಇದೆಯಾದರೂ ಅದರ ವ್ಯಾಪ್ತಿ ಕಡಿಮೆಯೆ. ಜೊತೆಗೆ, ಇಲ್ಲಿ ಬೆಳೆಯುವ ಹುಲ್ಲು ಗಿಡ್ಡನೆಯ ಗಾತ್ರದ ಪೌಶ್ಟಿಕಾಂಶವಿಲ್ಲದ ಬೇಗನೆ ಒಣಗಿಬಿಡುವ ಜಾತಿಯದ್ದಾದ್ದರಿಂದ ಇಲ್ಲಿ ಹೈನುಗಾರಿಕೆಯಿಂದಲಾಗಲೀ ಸಾಗುವಳಿಯಿಂದಲಾಗಲೀ ಬಹಳ ಕಷ್ಟ. ಇಂತಹ ಪರಿಸ್ಥಿತಿಗೆ ಹೊಂದಿಕೊಂಡು ರೈತನ ಬೆನ್ನೆಲುಬಾಗಿದ್ದು ಕೇನ್ವಾರಿಯ. ಕಡಿಮೆ ಆಹಾರ ಸೇವಿಸಿದರೂ ನೇಗಿಲ ಹೊರಲು ಬಲಿಷ್ಠ ಕಾಲುಗಳನ್ನು ಹೊಂದಿವೆ. ಮೇವಿಗಾಗಿ ದೂರ ದೂರದ ಹುಲ್ಲುಗಾವಲುಗಳನ್ನು ಹುಡುಕಿಹೋಗಬೇಕಾದ ಸ್ಥಿತಿಯಿರುವ ಈ ಪ್ರದೇಶದಲ್ಲಿ ಇಲ್ಲಿನ ಹವಾಗುಣ ಹಾಗು ಆಹಾರದ ಲಭ್ಯತೆಗೆ ಕೇನ್‌ಕಾಥ ಸಂಪೂರ್ಣವಾಗಿ ಹೊಂದಿಕೊಂಡಿದೆ. ಕಬ್ಬಿನ ಜಲ್ಲೆ, ಒಣ ಹುಲ್ಲುಗಳು ಮುಖ್ಯ ಆಹಾರ. ಕೇನ್ ನದೀ ಪಾತ್ರಗಳಲ್ಲಿ ಹಸುಗಳನ್ನು ದೊಡ್ದ ದೊಡ್ಡಸಂಖ್ಯೆಯಲ್ಲಿ ಸಾಕುವುದು ಅಪರೂಪ. ಹೀಗಾಗಿ ಊರಿನ ಎಲ್ಲ ಹಸುಗಳನ್ನೂ ಪಾಳಿಯಲ್ಲಿ ಒಬ್ಬ ರೈತನೇ ನೋಡಿಕೊಳ್ಳುವ ವ್ಯವಸ್ಥೆ ಇದೆ.

ಕೇನ್‌ಕಾಥ ಹಸುಗಳು ಚಿಕ್ಕಗಾತ್ರದವು. ಬಣ್ಣ ಕತ್ತುಗಳ ಬಳಿ ಹೆಚ್ಚು ಸಾಂದ್ರವಾಗಿರುವ ಬೂದು. ಉಳಿದಂತೆ ಚಿಕ್ಕ ಕುತ್ತಿಗೆ, ವೃತ್ತಾಕಾರವಾಗಿ ಬಾಗಿದಂತಿರುವ ಕೋಡು, ಚೂಪು ಕಿವಿ, ಮಧ್ಯಮ ಗಾತ್ರ ಬಾಲ, ೩೦೦ರಿಂದ ೩೫೦ ಕೇಜಿ ತೂಕ, ೧೨೫-೧೪೦ಸೆ.ಮಿ ಎತ್ತರ ಇತ್ಯಾದಿ ಇತ್ಯಾದಿ.

ಭಾರತೀಯ ಗೋವಂಶದ ಇತರ ತಳಿಗಳಂತೆ ಇದೂ ಕೂಡ ದಿವ್ಯ ನಿರ್ಲಕ್ಶ್ಯಕ್ಕೆ ಒಳಗಾಗಿದೆ, ಅಳಿವಿನಂಚಿನಲ್ಲಿದೆ.

ಚಿತ್ರಗಳು

[ಬದಲಾಯಿಸಿ]

ಆಧಾರ/ಆಕರ

[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.