ವಿಷಯಕ್ಕೆ ಹೋಗು

ಕೆ೨

Coordinates: 35°52′57″N 76°30′48″E / 35.88250°N 76.51333°E / 35.88250; 76.51333
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
K2
K2, summer 2006
Highest point
ಎತ್ತರ8,611 m (28,251 ft)
Ranked 2nd (1st in Pakistan)
ಪ್ರಾಮುಖ್ಯತೆ4,017 m (13,179 ft)
ಪ್ರತ್ಯೇಕತೆ1,316 km (818 mi) Edit this on Wikidata
ಪಟ್ಟಿ2nd highest
22nd most prominent
Country high point
Seven Second Summits
ನಿರ್ದೇಶಾಂಕಗಳು35°52′57″N 76°30′48″E / 35.88250°N 76.51333°E / 35.88250; 76.51333[]
Geography
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/Tibetan Plateau" does not exist.
Parent rangeKarakoram
Climbing
ಮೊದಲ ಆರೋಹಣJuly 31, 1954
ಇಟಲಿ Achille Compagnoni
ಇಟಲಿ Lino Lacedelli
ಸುಲಭವಾದ ಮಾರ್ಗrock/snow/ice climb

ಕೆ2 ಭೂಮಿಯ ಮೇಲೆ ಮೌಂಟ್ ಎವರೆಸ್ಟ್‌ನ ನಂತರ ಎರಡನೇ ಅತಿ ಎತ್ತರದ ಪರ್ವತ. ಇದರ ಮೇಲ್ಮೈ ಶಿಖರ 8,611 metres (28,251 ft) ನಷ್ಟಿದ್ದು, ಕಾರಕೋರಂ ಶ್ರೇಣಿಯ ಭಾಗವಾಗಿದೆ, ಮತ್ತು ಕ್ಸಿನ್‌ಜಿಯಾಂಗ್, ಚೀನಾಕ್ಸಿನ್‌ಜಿಯಾಂಗ್‌‌ದ ಟಾಕ್ಸ್‌ಕೊರ್ಗನ್ ಟಜಿಕ್‌ ಸ್ವಯಾಧಿಕಾರದ ಕೌಂಟಿ ಮತ್ತು ಪಾಕಿಸ್ತಾನಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿರುವ ಗಿಲ್ಗಿಟ್ ಪ್ರದೇಶಗಳ ಸೀಮೆಯಲ್ಲಿದೆ.[][note][] ಪಾಕ್ ಆಕ್ರಮಿತ ಕಾಶ್ಮೀರವು ತನ್ನ ಭೂಪ್ರದೇಶವೆಂದು ಭಾರತದ ನಿಲುವಾದ್ದರಿಂದ ಆ ದೃಷ್ಟಿಯಲ್ಲಿ ಕೆ-೨ ಭಾರತದ ಅತ್ಯುನ್ನತ ಶಿಖರವೆನಿಸಲ್ಪಡುವುದು.

ಕೆ2 ಪರ್ವತದ ಕ್ಲಿಷ್ಟಕರವಾದ ಅರೋಹಣದಿಂದ ಇದನ್ನು ಉಗ್ರ ಪರ್ವತ ವೆಂದು ಕರೆಯುತ್ತಾರೆ ಮತ್ತು ಹತ್ತುವ "ಎಂಟು ಸಾವಿರದವರಲ್ಲಿ" 2ನೇ ಅತಿ ಪ್ರಾಣಾಂತಿಕ ದರ್ಜೆಯಲ್ಲಿದೆ. ಶಿಖರವನ್ನು ಸೇರಿರುವ ಪ್ರತಿ ನಾಲ್ಕು ಜನರಲ್ಲಿ, ಒಬ್ಬನು ಯತ್ನದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.[] ಪ್ರಾಣಾಂತಿಕ ದರ್ಜೆಯಲ್ಲಿ ಮೊದಲನೇ ಸ್ಥಾನದಲ್ಲಿರುವ ಅನ್ನಪೂರ್ಣದಂತಿಲ್ಲದೆ, ಚಳಿಗಾಲದಲ್ಲಿ ಕೆ2ವನ್ನು ಯಾರೂ ಹತ್ತಿಲ್ಲ. ೧೮೫೬ರಲ್ಲಿ ಗಾಡ್ವಿನ್-ಆಸ್ಟಿನ್ ನ ನೇತೃತ್ವದ ಯುರೋಪ್ ನ ತಂಡವೊಂದು ಈ ಪರ್ವತದ ಮೋಜಣಿ ನಡೆಸಿ ಎತ್ತರವನ್ನು ನಿಖರವಾಗಿ ನಿರ್ಧರಿಸಿತು. ಈ ಪರ್ವತವನ್ನು ಏರಲು ಹಲವು ದಾರಿಗಳಿವೆ. ಆದರೆ ಯಾವುದೇ ದಾರಿಯೂ ಸುಗಮವೆಂದು ಹೇಳಲಾಗದು. ಅತಿ ಹೆಚ್ಚಿನ ಎತ್ತರದ ಕಾರಣ ಆಮ್ಲಜನಕದ ತೀವ್ರ ಕೊರತೆ, ಹಲವು ದಿನಗಳವರೆಗೆ ಬಿಡದಂತೆ ಬೀಸುವ ಹಿಮದ ಬಿರುಗಾಳಿ, ಅತಿ ಕಡಿದಾದ ಪರ್ವತದ ಮೇಲ್ಮೈ - ಈ ಕಾರಣಗಳಿಂದಾಗಿ ಕೆ-೨ ಶಿಖರವು ಪರ್ವತಾರೋಹಿಗಳಿಗೆ ಒಂದು ಕಠಿಣ ಸವಾಲಾಗಿದೆ. ೧೯೫೪ರಲ್ಲಿ ಇಟಲಿಯ ಪರ್ವತಾರೋಹಿ ತಂಡವೊಂದು ಕೆ-೨ ಪರ್ವತವನ್ನು ಮೊಟ್ಟಮೊದಲ ಬಾರಿಗೆ ಏರುವಲ್ಲಿ ಸಫಲವಾಯಿತು.

ನಗರದ ಹೆಸರು

[ಬದಲಾಯಿಸಿ]
ಮೂಂಟ್‌ಗಾಮರಿ ಅವರ ಮೂಲ ರೇಖಾಚಿತ್ರ, ಇದರಲ್ಲಿ ಅವರು ಕೆ2 ಸಂಕೇತನವನ್ನು ಪ್ರಯೋಗಿಸಿದ್ದಾರೆ

ಕೆ2 ಎಂಬ ಹೆಸರು ಅಸಾಮಾನ್ಯ ಮುಮ್ಮೂಲೆಯರಿಮೆ ಸಮೀಕ್ಷೆಯ ಸಂಕೇತನದಿಂದ ಉದ್ಭವಿಸಿದ್ದು. ಥೊಮಸ್ ಮಾಂಟ್‌ಗೊಮರಿ ಅವರು ಹರಮುಖ್ ಪರ್ವತದಿಂದ ಕರಕೋರಮ್‌ನ ಮೊದಲ ಸಮೀಕ್ಷೆ ನಡೆಸಿದರು, ದಕ್ಷಿಣದಿಂದ ಕೆಲವು 130 miles (210 km) ಕ್ಕೆ, ಮತ್ತು ಎರಡು ಗಣ್ಯ ಶಿಖರಗಳನ್ನು ಚಿತ್ರಿಸಿದರು, ಅವಕ್ಕೆ ಕೆ1 ಮತ್ತು ಕೆ2 ಎಂದು ಹೆಸರಿಟ್ಟರು.[]

ಅಸಾಮಾನ್ಯ ಮುಮ್ಮೂಲೆಯರಿಮೆ ಸಮೀಕ್ಷೆಯ ಕಾರ್ಯನೀತಿಯ ಪ್ರಕಾರ ಸ್ಥಳೀಯ ಹೆಸರುಗಳನ್ನು ಅವಕಾಶವಿದ್ದಾಗ ಉಪಯೋಗಿಸಬೇಕೆಂದು[] ಮತ್ತು ಕೆ1 ಅನ್ನು ಸ್ಥಳೀಯವಾಗಿ ಮಾಶರ್‌ಬ್ರಮ್ ಎಂದು ಕರೆಯುತ್ತಾರೆ. ಆದರೆ, ಕೆ2, ಯಾವುದೇ ಸ್ಥಳೀಯ ಹೆಸರನ್ನು ಪಡೆದಿಲ್ಲ, ಬಹುಶಃ ಬಹು ದೂರದಲ್ಲಿರುದರಿಂದ ಇರಬಹುದು. ದಕ್ಷಿಣದ ಕೊನೆಯ ಹಳ್ಳಿಯಾದ ಅಸ್ಕೋಲೆಯಿಂದ ಈ ಪರ್ವತವು ಕಾಣಬರುವುದಿಲ್ಲ, ಅಥವಾ ಉತ್ತರದ ಹತ್ತಿರದಲ್ಲಿರುವ ವಾಸಸ್ಥಳದಿಂದಲೂ ಕಾಣಬರುವುದಿಲ್ಲ, ಮತ್ತು ಬಾಲ್‌ಟೊರೊ ನೀರ್ಗಲ್ಲನದಿಯಿಂದ ಕ್ಷಣಿಕವಾಗಿ, ಅಸ್ಪಷ್ಟವಾಗಿ ಕಾಣುತ್ತದೆ, ಇದರಿಂದಾಚೆಗೆ ಕೆಲವೇ ಕೆಲವು ಜನರು ಪರ್ವತದ ಸಾಹಸಕ್ಕಿಳಿದಿರಬಹುದು.[] ಚೊಗೊರಿ ಎಂಬ ಹೆಸರು ಎರಡು ಬಾಲ್ಟಿ ಪದಗಳಿಂದ ಉದ್ಭವವಾಗಿದೆ, ಚೊಗೊ (’ದೊಡ್ಡ’) ಮತ್ತು ರಿ (’ಪರ್ವತ’) (شاہگوری) ಸ್ಥಳೀಯರಿಂದ ಸೂಚಿಸಲ್ಪಟ್ಟಿರುವ ಹೆಸರು, ಆದರೆ ವ್ಯಾಪಕವಾಗಿ ಉಪಯೋಗಿಸಿರುವ ಸಾಕ್ಷಿಗಳು ಅತ್ಯಲ್ಪ. ಪಶ್ಚಿಮದ ಅನ್ವೇಷಕರು ಸೃಷ್ಟಿಸಿದ ಸಂಯುಕ್ತ ಹೆಸರಾಗಿರಬಹುದು[] ಅಥವ ಭ್ರಮೆಗೊಳಗಾದ ಜನರು ಕೇಳುವ "ಅದನ್ನು ಏನೆಂದು ಕರೆಯುತ್ತಾರೆ?" ಎಂಬ ಪ್ರಶ್ನೆಗೆ ಉತ್ತರವಿರಬಹುದು.[] ಖೊಗಿರ್ ಎಂಬ ಹೆಸರಿಗೆ ಆಧಾರವಾಗಿದೆsimplified Chinese: 乔戈里峰; traditional Chinese: 喬戈里峰; pinyin: Qiáogēlǐ Fēng, ಈ ಹೆಸರಿನಿಂದ ಚೈನೀ ಅಧಿಕಾರಿಗಳು ಅಧಿಕೃತವಾಗಿ ಈ ಶಿಖರವನ್ನು ಕರೆಯುತ್ತಾರೆ. ಇತರ ಸ್ಥಳೀಯ ಹೆಸರುಗಳಾದ ಲಂಬಾ ಪಹಾರ್ (ಉರ್ದುವಿನಲ್ಲಿ "ಎತ್ತರದ ಪರ್ವತ" ಎಂದು) ಮತ್ತು ಡಪ್ಸಂಗ್ ಎಂಬುವೂ ಇವೆ, ಆದರೆ ಯಾವುದೂ ವ್ಯಾಪಕವಾಗಿ ಬಳಕೆಯಲ್ಲಿಲ್ಲ.[]

ಯಾವುದೇ ಸ್ಥಳೀಯ ಹೆಸರುಗಳ್ಳಿಲ್ಲದ ಕೊರತೆಯಿಂದ, ಮುಂಚಿನ ಪರಿಶೋಧಕರಾದ ಹೆನ್ರಿ ಗಾಡ್ವಿನ್-ಆಸ್ಟೆನ್ ಅವರ ಗೌರವಾರ್ಥ ಮೌಂಟ್ ಗಾಡ್ವಿನ್-ಆಸ್ಟೆನ್ ಎಂದು ಸೂಚಿಸಲಾಯಿತು, ಆದರೆ ಈ ಹೆಸರನ್ನು ರಾಯಲ್ ಜಿಯೊಗ್ರಾಫಿಕಲ್ ಸೊಸೈಟಿ‌ಯವರು ತಿರಸ್ಕರಿಸಿದರು[], ಆದರೂ ಅನೇಕ ಭೂಪಟಗಳಲ್ಲಿ ಈ ಹೆಸರನ್ನು ಉಪಯೋಗಿಸಲಾಯಿತು, ಮತ್ತು ಈಗಲೂ ಒಮ್ಮೊಮ್ಮೆ ಉಪಯೋಗಿಸುವುದು ಮುಂದುವರೆದಿದೆ.[][೧೦]

ಆದ್ದರಿಂದ, ಸಮೀಕ್ಷಕರ ಗುರುತಾದ ಕೆ2, ಪರ್ವತದ ಸಾಮುದಾಯಿಕ ಹೆಸರಾಗಿ ಪರಿಚಿತವಾಗಿದೆ. ಇದನ್ನು ಬಾಲ್ಟಿ ಭಾಷೆಯಲ್ಲೊ ಉಪಯೋಗಿಸುತ್ತಾರೆ, ಕೇಚು ಅಥವ ಕೇತು ಎಂದು ಭಾಷಾಂತರಗೊಂಡಿದೆ.[][೧೧]ಉರ್ದು: کے ٹو ಇಟಲಿಯ ಆರೋಹಿಯೊಬ್ಬರಾದ ಫಾಸ್ಕೊ ಮರೈನಿ ಯವರು ಗಾಶರ್‌ಬ್ರಮ್ IVನ ಆರೋಹಣದ ಹೇಳಿಕೆಯಲ್ಲಿ ಕೆ೨ ಎಂಬ ಹೆಸರು ತನ್ನ ಮೂಲವನ್ನು ಅದೃಷ್ಟಕ್ಕೆ ಋಣಿಯಾಗಿದೆ ಎಂದು ವಾದಿಸಿದರು, ಅದರ ಹಿಡಿಕೆ, ವ್ಯಕ್ತಿಗತವಲ್ಲದ ಪ್ರಕೃತಿ ಎಲ್ಲವೂ ತುಂಬಾ ದೂರದಲ್ಲಿರುವ ಮತ್ತು ಸಲಾಲೆನಿಸುವ ಪರ್ವತಕ್ಕೆ ತಕ್ಕ ಹೆಸರಾಗಿದೆ. ಅವರು ಹೀಗೆ ಮುಕ್ತಾಯಗೊಳಿಸಿದ್ದಾರೆ...

"...ಬರೀ ಹೆಸರಿನ ಸ್ಪಷ್ಟವಾದ ಎಲುಬಿನಂತೆ, ಎಲ್ಲಾ ಕಲ್ಲುಗಳು ಮತ್ತು ಮಂಜು ಮತ್ತು ಬಿರುಗಾಳಿ ಮತ್ತು ಪ್ರಪಾತ. ಮಾನವರಂತೆ ಕಾಣಿಸಲು ಯಾವ ಪ್ರಯತ್ನವನ್ನೂ ಪಡುತ್ತಿಲ್ಲ. ಅವುಗಳು ಅಣುಗಳು ಮತ್ತು ನಕ್ಷತ್ರಗಳು. ಮೊದಲನೇ ಮನುಷ್ಯನ ಮುಂದೆ ಪ್ರಪಂಚದ ನಗ್ನತೆಯಿರುವ ಹಾಗೆ - ಅಥವ ಕೊನೆಯಾದ ನಂತರ ಕೆಂಡವಾದ ಗ್ರಹ."[೧೨]

ಆರೋಹಣದ ಇತಿಹಾಸ

[ಬದಲಾಯಿಸಿ]

ಮುಂಚಿನ ಪ್ರಯತ್ನಗಳು

[ಬದಲಾಯಿಸಿ]
1909ರ ಆರೋಹಣದ ಸಮಯದಲ್ಲಿ ಸವೋಯ ನೀರ್ಗಲ್ಲನದಿಯಿಂದ ತೆಗೆದ ಕೆ2ವಿನ ಪಶ್ಚಿಮದ ಮುಖ

ಯೂರೋಪಿಯನ್ನರ ಸಮೀಕ್ಷೆಯ ತಂಡವೊಂದು ಈ ಪರ್ವತದ ಮೊದಲನೆಯ ಸಮೀಕ್ಷೆ 1856ರಲ್ಲಿ ನಡೆಸಿತು. ಥೊಮಸ್ ಮಾಂಟ್ಗೊಮರಿ ಅವರು ಈ ತಂಡದ ಸದಸ್ಯರಾಗಿದ್ದರು, ಹಾಗೂ ಕೆ2 ಎಂದು ಎರಡನೇ ಎತ್ತರದ ಕರಕೊರಮ್ ಶ್ರೇಣಿಯ ಶಿಖರಕ್ಕೆ ಹೆಸರಿಟ್ಟರು. ಇತರ ಶಿಖರಗಳನ್ನು ಮೂಲವಾಗಿ ಕೆ1, ಕೆ3, ಕೆ4 ಮತ್ತು ಕೆ5 ಎಂದು ಕರೆಯಲ್ಪಟ್ಟಿದ್ದವು, ಆದರೆ ಆನಂತರ ಮಾಶರ್‌ಬ್ರಮ್, ಬ್ರಾಡ್ ಪೀಕ್, ಗಾಶರ್‌ಬ್ರಮ್ II ಮತ್ತು ಗಾಶರ್‌ಬ್ರಮ್ I ಎಂದು ಮರು ನಾಮಕರಣ ಮಾಡಲಾಯಿತು. 1892ರಲ್ಲಿ, ಬ್ರಿಟಿಷ್ ಅನ್ವೇಶಕರನ್ನು ಮಾರ್ಟಿನ್ ಕಾನ್ವೆ ಅವರ ನಾಯಕತ್ವದಲ್ಲಿ ಬಾಲ್ಟೊರೊ ನೀರ್ಗಲ್ಲನದಿಯ ಮೇಲಿರುವ ’ಕಾನ್ಕಾರ್ಡಿಯ’ ವನ್ನು ತಲುಪಿದರು.[೧೩]

ನಾರ್ತ್‌ಈಸ್ಟ್ ರಿಡ್ಜ್‌ನ ಮೂಲಕ ಕೆ೨ವನ್ನು ಹತ್ತುವ ಮೊದಲನೆಯ ಗಂಭೀರವಾದ ಪ್ರಯತ್ನವನ್ನು 1902ರಲ್ಲಿ ಆಸ್ಕರ್ ಎಕ್ಕಂಸ್ಟೈನ್ ಮತ್ತು ಅಲೀಸ್ಟರ್ ಕ್ರೌಲಿ ಅವರುಗಳು ಮಾಡಿದರು. ಐದು ಗಂಭೀರ ಮತ್ತು ದುಬಾರಿಯಾದ ಪ್ರಯತ್ನಗಳ ನಂತರ, ತಂಡವು 6,525 metres (21,407 ft) ಷ್ಟೇ ತಲುಪಿದವು.[೧೪] ಪ್ರಶ್ನಾರ್ಥಕ ದೈಹಿಕ ಶಿಕ್ಷಣ, ವೈಯಕ್ತಿಕ ಭಿನ್ನಾಹಿಪ್ರಾಯಗಳು, ಮತ್ತು ಕಳಪೆ ವಾಯುಗುಣ ಇವೆಲ್ಲದರ ಸಂಯುಕ್ತ ಕಾರಣಗಳಿಂದ ಪ್ರಯತ್ನಗಳು ವಿಫಲವಾದವು - ಕೆ2 ಮೇಲೆ ಕಳೆದ 68 ದಿನಗಳಲ್ಲಿ (ಆವಾಗ, ಇದು ಅಂಥಹ ಎತ್ತರದಲ್ಲಿ ಬಹಳ ದೀರ್ಘ ಕಾಲವನ್ನು ಕಳೆದರು) ಪರಿಶುಧ್ಧ ವಾಯುಗುಣವಿದ್ದಿದ್ದು ಬರೀ 8 ದಿನಗಳು.[೧೫]

ಇದರ ನಂತರದ ಕೆ2 ಆರೋಹಣವು 1909ರಲ್ಲಿ ಅಬ್ರುಝಿಯ ದಳಪತಿಯಾದ ಲುಯಿಗಿ ಅಮೆಡಿಯೊ ಅವರ ನಾಯಕತ್ವದಲ್ಲಿ ಸುಮಾರು 6,250 metres (20,505 ft) ರಷ್ಟು ಎತ್ತರವನ್ನು ದಕ್ಷಿಣ-ಪೂರ್ವದ ಸ್ಪರ್ ಮೇಲೆ ತಲುಪಿದರು, ಈಗ ಇದನ್ನು ಅಬ್ರುಝಿ ಸ್ಪರ್ (ಅಥವ ಅಬ್ರುಝಿ ತುದಿ) ಎಂದು ಕರೆಯುತ್ತಾರೆ. ಇದು ನಂತರದ ದಿನಗಳಲ್ಲಿ ಸಾಮಾನ್ಯ ಹಾದಿಯ ಭಾಗವಾಯಿತು, ಆದರೆ ಇದು ಕಡಿದಾದ ಮತ್ತು ಕ್ಲಿಷ್ಟಕರವಾದುದರಿಂದ ಇದನ್ನು ಕೈಬಿಡಲಾಯಿತು. ಪಶ್ಚಿಮದ ತುದಿಯಿಂದ ಅಥವ ಈಶಾನ್ಯದ ತುದಿಯಿಂದ ಒಂದು ಸಾಧಿಸಬಹುದಾದ ಪರ್ಯಾಯ ಹಾದಿಯನ್ನು ಕಂಡುಹಿಡಿಯಲು ಪ್ರಯತ್ನಿಸಿ ಸೋತಿದ್ದರಿಂದ, ದಳಪತಿಯು ಕೆ೨ವನ್ನು ಹತ್ತಲು ಅಸಾಧ್ಯವೆಂದು ಘೋಶಿಸಿದನು, ಮತ್ತು ತಂಡವು ತನ್ನ ಗಮನವನ್ನು ಚೊಗೊಲಿಸಗೆ ತಿರುಗಿಸಿದರು, ಅಲ್ಲಿ ದಳಪತಿಯು ಶಿಖರದ 150 metres (492 ft) ರಷ್ಟು ಹತ್ತಿರಕ್ಕೆ ಬಂದು ಬಿರುಗಾಳಿಯಿಂದ ಹಿಂದಿರುಗಬೇಕಾಯಿತು.[೧೬]

ಪೂರ್ವ ದಿಕ್ಕಿನಿಂದ ಕೆ2, 1909ರ ಅರೋಹಣದ ಸಮಯದಲ್ಲಿ ತೆಗೆದ ಛಾಯಾಚಿತ್ರ

ಕೆ2 ಹತ್ತುವ ಅನಂತರದ ಪ್ರಯತ್ನವು 1938ರ ತನಕ ನಡೆಯಲಿಲ್ಲ, ಅಮೇರಿಕದ ಆರೋಹಣವು ಚಾರ್ಲ್ಸ್ ಹ್ಯೂಸ್ಟನ್ ಅವರ ನಾಯಕತ್ವದಲ್ಲಿ ಪರ್ವತದ ಭೂಪರಿಶೀಲನೆ ನಡೆಸಿತು. ಅವರು ಅಬ್ರುಝಿ ಸ್ಪರ್‌ನ ಹಾದಿಯು ಅತಿ ವಾಸ್ತವಿಕ ಹಾದಿಯಾಗಿದೆ ಎಂದು ಅಭಿಪ್ರಾಯ ಪಟ್ಟರು, ಮತ್ತು ಸಾಮಾನು ಸರಂಜಾಮುಗಳು ಕಡಿಮೆಯಾಗುತ್ತಿತ್ತು ಮತ್ತು ಹವಾಮಾನವು ಅಹಿತಕರವಾಗುತ್ತಿದ್ದ ಕಾರಣ 8,000 metres (26,247 ft) ರಷ್ಟು ಎತ್ತರವನ್ನು ತಲುಪಿ, ವಾಪಸ್ಸಾದರು.[೧೭][೧೮] ಅದರ ಮುಂದಿನ ವರ್ಷದಲ್ಲಿ, ಫ್ರಿಟ್ಝರ್ ವೆಸ್ಸ್ನರ್ ಅವರ ನಾಯಕತ್ವದಲ್ಲಿ ಆರೋಹಣವು ಶಿಖರದ 200 metres (656 ft) ರಷ್ಟು ಹತ್ತಿರ ತಲುಪಿದರು, ಆದರೆ ಡಡ್ಲಿ ವೂಲ್ಫ್, ಪಸಂಗ್ ಕಿಕುಲಿ, ಪಸಂಗ್ ಕಿಟಾರ್ ಮತ್ತು ಪಿಂಟ್ಸೊ ಅವರುಗಳು ಪರ್ವತದ ಶಿಖ್ರಗಳಲ್ಲಿ ಕಾಣೆಯಾದ್ದರಿಂದ ದುರಂತಕ್ಕೀಡಾಯಿತು.[೧೯][೨೦]

1953ರ ಅಮೇರಿಕ ಆರೋಹಣದ ನಾಯಕತ್ವ ವಹಿಸಲು ಚಾರ್ಲ್ಸ್ ಹ್ಯೂಸ್ಟನ್ ಅವರು ಕೆ2 ಹತ್ತಲು ಹಿಂದಿರುಗಿದರು. ಆರೋಹಣವು ಬಿರುಗಾಳಿಯಿಂದ ವಿಫಲವಾಯಿತು, ಇದರಿಂದ ತಂಡವನ್ನು ಹತ್ತು ದಿನಗಳ ಕಾಲ 7,800 metres (25,591 ft) ನಲ್ಲಿ ಸಿಕ್ಕಿಕೊಂಡಿತು, ಆ ಸಮಯದಲ್ಲಿ ಆರ್ಟ್ ಗಿಲ್ಕಿರವರು ವಿಷಮ ಸ್ಥಿಥಿಯಲ್ಲಿ ಅನಾರೋಗ್ಯಕ್ಕೊಳಗಾದರು. ಆ ಸಮಯದಲ್ಲಿ ಪೀಟ್ ಸ್ಶೋನಿಂಗ್ ಬಹುತೇಕ ಇಡೀ ತಂಡವನ್ನು ಸಮೂಹ ಪತನದಿಂದ ಪಾರು ಮಾಡಿದರು, ಮತ್ತು ಹಿಮಪಾತದಿಂದ ಅಥವ ತನ್ನ ಸಹಚರರಿಗಾಗುವ ಹೊಣೆಯನ್ನು ತಪ್ಪಿಸುವ ಉದ್ದೇಶದ ಪ್ರಯತ್ನದಿಂದ ಗಿಲ್ಕಿಯವರು ಮರಣ ಹೊಂದಿದರು. ವೈಫಲ್ಯ ಮತ್ತು ದುರಂತಗಳಿದ್ದರೂ ಸಹ, ತಂಡವು ತೋರಿದ ಸ್ಥೈರ್ಯದಿಂದ ಈ ಆರೋಹಣಕ್ಕೆ ಪೂಜನೀಯ ಸ್ಥಾನವನ್ನು ಪರ್ವತಾರೋಹಣ ಇತಿಹಾಸದಲ್ಲಿ ಕೊಟ್ಟಿದೆ.[೨೧][೨೨][೨೩]

ಯಶಸ್ಸು ಮತ್ತು ಪುನರಾವರ್ತನೆಗಳು

[ಬದಲಾಯಿಸಿ]

ಜುಲೈ 31, 1954ರಲ್ಲಿ, ಇಟಾಲಿಯನ್ ಆರೋಹಣವು ಅಂತಿಮವಾಗಿ ಕೆ2 ಶಿಖರವನ್ನು ಹತ್ತುವುದರಲ್ಲಿ ಯಶಸ್ವಿಯಾದರು. ಆರೋಹಣದ ನಾಯಕತ್ವವನ್ನು ಆರ್ಡಿಟೊ ಡೇಸಿಯೊ ಅವರು ವಹಿಸಿದ್ದರು, ಆದರೂ ಇಬ್ಬರು ಆರೋಹಿಗಳಾದ ಲಿನೊ ಲೇಸಿಡೆಲ್ಲಿ ಮತ್ತು ಎಖಿಲ್ಲ್ ಕಾಂಪಗ್ನೊನಿ ಅವರುಗಳು ಶಿಖರವನ್ನು ತಲುಪಿದರು. ತಂಡದಲ್ಲಿನ ಪಾಕಿಸ್ತಾನೀ ಸದಸ್ಯರಾದ ಕರ್ನಲ್ ಮುಹಮ್ಮದ್ ಅಟ-ಉಲ್ಲಾ ಅವರು ೧೯೫೩ರ ಅಮೇರಿಕದ ಆರೋಹಣದ ತಂಡದ ಅಂಶವಾಗಿದ್ದವರು. ಆ ಆರೋಹಣದಲ್ಲಿ ಪ್ರಖ್ಯಾತ ಇಟಾಲಿಯನ್ ಆರೋಹಿ ವಾಲ್ಟರ್ ಬೊನಟ್ಟಿ ಅವರಿದ್ದರು, ಪಾಕಿಸ್ತಾನದ ಹುಂಝ ಪೊರ್ಟರ್ ಮಹ್ದಿ ಅವರು ಆಮ್ಲಜನಕವನ್ನು26,600 feet (8,100 m) ಲೇಸಿಡೆಲ್ಲಿ ಮತ್ತು ಕಾಂಪಗ್ನೊನಿ ಹೊತ್ತೊಯ್ದು ಆರೋಹಣದ ಯಶಸ್ಸಿಗೆ ಬಹು ಅವಶ್ಯಕರಾಗಿದ್ದರು. ಅವರ ಅಷ್ಟು ಎತ್ತರದಲ್ಲಿನ ಮುಕ್ತವಾದ ಆವರಣದಲ್ಲಿ ಪ್ರದರ್ಶನಾತ್ಮಕ ತಾತ್ಕಾಲಿಕ ಶಿಬಿರವು ಹಿಮಾಲಯದ ಆರೋಹಣದಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿದವು.

ಆಗಸ್ಟ್ ೯, 1977ರಲ್ಲಿ, ಇಟಾಲಿಯನ್ ಆರೋಹಣದ 23 ವರ್ಷಗಳ ನಂತರ, ಇಶಿರೊ ಯೊಶಿಝವ ಶಿಖರದ ಎರಡನೇ ಯಶಸ್ವೀ ಆರೋಹಣದ ನಾಯಕತ್ವವನ್ನು ವಹಿಸಿದರು; ಅಶ್ರಫ್ ಅಮನ್ ಅವರು ಮೊದಲನೇ ಪಾಕಿಸ್ತಾನೀ ಆರೋಹಿ. ಜಾಪಾನೀ ಆರೋಹಣವು ಅಬ್ರುಝಿ ಸ್ಪರ್ ಮೂಲಕ ಇಟಾಲಿಯನ್ನರು ನಿರೂಪಿಸಿದ ಹಾದಿಯಲ್ಲಿ ಏರಿದರು, ಮತ್ತು ೧,೫೦೦ಕ್ಕೂ ಹೆಚ್ಚು ಕೂಲಿಗಳನ್ನು ತಮ್ಮ ಗುರಿ ತಲುಪಲು ಉಪಯೋಗಿಸಿದರು.

ಪಶ್ಚಿಮ ದಿಕ್ಕಿನ ಮುಖ ಮತ್ತು ಕೆ2 ಇಳಿಜಾರಿನ ಮೇಲ್ಭಾಗ

1978ರ ವರ್ಷವು ಕೆ2 ಪರ್ವತದ ಮೂರನೇ ಆರೋಹಣವನ್ನು ಕಂಡಿತು, ಈಶಾನ್ಯದ ಬಂಡೆಗಳ ಸಾಲಿನಿಂದ, ಬಹು ಉದ್ದದ ಹೊಸ ಹಾದಿಯಲ್ಲಿ ಮಾಡಿದರು. (ಹಾದಿಯ ಮೇಲ್ಭಾಗವು ಎಡಭಾಗದ ಪೂರ್ವದ ಮುಖದಲ್ಲಿ ಶೃಂಗೀಯ ತಲೆಯಗೋಡೆಯನ್ನು ತಡೆಯಲು ಪ್ರವಹಿಸಿದೆ ಮತ್ತು ಅಬ್ರುಝಿ ಹಾದಿಯ ಎತ್ತರದ ಭಾಗವನ್ನು ಕೂಡಿದೆ.) ಅಮೇರಿಕ ತಂಡವು ಈ ಆರೋಹಣವನ್ನು ಮಾಡಿತು, ಇದರ ನಾಯಕತ್ವವನ್ನು ಪ್ರಖ್ಯಾತ ಆರೋಹಿ ಜೇಮ್ಸ್ ವಿಟ್ಟೇಕರ್ ಅವರು ವಹಿಸಿದ್ದರು; ಇವರಲ್ಲಿ ಲೂಯಿ ರೈಖಾರ್ಟ್, ಜಿಮ್ ವಿಕ್ವೈರ್, ಜಾನ್ ರಾಸ್ಕೆಲ್ಲಿ ಮತ್ತು ರಿಕ್ ರಿಡ್ಜ್‌ವೆ ಅವರುಗಳಿದ್ದರು. ವಿಕ್ವೈರ್ ಅವರು ಒಂದು ರಾತ್ರಿಗೆ ತಾತ್ಕಾಲಿಕ ಶಿಬಿರವನ್ನು ಸುಮಾರು 150 metres (492 ft) ರಷ್ಟು ಶಿಖರದ ಕೆಳಗೆ ಮಾಡಿಕೊಂಡಿದ್ದರು, ಆರೋಹಣದ ಇತಿಹಾಸದಲ್ಲೇ ಇದು ಅತಿ ಎತ್ತರದ ತಾತ್ಕಾಲಿಕ ಶಿಬಿರ. ಈ ಆರೋಹಣವು ಅಮೇರಿಕ ತಂಡಕ್ಕೆ ಬಹು ಭಾವಾತ್ಮಕವಾಗಿತ್ತು, 1938ರ ತಂಡವು ನಲ್ವತ್ತು ವರ್ಷಗಳ ಹಿಂದೆ ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸಿದ್ದರಿಂದ.[೨೪]

1982ರಲ್ಲಿ, ಚೀನಾ ಕಡೆಯ ಶಿಖರಕ್ಕೆ, ಇನ್ನೊಂದು ಹೆಸರಾಂತ ಜಪಾನೀ ತಂಡವು ಕ್ಲಿಷ್ಟಕರವಾದ ಉತ್ತರದ ತುದಿಯನ್ನು ಹತ್ತಿದರು. ಮೌಟನೀರಿಂಗ್ ಅಸ್ಸೊಸ್ಸಿಯೇಷನ್ ಆಫ್ ಜಪಾನ್‌‌ನಿಂದ ಒಂದು ತಂಡವು ಇಸಾವ್ ಶಿಂಕೈ ಮತ್ತು ಮಸಟ್ಸುಗೊ ಕೊನಿಶಿ ಅವರ ನಾಯಕತ್ವದಲ್ಲಿ, ನೆಒ ಸಕಶಿಟ, ಹಿರೊಶಿ ಯೊಶಿನೊ ಮತ್ತು ಯುಕಿಹಿರೊ ಯನಗಿಸವ ಎಂಬ ಮೂವರು ಸದಸ್ಯರುಗಳನ್ನು ಪರ್ವತಶೃಂಗದ ಮೇಲೆ ಆಗಸ್ಟ್ 14ರಂದು ಇರಿಸಿತು. ಆದಾಗ್ಯೂ, ಯನಗಿಸವ ಇಳಿತದ ಸಮಯದಲ್ಲಿ ಬಿದ್ದು, ಮೃತರಾದರು. ತಂಡದ ಇತರೆ ನಾಲ್ಕು ಸದಸ್ಯರು ಮರುದಿನ ಪರ್ವತಶೃಂಗವನ್ನು ತಲುಪಿದರು.[೨೫]

ಕೆ2 ಶಿಖರಕ್ಕೆ ಎರಡು ಬಾರಿ ಹತ್ತಿರುವ ಮೊದಲನೇ ಆರೋಹಿ ಎಂದರೆ ಝೆಕ್ ಜೋಸೆಫ್ ರೆಕೊನ್ಕಾಜ್. ರೆಕೊನ್ಕಾಜ್‌ರವರು ಫ್ರಾನ್ಸೆಸ್ಕೊ ಸಾಂಟನ್‌ ಅವರ ನಾಯ್ಕತ್ವದಲ್ಲಿ 1983ರ ಇಟಾಲಿಯನ್ ಆರೋಹಣದ ಸದಸ್ಯರಾಗಿದ್ದರು, ಇದು ಉತ್ತರದ ತುದಿಯ ಎರಡನೇ ಯಶಸ್ವೀ ಆರೋಹಣವಾಗಿತ್ತು (ಜುಲೈ 31, 1983). ಮೂರು ವರ್ಷಗಳ ನಂತರ, ಜುಲೈ 5, 1986ರಲ್ಲಿ, ಅವರು ಅಬ್ರುಝಿ ಸ್ಪರ್ ಶಿಖರವನ್ನೇರಿದರು (ಒಬ್ಬಂಟಿಯಾಗಿ ಬ್ರಾಡ್ ಪೀಕ್ ವೆಸ್ಟ್ ಫೇಸ್ ಅನ್ನು ಎರಡು ಸರಿ), ಅಗೊಸ್ಟಿನೊ ಡ ಪೊಲೆನ್ಝಾ ಅವರ ಅಂತರ್ರಾಷ್ಟ್ರೀಯ ಆರೋಹಣದ ಸದಸ್ಯ್ರಾಗಿ.

ಇತ್ತೀಚಿನ ಪ್ರಯತ್ನಗಳು

[ಬದಲಾಯಿಸಿ]

ಶಿಖರವನ್ನು ಈಗ ಬಹುತೇಕ ಎಲ್ಲಾ ತುದಿಗಳಿಂದಲೂ ಹತ್ತಲಾಗಿದೆ. ಎವರೆಸ್ಟ್‌ನ ಶಿಖರವು ಅತಿ ಎತ್ತರದಲ್ಲಿದೆಯಾದರೂ, ಕೆ2 ಪರ್ವತವನ್ನು ಹತ್ತುವುದು ಬಹು ಕಷ್ಟಕರ ಮತ್ತು ಅಪಾಯಕರ,[ಸೂಕ್ತ ಉಲ್ಲೇಖನ ಬೇಕು] ಹೆಚ್ಚು ಪ್ರಕ್ಷುಬ್ಧ ಹವಾಮಾನ ಮತ್ತು ತುಲನಾತ್ಮಕವಾಗಿ ನೆಲೆಯಿಂದ ಶಿಖರವು ಬಹಳ ಎತ್ತರದಲ್ಲಿದೆ. ಪರ್ವತವು ಅನೇಕರಿಂದ [who?] ಪ್ರಪಂಚದ ಅತೀ ಕಷ್ಟಕರವಾದ ಮತ್ತು ಅಪಾಯಕರವಾದ ಏರಿಕೆಯೆಂದು ನಂಬಿದ್ದಾರೆ, ಆದ್ದರಿಂದಲೇ "ಉಗ್ರ ಪರ್ವತ"ವೆಂಬ ಅಡ್ಡಹೆಸರು. ಇದು ಮತ್ತು ನೆರೆಹೊರೆಯ ಶಿಖರಗಳಲ್ಲಿ, ಬೇರೆಯವುಗಳಿಗಿಂತ ಅನೇಕರು ಜೀವ ಕಳೆದುಕೊಂಡಿದ್ದಾರೆ.[೨೬] ಜುಲೈ 2010ರ ವರೆಗೆ, ಬರೀ 302 ಜನಗಳು ಆರೋಹಣವನ್ನು ಪೂರ್ಣಗೊಳಿಸಿದ್ದಾರೆ,[೨೭] ಆದರೆ ಪ್ರಖ್ಯಾತ ಲಕ್ಷ್ಯವಾದ ಎವರೆಸ್ಟ್ ಅನ್ನು 4,000ಕ್ಕೂ ಹೆಚ್ಚು ಜನಗಳು ಹತ್ತಿದ್ದಾರೆ. ಸುಮಾರು 77 ಮಂದಿ ಏರುವ ಪ್ರಯತ್ನ ಮಾಡುವಾಗ ಮೃತ ಪಟ್ಟಿದ್ದಾರೆ. ವಿಶೇಷವಾಗಿ, ಅನೇಕ ಉದ್ದೇಶಿತ ಪ್ರಯಾಣಗಳಿಂದ 13 ಆರೋಹಿಗಳು 1986ರ ಕೆ2 ದುರಂತದಲ್ಲಿ ಮಡಿದರು, ಇವರಲ್ಲಿ ಐದು ಜನರು ವಿಪರೀತವಾದ ಬಿರುಗಾಳಿಯಿಂದ. ಬಹಳ ಇತ್ತೀಚೆಗೆ, ಆಗಸ್ಟ್ 1, 2008ರಲ್ಲಿ, ಹಿಮಪಾತದ ಸಮಯದಲ್ಲಿ ದೊಡ್ಡ ಮಂಜುಗಡ್ಡೆ ಬಿದ್ದು ಆರೋಹಿ ಗುಂಪಿನ ಸದಸ್ಯರು ಕಾಣೆಯಾದರು, ಅವರ ಹಾದಿಯಲ್ಲಿ ನೆಟ್ಟ ಹಗ್ಗಗಳು ಹಾಳಾದವು; ನಾಲ್ಕು ಆರೋಹಿಗಳನ್ನು ಪಾರುಮಾಡಲಾಯಿತು, ಆದರೆ 11 ಜನ, ಜೆರಾರ್ಡ್ ಮೆಕ್‌ಡಾನ್ನೆಲ್ ಎಂಬ ಶಿಖರ ಸೇರಿದ ಮೊದಲನೇ ಐರಿಷ್ ವ್ಯಕ್ತಿಯನ್ನೂ ಒಳಗೊಂಡು ಎಲ್ಲರೂ ಮರಣಹೊಂದಿದ್ದಾರೆಂದು ಸ್ಥಿರಪಡಿಸಿಕೊಂಡರು.[೨೮]

ಸೀಸೆಯಲ್ಲಿರುವ ಆಮ್ಲಜನಕದ ಬಳಕೆ

[ಬದಲಾಯಿಸಿ]

ಬಹುತೇಕ ಏರಿಕೆಯ ಇತಿಹಾಸದಲ್ಲಿ, ಕೆ2 ಪರ್ವತವನ್ನು ಸಾಮಾನ್ಯವಾಗಿ ಸೀಸೆಯ ಆಮ್ಲಜನಕದೊಂದಿಗೆ ಏರುತ್ತಿರಲಿಲ್ಲ, ಮತ್ತು ಚಿಕ್ಕ, ಲಘು ತಂಡಗಳ ಜೊತೆ ಹೋಗುವುದು ರೂಢಿ.[೨೯][೩೦] ಆದರೆ, 2004ರ ಸಮಯದಲ್ಲಿ, ಆಮ್ಲಜನಕದ ಬಳಕೆಯಲ್ಲಿ ಹೆಚ್ಚಿನ ಏರಿಕೆ ಉಂಟಾಯಿತು: ೪೭ ಜನ ಶೃಂಗವನ್ನೇರಿದವರಲ್ಲಿ ೨೮ ಜನ ಆಮ್ಲಜನಕವನ್ನು ಆ ವರ್ಷದಲ್ಲಿ ಬಳಸಿದರು.

ಮೇಲ್ಮಟ್ಟದಲ್ಲಿ ಹೋಗುವಾಗ ಕೊಂಚ ಮಟ್ಟದಲ್ಲಿ ಎತ್ತರದ ಅನಾರೋಗ್ಯವಾಗುವುದನ್ನು ತಡೆಗಟ್ಟಲು ಆಮ್ಲಜನಕವಿಲ್ಲದೆ ಹತ್ತುವಾಗ ಒಗ್ಗಿಕೊಳ್ಳುವಿಕೆಯು ತುಂಬಾ ಅಗತ್ಯ.[೩೧] ಕೆ2 ಶಿಖರವು ಬಹು ಎತ್ತರದಲ್ಲಿರುವುದರಿಂದ ಅಲ್ಲಿ ಹೆಚ್ಚು ಎತ್ತರದ ಶ್ವಾಸಕೋಶದ ಅಧಿಕ ದ್ರವ (ಎಚ್‌ಎಪಿಇ), ಅಥವ ಹೆಚ್ಚು ಎತ್ತರದ ಬೌಧ್ದಿಕ ಅಧಿಕ ದ್ರವ (ಎಚ್‌ಎ‌ಸಿಇ) ಕಂಡುಬರುವ ಸಾಧ್ಯತೆಗಳಿವೆ.[೩೨]

ಏರಿಕೆಯ ಮಾರ್ಗಗಳು ಮತ್ತು ಕಷ್ಟಗಳು

[ಬದಲಾಯಿಸಿ]

ಕೆ2 ಮೇಲೆ ಅನೇಕ ಮಾರ್ಗಗಳಿವೆ, ವಿವಿಧ ಸ್ವಭಾವವುಳ್ಳವುಗಳು, ಆದರೆ ಅವೆಲ್ಲವೂ ಮಹತ್ವದ ಕಷ್ಟಗಳನ್ನು ಹಂಚಿಕೊಳ್ಳುತ್ತವೆ. ಮೊದಲನೆಯದಾಗಿ, ವಿಪರೀತವಾದ ಎತ್ತರ ಮೇಲ್ಮಟ್ಟ ಮತ್ತು ಇದರಿಂದ ಆಮ್ಲಜನಕದ ಕೊರತೆ ಉಂಟಾಗುತ್ತದೆ: ಸಮುದ್ರದ ಮಟ್ಟಕ್ಕಿಂತ ಅಲ್ಲಿ ಮೂರನೇ-ಒಂದರಷ್ಟು ಆಮ್ಲಜನಕ ಮಾತ್ರ ಕೆ2 ಶಿಖರ ಆರೋಹಿಗೆ ಸಿಗುತ್ತದೆ.[೩೩] ಎರಡನೆಯದಾಗಿ, ಪರ್ವತವು ವಿಪರೀತವಾದ ಬಿರುಗಾಳಿಯನ್ನು ಬಹಳ ದಿನಗಳ ವರೆಗೆ ಅನುಭವಿಸುತ್ತದೆ, ಇದರಿಂದ ಶಿಖರದ ಮೇಲೆ ಅನೇಕ ಸಾವುಗಳಾಗಿವೆ. ಮೂರನೆಯದಾಗಿ, ಕಡಿದಾದ, ಬಹಿರಂಗ ಪಡಿಸುವ, ಮತ್ತು ಎಲ್ಲಾ ಪರ್ವತದ ಮಾರ್ಗಗಳಿಗೂ ಬಧ್ಧವಾಗಿರುವ ನಿಸರ್ಗ, ಇವೆಲ್ಲದರಿಂದ ಆಶ್ರಯಕ್ಕೆ ಬಹಳ ಕಷ್ಟವಾಗುತ್ತದೆ, ವಿಶೇಷವಾಗಿ ಬಿರುಗಾಳಿಯ ಸಮಯದಲ್ಲಿ. ಚಳಿಗಾಲದ ಸಮಯದಲ್ಲಿ, ಅನೇಕ ಪ್ರಯತ್ನಗಳ ಬಳಿಕವೂ ಯಶಸ್ವೀ ಏರಿಕೆಗಳು ನಡೆದಿಲ್ಲ. ಎಲ್ಲಾ ಮಹತ್ವದ ಏರಿಕೆಯ ಮಾರ್ಗಗಳು ಪಾಕಿಸ್ತಾನದ ಕಡೆಗಿವೆ, ಅಲ್ಲೇ ಮೂಲ ಶಿಬಿರವು ನೆಲೆಸಿರುವುದು.

ಅಬ್ರುಝಿ ಸ್ಪರ್

[ಬದಲಾಯಿಸಿ]
ಕಾರ್ಲ್ ಡ್ರ್ಯು ಅಬ್ರುಝಿ ಸ್ಪರ್‌ ಅನ್ನು ಏಣಿಯಿಂದ ಹತ್ತುತ್ತಿರುವುದು

ಅಬ್ರುಝಿ ಸ್ಪರ್ ಅನ್ನು ಏರಿಕೆಗಾಗಿ ಸಾಮಾನ್ಯವಾಗಿ ಬೇರೆ ಮಾರ್ಗಗಳಿಗಿಂತ ಇದನ್ನು ಹೆಚ್ಚಾಗಿ ಬಳಸುತ್ತಾರೆ,[೨೯][೩೦] ಇದು ಪಾಕಿಸ್ತಾನದ ಕಡೆಯಲ್ಲಿ ಇದೆ, ಈ ಮಾರ್ಗವು ಮೊದಲ ಯತ್ನ ಅಬ್ರುಝಿಯ ದಳಪತಿಯಾದ ಲುಯಿಗಿ ಎಮೀಡೊ ಅವರಿಂದ 1909ರಲ್ಲಿ ಮಾಡಲ್ಪಟ್ಟಿತು. ಇದು ಆಗ್ನೇಯ ತುದಿಯ ಶಿಖರ, ಗಾಡ್ವಿನ್ ಆಸ್ಟೆನ್ ನೀರ್ಗಲ್ಲನದಿಯ ಮೇಲೆರುವ. ಸ್ಪರ್ ಆರಂಭವಾಗುವುದು 5,400 m (17,700 ft)* ರಷ್ಟು ಎತ್ತರದಲ್ಲಿ, ಅಲ್ಲಿ ಮುನ್ನಡೆ ಮೂಲ ಬಿಡಾರವನ್ನು ಸಮಾನ್ಯವಾಗಿ ನೆಲೆಸಲಾಗುವುದು. ಮಾರ್ಗವು ಪರ್ಯಾಯ ಸಾಲಿನ ಕಲ್ಲಿನ ಪಕ್ಕೆಲುಬುಗಳು, ಹಿಮ/ಮಂಜು ಮೈದಾನ, ಮತ್ತು ಎರಡು ಪ್ರಖ್ಯಾತ ರೂಪಗಳ ಮೇಲೆ ತಾಂತ್ರಿಕ ಶಿಲೆ ಹತ್ತುವುದನ್ನು, "ಮನೆಯ ಹೊಗೆಕೊಳವೆ" ಮತ್ತು "ಕಪ್ಪು ಗೋಪುರಾಕೃತಿಯ ಕಟ್ಟಡ." ಕಪ್ಪು ಗೋಪುರಾಕೃತಿಯ ಕಟ್ಟಡವು, ಅಪಾಯಕರವಾದಿ ಬಹಿರಂಗಗೊಂಡಿದೆ ಮತ್ತು ನಡೆಯಲು ಕಷ್ಟಕರವಾದ ಇಳಿಜಾರು ನಮ್ಮನ್ನು ಸಲೀಸಾಗಿ ಕಾಣುವ "ಭುಜ"ಕ್ಕೆ ಕರೆದೊಯ್ಯುತ್ತವೆ, ಮತ್ತು ಆಮೇಲೆ ಶಿಖರಕ್ಕೆ. ಕೊನೆಯ ಮುಖ್ಯವಾದ ಅಡಚಣೆಯೆಂದರೆ ಕಿರಿದಾದ ಕೊಲಕಲು "ಪ್ರತಿಬಂಧಕ" ಎಂದು, ಇದು ಆರೋಹಿಗಳನ್ನು ಅಪಾಯಕರವಾಗಿ ಒಂದು ಹಿಮರಾಶಿಯ ಗೋಡೆಗೆ ಹತ್ತಿರವಾಗಿ, ಇದರಿಂದ ಮಂಜಿನ ಬಂಡೆಯ ಕಡಿದಾದ ಪ್ರಪಾತವು ಶಿಖರದ ಪೂರ್ವ ದಿಕ್ಕಿನ ಕಡೆ ಆಕಾರಗೊಂಡಿದೆ. ಬಹುಶಃ ಯಾವುದೋ ಒಂದು ಹಿಮರಾಶಿಯು ಸುಮಾಎಉ 2001ರಲ್ಲಿ ಕುಸಿದು ಬಿದ್ದದ್ದರಿಂದ 2002 ಮತ್ತು 2003ರಲ್ಲಿ ಯಾವ ಆರೋಹಿಯೂ ಶಿಖರವನ್ನು ಏರಿಲ್ಲ.[೩೪]

ಆಗಸ್ಟ್ 1, 2008ರಲ್ಲಿ, ಹಿಮರಾಶಿಯು ಪ್ರತಿಬಂಧಕದಲ್ಲಿ ಚಟ್ಟನೆ ಮುರಿದು, ಅವರ ದಾರಗಳನ್ನು ಚೂರು ಚೂರು ಮಾಡಿದಾಗ ಅನೇಕ ಆರೋಹಿಗಳು ಕಾಣೆಯಾದರು.[೩೫][೩೬] ಬದುಕುಳಿದವರು ಒಂದು ಹೆಲಿಕಾಪ್ಟರ್‌ನಲ್ಲಿ ಕಂಡುಬಂದರು ಆದರೆ ಕಾಪಾಡುವ ಯತ್ನಗಳು ಎತ್ತರದ ಮೇಲ್ಮಟ್ಟವು ಅಡಚಣೆಯೊಡ್ಡಿತು. ಹನ್ನೊಂದು ಜನರು ಸಿಗಲೇ ಇಲ್ಲ, ಮತ್ತು ಅವರು ಸತ್ತಿರಬಹುದೆಂದು ಭಾವಿಸಲಾಯಿತು.[೨೮]

ಉತ್ತರದ ತುದಿ

[ಬದಲಾಯಿಸಿ]
ಕೆ2ವಿನ ಉತ್ತರದ ಭಾಗಉತ್ತರದ ತುದಿಯು ಚಿತ್ರ ಮಧ್ಯ ಭಾಗದಲ್ಲಿದೆ

ಅಬ್ರುಝಿ ಸ್ಪರ್‌ನಿಂದ ಬಹುತೇಕ ಅಭಿಮುಖವಾಗಿ ಉತ್ತರದ ತುದಿಯಿದೆ,[೨೯][೩೦] ಇದು ಚೈನಾ ಕಡೆಯ ಶಿಖರವನ್ನು ಹತ್ತುತ್ತದೆ. ಇದನ್ನು ಅಪರೂಪವಾಗಿ ಏರಿದ್ದಾರೆ, ಏಕೆಂದರೆ, ಬಹಳ ಕಷ್ಟಕರವಾದ ದಾರಿ, ಶಾಕ್ಸ್‌ಗಮ್ ನದಿಯನ್ನು ದಾಟಬೇಕಾಗುತ್ತದೆ, ಹಾಗೂ ಇದು ಬಹಳ ಹಾನಿಕರವಾದುದು.[೩೭] ಬಹುತೇಕ ಆರೋಹಿ ಗುಂಪುಗಳು ಮತ್ತು ಪ್ರವಾಸಿಗರು ಅಬ್ರುಝಿ ಮೂಲ ಶಿಬಿರದಲ್ಲಿ ಇರುತ್ತಾರೆ, ಇದಕ್ಕೆ ವ್ಯತಿರಿಕ್ತವಾಗಿ ಗರಿಷ್ಠ ಎರಡು ತಂಡಗಳು ಉತ್ತರದ ತುದಿಯ ಶಿಬಿರದಲ್ಲಿರುತ್ತಾರೆ. ಈ ಮಾರ್ಗವು, ಅಬ್ರುಝಿಗಿಂತಲೂ ತಾಂತ್ರಿಕವಾಗಿ ಅತ್ಯಂತ ಕಷ್ಟಕರವಾಗಿರುತ್ತದೆ, ಉದ್ದದ, ಕಡಿದಾದ, ಮುಖ್ಯ ಶಿಲೆಯ ತುದಿಯು ಪರ್ವತದ ಎತ್ತರಕ್ಕೆ ಹತ್ತುತ್ತದೆ (ಶಿಬಿರ ಇಊ, "ಹದ್ದಿನ ಗೂಡು", 7,900 m (25,900 ft)*), ಮತ್ತು ಹತ್ತುವ ಹಾದಿಯಲ್ಲಿ ಅಡ್ದಲಾಗಿ ಅಪಾಯಕರವಾದ ಇಳಿಜಾರಾದ ನೇತಾಡುವ ನೀರ್ಗಲ್ಲನದಿ ಬರುತ್ತದೆ, ಮಂಜಿನ ಕೊರಕಲಿನ ಹಾದಿಯನ್ನು ಶಿಖರವನ್ನು ತಲುಪಲು ಬಳಸಬೇಕು.

ಪ್ರಾರಂಭಿಕ ಜಪಾನೀ ಆರೋಹಣದವೇ ಅಲ್ಲದೆ, ಉತ್ತರದ ತುದಿಯ ಪ್ರಖ್ಯಾತ ಆರೋಹಣವು 1990ರಲ್ಲಿ ಗ್ರೆಗ್ ಚೈಲ್ಡ್, ಗ್ರೆಗ್ ಮೊರ್ಟಿಮರ್, ಮತ್ತು ಸ್ಟೀವ್ ಸ್ವೆನ್ಸನ್ ಅವರುಗಳಿಂದ ನಡೆಯಿತು, ಶಿಬಿರ 2ರ ಮೇಲೆ ಆಲ್ಪೈನ್ ಪಧ್ಧತಿಯಲ್ಲಿ ಮಾಡಿದರು, ಜಪಾನೀ ತಂಡಗಳಿಂದ ಆಗಲೇ ನೆಟ್ಟ ಹಗ್ಗಗಳನ್ನು ಬಳಸಿ.[೩೭]

ಇತರ ಮಾರ್ಗಗಳು

[ಬದಲಾಯಿಸಿ]
ಪರ್ವತದ ದಕ್ಷಿಣ ಭಾಗದಲ್ಲಿ ಹತ್ತಿರಬಹುದಾದ ಮಹತ್ವದ ಮಾರ್ಗಗಳು. A:ಪಶ್ಚಿಮದ ತುದಿB:ಪಶ್ಚಿಮದ ಮುಖC:ನೈಋತ್ಯ ಭಾಗದ ಸ್ಥಂಭD:ದಕ್ಷಿಣದ ಮುಖE:ದಕ್ಷಿಣ-ಆಗ್ನೇಯದ ಸ್ಪರ್F: ಅಬ್ರುಝಿ ಸ್ಪರ್
  • ಈಶಾನ್ಯದ ತುದಿ (ಉದ್ದದ ಮತ್ತು ಅಲಂಕಾರಿಕ ಪಟ್ಟಿ; ಅಬ್ರುಝಿ ಹಾದಿಯ ಮೇಲಿನ ಭಾಗದಲ್ಲಿ ಕೊನೆಗೊಳ್ಳುತ್ತದೆ), 1978.
  • ಪಶ್ಚಿಮದ ತುದಿ, 1981.
  • ನೈಋತ್ಯ ಭಾಗದ ಕಂಭ ಅಥವ "ಇಂದ್ರಜಾಲ ಗೆರೆ", ಬಹು ತಾಂತ್ರಿಕ, ಮತ್ತು ಎರಡನೇ ಅತಿ ಹೆಚ್ಚು ಬೇಡಿಕೆಯಲ್ಲಿರುವ. ಮೊದಲ ಏರಿಕೆ 1986ರಲ್ಲಿ, ಪೊಲಿಶ್-ಸ್ಲೊವಾಕ್ ಪಿಯಸೆಕಿ-ರೊಝ್-ಬೊಝಿಕ್ ತ್ರಯರಿಂದ. ಅವಾಗಿನಿಂದ ಕಟಲಾನ್ ಜೊರ್ಡಿ ಚೊರೊಮಿನಾಸ್ ಅವರೊಬ್ಬರೇ ಈ ಹಾದಿಯಲ್ಲಿ ಯಶಸ್ವೀ ಆರೋಹಿ, ಅನೇಕ ಯತ್ನಗಳು ನಡೆದಿದೆಯಾದರೂ.
  • ದಕ್ಷಿಣದ ಮುಖ ಅಥವ "ಪೊಲಿಶ್ ಗೆರೆ" (ವಿಪರೀತವಾಗಿ ಬಹಿರಂಗಗೊಂಡಿದೆ ಮತ್ತು ಅತ್ಯಂತ ಅಪಾಯಕರ). 1986ರಲ್ಲಿ, ಜೆರ್ಝಿ ಕುಕುಝ್ಕಾ ಮತ್ತು ಟೇಡಿಯಸ್ ಪಿಯೋಟ್ರೊಸ್ಕಿ ಅವರುಗಳು ಶಿಖರವನ್ನು ಈ ಹಾದಿಯಲ್ಲಿ ಮುಟ್ಟಿದರು. ರೈಹೋಲ್ಡ್ ಮೆಸ್ಸ್ನರ್ ಅವರು ಇದನ್ನು ಮಾರಣಾಂತಿಕ ಹಾದಿ ಎಂದು ಕರೆದರು ಮತ್ತು ಅವರ ಸಾಧನೆಯನ್ನು ಯಾರೂ ಮತ್ತೊಮ್ಮೆ ಮಾಡಿಲ್ಲ. "ಇದು ಬಹು ಹಿಮಪ್ರವಾಹ-ಸಂಭವಿಸುವ ಹಾದಿಯು, ಯಾರೂ ಹೊಸ ಪ್ರಯತ್ನವನ್ನು ಆಲೋಚಿಸಿಲ್ಲ."[೩೮]
  • ವಾಯುವ್ಯ ಮುಖ, 1990.
  • ವಾಯುವ್ಯ ತುದಿ (ಉತ್ತರದ ತುದಿಯಲ್ಲಿ ಕೊನೆಗೊಳ್ಳುತ್ತದೆ). ಮೊದಲನೇ ಏರಿಕೆ 1991ರಲ್ಲಿ.
  • ದಕ್ಷಿಣ-ಆಗ್ನೇಯ ಸ್ಪರ್ ಅಥವ "ಸೆಸನ್ ಹಾದಿ" (ಅಬ್ರುಝಿ ಹಾದಿಯಲ್ಲಿ ಕೊನೆಗೊಳ್ಳುತ್ತದೆ. ಪ್ರಾಯಷಃ ಇದು ಅಬ್ರುಝಿ ಸ್ಪರ್‌ಗೆ ಸುರಕ್ಷಿತವಾದ ಪರ್ಯಾಯ ಹಾದಿ ಏಕೆಂದರೆ ಅಬ್ರುಝಿಯಲ್ಲಿ ಮೊದಲನೆ ದೊಡ್ಡ ಕಪ್ಪು ಗೋಪುರಾಕೃತಿ ಅಡಚಣೆಯನ್ನು ನಿವಾರಿಸಬಹುದು), 1994.
  • ಪಶ್ಚಿಮ ಮುಖ (ಎತ್ತರದ ಮೇಲ್ಮಟ್ಟದಲ್ಲಿ ತಾಂತ್ರಿಕವಾಗಿ ಕ್ಲಿಷ್ಟಕರವಾದುದು), ರಷ್ಯಾ ತಂಡದಿಂದ 2007ರಲ್ಲಿ ನಡೆಯಿತು ಅಧಿಕೃತ ತಾಣ Archived 2010-02-13 ವೇಬ್ಯಾಕ್ ಮೆಷಿನ್ ನಲ್ಲಿ.

ಸ್ಥಳವಿವರಣಾ ಗುಣಲಕ್ಷಣಗಳು

[ಬದಲಾಯಿಸಿ]

ಕೆ2 ಸ್ಥಳವಿವರಣಾ ಪ್ರಾಧಾನ್ಯತೆಯಲ್ಲಿ 22ನೇ ಸ್ಥಾನವನ್ನು ಪಡೆದಿದೆ, ಇದು ಪರ್ವತದ ಸ್ವಾವಲಂಬಿ ನಿಲುವಿನ ಅಳತೆ, ಏಕೆಂದರೆ ಮೌಂಟ್ ಎವರೆಸ್ಟ್‌ನಂತೆ ಇದು ಅದೇ ಮೇಲಕ್ಕೇರಿಸಿ ವಿಸ್ತರಿಸಿದ ಮೈದಾನ (ಕರಕೋರಮ್, ಟಿಬೆಟನ್ ಪ್ಲೇಟೊ ಮತ್ತು ಹಿಮಾಲಯ ಸೇರಿದಂತೆ), ಇದರಲ್ಲಿ ಕೆ2ಯಿಂದ ಎವರೆಸ್ಟ್‌ವರೆಗೆ ಹಾದಿಯಲ್ಲಿ ಅನುಸರಿಸಬಹುದು, ಹಾಗೂ 4,594 m (15,072 ft) ಕ್ಕಿಂತ ಕೆಳಗೆ ಹೋಗುವುದಿಲ್ಲ (ಮಸ್ಟಾಂಗ್ ಲೊನಲ್ಲಿ). ಅನೇಕ ಇತರ ಶಿಖರಗಳು ಕೆ2ಗಿಂತ ಕೆಳಗಿನ ಮಟ್ಟದಲ್ಲಿದೆ ಮತ್ತು ಈ ನಿಟ್ಟಿನಲ್ಲಿ ಅವುಗಳು ಹೆಚ್ಚು ಸ್ವತಂತ್ರವಾಗಿವೆ.

ಆದಾಗ್ಯೂ, ಕೆ2 ತನ್ನ ಸ್ಥಳೀಯ ಪರಿಹಾರ ಹಾಗೂ ಅದರ ಒಟ್ಟು ಎತ್ತರಕ್ಕೆ ಹೆಸರುವಾಸಿಯಾಗಿದೆ. ಅದು 3,000 metres (9,843 ft) ರಷ್ಟು ಎತ್ತರಕ್ಕೆ ನಿಂತಿದೆ, ಬಹುತೇಕ ನೀರ್ಗಲ್ಲನದಿಯ ಕಣಿವೆಯ ಆಧಾರದ ಕೆಳಗಿವೆ. ಇನ್ನೂ ಹೆಚ್ಚಿನ ಅಸಾಮಾನ್ಯವಾದ ಸಂಗತಿಯೆಂದರೆ, ಸುಸಂಗತವಾಗಿ ಕಡಿದಾದ ಗೋಪುರಾಕೃತಿ, ಚುರುಕಾಗಿ ಎಲ್ಲಾ ದಿಕ್ಕುಗಳಲ್ಲೂ ಕೆಳಗೆ ಬೀಳುತ್ತದೆ. ಉತ್ತರದ ಭಾಗವು ಅತ್ಯಂತ ಕಡಿದಾದುದು: ಅಲ್ಲಿ 3,200 metres (10,499 ft) ರಷ್ಟು ಎತ್ತರಕ್ಕೆ ಕೆ2 (ಖೊಗಿರ್) ನೀರಗಲ್ಲನದಿಯ ಮೇಲೆ 3,000 metres (9,843 ft) ನಷ್ಟು ಮಾತ್ರ ಸಮತಲವಾದ ಅಂತರದಲ್ಲಿದೆ. ಬಹುತೇಕ ದಿಕ್ಕುಗಳಲ್ಲಿ, ಇದು 2,800 metres (9,186 ft) ಕ್ಕೊ ಹೆಚ್ಚು ಎತ್ತರವನ್ನು ಸಾಧಿಸುತ್ತದೆ ಹಾಗೂ ನೆಟ್ಟಗಿನ ಪರಿಹಾರವನ್ನು 4,000 metres (13,123 ft) ಕ್ಕಿಂತ ಕಡಿಮೆ ಇದೆ.[೩೯]

ಮೀಡಿಯಾದಲ್ಲಿ

[ಬದಲಾಯಿಸಿ]

ಕೆ2 ಬಗೆಗಿನ ಪುಸ್ತಕಗಳು

[ಬದಲಾಯಿಸಿ]

(ಕುರ್ರಾನ್ ಪ್ರಕಾರ ಆರೋಹಣಗಳ ಪಟ್ಟಿ ಮಾಡಲಾಗಿದೆ. ಯಕುಶಿ ಪ್ರಕಾರ ಎಲ್ಲ ಬಗೆಯವುಗಳನ್ನು ಪಟ್ಟಿ ಮಾಡಿಲ್ಲ. ಕ್ಯಾಟಲಾಗ್ ಆಫ್ ದಿ ಹಿಮಾಲಯನ್ ಲಿಟರೇಚರ್, ಎಡ್. ಯೊಶಿಮಿ ಯಕುಶಿ ಅವರಿಂದ, 1994ರ ಪ್ರತಿ). ಇಂಗ್ಲಿಷ್ ಪ್ರತಿಗಳು ಲಭ್ಯವಿಲ್ಲದಾಗ ವಿದೇಶೀ ಭಾಷೆಯ ಪ್ರತಿಗಳನ್ನು ಪಟ್ಟಿ ಮಾಡಲಾಗಿದೆ. ಐಎಸ್‌ಬಿಎನ್ ಅನ್ನು ಕೈಬಿಡಲಾಗಿದೆ ಏಕೆಂದರೆ ಅದು ಯಾವ ಸಂಕಲ್ಪವನ್ನೂ ಉಪಕರಿಸುವುದಿಲ್ಲ. ಇವು ಪೂರ್ಣವಾಗಿಲ್ಲ, ಆದರೆ ಇನ್ನೂ ಕಾರ್ಯನಿರತರಾಗಿದ್ದೇವೆ!)

1887 - ಯುನೈಟೆಡ್ ಕಿಂಗ್ಡಂ ಬ್ರಿಟಿಶ್ - ಯಂಗ್‌ಹಸ್ಬೆಂಡ್

1892 - ಯುನೈಟೆಡ್ ಕಿಂಗ್ಡಂ ಬ್ರಿಟಿಶ್ - ಕಾನ್ವೇ

1902 - ಅಂತಾರಾಷ್ಟ್ರೀಯ - ಎಕೆನ್‌ಸ್ಟೀನ್ ಮತ್ತು ಕ್ರೌಲೇ

1909 - ಇಟಲಿ ಇಟಾಲಿಯನ್ - ಲುಯಿಗಿ ಅಮೆಡಿಯೊ

1929 - ಇಟಲಿ ಇಟಾಲಿಯನ್ - ಅಯ್ಮೊನೆ ಡಿ ಸವೊಯಿಯ-ಅವೊಸ್ತಾ

1937 - ಯುನೈಟೆಡ್ ಕಿಂಗ್ಡಂ ಬ್ರಿಟಿಶ್ - ಶಿಪ್ಟನ್

1938 - ಅಮೇರಿಕ ಸಂಯುಕ್ತ ಸಂಸ್ಥಾನ ಅಮೇರಿಕನ್ - ಹೌಸ್ಟನ್

1939 - ಅಮೇರಿಕ ಸಂಯುಕ್ತ ಸಂಸ್ಥಾನ ಅಮೇರಿಕನ್ - ವಿಎಸ್ನರ್

  • ಜೆನ್ನಿಫರ್ ಜೋರ್ಡನ್, ಲಾಸ್ಟ್ ಮ್ಯಾನ್ ಆನ್ ದಿ ಮೌಂಟೇನ್ , 2010, ( ಯಕುಶಿಯಲ್ಲಿ ಇಲ್ಲ ), (ಇನ್ನು ಪ್ರಕಾಶಿತವಾಗಬೇಕು, ಆಗಸ್ಟ್ 2010ರಲ್ಲಿ)
  • ಆಂಡ್ರ್ಯೂ ಕಾಫ್ಮನ್ ಮತ್ತು ವಿಲಿಯಮ್ ಪುಟ್ನಾಮ್, ಕೆ2; ದಿ 1939 ಟ್ರ್ಯಾಜಿಡಿ , 1992, (ಯಕುಶಿ ಕೆ66 )
  • ಫ್ರಿಟ್ಜ್ ವಿಎಸ್ನರ್, ಕೆ2, ಟ್ರ್ಯಾಗೊಡಿಯನ್ ಉಂಡ್ ಸೀಗ್ ಆ‍ಯ್‌ಮ್ ಝ್ವಿಥೊಚ್‌ಸ್ಟನ್ ಬರ್ಗ್ ಡೆರ್ ಎರ್ಡೆ , 1955, (ಯಕುಶಿ ಡಬ್ಲು152 ), (Germany ಆವೃತ್ತಿ ಮಾತ್ರ )

1953 - ಅಮೇರಿಕ ಸಂಯುಕ್ತ ಸಂಸ್ಥಾನ ಅಮೇರಿಕನ್ - ಹೌಸ್ಟನ್

1954 - ಇಟಲಿ ಇಟಾಲಿಯನ್ - ದೇಸಿಯೊ

1975 - ಅಮೇರಿಕ ಸಂಯುಕ್ತ ಸಂಸ್ಥಾನ ಅಮೇರಿಕನ್ - ವ್ಹಿಟೇಕರ್

1978 - ಅಮೇರಿಕ ಸಂಯುಕ್ತ ಸಂಸ್ಥಾನಮೇರಿಕನ್ - ವ್ಹಿಟೇಕರ್

1979 - France ಫ್ರೆಂಚ್ - ಮೆಲ್ಲೆಟ್

1979 - ಅಂತಾರಾಷ್ಟ್ರೀಯ - ಮೆಸ್ನರ್

1986 - (ಎಕ್ಸ್‌ಪೆಡಿಶನ್ಸ್ ಮೊಮೆಂಟರಿಲಿ ಲಂಪ್‌ಡ್ ಟುಗೆದರ್ ಫಾರ್ ಕನ್ವೀನಿಯನ್ಸ್ ಸೇಕ್.)

1993 - ಅಮೇರಿಕ ಸಂಯುಕ್ತ ಸಂಸ್ಥಾನ ಅಮೇರಿಕನ್ / ಕೆನಡಾ ಕೆನೆಡಿಯನ್ - ಅಲಿಸನ್

2008 - (ಎಕ್ಸ್‌ಪೆಡಿಶನ್ಸ್ ಮೊಮೆಂಟರಿಲಿ ಲಂಪ್ಡ್ ಟುಗೆದರ್ ಫಾರ್ ಕನ್ವೀನಿಯನ್ಸ್ ಸೇಕ್.)

ಜನರಲ್ ಲಿಟರೇಚರ್ ಆನ್ ಕೆ2

ಚಲನಚಿತ್ರಗಳು

[ಬದಲಾಯಿಸಿ]
  • 1988ರಲ್ಲಿ, ಬ್ರಿಟಿಶ್ ರಾಕ್ ಸಂಗೀತಕಾರ ಡಾನ್ ಏರೇ ಎಂಬುವವನು ಕೆ2 (ಟೇಲ್ಸ್ ಆಫ್ ಟ್ರೈಯಂಫ್ ಅಂಡ್ ಟ್ರ್ಯಾಜಿಡಿ) ಆಲ್ಬಂ ಅನ್ನು ಬಿಡುಗಡೆ ಮಾಡಿದನು (ಫೀಟ್. ಗ್ಯಾರಿ ಮೂರ್ ಮತ್ತು ಕಾಲಿನ್ ಬ್ಲನ್‌ಸ್ಟೋನ್), ಇದನ್ನು 1986ರಲ್ಲಿ 13 ಕೆ2-ಬಲಿಯಾದವರಿಗಾಗಿ ಅರ್ಪಿಸಲಾಯಿತು.
  • ಹ್ಯಾನ್ಸ್ ಜಿಮ್ಮರ್ ಕೆ2 ಚಲನಚಿತ್ರಕ್ಕಾಗಿ ಸ್ಕೋರ್ ಅನ್ನು ತಯಾರಿಸಿದನು. ಈ ಸ್ಕೋರ್ ಅನ್ನು ಚಿತ್ರದಲಿ ಬಳಸಲಿಲ್ಲ: 1992ರಲ್ಲಿ ಕೆ2: ಚಲನಚಿತ್ರದಿಂದ ಪ್ರೇರಿತವಾದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಯಿತು.

ಇವನ್ನೂ ಗಮನಿಸಿ

[ಬದಲಾಯಿಸಿ]

ಟೆಂಪ್ಲೇಟು:Portal

ಆಕರಗಳು ಮತ್ತು ಟಿಪ್ಪಣಿಗಳು

[ಬದಲಾಯಿಸಿ]
  1. "Northern Pakistan Places, Photos, 750+ Placemarks! - Google Earth Community". Archived from the original on 2012-02-04. Retrieved 2010-08-06.
  2. "ಚೀನಾ ಮತ್ತು ಪಾಕಿಸ್ತಾನ ಗಡಿಗಳ ಒಪ್ಪಂದ" (PDF). Archived from the original (PDF) on 2012-02-11. Retrieved 2010-08-06.
  3. "K2". Britannica.com. Retrieved 2010-01-23.
  4. "K2 list of ascents and fatalities" (PDF). 8000ers.com. Retrieved 2010-01-23.
  5. Curran, Jim (1995). K2: The Story of the Savage Mountain. Hodder & Stoughton. p. 25. ISBN 978-0340660072. {{cite book}}: Cite has empty unknown parameter: |co-authors= (help)
  6. ಈ ನಿಯಮದಿಂದ ಹೊರತಾದುದೆಂದರೆ ಮೌಂಟ್ ಎವರೆಸ್ಟ್, ಸ್ಥಳೀಯರಿಗೆ ಗೊತ್ತಿರುವಂತೆ ಇದರ ಹೆಸರು ಚೊಮೊಲುಂಗಾ, ಆದರೆ ಜಾರ್ಜ್ ಎವರೆಸ್ಟ್ ಅವರಿಗೆ ಗೌರವ ಸೂಚಿಸಲು ಅದನ್ನು ಕಡೆಗಣಿಸಲಾಗಿದೆ. ಕುರ್ರಾನ್ ನೋಡಿ, ಪು. 29-30.
  7. ೭.೦ ೭.೧ ೭.೨ ೭.೩ ಕುರ್ರಾನ್, ಪು. 30
  8. ೮.೦ ೮.೧ ಎಚ್. ಆಡಮ್ಸ್ ಕಾರ್ಟರ್, "ಎ ನೋಟ್ ಆನ್ ದಿ ಚೈನೀಸ್ ನೇಮ್ ಫಾರ್ ಕೆ2, 'ಕೊಗಿರ್'", ಅಮೇರಿಕನ್ ಆಲ್ಪೈನ್ ಜರ್ನಲ್ , 1983, ಪು. 296. ಕಾರ್ಟರ್, ಎ‌ಎಜೆ ಯ ಬಹು-ಕಾಲದ ಸಂಪಾದಕರು, ಚೊಗೊರಿ ಅನ್ನುವ ಹೆಸರು "ಸ್ಥಳೀಯ ಬಳಕೆಯಲ್ಲಿಲ್ಲ. ಪರ್ವತವು ಸ್ಥಳೀಯ ಸಾಹಸಿ ನಿವಾಸಗಳಿಗೆ ಪ್ರಮುಖವಾಗಿ ಎದ್ದುಕಾಣುತ್ತಿರಲಿಲ್ಲ ಮತ್ತು ಅದಕ್ಕೆ ಸ್ಥಳೀಯ ಹೆಸರಿರಲಿಲ್ಲ.... ಬಾಲ್ಟಿಸ್‌ಗಳು ಶಿಖರಕ್ಕೆ ಕೆ೨ ಅಲ್ಲದೆ ಬೇರೆ ಹೆಸರುಗಳನ್ನು ಬಳಸಲಿಲ್ಲ, ಅವರು ’ಕೇತು’ ಎಂದು ಉಚ್ಚರಿಸುತ್ತಿದ್ದರು. ನಾನು ಯಾವುದೇ ರೀತಿಯಲ್ಲಿ ಚೊಗೊರಿ ಎಂಬ ಹೆಸರಿನ ಬಳಕೆಯ ವಿರುಧ್ಧ ಪ್ರಬಲವಾಗಿ ಸೂಚಿಸುತ್ತೇನೆ."
  9. Pakistan entry at The World Factbook
  10. ಎಚ್. ಆಡಮ್ಸ್ ಕಾರ್ಟರ್, "ಬಾಲ್ಟಿ ಪ್ಲೇಸ್ ನೇಮ್ಸ್ ಇನ್ ದ ಕರಕೊರಮ್", ಅಮೇರಿಕನ್ ಅಲ್ಪೈನ್ ಜರ್ನಲ್ , 1975, ಪು. 52–53. ಕಾರ್ಟರ್ ಹೀಗೆ ಟಿಪ್ಪಣಿ ಕೊಡುತ್ತಾರೆ "ಗಾಡ್ವಿನ್ ಆಸ್ಟೆನ್ ಅದರ ಪೂರ್ವದ ತಪ್ಪಲಿನಲ್ಲಿರುವ ನೀರ್ಗಲ್ಲನದಿಯ ಹೆಸರು ಮತ್ತು ಪರ್ವತದ ಹೆಸರೆಂದು ತಪ್ಪಾಗಿ ಕೆಲವು ಭೂಪಟಗಳಲ್ಲಿ ಬಳಕೆಯಾಗಿದೆ."
  11. ಕಾರ್ಟರ್, ಆಪ್ ಸಿಟ್ . ಕಾರ್ಟರ್ ಕೇತು ಹೆಸರಿನ ಸಾಮಾನ್ಯೀಕರಣದ ಬಗ್ಗೆ ಹೀಗೆ ಟಿಪ್ಪಣಿ ಬರೆಯುತ್ತಾರೆ: "ಒಂದು ಹೊಸ ಪದ, ಕೇತು , ಅರ್ಥ ’ದೊಡ್ಡ ಶೃಂಗ’, ಬಾಲ್ಟಿ ಭಾಷೆಯಲ್ಲಿ ಪ್ರವೇಶವಾಗುತ್ತಿದೆಯೆಂದು ಕಾಣುತ್ತದೆ."
  12. Maraini, Fosco (1961). Karakoram: the ascent of Gasherbrum IV. Hutchinson. {{cite book}}: Cite has empty unknown parameter: |co-authors= (help) ಕುರ್ರಾನ್‌ನಲ್ಲಿ ಉಲ್ಲೇಖಿಸಿದೆ , ಪು. 31.
  13. ಚಾರ್ಲ್ಸ್ ಎಸ್. ಹ್ಯೂಸ್ಟನ್ (1953) ಕೆ2, ದಿ ಸಾವೇಜ್ ಮೌಂಟನ್. ಮೆಕ್‌ಗ್ರಾ-ಹಿಲ್.
  14. "ಎ ಟೈಮ್‌ಲೈನ್ ಆಫ್ ಹ್ಯೊಮನ್ ಆಕ್ಟಿವಿಟಿ ಆನ್ ಕೆ2". Archived from the original on 2021-05-14. Retrieved 2010-08-06.
  15. Booth, Martin (2001) [2000]. "Rhythms of Rapture". A Magick Life: A Biography of Aleister Crowley (trade paperback) (Coronet ed.). London: Hodder and Stoughton. pp. 152–157. ISBN 0-340-71806-4. {{cite book}}: |format= requires |url= (help)
  16. Curran, Jim (1995). K2: The Story of the Savage Mountain. Hodder & Stoughton. pp. 65–72. ISBN 978-0340660072. {{cite book}}: Cite has empty unknown parameter: |coauthors= (help)
  17. Houston, Charles S (1939). Five Miles High. Dodd, Mead. ISBN 978-1585740512. {{cite book}}: Unknown parameter |coauthors= ignored (|author= suggested) (help) ಮರುಮುದ್ರಣ (2000) ಫಸ್ಟ್ ಲಿಯಾನ್ ಪ್ರೆಸ್‌ರವರಿಂದ ಪೀಠಿಕೆ ಜಿಮ್ ವಿಕ್ವೈರ್ ಅವರಿಂದ
  18. ಕುರ್ರಾನ್‌, ಪುಟ 73 ರಿಂದ ಪುಟ 80
  19. Kaufman, Andrew J. (1992). K2: The 1939 Tragedy. Mountaineers Books. ISBN 978-0898863239. {{cite book}}: Unknown parameter |coauthors= ignored (|author= suggested) (help)
  20. ಕುರ್ರಾನ್‌ ಪುಟ 81 ರಿಂದ ಪುಟ 94
  21. Houston, Charles S (1954). K2 - The Savage Mountain. Mc-Graw-Hill Book Company Inc. ISBN 978-1585740130. {{cite book}}: Unknown parameter |coauthors= ignored (|author= suggested) (help) ಮರುಮುದ್ರಗೊಂಡಿತು (2000) ಫಸ್ಟ್ ಲಿಯಾನ್ ಪ್ರೆಸ್‌ರವರಿಂದ ಮತ್ತು ಪೀಠಿಕೆ ಜಿಮ್ ವಿಕ್ವೈರ್ ಅವರಿಂದ
  22. McDonald, Bernadette (2007). Brotherhood of the Rope - The Biography of Charles Houston. The Mountaineers Books. pp. 119–140. ISBN 978-0898869422. {{cite book}}: Cite has empty unknown parameter: |co-authors= (help)
  23. Curran, Jim (1995). K2: The Story of the Savage Mountain. Hodder & Stoughton. pp. 95–103. ISBN 978-0340660072. {{cite book}}: Cite has empty unknown parameter: |co-authors= (help)
  24. ಅಮೇರಿಕನ್ ಅಲ್ಪೈನ್ ಜರ್ನಲ್ , 1979, ಪುಟ 1 ರಿಂದ ಪುಟ 18
  25. ಅಮೇರಿಕನ್ ಅಲ್ಪೈನ್ ಜರ್ನಲ್ , 1983, ಪು. 295
  26. ಬಿಬಿಸಿ, ಪ್ಲಾನೆಟ್ ಅರ್ತ್ , "ಮೌಂಟನ್ಸ್", ಮೂರನೇ ಭಾಗ
  27. "Climber Lists: Everest, K2 and other 8000ers".
  28. ೨೮.೦ ೨೮.೧ "Climber: 11 killed after avalanche on Pakistan's K2". CNN. August 3, 2008. Retrieved May 7, 2010.
  29. ೨೯.೦ ೨೯.೧ ೨೯.೨ ಆಂಡಿ ಫಾನ್ಶಾ ಮತ್ತು ಸ್ಟೀಫನ್ ವೆನಬಲ್ಸ್, ಹಿಮಾಲಯ ಅಲ್ಪೈನ್-ಸ್ಟೈಲ್ , ಹಾಡರ್ ಅಂಡ್ ಸ್ಟಾಟನ್, 1995, ಐಎಸ್‌ಬಿಎನ್ 0-340-64931-3
  30. ೩೦.೦ ೩೦.೧ ೩೦.೨ ಆಡ್ರೆ ಸಾಲ್ಕೆಲ್ಡ್, ಸಂಪಾದಕ, ವರ್ಲ್ಡ್ ಮೌಂಟೆನಿಯರಿಂಗ್ , ಬುಲ್ಫಿಂಚ್ ಪ್ರೆಸ್, 1998, ಐಎಸ್‌ಬಿಎನ್ 0-8212-2502-2
  31. Muza, SR; Fulco, CS; Cymerman, A (2004). "Altitude Acclimatisation Guide". US Army Research Inst. of Environmental Medicine Thermal and Mountain Medicine Division Technical Report (USARIEM-TN-04-05). Archived from the original on 2009-04-23. Retrieved 2009-03-05.{{cite journal}}: CS1 maint: multiple names: authors list (link)
  32. Cymerman, A; Rock, PB. "Medical Problems in High Mountain Environments. A Handbook for Medical Officers". USARIEM-TN94-2. US Army Research Inst. of Environmental Medicine Thermal and Mountain Medicine Division Technical Report. Archived from the original on 2009-04-23. Retrieved 2009-03-05. {{cite journal}}: Cite journal requires |journal= (help)CS1 maint: multiple names: authors list (link)
  33. "ಅಲ್ಟಿಟ್ಯೂಡ್ ಆಕ್ಸಿಜನ್ ಕ್ಯಾಲ್ಕ್ಯುಲೇಟರ್ ಆನ್‌ಲೈನ್". Archived from the original on 2019-05-02. Retrieved 2010-08-06.
  34. ಉಲ್ಲೇಖ ದೋಷ: Invalid <ref> tag; no text was provided for refs named aaj_2005
  35. "Climber: 11 killed after avalanche on Pakistan's K2 - CNN.com". CNN. August 3, 2008. Retrieved May 7, 2010.
  36. "Nine feared dead in K2 avalanche". BBC. August 3, 2008. Retrieved 2008-08-03.
  37. ೩೭.೦ ೩೭.೧ ಅಮೇರಿಕನ್ ಅಲ್ಪೈನ್ ಜರ್ನಲ್ , 1991, ಪುಟ 19 ರಿಂದ ಪುಟ 32
  38. ಆರ್. ಮೆಸ್ನರ್ ಮತ್ತು ಎ. ಗಾಗ್ನ [1981] (1982) ಕೆ2 ಮೌಂಟನ್ ಆಫ್ ಮೌಂಟನ್ಸ್. ಜರ್ಮನ್ ಭಾಷೆಯಿಂದ ಭಾಷಾಂತರಿಸಿದವರು ಎ. ಸಾಕ್ಡ್. ಆಕ್ಸ್ ಫೋರ್ಡ್ ಯುನಿವರ್ಸಿಟಿ ಪ್ರೆಸ್ ಐಎಸ್‌ಬಿಎನ್ 0791067726
  39. ಜೆರ್ಝಿ ವಲ, ದಿ ಎಯ್ಟ್-ಥೌಸಂಡ್-ಮೀಟರ್ ಪೀಕ್ಸ್ ಆಫ್ ದಿ ಕರಕೋರಮ್ , ಒರೊಗ್ರಾಫಿಕಲ್ ಸ್ಕೆಚ್ ಮ್ಯಾಪ್, ದಿ ಕ್ಲೈಂಬಿಂಗ್ ಕಂಪನಿ ಲಿಮಿಟೆದ್/ಕಾರ್ಡೀ, 1994.

^ ಭಾರತ ಸರ್ಕಾರವೂ ಕೆ೨ ತನ್ನ ಸೀಮೆಯಲ್ಲಿದೆಯೆಂದು ಹೇಳಿದೆ, ಇದು ಪಾಕಿಸ್ತಾನದ-ಆಡಳಿತದಲ್ಲಿರುವ ಕಾಶ್ಮೀರದ ಸೀಮಾ ವ್ಯಾಜ್ಯದ ದೆಸೆಯಿಂದ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಕೆ೨&oldid=1229236" ಇಂದ ಪಡೆಯಲ್ಪಟ್ಟಿದೆ