ವಿಷಯಕ್ಕೆ ಹೋಗು

ಕುಂದಾಪುರ ವಾಮನ ಕಾಮತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಂದಾಪುರ ವಾಮನ ಕಾಮತ್
ಜನನ (1947-12-02) ೨ ಡಿಸೆಂಬರ್ ೧೯೪೭ (ವಯಸ್ಸು ೭೬)
ಮಂಗಳೂರು, ಕರ್ನಾಟಕ, ಭಾರತ
ಶಿಕ್ಷಣ ಸಂಸ್ಥೆರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್ ಐ ಟಿ), ಕರ್ನಾಟಕ
ಐ ಐ ಎಂ, ಅಹಮದಾಬಾದ್
ವೃತ್ತಿ(ಗಳು)ಬ್ರಿಕ್ಸ್ ಬ್ಯಾಂಕ್ ನ ಮೊದಲನೇ ಅಧ್ಯಕ್ಷರು(೨೦೧೫ ರಲ್ಲಿ ನೇಮಕ)
ಸ್ವತಂತ್ರ ನಿರ್ದೇಶಕರು, ಇನ್ಫೋಸಿಸ್
ಐಸಿಐಸಿಐ ಬ್ಯಾಂಕ್ ಮಾಜಿ ಛೇರ್ಮನ್
ಸಂಗಾತಿರಾಜಲಕ್ಷ್ಮಿ
ಮಕ್ಕಳುಅಜಯ್ ಕಾಮತ್ (ಮಗ)
ಆಜ್ಞಾ ಕಾಮತ್ ಪೈ (ಮಗಳು)

ಕುಂದಾಪುರ ವಾಮನ ಕಾಮತ್, ಸಾಮಾನ್ಯವಾಗಿ ಕೆ.ವಿ.ಕಾಮತ್, ಹೊಸದಾಗಿ ಬ್ರಿಕ್ಸ್ ಬ್ಯಾಂಕ್‍ನ ಅಧ್ಯಕ್ಷರಾಗಿ ಇದೀಗ ಆಯ್ಕೆಯಾದವರು, ಹಿಂದೆ ಇನ್ಫೋಸಿಸ್‍ನ ಅಧ್ಯಕ್ಷರಾಗಿದ್ದು,ಅದಕ್ಕೂ ಮೊದಲು ಖಾಸಗಿ ರಂಗದ  ಐಸಿಐಸಿಐ ಬ್ಯಾಂಕ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು..[]

ಕಾಮತರು ೨೧ ಅಗಸ್ಟ್ ೨೦೧೧ರಂದು ನಾರಾಯಣಮೂರ್ತಿಯವರಿಂದ ಇನ್ಫೋಸಿಸ್ನ ಅಧ್ಯಕ್ಷಗಿರಿ ವಹಿಸಿಕೊಳ್ಳುವ ಮೊದಲು ಮೇ ೨,೨೦೧೧ರಿಂದ ಇದರ ನಾನ್ ಎಕ್ಸಿಕ್ಯೂಟಿವ್ ಚಯರ್‍ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದರು.[]

ಕಾಮತ್‍ರವರು ಹ್ಯೂಸ್ಟನ್ ಮೂಲದ ತೈಲ ಕಂಪನಿ ಶ್ಲುಮ್‍ಬರ್ಗರ್ ಮತ್ತು ಭಾರತೀಯ ಔಷಧ ಉದ್ಯಮ ಲುಪಿನ್ಇದರ ಸ್ವತಂತ್ರ ನಿರ್ದೇಶಕರಾಗಿ ಕೆಲಸ ಮಾಡಿದ್ದರು.ಪಂಡಿತ್ ದೀನದಯಾಳ್ ಉಪಾಧ್ಯಾಯ ಪೆಂಟ್ರೋಲಿಯಮ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರೂ ಹೌದು.

ಬಾಲ್ಯ ಜೀವನ

[ಬದಲಾಯಿಸಿ]

ಕಾಮತರು ೨,ಡಿಸೆಂಬರ್ ೧೯೪೭ರಂದು ಕೊಂಕಣಿ ಮಾತೃಭಾಷೆಯ ಗೌಡ ಸಾರಸ್ವತ  ಬ್ರಾಹ್ಮಣ ಕುಟುಂಬದಲ್ಲಿ ಕರ್ನಾಟಕಮಂಗಳೂರಿನಲ್ಲಿ ಜನಿಸಿದರು.ಬಾಲ್ಯದ ಬಹುಭಾಗವನ್ನು ಇಲ್ಲಿಯೇ ಕಳೆದರು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣವನ್ನು ಪಡೆದ ಇವರು ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಸುರತ್ಕಲ್ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕನಲ್ಲಿ ೧೯೬೯ರಲ್ಲಿ ಪಡೆದರು. ಮುಂದೆ ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ ಮೆನೇಜ್‍ಮೆಂಟ್,)ಅಹ್ಮದಾಬಾದ್ನಲ್ಲಿ ವ್ಯವಸ್ಥಾಪನಾ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲಮೋವನ್ನು ಪಡೆದರು. 

ವೃತ್ತಿ ಜೀವನ

[ಬದಲಾಯಿಸಿ]

೧೯೭೧ರಲ್ಲಿ ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ ಮೆನೇಜ್‍ಮೆಂಟ್,)ಅಹಮದಾಬಾದ್‍‍ನಲ್ಲಿ ಶಿಕ್ಷಣದ ನಂತರ ಕಾಮತರು ಐಸಿಐಸಿಐ ಸಂಸ್ಥೆಯಲ್ಲಿ ಯೋಜನೆಗಳಿಗೆ ಹಣಕಾಸು ಒದಗಿಸುವ ವಿಭಾಗದಲ್ಲಿ ಕೆಲಸಕ್ಕೆ ಸೇರಿದರು. ಇದೇ ಸಂಸ್ಥೆಯ ಬೇರೆ ಬೇರೆ ವಿಭಾಗಳಲ್ಲಿ ಕೆಲಸಮಾಡಿ ಅನುಭವ ಸಂಪಾದಿಸಿಕೊಂಡ ಇವರು ತನ್ನ ಸಾಮಾನ್ಯ ನಿರ್ವಹಣಾ ಕೆಲಸದ  ಅಂಗವಾಗಿ ಐಸಿಐಸಿಐಯ ಗಣಿಕೀಕರಣ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದರು.ಇವರ ಆ ಕಾಲದ ಈ ಸಾಧನೆ ಇಂದು ಐಸಿಐಸಿಐಯನ್ನು ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ.ಇಂದು ಐಸಿಐಸಿಐ ಒಂದು ತಂತ್ರಜ್ಞಾನ ಆಧಾರಿತ ಸಂಸ್ಥೆಯಾಗಿ ಸಾಂಸ್ಥಿಕ ಮತ್ತು ಸಾಮಾನ್ಯ ಗ್ರಾಹಕ ಸ್ನೇಹಿಯಾಗಿ ಬೆಳೆಯಲು ಕಾಮತ್‍ರವರ ಈ ಮುನ್ನೋಟವೇ ಕಾರಣವಾಗಿದೆ.[]

೧೯೮೮ರಲ್ಲಿ ಕಾಮತರು ಮನಿಲಾದಲ್ಲಿರುವ ಏಷಿಯನ್ ಡೆವೆಲಪ್‍ಮೆಂಟ್ ಬ್ಯಾಂಕನ್ನು(ಎಡಿಬಿ) ಸೇರಿದರು.ಇವರು ಚೀನಾ,ಭಾರತಬಾಂಗ್ಲಾದೇಶ,ಇಂಡೋನೇಷ್ಯಾ ,ಫಿಲಿಪ್ಪೀನ್ಸ್ಮತ್ತು ವಿಯೆಟ್ನಾಂ ದೇಶಗಳಲ್ಲಿ ಹಲವಾರು ಯೋಜನೆಗಳಲ್ಲಿ ಕೆಲಸಮಾಡಿ ಅಪಾರ ಅನುಭವ ಪಡೆದುಕೊಂಡರು.ಅದಲ್ಲದೆ ಇವರು ಹಲವಾರು ಕಂಪನಿಗಳಲ್ಲಿ  ಎಡಿಬಿಯ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ.

ಮೇ ೧೯೯೬ರಲ್ಲಿ ಕಾಮತ್‍ರವರು ಐಸಿಐಸಿಐಯ ವ್ಯವಸ್ಪಾಪಕ ನಿರ್ದೇಶಕ ಮತ್ತು ಮುಖ್ಯಾಧಿಕಾರಿಯಾಗಿ ಮರಳಿದರು.ಇವರು ಹಲವಾರು ಗ್ರಾಹಕಸ್ನೇಹಿ ಕ್ರಮಗಳಿಂದ ಐಸಿಐಸಿಐ ಗುಂಪಿನ ಸೇವಾ ವಿಸ್ತರಣೆ ಮತ್ತು ಹಲವಾರು ವಿತ್ತೀಯ ಸಂಸ್ಥೆಗಳ ವಿಲಯನದಿಂದ ಒಟ್ಟು ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವಪೂರ್ಣ ಪಾತ್ರವಹಿಸಿದರು. ಇವರ ಈ ನಡೆ ಮುಂದೆ ಐಸಿಐಸಿಐ ಬ್ಯಾಂಕ್‍ನ ಸ್ಥಾಪನೆಗೆ ಕಾರಣವಾಯಿತು..

೨ ಮೇ ೨೦೧೧ರಂದು ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್‍ನ ಅಧಿಕಾರ ರಹಿತ ಅಧ್ಯಕ್ಷರಾಗಿ ನಿಯುಕ್ತಿಗೊಂಡರು[]

ಇವರು ಈಗ ಮುಖ್ಯ ಸ್ವತಂತ್ರ ನಿರ್ದೇಶಕರಾಗಿ ಇನ್ಫೋಸಿಸ್ ಆಡಳಿತ ಮಂಡಲಿಯಲ್ಲಿದ್ದಾರೆ.ಈ ಮೊದಲು ನಾರಾಯಣಮೂರ್ತಿಯವರು ಪುನಹ ಅಧ್ಯಕ್ಷರಾಗಲು ಹುದ್ದೆಯಿಂದ ಕೆಳಗಿಳಿದಿದ್ದರು. []

ಆಡಳಿತ ಮಂಡಳಿಗಳ ಸದಸ್ಯತ್ವ

[ಬದಲಾಯಿಸಿ]

ಕಾಮತ್‍ರವರು ಹಲವಾರು ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಇದರಲ್ಲಿ ಮುಖ್ಯವಾಗಿ ಭಾರತೀಯ ವ್ಯವಸ್ಥಾಪನಾ ಸಂಸ್ಥೆ,ಅಹಮದಾಬಾದ್ ಮತ್ತು ಇಂದೋರ್,ಇಂಡಿಯನ್ ಸ್ಕೂಲ್ ಆಫ್ ಬುಸಿನೆಸ್,ನ್ಯಾಷನನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮೆನೇಜ್‍ಮೆಂಟ್,ಪಂಡಿತ್ ದೀನದಯಾಳ್ ಪೆಟ್ರೋಲಿಯಮ್ ವಿಶ್ವವಿದ್ಯಾಲಯ,ಗಾಂಧಿನಗರ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮುಂತಾದವುಗಳು.

ಕಾಮತ್‍‍ರವರು ನ್ಯಾಷನಲ್ ಕೌನ್ಸಿಲ್ ಆಫ್  ಕಾನ್ಪಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಯ (ಸಿಐಐ) ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ ಹಲವಾರು ದೇಶೀಯ ಹಾಗೂ ಅಂತರ್‍ರಾಷ್ಟ್ರೀಯ ಕಂಪನಿಗಳ ಆಡಳಿತ ಮಂಡಳಿಲ್ಲಿದ್ದು ತನ್ನ ಅನುಭವವನ್ನು ನೀಡುತ್ತಿದ್ದಾರೆ. 

ಪ್ರಶಸ್ತಿಗಳು

[ಬದಲಾಯಿಸಿ]
  • ಮೋಸ್ಟ್ ಈ-ಸವ್ವಿ ಸಿ‍ಇ‍ಒ ಅಮಂಗಸ್ಟ್ ಏಷಿಯನ್ ಬ್ಯಾಂಕ್ಸ್ – ಸಿಂಗಾಪುರದ 'ದಿ ಏಶಿಯನ್ ಬ್ಯಾಂಕರ್ ಜರ್ನಲ್'[]
  • ಪೈನಾನ್ಸ್ ಮ್ಯಾನ್ ಆಫ್ ದಿ ಇಯರ್ ಅವಾರ್ಡ್ – The Mumbai Management Association[]
  • Best CEO for Innovative HR Practices – World HRD Congress[]
  • ಏಷಿಯನ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ – Asian Business Leader Award 2001 (CNBC Asia)[]
  • ಔಟ್‍ಸ್ಟಾಂಡಿಕ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ – CNBC-TV18, 2006[]
  • ಬ್ಯುಸಿನೆಸ್‍ಮಾನ್ ಆಫ್ ಇಯರ್ – ಬ್ಯುಸಿನೆಸ್ ಇಂಡಿಯಾ, 2005[೧೦]
  • ಬ್ಯುಸಿನೆಸ್ ಲೀಡರ್ ಆಫ್ ಇಯರ್ – ದಿ ಎಕಾನಮಿಕ್ ಟೈಮ್ಸ್, 2007[೧೧]
  • ಬ್ಯುಸಿನೆಸ್‍ಮಾನ್ ಆಫ್ ಇಯರ್ – Forbes Asia[೧೨]
  • ಪದ್ಮಭೂಷಣ ಪ್ರಶಸ್ತಿ – 2008[೧೩]
  1. "Kundapur Vaman Kamath Profile on Forbes". Archived from the original on 2012-05-22. Retrieved 2015-05-12.
  2. IIFL: KV Kamath: Infosys may spend US$1bn on acquisitions
  3. Kundapur Vaman Kamath – the force behind ICICI's rise[ಶಾಶ್ವತವಾಗಿ ಮಡಿದ ಕೊಂಡಿ]
  4. "K.V. Kamath is Infosys chairman; Shibulal, the new CEO and MD". The Hindu. Retrieved 11 September 2012.
  5. "Vishal Sikka to be CEO and MD of Infosys, Kamath Non-Executive Chairman". news.biharprabha.com. Retrieved 12 June 2014.
  6. ೬.೦ ೬.೧ "Kamath made banking cool". 20 December 2008. Archived from the original on 2013-01-03. Retrieved 2015-05-12.
  7. "Awards – Erstwhile ICICI Ltd". Archived from the original on 2013-07-26. Retrieved 2015-05-12.
  8. CNBC Asia Business Leaders Awards 2001[ಶಾಶ್ವತವಾಗಿ ಮಡಿದ ಕೊಂಡಿ]
  9. Indian Business Leader Awards: Who are the winners?
  10. "K V Kamath is Business Indias businessman of the year". 1 December 2005.
  11. Business Leader of the year: K V Kamath
  12. K V Kamath is Forbes Asia businessman of the year
  13. The President of India has approved the names of the following persons for conferment of the Padma Awards-2008

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]