ಕನಕಪೂರ, ಚಿಂಚೋಳಿ
ಕನಕಪೂರ ,ಕನಕಾಪುರ | |
---|---|
village | |
Coordinates: 17°28′18″N 77°19′25″E / 17.471704°N 77.323515°E | |
Country | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಗುಲ್ಬರ್ಗಾ |
ತಾಲ್ಲೂಕು | ಚಿಂಚೋಳಿ |
Government | |
• Type | ಕರ್ನಾಟಕ ಸರ್ಕಾರ ಗ್ರಾಮ ಪಂಚಾಯತಿ |
Population (2011) | |
• Total | ೨,೧೮೫ |
Time zone | UTC+5:30 (IST) |
PIN | 585306.[೧] |
Vehicle registration | KA 32 |
ಲೋಕ ಸಭೆ | ಬೀದರ್ (ಲೋಕ ಸಭೆ) |
ವಿಧಾನ ಸಭೆ | ಚಿಂಚೋಳಿ |
ಕನಕಪೂರ ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಗ್ರಾಮ ಮತ್ತು ಗ್ರಾಮಂಚಾಯತಿ ಕೇಂದ್ರ ಗ್ರಾಮವಾಗಿದ್ದು, ಈ ಗ್ರಾಮವನ್ನು ಹಿಂದೆ ಕರಕಮುಕಲಿ ಎಂದು ಕರೆಯಲಾಗುತ್ತಿತ್ತು , ಇದು ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿದೆ.[೨]
ಇತಿಹಾಸ
[ಬದಲಾಯಿಸಿ]ಈ ಗ್ರಾಮವು ಸುಮಾರು ೧೫೦ ವರ್ಷಗಳ ಇತಿಹಾಸ ಹೊಂದಿದ್ದು ಭಾರತ ಸ್ವಾತಂತ್ರ ಪಡೆಯುವದಕ್ಕೆ ಮೊದಲು ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು.
ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]2011 ರ ಭಾರತ ಜನಗಣತಿಯಂತೆ ಕರಕಮುಕಲಿ 2185 ಜನಸಂಖ್ಯೆಯನ್ನು ಹೊಂದಿದೆ.1072 ಪುರುಷರು ಮತ್ತು 1113 ಮಹಿಳೆಯರು ವಾಸವಾಗಿದ್ದಾರೆ. [೩]
ನಾಗರಿಕ ಆಡಳಿತ
[ಬದಲಾಯಿಸಿ]ಭಾರತದ ಪಂಚಾಯತಿ ರಾಜ್ ಕಾಯಿದೆಯ ಸಂವಿಧಾನದ ಪ್ರಕಾರ, ಕನಕಪೂರ ಗ್ರಾಮವನ್ನು ಗ್ರಾಮದ ಪ್ರತಿನಿಧಿಯಾಗಿ ಆಯ್ಕೆ ಮಾಡುವ ಸರ್ಪಂಚ್ (ಗ್ರಾಮದ ಮುಖ್ಯಸ್ಥ) ಆಡಳಿತದಲ್ಲಿದೆ. ಐದು ವರ್ಷಕೊಮ್ಮೆ ಗ್ರಾಮಪಂಚಾಯಿತಿ ಚುನಾವಣೆ ನಡೆಯುತ್ತದೆ.
ಶಿಕ್ಷಣ ಸಂಸ್ಥೆಗಳು
[ಬದಲಾಯಿಸಿ]ಕನಕಪುರದಲ್ಲಿರುವ ಶಾಲೆಗಳು
- ಸರ್ಕಾರಿ ಪ್ರಾಥಮಿಕ ಶಾಲೆ ಕನಕಪುರ [೪]
- ಸರ್ಕಾರಿ ಪ್ರೌಢಶಾಲಾ ಕನಕಪುರ .
ಪ್ರೌಢಶಾಲಾ ಶಿಕ್ಷಣದ ನಂತರ ಮುಂದಿನ ಅಭ್ಯಾಸಕ್ಕಾಗಿ (ಪಿಯುಸಿ, ಬ್ಯಾಚುಲರ್ ಆಫ್ ಆರ್ಟ್ಸ್, ಬ್ಯಾಚುಲರ್ ಆಫ್ ಸೈನ್ಸ್, ಬ್ಯಾಚುಲರ್ ಆಫ್ ಕಾಮರ್ಸ್, ಐಟಿಐ ಮತ್ತು ಬಿಎಡ್) ವಿದ್ಯಾರ್ಥಿಗಳು ಕನಕಪುರದಿಂದ 13 ಕಿಮೀ ದೂರದಲ್ಲಿರುವ ಚಿಂಚೋಳಿ ಪಟ್ಟಣಕ್ಕೆ ಪ್ರಯಾಣಿಸಬೇಕಾಗುತ್ತದೆ.
- ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಚಿಂಚೋಳಿ[೫]
- HKES ನ ಶ್ರೀಮತಿ. ಸಿ.ಬಿ.ಪಾಟೀಲ್ ಆರ್ಟ್ಸ್ & ಕಾಮರ್ಸ್ ಡಿಗ್ರೀ ಕಾಲೇಜ್, ಚಿಂಚೋಳಿ
- ಸಿದ್ದಾರ್ಥ ಶಿಕ್ಷಣ ಕಾಲೇಜು ಚಿಂಚೋಳಿ
- ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಸುಲೇಪೆಟ್ .
- ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚಿಂಚೋಳಿ
- ತಾಂತ್ರಿಕ ಶಿಕ್ಷಣ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು 40 ರಿಂದ 80 ಕಿ.ಮೀ ದೂರದಲ್ಲಿ, ಹುಮನಾಬಾದ್ , ಕಾಳಗಿ , ಗುಲ್ಬರ್ಗಾ, ಬೀದರ್ ನಗರಗಳಿಗೆ ಹೋಗಬೇಕಾಗುತ್ತದೆ.
ವಿಶ್ವವಿದ್ಯಾಲಯಗಳು
[ಬದಲಾಯಿಸಿ]ಹತ್ತಿರದ ವಿಶ್ವವಿದ್ಯಾನಿಲಯಗಳು ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ
ಕೃಷಿ
[ಬದಲಾಯಿಸಿ]ಕನಕಪುರ ಕೃಷಿ ಪ್ರಧಾನ ಗ್ರಾಮವಾಗಿದ್ದು ತೊಗರಿ, ಕಡಲೆ,ಜೋಳ,ಕುಸಬಿ,ಎಳ್ಳು,ಸೂರ್ಯಕಾಂತಿ ಬೆಳೆಯಲಾಗುತ್ತದೆ. ಇಲ್ಲಿನ ಭೂಮಿ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದ್ದು ,ಪ್ರಧಾನವಾಗಿ ಮಳೆ ಆಧಾರಿತ ಬೆಳೆ ಬೆಳೆಯಲಾಗುತ್ತದೆ.[೬]
ಸಾರಿಗೆ
[ಬದಲಾಯಿಸಿ]ಕೆಎಸ್ಆರ್ಟಿಸಿ ಸಂಸ್ಥೆ ಕರ್ನಾಟಕ ರಾಜ್ಯ ಮತ್ತು ಪಕ್ಕದ ರಾಜ್ಯಗಳಿಗೆ ಪ್ರಯಾಣಿಸಲು ಬಸ್ ಸೇವೆ ಒದಗಿಸುತ್ತದೆ . ಹತ್ತಿರದ ರೈಲು ನಿಲ್ದಾಣವು 43 ಕಿಮೀ ದೂರದಲ್ಲಿರುವ ತಾಂಡೂರ್ (TDU ಸ್ಟೇಷನ್ ಕೋಡ್ ) ಮತ್ತು ಸೇಡಂ (SEM ) ಪಟ್ಟಣದಲ್ಲಿದೆ . ಹತ್ತಿರದ ವಿಮಾನ ನಿಲ್ದಾಣ ತೆಲಂಗಾಣ ರಾಜ್ಯದ ಹೈದ್ರಾಬಾದ್ ನಗರದಲ್ಲಿರುವ (155 ಕಿ.ಮೀ) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Archived copy". Archived from the original on 2016-08-20. Retrieved 2016-11-24.
{{cite web}}
: Unknown parameter|deadurl=
ignored (help)CS1 maint: archived copy as title (link) - ↑ "ತಾಲೂಕಾ/Taluka ಚಿಂಚೋಳಿ/CHINCHOLI ಪಂಚಾಯತ್ (Panchayat)". panchamitra.kar.nic.in. Retrieved 18 March 2018.
- ↑ "Karakmukli Population - Gulbarga, Karnataka". www.census2011.co.in. Retrieved 18 March 2018.
- ↑ "List of Schools Having facilities ‐ Drinking Water, Boys Toilet and Girls Toilet" (PDF). www.schooleducation.kar.nic.in. Retrieved 18 March 2018.
{{cite web}}
: no-break space character in|title=
at position 5 (help) - ↑ "Government Colleges in Gulbarga Region". www.dce.kar.nic.in. Retrieved 18 March 2018.
- ↑ https://www.prajavani.net/171099.html
- Pages using gadget WikiMiniAtlas
- Pages using the JsonConfig extension
- CS1 errors: unsupported parameter
- CS1 maint: archived copy as title
- CS1 errors: invisible characters
- Short description is different from Wikidata
- Coordinates on Wikidata
- Pages using infobox settlement with unknown parameters
- ಗುಲ್ಬರ್ಗ ಜಿಲ್ಲೆ