ವಿಷಯಕ್ಕೆ ಹೋಗು

ತಾಂಡೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾಂಡೂರ್
తాండూరు
Tandur
ಪಟ್ಟಣ
ದೇಶ ಭಾರತ
ರಾಜ್ಯತೆಲಂಗಾಣ
ಜಿಲ್ಲೆರಂಗಾರೆಡ್ಡಿ
Elevation
೪೫೦ m m (Bad rounding hereFormatting error: invalid input when rounding ft)
Population
 (2011)
 • Total೬೫,೧೧೫[]
ಭಾಷೆಗಳು
 • ಅಧಿಕೃತತೆಲುಗು
Time zoneUTC+5:30 (IST)
ಪಿನ್ ಕೋಡ್
501141

ತಾಂಡೂರ್ (తాండూరు ,Tandur) ತೆಲಂಗಾಣ ರಾಜ್ಯದ,ವಿಕಾರಾಬಾದ್[] ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ಮಂಡಲ್ ಕೇಂದ್ರವಾಗಿದೆ.ಇ ಪಟ್ಟಣ ರಾಜ್ಯ ರಾಜಧಾನಿ ಹೈದ್ರಾಬಾದ್ ನಿಂದ ೧೨೦ ಕಿ.ಮೀ ದೂರದಲ್ಲಿದೆ .ಇದು ಕರ್ನಾಟಕ ರಾಜ್ಯದ ಚಿಂಚೋಳಿ, ಸೇಡಮ್ ತಾಲ್ಲೂಕುಗಳ ಗಡಿಯನ್ನು ಹಂಚಿಕೊಂಡಿದೆ.

ಜನ ಸಂಖ್ಯಾಶಾಸ್ತ್ರ

[ಬದಲಾಯಿಸಿ]

೨೦೧೧ರ ಭಾರತದ ಜನಗಣತಿಯ ಪ್ರಕಾರ ತಾಂಡೂರ್ 65,115 ಜನಸಂಖ್ಯೆಯನ್ನು ಹೊಂದಿದ್ದು, 32,595 ಪುರುಷರು ಮತ್ತು 32,520 ಮಹಿಳೆಯರು.[]

ಭೂಗೋಳ

[ಬದಲಾಯಿಸಿ]

ತಾಂಡೂರ್ 17°14′N 77°35′E / 17.23°N 77.58°E / 17.23; 77.58 ನಲ್ಲಿ ಇದೆ. ಇದು 450 ಮೀ ಎತ್ತರದಲ್ಲಿದೆ. ತೆಲಂಗಾಣ ರಾಜ್ಯ ರಾಜಧಾನಿ ಹೈದರಾಬಾದ್ ನಿಂದ ೧೧೦ ಕಿ, ಮೀ ದೂರದಲ್ಲಿದೆ ಮತ್ತು ಜಹೀರಾಬಾದ್ ನಿಂದ (60 ಕಿಮೀ), ಸಂಗಾರೆಡ್ಡಿ ಇಂದ (95 ಕಿಮೀ), ಮೆಹಬೂಬ್ ನಗರದಿಂದ (80 ಕಿಮೀ), ವಿಕಾರಾಬಾದ್ ದಿಂದ (40 ಕಿಮೀ) ಮತ್ತು ಚಿಂಚೋಳಿ ಯಿಂದ (40 ಕಿಮೀ) ದೂರದಲ್ಲಿದೆ.

ವೈದ್ಯಕೀಯ ಸೌಲಭ್ಯಗಳು

[ಬದಲಾಯಿಸಿ]
  • ಸರಕಾರಿ ಆಸ್ಪತ್ರೆ ತಾಂಡೂರ

[]

  • ಖಾಸಗಿ ಆಸ್ಪತ್ರೆಗಳು []

ಬ್ಯಾಂಕುಗಳು

[ಬದಲಾಯಿಸಿ]

ಈ ಬ್ಯಾಂಕುಗಳು ತಮ್ಮ ಶಾಖೆಯನ್ನು ತಾಂಡೂರ ನಲ್ಲಿ ಹೊಂದಿವೆ . 1) ಆಂಧ್ರ ಬ್ಯಾಂಕ್,2) ಡೆಕ್ಕನ್ ಗ್ರಾಮೀಣ ಬ್ಯಾಂಕ್,3) ದೇನಾ ಬ್ಯಾಂಕ್,4)ಎಚ್ಡಿಎಫ್ಸಿ ಬ್ಯಾಂಕ್, 5) ಹೈದರಾಬಾದ್ ಜಿಲ್ಲೆ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್, 7) ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ 6) KBS ಬ್ಯಾಂಕ್.[],[] 9)axisbank

ಶೈಕ್ಷಣಿಕ ಸೌಲಭ್ಯಗಳು

[ಬದಲಾಯಿಸಿ]
  • ಸರ್ಕಾರಿ ಪ್ರಾಥಮಿಕ ಶಾಲೆ (ಜಿಪಿಎಸ್) ಚಿಂಚೋಳಿ ರಸ್ತೆ, ತಾಂಡೂರ[]
  • ಸರ್ಕಾರಿ ಪ್ರೌಢ ಶಾಲೆ(GHS) ತಾಂಡೂರ []
  • ಸರ್ಕಾರಿ ಪದವಿ ಪೂರ್ವ ಕಾಲೇಜು, ತಾಂಡೂರ[]
  • ಸರ್ಕಾರಿ ಪದವಿ ಕಾಲೇಜು, ತಾಂಡೂರ್ [೧೦]
  • ಖಾಸಗಿ ಕಾಲೇಜುಗಳು[೧೧][೧೨]

ಸಾರಿಗೆ/ಸಂಪರ್ಕ

[ಬದಲಾಯಿಸಿ]
  • ಬಸ್ಸು : ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆ , ಸಂಚಾರ ಸೇವೆ ಒದಗಿಸುತ್ತದೆ .
  • ರೈಲು :ತಾಂಡೂರ್ ರೈಲ್ವೆ ಸ್ಟೇಷನ್ ಹೊಂದಿದ್ದು ಇ ರೈಲ್ವೆ ನಿಲ್ದಾಣವು ರಾಜ್ಯದ ತಾಲೂಕಿನ ಇತರ ನೆರೆಯ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಮುಂಬಯಿ ಮಾರ್ಗದ ಸಿಕಂದರಾಬಾದ್-ವಾಡಿ ವಿಭಾಗದಲ್ಲಿ ಇದೆ.[೧೩]
  • ವಿಮಾನ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೈದ್ರಾಬಾದ್ ೧೧೦ ಕಿ.ಮೀ ದೂರದಲ್ಲಿದೆ.[೧೪]

ಇಲ್ಲಿನ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ ,ಭತ್ತ.[೧೫]

ಕೈಗಾರಿಕೆಗಳು

[ಬದಲಾಯಿಸಿ]

ನೀಲಿ ಮತ್ತು ಹಳದಿ ಬಣ್ಣದ ಸುಣ್ಣದ ಕಲ್ಲು ಇಲ್ಲಿ ಹೇರಳವಾಗಿ ದೋರೆಯುತ್ತವೆ. ಇದು ಮನೆ ಕಟ್ಟಲು, ಗೋಡೆಯ ಲೋಹಲೇಪನ ತಯಾರೀಸಲು ಮತ್ತು ಚಪ್ಪಡಿಗಳನ್ನು ತಯಾರೀಸಲು ಬಳಸಲಾಗುತ್ತದೆ. ನೀಲಿ ಸುಣ್ಣದ ಮತ್ತು ಕಲ್ಲಿನ ಕೈಗಾರಿಕೆಗಳು ಕೌಶಲ್ಯರಹಿತ ಜನರಿಗೆ ಉದ್ಯೋಗ ಒದಗಿಸುತ್ತಿವೆ. ನಗರದ ಸುತ್ತಮುತ್ತ ಸಣ್ಣ ಪ್ರಮಾಣದ ಕೈಗಾರಿಕೆಗಳು ಸ್ಟೋನ್ ಹೊಳಪು ಮಾಡುವ ಘಟಕಗಳ ಮೂಲಕ ನೇರವಾಗಿ ಮತ್ತು ಪರೋಕ್ಷವಾಗಿ ಜನರಿಗೆ ಉದ್ಯೋಗ ಸ್ರೃಷ್ಠೀಯಾಗುತ್ತಿದೆ. ಇಂತಹ ಸಣ್ಣ ಪ್ರಮಾಣದ ಕೈಗಾರಿಕೆಗಳು ನೂರಾರು ಇವೆ.ಇದಕ್ಕೆ ಕಾರಣ ಸ್ಥಳದ ನೈಸರ್ಗಿಕ ನೆಲದ ಸಂಪನ್ಮೂಲಗಳು ಮತ್ತು ಕೃಷಿ ಭೂಮಿಯನ್ನು ಲಭ್ಯತೆಯೆ ಇದಕ್ಕೆ ಕಾರಣ. ಕಲ್ಲುಗಣಿಗಳು ವರ್ಷದುದ್ದಕ್ಕೂ ಕೇಲಸವನ್ನು ನಿಡುತ್ತವೆ.ಇಲ್ಲಿ ಸಿಮೆಂಟ್ ಕಾರ್ಖಾನೆಗಳಿವೆ.[೧೬]

ಉಲ್ಲೇಖನಗಳು

[ಬದಲಾಯಿಸಿ]
  1. ೧.೦ ೧.೧ "ತಾಂಡೂರ್ ಜನಗಣತಿ ೨೦೧೧". www.census2011.co.in ,accessdate 22 Sep 2016.
  2. http://www.teachersbadi.in/2016/10/list-of-new-revenue-divisions-mandals-vikarabad-district-telangana-state.html?m=1
  3. "Tandur Hospital". www.rangareddy.telangana.gov.in accessdate 27 Sep 2016. Archived from the original on 21 ಸೆಪ್ಟೆಂಬರ್ 2016. Retrieved 27 ಸೆಪ್ಟೆಂಬರ್ 2016.
  4. "Private hospitals in tandur". www.tandurtown.com accessdate 27 Sep 2016. Archived from the original on 24 ಮಾರ್ಚ್ 2016. Retrieved 27 ಸೆಪ್ಟೆಂಬರ್ 2016.
  5. "Banks in tandur". www.tandurtown.com accessdate 27 Sep 2016. Archived from the original on 5 ನವೆಂಬರ್ 2016. Retrieved 27 ಸೆಪ್ಟೆಂಬರ್ 2016.
  6. "Banks in tandur". iban.in accessdate 27 Sep 2016.
  7. "Government Primary School (GPS) Chincholi Road, Tandur". www.kulguru.com accessdate 27 Sep 2016.
  8. "Sarva Shiksha Abhiyan Telangana". www.ssa.tg.nic.in/ accessdate 27 Sep 2016. Archived from the original on 20 ಅಕ್ಟೋಬರ್ 2016. Retrieved 27 ಸೆಪ್ಟೆಂಬರ್ 2016.
  9. "Government junior college Tandur". www.schoolsworld.in accessdate 27 Sep 2016.
  10. "Government Degree college Tandur". www.gdcts.cgg.gov.in accessdate 27 Sep 2016. Archived from the original on 30 ಸೆಪ್ಟೆಂಬರ್ 2016. Retrieved 27 ಸೆಪ್ಟೆಂಬರ್ 2016.
  11. "List of Colleges In Tandur". www.onefivenine.com accessdate 27 Sep 2016.
  12. "Educationin Telangana". en.wikipedia.org accessdate 27 Sep 2016.
  13. ತಾಂಡೂರ್ ರೈಲ್ವೆ ಸ್ಟೇಷನ್
  14. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
  15. "Hybrid pigeonpea technology achieves record yield". timesofindia.indiatimes.com accessdate 22 Sep 2016.
  16. "ತಾಂಡೂರ್ ಕಲ್ಲಿನ ಕೈಗಾರಿಕೆಗಳು". business-standard.com accessdate 22 Sep 2016. Archived from the original on 1 ಜುಲೈ 2016. Retrieved 22 ಸೆಪ್ಟೆಂಬರ್ 2016.


"https://kn.wikipedia.org/w/index.php?title=ತಾಂಡೂರ್&oldid=1258600" ಇಂದ ಪಡೆಯಲ್ಪಟ್ಟಿದೆ