ವಿಷಯಕ್ಕೆ ಹೋಗು

ಊದುಕುಲುಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಪೇನ್‌ನ ಸೆಸ್ಟಾವೊ ಎಂಬಲ್ಲಿನ ಊದುಕುಲುಮೆ. ನಿಜವಾದ ಕುಲುಮೆಯು ಸ್ವತಃ ಮಧ್ಯಭಾಗದ ಸರಕಟ್ಟು ರಚನೆಯ ಒಳಗಿದೆ.

ಊದುಕುಲುಮೆ ಎಂಬುದು ಲೋಹವಿಜ್ಞಾನದ ಕುಲುಮೆಯ ಒಂದು ಬಗೆಯಾಗಿದ್ದು, ಕೈಗಾರಿಕಾ ಲೋಹಗಳನ್ನು, ಅದರಲ್ಲೂ ಸಾಮಾನ್ಯವಾಗಿ ಕಬ್ಬಿಣವನ್ನು ಉತ್ಪಾದಿಸುವುದಕ್ಕೆ ಕೈಗೊಳ್ಳಬೇಕಾದ ಅದಿರು ಕರಗಿಸುವಿಕೆಯ ಪ್ರಕ್ರಿಯೆಯಲ್ಲಿ ಇದನ್ನು ಬಳಸಲಾಗುತ್ತದೆ. ಊದುಕುಲುಮೆಯೊಂದರಲ್ಲಿ, ಕುಲುಮೆಯ ಮೇಲ್ತುದಿಯ ಮೂಲಕ ಇಂಧನ ಮತ್ತು ಅದಿರುಗಳನ್ನು ನಿರಂತರವಾಗಿ ಪೂರೈಸಲಾಗುತ್ತದೆ; ಅದೇ ವೇಳೆಗೆ, ಗಾಳಿಯನ್ನು (ಕೆಲವೊಮ್ಮೆ ಆಮ್ಲಜನಕದ ಸಂವರ್ಧನದೊಂದಿಗೆ) ಕೋಣೆಯ ತಳಭಾಗದೊಳಗೆ ಊದಲಾಗುತ್ತದೆ. ಇದರಿಂದಾಗಿ ಸಾಮಗ್ರಿಯು ಕೆಳಮುಖವಾಗಿ ಚಲಿಸಲು ಪ್ರಾರಂಭಿಸುತ್ತಿದ್ದಂತೆ ಕುಲುಮೆಯಾದ್ಯಂತ ರಾಸಾಯನಿಕ ಕ್ರಿಯೆಗಳು ನಡೆಯಲು ಸಾಧ್ಯವಾಗುತ್ತದೆ. ತಳಭಾಗದಿಂದ ಸಂಗ್ರಹಿಸಲ್ಪಟ್ಟ ಕರಗಿಸಿದ ಲೋಹ ಮತ್ತು ಗಸಿಯ ಅವಸ್ಥೆಗಳು, ಹಾಗೂ ಕುಲುಮೆಯ ಮೇಲ್ತುದಿಯಿಂದ ನಿರ್ಗಮಿಸುವ ಹೊಗೆ ಕೊಳವೆಯ ಅನಿಲಗಳು ಇವು ಸಾಮಾನ್ಯವಾಗಿ ಅಂತಿಮ ಉತ್ಪನ್ನಗಳಾಗಿರುತ್ತವೆ. ಊದುಕುಲುಮೆಗಳು ಗಾಳಿ ಕುಲುಮೆಗಳೊಂದಿಗೆ (ಪ್ರತಿಫಲನದ ಕುಲುಮೆಗಳಂಥವು) ತದ್ವಿರುದ್ಧವಾಗಿರಬೇಕಾಗುತ್ತದೆ; ಸಾಮಾನ್ಯವಾಗಿ ಚಿಮಣಿ ಹೊಗೆಯ ಕೊಳವೆಯೊಂದರಲ್ಲಿ ಬಿಸಿ ಅನಿಲಗಳ ಸಂವಹನವನ್ನು ನಡೆಸುವ ಮೂಲಕ, ಗಾಳಿ ಕುಲುಮೆಗಳಿಂದ ಸ್ವಾಭಾವಿಕವಾಗಿ ಹೀರಿತೆಗೆಯಲಾಗುತ್ತಿತ್ತು. ಈ ವಿಸ್ತೃತ ಅರ್ಥ ನಿರೂಪಣೆಯ ಅನುಸಾರ, ಕಬ್ಬಿಣಕ್ಕೆ ಸಂಬಂಧಿಸಿದ ಸಲಾಕಿ ಕುಲುಮೆಗಳು, ತವರಕ್ಕೆ ಸಂಬಂಧಿಸಿದ ಊದುವ ಮನೆಗಳು, ಮತ್ತು ಸೀಸಕ್ಕೆ ಸಂಬಂಧಿಸಿದ ಅದಿರು ಕರಗಿಸುವ ಗಿರಣಿಗಳನ್ನು ಊದುಕುಲುಮೆಗಳೆಂದು ವರ್ಗೀಕರಿಸಬೇಕಾಗುತ್ತದೆ. ಆದಾಗ್ಯೂ, ವಾಣಿಜ್ಯೋದ್ದೇಶದ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆಯಲ್ಲಿ ಬಳಸಲಾಗುವ ಒಂದು ಮಧ್ಯವರ್ತಿ ಸಾಮಗ್ರಿಯಾದ ಪೆಡಸು ಕಬ್ಬಿಣವನ್ನು ಉತ್ಪಾದಿಸಲು ಕಬ್ಬಿಣ ಅದಿರನ್ನು ಅದಿರು ಕರಗಿಸುವಿಕೆಯ ಪ್ರಕ್ರಿಯೆಗೆ ಒಳಪಡಿಸುವ ರಚನಾ-ವ್ಯವಸ್ಥೆಗಳಿಗೆ ಈ ಶಬ್ದವನ್ನು ಸಾಮಾನ್ಯವಾಗಿ ಸೀಮಿತಗೊಳಿಸಲಾಗಿದೆ.

ಇತಿಹಾಸ

[ಬದಲಾಯಿಸಿ]

ಚೀನಾದಲ್ಲಿ ಸುಮಾರು ೫ನೇ ಶತಮಾನದ BCಯ ಕಾಲದಿಂದಲೂ, ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಮಧ್ಯಯುಗಗಳ ಉಚ್ಛ್ರಾಯ ಕಾಲದಿಂದಲೂ ಊದುಕುಲುಮೆಗಳು ಅಸ್ತಿತ್ವದಲ್ಲಿದ್ದವು. ೧೫ನೇ ಶತಮಾನದ ಅಂತ್ಯಭಾಗದಲ್ಲಿ ವ್ಯಾಲೋನಿಯಾದಲ್ಲಿನ (ಬೆಲ್ಜಿಯಂ) ನಮುರ್‌ ಸುತ್ತಮುತ್ತಲ ಪ್ರದೇಶದಿಂದ ಅವು ಹರಡಿದವು, ೧೪೯೧ರಲ್ಲಿ ಇಂಗ್ಲೆಂಡ್‌ಗೆ ಪರಿಚಯಿಸಲ್ಪಟ್ಟವು. ಇವುಗಳಲ್ಲಿ ಸ್ಥಿರಸ್ವರೂಪವಾಗಿ ಇದ್ದಿಲನ್ನು ಇಂಧನವಾಗಿ ಬಳಸಲಾಗುತ್ತಿತ್ತು. ೧೭೦೯ರಲ್ಲಿ ಇದ್ದಿಲಿಗೆ ಬದಲಿಯಾಗಿ ಕರಿಕು ಕಲ್ಲಿದ್ದಲನ್ನು ಯಶಸ್ವಿಯಾಗಿ ಬಳಸಿದ ಕೀರ್ತಿಯು ಅಬ್ರಹಾಂ ಡರ್ಬಿ ಎಂಬಾತನಿಗೆ ವ್ಯಾಪಕವಾಗಿ ಸಲ್ಲುತ್ತದೆ. ಗಾಳಿಯ ಹರಿವನ್ನು ಪೂರ್ವಭಾವಿಯಾಗಿ ಕಾಯಿಸುವ ಪರಿಪಾಠವನ್ನು ಅನುಸರಿಸುವುದರಿಂದಾಗಿ ಈ ಪ್ರಕ್ರಿಯೆಯ ಪರಿಣಾಮಕಾರಿತ್ವವು ಮತ್ತಷ್ಟು ವರ್ಧಿಸಲ್ಪಟ್ಟಿತು; ಈ ಪರಿಪಾಠಕ್ಕೆ ಜೇಮ್ಸ್‌ ಬ್ಯೂಮಾಂಟ್‌ ನೀಲ್‌ಸನ್‌ ಎಂಬಾತನಿಗೆ ೧೮೨೮ರಲ್ಲಿ ಏಕಸ್ವಾಮ್ಯದ ಹಕ್ಕುಪತ್ರವು ದೊರೆಯಿತೆಂಬುದು ಗಮನಾರ್ಹ ಸಂಗತಿ. ಊದುಕುಲುಮೆಯು ತನ್ನದೇ ಆದ ವಿಶಿಷ್ಟ ಕಾರಣಗಳಿಂದಾಗಿ ಸಲಾಕಿ ಕುಲುಮೆಯಿಂದ ಪ್ರತ್ಯೇಕಿಸಲ್ಪಟ್ಟಿದೆ. ಕುಲುಮೆಯಿಂದ ಸಂಗ್ರಹಿಸಬಹುದಾದ ಕರಗಿಸಿದ ಲೋಹವನ್ನು ಉತ್ಪಾದಿಸುವುದು ಊದುಕುಲುಮೆಯ ಉದ್ದೇಶವಾದರೆ, ಕಬ್ಬಿಣದಲ್ಲಿ ಇಂಗಾಲವು ಕರಗುವಿಕೆಗೆ ಒಳಗಾಗದಿರುವಂತೆ ಅದರ ದ್ರವಿಸುವಿಕೆಯನ್ನು ತಪ್ಪಿಸುವುದು ಸಲಾಕಿ ಕುಲುಮೆಯಲ್ಲಿನ ಆಶಯವಾಗಿರುತ್ತದೆ. ತಿದಿಯನ್ನು ಬಳಸಿಕೊಂಡು ಸಲಾಕಿ ಕುಲುಮೆಗಳನ್ನೂ ಸಹ ಕೃತಕವಾಗಿ ಊದಲಾಗುತ್ತಿತ್ತು, ಆದರೆ ಕಬ್ಬಿಣವು (ಅಥವಾ ಮತ್ತೊಂದು ಲೋಹವು) ಅದಿರಿನಿಂದ ಸಂಸ್ಕರಿಸಲ್ಪಡುವ ಕುಲುಮೆಗಳಿಗಾಗಿ "ಊದುಕುಲುಮೆ" ಎಂಬ ಶಬ್ದವು ಸಾಮಾನ್ಯವಾಗಿ ಮೀಸಲಾಗಿದೆ.

1313 ADಯ ಚೀನಾದ ಯುವಾನ್‌ ರಾಜವಂಶದ ಆಳ್ವಿಕೆಯ ಅವಧಿಯಲ್ಲಿ, ನೊಂಗ್‌ ಷುವಿಗೆ ಸೇರಿದ ಜಲಚಕ್ರಗಳಿಂದ ನಿರ್ವಹಿಸಲ್ಪಡುತ್ತಿದ್ದ ಕುಲುಮೆ ತಿದಿಯ ಒಂದು ಸಚಿತ್ರ ವಿವರಣೆ; ರಚನೆ ವಾಂಗ್‌ ಝೆನ್‌.

ಉಪಲಬ್ಧವಿರುವ ಅತಿ ಹಳೆಯ ಊದುಕುಲುಮೆಗಳು ೧ನೇ ಶತಮಾನದ BCಯಲ್ಲಿ, ಚೀನಾದ ಹಾನ್‌ ರಾಜವಂಶದ ಅವಧಿಯಲ್ಲಿ ನಿರ್ಮಿಸಲ್ಪಟ್ಟವು. ಆದಾಗ್ಯೂ, ೫ನೇ ಶತಮಾನದ BCಯ[] ವೇಳೆಗೆ ಬೀಡು ಕಬ್ಬಿಣದ ಕೃಷಿ ಸಲಕರಣೆಗಳು ಮತ್ತು ಸಾಧನಗಳು ವ್ಯಾಪಕವಾಗಿ ಹರಡಿದ್ದರೆ, ೩ನೇ ಶತಮಾನದ BC ಅವಧಿಯಲ್ಲಿದ್ದ ಕಬ್ಬಿಣ ಅದಿರು ಕರಗಿಸುವವರು ಇನ್ನೂರು ಜನಕ್ಕೂ ಹೆಚ್ಚಿನ ಜನರ ಒಂದು ಸಾಧಾರಣ ಕಾರ್ಯಪಡೆ ನೇಮಿಸಿಕೊಂಡಿದ್ದರು.[] ಈ ಆರಂಭಿಕ ಕುಲುಮೆಗಳು ಜೇಡಿಮಣ್ಣಿನ ಗೋಡೆಗಳನ್ನು ಹೊಂದಿದ್ದವು ಮತ್ತು ರಂಜಕವನ್ನು ಒಳಗೊಂಡಿರುವ ಖನಿಜಗಳನ್ನು ಒಂದು ಸ್ರಾವಕವಾಗಿ ಬಳಸಿದ್ದವು.[] ಈ ಅವಧಿಯಲ್ಲಿ ಚೀನಿಯರ ಊದುಕುಲುಮೆಯ ಪರಿಣಾಮಕಾರಿತ್ವವು ಡು ಷಿ (ಸುಮಾರು ೩೧ AD)) ಎಂಬ ಎಂಜಿನಿಯರ್‌ನಿಂದ ವರ್ಧಿಸಲ್ಪಟ್ಟಿತು. ಬೀಡು ಕಬ್ಬಿಣಕ್ಕೆ ಆಕಾರ ಕೊಡುವ ನಿಟ್ಟಿನಲ್ಲಿ ಈತ ಆಡುಬೆಣೆ-ತಿದಿಗೆ ಜಲಚಕ್ರಗಳ ಶಕ್ತಿಯನ್ನು ಪ್ರಯೋಗಿಸಿದ.[]

ಪೆಡಸು ಕಬ್ಬಿಣದಿಂದ ಮೆತು ಕಬ್ಬಿಣವನ್ನು ತಯಾರಿಸುವುದಕ್ಕೆ ಸಂಬಂಧಿಸಿದ ಪರಿಷ್ಕರಣಾ ಪ್ರಕ್ರಿಯೆಯನ್ನು ಎಡಭಾಗದ ಚಿತ್ರವು ನಿರೂಪಿಸುತ್ತದೆ. ಪೆಡಸು ಕಬ್ಬಿಣವನ್ನು ಉತ್ಪಾದಿಸುವುದಕ್ಕಾಗಿ ಊದುಕುಲುಮೆಯಲ್ಲಿ ಕಬ್ಬಿಣ ಅದಿರನ್ನು ಕರಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೆಲಸಗಾರರನ್ನು ಬಲಭಾಗದ ಚಿತ್ರವು ತೋರಿಸುತ್ತದೆ; ಟಿಯಾನ್‌ಗಾಂಗ್‌ ಕೈವು ಎನ್‌ಸೈಕ್ಲೋಪೀಡಿಯಾದಿಂದ ಆಯ್ದುಕೊಂಡದ್ದು, 1637.

ಚೀನಿಯರು ಕಬ್ಬಿಣದ ಉತ್ಪಾದನೆಯ ತಮ್ಮ ಮೊದಲ ವಿಧಾನವಾಗಿ ಬೀಡು ಕಬ್ಬಿಣವನ್ನು ಮತ್ತು ಊದುಕುಲುಮೆಯನ್ನು ಅಭಿವೃದ್ಧಿಪಡಿಸಿದರು ಎಂಬುದಾಗಿ ಬಹಳ ಹಿಂದೆ ಭಾವಿಸಲಾಗಿತ್ತು. ಆದರೆ ಡೊನಾಲ್ಡ್‌ ವ್ಯಾಗ್ನರ್‌‌ (ಮೇಲೆ ಉಲ್ಲೇಖಿಸಲ್ಪಟ್ಟ ಅಧ್ಯಯನದ ಲೇಖಕ) ಎಂಬಾತ ತೀರಾ ಇತ್ತೀಚಿಗೆ ಒಂದು ವಿದ್ವತ್‌ಪೂರ್ಣ ಲೇಖನವನ್ನು[] ಪ್ರಕಟಿಸಿದ್ದು, ಹಿಂದಿನ ಕೃತಿಯಲ್ಲಿನ ಕೆಲವೊಂದು ಹೇಳಿಕೆಗಳನ್ನು ಅದು ರದ್ದುಗೊಳಿಸುತ್ತದೆ; ಹೊಸದಾಗಿ ಸಾದರಪಡಿಸಲಾದ ವಿದ್ವತ್‌ಪೂರ್ಣ ಲೇಖನವು ಬೀಡು ಕಬ್ಬಿಣದ ಮೊದಲ ಪ್ರಾಕ್ತನ ಕೃತಿಗಳ ಕಾಲವು ೪ನೇ ಮತ್ತು ೫ನೇ ಶತಮಾನದ BCಗೆ ಸೇರುತ್ತದೆ ಎಂದು ಈಗಲೂ ಪ್ರತಿಪಾದಿಸುತ್ತದೆಯಾದರೂ, ಹಿಂದಿನ ಸಲಾಕಿ ಕುಲುಮೆಯ ಬಳಕೆಯನ್ನು ಸಮರ್ಥಿಸುವ ಪುರಾವೆಯನ್ನೂ ಒದಗಿಸುತ್ತದೆ; ಲಾಂಗ್‌ಶಾನ್‌ ಸಂಸ್ಕೃತಿಯ ಅಂತ್ಯಭಾಗದ (೨೦೦೦ BC) ಚೀನಿಯರ ಕಂಚಿನ ಯುಗದ ಆರಂಭದ ಅವಧಿಯಲ್ಲಿ ಇವು ಪಾಶ್ಚಾತ್ಯ ಪ್ರಪಂಚದಿಂದ ವಲಸೆಹೋದವು ಎಂಬುದು ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ. ಕಂಚನ್ನು ಕರಗಿಸಲು ಬಳಸಲಾದ ಕುಲುಮೆಗಳಿಂದ ಆರಂಭಿಕ ಊದುಕುಲುಮೆ ಮತ್ತು ಬೀಡು ಕಬ್ಬಿಣದ ಉತ್ಪಾದನೆಯು ವಿಕಸನಗೊಂಡಿತು ಎಂದು ಅವನು ಸೂಚಿಸುತ್ತಾನೆ. ಆದರೂ, ಏಕೀಕೃತ ಚೀನಾವನ್ನು ಕಿನ್‌ ಸಂಸ್ಥಾನವು ಹೊಂದುವ ವೇಳೆಗೆ (೨೨೧ BC), ಕಬ್ಬಿಣವು ನಿಶ್ಚಿತವಾಗಿಯೂ ಸೇನಾ ಯಶಸ್ಸಿಗೆ ಅತ್ಯಾವಶ್ಯಕವಾಗಿತ್ತು ಎನ್ನಬಹುದು. ೧೧ನೇ ಶತಮಾನದ ವೇಳೆಗೆ, ಸಾಂಗ್‌ ರಾಜವಂಶದ ಅವಧಿಯ ಚೀನಿಯರ ಕಬ್ಬಿಣ ಕೈಗಾರಿಕೆಯು, ಕಬ್ಬಿಣ ಮತ್ತು ಉಕ್ಕಿಗೆ ಆಕಾರ ಕೊಡುವಿಕೆಯ ಪ್ರಕ್ರಿಯೆಯಲ್ಲಿ ಇದ್ದಿಲಿನಿಂದ ಬಿಟ್ಯುಮನ್‌ಯುಕ್ತ ಕಲ್ಲಿದ್ದಲಿಗೆ ಸಂಪನ್ಮೂಲಗಳ ಒಂದು ಗಮನಾರ್ಹ ಬದಲಾವಣೆಯನ್ನು ಮಾಡಿಕೊಂಡಿತ್ತು; ಇದರಿಂದಾಗಿ ಸಾವಿರಾರು ಎಕರೆಗಳಷ್ಟು ಕಾಡುಪ್ರದೇಶವು ಕಡಿದುಹಾಕುವಿಕೆಗೆ ಒಳಗಾಗದೇ ಉಳಿದುಕೊಳ್ಳುವಂತಾಯಿತು. ಇದು ೪ನೇ ಶತಮಾನದ ADಯಷ್ಟು ಮುಂಚಿತವಾಗಿ ಸಂಭವಿಸಿರಬಹುದು.[][]

ಮತ್ತೊಂದು ಸ್ಥಳದಲ್ಲಿ ಹೊರಹೊಮ್ಮಿದ ಪ್ರಾಚೀನ ಪ್ರಪಂಚ

[ಬದಲಾಯಿಸಿ]

ಚೀನಾವನ್ನು ಹೊರತುಪಡಿಸಿ ಊದುಕುಲುಮೆಯನ್ನು (ಶುದ್ಧಾಂಗವಾಗಿ) ಬಳಸಿರುವುದರ ಪುರಾವೆಯು ಬೇರೆಲ್ಲೂ ಸಿಕ್ಕಿಲ್ಲ. ಅದರ ಬದಲಿಗೆ, ಸಲಾಕಿ ಕುಲುಮೆಗಳಲ್ಲಿ ನೇರ ಅಪಕರ್ಷಣದ ವಿಧಾನದಿಂದ ಕಬ್ಬಿಣವು ತಯಾರಿಸಲ್ಪಟ್ಟಿತ್ತು. ಇವುಗಳು ಊದುಕುಲುಮೆಗಳೆಂಬಂತೆ ಸರಿಯಾಗಿ ವಿವರಿಸಲ್ಪಟ್ಟಿಲ್ಲವಾದರೂ, ಅವುಗಳ ಕುರಿತು ಉಲ್ಲೇಖಿಸುವಾಗ ಈ ಶಬ್ದವು ಪ್ರಾಸಂಗಿಕವಾಗಿ ತಪ್ಪಾಗಿ ಬಳಸಲ್ಪಟ್ಟಿದೆ. ಯುರೋಪಿಯನ್ನರು‌, ಗ್ರೀಕರು, ಕೆಲ್ಟ್‌ ಜನಗಳು, ರೋಮನ್ನರು, ಮತ್ತು ಕಾರ್ತಜ್‌ ನಗರದವರು ಎಲ್ಲರೂ ಈ ಪ್ರಕ್ರಿಯೆಯನ್ನು ಬಳಸಿದರು. ಫ್ರಾನ್ಸ್‌ನಲ್ಲಿ ಕಂಡುಬಂದಿರುವ ಹಲವಾರು ಉದಾಹರಣೆಗಳು, ಮತ್ತು ಟ್ಯುನಿಷಿಯಾದಲ್ಲಿ ಕಂಡುಬಂದಿರುವ ಸಾಮಗ್ರಿಗಳು ಸೂಚಿಸುವ ಪ್ರಕಾರ, ಅವು ಹೆಲಿನಿಸ್ಟಿಕ್‌ ಅವಧಿಯಲ್ಲಿ ಅಲ್ಲಿ ಮತ್ತು ಆಂಟಿಯೋಕ್‌ನಲ್ಲಿ ಬಳಸಲ್ಪಟ್ಟಿದ್ದವು ಎಂಬುದು ತಿಳಿದುಬರುತ್ತದೆ. ಅಂಧಕಾರ ಯುಗದಲ್ಲಿನ ಇದರ ಬಳಕೆಯ ಕುರಿತು ಅಷ್ಟಾಗಿ ತಿಳಿದಿಲ್ಲವಾದರೂ, ಈ ಪ್ರಕ್ರಿಯೆಯ ಬಳಕೆಯು ಪ್ರಾಯಶಃ ಮುಂದುವರಿಯಿತು.[ಸೂಕ್ತ ಉಲ್ಲೇಖನ ಬೇಕು] ಅದೇ ರೀತಿಯಲ್ಲಿ, ಪಶ್ಚಿಮ ಆಫ್ರಿಕಾದಲ್ಲಿ ಸಲಾಕಿ ಕುಲುಮೆಯಂಥ ಬಗೆಯ ಕುಲುಮೆಗಳಲ್ಲಿನ ಅದಿರು ಕರಗಿಸುವಿಕೆ ಹಾಗೂ ಸಲಕರಣೆಗಳಿಗೆ ಆಕಾರ ಕೊಡುವಿಕೆಯಂಥ ಚಟುವಟಿಕೆಗಳು ೫೦೦ BCಯ ವೇಳೆಗೆ ಆಫ್ರಿಕಾದಲ್ಲಿ ನೋಕ್‌ ಸಂಸ್ಕೃತಿಯಲ್ಲಿದ್ದುದು ಕಂಡುಬರುತ್ತದೆ.[] ಪೂರ್ವ ಆಫ್ರಿಕಾದಲ್ಲಿನ ಸಲಾಕಿ ಕುಲುಮೆಯಂಥ ಬಗೆಯ ಕುಲುಮೆಗಳ ಅತ್ಯಂತ ಆರಂಭಿಕ ದಾಖಲೆಗಳು, ನ್ಯೂಬಿಯಾ ಮತ್ತು ಆಕ್ಸಮ್‌‌ಗಳಲ್ಲಿ ಕಂಡುಬಂದಿರುವ ಅದಿರು ಕರಗಿಸಿ ಲೋಹತೆಗೆದ ಕಬ್ಬಿಣ ಮತ್ತು ಇಂಗಾಲದ ಆವಿಷ್ಕಾರಗಳಾಗಿದ್ದು, ಅವು ೧,೦೦೦-೫೦೦ BCE ನಡುವಿನ ಅವಧಿಯಷ್ಟು ಹಿಂದಕ್ಕೆ ಕಾಲವನ್ನು ಸೂಚಿಸುತ್ತವೆ.[][] ಅದರಲ್ಲೂ ನಿರ್ದಿಷ್ಟವಾಗಿ ಮೆರೋ ಎಂಬಲ್ಲಿ ಪ್ರಾಚೀನ ಊದುಕುಲುಮೆಗಳಿದ್ದವು ಎಂಬುದು ತಿಳಿದುಬಂದಿದ್ದು, ಇವು ನ್ಯೂಬಿಯನ್ನರು/ಕುಶೈಟ್‌ಗಳಿಗಾಗಿ ಲೋಹದ ಸಲಕರಣೆಗಳನ್ನು ಉತ್ಪಾದಿಸಿದವು ಮತ್ತು ತಮ್ಮ ಅರ್ಥವ್ಯವಸ್ಥೆಗಾಗಿ ಹೆಚ್ಚುವರಿಯಾಗಿ ಅವು ಉತ್ಪಾದಿಸಿದವು.

ಮಧ್ಯಯುಗದ ಯುರೋಪ್

[ಬದಲಾಯಿಸಿ]
ಡ್ಯೂಷಸ್‌ ವಸ್ತುಸಂಗ್ರಹಾಲಯದಲ್ಲಿನ ಒಂದು ಚಿಕಣಿ ಪ್ರತಿಕೃತಿಯಲ್ಲಿ ಮೂಡಿಸಲಾಗಿರುವಂತೆ, ಜರ್ಮನಿಯ ಮೊದಲ ಊದುಕುಲುಮೆ

ಕ್ಯಾಟಲನ್‌ ಕುಲುಮೆ ಎಂದು ಹೆಸರಿಸಲ್ಪಟ್ಟಿದ್ದ ಒಂದು ಸುಧಾರಿತ ಸಲಾಕಿ ಕುಲುಮೆಯು ೮ನೇ ಶತಮಾನದ ಅವಧಿಯಲ್ಲಿ ಸ್ಪೇನ್‌ನ ಕ್ಯಾಟಲೋನಿಯಾದಲ್ಲಿ ಆವಿಷ್ಕರಿಸಲ್ಪಟ್ಟಿತು. ಇದರಲ್ಲಿ ಸ್ವಾಭಾವಿಕ ಗಾಳಿಯ ಹರಿವನ್ನು ಬಳಸುವುದಕ್ಕೆ ಬದಲಿಗೆ, ತಿದಿಯಿಂದ ಗಾಳಿಯನ್ನು ಪಂಪ್ ಮಾಡಲಾಗುತ್ತಿತ್ತು; ಇದರಿಂದ ಉತ್ತಮ ಗುಣಮಟ್ಟದ ಕಬ್ಬಿಣವು ದೊರೆಯುತ್ತಿತ್ತು ಹಾಗೂ ಉತ್ಪಾದನಾ ಸಾಮರ್ಥ್ಯದಲ್ಲಿಯೂ ಹೆಚ್ಚಳ ಕಂಡುಬರುತ್ತಿತ್ತು. ತಿದಿಯನ್ನು ಬಳಸಿಕೊಂಡು ಗಾಳಿಯ ಹರಿವನ್ನು ಪಂಪ್‌ಮಾಡುವಿಕೆಯು ಕುಲುಮೆಯೊಳಗೆ ನುಗ್ಗಿಸಿದ ತಂಗಾಳಿ (ಅಥವಾ ಕುಲುಮೆಯೊಳಗೆ ನುಗ್ಗಿಸಿದ ಕಾಯಿಸದ ಗಾಳಿ) ಎಂದು ಕರೆಯಲ್ಪಡುತ್ತದೆ, ಮತ್ತು ಇದು ಸಲಾಕಿ ಕುಲುಮೆಯ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ ಹಾಗೂ ಇಳುವರಿಯನ್ನು ಸುಧಾರಿಸುತ್ತದೆ. ಕ್ಯಾಟಲನ್‌ ಕುಲುಮೆಗಳನ್ನು ಸ್ವಾಭಾವಿಕ ಗಾಳಿಯ ಹರಿವಿನ ಸಲಾಕಿ ಕುಲುಮೆಗಳಿಗಿಂತಲೂ ದೊಡ್ಡದಾಗಿ ಕಟ್ಟಬಹುದು. ಆಧುನಿಕ ಪ್ರಾಯೋಗಿಕ ಪ್ರಾಕ್ತನಶಾಸ್ತ್ರ ಮತ್ತು ಇತಿಹಾಸದ ಮರುನಿರ್ವಹಣೆಯು ತೋರಿಸಿರುವ ಪ್ರಕಾರ, ಕ್ಯಾಟಲನ್‌ ಕುಲುಮೆಯಿಂದ ನಿಜವಾದ ಊದುಕುಲುಮೆಯವರೆಗೆ ಕೇವಲ ಒಂದು ಅತ್ಯಂತ ಕಿರು-ಹಂತವಿದ್ದು, ಅಲ್ಲಿ ದ್ರವ ಅವಸ್ಥೆಯಲ್ಲಿನ ಪೆಡಸು ಕಬ್ಬಿಣವಾಗಿ ಕಬ್ಬಿಣವನ್ನು ಪಡೆಯಲಾಗುತ್ತದೆ. ಸಾಮಾನ್ಯವಾಗಿ, ದ್ರವ ಅವಸ್ಥೆಯಲ್ಲಿ ಕಬ್ಬಿಣವನ್ನು ಪಡೆಯುವಿಕೆಯು ವಾಸ್ತವವಾಗಿ ಅನಪೇಕ್ಷಿತವಾಗಿರುತ್ತದೆ ಮತ್ತು ಇಲ್ಲಿ ಕಬ್ಬಿಣದ ದ್ರವೀಭವನ ಬಿಂದುವಿಗಿಂತ ಕೆಳಗೆ ತಾಪಮಾನವನ್ನು ಉದ್ದೇಶಪೂರ್ವಕವಾಗಿ ಇರಿಸಲಾಗುತ್ತದೆ; ಘನವಾಗಿರುವ ನಾದಿದ ಕಬ್ಬಿಣವನ್ನು ಯಾಂತ್ರಿಕವಾಗಿ ತೆಗೆದುಹಾಕುವಿಕೆಯು ಪ್ರಯಾಸಕರವಾಗಿರುವುದರಿಂದ ಮತ್ತು ನಿರಂತರ ಪ್ರಕ್ರಿಯೆಯಾಗುವ ಬದಲಿಗೆ ಇದು ತಂಡ ತಂಡಗಳಲ್ಲಿ ಆಗುವ ಪ್ರಕ್ರಿಯೆಯೆನಿಸಿಕೊಳ್ಳುವುದರಿಂದ, ಇದು ಬಹುತೇಕವಾಗಿ ಅಪ್ಪಟ ಕಬ್ಬಿಣವಾಗಿರುತ್ತದೆ ಹಾಗೂ ತತ್‌ಕ್ಷಣದಲ್ಲಿಯೇ ಅದನ್ನು ಸಂಬಂಧಿತ ಕೆಲಸಕ್ಕೆ ಒಳಪಡಿಸಬಹುದಾಗಿರುತ್ತದೆ. ಮತ್ತೊಂದೆಡೆ, ಪೆಡಸು ಕಬ್ಬಿಣವು ಇಂಗಾಲ ಮತ್ತು ಕಬ್ಬಿಣದ ಸುದ್ರವಣ ಮಿಶ್ರಣವಾಗಿರುವುದರಿಂದ, ಉಕ್ಕು ಅಥವಾ ಮೆತು ಕಬ್ಬಿಣವನ್ನು ಉತ್ಪಾದಿಸಬೇಕೆಂದರೆ ಇಂಗಾಲದ ನಿರ್ಮೂಲನವಾಗಬೇಕಿರುವುದು ಅಗತ್ಯವಾಗಿದ್ದು, ಇದು ಮಧ್ಯಯುಗಗಳಲ್ಲಿ ಅತ್ಯಂತ ಪ್ರಯಾಸಕರವಾಗಿತ್ತು. ಪಾಶ್ಚಾತ್ಯ ಪ್ರಪಂಚದಲ್ಲಿನ, ಅತಿ ಹಳೆಯದೆಂದು ತಿಳಿದುಬಂದಿರುವ ಊದುಕುಲುಮೆಗಳು ಸ್ವಿಜರ್‌ಲೆಂಡ್‌‌ನಲ್ಲಿನ ಡರ್ಸ್ಟೆಲ್‌ ಎಂಬಲ್ಲಿ, ಜರ್ಮನಿಯಲ್ಲಿನ ಮಾರ್ಕಿಷೆ ಸೌವೆರ್‌ಲೆಂಡ್‌ ಎಂಬಲ್ಲಿ, ಮತ್ತು ಸ್ವೀಡನ್‌‌ನಲ್ಲಿನ ಲ್ಯಾಫೈಟನ್‌ ಎಂಬಲ್ಲಿ ನಿರ್ಮಿಸಲ್ಪಟ್ಟವು; ಲ್ಯಾಫೈಟನ್‌ ಸಂಕೀರ್ಣವು ೧೧೫೦ ಮತ್ತು ೧೩೫೦ರ ನಡುವೆ ಸಕ್ರಿಯವಾಗಿತ್ತು.[೧೦] ಸ್ವೀಡನ್ನಿನ ಜಾರ್ನ್‌ಬೊವಾಸ್‌ ಪ್ರಾಂತದಲ್ಲಿರುವ ನೊರಸ್ಕಾಗ್‌ ಎಂಬಲ್ಲಿಯೂ, ಇದಕ್ಕಿಂತ ಮುಂಚಿನ, ಅಂದರೆ ಪ್ರಾಯಶಃ ೧೧೦೦ರ ಅವಧಿಗೆ ಸೇರಿದ್ದ ಊದುಕುಲುಮೆಗಳ ಕುರುಹುಗಳು ಕಂಡುಬಂದಿವೆ.[೧೧] ಚೀನಿಯರ ಉದಾಹರಣೆಗಳಂತೆಯೇ, ಈ ಆರಂಭಿಕ ಊದುಕುಲುಮೆಗಳೂ ಇಂದು ಬಳಕೆಯಾಗುತ್ತಿರುವ ಊದುಕುಲುಮೆಗಳಿಗೆ ಹೋಲಿಸಿದಾಗ ಅತ್ಯಂತ ಪರಿಣಾಮಕಾರಿಯಲ್ಲದವಾಗಿದ್ದವು. ಲ್ಯಾಫೈಟನ್‌ ಸಂಕೀರ್ಣದಿಂದ ಪಡೆಯಲಾದ ಕಬ್ಬಿಣವನ್ನು ಆಸ್ಮಂಡ್‌‌‌ಗಳೆಂದು ಕರೆಯಲ್ಪಡುವ ಮೆತು ಕಬ್ಬಿಣದ ಗುಂಡುಗಳನ್ನು ಉತ್ಪಾದಿಸಲು ಬಳಸಲಾಗುತ್ತಿತ್ತು, ಮತ್ತು ಇವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಲಾಗುತ್ತಿತ್ತು - ಇದರ ಒಂದು ಸಂಭವನೀಯ ಉಲ್ಲೇಖವು ೧೨೦೩ಕ್ಕೆ ಸೇರಿದ ನೊವ್‌ಗೊರೊಡ್‌ ಜೊತೆಗಿನ ಒಡಂಬಡಿಕೆಯೊಂದರಲ್ಲಿ ಕಂಡುಬರುತ್ತದೆ ಮತ್ತು ೧೨೫೦ರ ದಶಕ ಹಾಗೂ ೧೩೨೦ರ ದಶಕಗಳಿಗೆ ಸೇರಿದ ಇಂಗ್ಲಿಷ್‌ ಸಂಪ್ರದಾಯಗಳ ದಾಖಲೆಗಳಲ್ಲಿ ಇದರ ಹಲವಾರು ನಿಶ್ಚಿತ ಉಲ್ಲೇಖಗಳು ಕಂಡುಬರುತ್ತವೆ. ೧೩ನೇ ಶತಮಾನದಿಂದ ೧೫ನೇ ಶತಮಾನದವರೆಗಿನ ಅವಧಿಯ ಇತರ ಕುಲುಮೆಗಳು ವೆಸ್ಟ್‌ಫಾಲಿಯಾದಲ್ಲಿ ಗುರುತಿಸಲ್ಪಟ್ಟಿವೆ.[೧೨] ಸಿಸ್ಟರ್‌ಷಿಯನ್‌ ಪಂಥಿ ಸಂನ್ಯಾಸಿಗಳ ಸರ್ವಸದಸ್ಯರ ಸಭೆಯ ಒಂದು ಫಲವಾಗಿ ನಿಶ್ಚಿತ ತಾಂತ್ರಿಕ ಪ್ರಗತಿಗಳ ಜ್ಞಾನವು ರವಾನಿಸಲ್ಪಟ್ಟಿತು. ಸಿಸ್ಟರ್‌ಷಿಯನ್‌ ಪಂಥಿಗಳು ಪರಿಣತ ಲೋಹವಿಜ್ಞಾನಿಗಳಾಗಿದ್ದರು ಎಂಬುದು ತಿಳಿದ ವಿಷಯವೇ ಆಗಿರುವುದರಿಂದ, ಈ ಜ್ಞಾನದ ವ್ಯಾಪ್ತಿಯಲ್ಲಿ ಊದುಕುಲುಮೆಯೂ ಸೇರಿತ್ತು ಎನಿಸುತ್ತದೆ.[೧೩] ಜೀನ್‌ ಗಿಂಪೆಲ್ ಪ್ರಕಾರ, ಉನ್ನತ ಮಟ್ಟದಲ್ಲಿದ್ದ ಅವರ ಕೈಗಾರಿಕಾ ತಂತ್ರಜ್ಞಾನವು ಹೊಸ ಕೌಶಲಗಳ ಪ್ರಸರಣವನ್ನು ಅನುವುಗೊಳಿಸಿತು: "ಪ್ರತಿಯೊಂದು ಸಂನ್ಯಾಸಿ ಮಂದಿರವೂ ಒಂದು ಮಾದರಿ ಕಾರ್ಖಾನೆಯನ್ನು ಹೊಂದಿದ್ದು, ಇದು ಅನೇಕ ವೇಳೆ ಚರ್ಚಿನಷ್ಟೇ ದೊಡ್ಡದಿರುತ್ತಿತ್ತು ಹಾಗೂ ಕೆಲವೇ ಅಡಿಗಳಷ್ಟು ದೂರದಲ್ಲಿರುತ್ತಿತ್ತು; ಅದರ ತಾಣದಲ್ಲಿ ನೆಲೆಗೊಂಡಿದ್ದ ನಾನಾಬಗೆಯ ಉದ್ಯಮಗಳ ಯಂತ್ರೋಪಕರಣಗಳಿಗೆ ಜಲಶಕ್ತಿಯು ಚಾಲನಾಬಲವನ್ನು ನೀಡುತ್ತಿತ್ತು." ಕಬ್ಬಿಣದ ಅದಿರಿನ ನಿಕ್ಷೇಪಗಳನ್ನು ಅನೇಕವೇಳೆ ಸಂನ್ಯಾಸಿಗಳಿಗೆ ದಾನವಾಗಿ ನೀಡಲಾಗುತ್ತಿತ್ತು ಮತ್ತು ಕಬ್ಬಿಣವನ್ನು ಹೊರತೆಗೆಯಲೆಂದು ಅವುಗಳ ಜೊತೆಗೆ ಲೋಹದ ಕುಲುಮೆಗಳನ್ನೂ ನೀಡಲಾಗುತ್ತಿತ್ತು; ಮತ್ತು ಹೆಚ್ಚುವರಿ ಉತ್ಪಾದನೆಯಾದರೆ ಅದನ್ನು ಆದಷ್ಟು ಬೇಗ ಮಾರಾಟ ಮಾಡಲಾಗುತ್ತಿತ್ತು. ೧೩ನೇ ಶತಮಾನದ ಮಧ್ಯಭಾಗದಿಂದ ೧೭ನೇ ಶತಮಾನದವರೆಗೆ[೧೪], ಫ್ರಾನ್ಸ್‌‌ನ ಷಾಂಪೇನ್‌ ಎಂಬಲ್ಲಿ ಸಿಸ್ಟರ್‌ಷಿಯನ್‌ ಪಂಥಿಗಳು ಕಬ್ಬಿಣದ ಅಗ್ರಗಣ್ಯ ಉತ್ಪಾದಕರೆನಿಸಿಕೊಂಡಿದ್ದರು; ತಮ್ಮ ಕುಲುಮೆಗಳಿಂದ ದೊರೆಯುತ್ತಿದ್ದ ಫಾಸ್ಫೇಟ್‌-ಸಮೃದ್ಧ ಗಸಿಯನ್ನು ಅವರು ಒಂದು ಕೃಷಿ ಗೊಬ್ಬರವಾಗಿಯೂ ಬಳಸುತ್ತಿದ್ದರು.[೧೫] ಸಿಸ್ಟರ್‌ಷಿಯನ್‌ ಪಂಥಿ ತಂತ್ರಜ್ಞಾನದ ವ್ಯಾಪ್ತಿಯನ್ನು ಪ್ರಾಕ್ತನ ತತ್ತ್ವಜ್ಞರು ಇನ್ನೂ ಆವಿಷ್ಕರಿಸುತ್ತಿದ್ದಾರೆ.[೧೬] ರೀವೌಲ್ಕ್ಸ್‌ ಅಬೆಯ ಒಂದು ಹೊರಶಾಖೆಯಾಗಿರುವ, ಮತ್ತು ಬ್ರಿಟನ್‌‌ನಲ್ಲಿ ಇದುವರೆಗೆ ಗುರುತಿಸಲ್ಪಟ್ಟಿರುವ ಮಧ್ಯಯುಗದ ಏಕೈಕ ಊದುಕುಲುಮೆಯಾದ ಲಸ್ಕಿಲ್‌ ಎಂಬಲ್ಲಿ ಉತ್ಪಾದಿಸಲ್ಪಟ್ಟ ಗಸಿಯಲ್ಲಿನ ಕಬ್ಬಿಣದ ಅಂಶವು ಕಡಿಮೆ ಮಟ್ಟದಲ್ಲಿತ್ತು.[೧೭] ಆ ಕಾಲದ ಇತರ ಕುಲುಮೆಗಳಿಂದ ಪಡೆಯಲಾದ ಗಸಿಯು ಒಂದು ಗಣನೀಯ ಪ್ರಮಾಣದಲ್ಲಿ ಕಬ್ಬಿಣದ ಸಾಂದ್ರತೆಯನ್ನು ಹೊಂದಿದ್ದರೆ, ಲಸ್ಕಿಲ್‌ ಘಟಕವು ಬೀಡು ಕಬ್ಬಿಣವನ್ನು ಸಾಕಷ್ಟು ಪರಿಣಾಮಕಾರಿಯಾಗಿ ಉತ್ಪಾದಿಸಿತ್ತು ಎಂದು ಭಾವಿಸಲಾಗಿದೆ.[೧೭][೧೮][೧೯] ಇದರ ಕಾಲವು ಇನ್ನೂ ಸ್ಪಷ್ಟವಾಗಿಲ್ಲವಾದರೂ, ೧೫೩೦ರ ದಶಕದ ಅಂತ್ಯಭಾಗದಲ್ಲಿ ಹೆನ್ರಿ VIII ಕೈಗೊಂಡ ಸಂನ್ಯಾಸಿ ಮಂದಿರಗಳ ವಿಘಟನೆಯಾಗುವವರೆಗೆ ಪ್ರಾಯಶಃ ಇದು ಉಳಿದುಕೊಳ್ಳಲಿಲ್ಲ; ೧೫೪೧ರಲ್ಲಿ ರುಟ್ಲೆಂಡ್‌ನ ಅರ್ಲ್‌ ನಾದಿದ ಕಬ್ಬಿಣಗಳಿಗೆ ಉಲ್ಲೇಖಿಸುವುದರೊಂದಿಗೆ "ಸ್ಮೈತ್‌ಗಳಿಗೆ" ಸಂಬಂಧಿಸಿದ ಒಂದು ಒಡಂಬಡಿಕೆಯಾಗಿ (ಅದಾದ ತತ್‌ಕ್ಷಣದಲ್ಲಿ) ಇದು ಹೊರಹೊಮ್ಮಿತು.[೨೦] ಅದೇನೇ ಇದ್ದರೂ, ಮಧ್ಯಯುಗದ ಯುರೋಪ್‌ನಲ್ಲಿ ಊದುಕುಲುಮೆಯು ಯಾವ ರೀತಿಯಲ್ಲಿ ಹರಡಿತು ಎಂಬುದು ಅಂತಿಮವಾಗಿ ಇನ್ನೂ ನಿರ್ಣಯಿಸಲ್ಪಟ್ಟಿಲ್ಲ.

ಆರಂಭಿಕ ಆಧುನಿಕ ಊದುಕುಲುಮೆಗಳು: ಹುಟ್ಟು ಮತ್ತು ಹರಡಿಕೆ

[ಬದಲಾಯಿಸಿ]
ಚಿತ್ರ:Weissmann Balve Luise.jpg
ಬಾಲ್ವೆಯ ಲ್ಯೂಸೆನ್‌ಹ್ಯೂಟ್‌ನಲ್ಲಿರುವಂಥದ್ದು.

ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ನಲ್ಲಿ ಬಳಸಲಾದ ಇವುಗಳ ನೇರ ಪೂರ್ವವರ್ತಿಯು ನಮುರ್‌ ಪ್ರದೇಶದಲ್ಲಿದ್ದು, ಇದು ಈಗ (ಬೆಲ್ಜಿಯಂ) ವ್ಯಾಲೋನಿಯಾದಲ್ಲಿದೆ. ಅಲ್ಲಿಂದ ಅವು ನಾರ್ಮಂಡಿಯ ಪೂರ್ವಭಾಗದ ಸೀಮಾರೇಖೆಯ ಮೇಲಿನ ಪೇಸ್‌ ಡಿ ಬ್ರೇ ಎಂಬಲ್ಲಿಗೆ ಮೊದಲು ಹಬ್ಬಿದವು. ಅಲ್ಲಿಂದ ಅವು ಸಸೆಕ್ಸ್‌‌ನ ವೀಲ್ಡ್‌‌ ವನಪ್ರದೇಶಕ್ಕೆ ಹಬ್ಬಿದವು. ಅಲ್ಲಿ ಬಕ್ಸ್‌ಟೆಡ್‌‌ನ ಮೊದಲ ಕುಲುಮೆಯು (ಇದಕ್ಕೆ ಕ್ವೀನ್‌ಸ್ಟಾಕ್ ಎಂಬ ಹೆಸರಿತ್ತು‌)೧೪೯೧ರ ಸುಮಾರಿಗೆ ನಿರ್ಮಿಸಲ್ಪಟ್ಟಿತು. ಇದಾದ ನಂತರ ೧೪೯೬ರಲ್ಲಿ ಆಶ್‌ಡೌನ್‌ ಫಾರೆಸ್ಟ್‌‌ನಲ್ಲಿನ ನ್ಯೂಬ್ರಿಜ್‌ ಎಂಬಲ್ಲಿ ಮತ್ತೊಂದು ನಿರ್ಮಿಸಲ್ಪಟ್ಟಿತು. ಸುಮಾರು ೧೫೩೦ರವರೆಗೂ ಅವು ಕೈಬೆರಳೆಣಿಕೆಯಷ್ಟಿದ್ದವಾದರೂ, ನಂತರದ ದಶಕಗಳಲ್ಲಿ ಸದರಿ ವೀಲ್ಡ್‌ ವನಪ್ರದೇಶದಲ್ಲಿ ಹಲವಾರು ಕುಲುಮೆಗಳು ನಿರ್ಮಿಸಲ್ಪಟ್ಟವು; ಈ ಭಾಗದಲ್ಲಿಯೇ ಕಬ್ಬಿಣದ ಕೈಗಾರಿಕೆಯು ೧೫೯೦ರ ಸುಮಾರಿಗೆ ಪ್ರಾಯಶಃ ತನ್ನ ಉತ್ತುಂಗ ಸ್ಥಿತಿಗೆ ತಲುಪಿತು. ಈ ಕುಲುಮೆಗಳು ಉತ್ಪಾದಿಸುತ್ತಿದ್ದ ಬಹುಪಾಲು ಪೆಡಸು ಕಬ್ಬಿಣವನ್ನು ಸಲಾಕೆ ಕಬ್ಬಿಣದ ಉತ್ಪಾದನೆಗಾಗಿ ಮೆತು ಕಬ್ಬಿಣದ ಲೋಹದ ಕುಲುಮೆಗಳಿಗೆ ತೆಗೆದುಕೊಂಡು ಹೋಗಲಾಯಿತು.[೨೧] ವೀಲ್ಡ್‌ ವನಪ್ರದೇಶದ ಹೊರಗಿನ ಮೊದಲ ಬ್ರಿಟಿಷ್‌ ಕುಲುಮೆಗಳು ೧೫೫೦ರ ದಶಕಗಳಲ್ಲಿ ಕಾಣಿಸಿಕೊಂಡವು, ಮತ್ತು ಅವುಗಳ ಪೈಕಿ ಅನೇಕ ಕುಲುಮೆಗಳು ಆ ಶತಮಾನದ ಉಳಿದ ಭಾಗದಲ್ಲಿ ಹಾಗೂ ನಂತರದ ಶತಮಾನಗಳಲ್ಲಿ ನಿರ್ಮಿಸಲ್ಪಟ್ಟವು. ಕೈಗಾರಿಕೆಯ ಉತ್ಪಾದನೆಯು ೧೬೨೦ರ ಸುಮಾರಿಗೆ ಪ್ರಾಯಶಃ ಗರಿಷ್ಟ ಮಟ್ಟವನ್ನು ಮುಟ್ಟಿತು, ಮತ್ತು ೧೮ನೇ ಶತಮಾನದ ಆರಂಭದವರೆಗೂ ಒಂದು ನಿಧಾನಗತಿಯ ಕುಸಿತವು ಅಲ್ಲಿ ಕಂಡುಬಂದಿತು. ಇದು ಕಣ್ಣಿಗೆ ಕಾಣುವಂತೆ ಸ್ಪಷ್ಟವಾಗಿತ್ತು; ಏಕೆಂದರೆ, ಮತ್ತಷ್ಟು ದೂರದ ಬ್ರಿಟಿಷ್‌ ತಾಣಗಳಲ್ಲಿ ಕಬ್ಬಿಣವನ್ನು ತಯಾರಿಸುವುದಕ್ಕಿಂತ, ಸ್ವೀಡನ್‌‌‌ ಹಾಗೂ ಮತ್ತಾವುದಾದರೂ ಸ್ಥಳದಿಂದ ಕಬ್ಬಿಣವನ್ನು ಆಮದು ಮಾಡಿಕೊಳ್ಳುವುದು ಹೆಚ್ಚು ಲಾಭದಾಯಕವಾಗಿತ್ತು. ಈ ಕೈಗಾರಿಕೆಗೆ ಮಿತವಾಗಿ ಲಭ್ಯವಿದ್ದ ಇದ್ದಿಲು, ಅದು ಬೆಳೆಯುವಂತೆ ಮಾಡಲು ಮರವನ್ನು ಎಷ್ಟು ವೇಗವಾಗಿ ಬಳಸಲಾಗುತ್ತಿತ್ತೋ ಅದೇ ವೇಗದಲ್ಲಿಯೇ ಪ್ರಾಯಶಃ ಬಳಸಲ್ಪಡುತ್ತಿತ್ತು.[೨೨] ೧೭೧೧ರಲ್ಲಿ ಕುಂಬ್ರಿಯಾದಲ್ಲಿ ನಿರ್ಮಿಸಲ್ಪಟ್ಟ ಬ್ಯಾಕ್‌ಬರೊ ಊದುಕುಲುಮೆಯು, ಮೊದಲ ಪರಿಣಾಮಕಾರಿ ಉದಾಹರಣೆಯಾಗಿ ವಿವರಿಸಲ್ಪಟ್ಟಿದೆ.[who?] ರಷ್ಯಾದಲ್ಲಿನ ಮೊದಲ ಊದುಕುಲುಮೆಯು ಟ್ಯೂಲಾ ಸಮೀಪದಲ್ಲಿ ೧೬೩೭ರಲ್ಲಿ ಪ್ರಾರಂಭವಾಯಿತು ಮತ್ತು ಗೊರೊಡಿಷ್ಕೆ ವರ್ಕ್ಸ್‌ ಎಂಬ ಹೆಸರಿನಿಂದ ಅದು ಕರೆಯಲ್ಪಟ್ಟಿತು. ಊದುಕುಲುಮೆಯು ಇಲ್ಲಿಂದ ಮಧ್ಯಸ್ಥ ರಷ್ಯಾಕ್ಕೆ, ಆಮೇಲೆ ಅಂತಿಮವಾಗಿ ಉರಲ್ಸ್‌ ಎಂಬಲ್ಲಿಗೆ ಹಬ್ಬಿತು.[೨೩] ಬುನ್ಯೊರೊ ಸಾಮ್ರಾಜ್ಯ ಮತ್ತು ನ್ಯೊರೊ ಜನರಂಥ ಲೋಹಗೆಲಸದ ಕೆಲವೊಂದು ಬಂಟು ನಾಗರಿಕತೆಗಳು ಕಂಡುಬರುವುದರೊಂದಿಗೆ, ಮಧ್ಯಯುಗದ ಪಶ್ಚಿಮ ಆಫ್ರಿಕಾದಲ್ಲಿ ಊದುಕುಲುಮೆಗಳು ಸೃಷ್ಟಿಸಲ್ಪಟ್ಟಿರುವುದು ಪತ್ತೆಹಚ್ಚಲ್ಪಟ್ಟಿವೆ ಹಾಗೂ ದಾಖಲಿಸಲ್ಪಟ್ಟಿವೆ.[೨೪]

19ನೇ ಶತಮಾನಕ್ಕೆ ಸೇರಿದ ಊದುಕುಲುಮೆಗಳು ಮತ್ತು ಇತರ ಕಬ್ಬಿಣ ತಯಾರಿಕಾ ಪ್ರಕ್ರಿಯೆಗಳ ಪ್ರತಿಕೃತಿ.

ಕರಿಕು ಕಲ್ಲಿದ್ದಲಿನ ಊದುಕುಲುಮೆಗಳು

[ಬದಲಾಯಿಸಿ]

೧೭೦೯ರಲ್ಲಿ, ಇಂಗ್ಲೆಂಡ್‌ನ ಶ್ರಾಪ್‌ಷೈರ್‌ನಲ್ಲಿನ ಕೋಲ್‌ಬ್ರೂಕ್‌ಡೇಲ್‌ ಎಂಬಲ್ಲಿ, ಅಬ್ರಹಾಂ ಡರ್ಬಿ ಎಂಬಾತ ಇದ್ದಿಲಿನ ಬದಲಿಗೆ ಕರಿಕು ಕಲ್ಲಿದ್ದಲನ್ನು ಇಂಧನವಾಗಿ ಊದುಕುಲುಮೆಯೊಂದಕ್ಕೆ ಪೂರೈಕೆ ಮಾಡಲು ಶುರುಮಾಡಿದ. ಕರಿಕು ಕಲ್ಲಿದ್ದಲಿನ ಕಬ್ಬಿಣವು ಆರಂಭದಲ್ಲಿ ಕೇವಲ ಎರಕ ಹೊಯ್ಯುವ ಕೆಲಸಕ್ಕಾಗಿ, ಮಡಿಕೆಗಳು ಮತ್ತು ಬೀಡು ಕಬ್ಬಿಣದ ಇತರ ಸರಕುಗಳನ್ನು ತಯಾರಿಸುವಿಕೆಗಾಗಿ ಮಾತ್ರವೇ ಬಳಸಲ್ಪಟ್ಟಿತು. ಎರಕ ಹೊಯ್ಯುವ ಕೆಲಸವು ಸದರಿ ಕೈಗಾರಿಕೆಯ ಒಂದು ಕಿರು-ಶಾಖೆಯಾಗಿತ್ತಾದರೂ, ಸಮೀಪದ ಹಾರ್ಸ್‌ಹೇ ಎಂಬದಲ್ಲಿ ಡರ್ಬಿಯ ಮಗ ಹೊಸ ಕುಲುಮೆಯೊಂದನ್ನು ನಿರ್ಮಿಸಿದ, ಮತ್ತು ಸಲಾಕೆ ಕಬ್ಬಿಣದ ಉತ್ಪಾದನೆಗಾಗಿ ಮೆತು ಕಬ್ಬಿಣದ ಲೋಹದ ಕುಲುಮೆಗಳ ಮಾಲೀಕರಿಗೆ ಕರಿಕು ಕಲ್ಲಿದ್ದಲಿನ ಪೆಡಸು ಕಬ್ಬಿಣವನ್ನು ಪೂರೈಸಲು ಪ್ರಾರಂಭಿಸಿದ. ಇಷ್ಟು ಹೊತ್ತಿಗೆ, ಕರಿಕು ಕಲ್ಲಿದ್ದಲಿನ ಪೆಡಸು ಕಬ್ಬಿಣವನ್ನು ಉತ್ಪಾದಿಸುವುದು ಇದ್ದಿಲಿನ ಪೆಡಸು ಕಬ್ಬಿಣವನ್ನು ಉತ್ಪಾದಿಸುವುದಕ್ಕಿಂತ ಅಗ್ಗವಾಗಿತ್ತು. ಕಬ್ಬಿಣದ ಕೈಗಾರಿಕೆಯಲ್ಲಿ ಕಲ್ಲಿದ್ದಲು-ಜನ್ಯ ಇಂಧನವೊಂದನ್ನು ಬಳಸುವುದು ಬ್ರಿಟಿಷ್‌ ಕೈಗಾರಿಕಾ ಕ್ರಾಂತಿಯಲ್ಲಿನ ಒಂದು ಪ್ರಮುಖ ಅಂಶವಾಗಿತ್ತು.[೨೫][೨೬][೨೭] ಡರ್ಬಿಯ ಹಳೆಯ ಊದುಕುಲುಮೆಯನ್ನು ಪ್ರಾಕ್ತನ ಶಾಸ್ತ್ರದ ರೀತಿಯಲ್ಲಿ ಉತ್ಖನನ ಮಾಡಲಾಗಿದೆ ಮತ್ತು ಇದನ್ನು ಐರನ್‌ಬ್ರಿಜ್‌ ಗಾರ್ಜ್‌ ವಸ್ತುಸಂಗ್ರಹಾಲಯಗಳ ಒಂದು ಭಾಗವಾಗಿರುವ ಕೋಲ್‌ಬ್ರೂಕ್‌ಡೇಲ್‌‌ನಲ್ಲಿ ಅದರ ಮೂಲಸ್ಥಾನದಲ್ಲಿ ನೋಡಬಹುದಾಗಿದೆ. ಪ್ರಪಂಚದ ಮೊದಲ ಕಬ್ಬಿಣ ಸೇತುವೆಗೆ ಸಂಬಂಧಿಸಿದ ಸರಕಟ್ಟುಗಳನ್ನು ನಿರ್ಮಿಸುವುದಕ್ಕಾಗಿ ಕುಲುಮೆಯಿಂದ ಪಡೆಯಲಾದ ಬೀಡು ಕಬ್ಬಿಣವನ್ನು ೧೭೭೯ರಲ್ಲಿ ಬಳಸಲಾಯಿತು. ಸದರಿ ಕಬ್ಬಿಣದ ಸೇತುವೆಯು ಕೋಲ್‌ಬ್ರೂಕ್‌ಡೇಲ್‌‌‌ನಲ್ಲಿ ಸೆವರ್ನ್‌ ನದಿಯನ್ನು ಅಡ್ಡಹಾಯುತ್ತದೆ ಮತ್ತು ಪಾದಚಾರಿಗಳ ಬಳಕೆಗಾಗಿ ಇದು ಉಳಿದುಕೊಂಡಿದೆ. ಕುಲುಮೆಗೆ ಒದಗಿಸುವ ಗಾಳಿಯ ಸ್ವರೂಪವನ್ನು ಬಿಸಿ ಗಾಳಿಯ ಹರಿವಿಗೆ ಬದಲಿಸಿಕೊಂಡಿದ್ದು ಮುಂದಿನ ಒಂದು ಪ್ರಮುಖ ಬೆಳವಣಿಗೆಯಾಗಿತ್ತು; ಈ ಶೈಲಿಗೆ ಜೇಮ್ಸ್‌ ಬ್ಯೂಮಾಂಟ್‌ ನೀಲ್‌ಸನ್‌ ಎಂಬಾತ ಏಕಸ್ವಾಮ್ಯದ ಹಕ್ಕುಪತ್ರವನ್ನು ಪಡೆದಿದ್ದ ಮತ್ತು ಇದು ೧೮೨೮ರಲ್ಲಿ ಸ್ಕಾಟ್ಲೆಂಡ್‌ನಲ್ಲಿನ ವಿಲ್ಸನ್‌ಟೌನ್‌‌ ಐರನ್‌ವರ್ಕ್ಸ್‌‌‌‌ನಲ್ಲಿ ಬಳಸಲ್ಪಟ್ಟಿತು. ಇದು ಉತ್ಪಾದನಾ ವೆಚ್ಚಗಳನ್ನು ಮತ್ತಷ್ಟು ತಗ್ಗಿಸಿತು. ಕೆಲವೇ ದಶಕಗಳ ಒಳಗಾಗಿ, ಕುಲುಮೆಯಷ್ಟೇ ದೊಡ್ಡದಾದ "ಮುಚ್ಚೊಲೆ"ಯೊಂದನ್ನು ಬಳಸುವುದು ಅದರ ಮುಂದಿನ ಒಂದು ಪರಿಪಾಠವಾಯಿತು; ಕುಲುಮೆಯಿಂದ ಪಡೆಯಲಾದ (COನ್ನು ಒಳಗೊಂಡಿರುವ) ತ್ಯಾಜ್ಯ ಅನಿಲವನ್ನು ಈ ಮೊಚ್ಚೊಲೆಗೆ ನಿರ್ದೇಶಿಸಲಾಗುತ್ತಿತ್ತು ಹಾಗೂ ದಹಿಸಲಾಗುತ್ತಿತ್ತು. ಇದರ ಪರಿಣಾಮಕ ಶಾಖವನ್ನು ಕುಲುಮೆಯೊಳಗೆ ಊದಲಾಗುವ ಗಾಳಿಯನ್ನು ಪೂರ್ವಭಾವಿಯಾಗಿ ಕಾಯಿಸಲೆಂದು ಬಳಸಲಾಗುತ್ತಿತ್ತು.[೨೮] ಊದುಕುಲುಮೆಗೆ ಕಚ್ಚಾ ಆಂತ್ರಸೈಟ್‌ ಕಲ್ಲಿದ್ದಲನ್ನು ಬಳಕೆ ಮಾಡಿದ್ದು ಮುಂದಿನ ಮತ್ತೊಂದು ಗಮನಾರ್ಹ ಬೆಳವಣಿಗೆಯಾಗಿತ್ತು. ಇದನ್ನು ಜಾರ್ಜ್‌ ಕ್ರೇನ್‌ ಎಂಬಾತ ೧೮೩೭ರಲ್ಲಿ ದಕ್ಷಿಣ ವೇಲ್ಸ್‌ನಲ್ಲಿನ ನಿಸೆಡ್ವಿನ್‌ ಐರನ್‌ವರ್ಕ್ಸ್‌ ಎಂಬಲ್ಲಿ ಯಶಸ್ವಿಯಾಗಿ ಮೊದಲಿಗೆ ಪ್ರಯತ್ನಿಸಿದ.[೨೯] ಇದನ್ನು ಅಮೆರಿಕಾದಲ್ಲಿ ಪೆನ್ಸಿಲ್ವೇನಿಯಾದ ಕ್ಯಾಟಸೌಕ್ವಾದಲ್ಲಿರುವ ಲೆಹೈ ಕ್ರೇನ್‌ ಐರನ್‌ ಕಂಪನಿಯು ೧೮೩೯ರಲ್ಲಿ ಕೈಗೆತ್ತಿಕೊಂಡಿತು.

ಆಧುನಿಕ ಕುಲುಮೆಗಳು

[ಬದಲಾಯಿಸಿ]

ಊದುಕುಲುಮೆಯು ಆಧುನಿಕ ಕಬ್ಬಿಣದ ಉತ್ಪಾದನೆಯ ಒಂದು ಪ್ರಮುಖ ಭಾಗವಾಗಿ ಉಳಿದುಕೊಂಡಿದೆ. ಆಧುನಿಕ ಕುಲುಮೆಗಳು ಅತೀವವಾಗಿ ಪರಿಣಾಮಕಾರಿಗಳೆನಿಸಿವೆ. ಗಾಳಿಯ ಹರಿವನ್ನು ಪೂರ್ವಭಾವಿಯಾಗಿ-ಕಾಯಿಸುವ ಕೌಪರ್‌ ಮುಚ್ಚೊಲೆಗಳನ್ನು ಇವು ಒಳಗೊಂಡಿರುವುದು ಮತ್ತು ಕುಲುಮೆಯಿಂದ ನಿರ್ಗಮಿಸುವ ಬಿಸಿ ಅನಿಲಗಳಿಂದ ಶಾಖವನ್ನು ಹೊರತೆಗೆಯುವುದಕ್ಕಾಗಿ ಪುನರ್ವಶ-ವ್ಯವಸ್ಥೆಗಳನ್ನು ಇವು ಬಳಸಿಕೊಳ್ಳುವುದೇ ಇವುಗಳ ಪರಿಣಾಮಕಾರಿತ್ವಕ್ಕೆ ಕಾರಣ. ಉತ್ಪಾದನಾ ಪ್ರಮಾಣವು ಉನ್ನತ ಮಟ್ಟದಲ್ಲಿರುವಂತೆ ಕೈಗಾರಿಕೆಯಲ್ಲಿನ ಪೈಪೋಟಿಯು ಪ್ರಚೋದಿಸುತ್ತದೆ. ಅತಿದೊಡ್ಡ ಊದುಕುಲುಮೆಗಳು ಸರಿಸುಮಾರು ೫೫೮೦ ಮೀನಷ್ಟು (೧೯೦,೦೦೦ ಘನ ಅಡಿ)[೩೦] ಗಾತ್ರವನ್ನು ಹೊಂದಿರುತ್ತವೆ ಮತ್ತು ಪ್ರತಿ ವಾರಕ್ಕೆ ಸುಮಾರು ೮೦,೦೦೦ ಟನ್ನುಗಳಷ್ಟು (೮೮,೦೦೦ ಕಿರು ಟನ್ನುಗಳು) ಪ್ರಮಾಣವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಪ್ರತಿ ವರ್ಷಕ್ಕೆ ಸರಾಸರಿಯಾಗಿ ಸುಮಾರು ೩೬೦ ಟನ್ನುಗಳ (೪೦೦ ಕಿರು ಟನ್ನುಗಳು) ಉತ್ಪಾದನೆಯನ್ನು ದಾಖಲಿಸುತ್ತಿದ್ದ ೧೮ನೇ-ಶತಮಾನದ ವಿಶಿಷ್ಟ ಕುಲುಮೆಗಳಿಗೆ ಹೋಲಿಸಿದಾಗ, ಇದೊಂದು ಮಹತ್ತರವಾದ ಹೆಚ್ಚಳವೆನ್ನಬಹುದು. ಸ್ಥಳೀಕವಾಗಿ ಕಲ್ಲಿದ್ದಲಿನ ಸಂಪನ್ಮೂಲಗಳನ್ನು ಹೊಂದಿಲ್ಲದ ದೇಶಗಳಲ್ಲಿ, ಸ್ವೀಡನ್ನಿನ ವಿದ್ಯುತ್ತಿನ ಊದುಕುಲುಮೆಯಂಥ, ಊದುಕುಲುಮೆಯಲ್ಲಿನ ರೂಪಾಂತರಗಳು ಅಭಿವೃದ್ಧಿಪಡಿಸಲ್ಪಟ್ಟಿವೆ.

ಆಧುನಿಕ ಪ್ರಕ್ರಿಯೆ

[ಬದಲಾಯಿಸಿ]
1. ಸ್ಥಾಪನಾ ನೆಲೆಯೊಂದರಲ್ಲಿ ಇರಿಸಲಾದ ಊದುಕುಲುಮೆ.2. ಕಬ್ಬಿಣ ಅದಿರು + ಸುಣ್ಣಕಲ್ಲಿನ ಶಿಲೆ.3. ಕರಿಕು ಕಲ್ಲಿದ್ದಲು.4. ಮೇಲೆತ್ತುಗ.5. ಪೂರಕವಸ್ತುವಿನ ಪ್ರವೇಶದ್ವಾರ6. ಕರಿಕು ಕಲ್ಲಿದ್ದಲಿನ ಪದರ.7. ಅದಿರು ಮತ್ತು ಸುಣ್ಣಕಲ್ಲಿನ ಸಿಂಟರ್‌ಶಿಲೆಯ ಸಣ್ಣಗೋಲಿಗಳ ಪದರ.8. ಬಿಸಿ ಗಾಳಿಯ ಹರಿವು (ಸುಮಾರು 1200°C).9. ಗಸಿಯ ನಿರ್ಮೂಲನ. 10. ಕರಗಿಸಿದ ಪೆಡಸು ಕಬ್ಬಿಣದ ತಟ್ಟುವಿಕೆ.11. ಗಸಿ ಸಂಗ್ರಾಹಕ ಮಡಿಕೆ. 12. ಪೆಡಸು ಕಬ್ಬಿಣಕ್ಕೆ ಮೀಸಲಾದ ಟಾರ್ಪಿಡೊ ತೂಗುತೊಟ್ಟಿಲು.13. ಘನ ಕಣಗಳ ಪ್ರತ್ಯೇಕಿಸುವಿಕೆಗಾಗಿರುವ ಧೂಳಿನ ಕೇಂದ್ರಾಪಬಲಯಂತ್ರ.14. ಬಿಸಿ ಗಾಳಿಯ ಹರಿವಿಗಾಗಿರುವ ಕೌಪರ್‌ ಮುಚ್ಚೊಲೆಗಳು.15. ಹೊಗೆಯ ನಿರ್ಗಮನ ದ್ವಾರ (ಇಂಗಾಲವನ್ನು ಸೆರೆಹಿಡಿದು ಸಂಗ್ರಹಿಸುವ ತೊಟ್ಟಿಗೆ (CCS) ಇದನ್ನು ಮರುನಿರ್ಧೇಶಿಸಬಹುದು). 16. ಕೌಪರ್‌ ಮುಚ್ಚೊಲೆಗಳಿಗಾಗಿರುವ ಪೂರೈಕೆ ಗಾಳಿ (ಗಾಳಿಯನ್ನು ಪೂರ್ವಭಾವಿಯಾಗಿ-ಕಾಯಿಸುವ ವ್ಯವಸ್ತೆಗಳು). 17. ಪುಡಿಮಾಡಲಾದ ಕಲ್ಲಿದ್ದಲು.18. ಕರಿಕು ಕಲ್ಲಿದ್ದಲಿನ ಒಲೆ.19. ಕರಿಕು ಕಲ್ಲಿದ್ದಲು.ಊದುಕುಲುಮೆ ಅನಿಲದ ಇಳಿಗೊಳವೆ
1. ಊದುಕುಲುಮೆಯ ರೇಖಾಚಿತ್ರ.2. ಕೌಪರ್‌ ಮುಚ್ಚೊಲೆಗಳಿಂದ ಬಂದ ಬಿಸಿ ಗಾಳಿಯ ಹರಿವು.3. ದ್ರವೀಭವನದ ವಲಯ (ಕುಲುಮೆಯ ಇಳಿಜಾರಾದ ಕೆಳಭಾಗ). 4. ಫೆರಸ್‌ ಆಕ್ಸೈಡ್‌ಗೆ ಸಂಬಂಧಿಸಿದ ಅಪಕರ್ಷಣಾ ವಲಯ (ಪೀಪಾಯಿ).5. ಫೆರಿಕ್‌ ಆಕ್ಸೈಡ್‌ಗೆ ಸಂಬಂಧಿಸಿದ ಅಪಕರ್ಷಣಾ ವಲಯ (ಚಿಮಣಿ ಕೊಳವೆ).6. ಪೂರ್ವಭಾವಿಯಾಗಿ-ಕಾಯಿಸುವ ವಲಯ (ಕಂಠಭಾಗ). 7. ಅದಿರು, ಸುಣ್ಣಕಲ್ಲು, ಮತ್ತು ಕರಿಕು ಕಲ್ಲಿದ್ದಲಿನ ಪೂರೈಕೆ.8. ನಿಷ್ಕಾಸ ಅನಿಲಗಳು. 9. ಅದಿರು, ಕರಿಕು ಕಲ್ಲಿದ್ದಲು ಮತ್ತು ಸುಣ್ಣಕಲ್ಲಿನ ಅಂಕಣ. 10. ಗಸಿಯ ನಿರ್ಮೂಲನ.11. ಕರಗಿಸಿದ ಪೆಡಸು ಕಬ್ಬಿಣದ ಬಡಿಯುವಿಕೆ ತ್ಯಾಜ್ಯ ಅನಿಲಗಳ ಸಂಗ್ರಹಣೆ

ದಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಆಧುನಿಕ ಕುಲುಮೆಗಳು ಆಧಾರ ಸ್ವರೂಪದ ಸೌಕರ್ಯಗಳ ಒಂದು ವ್ಯೂಹದೊಂದಿಗೆ ಸಜ್ಜುಗೊಂಡಿವೆ; ಸರಕು ದೋಣಿಗಳಿಂದ ಹೊರೆಯನ್ನು ಇಳಿಸಲಾಗುವ ಅದಿರು ಸಂಗ್ರಹಣಾ ಆವರಣಗಳು ಇದಕ್ಕೊಂದು ನಿದರ್ಶನ. ಅದಿರು ಸೇತುವೆಗಳಿಂದ, ಅಥವಾ ರೈಲು ಡಬ್ಬಿಗಳು ಮತ್ತು ಅದಿರು ವರ್ಗಾಯಿಸುವ ಕಾರುಗಳಿಂದ ಕಚ್ಚಾ ಸಾಮಗ್ರಿಗಳು ದಾಸ್ತಾನು ಮಳಿಗೆಯ ಸಂಕೀರ್ಣಕ್ಕೆ ವರ್ಗಾಯಿಸಲ್ಪಡುತ್ತವೆ. ಬಯಸಿದ ಬಿಸಿ ಲೋಹ ಮತ್ತು ಗಸಿ ಸಂಯೋಜನೆಯನ್ನು ನೀಡುವುದಕ್ಕಾಗಿ, ಕಂಬಿಯಮೇಲೆ-ಏರಿಸಿದ ಮಾಪಕ ಕಾರುಗಳು ಅಥವಾ ಕಂಪ್ಯೂಟರ್‌ ನಿಯಂತ್ರಿತ ತೂಕದ ಲಾಳಿಕೆಯ ತೊಟ್ಟಿಗಳು ನಾನಾಬಗೆಯ ಕಚ್ಚಾ ಸಾಮಗ್ರಿಗಳನ್ನು ತೂಕಹಾಕುತ್ತವೆ. ಅಚ್ಚುರಾಟೆಗಳು ಅಥವಾ ವಾಹಕ ಪಟ್ಟಿಗಳಿಂದ ಚಾಲಿಸಲ್ಪಟ್ಟ ಒಂದು ಮಂಕರಿ ಗೂಡು ತೂಗುತೊಟ್ಟಿಲಿನ ಮೂಲಕ ಊದುಕುಲುಮೆಯ ಮೇಲ್ತುದಿಗೆ ಕಚ್ಚಾ ಸಾಮಗ್ರಿಗಳನ್ನು ತರಲಾಗುತ್ತದೆ.[೩೧] ಊದುಕುಲುಮೆಯೊಳಗೆ ಕಚ್ಚಾ ಸಾಮಗ್ರಿಗಳನ್ನು ಪೂರಣ ಮಾಡುವುದಕ್ಕೆ ವಿಭಿನ್ನ ಮಾರ್ಗಗಳಿವೆ. ಕೆಲವೊಂದು ಊದುಕುಲುಮೆಗಳು ಒಂದು "ಜೋಡಿ ಗಂಟೆ" ವ್ಯವಸ್ಥೆಯನ್ನು ಬಳಸುತ್ತವೆ. ಇದರಲ್ಲಿ ಊದುಕುಲುಮೆಯೊಳಗೆ ಕಚ್ಚಾ ಸಾಮಗ್ರಿಯ ಪ್ರವೇಶವಾಗುವುದನ್ನು ನಿಯಂತ್ರಿಸಲು ಎರಡು "ಗಂಟೆಗಳನ್ನು" ಬಳಸಲಾಗುತ್ತದೆ. ಊದುಕುಲುಮೆಯಲ್ಲಿ ಬಿಸಿ ಅನಿಲಗಳು ನಷ್ಟವಾಗುವುದನ್ನು ತಗ್ಗಿಸುವುದು ಎರಡು ಗಂಟೆಗಳನ್ನು ಬಳಸುವುದರ ಹಿಂದಿನ ಉದ್ದೇಶವಾಗಿದೆ. ಮೊದಲಿಗೆ, ಮೇಲ್ಭಾಗದ ಅಥವಾ ಸಣ್ಣ ಗಂಟೆಯೊಳಗೆ ಕಚ್ಚಾ ಸಾಮಗ್ರಿಗಳನ್ನು ಸುರಿಯಲಾಗುತ್ತದೆ. ಸದರಿ ಪೂರಣವು ಹೆಚ್ಚು ಕರಾರುವಾಕ್ಕಾಗಿ ವಿತರಣೆಯಾಗಬೇಕೆಂಬ ದೃಷ್ಟಿಯಿಂದ, ಒಂದು ಪೂರ್ವನಿರ್ಧರಿತ ಪ್ರಮಾಣದಲ್ಲಿ ಗಂಟೆಯನ್ನು ಆಗ ತಿರುಗಿಸಲಾಗುತ್ತದೆ. ಆಮೇಲೆ ಸಣ್ಣ ಗಂಟೆಯು ಪೂರಣವನ್ನು ದೊಡ್ಡ ಗಂಟೆಯೊಳಗೆ ಸುರಿಯಲು ತೆರೆದುಕೊಳ್ಳುತ್ತದೆ. ಊದುಕುಲುಮೆಯನ್ನು ಭದ್ರವಾಗಿ ಮುಚ್ಚುವುದಕ್ಕಾಗಿ ನಂತರ ಸಣ್ಣ ಗಂಟೆಯು ಮುಚ್ಚಿಕೊಳ್ಳುತ್ತದೆ; ಇದೇ ವೇಳೆಗೆ ದೊಡ್ಡ ಗಂಟೆಯು ಪೂರಣವನ್ನು ಊದುಕುಲುಮೆಯೊಳಗೆ ವಿನಿಯೋಗಿಸುತ್ತದೆ.[೩೨][೩೩] "ಗಂಟೆ-ರಹಿತ" ವ್ಯವಸ್ಥೆಯೊಂದನ್ನು ಬಳಸುವುದು ತೀರಾ ಇತ್ತೀಚಿನ ಒಂದು ವಿನ್ಯಾಸವಾಗಿದೆ. ಪ್ರತಿ ಕಚ್ಚಾ ಸಾಮಗ್ರಿಯನ್ನೂ ಒಳಗೊಳ್ಳುವ ದೃಷ್ಟಿಯಿಂದ ಈ ವ್ಯವಸ್ಥೆಗಳು ಬಹುವಿಧದ ಲಾಳಿಕೆ ತೊಟ್ಟಿಗಳನ್ನು ಬಳಸುತ್ತವೆ. ಕಚ್ಚಾ ಸಾಮಗ್ರಿಯು ನಂತರದಲ್ಲಿ ಕವಾಟಗಳ ಮೂಲಕ ಊದುಕುಲುಮೆಯೊಳಗೆ ಹರಿಯಬಿಡಲ್ಪಡುತ್ತದೆ.[೩೨] ಮಂಕರಿ ಗೂಡು ಅಥವಾ ವಾಹಕ ವ್ಯವಸ್ಥೆಗೆ ಹೋಲಿಸಿದಾಗ, ಪ್ರತಿಯೊಂದು ಘಟಕ-ಭಾಗವೂ ಎಷ್ಟು ಪ್ರಮಾಣದಲ್ಲಿ ಸೇರಿಸಲ್ಪಡಬೇಕು ಎಂಬುದನ್ನು ನಿಯಂತ್ರಿಸುವಲ್ಲಿ ಈ ಕವಾಟಗಳು ಹೆಚ್ಚು ನಿಖರವಾಗಿರುತ್ತವೆ. ಇದರಿಂದಾಗಿ ಕುಲುಮೆಯ ದಕ್ಷತೆಯು ಹೆಚ್ಚಿಸಲ್ಪಡುತ್ತದೆ. ಪೂರಣವನ್ನು ಎಲ್ಲಿ ಇರಿಸಲಾಗಿದೆ ಎಂಬುದನ್ನು ನಿಷ್ಕೃಷ್ಟವಾಗಿ ನಿಯಂತ್ರಿಸಲು, ಈ ಕೆಲವೊಂದು ಗಂಟೆ-ರಹಿತ ವ್ಯವಸ್ಥೆಗಳು ಒಂದು ಇಳಿಹೊನಲನ್ನೂ ಕಾರ್ಯಗತಗೊಳಿಸುತ್ತವೆ.[೩೪] ಕಬ್ಬಿಣ ತಯಾರಿಸುವ ಊದುಕುಲುಮೆಯು ಸ್ವತಃ ಒಂದು ಎತ್ತರವಾದ ಚಿಮಣಿಯಂಥ ರಚನೆಯ ಸ್ವರೂಪದಲ್ಲಿ ನಿರ್ಮಿಸಲ್ಪಟ್ಟಿದ್ದು, ಈ ರಚನೆಯು ಅಗಡುಸ್ವಭಾವದ ಇಟ್ಟಿಗೆಯ ಹೊದಿಕೆಯನ್ನು ಹೊಂದಿರುತ್ತದೆ. ಕರಿಕು ಕಲ್ಲಿದ್ದಲು, ಸುಣ್ಣಕಲ್ಲು ಸ್ರಾವಕ, ಮತ್ತು ಕಬ್ಬಿಣದ ಅದಿರು (ಕಬ್ಬಿಣದ ಆಕ್ಸೈಡ್‌) ಇವುಗಳನ್ನು ಒಂದು ನಿಷ್ಕೃಷ್ಟವಾದ ತುಂಬುವಿಕೆಯ ಕ್ರಮದಲ್ಲಿ ಕುಲುಮೆಯ ಮೇಲ್ತುದಿಯೊಳಗೆ ಸುರಿಯಲಾಗುತ್ತದೆ. ಅನಿಲದ ಹರಿವನ್ನು ಹಾಗೂ ಕುಲುಮೆಯೊಳಗಿನ ರಾಸಾಯನಿಕ ಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ಇದು ನೆರವಾಗುತ್ತದೆ. ಬಿಸಿಯಾದ, ಅಶುದ್ಧವಾದ ಅನಿಲವು ಕುಲುಮೆ ಗುಮ್ಮಟದಿಂದ ನಿರ್ಗಮಿಸಲು ನಾಲ್ಕು "ಮೇಲ್ಗೊಳವೆಗಳು" ಅವಕಾಶ ಕಲ್ಪಿಸಿದರೆ, ಕುಲುಮೆಯ ಮೇಲ್ತುದಿಯನ್ನು ಅನಿಲ ಒತ್ತಡದ ಹಠಾತ್‌ ಉಲ್ಬಣಗಳಿಂದ "ಸ್ರಾವಕದ ಕವಾಟಗಳು" ಸಂರಕ್ಷಿಸುತ್ತವೆ. ಬಿರಡೆಯಿಂದ ಮುಚ್ಚಿದಾಗ, ಒಂದು ಸ್ರಾವಕ ಶುದ್ಧಕಾರಕದಿಂದ ಸ್ರಾವಕ ಕವಾಟಗಳು ಶುದ್ಧೀಕರಿಸಲ್ಪಡುವುದು ಅಗತ್ಯವಾಗಿರುತ್ತದೆ.ಅ ಅನಿಲದಲ್ಲಿರುವ ದಪ್ಪನಾಗಿರುವ ಕಣಗಳು "ಧೂಳು ಸಂಗ್ರಾಹಕ"ದಲ್ಲಿ ನೆಲೆಗೊಳ್ಳುತ್ತವೆ ಮತ್ತು ವಿಲೇವಾರಿವಾಗಿ ಒಂದು ಕಂಬಿಮಾರ್ಗದ ತೂಗುತೊಟ್ಟಿಲು ಅಥವಾ ಟ್ರಕ್ಕಿನೊಳಗೆ ಸುರಿಯಲ್ಪಡುತ್ತವೆ. ಅದೇ ವೇಳೆಗೆ ಅನಿಲವು ಸ್ವತಃ ಒಂದು ಇಕ್ಕಟ್ಟಾದ ಚಿಕ್ಕನಾಳ ಉಜ್ಜುಗದ ಮೂಲಕ ಮತ್ತು ಒಂದು ಅನಿಲ ತಂಪುಕಾರಕದ ಮೂಲಕ ಹರಿಯುತ್ತದೆ; ಶುದ್ಧೀಕರಿಸಲ್ಪಟ್ಟ ಅನಿಲದ ತಾಪಮಾನವನ್ನು ತಗ್ಗಿಸಲು ಈ ವ್ಯವಸ್ಥೆಯಿರುತ್ತದೆ.[೩೧] ಕುಲುಮೆಯ ಕೆಳಗಿನ ಅರ್ಧಭಾಗದಲ್ಲಿರುವ "ಎರಕದ ನೆಲೆ"ಯು ನಡುಚೌಕಟ್ಟಿನ ಕೊಳವೆ, ಗಾಳಿ ಕೊಳವೆಯ ಮೂತಿಗಳು ಹಾಗೂ ದ್ರವ ಕಬ್ಬಿಣ ಮತ್ತು ಗಸಿಗೆ ಆಕಾರ ಕೊಡುವುದಕ್ಕೆ ಸಂಬಂಧಿಸಿದ ಸಲಕರಣೆಯನ್ನು ಒಳಗೊಂಡಿರುತ್ತದೆ. ಅಗಡುಸ್ವಭಾವದ ಜೇಡಿಮಣ್ಣು ಬಿರಡೆಯ ಮೂಲಕ "ತಿರುಪು ಬಿರಡೆಯ ರಂಧ್ರ"ವೊಂದನ್ನು ಒಮ್ಮೆ ಕೊರೆಯಲಾಯಿತೆಂದರೆ, ಒಂದು "ಗೋಚುಸೌಟು" ತೆರಪಿನ ಮೂಲಕ ದ್ರವ ಕಬ್ಬಿಣ ಮತ್ತು ಗಸಿ ಕೆಳಕ್ಕೆ ಹರಿದು ಒಂದು ತೊಟ್ಟಿಯೊಳಗೆ ಸಂಗ್ರಹಿಸಲ್ಪಡುತ್ತವೆ ಹಾಗೂ ಕಬ್ಬಿಣ ಮತ್ತು ಗಸಿ ಪ್ರತ್ಯೇಕಿಸಲ್ಪಡುತ್ತವೆ. ಆಧುನಿಕ, ದೊಡ್ಡಗಾತ್ರದ ಊದುಕುಲುಮೆಗಳು ನಾಲ್ಕು ತಿರುಪು ಬಿರಡೆಯ ರಂಧ್ರಗಳನ್ನು ಮತ್ತು ಎರಡು ಎರಕದ ನೆಲೆಗಳನ್ನು ಹೊಂದಿರಲು ಸಾಧ್ಯವಿದೆ.[೩೧] ಪೆಡಸು ಕಬ್ಬಿಣ ಮತ್ತು ಗಸಿಯು ಒಮ್ಮೆಗೆ ಸಂಗ್ರಹಿಸಲ್ಪಟ್ಟ ನಂತರ, ತಿರುಪು ಬಿರಡೆಯ ರಂಧ್ರವನ್ನು ಮತ್ತೊಮ್ಮೆ ಅಗಡುಸ್ವಭಾವದ ಜೇಡಿಮಣ್ಣಿನೊಂದಿಗೆ ಮುಚ್ಚಲಾಗುತ್ತದೆ. ಊದುಕುಲುಮೆಯ ದಕ್ಷತೆ ಅಥವಾ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಬಳಸಲಾಗುವ ಒಂದು ಬಿಸಿ ಗಾಳಿಯ ಹರಿವನ್ನು ಕಾರ್ಯಗತಗೊಳಿಸಲು ಗಾಳಿ ಕೊಳವೆಯ ಮೂತಿಗಳನ್ನು ಬಳಸಲಾಗುತ್ತದೆ. ಕುಲುಮೆಯ ತಳಭಾಗದಲ್ಲಿದ್ದು ಗಾಳಿ ಕೊಳವೆ ಮೂತಿಗಳು ಎಂದು ಕರೆಯಲ್ಪಡುವ, ನೀರಿನಿಂದ-ತಂಪಾಗಿಸಿದ ತಾಮ್ರದ ಕಿರಿಬಾಯಿಯ ನಳಿಕೆಗಳ ಮೂಲಕ ಕುಲುಮೆಯೊಳಗೆ ಬಿಸಿ ಗಾಳಿಯ ಹರಿವನ್ನು ನಿರ್ದೇಶಿಸಲಾಗುತ್ತದೆ. ಮುಚ್ಚೊಲೆಯ ವಿನ್ಯಾಸ ಮತ್ತು ಸ್ಥಿತಿಗತಿಯನ್ನು ಅವಲಂಬಿಸಿ ಬಿಸಿ ಗಾಳಿಯ ಹರಿವಿನ ತಾಪಮಾನವು ೯೦೦ °Cನಿಂದ ೧೩೦೦ °Cವರೆಗೆ (೧೬೦೦ °Fನಿಂದ ೨೩೦೦ °Fವರೆಗೆ) ಇರಲು ಸಾಧ್ಯವಿರುತ್ತದೆ. ಅವು ನಿಭಾಯಿಸುವ ತಾಪಮಾನಗಳು ೨೦೦೦ °Cನಿಂದ ೨೩೦೦ °Cವರೆಗೆ (೩೬೦೦ °Fನಿಂದ ೪೨೦೦ °Fವರೆಗೆ) ಇರಲು ಸಾಧ್ಯವಿದೆ. ಉತ್ಪಾದಕತೆಯನ್ನು ಹೆಚ್ಚಿಸಲು ಅವಶ್ಯಕವಾಗಿರುವ ಹೆಚ್ಚುವರಿ ಶಕ್ತಿಯನ್ನು ಬಿಡುಗಡೆ ಮಾಡುವುದಕ್ಕಾಗಿ ಕರಿಕು ಕಲ್ಲಿದ್ದಲಿನೊಂದಿಗೆ ಸೇರಿಕೊಳ್ಳುವಂತಾಗಲು, ತೈಲ, ಡಾಂಬರೆಣ್ಣೆ, ನಿಸರ್ಗಾನಿಲ, ಪುಡಿಮಾಡಲಾದ ಕಲ್ಲಿದ್ದಲು ಮತ್ತು ಆಮ್ಲಜನಕ ಇವುಗಳನ್ನೂ ಸಹ ಗಾಳಿ ಕೊಳವೆಯ ಮೂತಿಯ ಮಟ್ಟದಲ್ಲಿ ಕುಲುಮೆಯೊಳಗೆ ಒಳಹೊಗಿಸಬಹುದು.[೩೧]

ರಸಾಯನ ವಿಜ್ಞಾನ

[ಬದಲಾಯಿಸಿ]
ಟ್ರೈನೆಕ್‌ ಐರನ್‌ ಅಂಡ್‌ ಸ್ಟೀಲ್‌ ವರ್ಕ್ಸ್‌ನ ಊದುಕುಲುಮೆಗಳು

ಕರಗಿಸಿದ ಕಬ್ಬಿಣದ ಉತ್ಪಾದನೆಗೆ ಕಾರಣವಾಗುವ ಮುಖ್ಯ ರಾಸಾಯನಿಕ ಕ್ರಿಯೆಯು ಹೀಗಿರುತ್ತದೆ:

Fe2O3 + 3CO → 2Fe + 3CO2[೩೫]

ಈ ರಾಸಾಯನಿಕ ಕ್ರಿಯೆಯನ್ನು ಅನೇಕ ಹಂತಗಳಾಗಿ ವಿಭಜಿಸಬಹುದು; ಕುಲುಮೆಯೊಳಗೆ ಊದಲಾದ ಪೂರ್ವಭಾವಿಯಾಗಿ ಕಾಯಿಸಲ್ಪಟ್ಟ ಗಾಳಿಯ ಹರಿವು, ಕರಿಕು ಕಲ್ಲಿದ್ದಲಿನ ರೂಪದಲ್ಲಿರುವ ಇಂಗಾಲದೊಂದಿಗೆ ವರ್ತಿಸಿ ಇಂಗಾಲದ ಮಾನಾಕ್ಸೈಡ್‌ ಮತ್ತು ಶಾಖವನ್ನು ಉತ್ಪಾದಿಸುವುದು ಮೊದಲನೆಯ ಹಂತ ಎನಿಸಿಕೊಳ್ಳುತ್ತದೆ:

2 C(s) + O2(g) → 2 CO(g) [೩೬]

ಬಿಸಿಯಾದ ಇಂಗಾಲದ ಮಾನಾಕ್ಸೈಡ್‌, ಕಬ್ಬಿಣ ಅದಿರಿಗೆ ಸಂಬಂಧಿಸಿದ ಅಪಕರ್ಷಿಸುವ ಮಧ್ಯವರ್ತಿಯಾಗಿರುತ್ತದೆ ಮತ್ತು ಇದು ಕಬ್ಬಿಣ ಆಕ್ಸೈಡ್‌ ಜೊತೆಯಲ್ಲಿ ವರ್ತಿಸಿ ಕರಗಿಸಿದ ಕಬ್ಬಿಣ ಮತ್ತು ಇಂಗಾಲದ ಡೈಯಾಕ್ಸೈಡ್‌‌ನ್ನು ಉತ್ಪಾದಿಸುತ್ತದೆ. ಕುಲುಮೆಯ ವಿಭಿನ್ನ ಭಾಗಗಳಲ್ಲಿರುವ ತಾಪಮಾನವನ್ನು (ಕುಲುಮೆಯು ತಳಭಾಗದಲ್ಲಿ ಅತಿಬೆಚ್ಚಗಿರುತ್ತದೆ) ಅವಲಂಬಿಸಿ, ಕಬ್ಬಿಣವು ಹಲವಾರು ಹಂತಗಳಲ್ಲಿ ಅಪಕರ್ಷಿಸಲ್ಪಡುತ್ತದೆ. ತಾಪಮಾನವು ಸಾಮಾನ್ಯವಾಗಿ 200 °C ಮತ್ತು 700 °C ನಡುವಿನ ವ್ಯಾಪ್ತಿಯಲ್ಲಿರುವ ಮೇಲ್ತುದಿಯಲ್ಲಿ, ಕಬ್ಬಿಣ (II) ಕಬ್ಬಿಣ (III) ಆಕ್ಸೈಡ್‌ ಆಗಿ, ಅಂದರೆ Fe3O4 ಆಗಿ ಕಬ್ಬಿಣದ (III) ಆಕ್ಸೈಡ್‌ ಅಪಕರ್ಷಿಸಲ್ಪಡುತ್ತದೆ.

3 Fe2O3(s) + CO(g) → 2 Fe3O4(s) + CO2(g) [೩೬]

ಕುಲುಮೆಯಲ್ಲಿನ ಮತ್ತಷ್ಟು ಕೆಳಭಾಗದಲ್ಲಿ ಸುಮಾರು 850 °Cನಷ್ಟಿರುವ ತಾಪಮಾನಗಳಲ್ಲಿ, ಕಬ್ಬಿಣದ (II) ಆಕ್ಸೈಡ್ ಆಗಿ ಕಬ್ಬಿಣ (II) ಕಬ್ಬಿಣವು (III) ಅಪಕರ್ಷಿಸಲ್ಪಡುತ್ತದೆ:

Fe3O4(s) + CO(g) → 3 FeO(s) + CO2(g) [೩೬]

ತಾಜಾ ಪೂರೈಕೆಯ ಸಾಮಗ್ರಿಯು ರಾಸಾಯನಿಕ ಕ್ರಿಯೆಯಾ ವಲಯದೊಳಗೆ ಕೆಳಭಾಗಕ್ಕೆ ಸಂಚರಿಸುತ್ತಿದ್ದಂತೆ, ಬಿಸಿ ಇಂಗಾಲದ ಡೈಯಾಕ್ಸೈಡ್‌‌, ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದ ಇಂಗಾಲದ ಮಾನಾಕ್ಸೈಡ್‌, ಮತ್ತು ಗಾಳಿಯಿಂದ ಬರುವ ಸಾರಜನಕ ಇವೆಲ್ಲವೂ ಕುಲುಮೆಯ ಮೂಲಕ ಮೇಲ್ಭಾಗಕ್ಕೆ ಸಂಚರಿಸುತ್ತವೆ. ಸಾಮಗ್ರಿಯು ಕೆಳಮುಖವಾಗಿ ಸಂಚರಿಸಿದಂತೆ, ಪ್ರತಿ-ಪ್ರವಾಹದ ಅನಿಲಗಳು ಎರಡೂ ತೆರನಾದ ಕಾರ್ಯಗಳನ್ನು ಕೈಗೊಳ್ಳುತ್ತವೆ: ಅಂದರೆ, ಪೂರೈಕೆ ಪೂರಣವನ್ನು ಅವು ಪೂರ್ವಭಾವಿಯಾಗಿ ಕಾಯಿಸುತ್ತವೆ ಹಾಗೂ ಸುಣ್ಣಕಲ್ಲನ್ನು ಕ್ಯಾಲ್ಷಿಯಂ ಆಕ್ಸೈಡ್‌ ಮತ್ತು ಇಂಗಾಲದ ಡೈಯಾಕ್ಸೈಡ್‌‌ ಆಗಿ ವಿಘಟಿಸುತ್ತವೆ:

CaCO3(s) → CaO(s) + CO2(g) [೩೬]

1200 °C ಡಿಗ್ರಿಗಳವರೆಗಿನ ವ್ಯಾಪ್ತಿಯನ್ನು ಹೊಂದಿರುವ ಉನ್ನತ ಮಟ್ಟದ ತಾಪಮಾನಗಳಿರುವ ಪ್ರದೇಶಕ್ಕೆ ಕಬ್ಬಿಣದ (II) ಆಕ್ಸೈಡ್‌ ಕೆಳಗೆ ಚಲಿಸುತ್ತಿದ್ದಂತೆ, ಅದು ಮತ್ತಷ್ಟು ಅಪಕರ್ಷಣಗೊಂಡು ಕಬ್ಬಿಣ ಲೋಹವಾಗುತ್ತದೆ:

FeO(s) + CO(g) → Fe(s) + CO2(g) [೩೬]

ಈ ಪ್ರಕ್ರಿಯೆಯಲ್ಲಿ ರೂಪುಗೊಂಡ ಇಂಗಾಲದ ಡೈಯಾಕ್ಸೈಡ್‌‌, ಕರಿಕು ಕಲ್ಲಿದ್ದಲಿನಿಂದಾಗಿ ಇಂಗಾಲದ ಮಾನಾಕ್ಸೈಡ್‌ ಆಗಿ ಮರು-ಅಪಕರ್ಷಿಸಲ್ಪಡುತ್ತದೆ:

C(s) → CO2(g) → 2 CO(g) [೩೬]

ಕುಲುಮೆಯಲ್ಲಿನ ಅನಿಲ ವಾತಾವರಣವನ್ನು ನಿಯಂತ್ರಿಸುವ ಮುಖ್ಯ ರಾಸಾಯನಿಕ ಕ್ರಿಯೆಯನ್ನು ಬೌಡೌರ್ಡ್‌ ರಾಸಾಯನಿಕ ಕ್ರಿಯೆ ಎಂದು ಕರೆಯಲಾಗುತ್ತದೆ:

C + O2 → CO2[೩೫]
CO2 + C → 2CO[೩೫]

ಕುಲುಮೆಯ ಮಧ್ಯಭಾಗದ ವಲಯಗಳಲ್ಲಿ ಸುಣ್ಣಕಲ್ಲಿನ ವಿಘಟನೆಯು ಈ ಕೆಳಕಂಡ ರಾಸಾಯನಿಕ ಕ್ರಿಯೆಯ ಅನುಸಾರ ಮುಂದುವರಿಯುತ್ತದೆ:

CaCO3 → CaO + CO2[೩೧]

ವಿಘಟನೆಯಿಂದ ರೂಪುಗೊಂಡ ಕ್ಯಾಲ್ಷಿಯಂ ಆಕ್ಸೈಡ್‌, ಕಬ್ಬಿಣದಲ್ಲಿರುವ ನಾನಾಬಗೆಯ ಆಮ್ಲೀಯ ಅಶುದ್ಧತೆಗಳೊಂದಿಗೆ (ಗಮನಾರ್ಹವಾಗಿ ಸಿಲಿಕದೊಂದಿಗೆ) ವರ್ತಿಸಿ, ಒಂದು ಫಯಲಿಟಿಕ್‌ ಗಸಿಯನ್ನು ರೂಪಿಸುತ್ತದೆ. ಇದು ಅವಶ್ಯವಾಗಿ ಕ್ಯಾಲ್ಷಿಯಂ ಸಿಲಿಕೇಟ್‌, ಅಂದರೆ CaSiO3 ಆಗಿರುತ್ತದೆ:[೩೫]

SiO2 + CaO → CaSiO3[೩೭]

ಊದುಕುಲುಮೆಯಿಂದ ಉತ್ಪಾದಿಸಲ್ಪಟ್ಟ "ಪೆಡಸು ಕಬ್ಬಿಣ"ವು ಸುಮಾರು ೪–೫%ನಷ್ಟಿರುವ, ತುಲನಾತ್ಮಕವಾಗಿ ಉನ್ನತವಾಗಿರುವ ಒಂದು ಇಂಗಾಲದ ಅಂಶವನ್ನು ಹೊಂದಿರುತ್ತದೆ. ಇದರಿಂದಾಗಿ ಸದರಿ ಬೀಡು ಕಬ್ಬಿಣವು ಅತ್ಯಂತ ಭಂಗುರವಾಗಿರುತ್ತದೆ (ಅಂದರೆ ದೃಢವಲ್ಲದ ಗುಣವನ್ನು ಹೊಂದಿರುತ್ತದೆ), ಮತ್ತು ಇದನ್ನು ತತ್‌ಕ್ಷಣದ ವಾಣಿಜ್ಯೋದ್ದೇಶದ ಬಳಕೆಗೆ ಬಳಸಿಕೊಳ್ಳುವ ಸಾಧ್ಯತೆಯು ಸೀಮಿತವಾಗಿರುತ್ತದೆ. ಕೆಲವೊಂದು ಪೆಡಸು ಕಬ್ಬಿಣವನ್ನು ಬೀಡು ಕಬ್ಬಿಣದ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಇಂಗಾಲ ಅಂಶವನ್ನು ತಗ್ಗಿಸಿಕೊಳ್ಳುವ ಸಲುವಾಗಿ ಹಾಗೂ ಸನಾನಾಬಗೆಯ ದರ್ಜೆಗಳಲ್ಲಿರುವ ಸಲಕರಣೆಗಳು ಮತ್ತು ನಿರ್ಮಾಣ ಸಾಮಗ್ರಿಗಳನ್ನು ಉತ್ಪಾದಿಸುವ ಸಲುವಾಗಿ, ಊದುಕುಲುಮೆಗಳಿಂದ ಉತ್ಪಾದಿಸಲ್ಪಟ್ಟ ಪೆಡಸು ಕಬ್ಬಿಣದ ಬಹುಭಾಗವು ಮತ್ತಷ್ಟು ಸಂಸ್ಕರಣಕ್ಕೆ ಒಳಗಾಗುತ್ತದೆ. ಊದುಕುಲುಮೆಗಳ ದಕ್ಷತೆಯು ಏಕಪ್ರಕಾರವಾಗಿ ವಿಕಸನಗೊಳ್ಳುತ್ತಿದೆಯಾದರೂ, ಊದುಕುಲುಮೆಯ ಒಳಭಾಗದಲ್ಲಿನ ರಾಸಾಯನಿಕ ಪ್ರಕ್ರಿಯೆಯು ಎಂದಿನಂತೆ ಅದೇ ಆಗಿ ಉಳಿದಿರುತ್ತದೆ ಎಂಬುದು ಗಮನಾರ್ಹ ಅಂಶ. ಅಮೆರಿಕನ್‌ ಐರನ್‌ ಅಂಡ್‌ ಸ್ಟೀಲ್‌ ಇನ್‌ಸ್ಟಿಟ್ಯೂಟ್‌ ಅನುಸಾರ, "ದೊಡ್ಡಗಾತ್ರದ, ಪರಿಣಾಮಕಾರಿಯಾಗಿರುವ ಕುಲುಮೆಗಳು ಕಬ್ಬಿಣ ತಯಾರಿಸುವ ಇತರ ತಂತ್ರಜ್ಞಾನಗಳಿಗಿಂತ ಸ್ಪರ್ಧಾತ್ಮಕವಾಗಿರುವ ವೆಚ್ಚಗಳಲ್ಲಿ ಬಿಸಿ ಲೋಹವನ್ನು ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವುದರಿಂದ, ಊದುಕುಲುಮೆಗಳು ಮುಂದಿನ ಸಹಸ್ರಮಾನದವರೆಗೂ ಉಳಿದುಕೊಳ್ಳುತ್ತವೆ."[೩೧] ಊದುಕುಲುಮೆಗಳ ಅತಿದೊಡ್ಡ ಅನನುಕೂಲತೆಗಳ ಪೈಕಿ ಒಂದೆಂದರೆ, ಇಂಗಾಲದಿಂದ ಕಬ್ಬಿಣ ಆಕ್ಸೈಡ್‌ಗಳು ಅಪಕರ್ಷಿಸಲ್ಪಟ್ಟು ಕಬ್ಬಿಣವು ರೂಪುಗೊಂಡಾಗ ಇಂಗಾಲದ ಡೈಯಾಕ್ಸೈಡ್‌‌ ಅನಿವಾರ್ಯವಾಗಿ ಉತ್ಪಾದನೆಯಾಗುತ್ತದೆ ಮತ್ತು ಅಲ್ಲಿ ಯಾವುದೇ ಮಿತವ್ಯಯದ ಪರ್ಯಾಯಕ್ಕೆ ಅವಕಾಶವಿರುವುದಿಲ್ಲ - ಪ್ರಪಂಚದಲ್ಲಿ ಕಂಡುಬರುತ್ತಿರುವ CO ಹೊರಸೂಸುವಿಕೆಗಳ ನಿದರ್ಶನಗಳಲ್ಲಿನ ತಪ್ಪಿಸಿಕೊಳ್ಳಲಾಗದ ಕೈಗಾರಿಕಾ ಕೊಡುಗೆದಾರರ ಪೈಕಿ ಉಕ್ಕುತಯಾರಿಕಾ ಪ್ರಕ್ರಿಯೆಯು ಒಂದೆನಿಸಿಕೊಂಡಿದೆ (ನೋಡಿ: ಹಸಿರುಮನೆ ಅನಿಲಗಳು). ಊದುಕುಲುಮೆಯ ಹಸಿರುಮನೆ ಅನಿಲ ಹೊರಸೂಸುವಿಕೆಗಳಿಂದ ಉದ್ಭವವಾಗಿರುವ ಸವಾಲಿನ ಕುರಿತಾಗಿ ULCOS (ಅಲ್ಟ್ರಾ ಲೋ CO ಸ್ಟೀಲ್‌ಮೇಕಿಂಗ್‌) ಎಂಬ ಒಂದು ಪ್ರಗತಿಯಲ್ಲಿರುವ ಐರೋಪ್ಯ ಕಾರ್ಯಕ್ರಮವು ಗಮನ ಹರಿಸುತ್ತಿದೆ.[೩೮] ನಿರ್ದಿಷ್ಟ ಹೊರಸೂಸುವಿಕೆಗಳನ್ನು (ಪ್ರತಿ ಟನ್‌ ಉಕ್ಕಿಗೆ ಹೊರಹೊಮ್ಮುವ CO ಪ್ರಮಾಣ) ಕನಿಷ್ಟಪಕ್ಷ ೫೦%ನಷ್ಟು ತಗ್ಗಿಸುವುದಕ್ಕೆ ಸಂಬಂಧಿಸಿದಂತೆ, ಹಲವಾರು ಹೊಸ ಪ್ರಕ್ರಿಯೆಯ ಮಾರ್ಗಗಳು ಪ್ರಸ್ತಾವಿಸಲ್ಪಟ್ಟಿವೆ ಮತ್ತು ಆಳವಾಗಿ ಪರಿಶೀಲಿಸಲ್ಪಟ್ಟಿವೆ. COನ್ನು ಸೆರೆಹಿಡಿದಿಡುವ ಮತ್ತು ಮತ್ತಷ್ಟು ಸಂಗ್ರಹಣೆ ಮಾಡುವ (CCS) ಕುರಿತಾಗಿ ಕೆಲವರು ನೆಚ್ಚಿಕೊಂಡಿದ್ದರೆ, ಜಲಜನಕ, ವಿದ್ಯುಚ್ಛಕ್ತಿ ಮತ್ತು ಜೀವರಾಶಿಯ ವಿಧಾನಗಳೆಡೆಗೆ ತಿರುಗುವ ಮೂಲಕ ಕಬ್ಬಿಣ ಮತ್ತು ಉಕ್ಕು ಉತ್ಪಾದನೆಯಿಂದ ಇಂಗಾಲವನ್ನು ನಿರ್ಮೂಲಗೊಳಿಸುವ ವಿಧಾನವನ್ನು ಇನ್ನು ಕೆಲವರು ಆರಿಸಿಕೊಂಡಿದ್ದಾರೆ.[೩೯] ಸ್ವತಃ ಊದುಕುಲುಮೆ ಪ್ರಕ್ರಿಯೆಯೊಳಗೆ CCSನ್ನು ಸಂಯೋಜಿಸುವ ಒಂದು ತಂತ್ರಜ್ಞಾನವು ಮೇಲ್ಮಟ್ಟದ-ಅನಿಲದ ಮರುಬಳಕೆಯ ಊದುಕುಲುಮೆ ಎಂದು ಕರೆಯಲ್ಪಟ್ಟಿದ್ದು, ಇದು ಬೆಳವಣಿಗೆಯ ಹಾದಿಯಲ್ಲಿದೆ ಹಾಗೂ ವಾಣಿಜ್ಯೋದ್ದೇಶದ ಗಾತ್ರವೊಂದಕ್ಕೆ ಪ್ರಮಾಣಾನುಸಾರ ವರ್ಧಿಸುವ ಊದುಕುಲುಮೆಯು ಪ್ರಗತಿಯಲ್ಲಿದೆ. ನಿಗದಿಪಡಿಸಲಾಗಿರುವ ಕಾಲಮಿತಿಗೆ ಅನುಸಾರವಾಗಿ, ಉದಾಹರಣೆಗೆ, ಹೊರಸೂಸುವಿಕೆಗಳನ್ನು ಗಮನಾರ್ಹವಾಗಿ ತಗ್ಗಿಸಲು EU ವತಿಯಿಂದ ನಿಗದಿ ಪಡಿಸಲಾಗಿರುವ ಕಾಲಮಿತಿಗೆ ಅನುಸಾರವಾಗಿ, ೨೦೧೦ರ ದಶಕದ ಅಂತ್ಯದೊಳಗಾಗಿ ಈ ತಂತ್ರಜ್ಞಾನವು ಸಂಪೂರ್ಣವಾಗಿ ನಿರೂಪಿಸಲ್ಪಡಬೇಕಿದೆ. ವಿಸ್ತೃತ ನಿಯೋಜನೆಯು ೨೦೨೦ರ ನಂತರ ಕೈಗೂಡಬಹುದಾಗಿದೆ.

ಶಿಲಾ ಉಣ್ಣೆಯ ತಯಾರಿಕೆ

[ಬದಲಾಯಿಸಿ]

ಶಿಲಾ ಉಣ್ಣೆ ಅಥವಾ ಬಂಡೆ ಉಣ್ಣೆ ಎಂಬುದು ಒಂದು ಖನಿಜದ ನೂತ ಎಳೆಯಾಗಿದ್ದು, ಇದನ್ನು ಒಂದು ನಿರೋಧನ ಉತ್ಪನ್ನವಾಗಿ ಹಾಗೂ ನೀರುಬೇಸಾಯಗಳಲ್ಲಿ ಬಳಸಲಾಗುತ್ತದೆ. ಅತ್ಯಂತ ಕಡಿಮೆ ಮಟ್ಟಗಳಲ್ಲಿ ಲೋಹದ ಆಕ್ಸೈಡ್‌ಗಳನ್ನು ಒಳಗೊಂಡಿರುವ ಭಿನ್ನ ಪ್ರತ್ಯಾಮ್ಲದ ಬಂಡೆಯನ್ನು ಪೂರೈಸಲಾದ ಊದುಕುಲುಮೆಯೊಂದರಲ್ಲಿ ಇದನ್ನು ತಯಾರಿಲಾಗುತ್ತದೆ. ಪರಿಣಾಮಕ ಗಸಿಯನ್ನು ಹೊರಗೆ ಸೆಳೆಯಲಾಗುತ್ತದೆ ಮತ್ತು ಅದನ್ನು ನೂಲುವಿಕೆಗೆ ಒಳಪಡಿಸಿ ಬಂಡೆ ಉಣ್ಣೆಯ ಉತ್ಪನ್ನವನ್ನು ರೂಪಿಸಲಾಗುತ್ತದೆ.[೪೦] ಒಂದು ಅನಪೇಕ್ಷಿತ ಉಪ-ಉತ್ಪನ್ನವಾಗಿದ್ದು, ತ್ಯಾಜ್ಯದೊಳಗೆ ಸಾಗಿಸಲ್ಪಡುವ ಅತ್ಯಂತ ಸಣ್ಣ ಪ್ರಮಾಣಗಳ ಲೋಹಗಳನ್ನೂ ಈ ವಿಧಾನದಲ್ಲಿ ಉತ್ಪಾದಿಸಲಾಗುತ್ತದೆ.

ವಸ್ತುಸಂಗ್ರಹಾಲಯ ತಾಣಗಳಾಗಿ ಮಾರ್ಪಾಡಾಗಿರುವ ಕಾರ್ಯಾಚರಣೆಯನ್ನು ನಿಲ್ಲಿಸಿದ ಊದುಕುಲುಮೆಗಳು

[ಬದಲಾಯಿಸಿ]

ಕಾರ್ಯಾಚರಣೆಯನ್ನು ನಿಲ್ಲಿಸಿರುವ ಊದುಕುಲುಮೆಯನ್ನು ಕೆಡವಿಹಾಕುವುದು ಅಥವಾ ಒಂದು ಹೊಸದಾದ, ಸುಧಾರಿತ ಕುಲುಮೆಯಿಂದ ಅದನ್ನು ಬದಲಾಯಿಸುವುದು, ಅಥವಾ ಸದರಿ ಪ್ರದೇಶದ ಅನುಧಾವಿತ ಬಳಕೆಗಾಗಿ ಸಮಗ್ರ ತಾಣವನ್ನೇ ಕೆಡವಿ ಹಾಕುವುದು ಇವೆಲ್ಲವೂ ಬಹಳ ಕಾಲದಿಂದಲೂ ಒಂದು ಸಾಮಾನ್ಯ ಕಾರ್ಯವಿಧಾನವಾಗಿ ನಡೆದುಕೊಂಡು ಬಂದಿತ್ತು. ಇತ್ತೀಚಿನ ದಶಕಗಳಲ್ಲಿ, ಹಲವಾರು ದೇಶಗಳು ತಮ್ಮ ಕೈಗಾರಿಕಾ ಇತಿಹಾಸದ ಒಂದು ಭಾಗವಾಗಿ ಊದುಕುಲುಮೆಗಳ ಮೌಲ್ಯವನ್ನು ಅರಿತುಕೊಂಡಿವೆ. ಕೈಬಿಡಲಾದ ಉಕ್ಕಿನ ಗಿರಣಿಗಳನ್ನು ಕೆಡವಿಹಾಕುವುದಕ್ಕೆ ಬದಲಾಗಿ ಅವನ್ನು ವಸ್ತುಸಂಗ್ರಹಾಲಯಗಳಾಗಿ ಮಾರ್ಪಡಿಸಲಾಗುತ್ತಿದೆ ಅಥವಾ ಬಹು-ಉದ್ದೇಶದ ಉದ್ಯಾನಗಳಾಗಿ ಸಂಯೋಜಿಸಲಾಗುತ್ತಿದೆ. ಹೀಗೆ ಸಂರಕ್ಷಿಸಲ್ಪಟ್ಟ ಅತಿಹೆಚ್ಚಿನ ಸಂಖ್ಯೆಯ ಐತಿಹಾಸಿಕ ಊದುಕುಲುಮೆಗಳು ಜರ್ಮನಿಯಲ್ಲಿ ಅಸ್ತಿತ್ವದಲ್ಲಿವೆ; ಇಂಥ ಇತರ ತಾಣಗಳು ಸ್ಪೇನ್‌, ಫ್ರಾನ್ಸ್‌, ಝೆಕ್‌ ಗಣರಾಜ್ಯ, ಜಪಾನ್‌, ಲಕ್ಸೆಂಬರ್ಗ್‌, ಪೋಲೆಂಡ್‌, ಮೆಕ್ಸಿಕೊ, ರಷ್ಯಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಕಂಡುಬರುತ್ತವೆ.

ಇವನ್ನೂ ಗಮನಿಸಿ‌

[ಬದಲಾಯಿಸಿ]

ಉಲ್ಲೇಖಗಳು‌

[ಬದಲಾಯಿಸಿ]
  1. ೧.೦ ೧.೧ ಎಬ್ರೆ, ಪುಟ ೩೦.
  2. ಅರ್ಲಿ ಐರನ್‌ ಇನ್‌ ಚೈನಾ, ಕೊರಿಯಾ, ಅಂಡ್‌, ಮತ್ತು ಜಪಾನ್‌ Archived 5 February 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಡೊನಾಲ್ಡ್‌ B. ವ್ಯಾಗ್ನರ್‌‌, ಮಾರ್ಚ್‌ ೧೯೯೩
  3. Needham, Joseph (1986), Science and Civilisation in China, Volume 4: Physics and Physical Technology, Part 2, Mechanical Engineering, Taipei: Cambridge University Press, p. 370, ISBN 0521058031.
  4. ದಿ ಅರ್ಲಿಯೆಸ್ಟ್‌ ಯೂಸ್‌ ಆಫ್‌ ಐರನ್‌ ಇನ್‌ ಚೈನಾ Archived 18 July 2006[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಡೊನಾಲ್ಡ್‌ B. ವ್ಯಾಗ್ನರ್‌‌, ೧೯೯೯
  5. ಡೊನಾಲ್ಡ್‌ B. ವ್ಯಾಗ್ನರ್‌‌, 'ಚೈನೀಸ್‌ ಬ್ಲಾಸ್ಟ್‌‌ ಫರ್ನೇಸಸ್‌ ಫ್ರಂ ದಿ ೧೦ತ್‌ ಸೆಂಚುರಿ ಟು ೧೪ತ್‌ ಸೆಂಚುರಿ' ಹಿಸ್ಟಾರಿಕಲ್‌ ಮೆಟಲರ್ಜಿ ೩೭(೧) (೨೦೦೩), ೨೫-೩೭; ಮೂಲತಃ ಇದರಲ್ಲಿ ಪ್ರಕಟಿಸಲ್ಪಟ್ಟಿತು: ವೆಸ್ಟ್‌ ಏಷ್ಯನ್‌ ಸೈನ್ಸ್‌, ಟೆಕ್ನಾಲಜಿ, ಅಂಡ್‌ ಮೆಡಿಸಿನ್‌ ೧೮ (೨೦೦೧), ೪೧-೭೪.
  6. ಎಬ್ರೆ, ಪುಟ ೧೫೮.
  7. ಡಂಕನ್‌ E. ಮಿಲ್ಲರ್‌ ಮತ್ತು N.J. ವಾನ್‌ ಡೆರ್‌ ಮರ್ವೆ, 'ಅರ್ಲಿ ಮೆಟಲ್‌ ವರ್ಕಿಂಗ್‌ ಇನ್‌ ಸಬ್‌ ಸಹಾರನ್‌ ಆಫ್ರಿಕಾ' ಜರ್ನಲ್‌ ಆಫ್‌ ಆಫ್ರಿಕನ್‌ ಹಿಸ್ಟರಿ ೩೫ (೧೯೯೪) ೧-೩೬; ಮಿನ್ಜ್‌ ಸ್ಟೂವರ್‌ ಮತ್ತು N.J. ವಾನ್‌ ಡೆರ್‌ ಮರ್ವೆ, 'ರೇಡಿಯೋಕಾರ್ಬನ್‌ ಕ್ರೊನಾಲಜಿ ಆಫ್‌ ದಿ ಐರನ್‌ ಇನ್‌ ಸಬ್‌-ಸಹಾರನ್‌ ಆಫ್ರಿಕಾ' ಕರೆಂಟ್‌ ಆಂತ್ರಪಾಲಜಿ ೧೯೬೮. ಟೈಲ್‌ಕೋಟ್‌ ೧೯೭೫ (ಕೆಳಗೆ ನೋಡಿ)
  8. ಎ ಹಿಸ್ಟರಿ ಆಫ್‌ ಸಬ್‌-ಸಹಾರನ್‌ ಆಫ್ರಿಕಾ
  9. ದಿ ನ್ಯೂಬಿಯನ್‌ ಪಾಸ್ಟ್‌
  10. ಆರ್ಕಿಯಾಲಾಜಿಕಲ್‌ ಇನ್ವೆಸ್ಟಿಗೇಷನ್ಸ್‌ ಆನ್‌ ದಿ ಬಿಗಿನಿಂಗ್‌ ಆಫ್‌ ಬ್ಲಾಸ್ಟ್‌ ಫರ್ನೇಸ್‌-ಟೆಕ್ನಾಲಜಿ ಇನ್‌ ಸೆಂಟ್ರಲ್‌ ಯುರೋಪ್‌
  11. A. ವೆಟರ್‌ಹೋಮ್‌, 'ಬ್ಲಾಸ್ಟ್‌ ಫರ್ನೇಸ್‌ ಸ್ಟಡೀಸ್‌ ಇನ್‌ ನೋರಾ ಬರ್ಗ್‌ಸ್ಲಾಗ್‌' (ಒರೆಬ್ರೊ ಯುನಿವರ್ಸಿಟಿ ೧೯೯೯, ಜಾರ್ನ್‌ ಓಕ್‌ ಸಂಹಾಲೆ) ISBN ೯೧-೭೬೬೮-೨೦೪-೮
  12. N. ಜೊಕೆನ್‌ಸ್ಟಾಮ್‌, 'ದಿ ಬ್ಲಾಸ್ಟ್‌ ಫರ್ನೇಸ್‌ ಇನ್‌ ಯುರೋಪ್‌ ಡ್ಯೂರಿಂಗ್‌ ದಿ ಮಿಡ್ಲ್‌ ಏಜಸ್‌: ಪಾರ್ಟ್‌ ಆಫ್‌ ಎ ನ್ಯೂ ಸಿಸ್ಟಮ್‌ ಫಾರ್‌ ಪ್ರೊಡ್ಯೂಸಿಂಗ್‌ ರಾಟ್‌ ಐರನ್‌'; G. ಮ್ಯಾಗ್ನಸನ್‌ ಬರೆದ, ದಿ ಇಂಪಾರ್ಟೆನ್ಸ್‌ ಆಫ್‌ ಐರನ್‌ಮೇಕಿಂಗ್‌: ಟೆಕ್ನಲಾಜಿಕಲ್‌ ಇನೊವೇಷನ್‌ ಅಂಡ್‌ ಸೋಷಿಯಲ್‌ ಚೇಂಜ್‌ I - ಇದರಲ್ಲಿರುವಂಥದ್ದು (ಜೆರ್ನ್‌ಕಾನ್‌ಟೊರೆಟ್‌, ಸ್ಟಾಕ್‌ಹೋಮ್‌ ೧೯೯೫), ೧೪೩–೫೩ ಮತ್ತು ಇದೇ ಸಂಪುಟದಲ್ಲಿರುವ ಇತರ ವಿದ್ವತ್‌ಪೂರ್ಣ ಲೇಖನಗಳು.
  13. ವುಡ್ಸ್‌, ಪುಟ ೩೪
  14. ಗಿಂಪೆಲ್‌, ಪುಟ ೬೭.
  15. ವುಡ್ಸ್‌, ಪುಟ ೩೫
  16. ವುಡ್ಸ್‌, ಪುಟ ೩೬.
  17. ೧೭.೦ ೧೭.೧ ವುಡ್ಸ್‌, ಪುಟ ೩೭.
  18. R. W. ವೆರ್ನನ್‌, G. ಮೆಕ್‌ಡೊನೆಲ್ ಮತ್ತು A. ಶ್ಮಿಡ್ಟ್, 'ಆನ್ ಇಂಟಿಗ್ರೇಟೆಡ್ ಜಿಯೋಫಿಸಿಕಲ್ ಆಂಡ್ ಅನಲಿಟಿಕಲ್ ಅಪ್ರೈಸಲ್ ಆಫ್ ಅರ್ಲಿ ಐರನ್‌ ವರ್ಕಿಂಗ್: ಥ್ರೀ ಕೇಸ್‌ ಸ್ಟಡೀಸ್‌' ಹಿಸ್ಟಾರಿಕಲ್ ಮೆಟಲರ್ಜಿ ೩೨(೨) (೧೯೯೮), ಪುಟಗಳು ೭೨-೫ ೭೯
  19. ಡೇವಿಡ್‌ ಡರ್ಬಿಷೈರ್‌, 'ಹೆನ್ರಿ "ಸ್ಟ್ಯಾಂಪ್‌ಡ್‌ ಔಟ್‌ ಇಂಡಸ್ಟ್ರಿಯಲ್‌ ರೆವಲ್ಯೂಷನ್‌"', ದಿ ಡೇಲಿ ಟೆಲಿಗ್ರಾಫ್‌ (೨೧ ಜೂನ್‌ ೨೦೦೨); ವುಡ್ಸ್‌ನಿಂದ ಉಲ್ಲೇಖಿತ.
  20. Schubert, H. R. (1957), History of the British iron and steel industry from c. 450 BC to AD 1775, Routledge & Kegan Paul, pp. 395–397.
  21. B. ಆವ್ಟಿ & C. ವಿಟಿಕ್‌ (P. ಕೋಂಬ್ಸ್‌ ಜೊತೆಗೆ), 'ದಿ ಲಾರ್ಡ್‌ಷಿಪ್‌ ಆಫ್‌ ಕ್ಯಾಂಟರ್‌ಬರಿ, ಐರನ್‌-ಫೌಂಡಿಂಗ್‌ ಅಟ್‌ ಬಕ್ಸ್‌ಟೆಡ್‌, ಅಂಡ್‌ ದಿ ಕಾಂಟಿನೆಂಟಲ್‌ ಆಂಟೆಸೆಡೆಂಟ್ಸ್‌ ಆಫ್‌ ಕೆನನ್‌-ಫೌಂಡಿಂಗ್‌ ಇನ್‌ ದಿ ವೀಲ್ಡ್‌' ಸಸೆಕ್ಸ್‌ ಆರ್ಕಿಯಾಲಾಜಿಕಲ್‌ ಕಲೆಕ್ಷನ್ಸ್‌ ೧೪೦ (೨೦೦೪ for ೨೦೦೨), ಪುಟಗಳು ೭೧–೮೧.
  22. P. W. ಕಿಂಗ್‌, 'ದಿ ಪ್ರೊಡಕ್ಷನ್‌ ಅಂಡ್‌ ಕನ್ಸಂಪ್ಷನ್‌ ಆಫ್‌ ಐರನ್‌ ಇನ್‌ ಅರ್ಲಿ ಮಾಡರ್ನ್ ಇಂಗ್ಲೆಂಡ್‌ ಅಂಡ್‌ ವೇಲ್ಸ್‌' ಇಕನಾಮಿಕ್‌ ಹಿಸ್ಟರಿ ರಿವ್ಯೂ LVIII(೧), ೧-೩೩; G. ಹ್ಯಾಮರ್ಸ್‌ಲೇ, 'ದಿ ಚಾರ್‌ಕೋಲ್‌ ಐರನ್‌ ಇಂಡಸ್ಟ್ರಿ ಅಂಡ್‌ ಇಟ್ಸ್‌ ಫ್ಯೂಯೆಲ್‌ ೧೫೪೦–೧೭೫೦' ಇಕನಾಮಿಕ್‌ ಹಿಸ್ಟರಿ ರಿವ್ಯೂ ಕ್ರಮಾಂಕ II, XXVI (೧೯೭೩), ಪುಟಗಳು ೫೯೩–೬೧೩.
  23. Yakovlev, V. B. (1957), "Development of Wrought Iron Production", Metallurgist, New York: Springer, 1 (8): 545, doi:10.1007/BF00732452, ISSN 0026-0894, archived from the original on 11 ಏಪ್ರಿಲ್ 2020, retrieved 13 ಜನವರಿ 2008. {{citation}}: Unknown parameter |month= ignored (help)
  24. ಐರನ್‌, ಜೆಂಡರ್‌, ಅಂಡ್‌ ಪವರ್‌ - ಯೂಜಿನಿಯಾ W. ಹರ್ಬರ್ಟ್‌
  25. Raistrick, Arthur (1953), Dynasty of Iron Founders: The Darbys and Coalbrookedale, York: Longmans, Green.
  26. ಹೈಡ್‌
  27. Trinder, Barrie Stuart; Trinder, Barrie (2000), The Industrial Revolution in Shropshire, Chichester: Phillimore, ISBN 1860771335.
  28. ಬಿರ್ಚ್‌, ಪುಟಗಳು ೧೮೧–೯.
  29. ಹೈಡ್‌, ಪುಟ ೧೫೯.
  30. Made in Ukraine, archived from the original on 1 ಫೆಬ್ರವರಿ 2009, retrieved 20 ಮೇ 2008.
  31. ೩೧.೦ ೩೧.೧ ೩೧.೨ ೩೧.೩ ೩೧.೪ ೩೧.೫ "AISI". Archived from the original on 10 ಮೇ 2007. Retrieved 9 ಆಗಸ್ಟ್ 2021.
  32. ೩೨.೦ ೩೨.೧ McNeil, Ian (1990), An encyclopaedia of the history of technology, Taylor & Francis, p. 163, ISBN 0415013062.
  33. Strassburger, Julius H. (1969), Blast furnace: Theory and Practice, Taylor & Francis, p. 564, ISBN 0677104200.
  34. Whitfield, Peter, Design and Operation of a Gimbal Top Charging System (PDF), archived from the original (PDF) on 5 ಮಾರ್ಚ್ 2009, retrieved 22 ಜೂನ್ 2008.
  35. ೩೫.೦ ೩೫.೧ ೩೫.೨ ೩೫.೩ "Blast Furnace". Science Aid. Archived from the original on 17 ಡಿಸೆಂಬರ್ 2007. Retrieved 30 ಡಿಸೆಂಬರ್ 2007.
  36. ೩೬.೦ ೩೬.೧ ೩೬.೨ ೩೬.೩ ೩೬.೪ ೩೬.೫ Rayner-Canham & Overton (2006), Descriptive Inorganic Chemistry, Fourth Edition, New York: W. H. Freeman and Company, pp. 534–535, ISBN 9780716776956.
  37. Dr. K. E ಲೀ, ಫಾರ್ಮ್‌ ಟೂ ಸೈನ್ಸ್‌ (ಬಯಾಲಜಿ, ಕೆಮಿಸ್ಟ್ರಿ, ಫಿಸಿಕ್ಸ್‌)
  38. "ಆರ್ಕೈವ್ ನಕಲು". Archived from the original on 21 ನವೆಂಬರ್ 2008. Retrieved 7 ಮಾರ್ಚ್ 2011.
  39. ICIT-ರೆವ್ಯೂ ಡೆ ಮೆಟಲರ್ಜಿ, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ಸಂಚಿಕೆಗಳು, ೨೦೦೯
  40. "ವಾಟ್‌ ಈಸ್‌ ಸ್ಟೋನ್‌ ವೂಲ್‌?". Archived from the original on 4 ಡಿಸೆಂಬರ್ 2010. Retrieved 7 ಮಾರ್ಚ್ 2011.

ಗ್ರಂಥಸೂಚಿ

[ಬದಲಾಯಿಸಿ]
  • Birch, Alan (2005), The Economic History of the British Iron and Steel Industry, 1784-1879, Routledge, ISBN 0415382483
  • Ebrey, Patricia Buckley; Walthall, Anne; Palais, James B. (2005), East Asia: A Cultural, Social, and Political History, Boston: Houghton Mifflin, ISBN 0618133844.
  • Gimpel, Jean (1976), The Medieval Machine: The Industrial Revolution of the Middle Ages, New York: Holt, Rinehart and Winston, ISBN 0030146364.
  • Hyde, Charles K. (1977), Technological Change and the British iron industry, 1700-1870, Princeton: Princeton University Press, ISBN 0691052468.
  • Woods, Thomas (2005), How the Catholic Church Built Western Civilization, Washington, D.C.: Regnery Publ., ISBN 0-89526-038-7.

ಬಾಹ್ಯ ಕೊಂಡಿಗಳು

[ಬದಲಾಯಿಸಿ]