ಲೋಹಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೋಹಶಾಸ್ತ್ರ ಎಂದರೆ ಅದಿರಿನಿಂದ ಲೋಹವನ್ನು ಬೇರ್ಪಡಿಸಿ ಉಪಯೋಗಿಸುವ ವಿಜ್ಞಾನದ ಶಾಖೆ.ಇದರಲ್ಲಿ 'ಸಂಸ್ಕರಣ ಲೋಹಶಾಸ್ತ್ರ 'ಮತ್ತು 'ಭೌತಿಕ' ಅಥವಾ 'ಮಿಶ್ರಲೋಹ' ಲೋಹಶಾಸ್ತ್ರ ವೆಂದು ಎರಡು ವಿಧಗಳು ಬೆಳೆದು ಬಂದಿವೆ.ಸಂಸ್ಕರಣ ಲೋಹ ಶಾಸ್ತ್ರವು ಅದಿರಿನಿಂದ ಲೋಹಗಳನ್ನು ಬೇರ್ಪಡಿಸಿ ಶುದ್ದೀಕರಿಸುವ ವಿಧಾನಗಳನ್ನು ತಿಳಿಸುತ್ತದೆ.