ಉದಯ ಶಂಕರ್
ಉದಯ್ ಶಂಕರ್ | |
---|---|
Born | ೮ ಡಿಸಂಬರ್ ೧೯೦೦ |
Died | ೨೬ ಸೆಪ್ಟೆಂಬರ್ ೧೯೭೭ (ವಯಸ್ಸು ೭೬) |
Nationality | ಭಾರತೀಯ |
Occupation(s) | ನೃತ್ಯಪಟು, ನೃತ್ಯ ನಿರ್ದೇಶಕ |
Spouse | ಅಮಲಾ ಶಂಕರ್ |
Children | ಆನಂದ ಶಂಕರ್, ಮಮತಾ ಶಂಕರ್ |
ಭಾರತದಲ್ಲಿ ಆಧುನಿಕ ನೃತ್ಯದ ಪುರೋಗಾಮಿ, ಮತ್ತು ವಿಶ್ವ ವಿಖ್ಯಾತ ಭಾರತೀಯ ನೃತ್ಯಪಟು ಹಾಗೂ ನೃತ್ಯ ನಿರ್ದೇಶಕರಾದ ಉದಯ್ ಶಂಕರ್ ರವರು[೧] (ಡಿಸೆಂಬರ್ ೮, ೧೯೦೦ - ಸೆಪ್ಟೆಂಬರ್ ೨೬, ೧೯೭೭) ಬಂಗಾಳಿ:উদয় শংকরಭಾರತೀಯ ಶಾಸ್ತ್ರೀಯ, ಜಾನಪದ, ಹಾಗೂ ಬುಡಕಟ್ಟು ನೃತ್ಯದ ಮೂಲಪಾಠಗಳಿಂದ ಪ್ರೇರೇಪಿಸಲ್ಪಟ್ಟ, ಪಾರಂಪರಿಕ ಭಾರತೀಯ ಶ್ರೇಷ್ಠ ನೃತ್ಯಕ್ಕೆ ಪಾಶ್ಚಾತ್ಯ ನಾಟಕೀಯ ಕಲಾಕೌಶಲ್ಯಗಳನ್ನು ಹೊಂದಿಸಲು ಅವರು ಅತ್ಯಂತ ಪ್ರಸಿದ್ಧರಾಗಿದ್ದರು, ಹೀಗೆ ಆಧುನಿಕ ಭಾರತೀಯ ನೃತ್ಯದ ಅಸ್ತಿಭಾರ ಹಾಕುತ್ತಾ, ನಂತರ ಇದನ್ನು ೧೯೨೦ ಹಾಗೂ ೧೯೩೦ ರಲ್ಲಿ ಭಾರತ, ಯುರೋಪ್, ಮತ್ತು ಸಂಯುಕ್ತ ಸಂಸ್ಥಾನಗಳಲ್ಲಿ ಜನಪ್ರಿಯಗೊಳಿಸಿದರು ಹಾಗೂ ವಿಶ್ವ ಭೂಪಟದಲ್ಲಿ ಭಾರತೀಯ ನೃತ್ಯವನ್ನು ಪರಿಣಾಮಕಾರಿಯಾಗಿ ಭದ್ರಪಡಿಸಿದರು.[೨][೩][೪][೫][೬] ೧೯೬೨ ರಲ್ಲಿ, ಸಂಗೀತ, ನೃತ್ಯ ಹಾಗೂ ನಾಟಕಕ್ಕೆ ಭಾರತದ ರಾಷ್ಟ್ರೀಯ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿಯಿಂದ ಅವರ ಜೀವಮಾನದ ಸಾಧನೆಗಾಗಿ, ಅದರ ಅತ್ಯುನ್ನತ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್ಅನ್ನು ಅವರಿಗೆ ನೀಡಲಾಯಿತು, ಮತ್ತು ೧೯೭೧ ರಲ್ಲಿ, ಭಾರತದ ಸರ್ಕಾರವು, ತನ್ನ ಎರಡನೆ ಅತ್ಯಂತ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣವನ್ನು ದಯಪಾಲಿಸಿತು.
ಆರಂಭಿಕ ಜೀವನ, ಮತ್ತು ಶಿಕ್ಷಣ
[ಬದಲಾಯಿಸಿ]ನೈರೈಲಿ ಯಲ್ಲಿ (ವರ್ತಮಾನದ ಬಾಂಗ್ಲಾದೇಶದಲ್ಲರುವ) ಮೂಲಸ್ಥಾನವನ್ನು ಹೊಂದಿದ್ದ ಒಂದು ಬಂಗಾಳಿ ಕುಟುಂಬದಲ್ಲಿ, ರಾಜಾಸ್ಥಾನದ ಉದಯಪುರದಲ್ಲಿ ಉದಯ್ ಶಂಕರ್ ಚೌಧುರಿಯವರು ಜನಿಸಿದರು. ಅವರ ತಂದೆ ಶ್ಯಾಮ ಶಂಕರ್ ಚೌಧುರಿಯವರು, ಒಬ್ಬ ಪ್ರಸಿದ್ಧ ಬ್ಯಾರಿಸ್ಟರು, ತಮ್ಮ ಹಿರಿಯ ಮಗನ ಜನನದ ಸಮಯದಲ್ಲಿ ರಾಜಾಸ್ಥಾನದ ಜಲಾವರ್ ನ ಮಹಾರಾಜರ ಬಳಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ಹೇಮಾಂಗಿನಿ ದೇವಿ, ಒಂದು ಬಂಗಾಳಿ ಜಮೀನ್ದಾರರ ಕುಟುಂಬದ ವಂಶಜರಾಗಿದ್ದರು. ಅವರ ತಂದೆಗೆ ನವಾಬರು 'ಹರ್ ಚೌಧುರಿ' ಎಂಬ ಬಿರುದನ್ನು ಕೊಟ್ಟಿದ್ದರು, ಆದರೆ ಅವರು 'ಹರ್' ಬಿಟ್ಟು ಚೌಧುರಿ ಎಂಬ ಮನೆತನದ ಹೆಸರನ್ನೇ ಇಟ್ಟುಕೊಳ್ಳಲು ಇಷ್ಟಪಟ್ಟರು. ಅವರ ಕಿರಿಯ ಸಹೋದರರು ರಾಜೇಂದ್ರ ಶಂಕರ್, ದೇವೇದ್ರ ಶಂಕರ್, ಭೂಪೇಂದ್ರ ಶಂಕರ್ ಹಾಗೂರವಿ ಶಂಕರ್, ೧೯೨೦ ರಲ್ಲಿ ಜನಿಸಿದರು, ಇವರಲ್ಲಿ ಭೂಪೇಂದ್ರ ಶಂಕರ್ ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ೧೯೨೬ ರಲ್ಲಿ ಮರಣಹೊಂದಿದರು.[೭][೮] ಅವರ ತಂದೆಯವರು ಒಬ್ಬ ಸಂಸ್ಕೃತ ವಿದ್ವಾಂಸರು. ಕಲ್ಕತ್ತ ವಿಶ್ವವಿದ್ಯಾಲಯದಿಂದ ತಮ್ಮ ನೈಪುಣ್ಯತೆಯಿಂದ ಪದವಿ ಪಡೆದರು ಹಾಗೂ ನಂತರ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ, ಅಲ್ಲಿ ಅವರು ಡಾಕ್ಟರ್ ಆಫ್ ಫಿಲಾಸಫಿ ಪಡೆದರು.[೯]. ಅವರ ತಂದೆಯವರು ತಮ್ಮ ಕೆಲಸದ ಕಾರಣವಾಗಿ ಹೆಚ್ಚು ಸಂಚರಿಸುತ್ತಿದ್ದರಿಂದ ಉದಯ್ ರವರ ತಾಯಿಯ ಕಡೆಯ ಚಿಕ್ಕಪ್ಪನ ಮನೆಯಾದ ನಸರತ್ ಪುರದಲ್ಲಿ ತನ್ನ ತಾಯಿ ಹಾಗೂ ಸಹೋದರರ ಜೊತೆ ಆ ಕುಟುಂಬವು ಹೆಚ್ಚು ಸಮಯವು ಕಳೆಯುತ್ತಿತ್ತು. ಉದಯ್ ರವರ ವಿದ್ಯಾಭ್ಯಾಸವೂ ಸಹ ನಸರತ್ ಪುರ್,ಗಾಜಿಪುರ್, ವಾರಣಾಸಿ ಹಾಗೂ ಜಲಾವರ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ನಡೆಯಿತು. ಅವರು ತಮ್ಮ ಗಾಜಿಪುರ್ ಶಾಲೆಯಲ್ಲಿ, ತಮ್ಮ ಡ್ರಾಯಿಂಗ್ ಹಾಗೂ ಕ್ರಾಫ್ಟ್ ಅಧ್ಯಾಪಕರಾದ, ಅಂಬಿಕಾ ಚರಣ್ ಮುಖ್ಯೋಪದ್ಯಾಯರವರಿಂದ, ಸಂಗೀತ ಹಾಗೂ ಛಾಯಾ ಚಿತ್ರಗ್ರಹಣ ವಿದ್ಯೆ ಕಲಿತರು.[೯] ೧೯೧೮ ರಲ್ಲಿ, ತಮ್ಮ ಹದಿನೆಂಟನೆ ವಯಸ್ಸಿನಲ್ಲಿ, ಮುಂಬಯಿನ ಜೆ.ಜೆ. ಕಲಾ ಶಾಲೆ ಹಾಗೂ ನಂತರ ಗಂಧರ್ವ ಮಹಾವಿದ್ಯಾಲಯಗಳಿಗೆ ಅವರು ತರಬೇತಿ ಪಡೆಯಲು ಕಳುಹಿಸಲ್ಪಟ್ಟರು.[೧೦] ಈ ವೇಳೆಗೆ ಜಲಾವರ್ ನ ತಮ್ಮ ಕೆಲಸಕ್ಕೆ ಅವರ ತಂದೆ ಶ್ಯಾಮ ಶಂಕರ್ ರವರು ರಾಜಿನಾಮೆಯಿತ್ತು, ಲಂಡನ್ ಗೆ ಪ್ರಯಾಣ ಬೆಳಸಿದರು, ಅಲ್ಲಿ ಅವರು ಒಬ್ಬ ಇಂಗ್ಲೀಷ್ ಮಹಿಳೆಯನ್ನು ವಿವಾಹವಾಗಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು, ಇದಕ್ಕೂ ಮೊದಲು ಅವರು ಭಾರತೀಯ ನೃತ್ಯ ಮತ್ತು ಸಂಗೀತವನ್ನು ಬ್ರಿಟನ್ನಿನಲ್ಲಿ ಪರಿಚಯಿಸುತ್ತಾ, ಒಬ್ಬ ಹವ್ಯಾಸಿ ಕಲಾಕಾರರ ಸಂಗೀತ ಕಂಪನಿಯ ವ್ಯವಸ್ಥಾಪಕರಾಗಿದ್ದರು. ತದನಂತರ, ಉದಯ್ ಲಂಡನ್ ನಲ್ಲಿ ತಮ್ಮ ತಂದೆಯವರ ಜೊತೆಗೂಡಿದರು, ಹಾಗೂ ೧೯೨೦ ರ ಆಗಸ್ಟ್ ೨೩ ರಲ್ಲಿ, ಲಂಡನ್ನಿನ ರಾಯಲ್ ಕಲಾ ಕಾಲೇಜಿಗೆ ಸೇರಿ, 'ಸರ್ ವಿಲಿಯಂ ರೊಥೆನಸ್ಟೇನ್' ರವರ ಬಳಿ ವರ್ಣ ಚಿತ್ರಕಲೆಯನ್ನು ಅಧ್ಯಯನ ಮಾಡಿದರು. ಇಲ್ಲಿ ಅವರು ತಮ್ಮ ತಂದೆಯವರು ವ್ಯವಸ್ಥೆಗೊಳಿಸಿದ ಲಂಡನ್ನಿನ ಕೆಲವು ಧಾರ್ಮಕ ಪ್ರದರ್ಶನಗಳಲ್ಲಿ ನೃತ್ಯ ಮಾಡಿದರು, ಹಾಗೂ ಅಂತಹ ಒಂದು ಸಂಧರ್ಭದಲ್ಲಿ, ಪ್ರಸಿದ್ಧ ರಷಿಯಾ ಬ್ಯಾಲೆ ನೃತ್ಯಗಾರ್ತಿಯಾದ 'ಅನ್ನಾ ಪಾವಲೋವ' ರು ಅಲ್ಲಿ ಅಕಸ್ಮಾತ್ತಾಗಿ ಹಾಜರಿದ್ದರು, ಇದು ಅವರ ಜೀವನ ವೃತ್ತಿಯಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿತು.[೧೧].
ವೃತ್ತಿಜೀವನ
[ಬದಲಾಯಿಸಿ]ಉದಯ್ ಶಂಕರ್ ರವರು ಭಾರತೀಯ ಶಾಸ್ತ್ರೀಯ ನೃತ್ಯ ರೂಪಗಳಲ್ಲಿ ಯಾವುದರಲ್ಲೂ ಕ್ರಮಬದ್ಧವಾದ ಯಾವುದೇ ತರಬೇತಿಯನ್ನು ಪಡೆದಿರಲಿಲ್ಲ, ಅವರು ಪ್ರಸ್ತುತ ಪಡೆಸಿದ ಎಲ್ಲವೂ ಸೃಜನಾತ್ಮಕವಾದವು.[೧೨] ಯುವಾವಸ್ಥೆಯಿಂದಲೇ, ಬ್ಯಾಲೆಯಷ್ಟೇ ಅವರು ಭಾರತೀಯ ಶಾಸ್ತ್ರೀಯ ಹಾಗೂ ಜನಪದ ನೃತ್ಯಗಳೆರಡಕ್ಕೂ, ಅವರು ತನ್ನನ್ನು ಒಡ್ಡಿ ಕೊಂಡಿದ್ದರು, ತಮ್ಮ ಯುರೋಪಿನ ವಾಸ್ತವ್ಯದ ಅವಧಿಯಲ್ಲಿ, ಹೆಚ್ಚು ಪ್ರಭಾವಿತರಾದ ಅವರು ಎರಡೂ ಶೈಲಿಗಳ ಮೂಲ ಪಾಠಗಳನ್ನು ಒಟ್ಟಿಗೆ ಸೇರಿಸಿ ಒಂದು ಹೊಸ ಉನ್ನತ ನೃತ್ಯ ಪದ್ಧತಿಯನ್ನು ಸೃಷ್ಟಿಸಲು ನಿರ್ಧರಿಸಿದರು. ಅವರು ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲಿ ರಾಜಪುತ್ ವರ್ಣಚಿತ್ರ ಕಲೆ ಹಾಗೂ ಮುಘಲ್ ವರ್ಣಚಿತ್ರ ಕಲೆಯ ಶೈಲಿಗಳನ್ನು ಅಧ್ಯಯನ ಮಾಡಿ ನೃತ್ಯದ ಚಲನೆಗಳನ್ನು ತಮ್ಮ ಪ್ರತಿಮಾಶಾಸ್ತ್ರ ಹಾಗೂ ಶಾಸ್ತ್ರೀಯ ಭಾರತೀಯ ನೃತ್ಯ ಪದ್ಧತಿಗಳನ್ನು ಭಾಷಾಂತರಿಸಲು ಮುನ್ನಡೆದರು. ಮುಂದುವರಿದು ಬ್ರಿಟನ್ನಿನಲ್ಲಿರುವ ಕಾಲದಲ್ಲಿ, ಅವರು ಅನೇಕ ಪ್ರದರ್ಶನಾ ಕಲಾಕಾರರನ್ನು ಭೇಟಿಯಾದರು, ನಂತರ ಅವರು ಕಲೆಯಲ್ಲಿ ಉನ್ನತ ಶಿಕ್ಷಣಕ್ಕಾಗಿ, ಫ್ರೆಂಚ್ ಸರ್ಕಾರದ 'ಪ್ರಿಕ್ಸ್ ಡೆ ರೋಮ್' ವಿದ್ಯಾರ್ಥಿ ವೇತನ ಪಡೆದು ರೋಮ್ ಗೆ ಹೊರಟರು. ಬಹು ಬೇಗನೆ ಅಂತಹ ಕಲಾಕಾರರ ಜೊತೆಗೆ ಅವರ ಸಂಹವನವು ಬೆಳೆದು ಹಾಗೆಯೇ ಸಮಕಾಲೀನವಾದ ಒಂದು ಪದ್ಧತಿಯಲ್ಲಿ ಭಾರತೀಯ ನೃತ್ಯಕ್ಕೆ ಒಂದು ಭಾವನೆಯೂ ಸಹ. ಬಹು ಪ್ರಮುಖವಾಗಿ ರಷಿಯಾ ಬ್ಯಾಲೆ ನೃತ್ಯಗಾರ್ತಿ ಅನ್ನಾ ಪವಲೋವ ರವರ ಜೊತೆಯ ಭೇಟಿ ಅವರ ಜೀವನ ಪಥದಲ್ಲಿ ಒಂದು ತಿರುವಿನ ಬಿಂದುವಾಗಿ ಬಂದಿತು. ಆಕೆಯೂ ಸಹ ಭಾರತ ಆಧಾರಿತ ವಿಷಯಗಳ ಮೇಲೆ ಸಹಕರಿಸಲು ಕಲಾಕಾರರನ್ನು ಹುಡುಕುತ್ತಿದ್ದರು. ಇದು ಹಿಂದು ವಸ್ತುಗಳನ್ನು ಆಧರಿಸಿದ ಅನ್ನಾ ರವರ ಜೊತೆಯ 'ರಾಧಾ - ಕೃಷ್ಣ' ಹಾಗೂ 'ಹಿಂದೂ ವಿವಾಹ' ಅವರ ರಚನೆಯ ಮುಕ್ತಾಯಕ್ಕಾಗಿ 'ಪ್ರಾಚ್ಯ ಪ್ರಭಾವಗಳು' ಬ್ಯಾಲೆಗಳ ರಚನೆಗೆ ಕಾರಣವಾಯಿತು. ಲಂಡನ್ನಿನಲ್ಲಿ, ಕೊವೆಂಟ್ ಗಾರ್ಡನ್, ರಾಯಲ್ ಒಪೆರ ಹೌಸ್ ನಲ್ಲಿ ಈ ಬ್ಯಾಲೆಯನ್ನು ಪ್ರಸ್ತುತ ಪಡಿಸಲಾಯಿತು. ನಂತರ ಅವರು ಮುಂದುವರಿದು ಅಜಂತಾ ಗುಹೆಗಳ ಚಿತ್ರ ಲೇಖನಗಳ ಮೇಲೆ ಆಧರಿಸಿದಂತಹ, ಬ್ಯಾಲೆಗಳನ್ನು ಮನಸ್ಸಿನಲ್ಲೇ ಊಹಿಸಿ, ನಿರ್ದೇಶಿಸಿದರು, ಹಾಗೂ ಆಕೆಯ ಜೊತೆಗೂಡಿ, ಅಮೇರಿಕಾ ಸಂಯುಕ್ತ ಸಂಸ್ಥಾನದುದ್ದಕ್ಕೂ ಪ್ರದರ್ಶಿಸಿದರು,[೧೩] ಮತ್ತು ನಂತರ ಅವರು ಇದನ್ನು 'ಸೃಜನಾತ್ಮಕ ನೃತ್ಯವೆಂದು' ಕರೆದರೂ, ಕೆಲವೇ ಸಮಯದಲ್ಲಿ ಅವರ ನೃತ್ಯದ ಈ ಶೈಲಿಯು ಆ ದಿನಗಳಲ್ಲಿ 'ಶ್ರೇಷ್ಠ - ನೃತ್ಯವೆಂದು' ಪ್ರಸಿದ್ಧವಾಯಿತು.[೧೪] ಅವರು ಪ್ಯಾರಿಸ್ ನಲ್ಲಿ ತಮ್ಮದೇ ಸ್ವಂತದ್ದನ್ನು ಪ್ರಾರಂಭಿಸುವ ಮೊದಲು, ಅನ್ನಾ ರವರ ಜೊತೆಗೂಡಿ ಒಂದುವರೆ ವರ್ಷಗಳ ಕಾಲ ಕೆಲಸ ಮಾಡಿದರು.
೧೯೨೭ ರಲ್ಲಿ, ಶಂಕರ್ ರವರು, ಸೈಮನ್ ಬಾರ್ಬಿರೆ, ಎನ್ನುವ ಫ್ರೆಂಚ್ ಪಿಯಾನೋ ವಾದಕ, ಈಗ ಅವರು ಇವರ ಶಿಷ್ಯರು ಹಾಗೂ ನೃತ್ಯ ಜೊತೆಗಾರರೂ ಸಹ, ಹಾಗೂ ಭಾರತೀಯ ಕಲಾ ಇತಿಹಾಸವನ್ನು ಅಧ್ಯಯನ ಮಾಡಲು ಬಯಸಿದ, ಅಲಿಸ್ ಬೊನ್ನೆರೆ, ಎಂಬ ಒಬ್ಬ ಸ್ವಿಸ್ ಶಿಲ್ಪಿಯ ಜೊತೆಗೂಡಿnl:Alice Boners, ಭಾರತಕ್ಕೆ ಹಿಂದಿರುಗಿದರು. ಭಾರತದಲ್ಲಿ ಒಂದು ಪ್ರದರ್ಶನದ ಕಲಾ ಶಾಲೆಯನ್ನು ಪ್ರಾರಂಭಿಸಲು ಅವರನ್ನು ಒತ್ತಾಯಿಸಿದ, ಸ್ವತಃ ರಬೀದ್ರನಾಥ್ ಟ್ಯಾಗೊರರಿಂದ ಅವರು ಸ್ವಾಗತಿಸಲ್ಪಟ್ಟರು.
೧೯೩೧ ರಲ್ಲಿ ಪ್ಯಾರಿಸ್ ಗೆ ಅವರು ಹಿಂದಿರುಗಿದ ನಂತರ, ತಮ್ಮ ಒಬ್ಬ ಹಿಂದಿನ ಶಿಷ್ಯರು, ಸ್ವಿಸ್ ಶಿಲ್ಪ ಅಲಿಸ್ ಬೊನ್ನೆರೆರ ಜೊತೆ ಗೂಡಿ ಸೇರಿ, ಅವರು ಯುರೋಪಿನ ಮೊದಲ ಭಾರತೀಯ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿದರು. ಅಲ್ಲಿ ಅವರು ವಿಷ್ಣುದಾಸ್ ಶಿರಾಲಿ ಹಾಗೂ ತಿಮಿರ್ ಬರನ್ ರೆಂಬ ಸಂಗೀತರಾರರ ಜೊತೆಗೂಡಿ, ಅವರು ತಮ್ಮ ಹೊಸದಾಗಿ ಕಂಡುಹಿಡಿಯಲ್ಪಟ್ಟ ನೃತ್ಯದ ಚಲನೆಗಳಿಗೆ ಸಹಕರಿಸಲು ಸಂಗೀತಕ್ಕಾಗಿ ಒಂದು ಹೊಸ ಮಾರ್ಗವನ್ನು ಸೃಷ್ಟಿಸಿದರು. ಯುರೋಪಿನಾದ್ಯಾಂತ ಸಂಚರಿಸುವಾಗ ತಮ್ಮ ನೆಲೆಯನ್ನಾಗಿ ಮಾಡಿಕೊಳ್ಳಲು, ಪ್ಯಾರಿಸ್ ನಲ್ಲಿ ಚಾಂಪ್ಸ್ - ಎಲಿಸೀಸ್ ಥಿಯೇಟರ್ ನಲ್ಲಿ, ೧೯೩೧, ಮಾರ್ಚ್ ೩ ರಂದು ನೃತ್ಯ ಪ್ರದರ್ಶನಗಳ ಅವರ ಮೊದಲ ಸರಣಿಯು ನಡೆಯಿತು ಹಾಗೂ ಫ್ರೆಂಚ್ ನೃತ್ಯಗಾರರು ಮತ್ತು ನೃತ್ಯ ನಿರ್ದೇಶಕರ ಜೊತೆ ತಮ್ಮ ಸಂವಹನವನ್ನೂ ಸಹ ಅಭಿನಂದಿಸಿದರು.[೧೫] ಬೇಗನೆ ಅವರು 'ಅರೋನ್ ರಿಚ್ಮಂಡ್' ರ, ಗೀತ ನಾಟಕ ಕಂಪನಿಯ ವ್ಯವಸ್ಥಾಪಕರ ಬೋಸ್ಟನ್ನಿನ 'ಸೆಲೆಬ್ರಿಟಿ ಸೀರೀಸ್', ಇಮಪ್ರೆಸಾರಿಯೊ ಹಾಗೂ ಹೋಲ್ ಹುರೋಕ್ ರ ಸಂಗೀತ ಕಂಪನಿಯ ವ್ಯವಸ್ಥಾಪಕರ ವ್ಯವಸ್ಥೆಯ ಕೆಳಗೆ, 'ಉದಯ್ ಶಂಕರ್ ಹಾಗೂ ಅವರ ಹಿಂದೂ ಬ್ಯಾಲೆ' - ಎಂಬ ಶಿರೋನಾಮೆಯುಳ್ಳ, ತಮ್ಮ ಸ್ವಂತ ತಂಡದ ಜೊತೆಯಲ್ಲಿ, ಅಮೇರಿಕಾ ಮತ್ತು ಯುರೋಪ್ - ಪಾಶ್ಚಿಮಾತ್ಯ ಪ್ರಪಂಚದಾದ್ಯಂತ ಏಳು - ವರ್ಷಗಳ ಪ್ರವಾಸದ ಸಾಹಸ ಕಾರ್ಯದಲ್ಲಿ ತೊಡಗಿದರು. ತಮ್ಮ ತಂಡದ ಜೊತೆ ೮೪ ನಗರ ಪ್ರವಾಸಗಳಿಗೆ ಹೊರಡುವ ಮುನ್ನ, ನ್ಯೂಯಾರ್ಕ್ ನಲ್ಲಿ, ಒಬ್ಬ ಪ್ರೆಂಚ್ ನೃತ್ಯಗಾರ್ತಿ, ಅವರ ನೃತ್ಯ ಸಹಾಯಕಿ ಸಿಂಮ್ಕಿಯ ಜೊತೆ, ಜನವರಿ ೧೯೩೩ ರರಲ್ಲಿ, ಮೊದಲ ಬಾರಿಗೆ ಅವರು ಯು ಎಸ್ ನಲ್ಲಿ ಪ್ರದರ್ಶನ ನೀಡಿದರು.[೧೬][೧೭] ಪಾಶ್ಚಿಮಾತ್ಯ ನಾಟಕೀಯ ಕಲಾ ಕೌಶಲ್ಯದ ತಂತ್ರಗಳನ್ನು ಭಾರತೀಯ ನೃತ್ಯಕ್ಕೆ ಅವರ ಮಾರ್ಪಡಿಸುವಿಕೆಯ ಅವರ ಕಲೆಯು ಭಾರತ ಹಾಗೂ ಪಶ್ಚಿಮಗಳೆರಡರಲ್ಲೂ ಸರಿಯಾಗಿ ಅತಿ ಹೆಚ್ಚು ಜನಪ್ರಿಯವಾಗುವಂತೆ ಮಾಡಿತು, ಮತ್ತು ಅವರನ್ನು ಸರಿಯಾಗಿ ಒಂದು ನಮ್ಮನ್ನು ನಾವು ಕಂಡುಕೊಳ್ಳುವ ಶಾಸ್ತ್ರೀಯ ದೇವಸ್ಥಾನದ ನೃತ್ಯಗಳ ಉದ್ಧಾರವನ್ನು ಹಾಗೂ ಇಲ್ಲಿಯವರೆಗೂ ಅವರ ಕಠಿಣ ಭಾಷಾಂತರಗಳಿಗೆ ಹೆಸರಾದ, ಹಾಗೂ ಅವುಗಳು ತಮ್ಮದೇ ಸ್ವಂತ ಪುನರ್ಜಾಗೃತಿಯನ್ನು ಪರಿಶೀಲಿಸಲೂ ಸಹ, ಅವರ ಸಹೋದರ ರವಿ ಶಂಕರ್ ರವರು ಪಶ್ಚಿಮದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸಲು ಸಹಾಯ ಮಾಡಿದರು.
೧೯೩೬ ರಲ್ಲಿ, ತಮ್ಮ ತಂಡ ಹಾಗೂ ಮಾರ್ಗದರ್ಶನದ ನೃತ್ಯಗಾರ್ತಿ ಸಿಂಮ್ಕಿಯ ಜೊತೆ, ಆರು ತಿಂಗಳು ವಾಸಿಸಲು ಡೋವೆನ್, ಟೊಟ್ನೆಸ್, ಡಾರ್ಟಿಂಗ್ಟನ್ ಹಾಲ್ ಗೆ ಭೇಟಿಕೊಡಲು, ಶಾಂತಿ ನಿಕೇತನ್ ಗೆ ಹತ್ತಿರದ, ಶ್ರೀನಿಕೇತನವನ್ನು ಕಟ್ಟಲು ರಬೀಂದ್ರನಾಥ ಟ್ಯಾಗೋರರಿಗೆ ಮೊದಲು ಸಹಾಯಕರಾಗಿದ್ದ ಲಿಯೋನಾರ್ಡ್ ನೈಟ್ ಎಲ್ಮಹಿರ್ಸ್ಟ ರಿಂದ ಅವರು ಆಮಂತ್ರಿಸಲ್ಪಟ್ಟರು. ಅಲ್ಲದೆ ಆ ದಿನಗಳಲ್ಲಿ ರಷಿಯಾದ ನಾಟಕಕಾರ ಆಂಟೊನ್ ಚೆಖೋವ್ ರ ಸಹೋದರ, ಮೈಖೇಲ್ ಚೆಖೋವ್, ಜರ್ಮನಿಯ ಆಧುನಿಕ ನೃತ್ಯಗಾರ - ನೃತ್ಯ ನಿರ್ದೇಶಕ ಕುರ್ಟಜೂಸ್ ಹಾಗೂ ನೃತ್ಯದ ಭಾವವನ್ನು ಸೃಷ್ಟಿಸಿದ ರುಡಾಲ್ಫ್ ಲಬನ್ ಎಂಬ ಮತ್ತೋರ್ವ ಜರ್ಮನ್ ಸಹ ಅಲ್ಲಿಯೇ ಹಾಜರಿದ್ದರು. ಈ ಅನುಭವವು ಅವರ ಭಾವವುಳ್ಳ ನೃತ್ಯಕ್ಕೆ ಹೆಚ್ಚು ಸಮೃದ್ಧಿಯನ್ನು ಮಾತ್ರ ಸೇರಿಸಿತು.[೧೮] ೧೯೩೮ ರಲ್ಲಿ, ಅವರು ಭಾರತವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡರು, ಹಾಗೂ ಹಿಮಾಲಯದ ಉತ್ತರಾಖಂಡ್ ನಲ್ಲಿ, ಅಲ್ಮೋರಾದಿಂದ ೩ ಕಿ.ಮೀ ದೂರದ ಸಿಮ್ಟೋಲಾದಲ್ಲಿ 'ಉದಯ್ ಶಂಕರ್ ಭಾರತ ಸಾಂಸ್ಕೃತಿಕ ಕೇಂದ್ರವನ್ನು' ಸ್ಥಾಪಿಸಿದರು ಹಾಗೂ ಕಥಕ್ಕಳಿ ಗೆ ಶಂಕರನ್ ನಂಬೂದರಿಯವರನ್ನು, ಭರತ ನಾಟ್ಯಕ್ಕೆ ಕುಂದಪ್ಪ ಪಿಳ್ಳೈ ರವರು, ಮಣಿಪುರಿಗೆ ಆಂಬಿ ಸಿಂಗ್ ರವರು ಹಾಗೂ ಸಂಗೀತಕ್ಕೆ ಉಸ್ತಾದ್ ಅಲ್ಲಾವುದ್ದೀನ್ ಖಾನ್ ರವರನ್ನು ಆಮಂತ್ರಿಸಿದರು. ಭೇಗನೆ, ಅವರು ಗುರುದತ್, ಶಾಂತಿ ಬರ್ಧನ್, ಸಿಂಮ್ಕಿ, ಅಮಲ, ಸತ್ಯವತಿ, ನರೇಂದ್ರ ಶರ್ಮ, ರುಮ ಗುಹ ಥಕುರ್ತ, ಪ್ರಭಾತ್ ಗಂಗೂಲಿ, ಜೋಹ್ರ ಸೆಹಗಲ್, ಉಜ್ರ, ಲಕ್ಷ್ಮಿ ಶಂಕರ್, ಶಾಂತ ಗಾಂಧಿ ಯವರನ್ನು ಒಳಗೊಂಡ ಕಲಾಕಾರರು ಮತ್ತು ನೃತ್ಯಗಾರರ ಒಂದು ತಂಡವನ್ನೇ ಅವರು ಹೊಂದಿದ್ದರು; ಅವರ ಸ್ವಂತ ಸಹೋದರರಾದ ರಾಜೇಂದ್ರ, ದೇವೇಂದ್ರ, ಹಾಗೂ ರವಿ ಯವರೂ ಸಹ ಅವರ ಶಿಷ್ಯರಾಗಿ ಅಲ್ಲಿ ಸೇರಿಕೊಂಡರು. ಆದರೂ ಹಣದ ಕೊರತೆಯ ಕಾರಣ, ೧೯೪೨ ರಲ್ಲಿ ಅಸ್ತಿತ್ವಕ್ಕೆ ಬಂದ ನಾಲ್ಕು ವರ್ಷಗಳ ನಂತರ ಕೇಂದ್ರವು ಮುಚ್ಚಲ್ಪಟ್ಟಿತು. ಅವರ ಶಿಷ್ಯರು ಚದುರಿದಾಗ, ತಮ್ಮ ಶಕ್ತಿಯನ್ನು ಪುನಃ ಊರ್ಜಿತಗೊಳಿಸಿದ ಅವರು ದಕ್ಷಿಣದ ಕಡೆಗೆ ಹೊರಟರು, ಅಲ್ಲಿ ಅವರು ಹಾಗೂ ಅವರ ಪತ್ನಿ, ಅಮಲ ಶಂಕರ್ ನರ್ತಿಸಿದ, ಅವರ ನೃತ್ಯವನ್ನು ಆಧರಿಸಿದ ಕಲ್ಪನಾ (ಊಹೆ) ಎಂಬ ಏಕೈಕ ಚಲನಚಿತ್ರವನ್ನು ೧೯೪೮ ರಲ್ಲಿ ತಯಾರಿಸಿದರು, ಆ ಚಲನಚಿತ್ರವು ಮದ್ರಾಸ್ ನ, ಜೆಮಿನಿ ಸ್ಟೂಡಿಯೊದಲ್ಲಿ ತಯಾರಿಸಲ್ಪಟ್ಟಿತು[೧೯]. ಉದಯ್ ಶಂಕರ್ ೧೯೬೦ ರಲ್ಲಿ ಕೋಲ್ಕತ್ತಾದ, ಬ್ಯಾಲಿಗುಂಜೆ ನಲ್ಲಿ ನೆಲೆನಿಂತರು, ಅಲ್ಲಿ ಮುಂದೆ ೧೯೬೫ ರಲ್ಲಿ, "ಉದಯ್ ಶಂಕರ್ ನೃತ್ಯ ಕೇಂದ್ರ" ವು ಸ್ಥಾಪಿತವಾಯಿತು. ೧೯೬೨ ರಲ್ಲಿ ಭಾರತೀಯ ನೃತ್ಯಕ್ಕೆ ಜೀವಮಾನದ ಕೊಡುಗೆಗಾಗಿ ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್, ಸಂಗೀತ ನಾಟಕ ಅಕಾಡೆಮಿಯ ಉನ್ನತ ಪ್ರಶಸ್ತಿ ಅವರಿಗೆ ಪ್ರದಾನ ಮಾಡಲಾಯಿತು.
ವೈಯಕ್ತಿಕ ಜೀವನ
[ಬದಲಾಯಿಸಿ]ಅವರು 'ಅಮಲ ಶಂಕರ್' ರವರನ್ನು ವಿವಾಹವಾಗಿದ್ದಾರೆ ಹಾಗೂ ಅವರು ೧೯೪೨ ರಲ್ಲಿ 'ಆನಂದ್ ಶಂಕರ್' ಎಂಬ ಪುತ್ರ ಮತ್ತು ೧೯೫೫ ರಲ್ಲಿ ಹುಟ್ಟಿದ. 'ಮಮತ ಶಂಕರ್' ಎಂಬ ಪುತ್ರಿಯನ್ನು ಹೊಂದಿದ್ದಾರೆ. ತಮ್ಮ ಚಿಕ್ಕಪ್ಪ 'ರವಿ ಶಂಕರ್' ಗಿಂತ 'ಡಾ. ಲಾಲ್ ಮಣಿ ಮಿಶ್ರಾ' ರವರ ಬಳಿ ತರಬೇತಿ ಪಡೆದ 'ಆನಂದ ಶಂಕರ್' ರವರು ಒಬ್ಬ ಸಂಗೀತಗಾರ ಹಾಗೂ ಸಂಗೀತ ರಚನಾಕಾರರು, ಬಹು ಬೇಗನೆ ಪಾಶ್ಚಿಮಾತ್ಯ ಹಾಗೂ ಭಾರತೀಯ ಸಂಗೀತ ಶೈಲಿಗಳೆರಡನ್ನೂ ಬಳಸಿಕೊಂಡು ತಮ್ಮ ಫ್ಯೂಷನ್ ಸಂಗೀತಕ್ಕೆ ಪ್ರಸಿದ್ಧರಾದರು. ತಮ್ಮ ತಂದೆ ತಾಯಿಗಳಂತೆ ಒಬ್ಬ ನೃತ್ಯಗಾರ್ತಿಯಾದ ಮಮತ ಶಂಕರ್ ರವರು ಸತ್ಯಜಿತ್ ರೇ ಹಾಗೂ ಮೃಣಾಲ್ ಸೇನ್ ರವರ ಚಲನಚಿತ್ರಗಳಲ್ಲಿ ಕೆಲಸ ಮಾಡಿ ಒಬ್ಬ ಪ್ರಮುಖ ನಟಿಯಾದರು, ಅವರು ಕೋಲ್ಕತ್ತಾದಲ್ಲಿ ಉದಯನ್ ನೃತ್ಯ ತಂಡವನ್ನು ನಡೆಸುತ್ತಾರೆ ಮತ್ತು ವಿಶ್ವದಾದ್ಯಂತ ವ್ಯಾಪಕವಾಗಿ ಸಂಚರಿಸುತ್ತಾರೆ.[೨೦]
ಪರಂಪರೆ
[ಬದಲಾಯಿಸಿ]೧೯೭೭ ರಲ್ಲಿ ಅವರ ಮರಣಾನಂತರ, ಅಮಲ ಶಂಕರ್ ರವರು ಕೋಲ್ಕತ್ತಾ ಶಾಲೆಯನ್ನು ವಹಿಸಿಕೊಂಡರು, ಇದು ಜಾನಪದ ಹಾಗೂ ಶಾಸ್ತ್ರೀಯ ನೃತ್ಯ, ಆಶುಕೃತಿ ರಚನೆ, ವಸ್ತ್ರ ವಿನ್ಯಾಸ ಮುಂತಾದುವುಗಳಲ್ಲಿ ತರಬೇತಿ ಕೊಡುತ್ತಿದೆ. ಅವರಿಗೆ ೧೯೯೧ ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಕೊಡಲಾಯಿತು. ಅವರ ಮಗ, ಆನಂದ್ ಶಂಕರ್ ರವರ ಪತ್ನಿ ತನುಶ್ರೀ ಶಂಕರ್ ರವರೂ ಸಹ ನಗರದಲ್ಲಿ ನೆಲೆಸಿರುವ 'ತನುಶ್ರೀ ಶಂಕರ್ ನೃತ್ಯ ಸಂಸ್ಥೆ' ಯ ಮೂಲಕ, ಭಾರತೀಯ ಆಧುನಿಕ ನೃತ್ಯದ ಅವರ ಶೈಲಿಯನ್ನು, ಬೋಧಿಸಲು ಹಾಗೂ ಪ್ರದರ್ಶನ ನೀಡಲು ಮುಂದುವರಿಸಿದ್ದಾರೆ.[೨೧]. ವರ್ಷಗಳ ನಂತರ, ಅಲ್ಮೋರಾ ದಲ್ಲಿನ ಅವರ ಶಾಲೆಯು ಚದುರಿದ ನಂತರ, ಅವರ ಅನುಯಾಯಿಗಳು ಹಾಗೂ ಸಹಯೋಗಿಗಳು ಅವರ ಸ್ವಂತ ಕೆಲಸದ ಮೂಲಕ ಅವರ ನೃತ್ಯದ ಬದಲಾವಣೆಯ ಶೈಲಿ ಹಾಗೂ ಸೌಂದರ್ಯಗಳನ್ನು ಗ್ರಹಿಸುವುದನ್ನು ಪ್ರಸಾರ ಮಾಡಲು ಮುಂದುವರಿಸಿದರು. ಅನೇಕರು ತಮ್ಮದೇ ಸಂಸ್ಥೆಗಳನ್ನು ರಚಿಸಲು ಪ್ರಾರಂಭಿಸಿದರು, ಹೀಗೆ ಅವರ ಪೀಳಿಗೆಯವರ ನೃತ್ಯಗಾರರ ಮೇಲೆ ಅವರ ಅಪರಿಮಿತ ಕೆಲಸ ಹಾಗೂ ಪ್ರಭಾವದ ಶಾಶ್ವತ ಆಸ್ತಿಯನ್ನು ಸೃಷ್ಟಿಸಿದರು. ಅವುಗಳಲ್ಲಿ, ಗೊಂಬೆಗಳಂತೆ ಪ್ರದರ್ಶನ ನೀಡುವ ಮಾನವ ಜೀವಿಗಳನ್ನು ಉಪಯೋಗಿಸಿಕೊಂಡು ರಾಮಾಯಣ ಬ್ಯಾಲೆಯನ್ನು ಪ್ರಸ್ತುತಪಡಿಸುವಿಕೆಗಳನ್ನು ಸೃಷ್ಟಿಸುವ ಶಾಂತಿ ಬರ್ದಾನ್, ಹಾಗೂ ಪ್ರಾಣಿ ಮತ್ತು ಪಕ್ಷಿಗಳ ಚಲನೆ ಗಳನ್ನು ಸೃಷ್ಟಿಸುವುದರ ಮೂಲಕ, ನೃತ್ಯಕ್ಕೆ ಪಂಚತಂತ್ರದ ಕಥೆಗಳನ್ನೂ ಸಹ ಪರಿಚಯಿಸಿದರು. ಅವರ ಶಾಲೆಯಲ್ಲಿ ಕಲಿತ ಗುರು ದತ್ತ್ ರವರು, ಭಾರತದ ಅತ್ಯಂತ ಶ್ರೇಷ್ಠ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದರು. ಒಬ್ಬ ಶಿಷ್ಯರಾದ, ಲಕ್ಷ್ಮೀ ಶಂಕರ್ ರವರು ಮುಂದೆ ತಮ್ಮ ಹರಿವನ್ನು ಬದಲಾಯಿಸಿಕೊಂಡು, ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಾದರು, ಮುಂದೆ ಉದಯ್ ಶಂಕರ್ ರವರ ತಮ್ಮ ರಾಜೇಂದ್ರ ಶಂಕರ್ ರವರನ್ನು ವಿವಾಹವಾದರು. ಜೋಹ್ರ ಸೆಹಗಲ್ ಭಾರತ ಮತ್ತು ಬ್ರಿಟನ್ ಗಳೆರಡರಲ್ಲೂ, ನಾಟಕ, ದೂರದರ್ಶನ ಹಾಗೂ ಚಲನಚಿತ್ರ ಗಳಲ್ಲಿ ತಮ್ಮದೇ ವೃತ್ತಿಜೀವನವನ್ನು ಪಡೆದರು.[೧೮]. ಸತ್ಯವತಿ ಯವರು ನಂತರ ರಾಮ್ ಗೋಪಾಲ್ ರವರ ಜೊತೆ ಲಂಡನ್ನಿನ ರಾಯಲ್ ಉತ್ಸವದ ಹಾಲ್ ನಲ್ಲಿ ಹಾಗೂ ೧೯೫೬ ರಲ್ಲಿ ಎಡಿನ್ಬರ್ಗ ಉತ್ಸವಗಳಲ್ಲಿಯೂ ನರ್ತಿಸಿದರು. ಅವರು ನಾಲ್ಕು ದಶಕಗಳಿಗೂ ಹೆಚ್ಚುಕಾಲ ಕಲಿಸುವ ಜೀವನ ವೃತ್ತಿಯ ಅವಧಿಯಲ್ಲಿ ನಗರದಲ್ಲಿ ಅನೇಕ ಕಾನ್ವೆಂಟ್ ಶಾಲೆಗಳಲ್ಲಿ ತಮ್ಮ ತರಗತಿಗಳ ಮೂಲಕ ಮುಂಬಯಿಯಲ್ಲಿ ಸಾವಿರಾರು ಯುವತಿಯರಿಗೆ ಭಾರತೀಯ ನೃತ್ಯವನ್ನು ಕಲಿಸಿದರು. ೧೯೮೩ ರಲ್ಲಿ, ಅವರ ವೃತ್ತಿಪರ ಪ್ರಥಮ ಪ್ರವೇಶ ೬೦ ನೇ ವಾರ್ಷಿಕೋತ್ಸವದ ಗುರುತಾಗಿ, ನವ ದೆಹಲಿಯಲ್ಲಿ ಉದಯ್ - ಉತ್ಸವ್ ಸಮಾರಂಭ ಆಚರಣೆ ಎನ್ನುವ ನಾಲ್ಕು ದಿನಗಳ ಒಂದು ಉತ್ಸವವನ್ನು ವ್ಯವಸ್ಥೆ ಮಾಡಿದರು. ಆಗ ಸ್ವತಃ ಸಿತಾರ್ ವಾದಕಾರಾದ ರವಿ ಶಂಕರ್ ರವರಿಂದಲೇ ಗಾಯಕರ ವಾದ್ಯ ಮೇಳ ಹಾಗೂ ಗಾನ ಮಂಡಳಿಯ ಸಂಗೀತ ರಚನೆ ಹಾಗೂ ಒಂದು ವಸ್ತುಪ್ರದರ್ಶನ, ಚಲನಚಿತ್ರಗಳು, ಅವರ ಶಿಷ್ಯರಿಂದ ನೃತ್ಯದ ಪ್ರದರ್ಶನಗಳನ್ನು ಎತ್ತಿತೋರಿಸುವಂತಿದ್ದವು ಹಾಗೂ ರವಿ ಶಂಕರ್ ರವರಿಂದ ಸಂಗೀತದ ಗುಂಪು ನಡೆಯಿತು[೪].. ಅವರ ಜನ್ಮ ಶತಮಾನೋತ್ಸವದ ಆಚರಣೆಗಳು ಸಾಂಪ್ರದಾಯಿಕವಾಗಿ ೨೦೦೧, ಏಪ್ರಿಲ್ ೨೬ ರಿಂದ, ಪ್ಯಾರಿಸ್ ನ ಯುನೆಸ್ಕೊ ಕೇಂದ್ರ ಕಾರ್ಯಸ್ಥಾನದಲ್ಲಿ ಪ್ರಾರಂಭಿಸಲ್ಪಟ್ಟವು, ಅಲ್ಲಿ ತಮ್ಮ ಒಡೆಯನಿಗೆ ಗೌರಾರ್ಪಣೆ ಸಲ್ಲಿಸಲು ವಿಶ್ವದಾದ್ಯಂತದಿಂದ ನೃತ್ಯಗಾರರು, ನೃತ್ಯ ನಿರ್ದೇಶಕರು ಹಾಗೂ ವಿದ್ವಾಂಸರು ಸೇರಿದ್ದರು.[೧೫]
ಪ್ರಶಸ್ತಿಗಳು
[ಬದಲಾಯಿಸಿ]- ೧೯೬೦: ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ - 'ಸೃಜನಾತ್ಮಕ ನೃತ್ಯ' [೨೨]
- ೧೯೯೦: ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್
- ೧೯೭೧: ಪದ್ಮ ವಿಭೂಷಣ
- ೧೯೭೫: ದೇಶಿಕೋತ್ತಮ , ವಿಶ್ವ - ಭಾರತಿ ವಿಶ್ವವಿದ್ಯಾಲಯ
ಡಿಸ್ಕೊಗ್ರಫಿ (ಪೂರ್ಣವಾಗಿಲ್ಲ)
[ಬದಲಾಯಿಸಿ]ಹಿಂದು ಸಂಗೀತಗಾರರ ಮೂಲ ಉದಯ್ ಶಂಕರ್ ಸಂಸ್ಥೆಯು ವಿಶ್ವ ಸಂಸ್ಥೆಗೆ ಐತಿಹಾಸಿಕ ೧೯೩೭ ರ ಭೇಟಿಯ ಅವಧಿಯಲ್ಲಿ ದಾಖಲಿಸಲ್ಪಟ್ಟ ಈ ಆಲ್ಬಮ್ ನಿಂದ ಎಲ್ಲಾ ಜಾಡುಗಳು "ರವಿ ಶಂಕರ್; ಒಂದು ಭಾರತದ ಹೂವುಗಳು" ೨೦೦೭ ರಲ್ಲಿ ಎಲ್ ಧ್ವನಿ ಮುದ್ರಿಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.[೨೩]
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಉದಯ್ ಶಂಕರ್ ಮತ್ತು ಅವರ ಕಲೆ , ಪ್ರೊಜೆಶ್ ಬ್ಯಾನರ್ಜಿ ಅವರಿಂದ. ಪ್ರಕಾಶಕರು ಬಿ.ಆರ್.ಪಬ್ಲಿಕೇಷನ್ಸ್.ಕಾರ್ಪ., ಅವರಿಂದ, ೧೯೮೨.
- ಅವರ ನೃತ್ಯ, ಅವರ ಜೀವನ: ಉದಯ್ ಶಂಕರ್ ಅವರ ಒಂದು ವ್ಯಕ್ತಿಚಿತ್ರ , ಮೋಹನ್ ಖೊಕರ್ ಅವರಿಂದ. ಪ್ರಕಾಷಕರು ಹಿಮಾಲಯನ್ ಪುಸ್ತಕ ಇವರಿಂದ, ೧೯೮೩.
- ಉದಯ್ ಶಂಕರ್ , ಪಶ್ಚಿಮ ಬಂಗಾಲ ರಾಜ್ಯ ಸಂಗೀತ ಅಕಾಡೆಮಿ ಇವರಿಂದ . ಪಶ್ಚಿಮ ಬಂಗಾಲ ರಾಜ್ಯ ಸಂಗೀತ ಅಕಾಡೆಮಿ, ಇವರಿಂದ ಪ್ರಕಟಿತ, ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ. ಪಶ್ಚಿಮ ಬಂಗಾಳ ಸರ್ಕಾರ. ಇವರಿಂದ, ೨೦೦೦.
- ಉದಯ್ ಶಂಕರ್ , ಅಶೋಕ್ ಕುಮಾರ್ ಮುಖ್ಯೋಪಧ್ಯಾಯ್ ಇವರಿಂದ. ೨೦೦೮. ISBN ೦೬೮೮೧೬೮೯೪೯
- ಉದಯ್ ಶಂಕರ್ ಅವರನ್ನು ಗೌರವಿಸಿ , ಫೆರ್ನಾವ್ ಹಾಲ್. ಡಾನ್ಸ್ ಕ್ರೋನಿಕಲ್, ಸಂಪುಟ ೭, ಸಂಚಿಕೆ ೩ ೧೯೮೩ , ಪುಟಗಳು ೩೨೬ - ೩೪೪.
- ಉದಯ್ ಶಂಕರ್ ಅವರನ್ನು ಯಾರು ನೆನಪಿಸಿಕೊಳ್ಳುತ್ತಾರೆ? , ಪ್ರೊಫೆಸರ್ ಜಾನ್ ಎಲ್. ಎರ್ಡಮ್ಯಾನ್ Archived 2011-06-05 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "ಕಣಜ, 'ಉದಯ ಶಂಕರ್'". Archived from the original on 2015-09-08. Retrieved 2014-11-05.
- ↑ ಉದಯ್ ಶಂಕಿರ್ ಎನ್ಸೈಕ್ಲೊಪೆಡಿಯ ಬ್ರಿಟಾನ್ನಿಕ
- ↑ ಉದಯ್ ಶಂಕರ್: a tribute Archived 2010-01-05 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದು, ಡಿಸೆಂಬರ್ ೨೧, ೨೦೦೧.
- ↑ ೪.೦ ೪.೧ ಡಾನ್ಸ್ ವಿವ್ಯೂ; ಒಬ್ಬ ಭಾರತದ ಮೊತ್ತ ಮೊದಲ ರಾಯಭಾರಿಗಳು ನ್ಯು ಯಾರ್ಕ್ ಟೈಮ್ಸ್, ಅಕ್ಟೊಬರ್ ೬, ೧೯೮೫.
- ↑ ಕಲಕತ್ತಾ, ಒಂದು ಜೀವಂತವಾಗಿರುವ ನಗರ: ದಿ ಪ್ರೆಸೆನ್ಟ್ ಆಂಡ್ ಪ್ಯೂಚರ್ , ಸುಕಾಂತ ಚೌಧುರಿ ಇವರಿಂದ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ೨೦೦೭. ಪುಟ ೩೪೯..
- ↑ ಉದಯ್ ಶಂಕರ್ ಭಾರತೀಯರ ನೃತ್ಯಗಳು: ಅವರ ಇತಿಹಾಸ, ನೈಪುಣ್ಯತೆ, ಮತ್ತು ವೈವಿಧ್ಯತೆ , ರೆಗಿನಾಲ್ಡ್ ಮಸ್ಸೇಯ್ ಇವರಿಂದ. ಅಭಿನವ್ ಪಬ್ಲಿಕೇಷನ್ಸ್, ೨೦೦೪. ಐ ಎಸ್ ಬಿ ಎನ್ ೦-೧೯-೨೧೧೫೭೯-೦ ಪುಟಗಳು ೨೨೧-೨೨೫ . ಚಾಪ್ಟ್. ೨೧
- ↑ ಸಂಸಾರದ ವಂಶವೃಕ್ಷ ಮಮತ ಶಂಕರ್ ನೃತ್ಯ ಕಂಪನಿಯ, ಜಾಲತಾಣ.
- ↑ ರವಿ ಶಂಕರ್ ಅವರ ಜೀವನ ಚರಿತ್ರೆ Archived 2011-06-11 ವೇಬ್ಯಾಕ್ ಮೆಷಿನ್ ನಲ್ಲಿ. ರಮೊನ್ ಮ್ಯಗಸ್ಯೆಸೇ ಪ್ರಶಸ್ತಿಯ ಜಾಲತಾಣ.
- ↑ ೯.೦ ೯.೧ ಉದಯ್ ಶಂಕರ್ ಅವರ ಜೀವನ ಚರಿತ್ರೆ ಕಟಚಾಕಲ್.ಕಾಂ.
- ↑ ಉದಯ್ ಶಂಕರ್ Archived 2011-06-04 ವೇಬ್ಯಾಕ್ ಮೆಷಿನ್ ನಲ್ಲಿ. ಬಂಗಾಲದ ಇತಿಹಾಸ.
- ↑ ಭಾರತದ ನೃತ್ಯಗಳು , ರೆಗಿನಾಲ್ಡ್ ಮಸ್ಸೇಯ್ ಇವರಿಂದ. ಪುಟಗಳು ೨೨೨ .
- ↑ ಉದಯ್ ಶಂಕರ್: ಒಂದು ಅಭಿನಂದನೆಗಳು ಸುನಿಲ್ ಕೊಥಾರಿ.
- ↑ ಉದಯ್ ಶಂಕರ್ ಅವರ ಕಥೆ ನಯನ ಭಟ್ ಅವರಿಂದ.
- ↑ ಬ್ಯಾಲೆಯ ಪೂರ್ವಾರ್ಜಿತ ಆಸ್ತಿ ದಿ ಟೈಮ್ಸ್ ಆಫ್ ಇಂಡಿಯ, ಮಾರ್ಚ್ ೨೨, ೨೦೦೩.
- ↑ ೧೫.೦ ೧೫.೧ UNESCO ದವರು ಪ್ಯಾರಿಸ್ ನಲ್ಲಿ ಅತ್ಯಾಕರ್ಶಕ ಶತಮಾನೋತ್ಸವದ ಸಮಾರಂಭಗಳನ್ನು ಆಚರಿಸಿದರು ರೆಡ್ ಇಫ್.ಕಾಂ, ಏಪ್ರಿಲ್ ೨೭, ೨೦೦೧.
- ↑ ಅತಿ ದೊಡ್ಡದಾದ ಪ್ರವಾಸ Archived 2011-01-29 ವೇಬ್ಯಾಕ್ ಮೆಷಿನ್ ನಲ್ಲಿ. ನ್ಯು ಯಾರ್ಕ್ ಟೈಮ್ಸ್, ಅಕ್ಟೊಬರ್ ೩೦, ೧೯೩೩.
- ↑ ಹಿಂದುಸ್ತಾನ್ ದಿಂದ ನೃತ್ಯ ಪಟು Archived 2011-01-29 ವೇಬ್ಯಾಕ್ ಮೆಷಿನ್ ನಲ್ಲಿ. ನ್ಯು ಯಾರ್ಕ್ ಟೈಮ್ಸ್, ಜನವರಿ ೯, ೧೯೩೩.
- ↑ ೧೮.೦ ೧೮.೧ ಸೃಜನಾತ್ಮಕತೆಯನ್ನು ಆಚರಿಸುವುದು: ಉದಯ್ ಶಂಕರ್ ಅವರ ಜೀವನ ಮತ್ತು ಕೆಲಸಗಳು Archived 2017-12-14 ವೇಬ್ಯಾಕ್ ಮೆಷಿನ್ ನಲ್ಲಿ. IGNCA
- ↑ ಉದಯ ಶಂಕರ್ ಐ ಎಮ್ ಡಿ ಬಿನಲ್ಲಿ
- ↑ ನೃತ್ಯವನ್ನು ಕಲಿಸುವಾಗ ಸಂಭಾಷಣೆ: ಏಷಿಯಾ ಫೆಸಿಫಿಕ್ ನಲ್ಲಿ ನೃತ್ಯಗಳ ನಿರ್ಮಾಣ , ಮೊಹದ್. ಅವರಿಂದ. ಅನಿಸ್ ಮೊದ್. ನೊರ್, ವರ್ಲ್ಡ ಡಾನ್ಸ್ ಅಲ್ಲಿಯನ್ಸ್, ಮಲಯ ವಿಶ್ವವಿದ್ಯಾಲಯ. ಪುಸಟ್ ಕೆಬುದಾಯಾನ್. ಕಲ್ಚರಲ್ ಸೆಂಟರ್ ಅವರಿಂದ ಪ್ರಕಟಿಸಲ್ಪಟ್ಟಿತು, ಮಲಯ ವಿಶ್ವವಿದ್ಯಾಲಯ, ೨೦೦೭. ISBN ೯೮೩-೨೦೮೫-೮೫-೩. ಪುಟ ೬೩
- ↑ ಉದಯ್ ಶಂಕರ್
- ↑ ಸೃಜನಾತ್ಮಕ ನೃತ್ಯ Archived 2008-10-05 ವೇಬ್ಯಾಕ್ ಮೆಷಿನ್ ನಲ್ಲಿ. ಸಂಗೀತ ನಾಟಕ್ ಅಕಾಡೆಮಿ ಪ್ರಶಸ್ತಿ ಅಧಿಕೃತ ಘೋಷಣೆಯ ಪಟ್ಟಿಗಳು.
- ↑ ದಿ ಫ್ಲವರ್ಸ್ ಆಫ್ ಇಂಡಿಯ - acmem117cd Archived 2010-11-21 ವೇಬ್ಯಾಕ್ ಮೆಷಿನ್ ನಲ್ಲಿ. ಛೆರ್ರಿ ರೆಡ್ ರೆಕಾರ್ಡ್ಸ್.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಉದಯ್ ಶಂಕರ್―ಸರ್ವ ಶ್ರೇಷ್ಠರಾದ ನೃತ್ಯ ನಿರ್ದೇಶಕ: ಒಂದು ಛಾಯಾಚಿತ್ರದ ದೃಶ್ಯಾವಳಿ Archived 2011-06-05 ವೇಬ್ಯಾಕ್ ಮೆಷಿನ್ ನಲ್ಲಿ.
- ಸೃಜನಶೀಲತೆಯನ್ನು ಆರಾಧಿಸೋಣ: ಉದಯ್ ಶಂಕರ್ ರವರ ಜೀವನ ಮತ್ತು ಕೆಲಸ Archived 2017-12-14 ವೇಬ್ಯಾಕ್ ಮೆಷಿನ್ ನಲ್ಲಿ. IGNCA ಅಲ್ಲಿ
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hCards
- Commons category link is on Wikidata
- Persondata templates without short description parameter
- 1900ರಲ್ಲಿ ಜನಿಸಿದವರು
- 1977 ಮರಣಗಳು
- ರಾಯಲ್ ಸ್ಕೂಲ್ ಆಫ್ ಆರ್ಟ ನಲ್ಲಿನ ಹಳೆಯ ವಿದ್ಯಾರ್ಥಿಗಳು
- ಬೆಂಗಾಲಿ ಕಲಾವಿದರು
- ಭಾರತೀಯ ನೃತ್ಯ ನಿರ್ದೇಶಕರು
- ಭಾರತೀಯ ನರ್ತಕಿಯರು
- ಉದಯ್ ಪುರದಿಂದ ಬಂದ ಜನರು
- ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
- ಸಂಗೀತ ನಾಟಕ ಅಕಾಡಮೀ ಪ್ರಶಸ್ತಿ ಪುರಸ್ಕೃತರು
- ಸರ್ J. J. ಸ್ಕೂಲ್ ಆಫ್ ಆರ್ಟ್ನ ಹಳೆಯ ವಿದ್ಯಾರ್ಥಿಗಳು
- ನೃತ್ಯ ಕಲಾವಿದರು