ಅಯೋವಾ
ಅಯೋವಾ ರಾಜ್ಯ | |||||||||||
| |||||||||||
ಅಧಿಕೃತ ಭಾಷೆ(ಗಳು) | English | ||||||||||
Demonym | Iowan | ||||||||||
ರಾಜಧಾನಿ | Des Moines | ||||||||||
ಅತಿ ದೊಡ್ಡ ನಗರ | Des Moines | ||||||||||
ಅತಿ ದೊಡ್ಡ ನಗರ ಪ್ರದೇಶ | Des Moines metropolitan area | ||||||||||
ವಿಸ್ತಾರ | Ranked 26th in the US | ||||||||||
- ಒಟ್ಟು | 56,272 sq mi (145,743 km²) | ||||||||||
- ಅಗಲ | 310 miles (500 km) | ||||||||||
- ಉದ್ದ | 199 miles (320 km) | ||||||||||
- % ನೀರು | 0.71 | ||||||||||
- Latitude | 40° 23′ N to 43° 30′ N | ||||||||||
- Longitude | 90° 8′ W to 96° 38′ W | ||||||||||
ಜನಸಂಖ್ಯೆ | 30thನೆಯ ಅತಿ ಹೆಚ್ಚು | ||||||||||
- ಒಟ್ಟು | 3,007,856 (2009 est.)[೨] | ||||||||||
- ಜನಸಂಖ್ಯಾ ಸಾಂದ್ರತೆ | 53.5/sq mi (20.7/km²) 35thನೆಯ ಸ್ಥಾನ | ||||||||||
- Median income | $48,075 (24th) | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | Hawkeye Point[೩] 1,670 ft (509 m) | ||||||||||
- ಸರಾಸರಿ | 1,099 ft (335 m) | ||||||||||
- ಅತಿ ಕೆಳಗಿನ ಭಾಗ | Mississippi River[೩] at Keokuk 480 ft (146 m) | ||||||||||
ಸಂಸ್ಥಾನವನ್ನು ಸೇರಿದ್ದು | December 28, 1846 (29th) | ||||||||||
Governor | Chet Culver (D) | ||||||||||
Lieutenant Governor | Patty Judge (D) | ||||||||||
U.S. Senators | Chuck Grassley (R) Tom Harkin (D) | ||||||||||
Congressional Delegation | 3 Democrats, 2 Republicans (list) | ||||||||||
Time zone | CST=UTC-06, CDT=UTC-05 | ||||||||||
Abbreviations | IA US-IA | ||||||||||
Website | www.iowa.gov |
ಅಯೋವಾ /[unsupported input]ˈaɪəwə/ ಎನ್ನುವುದು ಒಂದು ರಾಜ್ಯವಾಗಿದ್ದು ಸಂಯುಕ್ತ ರಾಷ್ಟ್ರದ ಮಧ್ಯಪಶ್ಚಿಮ ಭಾಗದಲ್ಲಿ ನೆಲೆಗೊಂಡಿದ್ದು, ಹೆಚ್ಚಾಗಿ "ಅಮೇರಿಕಾದ ಕೇಂದ್ರಭಾಗ" ಎಂದು ಕರೆಯಲ್ಪಡುತ್ತದೆ. ಇದರ ಹೆಸರು ಹುಟ್ಟಿದ್ದು, ಹಲವಾರು ಭಾರತೀಯ ಅಮೇರಿಕನ್ ಬುಡಕಟ್ಟು ಜನಾಂಗದಲ್ಲಿ ಒಂದಾದ, ಯುರೋಪಿಯನ್ ಅನ್ವೇಷಣೆಯ ಸಮಯದಲ್ಲಿ ಈ ರಾಜ್ಯವನ್ನು ಆಕ್ರಮಿಸಿದಂತಹ ಅಯೋವಾೆ ಜನರಿಂದ.[೪] ಅಯೋವಾ ಹೊಸ ಫ್ರಾನ್ಸ್ ನ ಫ್ರೆಂಚ್ ಕಾಲೊನಿಯ ಒಂದು ಭಾಗವಾಗಿತ್ತು. ಲುವಿಸಿಯಾನಾ ಕೊಂಡ ನಂತರ, ಅಲ್ಲಿಯ ನೆಲೆಸಿಗರು ಕಾರ್ನ್ ಬೆಲ್ಟ್ ನ ಕೇಂದ್ರ ಭಾಗದಲ್ಲಿ ಒಂದು ಕೃಷಿ ಆಧಾರಿತ ಅರ್ಥ ವ್ಯವಸ್ಥೆಯನ್ನು ಸ್ಥಾಪಿಸಿದರು.[೫] ಅನೇಕ ವೇಳೆ ಅಯೋವಾ "ಜಗತ್ತಿನ ಆಹಾರದ ರಾಜಧಾನಿ" ಎಂದು ಕರೆಯಲ್ಪಡುತ್ತದೆ,[೬] ಆದರೆ ಅಯೋವಾದ ಅರ್ಥವ್ಯವಸ್ಥೆ, ಸಂಸ್ಕೃತಿ, ಮತ್ತು ಭೂಭಾಗಗಳು ವೈವಿಧ್ಯಮಯವಾಗಿವೆ. 20ನೆಯ ಶತಮಾನದ ಮಧ್ಯ ಹಾಗೂ ನಂತರದ ಸಮಯದಲ್ಲಿ, ಅಯೋವಾದ ಕೃಷಿ ಅರ್ಥವ್ಯವಸ್ಥೆಯು ಮುಂದುವರಿದ ಉತ್ಪಾದನೆ, ಪರಿಷ್ಕರಣೆ, ಹಣಕಾಸು ವ್ಯವಸ್ಥೆ, ಜೈವಿಕ ತಂತ್ರಜ್ಞಾನ ಮತ್ತು ಹಸಿರು ಶಕ್ತಿ ತಯಾರಿಕೆಯಲ್ಲಿ ವೈವಿಧ್ಯಗೊಂಡ ಆರ್ಥಿಕ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿತು.[೬][೭] ಅಯೋವಾ, ಬದುಕಲು ಸುರಕ್ಷಿತವಾದ ರಾಜ್ಯಗಳ ಪಟ್ಟಿಯಲ್ಲಿ ಒಂದೆಂದು ಗುರುತಿಸಿಕೊಂಡಿದೆ.[೮] ಅಯೋವಾದ ರಾಜಧಾನಿ ಹಾಗೂ ಅತಿ ದೊಡ್ಡ ನಗರಡೆಮೊಯ್ನ್.
ಭೂಗೋಳ
[ಬದಲಾಯಿಸಿ]ಗಡಿರೇಖೆಗಳು
[ಬದಲಾಯಿಸಿ]ಅಯೋವಾ ರಾಜ್ಯವು ಪೂರ್ವದಲ್ಲಿ ಮಿಸ್ಸಿಸಿಪ್ಪಿ ನದಿಯ ಗಡಿರೇಖೆಯನ್ನು ಹೊಂದಿದೆ; ಪಶ್ಚಿಮದಲ್ಲಿ ಮಿಸ್ಸೌರಿ ನದಿ ಮತ್ತು ದೊಡ್ಡ ಸೂ ನದಿಯ ಸೀಮೆಯನ್ನು ಹೊಂದಿದೆ; ಉತ್ತರದ ಗಡಿಯು 43 ಡಿಗ್ರಿ ಕೋನದ ಒಂದು ರೇಖೆಯನ್ನು ಹೊಂದಿದ್ದು, 30 ನಿಮಿಷದ ಉತ್ತರ ಅಕ್ಷಾಂಶ ರೇಖೆಯಾಗಿದೆ.[೯][note ೧] ಮಿಸ್ಸೌರಿ ಮತ್ತು ಅಯೋವಾ ನಡುವಿನಲ್ಲಿ ಸಮನಾಗಿ ಮುಕ್ತಾಯವಾದ ಹನಿ ವಾರ್ (ರಕ್ತಪಾತವಿಲ್ಲದ ಪ್ರಾಂತೀಯ ಜಗಳ) ನಂತರ ಮಿಸ್ಸೌರಿ ವಿ. ಅಯೋವಾ [೧೦] ದಲ್ಲಿ ಯು.ಎಸ್. ಸರ್ವೋಚ್ಛ ನ್ಯಾಯಾಲಯದ ನಿರ್ಧಾರದಂತೆ ದಕ್ಷಿಣ ಗಡಿಯು, ಡೆಮೊಯ್ನ್ ನದಿ ಹಾಗೂ ಅಂದಾಜು 40 ಡಿಗ್ರಿ ಕೋನದ 35 ನಿಮಿಷ ಉತ್ತರದಲ್ಲಿ ಒಂದು ರೇಖೆಯನ್ನು ಹೊಂದಿದೆ.[೧೧] ಅಯೋವಾ 99 ಪ್ರಾಂತ್ಯಗಳನ್ನು, ಆದರೆ 100 ಪ್ರಾಂತೀಯ ಸ್ಥಾನಗಳನ್ನು ಹೊಂದಿದೆ ಏಕೆಂದರೆ ಲೀ ಪ್ರಾಂತ್ಯ ಎರಡು ಸ್ಥಾನಗಳನ್ನು ಹೊಂದಿದೆ. ಅಯೋವಾ ರಾಜಧಾನಿ, ಡೆಮೊಯ್ನ್ ಫೋಕ್ ಪ್ರಾಂತ್ಯದಲ್ಲಿ ನೆಲೆಸಿದೆ.
ಭೂಗರ್ಭ ಮತ್ತು ಭೂಪ್ರದೇಶ
[ಬದಲಾಯಿಸಿ]ಅಯೋವಾದ ಭೂಗರ್ಭ ತಳಪಾಯದ ಆಯಸ್ಸು ಸಾಮಾನ್ಯವಾಗಿ ಪಶ್ಚಿಮದಿಂದ ಪೂರ್ವಕ್ಕೆ ಹೆಚ್ಚಾಗುತ್ತದೆ. ಉತ್ತರಪಶ್ಚಿಮ ಅಯೋವಾವು ಸುಣ್ಣದಕಲ್ಲಿನ ತಳಪಾಯ ಹೊಂದಿದ್ದು ಕ್ರಿ.ಶ. 74 ಮಿಲಿಯನ್ ವರ್ಷಗಳಿಗಿಂತ ಹಳೆಯದ್ದು, ಪೂರ್ವ ಅಯೋವಾವು ಕ್ಯಾಂಬ್ರಿಯನ್ ತಳಪಾಯ ಹೊಂದಿದ್ದು ಇದು ಕ್ರಿ.ಶ. 500 ಮಿಲಿಯನ್ ವರ್ಷಗಳಿಗಿಂತ ಹಿಂದಿನದ್ದಾಗಿದೆ.[೧೨] ಜನಪ್ರಿಯ ಗ್ರಹಿಕೆ ಇದ್ದರೂ, ಅಯೋವಾ ಬಹುಮಟ್ಟಿಗೆ ಸಮತಟ್ಟು ಪ್ರದೇಶದಲ್ಲಿಲ್ಲ; ಬಹುತೇಕ ಪ್ರಾಂತ್ಯಗಳು ಗುಡ್ಡ ಬೆಟ್ಟಗಳನ್ನು ಒಳಗೊಂಡಿದೆ. ಅಯೋವಾವನ್ನು ಭೂರಚನೆಯ ಆದ್ಯತೆಯ[೧೩] ಮೇಲೆ ಅಂದರೆ ಹಿಮರಚನೆ, ಮಣ್ಣು, ಸ್ಥಳಾಕೃತಿ, ಮತ್ತು ನದಿ ಕಾಲುವೆ ವ್ಯವಸ್ಥೆಯ ಆಧಾರದ ಮೇಲೆ ಎಂಟು ಭಾಗಗಳಾಗಿ ವಿಂಗಡಿಸಲಾಗಿದೆ. ಲೋಯೆಸ್ ಗುಡ್ಡಗಳು ದೇಶದ ಪಶ್ಚಿಮ ಅಂಚಿನಲ್ಲಿ ಹರಡಿಕೊಂಡಿವೆ, ಅದರಲ್ಲಿ ಹಲವು ನೂರಾರು ಅಡಿಗಳಷ್ಟು ದಪ್ಪದಾಗಿವೆ.[೧೪] ಉತ್ತರಪೂರ್ವದಲ್ಲಿ, ಮಿಸ್ಸಿಸಿಪ್ಪಿ ನದಿಯ ಉದ್ದಕ್ಕೂ, ಡ್ರಿಫ್ಟ್ ಲೆಸ್ ವಲಯದ ಒಂದು ಭಾಗವನ್ನು ಹೊಂದಿದೆ, ಹೀಗೆ ಅಯೋವಾ ಬಹುಪಾಲು ಪರ್ವತಗಳಂತೆ ಗೋಚರಿಸುವ ಕಡಿದಾದ ಬೆಟ್ಟಗಳನ್ನು ಹಾಗೂ ಕಣಿವೆಗಳನ್ನು ಒಳಗೊಂಡಿದೆ. ಅಲ್ಲಿ ಹಲವಾರು ನೈಸರ್ಗಿಕ ಸರೋವರಗಳಿವೆ, ಅದರಲ್ಲಿ ಪ್ರಮುಖವೆಂದರೆ ಸ್ಪಿರಿಟ್ ಸರೋವರ, ಪಶ್ಚಿಮ ಒಕೊಬೊಜಿ ಸರೋವರ, ಮತ್ತು ಉತ್ತರಪಶ್ಚಿಮ ಅಯೋವಾದಲ್ಲಿ ಪೂರ್ವ ಒಕೊಬೊಜಿ ಸರೋವರ (ಅಯೋವಾ ಗ್ರೇಟ್ ಸರೋವರಗಳು ). ಪೂರ್ವದಲ್ಲಿ ಕ್ಲಿಯರ್ ಸರೋವರವನ್ನು ಹೊಂದಿದೆ. ಮಾನವ ನಿರ್ಮಿತ ಸರೋವರಗಳೆಂದರೆ ಒಡೆಸ್ಸಾ ಸರೋವರ,[೧೫]ಸೇಲೋರ್‌ವಿಲ್ಲೆ ಸರೋವರ, ರೆಡ್ ರಾಕ್ ಸರೋವರ, ಕೋರಲ್‌ವಿಲ್ಲೆ ಸರೋವರ, ಮ್ಯಾಕ್‌ಬ್ರೈಡ್ ಸರೋವರ ಮತ್ತು ರಾತ್‌ಬನ್ ಸರೋವರ. ದೇಶದ ಉತ್ತರಪಶ್ಚಿಮ ಭಾಗವು ಕೂಡ ಗಣನೀಯ ಪ್ರಮಾಣದ ಬ್ಯಾರಿಂಜರ್ ಸ್ಲೂನಂತಹ ತೇವಾಂಶವುಳ್ಳ ಪ್ರದೇಶಗಳನ್ನು ಹೊಂದಿದೆ.
ಜೀವ ವಿಜ್ಞಾನ ಮತ್ತು ಪರಿಸರ
[ಬದಲಾಯಿಸಿ]ಅಯೋವಾದ ನೈಸರ್ಗಿಕ ಸಸ್ಯರಾಶಿಗಳೆಂದರೆ ಉದ್ದನೆಯಹಸಿರುಹುಲ್ಲಿನ ಮೈದಾನ ಮತ್ತು ಎತ್ತರದ ಪ್ರದೇಶದಲ್ಲಿ ದಟ್ಟ ಅರಣ್ಯದ ಜೊತೆಗೆ ಹುಲ್ಲುಗಾವಲು, ಹಾಗೂ ಪ್ರವಾಹ ಪ್ರದೇಶದಲ್ಲಿ ತೇವಾಂಶವುಳ್ಳ ಭೂಮಿಯು ಮತ್ತು ಕಾವಲಿರುವ ನದಿ ಕಣಿವೆಗಳು, ಹಾಗೂ ತೇವಾಂಶವುಳ್ಳ ಹಳ್ಳಗಳನ್ನು ಹೊಂದಿದ ಉತ್ತರದ ಮೈದಾನ ಪ್ರದೇಶಗಳು.[೧೬] ಅಯೋವಾದ ಹೆಚ್ಚಿನ ಭಾಗವು ಕೃಷಿಗೆ ಬಳಸಲ್ಪಡುತ್ತದೆ, ದೆಶದ 60% ಭಾಗವು ಬೆಳೆಯನ್ನು ಬೆಳೆಯಲು ಉಪಯೋಗಿಸಲ್ಪಡುತ್ತದೆ, 30% ಭಾಗವು ಹುಲ್ಲುಗಾವಲನ್ನು (ಹೆಚ್ಚಾಗಿ ಗೋಮಾಳ ಮತ್ತು ಒಣಹುಲ್ಲಿನಿಂದ ಕೂಡಿದ ಕೆಲವು ಮೈದಾನಗಳು ಹಾಗೂ ತೇವಾಂಶಭೂಮಿಯನ್ನು) ಹೊಂದಿದೆ, ಹಾಗೂ 7% ಭಾಗ ಅರಣ್ಯದಿಂದ ಕೂಡಿದೆ; ಉಳಿದ ಪ್ರತಿ 1% ಭಾಗವು ಪಟ್ಟಣವನ್ನು ಹಾಗೂ ನೀರನ್ನು ಒಳಗೊಂಡಿದೆ.[೧೭] ಅಯೋವಾದಲ್ಲಿ ಅಧಿಕ-ದಟ್ಟಣೆಯ ಜಾನುವಾರು ಬಳಕೆಯ ಸ್ಫೋಟದಿಂದ, ಗ್ರಾಮೀಣ ನೀರಿನ ಕಲುಷಿತ ಅಪಾಯವನ್ನು ಹೆಚ್ಚಿಸಿದೆ ಮತ್ತು ವಾತಾವರಣದ ಗುಣಮಟ್ಟದಲ್ಲಿ ಇಳಿಕೆಯನ್ನು ತೋರಿಸಿದೆ.[೧೮][೧೯] ನಕಾರಾತ್ಮಕವಾಗಿ ಅಯೋವಾದ ಪರಿಸರದ ಮೇಲೆ ಪರಿಣಾಮವನ್ನುಂಟುಮಾಡುತ್ತಿರುವ ಬೇರೆ ಬೇರೆ ಅಂಶಗಳೆಂದರೆ ವ್ಯಾಪಕವಾಗಿ ಬಳಕೆಯಾಗುತ್ತಿರುವ ಹಳೆಯ ಮಾದರಿಯ ಕಲ್ಲಿದ್ದಲು-ಉರಿಸಿ ವಿದ್ಯುತ್ ಉತ್ಪಾದನೆ,[೨೦] ಹೆಚ್ಚಿನ ಬೆಳೆ ಉತ್ಪಾದನೆಗೆ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ,[೨೧] ಹಾಗೂ ಭೊಮಿಯಲ್ಲಿ ನೀರುಸಂಗ್ರಹಣೆಯ ಇಳಿಕೆ.[೧೯] ಅಯೋವಾದಲ್ಲಿ ನೈಸರ್ಗಿಕ ಪ್ರದೇಶಗಳ ಕೊರತೆಯಿದೆ; 1% ಕ್ಕಿಂತಲೂ ಕಡಿಮೆ ಉದ್ದಹುಲ್ಲಿನ ಮೈದಾನಗಳಿವೆ, ಅವು ಅಯೋವಾದ ಬಹು ಭಾಗವನ್ನು ಆವರಿಸುವುದಿಲ್ಲ, ಕೇವಲ ದೇಶದ 5% ಭಾಗ ಹೊಂಡಗಳಿಂದ ಕೂಡಿದ ತೇವಾಂಶಯುತ ಮೈದಾನ ಪ್ರದೇಶಗಳು ಉಳಿದುಕೊಂಡಿವೆ, ಹಾಗೂ ಹೆಚ್ಚಿನ ಮೂಲ ಅರಣ್ಯಗಳು ಕಾಣೆಯಾಗಿದೆ.[೨೨] ಯು.ಎಸ್. ರಾಷ್ಟ್ರಗಳ, ಸಾರ್ವಜನಿಕ ಭೂಮಿ ಇರುವ ಪಟ್ಟಿಯಲ್ಲಿ ಅಯೋವಾ 49ನೆಯ ಸ್ಥಾನವನ್ನು ಹೊಂದಿದೆ.[೨೩] ಅಯೊವಾದಲ್ಲಿ ಅಪಾಯದಲ್ಲಿರುವ ಅಥವಾ ವಿಪತ್ತಿಗೆ ಸಿಲುಕಿದ ಪ್ರಾಣಿಸಮೂಹಗಳೆಂದರೆ ಬಾಲ್ಡ್ ಈಗಲ್ (ಬಿಳಿ ತಲೆಯ ಹದ್ದು), ಇಂಟೀರಿಯರ್ ಲೀಸ್ಟ್ ಟರ್ನ್, ಪೈಪಿಂಗ್ ಪ್ಲೊವರ್, ಇಂಡಿಯಾನಾ ಬಾವಲಿ, ಪಾಲಿಡ್ ಸ್ಟರ್ಜಿಯನ್, ಅಯೋವಾ ಪ್ಲೀಸ್ಟೊಸಿನ್ ಲ್ಯಾಂಡ್ ಸ್ನೇಲ್ (ಬಸವನ ಹುಳು), ಹಿಗಿನ್ಸ್ ಐ ಪರ್ಲಿ ಮಸ್ಸೆಲ್, ಹಾಗೂ ಟೊಪೆಕಾ ಶೈನರ್.[೨೪] ಅಪಾಯಕ್ಕೆ ಸಿಲುಕಿದ ಅಥವಾ ವಿಪತ್ತಿನಲ್ಲಿರುವ ಸಸ್ಯರಾಶಿಗಳೆಂದರೆ ವೆಸ್ಟರ್ನ್ ಪ್ರೇರಿ ಫ್ರಿಂಜ್ಡ್ ಆರ್ಚಿಡ್, ಈಸ್ಟರ್ನ್ ಪ್ರೇರಿ ಫ್ರಿಂಜ್ಡ್ ಆರ್ಚಿಡ್, ಮೇಡ್ಸ್ ಮಿಲ್ಕ್ ವೀಡ್, ಪ್ರೇರಿ ಬುಶ್ ಕ್ಲವರ್, ಮತ್ತು ನಾರ್ತರ್ನ್ ವೈಲ್ಡ್ ಮೊಂಕ್‌ಶೂಡ್.[೨೫]
ವಾಯುಗುಣ
[ಬದಲಾಯಿಸಿ]ಅಯೋವಾ, ಹೆಚ್ಚಾಗಿ ಮಿಡ್‌ವೆಸ್ಟ್ ನಲ್ಲಿರುವಂತೆ, ತೇವದ ಭೂಖಂಡ ವಾತಾವರಣವನ್ನು ಜೊತೆಗೆ ವಿಪರೀತ ಸೆಖೆ ಹಾಗೂ ಚಳಿ ಎರಡನ್ನೂ ರಾಜ್ಯಾದ್ಯಂತ (ಕೊಪ್ಪನ್ ವಾತಾವರಣ ವಿಂಗಡಣೆಯಂತೆ Dfa ) ಹೊಂದಿದೆ. ಕಿಯೊಕುಕ್‌ನಲ್ಲಿ, ಮಿಸ್ಸಿಸಿಪ್ಪಿ ನದಿ ಸರಾಸರಿಯಾಗಿ ಹರಿಯುವಾಗ ಡೆಮೊಯ್ನನಲ್ಲಿ ಸರಾಸರಿ ವಾರ್ಷಿಕ ತಾಪಮಾನ50 °F (10 °C); ಉತ್ತರದ ಕೆಲವು ಪ್ರದೇಶದಲ್ಲಿನ ಅಂಕಿ ಅಂಶಗಳನ್ನು45 °F (7 °C) ಹೊಂದಿರುತ್ತದೆ52 °F (11 °C). ಚಳಿಗಾಲವು ಚುರುಕಾಗಿರುತ್ತದೆ ಮತ್ತು ಹಿಮಪಾತವು ಸಾಮಾನ್ಯವಾದಂತದ್ದು. ಪ್ರಚಂಡ ವಾತಾವರಣ ಕಾಲದ ಪ್ರಾರಂಭದಲ್ಲಿ, ವಸಂತ ಋತುವಿನ ಆಗಮನವಾಗುತ್ತದೆ. ಅಯೋವಾ, ಪ್ರತಿ ವರ್ಷ ಸುಮಾರು 50 ದಿನಗಳ ಕಾಲ ಗುಡುಗಿನಿಂದ ಕೂಡಿದ ಚಂಡಮಾರುತ ಚಟುವಟಿಕೆಯನ್ನು ಎದುರಿಸುತ್ತದೆ.[೨೬] ಹಾಗೂ ಬೇಸಿಗೆ ತಿಂಗಳಿನಲ್ಲಿ ಸುಂಟರಗಾಳಿಯು ಸಾಮಾನ್ಯವಾದಂತದ್ದು, ಅಂದಾಜು ಒಂದು ವರ್ಷಕ್ಕೆ ಸರಿಸುಮಾರು 37 ಸುಂಟರಗಾಳಿಗಳು.[೨೭] 2008ರಲ್ಲಿ, ಅಯೋವಾದಲ್ಲಿ ಸುಂಟರಗಾಳಿಯಿಂದ ಹನ್ನೆರಡು ಜನರು ಸಾವನ್ನಪ್ಪಿದರು, ಇದು 1968ರ ನಂತರದ ಭಯಾನಕ ವರ್ಷವೆನಿಸಿತು ಮತ್ತು 2001ರ ಮೊತ್ತಕ್ಕೆ ಹೋಲಿಸಿದಾಗ 105 ಸುಂಟರಗಾಳಿ ಬೀಸುವುದರೊಂದಿಗೆ ಇದು ಎರಡನೆಯ ಅತಿ ಹೆಚ್ಚು ಅಂಕಿ ಎಂದು ಕೂಡ ಅನಿಸಿತು.[೨೮] ಅಯೋವಾದ ಬೇಸಿಗೆಯು, ಸೆಖೆ ಮತ್ತು ಆರ್ದ್ರತೆಗೆ ಪರಿಚಿತವಾಗಿದೆ, ಹಗಲಿನ ತಾಪಮಾನ ಕೆಲವೊಮ್ಮೆ ಹತಿರಕ್ಕೆ 90 °F (32 °C)ಹಾಗೂ ಕೆಲವೊಮ್ಮೆ ಅದನ್ನೂ ಮೀರಿರುತ್ತದೆ100 °F (38 °C). ದೇಶದಲ್ಲಿ ಸಾಮಾನ್ಯ ಚಳಿಗಾಲವು ಅತಿಶೀತಕ್ಕಿಂತಲೂ ಕಡಿಮೆ ಇರುತ್ತದೆ, ಹಾಗೂ ಇನ್ನೂ ಕುಸಿತವನ್ನು ಕಾಣುತ್ತದೆ.0 °F (−18 °C) ಅಯೋವಾವು ಮಳೆಯ ಸುರಿತಕ್ಕೆ ಸಂಬಂಧಿಸಿದಂತೆ ದೇಶದುದ್ದಕ್ಕೂ ಇಳಿಕೆಯಲ್ಲಿ ವ್ಯತ್ಯಾಸವನ್ನು ಹೊಂದಿದೆ, ದೇಶದ ದಕ್ಷಿಣಪೂರ್ವ ಭಾಗಗಳು ವರ್ಷಕ್ಕೆ ಸರಾಸರಿ 38 ಇಂಚು ಮಳೆಯನ್ನು ಪಡೆದರೆ, ಉತ್ತರಪಶ್ಚಿಮ ಭಾಗಗಳು 28 ಇಂಚಿಗಿಂತ ಕಡಿಮೆ ಮಳೆಯನ್ನು ಪಡೆಯುತ್ತವೆ.[೨೯] ಅಯೋವಾದಲ್ಲಿ ಮಳೆಗಾಲದ ವಿಧಾನವು, ಬೇಸಿಗೆಯಲ್ಲಿ ಹೆಚ್ಚು ಮಳೆ ಸುರಿಯುವುದರೊಂದಿಗೆ ಕಾಲಾನುಗುಣವಾಗಿದೆ. ಡೆಮೊಯ್ನನಲ್ಲಿ, ಅಂದಾಜು ದೇಶದ ಮಧ್ಯ ಭಾಗದಲ್ಲಿ, ಏಪ್ರಿಲ್‌ನಿಂದ ಸೆಪ್ಟೆಂಬರ್‌ನೊಳಗೆ 34.72 ಇಂಚಿನ ಮಳೆಯಲ್ಲಿ ಮೂರನೆಯ ಎರಡು ಅಂಶ ಮಳೆಯಾಗುತ್ತದೆ, ಮತ್ತು ಸರಾಸರಿ ವಾರ್ಷಿಕ ಮಳೆಯ ಅರ್ಧದಷ್ಟು ಮಳೆಯು ಮೇನಿಂದ ಆಗಸ್ಟ್ ನಲ್ಲಿ ಸುರಿಯುತ್ತದೆ.[೩೦]
ಐಯೋವಾದ ವಿಭಿನ್ನ ನಗರಗಳ ಸಾಮಾನ್ಯ ಹೆಚ್ಚು ಮತ್ತು ಕಡಿಮೆ ಉಷ್ಣಾಂಶಗಳು(°F) | ||||||||||||
ನಗರ | ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
---|---|---|---|---|---|---|---|---|---|---|---|---|
ಡೇವನ್‌ಪೋರ್ಟ್[೩೧] | 30/13 | 36/19 | 48/29 | 61/41 | 72/52 | 81/63 | 85/68 | 83/66 | 76/57 | 65/45 | 48/32 | 35/20 |
ಡೇಮೋಯಿನ್ | 29/12 | 35/18 | 48/29 | 61/40 | 72/51 | 82/61 | 86/66 | 84/64 | 76/54 | 64/42 | 47/29 | 33/17 |
ಡೆಬ್ಯೂಕ್ | 25/9 | 31/15 | 43/26 | 57/38 | 69/49 | 79/58 | 82/62 | 80/60 | 72/52 | 60/40 | 44/28 | 30/15 |
ಸೂ ನಗರ | 29/8 | 35/15 | 47/26 | 62/37 | 73/49 | 82/58 | 86/63 | 84/61 | 76/50 | 64/38 | 45/25 | 32/13 |
ವಾಟರ್‌ಲೂ | 26/6 | 32/13 | 45/25 | 60/36 | 72/48 | 82/58 | 85/62 | 83/60 | 75/50 | 62/38 | 45/25 | 31/12 |
[೧] Archived 2007-11-16 ವೇಬ್ಯಾಕ್ ಮೆಷಿನ್ ನಲ್ಲಿ. |
ಇತಿಹಾಸ ಪೂರ್ವ
[ಬದಲಾಯಿಸಿ]ಈಗಿನ ಅಯೋವಾಕ್ಕೆ 13,000 ವರ್ಷಕ್ಕೂ ಹಿಂದೆ ಅಮೇರಿಕನ್ ಇಂಡಿಯನ್ನರು ಮೊದಲು ಆಗಮಿಸಿದರು, ಅವರು ಬೇಟೆಗಾರರಾಗಿದ್ದರು ಮತ್ತು ಸಂಗ್ರಹಕಾರರಾಗಿದ್ದು, ಪ್ಲೈಸ್ಟುಸೀನ್ ಹಿಮಶಿಲೆಯ ಭೂಭಾಗದಲ್ಲಿ ವಾಸಿಸುತ್ತಿದ್ದರು. ಯುರೋಪಿಯನ್ ಅನ್ವೇಷಕರು ಅಯೋವಾಕ್ಕೆ ಭೇಟಿ ನೀಡುವ ವೇಳೆಗೆ, ಅಮೇರಿಕನ್ ಇಂಡಿಯನ್ನರು ಸಂಕೀರ್ಣ ಆರ್ಥಿಕ, ಸಾಮಾಜಿಕ, ಮತ್ತು ರಾಜಕೀಯ ವ್ಯವಸ್ಥೆಯ ಜೊತೆಗೆ ವ್ಯಾಪಕವಾಗಿ ನೆಲೆನಿಂತ ವ್ಯವಸಾಯಗಾರರಾಗಿದ್ದರು. ಈ ಮಾರ್ಪಾಡು ಕಾಲಾನುಕ್ರಮದಲ್ಲಿ ನಡೆದಂತಹದ್ದು. ಪ್ರಾಚೀನ ಕಾಲದಲ್ಲಿ (10,500-2,800 ವರ್ಷಗಳ ಹಿಂದೆ), ಅಮೇರಿಕನ್ ಇಂಡಿಯನ್ನರು ಅಲ್ಲಿನ ಸ್ಥಳೀಯ ವಾತಾವರಣಕ್ಕೆ ಮತ್ತು ಪರಿಸರಕ್ಕೆ ಹೊಂದಿಕೊಂಡರು, ಜನಸಂಖ್ಯೆ ಹೆಚ್ಚಾದಂತೆ ನಿಧಾನವಾಗಿ ಅಲ್ಲಿಯೇ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡರು. 3,000 ಸಾವಿರ ವರ್ಷಗಳಿಗಿಂತಲೂ ಹಿಂದೆ, ಪ್ರಾಚೀನ ಕಾಲದ ಕೊನೆಯ ಅವಧಿಯಲ್ಲಿ, ಅಮೇರಿಕನ್ ಇಂಡಿಯನ್ನರು ಅಯೋವಾದಲ್ಲಿ ಗೃಹಸಂಬಂಧಿ ಸಸ್ಯಗಳನ್ನು ಬಳಸಲು ಪ್ರಾರಂಭಿಸಿದರು. ಮುಂದಿನ ವುಡ್‌ಲ್ಯಾಂಡ್ ಅವಧಿಯು, ದಿಬ್ಬ ದಿಣ್ಣೆಗಳ, ಕುಂಬಾರಿಕೆಯ ಬಳಕೆಯಲ್ಲಿ ಹೆಚ್ಚಳವನ್ನು ಜೊತೆಗೆ ಅಭಿವೃದ್ಧಿಗೊಂಡ ಜೀವನ ನಿರ್ವಹಣೆಯ ಪ್ರಾವೀಣ್ಯತೆಯನ್ನು ಕೃಷಿಯಲ್ಲಿ ಮತ್ತು ಸಾಮಾಜಿಕ ಸಂಕೀರ್ಣತೆಯಲ್ಲಿ ಕಂಡಿತು. ಇತಿಹಾಸ ಪೂರ್ವ ಅವಧಿಯ ಕೊನೆಯಲ್ಲಿ (ಕ್ರಿ.ಪೂ. 900ರ ಪ್ರಾರಂಭದಲ್ಲಿ) ಮೆಕ್ಕೆ ಜೋಳದ ಬಳಕೆಯಲ್ಲಿನ ಹೆಚ್ಚಳ ಮತ್ತು ಸಾಮಾಜಿಕ ಬದಲಾವಣೆಗಳು ಸಮಾಜದ ಅಭಿವೃದ್ಧಿಗೆ ಹಾಗೂ ನ್ಯೂಕ್ಲಿಯೇಟೆಡ್ ಒಪ್ಪಂದಕ್ಕೆ ಅನುವು ಮಾಡಿಕೊಟ್ಟಿತು. ಇತಿಹಾಸ ಮಧ್ಯ ಅವಧಿಯಲ್ಲಿ ಯುರೋಪಿಯನ್ ವ್ಯಾಪಾರಿ ಸರಕುಗಳ ಮತ್ತು ರೋಗಗಳ ಜೊತೆಗೆ ಹೊಸ ಬುಡಕಟ್ಟಿನವರ, ಯುರೋಪಿಯನ್ ಮೂಲ ಅನ್ವೇಷಕರ ಮತ್ತು ವ್ಯಾಪಾರಿಗಳ ಆಗಮನದಿಂದ ಅನಿರೀಕ್ಷಿತವಾಗಿ ಜನರ ಸ್ಥಳಾಂತರ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಕ್ರಾಂತಿಯಲ್ಲಿ ಬದಲಾವಣೆಯುಂಟಾಯಿತು. ಅಯೋವಾದಲ್ಲಿ ಮೊದಲ ಯುರೋಪಿಯನ್ ಪರಿಶೋಧನೆಯ ಅವಧಿಯಲ್ಲಿ ಹಲವಾರು ಭಾರತೀಯ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದರು. ಇಲ್ಲಿನ ಬುಡಕಟ್ಟಿನವರು ಡಕೋಟಾ, ಹೋ-ಚಂಕ್, ಐಯೋವೆ, ಮತ್ತು ಓಟೋಗಳನ್ನು ಸೇರಿ ಇತಿಹಾಸ ಪೂರ್ವದ ಒನೆವೋಟಾ ವಂಶದವರಾಗಿವೆ. ಇತಿಹಾಸಪೂರ್ವ ಅಥವಾ ಮಧ್ಯಇತಿಹಾಸದ ಸಮಯದಲ್ಲಿ ಅಯೋವಾಕ್ಕೆ ಆಗಮಿಸಿದ ಜನಾಂಗಗಳೆಂದರೆ ಇಲ್ಲಿನಿವೆಕ್, ಮೆಸ್ಕ್‌ವಾಕಿ, ಒಮಾಹ, ಹಾಗೂ ಸೌಕ್.[೩೨]
ಇತಿಹಾಸ
[ಬದಲಾಯಿಸಿ]ಮೊದಲಿನ ಅನ್ವೇಷಣೆ ಮತ್ತು ವ್ಯಾಪಾರ, 1673-1808
[ಬದಲಾಯಿಸಿ]ಮೊದಲು ತಿಳಿದ ಯುರೋಪಿನ ಅನ್ವೇಷಕರು. ಅಯೊವಾವನ್ನು ದಾಖಲಿಸಿದವರು ಝಾಕ್ ಮಾರ್ಕ್ಯೂಟ್ ಮತ್ತು ಲೂಯಿಸ್ ಜೂಲಿಯಟ್. ಮಿಸಿಸ್ಸಿಪ್ಪಿ ನದಿಯಲ್ಲಿ 1673ರಲ್ಲಿ ಸಂಚರಿಸುವಾಗ ಅಯೋವಾದ ಕಡೆಗಿರುವ ಇಂಡಿಯಾನದ ಅನೇಕ ಹಳ್ಳಿಗಳನ್ನು ದಾಖಲಿಸಿದರು.[೩೩][೩೪] ಅಯೊವಾದ ಪ್ರದೇಶಗಳು 1763ರ ವರೆಗೂ ಪ್ರಾನ್ಸ್‌ನ ಆಡಳಿತದಲ್ಲಿದ್ದವು. ಫ್ರೆಂಚ್, ಫ್ರೆಂಚ್ ಮತ್ತು ಐಂಡಿಯನ್ ಯುದ್ದದಲ್ಲಿ ಅವರ ಸೋಲು ಸನ್ನಿಹಿತವಾಗುವ ಮೊದಲೇ ಒಡೆತನವನ್ನು ಮಿತ್ರರಾಷ್ಟ್ರವಾದ ಸ್ಪೈನ್‌ಗೆ ವರ್ಗಾಯಿಸಿತು.."[೩೫] ಸ್ಪೈನ್ ಅಯೊವಾದ ಪ್ರದೇಶಗಳ ಮೇಲೆ ಅತ್ಯಂತ ಸಡಿಲವಾದ ಹಿಡಿತವನ್ನು ಹೊಂದಿತ್ತು. ಫ್ರೆಂಚರಿಗೆ ಮತ್ತು ಬ್ರಿಟೀಷರಿಗೆ ಮಾರಾಟದ ಪರವಾನಿಗೆಯನ್ನು ಕೊಟ್ಟಿತು. ಅವರು ಮಿಸಿಸ್ಸಿಪ್ಪಿ ಮತ್ತು ಡೆಮೋಯಿನ್ ನದಿಗಳ ದಡದಲ್ಲಿ ವ್ಯಾಪಾರ ಕೇಂದ್ರಗಳನ್ನು ತೆರೆದರು.[೩೩] ಅಯೊವಾ ಲಾ ಲೂಸಿಯಾನೆ ಅಥವಾ ಲೂಸಿಯಾನಾದ ಗಡಿಯ ಭಾಗವೆಂದು ತಿಳಿದಿತ್ತು ಮತ್ತು ಯುರೋಪಿಯನ್ ಮಾರಾಟಗಾರು ಐಂಡಿಯನ್ನರ ಸೀಸವನ್ನು ಮತ್ತು ತುಪ್ಪಳವನ್ನು ಪಡೆಯಲು ಆಸೌಕ್‌ತರಾಗಿದ್ದರು. ಸೌಕ್ ಮತ್ತು ಮೆಸ್ಕ್‌ವಾಕಿ ಜನಾಂಗಗಳು 18ನೇ ಶತಮಾನದ ಕೊನೆ ಮತ್ತು 19ನೇ ಶತಮಾನದ ಆರಂಭದಲ್ಲಿ ಮಿಸಿಸ್ಸಿಪ್ಪಿಯಲ್ಲಿನ ವ್ಯಾಪಾರದ ಮೇಲಿನ ಪರಿಣಾಮಕಾರಿಯಾಗಿ ಹಿಡಿತ ಸಾಧಿಸಿದರು. ಮಿಸಿಸ್ಸಿಪ್ಪಿಯಲ್ಲಿನ ವರ್ತಕರಲ್ಲಿ ಜೂಲಿಯನ್ ಡೆಬ್ಯೂಕ್ , ರಾಬರ್ಟ್ ಲಾ ಸಲ್ಲೆ ಮತ್ತು ಪೌಲ್ ಮರಿನ್ ಮೊದಲಿಗರಾಗಿದ್ದರು.[೩೩] 1808ರ ಮೊದಲಿಗೆ ಮಿಸ್ಸೋರಿ ನದಿಯಲ್ಲಿ ಕಡಿಮೆಯೆಂದರೂ ಐದು ಫ್ರೆಂಚ್ ಮತ್ತು ಆಂಗ್ಲ ವರ್ತಕ ತಾಣಗಳು ನಿರ್ಮಾಣಗೊಂಡಿದ್ದವು.[೩೬] 1800ರಲ್ಲಿ ಸ್ಪೈನ್‌ನ ಒಪ್ಪಂದದಿಂದ ನೆಪೋಲಿಯನ್ ಬೊನೊಪಾರ್ಟೆ ಲೂಸಿಯಾನದ ಮೇಲೆ ನಿಯಂತ್ರಣ ಸಾಧಿಸಿದನು. 1803ರ ಲೂಸಿಯಾನ ಪರ್ಚೇಸ್‌ನ ನಂತರ ಅಯೊವಾ ಅಮೇರಿಕಾ ಸಂಯುಕ್ತ ಸಂಸ್ತಾನದ ಹಿಡಿತಕ್ಕೊಳಪಟ್ಟಿತು. 1805ರಲ್ಲಿ[೩೭] ಹೆಚ್ಚಿನ ಅಯೊವಾವು ಜುಬುಲಾನ್ ಪೈಕ್(Zebulon Pike)ರಿಂದ ನಕಾಶೆ ಮಾಡಲ್ಪಟ್ಟಿತು. ಆದರೆ 1808ರಲ್ಲಿ ಫೊರ್ಟ್ ಮ್ಯಾಡಿಸನ್‌ನ ನಿರ್ಮಾಣದವರೆಗೂ ಅಯೊವಾವು ಯುಎಸ್ ಸೂಕ್ಷ್ಮ ಸೈನಿಕ ಹಿಡಿತದಲ್ಲಿ ಬರಲಿಲ್ಲ.[೩೮]
1812ರ ಯುದ್ಧ ಮತ್ತು ಯುಎಸ್‌ನ ಅಸ್ಥಿರ ಹಿಡಿತ
[ಬದಲಾಯಿಸಿ]ಮೇಲ್ಬಾಗದ ಮಿಸಿಸ್ಸಿಪ್ಪಿಯಲ್ಲಿ ಯುಎಸ್ ಸಾಮ್ರಾಜ್ಯವು ವ್ಯಾಪಾರದ ಮೇಲೆ ಹಿಡಿತ ಸಾಧಿಸಲು ಫೊರ್ಟ್ ಮ್ಯಾಡಿಸನ್‌ನ್ನು ಸ್ಥಾಪಿಸಲಾಯಿತು. ಆದರೆ ಇದು ಅತ್ಯಂತ ಕಳಪೆಯಾಗಿ ವಿನ್ಯಾಸಗೊಳಿಸಲಾಯಿತು ಮತ್ತು ಸೌಕ್ ಮತ್ತು ಹೋ-ಚಂಕ್‌ರಿಗೆ ಇಷ್ಟವಾಗಲಿಲ್ಲ. ಅವರಲ್ಲಿ ಹೆಚ್ಚಿನವರು ಗಡಿಯ ಮೇಲಿನ ಹಕ್ಕನ್ನು ಪರಿತ್ಯಜಿಸದಿದ್ದ ಬ್ರಿಟೀಷರೊಂದಿಗೆ ಮಿತ್ರರಾಗಿದ್ದರು.[೩೮][೩೯] 1813ರಲ್ಲಿ ಫೊರ್ಟ್ ಮ್ಯಾಡಿಸನ್‌ನ್ನು 1812ರ ಯುದ್ಧದಲ್ಲಿ, ಬ್ರಿಟೀಷರ ಬೆಂಬಲವಿರುವ ಐಂಡಿಯನ್ನರು ಸೋಲಿಸಿದರು ಮತ್ತು ವಿಸ್ಕಾನ್ಶನ್‌ನ ಪ್ರೈರಿಯೆ ಡು ಚಿಎನ್ ಪಟ್ಟಣದಲ್ಲಿನ ಫೊರ್ಟ್ ಶೆಲ್ಬಿಯೂ ಬ್ರಿಟೀಷರದಾಯಿತು. ಬ್ಲಾಕ್ ಹಾಕ್ ಫೊರ್ಟ್ ಮ್ಯಾಡಿಸನ್‌ನ ಆಕ್ರಮಣದಲ್ಲಿ ಪಾತ್ರವಹಿಸಿತು.[೪೦][೪೧] ಯುದ್ಧಾನಂತರ ಯು.ಎಸ್, ಮಿನ್ನೆಸೊಟದಲ್ಲಿರುವ ಫೊರ್ಟ್ ಆರ್ಮ್‌ಸ್ಟ್ರಾಂಗ್, ಫೊರ್ಟ್ ಸ್ನೆಲ್ಲಿಂಗ್ ಮತ್ತು ನೆಬ್ರಸ್ಕಾದಲ್ಲಿರುವ ಫೊರ್ಟ್ ಆಕನ್‌ಸನ್‌ನ ನಿರ್ಮಾಣದ ಮೂಲಕ ಆ ಪ್ರದೇಶಗಳ ಮೇಲಿನ ಹಿಡಿವನ್ನು ಮರುಸ್ಥಾಪಿಸಿತು.[೪೨]
ವ್ಯಾಪಾರ ಮತ್ತು ಐಂಡಿಯನ್ನರ ನಿವಾರಣೆ, 1814-1832
[ಬದಲಾಯಿಸಿ]ಯುಎಸ್ ಪೂರ್ವ ಭಾಗದ ಮಿಸಿಸ್ಸಿಪ್ಪಿಯಲ್ಲಿನ ವಸಾಹತುವಿಗೆ ಉತ್ತೇಜನ ಕೊಟ್ಟಿತು ಮತ್ತು ಪಶ್ಚಿಮದಿಂದ ಇಂಡಿಯಾನರನ್ನು ಸ್ಥಳಾಂತರಿಸಲಾಯಿತು. ಸೀಸ ಮತ್ತು ತುಪ್ಪಳದ ವ್ಯಾಪಾರವು ಮುಂದುವರೆಯಿತು. ಆದರೆ ಕಾಯಿಲೆಗಳು ಬಲವಂತದ ಜನರ ಸ್ಥಳಾಂತರವು ಐಂಡಿಯನ್ನರ ಸಂಸ್ಕೃತಿ ಮತ್ತು ಅರ್ಥಶಾಸ್ತ್ರವನ್ನು ಬಲಿ ತೆಗೆದುಕೊಂಡಿತು.
ವಿವಾದಾಸ್ಪದ 1804ರ ಕ್ವಾಶ್‌ಕ್ಯುಏಮ್ ಮತ್ತು ವಿಲಿಯಮ್ ಹೆನ್ರಿ ಹ್ಯಾರಿಸನ್‌ರ ನಡುವಿನ ಒಪ್ಪಂದವು ಹೆಚ್ಚಿನ ಇಲ್ಲಿನೊಯಿಸ್‌ನ್ನು ಯುಎಸ್‌ಗೆ ಶರಣಾಗುವಂತೆ ಮಾಡಿತು.ಇದು ಹೆಚ್ಚಿನ ಸೌಕ್‌ರನ್ನು ಕೆರಳಿಸಿತು ಮತ್ತು 1832ರ ಬ್ಲಾಕ್ ಸೌಕ್ ವಾರ್‌ಗೆ ಕಾರಣವಾಯಿತು. ಬಂಡಾಯಕ್ಕೆ ಶಿಕ್ಷೆಯಾಗಿ ಮತ್ತು ದೊಡ್ಡ ವಸಾಹತು ತಂತ್ರದ ಭಾಗವಾಗಿ ಒಪ್ಪಂದವೇರ್ಪಟ್ಟಿತು. ಇದನ್ನು ಮುಂದೆ ಇಂಡಿಯಾನ ಅಯೊವಾದಿಂದ ಹೊರಹಾಕಲು ರೂಪಿಸಲಾಯಿತು. ಸೌಕ್ ಮತ್ತು ಮೆಸ್ಕ್‌ವಾಕಿಯವರನ್ನು 1832ರಲ್ಲಿ ಮಿಸಿಸ್ಸಿಪ್ಪಿ ಕಂದಕದಿಂದ, 1843ರಲ್ಲಿ ಅಯೊವಾ ನದಿಯ ಕಂದಕದಿಂದ, 1843ರಲ್ಲಿ ಒಟ್ಟು ಅಯೊವಾದಿಂದ ಹೊರಹಾಕಲಾಯಿತು. ಆದರೂ ಹಲವಾರು ಮೆಸ್ಕ್‌ವಾಕಿಗಳು ಗುಪ್ತವಾಗಿ ವಾಪಾಸ್ಸಾದರು ಮತ್ತು ಮೆಸ್ಕ್‌ವಾಕಿ ವಸತಿಯನ್ನು ಸೇರಿಕೊಂಡರು. ಅದು ಇಂದಿಗೂ ಪ್ರಸ್ತುತವಾಗಿದೆ. 1850ರಲ್ಲಿ ಹೊ ಚುಂಕ್‌ವನ್ನು ಮತ್ತು ಡಕೋಟಾವನ್ನು 1850ರ ಕೊನೆಯಲ್ಲಿ ಹೊರಹಾಕಲಾಯಿತು. ನವೀನ ಕೌನ್ಸಿಲ್ ಬ್ಲುಫ್ಸ್‌ಸುತ್ತಲಿನ ಸುತ್ತಲಿನ ಪಾಶ್ಚಮಾತ್ಯ ಅಯೊವಾವನ್ನು ಪೊಟವಟೊಮಿ ಸೇರಿದಂತೆ ಉಳಿದ ಪಶಿಮಕ್ಕೆ ಚಲಿಸಿದ್ದ ಪಂಗಡಗಳನ್ನು ಹೊರಹಾಕಲು ನಿಲ್ದಾಣವನ್ನಾಗಿಸಲಾಯಿತು.
ಯು.ಎಸ್. ಒಪ್ಪಂದ ಮತ್ತು ರಾಜ್ಯತ್ವ 1832-1860
[ಬದಲಾಯಿಸಿ]ಜೂನ್ 1833ರಲ್ಲಿ ಅಮೇರಿಕಾದ ಮೊದಲ ಒಪ್ಪಂದಕಾರರು ಅಯೋವಾಕ್ಕೆ ಹೋದರು.[೪೩] ಮೊದಲನೆಯದಾಗಿ, ಅವರು ಓಹಿಯೋ, ಪೆನ್ಸಿಲ್ವೇನಿಯ, ನ್ಯೂಯಾರ್ಕ್, ಇಂಡಿಯಾನ, ಕೆಂಟಕಿ, ಮತ್ತು ವರ್ಜೀನಿಯ ಕುಟುಂಬದವರಾಗಿದ್ದರು.[೪೩] 1838, ಜುಲೈ 4ರಂದು ಯು.ಎಸ್.ಕಾಂಗ್ರೆಸ್ ಅಯೋವಾದ ರಾಜ್ಯಕ್ಷೇತ್ರವನ್ನು ಸ್ಥಾಪಿಸಿತು. ಅಧ್ಯಕ್ಷ ಮಾರ್ಟಿನ್ ವ್ಯಾನ್ ಬರೆನ್ ಅವರು ರಾಬರ್ಟ್ ಲುಕಸ್ ಅವರನ್ನು ರಾಜ್ಯಕ್ಷೇತ್ರದ ರಾಜ್ಯಪಾಲರನ್ನಾಗಿ ನೇಮಿಸಿದರು, ಇದು ಆ ಸಮಯದಲ್ಲಿ 22 ಕೌಂಟಿಗಳು ಮತ್ತು 23,242 ಜನಸಂಖ್ಯೆಯನ್ನು ಹೊಂದಿತ್ತು.[೪೪] ಪ್ರಾದೇಶಿಕ ಸ್ಥಾನ ಪಡೆದ ತಕ್ಷಣ, ರಾಜ್ಯತ್ವಕ್ಕಾಗಿ ಕೂಗಾಟ ಪ್ರಾರಂಭವಾಯಿತು.
ಡಿಸೆಂಬರ್ 28, 1846ರಂದು ಅಧ್ಯಕ್ಷ ಜೇಮ್ಸ್ ಕೆ.ಪೊಕ್ ಅವರು ಕಾನೂನು ಮಾಡುವ ಅಯೋವಾದ ಪ್ರವೇಶದ ಬಿಲ್ಲಿಗೆ ಸಹಿ ಮಾಡಿದಾಗ ಅಯೋವಾ ಒಕ್ಕೂಟದ 29ನೇ ರಾಜ್ಯವಾಯಿತು. ಒಂದು ಸಲ ಒಕ್ಕೂಟಕ್ಕೆ ಸೇರಿದ ನಂತರ, ರಾಜ್ಯದ ಗಡಿ ವಿವಾದಗಳು ಬಗೆಹರಿಯಿತು, ಮತ್ತು ಹೆಚ್ಚಿನದಾಗಿ ಇದರ ಇಂಡಿಯಾನದಿಂದ ಖರೀದಿಸಿದ ಜಮೀನಾದ ಅಯೋವಾ ವಸಾಹತುಗಾರರು ಮತ್ತು ಹೂಡಿಕೆದಾರರಿಗೆ ಅಭಿವೃದ್ಧಿ ಮತ್ತು ಸಂಘಟಿತ ಕಾರ್ಯಾಚರಣೆ ಕಡೆಗೆ ಮುಖ ಮಾಡಿತು. ಈ ಗಡಿನಾಡು ರಾಜ್ಯವು ತನ್ನ ಸಮೃದ್ಧವಾದ ಕೃಷಿಭೂಮಿ, ಉತ್ತಮ ನಾಗರೀಕರು, ಸ್ವತಂತ್ರ ಮತ್ತು ಮುಕ್ತ ಸಮಾಜ, ಮತ್ತು ಒಳ್ಳೆಯ ಸರ್ಕಾರಕ್ಕಾಗಿ ತನ್ನ ಗುರಿಯನ್ನು ಇಟ್ಟುಕೊಂಡಿತು.[೪೫]
ಸಿವಿಲ್ ಯುದ್ಧ, 1861-1865
[ಬದಲಾಯಿಸಿ]ಅಯೋವಾ ಸಿವಿಲ್ ಯುದ್ಧದ ಸಮಯದಲ್ಲಿ ಒಕ್ಕೂಟವನ್ನು ಅನುಮೋದಿಸಿತು, ಅಬ್ರಾಹಂ ಲಿಂಕನ್ ಅವರ ಪರವಾಗಿ ಭಾರಿ ಮತ ನೀಡಿತು, ಅಲ್ಲಿ ಬಲವಾದ ಯುದ್ಧವಿರೋಧಿ "ಕಾಪರ‍್ಹೆಡ್" ಚಳುವಳಿ ದಕ್ಷಿಣ ಭಾಗದ ವಸಾಹತುಗಾರ ನಡುವೆ ಮತ್ತು ಕ್ಯಾಥೊಲಿಕ್‍ರ ನಡುವೆ ನಡೆಯುತ್ತಿತ್ತು. ಆಗ ರಾಜ್ಯದಲ್ಲಿ ಯಾವುದೇ ಕದನಗಳಿರಲಿಲ್ಲ, ಆದರೆ ಅಯೋವಾ ಸೇನೆಗಳಿಗೆ ಮತ್ತು ಪೂರ್ವ ಭಾಗದ ನಗರಗಳಿಗೆ ಅಧಿಕ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿತ್ತು. ಒಕ್ಕೂಟಕ್ಕೆ ಅಯೋವಾ ನೀಡಿದ ಹೆಚ್ಚು ಅನುಮೋದನೆಯಾ ಶ್ರೇಯ ಇದರ ಯುದ್ಧ ಸಮಯದ ರಾಜ್ಯಪಾಲರಾಗಿದ್ದ ಸಾಮ್ಯುಯೆಲ್ ಜೆ.ಕಿರ್ಕುದ್ ಅವರಿಗೆ ಸಲ್ಲಿಸಬಹುದು. ಒಟ್ಟೂ ಜನಸಂಖ್ಯೆ 675,000 ರಲ್ಲಿ 116,000 ಪುರುಷರು ಮಿಲಿಟರಿ ಸೇವೆಯಲ್ಲಿ ತೊಡಗಿದ್ದರು. ಇತರ ಉತ್ತರ ಅಥವಾ ದಕ್ಷಿಣ ರಾಜ್ಯಗಳಿಗಿಂತ ಅಯೋವಾ ಪ್ರಮಾಣಾನುಗತವಾಗಿ ಹೆಚ್ಚು ಪುರುಷರನ್ನು ಸಿವಿಲ್ ಯುದ್ಧದ ಮಿಲಿಟರಿ ಸೇವೆಗೆ ಒದಗಿಸಿತ್ತು, 75,000ಕ್ಕಿಂತ ಹೆಚ್ಚು ಸ್ವಯಂಸೇವಕರನ್ನು ಸಶಸ್ತ್ರ ಸೇವೆಗೆ ಕಳುಹಿಸಿತು, ಇದರಲ್ಲಿ ಆರನೇ ಒಂದು ಭಾಗ ಅಪ್ಪೊಮೆಟಾಕ್ಸ್ ಯುದ್ಧದ ಮೊದಲೇ ತನ್ನ ಸಮಾಧಿಯನ್ನು ಸೇರಿತು.[೪೬] ದಕ್ಷಿಣ ಭಾಗದಲ್ಲಿ ಮತ್ತು ಮಿಸಿಸಿಪ್ಪಿಯ ಕಣಿವೆಯ ಮಹಾ ಅಭಿಯಾನದಲ್ಲಿ ಹೆಚ್ಚು ಕಾದಾಟವಾಗಿತ್ತು.[೪೭] ಅಯೋವಾದ ಸೈನ್ಯ ಮಿಸ್ಸೋರಿಯ ವಿಲ್ಸನ್ಸ್ ಕ್ರೀಕ್‍ನಲ್ಲಿ, ಅರ್ಕನ್ಸಾಸ್ ನಲ್ಲಿ ಪಿ ರಿಜ್, ಫೋರ್ತ್ಸ್ ಹೆನ್ರಿ ಮತ್ತು ದೊನೆಲ್‍ಸನ್, ಶಿಲೋ, ಚತ್ತನೂಗ, ಚಿಕ್‍ಮೌಗ, ಮಿಷನರಿ ರಿಜ್, ಮತ್ತು ರೋಸ್‍ವಿಲೆ ಗ್ಯಾಪ್, ವಿಕ್ಸ್‍ಬರ್ಗ್, ಇಯುಕ, ಮತ್ತು ಕೊರಿಂತ್ ಹೋರಾಡಿದವು.
ಅವು ವರ್ಜಿನೀಯದಲ್ಲಿ ಪೊತೊಮೊಕ್ ನ ಸೇನೆಯನ್ನು ಒದಗಿಸಿದ್ದವು ಮತ್ತು ಒಕ್ಕೂಟದ ಅಧಿಕಾರಿ ಫಿಲಿಪ್ ಶೆರಿದನ್ ಅವರ ಅಡಿಯಲ್ಲಿ ಶೆನಂದೋ ಕಣಿವೆಯಲ್ಲಿ ಹೋರಾಡಿದರು. ಬಹಳ ಜನರು ಸಾವನ್ನಪ್ಪಿದರು ಮತ್ತು ಅಂಡರ‍್ಸನ್‍ವಿಲೆಯಲ್ಲಿ ಸಮಾಧಿ ಮಾಡಲಾಯಿತು. ಅವರು ಕೆಂಪು ನದಿಯ ಹುಡುಕಾಟದಲ್ಲಿ ಜನರಲ್ ನ್ಯಾಥನೀಲ್ ಬ್ಯಾಂಕ್ಸ್‌ನ ದುರ್ಭಾಗ್ಯಪೂರ್ಣವಾದ ದಂಡಯಾತ್ರೆಯೆಡೆಗೆ ಹೊರಟರು. ಇಪ್ಪತ್ತೇಳು ಅಯೋವಾನ್ನರಿಗೆ ಪ್ರಶಸ್ತಿಯ ಪದಕದ ಸನ್ಮಾನ ದೊರೆಯಿತು, ಸಂಯುಕ್ತ ಸಂಸ್ಥಾನದ ಸರ್ಕಾರದಿಂದ ಅಧಿಕ ಮಿಲಿಟರಿ ಗೌರವ ದೊರೆಯಿತು, ಇದು ಸಿವಿಲ್ ಯುದ್ಧದಲ್ಲಿ ಮೊದಲ ಪ್ರಶಸ್ತಿಯಾಗಿತ್ತು.[೪೮] ಅಯೋವಾ ಕೆಲವು ಬ್ರಿಗೇಡಿಯರ್ ಅಧಿಕಾರಿಗಳನ್ನು ಹೊಂದಿತ್ತು ಮತ್ತು ನಾಲ್ಕು ಮುಖ್ಯ ಅಧಿಕಾರಿಗಳು ಗ್ರೆನ್‍ವಿಲೆ ಮೆಲನ್ ದೋಜ್, ಸಾಮ್ಯುಯೆಲ್ ಆರ್.ಕರ್ಟಿಸ್, ಫ್ರಾನ್ಸಿಸ್ ಜೆ.ಹೆರನ್, ಮತ್ತು ಫ್ರೆಡರಿಕ್ ಸ್ಟೀಲ್-ಮತ್ತು ಯುದ್ಧದ ನಂತರದ ರಾಜ್ಯ ಮತ್ತು ರಾಷ್ಟ್ರೀಯ ಪ್ರಸಿದ್ಧಿಯನ್ನು ಪಡೆದ ಇದರ ಬಹಳ ಅಧಿಕಾರಿಗಳನ್ನು ಕಂಡಿತು.[೪೬]
ಕೃಷಿ ಕ್ಷೇತ್ರದ ವಿಸ್ತರಣೆ 1865-1930
[ಬದಲಾಯಿಸಿ]ಸಿವಿಲ್ ಯುದ್ಧದ ನಂತರ ಅಯೋವಾದ ಜನಸಂಖ್ಯೆ ಅನಿರೀಕ್ಷಿತವಾಗಿ ಬೆಳೆಯಿತು, 1860ರಲ್ಲಿ 674,913 ಇದ್ದಿದ್ದು 1870ರಲ್ಲಿ 1,194,020 ಆಯಿತು. 1850 ಮತ್ತು 1860 ರ ದಶಕಗಳ ರೈಲುದಾರಿಗಳ ಪ್ರವೇಶನ ಅಯೋವಾವನ್ನು ಪ್ರಮುಖ ವ್ಯಾವಸಾಯಿಕ ಉತ್ಪಾದಕ ರಾಜ್ಯವನ್ನಾಗಿ ಮಾಡಿತು. 1917ರಲ್ಲಿ ಸಂಯುಕ್ತ ಸಂಸ್ಥಾನ ಮೊದಲನೇ ಮಹಾಯುದ್ಧವನ್ನು ಪ್ರವೇಶಿಸಿತು ಮತ್ತು ರೈತರು ಮತ್ತು ಎಲ್ಲಾ ಅಯೋವಾನ್ನರು ಯುದ್ಧಕಾಲದ ಆರ್ಥಿಕ ಪರಿಸ್ಥಿಯನ್ನು ಅನುಭವಿಸಿದರು. ರೈತರಿಗೆ ಬದಲಾವಣೆ ಅರ್ಥಪೂರ್ಣವಾಗಿತ್ತು. 1914ರಲ್ಲಿ ಯುದ್ಧದ ಪ್ರಾರಂಭದಿಂದ, ಅಯೋವಾದ ರೈತರು ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿಯನ್ನು ಕಂಡರು. ಅಯೋವಾ ಆರ್ಥಿಕ ವಲಯದಲ್ಲಿ ಮಹತ್ವಪೂರ್ಣ ಬದಲಾವಣೆಯನ್ನು ಹೊಂದಿತು. 1870ರ ದಶಕದಲ್ಲಿ ಮೊದಲ ವ್ಯವಸಾಯ ಸಂಬಂಧಿ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಲಾಯಿತು, ಬಹಳಷ್ಟು ವ್ಯವಹಾರ ಮತ್ತು ಉತ್ಪಾದನಾ ಕಾರ್ಯಾಚರಣೆಯಲ್ಲಿ ಅಯೋವಾ ಹಂತಹಂತವಾಗಿ ಹೆಚ್ಚಳವನ್ನು ಕಂಡಿತು.
ಆರ್ಥಿಕ ಮುಗ್ಗಟ್ಟು, ಎರಡನೇ ಮಹಾಯುದ್ಧ ಮತ್ತು ಉತ್ಪಾದಕತೆಯ ಹೆಚ್ಚಳ, 1930-1985
[ಬದಲಾಯಿಸಿ]ನಿಧಾನವಾಗಿ ಕೃಷಿ ಕ್ಷೇತ್ರದ ಆರ್ಥಿಕ ಸ್ಥಿತಿಯಿಂದ ಮಿಶ್ರ ಆರ್ಥಿಕ ಸ್ಥಿತಿಯಾಗಿ ಪರಿವರ್ತನೆಯಾಯಿತು. ಅಧಿಕ ಆರ್ಥಿಕ ಮುಗ್ಗಟ್ಟು ಮತ್ತು ಎರಡನೇ ಮಹಾಯುದ್ಧ ಸಣ್ಣಪ್ರಮಾಣದ ವ್ಯವಸಾಯವನ್ನು ದೊಡ್ಡ ಪ್ರಮಾಣದ್ದಕ್ಕೆ ಬದಲಾಯಿಸಲು ಒಟ್ಟು ನೀಡಿತು, ಮತ್ತು ನಗರೀಕರಣದ ಪ್ರವೃತ್ತಿ ಪ್ರಾರಂಭವಾಗಿ ಮುಂದುವರೆಯಿತು. ಎರಡನೇ ಮಹಾಯುದ್ಧದ ಕಾಲಾವಧಿ ಉತ್ಪಾದನಾ ಕಾರ್ಯಗಳ ವಿಶೇಷ ಹೆಚ್ಚಳಕ್ಕೆ ಸಾಕ್ಷಿಯಾಯಿತು. ಕೃಷಿ, ರಾಜ್ಯದ ಪ್ರಮುಖ ಕೈಗಾರಿಕೆಯಾಗಿ ಮುಂದುವರೆದ ಸಮಯದಲ್ಲಿ, ರೆಫ್ರಿಜರೇಟರ್, ವಾಶಿಂಗ್ ಮಶಿನ್ನುಗಳು, ಫೌಂಟೆನ್ ಪೆನ್ನುಗಳು, ಕೃಷಿ ಉಪಕರಣಗಳು ಮತ್ತು ಆಹಾರ ಉತ್ಪನ್ನಗಳು ಮುಂತಾದ ವಿವಿಧ ರೀತಿಯ ಸಾಮಗ್ರಿಗಳನ್ನು ಅಯೋವಾನ್ನರು ಉತ್ಪಾದಿಸಿದರು. 1980ರ ದಶಕದ ಕೃಷಿ ಕ್ಷೇತ್ರದ ಬಿಕ್ಕಟ್ಟು ಅಯೋವಾದಲ್ಲಿ ಹೆಚ್ಚಿನ ರಿಸೆಶನ್ನಿಗೆ ಕಾರಣವಾಯಿತು.[೪೯] ಬಿಕ್ಕಟ್ಟು ಅಯೋವಾದಲ್ಲಿನ ಜನಸಂಖ್ಯೆಯ ಇಳಿತಕ್ಕೆ ಉತ್ತೇಜನ ನೀಡಿತು ಮತ್ತು ಅದು ಒಂದು ದಶಕದಲ್ಲಿ ಕೊನೆಗೊಂಡಿತು.[೫೦]
ಮಿಶ್ರ ಅರ್ಥವ್ಯವಸ್ಥೆಯ ಪುನರುದಯ, 1985-ಇಲ್ಲಿಯವರೆಗೆ
[ಬದಲಾಯಿಸಿ]1980ರಲ್ಲಿ ಅತ್ಯಂತ ತಳಮಟ್ಟವನ್ನು ಮುಟ್ಟಿದ ಮೇಲೆ, ಅಯೋವಾದ ಆರ್ಥಿಕ ಸ್ಥಿತಿ ಹೆಚ್ಚಿನದಾಗಿ ಕೃಷಿಯ ಮೇಲೆ ಅವಲಂಬಿತವಾಗಿರುವುದು ಕಡಿಮೆಯಾಗಲು ಪ್ರಾರಂಭವಾಯಿತು, ಮತ್ತು ಈಗ ಅದರ ಉತ್ಪಾದಕತೆ, ಜೈವಿಕ ತಂತ್ರಜ್ಞಾನ, ಹಣಕಾಸು ಮತ್ತು ಇನ್ಸುರೆನ್ಸ್ ಸೇವೆಗಳು, ಮತ್ತು ಸರ್ಕಾರಿ ಸೇವೆಗಳ ಮಿಶ್ರಣವಾಗಿದೆ.[೫೧] ಅಯೋವಾದ ಜನಸಂಖ್ಯೆ ಇಡೀ ಸಂಯುಕ್ತ ಸಂಸ್ಥಾನದ ಜನಸಂಖ್ಯೆಯ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ,[೫೦] ಮತ್ತು ಅಯೋವಾ ಈಗ ನಗರದ ಜನಸಂಖ್ಯೆಯ ಪ್ರಾಬಲ್ಯ ಹೊಂದಿದೆ.[೫೨]
ಅಂಕಿ ಅಂಶಗಳು
[ಬದಲಾಯಿಸಿ]ದೊಡ್ಡ ಪಟ್ಟಣಗಳು
[ಬದಲಾಯಿಸಿ]2009ರ ಸಂಯುಕ್ತ ಸಂಸ್ಥಾನದ ಜನಗಣತಿ ಕಾರ್ಯಾಲಯದ ಅಂದಾಜಿನ ಆಧಾರದ ಮೇಲೆ ಅಯೋವಾದ ಹದಿನೈದು ದೊಡ್ಡ ನಗರಗಳು:[೫೩]
|
ಜನಸಂಖ್ಯೆ
[ಬದಲಾಯಿಸಿ]Historical population | |||
---|---|---|---|
Census | Pop. | %± | |
1840 | ೪೩,೧೧೨ | — | |
1850 | ೧,೯೨,೨೧೪ | ೩೪೫.೮% | |
1860 | ೬,೭೪,೯೧೩ | ೨೫೧.೧% | |
1870 | ೧೧,೯೪,೦೨೦ | ೭೬.೯% | |
1880 | ೧೬,೨೪,೬೧೫ | ೩೬.೧% | |
1890 | ೧೯,೧೨,೨೯೭ | ೧೭.೭% | |
1900 | ೨೨,೩೧,೮೫೩ | ೧೬.೭% | |
1910 | ೨೨,೨೪,೭೭೧ | −೦.೩% | |
1920 | ೨೪,೦೪,೦೨೧ | ೮.೧% | |
1930 | ೨೪,೭೦,೯೩೯ | ೨.೮% | |
1940 | ೨೫,೩೮,೨೬೮ | ೨.೭% | |
1950 | ೨೬,೨೧,೦೭೩ | ೩.೩% | |
1960 | ೨೭,೫೭,೫೩೭ | ೫.೨% | |
1970 | ೨೮,೨೪,೩೭೬ | ೨.೪% | |
1980 | ೨೯,೧೩,೮೦೮ | ೩.೨% | |
1990 | ೨೭,೭೬,೭೫೫ | −೪.೭% | |
2000 | ೨೯,೨೬,೩೨೪ | ೫.೪% | |
Est. 2009[೨] | ೩೦,೦೭,೮೫೬ |
2008ರಂತೆ, ಅಯೋವಾ ಅಂದಾಜಿಸಿದ ಜನಸಂಖ್ಯೆ 3,002,555, ಇದು ಹಿಂದಿನ ವರ್ಷದಿಂದ 19೦೦೦ ಅಥವಾ 0.6% ಹೆಚ್ಚಳ ಮತ್ತು 2000 ವರ್ಷದಿಂದ 2.6% ಅಥವಾ 76,000 ಹೆಚ್ಚಳವಾಗಿದೆ. ಇದು ಮೊದಲ ಬಾರಿಗೆ ರಾಜ್ಯ ಜನಸಂಖ್ಯೆಯಲ್ಲಿ ಮೂರು ಮಿಲಿಯನ್ ದಾಖಲಿಸಿತು. ದೇಶದಲ್ಲಿ ಅಯೋವಾ ಹೆಚ್ಚು ಜನಸಂಖ್ಯೆ ಹೊಂದಿರುವ 30ನೇ ರಾಜ್ಯವಾಗಿದೆ.[೫೪] 2007ರಲ್ಲಿ, ಇತ್ತೀಚಿಗೆ ಸಿಕ್ಕ ಅಂಕಿ ಅಂಶಗಳ ಮಾಹಿತಿಯ ಪ್ರಕಾರ ರಾಜ್ಯ ಹಿಂದಿನ ಜನಗನತಿಗಿಂತ 53,706 ಜನರ ನೈಸರ್ಗಿಕ ಹೆಚ್ಚಳವಾಗಿತ್ತು (ಇದು 197,163 ಜನನದಲ್ಲಿ 143,457 ಮರಣವನ್ನು ಕಳೆದಾಗ) ಮತ್ತು ರಾಜ್ಯದ ಹೊರಗೆ ವಲಸೆ ಹೋದ ಜನರ ಕಾರಣದಿಂದ ೧೧,754 ಜನರ ಇಳಿಕೆಯಾಗಿತ್ತು. ಸಂಯುಕ್ತ ರಾಜ್ಯಗಳ ಹೊರಗಿನಿಂದ ವಲಸೆ ಬಂದ ಜನರ ಕಾರಣದಿಂದ ನಿವ್ವಳ 29,386 ಜನರ ಹೆಚ್ಚಳವಾಯಿತು, ಈ ಸಮಯದಲ್ಲಿ ದೇಶದ ಒಳಗೆ ವಲಸೆ ಹೋದ ಜನರಿಂದ ನಿವ್ವಳ 41,140 ಜನರ ಕಳೆತವಾಯಿತು. ಅಯೋವಾದ ಜನಸಂಖ್ಯೆಯ 6.1% ಐದಕ್ಕಿಂತ ಕಡಿಮೆ ವರ್ಷದವರು, 22.6% 18ಕ್ಕಿಂತ ಕಡಿಮೆ ವಯಸ್ಸಿನವರು, ಮತ್ತು 14.7% 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿದ್ದರು. ಜನಸಂಖ್ಯೆಯ ಸುಮಾರು 49.2% ಗಂಡಸರಿದ್ದಾರೆ.[೫೫] ರಾಜ್ಯದ ಜನಸಂಖ್ಯೆಯ ಸಾಂದ್ರತೆ ಪ್ರತಿ ಚದರ ಮೈಲಿಗೆ 52.7.[೫೬] ಅಯೋವಾದ ಜನಸಂಖ್ಯೆಯ ಕೇಂದ್ರ ಮಾರ್ಷಲ್ ಟೌನ್ ನ ಮಾರ್ಷಲ್ ಕಂಟ್ರಿಯಲ್ಲಿ ಕೇಂದ್ರಿಕೃತವಾಗಿದೆ.[೫೭]
ಜಾತಿ ಮತ್ತು ಮನೆತನ
[ಬದಲಾಯಿಸಿ]ಅಯೋವಾದ ಜನಸಂಖ್ಯೆ 97,000 ವಿದೇಶೀಯರನ್ನು ಒಳಗೊಂಡಿದೆ (3.3%).[೫೫] ಅಯೋವಾನ್ನರು ಹೆಚ್ಚಾಗಿ ಪಶ್ಚಿಮ ಯೂರೋಪಿನ ಸಂತತಿಯವರು. ಅಯೋವಾದ ಐದು ಪ್ರಮುಖ ಮನೆತನಗಳೆಂದರೆ: ಜರ್ಮನ್ನರು (35.7%), ಐರಿಷರು (13.5%), ಇಂಗ್ಲೀಷರು (9.5%), ಅಮೆರಿಕನ್ನರು (6.6%), ನಾರ್ವೆ ದೇಶದವರು (5.7%). 91.0% ಬಿಳಿಯರು (ಸ್ಪಾನಿಷ್ ಸಂಸ್ಕೃತಿ ಅಲ್ಲದವರು), 3.8% ಸ್ಪಾನಿಷ್ ಸಂಸ್ಕೃತಿಯವರು, 2.5% ಕರಿಯರು ಅಥವಾ ಆಫ್ರಿಕಾದ ಅಮೆರಿಕನ್ನರು, 1.6% ಏಷಿಯನ್ನರು, ಮತ್ತು 0.4% ಅಮೇರಿಕಾದ ಭಾರತೀಯರು ರಾಜ್ಯವು ಈ ರೀತಿಯ ಜನಾಂಗಗಳಿಂದ ಕೂಡಿದೆ.
ಒಂದು ಪ್ರತಿಶತ ಜನರು ಎರಡು ಅಥವಾ ಹೆಚ್ಚು ಜಾತಿಗಳವರಾಗಿದ್ದಾರೆ.[೫೫]
ಗ್ರಾಮೀಣ ಭಾಗದಿಂದ ನಗರಕ್ಕೆ ಸ್ಥಳಾಂತರ; ಪ್ರತಿಭಾ ಪಲಾಯನ
[ಬದಲಾಯಿಸಿ]ಅಯೋವಾದ ಜನಸಂಖ್ಯೆ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚಾಗಿದೆ, 2000ರಲ್ಲಿ, 61% ಜನರು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು, 20ನೇ ಶತಮಾನದ ಪ್ರಾರಂಭದಿಂದ ಈ ಧೋರಣೆ ಪ್ರಾರಂಭವಾಗಿತ್ತು.[೫೨] 2000ರಿಂದ 2008ರವರೆಗೆ ಅಯೋವಾದಲ್ಲಿ 8.5% ನಗರದ ಕೌಂಟಿಗಳು ಬೆಳೆದಿವೆ, ಇದೇ ಸಮಯದಲ್ಲಿ 4.2% ಗ್ರಾಮೀಣ ಕೌಂಟಿಗಳು ಕಡಿಮೆಯಾಗಿವೆ.[೬೦]
ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಸ್ಥಳಾಂತರ ಮಾಡಿದ ಕಾರಣಕ್ಕೆ ಡಲ್ಲಾಸ್, ಜಾನ್ಸನ್, ಲಿನ್, ಮತ್ತು ಪೊಕ್‍ನಂತಹ ನಗರದ ಕೌಂಟಿಗಳಲ್ಲಿ ಗ್ರಾಮೀಣ ಕೌಂಟಿಗಲಿಗಿಂತ ಹೆಚ್ಚಿನ ವೆಚ್ಚದಲ್ಲಿ ಜನಸಂಖ್ಯೆ ಹೆಚ್ಚಾಯಿತು.[೬೧] ಅಯೋವಾ, ಇತರ ಮಧ್ಯಪಶ್ಚಿಮ ರಾಜ್ಯಗಳಲ್ಲಿ (ಮುಖ್ಯವಾಗಿ ಕನ್ಸಾಸ್, ನೆಬ್ರಸ್ಕಾ, ಉತ್ತರ ಡಕೋಟಾ, ಮತ್ತು ದಕ್ಷಿಣ ಡಕೋಟಾ) ಸಾಮಾನ್ಯವಾಗಿ ಇರುವಂತೆ ಗ್ರಾಮೀಣ ವಲಸೆಯ ಸಮಸ್ಯೆಯನ್ನು ಅನುಭವಿಸುತ್ತಿದೆ. ಆದಾಗ್ಯೂ ಸುಮಾರು 1990 ರಿಂದ ಅಯೋವಾ ಜನಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಡೆನಿಸನ್ ಮತ್ತು ಸ್ಟಾರ್ಮ್ ಲೇಕ್‌ನಂತಹ ಕೆಲವು ಚಿಕ್ಕ ಸಮುದಾಯಗಳು ವಲಸೆ ಬಂದ ಜನರನ್ನು ಸೇರಿಸಿಕೊಳ್ಳುವುದರ ಮೂಲಕ ಈ ಜನಸಂಖ್ಯಾ ಕಳೆತವನ್ನು ಮಿತಗೊಳಿಸಿದವು.[೬೨] ಅಯೋವಾದ ಮತ್ತೊಂದು ಜನಸಂಖ್ಯೆಗೆ ಸಂಬಂಧಿಸಿದ ತೊಂದರೆ ಎಂದರೆ ಯುವ ಪ್ರತಿಭಾ ಪಲಾಯನ, ಇಲ್ಲಿ ವಿದ್ಯಾವಂತ ಯುವ ಜನಾಂಗ ವಿದ್ಯಾಭ್ಯಾಸ ಮುಗಿದ ನಂತರ ಅಥವಾ ಬೇರೆ ಕಡೆ ವಿದ್ಯಾಭ್ಯಾಸ ಮಾಡಲು ರಾಜ್ಯವನ್ನು ಬಿಟ್ಟು ಹೋಗುತ್ತಾರೆ. 1990ನೇ ದಶಕದ ಸಮಯದಲ್ಲಿ ಅಯೋವಾ, ಹೆಚ್ಚು ವಿದ್ಯಾವಂತ ಯುವಕರು ದೇಶಾಂತರ ಪ್ರಯಾಣ ಮಾಡಿದ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿತ್ತು, ಅಂದರೆ ಉತ್ತರ ಡಕೋಟಾದ ನಂತರದ ಸ್ಥಾನ.[೬೩] ವಿದ್ಯಾವಂತ ಯುವ ಜನರ ಗಮನಾರ್ಹ ಕಳೆತದಿಂದ ಆರ್ಥಿಕ ನಿಶ್ಚಲತೆ ಮತ್ತು ಉಳಿದ ನಾಗರೀಕರು ಸೇವೆಗಳಿಂದ ವಂಚಿತರಾಗುತ್ತಾರೆ.
ಧರ್ಮ
[ಬದಲಾಯಿಸಿ]52% ಅಯೋವಾನ್ನರು ಪ್ರೊಟೆಸ್ಟಂಟರು, 23% ರೋಮನ್ ಕ್ಯಾಥೊಲಿಕರು, ಮತ್ತು ಇತರ ಧರ್ಮದವರು 6%. 13% ಯಾವುದೇ ಧರ್ಮಕ್ಕೆ ಸೇರಿಲ್ಲ ಎಂದಿದ್ದಾರೆ, ಮತ್ತು 5% ಜನರು ಉತ್ತರ ನೀಡಿಲ್ಲ, ಎಂದು 2001ರಲ್ಲಿ ಸಿಟಿ ಯುನಿವರ್ಸಿಟಿ ಆಫ್ ನ್ಯೂಯಾರ್ಕ್ ಮಾಡಿದ ಸರ್ವೆಯಿಂದ ಕಂಡುಬಂದಿದೆ.[೬೪] ದೊಡ್ಡ ಪ್ರೊಟೆಸ್ಟಂಟರ ಗುಂಪಿನಲ್ಲಿ, 268,543 ಅಮೇರಿಕಾದ ಇವಾಂಜೆಲಿಕಲ್ ಲುಥರನ್ ಚರ್ಚ್; ಮತ್ತು 248,211 ಯುನೈಟೆಡ್ ಮೆಥಡಿಸ್ಟ್ ಚರ್ಚ್ ಗಳ ಅನುಯಾಯಿಗಳಾದರು.[೬೫] ರಿಲಿಜಿಯಸ್ ಕಾಂಗ್ರಿಗೆಶನ್ಸ್ & ಮೆಂಬರ‍್ಶಿಪ್: 2000 [೬೬] ಅಧ್ಯಯನದಿಂದ ಕಂಡುಬಂದಿರುವುದೆನೆಂದರೆ, ಅಯೋವಾದ ದಕ್ಷಿಣ ಭಾಗದ ಕೌಂಟಿಗಳು ಮತ್ತು ರಾಜ್ಯದ ಮಧ್ಯ ಭಾಗದ ಇತರ ಕೌಂಟಿಗಳಲ್ಲಿ ಅಧಿಕ ಧರ್ಮೀಯ ಗುಂಪು ಯುನೈಟೆಡ್ ಮೆಥಡಿಸ್ಟ್ ಚರ್ಚ್ ಆಗಿತ್ತು; ದಬಕ್ ಮತ್ತು ಲಿನ್ ಕೌಂಟಿಗಳನ್ನು ಒಳಗೊಂಡು (ಸೀಡರ್ ರ್ಯಾಪಿಡ್ ಇರುವ ಸ್ಥಳ) ರಾಜ್ಯದ ಉತ್ತರಪೂರ್ವ ಭಾಗದಲ್ಲಿ ರೋಮನ್ ಕ್ಯಾಥೊಲಿಕ ಚರ್ಚ್ ಅಧಿಕವಾಗಿತ್ತು; ಮತ್ತು ಉತ್ತರದ ಸಾಲಿನಲ್ಲಿ ಮೂರನ್ನು ಒಳಗೊಂಡು, ಹತ್ತು ಕೌಂಟಿಗಳಲ್ಲಿ ಅಮೇರಿಕಾದ ಇವಾಂಜೆಲಿಕಲ್ ಲುಥರನ್ ಚರ್ಚ್ ವಿಸ್ತಾರವಾಗಿತ್ತು. ಇವಾಂಜೆಲಿಕಲ್ ಕ್ರಿಶ್ಚಿಯನ್ ಗುಂಪು ತ್ವರಿತವಾಗಿ ಬೆಳೆಯುತ್ತಿರುವುದನ್ನು ಅಧ್ಯಯನ ಕಂಡುಹಿಡಿದಿದೆ. ಐತಿಹಾಸಿಕವಾಗಿ, ಸಮಾಜದ ಉಳಿದ ಧರ್ಮಗಳಿಗೆ ಹೊರತಾಗಿ ಉಳಿಯಲು ಇಚ್ಚಿಸಿದ ಧಾರ್ಮಿಕ ಪಂಗಡ ಮತ್ತು ವರ್ಗಗಳು ಅಯೋವಾದಲ್ಲಿ ಹುಟ್ಟಿಕೊಂಡವು, ಅವು, ಕಲೋನದ ಹತ್ತಿರ ಅಮಿಶ್ ಮತ್ತು ಮೆನ್ನೊನೈಟ್ ಮತ್ತು ದೆವಿಸ್ ಕೌಂಟಿ ಮತ್ತು ಬಚನನ್ ಕೌಂಟಿಯಂತಹ ಪೂರ್ವ ಅಯೋವಾದ ಇತರ ಭಾಗಗಳಲ್ಲಿ.[೬೭] ಹೊರತಾದ ಇತರ ಧಾರ್ಮಿಕ ಪಂಗಡ ಮತ್ತು ವರ್ಗಗಳು ವೆಸ್ಟ್ ಬ್ರಾಂಚ್ ಮತ್ತು ಲ ಗ್ರಾಂದ್ ಸುತ್ತಲಿರುವ ಕ್ವಾಕರ್ಸ್, ಅಮನ್ ಕಾಲೋನೀಸ್ ನ್ನು ಕಂಡುಹಿಡಿದ ಜರ್ಮನಿಯ ಧರ್ಮಾತ್ಮರು, ಮಹಾರಿಷಿ ವೇದಿಕ್ ಸಿಟಿಯನ್ನು ಕಂಡುಹಿಡಿದ ಟ್ರಾನ್ಸೆಂಡೆಂಟಲ್ ಮೆಡಿಟೇಶನ್ ನ ಅನಿಯಾಯಿಗಳು, ಮತ್ತು ನಿವ್ ಮೆಲರೆಯಲ್ಲಿನ ಸಿಸ್ತೆರ್ಸಿಯನ್ ಮೊಂಕ್ಸ್ ಮತ್ತು ನನ್ಸ್ ಮತ್ತು ದಬಕ್ ಹತ್ತಿರದ ಅವರ್ ಲೇಡಿ ಆಫ್ ದಿ ಮಿಸಿಸಿಪ್ಪಿ ಅಬೇಸ್.
ಭಾಷಾವಾರು ಪ್ರದೇಶ
[ಬದಲಾಯಿಸಿ]ಅಯೋವಾದಲ್ಲಿ ಇಂಗ್ಲೀಷ್ ಮಾತನಾಡುವವರು ಎರಡು ದೊಡ್ಡ ಭಾಷಾವಾರು ಪ್ರದೇಶಗಳಾಗಿ ವಿಭಾಗವಾಗಿದೆ ಎಂದು ವಿಲಿಯಮ್ ಲೆಬೋ ಮತ್ತು ಸಹೋದ್ಯೋಗಿಗಳು, ಅಟ್ಲಾಸ್ ಆಫ್ ನಾರ್ಥ್ ಅಮೇರಿಕನ್ ಇಂಗ್ಲೀಷ್ ಸ್ಮಾರಕದಲ್ಲಿ ಕಂಡುಹಿಡಿದಿದ್ದಾರೆ.[೬೮] ಸೂ ಸಿಟಿ, ಫೋರ್ಟ್ ದಜ್, ಮತ್ತು ವಾಟರ್‌ಲೂ ಪ್ರದೇಶ ಸೇರಿದಂತೆ ಉತ್ತರ ಅಯೋವಾದ ಸ್ಥಳೀಯರು ಉತ್ತರ ಕೇಂದ್ರ ಅಮೆರಿಕನ್ನರ ಇಂಗ್ಲೀಷ್ ಎಂದು ಭಾಷಾತಜ್ಞರು ಕರೆಯುವ ಭಾಷೆಯನ್ನು ಮಾತನಾಡುತ್ತಾರೆ. ಇದು ಉತ್ತರ ಮತ್ತು ದಕ್ಷಿಣ ಡಕೋಟ, ಮಿನೆಸೋಟ, ವಿಸ್ಕೊನ್ಸಿನ್, ಮತ್ತು ಮಿಚಿಗನ್‍ಗಳಲ್ಲಿ ಸಹ ಕಂಡುಬಂದಿದೆ. ಕೌನ್ಸಿಲ್ ಬ್ಲಫ್ಸ್, ಡೆಮೋಯಿನ್, ಮತ್ತು ಅಯೋವಾ ಸಿಟಿ ಸೇರಿದಂತೆ ಕೇಂದ್ರ ಮತ್ತು ದಕ್ಷಿಣ ಅಯೋವಾದ ಸ್ಥಳೀಯರು ಉತ್ತರ ಮಿಡ್‌ಲ್ಯಾಂಡ್ ಭಾಷೆಯನ್ನು ಮಾತನಾಡುತ್ತಿದ್ದು ಅದು ನೆಬ್ರಸ್ಕಾ, ಸೆಂಟ್ರಲ್ ಇಲಿನೋಸ್, ಮತ್ತು ಸೆಂಟ್ರಲ್ ಇಂಡಿಯಾನಾಗಳಲ್ಲಿ ಕಂಡುಬರುತ್ತದೆ.[೬೯]
ಸಂಸ್ಕೃತಿ
[ಬದಲಾಯಿಸಿ]ಮಧ್ಯ ಅಯೋವಾ
[ಬದಲಾಯಿಸಿ]ಡೆಮೋಯಿನ್ ಅಯೋವಾದಲ್ಲಿಯೇ ಅತೀ ದೊಡ್ದ ನಗರ ಮತ್ತು ರಾಜ್ಯದ ರಾಜಕೀಯ, ಆರ್ಥಿಕ, ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ.ಇದು ರಾಜ್ಯ ಸರ್ಕಾರದ ಆಡಳಿತ ಕೇಂದ್ರವಾಗಿದ್ದು, ರಾಜ್ಯದ ಪ್ರಾಚ್ಯ ವಸ್ತು ಸಂಗ್ರಹಾಲಯ,ಅಯೋವಾ ವಿಜ್ಞಾನ ಕೇಂದ್ರ ಮತ್ತು ಬ್ಲ್ಯಾಂಕ್ IMAX ಡೋಮ್ ಮಂದಿರ,ಡೆಮೋಯಿನ್ ಕಲಾ ಕೇಂದ್ರ,ಡೆಮೋಯಿನ್ ಸಸ್ಯ ಕೇಂದ್ರವಿದೆ ಮತ್ತು ವಿವಿಧ ಸಾಂಸ್ಕೃತಿಕ ಸಮಾರಂಭಗಳಾದ ಅಯೋವಾ ರಾಜ್ಯದ ವಾರ್ಷಿಕೋತ್ಸವ, ಡ್ರೇಕ್ ರಿಲೇಸ್, ವಿಶ್ವ ಆಹಾರ ದಿನಾಚರಣೆ, ಮತ್ತು ಡೆಮೋಯಿನ್ ಕಲಾ ಹಬ್ಬಗಳು ನಡೆಯುತ್ತವೆ. ಅಡ್ವಂಚರ್‌ಲ್ಯಾಂಡ್ ಎಂಬುದು ಒಂದು ಮನರಂಜನಾ ಸ್ಥಳವಾಗಿದ್ದು, ನೈರುತ್ಯ ನೈರುತ್ಯ ಡೆಮೋಯಿನ್‌ನ ಅಲ್‍ಟೂನದಲ್ಲಿದೆ.ಪೂರ್ವ ಡೆಮೋಯಿನ್‌ನ ಉರ್ಬಂದಾಲೆಯಲ್ಲಿ ಲಿವಿಂಗ್ ಹಿಸ್ಟರಿ ಫಾರಂ, ಮತ್ತು ನ್ಯೂಟನ್ ನಲ್ಲಿ ಅಯೋವಾ ಸ್ಪೀಡ್‍ವೇ ಇದೆ. ಟೆರೇಸ್ ಹಿಲ್ ಡೆಮೋಯಿನ್‌ನಲ್ಲಿದ್ದು ಇದು ಗವರ್ನರ್‌ರ ಅಧಿಕೃತ ನಿವಾಸವಾಗಿದೆ. ಅಮ್ಸ್ನಲ್ಲಿ ಅಯೋವಾ ರಾಜ್ಯ ವಿಶ್ವವಿದ್ಯಾಲಯ,ಅಯೋವಾ ರಾಜ್ಯ ಕೇಂದ್ರ,ಬ್ರೂನ್ನಿಯರ್ ಕಲಾ ಕೇಂದ್ರ, ರೈಮನ್ ಗಾರ್ಡನ್ಸ್ ಮತ್ತು ಕ್ರಿಶ್ಚಿಯನ್ ಪೀಟರ‍್ಸನ್ ಕಲಾ ಕೇಂದ್ರವಿದೆ. ಪಶ್ಶಿಮ ಟಮದಲ್ಲಿರುವ ಮೆಸ್ಕ್ ವಾಕಿ ಸೆಟಲ್‍ಮೆಂಟ್ ಐವೊದಲ್ಲಿರುವ ಭಾರತೀಯ ಮೂಲದ ಅಮೆರಿಕನ್ನರು ಇರುವ ಏಕೈಕ ಪ್ರದೇಶ ಮತ್ತು ಇಲ್ಲಿ ವಾರ್ಷಿಕ ಪೊವ್-ವೊವ್ ನೆಡೆಸಲಾಗುತ್ತದೆ. ಕ್ಲಿಂಟ್ ಈಸ್ಟ್‌ವುಡ್ ಚಲನಚಿತ್ರ ದಿ ಬ್ರಿಡ್ಜಸ್ ಆಫ್ ಮ್ಯಾಡಿಸನ್ ಕಂಟ್ರಿ , ಇದರ ಚಿತ್ರೀಕರಣವು ಮ್ಯಾಡಿಸನ್ ಕಂಟ್ರಿ ಯಲ್ಲಿ ಆಗಿದೆ. ಜಾನ್ ವೇನೆ ಹುಟ್ಟಿದ ಸ್ಥಳ ಮ್ಯೂಸಿಯಂ, ವಿಂಟೆರ‍್ಸೆಟ್ನಲ್ಲಿದೆ. ಇಂಡಿಯನೋಲ, ಪೆಲ್ಲ, ನಾಕ್ಸ್ ವಿಲ್ಲೆ, ಪೆರ್ರಿ ಮತ್ತು ಮಾರ್ಷಲ್ ಟೌನ್ ಇತರೆ ಸಮುದಾಯದ ಐತಿಹಾಸಿಕ ಪ್ರದೇಶಗಳಾಗಿವೆ.
ಪೂರ್ವ ಅಯೋವಾ
[ಬದಲಾಯಿಸಿ]ಅಯೋವಾ ನಗರ ಒಂದು ಸಾಂಸ್ಕೃತಿಕ ನಗರವಾಗಿದ್ದು ಅಯೋವಾ ವಿಶ್ವವಿದ್ಯಾಲಯವಿದೆ ಮತ್ತು ಅದು ಅಯೋವಾದ ಪ್ರಸಿದ್ಧ ಬರಹಗಾರರ ತಾಣವಾಗಿದೆ. ಹಳೆಯ ರಾಜಧಾನಿ ಕಟ್ಟಡ(ಅಯೋವಾದ ಮೊದಲ ರಾಜಧಾನಿ), ಪೆಡ್ ಮಾಲ್, ಅಯೋವಾ ಸಿಟಿ ಎಂಗ್ಲರ್ಟ್ ಥಿಯೇಟರ್, ಮತ್ತು ಲ್ಯಾಂಡ್ ಲಾಕ್ಡ್ ಫೆಸ್ಟಿವಲ್ ಇಲ್ಲಿದೆ. ಅಯೋವಾ ನಗರ "ಸಾಂಸ್ಕೃತಿಕ ನಗರ" ಎಂದು ಯುನೆಸ್ಕೋದ ಕ್ರಿಯಾಶೀಲ ನಗರಗಳ ಜಾಲದಲ್ಲಿ ಸೇರ್ಪಡೆಗೊಂಡ ಸಂಯುಕ್ತ ಸಂಸ್ಥಾನದ ಮೊದಲ ನಗರ. ಹರ್ಬರ್ಟ್ ಹೂವರ್ ನ್ಯಾಷನಲ್ ಹಿಸ್ಟಾರಿಕ್ ಸೈಟ್, ಹರ್ಬರ್ಟ್ ಹೂವರ್ ಪ್ರೆಸಿಡೆಂಶಿಯಲ್ ಲೈಬ್ರರಿ ಮತ್ತು ಮ್ಯೂಸಿಯಂ ಪಶ್ಚಿಮ ಭಾಗದಲ್ಲಿದೆ. ಇವು ಮಾಜಿ ಅಧ್ಯಕ್ಷ ಹರ್ಬರ್ಟ್ ಹೂವರ್‍ರವರ ಪ್ರೆಸಿಡೆಂಶಿಯಲ್ ಮ್ಯೂಸಿಯಂ ಜೊತೆಗೆ ಜನ್ಮ ಸ್ಥಳ ಮತ್ತು ಸಮಾಧಿಯನ್ನು ಹೊಂದಿವೆ. ಅಮಾನ ಕಾಲೊನಿಗಳು ಜರ್ಮನ್ಪೈಸ್ಟ್ಸ್ ಜನಾಂಗದಾಗಿದ್ದು, ಏಳು ಹಳ್ಳಿಗಳನ್ನು ಒಳಗೊಂಡಿದೆ.ಇದು ಅಮೆರಿಕನ್ನರ ಸಾಂಸ್ಕೃತಿಕ ರಾಷ್ಟ್ರೀಯ ಐತಿಹಾಸಿಕ ಗುರುತಾಗಿದೆ ಸೀಡರ್ ರೇಪಿಡ್ಸ್ ಮ್ಯೂಸಿಯಂ ಆಫ್ ಆರ್ಟ್ ನಲ್ಲಿ ಗ್ರ್ಯಾಂಟ್ ಉಡ್ ಮತ್ತು ಮರ್ವಿನ್ ಕೋನ್‍ರವರು ಬರೆದ ಕೆಲವು ಪ್ರಮುಖ ಚಿತ್ರಗಳ ಸಂಗ್ರಹವಿದೆ. ಸೀಡರ್ ರೇಪಿಡ್ಸ್ ನ್ಯಾಶನಲ್ ಜೆಕ್ ಮತ್ತು ಸ್ಲೊವಕ್ ಮ್ಯೂಸಿಯಂ ಮತ್ತು ಲೈಬ್ರರಿಮತ್ತು ಐತಿಹಾಸಿಕ ಕ್ವೀನ್ ಆಯ್‌ನೆ-ಸ್ಟೈಲ್ ಬ್ರೂಸ್‌ಮೋರ್ ಮಹಲು. ಡೆವೆನ್‌ಪೋರ್ಟ್ ನಲ್ಲಿ ಹಲವು ಸಾಂಸ್ಕೃತಿಕ ಆಕರ್ಶಣೆಗಳಾದ ಫಿಗ್ಗೆ ಆರ್ಟ್ ಮ್ಯೂಸಿಯಂ, ರಿವರ್ ಮ್ಯೂಸಿಕ್ ಎಕ್ಸ್ ಪೀರಿಯನ್ಸ್, ಪಟ್‍ನಮ್ ಮ್ಯೂಸಿಯಂ ಮತ್ತು ಐಮ್ಯಾಕ್ಸ್ ಥಿಯೇಟರ್, ಡೆವೆನ್‌ಪೋರ್ಟ್ ಸ್ಕೈಬ್ರಿಡ್ಜ್, ಕ್ವಾಡ್ ಸಿಟಿ ಆರ‍್ಚೆಸ್ಟ್ರಇವೆ. ವಾರ್ಷಿಕ ಬಿಕ್ಸ್ ಬಿಡೆಉರ್‌ಬೆಕ್ ಮೆಮೋರಿಯಲ್ ಜಝ್ ಫೆಸ್ಟಿವಲ್ ಮತ್ತು ಬ್ಯಾಲೆಟ್ ಕ್ವಾಡ್ ಸಿಟೀಸ್ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗುತ್ತದೆ. ವೆಸ್ಟ್ ಲಿಬರ್ಟಿ, ಫೇರ್ ಫೀಲ್ಡ್, ಮೌಂಟ್ ಪ್ಲೆಸೆಂಟ್, ಫೋರ್ಟ್ ಮ್ಯಾಡಿಸನ್, ಲೇಕ್ಲೇರ್, ಮೌಂಟ್ ವೆರ್ನಾನ್, ಅಟ್ಟಂವ, ವಾಷಿಂಗ್‍ಟನ್ ಮತ್ತು ವಿಲ್ಟನ್ ಇತರೆ ಸಮುದಾಯದ ಐತಿಹಾಸಿಕ ಪ್ರದೇಶಗಳಾಗಿವೆ.
ಪಶ್ಚಿಮ ಅಯೋವಾ
[ಬದಲಾಯಿಸಿ]ಕೆಲವು ನಾಟಕೀಯ ದೃಶ್ಯಗಳನ್ನು ಅದ್ವೀತಿಯವಾಗಿರುವ ಲೋಯೆಸ್ಸ್ ಬೆಟ್ಟಗಳಿರುವ ಪಶ್ಚಿಮ ಅಯೋವಾದಲ್ಲಿ ಕಾಣಬಹುದಾಗಿದೆ.ಅಯೋವಾ ಮಹಾ ಸರೋವರವು ಪ್ರವಾಸ ಸ್ಥಳಗಳಾದ ಸ್ಪಿರಿಟ್ ಸರೋವರ, ಆರ್ನಾಲ್ಡ್ ಉದ್ಯಾನ ಮತ್ತು ಒಕೊಬೊಜಿ ಸರೋವರಗಳನ್ನು ಹೊಂದಿದೆ. ಚೆರೋಕಿಯಲ್ಲಿ ಸ್ಯಾನ್ ಫೋರ್ಡ್ ಮ್ಯೂಸಿಯಂ ಮತ್ತು ಪ್ಲಾನೆಟೇರಿಯಮ್, ವೆಸ್ಟ್ ಬೆಂಡ್‌ನಲ್ಲಿ ಗ್ರೆಟ್ಟೋ ಆಫ್ ದ ರಿಡೆಂಪ್ಷನ್, ಎಲ್ಕ್ ಹಾರ್ನ್‌ನಲ್ಲಿ ಡ್ಯಾನಿಶ್ ಇಮಿಗ್ರಂಟ್ ಮ್ಯೂಸಿಯಂ ಮತ್ತು ಫೋರ್ಟ್ ಡಾಡ್ಜ್ ನಲ್ಲಿ ಫೋರ್ಟ್ ಮ್ಯೂಸಿಯಂ ಮತ್ತು ಫ್ರಾಂಟಿಯರ್ ವಿಲ್ಲೇಜ್ ಇದೆ. ಸೂ ನಗರ ವಾಯುವ್ಯ ಆಯೋವಾದ ಸಾಂಸ್ಕೃತಿಕ ರಾಜಧಾನಿಯೆಂದೇ ಪರಿಗಣಿಸಲಾಗಿದೆ ಹಾಗೂ ಇದು ಸುಂದರವಾಗಿರುವ ಆಧುನಿಕ ನಗರವಾಗಿದೆ. ಮಿಸ್ಸೌರಿ ನದಿ ಪ್ರದೇಶದಲ್ಲಿ ಸರ್ಜಂಟ್ ಫ್ಲಾಯ್ಡ್ ಪ್ರತಿಮೆ, ಸರ್ಜಂಟ್ ಫ್ಲಾಯ್ಡ್ ರಿವರ್ ಮ್ಯೂಸಿಯಂ, ಟ್ರಿನಿಟಿ ಹೈಟ್ಸ್ ಮತ್ತು ನವೀಕೃತ ಆರ್ಪಿಯಮ್ ಥಿಯೇಟರ್ ಇದೆ.
ಕೌನ್ಸಿಲ್ ಬ್ಲಫ್ಸ್ ನೈರುತ್ಯ ಆಯೋವಾದ ಪ್ರಮುಖ ನಗರವಾಗಿದ್ದು ಲೋಯೆಸ್ ಬೆಟ್ಟಗಳ ಕೆಳಭಾಗದಲ್ಲಿದ್ದು ಆಟ ಮತ್ತು ಮನರಂಜನೆಯ ಕೇಂದ್ರವಾಗಿದೆ. ಜೊತೆಗೆ ಮೂರು ಕ್ಯಾಸಿನೋ ಆಟದ ಕೇಂದ್ರಗಳಿವೆ. ಇದಲ್ಲದೆ ವೆಸ್ಟರ್ನ್ ಹಿಲ್ಸ್ ಟ್ರೇಲ್ಸ್ ಸೆಂಟರ್, ಯೂನಿಯನ್ ಪೆಸಿಫಿಕ್ ರೇಲ್ ರೋಡ್ ಮ್ಯೂಸಿಯಂ, ಹಿಸ್ಟೋರಿಕ್ ಜನರಲ್ ಡಾಡ್ಜ್ ಹೌಸ್, ಒಂದು ಲೆವಿಸ್ ಮತ್ತು ಕ್ಲಾರ್ಕ್ ಸ್ಮಾರಕ ಮತ್ತು ವೀಕ್ಷಣಾಲಯ ಇವೆ. ಪ್ರಪಂಚದ ಹೆಚ್ಚಿನ ಗಾಳಿಯ ಸಹಾಯದಿಂದ ತಿರುಗುವ ಚಕ್ರಗಳು ವಾಯುವ್ಯ ಆಯೋವಾದಲ್ಲಿವೆ. ಇನ್ನುಳಿದ ಪಶ್ಚಿಮ ಭಾಗವು ಸ್ಟಾರ್ಮ್ ಲೇಕ್, ಸ್ಪೆಂಸರ್, ಲೆ ಮಾರ್ಸ್, ಗ್ಲೆನ್ ವುಡ್, ಕ್ಯಾರೊಲ್, ಅಟ್ಲಾಂಟಿಕ್, ರೆಡ್ ಓಕ್, ಡೆನಿಸನ್, ಕ್ರೆಸ್ಟಾನ್, ಮೌಂಟ್ ಐರ್, ಸ್ಯಾಕ್ ಸಿಟಿ, ಮತ್ತು ವಾಲ್‌ನಟ್‍ನ್ನು ಹೊಂದಿದೆ.
ಈಶಾನ್ಯ ಮತ್ತು ಉತ್ತರ ಆಯೋವಾ
[ಬದಲಾಯಿಸಿ]ಡ್ರಿಫ್ಟ್‌ಲೆಸ್ ಏರಿಯಾ ಈಶಾನ್ಯ ಆಯೋವಾ ಹಲವಾರು ಕಡಿದಾದ ಬೆಟ್ಟಗಳನ್ನು, ಆಳವಾದ ಕಣಿವೆಗಳನ್ನು, ಕಾಡು ಮತ್ತು ಸಮತಟ್ಟಾದ ಭೂಮಿಯನ್ನು ಹೊಂದಿದೆ. ಎಫ್ಫಿಗಿ ಮೌಂಡ್ಸ್ ರಾಷ್ಟೀಯ ಸ್ಮಾರಕ ಅಲ್ಲಮಕ್ಕೀಯಲ್ಲಿದೆ, ಹಾಗೂ ಕ್ಲೇಟಾನ್ ಪ್ರದೇಶ ಪ್ರಪಂಚದಲ್ಲಿಯೇ ಅತೀ ಹೆಚ್ಚು ಪ್ರಾಣಿಗಳ ಆಕಾರದ ನೈಸರ್ಗಿಕ ದಿಬ್ಬಗಳ ಸಮೂಹವನ್ನು ಹೊಂದಿದೆ.
ಜೊತೆಗೆ, ಉತ್ತರ ಆಯೋವಾದ ದೊಡ್ಡ ನಗರಗಳು ಹಾಗೂ ಅವಳಿ ನಗರಗಳಾದ ವಾಟರ್‌ಲೂ ಮತ್ತು ಸೀಡರ್ ಫಾಲ್ಸ್ ಗಳಲ್ಲಿ ಅನುಕ್ರಮವಾಗಿ ಗ್ರೌಟ್ ವಸ್ತು ಸಂಗ್ರಹಾಲಯ ಹಾಗೂ ಉತ್ತರ ಆಯೋವಾ ವಿಶ್ವವಿದ್ಯಾಲಯವಿದೆ. ಡೆಬ್ಯೂಕ್ ಸ್ಥಳೀಯ ಪ್ರವಾಸಿತಾಣವಾಗುತ್ತಿದ್ದು, ಅನೇಕ ಸಾಂಸ್ಕೃತಿಕ ವೈಶಿಷ್ಟ್ಯಗಳಾದ ನ್ಯಾಷನಲ್ ಮಿಸ್ಸಿಸ್ಸಿಪ್ಪಿ ರಿವರ್ ಮ್ಯೂಸಿಯಂ ಮತ್ತು ಅಕ್ವೇರಿಯಂ, ಇದರ ಜೊತೆಗೆ ಡೈಮಂಡ್ ಜೊ ಕ್ಯಾಸಿನೊ ರೀತಿಯ ಅನೇಕ ವಾಣಿಜ್ಯ ವ್ಯವಹಾರಗಳ ಕೇಂದ್ರ ಡೆಬ್ಯೂಕ್ ಬಂದರಿನಲ್ಲಿದೆ. ಫೀಲ್ಡ್ ಆಫ್ ಡ್ರೀಮ್ಸ್ ಚಲನಚಿತ್ರದ ಹೆಚ್ಚಿನ ಭಾಗವು ಡೈಯರ್ಸ್‌ವಿಲ್ಲೆಯಲ್ಲಿ ಚಿತ್ರೀಕರಣಗೊಂಡಿದೆ. ಮಕ್ವೋಕೆಟಾ ಗುಹೆಗಳ ರಾಜ್ಯ ಉದ್ಯಾನ ವಾಯುವ್ಯ ಮಕ್ವೋಕೆಟಾ ದ ಜಾಕ್ಸನ್ ಕಂಟ್ರಿಯಲ್ಲಿದ್ದು ಆಯೋವಾದ ಇತರ ರಾಜ್ಯ ಉದ್ಯಾನಗಳಿಗಿಂತ ಹೆಚ್ಚಿನ ಗುಹೆಗಳನ್ನು ಹೊಂದಿದೆ. ಫೋರ್ಟ್ ಅಟ್ಕಿನ್‍ಸನ್‍ನಲ್ಲಿ 1840ರ ಡ್ಯ್ರಾಗೂನ್ಕೋಟೆ ಇದೆ. ಡೆಕೋರಾ, ಮ್ಯಾಕ್‌ಗ್ರೆಗರ್, ಮೇಸನ್ ನಗರ, ಎಲ್ಕಾಡರ್, ಅಲ್ಗೋನ, ಸ್ಪಿಲ್ಲ್ ವಿಲ್ಲೆ, ಚಾರ್ಲ್ಸ್ ನಗರ ಮತ್ತು ಇಂಡಿಪೆಂಡೆನ್ಸ್ ಇತರೆ ಸಮುದಾಯದ ಐತಿಹಾಸಿಕ ಪ್ರದೇಶಗಳಾಗಿವೆ.
ರಾಜ್ಯದ ವಿಸ್ತಾರ
[ಬದಲಾಯಿಸಿ]RAGBRAI— ರಿಜಿಸ್ಟರ್ಸ್ ಆಯ್‌ನುವಲ್ ಗ್ರೇಟ್ ಬೈಕ್ ರೈಡ್ ಅಕ್ರಾಸ್ ಐಯೋವಾ — ಸಾವಿರಾರು ಬೈಸಿಕಲ್ ಸವಾರರು ಮತ್ತು ಪ್ರೋತ್ಸಾಹಕರನ್ನು ಆಕರ್ಷಿಸುತ್ತದೆ.
ಇದು 1973 ರಿಂದ ಈಚೆಗೆ ಪ್ರತಿ ವರ್ಷ ಅನೇಕ ಮಾರ್ಗಗಳ ಮೂಲಕ ರಾಜ್ಯವನ್ನು ದಾಟಿದೆ. ಆಯೋವಾ 70ಕ್ಕೂ ಹೆಚ್ಚು ವಿಜೇತರ ತವರಾಗಿದ್ದು[೭೦] ಐದು ಸ್ಥಳೀಯ ವೈನ್ ಟೇಸ್ಟಿಂಗ್ ಟ್ರಯಲ್ಸ್ ನಡೆಸಿಕೊಡುತ್ತಿದೆ.[೭೧] ಆಯೋವಾವ ಜನಾಂಗದ ಹಲವರು ಬೇಸಿಗೆಯ ತಿಂಗಳುಗಳಲ್ಲಿ ವಾರಕೊಮ್ಮೆ ರೈತ ಮಾರುಕಟ್ಟೆಯನ್ನು ನಡೆಸುತ್ತಾರೆ, ಆದರೆ ದೊಡ್ಡ ನಗರಗಳಲ್ಲಿ ನಾನಾ ರೀತಿಯ ಮಾರುಕಟ್ಟೆಗಳು ನಡೆಯುತ್ತವೆ.[೭೨]
ಆರ್ಥಿಕತೆ
[ಬದಲಾಯಿಸಿ]ಆಯೋವಾ ಕೃಷಿ ಅಧಾರಿತ ರಾಜ್ಯದಂತೆ ಅವಲೋಕಿಸಿದರೂ, ವಾಸ್ತವವಾಗಿ ಕೃಷಿಯು ವಿಸ್ತಾರವಾದ ಆರ್ಥಿಕತೆಯ ಚಿಕ್ಕ ಭಾಗವಾಗಿದ್ದು, ಉತ್ಪಾದನ ವಲಯ, ಜೈವಿಕ ವಲಯ, ಹಣಕಾಸು ಮತ್ತು ವಿಮಾ ಸೇವೆಗಳು ಮತ್ತು ಸರ್ಕಾರಿ ಸೇವೆಗಳು ಆಯೋವಾದ ಆರ್ಥಿಕತೆಗೆ ಬೃಹತ್ ಕೊಡುಗೆ ನೀಡುತ್ತಿವೆ.[೫೧]
ಈ ವಿಸ್ತಾರವಾದ ಆರ್ಥಿಕತೆಯು 2000ರದ ನಂತರದ ಆರ್ಥಿಕ ಕುಸಿತದ ಸಂದರ್ಭದಲ್ಲಿ ಇತರ ರಾಜ್ಯಗಳಿಗಿಂತ ಕಡಿಮೆ ನಿರುದ್ಯೋಗ ಇರಲು ಕಾರಣವಾಯಿತು.[೭೪][೭೫] ಆಯೋವಾದ ಆರ್ಥಿಕತೆಯು ಒಟ್ಟು ದೇಶೀಯ ಉತ್ಪನ್ನದ ಪ್ರಕಾರ, 2005ರಲ್ಲಿ 124 ಬಿಲಿಯನ್ ಯುಎಸ್ ಡಾಲರ್ ಆಗಿತ್ತು.[೭೬] ಒಟ್ಟು ರಾಜ್ಯ ಉತ್ಪನ್ನದ ಪ್ರಕಾರ, 2005ರಲ್ಲಿ 113.5 ಬಿಲಿಯನ್ ಯುಎಸ್ ಡಾಲರ್ ಆಗಿತ್ತು.[೭೭] 2006ರಲ್ಲಿ ತಲಾ ವರಮಾನವು 23,340 ಯುಎಸ್ ಡಾಲರ್ ಆಗಿತ್ತು.[೭೭]
ಜುಲೈ 2, 2009ರಲ್ಲಿ ಸ್ಟ್ಯಾಂಡರ್ಡ್ ಅಂಡ್ ಪೂರ್ ಆಯೋವಾವ ರಾಜ್ಯಕ್ಕೆ ಎಎಎ ಸ್ಟ್ಯಾಂಡರ್ಡ್ ನೀಡಿದರು. ( ಇದು ಅತ್ಯುನ್ನತ ಸ್ಥಾನವಾಗಿದ್ದು, ಅಮೆರಿಕ ಸಂಯುಕ್ತ ಸಂಸ್ಥಾನದ ಕೇವಲ 11 ರಾಜ್ಯ ಸರ್ಕಾರಗಳು ಇದನ್ನು ಹೊಂದಿವೆ).[೭೮] ಜನವರಿ, 2010ರಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇ.6.6 ಇದೆ.[೭೯]
ಉತ್ಪಾದನೆ
[ಬದಲಾಯಿಸಿ]ಉತ್ಪಾದನಾ ವಲಯವು ಆಯೋವಾದ ಆರ್ಥಿಕತೆಯ ಬಹುದೊಡ್ಡ ವಲಯವಾಗಿದ್ದು, 2003ರಲ್ಲಿ ಒಟ್ಟು ರಾಜ್ಯ ಉತ್ಪನ್ನಕ್ಕೆ 20.8 ಬಿಲಿಯನ್ ಯುಎಸ್ ಡಾಲರ್ (21%) ಕೊಡುಗೆ ನೀಡಿದೆ. ಪ್ರಮುಖ ಉತ್ಪಾದನಾ ವಲಯಗಳೆಂದರೆ, ಆಹಾರ ಸಂಸ್ಕರಣೆ, ಬೃಹತ್ ಯಂತ್ರೋಪಕರಣಗಳು ಮತ್ತು ರಾಸಾಯನಿಕಗಳು. ಆಯೋವಾದ ಶೇ.16 ರಷ್ಟು ಕಾರ್ಮಿಕ ವರ್ಗ ಉತ್ಪಾದನಾ ವಲಯದಲ್ಲಿದೆ.[೫೧]
ಆಹಾರ ಸಂಸ್ಕರಣೆಯು ಉತ್ಪಾದನಾ ವಲಯದ ಬಹು ದೊಡ್ಡ ಭಾಗವಾಗಿದೆ. ಇದರ ಕೈಗಾರಿಕೋತ್ಪನ್ನಗಳು ಆಹಾರ ಸಂಸ್ಕರಣೆ, ವಿದ್ಯುತ್ ಉಪಕರಣಗಳು, ರಾಸಾಯನಿಕ ಉತ್ಪನ್ನಗಳ ಬಿಡುಗಡೆ ಮತ್ತು ಲೋಹಗಳನ್ನು ಒಳಗೊಂಡಿದೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಸ್ಕರಣೆ ಸೌಕರ್ಯ ನೀಡುವ ಕಂಪೆನಿಗಳೆಂದರೆ, ಕಾಂಗ್ರಾ ಫುಡ್ಸ್, ವೆಲ್ಸ್ ಬ್ಲೂ ಬನ್ನಿ, ಬರಿಲ್ಲ, ಹೆಂಜ್, ವಂಡರ್ ಬ್ರೆಡ್/ ಹೊಸ್ಟೆಸ್ ಸ್ಯಾಕ್ ಕೇಕ್ಸ್, ಟೋನ್ಸ್ ಸ್ಪೈಸೀಸ್, ಜನರಲ್ ಮಿಲ್ಸ್ ಮತ್ತು ಕ್ವೇಕರ್ ಓಟ್ಸ್. ಆಯೋವಾದಲ್ಲಿರುವ ಪ್ರಮುಖ ಆಹಾರೇತರ ಉತ್ಪಾದನಾ ಕಂಪೆನಿಗಳೆಂದರೆ, 3M, ALCOA, ಅಮಾನ ಕಾರ್ಪೊರೇಷನ್, ಡೆಸ್ಕ್‌ಟರ್ ಅಪಾಚೆ ಹೋಲ್ಡಿಂಗ್ಸ್, ಇಂಕ್., ಎಲೆಕ್ಟ್ರೋಲಕ್ಸ್/ ಫ್ರಿಜಿಡೇರ್, ಎಮೆರ್ಸನ್ ಪ್ರೊಸೆಸ್, ಫಿಶರ್ ಕಂಟ್ರೋಲ್ಸ್ ಇಂಟರ‍್ನ್ಯಾಷನಲ್, HON ಇಂಡಸ್ಟ್ರೀಸ್, HON ಕಂಪೆನಿ, IPSCO ಸ್ಟೀಲ್, ಜಾನ್ ಡೀರ್, ಲೆನ್ನೋಕ್ಸ್ ಮ್ಯಾನಿಫ್ಯಾಕ್ಚರಿಂಗ್, ಮೇಟ್ಯಾಗ್ ಕಾರ್ಪೊರೇಷನ್, ಪೆಲ್ಲ ಕಾರ್ಪೊರೇಷನ್, ರಾಕ್‍ವೆಲ್ ಕೊಲ್ಲಿನ್ಸ್, ವರ್ಮೀರ್ ಕಂಪೆನಿ ಮತ್ತು ವಿನ್ನೆಬಾಗೊ ಇಂಡಸ್ಟ್ರೀಸ್.
ಕೃಷಿ
[ಬದಲಾಯಿಸಿ]ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿಯು ಆಯೋವಾದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಆದಾಗ್ಯೂ, ನೇರ ಉತ್ಪಾದನೆ ಮತ್ತು ಕಚ್ಚಾ ಕೃಷಿ ಉತ್ಪನ್ನಗಳ ಕೊಡುಗೆ ಕೇವಲ ಆಯೋವಾದ ಒಟ್ಟು ರಾಜ್ಯ ಉತ್ಪನ್ನದ ಶೇ. 3.5 ಭಾಗ ಮಾತ್ರ.[೮೦] ಕೃಷಿ ಕ್ಷೇತ್ರದ ಪರೋಕ್ಷ ಕೊಡುಗೆಯನ್ನು ಹಲವಾರು ರೀತಿಯಲ್ಲಿ ಅಳೆಯಬಹುದಾಗಿದೆ, ಕೃಷಿ ಅಧಾರಿತವಲಯವನ್ನು ಪರಿಗಣಿಸಿದಾಗ, ಮೌಲ್ಯಾಧಾರಿತ ಉತ್ಪನ್ನಗಳ ಪ್ರಕಾರ ಶೇ.16.4 ಮತ್ತು ಒಟ್ಟು ಉತ್ಪಾದನೆಯನ್ನು ಪರಿಗಣಿಸಿದಾಗ ಶೇ.24.3 ರಷ್ಟು ಕೊಡುಗೆಯನ್ನು ನೀಡುತ್ತಿದೆ. ಇದು ಕೃಷಿಯೇತರ ಉತ್ಪಾದನಾ ವಲಯದ ಕೊಡುಗೆಗಿಂತ ಕಡಿಮೆಯಿದೆ. ಕೃಷಿಯೇತರ ಉತ್ಪಾದನಾ ವಲಯವು ಮೌಲ್ಯಾಧಾರಿತ ಉತ್ಪನ್ನಗಳ ಪ್ರಕಾರ ಶೇ.22.4 ಮತ್ತು ಒಟ್ಟು ಉತ್ಪಾದನೆಯನ್ನು ಪರಿಗಣಿಸಿದಾಗ ಶೇ.26.5ರಷ್ಟು ಕೊಡುಗೆಯನ್ನು ನೀಡುತ್ತಿದೆ.[೮೧] ಆಯೋವಾದ ವ್ಯವಸಾಯೋತ್ಪನ್ನಗಳೆಂದರೆ, ಹಂದಿ, ಹೈನುಗಾರಿಕೆ ಉತ್ಪನ್ನಗಳು, ಮೊಟ್ಟೆ, ಕಾರ್ನ್, ಸೋಯಬಿನ್, ಓಟ್ ಮತ್ತು ಡೈರಿ ಉತ್ಪನ್ನಗಳು.
ಅಯೋವಾವು ದೇಶದಲ್ಲೇ ಅತೀ ಹೆಚ್ಚು ಎಥನಾಲ್ ಮತ್ತು ಕಾರ್ನ್ ಉತ್ಪಾದಿಸುತ್ತಿದ್ದು ಅತೀ ಹೆಚ್ಚು ಸೋಯಬಿನ್ ಸಹ ಬೆಳೆಯಲಾಗುತ್ತಿದೆ. 2008ರಲ್ಲಿ 92,600 ಫಾರ್ಮ್‌ಗಳಲ್ಲಿ ದೇಶದ ಶೇ. 19ರಷ್ಟು ಕಾರ್ನ್, ಶೇ. 17ರಷ್ಟು ಸೋಯಬಿನ್, ಶೇ.30ರಷ್ಟು ಹಂದಿಯ ಉತ್ಪನ್ನಗಳು ಮತ್ತು ಶೇ.14ರಷ್ಟು ಮೊಟ್ಟೆಯನ್ನು ಆಯೋವಾವದಲ್ಲಿ ಉತ್ಪಾದಿಸಲಾಯಿತು.[೮೨] ಆಯೋವಾದ ಪ್ರಮುಖ ಕೃಷಿ ಉತ್ಪನ್ನಗಳ ಸಂಸ್ಕರಣಾಕಾರರೆಂದರೆ, ಆರ್ಚರ್ ಡೇನಿಯಲ್ಸ್ ಮಿಡ್‍ಲ್ಯಾಂಡ್, ಅಜಿನೊಮೊಟೊ, ಕಾರ್ಗಿಲ್, ಇಂಕ್., ಡೈಮಂಡ್ ವಿ ಮಿಲ್ಸ್, ಗಾರ್ಸ್ಟ್ ಸೀಡ್ ಕಂಪೆನಿ, ಹಾರ್ಟ್ ಲ್ಯಾಂಡ್ ಪೋರ್ಕ್ ಎಂಟರ‍್ಪ್ರೈಸಸ್, ಹೈ-ವೀ, ಮೊನ್‍ಸ್ಯಾಂಟೊ ಕಂಪೆನಿ, ಪಯನೀರ್ ಹೈ-ಬ್ರೆಡ್ ಇಂಟರ‍್ನ್ಯಾಷನಲ್, ಮತ್ತು ಕ್ವೇಕರ್ ಓಟ್ಸ್.[೮೩]
ಇತರೆ ವಲಯಗಳು
[ಬದಲಾಯಿಸಿ]ಆಯೋವಾವ ಹಣಕಾಸು ಮತ್ತು ವಿಮಾ ವಲಯಗಳಲ್ಲೂ ಸಹ ದೃಢವಾಗಿದ್ದು, ಅಂದಾಜು 6,100 ಮಳಿಗೆಗಳನ್ನು ಹೊಂದಿದೆ[೫೧]. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, AEGON, ನೇಷನ್ ವೈಡ್ ಗ್ರೂಪ್, ಅವಿವ ಯುಎಸ್‍ಎ, ಫಾರ್ಮ್ ಬ್ಯೂರೊ ಫಿನ್ಯಾಂಶಿಯಲ್ ಸರ್ವಿಸಸ್, ಐಎನ್‍ಜಿ, ಮಾರ್ಷ್ ಅಫ್ಫಿನಿಟಿ ಗ್ರೂಪ್, ಮೆಟ್‍ಲೈಫ್, ಪ್ರಿಂಸಿಪಾಲ್ ಫಿನ್ಯಾಂಶಿಯಲ್ ಗ್ರೂಪ್, ಪ್ರಿಂಸಿಪಾಲ್ ಕ್ಯಾಪಿಟಲ್ ಮ್ಯಾನೇಜ್‍ಮೆಂಟ್, ವೆಲ್‍ಮಾರ್ಕ್ ಬ್ಲ್ಯೂ ಕ್ರಾಸ್ ಮತ್ತು ಬ್ಲ್ಯೂ ಶೀಲ್ಡ್ ( ಅಮೆರಿಕದ ವೈದ್ಯಕೀಯ ಸಂಸ್ಥೆಯ ಪ್ರಕಾರ 2007[೮೪] ರಲ್ಲಿ ರಾಜ್ಯದ ಶೇ. 71 ಭಾಗ ಆರೋಗ್ಯ ವಿಮೆಯನ್ನು ಇದು ಒದಗಿಸಿದೆ), ವೆಲ್ಸ್ ಫಾರ್ಗೊ ಮತ್ತು ವೆಲ್ಸ್ ಫಾರ್ಗೊ ಹಣಕಾಸು ಸೇವೆಗಳು.
ಆಯೋವದಲ್ಲಿ ಜೈವಿಕ ತಂತ್ರಜ್ಞಾನವು ಕಳೆದ ಒಂದು ದಶಕದಲ್ಲಿ ನಾಟಕೀಯ ರೀತಿಯಲ್ಲಿ ವಿಸ್ತರಿಸಿದ್ದು ಅನೇಕ ಸಂಶೋಧನಾ ಮತ್ತು ಉತ್ಪಾದನಾ ಕೇಂದ್ರಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಬಯೋ- ರಿಸರ್ಚ್ ಪ್ರಾಡಕ್ಟ್ಸ್ ಇಂಕ್., Boehringer Ingelheim, ವೆಟ್‍ಮೆಡಿಕ, ಡಯೋಸಿಂಥ್, ಇಂಕ್., ಫೋರ್ಟ್ ಡೋಡ್ಜ್ ಅನಿಮಲ್ ಹೆಲ್ತ್, ಪೆನ್‍ಫೋರ್ಡ್ ಪ್ರಾಡಕ್ಟ್ಸ್ ಕೋ., ಇಂಟಿಗ್ರೇಟೆಡ್ ಡಿಎನ್‍ಎ ಟೆಕ್ನಾಲಜೀಸ್, ರೋಚೆ ಅಪ್ಲೈಡ್ ಸೈನ್ಸ್, ವ್ಯಾಕರ್ ಬಯೋ ಕೆಮಿಕಲ್ ಕಾರ್ಪೊರೇಷನ್., ಮತ್ತು ವೈತ್. ಆಯೋವಾದ ಕಾರ್ನ್ ಉತ್ಪಾದನೆಯ ಅಂದಾಜು ಮೂರನೇ ಒಂದು ಭಾಗವು ಎಥೆನಾಲ್ ಉತ್ಪಾದನೆಗೆ ಬಳಕೆಯಾಗುತ್ತಿದೆ ಮತ್ತು ಒಟ್ಟು ದೇಶೀಯ ಉತ್ಪನ್ನದ ಶೇ. 8 ಭಾಗ ನವೀಕರಿಸಬಹುದಾದ ಇಂಧನಗಳದಾಗಿದೆ. 2009ರಲ್ಲಿ ಒಟ್ಟು 39 ಉತ್ಪಾದನಾ ಕೇಂದ್ರಗಳಲ್ಲಿ 3.1 ಬಿಲಿಯನ್ ಗ್ಯಾಲನ್ ಇಂಧನ ಉತ್ಪಾದಿಸಲಾಗಿದೆ.[೮೫] ಎಥೆನಾಲ್‌ನ ಜೊತೆಗೆ ನವೀಕರಿಸಬಹುದಾದ ಶಕ್ತಿಯು ಪಶ್ಚಿಮ ಅಯೊವಾದ ಆರ್ಥಿಕತೆಯ ಪ್ರಮುಖ ಮೂಲವಾಗಿದೆ. ಇದರ ಜೊತೆಗೆ, 1990ರಿಂದ ಈಚೆಗೆ ಗಾಳಿಯಂತ್ರದ ಮೂಲಕ ತಯಾರಿಸುವ ವಿದ್ಯುತ್ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಾಗಿದೆ.[೭] 2008ರ ಪ್ರಕಾರ ಇದು ಶೇ. 15ರಷ್ಟು ಶಕ್ತಿ ಉತ್ಪಾದಿಸಿದ್ದು, ಶೇ. 7.1ರಷ್ಟು ರಾಜ್ಯದ ಬೇಡಿಕೆಯನ್ನು ಈಡೇರಿಸಿದೆ. ಗಾಳಿಯಿಂದ ಶಕ್ತಿ ಪಡೆಯುವ ಸಾಮರ್ಥ್ಯದಲ್ಲಿ ಆಯೋವಾ ಯು.ಎಸ್. ಸಂಸ್ಥಾನಗಳಲ್ಲೇ ಎರಡನೇ ಸ್ಥಾನದಲ್ಲಿದೆ.[೮೬] ಆಯೋವಾದಲ್ಲಿ ಇದರ ಪ್ರಮುಖ ಉತ್ಪಾದಕರೆಂದರೆ, ಆಯ್ ಸಿಯೋನ ಎನರ‍್ಜೀ ಆಫ್ ವೆಸ್ಟ್ ಬ್ರ್ಯಾಂಚ್, ಟಿಪಿಐ ಕಾಂಪಾಸಿಟ್ಸ್ ಆಫ್ ನ್ಯೂಟನ್ ಮತ್ತು ಸೀಮನ್ಸ್ ಎನರ‍್ಜೀ ಆಫ್ ಫೋರ್ಟ್ ಮ್ಯಾಡಿಸನ್. ಆಯೋವಾವ ಉನ್ನತ ಶ್ರೇಣಿಯಲ್ಲಿರುವ 1000 ಕಂಪೆನಿಗಳಲ್ಲಿ ಐದು ಕಂಪೆನಿಗಳಿಗೆ ಪ್ರಧಾನ ಕೇಂದ್ರವಾಗಿದೆ.[೮೭] ಅವುಗಳಲ್ಲಿ ಪ್ರಿನ್ಸಿಪಾಲ್ ಫಿನ್ಯಾಂಶಿಯಲ್, ರಾಕ್‍ವೆಲ್ ಕೊಲ್ಲಿನ್ಸ್, ಕೇಸೇಯ್ಸ್ ಜನರಲ್ ಸ್ಟೋರ್, ಹೆಚ್‍ಎನ್‍ಐ ಮತ್ತು ಟೆರ್ರಾ ಇಂಡಸ್ಟ್ರೀಸ್ ಮುಖ್ಯವಾದವುಗಳು. ಇಷ್ಟೇ ಅಲ್ಲದೆ ಹೈ-ವೀ, ಪೆಲ್ಲ ಕಾರ್ಪೊರೇಷನ್, ವರ‍್ಮೀರ್ ಕಂಪೆನಿ, ಕಮ್ ಅಂಡ್ ಗೋ ಗ್ಯಾಸ್ ಸ್ಟೇಷ್ಟನ್ಸ್, ವೋನ್ ಮೌರ್, ಪಯನೀರ್ ಹೈ-ಬ್ರೆಡ್, ಮ್ಯಾಕ್‌ಲಿಯೋಡ್ ಯುಎಸ್‍ಎ ಮತ್ತು ಫೇರ‍್ವೇ ಗ್ರೊಸರಿ ಸ್ಟೋರ್ ಮುಂತಾದ ಕಂಪೆನಿಗಳಿಗೂ ಪ್ರಧಾನ ಕೇಂದ್ರವಾಗಿದೆ.
ತೆರಿಗೆ
[ಬದಲಾಯಿಸಿ]ಆಯೋವಾ ವಯಕ್ತಿಕ ಆದಾಯ, ಆಸ್ತಿ ಮತ್ತು ಪ್ರತಿಷ್ಠಾನಗಳ ಮೇಲೆ ತೆರಿಗೆಯನ್ನು ಹೇರುತ್ತದೆ. ಪ್ರಸ್ತುತ ಒಂಭತ್ತು ರೀತಿಯ ಶೇಕಡಾವಾರು ಆದಾಯ ತೆರಿಗೆ ಇದ್ದು ಅದು ಶೇ.0.36 ನಿಂದ ಶೇ. 8.98 ರ ವ್ಯಾಪ್ತಿಯಲ್ಲಿದೆ.
ವ್ಯಾಪಾರ ತೆರಿಗೆಯು ಶೇ.6 ಇದ್ದು, ಕಚ್ಚಾ ಆಹಾರದ ಮೇಲೆ ಯಾವುದೇ ತೆರಿಗೆ ಇಲ್ಲ.[೮೮] ಆಯೋವಾದಲ್ಲಿ ಮತದಾನದ ಮೂಲಕ ವ್ಯಾಪಾರ ತೆರಿಗೆಯನ್ನು ನಿರ್ಧರಿಸುವ ಒಂದು ವಿಶೇಷ ಅವಕಾಶವಿದೆ.[೮೯]
ಆಸ್ತಿ ತೆರಿಗೆಯನ್ನು ಸ್ಥಿರಾಸ್ತಿಯ ಮೇಲೆ ಹೇರಲಾಗುತ್ತದೆ. ಆಯೋವಾದಲ್ಲಿ 2,000ಕ್ಕೂ ಹೆಚ್ಚು ತೆರಿಗೆ ಇಲಾಖೆಗಳಿವೆ. ಹೆಚ್ಚಿನ ಆಸ್ತಿಯು ಒಂದಕ್ಕಿಂತ ಹೆಚ್ಚು ತೆರಿಗೆ ಇಲಾಖೆಯಿಂದ ತೆರಿಗೆ ಹೇರಲ್ಪಡುತ್ತದೆ. ತೆರಿಗೆಯು ಪ್ರತಿಯೊಂದು ಪ್ರದೇಶದಲ್ಲೂ ಬೇರೆ ಬೇರೆಯಾಗಿರುತ್ತದೆ ಮತ್ತು ಇದು ನಗರ ಅಥವಾ ಗ್ರಾಮಾಂತರ, ಜಿಲ್ಲಾ ಶಾಲೆಗಳು ಮತ್ತು ಇತರ ತೆರಿಗೆಗಳನ್ನು ಒಳಗೊಂಡಿರುತ್ತದೆ.
ಆಯೋವಾದ ನಿವಾಸಿಗಳಿಗೆ ರಾಜ್ಯ ಆದಾಯ ತೆರಿಗೆಗಳಿಂದ ಫೆಡರಲ್ ಆದಾಯ ತೆರಿಗೆಗಳನ್ನು ಕಡಿಮೆಮಾಡಿಕೊಳ್ಳಲು ಅವಕಾಶವಿದೆ.[೯೦]
ಸಾರಿಗೆ
[ಬದಲಾಯಿಸಿ]ಅಂತರ ರಾಜ್ಯ ಹೆದ್ದಾರಿಗಳು
[ಬದಲಾಯಿಸಿ]ಆಯೋವಾವ ಮುಖ್ಯವಾಗಿ ನಾಲ್ಕು ಅಂತರ ರಾಜ್ಯ ಹೆದ್ದಾರಿಗಳನ್ನು ಹೊಂದಿದೆ. ಅಂತರ ರಾಜ್ಯ ಹೆದ್ದಾರಿ 29 ರಾಜ್ಯದ ಪಶ್ಶಿಮ ಅಂಚಿನಲ್ಲಿ ಕೌನ್ಸಿಲ್ ಬ್ಲಫ್ಸ್ ಮತ್ತು ಸೂ ನಗರಗಳ ಮೂಲಕ ಹಾದುಹೋಗುತ್ತದೆ. ಅಂತರ ರಾಜ್ಯ ಹೆದ್ದಾರಿ 35 ರಾಜ್ಯದ ದಕ್ಷಿಣದ ಗಡಿಯಿಂದ ಉತ್ತರದ ಗಡಿಯವರೆಗೆ ರಾಜ್ಯದ ಮಧ್ಯ ಭಾಗದಲ್ಲಿ ಡೆಮೋಯಿನ್ ನಗರದ ಮೂಲಕ ಹಾದುಹೋಗುತ್ತದೆ. ಅಂತರ ರಾಜ್ಯ ಹೆದ್ದಾರಿ 74, ಅಂತರ ರಾಜ್ಯ ಹೆದ್ದಾರಿ 80ರ ಉತ್ತರದಲ್ಲಿ ಹಾಗೂ ಡೆವೆನ್‍ಪೋರ್ಟ್ ನ ಪೂರ್ವದಲ್ಲಿ ಪ್ರಾರಂಭವಾಗುತ್ತದೆ. ಅಂತರ ರಾಜ್ಯ ಹೆದ್ದಾರಿ 80 ರಾಜ್ಯದ ಪಶ್ಶಿಮ ತುದಿಯಿಂದ ಉತ್ತರ ತುದಿಗೆ ಕೌನ್ಸಿಲ್ ಬ್ಲಫ್ಸ್, ಡೆಮೋಯಿನ್, ಆಯೋವಾ ನಗರ ಮತ್ತು ಕ್ವಾಡ್ ನಗರಗಳ ಮೂಲಕ ಹಾದುಹೋಗುತ್ತದೆ. ಅಂತರ ರಾಜ್ಯ ಹೆದ್ದಾರಿ 380 ಒಂದು ಪೂರಕ ಅಂತರ ರಾಜ್ಯ ಹೆದ್ದಾರಿಯಾಗಿದ್ದು, ಅಂತರ ರಾಜ್ಯ ಹೆದ್ದಾರಿ 80ರಲ್ಲಿ ಅಯೊವಾ ನಗರದ ಸಮೀಪ ಪ್ರಾರಂಭವಾಗಿ ಸೀಡರ್ ರೇಪಿಡ್ಸ್ ಮೂಲಕ ಹಾದುಹೋಗಿ ವಾಟರ್‍ಲೂನಲ್ಲಿ ಅಂತ್ಯವಾಗುತ್ತದೆ ಮತ್ತು ಸೇಂಟ್ಸ್ ಹೆದ್ದಾರಿಯ ಭಾಗವಾಗಿದೆ.
ವಿಮಾನ ನಿಲ್ದಾಣ ಹಾಗೂ ನಿಗದಿತ ವಿಮಾನಗಳು
[ಬದಲಾಯಿಸಿ]ಆಯೋವಾಕ್ಕೆ ಅನೇಕ ಪ್ರಮುಖ ವಿಮಾನ ನಿಲ್ದಾಣಗಳು ಸೇವೆಯನ್ನು ಒದಗಿಸುತ್ತಿವೆ. ಅವುಗಳೆಂದರೆ, ಡೆಮೋಯಿನ್ ಅಂತರಾಷ್ಟೀಯ ವಿಮಾನ ನಿಲ್ದಾಣ, ಸೀಡರ್ ರೇಪಿಡ್ಸ್ ನಲ್ಲಿರುವ ಪೂರ್ವ ಆಯೋವಾವ ವಿಮಾನ ನಿಲ್ದಾಣ, ಮೊಲಿನ್ ನಲ್ಲಿರುವ ಕ್ವಾಡ್ ಸಿಟಿ ಅಂತರಾಷ್ಟೀಯ ವಿಮಾನ ನಿಲ್ದಾಣ, ಒಮಹದಲ್ಲಿರುವ ಇಲುನೊಯ್ ಮತ್ತು ನೆಬ್ರಸ್ಕಾದಲ್ಲಿರುವ ಎಪ್‌ಲೇ ಏರ್‌ಫೀಲ್ಡ್.
ಸಣ್ಣ ವಿಮಾನ ನಿಲ್ದಾಣಗಳೆಂದರೆ, ಡೆಬ್ಯೂಕ್ ಸ್ಥಳೀಯ ವಿಮಾನ ನಿಲ್ದಾಣ, ಫೋರ್ಟ್ ಡಾಡ್ಜ್ ಸ್ಥಳೀಯ ವಿಮಾನ ನಿಲ್ದಾಣ, ಮ್ಯಾಸನ್ ಮುನಿಸಿಪಾಲ್ ವಿಮಾನ ನಿಲ್ದಾಣ, ಸೋ ಗೇಟ್‍ವೇ ವಿಮಾನ ನಿಲ್ದಾಣ, ಆಗ್ನೇಯ ಆಯೋವಾವ ಸ್ಥಳೀಯ ವಿಮಾನ ನಿಲ್ದಾಣ ಮತ್ತು ವಾಟರ್‌ಲೂ ಸ್ಥಳೀಯ ವಿಮಾನ ನಿಲ್ದಾಣ.
ರೈಲಿನ ಮಾರ್ಗಗಳು
[ಬದಲಾಯಿಸಿ]ಅಮ್‍ಟ್ರಾಕ್ಸ್‌ನ ಕ್ಯಾಲಿಫೋರ್ನಿಯಾ ಝೆಫಿರ್ ದಕ್ಷಿಣ ಆಯೋವಾಕ್ಕೆ ಸೇವೆಯನ್ನು ನೀಡುತ್ತಿದೆ. ಪ್ರತಿ ದಿನ ಚಿಕಾಗೊ ಮತ್ತು ಎಮೆರಿವಿಲ್ಲೆ ನಡುವೆ ಸಂಚರಿಸುತ್ತಿದ್ದು (ಸ್ಯಾನ್‍ಫ್ರಾನ್ಸಿಸ್ಕೋದಿಂದ ಕೊಲ್ಲಿಗೆ ಅಡ್ದಲಾಗಿ), ಬರ್ಲಿಂಗ್‍ಟನ್, ಮೌಂಟ್ ಪ್ಲೆಸೆಂಟ್, ಒಟ್ಟುಂವ, ಓಸಿಯೋಲಾ ಮತ್ತು ಕ್ರೆಸ್ಟ್ರಾನ್‌ನಲ್ಲಿ ನಿಲುಗಡೆ ಇದೆ.
ಬರ್ಲಿಂಗ್‍ಟ್ನ್ ಮತ್ತು ಮ್ಯಾಡಿಸನ್‍ಗೆ ಸಹ ಅಮ್‍ಟ್ರಾಕ್ಸ್‌ನ ಸೌತ್‍ವೆಸ್ಟ್ ಚೀಫ್ ಸೇವೆ ಇದ್ದು ಪ್ರತಿ ದಿನ ಚಿಕಾಗೊ ಮತ್ತು ಲಾಸ್‍ಎಂಜಲೀಸ್ ನಡುವೆ ಸಂಚರಿಸುತ್ತದೆ.
ಕಾನೂನು ಮತ್ತು ಸರ್ಕಾರ
[ಬದಲಾಯಿಸಿ]- ಅಯೋವಾದ ಗವರ್ನರ್‌ಗಳು, ಅಯೋವಾ ಸಾಮಾನ್ಯ ಸಭೆ, ಮತ್ತು ಅಯೋವಾ ಸ್ಟೇಟ್ ಕ್ಯಾಪಿಟೋಲ್ ಪಟ್ಟಿಯನ್ನು ನೋಡಿ.
ಪ್ರಸ್ತುತ ಗವರ್ನರ್ ಚೆಟ್ ಕಲ್ವರ್ (D) ರಾಜ್ಯದೆಲ್ಲೆಡೆ ಆಯ್ಕೆಯಾದ ಇತರ ಅಧಿಕಾರಿಗಳು:
- ಪ್ಯಾಟಿ ಜಡ್ಜ್ (D) - ಲೆಫ್ಟಿನೆಂಟ್ ಗವರ್ನರ್
- ಮೈಖೆಲ್ ಮೌರೊ (D) - ರಾಜ್ಯ ಕಾರ್ಯದರ್ಶಿ
- ಡೇವಿಡ್ ವಾಟ್ (R) - ರಾಜ್ಯ ಲೆಕ್ಕಾಧಿಕಾರಿ
- ಮೈಖೆಲ್ ಫಿಡ್ಜರಾಲ್ಡ್ (D) - ರಾಜ್ಯ ಖಜಾಂಚಿ
- ಬಿಲ್ ನಾರ್ಥಿ (R) - ಕೃಷಿ ಕಾರ್ಯದರ್ಶಿ
- ಟಾಮ್ ಮಿಲ್ಲರ್ (D) - ಅಟಾರ್ನಿ ಜನರಲ್
ಇಬ್ಬರು ಯುಎಸ್ ಸೆನೇಟರ್‌ಗಳು:
- ಟಾಮ್ ಹಾರ್ಕಿನ್ (D)
- ಚಕ್ ಗ್ರೇಸ್ಲಿ (R)
ಐವರು ಯುಎಸ್ ಕಾಂಗ್ರೆಸ್‌ಮನ್‌ಗಳು:
- ಬ್ರೂಸ್ ಬ್ರೇಲಿ (D) - ಮೊದಲ ಜಿಲ್ಲೆ
- ಡೇವ್ ಲೋಬ್ಸ್ಯಾಕ್ (D) - ಎರಡನೇ ಜಿಲ್ಲೆ
- ಲಿಯೋನಾರ್ಡ್ ಬೋಸ್ವೆಲ್ (D) - ಮೂರನೇ ಜಿಲ್ಲೆ
- ಟಾಮ್ ಲಥಾಮ್ (R) - ನಾಲ್ಕನೇ ಜಿಲ್ಲೆ
- ಸ್ಟೀವ್ ಕಿಂಗ್ (R) - ಐದನೇ ಜಿಲ್ಲೆ
ಅಯೋವಾದ ನೀತಿಯು ಅಯೋವಾ ರಾಜ್ಯದ ಶಾಸನವಿಹಿತ ಕಾನೂನುಗಳನ್ನು ಒಳಗೊಂಡಿರುತ್ತದೆ. ಅಯೋವಾ ಸಂಸದೀಯ ಸೇವಾ ಕಛೇರಿಯು ಇದನ್ನು ನಿಯಮಿತವಾಗಿ ನವೀಕರಿಸುತ್ತದೆ. ಇದರ ಹೊಸ ಆವೃತ್ತಿಯು ಬೆಸ ಸಂಖ್ಯೆಯ ವರ್ಷಗಳಲ್ಲಿ ಪ್ರಕಟಗೊಳ್ಳುತ್ತಿದ್ದು ಅದರ ಒಂದು ಅನುಬಂಧವು ಸರಿ ಸಂಖ್ಯೆಯ ವರ್ಷಗಳಲ್ಲಿ ಪ್ರಕಟಗೊಳ್ಳುತ್ತದೆ. ಅಯೋವಾ ಆಲ್ಕೋಹಾಲ್ ಏಕಸ್ವಾಮ್ಯ ಅಥವಾ ಆಲ್ಕೋಹಾಲು ಪಾನೀಯಗಳು ನಿಯಂತ್ರಿತಗೊಂಡ ರಾಜ್ಯವಾಗಿದೆ.
ರಾಜಕೀಯ ಪಕ್ಷಗಳು
[ಬದಲಾಯಿಸಿ]ಆಯೋವಾದಲ್ಲಿ "ರಾಜಕೀಯ ಪಕ್ಷ" ಎಂದರೆ, ಅದು ಒಂದು ರಾಜಕೀಯ ಸಂಘಟನೆಯಾಗಿದ್ದು, "ಹಿಂದಿನ ಸಾಮಾನ್ಯ ಚುನಾವಣೆಯಲ್ಲಿ" ಅಧ್ಯಕ್ಷ್ಯರ ಅಥವಾ ರಾಜ್ಯಪಾಲರ ಸ್ವರ್ಧೆಯಲ್ಲಿ ಶೇ. ಎರಡು ಅಥವಾ ಅದಕ್ಕಿಂತ ಹೆಚ್ವು ಮತಗಳನ್ನು ಪಡೆದಿರಬೇಕು.[೯೧]
ಆಯೋವಾವ ಎರಡು ರಾಜಕೀಯ ಪಕ್ಷಗಳನ್ನು ಮಾತ್ರ ಪ್ರಮುಖವಾಗಿ ಪರಿಗಣಿಸುತ್ತದೆ. ದಿ ರಿಪಬ್ಲಿಕ್ ಪಾರ್ಟಿ ಮತ್ತು ದಿ ಡೆಮಾಕ್ರಟಿಕ್ ಪಾರ್ಟಿ.
ತೃತೀಯ ಪಕ್ಷಗಳನ್ನು ಅಧಿಕೃತವಾಗಿ "ಪಕ್ಷೇತರ ರಾಜಕೀಯ ಸಂಸ್ಥೆ"ಗಳೆಂದು ಕರೆಯುತ್ತಾರೆ. ಅವುಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಧಿಕಾರವಿದ್ದು 2004ರಿಂದ ಈಚೆಗೆ ಅನೇಕ ಸ್ಥಾನಗಳಲ್ಲಿ ಐದು ಅಭ್ಯರ್ಥಿಗಳಿದ್ದಾರೆ. ಆ ಪಕ್ಷಗಳೆಂದರೆ, ಕಾಂಸ್ಟಿಟ್ಯೂಶನ್ ಪಾರ್ಟಿ, ಆಯೋವಾ ಗೀನ್ ಪಾರ್ಟಿ, ದಿ ಲಿಬರ್ಟರೇನ್ ಪಾರ್ಟಿ, ದಿ ಯುನೈಟೆಡ್ ಸ್ಟೇಟ್ಸ್ ಪೈರೇಟ್ ಪಾರ್ಟಿ ಮತ್ತು ಸೋಷಿಯಲಿಸ್ಟ್ ವರ್ಕ್‌ರ್ಸ್ ಪಾರ್ಟಿ.[೯೨][೯೩]
ಮತದಾರರ ಒಲವು
[ಬದಲಾಯಿಸಿ]ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು | ||
ವರ್ಷ | ರಿಪಬ್ಲಿಕನ್ | ಡೆಮೋಕ್ರಾಟಿಕ್ |
---|---|---|
2008 | 44.74% 677,508 | 54.04% 818,240 |
2004 | 49.92% 751,957 | 49.28% 741,898 |
2000 | 48.22% 634,373 | 48.60% 638,517 |
1996 | 39.92% 492,644 | 50.31% 620,258 |
1992 | 37.33% 504,890 | 43.35% 586,353 |
1988 | 44.8% 545,355 | 55.1% 670,557 |
1984 | 53.32% 703,088 | 45.97% 605,620 |
ಆಯೋವಾ ಪ್ರಸ್ತುತ ರಾಜಕೀಯದಲ್ಲಿ ತೂಗಾಡುವ ರಾಜ್ಯವಾಗಿದೆ.
ಪ್ರಸ್ತುತ ಈ ರಾಜ್ಯವು ಸ್ವಲ್ಪ ಡೆಮಾಕ್ರೆಟಿಕ್‍ನತ್ತ ವಾಲಿದೆ. ಕುಕ್ ಪಾರ್ಟಿಸನ್ ಮತದಾನದ ಸೂಚಿಯ ಪ್ರಕಾರ, ಸದ್ಯದ ಚುನಾವಣೆಯನ್ನು ಗಮನಿಸಿದಾಗ ಅಯೊವಾ ಎಣಿಕೆ ಡಿ+1 ಆಗಿದೆ. ಹಾಗಿದ್ದರೂ ರಾಜ್ಯವು ಒಂದೇ ರಾಜಕೀಯ ವ್ಯವಸ್ಥೆಯ ಕಡೆಗೆ ಸಂಪೂರ್ಣ ಒಲವನ್ನು ಹೊಂದಿಲ್ಲ. ಕುಕ್‍ರವರು ಆಯೋವಾದ ರಾಜಕೀಯ ಜಿಲ್ಲೆಗಳ ರಾಜಕೀಯ ವಿವಿಧತೆಯನ್ನು ಕಂಡಿದ್ದಾರೆ. ಆಯೋವಾ ರಾಜ್ಯದ ಪೂರ್ವ/ಆಗ್ನೇಯ ಭಾಗದ 2ನೇ ಕಾಂಗ್ರೆಸ್ ಪರ ಇರುವ ಜಿಲ್ಲೆ ಡಿ+7 ನೊಂದಿಗೆ (ಪ್ರಬಲ ಡೆಮಾಕ್ರಟಿಕ್) ಸ್ಪಷ್ಟವಾಗಿ ಡೆಮಾಕ್ರಟಿಕ್‍ನತ್ತ ಒಲವನ್ನು ಹೊಂದಿದೆ. ಆದರೆ ಆಯೋವಾದ 5ನೇ ಕಾಂಗ್ರೆಸ್ ಪರ ಜಿಲ್ಲೆ ಆಯೋವಾವದ ಪಶ್ಶಿಮದ ಹೆಚ್ಚಿನ ಭಾಗವನ್ನು ಆವರಿಸಿದ್ದು ಆರ್+9ನೊಂದಿಗೆ ಪ್ರಬಲವಾಗಿ ರಿಪಬ್ಲಿಕನ್‍ನತ್ತ ಒಲವನ್ನು ಹೊಂದಿದೆ. 1968ರಿಂದ 1984ರ ವರೆಗೆ ಅಯೊವಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯನ್ನು ಗೆಲ್ಲಿಸಿತ್ತು. ಮತ್ತು 1988 ರಿಂದ 2000 ವರೆಗೆ ಡೆಮಾಕ್ರಟಿಕ್ ಅಭ್ಯರ್ಥಿಗೆ ಮತಹಾಕಿತು. ಈ ಚುನಾವಣೆಗಳಲ್ಲಿ ಕೇವಲ 4000 ಮತಗಳ ಅಂತರದಿಂದ ಡೆಮಾಕ್ರಟಿಕ್ ಅಭ್ಯರ್ಥಿಗಳು ಗೆದ್ದರು.
2004 ರ ಚುನಾವಣೆಯಲ್ಲಿ ಆಯೋವಾದಿಂದ ಜಾರ್ಜ್ ಡಬ್ಲೂ ಬುಷ್‍ಗೆ ಅಂದಾಜು 10,000 ಅಭ್ಯರ್ಥಿ ಮತಗಳು ಸಿಕ್ಕಿತು. ಆದರೆ 2008ರಲ್ಲಿ ಬರಾಕ್ ಒಬಾಮ 150,000ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದರು. 2006ರ ಚುನಾವಣೆಯಲ್ಲಿ ಡೆಮಾಕ್ರಟಿಕ್ಸ್ ಆಯೋವಾದಿಂದ ಯುಎಸ್ ಸ್ಟೇಟ್ ಹೌಸ್ ಆಫ್ ರೆಪ್ರಸಂಟೇಟಿವ್ಸ್‌ನಲ್ಲಿ ಎರಡು ಸ್ಥಾನಗಳನ್ನು ಪಡೆದರು ಹಾಗೂ ಆಯೋವಾ ಸಾಮಾನ್ಯ ಸಭೆಯಲ್ಲಿ ಬಹುಮತವನ್ನು ಪಡೆದರು.
ಅಧ್ಯಕ್ಷರ ಸಭೆ
[ಬದಲಾಯಿಸಿ]ಈ ರಾಜ್ಯವು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಗಮನಸೆಳೆಯುತ್ತದೆ. ಏಕೆಂದರೆ, ಮೊದಲ ಅಧ್ಯಕ್ಷೀಯ ಸಭೆ ಮತ್ತು ರಾಜ್ಯದ ಜನಪ್ರತಿನಿಧಿಗಳ ಆಯ್ಕೆ ಇಲ್ಲಿ ನಡೆಯುತ್ತದೆ. ನ್ಯೂ ಹ್ಯಾಂಪ್‍ಶೈರ್ ಜೊತೆಗೆ ಅಯೊವಾದಲ್ಲಿನ ಸಭೆ ಎರಡು ಪ್ರಮುಖ ಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಚುನಾವಣೆ ನಡೆಯುವ ವರ್ಷದ ಜನವರಿಯಲ್ಲಿ ಸಭೆಯು ನಡೆಯುತ್ತದೆ. ಜನರು ಮುಖ್ಯ ಚುನಾವಣೆಯಲ್ಲಿ ಮಾಡುವಂತೆ ಗುಪ್ತ ಮತದಾನ ಮಾಡದೆ ಮನೆಗಳಲ್ಲಿ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಒಟ್ಟುಗೂಡಿ ತಮ್ಮ ಅಭ್ಯರ್ಥಿಗಳನ್ನು ಆಯ್ಕೆಮಾಡುತ್ತಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು ಆಯೋವಾ( ಮತ್ತು ನ್ಯೂ ಹ್ಯಾಂಪ್‍ಶೈರ್)ದ ಕಡೆ ಅಧ್ಯಕ್ಷೀಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೆಚ್ಚಿನ ಗಮನ ಕೊಡುತ್ತವೆ. ಇದು ಆಯೋವಾದ ಮತದಾರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಸ್ಪರ್ಧೆಗಿಳಿಯುವ ಅಭ್ಯರ್ಥಿಗಳು ಅಯೊವಾದ 99 ಪ್ರಾಂತ್ಯಗಳ ಮತದಾರರ ಮನ ಗೆಲ್ಲಲು ತುಂಬಾ ಪ್ರಯತ್ನ ಮಾಡಬೇಕಾಗುತ್ತದೆ.
ನಾಗರಿಕ ಹಕ್ಕುಗಳು
[ಬದಲಾಯಿಸಿ]ಆಯೋವಾ 19ನೇ ಶತಮಾನದಲ್ಲಿ ಜನಾಂಗೀಯ ಬೇಧವನ್ನು ನಿಷೇಧಿಸುವ ಕಾಯ್ದೆಯನ್ನು, ಪ್ರಮುಖವಾಗಿ ಶಿಕ್ಷಣ ವಲಯದಲ್ಲಿ ಬಹುಬೇಗ ತಂದರೂ, ಬಹಳ ನಿಧಾನವಾಗಿ 20ನೇ ಶತಮಾನದಲ್ಲಿ ಏಕತೆಯನ್ನು ಪಡೆಯಿತು.
ಆಯೋವಾ ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ — In Re the Matter of Ralph [೯೫], ಜುಲೈ 1839ರ ತೀರ್ಪು — ಗುಲಾಮಗಿರಿಯನ್ನು ತಿರಸ್ಕರಿಸಿ, ರಲ್ಫ್ ಎಂಬ ಹೆಸರಿನ ಗುಲಾಮನನ್ನು ಬಿಡುಗಡೆ ಮಾಡಿತು. 26 ವರ್ಷಗಳ ಹಿಂದೆ ಅಂತಃ ಕಲಹದ ಮುಕ್ತಾಯಕ್ಕೆ ಮೊದಲು ಆಯೋವಾ ನೆಲಕ್ಕೆ ಕಾಲಿರಿಸಿದ್ದ.[೯೬] ಯುಎಸ್ ಸರ್ವೋಚ್ಛ ನ್ಯಾಯಾಲಯ ರಾಷ್ರ್ಟಾದ್ಯಂತಅಂತರ ಜನಾಂಗೀಯ ವಿವಾಹವನ್ನು ನಿಷೇಧಿಸುವ ಕಾಯ್ದೆ ತರುವ 100 ವರ್ಷ ಮೊದಲೇ ಆ ಅಡೆತಡೆಗಳಿಂದ ಈ ರಾಜ್ಯವು ಹೊರಗೆ ಬಂದಿತ್ತು.[೯೭] 1868ರಲ್ಲಿ ಅಯೊವಾ ಸರ್ವೋಚ್ಛ ನ್ಯಾಯಾಲಯಯು ಕ್ಲಾರ್ಕ್ ವಿರುದ್ಧವಾಗಿ ಬೋರ್ಡ್ ಆಫ್ ಡೈರೆಕ್ಟರ್ಸ್ [೯೮] ನ ಮೊಕದ್ದಮೆಯಲ್ಲಿ "ಬೇರೆ ಬೇರೆ ಆದರೆ ಸಮಾನ" ಎಂಬ ಮನೋಭಾವವಿರುವ ಶಾಲೆಗಳಿಗೆ ಅಯೊವಾದಲ್ಲಿ ಅವಕಾಶವಿಲ್ಲವೆಂದು ಹೇಳಿತು. ಇದು ಬ್ರೌನ್ ವಿರುದ್ಧವಾಗಿ ಬೋರ್ಡ್ ಆಫ್ ಎಜುಕೇಶನ್ [೯೬] ನ ಮೊಕದ್ದಮೆಗಿಂತ 85 ವರ್ಷ ಮೊದಲು ನಡೆದ ಘಟನೆ. 1875ರ ಅವಧಿಗೆ ನ್ಯಾಯಾಲಯದ ಅನೇಕ ಹೆಚ್ಚುವರಿ ಕಾಯ್ದೆಗಳಿಂದ ಆಯೋವಾದ ಶಾಲೆಗಳಲ್ಲಿನ ಜನಾಂಗಿಯ ಬೇಧವು (ವರ್ಣ ಬೇಧ) ನಿರ್ಮೂಲಗೊಂಡಿತು.[೯೯]
ಕಪ್ಪು ಜನರ ಮೇಲಿನ ಸಾಮಾಜಿಕ ಹಾಗೂ ವಾಸ್ಥವ್ಯದಲ್ಲಿನ ತಾರತಮ್ಯ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 1950ರ ವರೆಗೂ ಮುಂದುವರೆಯಿತು.[೧೦೦] ಕೋಗರ್ ವಿರುದ್ಧವಾಗಿ ದ ನಾರ್ಥ್ ವೆಸ್ಟರ್ನ್ ಯೂನಿಯನ್ ಪ್ಯಾಕೇಟ್ ಕಂ. [೧೦೧] ನ ಮೊಕದ್ದಮೆಯಲ್ಲಿ 1873ರಲ್ಲಿ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸಾರ್ವಜನಿಕ ಸ್ಥಳಗಳಲ್ಲಿ ವರ್ಣಬೇಧವನ್ನು ನಿಷೇಧಿಸಿ ಆದೇಶ ನೀಡಿದರು.[೯೬] ಇದು ಯುಎಸ್ ಸರ್ವೋಚ್ಛ ನ್ಯಾಯಾಲಯ ಇದೇ ತೀರ್ಪನ್ನು ಕೊಡುವುದಕ್ಕಿಂತ 91 ವರ್ಷ ಮೊದಲೇ ನೀಡಿದ್ದಾಗಿತ್ತು. 1884 ರಲ್ಲಿ ಅಯೊವಾ ನಾಗರಿಕ ಹಕ್ಕುಗಳ ಕಾಯ್ದೆ ಎಲ್ಲಾ ವ್ಯವಹಾರದಲ್ಲಿನ ತಾರತಮ್ಯವನ್ನು ನಿಷ್ವೇಧಿಸಿತು. " ರಾಜ್ಯದಲ್ಲಿರುವ ಎಲ್ಲಾ ಜನರು ಸಮಾನರೀತಿಯಲ್ಲಿ ಸಮಾನ ರೀತಿಯಲ್ಲಿ ವಾಸಿಸುವ, ಸೌಲಭ್ಯಗಳನ್ನು ಹೊಂದುವ ಹಾಗೂ ಪ್ರವಾಸಿತಾಣಗಳು, ರೆಸ್ಟೋರೆಂಟ್‍ಗಳು, ಉಪಹಾರ ಗೃಹಗಳು ಹಾಗೂ ಇನ್ನೂ ಮುಂತಾದ ಉಪಹಾರ ನೀಡುವ ಗೃಹಗಳಿಗೆ ಹೋಗುವ, ಸಾರ್ವಜನಿಕ ಸಾರಿಗೆ, ಕ್ಷೌರಿಕ ಅಂಗಡಿ, ಸ್ನಾನ ಗೃಹಗಳನ್ನು ಬಳಸುವ, ಚಿತ್ರಮಂದಿರಗಳು ಮತ್ತು ಇನ್ನೂ ಅನೇಕ ಮನರಂಜನಾ ಸ್ಥಳಗಳಿಗೆ ಹೋಗುವ ಹಕ್ಕನ್ನು ಪಡೆದರು". ಹಾಗಿದ್ದರೂ ನ್ಯಾಯಾಲಯ ಈ ಕಾಯ್ದೆಯನ್ನು ಸಂಕುಚಿತವಾಗಿ ಜಾರಿಗೆ ತಂದು ವರ್ಣಬೇಧ ನೀತಿಯು ಮುಂದುವರಿಯಿತು.[೧೦೨] 1949ರ ವರೆಗೆ ಸಾರ್ವಜನಿಕ ವ್ಯವಹಾರದಲ್ಲಿನ ವರ್ಣಬೇಧ ನೀತಿ ಕಾನೂನುಬಾಹಿರವಾಗಿರಲಿಲ್ಲ. ಆದರೆ ಅಯೋವಾ ರಾಜ್ಯ ವಿರುದ್ಧವಾಗಿ ಕ್ಯಾಟ್ಸ್ ನಡುವಿನ ನ್ಯಾಯಾಲಯ ವ್ಯವಹಾರದಲ್ಲಿ ವರ್ಣಬೇಧವಿಲ್ಲದೆ ಸೇವೆ ನೀಡಬೇಕೆಂದು ತೀರ್ಪನ್ನು ನೀಡಿತು. ಡೆಸ್ ಮೊಯಿನ್ಸ್‌ನ ಔಷಧಿ ಅಂಗಡಿಯಲ್ಲಿ ಎಡ್ನಾ ಗ್ರಿಫಿನ್‍ಗೆ ಸೇವೆ ನೀಡಲು ನಿರಾಕರಿಸಿದಾಗ ಈ ವ್ಯಾಜ್ಯ ಪ್ರಾರಂಭವಾಯಿತು.[೧೦೩] ಪೂರ್ಣ ವರ್ಣಬೇಧ ನೀತಿಯ ವಿರುದ್ಧದ ಹಕ್ಕಗಳನ್ನು ಆಯೋವಾ ನಾಗರಿಕ ಹಕ್ಕುಗಳ ಕಾಯ್ದೆ 1965ನಲ್ಲಿ ಹೆಸರಿಸಲಾಗಿದೆ.[೧೦೪] ವರ್ಣಸಮಾನತೆಯ ಜೊತೆಗೆ, ಆಯೋವಾ 19ನೇ ಶತಮಾನದಲ್ಲಿ ಮಹಿಳೆಯರಿಗೆ ಹಕ್ಕನ್ನು ನೀಡಲು ಮುಂದಾಯಿತು, ಬಹಳ ನಿಧಾನವಾಗಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿತು. ಆಯೋವಾ ವಿಶ್ವವಿದ್ಯಾಲಯ ಪುರುಷ ಹಾಗೂ ಮಹಿಳೆಯರಿಗೆ ಸಮಾನ ರೀತಿಯಲ್ಲಿ ಪ್ರವೇಶವೊದಗಿಸಿದ ಯುಎಸ್‍ನ ಮೊದಲ ವಿಶ್ವವಿದ್ಯಾಲಯವಾಯಿತು.[೧೦೫] 1869ರಲ್ಲಿ ಅಯೊವಾ ಒಕ್ಕೂಟದಲ್ಲೇ ಮಹಿಳೆಯರಿಗೆ ಕಾನೂನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟ ಮೊದಲ ರಾಜ್ಯವಾಯಿತು. ನ್ಯಾಯಾಲಯ ಮಹಿಳೆಯರಿಗೆ ಕಾನೂನು ವೃತ್ತಿ ಮಾಡುವ ಹಕ್ಕನ್ನು ಅಯೊವಾದಲ್ಲಿ ನಿರಾಕರಿಸುವಂತ್ತಿಲ್ಲವೆಂದು ತೀರ್ಪನ್ನು ನೀಡಿ ಅರಬೆಲ್ಲ್ ಎ. ಮ್ಯಾನ್ಸ್‌ಫೀಲ್ಡ್‌ರನ್ನು ಕಾನೂನು ವೃತ್ತಿಗೆ ನೇಮಕ ಮಾಡಿಕೊಂಡಿತು.[೯೬]
ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡುವ ಅನೇಕ ಪ್ರಯತ್ನಗಳು 1870ರಿಂದ 1919ರ ಅವಧಿಯಲ್ಲಿ ಸೋತಿದ್ದವು. 1894ರಲ್ಲಿ ಮಹಿಳೆಯರಿಗೆ "ಭಾಗಶಃ ಮತದಾನದ ಅಧಿಕಾರ" ನೀಡಲಾಗಿತ್ತು. ಅದು ಕೆಲವು ವಿಚಾರಗಳಿಗೆ ಮಿತಿಗೊಂಡಿತ್ತು. ಅಭ್ಯರ್ಥಿಗಳನ್ನು ಆರಿಸುವ ಅಧಿಕಾರವಿರಲಿಲ್ಲ. 1920ರಲ್ಲಿ ಸಂಯುಕ್ತ ಸಂಸ್ಥಾನದ ಸಂವಿಧಾನದ ಹತ್ತೊಂಭತ್ತನೇ ತಿದ್ದುಪಡಿಯ ಮೂಲಕ ಆಯೋವಾದ ಮಹಿಳೆಯರಿಗೆ ಪೂರ್ಣ ಮತದಾನದ ಅಧಿಕಾರವನ್ನು ನೀಡಲಾಯಿತು.[೧೦೬] ಹಾಗಿದ್ದರೂ 1980ರಲ್ಲಿ ಆಯೋವಾ ಫೆಡರಲ್ ಸಮಾನಹಕ್ಕುಗಳ ತಿದ್ದುಪಡಿಯನ್ನು ಬೆಂಬಲಿಸಿತು ಮತ್ತು 1992ರಲ್ಲಿ ಅಯೊವಾದ ಮತದಾರರು ರಾಜ್ಯ ಸಂವಿಧಾನದ ಸಮಾನಹಕ್ಕುಗಳ ತಿದ್ದುಪಡಿಯನ್ನು ತಿರಸ್ಕರಿಸಿದರು.[೧೦೭] ನಾಗರಿಕ ಹಕ್ಕುಗಳ ಯುಗದ ನಂತರ ಆಯೋವಾದ ನ್ಯಾಯಾಲಯದ ತೀರ್ಪುಗಳು ಪ್ರಜೆಗಳ ಹಕ್ಕುಗಳನ್ನು ವಿಮರ್ಶಿಸಿ, ವಿಸ್ತರಿಸಿತು. 1969ರಲ್ಲಿ ಯು.ಎಸ್. ಸರ್ವೋಚ್ಛ ನ್ಯಾಯಾಲಯ ಟಿಂಕರ್ ವಿರುದ್ಧವಾಗಿ ಡೆ ಮೋಯಿನ್ ಮೊಕದ್ದಮೆಯಲ್ಲಿ ವಿದ್ಯಾರ್ಥಿಗಳಿಗೆ ರಾಜಕೀಯ ಅಭಿಪ್ರಾಯಗಳನ್ನು ಹಕ್ಕು ನೀಡಿದ್ದು ದೊಡ್ಡ ಮೈಲುಗಲ್ಲಾಗಿದೆ. ಏಪ್ರಿಲ್ 3, 2009ರಂದು ಅಯೊವಾ ಸರ್ವೋಚ್ಛ ನ್ಯಾಯಾಲಯ ವರ್ನಮ್ ವಿರುದ್ಧ ಬ್ರೀನ್ ಮೊಕದ್ದಮೆಯಲ್ಲಿ [೧೦೮] ಸಮಾನ ಲಿಂಗದವರ ಮಧ್ಯದ ಮದುವೆಯ ಮೇಲಿನ ನಿಷೇಧ ಅಸಂವಿಧಾನಿಕ ಎಂದು ಅವಿರೋಧವಾಗಿ ತೀರ್ಪು[೧೦೯] ನೀಡಿತು. ಇದು ಆಯೋವಾವನ್ನು ಸಮಾನ ಲಿಂಗದವರ ವಿವಾಹಕ್ಕೆ ಅವಕಾಶಮಾಡಿಕೊಟ್ಟ ಯುಎಸ್‍ನ ಮೂರನೇ ಹಾಗೂ ಮಿಡ್‍ವೆಸ್ಟ್‌ನ ಮೊದಲ ರಾಜ್ಯವನ್ನಾಗಿಸಿದೆ.[೧೧೦] [೧೧೧]
ಸಹೋದರ ರಾಜ್ಯಗಳು
[ಬದಲಾಯಿಸಿ]ಅಯೊವಾಕ್ಕೆ ಏಳು ಅಧಿಕೃತ ಪಾಲುದಾರರಿದ್ದಾರೆ.[೧೧೨]
- ಹೇಬೇ ಪ್ರಾವಿನ್ಸ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ (1983)
- ಸ್ಟಾವ್ರೋಪೋಲ್ ಕ್ರೇಯ್, ರಷ್ಯಾ(1989)
- ತೈವಾನ್, ರಿಪಬ್ಲಿಕ್ ಆಫ್ ಚೈನಾ(1989)
- ತೆರೆಂಗ್ಗಾನು, ಮಲೇಷ್ಯಾ(1987)
- ವೆನೆಟೊ ರೀಜನ್, ಇಟಲಿ(1997)
- ಯಮನಾಶಿ ಪ್ರಿಫೆಕ್ಚರ್, ಜಪಾನ್(1960)
- ಯುಕಟಾನ್, ಮೆಕ್ಸಿಕೊ(1964)
ಶಿಕ್ಷಣ
[ಬದಲಾಯಿಸಿ]ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು
[ಬದಲಾಯಿಸಿ]ಮಾಧ್ಯಮಿಕ ಶಾಲೆಗಳ ನಂತರದ ಪದವಿಯ ದರ 2006ರಲ್ಲಿ ಶೇ. 90.8ಕ್ಕೆ ಹೆಚ್ಚಾಗಿದೆ.[೧೧೩]
ಈ ರಾಜ್ಯ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ.[೧೧೪] ಆಯೋವಾ ಸತತವಾಗಿ ACT ಮತ್ತು SAT ನಲ್ಲಿ 3ನೇ ಸ್ಥಾನ ಪಡೆದಿದೆ.[೧೧೫] 2008ರಲ್ಲಿ ಪ್ರತಿ ವಿದ್ಯಾರ್ಥಿಯ ಸರಾಸರಿ SAT ಅಂಕಗಳಲ್ಲಿ ಪ್ರಥಮ ಹಾಗೂ ಪ್ರತಿ ವಿದ್ಯಾರ್ಥಿಯ ಸರಾಸರಿ ACT ಅಂಕಗಳಲ್ಲಿ 2ನೇ ಸ್ಥಾನ ಪಡೆದಿದೆ.[೧೧೬] ಆಯೋವಾದಲ್ಲಿ 365 ಜಿಲ್ಲಾ ಶಾಲೆಗಳಿದ್ದು,[೧೧೫] ಉತ್ತಮ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಅನುಪಾತದಲ್ಲಿ 12ನೇ ಸ್ಥಾನದಲ್ಲಿದ್ದು, ಅದರ ಅನುಪಾತವು ಪ್ರತಿ ಶಿಕ್ಷಕರಿಗೆ 13.8 ವಿದ್ಯಾರ್ಥಿಗಳಿದ್ದಾರೆ.[೧೧೭] ಹಾಗಿದ್ದರೂ ಶಿಕ್ಷಕರ ವೇತನವು 39,284 ಯುಎಸ್ ಡಾಲರ‍್ಗಳಾಗಿದ್ದು 42ನೇ ಸ್ಥಾನದಲ್ಲಿದೆ.[೧೧೭] ಆಯೋವಾ ರಾಜ್ಯ ಶಿಕ್ಷಣ ಇಲಾಖೆಯು ದೂರದೃಷ್ಟಿ, ಮೇಲ್ವಿಚಾರಣೆ, ಹಾಗೂ ರಾಜ್ಯ ಶಿಕ್ಷಣ ವ್ಯವಸ್ಥೆ ಒಳಗೊಂಡಿರುವ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು, ಸರಕಾರದ ಅನುಮತಿ ಪಡೆದಿರುವ ಸಾರ್ವಜನಿಕೇತರ ಶಾಲೆಗಳು, ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು, ಕಮ್ಯೂನಿಟಿ ಕಾಲೇಜುಗಳು ಮತ್ತು ಶಿಕ್ಷಕರ ತರಬೇತಿಯನ್ನು ನೀಡುವ ಕಾರ್ಯಕ್ರಮಗಳಿಗೆ ಬೆಂಬಲ ನೀಡುವ ಸಲುವಾಗಿ ಅಯೊವಾ ಶಿಕ್ಷಣ ವಿಭಾಗದೊಂದಿಗೆ ಕೆಲಸಮಾಡುತ್ತಿದೆ.
ರಾಜ್ಯ ಇಲಾಖೆಯು 10 ಸದಸ್ಯರನ್ನು ಹೊಂದಿದ್ದು, ಅದರಲ್ಲಿ ಒಂಭತ್ತು ಮಂದಿ ಸೆನೆಟ್‍ನ ಒಪ್ಪಿಗೆಯ ಮೇರೆಗೆ ರಾಜ್ಯಪಾಲರು ನೇಮಿಸಿದ್ದು ಅವರ ಅವಧಿ 6 ವರ್ಷಗಳಾಗಿರುತ್ತದೆ ಮತ್ತು ಒಬ್ಬ ಮತಾಧಿಕಾರವಿಲ್ಲದ ವಿದ್ಯಾರ್ಥಿ ಸದಸ್ಯನಿದ್ದು, ಆತನನ್ನು ಒಂದು ವರ್ಷದ ಅವಧಿಗಾಗಿ ರಾಜ್ಯಪಾಲರು ನೇಮಕ ಮಾಡುತ್ತಾರೆ.
ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು
[ಬದಲಾಯಿಸಿ]ಆಯೋವಾದ ಆಡಳಿತ ಮಂಡಳಿಯು ಒಂಭತ್ತು ಸ್ವಯಂ ಸೇವಕ ನಾಗರಿಕರಿಂದ ಆಗಿದ್ದು, ಇವರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ. ಇವರು ನಿಯಮಗಳ ರಚನೆ, ಸಹಕಾರ ಮತ್ತು ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳ, ಎರಡು ಕೆ-12 ಶಾಲೆಗಳ ಹಾಗೂ ಅಧೀನಕ್ಕೊಳಪಟ್ಟ ಶಾಲೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಆಯೋವಾದ ಮೂರು ಸಾರ್ವಜನಿಕ ವಿಶ್ವವಿದ್ಯಾಲಯಗಳೆಂದರೆ:
- ಆಯೋವಾ ರಾಜ್ಯ ವಿಶ್ವವಿದ್ಯಾಲಯ, ಏಮ್ಸ್
- ಆಯೋವಾ ವಿಶ್ವವಿದ್ಯಾಲಯ, ಆಯೋವಾ ನಗರ
- ಉತ್ತರ ಆಯೋವಾ ವಿಶ್ವವಿದ್ಯಾಲಯ, ಸೀಡರ್ ಫಾಲ್ಸ್
ಕೆ-12 ಶಾಲೆಗಳು ಆಯೋವಾ ಸ್ಕೂಲ್ ಫಾರ್ ದಿ ಡೆಫ್, ಕೌನ್ಸಿಲ್ ಬ್ಲಫ್‌ನಲ್ಲೂ ಮತ್ತು ಆಯೋವಾ ಬ್ರೇಯಲ್ ಅಂಡ್ ಸೈಟ್ ಸೇವಿಂಗ್ ಸ್ಕೂಲ್ ವಿಂಟನ್‌ನಲ್ಲಿದೆ. ಆಯೋವಾ ರಾಜ್ಯ ವಿಶ್ವವಿದ್ಯಾಲಯ ಮತ್ತು ಆಯೋವಾ ವಿಶ್ವವಿದ್ಯಾಲಯ ಪ್ರಮುಖ ಸಂಶೋಧನಾ ಕೇಂದ್ರಗಳಾಗಿದ್ದು, ಪ್ರತಿಷ್ಠಿತ ಅಮೆರಿಕನ್ ವಿಶ್ವವಿದ್ಯಾಲಯಗಳ ಸಂಘದ ಸದಸ್ಯರಾಗಿವೆ. ಮೂರು ವಿಶ್ವವಿದ್ಯಾಲಯಗಳ ಜೊತೆಗೆ, ಆಯೋವಾದಲ್ಲಿ ಅನೇಕ ಖಾಸಗಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿವೆ. ಖಾಸಗಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳೆಂದರೆ:
- ಬ್ಯುಯೆನಾ ವಿಸ್ತಾ ವಿಶ್ವವಿದ್ಯಾಲಯ, ಸ್ಟಾರ್ಮ್ಲೇಕ್
- ಕ್ಲಾರ್ಕ್ ಕಾಲೇಜು, ಡಬ್ಯೂಕ್
- ಡೆಮೋಯಿನ್ ವಿಶ್ವವಿದ್ಯಾಲಯ, ಡೆಮೋಯಿನ್
- ಡಿವೈನ್ ವರ್ಡ್ ಕಾಲೇಜು, ಎಪ್ಸ್ವರ್ಥ್
- ಡ್ರೇಕ್ ವಿಶ್ವವಿದ್ಯಾಲಯ, ಡೆಮೋಯಿನ್
- ಎಮ್ಮೌಸ್ ಬೈಬಲ್ ಕಾಲೇಜು, ಡಬ್ಯೂಕ್
- ಫೇತ್ ಬ್ಯಾಪ್ಟಿಸ್ಟ್ ಬೈಬಲ್ ಕಾಲೇಜು ಮತ್ತು ಥಿಯಲಾಜಿಕಲ್ ಸೆಮಿನರಿ, ಅಂಕೆನಿ
- ಗ್ರೇಸ್ ಲ್ಯಾಂಡ್ ವಿಶ್ವವಿದ್ಯಾಲಯ,ಲಮೋನಿ
- ಆಯೋವಾ ವೆಸ್ಲಿಯನ್ ಕಾಲೇಜು, ಮೌಂಟ್ ಪ್ಲೆಜಂಟ್
- ಕ್ಯಾಪ್ಲನ್ ವಿಶ್ವವಿದ್ಯಾಲಯ, ಸೀಡರ್ ಫಾಲ್ಸ್, ಸೀಡರ್ ರೇಪಿಡ್ಸ್, ಕೌನ್ಸಿಲ್ ಬ್ಲಫ್ಸ್, ಡೆವೆನ್ಪೋರ್ಟ್, ಮ್ಯಾಸನ್ ಸಿಟಿ ಮತ್ತು ಅರ್ಬನ್‌ಡೇಲ್
- ಮಹರಿಷಿ ಯೂನಿವರ್ಸಿಟಿ ಅಫ್ ಮ್ಯಾನೇಜ್‍ಮೆಂಟ್, ಪೇರ್ಫೀಲ್ಡ್
- ಪಾಮರ್ ಕಾಲೇಜ್ ಆಫ್ ಚಿರೋಪ್ರಾಕ್ಟಿಕ್, ಡೆವೆನ್ಪೋರ್ಟ್
- ಸೇಂಟ್ ಆಯ್ಮ್ಬ್ರೌಝ್ ವಿಶ್ವವಿದ್ಯಾಲಯ, ಡೆವೆನ್ಪೋರ್ಟ್
- ಯೂನಿವರ್ಸಿಟಿ ಆಫ್ ಡಬ್ಯೂಕ್, ಡಬ್ಯೂಕ್
- ಅಪ್ಪರ್ ಆಯೋವಾ ವಿಶ್ವವಿದ್ಯಾಲಯ, ಫೇಯಟ್ಟೆ
- ವಾಲ್ಡ್ರೋಫ್ ಕಾಲೇಜು, ಫಾರೆಸ್ಟ್ ಸಿಟಿ
- ವಿಲಿಯಮ್ ಪೆನ್ ವಿಶ್ವವಿದ್ಯಾಲಯ, ಓಸ್ಕಲೂಸಾ
ಖಾಸಗಿ ಲಿಬರಲ್ ಆರ್ಟ್ಸ್ ಕಾಲೇಜುಗಳು
- ಆಯ್ಶ್ಫರ್ಡ್ ವಿಶ್ವವಿದ್ಯಾಲಯ, ಕ್ಲಿಂಟನ್
- ಬ್ರಯರ್ ಕ್ಲಿಫ್ ವಿಶ್ವವಿದ್ಯಾಲಯ, ಸಿಯೂಕ್ಸ್ ಸಿಟಿ
- ಸೆಂಟ್ರಲ್ ಕಾಲೇಜು, ಪೆಲ್ಲಾ
- ಕೋಯ್ ಕಾಲೇಜು, ಸೀಡರ್ ರೇಪಿಡ್ಸ್
- ಕಾರ್ನೆಲ್ ಕಾಲೇಜು, ಮೌಂಟ್ ವೆರ್ನೆನ್
- ಡಾರ್ಡ್ ಕಾಲೇಜು, ಸೂ ಸೆಂಟರ್
- ಗ್ರ್ಯಾಂಡ್ ವ್ಯೂ ವಿಶ್ವವಿದ್ಯಾಲಯ, ಡೆಮೋಯಿನ್
- ಗ್ರಿನೆಲ್ ಕಾಲೇಜು, ಗ್ರಿನೆಲ್
- ಲೋರಾಸ್ ಕಾಲೇಜು, ಡಬ್ಯೂಕ್
- ಲೂಥರ್ ಕಾಲೇಜು, ಡೆಕೋರಾ
- ಮಾರ್ನಿಂಗ್ಸೈಡ್ ಕಾಲೇಜು, ಸೂ ಸಿಟಿ
- ಮೌಂಟ್ ಮರ್ಸಿ ಕಾಲೇಜು, ಸೀಡರ್ ರೇಪಿಡ್ಸ್
- ನಾರ್ತ್ವೆಸ್ಟ್ರನ್ ಕಾಲೇಜು, ಆರೇಂಜ್ ಸಿಟಿ
- ಸಿಂಪ್ಸನ್ ಕಾಲೇಜು, ಇಂಡಿಯನೊಲ
- ವಾರ್ಟ್ಬರ್ಗ್ ಕಾಲೇಜು, ವೇವರ್ಲಿ
ಕ್ರೀಡೆ
[ಬದಲಾಯಿಸಿ]ಆಯೋವಾ ವೃತ್ತಿಪರ ಬೇಸ್‌ಬಾಲ್, ಬ್ಯಾಸ್ಕೆಟ್ ಬಾಲ್, ಹಾಕಿ, ಫುಟ್‍ಬಾಲ್ ಮತ್ತು ಸಾಕರ್ ತಂಡಗಳನ್ನು ಹೊಂದಿದೆ. ರಾಜ್ಯವು ಎಲ್ಲಾ ಕೀಡೆಗಳಲ್ಲಿ ಡಿವಿಶನ್-1 ರಲ್ಲಿ ಆಡುವ ಪ್ರಮುಖ ನಾಲ್ಕು ಕಾಲೇಜು ತಂಡಗಳನ್ನು ಹೊಂದಿದೆ. ಫುಟ್‍ಬಾಲ್‌ನಲ್ಲಿ ಆಯೋವಾ ರಾಜ್ಯ ವಿಶ್ವವಿದ್ಯಾಲಯ ಮತ್ತು ಆಯೋವಾ ವಿಶ್ವವಿದ್ಯಾಲಯಗಳು ಫುಟ್‍ಬಾಲ್ ಬೌಲ್ ಸಬ್‌ಡಿವಿಶನ್(FBS)ನಲ್ಲಿ ಸ್ಪರ್ಧಿಸಿದರೆ, ಉತ್ತರ ಆಯೋವಾ ವಿಶ್ವವಿದ್ಯಾಲಯ ಮತ್ತು ಡ್ರೇಕ್ ವಿಶ್ವವಿದ್ಯಾಲಯಗಳು ಫುಟ್‍ಬಾಲ್ ಚಾಂಪಿಯನ್‌ಶಿಪ್ ಸಬ್‌ಡಿವಿಶನ್(FCS)ನಲ್ಲಿ ಸ್ಪರ್ಧಿಸುತ್ತವೆ.
ಬೇಸ್‌ಬಾಲ್
[ಬದಲಾಯಿಸಿ]ಆಯೋವಾ ಮಿಡ್ವೆಸ್ಟ್ ಲೀಗ್‍ನಲ್ಲಿ ನಾಲ್ಕು ಕ್ಲಾಸ್ ಎ ಕಿರಿಯ ಲೀಗ್ ತಂಡಗಳನ್ನು ಹೊಂದಿದೆ. ಆ ತಂಡಗಳೆಂದರೆ, ಬರ್ಲಿಂಗ್ಟನ್ ಬೀಸ್, ಸೀಡರ್ ರೇಪಿಡ್ಸ್ ಕರ್ನೆಲ್ಸ್, ಕ್ಲಿಂಟನ್ ಲಂಬರ‍್ಕಿಂಗ್ಸ್ ಮತ್ತು ಕ್ವಾಡ್ ಸಿಟಿಸ್ ರಿವರ್ ಬ್ಯಾಂಡಿಟ್ಸ್. ಸೂ ಸಿಟಿ ಎಕ್ಸ್‌ಪ್ಲೋರರ್ಸ್ ಅಮಿರಿಕನ್ ಅಸೋಸಿಯೇಷನ್ ಆಫ್ ಇಂಡಿಪೆಂಡೆಂಟ್ ಪ್ರೊಫೆಶನಲ್ ಬೇಸ್‍ಬಾಲ್‍ನ ಭಾಗವಾಗಿದೆ. ವಾಟರ್‌ಲೂ ನಾರ್ತ್‌ವುಡ್ ಲೀಗ್‍ನಲ್ಲಿ ಆಡುತ್ತಾರೆ. ಪೆಸಿಫಿಕ್ ಕೋಸ್ಟ್ ಲೀಗ್‍ನಲ್ಲಿ ಕ್ಲಾಸ್ ಎಎಎ ತಂಡವಾಗಿರುವ ಅಯೋವಾ ಕ್ಲಬ್ ಡೆಮೋಯಿನ್‌ನಲ್ಲಿದೆ.
ಫುಟ್‍ಬಾಲ್
[ಬದಲಾಯಿಸಿ]ಸೂ ಸಿಟಿ ಬ್ಯಾಂಡಿಟ್ಸ್ ಯುನೈಟೆಡ್ ಒಳಾಂಗಣ ಫುಟ್‍ಬಾಲ್ ಲೀಗ್‍ನ ಒಳಾಂಗಣ ಫುಟ್‍ಬಾಲ್ ತಂಡವಾಗಿದೆ. ಆಯೋವಾ ಬಾರ್ನ್‌ಸ್ಟಾರ್ಮರ್ಸ್ ಅರೇನಾ ಫುಟ್‍ಬಾಲ್ ಲೀಗ್‍ನಲ್ಲಿ ಆಡುತ್ತಾರೆ. ಅವರು ತಮ್ಮ ಸ್ಥಳೀಯ ಪಂದ್ಯಗಳನ್ನು ವೆಲ್ಸ್ ಫಾರ್ಗೋ ಅರೇನಾದಲ್ಲಿ ಆಡುತ್ತಾರೆ.
ಹಾಕಿ
[ಬದಲಾಯಿಸಿ]ಕ್ವಾಡ್ ಸಿಟಿ ಮಲ್ಲಾರ್ಡ್ಸ್ ಪಂದ್ಯಗಳು ಮೋಲಿನ್‌ನಲ್ಲಿ ಆಡಲ್ಪಡುತ್ತವೆ, ಇಲುನೊಯ್‌ಗಳು ಅಂತರಾಷ್ಟ್ರೀಯ ಹಾಕಿ ಲೀಗ್‍ನ ಭಾಗವಾಗಿವೆ. ಆಯೋವಾದ ನಾಲ್ಕು ತಂಡಗಳು ಸಂಯುಕ್ತ ಸಂಸ್ಥಾನದ ಹಾಕಿ ಲೀಗ್‍ನಲ್ಲಿ ಭಾಗವಹಿಸುತ್ತವೆ. ಅವುಗಳೆಂದರೆ, ಸೀಡರ್ ರೇಪಿಡ್ಸ್ ರಫ್‍ರೈಡರ್ಸ್, ಸೂ ಸಿಟಿ ಮಸ್ಕಿಟೀರ್ಸ್, ವಾಟರ್‌ಲೂ ಬ್ಲಾಕ್‍ಹಾಕ್ಸ್, ಮತ್ತು ಡೆಮೋಯಿನ್ ಬುಕಾನೀರ್ಸ್. 2002ರಿಂದ 2009ರ ವರೆಗೆ ಒಮಹ ಲ್ಯಾಂಸರ್ಸ್ ತಂಡವು ಕೌಂಸಿಲ್‍ಬ್ಲಫ್‍ನಲ್ಲಿ ಭಾಗವಹಿಸಿತ್ತು. ನಂತರ ಒಮಾಹ,ನೆಬ್ರಸ್ಕಾಕ್ಕೆ ಸ್ಥಳಾಂತರಗೊಂಡಿದೆ. ನಾರ್ತ್ ಆಯೋವಾ ಔಟ್‍ಲಾಸ್ ಮ್ಯಾಸನ್ ಸಿಟಿಯಲ್ಲಿರುವ ನಾರ್ತ್ ಅಮೆರಿಕನ್ ಹಾಕಿ ಲೀಗ್‍ನಲ್ಲಿ ಆಡುತ್ತದೆ. ಕ್ವಾಡ್ ಸಿಟಿ ಜೂನಿಯರ್ ಫ್ಲೇಮ್ಸ್ ತಂಡ ಟೈರ್ III ಜೂನಿಯರ್ ತಂಡವಾಗಿದ್ದು, ಡೆವನ್‍ಪೋರ್ಟ್‌ನಲ್ಲಿದೆ ಹಾಗೂ ಸೆಂಟ್ರಲ್ ಹಾಕಿ ಲೀಗ್‍ನ ಭಾಗವಾಗಿದೆ.
ಬ್ಯಾಸ್ಕೆಟ್‍ಬಾಲ್
[ಬದಲಾಯಿಸಿ]ಆಯೋವಾದಲ್ಲಿ ಎರಡು ವೃತ್ತಿಪರ ಬ್ಯಾಸ್ಕೆಟ್‍ಬಾಲ್ ತಂಡಗಳಿವೆ. ಆಯೋವಾ ಎನರ್ಜಿ, ಇದು ಒಂದು ಡೆವಲಪ್‍ಮೆಂಟ್ ಲೀಗ್ ತಂಡವಾಗಿದ್ದು ಡೆಮೋಯಿನ್‌ನಲ್ಲಿ ಆಡುತ್ತದೆ. ಇದು ಚಿಕಾಗೊ ಬುಲ್ಸ್ ಮತ್ತು ಫೀನಿಕ್ಸ್ ಸನ್ಸ್ ಆಫ್ NBA ಗಳ ಅಧೀನಕ್ಕೊಳಪಟ್ಟಿದೆ. ಕ್ವಾಡ್ ಸಿಟಿ ರಿವರ‍್ಹಾಕ್ಸ್ ಪ್ರೀಮಿಯರ್ ಬ್ಯಾಸ್ಕೆಟ್‍ಬಾಲ್ ಲೀಗ್ ಡೆವನ್‍ಪೋರ್ಟ್‌ನ ತಂಡವಾಗಿದೆ, ಆದರೂ ಇದು ಮೋಲಿನ್, ಇಲುನೊಯ್‌ನಲ್ಲಿರುವ ವಾರ್ಟನ್ ಫೀಲ್ಡ್ ಹೌಸ್‍ನಲ್ಲಿ ಆಡುತ್ತದೆ.
ಸಾಕರ್
[ಬದಲಾಯಿಸಿ]ಡೆಮೋಯಿನ್ ಮೆನಿಸ್ ತಮ್ಮ ಸ್ಥಳೀಯ ಪಂದ್ಯಗಳನ್ನು ಪಶ್ಚಿಮ ಡೆಮೋಯಿನ್‌ನ ವ್ಯಾಲಿ ಸ್ಟೇಡಿಯಂನಲ್ಲಿ ಆಡುತ್ತದೆ.
ಕಾಲೇಜು
[ಬದಲಾಯಿಸಿ]ರಾಜ್ಯದಲ್ಲಿ ನಾಲ್ಕು NCAA ಡಿವಿಶನ್ 1 ಕಾಲೇಜು ತಂಡಗಳಿವೆ. ಅವುಗಳೆಂದರೆ, NCAA FBS ನಲ್ಲಿರುವ ಬಿಗ್ 12 ಕಾನ್ಫ್ರೆನ್ಸ್ನ ಆಯೋವಾ ಯುನಿವರ್ಸಿಟಿ ಸೈಕ್ಲೋನ್ ಮತ್ತು ಬಿಗ್ 10 ಕಾನ್ಫ್ರೆನ್ಸ್ನ ಆಯೋವಾ ಹಾಕ್‌ಐಸ್, NCAA FCS ನಲ್ಲಿರುವ ಯುನಿವರ್ಸಿಟಿ ಆಫ್ ನಾರ್ತನ್ ಆಯೋವಾ ಪ್ಯಾಂಥರ್ಸ್ ಆಫ್ ಮಿಸ್ಸೌರಿ ವ್ಯಾಲಿ ಕಾನ್‍ಫ್ರೆನ್ಸ್ ಮತ್ತು ವ್ಯಾಲಿ ಫುಟ್‍ಬಾಲ್ ಕಾನ್‍ಫ್ರೆನ್ಸ್ ( ಒಂದೇ ಹೆಸರಿದ್ದರೂ ಪ್ರತ್ಯೇಕ ಆಡಳಿತವಿದೆ). ಡ್ರೇಕ್ ಯುನಿವರ್ಸಿಟಿ ಬುಲ್‍ಡಾಗ್ಸ್ ಆಫ್ ಮಿಸ್ಸೌರಿ ವ್ಯಾಲಿ ಕಾನ್‍ಫ್ರೆನ್ಸ್ ಫುಟ್‍ಬಾಲ್‍ನ ಜನಪ್ರಿಯ ಲೀಗ್ ಆಗಿದೆ.
ಆಯೋವಾದ ವಿಶೇಷ ವ್ಯಕ್ತಿಗಳು
[ಬದಲಾಯಿಸಿ]ಆಯೋವಾವು ಆಮೆರಿಕದ ಅಧ್ಯಕ್ಷ ಹರ್ಬರ್ಟ್ ಹೂವರ್, ಉಪಾಧ್ಯಕ್ಷ ಹೆನ್ರಿ ಎ. ವ್ಯಾಲೆಸ್ ಹಾಗೂ ಇಬ್ಬರು ಪ್ರಥಮ ಮಹಿಳೆಯರಾದ ಲು ಹೆನ್ರಿ ಹೂವರ್ ಮತ್ತು ಮಾಮಿ ಈಸೆನ್‌ಹೋವರ್ ಮುಂತಾದವರ ಜನ್ಮ ಸ್ಥಳ. ಇಷ್ಟೇ ಅಲ್ಲದೆ ಅಯೋವಾವು ಜಾನ್ ಎಲ್. ಲೆವಿಸ್, ಹ್ಯಾರಿ ಹಾಪ್ಕಿನ್ಸ್, ಕ್ಯಾರಿ ಚಾಪ್‌ಮನ್ ಕ್ಯಾಟ್, ಜೆಫರ‍್ಸನ್ ಡೇವಿಸ್, ಚೀಫ್ ಬ್ಲಾಕ್ ಹಾಕ್ ಮತ್ತು ಜಾನ್ ಬ್ರೌನ್ ಮೊದಲ್ಲಾದ ಗಣ್ಯರ ವಾಸಸ್ಥಳವಾಗಿತ್ತು. ಆಯೋವಾದ ಐವರು ನೋಬೆಲ್ ಪದಕ ವಿಜೇತರು: ನಾರ್ಮನ್ ಬೋರ್ಲಾಗ್- ನೋಬೆಲ್ ಶಾಂತಿ ಪ್ರಶಸ್ತಿ, ಥಾಮಸ್ ಸೆಚ್- ರಸಾಯನ ಶಾಸ್ತ್ರ, ಅಲನ್ ಜೆ. ಹೀಗರ್-ರಸಾಯನ ಶಾಸ್ತ್ರ, ಜಾನ್ ಮೊಟ್- ನೋಬೆಲ್ ಶಾಂತಿ ಪ್ರಶಸ್ತಿ, ಸ್ಟಾನ್‌ಲೀ ಬಿ. ಪ್ರುಸಿನರ್- ವೈದ್ಯಕೀಯ. ಅಂತರಿಕ್ಷಯಾನಿ ಮತ್ತು ಖಗೋಳ ವಿಜ್ಞಾನಿ ಜೇಮ್ಸ್ ಎ. ವ್ಯಾನ್ ಅಲೆನ್, ಪರಿಸರವಾದಿ ಅಲ್ಡೋ ಲಿಯೋಪೋಲ್ಡ್, ಕಂಪ್ಯೂಟರ್ ಮೇಧಾವಿ ಜಾನ್ ವಿನ್ಸೆಂಟ್ ಅಟಾನಾಸೋಫ್, ಸಸ್ಯ ವಿಜ್ಞಾನಿ ಜಾರ್ಜ್ ವಾಷಿಂಗ್ಟನ್ ಕಾರ್ವರ್, ಜಿಯೋಕೆಮಿಸ್ಟ್ ಕ್ಲೇರ್ ಕ್ಯಾಮರೂನ್ ಪ್ಯಾಟರ್ಸನ್ ಮತ್ತು ಇಂಟೆಲ್‍ನ ಸಂಸ್ಥಾಪಕನಾದ ರಾಬರ್ಟ್ ನೊಯ್ಸ್ ಮುಂತಾದ ಗಣ್ಯರ ಜನ್ಮ ಸ್ಥಳ ಅಥವಾ ಕಾರ್ಯಕ್ಷೇತ್ರ ಆಯೋವಾ ಆಗಿತ್ತು. ಬಿಲ್ ಬ್ರೈಸನ್, ಜಾರ್ಜ್ ಗ್ಯಾಲಪ್, ಸುಸಾನ್ ಗ್ಲಾಸ್ಪೆಲ್, ಹ್ಯಾರಿ ರೀಸನರ್, ಫಿಲ್ ಸ್ಟಾಂಗ್, ಮತ್ತು ಗ್ರ್ಯಾಂಟ್ ವುಡ್ ಇವರುಗಳು ಅಯೋವಾದಲ್ಲಿ ಜನಿಸಿದಂತಹ ಹೆಸರಾಂತ ಲೇಖಕರು, ಕಲಾಕಾರರು, ಪತ್ರಕರ್ತರಾಗಿದ್ದಾರೆ. ಆಯೋವಾದಿಂದ ಬಂದಂತಹ ಮನೋರಂಜನಾಕಾರರೆಂದರೆ, ಟಾಮ್ ಅರ್ನಾಲ್ಡ್, ಬಿಕ್ಸ್ ಬೀಡರ್‌ಬೆಕ್, ಜಾನಿ ಕಾರ್ಸನ್, ಬಫೆಲೊ ಬಿಲ್ ಕೂಡಿ, ಸಿಮನ್ ಎಟ್ಸ್, ವಿಲಿಯಮ್ ಫ್ರಾವ್ಲೆ, ಅಸ್ಟನ್ ಕುಚರ್, ಕ್ಲೋರಿಸ್ ಲೀಚ್ಮನ್, ಗ್ಲೆನ್ ಮಿಲ್ಲರ್, ಕೇಟ್ ಮಲ್ಗ್ರೀವ್, ಡೊನಾ ರೀಡ್, ಬ್ರಂಡನ್ ರೂಥ್, ಟಿಯೋನೆ ವಾಟ್ಕಿನ್ಸ್, ಜಾನ್ ವೇನೆ, ಆಂಡಿ ವಿಲಿಯಮ್ಸ್, ಮೆರೆಡಿತ್ ವಿಲ್ಸನ್ ಮತ್ತು ಎಲಿಜಾ ವುಡ್. ಆಯೋವಾದ ಪ್ರಖ್ಯಾತ ಅಥ್ಲೀಟ್‍ಗಳೆಂದರೆ, ಕ್ಯಾಪ್ ಆನ್ಸನ್, ಡಲ್ಲಾಸ್ ಕ್ಲಾರ್ಕ್, ಬಾಬ್ ಫೆಲ್ಲರ್, ಡ್ಯಾನ್ ಗ್ಯಾಬೆಲ್, ಫ್ರ್ಯಾಂಕ್ ಗೋಚ್, ಶಾನ್ ಜಾನ್ಸನ್, ಝಾಕ್ ಜಾನ್ಸನ್, ಲೊಲೊ ಜೋನ್ಸ್ ಮತ್ತು ಕರ್ಟ್ ವಾರ್ನರ್.
ರಾಜ್ಯದ ಲಾಂಛನಗಳು
[ಬದಲಾಯಿಸಿ]- ಅಡ್ಡಹೆಸರು: ದ ಹಾಕ್ಐ ಸ್ಟೇಟ್[೧೧೮][೧೧೯]
- ಪಕ್ಷಿ: ಈಸ್ಟರ್ನ್ ಗೋಲ್ಡ್ ಪಿಂಚ್[೧೨೦]
- ಪುಷ್ಪ: ವೈಲ್ಡ್ ರೋಸ್[೧೨೦]
- ಹುಲ್ಲು: ಬ್ಲೂಬಂಚ್ ವೀಟ್ಗ್ರಾಸ್[೧೨೧]
- ಮರ: ಓಕ್[೧೨೦]
- ಧ್ಯೇಯವಾಕ್ಯ: "ನಮ್ಮ ಸ್ವಾತಂತ್ರ್ಯವನ್ನು ನಾವು ಅಮೂಲ್ಯವೆಂದು ಭಾವಿಸುತ್ತೇವೆ ಮತ್ತು ನಮ್ಮ ಹಕ್ಕುಗಳನ್ನು ನಾವು ತಪ್ಪದೆ ಉಳಿಸಿಕೊಳ್ಳುತ್ತೇವೆ."[೧೨೦]
- ಶಿಲೆ: ಜಿಯೊಡ್[೧೨೦]
ಉಲ್ಲೇಖಗಳು
[ಬದಲಾಯಿಸಿ]- ↑ "What children's literature might I use while teaching Iowa History?". Iowa History Online. Malcolm Price Laboratory School, Department of Curriculum and Instruction, University of Northern Iowa. Retrieved June 26, 2009.
- ↑ ೨.೦ ೨.೧ "Annual Estimates of the Resident Population for the United States, Regions, States, and Puerto Rico: April 1, 2000 to July 1, 2009". United States Census Bureau. Retrieved 2009-12-23.
- ↑ ೩.೦ ೩.೧ "Elevations and Distances in the United States". U.S Geological Survey. 29 April 2005. Archived from the original on 1 ಜೂನ್ 2008. Retrieved November 6, 2006.
- ↑ Alex, Lynn M. (2000). Iowa's Archaeological Past. University of Iowa Press, Iowa City.
- ↑ Merry, Carl A. (1996). "The Historic Period". Office of the State Archeologist at the University of Iowa. Retrieved June 29, 2009.
- ↑ ೬.೦ ೬.೧ "Major Industries in Iowa" (PDF). Iowa Department of Economic Development. Archived from the original (pdf) on ಮೇ 20, 2005. Retrieved June 29, 2009.
- ↑ ೭.೦ ೭.೧ "Wind Energy in Iowa". Iowa Energy Center. Retrieved August 8, 2009.
- ↑ "N.H. Receives Lowest Crime Ranking; Nevada Ranks as Worst State". Insurance Journal. Wells Publishing. March 25, 2009. Retrieved August 8, 2009.
- ↑ Preamble to the 1857 Constitution of the State of Iowa. Archived from the original on ಆಗಸ್ಟ್ 2, 2009. Retrieved August 9, 2009.
- ↑ 48 ಯು.ಎಸ್. (7 ಹೇಗೆ.) 660 (1849).
- ↑ Morrison, Jeff (January 13, 2005). "Forty-Thirty-five or fight? Sullivan's Line, the Honey War, and latitudinal estimations". Archived from the original on ಜನವರಿ 1, 2007. Retrieved August 9, 2009.
- ↑ Prior, Jean Cutler. Geology of Iowa: Iowa's Earth History Shaped by Ice, Wind, Rivers, and Ancient Seas. Adapted from Iowa Geology 2007, Iowa Department of Natural Resources. Iowa Department of Natural Resources Geological Survey. Archived from the original on ಏಪ್ರಿಲ್ 16, 2009. Retrieved August 9, 2009.
- ↑ ಪ್ರಿಯೊರ್, ಜೀನ್ ಸಿ. (1991) ಲ್ಯಾಂಡ್‌ಫಾರ್ಮ್ಸ್ ಆಫ್ ಅಯೋವಾ. ಅಯೋವಾ ವಿಶ್ವವಿದ್ಯಾಲಯ ಮುದ್ರಣಾಲಯ, ಅಯೋವಾ ನಗರ. http://www.igsb.uiowa.edu/Browse/landform.htm Archived 2009-03-02 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Geology of the Loess Hills, Iowa". United States Geological Survey. 1999. Retrieved 2008-03-26.
{{cite web}}
: Unknown parameter|month=
ignored (help) - ↑ "Odessa". Iowa Department of Natural Resources. Archived from the original on 2008-09-21. Retrieved 2009-06-06.
- ↑ ಪ್ರಿಯೊರ್, ಜೀನ್ ಸಿ. (1991) ಲ್ಯಾಂಡ್‌ಫಾರ್ಮ್ಸ್ ಆಫ್ ಅಯೋವಾ. ಯೋವಾ ವಿಶ್ವವಿದ್ಯಾಲಯ ಮುದ್ರಣಾಲಯ, ಅಯೋವಾ ನಗರ.
- ↑ ಅಯೋವಾ ಡಿಎನ್‌ಆರ್: ಅಯೋವಾದ ರಾಜ್ಯಾದ್ಯಂತದ ಭೂಮಿ ಒಳಗೊಂಡ ಪಟ್ಟಿ, http://www.igsb.uiowa.edu/Browse/landcvr/landcvr.htm Archived 2009-05-02 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Living with Hogs in Rural Iowa". Iowa Ag Review. Iowa State University. 2003. Retrieved 25 November 2009.
- ↑ ೧೯.೦ ೧೯.೧ Love, Orlan (December 6, 2009). "Heavy use draining aquifer". Cedar Rapids Gazette. Archived from the original on 9 ಡಿಸೆಂಬರ್ 2009. Retrieved 20 December 2009.
- ↑ Heldt, Diane (November 24, 2009). "Report: Many Iowa coal plants among nation's oldest". Cedar Rapids Gazette. Archived from the original on 8 ಡಿಸೆಂಬರ್ 2012. Retrieved 25 November 2009.
- ↑ "Iowa Works to Reduce Run-off Polluting the Gulf of Mexico". The Iowa Journal. Iowa Public Television. September 17, 2009. Archived from the original on 6 ನವೆಂಬರ್ 2009. Retrieved 25 November 2009.
- ↑ ಅಯೋವಾಸ್ ತ್ರೆಟನ್ಡ್ ಆಯ್‌೦ಡ್ ಎನ್‌ಡೇಂಜರ್ಡ್ ಸ್ಪೀಶಿಯಸ್ ಪ್ರೋಗ್ರಾಮ್ , http://www.iowadnr.gov/other/threatened.html Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಅಯೋವಾ ಮಸ್ಟ್ ಸ್ಟೆಪ್ ಅಪ್ ಇನ್ವೆಸ್ಟ್‌ಮೆಂಟ್ ಇನ್ಪಬ್ಲಿಕ್ ಲ್ಯಾಂಡ್ "ಡೆಸ್ ಮೊಯಿನ್ಸ್ ರಿಜಿಸ್ಟರ್", ಜೂನ್ 1, 2005, http://www.nicholasjohnson.org/politics/IaChild/eddmr601.html
- ↑ ಅಯೋವಾದಲ್ಲಿ ಸಂಯುಕ್ತ ವಿಧಾನದಿಂದ ಪಟ್ಟಿಯಾದ ಪ್ರಾಣಿಗಳು, http://www.agriculture.state.ia.us/livingOnTheEdge/endangeredAnimals.asp Archived 2011-09-30 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಅಯೋವಾದಲ್ಲಿ ಸಂಯುಕ್ತ ವಿಧಾನದಿಂದ ಪಟ್ಟಿಯಾದ ಸಸ್ಯಗಳು, http://www.agriculture.state.ia.us/livingOnTheEdge/endangeredPlants.asp Archived 2011-09-30 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಯು ಎಸ್ ಗುಡುಗುಮಳೆ ವಿಂಗಡಣೆ. src.noaa.gov. ಕೊನೆಯ ಪ್ರವೇಶ ಫೆಬ್ರವರಿ 13, 2008.
- ↑ ವಾರ್ಷಿಕ ಸರಾಸರಿ ಸಂಖ್ಯೆಯ ಸುಂಟರಗಾಳಿಗಳು 1953–2004. ncdc.noaa.gov. ಕೊನೆಯ ಪ್ರವೇಶ ನವೆಂಬರ್ 1, 2006.
- ↑ 1968ರಿಂದ 2008ವರೆಗಿನ ಸುಂಟರಗಾಳಿಗಳಿಂದ ಸತ್ತವರು Archived 2010-05-26 ವೇಬ್ಯಾಕ್ ಮೆಷಿನ್ ನಲ್ಲಿ.. ಯುಎಸ್‌ಎ ಟುಡೇ. ಕೊನೆಯ ಪ್ರವೇಶ ಜನವರಿ 2, 2009.
- ↑ ಅಯೋವಾದ ಸರಾಸರಿ ವಾರ್ಷಿಕ ಪತನ, 1961-1990 (GIF File) Archived 2010-02-13 ವೇಬ್ಯಾಕ್ ಮೆಷಿನ್ ನಲ್ಲಿ. - ಕ್ರಿಸ್ಟೋಫರ್ ಡಾಲಿ,ಜೆನ್ನಿ ವೆಯಿಸ್ಬರ್ಗ್
- ↑ "ಡೆಸ್ ಮೊಯಿನ್ಸ್ ಸರಾಸರಿ ಹವಾಮಾನ, ಐಎ - ತಾಪಮಾನ ಮತ್ತು ಪತನ, Weather.com, ಜನವರಿ. 7, 2009ರಂದು ಮರುಸಂಪಾದಿಸಲಾಗಿದೆ". Archived from the original on 2010-12-03. Retrieved 2010-07-13.
- ↑ "Monthly Averages for Davenport, Iowa". Weather.com. Archived from the original on 2008-10-08. Retrieved 2008-11-01.
- ↑ ಅಲೆಕ್ಸ್, ಲೈನ್ ಎಂ. (2000) ಅಯೋವಾಸ್ ಆರ್ಚಿಯೋಲಾಜಿಕಲ್ ಫಾಸ್ಟ್. ಅಯೋವಾ ವಿಶ್ವವಿದ್ಯಾಲಯ ಮುದ್ರಣಾಲಯ, ಅಯೋವಾ ನಗರ.
- ↑ ೩೩.೦ ೩೩.೧ ೩೩.೨ Peterson, Cynthia L. (2009). "Historical Tribes and Early Forts". In William E. Whittaker (ed.). Frontier Forts of Iowa: Indians, Traders, and Soldiers, 1682–1862. Iowa City: University of Iowa Press. pp. 12–29. ISBN 978-1-58729-831-8. Archived from the original on 2009-08-05. Retrieved 2010-07-13.
- ↑ ಅಯೋವಾ ಇತಿಹಾಸ,ಅಯೋವಾ ಅಧೀಕೃತ ದಾಖಲೆ http://publications.iowa.gov/135/1/history/7-1.html
- ↑ ಹರ್ಬರ್ಮನ್,ಚಾರ್ಲ್ಸ್ ದ ಕ್ಯಾಥೋಲಿಕ್ ಎನ್‌ಸೈಕ್ಲೋಪಿಡಿಯಾ: ಆಯ್‌ನ್ ಇಂಟರ್ನ್ಯಾಶನಲ್ ವರ್ಕ್ ಆಫ್ ರೆಫರೆನ್ಸ್ ಆನ್ ದ ಕಾನ್ಸ್ಟಿಟ್ಯೂಶನ್,ಡಾಕ್ಟ್ರಿನ್,ಡಿಸಿಪ್ಲೀನ್,ಆಯ್‌೦ಡ್ ಹಿಸ್ಟರಿ ಆಫ್ ದ ಕ್ಯಾಥೋಲಿಕ್ ಚರ್ಚ್ . ಎನ್‌ಸೈಕ್ಲೋಪಿಡಿಯಾ ಮುದ್ರಣಾಲಯ, 1913, ಪು. 380 (ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಮೂಲಪ್ರತಿ).
- ↑ Carlson, Gayle F. (2009). "Fort Atkinson, Nebraska, 1820-1827, and Other Missouri River Sites". In William E. Whittaker (ed.). Frontier Forts of Iowa: Indians, Traders, and Soldiers, 1682–1862. Iowa City: University of Iowa Press. pp. 104–120. ISBN 978-1-58729-831-8. Archived from the original on 2009-08-05. Retrieved 2010-07-13.
- ↑ ಪಿಕ್ (1965): ಮಿಸಿಸಿಪ್ಪಿ ನದಿಯ ಮೂಲದವರೆಗೆ ಜೆಬುಲಾನ್ ಮಾಂಟ್ಗೋಮೇರಿ ಪಿಕೆ ಪ್ರಯಾಣ, ಲೂಸಿಯಾನಾ ಭೂಪ್ರದೇಶದ ಮೂಲಕ, ಮತ್ತು ನ್ಯೂ ಸ್ಪೇನ್‌ನಲ್ಲಿ, 1805-6-7 ಸಮಯದಲ್ಲಿ, ರಾಸ್ & ಹೈನೆಸ್
- ↑ ೩೮.೦ ೩೮.೧ McKusick, Marshall B. (2009). "Fort Madison, 1808-1813". In William E. Whittaker (ed.). Frontier Forts of Iowa: Indians, Traders, and Soldiers, 1682–1862. Iowa City: University of Iowa Press. pp. 55–74. ISBN 978-1-58729-831-8. Archived from the original on 2009-08-05. Retrieved 2010-07-13.
- ↑ ಪ್ರುಚಾ,ಪ್ರಾನ್ಸೀಸ್ ಪಿ. (1969) ದ ಸ್ವೋರ್ಡ್ ಆಫ್ ದ ರಿಪಬ್ಲಿಕ್: ದ ಯುನೈಟೇಡ್ ಸ್ಟೇಟ್ಸ್ ಆರ್ಮಿ ಆನ್ ದ ಫ್ರಂಟೀಯರ್ 1783–1846 . ಮಾಕ್‌ಮಿಲನ್,ನ್ಯೂಯಾರ್ಕ್.
- ↑ ಜಾಕ್ಸನ್, ಡೋನಾಲ್ಡ್ (1960), ಎ ಕ್ರಿಟಿಕ್ಸ್ ವ್ಯೂ ಆಫ್ ವರ್ಲ್ಡ್ ಪೊರ್ಟ್ ಮ್ಯಾಡಸನ್ , ಅಯೋವಾ ಜರ್ನಲ್ ಅಫ್ ಹಿಸ್ಟರಿ ಆಯ್೦ಡ್ ಪಾಲಿಟಿಕ್ಸ್ 58(1) ಪುಪು.31–36
- ↑ ಬ್ಲಾಕ್ ಹಾಕ್ (1882) {1ಅಟೋಬಯೋಗ್ರಫಿ ಆಫ್ ಮಾ-ಕಾ-ಟೈ-ಮಿ-ಶಿ-ಕಿಯಾ-ಕಿಯಾಕ್-ಆರ್ ಬ್ಲಾಕ್ ಹಾಕ್.{/1} ಕಾಂಟೀನೆಂಟಲ್ ಪ್ರಿಂಟಿಂಗ್,ಸೇಂಟ್ ಲೂಯೀಸ್. (ಮೊದಲಿಗೆ 1833ಯಲ್ಲಿ ಪ್ರಕಟಗೊಂಡಿತು)
- ↑ Whittaker, William E. (editor) (2009). Frontier Forts of Iowa: Indians, Traders, and Soldiers, 1682–1862. Iowa City: University of Iowa Press. ISBN 978-1-58729-831-8. Archived from the original on 2009-08-05. Retrieved 2010-07-13.
{{cite book}}
:|first=
has generic name (help) - ↑ ೪೩.೦ ೪೩.೧ Schwieder, Dorothy. "History of Iowa". Iowa State University. Retrieved 2009-06-06.
- ↑ ಅಯೋವಾ ಅಧೀಕೃತ ದಾಖಲೆ, ಸಂಪುಟ ಸಂಖ್ಯೆ 60, ಪುಟ 314
- ↑ "ಅಯೋವಾಗೆ ವಲಸೆಹೋಗಲು ಅಧೀಕೃತ ಉತ್ತೇಜನ", ಮಾರ್ಕಸ್ ಎಲ್. ಹನ್ಸೆನ್, ಐಜೆಎಚ್‌ಪಿ", 19 (ಏಪ್ರಿಲ್ 1921):159-95
- ↑ ೪೬.೦ ೪೬.೧ ಅಯೋವಾ ಅಧೀಕೃತ ದಾಖಲೆ, ಸಂಪುಟ ಸಂಖ್ಯೆ . 60, ಪುಟ 315
- ↑ "ಆರ್ಕೈವ್ ನಕಲು". Archived from the original on 2010-05-29. Retrieved 2010-07-13.
- ↑ ಅಯೋವಾ ಅಧೀಕೃತ ದಾಖಲೆ, ಸಂಪುಟ ಸಂಖ್ಯೆ . 60, ಪುಟಗಳು 315-316
- ↑ 1980 ರ ಮಧ್ಯಪಶ್ಚಿಮ ಕೃಷಿಕ್ಷೇತ್ರದ ಕೊರತೆ, http://eightiesclub.tripod.com/id395.htm Archived 2008-07-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೫೦.೦ ೫೦.೧ ಜನಸಂಖ್ಯೆಯ ಪ್ರವೃತ್ತಿ: ಅಯೋವಾದ ಬದಲಾದ ಮುಖ, http://iwin.iwd.state.ia.us/iowa/ArticleReader?itemid=00003011 Archived 2006-10-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೫೧.೦ ೫೧.೧ ೫೧.೨ ೫೧.೩ ಅಯೋವಾದ ಉದ್ಯಮಗಳು , ಅಯೋವಾ ವರ್ಕ್‌ಫೊರ್ಸ್ ಡೆವಲಪ್‌ಮೆಂಟ್. http://www.iowalifechanging.com/downloads/iaindustries.pdf Archived 2005-05-20 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೫೨.೦ ೫೨.೧ ಅಯೋವಾ ಮಾಹಿತಿ ಕೇಂದ್ರ, 2000 ಜನಗಣತಿ: http://data.iowadatacenter.org/datatables/urbanrural/urstagesexbymalefemale2000.pdf
- ↑ United States Census Bureau. "Iowa by Place - GCT-T1-R. Population Estimates (geographies ranked by estimate)". Retrieved 2010-06-29.[ಶಾಶ್ವತವಾಗಿ ಮಡಿದ ಕೊಂಡಿ]
- ↑ "DSM Register". United States Census Bureau. Retrieved 2008-12-28.[ಶಾಶ್ವತವಾಗಿ ಮಡಿದ ಕೊಂಡಿ]
- ↑ ೫೫.೦ ೫೫.೧ ೫೫.೨ "Iowa QuickFacts from the US Census Bureau". Archived from the original on 2010-05-27. Retrieved 2010-07-13.
- ↑ [ಶೀರ್ಷಿಕೆ=ದ ನ್ಯೂಯಾರ್ಕ್ ಟೈಮ್ಸ್ 2008 ಅಲ್ಮಾನಕ್|ಬರಹಗಾರ=ಜಾನ್ ಡಬ್ಲ್ಯೂ.ರೈಟ್‌ರಿಂದ ಸಂಪಾದನೆ|ದಿನಾಂಕ=2007|ಪುಟಗಳು=178]
- ↑ "U.S. Census quickfacts". United States Census Bureau. Archived from the original on 2010-05-27. Retrieved 2008-12-28.
- ↑ ಯು.ಎಸ್. ಜನಸಂಖ್ಯಾ ವಿಭಾಗದ ಜನಗಣತಿ.ಅಯೋವಾ ಡಾಟಾ ಕೇಂದ್ರದ ನಕ್ಷೆಯ ನಂತರದ ಮಾದರಿ, http://www.iowadatacenter.org/maps/copercent2008
- ↑ ಇದು 2000 ಯು.ಎಸ್. ಜನಗಣತಿ ಮಾಹಿತಿ ಆಧರಿಸಿದೆ
- ↑ ಜನಗಣತಿ ಪ್ರಕಾರ ಅಯೋವಾದ ಜನರು ಇನ್ನೂ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಸೆಡಾರ್ ರೇಪಿಡ್ಸ್ ಗೆಜೆಟ್ , ಜೂನ್ 30, 2009, http://www.gazetteonline.com/apps/pbcs.dll/article?AID=/20090701/NEWS/707019956/1001/NEWS Archived 2012-03-30 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಯು.ಎಸ್ ಜನಗಣತಿ ಕೇಂದ್ರ ರಾಜ್ಯ ಮತ್ತು ದೇಶದ ಕ್ಷಿಪ್ರ ವಿಷಯಗಳು, http://quickfacts.census.gov/qfd/states/19000.html Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಅಯೋವಾದ ಈ ಚಿಕ್ಕದಾದ ನಗರದಲ್ಲಿ ಭವಿಷ್ಯದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ನ್ಯೂಯಾರ್ಕ್ ಟೈಮ್ಸ್ ಸೆಪ್ಟೆಂಬರ್ 14, 2005, https://www.nytimes.com/2005/09/14/books/14grim.html
- ↑ ಅಯೋವಾ ಬ್ರೇನ್ ಡ್ರೇನ್ ,ಅಯೋವಾ ನಾಗರಿಕ ವಿಶ್ಲೇಷಣ ಜಾಲಬಂಧ, ಅಯೋವಾ ವಿಶ್ವವಿದ್ಯಾಲಯ, http://www.uiowa.edu/~ican/Papers%202006/braindrain122806.pdf Archived 2012-04-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "American Religious Identification Survey 2001" (PDF). The Graduate Center of the City University of New York. Archived from the original (PDF) on 2007-03-06. Retrieved 2007-08-16.
- ↑ "ಆರ್ಕೈವ್ ನಕಲು". Archived from the original on 2013-08-26. Retrieved 2010-07-13.
- ↑ "Religious Congregations & Membership: 2000". Glenmary Research Center. Archived from the original (jpg) on 2006-12-14. Retrieved 2009-04-24.
- ↑ ಎಲ್ಮರ್ ಷ್ವೀಡರ್ ಮತ್ತು ಡೊರಥಿ ಷ್ವೀಡರ್ (2009) ಎ ಪೆಕ್ಯೂಲಿಯರ್ ಪೀಪಲ್:ಅಯೋವಾಸ್ ಓಲ್ಡ್ ಓಲ್ಡರ್ ಆಯ್‌ಮಿಶ್ ಅಯೋವಾ ವಿಶ್ವವಿದ್ಯಾಲಯ ಮುದ್ರಣಾಲಯ
- ↑ ಲಾಬೊವ್,ಡಬ್ಲ್ಯೂ.ಎಸ್.ಆಯ್‌ಶ್,ಮತ್ತು ಸಿ.ಬೊಬರ್ಗ್ ಅಟ್ಲಾಸ್ ಆಫ್ ನಾರ್ತ್ ಅಮೆರಿಕನ್ ಇಂಗ್ಲೀಶ್ ಬರ್ಲಿನ್,ಜರ್ಮನಿ: ಮೌಟನ್ ಡೆ ಗ್ರುಯ್ಟರ, 2006. http://www.mouton-online.com/anae.php Archived 2007-12-26 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Atlas of North American English". The University of Pennsylvania. Retrieved 2008-01-05.
- ↑ ಐಎಸ್‌ಯು ಮಧ್ಯಪಶ್ಚಿಮ ದ್ರಾಕ್ಷಿ ಮತ್ತು ಮದ್ಯ ಉದ್ಯಮ ಸಂಘಗಳ ವಿಸ್ತರಣೆ, http://www.extension.iastate.edu/Wine/Resources/iowawineries.htm Archived 2009-01-25 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಅಯೋವಾ ದ್ರಾಕ್ಷಿ ಬೆಳೆಗಾರರ ಸಂಘ, https://iowawinegrowers.org/mos/Frontpage/Itemid,1/ Archived 2010-11-23 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಅಯೋವಾ ಕೃಷಿಕರ ಮಾರುಕಟ್ಟೆ ಸಂಘ, http://www.iafarmersmarkets.org/About_Us.html Archived 2009-06-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಆರ್ಥಿಕ ವಿಶ್ಲೇಷಣಾ ಕೇಂದ್ರ, ಯು.ಎಸ್ ವಾಣಿಜ್ಯ ವಿಭಾಗ, 2007 ರ ಅಯೋವಾ ಫ್ಯಾಕ್ಟ್‌ಬುಕ್ ಡೇಸ್ ಮಾಯಿನ್ಸ್‌ನಲ್ಲಿ ಪ್ರಸ್ತುತಪಡಿಸಿದಂತೆ :ಅಯೋವಾ ಲೆಜಿಸ್ಲೆಟಿವ್ ಸರ್ವೀಸ್ ಏಜನ್ಸಿ.
- ↑ ಅಯೋವಾದ ಮೊದಲ ನಿರುದ್ಯೋಗ ಹಕ್ಕು ಕೇಳಿಕೆಯ ಹೆಚ್ಚಳ. ಡೆಸ್ ಮಾಯಿನ್ಸ್ ದಾಖಲೆ ಏಪ್ರಿಲ್ 2, 2009, http://www.desmoinesregister.com/article/20090402/BUSINESS/90402018/-1/NEWS04[ಶಾಶ್ವತವಾಗಿ ಮಡಿದ ಕೊಂಡಿ]
- ↑ ದೇಶದಲ್ಲಿನ ಅತಿ ಕಡಿಮೆ ನಿರುದ್ಯೋಗಿಗಳನ್ನು ಹೊಂದಿರುವ ನಗರ, ಅಯೋವಾ ಸಿಟಿ ಪ್ರೆಸ್-ಸಿಟಿಜನ್ ಮೇ 5., 2009,http://www.press-citizen.com/article/20090604/NEWS01/906040336/1079/news01
- ↑ ಅಯೋವಾ ರಾಜ್ಯ ವಿಶ್ವವಿದ್ಯಾಲಯ. ರಾಜ್ಯ ಮತ್ತು ಕ್ಷೇತ್ರದಿಂದ ನಿವ್ವಳ ಸ್ವದೇಶಿಯ ಉತ್ಪನ್ನ Archived 2008-10-09 ವೇಬ್ಯಾಕ್ ಮೆಷಿನ್ ನಲ್ಲಿ.. ರೀಜನಲ್ ಕ್ಯಾಪಾಸಿಟಿ ಅನಾಲಿಸೀಸ್ ಪ್ರೋಗ್ರಾಮ್. ಏಪ್ರಿಲ್ 26, 2008:ರಂದು ಮರುಸಂಪಾದಿಸಲಾಗಿದೆ
- ↑ ೭೭.೦ ೭೭.೧ "Iowa Quick Facts — State Data Center". Archived from the original on 2010-11-04. Retrieved 2010-07-13.
- ↑ ಅಯೋವಾದ ಅಧೀಕೃತ ದಳ್ಳಾಳಿ ಕ್ರೆಡಿಟ್ ರೇಟಿಂಗ್,ತರ್ಕಿಸಿದಾಗ ಇದು ರಾಜ್ಯದ ಹಣಸಾಸಿನ ಉತ್ತಮ ಸ್ಥಿತಿಯನ್ನು ತೋರಿಸುತ್ತದೆ,ಅಸೋಸಿಯೇಟೆಡ್ ಪ್ರೆಸ್ ಜುಲೈ 3, 2009,http://www.timesrepublican.com/page/content.detail/id/84311.html?isap=1&nav=5013 Archived 2010-09-07 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Bls.gov; ಸ್ಥಳೀಯ ನಿರುದ್ಯೋಗದ ಅಂಕಿಅಂಶಗಳು
- ↑ 2007 ಅಯೋವಾ ಫ್ಯಾಕ್ಟ್‌ಬುಕ್ ಪು. 59, ಡೆಸ್ ಮಾಯಿನ್ಸ್:ಅಯೋವಾ ಲೆಜಿಸ್ಲೇಟಿವ್ ಸರ್ವಿಸ್ ಏಜೆನ್ಸಿ
- ↑ "Multiple Measures of the Role of Agriculture in Iowa's Economy".
- ↑ ಸ್ಟೇಟ್ಸ್ ಫ್ಯಾಕ್ಟ್ ಶೀಟ್ಸ್:ಅಯೋವ. ಯುಎಸ್‌ಡಿಎ: http://www.ers.usda.gov/statefacts/ia.htm Archived 2012-06-22 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Ford, George (November 28, 2009). "Impact of grain-processing industry runs deep, but people don't see it". Cedar Rapids Gazette. pp. 1A. Archived from the original on 9 ಡಿಸೆಂಬರ್ 2012. Retrieved 29 November 2009.
- ↑ ಆರೋಗ್ಯ ವಿಎಮೆಯಲ್ಲಿ ಸ್ಪರ್ಧೆ: 2007 ಅಪ್‌ಡೇಟ್|| https://catalog.ama-assn.org/Catalog/product/product_detail.jsp?productId=prod1350008
- ↑ "Ethanol mandate wouldn't help prices". Cedar Rapids Gazette. February 26, 2010. Archived from the original on 8 ಡಿಸೆಂಬರ್ 2012. Retrieved 4 April 2010.
- ↑ ವರದಿ: ಅಯೋವಾದ ವಿಂಡ್ ಲೀಡರ್‌ಶಿಪ್ ಗ್ರಾಹಕರನ್ನು ನೋಯಿಸುವುದಿಲ್ಲ. ಸೆಡಾರ್ ರ್ಯಾಪಿಡ್ಸ್ ಗೆಜೆಟ್ ಏಪ್ರಿಲ್14, 2009, ಪು. 8ಬಿ.
- ↑ "FORTUNE 500 2009: States: Iowa Companies".
- ↑ ಅಯೋವಾ ಕಂದಾಯ ಇಲಾಖೆ, ಅಯೋವಾ ಕಂದಾಯ/ ಫೀ ವಿವರಣೆ ಮತ್ತು ದರಗಳು, http://www.iowa.gov/tax/taxlaw/taxtypes.html#sales Archived 2009-05-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಅಯೋವಾ ಕಂದಾಯ ಇಲಾಖೆ, ಅಯೋವಾ ಸ್ಥಳೀಯ ಆಪ್ಶನ್ ಕಂದಾಯ ಮಾಹಿತಿ, http://www.iowa.gov/tax/educate/localoption.html Archived 2009-04-25 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Thomas Beaumont (2009-05-30). "No tax increases planned for next year, Culver says". The Des Moines Register. Retrieved 2009-05-31.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Forming a New Political Party in Iowa" (PDF). Elections Division, Iowa Secretary of State. Archived from the original (PDF) on 2007-08-08. Retrieved 2007-07-26.
- ↑ "Official Results Report - Statewide: 2006 General Election" (PDF). Iowa Secretary of State. Archived from the original (PDF) on 2007-07-15. Retrieved 2007-07-26.
- ↑ "Canvass Summary: 2004 General Election" (PDF). Chester J. Culver, Iowa Secretary of State. Archived from the original (PDF) on 2011-11-18. Retrieved 2007-07-26.
- ↑ ಅಯೋವಾ ಸಂರಕ್ಷಣೆ, 2008 ಹೆಚ್ಚು ಅಳಿವಿನಂಚಿನಲ್ಲಿರುವ್ ಆಸ್ತಿಗಳು, http://www.preservationiowa.org/programs/endangeredArchive.php?endangered_year=2008 Archived 2016-01-05 ವೇಬ್ಯಾಕ್ ಮೆಷಿನ್ ನಲ್ಲಿ.
- ↑ 1 ಮೊರೀಸ್ 1 (ಅಯೋವಾ 1839)
- ↑ ೯೬.೦ ೯೬.೧ ೯೬.೨ ೯೬.೩ "ಆರ್ಕೈವ್ ನಕಲು". Archived from the original on 2006-05-05. Retrieved 2010-07-13.
- ↑ ಗೇ ಮದುಮೆ ಮತ್ತು ಅಯೋವಾ: ಏಕೆ ಎಲ್ಲರೂ ಆಶ್ಚರ್ಯಭರಿತರಾಗಿದ್ದಾರೆ?, ಚಿಕಾಗೋ ಟ್ರಿಬ್ಯೂನ್, ಏಪ್ರಿಲ್ 10, 2009
- ↑ 24 ಅಯೊವಾ 266 (1868)
- ↑ Brodnax, David (2004). "The Equality of Right: Alexander Clark and the Desegregation of Iowa's Public Schools, 1834-1875". Law and Society Association.
- ↑ ಬ್ರಿಯಾಕ್ಸ್,ರಿಚರ್ಡ್ ಎಂ. (2004) "ಹುಡುಗಿಯರಿಗಾಗಿ ಮನೆಯ ನಿರ್ವಹಣೆ": ಅಯೋವಾ ವಿಶ್ವವಿದ್ಯಾಲಯದಲ್ಲಿ ದ ಅಯೋವಾ ಫೆಡರೆಶನ್ ಆಫ್ ಕಲರ್ಡ್ ವುಮೆನ್ಸ್ ಕ್ಲಬ್ಸ್ 1919-1950, ಕಲ್ಚರ್ಲ್ ಕ್ಯಾಪಿಟಲ್ ಆಯ್‌೦ಡ್ ಬ್ಲಾಕ್ ಎಜುಕೇಶನ್ ಎಡಿಶನ್. ವಿ.ಪಿ. ಫ್ರ್ಯಾಂಕ್ಲಿನ್ ಮತ್ತು ಸಿ.ಜೆ.ಸವೆಜ್ ಇನ್ಫಾರ್ಮೇಶನ್ ಏಜ್,ಗ್ರೀನ್‌ವಿಚ್
- ↑ 37 ಅಯೋವಾ 145 (1873)
- ↑ ಅಯೋವಾ ನಾಗರಿಕ ಹಕ್ಕುಗಳ ನಿಯೋಗ, http://www.iowa.gov/government/crc/docs/annual66activities.html Archived 2010-06-03 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಅಯೋವಾದಲ್ಲಿ ಆಫ್ರಿಕನ್-ಅಮೆರಿಕನ್, 1838-2005, http://www.iptv.org/iowaPathways/myPath.cfm?ounid=ob_000238
- ↑ ಅಯೋವಾ ನಾಗರಿಕ ಹಕ್ಕುಗಳ ನಿಯೋಗ http://www.state.ia.us/government/crc/publications/brochures/english_brochure.html Archived 2009-07-20 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಅಯೋವಾ ಬಗ್ಗೆ, http://www.uiowa.edu/homepage/about-UI/index.html Archived 2012-06-14 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಮಹಿಳೆಯರ ಓಟಿನ ಹಕ್ಕಿಗಾಗಿ ಹೋರಾಟ, http://www.iptv.org/iowapathways/myPath.cfm?ounid=ob_000320
- ↑ 1980 ಮತ್ತು 1992ರಲ್ಲಿ ಸಮಾನ ಹಕ್ಕಿನ ತಿದ್ದುಪಡಿಗಾಗಿ ಹೇಗೆ ಅಯೋವಾ ಸಮ್ಮಿಶ್ರಣ ಚಳುವಳಿ? http://womhist.alexanderstreet.com/iowaera/intro.htm
- ↑ ಡಬ್ಲ್ಯೂಎಲ್ 874044 (ಅಯೋವಾ 2009) (Publication to N.W.2d pending as of ಏಪ್ರಿಲ್ 09, 2009.)
- ↑ "ಆರ್ಕೈವ್ ನಕಲು". Archived from the original on 2009-04-11. Retrieved 2010-07-13.
- ↑ "ಆರ್ಕೈವ್ ನಕಲು". Archived from the original on 2009-05-02. Retrieved 2010-07-13.
- ↑ ಯುಎಸ್‌ಎ ಟುಡೇ,ಅಯೋವಾ ನ್ಯಾಯಾಲಯವು ಸಲಿಂಗಿಗಳ ಮದುವೆಯನ್ನು ಎತ್ತಿ ಹಿಡಿದಿದೆ
- ↑ "Iowa Sister States". Archived from the original on 2018-08-09. Retrieved 2010-07-13.
- ↑ "The State Report Card For No Child Left Behind". Iowa Department of Education. Retrieved 2008-01-23.[ಶಾಶ್ವತವಾಗಿ ಮಡಿದ ಕೊಂಡಿ]
- ↑ "High School Graduation". United Health Foundation. Retrieved 2008-01-23.
- ↑ ೧೧೫.೦ ೧೧೫.೧ "Quick Facts about Iowa Schools". Iowa Department of Education. Archived from the original on 2008-05-13. Retrieved 2008-01-23.
- ↑ "News Releases". Iowa Department of Education. Archived from the original on 2015-09-08. Retrieved 2009-01-22.
- ↑ ೧೧೭.೦ ೧೧೭.೧ "Education Stats". National Education Association. Archived from the original on 2007-10-13. Retrieved 2008-01-23.
- ↑ "Iowa State Nickname - The Hawkeye State". Archived from the original on ಡಿಸೆಂಬರ್ 24, 2018. Retrieved November 2, 2009.
- ↑ "State Nicknames". Retrieved November 2, 2009.
- ↑ ೧೨೦.೦ ೧೨೦.೧ ೧೨೦.೨ ೧೨೦.೩ ೧೨೦.೪ "Iowa General Assembly - Iowa State Symbols". www.legis.state.ia.us. Archived from the original on ಡಿಸೆಂಬರ್ 24, 2018. Retrieved November 24, 2006.
- ↑ "State Facts for Students - Iowa". U.S. Census Bureau. Retrieved 2007-11-20.
http://www.worldatlas.com/webimage/countrys/namerica/usstates/iafamous.htm Archived 2010-08-15 ವೇಬ್ಯಾಕ್ ಮೆಷಿನ್ ನಲ್ಲಿ.
ಟಿಪ್ಪಣಿಗಳು
[ಬದಲಾಯಿಸಿ]- ↑ ಹತ್ತೋಂಭತ್ತನೇಯ ಶತಮಾನದಲ್ಲಿ ಮಿಸೌರಿ ಮತ್ತು ಮಿಸ್ಸಿಸಿಪ್ಪಿ ನದಿ ದಡಗಳ ನಕ್ಷೆ ರಚಿಸಲಾಯಿತು,ಅವುಗಳ ಇಂದಿನ ಮಾರ್ಗಗಳಿಂದ ಮಾರ್ಪಡಿಸಬಹುದು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about Iowa at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- ಅಯೋವಾ ರಾಜ್ಯದ ಅಧೀಕೃತ ವೆಬ್ಸೈಟ್
- ಅಯೋವಾ ರಾಜ್ಯದ ಸಂವಿಧಾನ Archived 2009-08-02 ವೇಬ್ಯಾಕ್ ಮೆಷಿನ್ ನಲ್ಲಿ.
- ಅಯೋವಾ ಟ್ರಾವೆಲ್ ಮತ್ತು ಪ್ರವಾಸೋದ್ಯಮ ಇಲಾಖೆ
- ಅಯೋವಾದ ಶಕ್ತಿಯ ಮಾಹಿತಿ & ಅಂಕಿಸಂಖೆಗಳು- ಯು.ಎಸ್ ಇಂಧನ ಇಲಾಖೆಯಿಂದ Archived 2010-11-17 ವೇಬ್ಯಾಕ್ ಮೆಷಿನ್ ನಲ್ಲಿ.
- ಅಯೋವಾ ರಾಜ್ಯದ ಡಾಟಾಬೇಸ್ Archived 2008-10-09 ವೇಬ್ಯಾಕ್ ಮೆಷಿನ್ ನಲ್ಲಿ. -iowa ರಾಜ್ಯದ ಏಜನ್ಸಿಗಳಿಂದ ಮಂಡಿತವಾದ ಮತ್ತು ಅಮೆರಿಕನ್ ಲೈಬ್ರರಿ ಅಸೋಸಿಯೇಶನ್ನ ಗವರ್ನ್ಮೆಂಟ್ ಡಾಕ್ಯುಮೆಂಟ್ಸ್ ರೌಂಡ್ಟೇಬಲ್ನಿಂದ ಸಂಗ್ರಹವಾದ ಹುಡುಕಬಹುದಾದ ಡಾಟಾಬೇಸ್ ಪಟ್ಟಿ.
- ಯು.ಎಸ್ ಜನಗಣತಿ ಕೇಂದ್ರದಿಂದ ಕ್ಷಿಪ್ರ ವಾಸ್ತವಾಂಶಗಳು Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ.
- ಅಯೋವಾ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
ಸಂಬಂಧಿಸಿದ ಮಾಹಿತಿಗಳು
[ಬದಲಾಯಿಸಿ]South Dakota | Minnesota | Wisconsin | ||
Nebraska | Illinois | |||
Iowa | ||||
Missouri |
ಪೂರ್ವಾಧಿಕಾರಿ Texas |
List of U.S. states by date of statehood Admitted on December 28, 1846 (29th) |
ಉತ್ತರಾಧಿಕಾರಿ Wisconsin |
- Pages with non-numeric formatnum arguments
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: unsupported parameter
- CS1 errors: generic name
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages with unresolved properties
- Articles with hatnote templates targeting a nonexistent page
- Ill-formatted IPAc-en transclusions
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with Open Directory Project links
- Coordinates on Wikidata
- ಅಯೋವಾ
- ಯುನೈಟೆಡ್ ಸ್ಟೇಟ್ಸ್ನ ರಾಜ್ಯಗಳು
- ಮಧ್ಯಪಶ್ಚಿಮ ಯುನೈಟೇಡ್ ಸ್ಟೇಟ್ಸ್
- 1846ರಲ್ಲಿ ಸ್ಥಾಪನೆಯಾದ ರಾಜ್ಯಗಳು ಮತ್ತು ಭೂಪ್ರದೇಶಗಳು
- ಅಮೇರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು