ಅಮೆಡಿಯೋ ಅವೊಗಾಡ್ರೋ
ಗೋಚರ
ಅಮೆಡಿಯೋ ಅವೊಗಾಡ್ರೋ | |
---|---|
ಜನನ | ಆಗಸ್ಟ್ 9, 1776 ಟುರಿನ್ |
ಮರಣ | ಜುಲೈ 9, 1856 |
ರಾಷ್ಟ್ರೀಯತೆ | ಇಟೆಲಿ |
ಕಾರ್ಯಕ್ಷೇತ್ರಗಳು | ರಸಾಯನಶಾಸ್ತ್ರ |
ಸಂಸ್ಥೆಗಳು | ಟುರಿನ್ ವಿಶ್ವವಿದ್ಯಾಲಯ |
ಪ್ರಸಿದ್ಧಿಗೆ ಕಾರಣ | ಅವೊಗಾಡ್ರೋ ನಿಯಮ ಅವೊಗಾಡ್ರೋ ಸಂಖ್ಯೆ |
ಅಮೆಡಿಯೋ ಅವೊಗಾಡ್ರೋ (1776-1856)ಇಟೆಲಿಯ ವಿಜ್ಞಾನಿ.ಇವನು ೧೮೧೧ ರಲ್ಲಿ ಈಗ ಅವೊಗಾಡ್ರೋ ನಿಯಮ ಎಂದು ಹೆಸರಿಸಲ್ಪಟ್ಟ ಸಿದ್ದಾಂತವನ್ನು ಪ್ರತಿಪಾದಿಸಿದನು. ಈ ಸಿದ್ದಾಂತವು 'ನಿರ್ದಿಷ್ಟ ಪ್ರಮಾಣದ ಎಲ್ಲಾ ಅನಿಲಗಳು ಸಮಾನ ಉಷ್ಣತೆ ಹಾಗೂ ಒತ್ತಡದಲ್ಲಿ ಸಮಾನ ಪ್ರಮಾಣದ ಅಣುಗಳನ್ನು ಹೊಂದಿರುತ್ತವೆ'ಎಂದಾಗಿದೆ.ಇವನು ಪರಮಾಣು ಹಾಗೂ ಅಣುವಿಗೆ ಇರುವ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಿದನು.ಇದರಿಂದ ಮೂಲವಸ್ತುಗಳ ಸರಿಯಾದ ಪರಮಾಣು ತೂಕವನ್ನು ಕಂಡುಹಿಡಿಯಲು ಸಹಾಯವಾಯಿತು. ಇವನು ಅಗಸ್ಟ್ ೯,೧೭೭೧ ರಲ್ಲಿ ಇಟೆಲಿಯ ಟುರಿನ್ ಎಂಬಲ್ಲಿ ಜನಿಸಿದನು.೧೮೨೦ ರಲ್ಲಿ ಟುರಿನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾದ್ಯಾಪಕನಾಗಿ ಸೇರಿದನು.ಜುಲೈ ೯,೧೮೫೬ರಲ್ಲಿ ನಿಧನ ಹೊಂದಿದನು.