ಅವೊಗಾಡ್ರೋ ನಿಯಮ
ಅವೊಗಾಡ್ರೋ ನಿಯಮವನ್ನು (ಕೆಲವೊಮ್ಮೆ ಅವೊಗಾಡ್ರೋ ಊಹನ ಎಂದು ಸಹ ಕರೆಯಲಾಗುತ್ತದೆ) 1811ರಲ್ಲಿ ಅಮೆಡಿಯೋ ಅವೊಗಾಡ್ರೋ ಮಂಡಿಸಿದ. ಇದರ ಪ್ರಕಾರ ತಾಪಮಾನ ಮತ್ತು ಒತ್ತಡಗಳು ಒಂದೇ ಆಗಿದ್ದಲ್ಲಿ ಅನಿಲದ ಘನಗಾತ್ರ (ವಾಲ್ಯೂಮ್) ಹೆಚ್ಚಾದಂತೆ ಅದರಲ್ಲಿನ ಕಣಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಮತ್ತು ಅನಿಲದ ಘನಗಾತ್ರ ಕುಗ್ಗಿದಂತೆ ಅದರಲ್ಲಿನ ಕಣಗಳ ಸಂಖ್ಯೆಯೂ ಕಡಿಮೆಯಾಗುತ್ತದೆ.
ಇತಿಹಾಸ
[ಬದಲಾಯಿಸಿ]1811ರಲ್ಲಿ ಅಮೆಡಿಯೋ ಅವೊಗಾಡ್ರೋ ಅನಿಲದ ಘನಗಾತ್ರ (ವಾಲ್ಯೂಮ್) ಮತ್ತು ಅದರಲ್ಲಿನ ಅಣುಗಳ ಸಂಖ್ಯೆ ನೇರ ಅನುಪಾತದಲ್ಲಿರುತ್ತವೆ ಎಂದು ಊಹನ (ಹೈಪೊಥೀಸಿಸ್) ಮಂಡಿಸಿದ. ಗೇ-ಲೂಸ್ಯಾಕ್ ಮತ್ತು ಇತರರು ಇಂತಹದೇ ಚಿಂತನೆ ಹೊಂದಿದ್ದರು. ಆದರೆ ಅವೊಗಾಡ್ರೋ ಚಿಂತನೆಯು ಸರಿಯಾದ ಅಣು ಪರಿಕಲ್ಪನೆಯನ್ನು ಸಹ ಹೊಂದಿತ್ತು. ಅವನು ಸರಿಯಾಗಿಯೇ ಜಲಜನಕ ಮತ್ತು ಆಮ್ಲಜನಕದಂತಹ ಅಣುಗಳಲ್ಲಿ ಎರಡು ಪರಮಾಣುಗಳು ಇರುತ್ತವೆಂತಲೂ ಮತ್ತು ನೀರಿನಲ್ಲಿ ಮೂರು ಪರಮಾಣುಗಳು ಇರುತ್ತವೆ ಎಂದು ಸರಿಯಾಗಿಯೇ ಸೂಚಿಸಿದ್ದ. ಅವನ ಚಿಂತನೆಯು ಡಾಲ್ಟನ್‌ನ ಪರಮಾಣು ಊಹನ ಮತ್ತು ಗೇ-ಲುಸ್ಯಾಕ್‌ನ ಘನಗಾತ್ರಗಳು ಒಟ್ಟಾಗುವ ನಿಯಮ (ಲಾ ಆಫ್ ಕಂಬೈನಿಂಗ್ ವಾಲ್ಯೂಮ್)ಗಳ ನಡುವೆ ಸಂಬಂಧ ಬೆಸೆಯುತ್ತಿತ್ತು.[೧]
ಆದರೆ, ಆ ಸಮಯಕ್ಕೆ ಇನ್ನೂ ಎರಡು ಅಥವಾ ಹೆಚ್ಚಿನ ಪರಮಾಣುಗಳು ಸೇರಿ ಅಣುವಾಗಿ ಬಂಧಿತವಾಗುವುದರ ಬಗೆಗೆ ಇನ್ನೂ ಸರಿಯಾಗಿ ತಿಳಿದಿರಲಿಲ್ಲ. ಸ್ಟಾನಿಸ್ಲಾವೊ ಕ್ಯಾನಿಜರೊ ಅಣು ಮತ್ತು ಪರಮಾಣುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿದ.[೨] ಕ್ಯಾನಿಜರೊ ಅವೊಗಾಡ್ರೊ ನಿಯಮಕ್ಕೆ ಮರುಜೀವ ಕೊಟ್ಟನಷ್ಟೇ ಅಲ್ಲ ಕಾರ್ಬನಿಕ ರಸಾಯನಿಕಶಾಸ್ತ್ರಜ್ಞನಾಗಿ ಅದನ್ನು ತನ್ನ ಶಾಖೆಯಲ್ಲಿ ಹೇಗೆ ಬಳಸಬಹುದು ಎಂದು ತೋರಿಸಿಕೊಟ್ಟ. 1860ರಲ್ಲಿ ರಸಾಯನಶಾಸ್ತ್ರಜ್ಞರ ಮೊದಲನೆಯ ಅಂತರರಾಷ್ಟ್ರೀಯ ಕಾಂಗ್ರೆಸ್‌ನ್ನು ಅಣು, ಪರಮಾಣು ವ್ಯಾಖ್ಯಾನಿಸಲು ಮತ್ತು ರಾಸಾಯನಕ ಹೆಸರುಗಳ ಬಳಕೆಯ ಬಗೆಗೆ ಕರೆಯಲಾಗಿತ್ತು. ಅಲ್ಲಿ ಕ್ಯಾನಿಜರೊ ಚಿಂತನೆ ಪ್ರಭಾವ ಬೀರಿತು.[೩]
ನಿಯಮದ ಸ್ವರೂಪ
[ಬದಲಾಯಿಸಿ]ಅವೊಗಾಡ್ರೊ ನಿಯಮ ಅನಿಲದ ಘನಗಾತ್ರ (ವೊಲ್ಯೂಮ್) ಮತ್ತು ಪದಾರ್ಥದ ಮೊತ್ತಗಳನ್ನು ಬೆಸೆಯುವುದಕ್ಕೆ ಸಂಬಂಧಿಸಿದ ಪ್ರಾಯೋಗಿಕ ಅನಿಲ ನಿಯಮ.[೪] ಆಧುನಿಕ ಅವೊಗಾಡ್ರೊ ನಿಯಮವನ್ನು ಹೀಗೆ ಹೇಳಬಹುದು:
- ಪರಿಪೂರ್ಣ ಅನಿಲದ ನಿರ್ದಿಷ್ಟ ದ್ರವ್ಯರಾಶಿಯಲ್ಲಿ ಸ್ಥಿರವಾದ ತಾಪಮಾನ ಮತ್ತು ಒತ್ತಡದಲ್ಲಿ ಅನಿಲದ ಘನಗಾತ್ರ ಮತ್ತು ಪ್ರಮಾಣಗಳು (ಅಣುಗಳು) ನೇರ ಅನುಪಾತದಲ್ಲಿರುತ್ತವೆ.
ಇದನ್ನು ಈ ರೀತಿಯಲ್ಲಿ ಬರೆಯ ಬಹುದು:
- ಅಥವಾ
ಇಲ್ಲಿನ V ಅನಿಲದ ಘನಗಾತ್ರ n ಅನಿಲದ ಪ್ರಮಾಣ k ನಿಯತಾಂಕವನ್ನು ಸೂಚಿಸುತ್ತದೆ. ಈ ನಿಯತಾಂಕವು RT/Pಗೆ ಸಮನಾಗಿರುತ್ತದೆ. ಇಲ್ಲಿಯ R ಸಾರ್ವತ್ರಿಕ ಅನಿಲ ನಿಯತಾಂಕ, T ಕೆಲ್ವಿನ್ ತಾಪಮಾನ ಮತ್ತು P ಅನಿಲದ ಒತ್ತಡ ಸೂಚಿಸುತ್ತವೆ.
ಈ ನಿಯಮವು ಒಂದೇ ತಾಪಮಾನ ಮತ್ತು ಒತ್ತಡಗಳಲ್ಲಿ ಒಂದೇ ಘನಗಾತ್ರದ ಅನಿಲಗಳು ಒಂದೇ ಸಂಖ್ಯೆಯ ಅಣುಗಳನ್ನು ಹೊಂದಿರುತ್ತವೆ ಎಂದು ಹೇಳುತ್ತದೆ. ಭಿನ್ನ ಸನ್ನಿವೇಶಗಳಲ್ಲಿನ ಒಂದೇ ಪದಾರ್ಥವನ್ನು ಹೋಲಿಸಲು ಸಾಮಾನ್ಯವಾಗಿ ಇದನ್ನು ಈ ಕೆಳಗಿನಂತೆ ಬರೆಯಲಾಗುತ್ತದೆ.
ಅನಿಲದಲ್ಲಿರುವ ಅಣುಗಳ ಸಂಖ್ಯೆ ಹೆಚ್ಚಿದಂತೆ ಅದರ ಘನಗಾತ್ರ ಅನುಪಾತವಾಗಿ ಹೆಚ್ಚುತ್ತದೆ ಎಂದು ಈ ಮೇಲಿನ ಸಮೀಕರಣ ಸೂಚಿಸುತ್ತದೆ. ಹಾಗೆಯೇ ಅನಿಲದಲ್ಲಿನ ಅಣುಗಳ ಸಂಖ್ಯೆ ಕಡಿಮೆಯಾದಂತೆ ಅದರ ಘನಗಾತ್ರವೂ ಕಡಿಮೆಯಾಗುತ್ತದೆ. ಇದರ ಅರ್ಥವೆಂದರೆ ನಿರ್ದಿಷ್ಟ ಘನಗಾತ್ರದ ಪರಿಪೂರ್ಣ ಅನಿಲದಲ್ಲಿನ ಅಣುಗಳ ಸಂಖ್ಯೆ ಅವುಗಳ ಗಾತ್ರ ಅಥವಾ ಅದರ ಅನಿಲದ ಮೋಲರ್ ದ್ರವ್ಯರಾಶಿಯಿಂದ ಸ್ವತಂತ್ರವಾಗಿರುತ್ತವೆ.
ಅವೊಗಾಡ್ರೊ ನಿಯಮ ಮತ್ತು ಅವೊಗಾಡ್ರೊ ಸಂಖ್ಯೆ
[ಬದಲಾಯಿಸಿ]ಪದಾರ್ಥದ ದ್ರವ್ಯರಾಶಿಯಲ್ಲಿರುವ ಅಣುಗಳ ಸಂಖ್ಯೆಯನ್ನು ಜೋಸೆಪ್ ಲಾಸ್ಕಿಮಿಡ್ ಮೊದಲು ಲೆಕ್ಕ ಮಾಡಿದ. ಅವನು 1865ರಲ್ಲಿ ಅಣು ಚಲನೆ ಸಿದ್ಧಾಂತದ ಆಧಾರದ ಮೇಲೆ ಅವುಗಳನ್ನು ಲೆಕ್ಕ ಹಾಕಿದ ಮತ್ತು ಸಾಮಾನ್ಯ ತಾಪಮಾನ ಮತ್ತು ಒತ್ತಡದಲ್ಲಿ ಅದರ ಬೆಲೆ 2.6 x 1019 ಆಗಿತ್ತು. ಆದರೆ ಆ "ಅವೊಗಾಡ್ರೋ ಸಂಖ್ಯೆ" ಎಂದು ಮೊದಲು ಹೆಸರಿಸಿದುದು 1909ರಲ್ಲಿ ಜೀನ್ ಪೆರಿನ್.[೫] ಹೀಗಾಗಿ ಈ ಸಂಖ್ಯೆ ಅವೊಗಾಡ್ರೊ ಕಂಡುಹಿಡಿದುದು ಅಲ್ಲ. ಬದಲಾಗಿ ಅವನ ನಿಯಮದಿಂದ ಪಡೆಯ ಬಹುದಾದ ಕಾರಣಕ್ಕೆ ಅವನ ಗೌರವಾರ್ಥ ಕೊಟ್ಟ ಹೆಸರು.
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Rovnyak David, Avogadro's Hypothesis, Wolfram Research, retrived on 21-01-2017
- ↑ Posts Tagged Avogadro’s hypothesis, History of Science 101, retrived on 21-01-2017
- ↑ Stanislao Cannizzaro, Chemical Heritage Foundation, retrived on 21-01-2017
- ↑ Avagadro`s Law, Chemistry, Encyclopedia Britannica, retrived 22-01-2017
- ↑ Furtsch T.A., Some Notes on Avogadro's Number, 6.022 x 1023, Tennessee Technological University, Cookeville, retrived 21-01-2017
ಪ್ರಮುಖ ಉಲ್ಲೇಖ