ವಿಷಯಕ್ಕೆ ಹೋಗು

ಅವೊಗಾಡ್ರೋ ಸಂಖ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅವೊಗಾಡ್ರೋ ಸಂಖ್ಯೆ ಯಾವುದೇ ಪದಾರ್ಥದ ಒಂದು ಮೋಲ್‌ನಲ್ಲಿರುವ ಕಣಗಳ (ಅಣು, ಪರಮಾಣು ಮುಂತಾದ) ಸಂಖ್ಯೆ. ಅವೊಗಾಡ್ರೋ ಸಂಖ್ಯೆಗೆ ಅಳತೆ ಇಲ್ಲ, ಅದೊಂದು ಸಂಖ್ಯೆ ಮಾತ್ರ. ಇದರ ಮಹತ್ವ ಐತಿಹಾಸಿಕ. ಅವೊಗಾಡ್ರೋ ನಿಯಂತಾಕ 1971ರಿಂದ ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯ ಭಾಗವಾಗಿದೆ. ಇದು mol-1 (ಪರ್ ಮೋಲ್)ನಲ್ಲಿ ಹೇಳಲ್ಪಡುತ್ತದೆ ಮತ್ತು ಇದರ ಚಿಹ್ನೆ NA ಅಥವಾ L. ಇಂದಿನ ಇದರ ಬೆಲೆ 6.022 140 857(74)×1023 mol−1. ಅವೊಗಾಡ್ರೋ ಸಂಖ್ಯೆಯು ಮ್ಯಾಕ್ರೋ ಗಾತ್ರ ಮತ್ತು ಮೈಕ್ರೊ ಗಾತ್ರ (ಅಣು, ಪರಮಾಣು ಹಂತದ) ಗಳ ನಡುವೆ ಸಂಬಂಧದ ಕೊಂಡಿ ಬೆಸೆಯುತ್ತದೆ.

ಇತಿಹಾಸ

[ಬದಲಾಯಿಸಿ]

ಅವೊಗಾಡ್ರೋ ಸಂಖ್ಯೆಯ ಇತಿಹಾಸ ಅವೊಗಾಡ್ರೋ ನಿಯಮದ ಇತಿಹಾಸದೊಂದಿಗೆ ಬೆಸೆದು ಕೊಂಡಿದೆ. ಅಮೆಡಿಯೋ ಅವೊಗಾಡ್ರೋ ಒಂದೇ ತಾಪಮಾನ ಮತ್ತು ಒತ್ತಡದಲ್ಲಿ ಅನಿಲದ ಘನಗಾತ್ರದಲ್ಲಿನ (ವಾಲ್ಯೂಮ್) ಕಣಗಳ ಸಂಖ್ಯೆ ನೇರ ಅನುಪಾತದಲ್ಲಿರುತ್ತದೆ ಎಂದು ಹೇಳಿದ. ಇದು ಅವೊಗಾಡ್ರೋ ನಿಯಮ ಎಂದು ಪ್ರಸಿದ್ಧಿ ಪಡಿದಿದೆ. ಮುಂದೆ 1909ರಲ್ಲಿ ಜೀನ್ ಪೆರ್ರಿನ್ ಈ ಸಂಖ್ಯೆಯನ್ನು ಅವೊಗಾಡ್ರೋ ನೆನಪಿನಲ್ಲಿ ಅವೊಗಾಡ್ರೋ ಸಂಖ್ಯೆ ಎಂದು ಕರೆಯಲು ಸೂಚಿಸಿದ.[] ಜೀನ್ ಪೆರ್ರಿನ್ ತನ್ನ ಪ್ರಯೋಗದಲ್ಲಿ ಕಂಭೋಜ ಮರದ ಅಂಟುರಾಳಗಳಿಂದ ಪಡೆದ ಬ್ರೌನಿಯನ್ ಚಲನೆಯನ್ನು ಅಳೆದ. ಈ ಮೂಲಕ ಅವನು ಐನ್‌ಸ್ಟೀನ್ ಸಿದ್ಧಾಂತಕ್ಕೆ ಪ್ರಾಯೋಗಿಕ ಪುರಾವೆ ಒದಗಿಸಿದ.ಅಲ್ಲದೆ ಅವೊಗಾಡ್ರೋ ಸಂಖ್ಯೆಯನ್ನು ಪಡೆದ ಮತ್ತು ಅಣುಗಳ ಇರುವಿಕೆಗೆ ಸಾಕ್ಷಿ ಒದಗಿಸಿದ. ಈ ಪ್ರಯೋಗಕ್ಕೆ 1926ರಲ್ಲಿ ಅವನಿಗೆ ನೋಬೆಲ್ ಪ್ರಶಸ್ತಿ ಲಭಿಸಿತು.[]

ಹೆಚ್ಚು ಖಚಿತವಾದ ಅವೊಗಾಡ್ರೋ ಸಂಖ್ಯೆಯನ್ನು ಮಿಲ್ಲಿಕಾನ್‌ನ ಪ್ರಯೋಗದ ನಂತರ ಪಡೆಯಲಾಯಿತು. ರಾಬರ್ಟ್ ಎ. ಮಿಲ್ಲಿಕಾನ್ ಎಲೆಕ್ಟ್ರಾನ್ ಆವೇಶ (ಚಾರ್ಜ್)ವನ್ನು ನೇರವಾಗಿ ಅಳೆಯುವ ಎಣ್ಣೆಯ ಹನಿ ಪ್ರಯೋಗವನ್ನು 1909ರಲ್ಲಿ ರೂಪಿಸಿದ. ಈ ಪ್ರಯೋಗದಲ್ಲಿ ಎಣ್ಣೆಯ ಸಣ್ಣ ಹನಿಗಳನ್ನು ವಿಕಿರಣಗಳ ಮೂಲಕ (ಉದಾಹರಣೆಗೆ ಎಕ್ಸ್-ರೇ) ಅಯಾನೀಕರಿಸಿದ ಮತ್ತು ಒಂದು ಹನಿ ಎಷ್ಟು ವೇಗವಾಗಿ ಕೆಳಬೀಳುತ್ತದೆ ಎಂಬುದನ್ನು ಗುರುತಿಸುವ ಮೂಲಕ ಅದರ ದ್ರವ್ಯರಾಶಿಯನ್ನು ಪಡೆಯಬಹುದು. ಹಲವು ಸಲ ಈ ಪ್ರಯೋಗವನ್ನು ಮರುಕಳಿಸಿ ಎಣ್ಣೆಯ ಸಣ್ಣಹನಿಗಳ ಆವೇಶವು ಕನಿಷ್ಠ ಆವೇಶದ ಪೂರ್ಣಾಂಕಗಳಲ್ಲಿ ಇರುತ್ತದೆ ಎಂದು ಗುರುತಿಸಿದ. ಹೀಗೆ ಎಲೆಕ್ಟ್ರಾನ್‌ನ ಕನಿಷ್ಠ ಆವೇಶವನ್ನು ಪತ್ತೆಹಚ್ಚಲಾಯಿತು. ಇದಕ್ಕೆ ಅವನಿಗೆ 1922ರಲ್ಲಿ ನೋಬೆಲ್ ಬಹುಮಾನ ಲಭ್ಯವಾಯಿತು.[][] ಈ ಪ್ರಯೋಗಕ್ಕೂ ಬಹುಮುಂಚೆಯೇ 1833ರಲ್ಲಿ ಫ್ಯಾರಡೆ ತಾಮ್ರ ಸಲ್ಪೇಟ್ ದ್ರಾವಣದ ಮೂಲಕ ವಿದ್ಯುತ್ ಹರಿಸಿದಾಗ ಕ್ಯಾಥೋಡ್ ಅಥವಾ ರುಣದ್ವಾರದಲ್ಲಿ ಶೇಕರವಾದ ತಾಮ್ರವು ಹರಿಸಿದ ವಿದ್ಯುತ್‌ನ ಬಲ ಮತ್ತು ಅದು ಹರಿಸಿದ ಸಮಯದ ಅನುಪಾತದಲ್ಲಿರುತ್ತದೆ ಎಂದು ತೋರಿಸಿಕೊಟ್ಟಿದ್ದ. ಹೀಗಾಗಿ ಫ್ಯಾರಡೆ ನಿಯತಾಂಕವೆಂದರೆ ಒಂದು ಮೋಲ್ ಎಲೆಕ್ಟ್ರಾನಿನಲ್ಲಿರುವ ಅಥವಾ ಒಂದು ಮೋಲ್‌ ವೇಲನ್ಸಿಯ ಅಯಾನಿನಲ್ಲಿರುವ ವಿದ್ಯುತ್ ಆವೇಶ (ಚಾರ್ಜ್) ಮತ್ತು ಇದನ್ನು ಎಲೆಕ್ಟ್ರಾನ್‌ ಚಾರ್ಜ್ ಮತ್ತು ಅವೊಗಾಡ್ರೋ ಸಂಖ್ಯೆಯ ಗುಣಲಬ್ಧವಾಗಿಯೂ ತೋರಿಸ ಬಹುದು.[][] ಹೀಗಾಗಿ ಫ್ಯಾರಡೆ ನಿಯತಾಂಕ ಮತ್ತು ಎಲೆಕ್ಟ್ರಾನ್ ಒಂದರ ಆವೇಶ ತಿಳಿದಿದ್ದಲ್ಲಿ ಅವೊಗಾಡ್ರೋ ಸಂಖ್ಯೆಯನ್ನು ಪಡೆಯಬಹುದು. ಗಣಿತೀಯವಾಗಿ ಇದನ್ನು ಹೀಗೆ ತೋರಿಸಬಹುದು:

:

ಇಲ್ಲಿ ‌NA ‌ಅವೊಗಾಡ್ರೋ ಸಂಖ್ಯೆಯನ್ನೂ; F ಫ್ಯಾರಡೆ ನಿಯತಾಂಕವನ್ನೂ ಮತ್ತು e ಎಲೆಕ್ಟ್ರಾನಿನ ಆವೇಶ (ಚಾರ್ಜ್) ತೋರುತ್ತವೆ.

ಇಂದಿನ ವಿಜ್ಞಾನದಲ್ಲಿ

[ಬದಲಾಯಿಸಿ]

ವಾಸ್ತವದಲ್ಲಿ ಅವೊಗಾಡ್ರೋ ಸಂಖ್ಯೆಯು ನಮಗೆ ಕಾಣುವಂತಹ ಪ್ರಪಂಚವನ್ನು ಅತಿಸೂಕ್ಷ್ಮ ಕಾಣದ ಅಣು, ಪರಮಾಣು ಪ್ರಪಂಚದೊಂದಿಗೆ ಬೆಸೆಯುತ್ತದೆ. ಅವೊಗಾಡ್ರೋ ಸಂಖ್ಯೆಯ ವಾಸ್ತವ ಬೆಲೆಯನ್ನು ಕೋಡಾಟ ನಾಲ್ಕುವರುಷಗಳಿಗೊಮ್ಮೆ ನಿರ್ಣಯಿಸುತ್ತದೆ. ಇದರ ಸದ್ಯದ ಬೆಲೆ 6.022 140 857(74)×1023.[]

ವಿಜ್ಞಾನದಲ್ಲಿ ಅನಿಲ ನಿಯತಾಂಕ, ಬೋಲ್ಟ್‌ಜಮನ್ ನಿಯತಾಂಕ, ಫ್ಯಾರಡೆ ನಿಯತಾಂಕ ಮತ್ತು ಏಕೀಕೃತ ಪರಮಾಣು ದ್ರವ್ಯರಾಶಿ ಏಕಮಾನಗಳ ಅವೊಗಾಡ್ರೋ ನಿಯತಾಂಕದೊಂದಿಗಿನ ಸಂಬಂಧವನ್ನು ಈ ಕೆಳಗೆ ಕೊಡಲಾಗಿದೆ. ಇಲ್ಲಿನ ಅವೊಗಾಡ್ರೋ ನಿಯತಾಂಕವು ಅಳತೆಯನ್ನು (ಪರ್ ಮೋಲ್‌) ಪಡೆದ ಸಂಖ್ಯೆ ಮತ್ತು ಈ ಅಳತೆಯು mol-1. ಹೀಗಾಗಿ ಅವೊಗಾಡ್ರೋ ನಿಯತಾಂಕವು 6.022 140 857(74)×1023(74) mol-1. ಇಲ್ಲಿ ಎಲ್ಲಾ ಅವೊಗಾಡ್ರೋ ಸಂಖ್ಯೆಯ ಚಿಹ್ನೆ NA.

ಇಲ್ಲಿಯ R ಅನಿಲ ನಿಯತಾಂಕ, kB ಬೋಲ್ಟ್‌ಜಮನ್ ನಿಯತಾಂಕ

ಇಲ್ಲಿಯ F ಫ್ಯಾರಡೆ ನಿಯತಾಂಕ ಮತ್ತು e ಪ್ರಾಥಮಿಕ ಆವೇಶ (ಚಾರ್ಜ್)

ಅವೊಗಾಡ್ರೋ ನಿಯತಾಂಕವು ಏಕೀಕೃತ ಪರಮಾಣು ದ್ರವ್ಯರಾಶಿಯ ಏಕಮಾನದ (u) ವ್ಯಾಖ್ಯಾನದಲ್ಲೂ ಒಳಬರುತ್ತದೆ.

ಇಲ್ಲಿಯ Mu ಮೋಲಾರ್ ದ್ರವ್ಯರಾಶಿ ನಿಯತಾಂಕ.

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖ ಮತ್ತು ಟಿಪ್ಪಣಿಗಳು

[ಬದಲಾಯಿಸಿ]
  1. Perrin, Jean (1909). "Mouvement brownien et réalité moléculaire". Annales de Chimie et de Physique. 8e Série. 18: 1–114. Extract in English, translation by Frederick Soddy, From Wikipedia English Avogadro Constant
  2. Award Ceremony Speech, Nobelprize.org, retrieved 25-01-2017
  3. Millikan's oil drop experiment, retrived 25-01-2017
  4. Millikan oil-drop experiment, Physics, Encyclopedia Britannica, retrived 25-01-2017
  5. faraday Archived 2016-06-24 ವೇಬ್ಯಾಕ್ ಮೆಷಿನ್ ನಲ್ಲಿ., retrived 25-01-2017
  6. Faraday constant, Citizendium, retrived 25-01-2017
  7. ಆವರಣದಲ್ಲಿನ ಬೆಲೆಯು ಅನಿಶ್ಚಯತೆಯ ಸೂಚನೆ ನೀಡುತ್ತದೆ. ಹೀಗಾಗಿ ಇದರ ಅರ್ಥ ಬೆಲೆ 6.022 140 857x1023±0.000 000 074 ಎಂದು. ಈ ವಿವರಣೆ ಆವರಣ ಅಥವಾ ಬ್ರ್ಯಾಕೆಟ್‌ನಲ್ಲಿ ಸಂಖ್ಯೆಗಳನ್ನು ಬಳಸಿದ ಎಲ್ಲಕಡೆಯೂ ಅನ್ವಯಿಸುತ್ತದೆ.


ಪ್ರಮುಖ ಉಲ್ಲೇಖ