ವಿಷಯಕ್ಕೆ ಹೋಗು

ಅಂತರಿಕ್ಷಯಾನ ಇಂಜಿನಿಯರಿಂಗ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Aerospace engineer
NASA engineers, like the ones depicted in Apollo 13, worked diligently to protect the lives of the astronauts on the mission.
Occupation
Namesengineer
aerospace engineer
Activity sectorsaeronautics, astronautics, science
Description
Competenciestechnical knowledge, management skills
Education requiredsee professional requirements

ಅಂತರಿಕ್ಷಯಾನ ಇಂಜಿನಿಯರಿಂಗ್ ,(ಬಾಹ್ಯಾಕಾಶ ನೌಕೆಯ ನಿರ್ಮಾಣದ ಶಿಲ್ಪವಿಜ್ಞಾನ), ಇಂಜಿನಿಯರಿಂಗ್ ಶಿಕ್ಷಣ ವಿಷಯದ ಒಂದು ಶಾಖೆಯಾಗಿದ್ದು, ವಿಮಾನ ಹಾಗು ಗಗನನೌಕೆಯ ವಿನ್ಯಾಸ, ರಚನೆ ಹಾಗು ಅದಕ್ಕೆ ಸಂಬಂಧಿಸಿದ ವಿಷಯ ಅಧ್ಯಯನದ ಶಾಸ್ತ್ರವಾಗಿದೆ. ಇದು ಎರಡು ಪ್ರಮುಖ ಹಾಗು ಅತಿವ್ಯಾಪಿತ ವಿಭಾಗಗಳಾಗಿ ಪ್ರತ್ಯೇಕಗೊಂಡಿದೆ: ವಾಯುಯಾನ ಇಂಜಿನಿಯರಿಂಗ್ ಹಾಗು ಅಂತರಿಕ್ಷಯಾನ ಇಂಜಿನಿಯರಿಂಗ್. ಮೊದಲನೇ ವಿಭಾಗವು ಭೂಮಿಯ ವಾತಾವರಣದೊಳಗೆ ಕಾರ್ಯನಿರ್ವಹಿಸುವ ವಿಮಾನದ ವಿನ್ಯಾಸ ಹಾಗು ಅದರ ತಯಾರಿಕೆಗೆ ಸಂಬಂಧಿಸಿದ್ದಾದರೆ, ನಂತರದ ವಿಭಾಗವು ಭೂಮಿಯ ವಾತಾವರಣದಾಚೆಗೆ ಸಕ್ರಿಯಗೊಳ್ಳುವ ಗಗನನೌಕೆಯ ವಿನ್ಯಾಸ ಹಾಗು ಅದರ ನಿರ್ಮಾಣಕ್ಕೆ ಸಂಬಂಧಿಸಿದೆ. ವಾಯುಯಾನ ಇಂಜಿನಿಯರಿಂಗ್ ಎಂಬುದು ಮೂಲ ಪದವಾಗಿದೆ. "ಅಂತರಿಕ್ಷಯಾನ" ಎಂಬ ಪದವು, ವಿಮಾನ ತಂತ್ರಜ್ಞಾನವು ಪ್ರಗತಿಯ ಜೊತೆಗೆ ಬಾಹ್ಯಾಕಾಶದಲ್ಲಿ ವಿಮಾನದ ಹಾರಾಟದ ವ್ಯಾಖ್ಯಾನದೊಂದಿಗೆ, ಈ ಪದದ ಬಳಕೆಯನ್ನು ಆಕ್ರಮಿಸಿಕೊಂಡಿದೆ.[] ಅಂತರಿಕ್ಷಯಾನ ಇಂಜಿನಿಯರಿಂಗ್, ಅದರಲ್ಲೂ ವಿಶೇಷವಾಗಿ ಅಂತರಿಕ್ಷಯಾನ ವಿಭಾಗವನ್ನು ಸಾಮಾನ್ಯ ಅರ್ಥದಲ್ಲಿ ಅನೌಪಚಾರಿಕವಾಗಿ ರಾಕೆಟ್ ವಿಜ್ಞಾನವೆಂದು ಕರೆಯಲಾಗುತ್ತದೆ.[][]

ಸ್ಥೂಲ ಅವಲೋಕನ

[ಬದಲಾಯಿಸಿ]

ವಿಮಾನಗಳು (ಉಡ್ಡಯನ ವಾಹನಗಳು)ತಮ್ಮ ಸುತ್ತಲಿನ ತೀವ್ರತರ ಪರಿಸ್ಥಿತಿಗಳಿಗೆ ಒಳಗಾಗಬೇಕಾಗುತ್ತವೆ. ಉದಾಹರಣೆಗೆ ವಾಹನದ ಘಟಕಗಳಿಗೆ ಬಳಸಲಾದ ರಾಚನಿಕ ತೂಕಗಳನ್ನು ಒಳಗೊಂಡಂತೆ ವಾಯುಮಂಡಲದ ಒತ್ತಡ, ಹಾಗು ತಾಪಮಾನದಲ್ಲಿನ ವ್ಯತ್ಯಾಸಗಳನ್ನೊಳಗೊಂಡಿದೆ. ಪರಿಣಾಮವಾಗಿ, ಇವುಗಳು ಸಾಮಾನ್ಯವಾಗಿ ಹಲವಾರು ತಾಂತ್ರಿಕ ಹಾಗು ಇಂಜಿನಿಯರಿಂಗ್ ವಿಭಾಗಗಳ ಅಧ್ಯಯನ ವಿಷಯವಾಗಿವೆ. ಇದರಲ್ಲಿ ವಾಯುಬಲಶಾಸ್ತ್ರ, ನೋದನ, ಏವಿಯಾನಿಕ್ಸ್(ವಾಯುಯಾನದಲ್ಲಿ ವಿದ್ಯುತ್ ಹಾಗು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವ ತಂತ್ರಜ್ಞಾನ), ವಸ್ತುಕ ವಿಜ್ಞಾನ,(ಭೌತಿಕ ವಿಜ್ಞಾನ) ರಾಚನಿಕ ವಿಶ್ಲೇಷಣೆ ಹಾಗು ರಾಚನಿಕ ತಯಾರಿಕೆಗಳು ಒಳಗೊಂಡಿವೆ. ಈ ಎಲ್ಲ ತಂತ್ರಜ್ಞಾನಗಳು, ಒಟ್ಟಾರೆಯಾಗಿ ಅಂತರಿಕ್ಷಯಾನ ಇಂಜಿನಿಯರಿಂಗ್ ಎಂದು ಪರಿಚಿತವಾಗಿವೆ. ಈ ಕ್ಷೇತ್ರವು ಸಂಕೀರ್ಣವಾಗಿರುವುದರಿಂದ, ಅಂತರಿಕ್ಷಯಾನ ಇಂಜಿನಿಯರಿಂಗ್, ಇಂಜಿನಿಯರುಗಳ ಒಂದು ತಂಡವನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬ ಇಂಜಿನಿಯರ್ ತನ್ನದೇ ಆದ ಶಾಖಾ ವಿಭಾಗದಲ್ಲಿ ಪರಿಣತಿ ಪಡೆದಿರುತ್ತಾನೆ.[] ಆಧುನಿಕ ವಿಮಾನದ(ಉಡಾವಣಾ ವಾಹನಗಳ) ಅಭಿವೃದ್ಧಿ ಹಾಗು ತಯಾರಿಕೆಯು ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದೆ.ಜೊತೆಗೆ ಇದಕ್ಕೆ ಸಾಮರ್ಥ್ಯ, ವಿನ್ಯಾಸ ತಂತ್ರಜ್ಞಾನ ಹಾಗು ವೆಚ್ಚದ ಲಭ್ಯತೆಗಳ ನಡುವೆ ಎಚ್ಚರಿಕೆಯ ಸಮತೋಲನ ಹಾಗು ಸಮನ್ವಯತೆಯ ಅವಶ್ಯಕತೆಯಿರುತ್ತದೆ. ಅಂತರಿಕ್ಷಯಾನ ಇಂಜಿನಿಯರುಗಳು, ವಿಮಾನ, ಗಗನನೌಕೆ, ಹಾಗು ಕ್ಷಿಪಣಿಗಳ ವಿನ್ಯಾಸ, ಪರೀಕ್ಷೆ, ಹಾಗು ಅವುಗಳ ತಯಾರಿಕೆಯಲ್ಲಿನ ತಪಾಸನಾ ಮೇಲ್ವಿಚಾರಣೆ ವಹಿಸುತ್ತಾರೆ. ಅಂತರಿಕ್ಷಯಾನ ಇಂಜಿನಿಯರುಗಳು ನಾಗರಿಕ ವಿಮಾನಯಾನ, ರಕ್ಷಣಾ ವ್ಯವಸ್ಥೆ, ಹಾಗು ಬಾಹ್ಯಾಕಾಶ ಪರಿಶೋಧನೆಗೆ ಪ್ರಯೋಜವಾಗುವ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಾರೆ.

ಇತಿಹಾಸ

[ಬದಲಾಯಿಸಿ]

ಆಲ್ಬರ್ಟೊ ಸ್ಯಾನ್ಟೋಸ್-ಡುಮೊಂಟ್, ಹಾರಲು ಸಾಧ್ಯವಾಗುವ ಮೊದಲ ಯಂತ್ರಗಳನ್ನು ತಯಾರಿಸಿದವರಲ್ಲಿ ಮೊದಲಿಗರು. ಇವರು ವಾಯುಯಾನದ ಅಭಿವೃದ್ಧಿಯಲ್ಲಿ ಪ್ರವರ್ತಕರೆನಿಸಿ,ಒಂದು ಪ್ರಮುಖ ಪಾತ್ರ ವಹಿಸಿದರು. ಇಂಧನ ಚಾಲಿತ ಯಾಂತ್ರಿಕ ವಿಮಾನದ ಬಗೆಗಿನ ಕೆಲ ಮೊದಲ ಕಲ್ಪನೆಗಳು ಲಿಯೊನಾರ್ಡೊ ಡಾ ವಿಂಚಿಯವರದ್ದೆಂದು ಹೇಳಲಾಗುತ್ತದೆ. ಈತ ವಿಮಾನದ ಯಾವುದೇ ಮಾದರಿಗಳನ್ನು ಯಶಸ್ವಿಯಾಗಿ ನಿರ್ಮಿಸದಿದ್ದರೂ, "ಹಾರಾಡುವ ಯಂತ್ರಗಳ" ಬಗ್ಗೆ ಹಲವು ರೇಖಾಚಿತ್ರ ಹಾಗು ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸಿದ್ದರು.

ಒರ್ವಿಲ್ಲೇ ಹಾಗು ವಿಲ್ಬರ್ ರೈಟ್, ಮೊದಲ ವಿಮಾನ ರೈಟ್ ಫ್ಲೈಯರ್ Iನ್ನು, ಡಿಸೆಂಬರ್ 17, 1903ರಲ್ಲಿ ಉತ್ತರ ಕ್ಯಾರೊಲಿನದ ಕಿಟ್ಟಿ ಹಾಕ್ ನಲ್ಲಿ ಹಾರಾಟ ನಡೆಸಿದರು.

ಅಂತರಿಕ್ಷಯಾನ ಇಂಜಿನಿಯರಿಂಗ್ ನ ಉಗಮವನ್ನು, ಸುಮಾರು ೧೯ನೇ ಶತಮಾನದ ನಂತರದ ಭಾಗದಿಂದ ಹಿಡಿದು ೨೦ನೇ ಶತಮಾನದ ಆರಂಭದಷ್ಟು ಹಿಂದೆ ಗುರುತಿಸಬಹುದು. ಇದಕ್ಕೆ ವಾಯುಯಾನ ನಡೆಸಿದ ಮೊದಲ ಪ್ರವರ್ತಕ-ಶೋಧಕರು ಕಾರಣವೆಂದು ಹೇಳಲಾಗುತ್ತದೆ. ಆದಾಗ್ಯೂ ಸರ್ ಜಾರ್ಜ್ ಕಾಯ್ಲೆಯ್ ಅವರ ಕೃತಿಯ ಪ್ರಕಾರ ಇದು ೧೮ನೇ ಶತಮಾನದ ಅಂತಿಮ ಅವಧಿಯಿಂದ ಹಿಡಿದು ೧೯ನೇ ಶತಮಾನದ ಮಧ್ಯಭಾಗದಷ್ಟು ಹಳೆಯದೆಂದೂ ಗುರುತಿಸಲಾಗುತ್ತದೆ. ವಾಯುಯಾನ ವಿಜ್ಞಾನದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾದ,[] ಕಾಯ್ಲೆಯ್ ಅಂತರಿಕ್ಷಯಾನ ಇಂಜಿನಿಯರುಗಳಲ್ಲಿ ಮೊದಲಿಗರು.[] ಅಲ್ಲದೇ ಇವರು ಯಾವುದೇ ವಿಮಾನಕ್ಕೆ ಪರಿಣಾಮಕಾರಿ ಸಾಗಣೆ ಸಾಮರ್ಥ್ಯ ಹಾಗು ಪ್ರತಿರೋಧದಂತಹ ಬಲಗಳನ್ನು ಪ್ರತ್ಯೇಕಿಸಿದ ಮೊದಲ ವ್ಯಕ್ತಿಯೆಂದು ಗುರುತಿಸಲ್ಪಡುತ್ತಾರೆ.[] ವೈಮಾನಿಕ ಎಂಜಿನಿಯರಿಂಗ್ ಬಗೆಗಿನ ಆರಂಭಿಕ ತಿಳಿವಳಿಕೆಯ ಜ್ಞಾನವು ಬಹುತೇಕ ಪ್ರಾಯೋಗಿಕವಾಗಿದ್ದು, ಇತರೆ ಎಂಜಿನಿಯರಿಂಗ್ ವಿಭಾಗಗಳಿಂದ ಕೆಲವು ಪರಿಕಲ್ಪನೆ ಮತ್ತು ಪರಿಣತಿಗಳನ್ನು ಆಯ್ದುಕೊಳ್ಳಲಾಗಿದೆ.[] ವಿಜ್ಞಾನಿಗಳು, ಅಂತರಿಕ್ಷಯಾನ ಇಂಜಿನಿಯರಿಂಗ್ ನ ಕೆಲ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಂಡರು. ಉದಾಹರಣೆಗೆ ೧೮ನೇ ಶತಮಾನದಲ್ಲಿ ಗುರುತಿಸಲಾದ ಅಸ್ಥಿರ ಚಲನಶಾಸ್ತ್ರ ಇದರಲ್ಲೊಂದೆನಿಸಿದೆ. ರೈಟ್ ಸಹೋದರರು ಯಶಸ್ವಿಯಾಗಿ ವಿಮಾನ ಹಾರಾಟ ನಡೆಸಿದ ಹಲವಾರು ವರ್ಷಗಳ ನಂತರ, ೧೯೧೦ರ ಸಮಯದಲ್ಲಿ, ವಿಶ್ವ ಸಮರ Iಕ್ಕೆ ಮಿಲಿಟರಿ ವಿಮಾನದ ವಿನ್ಯಾಸ ಮಾಡುವ ಮೂಲಕ ಅಂತರಿಕ್ಷಯಾನ ಇಂಜಿನಿಯರಿಂಗ್ ಕೂಡಾ ಅಭಿವೃದ್ಧಿ ಕಂಡಿತು. ಅಂತರಿಕ್ಷಯಾನ ಇಂಜಿನಿಯರಿಂಗ್ ಬಗೆಗಿನ ಮೊದಲ ವ್ಯಾಖ್ಯಾನಿತ ನಿರೂಪಣೆಯು ಫೆಬ್ರವರಿ ೧೯೫೮ರಲ್ಲಿ ಕಂಡುಬಂದಿತು.[] ಈ ಅರ್ಥನಿರೂಪಣೆಯು, ಭೂಮಿಯ ವಾತಾವರಣ ಹಾಗು ಬಾಹ್ಯಾಕಾಶವು ಒಂದೇ ಕ್ಷೇತ್ರವೆಂದು ಪರಿಗಣಿಸಿತು. ಈ ಮೂಲಕ ವಿಮಾನ(ಏರೋ ) ಹಾಗು ಗಗನನೌಕೆ(ಆಕಾಶ )ಎಂಬ ಎರಡು ಪದಗಳನ್ನು ಒಟ್ಟಾಗಿ ಬಳಸುವ ಮೂಲಕ ಹೊಸ ಪದ ಏರೋಸ್ಪೇಸ್ ನ ಹುಟ್ಟಿಗೆ ಕಾರಣವಾಯಿತು. ಶೀತಲ ಸಮರಕ್ಕೆ ಪ್ರತಿಕ್ರಿಯೆಯಾಗಿ ದಿ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಸ್ಟ್ರೆಶನ್ ೧೯೫೮ರಲ್ಲಿ ಸ್ಥಾಪನೆಯಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದ ಅಂತರಿಕ್ಷಯಾನ ಇಂಜಿನಿಯರುಗಳು,(ರಷ್ಯಾ) USSR ಅಕ್ಟೋಬರ್ ೪, ೧೯೫೭ರಲ್ಲಿ ಉಡಾವಣೆ ಮಾಡಿದ ಸ್ಪುಟ್ನಿಕ್ ಗೆ ಪ್ರತಿಕ್ರಿಯೆಯಾಗಿ ಮೊದಲ ಅಮೆರಿಕನ್ ಉಪಗ್ರಹವನ್ನು ಜನವರಿ ೩೧, ೧೯೫೮ರಲ್ಲಿ ಉಡಾವಣೆ ಮಾಡಿದರು.[]

ಘಟಕಾಂಶಗಳು

[ಬದಲಾಯಿಸಿ]
ವೆರ್ನ್ಹರ್ ವೊನ್ ಬ್ರುನ್, ಸ್ಯಾಟರ್ನ್ V ಮೊದಲ ಹಂತದ F-1 ಇಂಜಿನ್ ಗಳೊಂದಿಗೆ US ಸ್ಪೇಸ್ ಅಂಡ್ ರಾಕೆಟ್ ಸೆಂಟರ್ ನಲ್ಲಿ

ಅಂತರಿಕ್ಷಯಾನ ಇಂಜಿನಿಯರಿಂಗ್ ನ ಕೆಲ ಘಟಕಗಳೆಂದರೆ:[೧೦][೧೧]

ಪರೀಕ್ಷೆಗೆ ಒಳಪಡುತ್ತಿರುವ ಒಂದು ಕದನವಿಮಾನ ಜೆಟ್ ಇಂಜಿನ್.ಇಂಜಿನ್ ಶಾಖದ ಗೂಡಿನ ಹಿಂದಿರುವ ಸುರಂಗದಲ್ಲಿ ಕೇಳಿಬರುತ್ತಿರುವ ಸದ್ದು ಹಾಗು ಇದು ನಿರ್ವಾತಕರಣಕ್ಕೆ ಅವಕಾಶ ಮಾಡಿಕೊಡುತ್ತದೆ.
  • ಅಸ್ಥಿರ ಯಂತ್ರವಿಜ್ಞಾನ - ವಸ್ತುಗಳ ಸುತ್ತ ಪ್ರವಹಿಸುವ ಸ್ರವದ ಬಗೆಗಿನ ಅಧ್ಯಯನ. ನಿರ್ದಿಷ್ಟವಾಗಿ ವಾಯುಬಲಶಾಸ್ತ್ರವು, ರೆಕ್ಕೆಗಳಂತಹ ಪಟಲದ ಮೇಲೆ ಅಥವಾ ಗಾಳಿ ಸುರಂಗಗಳಂತಹ ವಸ್ತುಗಳ ಮೂಲಕ ಪರಿಚಲಿಸುವ ಗಾಳಿಗೆ ಸಂಬಂಧಿಸಿದೆ.(ಸಾಗಣೆ (ಹೊತ್ತೊಯ್ಯುವ ಸಾಮರ್ಥ್ಯ) ಹಾಗು ವಾಯುಯಾನ ವಿಜ್ಞಾನ ವಿಭಾಗವನ್ನೂ ಸಹ ನೋಡಿ).
  • ಆಸ್ಟ್ರೋಡೈನಾಮಿಕ್ಸ್ - ಇದು ಗಗನ ನೌಕಾ ವಿಜ್ಞಾನದ ಅಧ್ಯಯನ ಶಾಖೆಯಾಗಿದ್ದು, ಇದು ಅಂತರಿಕ್ಷದಲ್ಲಿ ಚಲಿಸುವ ನೈಸರ್ಗಿಕ ಮತ್ತು ಕೃತಕ ವಾಹನಗಳ ಅಧ್ಯಯನವಾಗಿದೆ.ಕೆಲ ಇಂಧನ ಅಸ್ಥಿರಗಳನ್ನು ಆಯ್ಕೆಗೆ ನೀಡಿದಾಗ, ಕಕ್ಷದಲ್ಲಿ ಚಲನೆಯಲ್ಲಿರುವ ಅಂಶಗಳ ಸಂಭವನೀಯ ಘಟನೆಯನ್ನೊಳಗೊಂಡ, ಕಕ್ಷೆ ಪರಿಧಿಯ ಸುತ್ತುವ ಚಲನಶಾಸ್ತ್ರದ ಅಧ್ಯಯನ ಎಂದು ಹೇಳಲಾಗಿದೆ.ಇದರಲ್ಲಿನ ಕ್ರಿಯಾಶೀಲತೆಯು ಹಲವು ವ್ಯತ್ಯಾಸಗಳಿಗೆ ಸಮನ್ವಯ ಸಾಧಿಸುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಕೆಲ ಶಾಲೆಗಳು ಪದವಿಪೂರ್ವ ಹಂತದವರೆಗೂ ಇದರ ಬಗ್ಗೆ ಶಿಕ್ಷಣ ನೀಡುತ್ತವೆ. ಹಲವು ವಿದ್ಯಾಸಂಸ್ಥೆಗಳು ಈ ವಿಷಯವನ್ನೊಳಗೊಂಡ ಪದವಿ ತರಗತಿಗಳನ್ನು ನಡೆಸುತ್ತವೆ.(ಮೇಲೆ ಹೇಳಲಾದ ವಿಷಯವನ್ನು ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಭೌತವಿಜ್ಞಾನದ ವಿಭಾಗದ ಸಹಯೋಗದಲ್ಲಿ ಸಾಮಾನ್ಯವಾಗಿ ಬೋಧಿಸಲಾಗುತ್ತದೆ).
  • ಸಮಸ್ಥಿತಿ ಶಾಸ್ತ್ರ ಹಾಗು ಚಲನಶಾಸ್ತ್ರ(ಇಂಜಿನಿಯರಿಂಗ್ ಯಂತ್ರಶಾಸ್ತ್ರ)- ಯಾಂತ್ರಿಕ ವ್ಯವಸ್ಥೆಗಳಲ್ಲಿರುವ ಪ್ರಮುಖ ಚಲನೆ, ಬಲಗಳ ಅಧ್ಯಯನ.
  • ಗಣಿತಶಾಸ್ತ್ರ - ಇದರಲ್ಲಿ ವಿಶೇಷವಾಗಿ, ಕಲನಶಾಸ್ತ್ರ, ವಿಕಲನ ಸಮೀಕರಣ, ಹಾಗು ರೇಖೀಯ ಬೀಜಗಣಿತ.
  • ವಿದ್ಯುತ್ತಂತ್ರ - ಇಂಜಿನಿಯರಿಂಗ್ ನಲ್ಲಿರುವ ಎಲೆಕ್ಟ್ರಾನಿಕ್ಸ್ ನ ಅಧ್ಯಯನ.
  • ನೋದನ - ಗಾಳಿಯ ಶಕ್ತಿ ಮೂಲಕ ಒಂದು ವಾಹನ ಚಲಾಯಿಸುವ ಶಕ್ತಿಯನ್ನು (ಅಥವಾ ಬಾಹ್ಯಾಕಾಶದಲ್ಲಿ) ಆಂತರಿಕ ದಹನ ಇಂಜಿನ್ ಗಳು, ಜೆಟ್ ಇಂಜಿನ್ ಗಳು ಹಾಗು ಪರಿಭ್ರಮಣ ಯಂತ್ರ, ಅಥವಾ ರಾಕೆಟ್ ಗಳು (ನೋದಕ ಹಾಗು ಗಗನನೌಕಾ ನೋದನ ವಿಭಾಗವನ್ನೂ ಸಹ ನೋಡಿ). ಇದಕ್ಕೆ ಸೇರ್ಪಡೆಯಾದ ತೀರ ಇತ್ತೀಚಿನ ಘಟಕವೆಂದರೆ ವಿದ್ಯುತ್ ನೋದನ ಹಾಗು ಅಯಾನು ನೋದನ.
  • ಚಾಲನಶಕ್ತಿ ಇಂಜಿನಿಯರಿಂಗ್ - ವ್ಯವಸ್ಥೆಗಳ ಚಾಲಕಶಕ್ತಿ ನಡವಳಿಕೆಗಳ ಗಣಿತೀಯ ಮಾದರಿಯ ಅಧ್ಯಯನ ಹಾಗು ಅವುಗಳನ್ನು ವಿನ್ಯಾಸಗೊಳಿಸುವುದು; ಇದಕ್ಕೆ ಸಾಮಾನ್ಯವಾಗಿ ಪ್ರತ್ಯಾದಾನ ಸಂಕೇತಗಳನ್ನು ಬಳಸಿಕೊಳ್ಳಲಾಗುತ್ತದೆ, ಈ ರೀತಿಯಾಗಿ ಅವುಗಳ ಚಾಲಕಶಕ್ತಿ ನಡವಳಿಕೆಯು ಅಪೇಕ್ಷಣೀಯವಾಗಿರುತ್ತದೆ.(ವ್ಯಾಪಕವಾದ ವಿಷಯಾಂತರಗಳಿಲ್ಲದೆ, ಕಡಿಮೆ ದೋಷಗಳೊಂದಿಗೆ ಸ್ಥಿರವಾಗಿರುತ್ತದೆ). ಇದು ವಿಮಾನ, ಗಗನನೌಕೆ, ನೋದನ ವ್ಯವಸ್ಥೆಗಳು, ಹಾಗು ಅಂತರಿಕ್ಷಯಾನ ವಾಹನಗಳಲ್ಲಿ ಅಸ್ತಿತ್ವದಲ್ಲಿರುವ ಉಪವ್ಯವಸ್ಥೆಗಳಲ್ಲಿನ ಚಾಲಕಶಕ್ತಿಯ ನಡವಳಿಕೆಗೆ ಅನ್ವಯವಾಗುತ್ತದೆ.
  • ವಿಮಾನದ ವಿನ್ಯಾಸಗಳು - ಹಾರಾಟದ ವೇಳೆ ಚಲನಶಕ್ತಿಯನ್ನು ಎದುರಿಸಲು ವಿಮಾನದ ಭೌತಿಕ ವಿನ್ಯಾಸ. ಅಂತರಿಕ್ಷಯಾನ ಇಂಜಿನಿಯರಿಂಗ್ ವಿಭಾಗವು ವಿನ್ಯಾಸಗಳನ್ನು ಹಗುರತೂಕದಲ್ಲಿಡುವ ಗುರಿ ಹೊಂದಿದೆ.
  • ವಸ್ತುಕ ವಿಜ್ಞಾನ - ಇದು ಭೌತಿಕವಾಗಿ ರಾಚನಿಕ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಅಂತರಿಕ್ಷಯಾನ ವಿನ್ಯಾಸಗಳು ಯಾವುದರಿಂದ ನಿರ್ಮಾಣವಾಗಬೇಕೆಂಬುದರ ಬಗೆಗೂ ಅಂತರಿಕ್ಷಯಾನ ಇಂಜಿನಿಯರಿಂಗ್ ಅಧ್ಯಯನ ನಡೆಸುತ್ತದೆ. ನಿರ್ದಿಷ್ಟ ಲಕ್ಷಣಗಳನ್ನೊಳಗೊಂಡ ಹೊಸ ವಸ್ತುಗಳನ್ನು ಸಂಶೋಧಿಸಲಾಗುತ್ತದೆ, ಅಥವಾ ಅಸ್ತಿತ್ವದಲ್ಲಿರುವ ವಸ್ತುಗಳನ್ನು ಪರಿವರ್ತಿಸಿ ಅವುಗಳ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ.
  • ಘನ ಚಲನಶಾಸ್ತ್ರ - ಯಾಂತ್ರಿಕ ವಸ್ತುಕ ವಿಜ್ಞಾನಕ್ಕೆ ಹತ್ತಿರವಾದ, ಅದಕ್ಕೆ ಸಂಬಂಧಿಸಿದ ಮತ್ತೊಂದು ಅಧ್ಯಯನವೆಂದರೆ ಘನ ಚಲನಶಾಸ್ತ್ರ, ಇದು ವಾಹನದಲ್ಲಿರುವ ಬಿಡಿಭಾಗಗಳ ಒತ್ತಡ ಹಾಗು ತೀವ್ರ ಪ್ರಯಾಸದ ಭಾರವನ್ನು ವಿಶ್ಲೇಷಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ವಿಶ್ಲೇಷಣಾ ಪ್ರಕ್ರಿಯೆಯಲ್ಲಿ ಇಂಜಿನಿಯರುಗಳಿಗೆ ಸಹಾಯ ಮಾಡುವ MSC ಪಟ್ರನ್/ನಾಸ್ಟ್ರನ್ ನಂತಹ ಹಲವಾರು ಸೀಮಿತ ವಲಯದ ಫಿನೈಟ್ ಎಲಿಮೆಂಟ್ ಯೋಜನೆಗಳಿವೆ.
  • ವಾಯುಸ್ಥಿತಿಸ್ಥಾಪಕತ್ವ - ಅಂತರಿಕ್ಷಯಾನ ಬಲಗಳು ಹಾಗು ರಾಚನಿಕ ನಮ್ಯತೆಯ ಸ್ಥಿತಿಸ್ಥಾಪಕತ್ವದ ಪರಸ್ಪರ ಪರಿಣಾಮವು, ಕಂಪನ ದಿಕ್ಚ್ಯುತಿಯನ್ನು ಅಥವಾ ಪಾರಸ್ಪರಿಕ ಪ್ರಭಾವ ಉಂಟುಮಾಡುವ ಸಾಮರ್ಥ್ಯ ಹೊಂದಿರುತ್ತವೆ.
  • ಏವಿಯಾನಿಕ್ಸ್(ವಾಯುಯಾನದಲ್ಲಿ ವಿದ್ಯುತ್ ಹಾಗು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವ ತಂತ್ರಜ್ಞಾನ) - ಒಂದು ವಿಮಾನ ಅಥವಾ ಗಗನನೌಕೆಯೊಳಗೆ ಕಂಪ್ಯೂಟರ್ ವ್ಯವಸ್ಥೆಗಳ ಪ್ರೊಗ್ರಾಮಿಂಗ್ ಹಾಗು ವಿನ್ಯಾಸಮಾಡುವುದು ಹಾಗು ವ್ಯವಸ್ಥೆಗಳ ಅನುಕರಣ.
  • ಸಾಫ್ಟ್ ವೇರ್ - ಅಂತರಿಕ್ಷಯಾನದ ಬಳಕೆಗಾಗಿ ಕಂಪ್ಯೂಟರ್ ಸಾಫ್ಟ್ ವೇರ್ ನ ನಿರ್ದಿಷ್ಟ ವಿಶ್ಲೇಷಣೆ,ನಿರೂಪಣೆ, ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ, ಹಾಗು ಅದನ್ನು ಕಾರ್ಯಗತಗೊಳಿಸುವಿಕೆಯಾಗಿದೆ. ಇದರಲ್ಲಿ ವಿಮಾನದ ಸಾಫ್ಟ್ ವೇರ್, ಭೂಮಿಯ ಮೇಲ್ಮೈ ನಿಯಂತ್ರಣ ಸಾಫ್ಟ್ ವೇರ್, ಪ್ರಾಯೋಗಿಕ ಪರೀಕ್ಷೆ ಮತ್ತು ಅರ್ಹತೆ ನಿರ್ಧಾರದ ಸಾಫ್ಟ್ ವೇರ್ ಗಳೂ ಸೇರಿವೆ.
  • ಅಪಾಯ ಹಾಗು ವಿಶ್ವಾಸಾರ್ಹತೆ - ಇದು ಅಪಾಯ ಹಾಗು ವಿಶ್ವಾಸಾರ್ಹತೆ ನಿರ್ಧಾರಣಾ ತಂತ್ರಗಳ ಅಧ್ಯಯನ ಹಾಗು ಇದು ಪರಿಮಾಣಾತ್ಮಕ ವಿಧಾನದಲ್ಲಿ ಗಣಿತಶಾಸ್ತ್ರದ ಬಳಕೆಯಾಗಿದೆ.
  • ಶಬ್ದ ಮಾಲಿನ್ಯ ನಿಯಂತ್ರಣ - ಶಬ್ದ ವರ್ಗಾವಣೆಯ ಗ್ರಹೀತ ಯಂತ್ರವಿಜ್ಞಾನದ ಅಧ್ಯಯನ.
  • ವಿಮಾನದ ಪರೀಕ್ಷೆ - ಒಂದು ವಿಮಾನವು ತನ್ನ ವಿನ್ಯಾಸ ಹಾಗು ನಿರ್ವಹಣಾ ಗುರಿಗಳು ಹಾಗು ಪ್ರಮಾಣೀಕರಣ ಅಗತ್ಯಗಳಿಗೆ ತಕ್ಕಂತೆ ರಚನೆಯಾಗಿದೆಯೇ ಎಂಬುದನ್ನು ನಿರ್ಧರಿಸಲು ಗುಣಮಟ್ಟ ನಿರ್ವಹಣಾ ದತ್ತಾಂಶದ ಸಂಗ್ರಹಣೆ ಹಾಗು ನಿರ್ವಹಣಾ ವಿಶ್ಲೇಷಣೆಗಾಗಿ ವಿಮಾನ ತಪಾಸಣಾ-ಪರೀಕ್ಷಾ ಕಾರ್ಯಚಟುವಟಿಕೆವನ್ನು ರಚಿಸುವುದು ಹಾಗು ಅದನ್ನು ಜಾರಿಗೆ ತರುವುದು.

ಈ ಘಟಕಗಳಲ್ಲಿ ಹೆಚ್ಚಿನವುಗಳು ಸೈದ್ಧಾಂತಿಕ ಗಣಿತಶಾಸ್ತ್ರವನ್ನು ಆಧರಿಸಿವೆ, ಉದಾಹರಣೆಗೆ ವಾಯುಯಾನ ವಿಜ್ಞಾನಕ್ಕಾಗಿ ಅಸ್ಥಿರ ಚಲನಶಾಸ್ತ್ರ ಅಥವಾ ವಿಮಾನ ಚಲನಶಾಸ್ತ್ರಕ್ಕಾಗಿ ಚಲನೆಗಳ ಸಮೀಕರಣ. ಇದರಲ್ಲಿ ವ್ಯಾಪಕ ಪ್ರಾಯೋಗಿಕ ಅಂಶಗಳೂ ಸೇರಿವೆ. ಐತಿಹಾಸಿಕವಾಗಿ, ಈ ಪ್ರಾಯೋಗಿಕ ಅಂಶವು ಗಾಳಿ ಸುರಂಗಗಳು ಅಥವಾ ಮುಕ್ತ ವಾತಾವರಣದಲ್ಲಿ ಪರೀಕ್ಷಿಸಲಾದ ಅಳತೆ ಗುರುತು ಮಾದರಿಗಳು ಹಾಗು ಪ್ರಯೋಗ ಮಾದರಿಯಿಂದ ಹುಟ್ಟಿಕೊಂಡಿವೆ. ತೀರ ಇತ್ತೀಚಿಗೆ, ಕಂಪ್ಯೂಟರ್ ನಲ್ಲಿನ ಪ್ರಗತಿಯು, ಸ್ರವದ ನಡವಳಿಕೆಯನ್ನು ಅನುಕರಿಸಲು ಕಂಪ್ಯೂಟರ್ ಸ್ರವ ಚಲನಶಾಸ್ತ್ರದ ಬಳಕೆಗೆ ಅನುಕೂಲ ಮಾಡಿಕೊಟ್ಟಿದೆ, ಇದಕ್ಕೆ ಗಾಳಿ-ಸುರಂಗದ ಪರೀಕ್ಷೆಗಿಂತ ಕಡಿಮೆ ಸಮಯ ಹಾಗು ವೆಚ್ಚ ತಗಲುತ್ತದೆ. ಇದರ ಜೊತೆಯಲ್ಲಿ, ಅಂತರಿಕ್ಷಯಾನ ಇಂಜಿನಿಯರಿಂಗ್, ಅಂತರಿಕ್ಷಯಾನ ವಾಹನದ ಎಲ್ಲ ಘಟಕಗಳ ಸಮರ್ಪಕ ಏಕೀಕರಣಕ್ಕೆ ನೆರವಾಗುತ್ತದೆ.( ಬಲ, ಅಂತರಿಕ್ಷಯಾನ ಬೇರಿಂಗುಗಳು[ಘರ್ಷಣೆಗಳನ್ನು ತಡೆದುಕೊಳ್ಳುವ ಯಂತ್ರದ ಭಾಗಗಳು], ಸಂವಹನಗಳು, ಶಾಖಧಾರಕ ನಿಯಂತ್ರಣ, ಆಧಾರ ಮುಂತಾದ ಉಪವ್ಯವಸ್ಥೆಗಳು ಸೇರಿವೆ.) ಹಾಗು ಇದರ ಬೆಳವಣಿಗೆ(ವಿನ್ಯಾಸ, ತಾಪಮಾನ, ಒತ್ತಡ, ವಿಕಿರಣ, ವೇಗ, ಜೀವಿತಾವಧಿ) ಗಳನ್ನೊಳಗೊಂಡಿದೆ.

ಅಂತರಿಕ್ಷಯಾನ ಇಂಜಿನಿಯರಿಂಗ್ ಶೈಕ್ಷಣಿಕ ಪದವಿಗಳು

[ಬದಲಾಯಿಸಿ]
ಚಿತ್ರ:Aerospace vehicle examples.jpg
ಅಂತರಿಕ್ಷಯಾನ ಇಂಜಿನಿಯರಿಂಗ್‌

ಅಂತರಿಕ್ಷಯಾನ ಇಂಜಿನಿಯರಿಂಗ್ ಪದವಿಗಾಗಿ ಉನ್ನತ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಹಾಗು Ph.D. ಹಂತಗಳಲ್ಲಿ, ಹಲವು ವಿಶ್ವವಿದ್ಯಾಲಯಗಳ ಅಂತರಿಕ್ಷಯಾನ ಇಂಜಿನಿಯರಿಂಗ್ ವಿಭಾಗಗಳು ಹಾಗು ಇತರ ಶಿಕ್ಷಣ ಕೇಂದ್ರಗಳ ಮೆಕ್ಯಾನಿಕ ಇಂಜಿನಿಯರಿಂಗ್ ವಿಭಾಗಗಳಲ್ಲಿ ಅಧ್ಯಯನ ನಡೆಸಬಹುದು. ಕೆಲ ವಿಭಾಗಗಳು ಬಾಹ್ಯಾಕಾಶ-ಕೇಂದ್ರೀಕೃತ ಗಗನಯಾನ ಇಂಜಿನಿಯರಿಂಗ್ ನಲ್ಲಿ ಪದವಿ ಶಿಕ್ಷಣ ನೀಡುತ್ತವೆ. ನೆದರ್ಲೆಂಡ್ಸ್ ನ ಡೆಲ್ಫ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (TU ಡೆಲ್ಫ್ಟ್), ಯೂರೋಪಿನ ಅಗ್ರ ಶೈಕ್ಷಣಿಕ ಹಾಗು ಸಂಶೋಧನಾ ವೇದಿಕೆಗಳನ್ನು ಒದಗಿಸುತ್ತದೆ. ಇಂತಹುದೇ ಶಿಕ್ಷಣ ಯೋಜನಾ ಕಾರ್ಯಕ್ರಮವನ್ನು ಒದಗಿಸುವ ಮತ್ತೆರಡು ಸಂಸ್ಥೆಗಳೆಂದರೆ ಮ್ಯಾಸ್ಸಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗು ರಟ್ಗರ್ಸ್ ಯೂನಿವರ್ಸಿಟಿ.[೧೧] ಕಳೆದ ೨೦೦೯ರಲ್ಲಿ, U.S. ನ್ಯೂಸ್ ಅಂಡ್ ವರ್ಲ್ಡ್ ರಿಪೋರ್ಟ್, ಮ್ಯಾಸ್ಸಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಾರ್ಜಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಾಗು ಯೂನಿವರ್ಸಿಟಿ ಆಫ್ ಮಿಚಿಗನ್ ಗಳನ್ನು ಅಂತರಿಕ್ಷಯಾನ ಇಂಜಿನಿಯರಿಂಗ್ ನಲ್ಲಿ ಪದವಿಪೂರ್ವ ಶಿಕ್ಷಣ ನೀಡುವ ಅಗ್ರ ಮೂರು ಸಂಸ್ಥೆಗಳು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಡಾಕ್ಟರೇಟ್ ಪದವಿ ನೀಡುವ ವಿಶ್ವವಿದ್ಯಾಲಯಗಳೆಂದು ಮನ್ನಣೆ ನೀಡಲಾಯಿತು. ಇತರ ವಿಭಾಗಗಳಲ್ಲಿ ಪದವಿ ನೀಡುವ ಅಗ್ರ ಹತ್ತು ಸ್ಥಾನಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್, ಯೂನಿವರ್ಸಿಟಿ ಆಫ್ ಇಲ್ಲಿನಾಯಿಸ್, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ, ಆಸ್ಟಿನ್ ನಲ್ಲಿರುವ ಯೂನಿವರ್ಸಿಟಿ ಆಫ್ ಟೆಕ್ಸಾಸ್, ಹಾಗು ವರ್ಜೀನಿಯ ಟೆಕ್ ಅನುಕ್ರಮವಾದ ಸ್ಥಾನಗಳನ್ನು ಗಳಿಸಿದೆ.[೧೨] ನಿಯತಕಾಲಿಕವು, ಎಂಬ್ರಿ-ರಿಡಲ್ ಏರೋನಾಟಿಕಲ್ ಯೂನಿವರ್ಸಿಟಿ, ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಅಕ್ಯಾಡೆಮಿ, ಹಾಗು ಯುನೈಟೆಡ್ ಸ್ಟೇಟ್ಸ್ ನೇವಲ್ ಅಕ್ಯಾಡೆಮಿಗಳನ್ನು, ವಿಶ್ವವಿದ್ಯಾಲಯ ಮಟ್ಟದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಪದವಿಗಳನ್ನು ನೀಡುವ ಸಂಸ್ಥೆಗಳೆಂದು ಶ್ರೇಣೀಕರಿಸಿದೆ, ಆದರೆ ಇವುಗಳು ಡಾಕ್ಟರೇಟ್ ಪದವಿಗಳನ್ನು ನೀಡುವುದಿಲ್ಲ.[೧೩] ವಿಚಿತ ಸ್ಟೇಟ್ ಯೂನಿವರ್ಸಿಟಿ, ಅಂತರಿಕ್ಷಯಾನ ಇಂಜಿನಿಯರಿಂಗ್ ಪದವಿ ನೀಡುವ ಸಂಸ್ಥೆಯೆಂದು ಪ್ರಸಿದ್ಧವಾಗಿದೆ. ಜೊತೆಗೆ ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಗಾಗಿ ಮೂರನೇ ಅತ್ಯಂತ ದೊಡ್ಡ ಮೊತ್ತದ ಸಂಶೋಧನಾ ಅನುದಾನದ ನಿಧಿಯನ್ನು ಆಯವ್ಯಯದಲ್ಲಿ ಹೊಂದಿದೆ.[೧೪][೧೫] ಕೆನಡಾದಲ್ಲಿ, ಯೂನಿವರ್ಸಿಟಿ ಆಫ್ ಟೊರೊಂಟೊ ಉತ್ತಮ ಮಟ್ಟದ ಅಂತರಿಕ್ಷಯಾನ ಇಂಜಿನಿಯರಿಂಗ್ ಶಿಕ್ಷಣವನ್ನು ನೀಡುತ್ತಿದೆ. ಅಂತರಿಕ್ಷಯಾನ ಪದವಿಗಾಗಿ ವಿದ್ಯಾರ್ಥಿಗಳು, ಇಂಜಿನಿಯರಿಂಗ್ ವಿಜ್ಞಾನವೆಂಬ ಒಂದು ಸ್ಪರ್ಧಾತ್ಮಕ ಯೋಜನಾ ಪರೀಕ್ಷೆಯನ್ನು ಎದುರಿಸಬೇಕು. U ಆಫ್ Tನ ಅಂತರಿಕ್ಷಯಾನ ವಿಜ್ಞಾನ ಹಾಗು ಇಂಜಿನಿಯರಿಂಗ್ ಶೈಕ್ಷಣಿಕ ಪದವಿಯು, ಪದವಿಪೂರ್ವ ಹಾಗು ಪದವಿ ಅಧ್ಯಯನಗಳನ್ನು ಒಳಗೊಂಡಿದೆ. ಪದವಿ ಹಂತದಲ್ಲಿ U ಆಫ್ T MASc ಹಾಗು PhD ಪದವಿಗಳಿಗೆ ಮಾರ್ಗದರ್ಶನ ಮಾಡುವ ಸಂಶೋಧನಾ-ಕೇಂದ್ರೀಕೃತ ಪದವಿಗಳನ್ನು ನೀಡುತ್ತದೆ. ಜೊತೆಗೆ ವೃತ್ತಿ ಆಧಾರಿತ ಪದವಿಗೆ ಮಾರ್ಗದರ್ಶನ ಮಾಡಿಕೊಡುವ MEng ಪದವಿ ಶಿಕ್ಷಣ ಒದಗಿಸುತ್ತದೆ. U ಆಫ್ Tನ ಸಂಶೋಧನಾ ವ್ಯಾಪ್ತಿಯಲ್ಲಿ ವಾಯುಯಾನವಿಜ್ಞಾನ ಇಂಜಿನಿಯರಿಂಗ್ (ವಿಮಾನ ವ್ಯವಸ್ಥೆಗಳು, ನೋದನ, ವಾಯುಬಲಶಾಸ್ತ್ರ, ಕಂಪ್ಯೂಟರ್ ಆಧಾರಿತ ಸ್ರವ ಚಲನಶಾಸ್ತ್ರ, ಹಾಗು ರಾಚನಿಕ ಯಂತ್ರಶಾಸ್ತ್ರ) ಹಾಗು ಬಾಹ್ಯಾಕಾಶ ವ್ಯವಸ್ಥೆಗಳ ಇಂಜಿನಿಯರಿಂಗ್ ಪದವಿಗಳನ್ನು ಒಳಗೊಂಡಿದೆ.(ಗಗನನೌಕಾ ಚಲನಶಾಸ್ತ್ರ ಹಾಗು ನಿಯಂತ್ರಣ, ಬಾಹ್ಯಾಕಾಶ ರೋಬಾಟಿಕ್ಸ್ ಹಾಗು ಮೆಕಾಟ್ರಾನಿಕ್ಸ್, ಹಾಗು ಮೈಕ್ರೋಸ್ಯಾಟಲೈಟ್ ತಂತ್ರಜ್ಞಾನ). ಕಾರ್ಲೆಟನ್ ವಿಶ್ವವಿದ್ಯಾಲಯ ಹಾಗು ರಯೆರ್ಸನ್ ವಿಶ್ವವಿದ್ಯಾಲಯಗಳು ಕೆನಡಾದ ಅಗ್ರ ಅಂತರಿಕ್ಷಯಾನ ಹಾಗು ಮೆಕ್ಯಾನಿಕ ಇಂಜಿನಿಯರಿಂಗ್ ಪದವಿ ನೀಡುವ ವಿಶ್ವವಿದ್ಯಾಲಯಗಳಾಗಿದ್ದು, ಉತ್ತಮ ಮಟ್ಟದ ಪದವಿ ಹಾಗು ಪದವಿಪೂರ್ವ ಶಿಕ್ಷಣವನ್ನು ನೀಡುತ್ತವೆ.[೧೬][೧೭][೧೮] UKಯಲ್ಲಿ, ಅಂತರಿಕ್ಷಯಾನ ಇಂಜಿನಿಯರಿಂಗ್(ಅಥವಾ ವಾಯುಯಾನ ವಿಜ್ಞಾನ) ಪದವಿಯನ್ನು ಹಲವಾರು ವಿಶ್ವವಿದ್ಯಾಲಯಗಳಲ್ಲಿ B.Eng., M.Eng., MSc. ಹಾಗು Ph.D. ಹಂತಗಳಲ್ಲಿ ಅಧ್ಯಯನ ನಡೆಸಬಹುದು. ೨೦೧೦ರ ಅಗ್ರ ೧೦ ವಿಶ್ವವಿದ್ಯಾಲಯಗಳೆಂದರೆ ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್, ಯೂನಿವರ್ಸಿಟಿ ಆಫ್ ಸರ್ರಿ, ಯೂನಿವರ್ಸಿಟಿ ಆಫ್ ಬ್ರಿಸ್ಟಾಲ್, ಯೂನಿವರ್ಸಿಟಿ ಆಫ್ ಸೌತಾಮ್ಪ್ಟನ್, ಕ್ವೀನ್ಸ್ ಯೂನಿವರ್ಸಿಟಿ ಬೆಲ್ಫಾಸ್ಟ್, ಯೂನಿವರ್ಸಿಟಿ ಆಫ್ ಶೆಫ್ಫೀಲ್ಡ್, ನ್ಯೂಕ್ಯಾಸಲ್ ವಿಶ್ವವಿದ್ಯಾಲಯ, ಯೂನಿವರ್ಸಿಟಿ ಆಫ್ ಬಾತ್, ಇಂಪೀರಿಯಲ್ ಕಾಲೇಜ್ ಆಫ್ ಲಂಡನ್, ಲೌಗ್ಹ್ಬಾರೋ ವಿಶ್ವವಿದ್ಯಾಲಯ, ಹಾಗು ಯೂನಿವರ್ಸಿಟಿ ಆಫ್ ನಾಟಿಂಗ್ಹ್ಯಾಮ್.[೧೯] ಲಂಡನ್ ನ ಇಂಪೀರಿಯಲ್ ಕಾಲೇಜ್ ನ ವಾಯುಯಾನ ವಿಜ್ಞಾನ ವಿಭಾಗವು ಫಾರ್ಮುಲ ಒನ್ ಕ್ಷೇತ್ರಕ್ಕೆ ಇಂಜಿನಿಯರುಗಳನ್ನು ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ.[೨೦] ಈ ಕ್ಷೇತ್ರವು ಅಂತರಿಕ್ಷಯಾನ ತಂತ್ರಜ್ಞಾನವನ್ನು ಬಳಕೆಮಾಡುತ್ತದೆ. ಐರ್ಲ್ಯಾಂಡ್ ನಲ್ಲಿ ಅಂತರಿಕ್ಷಯಾನಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಯೂನಿವರ್ಸಿಟಿ ಆಫ್ ಲಿಮೆರಿಕ್ ನಲ್ಲಿ ಕಲಿಯಬಹುದು. ಆಸ್ಟ್ರೇಲಿಯಾದಲ್ಲಿ, RMIT ವಿಶ್ವವಿದ್ಯಾಲಯವು ಅಂತರಿಕ್ಷಯಾನ (ಅಥವಾ ವಾಯುಯಾನ ವಿಜ್ಞಾನ)ಇಂಜಿನಿಯರಿಂಗ್ ಶಿಕ್ಷಣವನ್ನು ನೀಡುತ್ತದೆ. ಜೊತೆಗೆ ಈ ವೃತ್ತಿಯಲ್ಲಿ ೬೦ ವರ್ಷಕ್ಕೂ ಹೆಚ್ಚಿನ ಬೋಧನಾ ಅನುಭವದ ಗಣಿ ಹೊಂದಿದೆ. ಮೊನಾಶ್ ವಿಶ್ವವಿದ್ಯಾಲಯ, ಯೂನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್, ಯೂನಿವರ್ಸಿಟಿ ಆಫ್ ಸಿಡ್ನಿ, ಯೂನಿವರ್ಸಿಟಿ ಆಫ್ ಕ್ವೀನ್ಸ್ಲ್ಯಾಂಡ್, ಯೂನಿವರ್ಸಿಟಿ ಆಫ್ ಅಡಿಲೈಡ್ ಹಾಗು ಕ್ವೀನ್ಸ್ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಸಹ ಅಂತರಿಕ್ಷಯಾನ ಇಂಜಿನಿಯರಿಂಗ್ ಗಾಗಿ ಶಿಕ್ಷಣ ನೀಡುತ್ತವೆ. ಅಂತರಿಕ್ಷಯಾನ ಇಂಜಿನಿಯರಿಂಗ್ ಪದವಿ ಬೋಧನೆ ಹಾಗು ಪರಿಣತಿಗೆ ಖ್ಯಾತಿ ಪಡೆದಿರುವ ಯೂರೋಪಿನ ವಿಶ್ವವಿದ್ಯಾಲಯಗಳಲ್ಲಿ ನೆದರ್ಲಂಡ್ಸ್ ನ TU ಡೆಲ್ಫ್ಟ್, ಫ್ರಾನ್ಸ್ ನ ISAE ಹಾಗು ENAC, ಜರ್ಮನಿಯ RWTH ಆಚೆನ್, TU ಮುಂಚೆನ್, ದಿ ಯೂನಿವರ್ಸಿಟಿ ಆಫ್ ಸ್ಟುಗರ್ಟ್, TU ಬರ್ಲಿನ್ ಹಾಗು TU ಬ್ರುನ್ಸ್ಚ್ವಯಿಗ್ಇತ್ಯಾದಿ. ಆಸ್ಟ್ರಿಯಾದ FH ಜೋಯನ್ನೆಯುಂ ಸ್ಪೇನ್ ನಲ್ಲಿ ಯೂನಿವರ್ಸಿಡಾಡ್ ಪಾಲಿಟೆಕ್ನಿಕ ಡೆ ಮ್ಯಾಡ್ರಿಡ್, ಯೂನಿವರ್ಸಿಡಾಡ್ ಕಾರ್ಲೋಸ್ III ಡೆ ಮ್ಯಾಡ್ರಿಡ್, ಹಾಗು ಯೂನಿವರ್ಸಿಟಾಟ್ ಪಾಲಿಟೆಕ್ನಿಕ ಡೆ ಕಾಟಲುನ್ಯ ಅಂತರಿಕ್ಷಯಾನ ವಿಜ್ಞಾನದಲ್ಲಿ ಪದವಿಯನ್ನು ನೀಡುತ್ತವೆ. ಇಟಲಿಯಲ್ಲೂ ಸಹ ಹಲವರು ವಿಶ್ವವಿದ್ಯಾಲಯಗಳಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆಯುವ ಅವಕಾಶವಿದೆ. ಉದಾಹರಣೆಗೆ ಪಾಲಿಟೆಕ್ನಿಕಾ ಡಿ ಟೋರಿನೊ, ಯೂನಿವರ್ಸಿಟಿ ಆಫ್ ಪಿಸಾ ಹಾಗು ಪಾಲಿಟೆಕ್ನಿಕ ಡಿ ಮಿಲಾನೋ. ಪೂರ್ವ ಯುರೋಪಿನಲ್ಲಿ ಯೂನಿವರ್ಸಿಟಿ ಆಫ್ ಬೆಲ್ಗ್ರೇಡ್, ವಾರ್ಸಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಹಾಗು ಪೋಲಂಡ್ ನ ರಜೆಸ್ಜೌ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಹಾಗು ಬ್ರ್ನೋನೋನಲ್ಲಿರುವ ಬ್ರ್ನೋ ಯೂನಿವರ್ಸಿಟಿ ಆಫ್ ಟೆಕ್ನಾಲಜಿ, ಜೆಕ್ ರಿಪಬ್ಲಿಕ್. ಭಾರತದಲ್ಲಿ IIT ಕಾನ್ಪುರ, ಈ ವಿಭಾಗದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳಿಗಾಗಿ ತನ್ನದೇ ಆದ ಪ್ರಾಯೋಗಿಕ ಪರೀಕ್ಷಾ ವಿಮಾನ ಹಾಗು ಅದರ ಶಿಸ್ತುಬದ್ದ ಹಾರಾಟ ವ್ಯವಸ್ಥೆಯ ಸ್ಥಳಾವಕಾಶ ಹೊಂದಿದೆ. ಇತರ IITಗಳೂ ಸಹ ಈ ವಿಭಾಗದಲ್ಲಿ ಪದವಿಗಳನ್ನು ನೀಡುತ್ತವೆ. ೨೦೧೦ರ ಶೈಕ್ಷಣಿಕ ವರ್ಷದಿಂದ ಬೆಂಗಾಲ್ ಇಂಜಿನಿಯರಿಂಗ್ ಅಂಡ್ ಸೈನ್ಸ್ ಯೂನಿವರ್ಸಿಟಿ, ಶಿಬ್ಪುರ್, ಅಂತರಿಕ್ಷಯಾನ ಇಂಜಿನಿಯರಿಂಗ್ ನಲ್ಲಿ ಬ್ಯಾಚುಲರ್ ಇಂಜಿನಿಯರಿಂಗ್ ಪದವಿಪೂರ್ವ ಶಿಕ್ಷಣ ನೀಡುತ್ತಿದೆ. ಚೀನಾದಲ್ಲಿ ನಾನ್ಜಿಂಗ್ ಏರೋನಾಟಿಕ್ಸ್ ಅಂಡ್ ಆಸ್ಟ್ರೋನಾಟಿಕ್ಸ್ ಯೂನಿವರ್ಸಿಟಿ, ಅಂತರಿಕ್ಷಯಾನ ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಪ್ರಾದೇಶಿಕ ಮಾರ್ಗದರ್ಶಿಯಾಗಿ ಮುಂಚೂಣಿಯಲ್ಲಿದೆ. ಪಾಕಿಸ್ತಾನದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಪದವಿಗಾಗಿ (CAE)ನಲ್ಲಿರುವ ನ್ಯಾಷನಲ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ, ರಿಸಲ್ಪುರ್ ನಲ್ಲಿರುವ PAF ಅಕ್ಯಾಡೆಮಿ ಅಂಡ್ ಅಂತರಿಕ್ಷಯಾನ ಇಂಜಿನಿಯರಿಂಗ್ ಅಂಡ್ ಏವಿಯಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್,ಪಡೆಯಬಹುದಾಗಿದೆ.ಅಲ್ಲದೇ ಸಂಶೋಧನಾ ಅಧ್ಯಯನದ ಪದವಿ ನೀಡುವ ಪಾಕಿಸ್ತಾನದ ಏಕೈಕ ವಿಶ್ವವಿದ್ಯಾಲಯ ಏರ್ ಯೂನಿವರ್ಸಿಟಿಯಲ್ಲಿ ನಾಗರಿಕ ವಿಮಾನಯಾನ ಕುರಿತ ಅಧ್ಯಯನ ನಡೆಸಬಹುದು. ೨೦೦೨ರಲ್ಲಿ, SUPARCO, ISTಯನ್ನು ಸ್ಥಾಪಿಸಿತು. ಇದು ಪಾಕಿಸ್ತಾನದ ಸಂಯುಕ್ತ ಒಕ್ಕೂಟ ಯೋಜನೆಯನ್ನು ಹೊಂದಿರುವ ನಿಗದಿತ ಸಾರ್ವಜನಿಕ ವಲಯದ ಶಿಕ್ಷಣ ಸಂಸ್ಥೆಯೆನಿಸಿದೆ. ಇದು ಅಂತರಿಕ್ಷಯಾನ ಇಂಜಿನಿಯರಿಂಗ್ ನಲ್ಲಿ ಪದವಿಪೂರ್ವ ಹಾಗು ಪದವಿ ಶಿಕ್ಷಣ ನೀಡುತ್ತದೆ. ISTಯಲ್ಲಿ ನೀಡಲಾಗುವ MS ಪದವಿಯನ್ನು ಚೀನಾದ ಬೇಯಿಹಂಗ್ ವಿಶ್ವವಿದ್ಯಾಲಯವು (BUAA), ದಕ್ಷಿಣ ಕೊರಿಯದ ಸೋಲ್ ನ್ಯಾಷನಲ್ ಯೂನಿವರ್ಸಿಟಿಯ ಸಹಯೋಗದೊಂದಿಗೆ ಈ ವೃತ್ತಿ ಶಿಕ್ಷಣವನ್ನು ಪ್ರದಾನ ಮಾಡುತ್ತದೆ.

ಜನಪ್ರಿಯ ಸಂಸ್ಕೃತಿ

[ಬದಲಾಯಿಸಿ]

"ರಾಕೆಟ್ ವಿಜ್ಞಾನಿ" ಎಂಬ ಪದವನ್ನು ಕೆಲವೊಂದು ಬಾರಿ ಅತ್ಯಂತ ಬುದ್ಧಿಶಾಲಿ ವ್ಯಕ್ತಿಯನ್ನು ವಿವರಿಸಲು ಬಳಸಲಾಗುತ್ತದೆ. ಏಕೆಂದರೆ "ರಾಕೆಟ್ ವಿಜ್ಞಾನಕ್ಕೆ" ಹೆಚ್ಚಿನ ಬೌದ್ಧಿಕ ಸಾಮರ್ಥ್ಯ, ಅದರಲ್ಲೂ ವಿಶೇಷವಾಗಿ ತಾಂತ್ರಿಕ ಹಾಗು ಗಣಿತೀಯ ಸಾಮರ್ಥ್ಯದ ಅಗತ್ಯವಿರುತ್ತದೆಂದು ಹೇಳಲಾಗುತ್ತದೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಮುಂದುವರಿದ ಅಂತರಿಕ್ಷಯಾನ ಯಾನ ವಿಶ್ಲೇಷಣೆ
  • ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಅಂಡ್ ಆಸ್ಟ್ರೋನಾಟಿಕ್ಸ್
  • ವಿಮಾನ ಪರೀಕ್ಷೆ
  • ಅಂತರಿಕ್ಷಯಾನ ಯಾನ ಇಂಜಿನಿಯರಿಂಗ್‌ ಪಠ್ಯವಿಷಯಗಳ ಪಟ್ಟಿ
  • ಅಂತರಿಕ್ಷಯಾನ ಯಾನ ಇಂಜಿನಿಯರುಗಳ ಪಟ್ಟಿ
  • ರಷ್ಯಾದ ಅಂತರಿಕ್ಷಯಾನ ಯಾನ ಇಂಜಿನಿಯರುಗಳ ಪಟ್ಟಿ
  • ಅಸಮತೂಕಸ್ಥಿತಿಯ ಅನಿಲ ಹಾಗು ಪ್ಲ್ಯಾಸ್ಮ ಡೈನಾಮಿಕ್ ಗುಂಪು
  • ಸಿಗ್ಮಾ ಗಾಮ್ಮ ಟೂ (ಅಂತರಿಕ್ಷಯಾನ ಯಾನ ಇಂಜಿನಿಯರಿಂಗ್ ಗೌರವಪ್ರದಾನ ಮಾಡುವ ಸಂಘ)

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Stanzione, Kaydon Al (1989). "Engineering". Encyclopedia Britannica. Vol. 18 (15 ed.). Chicago. pp. 563–563.{{cite encyclopedia}}: CS1 maint: location missing publisher (link)
  2. ರಾಕೆಟ್ ವಿಜ್ಞಾನ, ರಾಕೆಟ್ರಿ. Dictionary.com.
  3. "ಡ್ರೀಮ್ ಜಾಬ್ಸ್: ರಾಕೆಟ್ ವಿಜ್ಞಾನಿ". Archived from the original on 2009-03-21. Retrieved 2010-12-29.
  4. "Career: Aerospace Engineer". Career Profiles. The Princeton Review. Retrieved 2006-10-08. Due to the complexity of the final product, an intricate and rigid organizational structure for production has to be maintained, severely curtailing any single engineer's ability to understand his role as it relates to the final project.
  5. "Sir George Carley". Retrieved 2009-07-26. Sir George Cayley is one of the most important people in the history of aeronautics. Many consider him the first true scientific aerial investigator and the first person to understand the underlying principles and forces of flight.
  6. "Sir George Carley (British Inventor and Scientist)". Britannica. Retrieved 2009-07-26. English pioneer of aerial navigation and aeronautical engineering and designer of the first successful glider to carry a human being aloft.
  7. "The Pioneers: Aviation and Airmodelling". Archived from the original on 2019-02-08. Retrieved 2009-07-26. Sir George Cayley is sometimes called the 'Father of Aviation'. A pioneer in the field, he is credited with the first major breakthrough in heavier-than-air flight. He was the first to identify the four aerodynamic forces of flight – weight, lift, drag, and thrust – and their relationship and also the first to build a successful human carrying glider.
  8. Kermit Van Every (1988). "Aeronautical engineering". Encyclopedia Americana. Vol. 1. Grolier Incorporated.
  9. "ನಾಸಾ ದ ಒಂದು ಸಂಕ್ಷಿಪ್ತ ಇತಿಹಾಸ". Archived from the original on 2010-11-18. Retrieved 2010-12-29.
  10. "Science: Engineering: Aerospace". Open Site. Archived from the original on 2006-08-11. Retrieved 2006-10-08.
  11. ೧೧.೦ ೧೧.೧ Gruntman, Mike (September 19, 2007). The Time for Academic Departments in Astronautical Engineering. AIAA SPACE 2007 Conference & Exposition. AIAA. Archived from the original on ಅಕ್ಟೋಬರ್ 18, 2007. Retrieved ಡಿಸೆಂಬರ್ 29, 2010. {{cite conference}}: Unknown parameter |booktitle= ignored (help); Unknown parameter |conferenceurl= ignored (help)
  12. ಅಮೆರಿಕದ ಅತ್ಯುತ್ತಮ ಕಾಲೇಜುಗಳು 2009: ಅಂತರಿಕ್ಷಯಾನ/ ವಾಯುಯಾನವಿಜ್ಞಾನ / ಅಂತರಿಕ್ಷಯಾನ (ಇಲ್ಲಿ ಡಾಕ್ಟರೇಟ್ ಅತ್ಯುನ್ನತ ಪದವಿಯಾಗಿದೆ) Archived 2011-01-06 ವೇಬ್ಯಾಕ್ ಮೆಷಿನ್ ನಲ್ಲಿ.. USNews.com
  13. ಅಮೆರಿಕದ ಅತ್ಯುತ್ತಮ ಕಾಲೇಜುಗಳು 2009: ಅಂತರಿಕ್ಷಯಾನ/ ವಾಯುಯಾನವಿಜ್ಞಾನ / ಅಂತರಿಕ್ಷಯಾನ (ಇಲ್ಲಿ ಡಾಕ್ಟರೇಟ್ ನೀಡಲಾಗುವುದಿಲ್ಲ) Archived 2011-01-01 ವೇಬ್ಯಾಕ್ ಮೆಷಿನ್ ನಲ್ಲಿ.. USNews.com
  14. Youtube.com
  15. "Mentornet.net". Archived from the original on 2010-06-12. Retrieved 2010-12-29.
  16. "ಆರ್ಕೈವ್ ನಕಲು". Archived from the original on 2010-12-28. Retrieved 2010-12-29.
  17. http://www.ryerson.ca/aerospace/
  18. "ಆರ್ಕೈವ್ ನಕಲು". Archived from the original on 2013-03-15. Retrieved 2010-12-29.
  19. ಯೂನಿವರ್ಸಿಟಿ ರಾಂಕಿಂಗ್ಸ್ ಲೀಗ್ ಟೇಬಲ್ 2009
  20. "Grandpix.com: ದಿ ಇಂಪೀರಿಯಲ್ ಕಾಲೇಜ್". Archived from the original on 2012-05-21. Retrieved 2010-12-29.


ಬಾಹ್ಯ ಕೊಂಡಿಗಳು

[ಬದಲಾಯಿಸಿ]