ಸಂಖ್ಯೆ
ಸಂಖ್ಯೆ ಎನ್ನುವುದು ಎಣಿಕೆ ಮತ್ತು ಅಳತೆಯಲ್ಲಿ ಉಪಯೋಗಿಸುವ ಒಂದು ಅಮೂರ್ತ ಕಲ್ಪನೆ / ಪ್ರತೀಕ. ಗಣಿತಶಾಸ್ತ್ರದಲ್ಲಿ, ಸಂಖ್ಯೆಯ ಪರಿಕಲ್ಪನೆಯನ್ನು ವಿಸ್ತರಿಸಿ ಸ್ವಾಭಾವಿಕ ಸಂಖ್ಯೆಗಳು,[೧] ಸೊನ್ನೆ, ಧನ ಸಂಖ್ಯೆಗಳು (positive numbers), ಋಣ ಸಂಖ್ಯೆಗಳು (negative numbers) ಇನ್ನೂ ಮುಂತಾದ ಹೊಸ ರೀತಿಯ ಸಂಖ್ಯೆಗಳನ್ನೂ ಸೇರಿಸಿಕೊಳ್ಳಲಾಗಿದೆ.
ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮುಂತಾದ ಸಂಖ್ಯೆಗಳ ಮೇಲೆ ಮಾಡುವ ಕ್ರಿಯೆಗಳ ಅಭ್ಯಾಸಕ್ಕೆ ಸಂಖ್ಯಾಗಣಿತ ಎನ್ನುವರು.
ಪ್ರಪಂಚದಾದ್ಯಂತ ವ್ಯವಹಾರದಲ್ಲಿರುವ ಹಿಂದು-ಅರ‍್ಯಾಬಿಕ್ ಪದ್ಧತಿಯಲ್ಲಿ ಹತ್ತು ವಿಭಿನ್ನ ಪ್ರತೀಕಗಳಿವೆ: 0, 1, 2, 3, 4, 5, 6, 7, 8, 9. ಇವು ಅಂಕೆಗಳು (ನ್ಯೂಮರಲ್ಸ್).[೨] ಇವುಗಳ ವಿವಿಧ ಸಂಯೋಜನೆಗಳೇ ಸಂಖ್ಯೆಗಳು.
ಸಂಖ್ಯಾಪ್ರಭೇದಗಳು
[ಬದಲಾಯಿಸಿ]ನೈಜ, ಮಿಶ್ರ, ಪರಿಮೇಯ, ಅಪರಿಮೇಯ, ಪೂರ್ಣಾಂಕ, ಭಿನ್ನರಾಶಿ, ಕರಣಿ, ಬೀಜಾತೀತ, ಋಣ, 0, ಧನ
- ನೈಜ ಸಂಖ್ಯೆಗಳಿಗೆ (ರಿಯಲ್ ನಂಬರ್ಸ್) ಉದಾಹರಣೆಗಳು: -5, 4/3, π, ಇತ್ಯಾದಿ.
- ಪರಿಮೇಯ (ರ‍್ಯಾಶನಲ್): ಇತ್ಯಾದಿ
- ಪೂರ್ಣಾಂಕ (ಇಂಟಿಜರ್): 37, -43 ಇತ್ಯಾದಿ
- ಭಿನ್ನರಾಶಿ (ಫ್ರ್ಯಾಕ್ಷನ್): ಇತ್ಯಾದಿ
- ಋಣ (ನೆಗೆಟಿವ್): -43, -107 ಇತ್ಯಾದಿ
- ಧನ (ಪಾಸಿಟಿವ್): 37, 149 ಇತ್ಯಾದಿ
- ಅಪರಿಮೇಯ (ಇರ‍್ಯಾಶನಲ್): , π, e ಇತ್ಯಾದಿ
- ಕರಣಿ (ಸರ್ಡ್): ಇತ್ಯಾದಿ
- ಬೀಜಾತೀತ (ಟ್ರಾನ್ಸೆಂಡೆಂಟಲ್): e, π ಇತ್ಯಾದಿ
- ಮಿಶ್ರ (ಕಾಂಪ್ಲೆಕ್ಸ್): -1 + 3i, 2 - 7i ಇತ್ಯಾದಿ
e (ಇದರ ಮೊತ್ತ 2 ಮತ್ತು 3ರ ನಡುವೆ ಇದೆ)
π = ವೃತ್ತಪರಿಧಿ ÷ ವ್ಯಾಸ (ಇದರ ಬೆಲೆ 3 ಮತ್ತು 4 ರ ನಡುವೆ ಇದೆ).
ಮಿಶ್ರ ಸಂಖ್ಯೆಯನ್ನು a+ib ರೂಪದಲ್ಲಿ ಬರೆಯುವುದು ವಾಡಿಕೆ. ಇಲ್ಲಿ a ಮತ್ತು b ನೈಜ ಸಂಖ್ಯೆಗಳು, ಅಥವಾ i2 = -1
ಮೌಲ್ಯ | ಕನ್ನಡ ಸಂಖ್ಯೆ | ಆಂಗ್ಲ ಸಂಖ್ಯೆ |
---|---|---|
ಸೊನ್ನೆ | ೦ | 0 |
ಒಂದು | ೧ | 1 |
ಎರಡು | ೨ | 2 |
ಮೂರು | ೩ | 3 |
ನಾಲ್ಕು | ೪ | 4 |
ಐದು | ೫ | 5 |
ಆರು | ೬ | 6 |
ಏಳು | ೭ | 7 |
ಎಂಟು | ೮ | 8 |
ಒಂಬತ್ತು | ೯ | 9 |
ಮೌಲ್ಯ | ಕನ್ನಡ ಸಂಖ್ಯೆ | ಆಂಗ್ಲ ಸಂಖ್ಯೆ |
---|---|---|
ಹತ್ತು | ೧೦ | 10 |
ನೂರು | ೧೦೦ | 100 |
ಐನೂರು | ೫೦೦ | 500 |
ಸಾವಿರ | ೧೦೦೦ | 1000 |
ಲಕ್ಷ | ೧೦೦೦೦೦ | 100000 |
ಕೋಟಿ | ೧೦೦೦೦೦೦೦ | 10000000 |
ಕಾಲದೊಂದಿಗೆ ಕನ್ನಡ ಲಿಪಿಯು ಹಲವಾರು ಬದಲಾವಣೆಗಳನ್ನು ಹೊಂದಿದೆ. ಅಂತೆಯೇ ಸಂಖ್ಯೆಗಳನ್ನು ಬರೆಯವ ರೀತಿಯಲ್ಲೂ ಅನೇಕ ಮಾರ್ಪಾಟುಗಳಾಗಿವೆ.ಸಂಖ್ಯಾ ಇತಿಹಾಸವು ಭಾಷಾ ವಿಜ್ಞಾನದ ಪ್ರಮುಖ ವಿಭಾಗವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "number, n." OED Online (in ಬ್ರಿಟಿಷ್ ಇಂಗ್ಲಿಷ್). Oxford University Press. Archived from the original on 2018-10-04. Retrieved 2017-05-16.
- ↑ "numeral, adj. and n." OED Online. Oxford University Press. Archived from the original on 2022-07-30. Retrieved 2017-05-16.