ಉತ್ತರ ಮೀಮಾಂಸಾ
ಉತ್ತರ ಮೀಮಾಂಸಾ -ವೇದಾಂತ ದರ್ಶನ : ಬ್ರಹ್ಮ ಮೀಮಾಂಸೆ
ಪೀಠಿಕೆ
[ಬದಲಾಯಿಸಿ]- ಅತ್ಯಂತ ಜನಪ್ರಿಯ ಮತ್ತು ಪ್ರತಿಷ್ಠೆಯ ಸ್ಥಾನವನ್ನು ಪಡೆದಿರುವ ತತ್ವ ಮಾರ್ಗವೇ ವೇದಾಂತ. ವೇದಾಂತ ವೆಂದರೆ ಅದು ಕೇವಲ ಅದ್ವೈತವಲ್ಲ; ಅಥವಾ ದ್ವೈತವಲ್ಲ; ;ರಾಮಾನುಜರ ಕೇವಲ ವಿಶಿಷ್ಟಾದ್ವೈತವೂ ಅಲ್ಲ;; ಇದುಅದ್ವೈತ,ದ್ವೈತ, ವಿಶಿಷ್ಟಾದ್ವೈತವೂ, ಸೇರಿ,ಇತರೆ ತತ್ವ ಸಿದ್ಧಾಂತಗಳ, ಉಪನಿಷತ್ ಗಳ ಆಧಾರಿತ ದರ್ಶನ; ಇದು ಬಾದರಾಯಣರ ಬ್ರಹ್ಮ ಸೂತ್ರಗಳಿಗೆ ಆಧಾರ, ಭಗವದ್ಗೀತೆ ಇದರ ವಿಸ್ತಾರ ವಿವೇಚನೆ, ಇವೆಲ್ಲದರ ಆಧಾರದ ಮೇಲೆ ಆಧುನಿಕ ಯುಗದಲ್ಲಿ ಬೇಧಾಬೇಧ, ಶುದ್ಧಾದ್ವೈತ, ದ್ವೈತಾದ್ವೈತ, ಅಚಿಂತ್ಯ ಬೇಧಾಬೇಧ , ಮೊದಲಾದ ನಾನಾ ಸಿದ್ಧಾಂತಗಳು , ಚಂತನೆಗಳು , ಉದಯಿಸಿದವು. ಅದು ವೇದಕಾಲದಿಂದ ಈ ವರೆಗೆ ಬೆಳೆದುಬಂದ ವಿಶ್ವದ ಮೂಲ ತತ್ವದ-ತತ್ವಗಳ, ಆತ್ಮ-ಜೀವಗಳ, ಜಗತ್ತಿನ- ಮಾನವನ ಅಂತರಂಗದ ಸತ್ಯಗಳ ಹುಡುಕಾಟದ ಇತಿಹಾಸ. ಅದರಲ್ಲಿ ಅನೇಕ ಸಿದ್ಧಾಂತಗಳ ಸಮೂಹವೇ ಇದೆ. ಈಗಲೂ ಅದರ ಚರ್ಚೆ ಹೊಸ ಹೊಸ ಸಿದ್ದಾಂತಗಳು ಹೊಸ ಅರ್ಥಗಳೊಂದಿಗೆ ಸೇರ್ಪಡೆ ಆಗುತ್ತಿದೆ.
- ವೇದಾಂತವೆಂದರೆ ವೇದದ ಕೊನೆಯ ಭಾಗ ;ಎಂದರೆ ಉಪನಿಷತ್ತು . ಅವುಗಳನ್ನು ಆಧಾರವಾಗಿಟ್ಟುಕೊಂಡು ತಾತ್ವಿಕ ಸಿದ್ಧಾಂತ ಮಾಡಿರುವುದು ವೇದಾಂತ ದರ್ಶನ. ವೇದದ ಕೊನೆಯ ಭಾಗದ ವ್ಯಾಖ್ಯಾನ : 'ಮೀಮಾಂಸ' ವೆಂದರೆ ಆಳವಾದ ವಿಚಾರ . ವೇದದ ಉತ್ತರ ಭಾಗದ ಎಂದರೆ ಕೊನೆಯ ಭಾಗವಾದ ಉಪನಿಷತ್ತಿನ ಆಳವಾದ ವಿಚಾರ ವಿಮರ್ಶೆಯೇ ಉತ್ತರ ಮೀಮಾಂಸೆ. ಇದಕ್ಕೆ "ಬ್ರಹ್ಮ ಮೀಮಾಂಸೆ" ಎಂದೂ ಹೆಸರಿದೆ. ಉಪನಿಷತ್ತಿನಲ್ಲಿ ಹೇಳಿದ ಎಲ್ಲದಕ್ಕೂ ಮೂಲವಾದ ಚೈತನ್ಯ -ಬ್ರಹ್ಮದ ವಿಚಾರ ಮಾಡುವುದರಿಂದ ಇದು "ಬ್ರಹ್ಮ ಮೀಮಾಂಸೆ" ಎಂದೂ ಹೆಸರು ಪಡೆದಿದೆ. (ಓಂ ತತ್ಸತ್)
ವೇದ ವಿಭಾಗ :
[ಬದಲಾಯಿಸಿ]- ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಎಂದು ನಾಲ್ಕು ವೇದಗಳು
- ಪ್ರತಿಯೊಂದಕ್ಕೂ, ಮಂತ್ರ , ಬ್ರಾಹ್ಮಣ , ಅರಣ್ಯಕ , ಉಪನಿಷತ್ತೆಂದು ನಾಲ್ಕು ವಿಭಾಗಗಳಿವೆ ಮಂತ್ರಗಳೆಂದರೆ ಮುಖ್ಯವಾಗಿ ದೇವತಾ ಸ್ತುತಿಗಳು ; ಬ್ರಾಹ್ಮಣ ಗ್ರಂಥಗಳು ಆ ಮಂತ್ರಗಳನ್ನು ಉಪಯೋಗಿಸುವ, ಯಜ್ಞ ಯಾಗಾದಿಗಳ ವಿವೇಚನೆಯನ್ನು ಮಾಡುತ್ತವೆ . ಅರಣ್ಯಕಗಳಲ್ಲಿ , ಬ್ರಾಹ್ಮಣಗಳು ಹೇಳದೇ ಬಿಟ್ಟರುವ, ಶ್ರೌತ (ಶೃತಿ -ಅಲ್ಲ; ಶ್ರುತಿ=ವೇದ-ಶ್ರೌತ-ವೇದಕ್ಕೆ ಸಂಬಂಧಪಟ್ಟ) ವಿಧಿ, ಯಜ್ಞ ಯಾಗಾದಿಗಳ ವಿವೇಚನೆ ಇದೆ. ಉಪನಿಷತ್ತುಗಳಲ್ಲಿ ಯಜ್ಞ ಯಾಗಗಳ ವಿಷಯಗಳಿವೆಯಾದರೂ, ಬ್ರಹ್ಮ ಜ್ಞಾನಕ್ಕೆ ಸಂಬಂಧಿಸಿದ ವಿಷಯಕ್ಕೇ ಪ್ರಾಧಾನ್ಯತೆ ಇದೆ. ಬ್ರಹ್ಮಚರ್ಯ, ಗೃಹಸ್ತ , ವಾನಪ್ರಸ್ಥ , ಸಂನ್ಯಾಸ- ಈ, ನಾಲ್ಕು ಆಶ್ರಮಗಳಲ್ಲಿ ನಾಲ್ಕು ವಿಭಾಗಗಳ ಅಧ್ಯಯನ , ಅನುಷ್ಠಾನಗಳೆಂದು ಹೇಳುತ್ತಾರೆ .
- ಮೀಮಾಂಸಕರು ವೇದ ವೆಂದರೆ, ಮಂತ್ರ ಬ್ರಾಹ್ಮಣಗಳು ಮಾತ್ರವೆಂದು ಹೇಳುತ್ತಾರೆ. (ಮಂತ್ರ ಬ್ರಾಹ್ಮಣಯೋರ್ವೇದಃ) . ಅವರಿಗೆ ಅದೇ ಪ್ರಧಾನವಾದರೆ, ವೇದಾಂತಿಗಳಿಗೆ ಉಪನಿಷತ್ತುಗಳೇ ಪ್ರಧಾನವಾದುದು . ವೇದ ಮಂತ್ರ ಮತ್ತು ಬ್ರಾಹ್ಮಣಗಳಲ್ಲೂ ಉನ್ನತ ದಾರ್ಶನಿಕ ವಿಚಾರಗಳು ಬರುತ್ತವೆ. ಅದರ ಜೊತೆಯಲ್ಲಿ ಬಹಳಷ್ಟು ಮಂತ್ರಗಳು ದೇವತಾ ಸ್ತುತಿ , ಯಜ್ಞ ಯಾಗ , ಲೌಕಿಕ ವಿಚಾರಗಳಿಗೆ ಸಂಬಂಧಪಟ್ಟವು ಇವೆ.
- ವೇದ ಮತ್ತು ವೇದಾಂತ ಯಜ್ಞ ಯಾಗಗಳಿಗೆ ಪ್ರಾಮುಖ್ಯತೆ ಕೊಟ್ಟವರು, ಬ್ರಾಹ್ಮಣರು . ಉಪನಿಷತ್ತುಗಳನ್ನು ಕಂಡುಕೊಂಡವರು ಮೊದಲು ಕ್ಷತ್ರಿಯರು . ಕ್ಷತ್ರಿಯರಾದ ಜನಕನೇ ಮೊದಲಾದವರಿಂದ ಬ್ರಾಹ್ಮಣರು ಬ್ರಹ್ಮ ಜ್ಞಾನದ ಉಪದೇಶ ಪಡೆದುಕೊಂಡರು . ಆದರೆ ಬ್ರಹ್ಮ ವಿದ್ಯೆ ಕ್ಷತ್ರಿಯರಿಗೇ ಮೀಸಲಾಗಿರಲಿಲ್ಲ. ಅಲ್ಲದೆ ಯಜ್ಞ ಯಾಗಾದಿಗಳಿಗೆ ಕೂಡ ಕ್ಷತ್ರಿಯರೇ ಆಧಾರವಾಗಿದ್ದರು . ಹೀಗೆ ಅವೆರಡೂ ಜೊತೆ ಜೊತೆಯಾಗಿಯೇ ಸಾಗಿ ಬಂದವು .
- ಕರ್ಮಮಾರ್ಗಿಗಳು ಅಥವಾ ಮೀಮಾಂಸಕರು ಯಜ್ಞ ಯಾಗಗಳಿಗೆ ಪ್ರಾಮುಖ್ಯತೆ ಕೊಟ್ಟರು. ಜ್ಞಾನ ಮಾರ್ಗಿಗಳು ಉಪನಿಷತ್ತು ಮತ್ತು ಬ್ರಹ್ಮ ವಿಚಾರಕ್ಕೆ ಪ್ರಾಶಸ್ತ್ಯ ಕೊಟ್ಟರು. ಈ ಸ್ಪರ್ಧೆಯಲ್ಲಿ ಕರ್ಮಕ್ಕೆ ಸ್ವರ್ಗ; ಜ್ಞಾನಕ್ಕೆ ಮೋಕ್ಷವೆಂದಾಯಿತು . ಆದರೂ ಕರ್ಮವನ್ನು ಬಿಡದೆ, ಅದನ್ನೂಮಾಡಿ ಈಶ್ವರಾರ್ಪಣ ಮಾಡಿದರೆ, ಮೋಕ್ಷವೆಂದು ರೂಢಿಯೊಳಗೆ ಬಂದು, ಭಕ್ತಿ ಮಾರ್ಗ ಹುಟ್ಟಿಕೊಂಡಿತು.
ಪ್ರಾಚೀನ ಉಪನಿಷತ್ತುಗಳು :
[ಬದಲಾಯಿಸಿ]- ಉಪನಿಷತ್ತುಗಳು, ೨೫೦ರ ವರೆಗೂ ಇರಬಹುದು, ಇದರಲ್ಲಿ ಅಲ್ಲೋಪನಿಷತ್(ಮುಸ್ಲಿಮರ ಅಲ್ಲಾನ ಕುರಿತದ್ದು) ಮನ್ಮಥೋಪನಿಷತ್ ಗಳೂಸೇರಿವೆ. ಆದರೆ ಪ್ರಾಚೀನ ಪರಂಪರೆಯವು ೧೦೮ ಉಪನಿಷತ್ತುಗಳು ಮಾತ್ರವೆಂದು ಹೇಳುತ್ತಾರೆ.
- ಋಗ್ವೇದಕ್ಕೆ ಸಂಬಂಧಿಸಿದುದು, ಐತರೇಯ, ಕೌಷೀತಕೀ ;
- ಯಜುರ್ವೇದಕ್ಕೆ ಸಂಬಂಧಪಟ್ಟುದು, -ತೈತ್ತರೀಯ, ಮಹಾನಾರಾಯಣ, ಕಠ, ಶ್ವೇತಾಶ್ವೇತರ , ಮೈತ್ರಾಯಣೀ , ಈಶಾವಾಸ್ಯ, ಮತ್ತು ಬೃಹದಾರಣ್ಯಕ .
- ಸಾಮವೇದದ್ದು, ಕೇನ , ಛಾಂದೋಗ್ಯ ,
- ಅಥರ್ವವೇದದ ಉಪನಿಷತ್ತುಗಳು , ಪ್ರಶ್ನ , ಮುಂಡಕ , ಮಾಂಡೂಕ್ಯ ಉಪನಿಷತ್ತುಗಳು.
- ಇವುಗಳಲ್ಲಿ ಈಶ, ಕಠ , ಕೇನ , ಮುಂಡಕ , ಮಾಂಡೂಕ್ಯ , ಬೃಹದಾರಣ್ಯಕ , ಛಾಂದೋಗ್ಯ , ತೈತ್ತರೀಯ, ಪ್ರಶ್ನ , ಮತ್ತು ಶ್ವೇತಾಶ್ವೇತರ ಗಳನ್ನು ದಶೋಪನಿಷತ್ತೆಂದು ಕರೆಯಲಾಗಿದೆ. ಇದರಲ್ಲಿ ಛಾಂದೋಗ್ಯವು ಅತ್ಯಂತ ಪ್ರಾಚೀನವೆನ್ನುತ್ತಾರೆ .
ಉಪನಿಷತ್ತುಗಳ ದರ್ಶನ :
[ಬದಲಾಯಿಸಿ]- ಉಪನಿಷತ್ ಎಂದರೆ ರಹಸ್ಯ ವಿದ್ಯೆ . ಬ್ರಹ್ಮ ತತ್ವದ ವಿದ್ಯೆ . ಜರಾ ಮರಣ ರಹಿತ ಆನಂದ ಗಳಿಸುವ ರಹಸ್ಯ ವಿದ್ಯೆ . ಆತ್ಮ , ಬ್ರಹ್ಮ , ಜಗತ್ತು -ಇವುಗಳ ಪರಸ್ಪರ ಸಂಬಂಧ - ಮತ್ತು ಜ್ಞಾನವನ್ನು ಅರಸುವ ವಿಚಾರ.
ಇವುಗಳೆಲ್ಲಾ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆಯವರಿಂದ ರಚಿಸಲ್ಪಟ್ಟವು . (ದರ್ಶನ ಪಡೆದವುಗಳು -ಗೋಚರಿಸಿದ್ದು) . ಆಗಿದ್ದು ಒಂದೇ ದರ್ಶನ(ಸಿದ್ಧಾಂತ) ವನ್ನು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ . ಇವುಗಳಲ್ಲಿ ಸಮನ್ವಯ ಕಷ್ಟ . ಆದರೆ ಅದರಲ್ಲಿ ಅನೇಕ ದಾರ್ಶನಿಕ ಪಂಥದ ಬೀಜಗಳಿವೆ. ವೈದಿಕ -ಅವೈದಿಕ (ಜೈನ ,ಬೌದ್ಧ) ದರ್ಶನಗಳೂ ಈ ಉಪನಿಷತ್ ಗಳಿಂದ ಪ್ರಭಾವಿತವಾಗಿವೆ . ಆದ್ದರಿಂದ ವೈದಿಕ ದರ್ಶನಗಳಲ್ಲಿ ಯೂ ಪರಸ್ಪರ ಭಿನ್ನಾಭಿಪ್ರಾಯಗಳು ಇವೆ.
ಪ್ರಸ್ಥಾನ ತ್ರಯೀ - ಬ್ರಹ್ಮ ಸೂತ್ರ
[ಬದಲಾಯಿಸಿ]- ಈ ಉಪನಿಷತ್ತುಗಳನ್ನೆಲ್ಲಾ ಸಮನ್ವಯಗೊಳಿಸಿ ಒಂದೇ ದರ್ಶನ ಮಾಡುವ ಯತ್ನವೇ 'ಬ್ರಹ್ಮ ಸೂತ್ರ,' ಅಥವ ವೇದಾಂತ ಸೂತ್ರ,.
- ಈ ಬ್ರಹ್ಮ ಸೂತ್ರವನ್ನು ಬಾದರಾಯಣರು (ವ್ಯಾಸ ಮಹರ್ಷಿಗಳು ) ರಚಿಸಿದರೆಂದು ಹೇಳುತ್ತಾರೆ. ಇದರ ಕಾಲ ಸುಮಾರು ಕ್ರಿ.ಪೂ. ೫೦೦ ರಿಂದ ೩೦೦ . ಬ್ರಹ್ಮ ಸೂತ್ರ , ಉಪನಿಷತ್ , ಭಗವದ್ಗೀತೆ ಇವು ಮೂರನ್ನೂ ಪ್ರಸ್ಥಾನ ತ್ರಯೀ ಎನ್ನುತ್ತಾರೆ.
- ಬ್ರಹ್ಮ ಸೂತ್ರ ಒಂದು ಚಿಕ್ಕ ಗ್ರಂಥ. ಇದರಲ್ಲಿ ೫೫೫ ಸೂತ್ರಗಳಿವೆ . ನಾಲ್ಕು ಅಧ್ಯಾಯಗಳು - ಪ್ರತಿ ಅಧ್ಯಾಯವೂ ಅಧಿಕರಣಗಳಾಗಿ ವಿಂಗಡಣೆ ಗೊಂಡಿದೆ. ಅತ್ಯಂತ ಸಣ್ಣ ಸೂತ್ರ , ಅಣುಶ್ಚ . ಆದರೆ ಅದೇ ಆಧಾರಗಳಿಂದ ಅನೇಕ ಭಿನ್ನ ವ್ಯಾಖ್ಯಾನಗಳು ಹುಟ್ಟಿಕೊಂಡವು . ಆದರೆ ಅವು ಅಸಾಧಾರಣ ಸೂತ್ರಗಳೆಂಬುದರಲ್ಲಿ ಸಂಶಯವಿಲ್ಲ .
ಭಗವದ್ಗೀತೆ .
- ಅರ್ಜುನನ ಪ್ರಶ್ನೆಗಳಿಗೆ ಶ್ರೀ ಕೃಷ್ಣನು ನೀಡಿದ ಉತ್ತರ ರೂಪದಲ್ಲಿ ದಾರ್ಶನಿಕ ಸಮಸ್ಯೆಗಳನ್ನು ವಿವೇಚಿಸಿದೆ. ಇದನ್ನು ಉಪನಿಷತ್ತುಗಳ ಸಾರವೆಂದು ತಿಳಿಯಲಾಗುತ್ತದೆ . ಕಠ , ಮುಂಡಕ , ಬೃಹದಾಣ್ಯಕ . ಕೌಷೀತಕೀ , ಬ್ರಾಹ್ಮಣ , ಇವು ಗೀತೆಯ ಆಕರಗಳು. ಸಾಂಖ್ಯ ಯೋಗ , ಬ್ರಹ್ಮ ವಾದ , ಭಕ್ತಿ ಮಾರ್ಗ , ಅವತಾರ ವಾದಗಳನ್ನು ಭಗವದ್ಗೀತೆ (ಗೀತೆ) ಒಗ್ಗೂಡಿಸಿದೆ . ಇಂದು ಗೀತೆ ಅತ್ಯಂತ ಜನಪ್ರಿಯ ಗ್ರಂಥ .
- ಮೂರು ದಾರಿಗಳು : ಭಗವದ್ಗೀತೆ , ಉಪನಿಷತ್ , ಬ್ರಹ್ಮ ಸೂತ್ರಗಳನ್ನು ಆಧರಿಸಿ ಮೂರು ಮುಖ್ಯವಾದ , ಅಭಿಪ್ರಾಯ / ಪಂಥಗಳು ಹೊರಟಿವೆ. ಇವು ವೇದಾಂತವೆಂಬ ಒಂದೇ ದರ್ಶನದ ಒಳ-ವಿವಾದ.
- ಅದ್ವೈತ :
- ವೇದಾಂತದ ಬಹು ಮುಖ್ಯ ಪ್ರಶ್ನೆ - ಕಾಣುವ ಜಗತ್ತು - ಅದರಲ್ಲಿ ಪ್ರವರ್ತಿಸುತ್ತಿರುವ ಜೀವಾತ್ಮ , ಮತ್ತು ಕಾರಣರೂಪವಾದ ಬ್ರಹ್ಮ (ಜೀವ -ಜಗತ್ತು - ದೇವರು ) ಈ ಮೂರರ ಸಂಬಂಧ ಕುರಿತದ್ದು. ವೇದಾಂತದಲ್ಲಿ ಈ ಮೂರರ ಸಂಬಂಧವು ಬೇಧವಿಲ್ಲದ ಏಕತ್ವ (ಅದ್ವೈತ )ವಿದೆ ಎಂಬುದು ಅದ್ವೈತ ವೇದಾಂತ .
- ದ್ವೈತ :
- ಈ ಮೇಲೆ ಹೇಳಿದ ಮೂರರಲ್ಲಿ ಅದರಲ್ಲೂ ಚೈತನ್ಯವಾದ ಜೀವ - ಬ್ರಹ್ಮ ಗಳಲ್ಲಿ ಯಾವಾಗಲೂ ಬೇಧವಿರುತ್ತದೆ , ಜೀವ - ಜೀವ, ಜೀವ- ಬ್ರಹ್ಮ ,ಜಗತ್ತು ಇವುಗಳು ಬೇರೆ ಬೇರೆಯಾದದ್ದು ಎಂಬುದು ದ್ವೈತ ವೇದಾಂತ.
- ವಿಶಿಷ್ಟಾದ್ವೈತ :
- ಜೀವ , ಜಗತ್ತು , ಬ್ರಹ್ಮ , ಇವು ಪ್ರತ್ಯೇಕವಾಗಿದ್ದರೂ, ಒಂದಾಗಿರುತ್ತವೆ -ಎಂಬುದು ಭೇದಾ ಭೇದ - ವಿಶಿಷ್ಟಾದ್ವೈತ.
- ವಿವಾದ:
- ಬ್ರಹ್ಮ ತತ್ವ : ಭ್ರಹ್ಮ ವೆಂಬುದು ಒಂದು ವ್ಯಾಪಕವಾದ ತತ್ವ (ಓ)ವೋ , ಅಥವಾ ಶಿವ , ವಿಷ್ಣು , ಮುಂತಾಗಿ ಒಂದು ವ್ಯಕ್ತಿಯಾದ ದೇವರೋ -ಪೌರಾಣೀಕ ರು ಕಂಡಂತೆ ;- ಇವೆಲ್ಲವೂ ಸೇರಿ ವೇದಾಂತ ಗೋಜಲಾಗಿದೆ.
- ವಿವಾದ ಮತ್ತು ಪಂಥಗಳು : ಬ್ರಹ್ಮ ಸೂತ್ರಗಳನ್ನು ಆಧರಿಸಿ ಸುಮಾರು ಹತ್ತು ಪಂಥಗಳಿವೆ. ಉಪನಿಷತ್ , ಬ್ರಹ್ಮಸೂತ್ರ , ಗೀತೆಗಳಲ್ಲಿ ಅದ್ವೈತ ಪರ ಹಾಗೂ , ದ್ವೈತ ಪರ ವಾಕ್ಯಗಳಿವೆ . ಒಂದೇ ವಾಕ್ಯವು ಬೇರೆ ಬೇರೆ ಅರ್ಥ ಕೊಡುವಂತಿದ್ದು ಅವರವರು ಬೇಕಾದಂತೆ ಅರ್ಥಮಾಡಿಕೊಳ್ಳಬಹುದು
ಉದಾಹರಣೆಗೆ :-
- ತತ್ವಮಸಿ - ತತ್ -ತ್ವಂ - ಅಸಿ ;ವಿಗ್ರಹ ವಾಕ್ಯ -ಅದು (ಬ್ರಹ್ಮ) ನೀನು ಆಗಿದ್ದೀಯೆ. -ಅದ್ವೈತ ಪರ ;.
- ತತ್ವಮಸಿ- ತಸ್ಯ , ತ್ವಂ , ಅಸಿ
- ನೀನು ಅವನವನು ಆಗಿದ್ದೀಯೆ - ವಿಶಿಷ್ಟಾದ್ವೈತ ಪರ ;
- ತತ್ವಮಸಿ- ಅತತ್ -ತ್ವಂ-ಅಸಿ
- (ಅಕಾರ ಅಧ್ಯಾಹಾರವಾಗಿದೆ ಎಂದು ಭಾವಿಸಿದೆ ) ನೀನು ಅವನಲ್ಲ : ದ್ವೈತ ಪರ,
- ಸೂತ್ರಗಳನ್ನೂ , ಶ್ಲೋಕಗಳನ್ನೂ ತಮ್ಮ ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಜಗ್ಗಾಡಿದ್ದಾರೆ.
- ಶ್ರೀ ಶಂಕರರ ಪ್ರಕಾರ ಅಬೇಧವನ್ನು ಹೇಳುವ ವಾಕ್ಯಗಳು ಮುಖ್ಯ , ಬೇಧವನ್ನು ಹೇಳುವ ವಾಕ್ಯಗಳು ಸಾಧಕರ ಉಪಾಸನೆಗಾಗಿ.
- ಮಧ್ವರ ಪ್ರಕಾರ , ಬೇಧವನ್ನು ಹೇಳುವ ವಾಕ್ಯಗಳು ಮುಖ್ಯ , ಅಬೇಧ ವಾಕ್ಯಗಳು ಅಲಂಕಾರ.
- ರಾಮಾನುಜಾಚಾರ್ಯ ಅಂತವರಿಗೆ - ಭೇದವೂ ನಿಜ ; ಅಭೇದವೂ ನಿಜ .
- ಭಾಷ್ಯಕಾರರು : ಉಪನಿಷತ್ತು , ಬ್ರಹ್ಮಸೂತ್ರ , ಗೀತೆಗಳಿಗೆ ಅನೇಕ ಭಾಷ್ಯಕಾರರು ಭಾಷ್ಯಗಳನ್ನು ಬರೆದಿದ್ದಾರೆ . ಅವರೆಲ್ಲರ ಅಭಿಪ್ರಾಯ ಬೇರೆ ಬೇರೆ . ಒಟ್ಟಿನಲ್ಲಿ ಮೇಲಿನ ಮೂರರಲ್ಲಿ ಯಾವುದಾದರೂ ಒಂದಕ್ಕೆ ಹೋಲಿಕೆಯಾಗುವುದು.
ಶ್ರೀ ಶಂಕರ ಭಾಷ್ಯ.
[ಬದಲಾಯಿಸಿ]- ಪ್ರಸ್ಥಾನತ್ರಯಕ್ಕೆ ಶ್ರೀ ಶಂಕರರ ಭಾಷ್ಯವೇ ಅತ್ಯಂತ ಪ್ರಾಚೀನವಾದುದು. ;ಅದಕ್ಕೂ ಹಿಂದಿನವು ಲಭ್ಯವಿಲ್ಲ.
- ಶ್ರೀ ಶಂಕರರ ಅದ್ವೈತಕ್ಕೆ ಮಾಯಾ ವಾದವೆಂದೂ ಹೇಳುತ್ತಾರೆ . ಅದರ ಪ್ರಕಾರ ಬ್ರಹ್ಮ ವೆಂಬ ಚೈತನ್ಯ ಶಕ್ತಿಯೋಂದೇ ಸತ್ಯ. ; ಅದೇ ಚಿತ್, ಆನಂದ , ಪ್ರಪಂಚವು ಬ್ರಹ್ಮದ ವಿಶಿಷ್ಟ ತೋರಿಕೆ ಮಾತ್ರಾ (ಕನಸಿನಂತೆ)
ಉಳಿದವರಿಗೆ , ಬ್ರಹ್ಮವು ಪ್ರಧಾನ ತತ್ವ . .ಜಗತ್ತು ,ಜೀವ ಸತ್ಯವಾದದ್ದು .(ಪಾಶ್ಚಿಮಾತ್ಯರು ಈ ಅಭಿಪ್ರಾಯವೇ ಸೂತ್ರಗಳಿಗೆ ಹತ್ತಿರವಾದುದು ಎಂದು ಭಾವಿಸುತ್ತಾರೆ.)
ಆಗಮಗಳು
[ಬದಲಾಯಿಸಿ]- ಪ್ರಾಚೀನವಾದ ಆಗಮಗಳು ವೇದಗಳ ಯಜ್ಞ ಸಂ ಸ್ಕೃ ತಿ ಯ ಬದಲಾಗಿ ಮೂರ್ತಿಪೂಜೆ ಸಂಸ್ಕೃತಿಯನ್ನು ನೆಲೆಗೊಳಿಸಿದವು. ಪೂಜೆಗಳು ಆಗಮೋಕ್ತ ನೆಲೆಗಳಲ್ಲಿ /ವಿಧಾನದಲ್ಲಿ ನೆಡೆಯುತ್ತವೆ.
- ಆಗಮಗಳು ನಾಲ್ಕು ಬಗೆ. ವೈಷ್ಣವ, ಶೈವ , ಶಾಕ್ತ , ಮತ್ತು ತಂತ್ರ.
- ವೈಷ್ಣವಾಗಮಗಳು ಪಂಚರಾತ್ರಾಗಮಗಳೆಂದು ಪ್ರಸಿದ್ಧವಾಗಿವೆ. ಐದು ರಾತ್ರಿಗಳಲ್ಲಿ ಅನಂತ , ಗರುಡ , ವಿಶ್ವಕ್ ಸೆನ , ಬ್ರಹ್ಮ ರುದ್ರರು ಕೇಶವನಿಂದ , ಕೇಳಿದ್ದರಿಂದ ಪಂಚರಾತ್ರವೆಂದು ಹೆಸರು ಬಂದಿದೆ. ತತ್ವ , ಮುಕ್ತಿಪ್ರದ, ಭಕ್ತಿ ಪ್ರದ, ಯೌಗಿಕ , ವೈಶೇಷಿಕಗಳೆಂಬ ಐದು ಜ್ಞಾನ ತಂತ್ರ ತಿಳಿಸುವುದರಿಂದ ಈ ಹೆಸರೆಂದು ನಾರದ ಸಂಹಿತೆ ಹೇಳುತ್ತದೆ. ಆಗಮಗಳು ಭಕ್ತಿ ಪ್ರಧಾನವಾಗಿದ್ದು , ಭಗವಂತನ ಅನುಗ್ರಹವೇ ಮುಕ್ತಿಗೆ ಕಾರಣವೆಂದು ಅವುಗಳ ಸಿದ್ಧಾಂತ . ಅವುಗಳ ಆರಾಧ್ಯ ದೈವವನ್ನೇ ಪರಬ್ರಹ್ಮವೆಂದು ಹೇಳುತ್ತದೆ. ವೈಷ್ಟವಾಗಮಕ್ಕೆ -ವಿಷ್ಣು , ಶೈವಾಗಮಕ್ಕೆ - ಶಿವ. ಶಾಕ್ತಕ್ಕೆ - ಶಕ್ತಿ (ಅಂಬಿಕೆ) . ಇತ್ಯಾದಿ.
ಆಗಮವು ದೇವಾಲಯ ನಿರ್ಮಾಣತಂತ್ರ ವಾಗಿದೆ. ಮೂರ್ತಿ ಪ್ರತಿಷ್ಠಾಪನೆ , ಪೂಜಾವಿಧಾನಗಳನ್ನು ವಿವರಿಸುತ್ತವೆ. ವೇದಗಳಂತೆ ಆಗಮಗಳೂ ಪ್ರಮಾಣ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿವೆ. ವೇದಾಂತವು ನಿಗಮಾಗಮಗಳನ್ನು (ನಿಗಮ=ವೇದ) ಪ್ರಮಾಣವೆಂದು ಒಪ್ಪುತ್ತವೆ
ಆಧುನಿಕ ಯುಗ :
[ಬದಲಾಯಿಸಿ]- ವೇದಾಂತದ ಮುಂದೆ ಇತರ ದರ್ಶನಗಳು ಸೋಲೊಪ್ಪಿಕೊಂಡಿವೆ..
- ವೇದಾಂತಕ್ಕೆ ಹೊಸ ಹೊಸ ವ್ಯಾಖ್ಯಾನಗಳು ಬರುತ್ತಿವೆ . ಉಪನಿಷತ್ತಿನಲ್ಲಿರುವುದು ತಾರ್ಕಿಕ ಚಿಂತನವಲ್ಲ. ಅನುಭಾವಿ ಸ್ಪಂದನ (ಇಂದ್ರಿಯಾತೀತ ಅನುಭವ) ಆದರೆ ವೇದಾಂತವು ಬ್ರಹ್ಮ ಮೋಕ್ಷಗಳಿಗೆ ಅತಿಯಾದ ಪ್ರಾಧಾನ್ಯತೆಯನ್ನು ನೀಡಿ ಜೀವನ ವಿರೋಧಿಯಾಯಿತು ಎಂಬುದು ಅದರ ಟೀಕಾಕಾರರ ಅಭಿಪ್ರಾಯ . ಇದರಲ್ಲಿ ಸತ್ಯಾಂಶವೂ ಇದೆ ಎಂಬುದು ಪ್ರಾಜ್ಞರ ಮತ. ಆಧುನಿಕ ವೇದಾಂತಿಗಳು ಅದನ್ನು ಒಪ್ಪಿ ( ಈ ಟೀಕೆಯನ್ನು) ಅದಕ್ಕೆ ಪರಿಹಾರಗಳನ್ನು ವೇದಾಂತದಲ್ಲಿಯೇ ತೋರಿಸಲು ಪ್ರಯತ್ನಿಸಿದ್ದಾರೆ.
- ಓಂ ತತ್ಸತ್.
- (ಮುಂದುವರೆಯುವುದು- ಎಡಿಟಿಂಗ್ +ವಿಷಯ ಸೇರಿಸುವಿಕೆ / ಮುಂದುವರೆದಿದೆ.)
ನೋಡಿ
[ಬದಲಾಯಿಸಿ]ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಗೀತೆ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ
ಆಧಾರ
[ಬದಲಾಯಿಸಿ]- ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.