ಕಾಸರಗೋಡು (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಸರಗೋಡು
ತಳಿಯ ಹೆಸರುಕಾಸರಗೋಡು
ಮೂಲಕಾಸರಗೋಡು
ವಿಭಾಗಕೆಲಸಗಾರ ತಳಿ. ಸಣ್ಣ ಗಾತ್ರ
ಬಣ್ಣಕಪ್ಪು, ಕಂದು, ಬೂದು, ಬಿಳಿ
ಮುಖಸಪೂರವಾಗಿ ನೀಳವಾಗಿರುತ್ತದೆ.
ಕೊಂಬುಸಣ್ಣ

ಕಾಸರಗೊಡ್/ಕಾಸರಗೋಡು ತಳಿಯ ತವರು ಉತ್ತರ ಕೇರಳದ ಕಾಸರಗೋಡು ಪ್ರಾಂತ್ಯ. ಕಾಸರಗೋಡ್ ಎಂಬ ಶಬ್ದವೇ ಕುಸಿರಕೂಡ್ ಅಥವಾ ಕಂಜಿರಕುಟ್ಟೊಮ್ ಎಂದು ಈಗ ಕರೆಯಲ್ಪಡುತ್ತಿರುವ ಕಾಡನ್ನು ಸೂಚಿಸುತ್ತಾದ್ದರಿಂದ ಕಂಜಿರಕುಟ್ಟೊಮ್ ಕಾಡುಗಳಿರುವ ಪ್ರದೇಶಗಳಲ್ಲೆಲ್ಲ ಕಾಸರಗೋಡು ತಳಿ ವ್ಯಾಪಿಸಿತ್ತು ಎಂಬ ವಾದವೂ ಇದೆ. ಚಿಕ್ಕಗಾತ್ರದ ತಳಿಗಳ ವರ್ಗಕ್ಕೆ ಸೇರುತ್ತದೆ ಕಾಸರಗೊಡ್. ಬಣ್ಣ ಸಾಮಾನ್ಯವಾಗಿ ಕಪ್ಪು, ಉಳಿದಂತೆ ಬಿಳಿ ಕೆಂಪು ಕೂಡ ಕಾಣಸಿಗುತ್ತವೆ. ಎತ್ತರ ೯೦ ರಿಂದ ೧೦೦ ಸೆಂಟಿಮೀಟರ್. ಕಾಸರಗೋಡ್ ತಳಿ ತನ್ನ ಖನಿಜಯುಕ್ತ ಹಾಲಿಗೆ ಪ್ರಸಿದ್ದಿ.

ಕಾಸರಗೋಡ್ ತಳಿಯ ಮತ್ತೊಂದು ವೈಶಿಷ್ಟ್ಯ ಕಪಿಲೆ ದನಗಳು. ಕಪಿಲೆ (ಕಪಿಲಾ ವರ್ಣದ) ದನಗಳು ವೇದಕಾಲದಿಂದಲೂ ಅತ್ಯಂತ ಶ್ರೇಷ್ಟವೆಂದು ಕೊಂಡಾಡಲ್ಪಟ್ಟವು. ಕಪಿಲೆ ದನಗಳ ಉತ್ಕೃಷ್ಟತೆ ಅವುಗಳ ಎಲ್ಲ ಉತ್ಪನ್ನಗಳಲ್ಲಿಯೂ ವ್ಯಕ್ತವಾಗುತ್ತದಂತೆ. ಘೃತ(ತುಪ್ಪ)ವಂತೂ ಅಮೃತವೆಂದೇ ಭಾವಿಸುತ್ತದೆ ಆಯುರ್ವೇದಶಾಸ್ತ್ರ. ತಾಮ್ರವರ್ಣದ ದೇಹ, ಬಿಳಿ ಕಣ್ಣು, ಉದ್ದನೆಯ ಬಾಲ, ಅಚ್ಚ ಬಿಳಿಬಣ್ಣದ ಬಾಲದ ತುದಿ, ಕಪ್ಪು ಗೊರಸು ಇದು ಕಪಿಲಾ ಗೋವುಗಳ ಸ್ಥೂಲ ಪರಿಚಯ. ಕಪಿಲೆ ದನಕ್ಕೆ ಹುಟ್ಟುವ ಕರು ಕಪಿಲೆಯೆ ಆಗಬೇಕೆಂದೇನೂ ಇಲ್ಲದ್ದರಿಂದ ಇವುಗಳೀಗ ಕಾಣಸಿಗುವುದೆ ಅಪರೂಪವಾಗಿದೆ. ಕಪಿಲೆ ದನ ಹೆಚ್ಚು ಇರುವುದು ಕಾಸರಗೊಡ್ ತಳಿಯಲ್ಲಿ, ಅಪರೂಪಕ್ಕೆ ಮಲೆನಾಡು ಗಿಡ್ಡ ತಳಿಯಲ್ಲೂ ಸಿಗುವುದಿದೆ. ಅತ್ಯಂತ ಕಡಿಮೆ ಬಂಡವಾಳ ಬೇಡುವ ಕಾಸರಗೊಡ್ ತಳಿ ಶೂನ್ಯಬಂಡವಾಳ ಕೃಷಿಗೆ ಹೇಳಿ ಮಾಡಿಸಿದಂತಹದ್ದು. ಈ ಪುಟ್ಟ ತಳಿ ಕೆಲಸವನ್ನು ಚುರುಕಿನಿಂದ ಮಾಡಬಲ್ಲುದು.

ಸರಕಾರಿ ಕಡತಗಳ ಅಂಕಿಅಂಶಗಳು ಕಾಸರಗೊಡ್ ತಳಿ ಸಾವಿರಾರು ಸಂಖ್ಯೆಯಲ್ಲಿ ಇವೆಯೆಂದು ಸಾರುತ್ತವಾದರೂ ವಸ್ತುಸ್ತಿತಿ ಹಾಗಿಲ್ಲ. ಅತ್ಯಂತ ವೇಗವಾಗಿ ನಾಶವಾಗುತ್ತಿರುವ ಭಾರತೀಯ ತಳಿಗಳಲ್ಲಿ ಕಾಸರಗೊಡ್ ಕೂಡ ಒಂದು.

ಚಿತ್ರಗಳು[ಬದಲಾಯಿಸಿ]

ಆಧಾರ/ಆಕರ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.