ಖೇರಿಗರ್ (ಗೋವಿನ ತಳಿ)
ಗೋಚರ
ಖೇರಿಗರ್ | |
---|---|
ತಳಿಯ ಹೆಸರು | ಖೇರಿಗರ್ |
ಮೂಲ | ಉತ್ತರ ಪ್ರದೇಶ ರಾಜ್ಯದ ಲಕೀಂಪುರ ಜಿಲ್ಲೆಯ ಖೇರಿ |
ವಿಭಾಗ | ಕೆಲಸಗಾರ ತಳಿ |
ಬಣ್ಣ | ಬಿಳಿ |
ಮುಖ | ನೀಳ ಮುಖ, ಕಪ್ಪು ಕಣ್ಣು, ಕಪ್ಪು ಮೂತಿ |
ಕೊಂಬು | ಸಣ್ಣ, |
ಕಾಲುಗಳು | ಶಕ್ತಿಯುತ |
ಕಿವಿ | ಕೆಳಬಾಗಿದ ಕಿವಿ |
ಖೇರಿಗರ್ ಮಧ್ಯಮಗಾತ್ರ ಅಥವಾ ಪುಟ್ಟಗಾತ್ರ ಗೋವು. ಆಕಳಿನ ಮೂಲ ಉತ್ತರಪ್ರದೇಶದ ಲಕೀಂಪುರ ಜಿಲ್ಲೆಯ ಖೇರಿ. ಖೇರಿ ಮೂಲ ಎಂದಿದ್ದರೂ, ಭಾರತ-ಟಿಬೇಟ್ ಗಡಿಯಗುಂಟ ಇರುವ ಬೆಟ್ಟಪ್ರದೇಶಗಳವರೆಗೂ ಇವುಗಳನ್ನು ಕಾಣಬಹುದು. ಕಡಿಮೆ ಆಹಾರ ಸೇವನೆ ಹಾಗೂ ಹೆಚ್ಚಿನ ಕೆಲಸದ ಸಾಮರ್ಥ್ಯ ಹೊಂದಿವೆ.[೧][೨] ಅದಕ್ಕಾಗಿಯೇ ಉತ್ತರ ಪ್ರದೇಶದ ಬುಡಕಟ್ಟು ಪ್ರದೇಶಗಳು ಸೇರಿದಂತೆ ಸಾರಿಗೆ ವ್ಯವಸ್ಥೆಗಳಿಲ್ಲದಿದ್ದಲ್ಲಿ ಮುಖ್ಯ ಸಾರಿಗೆ ಖೇರಿಗರ್. ಖೇರಿಗರ್ ಗಳದ್ದು ಶುದ್ಧ ಬಿಳಿಯ ಬಣ್ಣ, ಮುಖ, ಬಾಲದ ಕುಚ್ಚು ಮಾತ್ರ ಕಡುಗಪ್ಪು;. ಸ್ವಲ್ಪ ಮಾಳ್ವಿ ತಳಿಯನ್ನು ಹೋಲುತ್ತವಾದರೂ ಒಂದೆರಡು ಬಾರಿ ನೋಡಿದರೆ ಗುರುತಿಸಬಹುದಾದಷ್ಟು ವ್ಯತ್ಯಾಸಗಳಿವೆ. ಕರಾವು ಸ್ವಲ್ಪ ಕಡಿಮೆ; ದಿನಕ್ಕೆ ೩-೪ ಲೀಟರುಗಳು. ಖೇರಿಗರ್ ತಳಿಯ ಹೋರಿಗಳು ೪ ವರ್ಷಕ್ಕೇ ದುಡಿಯಲು ಸಮರ್ಥವಾಗಿ ಬಿಡುತ್ತವೆ. ಒಂದು ಜೊತೆ ಎತ್ತುಗಳು ಸಲೀಸಾಗಿ ಒಂದುವರೆ ಟನ್‌ಗಳಷ್ಟು ಭಾರವನ್ನು ೩೦-೩೫ ಮೈಲಿಗಳಷ್ಟು ದೂರವನ್ನು ಘಂಟೆಗೆ ೪ ಮೈಲಿಯಂತೆ ಎಳೆಯಬಲ್ಲವು.
ಚಿತ್ರಗಳು
[ಬದಲಾಯಿಸಿ]-
ಗಂಡು
-
ಹೆಣ್ಣು
ಆಧಾರ/ಆಕರ
[ಬದಲಾಯಿಸಿ]- 'ಗೋ ವಿಶ್ವಲೋಕ' ಜಾಲತಾಣದ 'ಗೋ ವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "Kherigarh cattle" (PDF). Uttar Pradesh State Biodiversity Board. Archived from the original (PDF) on 2015-11-17. Retrieved 2017-05-12.
- ↑ Pandey, AK; Sharma, R; Singh, Y; Prakash, BB; Ahlawat, SP. "Genetic diversity studies of Kherigarh cattle based on microsatellite markers". J Genet. 85: 117–22. doi:10.1007/bf02729017. PMID 17072080.