ರಾಷ್ಟ್ರೀಯ ಭದ್ರತೆ
ರಾಷ್ಟ್ರೀಯ ಭದ್ರತೆ ಎಂಬುದು ಆರ್ಥಿಕ ಶಕ್ತಿ, ಸೇನೆಯ ಶಕ್ತಿ ಮತ್ತು ರಾಜಕೀಯ ಶಕ್ತಿಯನ್ನು ಬಳಸಿಕೊಳ್ಳುವುದರ ಮೂಲಕ ಹಾಗೂ ರಾಜತಂತ್ರದ ಅನುಷ್ಠಾನದ ಮೂಲಕ ರಾಷ್ಟ್ರ-ಸಂಸ್ಥಾನದ ಉಳಿವನ್ನು ಕಾಯ್ದುಕೊಂಡು ಹೋಗುವುದಕ್ಕಿರುವ ಅವಶ್ಯಕತೆಯಾಗಿದೆ. IIನೇ ಜಾಗತಿಕ ಸಮರದ ನಂತರ ಬಹುಮಟ್ಟಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಈ ಪರಿಕಲ್ಪನೆಯು ಅಭಿವೃದ್ಧಿಯಾಯಿತು. ಆರಂಭಿಕವಾಗಿ ಸೇನೆಯ ಶಕ್ತಿಯ ಮೇಲೆ ಗಮನಹರಿಸುತ್ತಿದ್ದ ಇದು ಈಗ ವಿಭಿನ್ನ ಮುಖಗಳ ಒಂದು ವ್ಯಾಪಕ ಶ್ರೇಣಿಯನ್ನು ಒಳಗೊಳ್ಳುತ್ತದೆ ಮತ್ತು ಈ ವಿಭಿನ್ನ ಅಂಶಗಳು ರಾಷ್ಟ್ರದ ಸೇನಾಭದ್ರತೆ ಅಥವಾ ಆರ್ಥಿಕ ಭದ್ರತೆಯ ಮೇಲೆ ಹಾಗೂ ರಾಷ್ಟ್ರೀಯ ಸಮಾಜದಿಂದ ಸಮರ್ಥಿಸಲ್ಪಟ್ಟ ಮೌಲ್ಯಗಳ ಮೇಲೆ ಪ್ರಭಾವ ಬೀರುತ್ತವೆ. ಅಂತೆಯೇ, ರಾಷ್ಟ್ರೀಯ ಭದ್ರತೆಯನ್ನು ಹೊಂದುವ ಸಲುವಾಗಿ ರಾಷ್ಟ್ರವೊಂದು ಆರ್ಥಿಕ ಭದ್ರತೆ, ಶಕ್ತಿಯ ಭದ್ರತೆ, ಪರಿಸರೀಯ ಭದ್ರತೆ ಇತ್ಯಾದಿಗಳನ್ನು ಹೊಂದುವುದು ಅಗತ್ಯವಾಗಿರುತ್ತದೆ. ಭದ್ರತಾ ಬೆದರಿಕೆಗಳು ರಾಷ್ಟ್ರ-ಸಂಸ್ಥಾನಗಳಂಥ ಸಾಂಪ್ರದಾಯಿಕ ಶತ್ರುಗಳನ್ನು ಮಾತ್ರವೇ ಅಲ್ಲದೇ, ಭಯೋತ್ಪಾದಕ ಸಂಘಟನೆಗಳು, ಮಾದಕವಸ್ತುಗಳ ಒಕ್ಕೂಟಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಂಥ ರಾಷ್ಟ್ರೇತರ ಪಾತ್ರಧಾರಿಗಳನ್ನೂ ಒಳಗೊಂಡಿರುತ್ತವೆ; ನೈಸರ್ಗಿಕ ವಿಪತ್ತುಗಳು ಮತ್ತು ಘಟನೆಗಳನ್ನು ಒಳಗೊಂಡಂತೆ ಈ ವರ್ಗದಲ್ಲಿನ ಕೆಲವೊಂದು ಪ್ರಭಾವಗಳು ತೀವ್ರಸ್ವರೂಪದ ಪರಿಸರೀಯ ಹಾನಿಯನ್ನು ಉಂಟುಮಾಡುತ್ತವೆ ಎಂಬುದು ಗಮನಾರ್ಹ ಸಂಗತಿ.
ರಾಷ್ಟ್ರೀಯ ಭದ್ರತೆಯ ಖಾತ್ರಿನೀಡಲು ತೆಗೆದುಕೊಳ್ಳಲಾದ ಕ್ರಮಗಳಲ್ಲಿ ಇವು ಸೇರಿವೆ:
- ಮಿತ್ರರಾಷ್ಟ್ರಗಳನ್ನು ಒಟ್ಟುಗೂಡಿಸಲು ಹಾಗೂ ಬೆದರಿಕೆಗಳನ್ನು ದೂರವಿಡಲು ರಾಜತಂತ್ರವನ್ನು ಬಳಸುವಿಕೆ
- ಸಹಕಾರವನ್ನು ಅನುವುಗೊಳಿಸಲು ಅಥವಾ ಬಲವಂತವಾಗಿ ಸಾಧಿಸಲು ಆರ್ಥಿಕ ಶಕ್ತಿಯನ್ನು ಯುಕ್ತ ಕ್ರಮದಲ್ಲಿ ವ್ಯವಸ್ಥೆಗೊಳಿಸುವಿಕೆ
- ಸಮರ್ಥವಾದ ಸಶಸ್ತ್ರ ಪಡೆಗಳನ್ನು ನಿರ್ವಹಿಸುವಿಕೆ
- ನಾಗರಿಕ ರಕ್ಷಣೆ ಮತ್ತು ತುರ್ತುಸ್ಥಿತಿ ಸನ್ನದ್ಧತೆಯ ಕ್ರಮಗಳನ್ನು (ಭಯೋತ್ಪಾದನಾ-ನಿರೋಧಕ ಶಾಸನಗಳನ್ನು ಒಳಗೊಂಡಂತೆ) ಕಾರ್ಯಗತಗೊಳಿಸುವಿಕೆ
- ನಿರ್ಣಾಯಕ ಮೂಲಸೌಕರ್ಯದ ಚೇತರಿಸಿಕೊಳ್ಳುವಿಕೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸುವಿಕೆ
- ಬೆದರಿಕೆಗಳು ಮತ್ತು ಗೂಢಚರ್ಯೆಯನ್ನು ಪತ್ತೆಹಚ್ಚಲು ಮತ್ತು ಸೋಲಿಸಲು ಅಥವಾ ತಪ್ಪಿಸಲು, ಹಾಗೂ ರಹಸ್ಯವರ್ಗದ ಮಾಹಿತಿಯನ್ನು ಸಂರಕ್ಷಿಸಲು ಬೇಹುಗಾರಿಕೆ ಸೇವೆಗಳನ್ನು ಬಳಸಿಕೊಳ್ಳುವಿಕೆ
- ಆಂತರಿಕ ಬೆದರಿಕೆಗಳಿಂದ ರಾಷ್ಟ್ರವನ್ನು ಸಂರಕ್ಷಿಸುವ ಸಲುವಾಗಿ ಪ್ರತಿ-ಬೇಹುಗಾರಿಕೆ ಸೇವೆಗಳು ಅಥವಾ ರಹಸ್ಯ ಆರಕ್ಷಕರನ್ನು ಬಳಸಿಕೊಳ್ಳುವಿಕೆ
ವ್ಯಾಖ್ಯಾನಗಳು
[ಬದಲಾಯಿಸಿ]"ರಾಷ್ಟ್ರೀಯ ಭದ್ರತೆ"ಯ ಕುರಿತಾಗಿ ಸಾರ್ವತ್ರಿಕವಾಗಿ ಸ್ವೀಕರಿಸಲ್ಪಟ್ಟ ಯಾವುದೇ ಏಕೈಕ ವ್ಯಾಖ್ಯಾನವು ಲಭ್ಯವಿಲ್ಲ. ಈ ನಿದರ್ಶನದಲ್ಲಿ, ಫಾರ್ಲೆಕ್ಸ್ ಶಬ್ದಕೋಶದಿಂದ ಪಡೆಯಲಾದ ಶಬ್ದಕೋಶದ ಒಂದು ವಿಶಿಷ್ಟ ವ್ಯಾಖ್ಯಾನವು ರಾಷ್ಟ್ರೀಯ ಭದ್ರತೆಯನ್ನು ಈ ಕೆಳಕಂಡಂತೆ ವ್ಯಾಖ್ಯಾನಿಸುತ್ತದೆ:
ರಾಷ್ಟ್ರೀಯ ಭದ್ರತೆ ಎಂಬುದು, "ಆರ್ಥಿಕ ಶಕ್ತಿ, ಸೇನೆಯ ಶಕ್ತಿ ಮತ್ತು ರಾಜಕೀಯ ಶಕ್ತಿಯನ್ನು ಬಳಸಿಕೊಳ್ಳುವುದರ ಮೂಲಕ ಹಾಗೂ ರಾಜತಂತ್ರದ ಅನುಷ್ಠಾನದ ಮೂಲಕ ರಾಷ್ಟ್ರ-ಸಂಸ್ಥಾನದ ಉಳಿವನ್ನು ಕಾಯ್ದುಕೊಂಡು ಹೋಗುವುದಕ್ಕಿರುವ ಅವಶ್ಯಕತೆಯಾಗಿದೆ."
ಆದಾಗ್ಯೂ, ಈ ಪರಿಕಲ್ಪನೆಯ ಅನೇಕ ಬಳಕೆಗಳ ಒಂದು ಸ್ಥೂಲ ಅವಲೋಕನವನ್ನು ವೈವಿಧ್ಯಮಯವಾಗಿರುವ ವ್ಯಾಖ್ಯಾನಗಳು ಒದಗಿಸುತ್ತವೆ. ಈ ಪರಿಕಲ್ಪನೆಯು ಈಗಲೂ ಅಸ್ಪಷ್ಟವಾಗಿಯೇ ಉಳಿದುಕೊಂಡಿದೆ; ಸೇನೆಯ ಬೆದರಿಕೆ ಮತ್ತು ರಾಜಕೀಯ ದಬ್ಬಾಳಿಕೆಯಿಂದ ಪಡೆಯುವ ಸ್ವಾತಂತ್ರ್ಯಕ್ಕೆ ಆರಂಭದಲ್ಲಿ ಒತ್ತುನೀಡಿದ ಸರಳವಾದ ವ್ಯಾಖ್ಯಾನಗಳಿಂದ ಮೊದಲ್ಗೊಂಡು, ನಂತರ ಕುತರ್ಕದಲ್ಲಿ ಕಂಡುಬಂದ ಹೆಚ್ಚಳದವರೆಗೆ ಮತ್ತು ಕಾಲಕ್ಕೆ ತಕ್ಕಂಥ ಪರಿಸ್ಥಿತಿಗಳಿಗೆ ಹೊಂದಿಕೆಯಾಗುವಂಥ ಸೇನೆಗೆ ಸೇರಿರದ ಭದ್ರತೆಯ ಇತರ ಸ್ವರೂಪಗಳನ್ನು ಒಳಗೊಳ್ಳುವುದರವರೆಗಿನ ವ್ಯಾಖ್ಯಾನಗಳಿಂದ ಈ ಪರಿಕಲ್ಪನೆಯು ಹುಟ್ಟಿಕೊಂಡಿರುವುದೇ ಈ ಅಸ್ಪಷ್ಟತೆಗೆ ಕಾರಣ.[೧]: 1–6 [೨]: 52–54
ವಾಲ್ಟರ್ ಲಿಪ್ಮನ್ ಎಂಬಾತ 1943ರಲ್ಲಿ ಒಂದು ರಾಷ್ಟ್ರ ಮತ್ತು ಯುದ್ಧದ ಪರಿಭಾಷೆಯಲ್ಲಿ ಆರಂಭಿಕ ವ್ಯಾಖ್ಯಾನಗಳ ಪೈಕಿ ಒಂದನ್ನು ನೀಡಿದ:[೧]: 5
"ಯುದ್ಧವನ್ನು ತಪ್ಪಿಸುವುದಕ್ಕಾಗಿ ರಾಷ್ಟ್ರವು ತನ್ನ ನ್ಯಾಯಸಮ್ಮತವಾದ ಹಿತಾಸಕ್ತಿಗಳನ್ನು ತ್ಯಾಗಮಾಡುವ ಅವಶ್ಯಕತೆಯಿಲ್ಲದಿದ್ದಾಗ ರಾಷ್ಟ್ರವೊಂದು ಭದ್ರತೆಯನ್ನು ಹೊಂದಿರುತ್ತದೆ, ಮತ್ತು ಒಂದು ವೇಳೆ ಸವಾಲೆಸೆದರೆ, ಯುದ್ಧ ಮಾಡುವುದರ ಮೂಲಕ ಅವನ್ನು ಕಾಯ್ದುಕೊಂಡು ಹೋಗುವಲ್ಲಿ ಅದು ಸಮರ್ಥವಾಗಿರುತ್ತದೆ" ಎಂಬುದೇ ಆ ವ್ಯಾಖ್ಯಾನವಾಗಿತ್ತು.
1950ರಲ್ಲಿ, ಹೆರಾಲ್ಡ್ ಲ್ಯಾಸ್ವೆಲ್ ಎಂಬ ಓರ್ವ ರಾಜಕೀಯ ವಿಜ್ಞಾನಿಯು ನೀಡಿದ ನಂತರದ ವ್ಯಾಖ್ಯಾನವೊಂದು ಹೆಚ್ಚೂಕಮ್ಮಿ ಅದೇ ಮಗ್ಗುಲಿನಿಂದ, ಅಂದರೆ ಬಾಹ್ಯ ದಬ್ಬಾಳಿಕೆಯ ದೃಷ್ಟಿಕೋನದಿಂದ ರಾಷ್ಟ್ರೀಯ ಭದ್ರತೆಯೆಡೆಗೆ ನೋಡುತ್ತದೆ:[೧]: 79
"ವಿದೇಶಿ ನಿರಂಕುಶಾಜ್ಞೆಯಿಂದ ಸ್ವಾತಂತ್ರ್ಯವನ್ನು ಪಡೆಯುವುದೇ ರಾಷ್ಟ್ರೀಯ ಭದ್ರತೆಯ ಭಿನ್ನತಾಸೂಚಕ ಅರ್ಥವಾಗಿದೆ" ಎಂಬುದೇ ಸದರಿ ವ್ಯಾಖ್ಯಾನವಾಗಿದೆ.
ಅರ್ನಾಲ್ಡ್ ವೋಫರ್ಸ್ (1960) ಎಂಬಾತ, ವಸ್ತುನಿಷ್ಠತೆಯಿಂದ ಪರಿಕಲ್ಪನಾತ್ಮಕ ಉದ್ದೇಶದ ವ್ಯಕ್ತಿನಿಷ್ಠತೆಯನ್ನು ಪ್ರತ್ಯೇಕಿಸಬೇಕಾದ ಅಗತ್ಯವನ್ನು ಗುರುತಿಸುವಾಗ, ಆರ್ಜಿಸಿದ ಮೌಲ್ಯಗಳಿಗೆ ಇರುವ ಬೆದರಿಕೆಗಳ ಕುರಿತಾಗಿ ಮಾತನಾಡುತ್ತಾನೆ:[೩]
"ಒಂದು ಅಸ್ಪಷ್ಟ ಸಂಕೇತವು ವಿಭಿನ್ನ ಜನರಿಗೆ ವಿಭಿನ್ನ ವಿಷಯಗಳನ್ನು ಅರ್ಥೈಸುತ್ತದೆ. ವಸ್ತುನಿಷ್ಠವಾಗಿ ಹೇಳುವುದಾದರೆ, ರಾಷ್ಟ್ರೀಯ ಭದ್ರತೆ ಎಂಬುದು ಆರ್ಜಿಸಿದ ಮೌಲ್ಯಗಳಿಗಿರುವ ಬೆದರಿಕೆಗಳ ಅನುಪಸ್ಥಿತಿಯಾಗಿದೆ ಮತ್ತು ವ್ಯಕ್ತಿನಿಷ್ಠವಾಗಿ ಹೇಳುವುದಾದರೆ ರಾಷ್ಟ್ರೀಯ ಭದ್ರತೆ ಎಂಬುದು ಇಂಥ ಮೌಲ್ಯಗಳು ದಾಳಿಗೊಳಗಾಗುತ್ತವೆ ಎಂಬಂಥ ಭಯದ ಅನುಪಸ್ಥಿತಿಯಾಗಿದೆ" ಎಂಬುದು ಅವನ ಅಭಿಪ್ರಾಯ.
ಭಾರತದ ರಾಷ್ಟ್ರೀಯ ರಕ್ಷಣಾ ಕಾಲೇಜಿನ (ನ್ಯಾಷನಲ್ ಡಿಫೆನ್ಸ್ ಕಾಲೇಜ್) ವತಿಯಿಂದ 1996ರಲ್ಲಿ ಪ್ರಸಾರಮಾಡಲ್ಪಟ್ಟಿರುವ ವ್ಯಾಖ್ಯಾನವು ರಾಷ್ಟ್ರೀಯ ಶಕ್ತಿಯ ಅಂಶಗಳ ಒಂದುಗೂಡಿಸುವಿಕೆಯನ್ನು ಹೋಲುತ್ತದೆ:[೪]
"ರಾಷ್ಟ್ರೀಯ ಭದ್ರತೆ ಎಂಬುದು ರಾಜಕೀಯ ಚೇತರಿಕೆ ಮತ್ತು ಪರಿಪಕ್ವತೆ, ಮಾನವ ಸಂಪನ್ಮೂಲಗಳು, ಆರ್ಥಿಕ ಸ್ವರೂಪ ಮತ್ತು ಸಾಮರ್ಥ್ಯ, ತಂತ್ರಜ್ಞಾನದ ಸಾಮರ್ಥ್ಯ, ಕೈಗಾರಿಕಾ ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಹಾಗೂ ಅಂತಿಮವಾಗಿ ಸೇನಾಶಕ್ತಿಯ ಒಂದು ಯೋಗ್ಯ ಮತ್ತು ಆಕ್ರಮಣಶೀಲ ಸಮ್ಮಿಶ್ರಣವಾಗಿದೆ" ಎಂಬುದೇ ಆ ವ್ಯಾಖ್ಯಾನವಾಗಿದೆ.
ಕಾರ್ಟರ್ ಆಡಳಿತದ ಅವಧಿಯಲ್ಲಿ 1977ರಿಂದ 1981ರವರೆಗೆ U.S. ರಕ್ಷಣಾ ಕಾರ್ಯದರ್ಶಿಯಾಗಿದ್ದ ಹೆರಾಲ್ಡ್ ಬ್ರೌನ್ ಎಂಬಾತ 1983ರಲ್ಲಿ ಬಂದ ಥಿಂಕಿಂಗ್ ಎಬೌಟ್ ನ್ಯಾಷನಲ್ ಸೆಕ್ಯುರಿಟಿ: ಡಿಫೆನ್ಸ್ ಅಂಡ್ ಫಾರಿನ್ ಪಾಲಿಸಿ ಇನ್ ಎ ಡೇಂಜರಸ್ ವರ್ಲ್ಡ್ ಎಂಬ ತನ್ನ ಪುಸ್ತಕದಲ್ಲಿ ರಾಷ್ಟ್ರೀಯ ಭದ್ರತೆಯನ್ನು ವ್ಯಾಖ್ಯಾನಿಸಿದ್ದಾನೆ. ಆರ್ಥಿಕ ಭದ್ರತೆ ಮತ್ತು ಪರಿಸರೀಯ ಭದ್ರತೆಯಂಥ ಅಂಶಗಳನ್ನು ಈ ವ್ಯಾಖ್ಯಾನವು ಒಳಗೊಂಡಿದೆ.[೫]: 5
"ರಾಷ್ಟ್ರದ ಭೌತಿಕ ಸಮಗ್ರತೆಯನ್ನು ಮತ್ತು ವಿಶಾಲ ಭೂಪ್ರದೇಶವನ್ನು ಅಥವಾ ಅಧೀನದ ರಾಜ್ಯಗಳನ್ನು ಕಾಪಾಡುವ ಸಾಮರ್ಥ್ಯ; ಸಮಂಜಸವಾದ ಷರತ್ತುಗಳ ಆಧಾರದ ಮೇಲೆ ವಿಶ್ವದ ಇತರ ರಾಷ್ಟ್ರಗಳೊಂದಿಗೆ ತನ್ನ ಆರ್ಥಿಕ ಸಂಬಂಧಗಳನ್ನು ಕಾಯ್ದುಕೊಂಡು ಹೋಗುವ ಸಾಮರ್ಥ್ಯ; ಹೊರಗಿನ ಶಕ್ತಿಗಳಿಂದ ಒಡೆದುಹೋಗದಂತೆ ತನ್ನ ಸ್ವರೂಪ, ಸ್ಥಾಪಿತ ಸಂಪ್ರದಾಯ, ಮತ್ತು ಆಡಳಿತವನ್ನು ಕಾಪಾಡುವ ಸಾಮರ್ಥ್ಯ; ಮತ್ತು ತನ್ನ ಗಡಿಗಳನ್ನು ನಿಯಂತ್ರಿಸುವುದರ ಸಾಮರ್ಥ್ಯ ಇವೆಲ್ಲವೂ ಒಟ್ಟಾರೆಯಾಗಿ ರಾಷ್ಟ್ರೀಯ ಭದ್ರತೆ ಎನಿಸಿಕೊಳ್ಳುತ್ತವೆ" ಎಂಬುದು ಈ ವಿಶಾಲ ವ್ಯಾಖ್ಯಾನದ ವೈಶಿಷ್ಟ್ಯವಾಗಿದೆ.
1990ರಲ್ಲಿ, ಹಾರ್ವರ್ಡ್ ಇತಿಹಾಸ ಪ್ರಾಧ್ಯಾಪಕ ಚಾರ್ಲ್ಸ್ ಮೈಯೆರ್ ಎಂಬಾತ ನೀಡಿದ ವ್ಯಾಖ್ಯಾನದಲ್ಲಿ, ರಾಷ್ಟ್ರೀಯ ಶಕ್ತಿಯ ಮಸೂರದ ಮೂಲಕ ರಾಷ್ಟ್ರೀಯ ಭದ್ರತೆಯು ವ್ಯಾಖ್ಯಾನಿಸಲ್ಪಟ್ಟಿದೆ:[೬]
"ತನ್ನದೇ ಆದ ಸ್ವಯಮಾಧಿಕಾರ ಅಥವಾ ಸ್ವಾಯತ್ತತೆ, ಅಭ್ಯುದಯ ಮತ್ತು ಯೋಗಕ್ಷೇಮವನ್ನು ಅನುಭವಿಸಲು ಅವಶ್ಯಕವೆಂದು ಒಂದು ನಿರ್ದಿಷ್ಟ ಸಮುದಾಯದ ಸಾರ್ವಜನಿಕಾಭಿಪ್ರಾಯವು ನಂಬುವಂಥ, ಸ್ವದೇಶಿ ಮತ್ತು ವಿದೇಶಿ ಸ್ಥಿತಿಗತಿಗಳನ್ನು ನಿಯಂತ್ರಿಸುವ ಒಂದು ಸಾಮರ್ಥ್ಯವಾಗಿ ರಾಷ್ಟ್ರೀಯ ಭದ್ರತೆಯು ಅತ್ಯುತ್ತಮವಾಗಿ ವಿವರಿಸಲ್ಪಟ್ಟಿದೆ."</blockquote.>
ಅಮೆರಿಕಾ ಸಂಯುಕ್ತ ಸಂಸ್ಥಾನದ ಸಶಸ್ತ್ರ ಪಡೆಯು (ಅಮೆರಿಕಾ ಸಂಯುಕ್ತ ಸಂಸ್ಥಾನದ) ರಾಷ್ಟ್ರೀಯ ಭದ್ರತೆಯನ್ನು ಈ ಕೆಳಕಂಡ ವಿಧಾನದಲ್ಲಿ ವ್ಯಾಖ್ಯಾನಿಸುತ್ತವೆ:[೭]
ರಾಷ್ಟ್ರೀಯ ಭದ್ರತೆ — ಎಂಬುದು ಒಂದು ಸಮಷ್ಟಿಯ ಶಬ್ದವಾಗಿದ್ದು, ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ರಕ್ಷಣೆ ಮತ್ತು ವಿದೇಶಿ ಸಂಬಂಧಗಳಂಥ ಎರಡೂ ಅಂಶಗಳನ್ನು ಅದು ಒಳಗೊಂಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಯಾವುದೇ ವಿದೇಶಿ ರಾಷ್ಟ್ರ ಅಥವಾ ರಾಷ್ಟ್ರಗಳ ಸಮೂಹದ ಮೇಲಿನ ಸೇನೆಯ ಅಥವಾ ರಕ್ಷಣಾ ಪ್ರಯೋಜನವೊಂದರಿಂದ ಒದಗಿಸಲ್ಪಟ್ಟ ಸ್ಥಿತಿಗತಿ; ವಿದೇಶಿ ಸಂಬಂಧಗಳನ್ನು ಒಂದು ಅನುಕೂಲಕರವಾದ ಸ್ಥಾನದಲ್ಲಿ ಇರಿಸಿದ್ದರಿಂದ ಒದಗಿಸಲ್ಪಟ್ಟ ಸ್ಥಿತಿಗತಿ; ದೇಶದ ಒಳಗಿನಿಂದಾಗಲೀ ಅಥವಾ ಹೊರಗಿನಿಂದಾಗಲೀ, ಬಹಿರಂಗವಾಗಿಯಾಗಲೀ ಅಥವಾ ಗೋಪ್ಯವಾಗಿಯಾಗಲೀ ಕಂಡುಬರುವ ಹಗೆತನದ ಅಥವಾ ವಿನಾಶಕ ಕ್ರಮವನ್ನು ಯಶಸ್ವಿಯಾಗಿ ಪ್ರತಿರೋಧಿಸುವಲ್ಲಿ ಸಮರ್ಥವಾಗಿರುವ ರಕ್ಷಣಾ ಮನೋಧರ್ಮದಿಂದ ಒದಗಿಸಲ್ಪಟ್ಟ ಸ್ಥಿತಿಗತಿ ಇವು ರಾಷ್ಟ್ರೀಯ ಭದ್ರತೆ ಎನಿಸಿಕೊಳ್ಳುತ್ತವೆ.
2010ರಲ್ಲಿ, ಅಮೆರಿಕಾದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳ ಕುರಿತಾಗಿ ತಾನು ನೀಡಿದ ವ್ಯಾಖ್ಯಾನದಲ್ಲಿ ಬರಾಕ್ ಒಬಾಮಾ ಎಲ್ಲವನ್ನೂ-ಒಳಗೊಂಡಿರುವ ಜೀವನ ಸಿದ್ಧಾಂತವೊಂದನ್ನು ಸೇರಿಸಿದ. ಅದು ಹೀಗಿತ್ತು:[೮]
• ಅಮೆರಿಕಾ ಸಂಯುಕ್ತ ಸಂಸ್ಥಾನದ, ಇದರ ನಾಗರಿಕರ, ಮತ್ತು U.S. ಮಿತ್ರರಾಷ್ಟ್ರಗಳು ಹಾಗೂ ಸಹಭಾಗಿಗಳ ಭದ್ರತೆ;
• ಅವಕಾಶ ಮತ್ತು ಅಭ್ಯುದಯವನ್ನು ಪ್ರವರ್ತಿಸುವ, ಮುಕ್ತ ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯೊಂದರಲ್ಲಿನ ಒಂದು ಬಲವಾದ, ಪರಿವರ್ತನಕಾರಕ, ಮತ್ತು ಬೆಳೆಯುತ್ತಿರುವ U.S. ಆರ್ಥಿಕತೆ;
• ಸ್ವದೇಶದಲ್ಲಿ ಮತ್ತು ವಿಶ್ವದೆಲ್ಲೆಡೆಯಲ್ಲಿ ಸಾರ್ವತ್ರಿಕ ಮೌಲ್ಯಗಳಿಗಾಗಿ ನೀಡುವ ಗೌರವ; ಮತ್ತು
• ಜಾಗತಿಕ ಸವಾಲುಗಳನ್ನು ಈಡೇರಿಸುವ ದೃಷ್ಟಿಯಿಂದ ಬಲವಾದ ಸಹಕಾರದ ಮೂಲಕ ಶಾಂತಿ, ಭದ್ರತೆ, ಮತ್ತು ಅವಕಾಶವನ್ನು ಪ್ರವರ್ತಿಸುವ, U.S. ನಾಯಕತ್ವದಿಂದ ಮಂಡಿಸಲ್ಪಟ್ಟ ಒಂದು ಅಂತರರಾಷ್ಟ್ರೀಯ ವ್ಯವಸ್ಥೆ.
ರಾಷ್ಟ್ರೀಯ ಭದ್ರತಾ ಪರಿಕಲ್ಪನೆಯ ಇತಿಹಾಸ
[ಬದಲಾಯಿಸಿ]ಒಂದು ಸ್ಥಿರವಾದ ರಾಷ್ಟ್ರ-ಸಂಸ್ಥಾನವನ್ನು ಕಾಯ್ದುಕೊಂಡು ಹೋಗುವುದರ ಒಂದು ತತ್ತ್ವವಾಗಿ "ರಾಷ್ಟ್ರೀಯ ಭದ್ರತೆ"ಯ ಆಧುನಿಕ ಪರಿಕಲ್ಪನೆಯ ಹುಟ್ಟನ್ನು ವೆಸ್ಟ್ಫಾಲಿಯಾದ ಶಾಂತಿ ಒಪ್ಪಂದದಷ್ಟು ಹಿಂದೆಯೇ ಕಂಡುಕೊಳ್ಳಬಹುದು; ಇದರಲ್ಲಿ ಓರ್ವ ಸಾರ್ವಭೌಮನಿಂದ ಆಳಲ್ಪಡುವ ಪರಮಾಧಿಕಾರವುಳ್ಳ ರಾಷ್ಟ್ರವೊಂದರ ಪರಿಕಲ್ಪನೆಯು, ರಾಷ್ಟ್ರ-ಸಂಸ್ಥಾನಗಳ ಒಂದು ಹೊಸ ಅಂತರರಾಷ್ಟ್ರೀಯ ವ್ಯವಸ್ಥೆಯೊಂದಕ್ಕೆ ಮೂಲಾಧಾರವಾಗಿತ್ತು.[೯]: 19
ಒಂದು ವಿದ್ವತ್ಪೂರ್ಣ ಪರಿಕಲ್ಪನೆಯಾಗಿ ರಾಷ್ಟ್ರೀಯ ಭದ್ರತೆಯನ್ನು IIನೇ ಜಾಗತಿಕ ಸಮರದ[೧]: 2–4 ನಂತರ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮೊದಲ ಬಾರಿಗೆ ಪರಿಚಯಿಸಲ್ಪಟ್ಟ ಒಂದು ಇತ್ತೀಚಿನ ವಿದ್ಯಮಾನವಾಗಿ ಕಾಣಬಹುದು; ಅಷ್ಟೇ ಅಲ್ಲ, ನಾನಾಬಗೆಯ ಬಾಹ್ಯ ಮತ್ತು ಆಂತರಿಕ ಬೆದರಿಕೆಗಳನ್ನು ಎದುರಿಸಿ ಜಯಿಸುವುದಕ್ಕಾಗಿ ರಾಷ್ಟ್ರಗಳು ನಡೆಸುವ ಹೋರಾಟವನ್ನು ವಿವರಿಸುವ ಇತರ ಪರಿಕಲ್ಪನೆಗಳನ್ನು ಇದು ಒಂದು ಹಂತಕ್ಕೆ ಪಲ್ಲಟಗೊಳಿಸಿದೆ ಎನ್ನಬಹುದು. ಆದಾಗ್ಯೂ, ರಾಷ್ಟ್ರೀಯ ಭದ್ರತೆ ಎಂಬ ಶಬ್ದದ ಅತ್ಯಂತ ಮುಂಚಿನ ಉಲ್ಲೇಖವು 1790ರಲ್ಲಿ ಯೇಲ್ ವಿಶ್ವವಿದ್ಯಾಲಯದಲ್ಲಿ ಮಾಡಲ್ಪಟ್ಟಿತು; ಇದರಲ್ಲಿ ಸ್ವದೇಶಿ ಉದ್ಯಮಗಳೊಂದಿಗೆ ಅದು ಹೊಂದಿರುವ ಸಂಬಂಧದ ಕುರಿತು ಉಲ್ಲೇಖಿಸಲಾಗಿತ್ತು.[೨]: 52
1947ರ ಜುಲೈ 26ರಂದು U.S. ಅಧ್ಯಕ್ಷ ಹ್ಯಾರಿ S. ಟ್ರೂಮನ್ 1947ರ ರಾಷ್ಟ್ರೀಯ ಭದ್ರತಾ ಕಾಯಿದೆ ಗೆ ಸಹಿಹಾಕಿದಾಗ, ರಾಷ್ಟ್ರೀಯ ಭದ್ರತೆಯ ಪರಿಕಲ್ಪನೆಯು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ವಿದೇಶಿ ಕಾರ್ಯನೀತಿಯ ಒಂದು ಅಧಿಕೃತ ಮಾರ್ಗದರ್ಶಿ ಸೂತ್ರವೆನಿಸಿಕೊಂಡಿತು.[೧]: 3 ಇದರ 1949ರ ತಿದ್ದುಪಡಿಯ ಜೊತೆಜೊತೆಗೆ, ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಈ ಕಾಯಿದೆಯು ಸೃಷ್ಟಿಸಿತು (ರಕ್ಷಣಾ ಇಲಾಖೆಗೆ ಸಂಬಂಧಿಸಿದ ಒಂದು ಪೂರ್ವವರ್ತಿಯಂಥದು), ಸೇನಾ ಶಾಖೆಗಳನ್ನು ರಕ್ಷಣಾ ಕಾರ್ಯದರ್ಶಿಯ ಹೊಸ ಸಂಪುಟ ಮಟ್ಟ ಸ್ಥಾನಕ್ಕೆ ಅಧೀನಗೊಳಿಸಿತು, ರಾಷ್ಟ್ರೀಯ ಭದ್ರತೆ ಮಂಡಲಿ ಮತ್ತು ಕೇಂದ್ರೀಯ ಬೇಹುಗಾರಿಕೆ ಸಂಸ್ಥೆಯನ್ನು ಸ್ಥಾಪಿಸಿತು.[೧೦] ಸ್ವದೇಶಿ ಕಳವಳಗಳಂಥ, ರಾಷ್ಟ್ರದ ಇತರ ಹಿತಾಸಕ್ತಿಗಳಿಂದ ಬೆದರಿಸಲ್ಪಟ್ಟ ವಿವಾದಾಂಶಗಳು ಚರ್ಚೆ ಮತ್ತು ತೀರ್ಮಾನಕ್ಕೆ ಬಂದಾಗಲೆಲ್ಲಾ, ರಾಷ್ಟ್ರೀಯ ಭದ್ರತೆಯ ಸಂದಿಗ್ಧಾರ್ಥತೆಯು ಕೋರಿಕೊಳ್ಳುವುದಕ್ಕೆ ಸಂಬಂಧಿಸಿದ ಒಂದು ಶಕ್ತಿಯುತ ಚಾಟೂಕ್ತಿಯಾಗಿ ಅದನ್ನು ಮಾಡಿದ್ದರಿಂದ, ಊಹಿಸುವಂತೆ ಪ್ರಯೋಜನಕಾರಿಯಾಗಿದ್ದ ರಾಷ್ಟ್ರೀಯ ಭದ್ರತೆಯನ್ನು ಈ ಕಾಯಿದೆಯು ವ್ಯಾಖ್ಯಾನಿಸಲಿಲ್ಲ.[೧]: 3–5
ಕೇವಲ ಸೇನಾಭದ್ರತೆಗಿಂತ ಹೆಚ್ಚಿನದನ್ನು ರಾಷ್ಟ್ರೀಯ ಭದ್ರತೆಯು ಒಳಗೊಳ್ಳುತ್ತದೆ ಎಂಬುದರ ಮನಗಾಣುವಿಕೆಯು ಇರುವುದಕ್ಕಿಂತ ಕಡಿಮೆಯಾಗಿ ಹೇಳಲ್ಪಟ್ಟಿತ್ತಾದರೂ, ಆರಂಭದಿಂದಲೇ ಅದು ಅಸ್ತಿತ್ವದಲ್ಲಿತ್ತು. "ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸ್ವದೇಶಿ ಕಾರ್ಯನೀತಿ, ಸೇನಾ ಕಾರ್ಯನೀತಿ ಮತ್ತು ವಿದೇಶಿ ಕಾರ್ಯನೀತಿಗಳನ್ನು ಒಗ್ಗೂಡಿಸುವುದರ ಕುರಿತಾಗಿ ಅಧ್ಯಕ್ಷರಿಗೆ ಸಲಹೆ ನೀಡಲೆಂದು" 1947ರ US ರಾಷ್ಟ್ರೀಯ ಭದ್ರತಾ ಕಾಯಿದೆಯು ಅಸ್ತಿತ್ವಕ್ಕೆ ಬಂದಿತು.[೨]: 52
"ರಾಷ್ಟ್ರೀಯ ಭದ್ರತೆಯು ರಕ್ಷಣೆಗಿಂತ ವ್ಯಾಪಕವಾಗಿರುವ ಒಂದು ಪರಿಕಲ್ಪನೆ" ಎಂಬುದನ್ನು ಭಾರತದಲ್ಲಿ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ 1965ರಲ್ಲಿ ಮನಗಂಡಿತು.[೨]: 52
1974ರಲ್ಲಿ ಬಂದ, ಜನರಲ್ ಮ್ಯಾಕ್ಸ್ವೆಲ್ ಟೇಲರ್ನ "ದಿ ಲೆಜಿಟಿಮೇಟ್ ಕ್ಲೇಮ್ಸ್ ಆಫ್ ನ್ಯಾಷನಲ್ ಸೆಕ್ಯುರಿಟಿ" ಎಂಬ ಶೀರ್ಷಿಕೆಯುಳ್ಳ ಪ್ರಬಂಧವು ಈ ರೀತಿಯಲ್ಲಿ ಅಭಿಪ್ರಾಯಪಡುತ್ತದೆ:[೧೧]
ಈ ವಿಶಾಲ ಪ್ರಜ್ಞೆಯಲ್ಲಿ ಹೇಳುವುದಾದರೆ, ಪ್ರಸಕ್ತ ಸ್ವತ್ತುಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಾಷ್ಟ್ರೀಯ ಅಮೂಲ್ಯ ವಸ್ತುಗಳು ಒಳಗೊಳ್ಳುತ್ತವೆ. ಅಷ್ಟೇ ಅಲ್ಲ, ಒಂದು ರಾಷ್ಟ್ರವಾಗಿ ನಮ್ಮ ಭವಿಷ್ಯವು ಅವಲಂಬಿತವಾಗಿರುವ ಬಲದ ಮೂಲಗಳನ್ನೂ ಸಹ ಅವು ಒಳಗೊಳ್ಳುತ್ತವೆ. ಕೆಲವೊಂದು ಅಮೂಲ್ಯ ವಸ್ತುಗಳು ಸ್ಪರ್ಶಗ್ರಾಹ್ಯವಾಗಿ ಮತ್ತು ಒರಟಾಗಿದ್ದರೆ, ಇತರ ವಸ್ತುಗಳು ಆಧ್ಯಾತ್ಮಿಕ ಅಥವಾ ಬೌದ್ಧಿಕ ಸ್ವರೂಪವನ್ನು ಹೊಂದಿವೆ. ಹಕ್ಕುಗಳ ಮಸೂದೆ, ನಮ್ಮ ರಾಜಕೀಯ ಸ್ಥಾಪಿತ ಸಂಪ್ರದಾಯಗಳು ಮತ್ತು ಅಂತರರಾಷ್ಟ್ರೀಯ ಬಾಂಧವ್ಯಗಳಂಥ ರಾಜಕೀಯ ಸ್ವತ್ತುಗಳಿಂದ ಮೊದಲ್ಗೊಂಡು, ಸಮೃದ್ಧವಾದ ನೈಸರ್ಗಿಕ ಸಂಪನ್ಮೂಲಗಳಿಂದ ಬೆಂಬಲಿಸಲ್ಪಡುವ, ಅತೀವವಾಗಿ ಉತ್ಪಾದನಾಶೀಲವಾಗಿರುವ ಸ್ವದೇಶಿ ಆರ್ಥಿಕತೆಯಿಂದ ವಿಶ್ವವ್ಯಾಪಿಯಾಗಿ ಪಸರಿಸುವ ಅನೇಕ ಆರ್ಥಿಕ ಸ್ವತ್ತುಗಳವರೆಗೆ ಅವುಗಳ ವ್ಯಾಪಕ ಶ್ರೇಣಿಯಿದೆ. ರಾಷ್ಟ್ರೀಯ ಭದ್ರತೆಯನ್ನು ಕಾನೂನು ಸಮ್ಮತವಾಗಿಸುವ ಹಾಗೂ ರಾಷ್ಟ್ರೀಯ ಭದ್ರತೆಯ ಪಾತ್ರವನ್ನು ಅನಿವಾರ್ಯವಾಗಿಸುವ ಇಂಥ ಅಮೂಲ್ಯ ವಸ್ತುಗಳನ್ನು ಸಂರಕ್ಷಿಸಬೇಕಿರುವುದು ಸದ್ಯದ ತುರ್ತು ಅಗತ್ಯವಾಗಿದೆ.
ರಾಷ್ಟ್ರೀಯ ಭದ್ರತೆಯ ಅಂಶಗಳು
[ಬದಲಾಯಿಸಿ]ರಾಷ್ಟ್ರೀಯ ಶಕ್ತಿಯ ನಿದರ್ಶನದಲ್ಲಿರುವಂತೆ, ಭದ್ರತೆಯ ಸೇನಾ ಭಾಗವು ರಾಷ್ಟ್ರೀಯ ಭದ್ರತೆಯ ಒಂದು ಪ್ರಮುಖವಾದ ಆದರೆ ಏಕಮಾತ್ರವಲ್ಲದ ಅಂಗಭಾಗವಾಗಿದೆ. ನಿಜವಾಗಿಯೂ ಸುರಕ್ಷಿತವಾಗಿರಬೇಕೆಂದರೆ, ರಾಷ್ಟ್ರವೊಂದಕ್ಕೆ ಭದ್ರತೆಯ ಇತರ ಸ್ವರೂಪಗಳ ಅಗತ್ಯವೂ ಕಂಡುಬರುತ್ತದೆ. ರಾಷ್ಟ್ರದ ಭದ್ರತಾ ಅಂಶಗಳಿಗೆ ಸಂಬಂಧಿಸಿದ ತಮ್ಮ ಆಯ್ಕೆಯಲ್ಲಿ ಅಧಿಕಾರ ವರ್ಗಗಳು ಅಥವಾ ವರ್ಚಸ್ಸುಗಳು ಭಿನ್ನತೆಯನ್ನು ತೋರುತ್ತವೆ. ಭದ್ರತೆಯ ಸೇನಾ ಭಾಗದ ಜೊತೆಗೆ, ರಾಜತಂತ್ರ ಅಥವಾ ರಾಜಕೀಯ; ಸಮಾಜ; ಪರಿಸರ; ಶಕ್ತಿ ಮತ್ತು ನೈಸರ್ಗಿಕ ಸಂಪನ್ಮೂಲಗಳು; ಮತ್ತು ಅರ್ಥಶಾಸ್ತ್ರದ ಭಾಗಗಳು ಅಥವಾ ಮಗ್ಗುಲುಗಳನ್ನು ಸಾಮಾನ್ಯವಾಗಿ ಪಟ್ಟಿಮಾಡಲಾಗುತ್ತದೆ. ರಾಷ್ಟ್ರೀಯ ಶಕ್ತಿಯ ಅಂಶಗಳ ಪರಿಕಲ್ಪನೆಯೊಂದಿಗೆ ರಾಷ್ಟ್ರೀಯ ಭದ್ರತೆಯ ಅಂಶಗಳು ನಿಕಟವಾಗಿ ಪರಸ್ಪರ ಸಂಬಂಧಿಸಿರುತ್ತವೆ. ಮಾದಕ ಒಕ್ಕೂಟಗಳಿಂದ ಬರುವ ಭದ್ರತೆ, ಆರ್ಥಿಕ ಭದ್ರತೆ, ಪರಿಸರೀಯ ಭದ್ರತೆ ಮತ್ತು ಶಕ್ತಿಯ ಭದ್ರತ ಇವುಗಳನ್ನು ರಾಷ್ಟ್ರೀಯ ಭದ್ರತೆಯ, ಸೇನೆಗೆ-ಸೇರಿರದ ಅಂಶಗಳಾಗಿ ರೋಮ್ (1993) ಪಟ್ಟಿಮಾಡುತ್ತಾನೆ.[೧]: v, 1–8
ಸೇನಾ ಭದ್ರತೆ
[ಬದಲಾಯಿಸಿ]ಸಾಂಪ್ರದಾಯಿಕವಾಗಿ ಹೇಳುವುದಾದರೆ, ಇದು ಅತ್ಯಂತ ಮುಂಚಿತವಾಗಿ ಗುರುತಿಸಲ್ಪಟ್ಟ ರಾಷ್ಟ್ರೀಯ ಭದ್ರತೆಯ ಸ್ವರೂಪವಾಗಿದೆ.[೨]: 67 ರಾಷ್ಟ್ರವೊಂದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು/ಅಥವಾ ಮತ್ತೊಂದು ಸೇನೆಯ ಅಪ್ರಚೋದಿತ ಆಕ್ರಮಣವನ್ನು ನಿರ್ಬಂಧಿಸಲು ಹೊಂದಿರುವ ಸಾಮರ್ಥ್ಯವನ್ನು ಸೇನಾ ಭದ್ರತೆಯು ಸೂಚಿಸುತ್ತದೆ. ಇದಕ್ಕೆ ಪರ್ಯಾಯವಾಗಿ, ಸೇನಾಪಡೆಯ ಬಳಕೆಯ ಮೂಲಕ ತನ್ನ ಕಾರ್ಯನೀತಿಯ ಆಯ್ಕೆಗಳನ್ನು ಜಾರಿಗೆ ತರಲು ರಾಷ್ಟ್ರವೊಂದು ಹೊಂದಿರುವ ಸಾಮರ್ಥ್ಯವನ್ನು ಸೇನಾ ಭದ್ರತೆಯು ಸೂಚಿಸುತ್ತದೆ. "ಸೇನಾ ಭದ್ರತೆ" ಎಂಬ ಶಬ್ದವು ಅದರ ಬಹುಪಾಲು ಬಳಕೆಯಲ್ಲಿ "ಭದ್ರತೆ" ಎಂಬ ಶಬ್ದದೊಂದಿಗೆ ಸಮಾನಾರ್ಥಕವಾಗಿ ಪರಿಗಣಿಸಲ್ಪಟ್ಟಿದೆ. ಡಿಕ್ಷ್ನರಿ ಆಫ್ ಮಿಲಿಟರಿ ಅಂಡ್ ಅಸೋಸಿಯೇಟೆಡ್ ಟರ್ಮ್ಸ್ ಎಂಬ ಶಬ್ದಕೋಶದಲ್ಲಿ ನೀಡಲಾಗಿರುವ ಭದ್ರತೆಯ ವ್ಯಾಖ್ಯಾನಗಳ ಪೈಕಿ ಒಂದನ್ನು "ಸೇನಾ ಭದ್ರತೆ"ಯ ಒಂದು ವ್ಯಾಖ್ಯಾನವಾಗಿ ಪರಿಗಣಿಸಬಹುದಾಗಿದೆ:[೧೨]
A condition that results from the establishment and maintenance of protective measures that ensure a state of inviolability from hostile acts or influences.
— Dictionary of Military and Associated Terms
ರಾಜಕೀಯ ಭದ್ರತೆ
[ಬದಲಾಯಿಸಿ]ಭದ್ರತೆಯ ರಾಜಕೀಯ ಭಾಗವನ್ನು ರಾಷ್ಟ್ರೀಯ ಭದ್ರತೆಯ ಒಂದು ಪ್ರಮುಖ ಅಂಗಭಾಗವಾಗಿ ಬ್ಯಾರಿ ಬುಜಾನ್, ಓಲೆ ವೇವರ್, ಜಾಪ್ ಡೆ ವೈಲ್ಡ್ ಮೊದಲಾದವರು ಪ್ರಸ್ತಾವಿಸಿದ್ದು, ಅವರ ಅನುಸಾರ ರಾಜಕೀಯ ಭದ್ರತೆ ಎಂಬುದು ಸಾಮಾಜಿಕ ವ್ಯವಸ್ಥೆಯ ಸ್ಥಿರತೆಯನ್ನು ಕುರಿತದ್ದಾಗಿದೆ. "ಸೆಕ್ಯುರಿಟಿ: ಎ ನ್ಯೂ ಫ್ರೇಮ್ವರ್ಕ್ ಫಾರ್ ಅನಾಲಿಸಿಸ್" ಎಂಬ ಅವರ ಪುಸ್ತಕದಲ್ಲಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಒಂದು ಚೌಕಟ್ಟಿನಲ್ಲಿ ಪ್ರಸ್ತಾವಿಸಲ್ಪಟ್ಟಿರುವ ಸೇನಾ ಭದ್ರತೆ ಮತ್ತು ಸಾಮಾಜಿಕ ಭದ್ರತೆ, ಇತರ ಅಂಗಭಾಗಗಳೊಂದಿಗೆ ಇದು ನಿಕಟವಾಗಿ ಒಟ್ಟುಗೂಡಿದ್ದು, ಸಾರ್ವಭೌಮತ್ವಕ್ಕೆ ಎದುರಾಗುವ ಬೆದರಿಕೆಗಳನ್ನು ನಿರ್ದಿಷ್ಟ ರೀತಿಯಲ್ಲಿ ನಿಭಾಯಿಸುತ್ತದೆ.[೧೩] ರಾಷ್ಟ್ರ-ಸಂಸ್ಥಾನಗಳು, ರಾಷ್ಟ್ರಗಳು, ಬುಡಕಟ್ಟುಗಳು, ಅಲ್ಪಸಂಖ್ಯಾತರು, ಕೆಲವೊಂದು ಧಾರ್ಮಿಕ ಸಂಘಟನೆಗಳನ್ನು ಒಳಗೊಂಡಂತೆ ಗಡಿಗಳಿಂದಾಚೆಗೆ ಹಬ್ಬಿದ ರಾಜಕೀಯ ಪ್ರಾಮುಖ್ಯತೆಯ ಸಮೂಹಗಳು, ಐರೋಪ್ಯ ಒಕ್ಕೂಟ ಮತ್ತು ವಿಶ್ವಸಂಸ್ಥೆಯಂಥ ರಾಷ್ಟ್ರಗಳ ವ್ಯವಸ್ಥೆಗಳ ಸ್ವರೂಪದಲ್ಲಿ ವ್ಯವಸ್ಥೆಯ ಸಂಕೇತಾರ್ಥ ವಿಷಯಗಳು ವ್ಯಾಖ್ಯಾನಿಸಲ್ಪಟ್ಟಿವೆ. ಸಂಕೇತಾರ್ಥದ ವಿಷಯಗಳ ನಡುವಿನ ಪರಸ್ಪರ ಪ್ರಭಾವದ ಸಾಧನವಾಗಿ ರಾಜತಂತ್ರ, ಸಂಧಾನ ಮತ್ತು ಇತರ ಪರಸ್ಪರ ಪ್ರಭಾವಗಳು ಪಾತ್ರವಹಿಸುತ್ತವೆ.
ಆರ್ಥಿಕ ಭದ್ರತೆ
[ಬದಲಾಯಿಸಿ]ಐತಿಹಾಸಿಕವಾಗಿ ಹೇಳುವುದಾದರೆ, ರಾಷ್ಟ್ರಗಳನ್ನು ಗೆಲ್ಲುವ/ವಶಪಡಿಸಿಕೊಳ್ಳುವ ಪರಿಪಾಠಗಳು ಗೆದ್ದವರನ್ನು ಲೂಟಿಯ ಮೂಲಕ ಶ್ರೀಮಂತರಾಗಿಸಿವೆ, ಹೊಸ ಸಂಪನ್ಮೂಲಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಿವೆ ಮತ್ತು ಗೆಲ್ಲಲ್ಪಟ್ಟ ರಾಷ್ಟ್ರಗಳ ಆರ್ಥಿಕತೆಯನ್ನು ನಿಯಂತ್ರಿಸುವುದರ ಮೂಲಕ ವ್ಯಾಪಾರವು ವಿಸ್ತರಿಸಲ್ಪಡಲು ಕಾರಣವಾಗಿವೆ. ಬಹುರಾಷ್ಟ್ರೀಯ ಒಪ್ಪಂದಗಳು, ಪರಸ್ಪರ ಪರಸ್ಪರಾವಲಂಬನೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಇತ್ಯಾದಿಗಳಿಂದ ನಿರೂಪಿಸಲ್ಪಟ್ಟಿರುವ ಇಂದಿನ ಅಂತರರಾಷ್ಟ್ರೀಯ ವ್ಯಾಪಾರದ ಸಂಕೀರ್ಣ ವ್ಯವಸ್ಥೆಯಲ್ಲಿ, ಬಯಸಿದ ವಿಧಾನದಲ್ಲಿ ರಾಷ್ಟ್ರವೊಂದರ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಕಾರ್ಯನೀತಿಗಳ ಆಯ್ಕೆಯನ್ನು ಅನುಸರಿಸುವುದಕ್ಕಿರುವ ಸ್ವಾತಂತ್ರ್ಯವು ಆರ್ಥಿಕ ಭದ್ರತೆಯ ಮೂಲತತ್ವ ಎನಿಸಿಕೊಳ್ಳುತ್ತದೆ. ವಾದಯೋಗ್ಯವಾಗಿ, ಇಂದು ಸೇನಾ ಭದ್ರತೆಯ ರೀತಿಯಲ್ಲಿಯೇ ಆರ್ಥಿಕ ಭದ್ರತೆಯು ರಾಷ್ಟ್ರೀಯ ಭದ್ರತೆಯ ಒಂದು ಪ್ರಮುಖ ಭಾಗ ಎನಿಸಿಕೊಂಡಿದೆ.
ಪರಿಸರೀಯ ಭದ್ರತೆ
[ಬದಲಾಯಿಸಿ]ರಾಷ್ಟ್ರವೊಂದರ ರಾಷ್ಟ್ರೀಯ ಭದ್ರತೆಗೆ ಯಾವುದೇ ರೀತಿಯಲ್ಲಿ ಬೆದರಿಕೆಯನ್ನೊಡ್ಡುವ ಪರಿಸರೀಯ ವಿವಾದಾಂಶಗಳೊಂದಿಗೆ ಪರಿಸರೀಯ ಭದ್ರತೆಯು ವ್ಯವಹರಿಸುತ್ತದೆ. ರಾಷ್ಟ್ರೀಯ ಭದ್ರತೆಗೆ ಒದಗಿಬರುವ ಪರಿಸರೀಯ ಬೆದರಿಕೆಗಳ ವ್ಯಾಪ್ತಿ ಮತ್ತು ಸ್ವರೂಪ ಹಾಗೂ ಅವುಗಳೊಂದಿಗೆ ಕದನದಲ್ಲಿ ತೊಡಗಲು ಬೇಕಿರುವ ಕಾರ್ಯತಂತ್ರಗಳು ಚರ್ಚಾವಿಷಯಗಳಾಗಿವೆ.[೧]: 29–33 ಎಲ್ಲಾ ಪರಿಸರೀಯ ಘಟನೆಗಳು ಬೆದರಿಕೆಗಳಾಗಿ ವರ್ಗೀಕರಿಸಲ್ಪಡುವಷ್ಟು ಗಮನಾರ್ಹವಾಗಿ ಪರಿಗಣಿಸಲ್ಪಟ್ಟಿಲ್ಲದಿರುವ ಸಂದರ್ಭದಲ್ಲೇ, ಜಾಗತಿಕವಾಗಿ ಮತ್ತು ಪ್ರಾದೇಶಿಕವಾಗಿ ಹೀಗೆ ಎರಡೂ ರೀತಿಗಳಲ್ಲಿ ರಾಷ್ಟ್ರದ ಗಡಿಗಳಿಂದಾಚೆಗೆ ಹಬ್ಬಿರುವ ವಿವಾದಾಂಶಗಳು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುತ್ತವೆ. ಇವನ್ನು ರೋಮ್ (1993) ಈ ರೀತಿಯಲ್ಲಿ ವರ್ಗೀಕರಿಸುತ್ತಾನೆ:[೧]: 15
- ವಿಶಾಲವಾಗಿ ವ್ಯಾಖ್ಯಾನಿಸಲ್ಪಟ್ಟ ಅದರ ಅರ್ಥದಲ್ಲಿ, ರಾಷ್ಟ್ರವೊಂದರ ಭದ್ರತೆಗೆ ಬೆದರಿಕೆಯನ್ನೊಡ್ಡುವ ರಾಷ್ಟ್ರದ ಗಡಿಗಳಿಂದಾಚೆಗೆ ಹಬ್ಬಿದ ಪರಿಸರೀಯ ಸಮಸ್ಯೆಗಳು. ಜಾಗತಿಕ ತಾಪಮಾನದಲ್ಲಿನ ಹೆಚ್ಚಳ, ಅರಣ್ಯನಾಶ ಮತ್ತು ಜೀವವೈವಿಧ್ಯತೆಯ ನಷ್ಟ ಇತ್ಯಾದಿಗಳ ಕಾರಣದಿಂದಾಗಿ ಉದ್ಭವಿಸುವ ವಾತಾವರಣದ ಬದಲಾವಣೆಯಂಥ ಜಾಗತಿಕ ಪರಿಸರೀಯ ಸಮಸ್ಯೆಗಳನ್ನು ಇವು ಒಳಗೊಳ್ಳುತ್ತವೆ.[೧]: 15
- ಸಾಂಪ್ರದಾಯಿಕವಾಗಿ ವ್ಯಾಖ್ಯಾನಿಸಲ್ಪಟ್ಟಿರುವ, ರಾಷ್ಟ್ರವೊಂದರ ಭದ್ರತೆಗೆ ಬೆದರಿಕೆಯನ್ನೊಡ್ಡುವ ಪರಿಸರೀಯ ಅಥವಾ ಸಂಪನ್ಮೂಲ ಸಮಸ್ಯೆಗಳು . ಇವು ಮೊದಲ ಅಥವಾ ಉನ್ನತ ದರ್ಜೆಯ ಫಲಿತಾಂಶಗಳಾಗಿ ರಾಷ್ಟ್ರೀಯ ಭದ್ರತೆಗೆ ಒಡ್ಡಲ್ಪಡುವ ಸಾಂಪ್ರದಾಯಿಕ ಬೆದರಿಕೆಗಳನ್ನು ಉಂಟುಮಾಡುವ ಫಲಿತಾಂಶಗಳನ್ನು ಹೊಂದಿರುವ ಸಮಸ್ಯೆಗಳಾಗಿರುತ್ತವೆ. ಮಧ್ಯಪ್ರಾಚ್ಯದಲ್ಲಿ ಕಂಡುಬರುವ ನೀರಿನ ಕೊರತೆಯ ಮೇಲಿನ ವಿವಾದಗಳಿಂದಾಗಿ ತೀವ್ರಗೊಳಿಸಲ್ಪಟ್ಟ ಬಿಕ್ಕಟ್ಟು ಅಥವಾ ಸ್ಪಷ್ಟವಾದ ಘರ್ಷಣೆಯಿಂದ ಮೊದಲ್ಗೊಂಡು ಮೆಕ್ಸಿಕೋದಲ್ಲಿನ[೧]: 15 ವ್ಯವಸಾಯದ ವೈಫಲ್ಯದಿಂದಾಗಿ ಉಂಟಾದ ಅಮೆರಿಕಾ ಸಂಯುಕ್ತ ಸಂಸ್ಥಾನದೆಡೆಗಿನ ಅಕ್ರಮ ವಲಸೆಯವರೆಗೆ ಇಂಥ ವಿವಾದಗಳ ವ್ಯಾಪಕಶ್ರೇಣಿಯಿರುತ್ತದೆ. ಜನಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಕೃಷಿಭೂಮಿಯ ಲಭ್ಯತೆಯು ಕ್ಷೀಣಿಸುತ್ತಿರುವುದರಿಂದಾಗಿ ರುವಾಂಡಾದಲ್ಲಿ ಪರೋಕ್ಷವಾಗಿ ಅಥವಾ ಭಾಗಶಃವಾಗಿ ಕಂಡುಬಂದ ಜನಹತ್ಯೆಯು, ಪರಿಸರೀಯ ಭದ್ರತೆಯ ಸಮಸ್ಯೆಗಳಿಂದ ಹುಟ್ಟುವ ಫಲಿತಾಂಶದ ಒಂದು ಪರಮಾವಧಿಯ ಉದಾಹರಣೆಯಾಗಿದೆ.[೧೪]
- ಪರಿಸರೀಯವಾಗಿ ಬೆದರಿಕೆಯನ್ನೊಡ್ಡುವ ಯುದ್ಧಸ್ಥಿತಿಯ ಫಲಿತಾಂಶಗಳು , ಉದಾಹರಣೆಗೆ, ಕಾರ್ಥೇಜ್ನ ಹೊಲಗಳ ಮೇಲೆ ಉಪ್ಪನ್ನು ಸುರಿಯುವ ಮೂಲಕ ರೋಮನ್ನರು ಅವನ್ನು ನಾಶಪಡಿಸಿದರು; ಕೊಲ್ಲಿ ಯುದ್ಧದಲ್ಲಿ[೧]: 15–16 ಸದ್ದಾಂ ಹುಸೇನ್ ತೈಲಬಾವಿಗಳನ್ನು ಸುಟ್ಟ; ವಿಯೆಟ್ನಾಂ ಯುದ್ಧದಲ್ಲಿ ಸೇನಾ ಉದ್ದೇಶಗಳಿಗಾಗಿ ಅರಣ್ಯಗಳ ಎಲೆಗಳನ್ನು ಉದುರಿಸುವುದಕ್ಕೋಸ್ಕರ USA ಏಜೆಂಟ್ ಆರೇಂಜ್ನ್ನು ಬಳಕೆಮಾಡಿಕೊಂಡಿತು.
ಶಕ್ತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಭದ್ರತೆ
[ಬದಲಾಯಿಸಿ]ಸಂಪನ್ಮೂಲವೊಂದು ಈ ರೀತಿಯಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ:[೨]: 179
"...a support inventory... biotic or abiotic, renewable or expendable,... for sustaining life at a heightened level of well-being."
— Prabhakaran Paleri (2008)
"ಸಂಪನ್ಮೂಲ ಎಂಬುದು ಚೆನ್ನಾಗಿರುವುದರ ಸ್ಥಿತಿಯಲ್ಲಿನ ಒಂದು ಉನ್ನತಮಟ್ಟದ ಜೀವನವನ್ನು ಕಾಯ್ದುಕೊಂಡು ಹೋಗುವುದಕ್ಕಾಗಿ ಮೀಸಲಾದ ಒಂದು ಆಧಾರಸ್ವರೂಪದ ಸರಕು ಸಂಗ್ರಹ; ಇದು ಜೈವಿಕ, ಅಜೈವಿಕ, ನವೀಕರಿಸಬಹುದಾದ ಅಥವಾ ಬಳಸಿ ಮುಗಿಸಿಬಿಡಬಹುದಾದ ಸ್ವರೂಪಗಳಲ್ಲಿ ಇರಬಹುದು." - ಪ್ರಭಾಕರನ್ ಪಲೇರಿ (2008)
ಸಂಪನ್ಮೂಲಗಳಲ್ಲಿ ನೀರು, ಶಕ್ತಿಯ ಮೂಲಗಳು, ಭೂಮಿ ಮತ್ತು ಖನಿಜಗಳು ಸೇರಿವೆ. ರಾಷ್ಟ್ರವೊಂದು ತನ್ನ ಉದ್ಯಮ ಮತ್ತು ಆರ್ಥಿಕ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳುವುದಕ್ಕಾಗಿ, ಸಾಕಷ್ಟಿರುವ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯು ಒಂದು ಪ್ರಮುಖ ಅಂಶವಾಗಿ ಪರಿಣಮಿಸುತ್ತದೆ. ಸಂಪನ್ಮೂಲಗಳ ಕೊರತೆಯು ಜಪಾನ್ನಂಥ ರಾಷ್ಟ್ರಕ್ಕೆ ತನ್ನ ರಾಷ್ಟ್ರೀಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಮೇಲುಗೈ ಪಡೆಯುವುದಕ್ಕಿರುವ ಒಂದು ಗಂಭೀರ ಸ್ವರೂಪದ ಸವಾಲು ಎನಿಸಿಕೊಳ್ಳುತ್ತದೆ. ಆರ್ಥಿಕ ವಿವಾದಾಂಶಗಳ ಕುರಿತಾಗಿ 1990ರಲ್ಲಿ ನಡೆದ ಕೊಲ್ಲಿ ಯುದ್ಧದಲ್ಲಿ, ಕುವೈತ್ನ ತೈಲಬಾವಿಗಳನ್ನು ಸ್ವಾಧೀಪಡಿಸಿಕೊಳ್ಳುವ ಸಲುವಾಗಿ ಇರಾಕ್ ಕುವೈತ್ನ್ನು ವಶಪಡಿಸಿಕೊಂಡಿದ್ದು ಇತರ ಕಾರಣಗಳಲ್ಲಿ ಸೇರಿತ್ತು. ಅನೇಕ ರಾಷ್ಟ್ರಗಳ ನಡುವೆ ನಡೆಯುವ ವಿವಾದಗಳಿಗೆ ಜಲ ಸಂಪನ್ಮೂಲಗಳು ವಸ್ತು-ವಿಷಯವಾಗಿ ಪರಿಣಮಿಸಿವೆ; ಭಾರತ ಮತ್ತು ಪಾಕಿಸ್ತಾನದಂಥ ಎರಡು ಪರಮಾಣು ಶಕ್ತಿರಾಷ್ಟ್ರಗಳ ನಡುವಿನ ವಿವಾದ ಇದಕ್ಕೊಂದು ನಿದರ್ಶನ. ಅಗತ್ಯವಿರುವ ಸಂಪನ್ಮೂಲಗಳನ್ನು ಬಲವಂತವಾಗಿ, ಸಂಧಾನದಿಂದ ಮತ್ತು ವಾಣಿಜ್ಯ ವಿಧಾನದಿಂದ ಗಳಿಸುವ ಮೂಲಕ, ಶಕ್ತಿ ಮತ್ತು ನೈಸರ್ಗಿಕ ಸಂಪನ್ಮೂಲದ ಭದ್ರತೆಯನ್ನು ಪಡೆಯಲು ರಾಷ್ಟ್ರಗಳು ಪ್ರಯತ್ನಮಾಡುತ್ತವೆ.
ರಾಷ್ಟ್ರೀಯ ಭದ್ರತೆ ಮತ್ತು ಹಕ್ಕುಗಳು ಹಾಗೂ ಸ್ವಾತಂತ್ರ್ಯಗಳು
[ಬದಲಾಯಿಸಿ]ಸಮಾಜಕ್ಕಿರುವ ಬೆದರಿಕೆಗಳಿಗೆ ಅಭಿಮುಖವಾಗಿರುವ ರಾಷ್ಟ್ರೀಯ ಭದ್ರತೆಯನ್ನು ಕಾಯ್ದುಕೊಂಡು ಹೋಗುವುದಕ್ಕೆ ಅಳವಡಿಸಿಕೊಳ್ಳಲಾಗಿರುವ ಕ್ರಮಗಳು, ಮುಂದುವರೆಯುತ್ತಿರುವ ತಾತ್ತ್ವಿಕ ಚರ್ಚೆಗಳಿಗೆ ಕಾರಣವಾಗಿವೆ; ನಿರ್ದಿಷ್ಟವಾಗಿ ಹೇಳುವುದಾದರೆ, ಉದಾರ ಪ್ರಜಾಪ್ರಭುತ್ವಗಳಲ್ಲಿ ನಾಗರಿಕ ಮತ್ತು ಮಾನವ ಹಕ್ಕುಗಳ ವಿಷಯಗಳಲ್ಲಿನ ಅಧಿಕಾರ ವರ್ಗದ ಯೋಗ್ಯ ಪ್ರಮಾಣ ಮತ್ತು ಪಾತ್ರದ ಕುರಿತು ಈ ಚರ್ಚೆಗಳು ನಡೆಯುತ್ತಿವೆ.
ರಾಷ್ಟ್ರದ ಸಂರಕ್ಷಣೆ (ಸ್ವಯಮಾಧಿಕಾರ ಮತ್ತು ಸಾರ್ವಭೌಮತ್ವವನ್ನು ಕಾಯ್ದುಕೊಂಡು ಹೋಗುವ ಮೂಲಕ) ಹಾಗೂ ವ್ಯಕ್ತಿಗಳ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಸಂರಕ್ಷಣೆಯ ನಡುವೆ ಬಿಕ್ಕಟ್ಟು ಕಂಡುಬರುತ್ತದೆ.
ಸಮಾಜವನ್ನು ಒಟ್ಟಾರೆಯಾಗಿ ಸಂರಕ್ಷಿಸಲೆಂದು ರಾಷ್ಟ್ರೀಯ ಭದ್ರತಾ ಕ್ರಮಗಳನ್ನು ವಿಧಿಸಲಾಗುತ್ತದೆಯಾದರೂ, ಇಂಥ ಅನೇಕ ಕ್ರಮಗಳು ಸಮಾಜದಲ್ಲಿನ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ನಿರ್ಬಂಧಿಸುತ್ತವೆ. ಎಲ್ಲಿ ರಾಷ್ಟ್ರೀಯ ಭದ್ರತಾ ಕಾನೂನುಗಳ ಅನುಷ್ಠಾನವು ಉತ್ತಮ ಆಡಳಿತ, ಕಾನೂನಿನ ಪ್ರಭುತ್ವ, ಮತ್ತು ಕಟ್ಟುನಿಟ್ಟಾದ ಇತಿಮಿತಿಗಳಿಗೆ ಒಳಪಟ್ಟಿಲ್ಲವೋ, ಅಲ್ಲಿ ಪ್ರತಿಕೂಲವಾದ ರಾಜಕೀಯ ಮತ್ತು ಸಾಮಾಜಿಕ ಅಭಿಪ್ರಾಯಗಳನ್ನು ದಮನಮಾಡುವುದಕ್ಕಾಗಿರುವ ಕೇವಲ ಒಂದು ಸಬೂಬಿನ ಪಾತ್ರವನ್ನಷ್ಟೇ "ರಾಷ್ಟ್ರೀಯ ಭದ್ರತೆ"ಯು ವಹಿಸಬೇಕಾಗುವ ಒಂದು ಅಪಾಯವಿರುತ್ತದೆ. ಅದರ ತಾರ್ಕಿಕ ತೀರ್ಮಾನವನ್ನು ಪರಿಗಣಿಸಿದರೆ, ಕೇವಲ ಒಂದು ರಾಷ್ಟ್ರೀಯ ಭದ್ರತೆಯ ಉದ್ದೇಶವನ್ನಷ್ಟೇ ಕೇವಲ ತೋರಿಕೆಗಾಗಿ ನಿರ್ವಹಿಸುವ ಕ್ರಮಗಳು (ಸಾಮೂಹಿಕ ನಿಗಾವಣೆ, ಮತ್ತು ಸಮೂಹ ಮಾಧ್ಯಮಗಳ ಮೇಲೆ ಕತ್ತರಿ ಪ್ರಯೋಗ ಮಾಡುವುದು ಇಂಥವು), ಅಂತಿಮವಾಗಿ ಆರ್ವೇಲಿಯ ಒಂದು ಕಾಲ್ಪನಿಕ ನರಕದಂಥ ಸ್ಥಿತಿಗೆ ಕಾರಣವಾಗಬಹುದು ಎಂಬುದನ್ನು ಈ ಅಭಿಪ್ರಾಯವು ಒತ್ತಿಹೇಳುತ್ತದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ರಾಜಕೀಯವಾಗಿ ವಿವಾದಾತ್ಮಕವಾಗಿರುವ USA ದೇಶಭಕ್ತ ಕಾಯಿದೆ ಹಾಗೂ ಇತರ ಸರ್ಕಾರಿ ಕ್ರಮಗಳು ಎರಡು ಮುಖ್ಯ ಪ್ರಶ್ನೆಗಳನ್ನು ಎತ್ತುವ ಮೂಲಕ ಇಂಥ ಕೆಲವೊಂದು ವಿವಾದಾಂಶಗಳನ್ನು ನಾಗರಿಕರ ಗಮನಕ್ಕೆ ತಂದಿವೆ: ರಾಷ್ಟ್ರೀಯ ಭದ್ರತೆಯ ಸಲುವಾಗಿ ಎಲ್ಲಿಯವರೆಗೆ ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು ನಿರ್ಬಂಧಿಸಲ್ಪಡಬೇಕು? ಮತ್ತು ರಾಷ್ಟ್ರೀಯ ಭದ್ರತೆಯ ಸಲುವಾಗಿ ನಾಗರಿಕ ಹಕ್ಕುಗಳಿಗೆ ನಿರ್ಬಂಧವನ್ನು ವಿಧಿಸುವುದರಿಂದಾಗಿ ಅಂದುಕೊಂಡ ಉದ್ದೇಶಕ್ಕೆ ನ್ಯಾಯಸಲ್ಲಿಸಿದಂತಾಗುತ್ತದೆಯೇ? ಎಂಬುದೇ ಆ ಎರಡು ಪ್ರಶ್ನೆಗಳಾಗಿವೆ.
ರಾಷ್ಟ್ರೀಯ ಭದ್ರತೆಯ ತಾಂತ್ರಿಕ ಅಂಶಗಳು
[ಬದಲಾಯಿಸಿ]ರಾಷ್ಟ್ರ-ಸಂಸ್ಥಾನಗಳ ಸ್ವರೂಪವು ಅತೀವವಾಗಿ ಸ್ಪರ್ಧಾತ್ಮಕವಾಗಿರುವ ಕಾರಣದಿಂದಾಗಿ, ಗಮನಾರ್ಹವಾದ ಸಂಪನ್ಮೂಲಗಳು ಮತ್ತು ಮೌಲ್ಯವನ್ನು ಹೊಂದಿರುವ ದೇಶಗಳಿಗೆ ಸಂಬಂಧಿಸಿದಂತಿರುವ ರಾಷ್ಟ್ರೀಯ ಭದ್ರತೆಯು ಬಹುತೇಕವಾಗಿ ತಾಂತ್ರಿಕ ಕ್ರಮಗಳು ಮತ್ತು ಕಾರ್ಯಾತ್ಮಕ ಪ್ರಕ್ರಿಯೆಗಳ ಮೇಲೆ ಆಧರಿತವಾಗಿರುತ್ತದೆ. ರಾಷ್ಟ್ರದ ರಹಸ್ಯಗಳಿಗೆ ಸಂಬಂಧಿಸಿದ ಮಾಹಿತಿ ಸಂರಕ್ಷಣೆಯಿಂದ ಮೊದಲ್ಗೊಂಡು ಸೇನೆಗಳಿಗೆ ಸಂಬಂಧಿಸಿದ ಶಸ್ತ್ರಸಮೂಹದವರೆಗೆ, ಮತ್ತು ಅಲ್ಲಿಂದ ಇತರ ರಾಷ್ಟ್ರ-ಸಂಸ್ಥಾನಗಳೊಂದಿಗಿನ ಸಂಧಾನಗಳ ಕಾರ್ಯತಂತ್ರಗಳವರೆಗೆ ಇದರ ವ್ಯಾಪಕಶ್ರೇಣಿಯಿದೆ. ನಿರ್ವಹಣಾ ಪರಿಪಾಠಗಳು, ತಾಂತ್ರಿಕ ಸಾಮರ್ಥ್ಯಗಳು, ಆಂತರಿಕವಾಗಿ ಮತ್ತು ಬಾಹ್ಯವಾಗಿ ಈ ಎರಡೂ ವಿಧಾನಗಳಲ್ಲಿನ ಬಿಂಬಗಳ ಪ್ರಕ್ಷೇಪಣೆ, ಮತ್ತು ತೆರಿಗೆಗಳನ್ನು ಸಂಗ್ರಹಿಸುವುದಕ್ಕಾಗಿ ಜನರ ಸಂಕಲ್ಪವನ್ನು ಸಾಕಷ್ಟು ಪ್ರಮಾಣದಲ್ಲಿ ಗಳಿಸುವ ಸಾಮರ್ಥ್ಯ ಹಾಗೂ ಅವನ್ನು ಉಪಯುಕ್ತ ಪ್ರಯತ್ನಗಳ ಮೇಲೆ ಖರ್ಚುಮಾಡುವುದು ಇವೆಲ್ಲದರ ಸಂಯೋಜನೆಗಳ ಮೇಲೆ ರಾಷ್ಟ್ರೀಯ ಭದ್ರತಾ ಸಾಧನವು ಬಹುತೇಕವಾಗಿ ಅವಲಂಬಿಸಿರುತ್ತದೆ. ಕೆಲವೊಂದು ರಾಷ್ಟ್ರ-ಸಂಸ್ಥಾನಗಳು ತಮ್ಮ ನಾಯಕತ್ವಕ್ಕೆ ಸಂಬಂಧಿಸಿದಂತೆ ಹೆಚ್ಚು ಅಧಿಕಾರವನ್ನು ಗಳಿಸಲು ಶಕ್ತಿಯನ್ನು ಬಳಸಿದರೆ, ಇತರ ರಾಷ್ಟ್ರ-ಸಂಸ್ಥಾನಗಳು ತಮ್ಮ ಜನರಿಗೆ ಜೀವನದ ಗುಣಮಟ್ಟದ ಸುಧಾರಣೆಗಳನ್ನು ಒದಗಿಸುತ್ತವೆ; ಇದರಿಂದ ವಿವಿಧ ಬಗೆಯ ಸರ್ಕಾರಗಳ ನಡುವೆ ಭೂರಾಜಕೀಯದ ಅಥವಾ ಭೂರಾಜ್ಯಶಾಸ್ತ್ರದ ದೊಡ್ಡದಾದ ಘರ್ಷಣೆಗಳು ಸೃಷ್ಟಿಯಾಗುತ್ತವೆ. ರಾಷ್ಟ್ರ-ಸಂಸ್ಥಾನದ ಯಶಸ್ಸು ಮತ್ತು ವೈಫಲ್ಯಕ್ಕಾಗಿರುವ ಸ್ಥಿತಿಗತಿಗಳನ್ನು ಸೃಷ್ಟಿಸುವ ಮತ್ತು ಕಾರ್ಯತಂತ್ರದ ಹಾಗೂ ಯುದ್ಧತಂತ್ರದ ತಳಹದಿಗಳ ಮೇಲೆ ರಾಷ್ಟ್ರ-ಸಂಸ್ಥಾನಗಳನ್ನು ನಿರ್ಮಿಸುವಲ್ಲಿ ಪಾತ್ರವಹಿಸುವ ಆಂತರಿಕ ಶಿಕ್ಷಣ ಮತ್ತು ಸಂಪರ್ಕ ವ್ಯವಸ್ಥೆಗಳಲ್ಲಿ ಈ ಎಲ್ಲವೂ ತಮ್ಮ ತಳಹದಿಗಳನ್ನು ಹೊಂದಿವೆ. ವಿಶ್ವವು ಹೆಚ್ಚಿನ ರೀತಿಯಲ್ಲಿ ಸಾರಿಗೆಯನ್ನು ಸಂವಹನ-ಸಂಪರ್ಕದಿಂದ ಪಲ್ಲಟಗೊಳಿಸುತ್ತಿದೆ ಮತ್ತು ಹೀಗಾಗಿ ಮಾಹಿತಿ ಪರಿಸರದಲ್ಲಿ ಪರಿಣಾಮಕಾರಿಯಾಗಿ ಸಂವಹಿಸುವುದಕ್ಕೆ ಹಾಗೂ ಸಂದೇಶಗಳನ್ನು ರವಾನಿಸುವುದಕ್ಕೆ ಇರುವ ಸಾಮರ್ಥ್ಯವು ಪಾಶ್ಚಾತ್ಯ ರಾಷ್ಟ್ರಗಳ ವಿಷಯದಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಿರ್ಣಾಯಕ ಅಂಶವಾಗಿ ಹೊರಹೊಮ್ಮುತ್ತದೆ. ಜಾಗತಿಕ ತಾಪಮಾನದಲ್ಲಿನ ಹೆಚ್ಚಳ ಮತ್ತು ಸಂಶೋಧನಾ ಆದ್ಯತೆಗಳಂಥ ವಿವಾದಾಂಶಗಳು, ರಾಷ್ಟ್ರ-ಸಂಸ್ಥಾನಗಳ ನಡುವಿನ ಸ್ಪರ್ಧೆಯ ವಾಸ್ತವತೆಯ ಮೇಲೆ ಹೆಚ್ಚಿನ ರೀತಿಯಲ್ಲಿ ಮೇಲುಗೈ ಹೊಂದಿರುತ್ತವೆ. ಅಂತಿಮವಾಗಿ ರಾಷ್ಟ್ರ-ಸಂಸ್ಥಾನದ ಭವಿಷ್ಯವನ್ನು ಪೋಷಿಸುವ ಸ್ಥಾಪಿತ ಸಂಪ್ರದಾಯಗಳನ್ನು ಸೃಷ್ಟಿಸುವ ಮತ್ತು ಸಮರ್ಥಿಸುವ ಸಲುವಾಗಿ, ರಾಷ್ಟ್ರೀಯ ಭದ್ರತೆಗೆ ಆಧಾರವಾಗಿರುವ ತಾಂತ್ರಿಕ ಅಂಶಗಳ ಒಂದು ಸ್ಪಷ್ಟವಾದ ಗ್ರಹಿಕೆಯನ್ನು ಹೊಂದುವುದರ ಅಗತ್ಯಕ್ಕೆ ಈ ಎಲ್ಲವೂ ಕಾರಣವಾಗುತ್ತವೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಭಯೋತ್ಪಾದನಾ-ನಿರೋಧಕ ಶಾಸನಗಳು
- ಕಂಪ್ಯೂಟರ್ ಅಭದ್ರತೆ
- ಉತ್ತಮ ಆಡಳಿತ
- ಮಾತೃಭೂಮಿಯ ಭದ್ರತೆ
- ಅಂತರರಾಷ್ಟ್ರೀಯ ಭದ್ರತೆ
- ಅಣ್ವಸ್ತ್ರ ನಿರೋಧ
- ಆರಕ್ಷಕ ರಾಷ್ಟ್ರ
- ಕಾನೂನಿನ ಪ್ರಭುತ್ವ
- ಭದ್ರತೆ
- ಭಯೋತ್ಪಾದನೆ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ Romm, Joseph J. (1993). Defining national security: the nonmilitary aspects. Pew Project on America's Task in a Changed World (Pew Project Series). Council on Foreign Relations. p. 122. ISBN 9780876091357. Retrieved 22 September 2010 (full view).
{{cite book}}
: Check date values in:|accessdate=
(help); Cite has empty unknown parameter:|coauthors=
(help) - ↑ ೨.೦ ೨.೧ ೨.೨ ೨.೩ ೨.೪ ೨.೫ Paleri, Prabhakaran (2008). National Security: Imperatives And Challenges. New Delhi: Tata McGraw-Hill. p. 521. ISBN 9780070656864. Retrieved 23 September 2010.
{{cite book}}
: Cite has empty unknown parameter:|coauthors=
(help) - ↑ ಪಲೇರಿಯಲ್ಲಿ ಉಲ್ಲೇಖಿತ (2008) ಐಬಿಡ್. ಪುಟ 52.
- ↑ "ಪ್ರೊಸೀಡಿಂಗ್ಸ್ ಆಫ್ ಸೆಮಿನಾರ್ ಆನ್ ಎ ಮಿಲಿಟರಿ ಸ್ಟ್ರಾಟಜಿ ಫಾರ್ ಇಂಡಿಯಾ"ದಿಂದ ಪಡೆಯಲಾದ ವ್ಯಾಖ್ಯಾನ (1996). ರಾಷ್ಟ್ರೀಯ ರಕ್ಷಣಾ ಕಾಲೇಜು, ತೀಸ್ ಜನವರಿ ಮಾರ್ಗ್, ನವದೆಹಲಿ, ಭಾರತ. ಪಲೇರಿಯಲ್ಲಿ ಉಲ್ಲೇಖಿಸಲ್ಪಟ್ಟಿದ್ದು 2008 (ಐಬಿಡ್).
- ↑ Watson, Cynthia Ann (2008). U.S. national security: a reference handbook. Contemporary world issues (2 (revised) ed.). ABC-CLIO. p. 281. ISBN 9781598840414. Retrieved 24 September 2010.ನಲ್ಲಿ ನಮೂದಿಸಲ್ಪಟ್ಟಂತೆ
- ↑ Maier, Charles S. ಪೀಸ್ ಅಂಡ್ ಸೆಕ್ಯುರಿಟಿ ಫಾರ್ ದಿ 1990ಸ್ .ಮ್ಯಾಕ್ಅರ್ಥರ್ ಫೆಲೋಷಿಪ್ ಪ್ರೋಗ್ರಾಮ್ಗೆ ಸಂಬಂಧಿಸಿದ ಅಪ್ರಕಟಿತ ಸಂಶೋಧನಾ ಲೇಖನ, ಸೋಷಿಯಲ್ ಸೈನ್ಸ್ ರಿಸರ್ಚ್ ಕೌನ್ಸಿಲ್, 12 ಜೂನ್ 1990. ರೋಮ್ನಲ್ಲಿ ಉಲ್ಲೇಖಿಸಲ್ಪಟ್ಟಂತೆ 1993, ಪುಟ 5
- ↑ US NATO Military Terminology Group (2010). JP 1 (02) "Dictionary of Military and Associated Terms", 2001 (As amended through 31 July 2010) (PDF). Pentagon, Washington: Joint Chiefs of Staff, US Department of Defense. p. 361. Archived from the original (PDF) on 28 ಫೆಬ್ರವರಿ 2017. Retrieved 19 September 2010.
{{cite book}}
: More than one of|pages=
and|page=
specified (help) ಇದರಲ್ಲಿರುವ "ನ್ಯಾಷನಲ್ ಸೆಕ್ಯುರಿಟಿ." - ↑ Obama, Barack ನ್ಯಾಷನಲ್ ಸೆಕ್ಯುರಿಟಿ ಸ್ಟ್ರಾಟಜಿ, ಮೇ 2010 . ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರ ಕಚೇರಿ, ಶ್ವೇತಭವನ.[೧] Archived 2015-09-27 ವೇಬ್ಯಾಕ್ ಮೆಷಿನ್ ನಲ್ಲಿ.. 2010ರ ಸೆಪ್ಟೆಂಬರ್ 23ರಂದು ಸಂಪರ್ಕಿಸಲಾಯಿತು.
- ↑ MacFarlane, S. Neil; Yuen Foong Khong (2006). S. Neil, MacFarlane; Yuen Foong Khong (eds.). Human security and the UN: a critical history. United Nations intellectual history project (illustrated ed.). Indiana University Press. p. 346. ISBN 9780253218391. Retrieved 23 September 2010.
- ↑ Davis, Robert T. (2010). Robert T. Davis (ed.). U.S. Foreign Policy and National Security: Chronology and Index for the 20th Century. Praeger Security International Series (Illustrated ed.). ABC-CLIO. p. xiii=xiv. ISBN 9780313383854. Retrieved 25 September 2010.
{{cite book}}
: More than one of|pages=
and|page=
specified (help) - ↑ Taylor, Gen Maxwell (1974). "The Legitimate Claims of National Security". Foreign Affairs. Council on Foreign Relations, Inc. (Essay of 1974).
{{cite journal}}
: Text "Accessed 25 September 2010" ignored (help) - ↑ "ಡಿಕ್ಷ್ನರಿ ಆಫ್ ಮಿಲಿಟರಿ ಅಂಡ್ ಅಸೋಸಿಯೇಟೆಡ್ ಟರ್ಮ್ಸ್" ಇದರಲ್ಲಿರುವ "ಸೆಕ್ಯುರಿಟಿ", 2001 (2010ರ ಜುಲೈ 31ರಂದು ತಿದ್ದುಪಡಿ ಮಾಡಲಾದಂತೆ) ಪೂರ್ವೋಕ್ತ ಕೃತಿಯಲ್ಲಿ. ಪುಟ 477. 2010ರ ಸೆಪ್ಟೆಂಬರ್ 26ರಂದು ಸಂಪರ್ಕಿಸಲಾಯಿತು.
- ↑ Security: a new framework for analysis. Lynne Rienner Publishers. 1998. p. 239. ISBN 9781555877842.
{{cite book}}
:|access-date=
requires|url=
(help); Cite has empty unknown parameter:|coauthors=
(help) - ↑ Diamond, Jared. "Malthus in Africa: Rwanda's Genocide". Retrieved 26 September 2010.
- CS1 errors: empty unknown parameters
- CS1 errors: dates
- CS1 errors: redundant parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: unrecognized parameter
- CS1 errors: access-date without URL
- Articles with hatnote templates targeting a nonexistent page
- ರಾಷ್ಟ್ರೀಯ ಸುರಕ್ಷತೆ
- ರಾಜಕೀಯ ಪರಿಭಾಷೆಗಳು
- ಆರ್ಟಿಕಲ್ ಫೀಡ್ಡ್ಬ್ಯಾಕ್ ಪೈಲಟ್