ಥೈಪುಸಮ್
ಥೈಪುಸಮ್ | |
---|---|
ಆಚರಿಸಲಾಗುತ್ತದೆ | ಧಾರ್ಮಿಕವಾಗಿ ತಮಿಳು ಹಿಂದೂಗಳಿಂದ. |
ರೀತಿ | ಧಾರ್ಮಿಕ, India, Malaysia,Indonesia,srilanka, Thailand, Caribbean,Singapore,Canada,Myanmar, Jamaica,Tobago,Africa etc... |
ಮಹತ್ವ | ಮುರುಗನ್ ದೇವರ ಜನನದ ಆಚರಣೆ |
ದಿನಾಂಕ | ತಮಿಳು ಪಂಚಾಂಗದಿಂದ ನಿರ್ಧಾರಿತ |
೨೦೨೫ date |
ಈ ಥೈಪುಸಮ್ ತಮಿಳು:தைப்பூசம்ಹಿಂದುಗಳ ಹಬ್ಬವಾಗಿದೆ. ಬಹುತೇಕ ತಮಿಳು ಸಮುದಾಯ ಇದನ್ನು ಆಚರಿಸುತ್ತದೆ. ತಮಿಳು ಮಾಸ (ಜನವರಿ/ಫೆಬ್ರವರಿ)ಯಲ್ಲಿ ಇದನ್ನು ಪೂರ್ಣಿಮೆಯ ದಿನ ಆಚರಿಸಲಾಗುತ್ತದೆ. ತಮಿಳು ಸಮುದಾಯ ಹೆಚ್ಚಿರುವ ದೇಶಗಳಲ್ಲಿ ಮಾತ್ರ ಇದನ್ನು ಆಚರಿಸದೇ ಅಲ್ಪಸಂಖ್ಯಾತ ತಮಿಳರಿರುವ ಸಿಂಗಪೂರ್[೧] ಮತ್ತು ಮಲೆಷ್ಯಾದಲ್ಲೂ [೨] ಇದನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದನ್ನು ಥೈಪೂಯಮ್ ಅಥವಾ ಥೈಪ್ಪೂಯಮ್ ಎಂದು ಮಲೆಯಾಳಂ ಭಾಷೆಯಲ್ಲಿ ಉಲ್ಲೇಖಿಸಲಾಗುತ್ತದೆ.{ಟೆಂಪ್ಲೇಟು:Lang-ma ಈ ಪದ ಥೈಪುಸಮ್ ನ್ನು ಮಾಸದ ಹೆಸರು ಥೈ ಮತ್ತು ಪುಸಮ್ ಅಂದರೆ (ಪುಷ್ಯ ನಕ್ಷತ್ರ)ಎಂಬುದರಿಂದ ಪಡೆಯಲಾಗಿದೆ.ಈ ಮಾಸದಲ್ಲಿ ಈ ತಾರೆಯು ಅತ್ಯಂತ ಎತ್ತರದ ಸ್ಥಾನದಲ್ಲಿರುವುದು. ಪಾರ್ವತಿ ದೇವಿಯು ಸೂರಪದ್ಮನ್ ರಾಕ್ಷಸನನ್ನು ವಧಿಸಲು ಮುರುಗನ್ ಗೆ ಒಂದು ಈಟಿ ಯನ್ನು (ಭರ್ಜಿ) ನೀಡಿದ್ದ ಸಂದರ್ಭದ ನೆನಪಿಗೆ ಈ ಹಬ್ಬಾಚರಣೆ ನಡೆಯುತ್ತದೆ. ಆದರೆ ಈ ಥೈಪುಸಮ್ ನ್ನು ಮುರುಗನ್ ನ ಜನ್ಮದಿನವನ್ನಾಗಿ ಆಚರಿಸಲಾಗುತ್ತಿದೆಂಬ ನಂಬಿಕೆ ಇದೆ.ಆದರೆ ಇದು ತಪ್ಪು ಗ್ರಹಿಕೆಯಾಗಿದ್ದು ಆತನ ಜನ್ಮದಿನವು ವೈಖಾಸಿ ತಿಂಗಳಲ್ಲಿ (ಮೇ/ಜೂನ್)ವೈಖಾಸಿ ವಿಶಾಖಂ ದಿನ ಬರುತ್ತದೆ.[೩]
ಮೂಲ
[ಬದಲಾಯಿಸಿ]ಆದರೆ ಈ ಸ್ಕಂದ (ಅಥವಾ ಮುರಗನ್)ನನ್ನು ಅಸುರರು ಮತ್ತು ದೇವತೆಗಳ ನಡುವಿನ ಯುದ್ದದ ಸಂದರ್ಭದಲ್ಲಿ ಅವತಾರವೆತ್ತುವಂತೆ ಮಾಡಲಾಗಿದೆ. ಒಂದು ಹಂತದಲ್ಲಿ ದೇವತೆಗಳು ಅಸುರರಿಂದ ಹಲವು ಬಾರಿ ಸೋಲಿಸಲ್ಪಟ್ಟ ಉದಾಹರಣೆಗಳಿವೆ. ಹೀಗಾಗಿ ಪ್ರಬಲವಾಗಿದ್ದ ಈ ಅಸುರರ ಕಾಟವನ್ನು ದೇವತೆಗಳು ತಾಳದೇ ಹೋದರು. ಇದರಿಂದಾಗಿ ಅವರು ಶಿವನನ್ನು ಮೊರೆ ಹೋಗಿ ತಮಗೊಬ್ಬ ಸಮರ್ಥ ನಾಯಕನನ್ನು ಕರುಣಿಸಿ ಆತನ ನೇತೃತ್ವದಲ್ಲಿ ಯುದ್ದ ಮಾಡಿಸುವಂತೆ ಮನವಿ ಮಾಡಿದರು.ಇದರಿಂದ ತಾವು ಈ ಅಸುರರ ಮೇಲೆ ವಿಜಯ ಸಾಧಿಸುವಂತಾಗಲು ಅವರು ವರ ಬೇಡಿದರು. ಅವರು ಸಂಪೂರ್ಣವಾಗಿ ಶಿವನಲ್ಲಿ ತಮ್ಮನ್ನು ಅರ್ಪಿಸಿ ಶರಣಾಗತಿಯಾಗಿ ಪ್ರಾರ್ಥನೆ ಮೂಲಕ ತಮ್ಮ ಮನವಿಯ ಈಡೇರಿಕೆಗೆ ಕೋರಿದರು. ಶಿವನು ಆಗ ಅವರ ಮನವಿ ಮನ್ನಿಸಿ ತನ್ನ ಸ್ವಯಂ ಸಾಮರ್ಥ್ಯ ಅಥವಾ ಅಚಿಂತ್ಯ ಶಕ್ತಿ ಮೂಲಕ ಅತ್ಯಂತ ಶೂರ ಯೋಧ ಸ್ಕಂದನನ್ನು ಸೃಷ್ಟಿಸಿದ. ಮುರುಗನ್ ಆ ಕಾರ್ಯವನ್ನು ಸುರರೊಡನೆ ಕೈಗೆತ್ತಿಕೊಂಡು, ತನ್ನ ನೇತೃತ್ವದಲ್ಲಿ ಅಸುರರ ನಾಶಕ್ಕೆ ಮುಂದಾದನು.ಅದೇ ವಿಜಯವನ್ನು ಜನರು ಹಬ್ಬಾಚರಣೆ ಮಾಡುತ್ತಾರೆ.
ಕವಡಿ
[ಬದಲಾಯಿಸಿ]ಈ ಕವಡಿ ಅಟ್ಟಂ ಎಂಬ ನೃತ್ಯವನ್ನು ಭಕ್ತರು ಅಂದು ವಿಜಯೋತ್ಸವದಂಗವಾಗಿ ಮಾಡುತ್ತಾರೆ.ತಮಿಳರ ಯುದ್ದ ದೇವತೆಯಾದ ಮುರುಗನ್ ಪೂಜೆ ಮಾಡುವುದು ಇದರ ವೈಶಿಷ್ಟ್ಯವಾಗಿದೆ.[೪] ಇದನ್ನು ಸಾಮಾನ್ಯವಾಗಿ ಥೈಪುಸಮ್ ಎಂದು ಆಚರಿಸಲಾಗುತ್ತಿದ್ದು, ಋಣಬಾಧೆಯಿಂದ ಮುಕ್ತಿ ನೀಡುವ ಮಾರ್ಗದ ಸಂಕೇತವೆನ್ನಲಾಗಿದೆ. ಈ ಕವಡಿ ಯ ಸಂಕೇತವೆಂದರೆ ಭವ ಬಂಧನ ಬಿಡಿಸೋ ಎಂದು ಮುರುಗನ್ ದೇವತೆಯನ್ನು ಪ್ರಾರ್ಥಿಸುವುದೇ ಈ ಹಬ್ಬದ ಉದ್ದೇಶವಾಗಿದೆ.[೫]
ಸಾಮಾನ್ಯವಾಗಿ ಹಿಂದುಗಳು ತಮ್ಮ ಕಡುಕಷ್ಟಗಳ ದೂರ ಮಾಡು ಎಂದು ಈ ಕವಡಿಯನ್ನು ಹೊರುತ್ತಾರೆ,ನಂತರ ಅದರ ಗಂಟಿನ ಭಾರವನ್ನು ದೇವರಿಗೆ ಅರ್ಪಿಸುತ್ತಾರೆ. ಉದಾಹರಣೆಗೆ ಭಕ್ತನೊಬ್ಬನ ಪುತ್ರನು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ ಅದರಿಂದ ಪಾರು ಮಾಡಲು,ಆತನಿಗೆ ಮರುಜೀವ ನೀಡಲು ಭಕ್ತನು ಷಣ್ಮುಗನಿಗೆ ಈ ಕವಡಿಯ ಹರಕೆ ಹೊರುತ್ತಾನೆ.
ಪೂರ್ವ ಸಿದ್ಧತೆಗಳು
[ಬದಲಾಯಿಸಿ]ಪೂರ್ವ ಸಿದ್ಧತೆ ಎನ್ನುವಂತೆ ಭಕ್ತರು ಈ ಹಬ್ಬಾಚರಣೆಗಾಗಿ ತಮ್ಮನ್ನು ತಾವು ಪ್ರಾರ್ಥನೆ ಮತ್ತು ಉಪವಾಸಗಳಿಂದ ಶುದ್ದಗೊಳಿಸಿಕೊಳ್ಳುತ್ತಾರೆ. ಕವಡಿ-ಹೊರುವವರು ಇದಕ್ಕಾಗಿ ಹಲವಾರು ಕಟ್ಟುನಿಟ್ಟು ಆಚರಣೆಗಳನ್ನು ಕವಡಿಗಾಗಿ ಪಾಲಿಸುತ್ತಾರೆ.ಅಲ್ಲದೇ ಅದನ್ನು ಮುರುಗನ್ ಗೆ ನೀಡುವವರೆಗಿನ ಹಂತದ ವರೆಗೂ ಕಟ್ಟುನಿಟ್ಟು-ಸಂಯಮ ಆಚರಿಸುತ್ತಾರೆ. ಈ ಕವಡಿ-ಹೊತ್ತವರು ಬ್ರಹ್ಮಚರ್ಯ ಪಾಲಿಸುತ್ತಾರೆ.ದಿನಕ್ಕೆ ಒಂದು ಬಾರಿ ಮಾತ್ರ ಕೇವಲ ಸಾತ್ವಿಕ ಆಹಾರ ಮಾತ್ರ ಸೇವಿಸುತ್ತಾರೆ.ಅಲ್ಲದೇ ಅವರು ನಿರಂತರವಾಗಿ ದೇವರ ಧ್ಯಾನದಲ್ಲಿರಬೇಕಾಗುತ್ತದೆ.
ಆ ಹಬ್ಬದ ದಿನ ಭಕ್ತರು ತಮ್ಮ ತಲೆಗೂದಲನ್ನು ತೆಗೆಸುತ್ತಾರೆ.ಯಾತ್ರೆಗೆ ಹೋಗುವ ಎಲ್ಲಾ ನಿಯಮಗಳ ಅನುಸರಿಸಿ ಇಡೀ ದಾರಿಯುದ್ದಕ್ಕೂ ದೇವರ ನಾಮಸ್ಮರಣೆ ಮಾಡುತ್ತಾರೆ.ಅಂದರೆ ಮನುಷ್ಯ ಹಲವು ಬಗೆಯ ಕವಡಿ (ಕಷ್ಟದ ಹೊರೆಗಳನ್ನು) ಹೊತ್ತಿರುತ್ತಾನೆಂದು ಭಾವಿಸಲಾಗುತ್ತದೆ. ಇದರ ಸಾಧಾರಣ ಆಚರಣೆಯೆಂದರೆ ಹಾಲಿನ ಗಡಿಗೆಯನ್ನು ತಲೆ ಮೇಲೆ ಹೊತ್ತೊಯ್ಯುವುದು.ಆದರೆ ದೇಹದ ದಂಡನೆ ಮೂಲಕ ಅಂದರೆ ಚರ್ಮ,ನಾಲಿಗೆ ಅಥವಾ ಕೆನ್ನೆಗಳೊಳಗೆ ಈಟಿ ಚುಚ್ಚಿಕೊಳ್ಳುವುದು ದೇಹ ದಂಡನೆಯ ಸಾಮಾನ್ಯ ವಿಧಾನಗಳಾಗಿವೆ.
ಸಾಮಾನ್ಯ ಕವಡಿಯೆಂದರೆ ಅರ್ಧ ವೃತ್ತಾಕಾರದ ಅಲಂಕೃತ ಪಾತ್ರೆಯಾಕಾರದ ಇದನ್ನು ಕಟ್ಟಿಗೆಯ ಪಟ್ಟಿಯಿಂದ ಭದ್ರಗೊಳಿಸಲಾಗಿರುತ್ತದೆ.ಇದನ್ನು ಭುಜದ ಮೇಲೆ ಹೊತ್ತು ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಇದಲ್ಲದೇ ಕೆಲವು ಭಕ್ತರು ತಮ್ಮ ನಾಲಗೆ ಅಥವಾ ಕೆನ್ನೆ ಮೂಲಕ ಸಣ್ಣ ರಂಧ್ರಗಳನ್ನೂ ಮಾಡಿಕೊಳ್ಳುತ್ತಾರೆ. ಈ ಕೊರೆದ ರಂಧ್ರವು ದೇವ ಮುರುಗನ್ ನ ಭಕ್ತಿ-ಗೌರವಗಳಿಗೆ ಸಾಕ್ಷಿಯಾಗುತ್ತದೆ. ಇದು ಆತನಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ, ಆಗ ಆತನ ಸಾಧನೆಗೆ ಹೆಚ್ಚು ಶಕ್ತಿ ದೊರಕುತ್ತದೆ. ಇನ್ನುಳಿದ ಕವಡಿ ಹರಕೆ ಆಚರಣೆ ವಿಧಗಳೆಂದರೆ ಬೆನ್ನು ಹುರಿಗೆ ಕಬ್ಬಿಣ ಸರಳಿ ಕಟ್ಟಿಕೊಂಡು ಇನ್ನೊಬ್ಬರಿಂದ ಎಳೆಸಿಕೊಳ್ಳುವ ಅಥವಾ ಅಲಂಕೃತ ಎತ್ತಿನ ಬಂಡಿಯಿಂದ ಎಳೆಯುವ ಕ್ರಿಯೆ ನಡೆಯುತ್ತದೆ.ಇತ್ತೀಚಿಗೆ ಹುಕ್ ಗಳ ಕಟ್ಟಿ ಟ್ರ್ಯಾಕ್ಟರ್ ಮೂಲಕ ಎಳೆಯುವ ವಿಧಾನ ನೋವಿನದಾದರೂ ದೇವರ ಸೇವೆಗಳಲ್ಲಿ ಇದು ಗೌಣವಾಗುತ್ತದೆ.
ಉತ್ಸವಾಚರಣೆಗಳು
[ಬದಲಾಯಿಸಿ]ಭಾರತದ ರಾಜ್ಯವಾಗಿರುವ ತಮಿಳುನಾಡಿನ ಪಳನಿಯಲ್ಲಿ ಅಸಂಖ್ಯಾತ ಭಕ್ತರು ಪಳನಿಗೆ ಬಂದು ಈ ಕವಡಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ palani.org ಪ್ರಕಾರ "ಒಟ್ಟು 10,000 ಕವಡಿಗಳು ಥೈಪುಸಮ್ ಗಾಗಿ ಪಳನಿಗೆ ತಲುಪುತ್ತವೆ." ಪಂಕುನಿ ಉತ್ತಿರಮ್ ಗಾಗಿ 50,000 ಕವಡಿಗಳು ಇಲ್ಲಿ ಆಗಮಿಸುತ್ತವೆ. ಇದು ನಿಮ್ಮ ಬಲಗಡೆಯ ಕವಡಿ,ನಿಮ್ಮ ಎಡಗಡೆಯ ಕವಡಿ,ನಿಮ್ಮ ಮುಂದಿರುವ ಕವಡಿ,ನಿಮ್ಮ ಹಿಂದಿರುವ ಕವಡಿ,ನಿಮ್ಮ ಮೇಲ್ಭಾಗ ಮತ್ತು ನಿಮ್ಮ ಕೆಳಭಾಗದಲ್ಲಿರುವ ಕವಡಿ."[೬]
ಕೇರಳದ ಅಲಪುಝಾದಲ್ಲಿರುವ ಹರಿಪಾದ ಸುಬ್ರಮಯಾಸ್ವಾಮಿ ದೇವಾಲಯದಲ್ಲಿ ಕವಡಿಯಾಟ್ಟಂ ಪ್ರಸಿದ್ದಿ ಪಡೆದಿದೆ.ಸುಮಾರು 5000 ಕವಡಿಗಳು ಸ್ಥಳೀಯ ವಿವಿಧ ದೇವಾಲಯಗಳಿಂದ ಈ ದೇವಾಸ್ಥಾನಕ್ಕೆ ಆಗಮಿಸುತ್ತವೆ.
ಭಾರತದ ಕೇರಳ ರಾಜ್ಯದ ವೈಕೊಮ್ ನಲ್ಲಿ ಥೈಪುಸಮ್ ಹಬ್ಬವನ್ನು ಉದಯನಪುರಮ್ ಸುಬ್ರಮಣ್ಯ ದೇವಾಲಯದಲ್ಲಿ ಕವಡಿಗಳ ಪೂಜೆ ಮೂಲಕ ನೆರವೇರಿಸಲಾಗುತ್ತದೆ. ಭಕ್ತರು ಪಂಚಾಮೃತ ಕವಡಿ,ಪಾಲ್ ಕವಡಿ,ಭಸ್ಮ ಕವಡಿ ಇತ್ಯಾದಿಗಳನ್ನು ಪೂಜಿಸುತ್ತಾರೆ.
ಭಾರತದ ಕೇರಳ ರಾಜ್ಯದ ತಿರುವನಂತಪುರಮ್ ನ ಕರಮನಾದಲ್ಲಿನ ಥೈಪುಸಮ್ ಹಬ್ಬವನ್ನು ಸತ್ಯವಾಗೀಶ್ವರ ದೇವಾಲಯದಲ್ಲಿ ನೆರವೇರಿಸುತ್ತಾರೆ. ಉತ್ಸವ ಮೂರ್ತಿಯನ್ನು ಸಿಂಹಾಸನ ರಥ (ವಾಹನ)ದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಇಲ್ಲಿ ನೆಲ್ (ಭತ್ತ)ಅಲೆಪ್ಪು ಅಥವಾ ನೆಲ್ ಅಲವುಗಳನ್ನು ಅದೃಷ್ಟ ಮತ್ತು ಅಭಿವೃದ್ಧಿ ಸಂಕೇತವಾಗಿಸಲಾಗುತ್ತದೆ.
ಶ್ರೀಲಂಕಾದ ಜಾಫ್ನಾದಲ್ಲಿನ ನಲ್ಲುರ್ ನಲ್ಲಿ ಥೈಪುಸಮ್ ಹಬ್ಬವನ್ನು ನಲ್ಲುರ್ ಕಂದಸ್ವಾಮಿ ದೇವಾಲಯದಲ್ಲಿ ನಡೆಸಲಾಗುತ್ತದೆ. ಹಲವಾರು ತಮಿಳರು ತಮ್ಮ ಯಾವುದೇ ಧರ್ಮ ಪರಿಗಣಿಸದೇ ಈ ಉತ್ಸವಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಲವು ತಮಿಳು ಕ್ಯಾಥೊಲಿಕ್ ಧರ್ಮೀಯರು ಮತ್ತು ಮುಸ್ಲಿಮರು ಥೈಪುಸಮ್ ನಲ್ಲಿ ಪಾಲ್ಗೊಂಡು ಕವಡಿಗಳ ಹರಕೆ ಹೊರುತ್ತಾರೆ.
ತಮಿಳುನಾಡಿನ ಹೊರಪ್ರದೇಶಗಳಲ್ಲಿ
[ಬದಲಾಯಿಸಿ]ಥೈಪುಸಮ್ ನ ಅತಿದೊಡ್ಡ ಆಚರಣೆಗಳು ಸಿಂಗಪೂರ್, ಮಾರಿಶಿಸ್ ಮತ್ತು ಮಲೆಷ್ಯಾಗಳಲ್ಲಿ ನಡೆಯುತ್ತವೆ.[೭] ಹಲವಾರು ರಾಜ್ಯಗಳಲ್ಲಿ ಇದು ಸಾರ್ವಜನಿಕ ರಜಾದಿನವಾಗಿ ಪರಿಗಣಿಸಲಾಗಿದೆ, ಮಲೆಷ್ಯಾ, ಅಲ್ಲದೇ ಸೆಲಂಗೊರ್, ನೆಗೆರಿ ಸೆಂಬಿಲನ್, ಪೆನಾಂಗ್, ಪೆರಕ್, ಜೊಹೊರ್, ಪುತ್ರಜಯಾ ಮತ್ತು ಕೌಲಾ ಲಂಪೂರ್ ಇತ್ಯಾದಿ.
ಸಿಂಗಪೂರನಲ್ಲಿ ಹಿಂದುಗಳು ಬೆಳಗಿನ ಜಾವದಲ್ಲಿ ಶ್ರೀ ಶ್ರೀನಿವಾಸ ಪೆರುಮಾಳ ದೇವಾಲಯದಿಂದ ತಮ್ಮ ಭಕ್ತಿ ಕೈಂಕರ್ಯ ಆರಂಭಿಸುತ್ತಾರೆ.ತಮ್ಮೊಂದಿಗೆ ಅರ್ಪಿಸಲು ಹಾಲಿನ ಪಾತ್ರೆಗಳು ಅಥವಾ "ಕವಡಿಗಳ"ನ್ನು ತಂದಿರುತ್ತಾರೆ.[೮] ಈ ಮೆರವಣಿಗೆಯು ಸುಮಾರು 4 ಕಿಲೊಮೀಟರ್ ವರೆಗೆ ಸಂಚರಿಸಿ ನಂತರ ಕಿಯಾಂಗ್ ಸಿಯಿಕ್ ರಸ್ತೆಯಲ್ಲಿನ ಲಯನ ಸಿಥಿ ವಿನಾಯಗರ್ ದೇವಾಲಯದಲ್ಲಿ ಕೊನೆಗೊಳ್ಳುತ್ತದೆ. ಹರಕೆಹೊತ್ತ ಭಕ್ತರೊಂದಿಗೆ ಅವರಿಗೆ ದಾರಿಯುದ್ದಕ್ಕೂ ಪ್ರೊತ್ಸಾಹದ ಬೆಂಬಲಕ್ಕಾಗಿ ಅವರ ನೆಂಟರಿಷ್ಟರು ಅಲ್ಲಿ ನೆರದಿರುತ್ತಾರೆ.ಇದು ಭಕ್ತರ ಉತ್ಸಾಹ,ಸಾಮರ್ಥ್ಯವನ್ನು ಇನ್ನಷ್ಟು ಅಧಿಕಗೊಳಿಸುತ್ತದೆ.[೯]
ಕೌಲಾಲಂಪುರ್ ನಲ್ಲಿನ ಬಾಟು ಗುಹೆಗಳಲ್ಲಿನ ಈ ದೇವಾಲಯವು ಸುಮಾರು ಒಂದು ದಶಲಕ್ಷ ಭಕ್ತರನ್ನು ಆಕರ್ಷಿಸುತ್ತದೆ.ಅಲ್ಲದೇ ಸಾವಿರಾರು ಪ್ರವಾಸಿಗಳು ಇಲ್ಲಿಗೆ ಆಗಮಿಸುತ್ತಾರೆ.[೧೦] ಕೌಲಾಂಪುರ್ ಹೃದಯಭಾಗದಲ್ಲಿರುವ ಶ್ರೀ ಮಹಾಮಾರಿಯಮ್ಮ ದೇವಾಲಯದಿಂದ ಈ ಮೆರವಣಿಗೆ ಆರಂಭವಾಗುತ್ತದೆ.ಸುಮಾರು 15 ಕಿಲೊಮೀಟರ್ ಗಳಷ್ಟಿರುವ ಗುಹೆಗಳೆಡೆಗೆ ಸಾಗಲು ಸುಮಾರು ಎಂಟು ಗಂಟೆಗಳ ಅವಧಿ ತೆಗೆದುಕೊಳ್ಳುತ್ತದೆ.ಮೇಲಕ್ಕೆ ಹತ್ತಲು ಸುಮಾರು 272 ಮೆಟ್ಟಲು ಕೂಡಾ ಹತ್ತಿ ಹೋಗಬೇಕಾಗುತ್ತದೆ. ಇನ್ನೊಂದು ಗುಹಾ ಪ್ರದೇಶವಾಗಿರುವ ಗುನೊಂಗ್ ಚೆರೊಹ್ ನಲ್ಲಿನ ಶ್ರೀ ಸುಬ್ರಮನಿಯರ್ ದೇವಾಲಯದಲ್ಲಿಯೂ ಥೈಪುಸಮ್ ಆಚರಿಸಲಾಗುತ್ತದೆ.ಇದಲ್ಲದೇ ಜೊತೆಗೆ ಇಪೊಹ್,ಪೆರಕ್ ಮತ್ತು ಪೆನಾಂಗ್ ನಲ್ಲಿನ ಜಲಪಾತದ ಹತ್ತಿರದಲ್ಲಿರುವ ನಟ್ಟುಕೊಟ್ಟೈ ಚೆಟ್ಟಿಯಾರ್ ದೇವಾಲಯದಲ್ಲಿಯೂ ಥೈಪುಸಮ್ ಆಚರಿಸಲ್ಪಡುತ್ತದೆ. ಗುನೊಂಗ್ ಚೆರೊಹ್ ನಲ್ಲಿನ ಶ್ರೀ ಸುಬ್ರಮನಿಯರ್ ದೇವಾಲಯದ ಕಾರ್ಯದರ್ಶಿ ಪಿ.ಪಳೈಯಾವರ ಪ್ರಕಾರ 2007 ರಲ್ಲಿನ ಈ ಹಬ್ಬಾಚರಣೆಯಲ್ಲಿ ಒಟ್ಟು ಸುಮಾರು 250,000 ಭಕ್ತರು ಪಾಲ್ಗೊಂಡಿದ್ದರು.ಇದರಲ್ಲಿ 300 ಜನ ಕವಡಿ ಹೊತ್ತವರಾದರೆ 15,000 ಜನರು ಹಾಲು ಸಮರ್ಪಣೆ ಮಾಡಿದರು.
ಆದರೆ ಮಲೆಷ್ಯಾದಲ್ಲಿ ಅಪರೂಪವೆನ್ನಲಾದ ಇತರ ಧರ್ಮೀಯರು ಈ "ಕವಡಿ"ಹೊತ್ತು ಹರಕೆ ಅರ್ಪಿಸಿದ್ದನ್ನೂ ಕಾಣಬಹುದಾಗಿತ್ತು.ವಿಭಿನ್ನ ಧರ್ಮದವರೂ ಇದರಲ್ಲಿ ವಿರಳವಾಗಿ ಪಾಲ್ಗೊಳ್ಳುತ್ತಾರೆ. ಥೈಪುಸಮ್ ಹಬ್ಬವನ್ನು ಸಿಂಗಪೂರ್ ಮತ್ತು ಮಲೆಷ್ಯದಲ್ಲಿನ ಚೀನೀಯರೂ ಆಚರಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ.[೧೧]
ಗ್ಯಾಲರಿ
[ಬದಲಾಯಿಸಿ]-
ಮಲೇಷ್ಯಾದಲ್ಲಿ ಥೈಪುಸಮ್ ಆಚರಣೆ
-
ಮಲೇಷ್ಯಾದಲ್ಲಿ ಥೈಪುಸಮ್ ಆಚರಣೆ
-
ಮಲೇಷ್ಯಾದಲ್ಲಿ ಥೈಪುಸಮ್ ಆಚರಣೆ
ಇವನ್ನೂ ಗಮನಿಸಿ
[ಬದಲಾಯಿಸಿ]- ಆಗ್ನೇಯ ಏಷ್ಯಾದಲ್ಲಿನ ಹಿಂದು ತತ್ವ
- ಹಿಂದುಇಜಮ್ ಇನ್ ಮಲೆಷ್ಯಾ ಅಂಡ್ ಸಿಂಗಪೂರ್
- ಇಂಡಿಯನ್ಸ್ ಇನ್ ಮಲೆಷ್ಯಾ ಅಂಡ್ ಸಿಂಗಪೂರ್
- ಥೈ ಪುಸಮ್ ಕವಡಿ ಇನ್ ಸೌತ್ ಆಫ್ರಿಕಾ
ಟಿಪ್ಪಣಿಗಳು ಮತ್ತು ಆಕರಗಳು
[ಬದಲಾಯಿಸಿ]- (1996) ಪಾಂಕೊರ್ಬೊ, ಲುಯಿಸ್: "ಲೊಸ್ ಪಿಕಾಡೊಸ್ ಡೆ ಥೈಪುಸಮ್" ಎನ್ "ಫೀಸ್ಟಾಸ್ ಡೆಲ್ ಮುಂಡೊ. ಲಾಸ್ ಮಾಸ್ಕಾರ್ಸ್ ಡೆ ಲಾ ಲುನಾ". ಪುಟಗಳು. 85-93. ಎಡಿಸಿಯೊನ್ಸ್ ಡೆಲ್ ಸೆರ್ಬಲ್. ಬಾರ್ಸಿಲೋನಾ ISBN 84-7628-168-4
- ↑ ಥೈಪುಸಮ್ ಇನ್ ಸಿಂಗಪೂರ್
- ↑ "ಆರ್ಕೈವ್ ನಕಲು". Archived from the original on 2017-03-23. Retrieved 2010-12-21.
- ↑ http://murugan.org/research/duraiswamy-vaikasi-visakam.htm
- ↑ ಕೆಂಟ್, ಅಲೆಕ್ಸಾಂಡ್ರಾ. ಡೈವಿನಿಟಿ ಅಂಡ್ ಡೈವರ್ಸಿಟಿ: ಎ ಹಿಂದು ರಿವೈಟಲೈಜೇಶನ್ ಮೂಮೆಂಟ್ ಇನ್ ಮಲೆಷ್ಯಾ . ಯುನ್ವರ್ಸಿಟಿ ಆಫ್ ಹವೈ ಪ್ರೆಸ್, 2005. ISBN 0688168949
- ↑ ಹುಮೆ, ಲಿನ್ನೆ. ಪೊರ್ಟಲ್ಸ್ .
- ↑ ಪಲನಿ ಥೈ ಪುಸಮ್, ಮರುಪಡೆದದ್ದು ಡಿ 05, 2006
- ↑ "ಆಗ್ನೇಯ್ ಏಷ್ಯಾದಲ್ಲಿನ ಥೈಪುಸಮ್ ಆಚರಣೆಗಳು". Archived from the original on 2011-07-07. Retrieved 2010-12-21.
- ↑ "ಆರ್ಕೈವ್ ನಕಲು". Archived from the original on 2010-06-14. Retrieved 2010-12-21.
- ↑ "ಆರ್ಕೈವ್ ನಕಲು". Archived from the original on 2011-07-22. Retrieved 2021-08-10.
- ↑ "1.3 ಮಿಲಿಯನ್ ಮಾರ್ಕ್ ಥೈಪುಸಮ್mark Thaipusam - ಸ್ಟಾರ್ ನಿವ್ಸ್ ಪೇಪರ್". Archived from the original on 2007-04-03. Retrieved 2021-08-28.
- ↑ Cheney S (8 Feb 2009). "8,000 Hindu devotees take part in Thaipusam festival". Channel News Asia. Archived from the original on 23 ಜೂನ್ 2011. Retrieved 21 ಡಿಸೆಂಬರ್ 2010.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಥೈಪುಸಮ್ ಜ್ಯೋತಿಷ್ಯಾಸ್ತ್ರ Archived 2011-01-11 ವೇಬ್ಯಾಕ್ ಮೆಷಿನ್ ನಲ್ಲಿ.
- ಸಿಂಗಪೂರ್ ನಲ್ಲಿನ ಥೈಪುಸಮ್
- ಮಲೆಷ್ಯಾದ ಬಾಟು ಗುಹೆಗಳಲ್ಲಿನ ಥೈಪುಸಮ್ ಹಬ್ಬ 2010 Archived 2010-02-22 ವೇಬ್ಯಾಕ್ ಮೆಷಿನ್ ನಲ್ಲಿ.
- ಥೈಪುಸಮ್ ಕವಡಿ ಹಬ್ಬ Archived 2010-11-24 ವೇಬ್ಯಾಕ್ ಮೆಷಿನ್ ನಲ್ಲಿ.
- ಸಿಂಗಪೂರ್ ನಲ್ಲಿ 2009 ರಲ್ಲಿ ಥೈಪುಸಮ್ ಆಚರಣೆಯ ಭಾವಚಿತ್ರಗಳು
- ಥೈಪುಸಮ್ ನ ಹಬ್ಬಾಚರಣೆಗಳು Archived 2010-11-24 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- Pages using ISBN magic links
- Moveable holidays (2014 date missing)
- Infobox holiday (other)
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ತಮಿಳುನಾಡಿನಲ್ಲಿನ ಹಬ್ಬಗಳು
- ಹಿಂದೂ ಹಬ್ಬಗಳು
- ಮಲೆಷ್ಯಾದಲ್ಲಿನ ಧರ್ಮ
- ಸಿಂಗಪೂರ್ ನಲ್ಲಿನ ಹಿಂದು ತತ್ವ (ಹಿಂದು ಧರ್ಮ)
- ತಮಿಳು ಹಬ್ಬಗಳು
- ಹಿಂದೂ ಧರ್ಮದ ಹಬ್ಬಗಳು