ವಿಷಯಕ್ಕೆ ಹೋಗು

ಸುಬ್ರಹ್ಮಣ್ಯ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸ್ಕಂದ ಇಂದ ಪುನರ್ನಿರ್ದೇಶಿತ)
ಸುಬ್ರಹ್ಮಣ್ಯ ಸ್ವಾಮಿ
ಯುದ್ಧ ಮತ್ತು ವಿಜಯದ ದೇವತೆ (ದೇವತೆಗಳ ಸೇನಾಧಿಪತಿ)
ಶ್ರೀ ಸುಬ್ರಹ್ಮಣ್ಯ ಸ್ವಾಮಿ
by ರಾಜಾ ರವಿವರ್ಮ
ಸಂಲಗ್ನತೆದೇವ
ನೆಲೆಆರುಮುಖದಸ್ವಾಮಿ
ಮಂತ್ರಓಂ ಶರವಣ ಭವಾಯ ನಮಃ:
ಆಯುಧವೇಲಾಯುಧ
ಸಂಗಾತಿಶ್ರೀವಲ್ಲಿ and ದೇವಸೇನಾ
ವಾಹನನವೀಲು
ಕುಕ್ಕೆ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯ

ಕಾರ್ತಿಕೇಯನು ಹಿಂದೂಗಳಲ್ಲಿ ಜನಪ್ರಿಯನಾಗಿರುವ ಒಬ್ಬ ಹಿಂದೂ ದೇವತೆ, ಮತ್ತು ವಿಶೇಷವಾಗಿ ದಕ್ಷಿಣ ಭಾರತ , ಸಿಂಗಾಪೂರ್, ಶ್ರೀಲಂಕಾ, ಮಲೇಷ್ಯಾ ಹಾಗೂ ಮಾರೀಷಸ್‌ಗಳಲ್ಲಿ ಪ್ರಸಿದ್ಧವಾದ ದೇವರು. ಆದರೆ ಶ್ರೀಲಂಕಾದಲ್ಲಿ, ಹಿಂದೂಗಳು ಮತ್ತು ಬೌದ್ಧ ಧರ್ಮೀಯರು ಇಬ್ಬರೂ ಕಾರ್ತಿಕೇಯನಿಗೆ ಮುಡುಪಾಗಿರುವ ಮತ್ತು ದೇಶದ ದಕ್ಷಿಣದಲ್ಲಿರುವ ಒಂದು ಅತ್ಯಂತ ಪವಿತ್ರ ಬೌದ್ಧ ಮತ್ತು ಹಿಂದೂ ಕ್ಷೇತ್ರವಾದ ಕತರಗಾಮಾ ದೇವಸ್ಥಾನವನ್ನು ಪೂಜ್ಯಭಾವದಿಂದ ಕಾಣುತ್ತಾರೆ. ಹಾಗೆಯೆ ಮಲೇಷ್ಯಾದ ಪಿನಾಂಗ್, ಕ್ವಾಲಾಲಂಪೂರ್‌ನ ಚೀನೀ ಜನರೂ ಸಹ ಮುರುಗನ್‌ನನ್ನು ತಾಯ್ಪೂಸಾಮ್‌ನ ಅವಧಿಯಲ್ಲಿ ಪೂಜಿಸುತ್ತಾರೆ.

ಪಾರ್ವತಿಪುತ್ರನಾದ ಕುಮಾರಸ್ವಾಮಿ. ಷಣ್ಮುಖನೆಂಬ ಹೆಸರೂ ಇದೆ. ಕೃತ್ತಿಕೆಯರು ಇವನ ಸಾಕುತಾಯಿಯರು. ಇವನ ಜನ್ಮವಿಚಾರದಲ್ಲಿ ಅನೇಕ ಕಥೆಗಳಿವೆ. ಮಹಾಭಾರತದ ವನಪರ್ವದಲ್ಲಿನ ಕಾರ್ತಿಕೇಯಸ್ತವ ಇವನಿಗೆ ಐವತ್ತೊಂದು ಹೆಸರುಗಳನ್ನು ಸೂಚಿಸುತ್ತದೆ. ಈಶ್ವರನ ಅಗ್ನಿತತ್ತ್ವದಿಂದ ಸ್ಕಂದನಾಗಿ ಜನಿಸಿ ಆರು ಜನ ಮಾತೆಯರ ಹಾಲು ಕುಡಿದು ಷಾಣ್ಮುತುರನಾಗಿ ಶರವಣದಲ್ಲಿ ಬೆಳೆದವನಿವನು. ಶಕ್ತಿಧರನಾಗಿ ದೇವಸೈನಕ್ಕೆ ಅಧಿಪತಿಯಾಗಿ ಅವರಿಗಾಗಿ ರಾಕ್ಷಸ ಸಂಹಾರ ಮಾಡಿದ. ಕ್ರೌಂಚಪರ್ವತ ಧಾರಣ ಮಾಡಿದ. ನವಿಲು ಈತನ ವಾಹನ.

ದ್ರಾವಿಡ ದೇವ

[ಬದಲಾಯಿಸಿ]

ದ್ರಾವಿಡ ದೇವತೆಗಳಲ್ಲಿ ಕುಮಾರಸ್ವಾಮಿಗೆ ಕಂದ, ಮುರುಗ, ಕುರುಂಜಿಯಾಂಡವನ್, ಸುಬ್ರಹ್ಮಣ್ಯ ಮುಂತಾದ ಹೆಸರುಗಳಿದ್ದು ಅತ್ಯುಚ್ಚಸ್ಥಾನ, ಪೂಜೆ ಸಲ್ಲುತ್ತದೆ. ಭಕ್ತಿಪಂಥಿಗಳಾದ ಆಳ್ವಾರುಗಳೂ ಇತರರೂ ತಮ್ಮ ಅನೇಕ ಹಾಡುಗಳಲ್ಲಿ ಮುರುಗ ಸ್ವಾಮಿಯನ್ನು ವಿಪುಲವಾಗಿ ಕೊಂಡಾಡಿದ್ದಾರೆ. ಸ್ಕಾಂದಪುರಾಣ, ಶಿವಮಹಾಪುರಾಣ, ಕಾಳಿದಾಸಕುಮಾರಸಂಭವಗಳು ಈ ದೇವತೆಯ ಮಹಿಮಾವಿಶೇಷವನ್ನು ಸಾರುತ್ತವೆ.

ಪುರಾಣ, ಇತಿಹಾಸ

[ಬದಲಾಯಿಸಿ]
Standing at 42.7 m (140 ft) high, the world's tallest statue of Murugan, a Hindu deity, is located outside Batu Caves, near the city of Kuala Lumpur, Malaysia. The statue, which cost approximately 24 million rupees, is made of 1550 cubic metres of concrete, 250 tonnes of steel bars and 300 litres of gold paint brought in from neighbouring Thailand.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯಕ್ಷೆತ್ರ ಕೂಡಾ ಬಹಳ ಪ್ರಸಿದ್ದಿ ಪಡೆದಿದೆ.

  • ಕುಕ್ಕೆ ಸುಬ್ರಹ್ಮಣ್ಯವು 'ಧಾರಾ' ನದಿಯ ದಂಡೆಯಲ್ಲಿದೆ. ಹಿಂದೂ ಪುರಾಣ ಗ್ರಂಥಗಳ ಪ್ರಕಾರ ದೇವಸೇನಾಪತಿ ಕುಮಾರಸ್ವಾಮಿಯು ತಾರಕ-ಶೂರಪದ್ಮಾಸುರ ಮತ್ತಿತರ ರಾಕ್ಷಸರನ್ನು ಕೊಂದು ಈ ಸ್ಥಳಕೆ ಬಂದನು. ರಕ್ತಸಿಕ್ತವಾದ ತನ್ನ ಶಕ್ತಿಯಾಯುಧವನ್ನು ಈ ನದಿಯಲ್ಲಿ ತೊಳೆದನು. ಈ ಘಟನೆಯ ಆನಂತರ ಈ ನದಿ ಕುಮಾರಧಾರೆಯೆಂದು ಪ್ರಸಿದ್ದವಾಯಿತು. ರಾಕ್ಷಸರೊಂದಿಗಿನ ಯುದ್ದಾನಂತರ ಕುಮಾರಸ್ವಾಮಿಯು ಸೋದರ ಗಣೇಶ, ವೀರಬಾಹು ಮೊದಲಾದ ಸಹಚರರೊಂದಿಗೆ ಕುಮಾರ ಪರ್ವತದ ತುದಿ ಭಾಗಕ್ಕೆ ಬಂದನು.
  • ದೇವೇಂದ್ರನೇ ಮೊದಲಾದವರು ಆತನನ್ನು ಸ್ವಾಗತಿಸಿದರು. ರಾಕ್ಷಸರೊಂದಿಗಿನ ಯುದ್ದದಲ್ಲಿ ಗೆದ್ದ ಸಂತೋಷಕ್ಕಾಗಿ ದೇವೇಂದ್ರನು ತನ್ನ ಮಗಳು ದೇವಸೇನೆಯನ್ನು ಮದುವೆಯಾಗುವಂತೆ ಯಾಚಿಸಿದರು. ಸ್ವಾಮಿಯು ಈ ಯಾಚನೆಯನ್ನು ಮನ್ನಿಸಿದನು. ಈ ಮದುವೆಯೂ ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು ಸಂಪನ್ನಗೊಂಡಿತು. ಈ ಸ್ಥಳದಲ್ಲಿ ತಪಸ್ಸನ್ನು ಮಾಡಿಕೊಂಡಿದ್ದ ನಾಗರಾಜನಾದ ವಾಸುಕಿಗೆ ಶ್ರೀ ಸ್ವಾಮಿಯ ದರ್ಶನ ನೀಡಿದನು ಹಾಗು ಇಲ್ಲಿ ಆತನೊಂದಿಗೆ ಶಾಶ್ವತವಾಗಿ ನೆಲೆಸಲು ತಿಳಿಸಿ, ಆನೇಕ ವಿಧವಾದ ವರಗಳನ್ನು ನೀಡಿದನು.
  • ಆ ಸಮಯದಿಂದ ಸ್ವಾಮಿಯು ತನ್ನ ಆಧ್ಯಾತ್ಮಿಕ ಶಕ್ತಿಯೊಂದಿಗೆ(ದೈವಿಕ) ಹಾಗು ಪತ್ನಿ ದೇವಸೇನೆ ಮತ್ತು ವಾಸುಕಿಯೊಂದಿಗೆ ನೆಲೆಸಿರುವನೆಂದು ನಂಬಲಾಗಿದೆ. ಪ್ರತಿ ವರ್ಷ ಇಲ್ಲಿ ಪ್ರಸಿಧ್ದವಾದ ವಾರ್ಷಿಕ ರಥೋತ್ಸವವು ವಿಶೇಷ ಪೂಜೆಯೊಂದಿಗೆ ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು 'ಚಂಪಾ ಷಷ್ಠಿ' ಎಂಬ ಹೆಸರಿನಲ್ಲಿ ಜರಗುತ್ತಿರುವುದು. ಇನ್ನೊಂದು ಪುರಾಣ ಹೇಳಿಕೆಯಂತೆ ತಾರಕ-ಶೂರಪದ್ಮಾಸುರ ಮತ್ತಿತರ ರಾಕ್ಷಸರನ್ನು ಅವರ ಅನುಯಾಯಿಗಳನ್ನು ಯುದ್ದದಲ್ಲಿ ಕೊಂದು ನಂತರ ಷಣ್ಮುಖ ಸ್ವಾಮಿಯು ತನ್ನ ಸೋದರ ಗಣೇಶ ಹಾಗು ಮತ್ತಿತರೊಂದಿಗೆ ಕುಮಾರ ಪರ್ವತಕ್ಕೆ ಬಂದನು.
  • ಅಲ್ಲಿ ದೇವೇಂದ್ರ ಹಾಗು ಇತರರಿಂದ ಸ್ವಾಗತಿಸಲ್ಪಟ್ಟನು. ಬಹು ಸಂತೋಷನಾದ ದೇವೇಂದ್ರನು ತನ್ನ ಮಗಳು ದೇವಸೇನೆಯನ್ನು ವಿವಾಹವಾಗಿ ಸ್ವೀಕರಿಸಬೇಕೆಂದು ಬೇಡಿಕೊಂಡನು. ಆಗ ಸ್ವಾಮಿಯು ಸಂತೋಷನಾಗಿ ಒಪ್ಪಿದನು. ಈ ದೈವಿಕ ವಿವಾಹವು ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು ಕುಮಾರ ಪರ್ವತದಲ್ಲಿ ನೆರೆವೇರಿತು. ಬ್ರಹ್ಮ, ವಿಷ್ಣು, ಮಹೆಶ್ವರರೇ ಮೊದಲಾದ ದೇವತೆಗಳು ಈ ವಿವಾಹ ಹಾಗು ಸಿಂಹಾಸನಾರೋಹಣ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ವಿವಿಧ ನದಿಗಳ ಜಲಗಳನ್ನು ತರಲಾಗಿತ್ತು.
  • ಮಹಾವೈಷಿಷ್ಟ್ಯದ ಈ ಪವಿತ್ರ ಜಲ ಕೆಳಗೆ ಹರಿದು ನದಿಯ ರೂಪ ತಾಳಿತು ಮತ್ತು ಅದು 'ಕುಮಾರಧಾರಾ' ನದಿಯೆಂಬ ಹೆಸರಿನಿಂದ ಪ್ರಸಿದ್ದವಾಯಿತು. ಮಹಾಶಿವ ಭಕ್ತ ಹಾಗು ನಾಗರಾಜನಾದ ವಾಸುಕಿಯು ಕುಕ್ಕೆ ಸುಬ್ರಹ್ಮಣ್ಯದ ಬಿಲ್ವದ್ವಾರಾ ಎಂಬ ಗುಹೆಯಲ್ಲಿ ಗರುಡನ ದಾಳಿಯಿಂದ ಪಾರಾಗಲು ಆನೇಕ ವರ್ಷಗಳಿಂದ ತಪಸ್ಸನ್ನು ಮಾಡಿ ಬರುತ್ತಿದನು. ಸ್ವಾಮಿ ಶಂಕರನ ಆಶ್ವಾಸನೆಯಂತೆ ಷಣ್ಮುಖನು ವಾಸುಕಿಗೆ ದರ್ಶನ ನೀಡಿದನು ಮತ್ತು ತನ್ನ ಪರಮ ಭಕ್ತನಾದ ಆತನೊಂದಿಗೆ ಶಾಶ್ವತವಾಗಿ ನೆಲೆನಿಲ್ಲುವುದಾಗಿ ಆಭಯ ನೀಡಿದನು. ಹಾಗಾಗಿ ವಾಸುಕಿಗೆ ಸಲ್ಲಿಸುವ ಸೇವೆ, ಪೂಜಾದಿಗಳಲ್ಲಿ ಆದು ಬೇರೆಯಲ್ಲದೆ ಸ್ವಾಮಿ ಸುಬ್ರಹ್ಮಣ್ಯನಿಗೆ ಸಲ್ಲಿಸುವ ಸೇವೆಗಳೇ ಆಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: