ಸುನೀತಾ ವಿಲಿಯಮ್ಸ್
ಸುನಿತಾ ವಿಲಿಯಮ್ಸ್ | |
---|---|
ನಾಸಾ ಗಗನಯಾನಿ | |
ರಾಷ್ಟ್ರೀಯತೆ | ಅಮೇರಿಕನ್ |
ಸ್ಥಾನಮಾನ | ಸಕ್ರಿಯ |
ಇತರೆ ವೃತ್ತಿ | ಟೆಸ್ಟ್ ಪೈಲಟ್ |
ಶ್ರೇಣಿ | ಕ್ಯಾಪ್ಟನ್, ಯುಎಸ್‌ಎನ್ |
ಅಂತರಿಕ್ಷದಲ್ಲಿದ್ದ ಸಮಯ | 194d 18h 02m |
ಆಯ್ಕೆ | 1998 NASA Group |
ಕೈಗೊಂಡ ಕಾರ್ಯಗಳು | STS-116, Expedition 14, Expedition 15, STS-117 |
ಗಳಿಸಿದ ಪದಕಗಳು |
ಸುನೀತಾ ವಿಲಿಯಮ್ಸ್ (ಜನನ ಸೆಪ್ಟೆಂಬರ್ 19, 1965) ಅವರು ಅಮೇರಿಕದಲ್ಲಿ ನೌಕಾದಳದಲ್ಲಿ ಅಧಿಕಾರಿ ಹಾಗೂ ನಾಸಾದಲ್ಲಿ ಗಗನಯಾತ್ರಿಯಾಗಿದ್ದಾರೆ.[೧] ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಏರ್ಪಡಿಸಿದ್ದ ಎಕ್ಸ್‌ಪೆಡಿಷನ್ 14ರ ಯಾನದಲ್ಲಿಯ ಗಗನ ಯಾತ್ರಿಗಳಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರ ಎಕ್ಪ್‌ಪೆಡಿಷನ್ 15ರಲ್ಲೂ ಕೂಡ ಅವರನ್ನು ಬಳಸಿಕೊಳ್ಳಲಾಯ್ತು. ಅವರು ಅತಿ ಹೆಚ್ಚು ದಿನ (195 ದಿನ) ಬಾಹ್ಯಾಕಾಶ ನೌಕೆಯಲ್ಲಿ ಕಾಲ ಕಳೆದ ಮಹಿಳೆ ಎಂಬ ದಾಖಲೆಯನ್ನು ಹೊಂದಿದ್ದಾರೆ.[೨] ನಾಸಾದ ಸಾರ್ವಜನಿಕ ವಕ್ತಾರೆಯಾಗಿರುವ ಇವರನ್ನು ಕೊಲ್‌ಬರ್ಟ್ ರಿಪೋರ್ಟ್ ಕಿರುತೆರೆ ಕಾರ್ಯಕ್ರಮದಲ್ಲಿ ISSನ Node 3ಗೆ ಸೂಚಿಸಲಾದ ಹೆಸರನ್ನು ಬಿತ್ತರಿಸಲು ಆಯ್ಕೆ ಮಾಡಲಾಗಿತ್ತು.[೩]
ವೈಯಕ್ತಿಕ ವಿವರಗಳು
[ಬದಲಾಯಿಸಿ]ಡಾ.ದೀಪಕ್ ಪಾಂಡ್ಯಾ ಮತ್ತು ಬೋನಿ ಪಾಂಡ್ಯಾ ಅವರ ಮಗಳಾಗಿ ಒಹಾಯೋದಲ್ಲಿರುವ ಯುಕ್ಲಿಡ್‌ನಲ್ಲಿ ಹುಟ್ಟಿದರು. ಅವರ ಪೋಷಕರು ಈಗ ಮೆಸಾಚುಸೆಟ್ಸ್‌ನ ಫಾಲ್ಮೌತ್ನಲ್ಲಿ ವಾಸಿಸುತ್ತಿದ್ದಾರೆ. ವಿಲಿಯಮ್ಸ್ ಅವರ ತಂದೆ ದೀಪಕ್ ಪಾಂಡ್ಯಾ ಅವರು ಪ್ರಖ್ಯಾತ ನರಶಾಸ್ತ್ರಜ್ಞರಾಗಿದ್ದಾರೆ. ದೀಪಕ್ ಪಾಂಡ್ಯಾ ಭಾರತದ ಗುಜರಾತ್ ಮೂಲದವರಾಗಿದ್ದು ಅವರು ತನ್ನ ತಂದೆಯ ಮೂಲದವರನ್ನು ಭೇಟಿಯಾಗಲು ಭಾರತಕ್ಕೆ ಬಂದು ಹೋಗಿದ್ದಾರೆ. ತಾಯಿಯ ಕಡೆಯಿಂದ ವಿಲಿಯಮ್ಸ್ ಸ್ಲೋವಿನ್ ಮೂಲದವರಾಗಿದ್ದಾರೆ.[೪]
ವಿಲಿಯಮ್ಸ್ ಅವರು ಮೈಕೆಲ್ ವಿಲಿಯಮ್ಸ್ ಅವರನ್ನು ವಿವಾಹವಾಗಿದ್ದಾರೆ. ಇವರಿಬ್ಬರು ಕಳೆದ 16 ವರ್ಷದಿಂದ ಸಂಸಾರ ನಡೆಸುತ್ತಿದ್ದಾರೆ. ತಮ್ಮ ವೃತ್ತಿಯ ಆರಂಭದ ದಿನಗಳಲ್ಲಿ ಇವರಿಬ್ಬರೂ ಹೆಲಿಕ್ಯಾಪ್ಟರ್ ಪೈಲಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನೇಕ ಆಸಕ್ತಿಕರ ಹವ್ಯಾಸ ಹೊಂದಿರುವ ಇವರು ಓಟ, ಈಜು, ಬೈಕಿಂಗ್, ವಿಂಡ್‌ಸರ್ಫಿಂಗ್, ಸ್ನೋ ಬೋರ್ಡಿಂಗ್ ಮತ್ತು ಬಿಲ್ಲುವಿದ್ಯೆಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಇವರು ಬೊಸ್ಟನ್ ರೆಡ್ ಸಾಕ್ಸ್ ತಂಡದ ಬಹುದೊಡ್ಡ ಅಭಿಮಾನಿಯಾಗಿದ್ದಾರೆ. ಅವರು ಗೊರ್ಬಿ ಎಂಬ ಹೆಸರಿನ ಪ್ರೀತಿಯ ಜಾಕ್ ರಸ್ಸೆಲ್ ಟೆರಿಯರ್ ನಾಯಿಯನ್ನು ಸಾಕಿದ್ದಾರೆ.
ಶಿಕ್ಷಣ
[ಬದಲಾಯಿಸಿ]ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಮೆಸಾಚುಸೆಟ್ಸ್‌ನ ನೀಡಮ್‌ನಲ್ಲಿಯ ನೀಡಮ್ ಹೈಸ್ಕೂಲ್‌ನಲ್ಲಿ ಪೂರೈಸಿದ ಸುನಿತಾ ವಿಲಿಯಮ್ಸ್ 1983ರಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದರು. 1987ರಲ್ಲಿ ಇವರು ಅಮೇರಿಕಾದ ನೌಕಾ ಅಕಾಡೆಮಿಯಿಂದ ದೈಹಿಕ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದುಕೊಂಡರು. ನಂತರ 1995ರಲ್ಲಿ ಫ್ಲೋರಿಡಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿಯನ್ನು ಪಡೆದರು.[೧]
ಸೈನಿಕ ವೃತ್ತಿ
[ಬದಲಾಯಿಸಿ]This section requires expansion. (September 2009) |
1987ರಲ್ಲಿ ವಿಲಿಯಮ್ಸ್ ಅವರು ಅಮೇರಿಕಾದ ನೌಕಾಪಡೆಗೆ ಸೇರ್ಪಡೆಯಾಗಲು ಅನುಮತಿ ಪಡೆದರು. ಅವರು 1989ರಲ್ಲಿ ನೌಕಾ ಚಾಲಕರಾಗಿ ನಿಯೋಜಿತರಾದರು ಮತ್ತು 1993ರಲ್ಲಿ ನೇವಲ್ ಟೆಸ್ಟ್ ಪೈಲಟ್ ಸ್ಕೂಲ್‌ನಿಂದ ಪದವಿಯನ್ನು ಪಡೆದುಕೊಂಡರು.[೧]
ನಾಸಾದಲ್ಲಿ ವೃತ್ತಿ
[ಬದಲಾಯಿಸಿ]1998 ಜೂನ್‌ರಲ್ಲಿ ನಾಸಾಕ್ಕೆ ಆಯ್ಕ್ರೆಯಾದ ವಿಲಿಯಮ್ಸ್ ಅವರಿಗೆ ಆಗಸ್ಟ್ 1998ರಲ್ಲಿ ತರಬೇತಿ ಪ್ರಾರಂಭವಾಯಿತು.[೧] ಅವರ ಗಗನಯಾನಿ ತರಬೇತಿಯು ಅಭಿಶಿಕ್ಷಣ ಉಪನ್ಯಾಸಗಳು ಮತ್ತು ಪ್ರವಾಸಗಳು, ಹಲವಾರು ತಾಂತ್ರಿಕ ಮತ್ತು ವೈಜ್ಞಾನಿಕ ಉಪನ್ಯಾಸಗಳು, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು ಗಗನ ನೌಕೆಯ ಕುರಿತಾದ ಗಹನ ಪರಿಚಯ, ಮನೋದೈಹಿಕ ತರಬೇತಿ ಮತ್ತು T-38 ವಿಮಾನಕ್ಕಾಗಿನ ಮೂಲ ತರಬೇತಿ, ಅಷ್ಟೇ ಅಲ್ಲದೆ ನೀರಿನಿಂದ ಹಾಗೂ ಕಾಡಿನಲ್ಲಿನ ಅಪಘಾತಗಳಿಂದ ರಕ್ಷಿಸಿಕೊಳ್ಳುವ ತರಬೇತಿಯನ್ನು ಒಳಗೊಂಡಿತ್ತು. ಮೂರು ಬಾರಿ ಗಗನ ನಡಿಗೆಯನ್ನು ಯಶಸ್ವಿಯಾಗಿ ಪೂರೈಸಿ, ಅತಿ ಹೆಚ್ಚು ಗಗನ ನಡಿಗೆ ಕೈಗೊಂಡ ಕ್ಯಾಥರಿನ್ ಥೊರಂಟಾನ್‌ರನ್ನು ವಿಲಿಯಮ್ಸ್ ಮೀರಿಸಿದ್ದರು. ನಂತರ ಪೆಗ್ಗಿ ವಿಟ್ಸ್‌ನ್ ವಿಲಿಯಮ್ಸ್ ರ ದಾಖಲೆಯನ್ನು ಮುರಿದರು. ಕಠಿಣ ತರಬೇತಿಯ ಮತ್ತು ಮೌಲ್ಯಮಾಪನ ನಂತರದಲ್ಲಿ ವಿಲಿಯಮ್ಸ್ ಮಾಸ್ಕೋದ ರಷ್ಯನ್ ಸ್ಪೇಸ್ ಎಜೆನ್ಸಿಯ ಜೊತೆಗೆ ISSಗೆ ರಷ್ಯಾದ ಕೊಡುಗೆಗಳ ಕುರಿತಾಗಿ ಕೆಲಸ ಮಾಡಿದರು. ಅಲ್ಲದೆ ಇವರು ISSಗೆ ಕಳುಹಿಸಿದ ಪ್ರಪ್ರಥಮ ಗಗನ ಯಾತ್ರಿ ತಂಡದ ಜೊತೆ ಕೂಡ ಕೆಲಸ ಮಾಡಿದರು. ಎಕ್ಸ್‌ಪೆಡಿಷನ್ 1ನ ನಂತರದಲ್ಲಿ ವಿಲಿಯಮ್ಸ್ ರೊಬೊಟಿಕ್ಸ್ ಬ್ರಾಂಚ್‌ನ ISS ರೊಬೊಟಿಕ್ ಆರ್ಮ್ ಮತ್ತು ಅದಕ್ಕೆ ಸಂಬಂಧಿಸಿದ ಸ್ಪೆಷಲ್ ಪರ್ಪಸ್ ಡೆಕ್ಸ್‌ಟೆರಿಯಸ್ ಮ್ಯಾನಿಪುಲೇಟರ್ ಕುರಿತಾಗಿ ಕೆಲಸ ಮಾಡಿದರು. ಅವರು NEEMO 2 ಮಿಷನ್‌ನಲ್ಲಿದ್ದ ತಂಡದ ಸದಸ್ಯರಾಗಿದ್ದರು. ಈ ಮಿಷನ್‌ನಲ್ಲಿ ಅವರು ಉಳಿದವರ ಜೊತೆಗೆ ಮೇ 2002ರಲ್ಲಿ ಒಂಬತ್ತು ದಿನಗಳಕಾಲ ನೀರಿನೊಳಗೆ ಅಕ್ವೇರಿಯಸ್ ಹ್ಯಾಬಿಟೇಟ್‌ನಲ್ಲಿ ವಾಸವಿದ್ದರು.[೧]
೨೦೦೮ ರಿಂದ ,ನಾಸಾದ ಗಗನಯಾತ್ರಿಗಳ ಕಚೇರಿಯ ಡೆಪ್ಯುಟಿ ಚೀಫ್ಆಗಿ ವಿಲಿಯಮ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ.
ಎಲ್ಲ ಗಗನಯಾತ್ರಿಗಳಂತೆ ವಿಲಿಯಮ್ಸ್ ಕೂಡ ಪರವಾನಗಿ ಪಡೆದಿರುವ ಹವ್ಯಾಸಿ ರೆಡಿಯೋ ಆಪರೇಟರ್ ಆಗಿದ್ದಾರೆ. 2001ರಲ್ಲಿ ಇವರು ಟೆಕ್ನಿಷಿಯನ್ ಕ್ಲಾಸ್ ಲೈಸೆನ್ಸ್ ಪರೀಕ್ಷೆಯನ್ನು ಪಾಸು ಮಾಡಿದ್ದು ಫೆಡರಲ್ ಕಮ್ಯುನಿಕೇಷನ್ ಕಮಿಷನ್‌ನಿಂದ ಆಗಸ್ಟ್ 13ರ 2001ರಲ್ಲಿ KD5PLB ರೆಡಿಯೊ ಕರೆ ಗುರುತನ್ನು ಪಡೆದಿದ್ದಾರೆ.[೫] ISSನಿಂದ ವಿಲಿಯಮ್ಸ್ ಅವರು ಅಲ್ಲಿಯ ಎರಡು ರೇಡಿಯೋಗಳಲ್ಲಿ ಒಂದನ್ನು ಬಳಸಿ ಶಾಲಾವಿದ್ಯಾರ್ಥಿಗಳ ಜೊತೆ ಮಾತನಾಡಿದ್ದರು.[೬]
ಗಗನಯಾನದ ಅನುಭವಗಳು
[ಬದಲಾಯಿಸಿ]STS-116
[ಬದಲಾಯಿಸಿ]ಎಕ್ಸ್‌ಪೆಡಿಷನ್ 14ರ ತಂಡವನ್ನು ಸೇರಿಕೊಳ್ಳಲು ವಿಲಿಯಮ್ಸ್ ಅವರನ್ನು STS-116ಜೊತೆಗೆ ಡಿಸ್ಕವರಿ ನೌಕೆಯ ಮೂಲಕ ಅಂತರಾಷ್ಚ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಸೆಂಬರ್ 9 2006ರಂದು ಹಾರಿಬಿಡಲಾಯಿತು. ಎಪ್ರಿಲ್ 2007ರಂದು ರಷ್ಯಾದ ಸದಸ್ಯರು ತಮ್ಮ ಕಕ್ಷೆಯನ್ನು ಎಕ್ಸ್‌ಪೆಡಿಷನ್ 15ಕ್ಕೆ ಬದಲಾಯಿಸಿಕೊಂಡರು.
ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ(ISS) ಪ್ರಯಾಣಕ್ಕೆ ತಮ್ಮ ದಿನನಿತ್ಯದ ಬಳಕೆಯ ಕೆಲವು ವಸ್ತುಗಳ ಜೊತೆಗೆ ಭಗವದ್‌ಗೀತೆಯ ಒಂದು ಪುಸ್ತಕ, ಗಣೇಶನ ಸಣ್ಣ ವಿಗ್ರಹ ಹಾಗೂ ಕೆಲವು ಸಮೋಸಾಗಳನ್ನು ಕೊಂಡೊಯ್ದಿದ್ದರು.[೭]
ಎಕ್ಸ್‌ಪೆಡಿಷನ್ಸ್ 14 ಮತ್ತು 15
[ಬದಲಾಯಿಸಿ]ಡಿಸ್ಕವರಿ ನೌಕೆಯು ಭೂ ಕಕ್ಷೆಯಿಂದ ಹಾರಿದ ಮೇಲೆ ತನ್ನ ಮೆಚ್ಚಿನ ತಲೆ ಕೂದಲನ್ನು ಲಾಕ್ಸ್ ಆಫ್ ಲವ್ ಸಂಸ್ಥೆಗೆ ನೀಡುವಂತೆ ವ್ಯವಸ್ಥೆ ಮಾಡಿದ್ದರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜಾನ್‌ಹಿಗ್ಗಿನ್ ಬಾಥಮ್, ವಿಲಿಯಮ್ಸ್ ಅವರ ಕೂದಲನ್ನು ಕತ್ತರಿಸಿದರು. ಕೂದಲನ್ನು STS-116ನ ತಂಡವು ಅದನ್ನು ಭೂಮಿಗೆ ತಂದಿತು.[೮]
STS-116 ಮಿಷನ್‌ನ ಎಂಟನೇ ದಿನ ವಿಲಿಯಮ್ಸ್ ಅವರು ಬಾಹ್ಯಾಕಾಶ ನೌಕೆಯಿಂದ ಹೊರಗೆ ಬಂದು ಮೊದಲ ಗಗನ ನಡಿಗೆಯ ಚಟುವಟಿಕೆಗಳನ್ನು ಕೈಗೊಂಡರು. ಜನವರಿ 31, ಫ್ರೆಬ್ರವರಿ 4 ಮತ್ತು ಫೆಬ್ರವರಿ 9, 2007ರಂದು ವಿಲಿಯಮ್ಸ್ ಅವರು ಮೈಕೆಲ್ ಲೊಫೆಜ್-ಅಲ್ಜಿರಿಯಾ ಜೊತೆಗೆ ISS ನಿಂದ ಮೂರು ಗಗನ ನಡಿಗೆಗಳನ್ನು ಮುಗಿಸಿದರು. ಈ ನಡಿಗೆಯ ಸಂದರ್ಭದಲ್ಲಿ ಕ್ಯಾಮೆರಾವನ್ನು ಸರಿಯಾಗಿ ಕಟ್ಟಿಕೊಳ್ಳದ್ದರಿಂದ ವಿಲಿಯಮ್ಸ್ ಅದನ್ನು ಸರಿಪಡಿಸುವುದರೊಳಗಾಗಿ ಅದು ಬಿಚ್ಚಿಕೊಂಡು ಆಕಾಶದಲ್ಲಿ ತೇಲಾಡುತ್ತಿತ್ತು.[೯]
ವಿಲಿಯಮ್ಸ್ ಒಂಬತ್ತು ದಿನಗಳಲ್ಲಿ ಮೂರು ಆಕಾಶ ನಡಿಗೆಗಳನ್ನು ಪೂರೈಸಿದರು. ಮೂರನೇ ಗಗನ ನಡಿಗೆಯನ್ನು ಪೂರೈಸಲು ವಿಲಿಯಮ್ಸ್ 6 ತಾಸು 40 ನಿಮಿಷಗಳ ಕಾಲ ಗಗನ ನಡಿಗೆಯಲ್ಲಿರಬೇಕಾಯ್ತು. ಮೂರು ಆಕಾಶ ನಡಿಗೆಗೆಗಳನ್ನು ಪೂರೈಸಲು ಅವರು 29ತಾಸು 17ನಿಮಿಷಗಳಷ್ಟು ಕಾಲ ಆಕಾಶ ನಡಿಗೆಯಲ್ಲಿ ಇರಬೇಕಾಯ್ತು. ಈ ನಡಿಗೆಯ ಮೂಲಕ ಈ ಹಿಂದೆ ಅತೀ ಹೆಚ್ಚು ಸಮಯ ಆಕಾಶ ನಡಿಗೆಯನ್ನು ಮಾಡಿದ ದಾಖಲೆ ಹೊಂದಿದ್ದ ಕ್ಯಾಥರಿನ್ ಸಿ. ಥೊರಂಟಾನ್ ಅವರ ದಾಖಲೆಯನ್ನು ವಿಲಿಯಮ್ಸ್ ಮುರಿದರು.[೧][೨]ಡಿಸೆಂಬರ್ 18, 2007ರಂದು ಎಕ್ಸಪೆಡಿಷನ್ 16ರ ತಮ್ಮ ನಾಲ್ಕನೇ ಗಗನ ನಡಿಗೆಯಲ್ಲಿ ಪೆಗ್ಗಿ ವಿಟ್ಸನ್ ಅವರು ಒಟ್ಟಾರೆ 32 ತಾಸು, 36 ನಿಮಿಷಗಳ ಕಾಲ ಗಗನ ನೌಕೆಯ ಹೊರಗಿದ್ದು (EVA) ಗಗನ ನಡಿಗೆಯನ್ನು ಮಾಡುವ ಮೂಲಕ ವಿಲಿಯಮ್ಸ್ ಅವರಿಗಿಂತ ಹೆಚ್ಚಿನ ಅವಧಿಯಲ್ಲಿ ಗಗನ ನಡಿಗೆಯನ್ನು ಮಾಡಿದರು.[೧೦][೧೧]
ವಿಲಿಯಮ್ಸ್ ಅವರು ಹೆಚ್ಚಿನ ಮಸಾಲೆಯುಕ್ತ ಆಹಾರಕ್ಕೆ ಬೇಡಿಕೆಯಿಟ್ಟಿದ್ದರಿಂದ ಮಾರ್ಚ್ 2007ರ ಪ್ರಾರಂಭದಲ್ಲಿ ಪ್ರೋಗ್ರೆಸ್ ಗಗನ ನೌಕೆಯಲ್ಲಿ ಕೊಳವೆಯೊಂದರಲ್ಲಿ ವಾಸಾಬಿ ಪದಾರ್ಥವನ್ನು ಅವರಿಗೆ ಕಳುಹಿಸಲಾಯಿತು. ಕೊಳವೆಯನ್ನು ಬಿಚ್ಚಿದಾಗ ಭೂ ವಾತಾವರಣದ ಒತ್ತಡದಲ್ಲಿ ತುಂಬಿದ್ದ ಜೆಲ್ ರೀತಿಯ ಪೇಸ್ಟ್ ISSನಲ್ಲಿದ್ದ ಕಡಿಮೆ ಒತ್ತಡದಲ್ಲಿ ಒಮ್ಮೆಲೆ ಹೊರಚೆಲ್ಲಿಕೊಂಡಿತು.ಆ ವಾತಾವರಣದಲ್ಲಿ ವಾಸಾಬಿ ಪದಾರ್ಥವನ್ನು ಇಟ್ಟುಕೊಳ್ಳುವುದು ಕಷ್ಟದಾಯಕವಾಯ್ತು.[೧೨]
ಎಪ್ರಿಲ್ 16, 2007ರಂದು ಕಕ್ಷೆಯಲ್ಲಿ ಮೊಟ್ಟಮೊದಲ ಮ್ಯಾರಾಥಾನ್ ಪೂರೈಸಿದ ಗಗನಯಾತ್ರಿಯಲ್ಲಿ ವಿಲಿಯಮ್ಸ್ ಮೊದಲಿಗರಾದರು.[೧೩] ವಿಲಿಯಮ್ಸ್ 4 ತಾಸು 24 ನಿಮಿಷಗಳಲ್ಲಿ 2007 ಬೊಸ್ಟನ್ ಮ್ಯಾರಾಥಾನ್ ಅನ್ನು ಪೂರೈಸಿದರು.[೧೪][೧೫][೧೬] ತಂಡದ ಉಳಿದ ಸದಸ್ಯರು ಕಿತ್ತಳೆ ಹಣ್ಣುಗಳನ್ನು ನೀಡುತ್ತಾ ಅವರನ್ನು ಪ್ರೋತ್ಸಾಹಿಸಿದರು. ವಿಲಿಯಮ್ಸ್ ಸಹೋದರಿ, ದಿನಾ ಪಾಂಡ್ಯಾ ಮತ್ತು ಇನ್ನೊಬ್ಬ ಗಗನಯಾತ್ರಿ ಕರೆನ್ ಎಲ್.ನೈಬರ್ಗ್ ಅವರು ಭೂಮಿಯಲ್ಲಿ ಮ್ಯಾರಾಥಾನ್ ಓಟವನ್ನು ಪೂರೈಸಿದರು. ಈ ವಿವರಗಳನ್ನು ವಿಲಿಯಮ್ಸ್ ಅವರು ಮಿಷನ್ ಕಂಟ್ರೋಲ್ ಮೂಲಕ ಪಡೆದುಕೊಂಡರು. 2008ರಲ್ಲಿ ವಿಲಿಯಮ್ಸ್ ಅವರು ಭೂಮಿಯ ಮೇಲೆ ಬೊಸ್ಟನ್ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದರು. ಅದೇ ವರ್ಷ ಪ್ರಸಿದ್ಢ ಗೇಮ್ ಶೋ ಡ್ಯುಯೆಲ್‌ನಲ್ಲಿ ಈ ಘಟನೆಯ ಕುರಿತು ಪ್ರಶ್ನೆ ಕೇಳಲಾಗಿತ್ತು. ಉತ್ತರಗಳು ಹೀಗಿದ್ದವು : ಲಂಡನ್, ನ್ಯೂಯಾರ್ಕ್, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಪ್ಯಾರಿಸ್. ISS ನಿಖರವಾದ ಉತ್ತರವಾಗಿತ್ತು.
ವಿಲಿಯಮ್ಸ್ ಅವರನ್ನು STS-117ರ "ಅಟ್ಲಾಂಟಿಸ್" ನೌಕೆಯ ಮೂಲಕ ಭೂಮಿಗೆ ವಾಪಸ್ಸು ಕರೆಸಿಕೊಳ್ಳುವ ನಿರ್ಧಾರವನ್ನು ಎಪ್ರಿಲ್ 26, 2007ರಂದು ಮಾಡಲಾಯಿತು. ಆದ್ದರಿಂದಾಗಿ ವಿಲಿಯಮ್ಸ್ ಅವರಿಗೆ ಅಮೇರಿಕಾದ ಏಕವ್ಯಕ್ತಿ ಗಗನನೌಕೆ ದಾಖಲೆಯನ್ನು ಮಾತ್ರ ಮುರಿಯಲಾಗಲಿಲ್ಲ. ಆದರೆ ಇತ್ತೀಚೆಗೆ ತಮ್ಮ ಈ ಹಿಂದಿನ ಜೊತೆಗಾರ ಗಗನಯಾತ್ರಿ ಕಮಾಂಡರ್ ಮೈಕೆಲ್ ಲೊಫೆಜ್-ಅಲ್ಜೀರಿಯಾ ಅವರು ಈ ದಾಖಲೆಯನ್ನು ಮುರಿದರು.
ಆದರೆ ಅತಿಹೆಚ್ಚು ಸಮಯದ ಏಕ ಮಹಿಳೆ ಗಗನಯಾನದ ಎಂಬ ದಾಖಲೆಯನ್ನು ಇವರು ಮುರಿದಿದ್ದಾರೆ.[೧][೧೭][೧೮]
STS-117
[ಬದಲಾಯಿಸಿ]ವಿಲಿಯಮ್ಸ್ ಅವರು STS-117ನ ಮಿಷನ್ ಸ್ಪೆಷಲಿಸ್ಟ್ ಆಗಿ ಕಾರ್ಯ ನಿರ್ವಹಿಸಿ ಜೂನ್ 22, 2007ರಂದು STS-೧೧೭ ಮಿಷನ್‌ನ ಕೊನೆಯಲ್ಲಿ ಭೂಮಿಗೆ ವಾಪಸ್ಸಾದರು. ಗಗನ ನೌಕೆ ಅಟ್ಲಾಂಟಿಸ್ ಭೂಮಿಯನ್ನು ಪೌರ್ವಾತ್ಯ ಹಗಲಿನ ಸಮಯ (EDT) ಬೆಳಿಗ್ಗೆ 3:49ಕ್ಕೆ ಕ್ಯಾಲಿಫೋರ್ನಿಯಾದ ಏರ್ ಫೋರ್ಸ್ ಬೇಸ್‌ನಲ್ಲಿ ಬಂದಿಳಿಯಿತು. ಅಖಂಡ 195ದಿನಗಳನ್ನು ಅಂತರಿಕ್ಷದಲ್ಲಿ ಕಳೆದ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಬಂದಿಳಿದರು.
ಕೇಪ್ ಕಾರ್ನಿವಲ್‌ನಲ್ಲಿಯ ಪ್ರತಿಕೂಲ ಹವಾಮಾನದ ಕಾರಣದಿಂದ ಮಿಷನ್‌ನ ಮ್ಯಾನೆಜರ್‌ಗಳು ಅಟ್ಲಾಂಟಿಸ್ ನೌಕೆಯನ್ನು ಮೊಜಾವೆ ಮರುಭೂಮಿಯಲ್ಲಿನ ಎಡ್ವರ್ಡ್ ಕಡೆಗೆ ತಿರುಗಿಸಬೇಕಾಯಿತು. ಅಲ್ಲದೆ 24 ಗಂಟೆಗಳಲ್ಲಿ ಮೂರು ಬಾರಿ ನೌಕೆಯು ಭೂಮಿ ಸ್ಪರ್ಶಿಸುವುದನ್ನು ತಪ್ಪಿಸಬೇಕಾಯ್ತು."ಸುಸ್ವಾಗತ, ಮಹಾಮಿಷನ್‌ನಲ್ಲಿ ಯಶಸ್ವಿಯಾಗಿದ್ದಕ್ಕೆ ಅಭಿನಂದನೆಗಳು" ಎಂದು ವಿಲಿಯಮ್ಸ್ ಮತ್ತು ಅವರ ತಂಡದ ಉಳಿದವರಿಗೆ ಗಗನ ನೌಕೆ ಭೂಮಿಗೆ ಬಂದಿಳಿದ ಕೆಲವೇ ಕ್ಷಣಗಳ ನಂತರ ನಾಸಾದ ಮಿಷನ್ ಕಂಟ್ರೋಲ್ ಅದಿಕಾರಿಗಳು ತಿಳಿಸಿದರು.[೧೯]
ಭೂಮಿಗೆ ಬಂದಿಳಿದ ನಂತರದಲ್ಲಿ 41 ವರ್ಷದ ವಿಲಿಯಮ್ಸ್ ಅವರನ್ನು ಎಬಿಸಿ ಟೆಲಿವಿಶನ್ ನೆಟ್‌ವರ್ಕ್ "ವಾರದ ವ್ಯಕ್ತಿ"ಯಾಗಿ ಆಯ್ಕೆ ಮಾಡಿತು.ಅನಾರೋಗ್ಯದಿಂದಾಗಿ ಕೂದಲು ಕಳೆದುಕೊಂಡವರಿಗಾಗಿ ವಿಲಿಯಮ್ಸ್ ಅವರು ಕೂದಲನ್ನು ದಾನ ಮಾಡಿರುವುದನ್ನು ಡಿಸೆಂಬರ್‌ನಲ್ಲಿ ಗುರುತಿಸಿತು.
2007-ಭಾರತಕ್ಕೆ ಭೇಟಿ
[ಬದಲಾಯಿಸಿ]ವಿಲಿಯಮ್ಸ್ ಅವರು 2007 ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದರು. ಭಾರತದಲ್ಲಿ ಅವರು ಮಹಾತ್ಮಾ ಗಾಂಧೀಜಿಯವರು 1915ರಲ್ಲಿ ಪ್ರಾರಂಭಿಸಿದ ಸಭರಮತಿ ಆಶ್ರಮಕ್ಕೆ ಹಾಗೂ ತಮ್ಮ ಪೂರ್ವಜರ ಹಳ್ಳಿಯಾದ ಗುಜರಾತ್‌ನ ಜುಲಾಸನ್‌ಗೆ ಭೇಟಿ ನೀಡಿದರು. ವಿಶ್ವ ಗುಜರಾತಿ ಸಂಸ್ಥೆಯು ಕೊಡುವ ಸರ್ದಾರ್ ವಲ್ಲಭಬಾಯಿ ಪಟೇಲ್ ವಿಶ್ವ ಪ್ರತಿಭಾ ಪ್ರಶಸ್ತಿಯನ್ನು ಪ್ರಪ್ರಥಮ ಬಾರಿಗೆ ಭಾರತೀಯ ಪೌರತ್ವವನ್ನು ಪಡೆಯದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರಿಗೆ ನೀಡಿ ಗೌರವಿಸಿತು. ಅಲ್ಲದೆ ಅವರು ತಮ್ಮ ಸಂಬಂಧಿ ಮಲಸಹೋದರಿಯ ಮನೆಗೆ ಬೇಟಿ ನೀಡಿದರು ಮತ್ತು ಅವರ ಮಗನ ಹುಟ್ಟಿದ ಹಬ್ಬದಲ್ಲಿ ಪಾಲ್ಗೊಂಡರು. ಅಕ್ಟೋಬರ್ 4, 2007ರಂದು ವಿಲಿಯಮ್ಸ್ ಅವರು ಅಮೇರಿಕನ್ ರಾಯಬಾರಿ ಶಾಲೆಯನ್ನು ಭೇಟಿ ಮಾಡಿದರು ನಂತರ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿದರು.[೨೦]
-
ನೆಹರು ಮೆಮೋರಿಯಲ್, ದೆಹಲಿ
-
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಜೊತೆಗೆ ಕಮಾಂಡರ್ ವಿಲಿಯಮ್ಸ್
ಸಂಘಟನೆಗಳು
[ಬದಲಾಯಿಸಿ]- ಸೊಸೈಟಿ ಆಫ್ ಎಕ್ಸ್ಪೆರಿಮೆಂಟಲ್ ಟೆಸ್ಟ್ ಪೈಲಟ್ಸ್
- ಸೊಸೈಟಿ ಆಫ್ ಫ್ಲೈಟ್ ಟೆಸ್ಟ್ ಇಂಜಿನಿಯರ್ಸ್
- ಅಮೇರಿಕನ್ ಹೆಲಿಕ್ಯಾಪ್ಟರ್ ಅಸೋಸಿಯೇಷನ್
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ]- ನೌಕಾ ಪ್ರಶಸ್ತಿ ಪದಕಗಳು (ಎರಡು ಬಾರಿ)
- ನೌಕಾ ಮತ್ತು ಕಡಲು ಸೈನಿಕ ಸಾಧನಾ ಪದಕ
- ಮಾನವೀಯ ಸೇವಾ ಪದಕ ಮತ್ತು ಇತರೇ ಸೇವಾ ಪ್ರಶಸ್ತಿಗಳು
ಆಕರಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ೧.೫ ೧.೬ ನಾಸಾ (2007). "Sunita L. Williams (Commander, USN)". National Aeronautics and Space Administration. Retrieved December 19 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ ೨.೦ ೨.೧ Tariq Malik (2007). "Orbital Champ: ISS Astronaut Sets New U.S. Spacewalk Record". Space.com. Retrieved December 19 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ http://www.cnn.com/2009/SHOWBIZ/TV/04/14/colbert.nasa/index.html
- ↑ Jenny May (2006-12-06). "Woman takes leap to moon with part of Euclid". news-herald.com. Archived from the original on 2008-06-11. Retrieved 2007-06-08.
{{cite web}}
: Check date values in:|date=
(help) - ↑ QRZ.com (2007). "Sunita L Williams". QRZ.com. Archived from the original on 2009-06-25. Retrieved December 19 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ Radio Amateurs of Canada (2007). "Amateur Radio on the International Space Station (ARISS)". Radio Amateurs of Canada. Archived from the original on 2011-05-27. Retrieved December 19 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ SiliconIndia (2006). "With Ganesh, the Gita and samosas, Sunita Williams heads for the stars". SiliconIndia. Retrieved December 19 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ CollectSpace.com (2006-12-20). "Astronaut cuts her hair in space for charity". Collect space.com. Retrieved 2007-06-08.
{{cite web}}
: Check date values in:|date=
(help) - ↑ "Astronaut's Camera is Lost In Space". Adoama.com. 2006-12-22. Archived from the original on 2007-09-27. Retrieved 2007-06-08.
{{cite web}}
: Check date values in:|date=
(help) - ↑ CollectSpace (2007). "Astronauts make 100th station spacewalk". CollectSpace. Retrieved December 18 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ NASA (2007). "Spacewalkers Find No Solar Wing Smoking Gun". NASA. Archived from the original on 2019-02-04. Retrieved December 18 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ Schneider, Mike (2007-03-02). "wasabi spill". MSNBC. Archived from Space station suffers the original on 2007-03-04. Retrieved 2007-03-02.
{{cite web}}
: Check|url=
value (help); Check date values in:|date=
(help) - ↑ Eldora Valentine (2007-04-06). "Race From Space Coincides with Race on Earth". NASA. Archived from the original on 2007-06-10. Retrieved 2007-06-08.
{{cite web}}
: Check date values in:|date=
(help) - ↑ NASA (2007). "NASA Astronaut to Run Boston Marathon in Space". NASA. Archived from the original on 2021-09-30. Retrieved December 19 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ Jimmy Golen for The Associated Press (2007). "Astronaut to run Boston Marathon — in space". MSNBC. Archived from the original on 2010-01-02. Retrieved December 19 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ Zee News Limited (2007-04-17). "Sunita Williams Runs Marathon in Space". zeenews.com. Retrieved 2007-06-08.
{{cite web}}
: Check date values in:|date=
(help) - ↑ Mike Schneider for The Associated Press (2007). "Astronaut stuck in space — for now". MSNBC. Archived from the original on 2008-11-18. Retrieved December 19 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ Amateur Radio News (2007-02-05). "Ham-astronauts setting records in space". Amateur Radio News. Retrieved 2007-06-08.
{{cite web}}
: Check date values in:|date=
(help) - ↑ William Harwood for CBS News (2007). "Atlantis glides to California landing". Spaceflight Now. Retrieved December 19 2007.
{{cite web}}
: Check date values in:|accessdate=
(help); Unknown parameter|dateformat=
ignored (help) - ↑ American Embassy School (2007-10-05). "Astronaut Sunita Williams Visits AES". American Embassy School. Archived from the original on 2007-10-11. Retrieved 2007-10-07.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ನಾಸಾ ಬಯಾಗ್ರಫಿ ಆಫ್ ಸುನಿತಾ ವಿಲಿಯಮ್ಸ್ ಫೆಬ್ರವರಿ 2008
- ಸ್ಪೇಸ್ಪ್ಯಾಕ್ಟ್ ಬಯಾಗ್ರಫಿ ಆಫ್ ಸುನಿತಾ ವಿಲಿಯಮ್ಸ್ ಆಗಸ್ಟ್ 11, 2007
- ನಿರಾಲಿ ಮ್ಯಾಗಜಿನ್: ವರ್ಕಿಂಗ್ ವುಮನ್: ಸುನಿತಾ ವಿಲಿಯಮ್ಸ್ Archived 2010-11-08 ವೇಬ್ಯಾಕ್ ಮೆಷಿನ್ ನಲ್ಲಿ., ನವೆಂಬರ್ 2004
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using duplicate arguments in template calls
- CS1 errors: unsupported parameter
- CS1 errors: dates
- CS1 errors: URL
- Articles to be expanded from September 2009
- Articles with invalid date parameter in template
- All articles to be expanded
- Articles using small message boxes
- Commons link is locally defined
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 1965ರಲ್ಲಿ ಜನಿಸಿದವರು
- ಜೀವಿಸುತ್ತಿರುವ ಜನರು
- ಅಮೇರಿಕಾದ ಗಗನಯಾತ್ರಿಗಳು
- ಮಹಿಳಾ ಗಗನಯಾತ್ರಿಗಳು
- ಫ್ಲೋರಿಡಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆಯ ವಿದ್ಯಾರ್ಥಿ
- ಒಹಾಯೋದ ಕಾಯ್ಹಾಗಾ ಕೌಂಟಿಯಿಂದ ಬಂದ ಜನ
- ಯುನೈಟೆಡ್ ಸ್ಟೆಟ್ಸ್ ನೇವಲ್ ಅಕಾಡೆಮಿ ಪದವಿದರರು
- ಸಂಯುಕ್ತ ಸಂಸ್ಥಾನದ ನೌಕಾಪಡೆಯಲ್ಲಿರುವ ಮಹಿಳೆಯರು
- ಮಹಿಳಾ ಇಂಜಿನಿಯರ್ಗಳು
- ಭಾರತೀಯ ಮೂಲದ ಅಮೇರಿಕನ್ನರು
- ಸ್ಲೋವೇನಿಯನ್ ಅಮೇರಿಕನ್ನರು
- ಅಮೇರಿಕಾದ ಹಿಂದುಗಳು
- ಭಾರತೀಯ ಅಮೇರಿಕಾ ಗಗನಯಾತ್ರಿಗಳು