ವಿಷಯಕ್ಕೆ ಹೋಗು

ಮಧುಗಿರಿ

ನಿರ್ದೇಶಾಂಕಗಳು: 13°40′N 77°13′E / 13.66°N 77.21°E / 13.66; 77.21
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಧುಗಿರಿ
ನಗರ
ಮಧುಗಿರಿ ಕೋಟೆ[೨]
ಮಧುಗಿರಿ ಕೋಟೆ[]
ಮಧುಗಿರಿ is located in Karnataka
ಮಧುಗಿರಿ
ಮಧುಗಿರಿ
ಕರ್ನಾಟಕದಲ್ಲಿರುವ ಸ್ಥಳ
Coordinates: 13°40′N 77°13′E / 13.66°N 77.21°E / 13.66; 77.21
Country India
Stateಕರ್ನಾಟಕ
Districtತುಮಕೂರು[]
Government
 • Typeಮುನ್ಸಿಪಲ್ ಕೌನ್ಸಿಲ್
Elevation
೭೮೭ m (೨,೫೮೨ ft)
Population
 (೨೦೦೧)
 • Total೨೯,೨೧೫
Languages
 • Officialಕಕನ್ನಡ
Time zoneUTC+5:30 (IST)
PIN
Vehicle registrationಕೆಎ-೬೪

ಮಧುಗಿರಿ ಭಾರತಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಒಂದು ನಗರ. ನಗರವು ತನ್ನ ದಕ್ಷಿಣಕ್ಕೆ ಇರುವ ಗುಡ್ಡ, ಮಧು-ಗಿರಿ (ಜೇನು-ಬೆಟ್ಟ) ಇಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಮಧುಗಿರಿ ಕರ್ನಾಟಕ ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಂದಾಗಿದೆ.[] ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಸುತ್ತಲಿನ ಪ್ರದೇಶವು ಗಣಿಗಾರಿಕೆಯ ಪ್ರಮುಖ ತಾಣವಾಗಿದೆ. ಮಧುಗಿರಿ ಮೊದಲ ಹೆಸರು ಮದ್ದಗಿರಿ

ಇತಿಹಾಸ

[ಬದಲಾಯಿಸಿ]
  • ಇದು ಹಿಂದೆ ಮೈಸೂರು ರಾಜರ ಒಡೆತನದಲ್ಲಿ ಒಂದು ಮುಖ್ಯ ಠಾಣೆಯಾಗಿತ್ತು ಮತ್ತು ಸಿದ್ದನಾಯಕನೆಂಬ ಸೈನ್ಯಾಧಿಕಾರಿಯು ಆಡಳಿತ ಮಾಡುತಿದ್ದನು. ಬೆಟ್ಟದಲ್ಲಿ ಈಗಲೂ ಒಂದು ಕೋಟೆ ಇದೆ. ಇಲ್ಲಿ ಇರುವ ದಂಡಿನ ಮಾರಮ್ಮ ದೇವಿ ಶಕ್ತಿ ದೇವತೆ ಬಹಳ ಪ್ರಸಿದ್ದಿ. ಹಿಂದೆ ಇಲ್ಲಿನ ಬೆಟ್ಟದಲ್ಲಿ ಸೀತಾಫಲ ಮತ್ತು ದಾಳಿಂಬೆ ಹಣ್ಣುಗಳು ಬಹಳ ಬೆಳೆಯುತ್ತಿದ್ದವು. ಈ ಪ್ರದೇಶದ ಪ್ರಮುಖ ಬೆಳೆಗಳು ಕಡಲೇಕಾಯಿ, ರಾಗಿ, ಮಾವು ಹಾಗೂ ಜೋಳ. ಇಲ್ಲಿ ರೇಶಿಮೆ ಮತ್ತು ತೆಂಗು ಕೂಡ ಬೆಳೆಯಲಾಗುತ್ತದೆ.
  • ಮಧುಗಿರಿಯ ಕೋಟೆಯಿಂದ ಎಡಕ್ಕೆ ಹೊದರೆ ಸಿದ್ದರಕಟ್ಟೆ ಎಂಬ ಒಂದು ಸಣ್ಣ ಕೆರೆ ಇದೆ ಅದು ನೊಡಲು ತುಂಬ ಚೆನ್ನಾಗಿದೆ.ಹಾಗೆ ಸಿರ ಗೇಟ್ ನ ಬಳಿ ಒಂದು ಕಲ್ಯಾಣಿ ಇದೆ. ಇಲ್ಲಿಂದ ಸ್ವಲ್ಪ ದೂರದಲ್ಲೇ ಔಷಧೀಯ ಮೂಲಿಕೆಗಳಿಗೆ ಪ್ರಸಿದ್ಧವಾದ ಸಿದ್ಧರ ಬೆಟ್ಟವೂ ಇದೆ. ಮಧುಗಿರಿ ಯಿಂದ ಸುಮಾರು ೨೦ಕಿಮೀ ದೂರದಲ್ಲಿ ಮೈದನಹಳ್ಳಿ ಎಂಬಲ್ಲಿ ಕೃಷ್ಣಮೃಗಗಳ ವನ್ಯಧಾಮವನ್ನು 1993 ರಲ್ಲಿ ಪ್ರಾರಂಭಿಸಲಾಯಿತು. ಇದು ಕರ್ನಾಟಕ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.
  • ಮಧುಗಿರಿಯ ಪಾಳೇಗಾರರ ಪ್ರಮುಖ ಕೋಟೆಗಳಲ್ಲಿ ಮುಖ್ಯವಾದವು ಕೊಡಗದಾಲ, ಮಿಡಿಗೇಶಿ ಕೋಟೆಗಳು. ವಿಶೇಷಾಂದ್ರೆ ಇಂದಿಗೂ ಕೋಡಗದಾಲ ಕೋಟೆಯಲ್ಲಿ ಜನ ವಾಸವಿದೆ. ಮುಖ್ಯವಾಗಿ ಮಧುಗಿರಿ ಪಾಳೇಗಾರರಿಗೆ ಹಾಗೂ ಅವರ ಸೈನಿಕರಿಗೆ ಹೆಂಡ ಸಾಗಿಸುತ್ತಿದ್ದ ಈಡಿಗರಲ್ಲಿ ಕೆಲವರು ಕೋಟೆಯಲ್ಲೇ ವಾಸಿಸುತ್ತಿದ್ದಾರೆ. ಇನ್ನುಳಿದ ಮೂಲ ಈಡಿಗರು ಪಕ್ಕದ ಕ್ಯಾಶವಾರದಲ್ಲಿ ನೆಲೆಸಿದ್ದಾರೆ.

ಭೂಗೋಳಶಾಸ್ತ್ರ

[ಬದಲಾಯಿಸಿ]

ಮಧುಗಿರಿಯು 13.66°N 77.21°E ನಲ್ಲಿ ಇದೆ.[] ಇದು ಸರಾಸರಿ ೭೮೭ ಮೀಟರ್ (೨೫೮೨ ಅಡಿ) ಎತ್ತರವನ್ನು ಹೊಂದಿದೆ.

ಮಧುಗಿರಿ ಕೋಟೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿಯಲ್ಲಿದೆ. ಮಧು-ಗಿರಿ ಒಂದೇ ಬೆಟ್ಟ ಮತ್ತು ಇಡೀ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಏಕಶಿಲೆಯಾಗಿದೆ. ಚಿಕ್ಕ ಪಟ್ಟಣವು ಬೆಂಗಳೂರಿನಿಂದ ೧೦೦ ಕಿಲೋಮೀಟರ್ (೬೨ ಮೈಲಿ) ದೂರದಲ್ಲಿದೆ ಮತ್ತು ಕೋಟೆ ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಕೋಟೆಗೆ ಭೇಟಿ ನೀಡಲು ಅನೇಕ ಪ್ರವಾಸಿಗರು ಮಧುಗಿರಿಗೆ ಹೋಗುತ್ತಾರೆ. ಬೆಟ್ಟದ ಕಡಿದಾದ ಇಳಿಜಾರಿನ ಮೇಲಿರುವ ಈ ಕೋಟೆಯನ್ನು ವಿಜಯನಗರ ರಾಜವಂಶದವರು ನಿರ್ಮಿಸಿದರು.[]

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

೨೦೦೧ ರ ಭಾರತಜನಗಣತಿಯ ಪ್ರಕಾರ, ಮಧುಗಿರಿಯು ೨೯,೨೧೫ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ.[] ಮಧುಗಿರಿಯು ಸರಾಸರಿ ೭೨% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ ೫೯.೫% ಗಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೭೭% ಮತ್ತು ಮಹಿಳಾ ಸಾಕ್ಷರತೆ ೬೭%. ಮಧುಗಿರಿಯಲ್ಲಿ, ಜನಸಂಖ್ಯೆಯ ೧೧%, ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

ಮಧುಗಿರಿಯಲ್ಲಿ ಜನಿಸಿದ ಪ್ರಮುಖ ವ್ಯಕ್ತಿಗಳು

[ಬದಲಾಯಿಸಿ]

ಮಧುಗಿರಿ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Bangalore is now Bengaluru". November 2014.
  2. https://tumkur.nic.in/tourist-place/%E0%B2%AE%E0%B2%A7%E0%B3%81%E0%B2%97%E0%B2%BF%E0%B2%B0%E0%B2%BF-%E0%B2%95%E0%B3%8B%E0%B2%9F%E0%B3%86/
  3. http://ssakarnataka.gov.in/pMadhugiri Fort lies in Madhugiri.
  4. Madhugiri. Fallingrain.com. Retrieved on 2012-09-04.
  5. "Fort on a monolith". 19 March 2018.
  6. "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.
"https://kn.wikipedia.org/w/index.php?title=ಮಧುಗಿರಿ&oldid=1265166" ಇಂದ ಪಡೆಯಲ್ಪಟ್ಟಿದೆ