ತಾರಾ ಸಿಂಗ್(ತೂಕ ಎತ್ತುವ ವ್ಯಾಯಾಮ ಪಟು(ವೇಟ್‌ಲಿಫ್ಟರ್))
ವೈಯುಕ್ತಿಕ ಮಾಹಿತಿ | |
---|---|
ಪುರ್ಣ ಹೆಸರು | ತಾರಾ ಸಿಂಗ್ |
ಅಡ್ಡ ಹೆಸರು(ಗಳು) | ಭಾರತದ ಕಬ್ಬಿಣ ಮನುಷ್ಯ[ಸೂಕ್ತ ಉಲ್ಲೇಖನ ಬೇಕು] |
ರಾಷ್ರೀಯತೆ | ಭಾರತೀಯ |
ಜನನ | ಫಗ್ವಾರ, ಪಂಜಾಬ್ | ೧ ಜೂನ್ ೧೯೫೫
ನಿವಾಸ | ಫಗ್ವಾರ |
ಆಲ್ಮ ಮಾಟರ್ | ಪಂಜಾಬಿ ವಿಶ್ವವಿದ್ಯಾಲಯ, ಎನ್‌ಐಎಸ್(NIS) ಪಟಿಯಾಲ, ಪಂಜಾಬ್ |
ಎತ್ತರ | ೧.೮೦ ಮೀ (೫ ಅಡಿ ೧೧ ಇಂಚು) (೨೦೧೫) |
ತೂಕ | ೧೦೫ ಕೆಜಿ (೨೩೧ ಪೌಂಡು) (೨೦೧೫) |
Sport | |
ದೇಶ | ಭಾರತ |
ಕ್ರೀಡೆ | ವೈಟ್ಲಿಫ್ಟಿಂಗ್(ಭಾರ ಎತ್ತುವಿಕೆ) |
ಸ್ಪರ್ಧೆಗಳು(ಗಳು) | ೧೦೦ ಕೆಜಿ |
ವಿಶ್ವವಿದ್ಯಾಲಯ ತಂಡ | ಪಂಜಾಬಿ ವಿಶ್ವವಿದ್ಯಾಲಯ |
ನಿವೃತ್ತಿ | ೨೦೧೫ |
ಈಗ ತರಬೇತಿ ನೀಡುತ್ತಿರುವ | ರಾಷ್ಟ್ರೀಯ ಕ್ರೀಡಾ ಸಂಸ್ಥೆ |
Achievements and titles | |
ರಾಷ್ಟ್ರೀಯ ಫ಼ೈನಲ್ಗಳು | ಎಂಟು ಬಾರಿ ಭಾಗವಹಿಸಿದವರು ಹಾಗೂ ಆರು ಬಾರಿ ಚಿನ್ನ ಮತ್ತು ಎರಡು ಬಾರಿ ಬೆಳ್ಳಿ ಪಡೆದವರು |
ತಾರಾ ಸಿಂಗ್ ಒಬ್ಬ ಭಾರತೀಯ ತೂಕ ಎತ್ತುವ ವ್ಯಾಯಾಮ ಪಟು(ವೇಟ್‌ಲಿಫ್ಟರ್). ಇವರು ೧೯೮೨ ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವಾಗ ಕಂಚಿನ ಪದಕವನ್ನು ಗೆದ್ದು ಕ್ಲೀನ್ ಮತ್ತು ಜರ್ಕ್ ಸ್ಪರ್ಧೆಯಲ್ಲಿ ೨೦೦ ಕೆಜಿ ದಾಟಿದ ಮೊದಲ ಭಾರತೀಯರಾಗಿದ್ದರು.[೧][೨] ಅವರಿಗೆ ಭಾರತ ಸರ್ಕಾರದಿಂದ ೧೯೮೨ ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.[೩]
ಜನನ
[ಬದಲಾಯಿಸಿ]ತಾರಾ ಸಿಂಗ್ ರವರು ಜೂನ್ ೧, ೧೯೫೫ ರಂದು ಪಂಜಾಬಿನ ಫಗ್ವಾರ ಎಂಬ ಊರಿನಲ್ಲಿ ಜನಿಸಿದರು.[೪]
ಸಾಧನೆಗಳು
[ಬದಲಾಯಿಸಿ]ಇವರು ೧೯೮೨ ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವಾಗ ಕಂಚಿನ ಪದಕವನ್ನು ಗೆದ್ದು ಕ್ಲೀನ್ ಮತ್ತು ಜರ್ಕ್ ಸ್ಪರ್ಧೆಯಲ್ಲಿ ೨೦೦ ಕೆಜಿ ದಾಟಿದ ಮೊದಲ ಭಾರತೀಯರಾಗಿದ್ದರು. ಇವರನ್ನು "ಭಾರತದ ಕಬ್ಬಿಣ ಮನುಷ್ಯ" ಎಂದು ಕರೆಯಲಾಗುತ್ತದೆ. ಇವರ ಎತ್ತರ ೧.೮೦ ಮೀಟರ್‌ಗಳಾಗಿತ್ತು. ಇವರು ರಾಷ್ಟ್ರೀಯ ಮಟ್ಟದಲ್ಲಿ ಎಂಟು ಬಾರಿ ಸ್ಪರ್ಧಿಸಿ, ಆರು ಬಾರಿ ಚಿನ್ನದ ಪದಕಗಳನ್ನು ಮತ್ತು ಎರಡು ಬಾರಿ ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ. ೨೦೧೫ ರಲ್ಲಿ ನಿವೃತ್ತರಾದ ಇವರು, ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಭಾರತ ಸರ್ಕಾರ ಕೊಡಮಾಡುವ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದಾರೆ.[೫]
ಪ್ರಶಸ್ತಿಗಳು
[ಬದಲಾಯಿಸಿ]ಇವರ ಚಾಂಪಿಯನ್‌ಶಿಪ್ ಯಶಸ್ಸುಗಳು ಈ ಕೆಳಗಿನಂತಿವೆ:
ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್
[ಬದಲಾಯಿಸಿ]ಚಿನ್ನದ ಪದಕ - ಮೊದಲ ಸ್ಥಾನ - ಕಾರ್ಡಿಫ್, ವೇಲ್ಸ್(೧೯೮೫)
ಬೆಳ್ಳಿ ಪದಕ - ಎರಡನೇ ಸ್ಥಾನ - ಆಕ್ಲೆಂಡ್, ನ್ಯೂಜಿಲೆಂಡ್(೧೯೮೧)
ಚಿನ್ನದ ಪದಕ - ಮೊದಲ ಸ್ಥಾನ - ಆಕ್ಲೆಂಡ್, ನ್ಯೂಜಿಲೆಂಡ್(೧೯೮೧)[೬]
ಮಿನಿ ಕಾಮನ್ವೆಲ್ತ್ ಗೇಮ್ಸ್
[ಬದಲಾಯಿಸಿ]ಚಿನ್ನದ ಪದಕ - ಮೊದಲ ಸ್ಥಾನ - ಬ್ರಿಸ್ಬೇನ್, ಆಸ್ಟ್ರೇಲಿಯಾ(೧೯೮೧)[೭]
ನ್ಯೂಜಿಲೆಂಡ್ ಸಮ್ಮರ್ ಗೇಮ್ಸ್
[ಬದಲಾಯಿಸಿ]ಕಂಚಿನ ಪದಕ - ಮೂರನೇ ಸ್ಥಾನ - ಆಕ್ಲೆಂಡ್, ನ್ಯೂಜಿಲೆಂಡ್(೧೯೮೧)
ಏಷ್ಯನ್ ಚಾಂಪಿಯನ್‌ಶಿಪ್
[ಬದಲಾಯಿಸಿ]ಕಂಚಿನ ಪದಕ - ಮೂರನೇ ಸ್ಥಾನ - ನವದೆಹಲಿ, ಭಾರತ(೧೯೮೨)
ಬೆಳ್ಳಿ ಪದಕ - ಎರಡನೇ ಸ್ಥಾನ - ನಗೋಯಾ, ಜಪಾನ್(೧೯೮೧)
ವಿಶ್ವ ರೈಲ್ವೆ ಆಟಗಳು
[ಬದಲಾಯಿಸಿ]ಕಂಚಿನ ಪದಕ - ಮೂರನೇ ಸ್ಥಾನ - ಸೋಫಿಯಾ, ಬಲ್ಗೇರಿಯಾ(೧೯೮೪)
ಪಾಕಿಸ್ತಾನ ರಾಷ್ಟ್ರೀಯ ಕ್ರೀಡಾಕೂಟ
[ಬದಲಾಯಿಸಿ]ಬೆಳ್ಳಿ ಪದಕ - ಎರಡನೇ ಸ್ಥಾನ - ಇಸ್ಲಾಮಾಬಾದ್, ಪಾಕಿಸ್ತಾನ(೧೯೮೪)
ಚಿನ್ನದ ಪದಕ - ಮೊದಲ ಸ್ಥಾನ - ಸಮೋವಾ(೧೯೮೫)[೮]
ಉಲ್ಲೇಖಗಳು
[ಬದಲಾಯಿಸಿ]- ↑ https://www.gurunanakdarbar.org/post/the-champion-tara-singh-visits-gravesend-gurdwara
- ↑ "The Tribune, Chandigarh, India - Ludhiana Stories". www.tribuneindia.com.
- ↑ https://iwlf.in/awardees/arjuna-awardees/
- ↑ https://www.gurunanakdarbar.org/post/the-champion-tara-singh-visits-gravesend-gurdwara
- ↑ https://www.gurunanakdarbar.org/post/the-champion-tara-singh-visits-gravesend-gurdwara
- ↑ https://www.gurunanakdarbar.org/post/the-champion-tara-singh-visits-gravesend-gurdwara
- ↑ https://www.gurunanakdarbar.org/post/the-champion-tara-singh-visits-gravesend-gurdwara
- ↑ https://www.gurunanakdarbar.org/post/the-champion-tara-singh-visits-gravesend-gurdwara