ವಿಕಿಪೀಡಿಯ:ಅರಳಿ ಕಟ್ಟೆ/ಇತರೆ-archive1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |

ವಿ.ಕೃ.ಗೋಕಾಕ[ಬದಲಾಯಿಸಿ]

ಮಾನ್ಯರೆ," ವಿ.ಕೆ.ಗೋಕಾಕ ಹೆಸರನ್ನು ಹುಡುಕು" ಎಂದು ಅಪ್ಪಣೆ ನೀಡಿದಾಗ " ಈ ಹೆಸರು ಇಲ್ಲ; ಆದುದರಿಂದ ಹೊಸ ಪುಟ ಬರೆಯಬಹುದು " ಎನ್ನುವ ಸೂಚನೆ ಬಂದಿತು.ಅದರಂತೆ ಬರೆದೆ. ಆದರೆ ಮತ್ತೆ ಸಾಹಿತಿಗಳ ವಿಭಾಗದಲ್ಲಿ ನೋಡಿದಾಗ ವಿನಾಯಕ ಕೃಷ್ಣ ಗೋಕಾಕ ಲೇಖನ ಕಂಡು ಬಂದಿತು.ಆದುದರಿಂದ ನಾನು ಬರೆದ ಚುಟುಕು ಬರೆಹ Redundant ಆದಂತಾಗಿದೆ. ದಯವಿಟ್ಟು ಅದನ್ನು ತೆಗೆದು ಹಾಕಿ ಬಿಡಿ.--೧೬:೫೪, ೯ May ೨೦೦೬ (UTC)ಸುನಾಥ

ಇದನ್ನು ಲೇಖನದ ಚರ್ಚಾಪುಟದಲ್ಲಿಯೇ (Talkpage) ಪ್ರಸ್ತಾಪಿಸಿದರೆ ಸಮಂಜಸ.
'ವಿ.ಕೆ.ಗೋಕಾಕ' ಲೇಖನವನ್ನು 'ವಿನಾಯಕ ಕೃಷ್ಣ ಗೋಕಾಕ' ಲೇಖನಕ್ಕೆ ರೀಡೈರೆಕ್ಟ್ ಮಾಡಿದರೆ ಉತ್ತಮ. ಮುಂದೆ ಹುಡುಕುವವರಿಗೇ ಇದೇ ಪರಿಸ್ಥಿತಿ ಉಂಟಾಗುವುದಿಲ್ಲ. - ಮನ ೧೭:೧೯, ೯ May ೨೦೦೬ (UTC)

Naavu balasuva English keyboard ninda kannada akshara galannu srustisuva software elli kottiddare, hosa balake dara rige sahaya aagutittu.

ನೀವು ವಿಂಡೋಸ್ ಬಳಸುತ್ತಿದ್ದಲ್ಲಿ ಬರಹ ಡೌನ್ಲೋಡ್ ಮಾಡಿ. ಲಿನಕ್ಸ್ ಬಳಸುತ್ತಿದ್ದಲ್ಲಿ Wikipedia:Kannada_Support ನೋಡಿ.--ಹರಿ ಪ್ರಸಾದ್ ನಾಡಿಗ್ ೧೩:೩೨, ೨೭ ಜೂನ್ ೨೦೦೫ (UTC)

ಸರ್ವಜ್ಞ[ಬದಲಾಯಿಸಿ]

ನಾನು ಅನೇಕ ದಿನಗಳಿಂದ ಯುನಿಕೋಡ್ ಬಳಸುತ್ತಿದ್ದೇನೆ. ಆದರೆ ಕನ್ನಡ ವಿಕಿಪೀಡಿಯಾದಲ್ಲಿ ನನ್ನ ಯುನಿಕೋಡ ಕನ್ನಡದಲ್ಲಿ ಮೂಡಲಿಲ್ಲ; ರೋಮನ್ ಲಿಪಿಯಲ್ಲಿ ಮಾತ್ರ ಮೂಡುತ್ತಿದೆ. ಆದುದರಿಂದ ನಾನು ಶಂ ಬಾ ಜೋಷಿಯವರ ಲೇಖನ ಬದಲಾಯಿಸುವಾಗ , ನನ್ನ ಗಣಕಯಂತ್ರದ ಎಮ್ ಎಸ್ ವರ್ಡನಲ್ಲಿ ಕನ್ನಡದಲ್ಲಿ ಬರೆದು ಕನ್ನಡ ವಿಕಿಪೀಡಿಯಾದಲ್ಲಿ ಕತ್ತರಿಸಿ ಅಂಟಿಸಿದ್ದೇನೆ. ಇತ್ತೀಚೆಗೆ ನನ್ನ ಗಣಕಯಂತ್ರದಲ್ಲಿ ಏನೊ ದೋಷವಾಗಿರಬಹುದು. ಹೀಗಾಗಿ ವರ್ಗೀಯ ವ್ಯಂಜನಗಳ ಅನುಸ್ವಾರ ಸಂಕೇತ ಮೂಡುತ್ತಿಲ್ಲ. ಆದುದರಿಂದ ನಾನು ವಚನಗಳ ಬಗೆಗೆ ಲೇಖನ ಬದಲಾಯಿಸಿ ಬರೆದಾಗ ಸರ್ವjn ತಪ್ಪಾಗಿ ಮೂಡಿದೆ. ದಯವಿಟ್ಟು ಅದನ್ನು ಸರಿಪಡಿಸಲು ನಿಮ್ಮಲ್ಲಿ ಕೋರುತ್ತಿದ್ದೇನೆ.

-ಸುನಾಥ

ಕನ್ನಡ ಸಾಹಿತ್ಯ ಲೇಖನದಲ್ಲಿ ಸರ್ವಜ್ಞ (sarvaj~ja) ಪದ ಸರಿಪಡಿಸಿರುವೆ. ಒಂದು ಸಲಹೆ: ಸಹಿ ಹಾಕುವುದಕ್ಕೆ ಹೆಸರನ್ನು ಬರೆಯುವುದರ ಬದಲು, ~~~~ ಬಳಸಿ. ಧನ್ಯವಾದಗಳು. --ಮನ 19:05, ೮ April ೨೦೦೬ (UTC)

ಶಿಶುಸಾಹಿತ್ಯ[ಬದಲಾಯಿಸಿ]

ಶ್ರೀ ನಾಡಿಗರೆ, ಶಿಶುಸಾಹಿತ್ಯ ವರ್ಗದಲ್ಲಿ ಬರೆಯಬೇಕಾದುದನ್ನು ಹೊಸ ಪುಟದಲ್ಲಿ ಸೇರಿಸಿದ್ದಕ್ಕಾಗಿ ವಿಷಾದಿಸುತ್ತೇನೆ. ದಯವಿಟ್ಟು ಅದನ್ನು ತೆಗೆದು ಬಿಡಿ.ಇದು ನನ್ನ ತಪ್ಪು ತಿಳುವಳಿಕೆಯಿಂದಾದ ದೋಷ. ನಿಮ್ಮ blog ಪುಟವನ್ನು ನೋಡಿದೆ.Sepoy Mutiny ತುಂಬ ಚೆನ್ನಾಗಿದೆ. ಧನ್ಯವಾದಗಳು.--15:27, ೨೯ April ೨೦೦೬ (UTC)ಸುನಾಥ.

ಈ‌ ಮೇಲಿನ ಎರಡು ಸಾಲುಗಳು ನಮ್ಮ ನಿಮ್ಮ ಚರ್ಚೆ ಪುಟಕ್ಕೆ ಹೆಚ್ಚು ಸೂಕ್ತ. ನೇರ ಉದ್ದೇಶಿಸುವಾಗ ಸಾಧ್ಯವಾದಷ್ಟು ಅರಳಿ ಕಟ್ಟೆ ಬಳಸದಿದ್ದರೆ ಉತ್ತಮ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೨೩, ೫ May ೨೦೦೬ (UTC)

ಸದಸ್ಯರ ಪಟ್ಟಿ[ಬದಲಾಯಿಸಿ]

೧. ಕನ್ನಡ ವಿಕಿಪೀಡಿಯ ಸದಸ್ಯರ ಪಟ್ಟಿ ಇದೆಯೆ? ಇದ್ದರೆ ಅದರ ಕೊಂಡಿಯನ್ನು ಕೊಡಿ.

ಸದಸ್ಯರ ಪುಟ
ಇದು ಸಮುದಾಯ ಪುಟದಲ್ಲಿ ಮಾತುಕತೆ ಮಾಧ್ಯಮದಡಿಲ್ಲಿ ಕೂಡ ಇದೆ.

೨. ಕನ್ನಡ ಚಲನಚಿತ್ರಗಳ ಸಮಗ್ರ ಮಾಹಿತಿ ವಿಕಿಪೀಡಿಯದಲ್ಲಿ ಕಲೆ ಹಾಕುವ ಬಗ್ಗೆ ಚರ್ಚೆಯಾಗಬೇಕಿದೆ. ಅದನ್ನು ಚರ್ಚಿಸಲು ಇದು ಸರಿಯಾದ ಸ್ಥಳವೇ? ಅಲ್ಲದಿದ್ದಲ್ಲಿ, ಎಲ್ಲಿ ಚರ್ಚಿಸಬಹುದು ಎಂದು ದಯವಿಟ್ಟು ತಿಳಿಸಿ. ಮನ 00:33, ೧೫ March ೨೦೦೬ (UTC)

ದಾಸ ಸಾಹಿತ್ಯ[ಬದಲಾಯಿಸಿ]

ಕನ್ನಡ ಸಾಹಿತ್ಯ - ಈ ವಿಭಾಗದ ಅಡಿಯಲ್ಲಿ "ದಾಸ ಸಾಹಿತ್ಯಕ್ಕೆ" ಪ್ರತ್ಯೇಕ ವಿಭಾಗವನ್ನು ಮಾಡಿಕೊಡಲು ಸಾಧ್ಯವೇ? Sritri 01:25, ೨೬ March ೨೦೦೬ (UTC)

ಕನ್ನಡ ಸಾಹಿತ್ಯ ಲೇಖನದಲ್ಲಿ "ದಾಸ ಸಾಹಿತ್ಯ" ಎಂಬ ವಿಭಾಗ ಇದೀಗ ಮಾಡಲಾಗಿದೆ. ಮನ 01:43, ೨೬ March ೨೦೦೬ (UTC)

ಪರಿಷ್ಕರಣೆ[ಬದಲಾಯಿಸಿ]

ಎಲ್ಲಾ ಸಂಪಾದಕರಿಗೆ: ಒಮ್ಮೆ ಪರಿಷ್ಕೃತ ಕನ್ನಡ ಸಿನೆಮಾ ಪರಿವಿಡಿ ಹಾಗು ಕನ್ನಡ ಚಿತ್ರ ಸಂಗೀತವನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸುವುದು. ಇವೆರಡರಲ್ಲಿರುವ ಅಷ್ಟೂ ಉಪವಿಭಾಗಗಳು, ಕಲಾವಿದರ ಹೆಸರುಗಳು ಒಂದು Templateನಲ್ಲಿತ್ತು (Template:ಕನ್ನಡ ಸಿನೆಮಾ) -ಹಂಸವಾಣಿದಾಸ 22:28, ೨೭ March ೨೦೦೬ (UTC)

ಇದರ ಬಗ್ಗೆ ಆಯಾ ಚರ್ಚೆ ಪುಟಗಳಲ್ಲಿ ಚರ್ಚಿಸಲಾಗಿದೆ. ಆದಷ್ಟೂ ಇವೆಲ್ಲದರ ಬಗ್ಗೆ ಚರ್ಚೆ ಆಯಾ ಚರ್ಚೆ ಪುಟಗಳಲ್ಲಿದ್ದರೆ ಹೆಚ್ಚು ಸೂಕ್ತ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೩೦, ೫ May ೨೦೦೬ (UTC)

ಅನಕೃ ಲೇಖನ[ಬದಲಾಯಿಸಿ]

ಅನಕೃ ಲೇಖನವನ್ನು ಮುಖಪುಟಕ್ಕೆ ಹಾಕಿದ್ದೇನೆ. ಲೇಖನವನ್ನು ಮುಖಪುಟಕ್ಕೆ ಹಾಕುವ ಬಗ್ಗೆ ಏನಾದರೂ ನೀತಿ -ನಿಯಮಗಳಿವೆಯೇ? ತಿಳಿಸಿ.Sritri 04:42, ೪ April ೨೦೦೬ (UTC)

ವಿಶೇಷ ಲೇಖನ ಹಾಕುವುದರ ಬಗ್ಗೆ ಒಮ್ಮೆ ಪಾಲಿಸಿಪುಟವೊಂದರಲ್ಲಿ ಬರೆದಿದ್ದೆ. ನೀವು ಹಾಕಿದ್ದ ಲೇಖನ ಈಗ ಹಿಂದಿನ ಸಂಚಿಕೆಯಾಗಿ ಹೋಗಿದ್ದರೂ, ಸಾಕಷ್ಟು ಪರಿಷ್ಕರಣೆ ಮಾಡಬೇಕಿತ್ತು. ಅದರ ಬಗ್ಗೆ ಅದರ ಚರ್ಚೆ ಪುಟದಲ್ಲಿ ಒಂದು ಕಾಮೆಂಟ್ ಹಾಕಿದ್ದೆ. ಇಂತಹ ವಿಷಯಗಳನ್ನು ಆಯಾ ಚರ್ಚೆ ಪುಟದಲ್ಲಿ ಚರ್ಚೆ ಮಾಡುವುದು ಉತ್ತಮ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೩೦, ೫ May ೨೦೦೬ (UTC)

ನುಕ್ತ[ಬದಲಾಯಿಸಿ]

ಅಕ್ಷರದ ಕೆಳಗೆ ಎರಡು ಚುಕ್ಕೆಯನ್ನು ಹೇಗೆ ಹಾಕುವುದೆಂದು ದಯವಿಟ್ಟು ತಿಳಿಸುವೆರಾ? Vani Bandargal

ನಿಮ್ಮ ಪ್ರಶ್ನೆ ಸರಿಯಾಗಿ ತಿಳಿಯಲಿಲ್ಲ. ನೀವು ಏನು ಬರೆಯಲು ಪ್ರಯತ್ನಿಸುತ್ತಿದ್ದೀರಿ? ಎಂದು ತಿಳಿಸಿ Sritri 19:54, ೧೦ April ೨೦೦೬ (UTC)

ಇಂಗ್ಲಿಷ್ ನ 'za', ಉದಾಹರಣೆಗೆ "ಬಜಾರ್" ಎಂಬ ಪದದಲ್ಲಿ, "ಜಾ" ಅಕ್ಷರದ ಕೆಳಗೆ ಎರಡು ಚುಕ್ಕೆ ಹೇಗೆ ಹಾಕುವುದು? -VaniBandargal

ಈಗ ಪ್ರಶ್ನೆ ತಿಳಿಯಿತು, ಉತ್ತರ ತಿಳಿಯುತ್ತಿಲ್ಲ :-), ಪ್ರಯತ್ನಿಸುತ್ತಿದ್ದೇನೆ Sritri 20:22, ೧೦ April ೨೦೦೬ (UTC)
ಧನ್ಯವಾದಗಳು. ನುಡಿ ತಂತ್ರಾಂಶದಲ್ಲಿ ಹೇಳಿದಂತೆ ಪ್ರಯತ್ನಿಸೆದೆ. ಆದರೂ ಏನೂ ಉಪಯೋಗವಾಗಲಿಲ್ಲ.-VaniBandargal
ನೀವು ಬಹುಶಃ ಕೇಳುತ್ತಿರುವುದು 'ನುಕ್ತ' ಚಿಹ್ನೆ. ಕನ್ನಡದ ಸುಮಾರು ಯೂನಿಕೋಡ್ ಫಾಂಟುಗಳು ನುಕ್ತ ಸಪೋರ್ಟ್ ಮಾಡುವುದಿಲ್ಲ. ಜನಕನ್ನಡ ಎನ್ನುವ ಫಾಂಟಿನಲ್ಲಿ ಅವುಗಳಿಗೆ ಗ್ಲಿಫ್ ಗಳಿವೆ. ಗೂಗಲ್ ಮಾಡಿದರೆ ಆ ಫಾಂಟು ಸಿಗತ್ತೆ. ಇನ್ನು ಟೈಪಿಸಲು ಬರಹ ಬಳಸಿ... ಬರಹ ಹೆಲ್ಪ್ ಫೈಲ್ ನೋಡಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೩೦, ೫ May ೨೦೦೬ (UTC)

ಸಾಹಿತಿಗಳು - ಜಿಲ್ಲೆಗಳು[ಬದಲಾಯಿಸಿ]

ಶ್ರೀ ಬಸವರಾಜ ಕಟ್ಟಿಮನಿ ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸುಲಧಾಳ ಗ್ರಾಮದಲ್ಲಿ ಜನಿಸಿದ ಸಾಹಿತಿಗಳು. ಇವರ ಹೆಸರು ತಪ್ಪಾಗಿ ಧಾರವಾಡ ಜಿಲ್ಲೆಯ ಸಾಹಿತಿಗಳಲ್ಲಿ ಸೇರಿದ್ದನ್ನು ತೆಗೆದಿದ್ದೇನೆ. ದಯವಿಟ್ಟು ಅವರ ಹೆಸರನ್ನು ಬೆಳಗಾವಿ ಜಿಲ್ಲೆಯ ಸಾಹಿತಿಗಳ ಪಟ್ಟಿಯಲ್ಲಿ ಸೇರಿಸಲು ಕೋರುತ್ತೇನೆ.ಹಾಸ್ಯ ಲೇಖಕ ಶ್ರೀ ಅನಂತ ಕಲ್ಲೋಳ, ಹಿರಿಯ ಸಾಹಿತಿ ದಿವಂಗತ ಮಿರ್ಜಿ ಅಣ್ಣಾರಾಯರು ಹಾಗು " ತಾಯಿಸಾಹೇಬ" ಕಾದಂಬರಿಯ ರಂ.ಶಾ ಇವರು ಸಹ ಬೆಳಗಾವಿ ಜಿಲ್ಲೆಯ ಸಾಹಿತಿಗಳು. Sunaath 12:59, ೨೩ April ೨೦೦೬ (UTC)ಸುನಾಥ

ಕನ್ನಡ ಅಕ್ಷರಮಾಲೆ[ಬದಲಾಯಿಸಿ]

ಕನ್ನಡ ಅಕ್ಷರಮಾಲೆಯಲ್ಲಿ ೠ ವನ್ನು ನೀವು ಸೇರಿಸಿರುವದಿಲ್ಲ. ಇದು ಬಹುಶಃ ಕಾರ್ಯನೀತಿಯಾಗಿರಬಹುದು. ಆದರೆ ಇದು ಸರಿಯೆ? -ಸುನಾಥ

ಕನ್ನಡ ಅಕ್ಷರಮಾಲೆಯಲ್ಲಿ ೠ ಅಕ್ಷರ ಇಲ್ಲ. ಇದು ಕಾರ್ಯನೀತಿಯಲ್ಲ. --ಮನ 19:15, ೮ April ೨೦೦೬ (UTC)
ೠ ಸೇರಿಸಬಹುದು. ತೊಂದರೆಯೇನಿಲ್ಲ :) ಒಂದು ಅಕ್ಷರ ಜಾಸ್ತಿ ಆಗತ್ಯೆ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೧೫, ೫ May ೨೦೦೬ (UTC)
ೠ ಅಕ್ಷರವು ಅಧಿಕೃತ ಕನ್ನಡ ಅಕ್ಷರಮಾಲೆಯಲ್ಲಿಲ್ಲ. ೠ ಅಕ್ಷರವು ಕನ್ನಡದ ಯಾವುದೇ ಪದಗಳಲ್ಲಿ ಬಳಕೆಯಾಗಿಲ್ಲ. ಹಾಗೆಯೇ ಕನ್ನಡ ಪಠ್ಯಪುಸ್ತಕಗಳಲ್ಲಿ ಎಲ್ಲಿಯೂ ಇಂದು ೠ ಅಕ್ಷರವನ್ನು ನಮೂದಿಸಿಲ್ಲ. ಈ ಹಿಂದೆ ೠ, ಕ್ಷ, ತ್ರ, ಜ್ಞ ಅಕ್ಷರಗಳು ಕನ್ನಡ ವರ್ಣಮಾಲೆಯಲ್ಲಿದ್ದದ್ದು ನಿಜ. ಅವುಗಳು ಅನಗತ್ಯ ಎಂದು ಶಿಕ್ಷಣ ತಜ್ಞರು, ಭಾಷಾ ಶಾಸ್ತ್ರಜ್ಞರು ಸುಮಾರು ಹನ್ನೆರಡು ವರ್ಷಗಳ ಹಿಂದೆ (೧೯೯೨ ಅಥವ ೧೯೯೩) ವಿವೇಚನೆ ನಡೆಸಿ, ಅಧಿಕೃತ ಕನ್ನಡ ವರ್ಣಮಾಲೆಯಿಂದ ತೆಗೆದಿರುತ್ತಾರೆ. - ಮನ ೨೧:೫೮, ೫ May ೨೦೦೬ (UTC)

ಪ್ರಯೋಗ ಶಾಲೆ[ಬದಲಾಯಿಸಿ]

ಪ್ರಯೋಗ ಶಾಲೆ ಒಂದು ಪುಟಕ್ಕೆ ಸೀಮಿತವೇ? ನಾವು ಒಂದು ಹೊಸ ಟೆಂಪ್ಲೇಟ್ ಸಿದ್ದಪಡಿಸುವಾಗ/ಬದಲಾಯಿಸುವಾಗ, ತಯಾರಿಕೆ ಹಂತದಲ್ಲಿ ಅದರ ಪ್ರಯೋಗಗಳನ್ನು ಮಾಡುವುದು ಎಲ್ಲಿ/ಹೇಗೆ? --ಮನ 20:27, ೧೦ April ೨೦೦೬ (UTC)

ನಿಮ್ಮ ಸದಸ್ಯ ಪುಟದಲ್ಲಿ ಮಾಡಿಕೊಳ್ಳಬಹುದು. User:ಮನ/ಹೊಸ ಪುಟ ಎಂಬಂತೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೧೭, ೫ May ೨೦೦೬ (UTC)


ಲೇಖನಗಳನ್ನು ಬದಲಾಯಿಸುವಾಗ ಕೆಲವು ಪರಿಚ್ಛೇದಗಳು ತುಂಡುಗೆರೆಗಳ ಒಂದು ಚೌಕಟ್ಟಿನಲ್ಲಿ ಕಾಣುತ್ತವೆ. ಆದರೆ ಕೆಲವು ಪರಿಚ್ಛೇದಗಳು ಸಾಮಾನ್ಯವಾಗಿಯೆ ಇರುತ್ತವೆ. ಇದಕ್ಕೆ ಕಾರಣವೇನು? ಈ change in format ಏನನ್ನು ಸೂಚಿಸುತ್ತದೆ? --೧೬:೪೯, ೮ May ೨೦೦೬ (UTC)ಸುನಾಥ

ಪರಿಚ್ಛೇದವು ಖಾಲಿ ಜಾಗದಿಂದ(space) ಪ್ರಾರಂಭವಾದಲ್ಲಿ, ತುಂಡುಗೆರೆಯ ಚೌಕಟ್ಟು ನಿರ್ಮಾಣಗೊಳ್ಳುತ್ತದೆ. ವಿಶೇಷ ಸಂದರ್ಭಗಲಲ್ಲಿ ಮಾಹಿತಿಯನ್ನು ಪ್ರತ್ಯೇಕ ರೀತಿಯಲ್ಲಿ ತೋರಿಸಬೇಕಾದಾಗ ಈ ಫಾರ್ಮ್ಯಾಟ್ ಉಪಯುಕ್ತವೆನಿಸುತ್ತದೆ. ಉದಾಹರಣೆಗೆ ವಾರ್ಧಕ ಷಟ್ಪದಿ ನೋಡಿ. ಆದುದರಿಂದ, ಈ ಫಾರ್ಮ್ಯಾಟ್ ಬೇಕಿಲ್ಲದಿದ್ದಲ್ಲಿ, ಹೊಸ ಪ್ಯಾರ ಪ್ರಾರಂಭಿಸುವಾಗ, ಪ್ರಾರಂಭದಲ್ಲಿ ಯಾವುದೇ ಜಾಗ ಬಿಡದೇ ಬರೆಯಿರಿ. - ಮನ ೨೦:೨೯, ೮ May ೨೦೦೬ (UTC)

ಪು.ತಿ. ನರಸಿಂಹಾಚಾರ್[ಬದಲಾಯಿಸಿ]

ಪು.ತಿ.ನ. ಹಾಗು ಪು.ತಿ. ನರಸಿಂಹಾಚಾರ್ ಎಂದು ಎರಡು ಹೆಸರುಗಳು ಸಾಹಿತಿಗಳು ಎನ್ನುವ ಕೆಟಗರಿಯಲ್ಲಿ ತೋರಿಸಲ್ಪಟ್ಟಿದ್ದನ್ನು ಗಮನಿಸಿದೆ.ಇವುಗಳಲ್ಲಿ ಒಂದನ್ನು ರಿಡೈರೆಕ್ಟ ಎಂದು ತೋರಿಸಬೇಕು.ಆದರೆ ಅದನ್ನು ಸ್ವತಃ ನನಗೆ ಮಾಡಲು ತಿಳಿಯಲಿಲ್ಲ; ಈ ವಿಷಯವನ್ನು ಈ ಎರಡು ಲೇಖನಗಳಲ್ಲಿ ಒಂದರ ಚರ್ಚಾಪುಟದಲ್ಲಿ ಬರೆಯಲು ಹೋದೆ. ಆದರೆ ಪುಟವನ್ನು ಬದಲಾಯಿಸಲು ಭಯವಾಯಿತು. ಆದುದರಿಂದ ಅರಳಿಕಟ್ಟೆಯಲ್ಲಿ ಬರೆದು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಹಾಗು ಹೇಗೆ ಮಾಡಬೇಕು ಎನ್ನುವದನ್ನು clear ಆಗಿ ತಿಳಿಸುವಿರಾ? --೦೭:೨೪, ೧೮ May ೨೦೦೬ (UTC)ಸುನಾಥ

ಚರ್ಚಾಪುಟದಲ್ಲಿ ಪ್ರಸ್ತಾಪಿಸುವುದು ಸಮಂಜಸ. ಚರ್ಚಾಪುಟಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ಮಂಡಿಸಲು ಭಯಪಡುವುದಕ್ಕೆ ಕಾರಣವಿಲ್ಲ. :) ಪು ತಿ ನ ಮತ್ತು ಪು.ತಿ. ನರಸಿಂಹಾಚಾರ್ ಲೇಖನಗಳನ್ನು ಪು.ತಿ. ನರಸಿಂಹಾಚಾರ್ ಲೇಖನದಲ್ಲಿ ಒಂದುಗೂಡಿಸಿ, ಪು ತಿ ನ ಲೇಖನವನ್ನು ಪು.ತಿ. ನರಸಿಂಹಾಚಾರ್ ಲೇಖನದೆಡೆ ರೀಡೈರೆಕ್ಟ್ ಮಾಡಲಾಗಿದೆ. - ಮನ | Mana ೧೫:೪೮, ೧೮ May ೨೦೦೬ (UTC)
ಸುನಾಥ್, ಚರ್ಚೆ ಪುಟದಲ್ಲಿ ಬರೆದರೇ ಒಳ್ಳೆಯದು. ಆ ಲೇಖನಕ್ಕೆ ಹೊಂದಿಕೊಂಡಂತೆ ಅದರ ಬಗೆಗಿನ ಚರ್ಚೆ ಉಳಿದುಕೊಳ್ಳುವುದರಿಂದ ಮುಂದೊಂದು ದಿನ ಹುಡಕುವಾಗಲೂ ಸುಲಭವಾಗಿ ಲಭ್ಯವಾಗತ್ತೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೭:೫೮, ೧೮ May ೨೦೦೬ (UTC)

ದ್ವಂದ್ವ ನಿವಾರಣೆ[ಬದಲಾಯಿಸಿ]

ಒಬ್ಬನೆ ಲೇಖಕನ ಬಗೆಗೆ ಎರಡು ಭಿನ್ನ ಹೆಸರುಗಳಲ್ಲಿ title ಬಂದಾಗ Disambiguation ಹಾಕಬಹುದು ಎಂದು ತಿಳಿಸಿರುವಿರಿ. ಇದರ procedure ಹೇಗೆಂದು ದಯವಿಟ್ಟು ತಿಳಿಸುವಿರಾ?--೧೬:೪೪, ೨೧ May ೨೦೦೬ (UTC)ಸುನಾಥ

ಒಬ್ಬರೇ ಲೇಖಕರ ಬಗ್ಗೆ ಎರಡು ಪ್ರತ್ಯೇಕ ಲೇಖನಗಳು ಇದ್ದಲ್ಲಿ, ಒಂದನ್ನೊಂದು ಸೇರಿಸಿ(merge), ಒಂದು ಲೇಖನದಿಂದ ಇನ್ನೊಂದು ಲೇಖನಕ್ಕೆ ರೀಡೈರೆಕ್ಟ್ ಮಾಡಬೇಕು. ಇಲ್ಲಿ ಯಾವುದೇ ದ್ವಂದ್ವ ನಿವಾರಣೆಯ (disambiguation) ಅವಶ್ಯಕತೆ ಇರುವುದಿಲ್ಲ. ಉದಾಹರಣೆ ಪು ತಿ ನ ಮತ್ತು ಪು.ತಿ. ನರಸಿಂಹಾಚಾರ್ ಲೇಖನಗಳು.
ದ್ವಂದ್ವ ನಿವಾರಣೆಯ ಅವಶ್ಯಕತೆ ಬರುವುದು, ಬೇರೆ ಬೇರೆ ವಸ್ತುಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಒಂದೇ ಹೆಸರು ಇದ್ದಾಗ. ಉದಾಹರಣೆ, ಚದುರಂಗ ಆಟ, ಚದುರಂಗ ಸಾಹಿತಿ ಹಾಗು ಚದುರಂಗ ಚಲನಚಿತ್ರ. ಇಂತಹ ಲೇಖನಗಳನ್ನು ಸಿದ್ಧಪಡಿಸುವಾಗ, ದ್ವಂದ್ವ ನಿವಾರಣೆ ಮಾಡಬೇಕಾಗುತ್ತದೆ. - ಮನ | Mana ೨೦:೧೮, ೨೨ May ೨೦೦೬ (UTC)
ದ್ವಂದ್ವ ನಿವಾರಣೆ ಮಾಡಬೇಕಾದ ಲೇಖನದಲ್ಲಿ ಟೆಂಪ್ಲೇಟು:ದ್ವಂದ್ವ_ನಿವಾರಣೆ ಹೇಗೆ ಉಪಯೋಗಿಸಬೇಕಂದು ತಿಳಸುವಿರಾ. -Raviprakash ೧೩:೪೦, ೨೪ ಆಗಸ್ಟ್ ೨೦೦೬ (UTC)
ರವಿಪ್ರಕಾಶ್: {{ದ್ವಂದ್ವ ನಿವಾರಣೆ}} ಟೆಂಪ್ಲೇಟಿನಲ್ಲಿ ಉಪಯೋಗದ ಕ್ರಮವನ್ನು ಈಗ ಹಾಕಲಾಗಿದೆ. ನಿಮಗೆ ಸಹಾಯವಾಗಬಹುದು ನೋಡಿ. ಹಾಗೆಯೇ, Wikipedia:ದ್ವಂದ್ವ ನಿವಾರಣೆ ಲೇಖನವನ್ನು ಒಮ್ಮೆ ನೋಡಿ.
ನೀವು ಜಾಕಿರ್ ಹುಸೇನ್ (ಮಾಜಿ ರಾಷ್ಟ್ರಪತಿ) ಮತ್ತು ಜಾಕಿರ್ ಹುಸೇನ್ (ಸಂಗೀತಗಾರ) ಲೇಖನಗಳ ದ್ವಂದ್ವವನ್ನು ನಿವಾರಿಸಲು ಪ್ರಯತ್ನಿಸಿದ್ದೀರಿ ಎಂದು ಪ್ರಯೋಗಶಾಲೆಯಲ್ಲಿ ತಿಳಿಯಿತು. ಎರಡೇ ಲೇಖನಗಳಲ್ಲಿ ದ್ವಂದ್ವವಿದ್ದಲ್ಲಿ, {{ದ್ವಂದ್ವ ನಿವಾರಣೆ}} ಟೆಂಪ್ಲೇಟ್ ಇಲ್ಲದೆಯೇ, ಒಂದು ಲೇಖನದ ಮೇಲ್ಭಾಗದಲ್ಲಿ ಇನ್ನೊಂದು ಲೇಖನದ ಬಗ್ಗೆ ತಿಳಿಸಬಹುದು. ಉದಾಹರಣೆಗೆ ಜಾಕಿರ್ ಹುಸೇನ್ ಪುಟ ನೋಡಿ. - ಮನ|Mana Talk - Contribs ೦೪:೪೫, ೨೫ ಆಗಸ್ಟ್ ೨೦೦೬ (UTC)]

ಪರಭಾಷೆ ಪುಟಗಳಿಂದ ಅನುವಾದ[ಬದಲಾಯಿಸಿ]

ಬೇರೆ ಭಾಷೆಗಳ ವಿಕಿಪೀಡಿಯ ಪುಟಗಳಿಂದ ಕನ್ನಡಕ್ಕೆ ಅನುವಾದ ಮಾಡುವುದು ಹೇಗೆಂದು ದಯವಿಟ್ಟು ತಿಳಿಸಿ. ksj_dr ೧೪ ಸೆಪ್ಟೆಂಬರ್ ೨೦೦೬

ಇದು ಆರ್ಕೈವ್ ಪುಟ. Current discussions ಪುಟಕ್ಕೆ ಈ ಸಂವಾದವನ್ನು ವರ್ಗಾಯಿಸಿದ್ದೇನೆ ಶುಶ್ರುತ \ಮಾತು \ಕತೆ ೧೮:೦೩, ೧೪ September ೨೦೦೬ (UTC)